[PDF]ktbs 9th third language kannada 2015

[PDF]

Contact the Author

Please sign in to contact this author

A
ಕರ್ನಾಟಕ ಸರ್ಕಾರ


ಮಡಿ ಕನ್ನಡ


ಒಂಬತ್ತನೆಯ ತರಗತಿ
ತೃತೀಯ 'ಭಾಷಾ ಕನ್ನಡ ಪಠ್ಯಪುಸ್ತಕ


ಹಾಧಿ


೨೦೧೫


ಕರ್ನಾಟಕ ಪಠ್ಯಪುಸ್ತಕ ಸಂಘ (ರಿ)
೧೦೦ ಅಡಿ ವರ್ತುಲ ರಸ್ತೆ, ಬನಶಂಕರಿ ೩ನೆಯ
ಹಂತ, ಬೆ೦ಗಳೂರು-೫೬೦೦೮೫.


ಪಠ್ಯಪುಸ್ತಕ ರಚನಾ ಸಮಿತಿ


ಅಧ್ಯಕ್ಷರು
ಡಾ. ನರಸಿಂಹ ಮೂರ್ತಿ. ಆರ್‌, ಕನ್ನಡ ಪ್ರಾಧ್ಯಾಪಕರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಗಾಂಧಿನಗರ, ಮಂಗಳೂರು
ಸದಸ್ಯರು
ಶ್ರೀಮತಿ ಮಂಗಳಾ. ಆರ್‌, ಸಹಾಯಕ ಪ್ರಾಧ್ಯಾಪಕರು, ಪಿ.ಇ.ಎಸ್‌.ಶಿಕ್ಷಣ ಮಹಾವಿದ್ಯಾಲಯ, ಬೆಂಗಳೂರು
ಡಾ.ಎಸ್‌. ವಿ. ಬಂಗಾರಿಮಠ, ಸಹಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕಿರೇಸೂರು, ಹುಬ್ಬಳ್ಳಿ ತಾ, ಧಾರವಾಡ ಜಿಲ್ಲೆ.
ಶ್ರೀ ಕಾಂತರಾಜು. ಜಿ, ಸಹಶಿಕ್ಷಕರು, ಶ್ರೀ ಆದಿಶಕ್ತಿ ಪ್ರೌಢಶಾಲೆ, ಹುಲಿಕೆರೆ, ಕಸಬ ಹೋಬಳಿ,ನನಾಗಮಂಗಲ ತಾ.
ಶ್ರೀಮತಿ ನಿರ್ಮಲಾ ಟಿ.ಕವಡಿಮಟ್ಟಿ, ಸಹಶಿಕ್ಷಕರು, ಶ್ರೀ ವಿವೇಕಾನಂದ ಪ್ರೌಢಶಾಲೆ, ಅರವಿಂದನಗರ, ಹುಬ್ಬಳ್ಳಿ
ಪರಿಶೀಲಕರು
ಶ್ರೀ ಎ.ಬಿ. ಚಂದ್ರಶೇಖರ್‌, ಸಹಪ್ರಾಧ್ಯಾಪಕರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಮಹಾವಿದ್ಯಾಲಯ, ಚನ್ನರಾಯಪಟ್ಟಣ,
ಹಾಸನ ಜಿಲ್ಲೆ.

ಕಲಾವಿದರು
ಶ್ರೀ ಎ.ಶಾಂತಪ್ಪ, ಚಿತ್ರಕಲಾ ಶಿಕ್ಷಕರು, ಸಂತ ಅಂತೋಣಿ ಪ್ರೌಢಶಾಲೆ, ಗಾಯತ್ರಿಪುರಂ, ಮೈಸೂರು-೧೯
ಸಂಪಾದಕ ಮಂಡಳಿ ಸದಸ್ಯರು

ಚಂದ್ರಶೇಖರ ಪಾಟೀಲ್‌, ಸಾಹಿತಿಗಳು, ಸಂಕ್ರಮಣ: ಪ್ರಕಾಶನ, 'ಎಲಚೇನಹಳ್ಳಿ, ಜೆ.ಪಿ. ನಗರ, ಬೆಂಗಳೂರು-೭೮

. ಕೆ. ಮರುಳಸಿದ್ದಪ್ಪ, ಸಾಹಿತಿಗಳು, ನಂ ೧೩೭,: ೧೨ನೇ.ಕ್ರಾಸ್‌, ಜೆ.ಪಿ. ನಗರ, ಬೆ೦ಗಳೂರು-೭೮
ಸಾ.ಶಿ. ಮರುಳಯ್ಯ, ಸಾಹಿತಿಗಳು, ರಾಗಿಣಿ, ಹಂಪಿನಗರ, ಬೆಂಗಳೂರು.
ಅ.ರಾ.ಮಿತ್ರ, ಸಾಹಿತಿಗಳು, ಕೆ.ಎಚ್‌.ಬಿ. ಕಾಲೋನಿ, ಯಲಹಂಕ, ಬೆ೦ಗಳೂರು.
ಕ ವಿಷ್ಣು ಎಂ. ಶಿಂದೆ, ಸಹಾಯಕ ಪ್ರಾಧ್ಯಾಪಕರು, ಶಿಕ್ಷಣ ವಿಭಾಗ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ,
ವಿಜಯಾಪುರ:
ಸಂಯೋಜಕರು


. ಜಿ.ಎಸ್‌.ಮುಡಂಬಡಿತ್ತಾಯ, ಪಠ್ಯಕ್ರಮ ಪರಿಷ್ಕರಣೆ ಮತ್ತು ಪಠ್ಯ ಪುಸ್ತಕ ರಚನೆ, ಕರ್ನಾಟಕ ಪಠ್ಯಪುಸ್ತಕ


ಸಂಘ, ಬೆ೦ಗಳೂರು - ೫೬೦ ೦೮೫
ಸಲಹೆ ಮತ್ತು ಮಾರ್ಗದರ್ಶನ


ಶ್ರೀ ನಾಗೇಂದ್ರ ಕುಮಾರ್‌, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು-೮೫


ಶ್ರ



ಶ್ರೀ ಪಾಂಡುರಂಗ, ಉಪನಿರ್ದೇಶಕರು (ಪ್ರಭಾರಿ), ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು-೫೬೦ ೦೮೫


[)


ಶಿ


ಕಾರ್ಯಕ್ರಮ ಸಂಯೋಜಕರು


ಶ್ರೀ ಪಾಂಡುರಂಗ, ಹಿರಿಯ ಸಹಾಯಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು-೮೫


ಡಿ.ಟಿ.ಪಿ/ವಿನ್ನಾ


ಸ: ಶ್ರೀ ಸುಬ್ರಮಣ್ಣೇಶರ ಬುಕ್‌ ಡಿಪೋ, ಬೆಂಗಳೂರು-2


p)


೨೦೦೫ನೇ ರಾಷ್ಟ್ರೀಯ ಪಠ್ಯಕ್ರಮದ ಆಧಾರದ ಮೇಲೆ ರಚಿತವಾದ ಕರ್ನಾಟಕ ರಾಜ್ಯ ಪಠ್ಯವಸ್ತುವಿನ
ಆಧಾರದ ಮೇಲೆ ಕರ್ನಾಟಕ ಪಠ್ಯಪುಸ್ತಕ ಸಂಘವು ೨೦೧೦ ನೇ ಸಾಲಿನಿಂದ ಒಂದನೇ ತರಗತಿಯಿಂದ
ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳ ರಚನಾ ಕಾರ್ಯದಲ್ಲಿ ತೊಡಗಿದೆ. ಒಟ್ಟು ೧೨ ಭಾಷೆಗಳಲ್ಲಿ ಭಾಷಾ
ಪಠ್ಯಪುಸ್ತಕಗಳನ್ನು ಹಾಗೂ ಕೋರ್‌ ವಿಷಯಗಳನ್ನು ತ ಮಾಧ್ಯಮಗಳಲ್ಲಿ ರಚನೆ ಮಾಡಲಾಗುತ್ತಿದೆ. ೧
ರಿಂದ ೪ ನೇ ತರಗತಿಯವರೆಗೆ ಪರಿಸರ ವಿಜ್ಞಾನ, ಗಣಿತ ಮತ್ತು ೫ ರಿಂದ ೧೦ ನೇ ತರಗತಿಯವರೆಗೆ
ಕೋರ್‌ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಿರುತ್ತವೆ.


೨೦೦೫ರ ರಾಷ್ಟ್ರೀಯ ಪಠ್ಯಕ್ರಮವು ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ.
ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು
ಕಂಠಪಾಠ ವಿಧಾನದಿಂದ ಕಲಿಕೆಯನ್ನು ಮುಕ್ತಗೊಳಿಸುವುದು
ಪಠ್ಯಪುಸ್ತಕಗಳ ಹೊರತಾಗಿ ಪಠ್ಯಕ್ರಮವನ್ನು ಶ್ರೀಮಂತಗೊಳಿಸುವುದು
ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು
ಭಾರತದ ಪ್ರಜಾಸತ್ತಾತ್ಮಕ ನೀತಿಯನ್ವಯ ಮಕ್ಕಳ ಅವಶ್ಯಕತೆಗಳಿಗೆ ತಕ್ಕಂತೆ ಸ್ಪಂದಿಸುವುದು
ಶಿಕ್ಷಣವನ್ನು ಇಂದಿನ ಹಾಗೂ ಭವಿಷ್ಯದ; ಜೀವನಾವಶ್ಯಕತೆಗಳಿಗೆ ಹೊಂದುವಂತೆ ಮಾಡುವುದು
ವಿಷಯಗಳ ಮೇರೆಗಳನ್ನು ಮೀರಿ ಅವುಗಳಿಗೆ ಸಮಗ್ರದೃಷ್ಟಿಯ ಬೋಧನೆಯನ್ನು ಅಳವಡಿಸುವುದು
ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ
ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ, ಪಡಿಸುವುದು.


ನೂತನ ಪಠ್ಯಪುಸ್ತಕಗಳಲ್ಲಿ ನೂತನ ವಿಧಾನಗಳಾದ ಅಂತರ್ಗತ ವಿಧಾನ (Integrated Approach),
ರಚನಾತ್ಮಕ ವಿಧಾನ (Constructive Approach) ಹಾಗೂ ಸುರುಳಿಯಾಕಾರದ ವಿಧಾನ (Spiral
Approach) ಗಳನ್ನು ಅಳವಡಿಸಲಾಗಿದೆ.


ಪಠ್ಯಪುಸ್ತಕಗಳ ವಿಷಯ ಹಾಗೂ ಅಭ್ಯಾಸಗಳು ವಿದ್ಯಾರ್ಥಿಗಳನ್ನು ಯೋಚನೆ ಮಾಡುವಂತೆ ಮಾಡಿ,
ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮರ್ಥ್ಯಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ.
ಪಠ್ಯವಸ್ತುಗಳೊಂದಿಗೆ ಅತ್ಯಂತ ಅವಶ್ಯಕ ಜೀವನ ಮೌಲ್ಯಗಳನ್ನು ಅಂತರ್ಗತವಾಗಿ ಬಳಸಲಾಗಿದೆ. ಈ
ನೂತನ ಪಠ್ಯಪುಸ್ತಕಗಳು ಪರೀಕ್ಷಾ ದೃಷ್ಠಿಯಿಂದ ರಚಿತವಾಗಿಲ್ಲ. ಬದಲಾಗಿ ಅವುಗಳು ವಿದ್ಯಾರ್ಥಿಗಳ
ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ತನ್ಮೂಲಕ ಅವರನ್ನು ಸ್ಪತಂತ್ರ ಭಾರತದ ಸ್ಪಸ್ಥಸಮಾಜದ
ಉತ್ತಮ ಪ್ರಜೆಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ.


ಭಾಷಾಕಲಿಕೆಯಲ್ಲಿ ಅತ್ಯಂತ ಮುಖ್ಯ ಗುರಿಗಳಾದ ಆಲಿಸುವುದು, ಮಾತನಾಡುವುದು, ಓದುವುದು,
ಬರೆಯುವುದು ಹಾಗೂ ಆಕರಗ್ರಂಥಗಳಿಂದ ವಿಷಯ ಸಂಗ್ರಹಣೆಯಂತಹ ಕ್ಷೇತ್ರವಾರು ಸಾಮರ್ಥ್ಯಗಳಿಗೆ


ಒತ್ತು ನೀಡಲಾಗಿದೆ. ಈ ಕೌಶಲ್ಯಗಳೊಂದಿಗೆ ಕ್ರಿಯಾತ್ಮಕ ವ್ಯಾಕರಣ, ಸೌಂದರ್ಯಪ್ರಜ್ಞೆ ಪ್ರಶಂಸಾ ಮನೋಭಾವ,
ಮೌಲ್ಯಗಳ ಸಂವರ್ಧನೆಗೆ ಅನುವು ಮಾಡಿಕೊಡಬೇಕು. ಈ ಸಾಮರ್ಥ್ಯ ಮಕ್ಕಳಲ್ಲಿ ಬಂದಾಗ ಅವರು
ಪರೀಕ್ಷೆಗಳಿಗಾಗಿ ಕಂಠಪಾಠಕ್ಕೆ ಶರಣು ಹೋಗಬೇಕಾಗಿಲ್ಲ. ಪಠ್ಯಪುಸ್ತಕವು ಭಾಷಾ ಕೌಶಲ್ಯಗಳ ಸಂವರ್ಧನೆಗೆ
ಒಂದು ಪೂರಕವಸ್ತುವೆಂದು ಪರಿಗಣಿಸಲು, ಮಕ್ಕಳ ಮನೋವೈಶಾಲ್ಯವನ್ನು ಬೆಳೆಸಲು ವಿಷಯಗಳಿಗೆ
ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳನ್ನು ಪಠ್ಯಪುಸ್ತಕದಲ್ಲಿ ಒದಗಿಸಲಾಗಿದೆ. ಮಿತ್ರರೊಂದಿಗೆ ಗುಂಪುಗಳಲ್ಲಿ
ಚರ್ಚೆಯ ಮೂಲಕ ಅವರ ಅಭಿವ್ಯಕ್ತಿ ಹಾಗು ಸಂವಹನ ಕೌಶಲ್ಯಗಳ ಸಂವರ್ಧನೆಯೇ ಕಲಿಕೆ ಗುರಿಯೆಂದು
ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ರೀತಿಯ ಚಟುವಟಿಕೆಗಳು
ಮಕ್ಕಳಲ್ಲಿ ಕಲಿಯುವ ಕಲೆ (108/1118 10೦1087) ಹಾಗೂ ಕಲಿತುದುದನ್ನು ಜೀವನದಲ್ಲಿ ಅಳವಡಿಸುವ


ಶಕ್ತಿ (10811178 (0 60) ಯನ್ನು ಮಕ್ಕಳಲ್ಲಿ ವೃದ್ದಿಮಾಡುತ್ತದೆ.


ಕರ್ನಾಟಕ ಪಠ್ಯಪುಸ್ತಕ ಸಂಘವು ಈ ಪುಸ್ತಕದ ತಯಾರಿಯಲ್ಲಿ ಸಹಕರಿಸಿದ ಸಮಿತಿಯ ಅಧ್ಯಕ್ಷರಿಗೆ,
ಸದಸ್ಯರಿಗೆ, ಕಲಾಕಾರರಿಗೆ, ಪರಿಶೀಲಕರಿಗೆ, ಸಂಯೋಜಕ ಅಧಿಕಾರಿಗಳಿಗೆ, ಶಿಕ್ಷಣ ಮಹಾವಿದ್ಯಾಲಯಗಳ
ಬ್ಲಂದಿವರ್ಗದವರಿಗೆ, ಜಿಲ್ಲಾ ತರಬೇತಿ ಸಂಸ್ಥೆಗಳು, ರಾಜ್ಯ ಮಟ್ಟದ ಪಠ್ಯಪುಸ್ತಕ ಸಂಪಾದಕ ಮಂಡಳಿಯ
ಸದಸ್ಯರಿಗೆ ಮತ್ತು ಪುಸ್ತಕವನ್ನು ಸುಂದರವಾಗಿ ಮುದ್ರಿಸಿದ ಮುದ್ರಕರಿಗೆ 'ತನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು
ಲ್ಲಿಸುತ್ತದೆ. ಕೆಲವು ಸಾಹಿತಿಗಳು ಹಾಗೂ ಕವಿಗಳ ಕೃತಿಗಳನ್ನು ಈ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ.


ವಿಚಾರದಲ್ಲಿ ತಮ್ಮ ಒಪ್ಪಿಗೆಯನ್ನು ನೀಡಿರುವ :ಬಠಹಗಾರರಿಗೆ ಹಾಗೂ ಕವಿಗಳಿಗೆ ಪಠ್ಯಪುಸ್ತಕ ಸಂಘ
ಆಭಾರಿಯಗಿದೆ.


ಪ್ರೊ. ಜಿ ಎಸ್‌ ಮುಡಂಬಡಿತ್ತಾಯ ನಾಗೇಂದ್ರ ಕುಮಾರ್‌
ಮುಖ್ಯ ಸಂಯೋಜಕರು ವ್ಯವಸ್ಥಾಪಕ ನಿರ್ದೇಶಕರು
ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಪಠ್ಯಪುಸ್ತಕ ರಚನೆ ಕರ್ನಾಟಕ ಪಠ್ಯಪುಸ್ತಕ ಸಂಘ (ರಿ.)
ಕರ್ನಾಟಕ ಪಠ್ಯಪುಸ್ತಕ ಸಂಘ (ರಿ.) ಬೆಂಗಳೂರು
ಬೆಂಗಳೂರು


ರಾಷ್ಟೀಯ ಪಠ್ಯಕ್ರಮ ಚೌಕಟ್ಟು ೨೦೦೫ ರ ಆಧಾರದಲ್ಲಿ ನೀಡಿರುವ ಸೂಚನೆಗಳಿಗೆ
ಅನುಗುಣವಾಗಿ ಕನ್ನಡ ಮಾತೃಭಾಷೆಯಲ್ಲದವರೂ ಕನ್ನಡ ಕಲಿಯಲು ಅನುವಾಗುವಂತೆ
ಒಂಬತ್ತನೆಯ ತರಗತಿಯ ತೃತೀಯ ಭಾಷಾ ವಿದ್ಯಾರ್ಥಿಗಳಿಗಾಗಿ ಈ ಪಠ್ಯವನ್ನು
ರಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಯ ಬಗ್ಗೆ ಆಸಕ್ತಿ ಮೂಡುವಂತೆ, ಭಾಷೆ,
ಸಾಹಿತ್ಯ, ಸಂಸ್ಕೃತಿಯ ಬಗೆಗೆ ಸದಭಿರುಚಿ ನಿರ್ಮಾಣವನ್ನು ಗಮನದಲ್ಲಿರಿಸಿ,
ವೈವಿದ್ಯಮಯವಾದ ಪಠ್ಯಭಾಗಗಳನ್ನು ನೀಡಲಾಗಿದೆ. ಹೆಸರಾಂತ ಕವಿ-ಲೇಖಕರ
ಕೃತಿಗಳೂಂದಿಗೆ ಪಠ್ಯಕ್ಕಾಗಿಯೇ ಸಂಪಾದಕ ಮಂಡಳಿ ರಚಿಸಿದ ಒಂದೆರಡು ತುಣುಕುಗಳನ್ನೂ
ನೀಡಲಾಗಿದೆ. ವ್ಯಾಕರಣವನ್ನು ಕ್ರಿಯಾತ್ಮಕವಾಗಿ ಕಲಿಸಲು ಅನುಕೂಲವಾಗುವಂತೆ ಅಭ್ಯಾಸ
ಭಾಗಗಳನ್ನು ನೀಡಲಾಗಿದೆ. ಕಲಿಸುವ ಅಧ್ಯಾಪಕರಿಗೂ, ಕಲಿಯುವ ಎದ್ಯಾರ್ಥಿಗಳಿಗೂ
ಪಠ್ಯ ಉಪಯುಕ್ತವೆನಿಸಿದರೆ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.


ಪಠ್ಯಪುಸ್ತಕ ರಚನೆಗೆ ನಮಗೆ ಅವಕಾಶ ನೀಡಿ ಪ್ರೋತ್ಸಾಹಿಸಿದ ಪಠ್ಯಪುಸ್ತಕ ಸಂಘದ
ವ್ಯವಸ್ಥಾಪಕ ನಿರ್ದೇಶಕರಿಗೂ ಹಾಗೂ. ಅಧಿಕಾರ ವರ್ಗದವರಿಗೂ, ವಿಶೇಷವಾಗಿ
ಸಂಯೋಜಕರಾದ ಶ್ರೀ ಮುಡಂಬಡಿತ್ತಾಯ ಮತ್ತು ಹಿರಿಯ ಸಹಾಯಕ ನಿರ್ದೇಶಕರಾದ
ಶ್ರೀ ಪಾಂಡುರಂಗ ಅವರಿಗೂ ನಮ್ಮ ಕೃತಜ್ಞತೆಗಳು. ಪಠ್ಯಪುಸ್ತಕ ರಚನಾ ಕಾರ್ಯದಲ್ಲಿ
ನನ್ನೊಡನೆ ಸರ್ವ ರೀತಿಯಲ್ಲೂ ಸಹಕರಿಸಿದ ಸಮಿತಿಯ ಎಲ್ಲ ಸದಸ್ಯರಿಗೂ, ಸೂಕ್ತ
ಚಿತ್ರಗಳನ್ನು ರಚಿಸಿಕೊಟ್ಟ ಕಲಾವಿದರಿಗೂ ಮತ್ತು ಪರಿಶೀಲಕರಿಗೂ ನನ್ನ ವೈಯಕ್ತಿಕ
ಧನ್ಯವಾದಗಳು.


ಡಾ. ಆರ್‌. ನರಸಿಂಹಮೂರ್ತಿ
ಅಧ್ಯಕ್ಷರು
ನುಡಿ ಕನ್ನಡ ಎಇ.
ಪಠ್ಯ ಪುಸ್ತಕ ರಚನಾ ಸಮಿತಿ


(at
2೬


ಸ ಎಂ. ಅಕಬರ ಅಲಿ
ಒಂದು ರಾತ್ರಿ (ಪದ್ಯ) ಎಸ್‌.ವಿ.ಪರಮೇಶ್ವರ
೧ ಧನವು
೦ eer


ಈ)
ವಿ


lo | lo
CN RO)


೪೨
ಆಗ್ರ


ಷ್ಟ
4





33

£5

6 |
|


Na
8


೧೨ | fe
Oo |r


fo
KO


|
ಇ)


- ಬಿ. ಎಂ. ಶ್ರೀಕಂಠಯ್ಯ


ಆಶಯ : ಆರು ಖುತುಗಳಲ್ಲಿ ಒಂದಾದ ವಸಂತ ಯತುವಿನ ಆಗಮನದಿಂದ ಪ್ರಕೃತಿ ಹೊಸ ಚೈತನ್ಯವನ್ನು
ಪಡೆಯುತ್ತದೆ. ಎಳೆ ಚಿಗುರು, ಬಣ್ಣಬಣ್ಣದ ಹೂಗಳು, ತಂಪಾಗಿ ಬೀಸುವ ಗಾಳಿ, ಇಂಪಾಗಿ ಹಾಡುವ ಹಕ್ಕಿಗಳ ದನಿ
ಮನಸ್ಸನ್ನು ಸೂರೆಗೊಳ್ಳುತ್ತವೆ. ಸಕಲ ಚರಾಚರ ಜೀವಜಂತುಗಳಲ್ಲಿಯೂ ನವ ಉತ್ಸಾಹವನ್ನು ತುಂಬುವ ಪ್ರಕೃತಿಯ


ಸೊಬಗನ್ನು ಕವಿ ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.


ವಸಂತ ಬಂದ, ಯತು

ಚಿಗುರನು ತಂದ, ಹೆಣ್ಣಳ ಕುಣಿಸುತ ನಿಂದ,
ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ,
ಕೂವೂ, ಜಗ್‌ ಜಗ್‌. ಪುವ್ಪಿ ಟೂವಿಟ್ಟ ವೂ!


ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಟ,
ಕೂವೂ, ಜಗ್‌ ಜಗ್‌, ಪುವ್ವಿ, ಟೂವಿಟ್ಟ ವೂ!


ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು,
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು,
ಕೂವೂ. ಜಗ್‌ ಜಗ್‌, ಪುವ್ಪಿ ಟೂವಿಟ್ಟ ವೂ!


ಬಂದ ವಸಂತ- ನಮ್ಮಾ
ರಾಜ ವಸಂತ!


ಕವಿ ಪರಿಚಯ : ಬಿ.ಎಂ.ಶ್ರೀಕಂಠಯ್ಯ


ನವೋದಯ ಕನ್ನಡ ಸಾಹಿತ್ಯದ ಆಚಾರ್ಯ ಪುರುಷ ಬೆಳ್ಳೂರು
ಮೈಲಾರಯ್ಯ ಶ್ರೀಕಂಠಯ್ಯನವರು 'ಶ್ರೀ' ಎಂಬ ಕಾವ್ಯನಾಮದಿಂದ ಪ್ರಸಿದ್ಧರು.
ಇವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿ
ಸೇರಿ ಅಲ್ಲಿಯೇ ಪ್ರಾಚಾರ್ಯ ಪದವಿಗೇರಿದರು. ಮೈಸೂರು ವಿಶ್ವವಿದ್ಯಾನಿಲಯದ
ಕುಲಸಚಿವರಾಗಿಯೂ ಸೇವೆ ಸಲ್ಲಿಸಿದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ
ಉಪಾದ್ಯಕ್ಷ ರಾಗಿಂಶಖೂ, ದಾರವಾಡದ ಆರ್ಟ್ಸ ಕಾಲೇಜಿನ
ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸಿದರು. ಕನ್ನಡ ನಾಡು, ನುಡಿಗೆ
ಶ್ರೀಯವರು ನೀಡಿದ ಕೊಡುಗೆ ಅನನ್ಯವಾದುದು. ಇಂಗ್ಲಿಷ್‌ ಗೀತೆಗಳು, ಹೊ೦ಗನಸುಗಳು ಇವರ ಮಹತ್ವದ
ಕವನ ಸ೦ಕಲನಗಳಾದರೆ, ಅಶ್ವತ್ಥಾಮನ್‌, ಪಾರಸೀಕರು, ಗದಾಯುದ್ಧ ಪ್ರಸಿದ್ಧ ನಾಟಕಗಳು. ಕನ್ನಡ ಬಾವುಟ,
ಕನ್ನಡ ಕೈಪಿಡಿ ಮಹತ್ವದ ಸಂಪಾದನಾ ಕೃತಿಗಳು. ಇವರ ಸಮಗ್ರ ಸಾಹಿತ್ಯವನ್ನೊಳಗೊ೦ಡ "ಶ್ರೀ ಸಾಹಿತ್ಯ'
ಪ್ರಕಟವಾಗಿದೆ. ಪ್ರಸ್ತುತ ಕವನವನ್ನು ಅವರ "ಇಂಗ್ಲಿಷ್‌ ಗೀತೆಗಳು' ಸಂಕಲನದಿಂದ ಆರಿಸಲಾಗಿದೆ.


ಓದಿ ತಿಳಿಯಿರಿ


ಚಿಗುರು- ಕುಡಿ, ಉಲುಹು- ಕಲರವ, ಧ್ವನಿ, ಇನಿಯರ- ಪ್ರೇಮಿಗಳ, ಬೇಟ-ಆಕರ್ಷಣೆ, ಬನ- ವನ,


ಕಾಡು, ಕಂಪು - ಪರಿಮಳ, ಸುಗಂಧ, ಇಂಪು- ಮಧುರ, ಪೆಂಪು -ಸೊಗಸು, ಸೊಂಪು-ಸಮೃದ್ದಿ,
ಬಯಕೆ-ಆಸೆ.
ಗಮನಿಸಿ ತಿಳಿಯಿರಿ
ಕೂವೂ, ಜಗ್‌ಜಗ್‌ ಪುವ್ಹಿ ಟೂವಿಟ್ಟವೂ! : ಇದು ಕೋಗಿಲೆ ಮುಂತಾದ ಹಕ್ಕಿಗಳ ಅನುಕರಣ ದ್ವನಿ
ಯತು : ಎರಡೆರೆಡು ತಿಂಗಳ ಕಾಲಾವಧಿ
ಯತುಗಳು :

ಚೈತ್ರ ಕ ವಸಂತ ಯತು

ಜ್ಯೇಷ್ಠ : ಆತ ಗ್ರೀಷ್ಮ ಯತು

ಶ್ರಾವಣ | ವರ್ಷ ಯತು

ಆಶ್ವಯುಜ ಕ ಶರದೃತು

ಮಾರ್ಗಶಿರ : ಪುಷ್ಪ ಹೇಮಂತ ಖುತು

ಶಿಶಿರ ಯತು


ಅಭ್ಯಾಸ ಚಟುವಟಿಕೆ


ಅ. ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಖತುಗಳ ರಾಜ ಯಾರು?
ವಸಂತ ಏನನ್ನು ತಂದಗ?
ಬೆಳದಿಂಗಳೂಟ ಎಲ್ಲಿ ನಡೆಯುತ್ತಿದೆ ?


ಬಯಲಲ್ಲಿ ಕಂಪು ಸೂಸುವುದು ಯಾವುದು?

ಕಿವಿಗಳಿಗೆ ಇಂಪಾದುದು ಏನು?
ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
೧. ವಸಂತ ಬಂದಾಗ ಪ್ರಕೃತಿಯಲ್ಲಾಗುವ ಬದಲಾವಣೆಗಳಾವುವು?
೨. ವಸಂತ ಕಾಲದಲ್ಲಿ ಪ್ರಾಣಿ ಪಕ್ಷಿಗಳ ಪ್ರತಿಕ್ರಿಯೆ ಎನು ?


ಊಟ
ಪಾಟ
ಗುಂಪು
ಕಂಪು
ಪದ್ಯದಲ್ಲಿ ಬಂದಿರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ.
ಉದಾ; ಕಂಪು- ತಂಪು

ವ್ಯಾಕರಣಾಭ್ಯಾಸ


ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು ಸ್ವರಾಕ್ಷರಗಳೆನ್ನು! ವರು. ಸ್ವರಾಕ್ಷರಗಳಲ್ಲಿ ಎರಡು ಬಗೆಗಳಿವೆ.


೧.ಹಸ್ವ ಸ್ಪರ ಮತ್ತು ೨. ದೀರ್ಫ ಸ್ವರ.
ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳ ಹಸ್ಪಸ್ತರ. ಎರಡು ಮಾತ್ರಾ ಕಾಲದಲ್ಲಿ


Wh
ಉಚರಿಸುವ ಅಕರಗಳು ದೀರ್ಪ್ಹ ಸರ.
ಜ 0 ಖ


ಕೆಳಗೆ ನೀಡಿರುವ ಸ್ಪರಾಕ್ಷರಗಳಲ್ಲಿ ಹ್ರಸ್ವ ಮತ್ತು ದೀರ್ಫ ಸ್ಪರಗಳನ್ನು ಗುರುತಿಸಿ ಬರೆಯಿರಿ.


ಈ ಉ ಅ


೨... ಯಾವುದಾದರೂ ಒಂದು ಅಕ್ಷರ ಸಂಬಂಧದಿಂದ ಮಾತ್ರ ಉಚ್ಚರಿಸುವಂಥವುಗಳು ಯೋಗವಾಹಗಳು.
ಇದರಲ್ಲಿ ಎರಡು ವಿಧ. ೧. ಅನುಸ್ವಾರ (೦) ೨. ವಿಸರ್ಗ (8)


ಈ ಕೆಳಗೆ ಕೊಟ್ಟಿರುವ ಪದಗಳಲ್ಲಿ ಯೋಗವಾಹಗಳಿಂದ ಕೂಡಿರುವ ಅಕ್ಷ ರಗಳನ್ನು ಪ್ರತ್ಯೇಕಿಸಿ ಬರೆಯಿರಿ.
ವಸಂತ, ದು:ಖ, ಚಂದ, ಬೆಳದಿಂಗಳೂಟ, ಅಂಗಡಿ, ಅಂತ:ಕರಣ, ಬಂದ, ತಂದ


ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳ ವ್ಯಂಜನಗಳು. ಇವುಗಳಲ್ಲಿ ವರ್ಗೀಯ ಹಾಗೂ
ಅವರ್ಗೀಯ ವ್ಯಂಜನಗಳೆಂದು ಎರಡು ವಿಧಗಳಿವೆ.


ವರ್ಗೀಯ ವ್ಯಂಜನಗಳಲ್ಲಿ ಮೂರು ವಿಧಗಳಿವೆ, ಅವುಗಳೆಂದರೆ ಕಡಿಮೆ ಉಸಿರಿನಿಂದ ಉಚ್ಚಾರ
ಮಾಡುವ ಅಲ್ಲಪ್ರಾಣಾಕ್ಷರಗಳು, ಹೆಚ್ಚು ಉಸಿರನ್ನು ಬಳಸಿ ಮಾಡುವ ಮಹಾಪ್ರಾಣಾಕ್ಷರಗಳು, ಹಾಗೂ
ಮೂಗಿನ ಸಹಾಯದಿಂದ ಉಚ್ಚಾರ ಮಾಡುವ ಅನುನಾಸಿಕಗಳು.


ಈ ಕೆಳಗಿನ ಅಕ್ಷರಗಳಲ್ಲಿ ಅಲ್ಪಪ್ರಾಣ, ಮಹಾಪ್ರಾಣ ಹಾಗೂ ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ.
ಗ,ನ,ಛ, ಥ, ಚ, ಕಣ,ರು, ಇತಧಪಢಮ,ಘ,ಟ್ಮಭರ


೪, ಒಂದೇ ಜಾತಿಯ ಎರಡು ವ್ಯಂಜನಾಕ್ಷರಗಳು ಸ್ಪರದ ಜೊತೆ. ಸೇರಿ ಆಗುವ ಅಕ್ಬರವೇ ಸಜಾತಿಯ
ಸಂಯುಕ್ತಾಕ್ಷರ. ಬೇರೆ ಬೇರೆ ಜಾತಿಯ ಎರಡು ವ್ಯಂಜನಗಳಿಗೆ ಸ್ಪರಾಕ್ಷರ ಸೇರಿ ಆಗುವ ಅಕ್ಷರವೇ
ವಿಜಾತಿಯ ಸಂಯುಕ್ತಾಕ್ಷ ರ.


ಈ ಕೆಳಗಿನ ಪದಗಳಲ್ಲಿ ಸಜಾತಿ ಮತ್ತು ವಿಜಾತೀಯ ಸಂಯುಕ್ತಾಕ್ಷರಗಳನ್ನು ಗುರುತಿಸಿ ಬರೆಯಿರಿ.
ಹಕ್ಕಿ, ವಸ್ತ್ರ ಪೃಥ್ವಿ, ಜಾತ್ರೆ, ಅಮ್ಮ ಸೂರ್ಯ, ಅಕ್ಷರ, ಕನ್ನಡ
ಪ್ರಾಯೋಗಿಕ ಚಟುವಟಿಕೆ
ಪದ್ಯವನ್ನು ಕಂಠಪಾಠ: ಮಾಡಿರಿ.


ಪದ್ಯದಲ್ಲಿ ಬಂದಿರುವ ಅನುಸ್ಪರಯುಕ್ತ ಪದಗಳನ್ನು ಪಟ್ಟಿಮಾಡಿರಿ.
ಉದಾ : ಬಂದ- ತಂದ


ನಿಸರ್ಗವೇ ಜಗತ್ತಿನಲ್ಲಿ ಅತಿ ದೊಡ್ಡ ಗುರು


ಗದ್ಯಪಾಠ
೨. ಭಾರತ ದೇಶದ ಹಕ್ಕಿ


-ಜಲಾಲುದ್ದೀನ್‌ ರೂಮಿ


ಆಶಯ: ಮಧ್ಯ ಏಷಿಯಾದ ಅರಬ್‌ ದೇಶಗಳಲ್ಲಿ ಹುಟ್ಟಿದ್ದು ಸೂಫಿ ಪಂಥ. ಭಾಷೆ, ಧರ್ಮ, ಜಾತಿಗಳ ಗಡಿಯನ್ನು
ಮೀರಿದ ವಿಶ್ವಮಾನವ ತತ್ವ ಹೊಂದಿರುವಂತಹದು. ಮೊದಲಿನಿಂದಲೂ ಅರಬ್‌ ದೇಶದ ವ್ಯಾಪಾರಿಗಳು, ಕವಿಗಳು
ಮತ್ತು ಸಂತರು ಭಾರತ ದೇಶದ ಜೊತೆಗೆ ಸಂಬಂಧ ಹೊಂದಿದ್ದರು. ಸೂಫಿಪಂಥದ ಅನೇಕ ಕತೆಗಳು ಭಾರತದ
ಕಥಾಲೋಕದಲ್ಲಿ ಸೇರಿವೆ. ಅಂತಹುದೇ ಒಂದು ಸುಂದರ ಕತೆ ಜಲಾಲುದ್ದೀನ್‌ ರೂಮಿಯ "ಭಾರತ ದೇಶದ ಹಕ್ಕೆ'.


ಹೊ ದು ೆ |

ವ್ಯಾಪಾರಿಯೊಬ್ಬನು ಭಾರತ ದೇಶದ ಹಕ್ಕಿಯೊಂದನ್ನು ಸಾಕಿದ್ದ. ಅದನ್ನು ಅವನು ಸದಾ
ಪ೦ಜರದೊಳಗಿಡುತ್ತಿದ್ದ. ಒಮ್ಮೆ ಆ ವ್ಯಾಪಾರಿಯು ಭಾರತ ದೇಶದ ಪ್ರವಾಸ ಕೈಗೊಳ್ಳಬೇಕಾಗಿ ಬಂತು.
ಪಂಜರದೊಳಗೆ ಬಂಧಿಯಾಗಿದ್ದ ಹಕ್ಕಿಯು ತಾಯ್ನಾಡಿನಿಂದ ತನಗಿಷ್ಟವಾದ ಏನನ್ನಾದರೂ ಬಯಸಬಹುದೇ
ಎಂಬುದನ್ನು ತಿಳಿದುಕೊಳ್ಳಲು ಇಚ್ಛಿಸಿದ. ಹಾಗೇನಾದರೂ ಅದು ಬಯಸುವುದಾದರೆ ತಂದು
ಕೊಡುವುದಾಗಿಯೂ ಹಕ್ಕಿಗೆ ಹೇಳಿದ. ಸರಳುಗಳ ಗೂಡಿಂದ ಸದಾ ಬಿಡುಗಡೆಗಾಗಿ ಚಡಪಡಿಸುತ್ತಿದ್ದ ಹಕ್ಕಿಗೆ
ಬೇರಾವುದರ ಮೇಲೂ ಮನಸ್ಸಿರಲಿಲ್ಲ. ಹಾಗೆಯೇ ಅದನ್ನು ಬಿಡುಗಡೆ ಮಾಡಿ ಸ್ಥಾತಂತ್ರ್ಯ ನೀಡಬೇಕೆಂಬ
ಮನಸ್ಸು ವ್ಯಾಪಾರಿಗೂ ಇರಲಿಲ್ಲ.


“ಅಯ್ಯಾ, ನೀನು ಭಾರತ ದೇಶಕ್ಕೆ ಹೋಗುತ್ತಿರುವೆ. ಪ್ರವಾಸ ಕಾಲದಲ್ಲಿ ಯಾವುದಾದರೊಂದು
ಅರಣ್ಯ ಪ್ರದೇಶಕ್ಕೆ ಹೋಗು. ಮುಕ್ತ ವಾತಾವರಣದಲ್ಲಿ ಜೀವಿಸುತ್ತಿರುವ ಅಲ್ಲಿನ ಹಕ್ಕಿಗಳಿಗೆ ನನ್ನ ದುಃಸ್ಥಿತಿಯ
ಕತೆಯನ್ನು ತಿಳಿಸಿ ಹೇಳು. ಅಷ್ಟೇ ಸಾಕು.” ಎಂದು ಹಕ್ಕಿಯು ಅವನನ್ನು ಕೇಳಿಕೊಂಡಿತು.


ವ್ಯಾಪಾರಿಯು ಹಕ್ಕಿಯ ಕೋರಿಕೆಯಂತೆ ಅರಣ್ಯವನ್ನು ಪ್ರವೇಶಿಸಿ ಅಲ್ಲಿನ ಪಕ್ಷಿ ಸಮೂಹಕ್ಕೆ ಅದರ
ಕತೆಯನ್ನು ಹೇಳಿದ. ಕತೆಯನ್ನು ಕೇಳುತ್ತಿದ್ದಂತೆಯೇ ಮರದ ಮೇಲಿದ್ದ ಒಂದು ಹಕ್ಕಿಯು ಕಳಚಿಕೊಂಡು
ತೊಪ್ಪನೆ ಕೆಳಗೆ ಬಿದ್ದಿತು. ದೂರದ ದೇಶದಲ್ಲಿ ಬ೦ಧಿತವಾಗಿ ಕೊಳೆಯುತ್ತಿರುವ ಹಕ್ಕಿಯ ಸಂಬಂಧಿಕ
ಹಕ್ಕಿಯು ಇದಾಗಿರಬಹುದು, ಆ ಕಾರಣದಿಂದಲೇ ಈ ಹಕ್ಕಿಯ ಪ್ರಾಣವು ಹಾರಿ ಹೋಗಿರಬಹುದೆಂದು
ವ್ಯಾಪಾರಿಯು ಊಹಿಸಿಕೊ೦ಡ.


ಪ್ರವಾಸ ಮುಗಿದ ನಂತರ ಅವನು ಸ್ವದೇಶಕ್ಕೆ ವಾಪಸ್ಸಾದ. ತಾಯ್ನಾಡಿನಿಂದ ತಂದಿರುವ ಶುಭವಾರ್ತೆ
ಏನಾದರೂ ಇದೆಯೇ ಎಂದು ಹಕ್ಕಿಯು ಅವನನ್ನು ವಿಚಾರಿಸಿತು. ಸಮಾಚಾರವೇನೋ ಇದೆ. ಆದರೆ
ಅದನ್ನು ಶುಭವಾರ್ತೆ ಎಂದು ಹೇಳಲಾರೆ. ನಿನ್ನ ಕತೆಯನ್ನು ಕೇಳಿದ ಮರುಕ್ಷಣವೇ ಹಕ್ಕಿಯೊಂದು
ಮರದಿಂದ ಕೆಳಗುರುಳಿ ಪ್ರಾಣ ಕಳೆದುಕೊಂಡಿತು. ಬಹುಶಃ ಅದು ನಿನ್ನ ಸಂಬಂಧಿಕನಿರಬಹುದು” ಎಂದು
ವ್ಯಾಪಾರಿಯು ಹೇಳಿದ.


ಆ ವಾರ್ತೆಯನ್ನು ಕೇಳುತ್ತಿದ್ದಂತಯೇ ಹಕ್ಕಿಯು ಹಿಡಿಸೊಪ್ಪಿನಂತಾಗಿ ಪಂಜರದೊಳಗೆ ಕುಸಿದು
ಬಿತ್ತು. ತನ್ನ ಸಂಬಂಧಿಕ ಹಕ್ಕಿಯ ಅಕಾಲಿಕ ಮರಣ ವಾರ್ತೆಯನ್ನು ಕೇಳಿ ಈ ಹಕ್ಕಿಯ ಪ್ರಾಣ ಹಾರಿ
ಹೋಯಿತಲ್ಲಾ ಎಂದು ಅವನು ಖೇದಗೊಂಡ. ಅದನ್ನು ಅಲ್ಲಿಂದ ಎತ್ತಿ ಕಿಟಕಿಯ ಹೊರಗಿನ ಮೇಜುಕಟ್ಟಿನ
ಮೇಲಿರಿಸಿದ. ಹಕ್ಕಿಯು ಪಟಪಟನೆ ಗರಿಬಿಚ್ಚಿ ಸಮೀಪದಲ್ಲಿದ್ದ ಮರದತ್ತ ಹಾರಿತು.


ಮರದ ಮೇಲೆ ಕುಳಿತು ವ್ಯಾಪಾರಿಗೆ ಹೀಗೆ ಹೇಳಿತು: “ಅಶುಭ ಎ೦ದು ನೀನು ಭಾವಿಸಿದ
ವಾರ್ತೆಯು ನನಗೆ ಶುಭವಾರ್ತೆಯಾಗಿತ್ತು. ಆಪತ್ಕಾಲದಲ್ಲಿ ಜೀವ ರಕ್ಷಿಸಿಕೊಳ್ಳುವ ಉಪಾಯ ಯಾವುದು
ಎ೦ಬ ರಹಸ್ಯವು ಆ ವಾರ್ತೆಯಲ್ಲಿ ಅಡಗಿತ್ತು. ನೀನು ನನ್ನನ್ನು ಬಂಧನದಲ್ಲಿಟ್ಟುಕೊಂಡಿದ್ದವನು. ಆ
ಹಕ್ಕಿಯು ನನ್ನ ಬಿಡುಗಡೆಯ ನಿಗೂಢ ಸಂದೇಶವನ್ನು ನಿನ್ನ ಮೂಲಕವೇ ತಲುಪಿಸಿತು[.”


ಬ೦ಧಮುಕ್ತವಾದ ಹಕ್ಕಿಯು ಹೀಗೆ ಹೇಳಿ ಮರದಿಂದ ಮೇಲಕ್ಕೆ ಹಾರುತ್ತಾ ವಿಶಾಲ
ನೀಲಾಂಬರವನ್ನು ಸೇರಿತು.


ಲೇಖಕರ ಪರಿಚಯ

ಜಲಾಲುದ್ದೀನ್‌ ರೂಮಿ ಹದಿಮೂರನೆಯ ಶತಮಾನದಲ್ಲಿ ಇದ್ದ ಸೂಫಿ ಸಂತ. ಅವನ ಮೂಲ ಸ್ಥಳ
ಅಪಘಾನಿಸ್ತಾನದ ಬಲ್ಬ್‌. ದಾರ್ಶನಿಕನಾಗಿದ್ದ ತಂದೆಯ ಪ್ರಭಾವ ಅವನ ಮೇಲೆ ಬಹಳವಾಗಿತ್ತು ಸೂಫಿ
ತತ್ವಗಳನ್ನು ಹೇಳುವ ಅನೇಕ ಕವಿತೆಗಳನ್ನು ರೂಮಿ ಬರೆದಿದ್ದಾನೆ. ಅವನ ಸಣ್ಣ ಕತೆಯೊಂದನ್ನು ಇಲ್ಲಿ
ಆರಿಸಿ ಕೊಡಲಾಗಿದೆ.

ಪ್ರೊ.ಬಿ. ಗಂಗಾಧರಮೂರ್ತಿ ಗೌರಿಬಿದನೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ
ಸಲ್ಲಿಸಿದವರು. ಜಲಾಲುದ್ದೀನ್‌ ರೂಮಿಯ ಈ ಕತೆಯನ್ನು ಪ್ರೊ. ಬಿ. ಗಂಗಾಧರಮೂರ್ತಿಯವರು
ಅನುವಾದಿಸಿರುವ “ಸೂಫಿ ಕಥಾಲೋಕ'ದಿ೦ದ ಆರಿಸಲಾಗಿದೆ.

ಒದಿ ತಿಳಿಯಿರಿ

ಪಂಜರ- ಪ್ರಾಣಿ, ಪಕ್ಷಿಗಳನ್ನು ಬಂಧಿಸಿಡುವ ಗೂಡು; ಬಂಧಿ- ಸೆರೆಯಾಳು; ಅರಣ್ಯ- ಕಾಡು; ಕೋರಿಕೆ-
ಬೇಡಿಕೆ; ಸಮೂಹ- ಗುಂಪು; ಕಳಚು-ಬಿಚ್ಚು; ಸ್ವದೇಶ- ತನ್ನ ದೇಶ; ಶುಭವಾರ್ತೆ- ಒಳ್ಳೆಯ ಸುದ್ದಿ;
ಅಕಾಲಿಕ- ಕಾಲವಲ್ಲದ ಕಾಲ; ಖೇದಗೊಳ್ಳು- ದುಃಖಪಡು; ಆಪತ್ಕಾಲ- ಕಷ್ಟದಕಾಲ; ರಹಸ್ಯ- ಗುಟ್ಟು
ನಿಗೂಢ-ಅಡಗಿದ; ಚಡಪಡಿಸು- ಕಳವಳಗೊಳ್ಳು; ನೀಲಾಂಬರ- ನೀಲಿಯ ಆಕಾಶ; ಬ೦ಧಮುಕ್ತ-
ಬಿಡುಗಡೆ ಹೊಂದಿದ.


ಗಮನಿಸಿ ತಿಳಿಯಿರಿ
ಪ್ರವಾಸ- ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಇನ್ನೊಂದು ಪ್ರದೇಶಕ್ಕೆ ಹೋಗುವುದು; ಸಂಚಾರ


ಮು


ಪ್ರಾಣ ಹಾರಿಹೋಗು- ಮರಣಹೊಂದು. ಸರಳು-ಕಂಬಿ;


ಅಭ್ಯಾಸ ಚಟುವಟಿಕೆ
ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
೧. ವ್ಯಾಪಾರಿಯು ಹಕ್ಕಿಯನ್ನು ಎಲ್ಲಿ ಇಟ್ಟಿದ್ದ?
ದ್ರ ಅರಣ್ಯದಲ್ಲಿದ್ದ ಹಕ್ಕಿಗೆ ವ್ಯಾಪಾರಿಯ ಮಾತು ಕೇಳಿ ಏನಾಯಿತು?
೩. ಬಂಧಮುಕ್ತವಾದ ಹಕ್ಕಿ ಏನು ಮಾಡಿತು.


ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
ಪಂಜರದಲ್ಲಿದ್ದ ಹಕ್ಕಿಗೆ ವ್ಯಾಪಾರಿಯು ಏನೆಂದು ಕೇಳಿದ?
ವ್ಯಾಪಾರಿಯು ಭಾರತದಿಂದ ಹಕ್ಕಿಗೆ ತಂದ ಸಂದೇಶವೇನು?
ಪಂಜರದಿಂದ ಹಾರಿದ ಹಕ್ಕಿ ವ್ಯಾಪಾರಿಗೆ ಏನು ಹೇಳಿತು?)
ಪಂಜರದ ಹಕ್ಕಿಯು ಸಾವಿನ ನಾಟಕವನ್ನು ಮಾಡಿದ್ದು ಏಕೆ?


ಸಂದರ್ಭ ಸಹಿತ ವಿವರಿಸಿರಿ.
“ಅಲ್ಲಿನ ಹಕ್ಕಿಗಳಿಗೆ ನನ್ನ ದುಃಸ್ಥಿತಿಯ ಕತೆಯನ್ನು ತಿಳಿಸಿ ಹೇಳು'
“ಬಹುಶಃ ಅದು ನಿನ್ನ ಸಂಬಂಧಿಕನಿರಬಹುದು'
“ಅಶುಭ ಎಂದು ನೀನು ಭಾವಿಸಿದ ವಾರ್ತೆಯು ನನಗೆ ಶುಭವಾರ್ತೆಯಾಗಿತ್ತು'.


ಈ ಕೆಳಗೆ ಕೊಟ್ಟಿರುವ ಗುಣಿತಾಕ್ಷ ರಗಳಿಂದ ಪ್ರಾರಂಭವಾಗುವ ಒಂದೊಂದು ಪದ ಬರೆಯಿರಿ.
ಮಾದರಿ : ಬ - ಬನ
೧. ಭ- ೨. ಭಾ- ಕ. ಭಿ. ೪. ಭೀ


ಈ ಕೆಳಗಿನ ಪದಗಳಲ್ಲಿ ಅಡಿಗೆರೆ ಎಳೆದ ಅಕ್ಷರವು ಹಸ್ಪಸ್ಪರವೇ ಅಥವಾ ದೀರ್ಫ್ಥಸ್ವರವೇ ಗುರುತಿಸಿ
ಬರೆಯಿರಿ.


೧. ಈಶ ೨. ಅರಸ ೩. ಇರುವೆ ೪. ಆಟ ೫. ಊರು


ಈ ಕೆಳಗಿನ ಪದಗಳನ್ನು ಸಜಾತೀಯ ಸಂಯುಕ್ತಾಕ್ಷರ ಮತ್ತು ವಿಜಾತೀಯ ಸಂಯುಕ್ತಾಕ್ಷರಗಳ ಪದಗಳನ್ನಾಗಿ
ವಿಂಗಡಿಸಿ ಬರೆಯಿರಿ.


ಹಕ್ಕಿ ಪವಾಸ, ಅರಣ ಮನಸು ವಾಪಾರಿ. ಹಾರುತಾ, ವಾರ್ತೆ, ಆಪತಾಲ
೪ ಲ $ i $ ಲ ಸ


ವ್ಯಾಕರಣಾಭ್ಯಾಸ
ಈ ಕೆಳಗಿನ ಸಾಲುಗಳನ್ನು ಗಮನಿಸಿ
೧. ನನಗೆ ಹೂವುಗಳೆಂದರೆ ಬಹಳ ಇಷ್ಟ
೨. ಆ ಬೊಂಬೆಯ ಪುಸ್ತಕವನ್ನು ಕೊಡು.
೩. ನಾಳೆ ಅವರು ಯಾವ ಊರಿಗೆ ಹೋಗುತ್ತಿರುವರು?
ಈ ಸಾಲುಗಳನ್ನು ಓದಿದಾಗ ಅವು ಅರ್ಥವಾಗುತ್ತವೆ. ಮುಂದಿನ ಸಾಲುಗಳನ್ನು ಗಮನಿಸಿರಿ.
೧. ಇಷ್ಟ ಹೂವು ಬಹಳ ಎಂದರೆ ನನಗೆ.
೨. ಕೊಡು ಪುಸ್ತಕವನ್ನು ಬೊಂಬೆಯ ಆ.
೩. ಯಾವ ಅವರು ಊರಿಗೆ ಹೋಗುತ್ತಿರುವರು ನಾಳೆ?)


ಇಲ್ಲಿರುವ ಪದಗಳು ಅವೇ ಆದರೂ ಅರ್ಥವಾಗುವುದಿಲ್ಲ. ಆದುದರಿಂದ ಅರ್ಥಪೂರ್ಣವಾಗಿ
ಜೋಡಿಸಲಾದ ಪದಗಳ ಗುಂಪನ್ನು ವಾಕ್ಯ. ಎನ್ನುತ್ತೇವೆ. ವಾಕ್ಯಗಳಲ್ಲಿ ಕರ್ತೃ, ಕರ್ಮ, ಕ್ರಿಯಾ
ಪದಗಳು ಇರುತ್ತವೆ.


ಇಲ್ಲಿರುವ ವಾಕ್ಯಗಳನ್ನು ಗಮನಿಸಿರಿ.
ಹನುಮಂತನು ಸೀತೆಯನ್ನು ನೋಡಿದನು.
ತಂದೆ ಹಣ್ಣುಗಳನ್ನು ತ೦ದರು.
ಸುರೇಶನು ಚಿತ್ರವನ್ನು ಬರೆದನು.
ಮಕ್ಕಳು ಪುಸ್ತಕಗಳನ್ನು ಜೋಡಿಸುತ್ತಿರುವರು.


ಈ ವಾಕ್ಯಗಳಲ್ಲಿ ನೋಡಿದನು, ತಂದರು; ಬರೆದನು, ಜೋಡಿಸುತ್ತಿರುವರು ಇವುಗಳು ಕ್ರಿಯೆಯನ್ನು
ಸೂಚಿಸುವ ಪದಗಳಾದ್ದರಿ೦ದ ಕ್ರಿಯಾ ಪದಗಳು. ಈ ಕ್ರಿಯೆಯನ್ನು ಮಾಡುತ್ತಿರುವವರನ್ನು ಸೂಚಿಸುವ
ಪದಗಳು ಅಂದರೆ ಹನುಮಂತ, ತಂದೆ, ಸುರೇಶ, ಮಕ್ಕಳು ಇವು ಕರ್ತೃ ಪದಗಳು. ಏನನ್ನು ಮಾಡುತ್ತಾರೆ
ಎಂದು ಸೂಚಿಸುವ ಪದಗಳು ಅಂದರೆ ಸೀತೆಯನ್ನು, ಹಣ್ಣುಗಳನ್ನು, ಚಿತ್ರವನ್ನು, ಪುಸ್ತಕಗಳನ್ನು ಇವು
ಕರ್ಮ ಪದಗಳು.


ಈ ಕೆಳಗಿನ ವಾಕ್ಯಗಳಲ್ಲಿ ಕರ್ತೃ,ಕರ್ಮ, ಕ್ರಿಯಾಪದಗಳನ್ನು ಗುರುತಿಸಿ ಬರೆಯಿರಿ.
೧. ಹಕ್ಕಿಯು ಪಂಜರದಲ್ಲಿ ಕುಳಿತಿತ್ತು.
೨. ವ್ಯಾಪಾರಿ ಪ್ರವಾಸ ಹೋಗುತ್ತಿದ್ದನು


ಪ್ರಾಯೋಗಿಕ ಚಟುವಟಿಕೆ
ಈಸೋಪನ ನೀತಿ ಕತೆಗಳನ್ನು ಕೇಳಿ ತಿಳಿಯಿರಿ.
ಪ್ರಾಣಿ-ಪಕ್ಷಿಗಳನ್ನು ಪಂಜರದಲ್ಲಿಡುವುದು ಸರಿಯೆ? ಎಂದು ನಿಮ್ಮ ತರಗತಿಯಲ್ಲಿ ಚಿಕ್ಕ ಚಿಕ್ಕ ಗುಂಪುಗಳಲ್ಲಿ
ಚರ್ಚಿಸಿರಿ.


ಇ) ಈ ಕೆಳಗಿನ ಚಿತ್ರಗಳನ್ನು ಗಮನಿಸಿ, ಸೂಕ್ತ ಮಾತುಗಳನ್ನು ಬರೆಯಿರಿ.


ಪೂರಕ ಓದು
ಚತುರ ಮೊಲ


ದಟ್ಟವಾದ ಕಾಡೊಂದರಲ್ಲಿ ಸಿಂಹವೊಂದು ವಾಸವಾಗಿತ್ತು. ಅದು ಮೃಗರಾಜ ಎಂಬ ಗೌರವಕ್ಕೆ
ಪಾತ್ರವಾಗಿತ್ತು. ಪ್ರತಿನಿತ್ಯ ಅದು ತನ್ನ ಆಹಾರಕ್ಕಾಗಿ ಎಷ್ಟೋ ಪ್ರಾಣಿಗಳನ್ನು ಕೊಂದು ಹಾಕುತ್ತಿತ್ತು. ಇದರಿಂದ
ಬೇಸತ್ತ ಕಾಡಿನ ಪ್ರಾಣಿಗಳು ಸಭೆ ಸೇರಿ ತಾವೇ ಪ್ರತಿನಿತ್ಯ ಸರದಿಯಂತೆ ಒಂದೊಂದು ಪ್ರಾಣಿಯನ್ನು
ಸಿಂಹದ ಬಳಿಗೆ ಕಳುಹಿಸಬೇಕು ಎಂದು ತೀರ್ಮಾನಿಸಿದವು. ಸಿಂಹವೂ ಪ್ರಾಣಿಗಳ ತೀರ್ಮಾನಕ್ಕೆ ಒಪ್ಪಿತು.
ಪ್ರತಿನಿತ್ಯ ಪ್ರಾಣಿಗಳು ತಾವು ನಿಗದಿಪಡಿಸಿದಂತೆ ಸಿಂಹದ ಬಳಿಗೆ ಒಂದೊಂದು ಪ್ರಾಣಿಯನ್ನು
ಕಳುಹಿಸತೊಡಗಿದವು. ಸಿಂಹವೂ ತಾನು ಪ್ರಾಣಿಯನ್ನು ಹುಡುಕಿಕೊಂಡು ತಿರುಗದೆ ತನ್ನ ಗುಹೆಗೆ ಬಂದ
ಪ್ರಾಣಿಯನ್ನು ತಿಂದು ನೆಮ್ಮದಿಯಾಗಿತ್ತು.


ಒಂದು ದಿನ ಸಿಂಹಕ್ಕೆ ಆಹಾರವಾಗುವ ಸರದಿ ಮೊಲಕ್ಕೆ ಬಂದಿತು. ಮೊಲ ಬಹಳ ತಡವಾಗಿ
ಬಂತು. ಹಸಿದಿದ್ದ ಸಿಂಹ ವೇಳೆ ಮೀರಿ ಬಂದ ಮೊಲವನ್ನು “ಏಕಿಷ್ಟು ತಡಮಾಡಿದೆ?' - ಎಂದು ಗರ್ಜಿಸಿ
ಕೇಳಿತು. ಅದಕ್ಕೆ ಮೊಲ ಸ್ಟಲ್ಪವೂ ಹೆದರದೆ, “ಮೃಗರಾಜ, ನಾನೇನೋ ಬೇಗನೆ ಬರಬೇಕೆಂದು ಓಡೋಡಿ
ಬರುತ್ತಿದ್ದೆ. ಆದರೆ ದಾರಿಯಲ್ಲಿ ಮತ್ತೊಂದು ಸಿಂಹ ಎದುರಾಗಿ ನನ್ನನ್ನು ಹಿಡಿದು ತಿನ್ನಲು ನೋಡಿತು.
ನಾನು ಅದರಿಂದ ತಪ್ಪಿಸಿಕೊಂಡುಬರಲು ಇಷ್ಟು ವೇಳೆಯಾಯಿತು.:ದಯವಿಟ್ಟು ನನ್ನನ್ನು ಕ್ಷಮಿಸು' ಎಂದಿತು.


ಇದನ್ನು ಕೇಳಿದ ಸಿಂಹಕ್ಕೆ ಮಿತಿಮೀರಿದ-ಕೋಪ ಬಂತು. "ಏನು? ಈ ಕಾಡಿನಲ್ಲಿ ನನ್ನನ್ನು ಬಿಟ್ಟು


ಇನ್ನೊಂದು ಸಿಂಹವಿದೆಯೆ? ಹಾಗಿದ್ದರೆ ಅಡು ಎಲ್ಲಿದೆ'ಎಂದು ತೋರಿಸು? ಮೊದಲು ಅದನ್ನು ಕೊಂದು,
ಬಳಿಕ ನಿನ್ನನ್ನು ವಿಚಾರಿಸಿಕೊಳ್ಳುತ್ತೇನೆ.' ಎಂದು ಗುಡುಗಿತು. ಮೊಲ ನಿಧಾನಿಸದೆ, “ಅದಕ್ಕೇನಂತೆ ಮೃಗರಾಜ,
ನನ್ನ ಹಿಂದೆ ಬಾ, ಆ ಸಿಂಹವನ್ನು ತೋರಿಸುತ್ತೇನೆ. ಅದು ನೋಡಿದರೆ ನಿನ್ನಂತೆಯೇ ಬಲಶಾಲಿ ಇದ್ದಂತೆ
ಕಾಣುತ್ತದೆ” ಎಂದಿತು. ಮೊಲದ ಮಾತಿನಂತೆ ಸಿಂಹ ಅದನ್ನನುಸರಿಸಿ ಹೊರಟಿತು.


ಕಾಡಿನಲ್ಲಿ ಸಿಂಹವನ್ನು ಬಲುದೂರ ಕರೆದುಕೊಂಡು ಬಂದ ಮೊಲ ಅಲ್ಲಿದ್ದ ಒಂದು ಹಾಳು
ಬಾವಿಯನ್ನು ತೋರಿಸಿತು. "ಮೃಗರಾಜ, ನಾನು ಹೇಳಿದೆನಲ್ಲಾ ಸಿಂಹ ಎಂದು ಅದು ಈ ಬಾವಿಯೊಳಗೆ
ವಾಸಿಸುತ್ತಿದೆ. ಬಗ್ಗಿ ನೋಡು ಎಂದಿತು. ಸಿಂಹ ಹೌದೇನು ಎಂದು ಬಾವಿಕಟ್ಟೆ ಏರಿ ಗರ್ಜಿಸುತ್ತಾ ಬಗ್ಗಿ
ನೋಡಿತು. ಬಾವಿಯ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಂಡ ಸಿಂಹ ಅದು ತನ್ನ ಹಾಗೇ ಇರುವ
ಇನ್ನೊಂದು ಸಿಂಹ ಎಂದು ಭಾವಿಸಿ ಕೊಲ್ಲಲು ಬಾವಿಯೊಳಗೆ ಹಾರಿ ಪ್ರಾಣ ಕಳದುಕೊಂಡಿತು.


ಮೊಲ ಅಲ್ಲಿಂದ ವೇಗವಾಗಿ ಓಡಿಬಂದು ಪ್ರಾಣಿಗಳ ಸಮೂಹಕ್ಕೆ ನಡೆದ ಘಟನೆಯನ್ನು ವಿವರಿಸಿತು.
ಪ್ರಾಣಿಗಳೆಲ್ಲಾ ತಮಗೆ ಬಂದಿದ್ದ ಆಪತ್ತು ನಿವಾರಣೆಯಾದುದಕ್ಕೆ ಕಾರಣವಾದ ಮೊಲದ ಬುದ್ದಿವಂತಿಕೆಯನ್ನು
ಮೆಚ್ಚಿ ಹೊಗಳಿ ಸಂತಸದಿಂದ ಕುಣಿದಾಡಿದವು.


ಅಪಾಯ ಬಂದಾಗ ಉಪಾಯದಿಂದ ಕಾರ್ಯ ಸಾಧಿಸಬೇಕು.


ks


ಪದ್ಯಪಾಠ


೩. ಮಿತ್ರ


-ಎಂ ಅಕಬರ ಅಲಿ


(ಆಶಯ: ಸೂರ್ಯ ಒಂದು ದೊಡ್ಡ ನಕ್ಷತ್ರ ಭೂಮಿಗೆ ಬೆಳಕು, ಶಕ್ತಿ ಕೊಡುವ ಗೆಳೆಯ. ಇರುಳನ್ನು ಕಳೆದು
ಬೆಳಕನ್ನು ತರುವ ಇವನು ಮನುಷ್ಯರಿಗಷ್ಟೇ ಅಲ್ಲ, ಸಕಲ ಜೀವರಾಶಿಗಳಿಗೂ ಚೇತನ ನೀಡುವನು. ಎಲ್ಲರ
ಬಾಳಿನಲ್ಲೂ ಬೆಳಕು ಚೆಲ್ಲುವನು. ಇಂತಹ ಸೂರ್ಯನ ಶಕ್ತಿ. ಸಾಮರ್ಥ್ಯದ ಚಿತ್ರಣ ಇಲ್ಲಿದೆ.)


ಇರುಳನು ಚದುರಿಸಿ ಹಗಲನು ಕುದುರಿಸಿ
ಹೂಬನವೆಲ್ಲವ ನಳನಳಿಸಿ

ಬಂದನು ಮಿತ್ರ ಪಾವನ ಪಾತ್ರ
ಜೀವನವೆಲ್ಲವ ನಲಿನಲಿಸಿ


ರನ್ನದ ಕನ್ನಡಿ ಬದುಕಿಗೆ ಹಿಡಿಯುತ
ಮಮತೆಯ ದೃಷ್ಟಿಯ ಬೀರುತಿಹ
ಬಾಳನು ಬೆಳಗಿಸಿ, ಕೊಳೆ ತಿಳಿಯಾಗಿಸಿ
ಸಮತೆಯ ಸೃಷ್ಟಿಯ ತೋರುತಿಹ.


ಬಾಳಿನ ನಂಜನು ಗೋಳಿನ ಮಂಜನು
ಕಳೆಯಲಿಕೆಂದೇ ಬ೦ದಿಹನು

ಹೊಗೆಯನು ಚದುರಿಸಿ ನಗೆಯನು ಕುದುರಿಸಿ
ಬಗೆಯನು ಬೆಳೆಸುತ ನಿಂದಿಹನು


ಕವಿ ಪರಿಚಯ


ಎ೦ ಅಕಬರ ಅಲಿ ಬೆಳಗಾವಿ ಜಿಲ್ಲೆಯ ಖಾನಾಪುರದವರು. ಕನ್ನಡ ಪ್ರಾಧ್ಯಾಪಕರಾಗಿದ್ದ
ಇವರು ನವಚೇತನ, ವಿಷಸಿಂಧು, ಸುಮನ ಸೌರಭ, ಗ೦ಧಕೇಶ್ವರ, ತಮಸಾ ನದಿಯ
ಎಡಬಲದಿ, ಅಕಬರ ಅಲಿ ಚುಟುಕುಗಳು, ಕಸಿ ಗುಲಾಬಿಯ ಕಥನ ಎಂಬ ಕೃತಿಗಳನ್ನು
ರಚಿಸಿದ್ದಾರೆ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಶಿಕ್ಷಣ | ಕ
ಇಲಾಖೆ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. ಈ ಕವನವನ್ನು
“ತಮಸಾ ನದಿಯ ಎಡಬಲದಿ' ಸಂಕಲನದಿಂದ ಆರಿಸಲಾಗಿದೆ.


ಓದಿ-ತಿಳಿಯಿರಿ
ಮಿತ್ರ-ಸೂರ್ಯ, ಗೆಳೆಯ; ಚದುರಿಸು-ಸರಿಸು; ಪಾವನ-ಪವಿತ್ರ; ರನ್ನ-ರತ್ತ; ಮಮತೆ-ಪ್ರೀತಿ;
ಬಾಳು-ಜೀವನ; ಸೃಷ್ಟಿ - ಪ್ರಕೃತಿ ; ನಂಜು- ವಿಷ ; ಗೋಳು- ಕಷ್ಟ ; ಮಂಜು- ಮಸುಕು,
ಮಬ್ಬು; ಬಗೆ-ಬುದ್ಧಿ, ಮನಸು.


ಣು


ಅಭ್ಯಾಸ ಚಟುವಟಿಕೆಗಳು


ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಮಿತ್ರನು ಏನನ್ನು ಚದುರಿಸಿದ ?

ಬದುಕಿಗೆ ಸೂರ್ಯ ಎಂತಹ ಕನ್ನಡಿಯನ್ನು ಹಿಡಿಯುವನು 9
ಮಿತ್ರನು ಎಂತಹ ದೃಷ್ಟಿಯನ್ನು ಬೀರುತಿಹನು?

ನಗೆಯನ್ನು ಕುದುರಿಸುವವರು ಯಾರು ?

ಸೂರ್ಯ ಏನನ್ನು ಬೆಳಸುತ್ತಾ ನಿಂತಿರುವನು ?


ಬ್ರ
೩.




ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
ಮಿತ್ರನು ಹೇಗೆ ಬಂದನು 9
ಸೂರ್ಯನು ಮಮತೆಯ ದೃಷ್ಟಿ ಬೀರುತಿಹ ಎಂದು ಕವಿ ಏಕೆ ಹೇಳಿದ್ದಾರೆ 9)
ಮಿತ್ರ ಸಮತೆಯನ್ನು ಹೇಗೆ ತೋರುತ್ತಾನೆ ?
ಬಾಳಿನ ಕಷ್ಟವನ್ನು ಸೂರ್ಯ ಹೇಗೆ ಕಳೆಯುವನು 9)


ಈ ಕೆಳಗಿನ ಪ್ರತಿಯೊಂದು ಪದವನ್ನು ಬಳಸಿ, ಒಂದೊಂದು ವಾಕ್ಯ ರಚಿಸಿರಿ.
೧. ಇರುಳು ೨. ಮಂಜು ೩.”ಗೋಳು ೪. ಕೊಳೆ


ಗುಂಪಿಗೆ ಸೇರದ ಪದವನ್ನು ಗುರುತಿಸಿ ಬರೆಯಿರಿ.
೧. ಹೂವು, ಸುಮ, ಸುಗಂಧ, ಪುಷ್ಟ

೨. ಮಿತ್ರ ಗೆಳೆಯ, ಸ್ನೇಹಿತ, ಬಳೆಗ

೩. ಬಾನು, ಭಾನು, ಆಕಾಶ,' ಆಗಸ

೪, ಜನನ, ಜೀವನ, ಬಾಳು, ಬದುಕು


ಪ್ರಾಯೋಗಿಕ ಚಟುವಟಿಕೆ
ಈ ಪದ್ಯವನ್ನು ಕಂಠಪಾಠ ಮಾಡಿ
ಕುವೆಂಪು ಅವರ ಈ ಪದ್ಯಭಾಗವನ್ನು ರಾಗವಾಗಿ ಹಾಡಿ :


ಆನಂದಮಯ ಈ ಜಗಹೃದಯ
ಏತಕೆ ಭಯ 9? ಮಾಣೊ |
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ


ಬಿಸಿಲಿದು ಬರಿ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ
ಆ ಭ್ರಾಂತಿಯ ಮಾಣೊ |


ವ್ಯಾಕರಣಾಭ್ಯಾಸ
ಈ ಕೆಳಗಿನ ಪುರಂದರದಾಸರ ಪದ್ಯಭಾಗವನ್ನು ಗಮನಿಸಿ;


ಆಚಾರವಿಲ್ಲದ ನಾಲಗೆ ನಿನ್ನ

ನೀಚ ಬುದ್ಧಿಯ ಬಿಡು ನಾಲಗೆ

ವಿಚಾರವಿಲ್ಲದೆ ಪರರ ದೂಷಿಸುವುದಕೆ

ಚಾಚಿಕೊಂಡಿರುವಂಥ ನಾಲಗೆ

ಇಲ್ಲಿ ಪದ್ಯದ ಪ್ರತಿ ಸಾಲಿನ ಮೊದಲ ಪದವನ್ನು ಗಮನಿಸಿ , ಪದದಲ್ಲಿರುವ ಎರಡನೆಯ ವರ್ಣದ
ವ್ಯಂಜನ “ಜ್‌' ಎಲ್ಲಾ ಸಾಲಿನಲ್ಲೂ ಕ್ರಮವಾಗಿ ಬಂದಿದೆ . ಈ ರೀತಿ. ಒಂದೇ ವ್ಯಂಜನಗಳು ಕ್ರಮವಾಗಿ
ಬಂದ ಪದಗಳನ್ನು “ಪ್ರಾಸ ಪದಗಳು” ಎನ್ನುತ್ತೇವೆ. ಇವು. ಪದ್ಮದ ಪ್ರತಿ ಸಾಲಿನ ಮೊದಲಲ್ಹೋ ,
ಮಧ್ಯದಲ್ಲೋ ಅಥವಾ ಕೊನೆಯಲ್ಲೋ ಬರಬಹುದು. ಹೀಗೆ, ಬಂದ ಪದಗಳನ್ನು ಕ್ರಮವಾಗಿ ಆದಿಪ್ರಾಸ,
ಮಧ್ಯಪ್ರಾಸ ಮತ್ತು ಅಂತ್ಯಪ್ರಾಸ ಎಂದು ಕರೆಯುತ್ತೇವೆ,
ದಿನಕರ ದೇಸಾಯಿ ಅವರ ಈ ಪದ್ಯದಲ್ಲಿ ಬಂದಿರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ:


ಎಲ್ಲರಿಗೊಂದೆ ಭೂತಲವೆಂದೆ
ಎಲ್ಲರಿಗೂ ಭಗವಂತನು ತಂದೆ
ಸರ್ವರಿಗೊಂದೆ ಸೂರ್ಯನ ಕಣ್ಣು
ವಿಧ ವಿಧ ಸಸ್ಯಕೆ ಒಂದೇ ಮಣ್ಣು


ಬಗೆ ಬಗೆಯಾದರೂ ದೇಹದ ಬಣ್ಣ
ಎಲ್ಲರ ನಗೆಯೂ ಒಂದೇ ಅಣ್ಣ
ಏತಕೆ ಯುದ್ದವು? ಏತಕೆ ಮದ್ದು
ಒಂದೇ ಮನೆಯೊಳಗೆಲ್ಲರು ಇದ್ದು


ಜಗತ್ತನ್ನು ಬೆಳಗಲು ಸೂರ್ಯ ಬೇಕು, ಬಾಳನ್ನು ಬೆಳಗಲು ಪುಸ್ತಕ ಬೇಕು.


ಎನ್‌.ಎಸ್‌. ತಾರಾನಾಥ


ಆಶಯ : ಒಬ್ಬ ವ್ಯಕ್ತಿಯು ತನ್ನ ಅನುಭವ, ವಿಚಾರ, ಭಾವನೆಗಳನ್ನು ಮತ್ತೊಬ್ಬರಿಗೆ ತಿಆಪಲು
ಬಳಸುವ ಶಾಣ್ಣಕ ಮಾಧ್ಯಮಕ್ಕೆ ಭಾಷೆ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಬಳಸುವ
ಭಾಷೆಯು ಅವನ ವ್ಯಕ್ತಿತ್ವ ಮತ್ತು ಸಂಸ್ಕೃತಿಯನ್ನು ತಿಆಸುತ್ತದೆ. ಪದ, ವಾಕ್ಯಗಳು ಭಾಷೆಯ ಅವಿಭಾಜ್ಯ
ಅ೦ದವಾಗರುತ್ತವೆ. ನಾವು ಮಾತನಾಡುವಾದ ಬಳಕೆದೊಳ್ಳುವ ನಾಲದೆಯು ಪ್ರಮುಖವಾದ ಕಾರ್ಯ
ನಿರ್ವಹಿಸುತ್ತದೆ. ಪಂಚೇಂದ್ರಿಯದಕಲ್ಲ ಒಂದಾದ ನಾಲದೆಯು ಕೆಲಸ ಮತ್ತು ಸ್ಥಾನಮಾನವನ್ನು ಈ
ಪಾಠದಲ್ಲಿ ಚರ್ಚಿಪಲಾಣದದೆ.


ಕಣ್ಣು, ಕಿವಿ, ಮೂಗು, ಚರ್ಮ, ನಾಲಗೆ ಮನುಷ್ಯನ ಐದು ಇಂದ್ರಿಯಗಳು. ಕಣ್ಣು ನೋಡುತ್ತದೆ;
ಕಿವಿ ಆಲಿಸುತ್ತದೆ; ಮೂಗು ಆಪ್ರಾಣಿಸುತ್ತದೆ; ಚರ್ಮ ವಸ್ತುವಿನ ಕೋಮಲತೆ,ಅರಿಯುತ್ತದೆ; ನಾಲಗೆ ರುಚಿ
ತಿಳಿಸುತ್ತದೆ. ಕಣ್ಣುಗಳು ಎರಡು- ನೋಟ ಒಂದು; ಕಿವಿಗಳು ಎರಡು-ಶಬ್ದ್ಬ ಒಂದು; ಮೂಗಿನ ಹೊಳ್ಳೆ
ಎರಡು, ವಾಸನೆ ಒಂದು; ಚರ್ಮ ಬಹುವ್ಯಾಪ್ತಿಯದು, ಸ್ಪರ್ಶ ಒಂಡು. ಆದರೆ ನಾಲಗೆ ಹೀಗೆ ಅಲ್ಲ. ಅದು
ಒ೦ದೇ, ಅದರ ಕೆಲಸ ಮಾತ್ರ ಎರಡು.


ನಾಲಗೆಯ ಮೊದಲ ಕೆಲಸ ರುಚಿ ನೋಡುವುದು. ಅದಕ್ಕೆ ಭೇದಭಾವ ಇಲ್ಲ. ಅದು ಸಿಹಿ, ಕಹಿ,
ಹುಳಿ, ಕಾರ, ಸಪ್ರೆ ಎಲ್ಲದರ ರುಚಿ ನೋಡುತ್ತದೆ. ರುಚಿ ಕೆಟ್ಟ ವಸ್ತುವನ್ನು ನಾಲಗೆ ದೇಹದ ಒಳಕ್ಕೆ
ಸೇರಿಸುವುದಿಲ್ಲ; ರುಚಿ ಹಿತವಿದ್ದ. ಸರಿಯಿದ್ದ ವಸ್ತುವನ್ನು ಮಾತ್ರ ಅದು ಒಳಕ್ಕೆ ಕಳಿಸುತ್ತದೆ. ಒಂದೊಮ್ಮೆ
ಅಂಥದ್ದು ಒಳಹೊಕ್ಕರೂ ಹೊಟ್ಟೆ ಹೊರದಬ್ಬಿದಾಗ ನಾಲಗೆ ಅದಕ್ಕೆ ಸಹಾಯಕವಾಗಿ ಅದನ್ನು ತುಟಿಯಿಂದ
ಹೊರಚೆಲ್ಲುತ್ತದೆ. ದೇಹದ ಆರೋಗ್ಯವನ್ನು ಕಾಪಾಡುವ, ವರ್ಧಿಸುವ ಶಕ್ತಿ ನಾಲಗೆಗೆ ಇದೆ. ನಾಲಗೆಗೆ
ಸ್ವಾರ್ಥವಿಲ್ಲ; ಅದು ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಬಾಯೊಳಗೆ ಹೋಗುವ, ಬಾಯಿಂದ ಹೊರಹೋಗುವ
ಯಾವುದೇ ಪದಾರ್ಥದ ಕಣವನ್ನೂ ಅದು ಇರಿಸಿಕೊಳ್ಳುವುದಿಲ್ಲ. ಹಾಲು-ನೀರು, ಎಣ್ಣೆ-ತುಪ್ಪ, ಕೆನೆ-
ಪಾಕ, ಬಿಸಿ-ತಂಪು ಯಾವುದನ್ನು ಬೇಕಾದರೂ ನಾಲಗೆ ಸ್ವೀಕರಿಸುತ್ತದೆ. ಆದರೆ ಅದು ಯಾವುದಕ್ಕೂ
ಅಂಟಿಕೊಳ್ಳುವುದಿಲ್ಲ ಎಲ್ಲವನ್ನೂ ಸ್ಟೀಕರಿಸಿಯೂ ತಾನು ನಿರ್ಲೇಪವಾಗಿರುತ್ತದೆ, ಶುಭವಾಗಿರುತ್ತದೆ, ಬದುಕಿನಲ್ಲಿ
ಬ೦ದ ನೋವು-ನಲಿವು, ಸುಖ-ದುಃಖ ಏರುಪೇರುಗಳನ್ನು ಸ್ವೀಕರಿಸಿ, ಯಾವುದಕ್ಕೂ ಅ೦ಟಿಕೊಳ್ಳದೇ
ಇರಲೇಬೇಕೆಂಬುದನ್ನು ನಾಲಗೆ ಇಂಗಿತಗೊಳಿಸುತ್ತದೆ. ಜೀವನವರ್ಧಕವಾದುದನ್ನು ಇಟ್ಟುಕೊ,
ಜೀವಕ್ಷೀಣಗೊಳಿಸುವದನ್ನು ತ್ಯಜಿಸು ಎ೦ಬ ಸೂತ್ರ ಇಲ್ಲಿಯೇ ಇದೆ.


ನಾಲಗೆಯ ಎರಡನೆಯ ಕೆಲಸ ಮಾತನಾಡುವುದು. ನಮ್ಮ ಭಾವನೆ, ಚಿ೦ತನೆ, ಪ್ರಾರ್ಥನೆ, ಆಸೆ,
ಸಂಕಟ, ಸಂತೋಷ, ಉಲ್ಲಾಸ, ಮ್ಲಾನತೆ. ಎಲ್ಲವನ್ನೂ ವ್ಯಕ್ತಪಡಿಸಲು ನಾಲಗೆಯೇ ವಾಹಕ. ಅದು
ಹ್ಯದಯದ ಲೇಖನಿ; ಮನಸ್ಸಿನ ದೂತ, ದೇಹವೆಂಬ ಸೌಧಕ್ಕೆ ಬಾಯಿ ಹೆಬ್ಬಾಗಿಲಾದರೆ ನಾಲಗೆ ಅಗಣಿ.


ಅದನ್ನು ತೆರೆಯುವುದು ಮುಚ್ಚುವುದು ನಮ್ಮ ಕೈಯಲ್ಲಿದೆ. ಅದು ಮೃದುವಾದ ಮೆದುವಾದ ಮಧುರವಾದ
ಮಿತವಾದ ಲಹರಿ ಹರಿಸಬಲ್ಲದು. ಹಾಗೆಯೆ ಕೆಸರ ಹೊಳೆಯನ್ನೊ ಉರಿಯ ಮಳೆಯನ್ನೊ ಮಾತ್ತರ್ಯದ
ತುಂತುರನ್ನೊ ಚೆಲ್ಲಬಲ್ಲದು. ಅದು ಇತರರನ್ನು ಚುಚ್ಚಿ ನೋಯಿಸಬಲ್ಲದು; ಚಾಚಿ ಪರರನ್ನು ನಿಂದಿಸಬಲ್ಲದು;
ಹುಸಿಯಾಡಿ ಆಚಾರ ಕಳೆಯಬಲ್ಲದು. ಆದ್ದರಿ೦ದಲೇ ಕಾಲು ಜಾರಿದರೂ ನಾಲಗೆ ಜಾರಬಾರದು ಎಂಬ
ಮಾತು ರೂಢಿಗೆ ಬಂದಿರುವುದು. ಕಾಲು ಜಾರುವಿಕೆಯಿಂದ ಮೂಳೆ ಮಾತ್ರ ಮುರಿಯುತ್ತದೆ. ನಾಲಗೆ
ಜಾರುವುದರಿ೦ದ ಮನಸ್ಸು ಮುರಿಯುತ್ತದೆ, ಬದುಕು ಒಡೆಯುತ್ತದೆ. ಆರಂಗುಲದ ನಾಲಗೆಗೆ ಆರಡಿ
ವ್ಯಕ್ತಿಯನ್ನು ಕರಗಿಸುವ, ಕೆರಳಿಸುವ, ಅಗಲಿಸುವ ಶಕ್ತಿಯಿದೆ. “ನಾಡ ಮಾತು ಬೇಡ ನಾಲಗೆ ನಿನ್ನ
ಬೇಡಿಕೊಂಬೆನು” ಎಂದು ಪುರಂದರರು ಹೇಳುವುದಾದರೂ ಇದಕ್ಕೆ.


ನಾಲಗೆ ತನ್ನ ಮನೆಯಾದ ಬಾಯಿಂದ ಹೊರಬರುವುದಿಲ್ಲ. ಅದು ತನ್ನ ಸರಹದ್ದನ್ನು ಮೀರಿ
ಚಾಚಿಕೊಳ್ಳುವದು ತೀರ ವಿರಳ. ಮಾತನಾಡುವಾಗ ಹೊರತು ನಾಲಗೆ ಸದ್ದು ಮಾಡುವುದಿಲ್ಲ. ಅದು
ತಿನ್ನುವಾಗ, ಮಾತನಾಡುವಾಗ, ಓದುವಾಗ, ಹಾಡುವಾಗ ಚುರುಕಾಗಿ ಚಲಿಸುತ್ತದೆ. ಇಂಥ ಸಂದರ್ಭದಲ್ಲಿ
ಅದಕ್ಕೆ ಆಲಸ್ಯವೆಂಬುವುದಿಲ್ಲ. ಮೇಲೆ-ಕೆಳಗೆ, ಹಿಂದೆ-ಮುಂದೆ, ಅಕ್ಕ-ಪಕ್ಕ ಅಗತ್ಯಕ್ಕೆ ತಕ್ಕಷ್ಟು ಸರಿಯುತ್ತದೆ;
ಓಡಾಡುತ್ತದೆ, ಅಲಗಿನಂತೆ ಮೊನಚಾದ ಹಲ್ಲುಗಳಿಂದ ತಪ್ಪಿಸಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ.
ನಾಲಗೆಯನ್ನು ತಿನ್ನಲಾಗದ ಹಲ್ಲುಗಳು ನಾಲಗೆ ನೀಡಿದ್ದನ್ನು ಅಗಿದು ಜಗಿದು ನರಳುತ್ತವೆ, ಉರುಳುತ್ತವೆ,
ಸೋಲುತ್ತವೆ, ನಾಲಗೆ ಅಜೇಯವಾಗಿರುತ್ತದೆ. ಇದನ್ನರಿತ. ನಾಲಗೆಯ ಮನುಷ್ಯ ಕೂಡ ವಿಜೇತನಾಗಬಲ್ಲ.


ನಾಲಗೆ ಮನುಷ್ಯ ದೇಹದ ಒಂದು. ಒಂಟಿ. ಸಲಗ. ಅದನ್ನು ಕಟ್ಟಿದರೆ ಜಿಹ್ವಾಚಾಪಲ್ಯ ಮರೆಯಾಗಿ
ಆರೋಗ್ಯ ವರ್ಧಿಸುತ್ತದೆ. ಅದರ ಮಾತನ್ನು ನಿಯಂತ್ರಿಸಿದರೆ ವ್ಯಕ್ತಿತ್ವ ಕಾ೦ತಿಯುಕ್ತವಾಗುತ್ತದೆ. ಹೃದಯದ
ಕವಚವಾಗಿ ವ್ಯಕ್ತಿಯ ಪ್ರಾಣವನ್ನು ಕಾಪಾಡುವ “ನಾಲಗೆಯಿಂದಾಗದುದೇನು?” ಎಂಬ ಕವಿ ಮಾತು
ಚಿಂತನೀಯ.


ನಾಲಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು


ಲೇಖಕರ ಪರಿಚಯ


ಮೈಸೂರಿನ ಎನ್‌.ಎಸ್‌. ತಾರಾನಾಥರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ
ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ
“ಕನ್ನಡ-ಕನ್ನಡ-ಇಂಗ್ಲಿಷ್‌ ನಿಘಂಟು'ವಿನ ಪರಿಷ್ಕರಣ ಯೋಜನೆಯ ಸಂಪಾದಕ
ಸಮಿತಿಯ ಸದಸ್ಮರಾಗಿ, ಕನ್ನಡ ಶಾಸ್ತ್ರೀಯ ಭಾಷಾ ವರದಿ ಸಲ್ಲಿಕೆ ಸಮಿತಿಯ ಸದಸ್ಯರಾಗಿ
ಕೆಲಸ ಮಾಡಿದ್ದಾರೆ. ಇವರ "ಬೆಳಕಿನ ಬಳ್ಳಿ' ಎಂಬ ಕೃತಿಯಿಂದ ಈ ಪಾಠವನ್ನು
ಆಯ್ದುಕೊಳ್ಳಲಾಗಿದೆ.


ಓದಿ ತಿಳಿಯಿರಿ

ಆಲಿಸು-ಕೇಳು ; ಆಫ್ರಾಣಿಸು- ವಾಸನೆ ನೋಡು ; ಕೋಮಲ- ಸೂಕ್ಷ್ಮ

ಹೊಳ್ಳೆ- ಮೂಗಿನ ರಂಧ್ರ; ವರ್ಧಿಸು- ಅಭಿವೃದ್ಧಿ ಹೊಂದು; ಸ್ಪಾರ್ಥ- ಸ್ಪಪಯೋಜನ;

ನಿರ್ಲೇಪ- ಅಂಟಿಕೊಳ್ಳದಿರುವುದು; ಅಂಗಿತ-ಆಶಯ; ತ್ಯಜಿಸು - ಬಿಡು; ಉಲ್ಲಾಸ - ಸಂತೋಷ;
ವಾಹಕ - ಸಾಗಿಸುವ ಸಾಧನ ; ಸೌಧ- ದೊಡ್ಡಕಟ್ಟಡ; ಮೆದು- ಮೃದು; ಮಾತ್ತರ್ಯ- ಹೊಟ್ಟೆಕಿಚ್ಚು
ಹುಸಿ- ಸುಳ್ಳು ; ಸರಹದ್ದು- ಗಡಿ; ನರಳು- ಸಂಕಟಪಡು; ಅಜೇಯ - ಗೆಲ್ಲಲಾಗದ; ಜಿಹ್ಹೆ- ನಾಲಗೆ;
ಕವಚ- ಹೊದಿಕೆ; ಸಲಗ- ಬಲಿಷ್ಠವಾದ ಗಂಡಾನೆ; ಮ್ಲಾನತೆ - ಬೇಸರ


ಗಮನಿಸಿ ತಿಳಿಯಿರಿ


ಅಗಣಿ- ಬಾಗಿಲನ್ನು ತೆರೆಯಲಾಗದಂತೆ ಮಾಡುವ ಸಾಧನ, ಚಿಲಕ

ಅಲಗು - ಹರಿತವಾದ ಬಾಯಿಯಿರುವುದು

ಲಹರಿ- ಮನಸ್ಸಿನ ಒಲವು, ಉಲ್ಲಾಸ, ಗುಂಗು

ಇಂದ್ರಿಯಗಳು - ಮನುಷ್ಯನಿಗೆ ವಿವಿಧ ಅನುಭವಗಳನ್ನು ನೀಡುವ ಅಂಗಗಳು ; ಕಣ್ಣು, ಕಿವಿ, ಮೂಗು,
ನಾಲಗೆ, ಚರ್ಮ ಇವುಗಳಿಗೆ ಪಂಚೇಂದ್ರಿಯಗಳುೂಎಂದು ಕರೆಯುವರು.


ಜಿಹ್ಹಾಚಾಪಲ್ಯ - ನಾಲಗೆಯ ಚಪಲತೆ


ಅಭ್ಯಾಸ ಚಟುವಟಿಕೆ


ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
ಮನುಷ್ಯನ ಐದು ಇಂದ್ರಿಯಗಳು ಯಾವುವು?
ನಾಲಗೆಯು ಯಾವ ಯಾವ ರುಚಿಗಳನ್ನು ನೋಡುತ್ತದೆ?
ನಾಲಗೆಯ ಎರಡನೆಯ ಕೆಲಸ ಯಾವುದು?
ನಾಲಗೆಯನ್ನು ಕಟ್ಟುವುದರಿಂದ ಏನಾಗುತ್ತದೆ ತಿಳಿಸಿರಿ.


ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
ಪಂಚೇಂದ್ರಿಯಗಳ ಕೆಲಸಗಳನ್ನು ವಿವರಿಸಿರಿ.
ರುಚಿಯ ವಿಚಾರದಲ್ಲಿ ನಾಲಗೆಯು ನಿರ್ವಹಿಸುವ ಕೆಲಸ ತಿಳಿಸಿರಿ.
ನಾಲಗೆಯು ಯಾವುದರ ವಾಹಕವಾಗಿದೆ? ತಿಳಿಸಿರಿ.
ನಾಲಗೆಯು ಹೇಗೆ ಅಜೇಯವಾಗಿದೆ 9


ಕೆಳಗಿನ ವಾಕ್ಯಗಳಲ್ಲಿ ಮೊದಲೆರಡು ಪದಗಳಿಗೆ ಇರುವ ಸಂಬಂಧದಂತೆ ಮೂರನೆ ಪದ
ಸಂಬಂಧ ಬರೆಯಿರಿ.


೧. ಕಣ್ಣು: ನೋಡುವುದು : ಕಿವಿ:


ಈ. ಸಬ ರಹ ೬ ಫಲಿಪು



ಬಿಸಿ : ತಂಪು : ಮೇಲೆ :

ಈ ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
ಮಾದರಿ : ಕೈ 1 ಅಲ್ಲಿ - ಕೈಯಲ್ಲಿ
ದೇಹವೆಂಬ =
ಮಿತವಾದ ಎ
ಹೊಳೆಯನ್ನು -
ಬಾಯಿಂದ ಎ


ಮರೆಯಾಗಿ ಎ


ಕೆಳಗಿನ ವಾಕ್ಯಗಳಲ್ಲಿ ಪದಗಳ ಸ್ಥಾನ ಹಿಂದು.ಮುಂದಾಗಿದೆ. ಅದನ್ನು ಸರಿಯಾಗಿ ಜೋಡಿಸಿ ಅರ್ಥಪೂರ್ಣ
ವಾಕ್ಯಗಳನ್ನಾಗಿ ಮಾರ್ಪಡಿಸಿರಿ.


ಉದಾ : ರುಚಿ ನೋಡುವುದು ಕೆಲಸ ಮೊದಲ ನಾಲಗೆಯ
ಉತ್ತರ : ನಾಲಗೆಯ ಮೊದಲ ಕೆಲಸ ರುಚಿ ನೋಡುವುದು.
ಆರೋಗ್ಯವನ್ನು ಕಾಪಾಡುವ ದೇಹದ ಇದೆ ವರ್ಧಿಸುವ ಶಕ್ತಿ ನಾಲಗೆಗೆ.
ಜಾರಿದರೂ ಕಾಲು ಜಾರಬಾರದು ನಾಲಗೆ
ಮಾತು ಬೇಡ ನಾಲಗೆ ನಿನ್ನ ಬೇಡಿಕೊಂಬೆನು ನಾಡ.
“ನಾಲಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು' ಈ ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ.
ಅವುಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ.


ಮೊನಚಾದ, ತಿನ್ನಲಾರದ, ಮಾತನ್ನು


ಪ್ರಾಯೋಗಿಕ ಚಟುವಟಿಕೆ
ಕೆಳಗಿನ ಚಿತ್ರಗಳಲ್ಲಿರುವ ಅಂಗಗಳನ್ನು ಹೆಸರಿಸಿರಿ.


ಕೆಳಗೆ ಕೊಟ್ಟಿರುವ ಪದಗಳಿಗೆ ನಿಘಂಟು ನೋಡಿ ಸಮಾನಾರ್ಥಕ ಪದಗಳನ್ನು ಬರೆಯಿರಿ.
ಸಂಕಟ, ವಿಜೇತ, ಚಾಪಲ್ಯ, ಮೊನಚು.


ಕೆಳಗಿನ ಪದಗಳನ್ನು ಗಟ್ಟಿಯಾಗಿ ಹೇಳಿ ನಿಮ್ಮ ಪುಸ್ತಕದಲ್ಲಿ ಬರೆಯಿರಿ.
ಮೊನಚು, ಅಗಿದು, ಜಗಿದು, ಜತಗ, ಕವಚ, ವ್ಯಕ್ತಿತ್ವ


ಪುರಂದರದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಓದಿರಿ.


ವ್ಯಾಕರಣಾಭ್ಯಾಸ


ಈ ಕೆಳಗಿನ ಪದಗಳನ್ನು ಗಮನಿಸಿರಿ.
ಗುಂಡಿಕ್ಕು, ಮಾತಿಲ್ಲ
ಇವುಗಳನ್ನು ಬಿಡಿಸಿ ಬರೆದಾಗ
ಗುಂಡು + ಇಕ್ಕು - ಗುಂಡಿಕ್ಕು
ಉ-+ ಇ ಇಇ
ಶುಭ * ಉದಯ ಇ ಶುಭೋದಯ
ಅ + WV =i
ಮಗು ೯ ಇಗೆ ಇ ಮಗುವಿಗೆ
ಉ + ಇ = ಏ
ದೇವ + ಆಲಯ ಇ ದೇವಾಲಯ
ಅ + ಆ = ಆ
ಈ ಮೇಲಿನ ಪದಗಳನ್ನು ಕೂಡಿಸಿ ಬರೆದಾಗ ಅವುಗಳ ಮಧ್ಯ ಅಕ್ಷರಗಳು ಕಾಲ ವಿಳಂಬವಿಲ್ಲದೆ
ಸೇರಿ ಅರ್ಥಪೂರ್ಣವಾದ ಪದ ದೊರೆಯುತ್ತದೆ.


ಹೀಗೆ ಎರಡು ಪದಗಳು ಕಾಲ ವಿಳಂಬವಿಲ್ಲದೇ ಒಂದೆಡೆ ಅರ್ಥವತ್ತಾಗಿ ಬಂದು ಸೇರುವುದಕ್ಕೆ
ಸಂಧಿ” ಎಂದು ಕರೆಯುತ್ತಾರೆ. ಈ ರೀತಿಯಲ್ಲಿ ಪದಗಳು ಒಟ್ಟು ಸೇರುವಾಗ ಮೂಲ ಪದಗಳ ಅರ್ಥಕ್ಕೆ
ಯಾವ ಲೋಪವೂ ಬರಬಾರದು. ಅರ್ಥಕ್ಕೆ ಲೋಪ ಬರುವುದಾದಲ್ಲಿ ಸಂಧಿ ಮಾಡಬಾರದೆಂಬ


ಹೀಗೆ ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಇದ್ದು ಸಂಧಿಯಾದರೆ ಅದು “ಸ್ವರಸಂಧಿ'. ಸ್ವರದ
ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ಪರ ಇದ್ದು ಸಂಧಿಯಾದರೆ ಅದು “ವ್ಯಂಜನ ಸಂಧಿ'. ಈ
ಸಂಧಿಗಳಲ್ಲಿ "ಕನ್ನಡ ಸಂಧಿ” ಮತ್ತು “ಸಂಸ್ಕೃತ ಸಂಧಿ' ಗಳೆಂದು ಎರಡು ವಿಧಗಳಿವೆ. ಕನ್ನಡ ಪದಗಳೇ ಸೇರಿ
ಅಥವಾ ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ “ಕನ್ನಡ ಸಂಧಿ” ಎಂತಲೂ ಸಂಸ್ಕೃತ


ಪದಗಳು ಸೇರಿ ಸಂಧಿಯಾದರೆ "ಸಂಸ್ಕೃತ ಸಂಧಿ” ಎಂತಲೂ ಕರೆಯಲ್ಪಡುತ್ತವೆ.


ಕನ್ನಡ ಸಂಧಿಯಲ್ಲಿ ಪ್ರಮುಖವಾಗಿ ಲೋಪ, ಆಗಮ, ಆದೇಶ ಎ೦ಬ ಮೂರು ಪ್ರಕಾರಗಳಿರುತ್ತವೆ.
ಹಾಗಾದರೆ ಈಗ ಲೋಪಸಂಧಿಯನ್ನು ಕುರಿತು ಇಲ್ಲಿ ಚರ್ಚಿಸೋಣ.
ಲೋಪಸಂಧಿ:


ಊರು + ಊರು ಇ ಊರೂರು
ಉ ಊ ಊ


ನಾವು + ಎಲ್ಲ ಇ ನಾವೆಲ್ಲ
ಉ ಎ ಎ


ಮೇಲಿನ ಉದಾಹರಣೆಯಲ್ಲಿ ಪೂರ್ವ ಪದವಾದ, ಊರು ಎಂಬಲ್ಲಿಯ ಕೊನೆಯ ಸ
ಲೋಪವಾಗಿವೆ. ಅದೇ ರೀತಿ ಎರಡನೇ ಉದಾಹರಣೆಯಲ್ಲಿಯ ಪೂರ್ವಪದದ ಕೊನೆಯ ಸ
ಲೋಪವಾಗಿದೆ.


ಸ್ವರದ ಮುಂದೆ ಸ್ವರವು ಬ೦ದು ಸಂಧಿ ಕಾರ್ಯ ಮಾಡುವಾಗ ಪೂರ್ವ ಪದದ ಕೊನೆಯ ಸ್ವರವು
ಅರ್ಥ ವ್ಯತ್ಯಾಸವಾಗದಂತೆ ಲೋಪವಾಡರೆ ಅದಕ್ಕೆ ಲೋಪಸಂಧಿ ಅಥವಾ ಸ್ವರಲೋಪಸಂಧಿ ಎಂದು
ಕರೆಯುತ್ತಾರೆ. ಇದೇ ರೀತಿಯಾಗಿ, ಈ ಕೆಳಗಿನ ಪದಗಳನ್ನು ಬಿಡಿಸಿರಿ


ದೇವರಿಂದ, ಮಾತಾಡು, ಬಲ್ದೆನೆಂದು
ಗಾದೆಗಳು:


ಗಾದೆಗಳು ನಾಣ್ಣುಡಿ, ಲೋಕೋಕ್ತಿಗಳೆ೦ತಲೂ ಪ್ರಸಿದ್ಧವಾಗಿವೆ. ಜನಸಾಮಾನ್ಯರ ಅನುಭವದ ಸಾರವೇ
ಗಾದೆಗಳ ರೂಪ ತಾಳಿವೆ. ಸರಳವಾಗಿ ಸಂಕ್ಷಿಪ್ತವಾಗಿ ಪ್ರಾಸಬದ್ಧವಾಗಿರುವ ಗಾದೆಗಳು ಜನರ ಮನದಲ್ಲಿ
ಶಾಶ್ಚತವಾಗಿ ಉಳಿಯುವಂತಿವೆ.

ಗಾದೆಗಳನ್ನು ವೇದಕ್ಕೆ ಹೋಲಿಸುವುದಿದೆ. “ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎನ್ನುವ ನಾಣ್ಣುಡಿಯು
ಇದೆ. ಬದುಕಿನ ಎಲ್ಲ ವಿಚಾರಗಳಿಗೂ ಮಾರ್ಗದರ್ಶನ ಮಾಡುವ ಅಸಂಖ್ಯ ಗಾದೆಗಳಿವೆ.

ಉದಾ : "ತುಂಬಿದ ಕೊಡ ತುಳುಕುವುದಿಲ್ಲ”


ಕೊಡದಲ್ಲಿ ತುಂಬ ನೀರಿದ್ದಾಗ ಅದು ತುಳುಕಾಡುವುದಿಲ್ಲ. ಸದ್ದು ಮಾಡುವುದಿಲ್ಲ. ಅದೇ ಅರ್ಧ
ತುಂಬಿದ ಕೊಡದಲ್ಲಿ ನೀರು ತುಳುಕಾಡುತ್ತದೆ. ಶಬ್ದ ಮಾಡುತ್ತದೆ. ಇದು ಸಹಜವಾದುದು. ಇದು ಈ
ಗಾದೆಯ ಮೇಲ್ನೋಟದ ಅರ್ಥ.


ಪೂರ್ಣ ವಿಚಾರವನ್ನು ಅರಿತವರು, ಪಂಡಿತರು ಅನಗತ್ಯವಾಗಿ ಮಾತನಾಡುವುದಿಲ್ಲ. ಪ್ರಚಾರಪ್ರಿಯರಲ್ಲ,
ಅವಶ್ಯವಿದ್ದಾಗ ಮಾತ್ರ ತಾವು ತಿಳಿದುದನ್ನು ತಿಳಿಸಿ ಹೇಳಲು ಬಯಸುತ್ತಾರೆ. ಆದರೆ ಅರೆಬರೆ ತಿಳಿದವರು ತಾವು
ತಿಳಿಯದ ವಿಚಾರಗಳನ್ನು ಕುರಿತು ತಿಳಿದವರ ಹಾಗೆ ನಟಿಸುತ್ತಾರೆ.


ಆದುದರಿಂದ ತುಂಬಿದ ಕೊಡ ಹೇಗೆ ತುಳುಕುವುದಿಲ್ಲವೊ ಹಾಗೆ ಮಹಾಜ್ಞಾನಿಯಾದವನು ಎಂದಿಗೂ
ಗರ್ವಿಯಾಗಿರದೇ ವಿನಮವಾಗಿರುತ್ತಾನೆ ಎಂಬುದು ಈ ಗಾದೆಯ ತಾತ್ಪರ್ಯ. ಅರೆ ಬರೆ ಜ್ಞಾನ ಅಪಾಯಕಾರಿ.


ಹೀಗೆ ಪ್ರಚಲಿತವಿರುವ ಗಾದೆಗಳನ್ನು ಸಂಗ್ರಹಿಸಿ.
ಪೂರಕ ಓದು


ಮಾತೆಂಬುದು ಜ್ಯೋತಿರ್ಲಿಂಗ, ಸ್ಪರವೆಂಬುದು ಪರತತ್ತ್ವ,
ತಾಳ್ವೋಷ್ಠ ಸಂಪುಟವೆಂಬುದು ನಾದ. ಬಿಂದು. ಕಳಾತೀತ!


ಗುಹೇಶ್ವರನ ಶರಣರು ನುಡಿದು /ಸೂಶಕಿಗಳಲ್ಲ,
ಕೇಳಾ ಮರುಳೇ.


ಪದ್ಯಪಾಠ


೫. ಕನ್ನಡವ ನುಡಿ


- ಸವಿತಾ ನಾಗಭೂಷಣ


ಆಶಯ : ಕನ್ನಡವು ನಮ್ಮ ಮಾತೃ ಭಾಷೆಯಾಗಿದೆ. ನಮ್ಮ ಭಾವನೆದಕು ನಮ್ಮ ಮಾತೃಭಾಷೆಯಲ್ಲಿ
ಮಾತ್ರ ಸ್ಪಷ್ಟವಾಗಿ ವ್ಯಕ್ತವಾದುತ್ತವೆ. ಪ್ರತಿಯೊಬ್ಬನೂ ಮಾತೃಭಾಷಾ ಪ್ರೇಮಿಯಾಂಿರಬೇಕು. ಕನ್ನಡದ
ಬಳಕೆ ಕಡಿಮೆಯಾಗುತ್ತಿರುವ ಈ ವಿವರಕಲ್ಲ ಅದನ್ನು ಉಳಪಿ ಬೆಳಸುವುದು ಪ್ರತಿಯೊಬ್ಬರ
ಕರ್ತವ್ಯವಾಗಿದೆ. ಕವಯತ್ರಿಯು ಕನ್ನಡ ಬೆಳೆಸುವ ವಿವಿಧ ಬದೆದಳನ್ನು ಇಲ್ಲ ತಿಆಲಿದ್ದಾರೆ.


ಅಪ್ಪ ಅಮ್ಮ ಅನ್ನು

ಕನ್ನಡ ಉಳಿಯುವುದು

ಕಳ್ಳು ಬಳ್ಳಿ ತಾನೆ

ನಂಟನು ಬೆಸೆಯುವುದು
ಅಕ್ಕಿ ರಾಗಿ ಅನ್ನು
ಕನ್ನಡ ಉಳಿಯುವುದು
ಕಾಳು ಕಡ್ಡಿ ತಾನೆ
ಹಸಿವನು ನೀಗುವುದು

ಹಳ್ಳಕೊಳ್ಳ ಅನ್ನು

ಕನ್ನಡ ಉಳಿಯುವುದು

ನೀರೊಂದಿದ್ದರೆ ಸಾಕು


ಊರೂ ಬೆಳೆಯುವುದು
ಗಿಡಮರ" ಅನ್ನು


ಕನ್ನಡ. ಉಳಿಯುವುದು
ಹೂವು ಹಣ್ಣು ಬೀಜ
ಬಸಿರು ಬೆಳೆಯುವುದು


ಗಾಳಿ ಬೆಂಕಿ ಅನ್ನು

ಕನ್ನಡ ಉಳಿಯುವುದು
ಬೆಳಕೊಂದಿದ್ದರೆ ಸಾಕು
ಕತ್ತಲು ಹರಿಯುವುದು


ತಾಳು ಬಾಳು ಅನ್ನು

ಕನ್ನಡ ಉಳಿಯುವುದು
ಹಮ್ಮನು ಬಿಟ್ಟರೆ ತಾನೆ
ಒಮ್ಮತ ಮೂಡುವುದು


ಕವಿ ಪರಿಚಯ :

ಚಿಕ್ಕಮಗಳೂರಿನ ಸವಿತಾ ನಾಗಭೂಷಣ ಈವರೆಗೆ "ನಾ ಬರೆಯತ್ತೇನೆ
ಕೇಳು', "ಚಂದ್ರನನ್ನು ಕರೆಯಿರಿ ಭೂಮಿಗೆ', "ಹೊಳೆಮಗಳು', "ಜಾತ್ರೆಯಲ್ಲಿ
ಶಿವ' ಹಾಗೂ “ದರುಶನ' ಎಂಬ ಕವನ ಸಂಕಲನಗಳನ್ನೂ "ಸ್ತ್ರೀಲೊಕ' ಎಂಬ
ವಿಶಿಷ್ಟ ಕಾದಂಬರಿಯನ್ನೂ ಮತ್ತು “ಹೂ ಮನಸ್ಸಿನ ಹೋರಾಟಗಾರ ಮತ್ತು
ಇತರ ಲೇಖನಗಳು' ಎಂಬ ಸಂಗ್ರಹವನ್ನೂ ಪ್ರಕಟಿಸಿರುವರು. "ಆಕಾಶಮಲ್ಲಿಗೆ', "
“ಕಾಡು ಲಿಲ್ಲಿ ಹೂವುಗಳು' ಹಾಗೂ "ಹಳ್ಳಿಯ ದಾರಿ'- ಇವರ ಆಯ್ದ ಕವನ ಸಂಗ್ರಹಗಳು. ಇವರು
ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಪುತಿನ ಕಾವ್ಯ ಪುರಸ್ಕಾರ, ಡಾ. ಡಿ. ಎಸ್‌. ಕರ್ಕಿ ಕಾವ್ಯ
ಪುರಸ್ಕಾರ, ಎಂ.ಕೆ.ಇಂದಿರಾ ಪ್ರಶಸ್ತಿ, ಬಿ.ಎಚ್‌. ಶ್ರೀಧರ ಸಾಹಿತ್ಯ ಪ್ರಶಸ್ತಿ ಹಾಗೂ ಗೀತಾ ದೇಸಾಯಿ ದತ್ತಿ
ನಿಧಿ ಬಹುಮಾನಗಳಿಂದ ಪುರಸ್ಕೃತರಾಗಿದ್ದಾರೆ. ಈ ಕವನವನ್ನು ಅವರ "ದರುಶನ' ಕವನ ಸಂಕಲನದಿಂದ
ಆರಿಸಲಾಗಿದೆ.


ಓದಿ ತಿಳಿಯಿರಿ:
ನಂಟು - ಸಂಬಂಧ, ಬೆಸೆ - ಕೂಡಿಸು ; ನೀಗು - ಹೋಗಲಾಡಿಸು; ಬಸಿರು- ಗರ್ಭ;
ಹಮ್ಮು- ಗರ್ವ, ಅಹಂಕಾರ, ಒಮ್ಮತ- ಒಂದೇ ಅಭಿಪ್ರಾಯ


ಗಮನಿಸಿ ತಿಳಿಯಿರಿ:
ಕಳ್ಳು ಬಳ್ಳಿ- ಸಂಬಂಧಿಕರು, ನೆಂಟರು, ಟಿಂಧುಗಳು;' ಬಸಿರು ಬೆಳೆಯುವುದು- ಅಭಿವೃದ್ಧಿಯಾಗುವುದು;
ಕತ್ತಲು ಹರಿಯುವುದು- ಬೆಳಕಾಗುವುದು.


ಅಭ್ಯಾಸ ಚಟುವಟಿಕೆ


ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
೧. ನಂಟನು ಬೆಸೆಯುವುದು ಯಾವುದು?

೨. ಕಾಳು ಕಡ್ಡಿಯು ಏನನ್ನು ನೀಗಿಸುತ್ತದೆ?

೩. ಊರು ಬೆಳೆಯಲು ಏನೊಂದಿದ್ದರೆ ಸಾಕು?

೪, ಕತ್ತಲು ಯಾವುದರಿಂದ ಹರಿಯುತ್ತದೆ?

೫ ಒಮ್ಮತ ಮೂಡಲು ಏನನ್ನು ಬಿಡಬೇಕು?


ಕೆಳಗಿನ ವಾಕ್ಯಗಳಲ್ಲಿಯ ಸರಿ / ತಪ್ಪ ಗಮನಿಸಿ ತಪ್ಪಿದ್ದಲ್ಲಿ ತಿದ್ದಿ ಬರೆಯಿರಿ.
೧. ಕಳ್ಳು ಬಳ್ಳಿ ನಂಟನು ಬೆಸೆಯುವುದು.
೨. ಗಾಳಿ ಬೆಂಕಿ ತಾನೆ ಹಸಿವನು ನೀಗುವುದು.





೩. ಹಮ್ಮನು ಬಿಡದಿರೆ ತಾನೆ ಒಮ್ಮತ ಮೂಡುವುದು.
೪. ಬೆಳಕಿನಿಂದ ಕತ್ತಲು ಹರಿಯುವುದು.


ಕನ್ನಡದ ಉಳಿವಿನ ಬಗೆಗೆ ಕವಯತ್ರಿಯ ಅಭಿಪ್ರಾಯವನ್ನು ಸಂಗ್ರಹಿಸಿ ಬರೆಯಿರಿ.


ವ್ಯಾಕರಣಾಂಶ


ಗಮನಿಸಿ :


ಬೆಟಗುಡಗಳು ಸೌಂದರದ ಪತೀಕಗಳು.
ಟ್ರ್ಯಾಕ್‌ ನ್‌ ಪು
ಮಕ್ಕಳು ಕಾಡು-ಮೇಡುಗಳನ್ನು ಸುತ್ತಿ ಬಸವಳಿದರು.
ರಾಮನು ಪೇಟೆಯಿಂದ ಹಣು-ಹಂಪಲು ತಂದನು.
ಹಣ್ಣು-ಹಂಪಲು


ನಾವು ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು.


ಮೇಲೆ ಗೆರೆ ಎಳೆದ ಪದಗಳನ್ನು ಗಮನಿಸಿ. ಇಂತಹ ಅನೇಕ: ಪದಗಳನ್ನು ನಾವು ದಿನನಿತ್ಯದಲ್ಲಿ


ಬಳಸುತ್ತೇವೆ. ಕೆಲವೊಮ್ಮೆ ನಮ್ಮ ಮಾತಿನಲ್ಲಿ ಬರವಣಿಗೆಯಲ್ಲಿ ಒಂದಕ್ಕೊಂದು ಪೂರಕವಾದ, ಒಂದಕ್ಕೊಂದು
ಎರುದ್ಧವಾದ ಪದಗಳನ್ನು ಜೋಡಿ ಮಾಡುತ್ತೇವೆ. ಕೆಲವೊಮ್ಮೆ ಮೊದಲನೆಯ ಪದಕ್ಕೆ ಮಾತ್ರ ಅರ್ಥವಿದ್ದು,
ಎರಡನೆಯ ಪದದ ಅರ್ಥ ಅಸ್ಪಷ್ಟವಾಗಿರುತ್ತದೆ. ಇಂಥ ಪದಗಳನ್ನು “ಜೋಡುನುಡಿ' ಗಳೆಂದು ಕರೆಯುತ್ತಾರೆ.


ಅದರಂತೆಯೇ ಈ ಪದ್ಯದಲ್ಲಿ ಬಂದಿರುವ ಜೋಡು ನುಡಿಗಳನ್ನು ಗುರುತಿಸಿ ಬರೆಯಿರಿ.


ಪ್ರಾಯೋಗಿಕ ಚಟುವಟಿಕೆ


ನನ್ನ ಕನ್ನಡ ನುಡಿಯೇ, 'ನೀನೆಷ್ಟು ಚಂದ,
ಏನು ಗೀಚಿದರೂ ಆಗುವುದು ಶ್ರೀಗಂಧ,
ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು,
ಬ೦ಗಾರಕ್ಕಿ೦ತಲೂ ಶ್ರೇಷ್ಠ ನಿನ್ನ ನುಡಿ ಮುತ್ತು
- ದಿನಕರ ದೇಸಾಯಿ


ಈ ಮೇಲಿನ ಪದ್ಯವನ್ನು ರಾಗಬದ್ಧವಾಗಿ ಹಾಡಿರಿ.


ಕನ್ನಡದಲ್ಲಿಯೇ ಕೆಲವು ನಿಮಿಷ ಮಾತನಾಡಲು ಅಭ್ಯಾಸ ಮಾಡಿ.


ಪೂರಕ ಓದು
ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು.


ಗಾನವ ಬೆರೆಯಿಸಿ ವೀಣೆಯ ದನಿಯೊಳು
ವಾಣಿಯ ನೇವುರ ನುಡಿಸುತೆ ಕುಣಿಯಲು
ಮಾಣದೆ ಮೆರೆಯುವ ಮಂಜುಲ ರವವೊ


ರಂಗನ ಮುರಲಿಯ ಹಿಂಗದ ಸರದಲಿ
ಹೆಂಗೆಳೆಯರು ಬೆಳದಿಂಗಳಿನಿರುಳಲಿ
ಸಂಗೀತವನೊರೆದಂಗವಿದೇನೋ


ಗಿಳಿಗಳು ಉಲಿಯುವ ಮೆಲು ಮಾತುಗಳೋ
ಕಳಕಂಠಗಳ ಚೆಲುವಿನ ಕುಕಿಲೋ
ಅಳಿಗಳ ಬಳಗದ ಬೆಳಗಿನ ಉಲಿಯೋ
ಬೆಟಗೇರಿ ಕೃಷ್ಣಶರ್ಮ


ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.


ಆಶಯ: ಮಹಾಭಾರತ ನಮ್ಮ ದೇಶದ ರಾಷ್ಟ್ರೀಯ ಮಹಾಕಾವ್ಯ. ಇದರಲ್ಲಿ ಬರುವ ಪಾಂಡವರು
ಮತ್ತು ಕೌರವರ ಕತೆ ನಮದೆ ನಿಂತಿ-ಮೌಲ್ಯದಳನ್ನು ಠಿಆಸುವಂತಹದು. ಕೌರವರೊಡನೆ ಆಡಿದ
ಜೂಜಿನಲ್ಲಿ ರಾಜ್ಯ, ಸಂಪತ್ತು ಎಲ್ಲವನ್ನೂ ಹಳೆದುಕೊ೦ಡು ಪಾಂಡವರು ವನವಾಸಕ್ಕೆ ಬರುತ್ತಾರೆ.
ವನವಾಪದ ಸಂದರ್ಭದಲ್ಲ ನಡೆಯುವ ಒಂದು ಪ್ರಪಂಗವೇ "ಯಕ್ಷಪಶ್ಸೆ'. ಇಲ್ಲ ಪಾಂಡವರಲ್ಲಿ
ಹಿಲಿಯನಾದ ಧರ್ಮರಾಜ ತನ್ನು ಜ್ಞಾನ. ಸತ್ಯ, ನಿಷ್ಠೆದಆ೦ದ ಹೆಂದೆ ಯಕ್ಷನ ಮೆಚ್ಚುದೆ ದಳಖಿದ
ಎ೦ಬುದನ್ನು ತಿಆಯಬಹುದು. ಧರ್ಮರಾಜನು ಯಕ್ಷನಿದೆ ಹೊಟ್ಟ ಉತ್ತರದಳು ನಮ್ಮ ಜಂವನಕ್ತೆ
ದಾಲಿ ತೊಂ೦ದಿಹುವಂತಹವುದಳಾರಿವೆ.


ದೃಶ್ಯ-೧


(ಬ್ರಾಹ್ಮಣನ ಅರಣಿಯನ್ನು ಕಚ್ಚಿಕೊಂಡು ಹೋದ ಜಿಂಕೆಯನ್ನು ಬೆನ್ನಟ್ಟಿ ಧರ್ಮರಾಜ, ಭೀಮ, ಅರ್ಜುನ,
ನಕುಲ ಮತ್ತು ಸಹದೇವ ಎಲ್ಲರೂ ಓಡುತ್ತಾರೆ. ಅದು ಅವರಿಗೆ ಸಿಗದೆ. ಬಳಲಿ ಒಂದೆಡೆ ವಿಶ್ರಾಂತಿಗಾಗಿ
ಕುಳಿತಿದ್ದಾರೆ.)


ಅರ್ಜುನ - ಅಣ್ಣಾ ಎಷ್ಟು ಪ್ರಯತ್ನಪಟ್ಟರೂ ಆ ಜಿಂಕೆಯನ್ನು ನಮ್ಮಿಂದ ಹಿಡಿಯಲು ಆಗಲಿಲ್ಲವಲ್ಲ!


ಬ ೫ ವ್‌


ಧರ್ಮರಾಜ - ಹೌದು ತಮ್ಮ ನಮ್ಮ ಪ್ರಯತ್ನ ಫಲಿಸಲಿಲ್ಲ. ಜಿಂಕೆಯ ಹಿಂದೆ ಓಡಿ ಬಹಳ ಆಯಾಸವಾಗಿದೆ.
(ಬೆವರೊರೆಸಿಕೊಳ್ಳುವನು)


ನಕುಲ - ತುಂಬ ಬಾಯಾರಿಕೆ ಆಗುತ್ತಿದೆ. ಹತ್ತಿರದಲ್ಲಿ ಎಲ್ಲಿಯಾದರೂ ನೀರು ಕಂಡರೆ ಮೊದಲು
ನೀರು ಕುಡಿಯಬೇಕು.


ಸಹದೇವ - (ಆ ಕಡೆ ಈ ಕಡೆ ನೋಡುತ್ತಾ
ಗುರುತಿಸಿ) ನಕುಲ, ಅಲ್ಲಿ ಸ್ವಲ್ಪ
ಹೋಗಿ ನೀರು ತರೋಣ.
ಆಯಿತು, ನಾನೇ ಹೋಗುತ್ತೇನೆ. (ಸರೋವರದ ಕಡೆ ಹೋಗುವನು)
(ಸ್ವಲ್ಪ ಸಮಯದ ನಂತರ)


(ನಕುಲ ಹೋದ ದಿಕ್ಕನ್ನೇ ನೋಡುತ್ರಾ) ನೀರು ತರುವೆನೆಂದು ಹೋದವ ಇನ್ನೂ
ಬರಲಿಲ್ಲವಲ್ಲ! ನಾನೇ ಹೋಗಿ ನೋಡಿ ಬರುತ್ತೇನೆ.


ಆಗಲಿ, ಬೇಗ ಹೋಗಿ ನೀರು ತೆಗೆದುಕೊಂಡು ಬಾ.
(ಮತ್ತೆ ಸ್ವಲ್ಪ ಸಮಯದ ನಂತರ)


ಅರ್ಜುನ ಇದೇನಿದು? ನಕುಲನನ್ನು ಕರೆತರಲು ಹೋದ ಸಹದೇವನೂ ಬರಲಿಲ್ಲ. ನೀರು ತರಲು
ಇಷ್ಟು ಸಮಯಬೇಕೆ? ಇರಲಿ, ನಾನೊಮ್ಮೆ ನೋಡಿ ಬರುತ್ತೇನೆ.


ಮುಂದೆ ಬಂದು, ದೂರದಲ್ಲಿದ್ದ ಸರೋವರವನ್ನು
ರದಲ್ಲಿ ಸರೋವರವಿರುವಂತೆ ಕಾಣುತ್ತಿದೆ. ಒಬ್ಬರು



ಸ್ವ
ದೂ


ಧರ್ಮರಾಜ - ಹೌದು ಅರ್ಜುನ, ನೀನು ಹೇಳುತ್ತಿರುವುದೂ ಸರಿಯ್ಗೇ, 'ನೀನೇ ಹೋಗಿ ಏನಾಯಿತೋ
ನೋಡಿ ಬಾ.
(ಇನ್ನೂ ಸ್ವಲ್ಪ ಸಮಯದ ನಂತರ)


ಭೀಮ - ಅಣ್ಣಾ ಧರ್ಮರಾಜ, ಇದೇನು-:ವಿಚಿತ್ರ.ನೀರು'ತರಲು ಹೋದ ಮೂವರು ಸಹೋದರರೂ
ಮರಳಿ ಬರಲಿಲ್ಲವಲ್ಲ! ಏನಾಯಿತು ಇವಪರಿಗೆ?. .. ನಾನೇ ಹೋಗಿ ಅವರನ್ನು ಕರೆತರುವೆ.
ಬಾಯಾರಿಕೆ ತಡೆಯಲಾಗುತ್ತಿಲ್ಲ.


ಧರ್ಮರಾಜ - ಬೇಗ ಹೋಗಿ ಬಾ. ನಿನ್ನ ದಾರಿಯನ್ನೇ ನಾನು ನೋಡುತ್ತಿರುವೆ. (ಮತ್ತೂ ಸ್ವಲ್ಪ ಸಮಯದ
ನಂತರ) ಬೇಗ ಬರುವೆನೆಂದು ಹೋದ ಭೀಮನೂ ಬರಲಿಲ್ಲವಲ್ಲ! ಸರೋವರ ಇಲ್ಲಿಯೇ
ಸಮೀಪದಲ್ಲಿದೆಯೆಂದು ಹೇಳಿ ಹೋದ ನಾಲ್ವರು ಸಹೋದರರೂ ಬರಲಿಲ್ಲ.
ಏನಾಗಿರಬಹುದು? ಇನ್ನಾವ ಕಷ್ಟಕ್ಕೆ ಸಿಕ್ಕಿಕೊ೦ಡರೋ ಕಾಣೆನಲ್ಲ. (ಕಳವಳದಿಂದ) ನಾನೇ
ಹೋಗಿ ನೋಡಿ ಬರುತ್ತೇನೆ.


ದೃಶ್ಯ-೨
(ಸರೋವರದ ದಡದಲ್ಲಿ ನಕುಲ, ಸಹದೇವ, ಅರ್ಜುನ, ಭೀಮ ನಿಶ್ಚಲವಾಗಿ ಬಿದ್ದಿದ್ದಾರೆ. ಧರ್ಮರಾಜ


ಅಲ್ಲಿಗೆ ಬಂದು. ಬಿದ್ದ ತಮ್ಮಂದಿರ ಮೈದಡವುತ್ತಾ ಎಚ್ಚರಗೊಳಿಸುವ ಪ್ರಯತ್ನ ಮಾಡುತ್ತಾನೆ. ಯಾರೊಬ್ಬರೂ
ಏಳದಿದ್ದಾಗ ದುಃಖದಿ೦ದ ಅಳತೊಡಗುತ್ತಾನೆ.)


ಧರ್ಮರಾಜ - ಅಯ್ಯೋ ವಿಧಿಯೇ.... ಇದೇನು ಅನ್ಯಾಯವಾಯಿತು. ನೀರು ತರಲು ಬ೦ದವರು. ಹೀಗೆ
ಸಾವನ್ನಪ್ಪಿದ್ದಾರಲ್ಲ. ನಾನೀಗ ಏನು ಮಾಡಲಿ? (ಕಣ್ಣೀರನ್ನು ಒರೆಸಿಕೊಳ್ಳುತ್ತಾ ಆ ಕಡೆ ಈ
ಕಡೆ ನೋಡುವನು.) ಪರಮ ಪರಾಕ್ರಮಿಗಳಾದ ನನ್ನ ತಮ್ಮಂದಿರಿಗೆ ಈ ಸ್ಥಿತಿಯೇ? ಇಲ್ಲಿ
ಯಾರೂ ಬಂದಂತೆಯೂ ಕಾಣುವುದಿಲ್ಲ. ಇದು ದುರ್ಯೋಧನನ ಕುತಂತ್ರವಿರಬಹುದೆ?


ಧರ್ಮರಾಜ


ದ್ವನಿ


ಧರ್ಮರಾಜ


ಯಕ್ಷ
ಉೈ


ಧರ್ಮರಾಜ


ಯಕ್ಷ
[NY


ಧರ್ಮರಾಜ


ಯಕ
[90


ಧರ್ಮರಾಜ


ಅಥವಾ ... ಅಥವಾ... ಗೂಢಚಾರರ ಕೆಲಸವೇ? ಏನೂ ಅರ್ಥವಾಗುತ್ತಿಲ್ಲವಲ್ಲ
(ತಮ್ಮಂದಿರ ಹತ್ತಿರ ಬ೦ದು ಒಬ್ಬೊಬ್ಬರ ಮೈದಡವುತ್ತಾ) ಈ ಸರೋವರದ ನೀರಿನಲ್ಲಿ
ವಿಷವಿದ್ದಿತೆ? ಆದರೆ ಇವರ ಮುಖಗಳನ್ನು ನೋಡಿದರೆ ವಿಷದಿಂದ ಸತ್ತ ಹಾಗೆ ಕಾಣುವುದಿಲ್ಲ.
ಮೈ ಮೇಲೆ ಯಾವ ಆಯುಧದ ಗುರುತೂ ಇಲ್ಲ. ಇದೇನು ವಿಚಿತ್ರ! ದೇವರೇ, . .ಏನು
ಮಾಡಲೀಗ? (ಕುಸಿದು ಕುಳಿತುಕೊಳ್ಳುವನು. ನಂತರ ನಿಧಾನವಾಗಿ ಸರೋವರದ ಹತ್ತಿರ
ಬ೦ದು ಅತ್ತ ಇತ್ತ ನೋಡುತ್ತ ನೀರಿಗೆ ಇಳಿದು ಬೊಗಸೆಯಲ್ಲಿ ನೀರು ತುಂಬಿಕೊಳ್ಳುತ್ತಾನೆ.
ಅಷ್ಟರಲ್ಲಿ,)

- ನಿಲ್ಲು.. ಧರ್ಮರಾಜ... ನಿಲ್ಲು. ಯಾರ ಅಪ್ಪಣೆ ಪಡೆದು ಈ ಸರೋವರದ ನೀರನ್ನು
ಕುಡಿಯುತ್ತಿರುವೆ? ಇದು ನನ್ನ ಸರೋವರ. ನನ್ನ ಅಪ್ಪಣೆಯಿಲ್ಲದೆ ಯಾರೂ ಈ ನೀರನ್ನು
ಕುಡಿಯಲಾಗದು.


- (ಧ್ವನಿ ಬಂದತ್ತ ತಿರುಗಿ) ಯಾರು?. . .ಯಾರು ಮಾತನಾಡುತ್ತಿರುವುದು? ಯಾರೂ
ಕಾಣುತ್ತಿಲ್ಲವಲ್ಲ!... ಕೇವಲ ಧ್ವನಿ ಮಾತ್ರ ಕೇಳುತ್ತಿದೆ. ಇದು ನನ್ನ ಭ್ರಮೆಯಲ್ಲತಾನೆ?)


- ಧರ್ಮರಾಜ, ಇತ್ತ ನೋಡು. ನಾನೊಬ್ಬ ಯಕ್ಷ. (ಕಾಣಿಸಿಕೊಳ್ಳುವನು)


ಆ ಯಕ್ಷನೇ? ಪರಮ ಪರಾಕ್ರಮಿಗಳಾದ ನನ್ನ. ತಮ್ಮಂದಿರ ಈ ಸ್ಥಿತಿಗೆ ನೀನೇ
ಕಾರಣನೋ9


- ಹೌದು... ನಾನೇ ಕಾರಣ.


ಷ್‌ ಎಲೈ ಯಕ್ಷನೇ, ಇವರು:ನಿನಗೇನು'ಕೇಡು ಮಾಡಿದರೆಂದು ಹೀಗೆಮಾಡಿದೆ? ಬಾಯಾರಿ
ನೀರಿಗೆ ಬಂದವರನ್ನು ಹೀಗೆ ಕೊಲ್ಲಬಹುದೆ?


- ನನ್ನ ಮಾತನ್ನು ಕೇಳಿದ್ದರೆ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ.
— ನಿನ್ನ ಮಾತೆ? ಅದ್ಯಾವ ಮಾತು ನೀನು ಹೇಳಿದ್ದು?
- ಅವಸರ ಪಡಬೇಡ ಧರ್ಮರಾಜ. ನೀನಾದರೂ ಸಹನೆಯಿಂದ ನನ್ನ ಮಾತುಗಳನ್ನು


ಕೇಳು. ಮೊದಲು ನನ್ನ ಪಶ್ನೆಗಳಿಗೆ ಉತ್ತರಿಸಿ, ಆಮೇಲೆ ನೀರು ಕುಡಿಯಲು ಹೇಳಿದರೆ,


ಯಾರೊಬ್ಬರೂ ಕೇಳಲಿಲ್ಲ. ನನ್ನ ಮಾತುಗಳನ್ನು ಧಿಕ್ಕರಿಸಿ ನೀರು ಕುಡಿದರು.
- ಅದಕ್ಕೆ... ನೀನು ಈ ಶಿಕ್ಷೆ ಕೊಟ್ಟೆಯಾ?
- ಹೌದು ಧರ್ಮರಾಜ, ಈಗ ನೀನು ಯೋಚನೆ ಮಾಡು. ಮೊದಲು ನೀರು ಕುಡಿದು


ಸಾಯುವೆಯೋ?9 ಇಲ್ಲಾ ನನ್ನ ಪ್ರಶ್ನೆಗಳಿಗೆ ಉತ್ತರ ಹೇಳಿ ಬದುಕುವಿಯೋ?


- (ಸ್ವಗತ: ಏನು ಮಾಡಲಿ ಈಗ? ಈ ಯಕ್ಷನ ಪ್ರಶ್ನೆಗಳಿಗೆ ಉತ್ತರಿಸಿ ನನ್ನ ತಮ್ಮಂದಿರನ್ನು
ಕಾಪಾಡುವುದೇ ಸರಿಯಾದ ಉಪಾಯ.) ಸರಿ. ನಿನ್ನ ಪ್ರಶ್ನೆಗಳಿಗೆ ಉತ್ತರ ಹೇಳಿದರೆ
ನನಗಾಗುವ ಉಪಯೋಗವೇನು?


- ಹಾಂ, ... ನೀನು ಕೇಳಿದ್ದು ಸರಿಯೇ. ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಸತ್ತಿರುವ ಔ್ಫ್ನ


ನಿನ್ನ ತಮ್ಮಂದಿರಲ್ಲಿ ಒಬ್ಬನನ್ನು ಬದುಕಿಸಿ ಕೊಡುತ್ತೇನೆ.

ಧರ್ಮರಾಜ - ಆಗಲಿ. ನಿನ್ನ ಮಾತನ್ನು ನಂಬುತ್ತೇನೆ. ಏನು ಪ್ರಶ್ನೆಗಳನ್ನು ಕೇಳಲಿಚ್ಛಿಸುವೆಯೋ ಕೇಳು.
ಧರ್ಮರಾಜ, ಹೇಳು ಭೂಮಿಗಿಂತ ದೊಡ್ಡ ವಸ್ತು ಯಾವುದು?
ಭೂಮಿಗಿಂತ ದೊಡ್ಡ ವಸ್ತು ತಾಯಿ.
ಸರಿ. ಹಾಗಾದರೆ ಆಕಾಶಕ್ಕಿಂತ ಉನ್ನತ ವಸ್ತು ಯಾವುದು?
ಕೇಳು ಯಕ್ಷನೇ, ಪ್ರಪಂಚದಲ್ಲಿ ಆಕಾಶಕ್ಕಿಂತ ಉನ್ನತ ವಸ್ತುವೊಂದಿದ್ದರೆ ಅದು ತಂದೆ.
ಸರಿಯಾಗಿ ಹೇಳಿದೆ. ಈಗ ಹೇಳು, ಗಾಳಿಗಿಂತ ವೇಗವಾದದ್ದು ಯಾವುದು?
ಯಕ್ಷ, ಗಾಳಿಯೇ ಅತ್ಯಂತ ವೇಗವಾದದ್ದು ಎಂದುಕೊಂಡರೆ, ಮನುಷ್ಯನ ಮನಸ್ಸು
ಅದನ್ನೂ ಮೀರಿದ್ದು. ಅದು ಗಾಳಿಗಿಂತಲೂ ವೇಗವಾದದ್ದು.
ಭಲೇ ರಾಜ! ಭಲೇ!, ಗಾಳಿಗಿಂತಲೂ ವೇಗವಾದ ಮನಸನ್ನು ಹೊಂದಿದ ಆ
ಮನುಷ್ಯನನ್ನು ಅತಿಯಾಗಿ ಕಾಡುವುದು ಯಾವುದು?


(ಸ್ವಲ್ಪ ಚಿಂತಿಸಿ) ಮಹಾತ್ಮನೇ ಮನುಷ್ಯನನ್ನು ಅತಿಯಾಗಿ ಕಾಡುವುದು ಚಿಂತೆ.


2
WwW


ಒಪ್ಪಿದೆ ಧರ್ಮರಾಜ ಒಪಿದೆ.. ಸ್ಪರ್ಗಕ್ಕಾಗಿ ಮನುಷ್ಯ ಆಸೆ ಪಡುತ್ತಾನೆ. ಅದರೆ ಅವನಿಗೆ
ಸ್ವರ್ಗ ಸಿಗುವುದು ಯಾವುದರಿಂದ?


ಸ್ಪರ್ಗವೇ? . . ಯಕ್ಷ, ಸತ್ಯ ಮಾರ್ಗದಿಂದ ಸ್ಪರ್ಗ ಸಿಗುವುದಲ್ಲದೆ ಬೇರೆ ಏನೂ ದಾರಿಯಿಲ್ಲ.


ಸರಿಯಾಗಿ ಹೇಳಿದೆ 'ರಾಜ, ಸರಿಯಾಗಿ ಹೇಳಿದೆ. ಈಗ ಹೇಳು, ಧನಗಳಲ್ಲಿ ಅತ್ಯಂತ
ಉತ್ತಮ ಧನ 'ಯಾವುದು?

ಉತ್ತಮವಾದ ಪ್ರಶ್ನೆ ಕೇಳಿದೆ ನೀನು. ವಿದ್ಯಾಧನವೇ ಎಲ್ಲಾ ಧನಗಳಿಗಿಂತ
ಉತ್ತಮವಾದುದು. ಸರ್ವಶ್ರೇಷ್ಠವಾದ ಧನ.

ಬಹಳ ಸಂತೋಷ. ಧರ್ಮರಾಜ, ನೀನು ಗಮನಿಸಿರುವೆಯಾ, ಮನುಷ್ಯನಿಗೆ ಲಾಭವೇ
ಮುಖ್ಯ. ಜೀವನದಲ್ಲಿ ಉತ್ತಮವಾದ ಲಾಭವೇನಾದರೂ ಇದ್ದರೆ, ಅದು ಯಾವುದು?


ಗಮನಿಸಿದ್ದೇನೆ, ಮಹಾತ್ಮ ಜೀವನದಲ್ಲಿ ಉತ್ತಮವಾದ ಲಾಭವೆಂದರೆ ಅದು
ಆರೋಗ್ಯ ಭಾಗ್ಯ.


ಭಲೇ!, ಧರ್ಮರಾಜ ಸರಿಯಾಗಿ ಉತ್ತರಿಸಿದೆ. ಈಗ ಹೇಳು. ಯಾವುದನ್ನು ಬಿಟ್ಟರೆ ವ್ಯಕ್ತಿ
ಜನರಿಗೆ ಪ್ರಿಯನಾಗುವನು?


ಧರ್ಮರಾಜ - ಮಹಾತ್ಮನೇ ಕೇಳು. ವ್ಯಕ್ತಿ ಗರ್ವವನ್ನು ಬಿಟ್ಟರೆ ಜನರಿಗೆ ಪ್ರಿಯನಾಗುತ್ತಾನೆ.


ಯಕ್ಷ - ಒಪ್ಪಿದೆ ಧರ್ಮರಾಜ ನಿನ್ನ ಧರ್ಮಪ್ರಜ್ಞೆಯನ್ನು. ಎಲ್ಲಾ ಸುಖ ಭೋಗಗಳಿದ್ದೂ ಯಾವಾಗಲೂ
ದುಃಖಿಯಾಗಿರುವವನು ಯಾರು?


ಧರ್ಮರಾಜ - ಕೇಳು ಯಕ್ಷ ಪರರ ಏಳಿಗೆಯನ್ನು ಸೈರಿಸಲಾರದವನೇ ಯಾವಾಗಲೂ ದುಃಖಿ. ಯಕ್ಷ
ಇನ್ನೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆಲ್ಲಾ ತಾಳ್ಮೆಯಿ೦ದ ಧರ್ಮರಾಜ ಉತ್ತರ
ಕೊಡುತ್ತಾನೆ. ಯಕ್ಷ ತೃಪ್ತನಾಗುವನು.)


ಭಲೇ ಧರ್ಮರಾಜ, ಭಲೇ, ನೀನು ಹೆಸರಿಗೆ ತಕ್ಕಂತೆ ಧರ್ಮರಾಜನೇ ಸರಿ. ಮೆಚ್ಚಿದೆ
ನಿನ್ನ ಬುದ್ದಿವಂತಿಕೆಯನ್ನು ನಿನ್ನ ಉತ್ತರಗಳನ್ನು ಕೇಳಿ ಬಹಳ ಸಂತೋಷವಾಗಿದೆ. ನಿನ್ನ
ನಾಲ್ವರು ಸಹೋದರರಲ್ಲಿ ಯಾರಾದರು ಒಬ್ಬರನ್ನು ಬದುಕಿಸುವೆ. ಹೇಳು, ಯಾರನ್ನು
ಬದುಕಿಸಲಿ?

(ಯಕ್ಷನಿಗೆ ಕೈ ಮುಗಿದು) ಧನ್ಯನಾದೆ. ನಾಲ್ವರಲ್ಲಿ ಒಬ್ಬನನ್ನು ಬದುಕಿಸುವುದಾದರೆ,
ನನ್ನ ತಮ್ಮ ನಕುಲನನ್ನು ಬದುಕಿಸು.

(ಆಶ್ಚರ್ಯದಿಂದ) ಇದೇನು ಧರ್ಮರಾಜ, ಹೀಗೆ ಹೇಳುತ್ತಿರುವೆ? ಅವಸರ ಪಡಬೇಡ.


ಸ್ವಲ್ಪ ಯೋಚಿಸು. ವೀರರಾದ ಭೀಮ, ಅರ್ಜುನರು ನಿನಗೆ ಪ್ರಿಯರಲ್ಲವೇ? ಅವರನ್ನು
ಬಿಟ್ಟು ನಕುಲನನ್ನು ಬದುಕಿಸಲು ಹೇಳುತ್ತಿರುವಿಯಲ್ಲಾ! ಮತ್ತೊಮ್ಮೆ ಯೋಚಿಸು.


ಪೂಜ್ಯನೇ, ನಾನು ಚೆನ್ನಾಗಿ ' ಯೋಚಿಸಿದ್ದೇನೆ. ನನಗೆ ಇಬ್ಬರು ತಾಯಂದಿರು. ಕುಂತಿ
ಮತ್ತು ಮಾದ್ರಿ. ಕುಂತಿಯ ಮಕ್ಕಳಲ್ಲಿ ನಾನು ಜೀವಂತವಾಗಿರುವೆ. ಈಗ ಮಾತೆ
ಮಾದ್ರಿಯ ಮಕ್ಕಳಲ್ಲಿ ಒಬ್ಬನಾದ ನಕುಲನನ್ನು ಬದುಕಿಸಿಕೊಳ್ಳುವುದು ನ್ಯಾಯವಲ್ಲವೇ?
ನೀನೇ ಹೇಳು.


ಧರ್ಮರಾಜ... ಮೆಚ್ಚಿದೆ ನಿನ್ನ ನ್ಯಾಯ ನಿಷ್ಠೆಯನ್ನು. ಸಹೋದರ ಪ್ರೀತಿಯನ್ನು.
ನಕುಲನೊಬ್ಬನೇ ಏಕೆ? ನಿನ್ನ ಎಲ್ಲಾ ತಮ್ಮಂದಿರೂ ಬದುಕಲಿ. (ಯಕ್ಷನ ಕೃಪೆಯಿಂದ
ಸತ್ತುಬಿದ್ದಿದ್ದ ನಾಲ್ವರೂ ನಿದ್ದೆಯಿಂದ ಎದ್ದವರಂತೆ ಎದ್ದು ಕುಳಿತು, ಆಶ್ಚರ್ಯದಿಂದ
ಯಕ್ಷನನ್ನೂ ಧರ್ಮರಾಜನನ್ನೂ ನೋಡುವರು.)


ಕೃತಾರ್ಥನಾದೆ ದೇವ, ನಾನು ಕೃತಾರ್ಥನಾದೆ. ನೀನು ಸಾಮಾನ್ಯ ಯಕ್ಷನಲ್ಲ. ಯಾರೋ
ದೇವತೆಯೇ ಆಗಿರಬೇಕು. ದಯವಿಟ್ಟು ನಿನ್ನ ನಿಜರೂಪವನ್ನು ತೋರಿಸು.

ಹೌದು ಧರ್ಮರಾಜ, ನಾನು ಯಕ್ಷನಲ್ಲ. ನಿನ್ನ ತಂದೆ ಯಮಧರ್ಮ. ನಿನ್ನನ್ನು ಪರೀಕ್ಷಿಸಲು
ಬಂದಿದ್ದೆ. ನಿನ್ನ ಧರ್ಮಪ್ರಜ್ಞೆ ನ್ಯಾಯನಿಷ್ಠೆ, ಸೋದರ ಪ್ರೇಮದಿಂದ ಸಂತುಷ್ಣನಾಗಿದ್ದೇನೆ.
ನಿನಗೆ ಮತ್ತೇನು ವರ ಬೇಕೋ ಕೇಳು. ಕೊಡುತ್ತೇನೆ.

( ಸಹೋದರರೆಲ್ಲರೂ ಯಕ್ಷನಿಗೆ ನಮಸ್ಕರಿಸುವರು)


ಧನ್ಯನಾದೆ ತಂದೆ, ಧನ್ಯನಾದೆ. ನಿನ್ನ ದರ್ಶನದಿ೦ದ ನನ್ನ ಜೀವನ ಪಾವನವಾಯಿತು. ಗ
ನಾವೆಲ್ಲ ಆ ಬ್ರಾಹಣನ ಅರಣಿಗೋಸ್ಪರ ಜಿಂಕೆಯನ್ನು ಬೆನಟಿ ಬಂದದ್ದು. ಅದನು, ಆ
ಸ Sy 2 ಇ ಲ್ಲ ಬಿ ಸ
ಬ್ರಾಹ್ಮಣನಿಗೆ ದೊರೆಕಿಸಿಕೊಟ್ಟು ನಮ್ಮ ಮಾತು ಉಳಿಸಿಕೊಳ್ಳಬೇಕು. ದಯವಿಟ್ಟು ಅದು

ದೊರಕುವಂತೆ ಮಾಡುವೆಯಾ?


(ನಗುತ್ತಾ) ಓಹೋ, ಅರಣಿಯೋ?, .. ಅದನ್ನು ನಾನೇ ಜಿಂಕೆಯ ರೂಪದಲ್ಲಿ ಹೋಗಿ
ಎತ್ತಿಕೊಂಡು ಬಂದಿದ್ದೆ. ಇದೋ ತೆಗೆದುಕೋ. (ಅರಣಿಯನ್ನು ಧರ್ಮರಾಜನ ಕೈಗೆ
ಕೊಡುವನು)


ಧನ್ಯರಾದೆವು ತಂದೆ, ನಮ್ಮನ್ನು ಆಶೀರ್ವದಿಸಿ. (ಎಲ್ಲರೂ ನಮಸ್ಕರಿಸುವರು)
- ನಿಮಗೆಲ್ಲರಿಗೂ ಶುಭವಾಗಲಿ. ಜಯಶಾಲಿಗಳಾಗಿ, ಕೀರ್ತಿವ೦ತರಾಗಿ ಬಾಳಿ.


ಸೇ ಸೇ ೫ ೫ ೫% ೫%


ಓದಿ ತಿಳಿಯಿರಿ

ಬಳಲು - ಆಯಾಸಗೊಳ್ಳು: ಸರೋವರ- ನೀರಿನ ತಾಣ;

ಅಪ್ಪಣೆ- ಅನುಮತಿ, ಒಪ್ಪಿಗೆ; ಧಿಕ್ಕರಿಸು- ತಿರಸ್ಕರಿಸು; ಉನ್ನತ- ಶ್ರೇಷ್ಠ, ಮೇಲು ಮಟ್ಟದ;

ವನ- ಕಾಡು, ಅರಣ್ಯ, ಅಡವಿ, ಪೀಡಿಸು; ಧನ-ಹಣ;, ಪ್ರಿಯ- ಇಷ್ಟವಾದ; ಗರ್ವ- ಅಹಂಕಾರ;
ಇಚ್ಛೆ- ಇಷ್ಟು ಏಳ್ಗೆ- ಅಭಿವೃದ್ಧಿ; ಸೈರಿಸು- ಸಹಿಸು


ಗಮನಿಸಿ ತಿಳಿಯಿರಿ


ಅರಣಿ- ಯಜ್ಞಕ್ಕೆ ಬೆಂಕಿ ಹುಟ್ಟಿಸಲು ಬಳಸುವ ಮರದ ತುಂಡು. ಜೂಜು- ಪಣವಿಟ್ಟು ಆಡುವ ಆಟ;
ಗೂಢಚಾರ- ಗುಟ್ಟಾಗಿ ಮಾಹಿತಿ ಸಂಗ್ರಹಿಸುವವ, ಬೇಹುಗಾರ. ಯಕ್ಷರು - ದೇವತೆಗಳಲ್ಲಿ ಒಂದು ವರ್ಗ;
ವನವಾಸ- ಕಾಡಿನಲ್ಲಿ ವಾಸಿಸುವುದು; ' ಕೃತಾರ್ಥ- ಧನ್ಯತೆಯ ಭಾವ.


ಅಭ್ಯಾಸ ಚಟುವಟಿಕೆ


ಅ) ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಪಾಂಡವರು ವನವಾಸಕ್ಕೆ ಬರಲು ಕಾರಣವೇನು?
ನಕುಲ ಸರೋವರಕ್ಕೆ ಏಕೆ ಹೋದನು?
ಗಾಳಿಗಿಂತ ವೇಗವಾದುದು ಯಾವುದು?
ಎಲ್ಲಕ್ಕಿಂತ ಉತ್ತಮವಾದ ಧನ ಯಾವುದು?
ಧರ್ಮರಾಜನಿಗೆ ಪ್ರಶ್ನೆಗಳನ್ನು ಕೇಳಿದ ಯಕ್ಷ ಯಾರು?
ಧರ್ಮರಾಜ ತನ್ನ ಸಹೋದರರಲ್ಲಿ ಯಾರನ್ನು ಬದುಕಿಸಲು ಕೇಳಿದ?


ಆ) ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಪಾಂಡವರು ಜಿಂಕೆಯನ್ನು ಬೆನ್ನಟ್ಟದ್ದು ಏಕೆ?
ಧರ್ಮರಾಜನ ತಮ್ಮಂದಿರೆಲ್ಲ ಸಾಯಲು ಕಾರಣವೇನು?



೩. ಸ್ಪರ್ಗ ಮತ್ತು ಲಾಭದ ಬಗೆಗೆ ಧರ್ಮರಾಜನ ಉತ್ತರವೇನು?



ಯಕ್ಷನು ಏಕೆ ಸಂತುಷ್ಟನಾದ?
ಉೈ


ಆ) ಸಂದರ್ಭ ಸಹಿತ ವಿವರಿಸಿರಿ.
“ಅಯ್ಯೋ ವಿಧಿಯೇ, ಇದೇನು ಅನ್ಯಾಯವಾಯಿತು?'


“ಮೊದಲು ನೀರು ಕುಡಿದು ಸಾಯುವೆಯೋ, ಇಲ್ಲಾ ನನ್ನ ಪ್ರಶ್ನೆಗೆ ಉತ್ತರ
ಬದುಕುವೆಯೋ?”


“ಮನುಷ್ಯನನ್ನು ಅತಿಯಾಗಿ ಕಾಡುವುದೇ ಚಿಂತೆ”.
“ಪರರ ಏಳಿಗೆಯನ್ನು ಸೈರಿಸಲಾರದವನೇ ದುಃಖಿ?
“ನನಗೆ ಇಬ್ಬರು ತಾಯಂದಿರು.


ಈ ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯ ಹೆಸರು ತಿಳಿಸಿರಿ.

೧. ಇದೇನು ೨. ಅಲ್ಲಿಂದಿಲ್ಲಿಗೆ ೩. ಮಾತನ್ನು ೪. ರೂಪದಲ್ಲಿದ್ದ

ಈ ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿನ ಪದಗಳನ್ನು ಜೋಡಿಸಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಿರಿ.
ಮಾದರಿ: ಕಮಲ ಪುಸ್ತಕವನ್ನು ಕೊಂಡಳು.


ಕ್ರಿಯಾಪದ


ಹಾಂ ಸರಸತಿ


ಹುಡುಗರು


ಪ್ರಾಯೋಗಿಕ ಚಟುವಟಿಕೆ
ಅ) ಯಕ್ಷ ಪ್ರಶ್ನೆಯ ಈ ಪ್ರಸಂಗವನ್ನು ವೇಷಭೂಷಣಗಳೊಂದಿಗೆ ತರಗತಿಯಲ್ಲಿ ಅಭಿನಯಿಸಿರಿ.
ಬ) ಮಹಾಭಾರತದ ಕತೆಯನ್ನು ಓದಿ ತಿಳಿಯಿರಿ.
ಕ) ಈ ಕೆಳಗಿನ ಕಥಾಭಾಗವನ್ನು ಸಂಭಾಷಣೆಯ ರೂಪದಲ್ಲಿ (ನಾಟಕ ರೂಪ) ಬರೆಯಿರಿ.


ಒಮ್ಮೆ ಮನುಷ್ಯನೊಬ್ಬ ಮೈ ತುಂಬಾ ಕಂಬಳಿ ಹೊದ್ದುಕೊಂಡು ಹೊರಟಿದ್ದ. ಅವನನ್ನು ನೋಡಿದ
ಮಾರುತ ಸೂರ್ಯನ ಬಳಿಗೆ ಬಂದು, ನೀನು ಬೆಳಕು, ಶಾಖ ಕೊಡುವ ದೇವರು. ನಾನು ಗಾಳಿ
ಕೊಡುವೆ. ನಮ್ಮಿಬ್ಬರಲ್ಲಿ ಯಾರು ಬಲಶಾಲಿಗಳೆಂದು ಇವತ್ತು ತಿಳಿಯೋಣ ಎಂದು ಹೇಳಿದ. ಅದಕ್ಕೆ
ಸೂರ್ಯ ಅದನ್ನು ಹೇಗೆ ನಿರ್ಧರಿಸುವುದು ಎಂದ. ಅದಕ್ಕೆ ಮಾರುತ, ಅದು ಹೇಗೆಂದರೆ, ಯಾರು ಆ
ಮನುಷ್ಯ ಹೊದ್ದುಕೊಂಡ ಕಂಬಳಿಯನ್ನು ಬೀಳಿಸುತ್ತಾರೋ ಅವರೇ ಬಲಶಾಲಿಗಳು ಎಂದನು. ಸೂರ್ಯ
ಒಪ್ಪಿಗೆ ಸೂಚಿಸಿದ.


ಮಾರುತ ಮನುಷ್ಯನ ಸಮೀಪಕ್ಕೆ ಬಂದು ಜೋರಾಗಿ ಗಾಳಿ ಬೀಸ:ತೊಡಗಿದ. ಗಾಳಿಯಿಂದ ಚಳಿ
ಹೆಚ್ಚಾಗಿ ಮನುಷ್ಯ ಬಿಗಿಯಾಗಿ ಕಂಬಳಿ ಹೊದ್ದುಕೊಂಡ. ಮಾರುತ: ಮಾಡಿದ ಪ್ರಯತ್ನ ಫಲಿಸಲಿಲ್ಲ.
ಸೋತು ಕುಳಿತ. ನಂತರ ಸೂರ್ಯನ ಸರದಿ. ಸೂರ್ಯ ತನ್ನ ಕಿರಣಗಳನ್ನು ಪ್ರಖರವಾಗಿ ಹರಡಿದ.
ಬಿಸಿಲು ಹೆಚ್ಚಾಗತೊಡಗಿತು. ಸೆಖೆ ತಾಳಲಾರದೆ ಮನುಷ್ಯ.ತನ್ನ' ಕಂಬಳಿ ತೆಗೆದು ಕೆಳಕ್ಕೆ ಹಾಕಿದ. ಇದನ್ನು
ನೋಡಿ ಮಾರುತ ಸೂರ್ಯನ ಬಳಿ ಬಂದು ನಾನು.ಸೋತೆ, ನೀನು ನಿಜಕ್ಕೂ ನನಗಿಂತ ಬಲಶಾಲಿ,
ನೀನೇ ಗೆದ್ದೆ ಎಂದ. ಆಗ ಸೂರ್ಯ ಇಲ್ಲ ಯಾರೂ ಹೆಚ್ಚೂ ಇಲ್ಲ ಅಥವಾ ಕಡಿಮೆಯೂ ಇಲ್ಲ. ಅವರವರ
ಕೆಲಸ ಅವರಿಗೆ ಮುಖ್ಯ ಎಂದನು.


ವ್ಯಾಕರಣಾಭ್ಯಾಸ


ಆಗಮ ಸಂಧಿ
ಹಸು + ಅನ್ನು- ಹಸುವನ್ನು
ಮನೆ ೬ ಇಂದ- ಮನೆಯಿಂದ


ಈ ಮೇಲಿನ ಉದಾಹರಣೆಗಳನ್ನು ಗಮನಿಸಿ. ಇಲ್ಲಿ ಸ್ವರಕ್ಕೆ ಸ ಪರವಾಗಿದೆ. (ಉ--ಅ, ಎಇ)


ಆದರೆ ಕೂಡಿಸಿದಾಗ ಯಾವ ಸ್ವರವೂ ಲೋಪವಾಗಿಲ್ಲ ಅಥವಾ ಬಿಟ್ಟುಹೋಗಿಲ್ಲ. ಒಂದು ವೇಳೆ ಸ್ಪರ


ಲೋಪವಾದರೆ ಅರ್ಥ ಕೆಟ್ಟು ಹೋಗುತ್ತದೆ. ಆದುದರಿಂದ ಆ ಎರಡೂ ಸ್ವರಗಳ ನಡುವೆ "ಯ್‌? ಅಥವಾ


“ವ್‌'- ವ್ಯಂಜನ ಹೆಚ್ಚಾಗಿ ಸೇರಿಕೊಂಡಿದೆ ಅಂದರೆ ಆಗಮವಾಗಿದೆ. ಹೀಗೆ ಸ್ವರಕ್ಕೆ ಸ್ವರ ಪರವಾದಾಗ
ಲೋಪವಾಗಿ ಅರ್ಥ ಕೆಡುವುದಿದ್ದರೆ ಆ ಸ್ವರಗಳ ಮಧ್ಯೆ “ಯ'ಕಾರ ಅಥವಾ "ವ'ಕಾರವು ಹೊಸದಾಗಿ ಸೇರಿ
ಆಗಮ ಸಂಧಿಯಾಗುವುದು. "ಯ'ಕಾರ ಸೇರಿದರೆ ಯಕಾರಾಗಮ ಸಂಧಿಯೂ, “"ವ'ಕಾರ ಸೇರಿದರೆ


ವಕಾರಾಗಮ ಸಂಧಿ ಎಂದೂ ಕರೆಯುತ್ತಾರೆ.


ತತ್ಸಮ-ತತ್ಛವ;
ಈ ಕೆಳಗಿನ ವಾಕ್ಯಗಳನ್ನು ನೋಡಿ, ಕೆಳಗೆ ಗೆರೆ ಎಳೆದ ಪದಗಳ ವಿಶೇಷತೆ ಗಮನಿಸಿರಿ.


೧. ಆಕಾಶದಲ್ಲಿ ಬಣ್ಣಬಣ್ಣದ ಗಾಳಿಪಟಗಳು ಹಾರಾಡುತ್ತಿದ್ದವು.
ಆಗಸದಲ್ಲಿ ಬಣ್ಣಬಣ್ಣದ ಗಾಳಿಪಟಗಳು ಹಾರಾಡುತ್ತಿದ್ದವು.


ಗೀತಾಳ ಧ್ದನಿ ತುಂಬಾ ಇಂಪಾಗಿದೆ.
ಗೀತಾಳ ದನಿ ತುಂಬಾ ಇಂಪಾಗಿದೆ.


ಮೊದಲನೆಯ ಉದಾಹರಣೆಯಲ್ಲಿ “ಆಕಾಶ' ಎಂದು ಒಮ್ಮೆ "ಆಗಸ' ಎ೦ದು ಮತ್ತೊಮ್ಮೆ ಬಳಸಲಾಗಿದೆ.
ಹಾಗೆಯೇ ಎರಡನೆಯ ಉದಾಹರಣೆಯಲ್ಲಿ "ದ್ದನಿ' ಎಂದು ಒಮ್ಮೆ "ದನಿ' ಎಂದು ಮತ್ತೊಮ್ಮೆ
ಉಪಯೋಗಿಸಲಾಗಿದೆ. ಆಕಾಶ, ಧ್ವನಿ- ಎಂಬ ಪದಗಳು ಸಂಸ್ಕತ ಮೂಲದವು. ಸಂಸ್ಕೃತದಲ್ಲಿ ಇರುವಂತೆಯೇ
ಕನ್ನಡದಲ್ಲಿ ಬಳಸಿದರೆ ಅದನ್ನು ತತ್ಸಮ ಎ೦ದರೆ ಮೂಲ ಭಾಷೆಗೆ ಸಮ ಎಂದು ಗುರುತಿಸುತ್ತೇವೆ. ಆದರೆ
ಎಲ್ಲ ಸಂದರ್ಭದಲ್ಲಿಯೂ ಹಾಗೆ ಮಾಡಲಾಗುವುದಿಲ್ಲ. ಆಗ ಕನ್ನಡದ ಜಾಯಮಾನಕ್ಕೆ ಹೊಂದುವಂತೆ
ಅದನ್ನು ಮಾರ್ಪಾಡು ಮಾಡಿಕೊಂಡು ಉಪಯೋಗಿಸುತ್ತೇವೆ. ಆ ಪದವನ್ನು 'ತದ್ಭವ'- ಎಂದರೆ ಮೂಲ
ಶಬ್ದದಿ೦ದ ಹುಟ್ಟದ್ದು ಎನ್ನುತ್ತೇವೆ. ಈ ಮೇಲಿನ ಉದಾಹರಣೆಯಲ್ಲಿ ಆಕಾಶ ಮತ್ತು ಧ್ವನಿ ತತ್ಸಮಗಳಾದರೆ,
ಆಗಸ ಮತ್ತು ದನಿ ತದ್ಭವಗಳಾಗಿವೆ.


ಈ ಕೆಳಗಿನ ಪದಗಳಲ್ಲಿ ತತ್ಸಮ-ತದ್ಭವಗಳನ್ನು ಗುರುತಿಸಿ ಬರೆಯಿರಿ.
೧. ಶ್ರೀಮಂತ ೨. ಹರುಷ ೩. ಸಿರಿ


ಕೋಪವನ್ನು ಸಹನೆಯಿಂದ ಗೆಲ್ಲಬೇಕು


ಪದ್ಯಪಾಠ


೭. ನೀತಿ ಮಾತು


(ಆಶಯ : 'ಪಜ್ಣನರ ಪಂದ ಹೆಚ್ಜೆೇಮ ಪನಿದಂತೆ' ಎಂಬ ಮಾತನ್ನು ವಾವು ಕೇಆದ್ದೇವೆ. ಒಳ್ಳೆಯವರ
ಸ್ನೇಹ ಮತ್ತು ಜ್ಞಾನಿಗಳ ಪಂದ ಉತ್ತಮವಾದುದು. ವ್ಯಕ್ತಿ ಹೇದೆ ಜಂವರ ನಡೆಪಬೇಕೆಂಬುದನ್ನು
ಕನಕದಾಪರು ಇಲ್ಲ ಸರಳವಾಣ ಹೇಳದ್ದಾರೆ.)


ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಚ್ಚಾನಿಗಳ ಕೂಡ ಜಗಳವೇ ಲೇಸು ।


ಉಂಬುಡುವುದಕ್ಕಿಲ್ಲದ ಅರಸನೋಲಗಕಿಂತ
ತುಂಬಿದೂರೊಳಗೆ ತಿರಿದುಂಬುವುದೇ ಲೇಸು
ಹಂಬಲಿಸಿ ಹಾಳರಟೆ ಹೊಡೆಯುವುದಕ್ಕಿಂತ ಹರಿ
ಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು


ಒಡನೆ ಹಂಗಿಸುವನೋಗರವನುಂಬುವುದಕಿಂತ
ಕುಡಿನೀರು ಕುಡಿದುಕೊಂಡಿರುವುದೇ ಲೇಸು
ಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತ
ಅಡವಿಯೊಳಜ್ಞಾತ ವಾಸವೇ ಲೇಸು


ಮಸೆಯಲಿಹ ಮತ್ತರದ ನೆರೆಯೊಳಗಿರುವುದಕಿಂತ
ಹಸನಿಲ್ಲದ ಹಾಳುಗುಡಿಯೆ ಲೇಸು

ಬಿಸಜಾಕ್ಷ ಕಾಗಿನೆಲೆಯಾದಿ ಕೇಶವರಾಯ
ವಸುಮತಿಯೊಳು ನಿನ್ನ ದಾಸತ್ವವೇ ಲೇಸು


ಕವಿ ಪರಿಚಯ | [i


ಬಂಕಾಪುರದ ಹತ್ತಿರದಲ್ಲಿರುವ ಬಾಡ ಗ್ರಾಮದಲ್ಲಿ ಕನಕದಾಸರು
ಜನಿಸಿದರು. ಆರಂಭದಲ್ಲಿ ದಂಡನಾಯಕರಾಗಿದ್ದ ಅವರು, ಜೀವನದಲ್ಲಿ
ವೈರಾಗ್ಯ ಬ೦ದು ಎಲ್ಲವನ್ನೂ ಬಿಟ್ಟು ವ್ಯಾಸರಾಯರ ಶಿಷ್ಕರಾದರು. ಇವರು
ಪುರಂದರದಾಸರ ಸಮಕಾಲೀನರು. ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.
ರಾಮಧಾನ್ಯಚರಿತೆ, ನಳಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿಸಾರ
ಮೊದಲಾದ ಕಾವ್ಯಗಳನ್ನು ಬರೆದಿದ್ದಾರೆ. ಅವರ ಅಂಕಿತನಾಮ ಕಾಗಿನೆಲೆ
ಆದಿಕೇಶವ.


ಓದಿ - ತಿಳಿಯಿರಿ

ಅಜ್ಞಾನಿ — ಜ್ಞಾನವಿಲ್ಲದವ » ತಿಳುವಳಿಕೆ ಇಲ್ಲದವ , ದಡ್ಡ; ಅಧಿಕ - ಹೆಚ್ಚು ತ ಸುಜ್ಜಾನಿ — ಉತ್ತಮ ಜ್ಞಾನಿ.
ತಿಳಿದವ ; ಲೇಸು - ಒಳ್ಳೆಯದು ; ಉಂಬು - ಊಟ ಮಾಡು ; ಅರಸ - ರಾಜ ; ಓಲಗ - ಸಭೆ;
ತಿರಿದು - ಭಿಕ್ಷೆ ಬೇಡಿ ; ಹಂಬಲಿಸಿ - ಆಸೆಪಟ್ಟು ; ಓಗರ - ಅನ್ನ ; ಕಡಿದಾಡು - ಜಗಳವಾಡು ;
ಅಡವಿ - ಅರಣ್ಯ » ಕಾಡು ; ಮತ್ತರ - ಹೊಟ್ಟೆಕಿಚ್ಚು 3 ದ್ವೇಷ ; ನೆರೆ - ಪಕ್ಕದಲ್ಲಿರುವ ಸ ದ್ರ ದ ದೇವಸ್ಥಾನ;
ಹಸನಿಲ್ಲದ - ಅನುಕೂಲವಿಲ್ಲದ ; ವಸುಮತಿ - ಭೂಮಿ ; ಮಸೆ - ದ್ವೇಷಸಾಧಿಸು.

ಗಮನಿಸಿ ತಿಳಿಯಿರಿ

ಹಾಳರಟೆ - ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಇರುವುದು.

ಅಜ್ಞಾತವಾಸ - ಬೇರೆಯವರಿಗೆ ಗೊತ್ತಾಗದಂತೆ ರಹಸ್ಯವಾಗಿ ಇರುವುದು.

ಮಸೆಯುವುದು - ದ್ವೇಷ ಸಾಧಿಸುವುದು.

ಬಿಸಜಾಕ್ಷ-ವಿಷ್ಣು (ಬಿಸಜ - ಕಮಲ, ಅಕ್ಷ- ಕಣ್ಣು, ಕಮಲದಂತೆ ಕಣ್ಣುಳ್ಳವನು ಯಾವನೋ ಅವನೇ)
ದಾಸತ್ವ - ಸೇವಕತನ


ಅಭ್ಯಾಸ ಚಟುವಟಿಕ


ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ
ಯಾರೊಡನೆ ಮಾಡುವ ಸ್ನೇಹ ಒಳ್ಳೆಯದಲ್ಲ ಡಿ
ಅರಸನೋಲಗಕ್ಕಿಂತ ಯಾವುದು ಉತ್ತಮ 9

೩. ಹಾಳು ಹರಟೆಗಿಂತ ಯಾವುದು ಮೇಲು 9

೪, ಮತ್ನರದ ನೆರೆಗಿಂತೆ'ಎಲ್ಲಿದ್ದರೆ ಒಳ್ಳೆಯದು ?


ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಐದು-ಆರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧. ಹಂಗಿಸುವವರನ್ನು ಮತ್ತು ಕಡಿದಾಡುವ ಬಾಂಧವರನ್ನು ಕುರಿತು ದಾಸರ ಅಭಿಪ್ರಾಯವೇನು?
೨. ಬಿಸಜಾಕ್ಷನ ದಾಸತ್ನವನ್ನು ದಾಸರು ಬಯಸಲು ಕಾರಣವೇನು?


ಸಂದರ್ಭ ಸಹಿತ ವಿವರಿಸಿ
೧. *“ಹರಿಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು “
೨. “ಕುಡಿನೀರು ಕುಡಿದುಕೊಂಡಿರುವುದೇ ಲೇಸು “


ಮೊದಲೆರಡು ಪದಗಳಿರುವ ಸಂಬಂಧವನ್ನು ಗಮನಿಸಿ, ಮೂರನೆಯ ಪದ
ಬರೆಯಿರಿ.


ಜ್ಞಾನ | ಅಜ್ಞಾನ ;; ನ್ಯಾಯ ಜಾ
ಬಿಸಜಾಕ : ವಿಷ್ಣು : ಹಣೆಗಣ್ಣ : _
[NY [xo] ಣಿ
ಹಣ ಇರುವವ : ಹಣವಂತ :: ಬುದ್ಧಿ ಇರುವವ :
ಗೆಳೆಯ : ಗೆಳೆತನ :: ಹಗೆ:


ಈ ಕೆಳಗಿನ ಪದ್ಯಭಾಗದಲ್ಲಿ ಖಾಲಿ ಇರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.
೧. ತುಂಬಿದೂರೊಳಗೆ ಲೇಸು.

೨. ದಾಸರ ಕೂಡೆ ಓೇಸು.

೩. ಕಡಿದುಕೊಂಡಿರುವುದೇ ಲೇಸು.

೪, ವಸುಮತಿಯೊಳು ನಿನ್ನ ಲೇಸು.


ವ್ಯಾಕರಣಾಭ್ಯಾಸ


ವಿಭಕ್ತಿ ಪ್ರತ್ಯಯಗಳು
ನೀನು ಮನೆಯಿಂದ ಯಾವಾಗ: ಹೊರಟೆ?
ನಾನು ನಿಮ್ಮ ಮನೆಗೆ ಬರುತ್ತೇನೆ.
ಅರೆ | ಅವರ ಮನೆಯ ಬಾಗಿಲಿಗೆ ಬೀಗ ಹಾಕಿದೆ.
ರಜನಿಯ ಮನೆಯಲ್ಲಿ ಹಬ್ಬದ ಸಂಭ್ರಮ.


ಮೇಲಿನ ವಾಕ್ಯಗಳಲ್ಲಿ ಬಂದಿರುವ ಮನೆಯಿಂದ, ಮನೆಗೆ, ಮನೆಯ, ಮನೆಯಲ್ಲಿ ಎಂಬ ಪದಗಳಲ್ಲಿ
“ಮನೆ” ಎಂಬುದು ಎಲ್ಲದರಲ್ಲೂ ಇದೆ. “ಮನೆ'- ಎಂಬುದಕ್ಕೆ ಸ್ವತಂತ್ರವಾದ ಅರ್ಥವಿದೆ. ಇದನ್ನು ಪ್ರಕೃತಿ
ಎನ್ನುವರು. ಸ್ವತಂತ್ರವಾದ ಅರ್ಥವಿಲ್ಲದೆ ಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನುಂಟು ಮಾಡುವ
ಉ, ಅನ್ನು ಇಂದ, ಗೆ, ಕೈ, ದೆಸೆಯಿಂದ, ಅ, ಅಲ್ಲಿ, ಏ, ಇರಾ, ಈ, ಆ- ಇತ್ಯಾದಿಗಳಿಗೆ ವಿಭಕ್ತಿ


ಪ್ರತ್ಯಯಗಳೆಂದು ಕರೆಯುತ್ತಾರೆ.
“ದಾಸರು' ಪದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದ ಕೆಳಗಿನ ಉದಾಹರಣೆ ಗಮನಿಸಿರಿ.


ಉದಾಹರಣೆ


ದ್ವಿತೀಯ

ತೃತೀಯ

ಚತುರ್ಥಿ ಗೆ,ಇಗೆ,ಕೆ. ಅಕ್ಕೆ

ಪಂಚಮಿ ಇಂದ ( ದೆಸೆಯಿಂದ ) ದಾಸರ ದೆಸೆಯಿಂದ
ಷಷ್ಠಿ ಅ

ಸಪ್ತಮಿ ಅಲ್ಲಿ


ಈ ಕೆಳಗಿನ ಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಬರೆಯಿರಿ.


ಅಜ್ಜಾನಿ , ಅಡವಿ,


ಪ್ರಾಯೋಗಿಕ ಚಟುವಟಿಕೆ


ಕನಕದಾಸರ ಈ ಕೀರ್ತನೆಯನ್ನು ಕಂಠಪಾಠ ಮಾಡಿ.


"ದುಷ್ಟರ ಕಂಡರೆ ದೂರವಿರು” - ಈ ಮಾತಿನ ಭಾವವನ್ನು ನಾಲ್ಕೈದು ವಾಕ್ಯಗಳಲ್ಲಿ ವಿಸ್ತರಿಸಿ
ಬರೆಯಿರಿ.


ಹಾಳು ಹರಟೆಯಿಂದ ಆಗುವ ತೂಂದರೆಗಳ. ಬಗೆಗೆ ನಿಮ್ಮ ಅಭಿಪ್ರಾಯಗಳನ್ನು ತರಗತಿಯಲ್ಲಿ
ಹಂಚಿಕೊಳ್ಳಿ.


ಸರ್ವಜನ ಈ ವಚನವನು, ಗಟಿಯಾಗಿ ಹೇಳಿ.
ಲಾ ದ
ಸಜ್ಜನರ ಸಂಗವದು ಹೆಚ್ಚೇನು ಸವಿದಂತೆ


ದುರ್ಜನರ ಸಂಗದೊಡನಾಟ | ಬಚ್ಚಲಿನ
ರೊಚ್ಚಿನಂತಿಹುದು | ಸರ್ವಜ್ಞ


ಸಗಣಿಯವನೊಡನೆ ಸರಸಕ್ಕಿಂತ ಗಂಧದವನೊಡನೆ ಗುದ್ದಾಟವೇ ಲೇಸು


ಗದ್ಯಪಾಠ
೮. ನಾನು ಕನ್ನಡ ಕವಿಯಾದೆ


ಆಶಯ : ವ್ಯಕ್ತಿಯ ಇಂವನದಲ್ಲ ನಡೆಯುವ ಒಂದು ಘಟನೆ. ಆದ ಸಾಮಾನ್ಯವೆಂದು ಹೋರುವ
ಘಟನೆ. ನಂತರ ಅತ್ಯ೦ತ ಪರಿಣಾಮವನ್ನು ಇಂರಬಹುದು. ಈ ಪರಿಣಾಮ ಕೆವಲ ಆ ವ್ಯಕ್ತಿಯ
ಇಂವನದ ಮೇಲೆ ಮಾತ್ರವಲ್ಲ. ಇಡಿ€ ರಾಷ್ಟ್ರ ಜೀವನದ ಮೇಲೆ ಬರಬಹುದು.


೧೯೨೪ನೆ ಜುಲೈ ೨ನೇ ತಾರೀಖು ಬುಧವಾರದ ದಿನ ನನ್ನ ಜೀವನದಲ್ಲಿ - ವಿಶೇಷವಾಗಿ ಸಾಹಿತ್ಯ
ಸಂಬಂಧವಾದ ಜೀವನದಲ್ಲಿ- ಒಂದು ಸ್ಥಠಣಿಯವಾದ ದಿನ. ಮಹಾರಾಜ ಹೈಸ್ಕೂಲಿನ ಇತಿಹಾಸದ
ಅಧ್ಯಾಪಕರಾಗಿದ್ದ ಎಂ. ಎಚ್‌. ಕೃಷ್ಣ. ಅಯ್ಯಂಗಾರ್ಯರನ್ನು ಅವರ ಆಹ್ವಾನದ ಮೇರೆಗೆ ಹೋಗಿ ಕಂಡೆ.
ಅನೇಕ ಪ್ರೋತ್ಸಾಹದ ಮಾತುಕತೆ ನಡೆದ ಮೇಲೆ, ಅವರು ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಗಳನ್ನು
ಕೊಡಲು ಬಂದಿದ್ದ ಐರಿಸ್‌ ಕವಿ ಜೇಮ್ಸ್‌ ಎಸ್‌. ಕಸಿನ್ಸ್‌ ಅವರ ವಿಚಾರ ತಿಳಿಸಿ, ಅವರನ್ನು ಕಂಡು ಅವರಿಗೆ
ನನ್ನ ಕವನಗಳನ್ನು ತೋರುವಂತೆ ಹೇಳಿದರು.


ಶ್ರೀಯುತ ಕಸಿನ್ಸ್‌ ಅವರು ಇಳಿದುಕೊಂಡಿದ್ದ ಗೌರ್ನಮೆಂಟ್‌ ಗೆಸ್ಟ್‌ ಹೌಸ್‌ಗೆ ಹೋದೆವು. ನಾನೂ
ನನ್ನೊಬ್ಬ ಸ್ನೆಹಿತರು. ಸ್ಥಳ ಏಕಾ೦ತವಾಗಿತ್ತು. ಉದ್ಯಾನ ಸೌಂದರ್ಯದ ಮಧ್ಯೆ ಗ್ರಾಮೀಣ ಮನಸ್ಸಿಗೆ
ಗಾಬರಿ ಹುಟ್ಟಿಸುವ ಮಟ್ಟಿಗೆ ಭವ್ಯವಾಗಿತ್ತು ಆ ಕಟ್ಟಡ, ಅದರ ಶಿಸ್ತು. ಒಬ್ಬ ಅನುಚರ ನೌಕರ ಬಂದು
ನಮ್ಮನ್ನು ಹೊರಗೆ ಇದ್ದ ಸೋಫಾದ ಮೇಲೆ ಕೂರಿಸಿ ನನ್ನ ಹೆಸರು ಬರೆದುಕೊಟ್ಟ ಚೀಟಿಯನ್ನು
ತೆಗೆದುಕೊಂಡು ಒಳಗೆ ಹೋದನು. ಬಹಳ ಹೊತ್ತು ಅವನು ಹೊರಗೆ ಬರಲಿಲ್ಲ. ನಾವಿಬ್ಬರೂ ಸಣ್ಣ
ದನಿಯಲ್ಲಿ ಮಾತಾಡಿಕೊಳ್ಳುತ್ತಾ ಕಾದೆವು.


ಬಹಳ ಹೊತ್ತಿನ ಮೇಲೆ ಅನುಚರ ಬ೦ದು ನನ್ನನ್ನು ಒಳಗೆ ಕರೆದೊಯ್ದು ಕಸಿನ್ಸ್‌ ಅವರು ಕುಳಿತಿದ್ದ
ಸ್ಥಳ ನಿರ್ದೇಶನ ಮಾಡಿ ಹೊರಗೆ ಹೋದ. ನಾನು ಮುಂಬಂದು ಕಸಿನ್ಸ್‌ ಅವರ ಸಮೀಪದಲ್ಲಿಯೇ
ಮತ್ತೊಂದು ಸೋಫಾದ ಮೇಲೆ ಕುಳಿತೆ. ನಮಸ್ಕಾರಾದಿಗಳ ಅನ೦ತರ, ನಾನು ಏತಕ್ಕೆ ಬಂದೆ, ಯಾರ


ಸಲಹೆಯ ಮೇರೆಗೆ, ಎಂಬುದನ್ನು ಹೇಳಿ ನನ್ನ ಕೈಲಿದ್ದ ಹಸ್ತಪ್ರತಿಯನ್ನು ಅವರಿಗೆ ಕೊಟ್ಟೆ ಅವರು ಸ್ಪಲ್ಪ
ಹೊತ್ತು ಹಾಳೆಗಳನ್ನು ಮಗುಚಿ ಮಗುಚಿ ನೋಡಿದರು. ಮತ್ತೆ ತಲೆಯೆತ್ತಿ ನನ್ನನ್ನು ಆಪಾದಮಸ್ತಕ ನೋಡಿದರು.
ನಾನು ಸ್ವದೇಶೀ ಚಳುವಳಿಯಲ್ಲಿ ಅಂಗಿ ಟೋಪಿಗಳನ್ನು ಬೆಂಕಿಗೆ ಎಸೆದಂದಿನಿಂದ ಖಾದಿ ಬಟ್ಟೆಯನ್ನೇ
ಉಪಯೋಗಿಸುತ್ತಿದ್ದ; ಖಾದಿ ಟೋಪಿ, ಖಾದಿಷರಟು, ಖಾದಿ ಪಂಚೆ.


ಕಸಿನ್ಸ್‌ ಸ್ವಲ್ಪ ಅಸಮಾಧಾನದ ಧ್ವನಿಯಿಂದಲೇ ಮಾತಾಡಿದರು. “ಏನಿದೆಲ್ಲ ಕಗ್ಗ? ನಿಮ್ಮ ಮೈಮೇಲೆ
ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತಗಳೇ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ.
ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?”


ಅವರ ಧ್ವನಿಗೂ, ಭಂಗಿಗೂ ನನಗಾಗಲೇ ಮುನಿಸು ಬರತೊಡಗಿತ್ತು. ನನ್ನ ಇಂಗ್ಲಿಷ್‌ ಕವನಗಳನ್ನು
ನೋಡಿ ಇತರ ನನ್ನ ಭಾರತೀಯ ಮಿತ್ರರು, ಅಧ್ಯಾಪಕರೂ ಶ್ಲಾಫಿಸಿದ್ದಂತೆ ಅವರೂ ಅವುಗಳನ್ನು ಮೆಚ್ಚಿ
ಹೊಗಳುತ್ತಾರೆ ಎಂದು ಆಸೆಪಟ್ಟಿದ್ದ ನನಗೆ ತುಂಬಾ ತೇಜೋವಧೆಯಾದಂತಾಗಿ, ನಿರಾಶೆಯಾಯಿತು.
ನಾನು ಕನ್ನಡದಲ್ಲಿ ಆಗಲೆ “ಅಮಲನ ಕಥೆ'ಯನ್ನೂ ಮತ್ತೂ ಇತರ ಒಂದೆರಡು ಕವನ ಬರೆಯುವ
ಪ್ರಯತ್ನವನ್ನೂ ಮಾಡಿದ್ದೆನಾದರೂ ಅವರ ಪ್ರಶ್ನೆಗೆ ಮಲೆತವನಂತೆ ಉತ್ತರಿಸಿದೆ- “ಇಲ್ಲ, ಕನ್ನಡದಲ್ಲಿ
ಇಂಗ್ಲಿಷಿನಲ್ಲಿ ಸಾಧ್ಯವಾಗುವಂತೆ, ಉದಾತ್ತ ಭಾವಗಳನ್ನು, ಉನ್ನತ, ಆಲೋಚನೆಗಳನ್ನು ಹೇಳಲು
ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟ ಬಹಳ ಕೀಳು. ಅಲ್ಲದೆ: ಅದರಲ್ಲಿರುವ ಛಂದಸ್ಸೂ ಹಳೆಯ
ಕಂದಾಚಾರದ ಛಂದಸ್ಸು, ವೃತ್ತ, ಕಂದ ಇತ್ಯಾದಿ. ಇಂಗ್ಲಿಷಿನಲ್ಲಿರುವ ಛ೦ದೋವೈವಿಧ್ಯ ಇಲ್ಲವೇ ಇಲ್ಲ.”
ಈಗ ನನಗೆ ಅತ್ಯಂತ ಅವಿವೇಕವಾಗಿಯೂ, ಹಾಸ್ಕಾಸ್ಪದವಾಗಿಯೂ, ಧೂರ್ತವಾಗಿಯೂ ತೋರುವ ನನ್ನ
ಆ ಉತ್ತರವನ್ನು ಆಲಿಸಿ ಪರಿಣತ ಮನಸ್ಸಿನವರೂ, ಅನುಭವಶಾಲಿಗಳೂ ಆಗಿದ್ದ ಅವರು ಸೌಮ್ಯ- ಸಾ೦ತ್ಚನಕರ
ಧ್ವನಿಯಿಂದ ಹೇಳಿದರು.- “ಹಾಗಲ್ಲ, ಯಾವಭಾಷೆಯೂ ತನಗೆ ತಾನೇ ಅಸಮರ್ಥವಲ್ಲ. ಸಮರ್ಥನೊಬ್ಬನು
ಬರುವ ತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು. ಸಮರ್ಥನು ಬಂದೊಡನೆ ಅವನ
ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲುದು. ಈಗ ನೋಡಿ, ಬಂಗಾಳಿ ಭಾಷೆ- ನೀವು
ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆಯೇ ಅದೂ ಇತ್ತು. ರವೀಂದ್ರನಾಥ ಠಾಕೂರರು ಬಂದರು.
ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೋಬಲ್‌
ಬಹುಮಾನವೂ ಬಂದಿತು! ಹಾಗೆಯೆ ನೀವು ಹೊಸ ಹೊಸ ಛಂದಸ್ಸುಗಳನ್ನು ಕಂಡುಹಿಡಿದು ಹೊಸ
ಹೊಸ ಪದಗಳನ್ನು ಪದಪ್ರಯೋಗಗಳನ್ನು ಸಾಧಿಸಿ, ಹೊಸ ರೀತಿಯ ಸಾಹಿತ್ಯ ಸೃಷ್ಟಿ ಮಾಡಬೇಕು. ನೀವು
ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವೆಂದು ತೋರಿಬಂದರೆ ನಾವು ಅದನ್ನು ಇಂಗ್ಲಿಷಿಗೆ ಭಾಷಾ೦ತರಿಸಿಕೊಳ್ಳುತ್ತೇವೆ.
ರವೀಂದ್ರರ ಸಾಹಿತ್ಯ ಇಂಗ್ಲಿಷಿಗೆ ಭಾಷಾಂತರವಾಗಿರುವಂತೆ. ನೀವು ಇಂಗ್ಲಿಷಿನಲ್ಲಿ ಸೃಜನ ಸಾಹಿತ್ಯ ಸೃಷ್ಟಿ
ಮಾಡಲಾರಿರಿ. ಅದು ನಿಮಗೆ ಪರಭಾಷೆ ಹುಟ್ಟಿನೊಡನೆ ಬ೦ದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನಶೀಲ
ಸಾಹಿತ್ಯ ಸೃಷ್ಟಿಯಾಗಬಲ್ಲದು. ಅದರಲ್ಲಿಯೂ ಕವಿತೆಯಲ್ಲಂತೂ, ಉತ್ತಮ ಸೃಜನ ಸಾಹಿತ್ಯ ಯಾರಿಗೂ
ಪರಭಾಷೆಯಲ್ಲಿ ಸಾಧ್ಯವಲ್ಲ. ಅದು ನಿಮಗೆ ಗೊತ್ತಾಗುವುದೂ ಇಲ್ಲ ಅದನ್ನು ಓದುವ ನಮಗೆ ಗೊತ್ತಾಗುತ್ತದೆ.
ಅದೆಂತಹ ನಗೆಪಾಟಲ ಸೃಷ್ಟಿ ಎಂಬುದು.”


ಇನ್ನೂ ಕೆಲವು ವಿವೇಕದ ಮಾತುಗಳನ್ನಾಡಿ ಹಸ್ತಪ್ರತಿಯನ್ನು ನನಗೆ ವಾಪಸ್ಸು ಕೊಟ್ಟು ಬೀಳ್ಕೊಂಡರು.
ನಾನು ಖಿನ್ನನಾಗಿ ಅತೃಪ್ತ ಮತ್ತು ಕುಪಿತಚಿತ್ತ ಭಂಗಿಯಲ್ಲಿ ಹೊರಗೆ ಬಂದೆ.


ಹೊರಗಡೆ ಕುಳಿತಿದ್ದ ಮಿತ್ರರಿಗೆ , ನನಗಾದ ತೇಜೋವಧೆಯೆಂದು ನಾನು ತಿಳಿದುಕೊಂಡಿದ್ದ ಸಂಗತಿಯನ್ನು
ಹೊರಗೆಡಹದೆ ಮುಚ್ಚಿಕೊಂಡೆ. ಕಸಿನ್ಸ್‌ ಅವರು ಸ್ವದೇಶಿ ಚಳುವಳಿಗಾರರಾಗಿರುವುದರಿಂದ ನನ್ನ ಸ್ವದೇಶಿ
ಭಾಷೆಯಾದ ಕನ್ನಡದಲ್ಲಿಯೇ ನಾನು ಬರೆದರೆ ಉತ್ತಮ ಮತ್ತು ದೇಶಭಕ್ತಿದ್ಯೋತಕ ಎಂದು ಬೋಧಿಸಿದರೆಂದು
ವ್ಯಂಗ್ಯವಾಗಿ ಟೀಕಿಸಿದೆ.


ಆದರೆ ಕಸಿನ್ಸ್‌ ಅವರ ಹಿತವಚನ ಮೇಲೆ ಮೇಲಕ್ಕೆ ತಿರಸ್ಕೃತವಾದರೂ ಸುದೈವದಿಂದ ನನ್ನ ಅ೦ತಃಪ್ರಜ್ಞೆ
ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡದ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು
ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು!


ಹಿಂತಿರುಗಿ ಬರುವಾಗಲೆ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆಯನ್ನು ರಚಿಸುತ್ತಾ ಗುನುಗುತ್ತಾ
ಬಂದೆ. ನನ್ನ ಸಹವಾಸಿ ಮಿತ್ರರೊಬ್ಬರು ಅದನ್ನು ರಾಗವಾಗಿ ಹಾಡಿದಾಗ ನನಗೆ ಉಂಟಾದ ಹಿಗ್ಗನ್ನು
ಏನೆಂದು ಹೇಳಲಿ? ಅವರ ರಾಗದ ಮಾಧುರ್ಯವನ್ನು ನನ್ನ ಕವಿತಾಸಾಮರ್ಥ್ಯಕ್ಕೆ ಅಧ್ಯಾರೋಪ ಮಾಡಿ
ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ. ಅಂದಿನಿಂದ ಕನ್ನಡದಲ್ಲಿ ರಚಿಸುವ ಮನಸ್ಸು ಮಾಡಿದೆ. ಆದರೆ
ಇಂಗ್ಲಿಷ್‌ ಕವನ ರಚನೆಯನ್ನು ಬಿಡಲಿಲ್ಲ. ಎರಡೂ ಭಾಷೆಯಲ್ಲಿ ಸವ್ಯಸಾಟಿಯಾಗುತ್ತೇನೆಂದು ಭಾವಿಸಿದೆ.
ಆದರೆ ಕ್ರಮೇಣ ೧೯೨೫-೨೬ರ ಹೊತ್ತಿಗೆ ಇಂಗ್ಲಿಷ್‌ ರಚನೆ ಸಂಪೂರ್ಣವಾಗಿ ನಿಂತುದನ್ನು ನನ್ನ ದಿನಚರಿ
ಹೇಳುತ್ತದೆ. ಅಂದರೆ ಮೊದಲನೆ ವರ್ಷದ ಬಿ.ಎ, ತರಗತಿಯಲ್ಲಿ ಸ್ವಲ್ಪ ಸ್ವಲ್ಪವಾಗಿಯೂ, ಎರಡನೆಯ
ವರ್ಷದ ಬಿ.ಎ.ತರಗತಿಯಲ್ಲಿ ಅತ್ಯಲ್ಪವಾಗಿಯೂ ನನ್ನ ಇಂಗ್ಲಿಷ್‌ ಕವನ ರಚನೆ ಮುಂದುವರಿದಿದೆ. ಕನ್ನಡದ
ರುಚಿ ಮತ್ತು ಅಭಿರುಚಿ ಹೆಚ್ಚಾದಂತೆಲ್ಲಾ ಇಂಗ್ಲಿಷ್‌ ತಿರೋಹಿತವಾಗಿದೆ.


ಲೇಖಕರ ಪರಿಚಯ

ಕುವೆಂಪು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರು. ಮೈಸೂರು
ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪಿನ್ನಿಪಾಲರಾಗಿ ಮೈಸೂರು
ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಮಕ್ಕಳ ಕವನವಾದ “ಬೊಮ್ಮನಹಳ್ಳಿಯ ಕಿಂದರಿ ಜೋಗಿ' ಯಿಂದ ಹಿಡಿದು


“ಶ್ರೀರಾಮಾಯಣ ದರ್ಶನಂ” ಮಹಾಕಾವ್ಯದವರೆಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ
ವೈವಿಧ್ಯಮಯ ಕೃತಿಗಳನ್ನು ರಚಿಸಿದ್ದಾರೆ.


ಇವರ ಮೇರು ಕೃತಿ "ಶೀ ರಾಮಾಯಣ ದರ್ಶನಂ' ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ, ಹಾಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಅಲ್ಲದೆ ಅವರಿಗೆ ರಾಷ್ಟ್ರಕವಿ, ಪಂಪ ಪ್ರಶಸ್ತಿ, ಪದ್ಮಭೂಷಣ
ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಮೈಸೂರು, ಬೆ೦ಗಳೂರು, ಕರ್ನಾಟಕ, ಗುಲ್ಬರ್ಗ ವಿಶ್ವವಿದ್ಯಾನಿಲಯಗಳು
ಗೌರವ ಡಾಕ್ಟರೇಟ್‌ ಪ್ರಶಸ್ತಿ ನೀಡಿ ಗೌರವಿಸಿವೆ. ಪ್ರಸ್ತುತ ಈ ಗದ್ಯಭಾಗವನ್ನು ಕುವೆಂಪುರವರ "ನೆನಪಿನ
ದೋಣಿಯಲ್ಲಿ” ಎಂಬ ಆತ್ಮಕಥೆಯಿಂದ ಆರಿಸಿಕೊಳ್ಳಲಾಗಿದೆ.


ಓದಿ ತಿಳಿಯಿರಿ
ಅನುಚರ- ಹಿಂಬಾಲಕ; ಆಪಾದಮಸ್ತಕ- ಕಾಲಿನಿಂದ ತಲೆಯವರೆಗೆ; ಕಗ್ಗ-ಕೆಲಸಕ್ಕೆ ಬಾರದ;

ಶ್ಲಾಘಿಸು-ಹೊಗಳು; ತೇಜೋವಧೆ-ಅವಮಾನ,; ನಿರಾಶೆ-ಆಶಾಭಂಗ; ಉದಾತ್ತ-ಶ್ರೇಷ್ಠವಾದ; ಕಂದಾಚಾರ-
ಗೊಡ್ಡು ಸಂಪ್ರದಾಯ; ಧೂರ್ತ-ಮೋಸಗಾರ; ಸೃಜನ-ಸೃಷ್ಟಿ; ಖನ್ನ-ಬಳಲಿದ; ಕುಪಿತ-ಕೋಪಗೊಂಡ;
ದ್ಯೋತಕ-ಗುರುತು; ಸುದೈವ-ಅದೃಷ್ಟ ಸುಸಂಧಿ-ಒಳ್ಳೆಯ ಅವಕಾಶ; ಗುನುಗು-ಸಣ್ಣ ಧ್ವನಿ; ಅಧ್ಯಾರೋಪ-
ಊಹಿಸಿ ತಿಳಿದುಕೊಳ್ಳುವುದು; ಸವ್ಯಸಾಚಿ-ಎರಡು ಕೆಲಸವನ್ನು ಒಟ್ಟಿಗೆ ಮಾಡಬಲ್ಲವನು, ನಿಷುಣ; ತಿರೋಹಿತ-
ಮರೆಯಾಗು.
ಗಮನಿಸಿ ತಿಳಿಯಿರಿ
ಜೇಮ್ಸ್‌ ಎಚ್‌ ಕಸಿನ್ಸ್‌ - ಐರ್ಲೆಂಡ್‌ ದೇಶದ ಕವಿ
ಸ್ವದೇಶಿ ಚಳವಳಿ - ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಚಳವಳಿ.
ರವೀಂದನಾಥ ಠಾಕೂರರು - ನೋಬಲ್‌ ಪ್ರಶಸ್ತಿ ವಿಜೇತ ಬಂಗಾಳಿ 'ಲೇಖಕರು


ಮು


ನೊಬೆಲ್‌ ಬಹುಮಾನ - ಜಾಗತಿಕ ಮಟ್ಟದ ಒಂದು ಪ್ರಶಸಿ


pe)


ಸ್ಥಳ ನಿರ್ದೇಶನ - ಜಾಗ ತೋರಿಸುವುದು.


ಅಭ್ಯಾಸ ಚಟುವಟಿಕೆ


ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಕುವೆಂಪುರವರಿಗೆ ತಮ್ಮ ಕವನಗಳನ್ನು ಕಸಿನ್ಸ್‌ರವರಿಗೆ ತೋರಿಸುವಂತೆ ಯಾರು ತಿಳಿಸಿದರು?
ಜೇಮ್ಸ್‌ ಕಸಿನ್ಸ್‌ ಮೈಸೂರಿಗೆ ಏಕೆ ಬಂದಿದ್ದರು?
ಕಸಿನ್ನ್‌ ರವರನ್ನು ಭೇಟಿ ಮಾಡಲು ಹೋದಾಗ ಕುವೆಂಪುರವರ ವೇಷಭೂಷಣ ಹೇಗಿತ್ತು?
ಕಸಿನ್ನ್‌ ರವರಿಂದ ಹಸ್ತಪ್ರತಿಗಳನ್ನು ಹಿಂಪಡೆದ ಕುವೆಂಪು ಯಾವ ಮನಸಿನಿಂದ ಹೊರಬಂದರು?
ಕುವೆಂಪು ಅವರ ಕೃತಿಗಳನ್ನು ಹೆಸರಿಸಿರಿ.

ಪ್ರತಿಯೊಂದು ಪ್ರಶ್ನೆಗೂ ೩-೪ ವಾಕ್ಯಗಳಲ್ಲಿ ಉತ್ತರಿಸಿರಿ.

೧. ಕುವೆಂಪುರವರ ಹಸ್ತಪ್ರತಿಗಳನ್ನು ನೋಡಿದ ಕಸಿನ್ಸ್‌ ಹೇಳಿದ ಮಾತುಗಳಾವುವು?

೨. ಕುವೆಂಪುರವರಿಗೆ ಕನ್ನಡದಲ್ಲಿ ಬರೆಯಲು ಕಾರಣವಾದ ಸಂದರ್ಭವನ್ನು ತಿಳಿಸಿ.


ಸಂದರ್ಭ ಸಹಿತ ವಿವರಿಸಿರಿ.
“ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?'
“ನೀವು ಇಂಗ್ಲೀಷಿನಲ್ಲಿ ಸೃಜನ ಸಾಹಿತ್ಯ ಸೃಷ್ಟಿ ಮಾಡಲಾರಿರಿ.'
"ಅಂದಿನಿಂದ ಕನ್ನಡದಲ್ಲಿ ರಚಿಸುವ ಮನಸ್ಸು ಮಾಡಿದೆ.'


ಭಾಷಾಭ್ಯಾಸ

ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಸಮಾಧಾನ, ಸಾಧ್ಯ ಹಳೆಯ, ವಿವೇಕ, ಅಸಮರ್ಥ, ಹಿಗ್ಗು, ತಿರಸ್ಕಾರ
ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
ಮಿತ್ರ, ಸಮಯ , ಸಮೀಪ
ಕೆಳಗಿನ ಪದಗಳನ್ನು ಬಳಸಿಕೊಂಡು ಸ್ವಂತ ವಾಕ್ಯ ಮಾಡಿರಿ.
ಚಳವಳಿ, ಸ್ವದೇಶಿ, ನಿರಾಶೆ, ಗುನುಗು
ಬಿಡಿಸಿ ಬರೆದು ಸಂಧಿ ಹೆಸರಿಸಿ.
ಸಲಹೆಯಿತ್ತರು, ತಲೆಯೆತ್ತು. ಭವ್ಯವಾಗಿತುು, ಚೀಟಿಯನ್ನು, ತಲೆಯಿಂದ, ಕೈಯಲ್ಲಿ
ಮೊದಲೆರಡು ಪದಗಳಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

ಕುವೆಂಪು : ಕನ್ನಡದ ಕವಿ : ಜೇಮ್ಸ್‌ ಕಸಿನ್ಸ್‌ :

ತೃಪ್ತಿ : ಅತೃಪ್ತಿ : ಸಮಾಧಾನ :


ಕಾಲಕ್ಕೆ : ಚತುರ್ಥಿ ವಿಭಕ್ತಿ : ಪ್ರಯತ್ನವನ್ನು :


: ಮಳೆಗಾಲ :


ವ್ಯಾಕರಣಾಭ್ಯಾಸ


ಅ. ಆದೇಶ ಸಂದಿ:


ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿರಿ.
ತಲೆ + ಕೂದಲು ಇ ತಲೆಗೂದಲು (ಕ ಕಾರಕ್ಕೆ ಗಕಾರಾದೇಶ)
ಕೆಳ 4 ತುಟಿ ಇ ಕೆಳದುಟಿ (ತ ಕಾರಕ್ಕೆ ದಕಾರಾದೇಶ)
ಕಣ್‌ + ಪನಿ - ಕಂಬನಿ (ಪ ಕಾರಕ್ಕೆ ಬಕಾರಾದೇಶ)


ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿ.
ಇದನ್ನು ಕನ್ನಡದ ವ್ಯಂಜನ ಸಂಧಿ ಎಂದು ಕರೆಯುವರು.


ಉತ್ತರ ಪದದ ಮೊದಲ ವ್ಯಂಜನಾಕ್ಷರಗಳಾದ ಕತ, ಪ ಗಳಿಗೆ ಅನುಕ್ರಮವಾಗಿ ಗ ದ, ಬ
ವ್ಯಂಜನಾಕ್ಷರಗಳು ಆದೇಶವಾಗಿ ಬರುತ್ತವೆ.


ಈ ಕೆಳಗಿನ ಪದಗಳನ್ನು ಕೂಡಿಸಿ ಬರೆಯಿರಿ.
ಹುಲಿ + ತೊಗಲು , ಮಳೆ ೬ ಕಾಲ


ರಜೆ ಅರ್ಜಿ


ನಿಮ್ಮ ಅನಾರೋಗ್ಯದ ಕಾರಣ ನೀಡಿ ಎರಡು ದಿನಗಳ ರಜೆ ಕೋರಿ ನಿಮ್ಮ ಮುಖ್ಯ ಶಿಕ್ಷಕರಿಗೆ ರಜೆ
ಅರ್ಜಿ ಬರೆಯಿರಿ.


ಪ್ರಾಯೋಗಿಕ ಚಟುವಟಿಕೆ
ಕುವೆಂಪುರವರ "ನೆನಪಿನ ದೋಣಿ” ಆತ್ಮಕಥೆಯನ್ನು ಓದಿರಿ.
ಪ್ರಸಿದ್ಧ ವ್ಯಕ್ತಿಗಳ ಆತ್ಮಕಥೆಗಳ ಹೆಸರುಗಳನ್ನು ಸಂಗ್ರಹಿಸಿರಿ,


ಪ್ರತಿದಿನ ನಿಮ್ಮ ಕಾರ್ಯಚಟುವಟಿಕೆಗಳ: ದಿನಚರಿ, ಬರೆಯುವುದನ್ನು ಅಭ್ಯಾಸ ಮಾಡಿ.


ಎಲ್ಲಾದರು ಇರು. ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು


ಪದ್ಯಪಾಠ
೯. ಒಂದು ರಾತ್ರಿ


- ಎಸ್‌.ವಿ. ಪರಮೇಶ್ವರಭಟ್ಟ


ಆಶಯ : ಕನ್ನಡ ಸಾಹಿತ್ಯದಲ್ಲಿ ಭಾವರೀತೆ ಒಂದು ಆಧುನಿಕ ಪ್ರಕಾರವಾಗಿದೆ. ಕವಿ ಕಲ್ಪನಾ ಲೋಕದಲ್ಲಿ
ವಿಹಲಿಖದಾದ ವರ್ಣನೆ ಸಾಕಾರಗೊಳ್ಳುತ್ತದೆ. “ಒ೦ದು ರಾತ್ರಿ' ಪದ್ಯದಲ್ಲಿ ಪ್ರಕೃತಿಯ ಸುಂದರ ದೃಶ್ಯವನ್ನು
ಕವಿ ವರ್ಣಿಪಿರುವ ಲೀತಿ ಮಹತ್ವದ್ದಾಗಿದೆ. ಮೋಡವನ್ನೆಂ ತೊಟ್ಟಲಾಗಿ ಕಲ್ಪಿಸಿಕೊಂಡ ಕವಿ ಅದಕ್ಟೆ
ಪೂರಕವಾ೦ ಇರುಆನ ನಿಷರ್ದದ ಸಾಮರಸ್ಯವನ್ನು ಬೆಸೆದಿದ್ದಾರೆ. ದಾಆಯೇ ಜೋದುಳ ಹಾಡುತ್ತಾ
ಹೊಪ ಹುಟ್ಟದಾಣಿ ಹ೦ಬಅಸುವುದನ್ನು ತಮ್ಮದೇ ಶೈಅಯಲ್ಲ ಪ್ರಸ್ತುತಪಡಿಐಿದ್ದಾರೆ. ಈ ಕವನದಲ್ಲಿ
ರಾತ್ರಿಯ ಕಲ್ಪನೆ ಪುಂದರವಾಳಿ ಮೂಡಿ ಬಂದಿದೆ.


ತಿಳಿಮುಗಿಲ ತೊಟ್ಟಿಲಲಿ

ಮಲಗಿದ್ದ ಚಂದಿರನ

ಗಾಳಿ`ಜೋಗುಳ ಹಾಡಿ

ತೂಗುತ್ತಿತ್ತು
ಗರಿಮುದುರಿ ಮಲಗಿದ್ದ
ಹಕ್ಕಿಗೂಡುಗಳಲ್ಲಿ
ಇರುಳು ಹೊಂಗನಸೂಡಿ
ಸಾಗುತ್ತಿತ್ತು


ಮುಗುಳಿರುವ ಹೊದರಿನಲಿ
ನರುಗಂಪಿನುದರದಲಿ
ಜೇನುಗನಸಿನ ಹಾಡು
ಕೇಳುತ್ತಿತ್ತು


ತುಂಬುನೀರಿನ ಹೊಳೆಯೊ

ಳ೦ಬಿಗನ ಕಿರುದೋಣಿ

ಪ್ರಸ್ಥಾನ ಗೀತೆಯನು

ಹೇಳುತಿತು

ನ್‌ ಬರುವ ಮುಂದಿನ ದಿನದ

ನವನವೋದಯಕಾಗಿ
ಪ್ರಕೃತಿ ತಪವಿರುವಂತೆ
ತೋರುತ್ತಿತ್ತು


ಶಾಂತರೀತಿಯೊಳಿರುಳು
ಮೆಲ್ಲಮೆಲ್ಲನೆ ಉರುಳಿ
ನಾಳಿನ ಶುಭೋದಯವ
ಸಾರುತ್ತಿತ್ತ


ಕವಿ ಪರಿಚಯ


ಎಸ್‌.ವಿ. ಪರಮೇಶ್ವರಭಟ್ಟ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರು.
ಮೈಸೂರು ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ
ಸಲ್ಲಿಸಿರುವ ಇವರನ್ನು ಕನ್ನಡದ ಶ್ರೇಷ್ಠ ಕವಿ, ಅನುವಾದಕ, ಸಾಹಿತ್ಯ ಪರಿಚಾರಕರೆಂದು
ಗುರುತಿಸಲಾಗಿದೆ. ಉತ್ತಮ ವಿಮರ್ಶಕರೂ, ಸರಸ ವಾಗ್ಮಿಗಳೂ ಆಗಿದ್ದ ಇವರು
ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವ ಭರ್ತೃಹರಿಯ `ಶತಕತ್ರಯ, ಜಯದೇವನ
ಗೀತಗೋವಿಂದ, ಅಮರಶತಕ, ಹಾಲನ ಗಾಥಾಸಪ್ತಶತಿ, ಭಾಸನ ಹಾಗೂ ಕಾಳಿದಾಸನ
ಕೃತಿಗಳನ್ನೆಲ್ಲ ಭಾಷಾ೦ತರಿಸಿ ಕನ್ನಡಕ್ಕೆ ತ೦ದಿದ್ದಾರೆ. ರಾಜ್ಯ ಮತ್ತು ಕೇ೦ದ್ರ ಸಾಹಿತ್ಯ
ಅಕ್ಕಾಡಮಿ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಇವರಿಗೆ
ಲಭಿಸಿದೆ.


ಪ್ರಸ್ತುತ ಕವನವನ್ನು ಅವರ "ರಾಗಿಣಿ' ಸಂಕಲನದಿಂದ ಆರಿಸಿಕೊಳ್ಳಲಾಗಿದೆ.


ಓದಿ ತಿಳಿಯಿರಿ
ಮುಗಿಲು-ಮೋಡ; ಮುಗುಳು-ಮೊಗ್ಗು ; ಹೊದರು-ಪೊದರು; ನರುಗಂಪು-ಪರಿಮಳ; ಇರುಳು-
ರಾತ್ರಿ; ಉದರ-ಹೊಟ್ಟೆ; ಅಂಬಿಗ-ದೋಣಿ ನಡೆಸುವವ;
ಗಮನಿಸಿ ತಿಳಿಯಿರಿ
ಜೋಗುಳ- ಮಕ್ಕಳನ್ನು ಮಲಗಿಸುವಾಗ ಹಾಡುವ ಹಾಡು, ಲಾಲಿ ಹಾಡು
ಪ್ರಸ್ಥಾನಗೀತೆ - ಸಂಚಾರದ ಸಂದರ್ಭದಲ್ಲಿ ಹಾಡುವ ಹಾಡು
ನವೋದಯ - ಹೊಸ ಹುಟ್ಟು, ಒಂದು ಸಾಹಿತ್ಯ ಸಂಪ್ರದಾಯ
ಶುಭೋದಯ - ಶುಭ ಮುಂಜಾನೆ


ಅಭ್ಯಾಸ ಚಟುವಟಿಕೆ
ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
ಚಂದಿರ ಮಲಗಲು ಏನನ್ನು ತೊಟ್ಟಿಲನ್ನಾಗಿ ಮಾಡಿಕೊಂಡಿದ್ದನು?
ಯಾರು ಚಂದಿರನನ್ನು ಜೋಗುಳ ಹಾಡಿ ತೂಗುತ್ತಿದ್ದರು?
ಕವಿ ಕಂಡ ಇರುಳು ಹೇಗೆ ಸಾಗುತ್ತಿತ್ತು?
ಯಾವುದು ಪ್ರಸ್ಥಾನ ಗೀತೆಯನ್ನು ಹೇಳುತ್ತಿತ್ತು?
ಪ್ರಕೃತಿ ಯಾವುದಕ್ಕಾಗಿ ತಪಸ್ಸು ಮಾಡುತ್ತಿತ್ತು?
ಇರುಳು ಹೇಗೆ ಉರುಳುತ್ತಿತ್ತು?
ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು/ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
ಚಂದಿರನ ಮಲಗುವಿಕೆ, ಇರುಳು ಸಾಗುವ ದೃಶ್ಯವನ್ನು ಕವಿ ಎಸ್‌.ವಿ. ಪರಮೇಶ್ಚರಭಟ್ಟರು
ಹೇಗೆ ವರ್ಣಿಸಿದ್ದಾರೆ?
ಇರುಳಿನಲ್ಲಿ ಕವಿ ಹೇಳಿದ ಜೇನುಗನಸಿನ ಹಾಡು ಮತ್ತು ಅ೦ಬಿಗನ ಕಿರುದೋಣಿಯ ಪ್ರಸ್ಥಾನ
ಗೀತೆ ಕುರಿತು ತಿಳಿಸಿರಿ.
ಪ್ರಕೃತಿಯ ತಪ ಮತ್ತು ಶುಭೋದಯಕ್ಕಾಗಿ ಇರುಳು ಉರುಳುವಿಕೆ ಕುರಿತು ಕವಿ ಹೇಗೆ ಕಲ್ಪನೆ
ನೀಡಿದ್ದಾರೆ ವರ್ಣಿಸಿರಿ.
ಈ ಕೆಳಗಿನ ಪ್ರಶ್ನೆಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಕವಿ ಕಂಡ ಒಂದು ರಾತ್ರಿಯ ದೃಶ್ಯವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.


ಈ ವಾಕ್ಯಗಳಲ್ಲಿ ಬಿಟ್ಟು ಹೋಗಿರುವ ಸ್ಥಳವನ್ನು ಕೆಳಗೆ ನೀಡಿರುವ ಪದಗಳಿಂದ ಸೂಕ್ತವಾಗಿ ತುಂಬಿರಿ.


೧. ಚಂದಿರನನ್ನು ಜೋಗುಳ, ಹಾಡಿ ತೂಗುತ್ತಿದ್ದುದು
ಅ) ಗಾಳಿ ಬ)” ತಾಯಿ ಕ) ವಾಹನ ಡ) ಮೊಲ


ಹಕ್ಕಿಗಳು ಗೂಡುಗಳಲ್ಲಿ ಮುದುರಿ ಮಲಗಿದ್ದವು.
ಅ) ಕಾಲು ಬ) ಗರಿ ಕ) ಹುಲ್ಲು ಡ) ಎಲೆ
ಅಂಬಿಗನ ಕಿರುದೋಣಿ ಗೀತೆ ಹೇಳುತ್ತಿತ್ತು.

ಅ) ಪ್ರಸ್ಥಾನ ಬ) ಜನಪದ ಕ) ಭಾವಗೀತೆ ಡ)
ನವನವೋದಯಕ್ಕೆ ತಪವಿರುವಂತೆ ತೋರುತ್ತಿತ್ತು.

ಅ) ನೆಲ ಬ) ಗಿಡ ಕ) ಪ್ರಕೃತಿ ಡ)
ಇರುಳು ರೀತಿಯಲ್ಲಿ ಉರುಳುತ್ತಿತ್ತು.

ಅ) ಶಾಂತ ಬ) ಕ್ರೋಧ ಕ) ಹಾಸ್ಯ ಡ)


ಉ. ಈ ಕೆಳಗೆ ನೀಡಲಾದ "ಅ' ಪಟ್ಟಿಯಲ್ಲಿನ ಪದಗಳಿಗೆ “ಬ' ಪಟ್ಟಿಯಲ್ಲಿನ ಪದಗಳನ್ನು ಸರಿ ಹೊಂದುವಂತೆ ಜ್ಞ
ಹೊಂದಿಸಿ ಬರೆಯಿರಿ.


ಚಂದಿರ ಅ) ಹೊಂಗನಸು
ಹಕ್ಕಿಗೂಡು ಬ) ತಪ
ಕಿರುದೋಣಿ ಕ) ಪ್ರಸ್ಥಾನಗೀತೆ
ಪ್ರಕೃತಿ ಡ) ಜೋಗುಳ
ಇ) ಉರುಳು


ವ್ಯಾಕರಣಾಭ್ಯಾಸ


ದ್ವಿರುಕ್ತಿ ಕ
ಅವು ದೊಡ್ಡದೊಡ್ಡ ಗ೦ಥಗಳು.
ಅವರು ಓಡಿಓಡಿ ದಣಿದರು.
ಈಗೀಗ ಅವರಿಗೆ ವ್ಯಾಪಾರ ಆಗುತ್ತಿದೆ.
ಬೇಗಬೇಗ ನಡೆಯಿರಿ.


ಮೇಲಿನ ಉದಾಹರಣೆಗಳಲ್ಲಿ ಅಡಿಗೆರೆ ಎಳೆದಿರುವ; ಪದಗಳೆಲ್ಲವನ್ನೂ ಎರಡೆರಡು ಬಾರಿ
ಪ್ರಯೋಗಿಸಲಾಗಿದೆ. ಹೀಗೆ ಒಂದು ಶಬ್ದವನ್ನು.ಎರಡೆರಡು 'ಬಾರಿ ಉಚ್ಚರಿಸುವುದನ್ನು ದ್ವಿರುಕ್ತಿ ಎನ್ನುತ್ತಾರೆ.


ಮು


ದ್ವಿರುಕ್ತಿಗಳ ಪ್ರಯೋಗದಿಂದ ಕೇಳುವ ಪದ. ಮನಸ್ಸಿನ ಮೇಲೆ ಪರಿಣಾಮವುಂಟಾಗುತ್ತದೆ. ಭಾವನೆಗಳ


ಅಭಿವ್ಯಕ್ತಿಗೆ ಪುಷ್ಟಿ ದೊರೆಯುತ್ತದೆ.
ನಿಲ್ಲುನಿಲ್ಲು, ಹೆಚ್ಚುಹೆಚ್ಚು. ಬನ್ನಿಬನ್ನಿ.ಬೇಡಬೇಡ, ಓಡುಓಡು, ಬೇಗಬೇಗ, ನಡೆನಡೆ
ಇತ್ಯಾದಿಗಳು ದ್ವಿರುಕ್ತಿಗಳಿಗೆ ಉದಾಹರಣೆಗಳಾಗಿರುತ್ತವೆ.
ಪ್ರಾಯೋಗಿಕ ಚಟುವಟಿಕೆ
ಈ ಕೆಳಗಿನ ಪದಗಳನ್ನು ನಿಮ್ಮ ತರಗತಿಯಲ್ಲಿ ಗಟ್ಟಿಯಾದ ದ್ವನಿಯಲ್ಲಿ ಹೇಳಿರಿ.
ತಿಳಿಮುಗಿಲ ತೊಟ್ಟಿಲು, ಗರಿಮುದುರಿ ಮಲಗು, ಮುಗುಳಿರುವ ಹೊದರು, ತುಂಬು ನೀರಿನ ಹೊಳೆ
ಈ ಪದ್ಯದ ೫ ಮತ್ತು ೬ ನೆಯ ನುಡಿಗಳನ್ನು ಕಂಠಪಾಠ ಮಾಡಿರಿ.


ಬೆಳದಿಂಗಳ ಊಟದ ಅನುಭವ ಕುರಿತು ನಿಮ್ಮ |
ಸಹಪಾಠಿಗಳ ಜೊತೆ ಅಭಿಪ್ರಾಯ ಹಂಚಿಕೊಳ್ಳಿರಿ.


ತುಂಬು ನೀರಿನ ಹೊಳೆಯಲ್ಲಿ ಅಂಬಿಗನ ಕಿರುದೋಣಿ
ಸಾಗುತ್ತಿರುವ ಚಿತ್ರ ಆಧರಿಸಿ ಐದು ವಾಕ್ಯ
ಬರೆಯಿರಿ.


ನಿಸರ್ಗ ವರ್ಣನೆಯ ಗೀತೆಗಳನ್ನು ಸಂ


ಪೂರಕ ಓದು
ಚಂದ್ರ -ಅಂಬಿಕಾತನಯದತ್ತ


ಬಿದಿಗೆ ಚಂದ್ರ ಬಂದ ನೋಡು
ದೀಪ ಹಚ್ಚಿದಂತೆ ಜೋಡು
ಯಾರ ಮನೆಯು ಅಲ್ಲಿ ಇಹುದೊ
ಯಾರು ಬಲ್ಲರು?


ಅಗೋ ಚವತಿ ಚಂದ್ರ ನೋಡು
ಮೂಡಿದಂತೆ ಎರಡು ಕೋಡು
ಮೃಗವು ಎಲ್ಲಿ ಇಹುದೊ ಏನೊ
ನಾನು ಕಾಣೆನು

ಇಂಥ ಚಿತ್ರ ಬರೆದನಿಲ್ಲಿ
ಯಾವ ಜಾಣನು?


ಅಷ್ಟಮಿ ಚಂದಿರನು ಬಂದ
ಅರ್ಧ ಬಿಟ್ಟು ಅರ್ಧ ತಿಂದ
ಉಂಡಿ ಚೆಲ್ಲಿ ಕೊಟ್ಟನಿಲ್ಲಿ
ಹುಡುಗನಾವನು?

ಕಾಣೆ ಅತ್ತ ಇತ್ತ ಎತ್ತು
ಅವನ ಠಾವನು.


ಬಂದನು ಹುಣ್ಣಿಮೆಯ ಚಂದ್ರ
ಬೆಳದಿಂಗಳು ನಿಬಿಡ ಸಾಂದ್ರ
ಅಲ್ಲ ಅಲ್ಲ ಮುಗಿಲು ತುಂಬ
ಇಹುದು ಮಜ್ಜಿಗೆ

ಬೆಣ್ಣೆ ಮುದ್ದೆ ಮೇಲೆಯೊಂದು
ಹೇಳು ಅಜ್ಜಿಗೆ.


3%


ಗದ್ಯಪಾಠ
೧೦. ಸ೦ತಮೇರಿ ದ್ವೀಪ


ಆಶಯ: ಸೌರವ್ಯೂಹದಲ್ಲಿ ಭೂಮಿಯು ಒಂದು ಸುಂದರ ಗ್ರಹವಾಗಿದೆ. ಈ ಭೂಮಿ ನೂರಾರು ನದಿಗಳು,
ಸಾಗರಗಳು, ದ್ವೀಪಗಳು, ಬೆಟ್ಟಗುಡ್ಡಗಳು, ಕಾಡುಗಳು, ಪರ್ವತಗಳು, ಅಗ್ನಿಪರ್ವತಗಳು ಮುಂತಾದವುಗಳಿಂದ
ಕೂಡಿದೆ. ಇಲ್ಲೆಲ್ಲ ಪ್ರಕೃತಿ ನಿರ್ಮಿಸಿರುವ ಅನೇಕ ವಿಸ್ಮಯಗಳನ್ನು ನೋಡಬಹುದು. ಕರ್ನಾಟಕದಲ್ಲಿ ಜಗತ್ತಿನಲ್ಲೇ
ವಿಶಿಷ್ಟವಾದ ಲಕ್ಷಣಗಳನ್ನು ಹೊಂದಿರುವ ಭೂವಿಸ್ಥಯಗಳಿವೆ. ಅವುಗಳಲ್ಲಿ ಒಂದು ಸಂತಮೇರಿ ದ್ವೀಪದ ಕಂಬ
ರಚನೆಗಳು. ಇಂತಹ ಭೂವೈಜ್ಞಾನಿಕ ಸ್ಥಾರಕಗಳನ್ನು ರಕ್ಷಿಸಬೇಕು.


ಪಾನಾಂ


ಬೇಸಿಗೆ ರಜೆ ಪ್ರಾರಂಭವಾಗಿತ್ತು ರವಿ:ಮತ್ತು ಅವನ ಗೆಳೆಯರು ಉಡುಪಿಗೆ ಹೋಗುವ ತಯಾರಿ
ನಡೆಸಿದ್ದರು. ರವಿಯ ಚಿಕ್ಕಪ್ಪನವರು ಉಡುಪಿಯಲ್ಲಿದ್ದುದರಿ೦ದ ಅಲ್ಲಿಗೆ ಹೋಗುವುದು, ಮರುದಿನ ಅಲ್ಲಿಂದ
ಮಲ್ಪೆ ಸಮುದ್ರ ತೀರಕ್ಕೆ ಮೂರು ಕಿಲೋಮೀಟರ್‌ ದೂರದಲ್ಲಿರುವ ಸ೦ತಮೇರಿ ದ್ವೀಪಕ್ಕೆ ಹೋಗುವುದೆಂದು
ನಿರ್ಧರಿಸಲಾಗಿತ್ತು.


ಶಿವಮೊಗ್ಗೆಯಿಂದ ಹೊರಟು ರವಿ, ಅವನ ತಂಗಿ ರಶ್ಮಿ ಮತ್ತು ಸ್ನೇಹಿತರಾದ ಜಾನ್‌, ತೇಜು,
ಸಲೀಂ ಸಂಜೆಯ ಹೊತ್ತಿಗೆ ಉಡುಪಿ ತಲುಪಿದರು. ಎಲ್ಲರಿಗೂ ಬೆಳಗಾದೊಡನೆಯೇ ದ್ವೀಪಕ್ಕೆ ಹೋಗುವ
ಕಾತರ. ರವಿಯ ಚಿಕ್ಕಪ್ಪ ಮಕ್ಕಳನ್ನೆಲ್ಲಾ ಕರೆದುಕೊಂಡು ಮಲ್ಪೆ ಸಮುದ್ರ ತೀರಕ್ಕೆ ಬಂದರು. ಇದೇ ಮೊದಲ
ಬಾರಿ ಸಮುದ್ರ ನೋಡುತ್ತಿದ್ದ ತೇಜೂನ ಸ೦ತೋಷಕ್ಕೆ ಪಾರವೇ ಇರಲಿಲ್ಲ. ಸ್ವಲ್ಪ ಹೊತ್ತು ಸಮುದ್ರ ತೀರದಲ್ಲಿ
ಆಟವಾಡಿದ ಮಕ್ಕಳಲ್ಲ ದ್ವೀಪದ ಕಡೆಗೆ ಹೋಗುವ ದೋಣಿಗಳತ್ತ ನಡೆದರು.


“ಎಲ್ಲಿ ನೋಡಿದರೂ ನೀರೇ ನೀರು, ಎಷ್ಟು ಅದ್ಭುತ!' -ಜಾನ್‌ ಅಚ್ಚರಿಯಿಂದ ನೋಡುತ್ತಾ ಹೇಳಿದ.
“ಇಲ್ಲಿ ನೋಡು ರಶ್ಮಿ ದೋಣಿ ತಯಾರಾಗಿ ನಿಂತಿದೆ. ತೇಜು, ರವಿ, ಜಾನ್‌ ಎಲ್ಲಾ ದಡದಡ ಓಡುತ್ತಾ
ದೋಣಿಯ ಹತ್ತಿರ ಬಂದರು. ರವಿಯ ಚಿಕ್ಕಪ್ಪ ನಿಧಾನವಾಗಿ ಮಕ್ಕಳನ್ನೆಲ್ಲಾ ದೋಣಿಗೆ ಹತ್ತಿಸಿ ತಾವೂ
ಹತ್ತಿದರು. ಸುಂದರವಾದ ಸಮುದ್ರವನ್ನೇ ನೋಡುತ್ತಾ ಮಕ್ಕಳೆಲ್ಲಾ ಮಾತೇ ಮರೆತವರಂತೆ ಕುಳಿತಿದ್ದರು.


ಭೂಭಾಗ ಕಾಣುತ್ತಿದ್ದಂತೆಯೇ ಸಲೀ೦ ಜೋರಾಗಿ ಕೂಗಿದ. “ಅಲ್ಲಿ ನೋಡಿ ದ್ವೀಪ ಕಾಣುತ್ತಿದೆ. ಆ ಕಡೆ
ಎಷ್ಟೊಂದು ತೆಂಗಿನ ಮರಗಳಿವೆ.' ಹೌದು ಹೌದು, ಅದಕ್ಕೇ ಆ ದ್ವೀಪಕ್ಕೆ ಕೋಕನಟ್‌ ಖಲೆಂಡ್‌ ಎನ್ನುತ್ತಾರೆ,
ಅಲ್ಲವೇ ಚಿಕ್ಕಪ್ಪ? -ರಶ್ಮಿ ಕೇಳಿದಳು. "ಸರಿಯಾಗಿ ಹೇಳಿದೆ. ಈ ದ್ವೀಪ ದೊಡ್ಡದು. ದಕ್ಷಿಣಕ್ಕೆ ಇನ್ನೊಂದು
ಪುಟ್ಟ ದ್ವೀಪವಿದೆ. ಅಲ್ಲಿ ನೌಕೆಗಳಿಗೆ ದಾರಿ ತೋರಿಸುವ ದೀಪದ ಮನೆ ಇದೆ. ಇಲ್ಲಿರುವ ನಾಲ್ಕು ದ್ವೀಪಗಳನ್ನು
ಸೇರಿಸಿ ಸಂತ ಮೇರಿ ದ್ವೀಪ ಎನ್ನುತ್ತಾರೆ.' ಚಿಕ್ಕಪ್ಪ ವಿವರಿಸಿದರು.


“ಇದಕ್ಕೆ ಸಂತಮೇರಿ ದ್ವೀಪ ಎಂದು ಏಕೆ ಹೆಸರು ಬಂತು?'-ಸಲೀಂ ಪ್ರಶ್ನಿಸಿದ. “ಮಕ್ಕಳೇ ನೀವೆಲ್ಲಾ
ಭಾರತದ ಅನ್ವೇಷಣೆಗೆ ಬಂದ ವಾಸ್ಕೋ-ಡ-ಗಾಮನ ಹೆಸರು ಕೇಳಿದ್ದೀರಲ್ಲವೇ? ಸುಮಾರು ೧೪೯೮ರಲ್ಲಿ
ಅವನು ಮೊದಲು ಈ ಭಾಗಕ್ಕೆ ಬಂದಾಗ ಬಹಳ ಸಂತೋಷಪಟ್ಟು, ದೇವತೆ ಸ೦ತಮೇರಿಯ ನೆನಪಿಗಾಗಿ
ಈ ದ್ವೀಪಕ್ಕೆ ಸಂತಮೇರಿ ದ್ವೀಪ ಎಂದು ಹೆಸರಿಟ್ಟ' ಚಿಕ್ಕಪ್ಪನ ಮಾತು ಮುಗಿಯುವಷ್ಟರಲ್ಲಿ ದೋಣಿ ದ್ವೀಪದ
ದಡಕ್ಕೆ ಬಂತು. ಮಕ್ಕಳೆಲ್ಲ ಒಬ್ಬೊಬ್ಬರಾಗಿ ದೋಣಿ ಇಳಿದು ಮರಳತೀರವನ್ನು ಸೇರಿದರು. “ಅಬ್ಬಾ ಎಷ್ಟು
ಸುಂದರವಾಗಿದೆ!. ಸುತ್ತಲೂ ಸಮುದ್ರದ ನೀರು, ನಡುವೆ ಭೂಮಿ. ರಶ್ಮಿ ಆಶ್ಚರ್ಯದಿಂದ ಕಣ್ಣರಳಿಸಿದಳು.


ರವಿ, ಜಾನ್‌, ತೇಜು, . .ಎಲ್ಲರೂ ನನ್ನ ಜೊತೆ ಬನ್ನಿ. ಇಲ್ಲಿರುವ ನಿಜವಾದ ಅದ್ಭುತಗಳೆಂದರೆ
ಇಲ್ಲಿನ ಕಂಬ ರಚನೆಗಳು. ಅವು ಶಿಲ್ಲಿಯೊಬ್ಬ ಸುಂದರವಾಗಿ ಕೆತ್ತಿರುವನೇನೋ ಎನ್ನುವಂತೆ ಕಾಣುತ್ತವೆ.
ಎಲ್ಲವನ್ನೂ ನಿಧಾನವಾಗಿ ನೋಡೋಣ. ಚಿಕ್ಕಪ್ಪ ಮಕ್ಕಳನ್ನು ಕಂಬ ರಚನೆಗಳತ್ತ ಕರೆದುಕೊಂಡು ಹೋದರು.


"ಅರೇ, ಇವು ಎಷ್ಟು ಸುಂದರವಾಗಿವೆ! ಇದು ಹೇಗಾಯಿತು?” ತೇಜುವಿನ ಪ್ರಶ್ನೆ ತೂರಿಬಂತು.
ಭೂವೈಜ್ಞಾನಿಕವಾಗಿ ಇವು ಬಹಳ ಮಹತ್ವ ಪಡೆದಿರುವ ರಚನೆಗಳು. ಮಕ್ಕಳೇ ನಿಮಗೆಲ್ಲಾ ಜ್ಞಾಲಾಮುಖಿಗಳ


ಬಗೆಗೆ ಗೊತ್ತಿದೆಯಲ್ಲವೆ? ಚಿಕ್ಕಪ್ಪ ಮಕ್ಕಳ ಕಡೆ) ನೋಡುತ್ತಾ ಕೇಳಿದರು. "ಅದೇ ನಮ್ಮ ಭೂಗೋಲದ
ಶಿಕ್ಷಕರು ಹೇಳಿದ್ದರಲ್ಲಾ ಬೆಂಕಿಯನ್ನು ಉಗುಳುವ ಪರ್ವತಗಳು, ಅದೇ ತಾನೇ?'-ಸಲೀಂ ಕೇಳಿದ. “ಸರಿಯಾಗಿ
ಹೇಳಿದೆ. ಚಿಕ್ಕಪ್ಪ ಮುಂದುವರಿಸಿದರು. “ಸುಮಾರು'ಐದಾರು ಕೋಟಿ ವರ್ಷಗಳ ಹಿಂದೆ ಭಾರತದ ದಕ್ಷಿಣ
ಭಾಗದಲ್ಲಿ ಜ್ಞಾಲಾಮುಖಿಗಳ ಸರಣಿಯೇ ಉಂಟಾಗಿರಬಹುದು. ಆಗ ಹರಿದ ಶಿಲಾರಸ ಗಟ್ಟಿಯಾಗಿ ದಖ್ಬುನ್‌
ಪ್ರಸ್ಥಭೂಮಿ ಆಯಿತು. ಅದೇ ಸಮಯದಲ್ಲಿ ಸಂತಮೇರಿ ದ್ವೀಪಗಳೂ ರೂಪುಗೊಂಡಿರಬಹುದು ಎಂಬುದು
ವಿಜ್ಞಾನಿಗಳ ಅಭಿಪ್ರಾಯ.'-ಚಿಕ್ಕಪ್ಪ ಮಕ್ಕಳೂಂದಿಗೆ ಮುಂದೆಹೊರಟರು.


"ಜ್ಞಾಲಾಮುಖಿಗಳಿಂದ ಹರಿದುಬಂದ ಶಿಲಾರಸವು ಗಟ್ಟಿಯಾಗಿ ಸಮತಟ್ಟಾಗದೆ ಕಂಬಗಳ ಹಾಗೆ
ಹೇಗಾದವು?'- ರವಿ ಕುತೂಹಲದಿಂದ ಕೇಳಿದ.” ಹೇಳುತ್ತೇನೆ ಆತುರ ಬೇಡ. ಮಕ್ಕಳೇ ನೀವು ಬೇಸಿಗೆಯಲ್ಲಿ
ಕರೆಯು ಒಣಗಿ, ತಳದ ಜೇಡಿಮಣ್ಣು ಬಿಸಿಲಿಗೆ ಬಿರುಕು ಬಿಟ್ಟಿದ್ದನ್ನು ನೋಡಿರಬಹುದು. "ಹಾಂ, ನಾನು
ನೋಡಿದ್ದೇನೆ. ಕೆರೆಯ ಅ೦ಗಳವೆಲ್ಲಾ ಆಟದ ಮೈದಾನವಾಗಿರುತ್ತದೆ” -ತೇಜು ದನಿಗೂಡಿಸಿದ. “ಅದೇ
ರೀತಿ ಶಿಲಾರಸ ಕೂಡ ಕ್ರಮೇಣ ನಿಧಾನವಾಗಿ ಹರಿದು ಕ್ರಮೇಣ ತಣ್ಣಗಾಗಲು ಪ್ರಾರಂಭಿಸುತ್ತದೆ. ಆದರೆ
ಅದು ತಣ್ಣಗಾಗುವ ಮೊದಲೇ ಲಂಬ ದಿಕ್ಕಿನಲ್ಲಿ ಸೆಳೆತ ಉಂಟಾದರೆ ಕಂಬ ರಚನೆಗಳಾಗಿ ಗಟ್ಟಿಯಾಗುತ್ತದೆ.
ಇಲ್ಲಿ ನೋಡಿ, ಹೇಗೆ ನೇರವಾಗಿ ನಿಂತ ಈ ಶಿಲೆಗಳು ಕಂಬಗಳ ಹಾಗೆ ಇವೆ” ಹೇಳುತ್ತಾ ಚಿಕ್ಕಪ್ಪ ಮುಂದೆ
ಹೆಜ್ಜೆ ಹಾಕಿದರು.


“ಅರೇ ರವಿ, . . ಇಲ್ಲಿ ಬಾ, . .ನೋಡು ಈ ಶಿಲೆಗಳು ಹೇಗಿವೆ? ತರಕಾರಿ ಮಾರುವ ನರಸಪ್ಪ
ಬಳಿ ಇರುವ ತೂಕದ ಬಟ್ಟುಗಳನ್ನು ಒಂದರ ಮೇಲೊಂದು ಜೋಡಿಸಿದಂತೆ ಕಾಣುತ್ತದೆ.” ಎಲ್ಲರ ಗಮನವನ್ನೂ


ಸೆಳೆದ ಜಾನ್‌. “ಹೌದು, ಇದು ಹೇಗಾಗಿರಬಹುದು? -ರಶ್ಮಿಯ ಪ್ರಶ್ನೆ. “ಶಿಲೆ ಗಟ್ಟಿಯಾದ ಮೇಲೆ ಕಂಬಕ್ಕೆ
ಅಡ್ಡಲಾಗಿ ಬಿರುಕುಗಳು ಮೂಡಿದಾಗ ಅದು ತೂಕದ ಬಟ್ಟುಗಳನ್ನು ಒಂದರ ಮೇಲೊಂದನ್ನು ಪೇರಿಸಿದಂತೆ
ಕಾಣುತ್ತದೆ. ಹತ್ತಿರ ಬಂದು ನೋಡಿ.' ಚಿಕ್ಕಪ್ಪ ಮಕ್ಕಳನ್ನೆಲ್ಲಾ ಕರೆದರು. “ಅಬ್ಬಾ, ಇದು ಆಶ್ಚರ್ಯವೇ ಸರಿ,
ಚಿಕ್ಕಪ್ಪ ಇಂತಹ ಸಂಭ ರಚನೆ ಬೇರೆಲ್ಲಿಯಾದರೂ ಇದೆಯಾ? -ತೇಜು ಕೇಳಿದೆ. ಹಾ, ಹೌದು ಈ ರೀತಿಯ
ರಚನೆಗಳು ಬೇರೆ. ಬೇರೆ ಕಡೆ ಇವೆ ಎಂದು ಹೇಳುತ್ತಾ ಚಿಕ್ಕಪ್ಪ ಮುಂದೆ ನಡೆದರು.


ಎಲ್ಲರೂ ಮರಳ ಮೇಲೆ ಕುಳಿತರು. ಮಕ್ಕಳು ಮನೆಯಿಂದ ತಂದಿದ್ದ ತಿಂಡಿ ಡಬ್ಬಿಗಳನ್ನು ತೆಗೆದು,
ಹಂಚಿಕೊಂಡು ತಿನ್ನತೊಡಗಿದರು. ರಶ್ಮಿಯ ಕಣ್ಣು ಆ ಚಿತ್ತಾಕರ್ಷಕ ಶಿಲಾರಚನೆಗಳ ಮೇಲೇ ಇತ್ತು. ಚಿಕ್ಕಪ್ಪ
ಈ ಕಲ್ಲುಗಳನ್ನು ಕಟ್ಟಡ ಕಟ್ಟಲು ಉಪಯೋಗಿಸುತ್ತಾರೆಯೆ? - ರವಿ ಕೇಳಿದ. ನಮ್ಮ ದೇಶದಲ್ಲಿಯೇ
ಮುಂಬೈನ ಅಂಧೇರಿಯಲ್ಲಿ ಇಂಥ ಕಂಬ ರಚನೆಯ ಶಿಲೆಗಳು ಸಾಕಷ್ಟಿದ್ದವು. ಅದರ ಮಹತ್ವ ತಿಳಿಯದೆ
ಜನರು ಅವುಗಳನ್ನು ಕಟ್ಟಡಕ್ಕೆ ಬಳಸಿದ್ದರಿಂದ ಈಗ ಅವು ಅಲ್ಲಿದ್ದವು ಎಂಬ ಗುರುತೂ ಇಲ್ಲ. ಪ್ರಕೃತಿ
ನಿರ್ಮಿತ ಇಂತಹ ಶಿಲ್ಪಗಳನ್ನು ಹಾಳು ಮಾಡಬಾರದು. ಚಿಕ್ಕಪ್ಪ ಬೇಸರದಿಂದ ಹೇಳಿದರು. "ಸರ್ಕಾರ
ಇವುಗಳನ್ನು ರಕ್ಷಿಸಲು ಏನೂ ಮಾಡುತ್ತಿಲ್ಲವೇ? - ಸಲೀಂ ಕೇಳಿದ. “ಯಾಕಿಲ್ಲ ಸರ್ಕಾರ ಇದನ್ನು ರಾಷ್ಟೀಯ
ಸ್ಮಾರಕವೆಂದು ೧೯೭೮ರಲ್ಲಿಯೇ ಘೋಷಿಸಿ ಸಂರಕ್ಷಿಸುತ್ತಿದೆ. ಸರ್ಕಾರದ ಜೊತೆ ನಾವೂ ಇಂತಹವನ್ನು
ರಕ್ಷಿಸಲು ಮುಂದೆ ಬರಬೇಕು. ಚಿಕ್ಕಪ್ಪ ವಿವರವಾಗಿ "ಹೇಳಿದರು.


ತಿಂಡಿ ತಿಂದು, ಮನದಣಿಯ ಆಟವಾಡಿದ ಮಕ್ಕಳು ಮರಳಿ ಉಡುಪಿಗೆ ಬಂದಾಗ ರಾತ್ರಿಯಾಗಿತ್ತು.
ಬೆರಗು ಮೂಡಿಸುವ ಶಿಲಾರಚನೆಗಳು ಹಾಗು ಸುಂದರ ಸಂತಮೇರಿ ದ್ವೀಪದ ಸವಿ ನೆನಪಿನೊಂದಿಗೆ
ಮುಂದಿನ ರಜಾ ದಿನಗಳಲ್ಲಿ ಎಲ್ಲಿಗೆ ಪ್ರವಾಸ ಮಾಡೋಣ ಎ೦ದು ಚರ್ಚಿಸುತ್ತಿದ್ದರು.


ಒದಿ ತಿಳಿಯಿರಿ


ದ್ವೀಪ- ನೀರಿನಿಂದ ಸುತ್ತುವರಿದ ಭೂಭಾಗ. ಅನ್ವೇಷಣೆ- ಹುಡುಕುವುದು. ಕಾತುರ- ಆತುರ, ಉತ್ಸುಕತೆ;
ವಿಸ್ಮಯ- ಆಶ್ಚರ್ಯ, ಅಚ್ಚರಿ; ಬಿರುಕು-ಬಒಹಕು; ನೌಕೆ- ಹಡಗು, ನಾವೆ; ಹೇರಳ- ಸಾಕಷ್ಟು. ಬಹಳ;
ಪೇರಿಸು- ಒಂದರ ಮೇಲೊಂದು, ಜೋಡಿಸು.


ಗಮನಿಸಿ ತಿಳಿಯಿರಿ


ಚಿತ್ತಾಕರ್ಷಕ- ಮನಸ್ಸು ಸೆಳೆಯುವಂತಹ; ಶಿಲ್ಪಿ- ಕಲ್ಲಿನಲ್ಲಿ ವಿಗ್ರಹ ಕೆತ್ತುವವನು; ಜ್ವಾಲಾಮುಖಿ- ಬೆಂಕಿಯನ್ನು
ಉಗುಳುವ ಪರ್ವತ; ಶಿಲಾರಸ- ಕಲ್ಲಿನ ರಸ; ತೂಕದ ಬಟ್ಟುಗಳು- ತೂಕ ಮಾಡಲು ಬಳಸುವ ಸಾಧನಗಳು;
ಸ್ಮಾರಕ- ಪ್ರಸಿದ್ಧ ವ್ಯಕ್ತಿಗಳ, ಸ್ಥಳಗಳ ನೆನಪಿಗಾಗಿ ನಿರ್ಮಿಸಿದ್ದು; ದಖ್ಬನ್‌ ಪ್ರಸ್ಥಭೂಮಿ-ಭಾರತದ
ದಕ್ಷಿಣ ಭಾಗ.


ಅಭ್ಯಾಸ ಚಟುವಟಿಕೆಗಳು
ಅ. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಮಕ್ಕಳೆಲ್ಲಾ ಎಲ್ಲಿಗೆ ಪ್ರವಾಸಕ್ಕೆ ಹೋದರು?
ಕ ಜ್ಞಾಲಾಮುಖಿ ಎಂದರೇನು?


ಮುಂಬೈನ ಯಾವ ಪ್ರದೇಶದಲ್ಲಿ ಕಂಬರಚನೆಯ ಶಿಲೆಗಳು ಇದ್ದವು?
ಸರ್ಕಾರವು ಸಂತಮೇರಿ ದ್ವೀಪವನ್ನು ಏನೆಂದು ಘೋಷಣೆ ಮಾಡಿದೆ?

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
ಸಂತಮೇರಿ ದ್ವೀಪಕ್ಕೆ ಆ ಹೆಸರು ಬರಲು ಕಾರಣವೇನು?
ದಖ್ಬುನ್‌ ಪ್ರಸ್ಥಭೂಮಿ ಹೇಗೆ ರೂಪುಗೊಂಡಿತು?
ಶಿಲಾ ಕಂಬ ರಚನೆಗಳಾದದ್ದು ಹೇಗೆ?
ಸರ್ಕಾರ ಶಿಲರಚನೆಗಳ ಸಂರಕ್ಷಣೆಗೆ ಯಾವ ಕ್ರಮಗಳನ್ನು ಕೈಗೂಂಡಿದೆ?


ಈ ಕೆಳಗಿನ ಬಿಟ್ಟ ಸ್ಥಳಗಳಲ್ಲಿ ಸರಿಯದ ಉತ್ತರವನ್ನು ಆರಿಸಿ ಬರೆಯಿರಿ .


೧. ಸಂತಮೇರಿ ದ್ವೀಪಗಳಿರುವುದು
ಅ. ಮಲ್ಪೆ ಸಮುದ್ರ ತೀರದ ಹತ್ತಿರ
ಬ. ರಾಮೇಶ್ವರ ಸಮುದ್ರ ತೀರದ ಹತ್ತಿರ
ಕ. ಗೋಕರ್ಣ ಸಮುದ್ರ ತೀರದ ಹತ್ತಿರ
ಡ. ಗೋವಾ ಸಮುದ್ರ ತೀರದ ಹತ್ತಿರ


ದಖ್ಬನ್‌ ಪ್ರಸ್ಥಭೂಮಿ ರೂಪು ತಳೆದದ್ದು
ಅ. ಸಮುದದ ನೀರಿನಿಂದ ಬ. ಭೂಮಿಯ ಸವೆತದಿಂದ
ಕ. ಶಿಲಾರಸ ಗಟ್ಟಿಯಾಗಿ ಡ. ಭೂಕಂಪ ಉಂಟಾಗಿ


ಶಿಲಾರಸ ತಣ್ಣಗಾಗುವ ಮೊದಲೇ ಲಂಬ ದಿಕ್ಕಿನಲ್ಲಿ ಸೆಳೆತ ಉಂಟಾದರೆ
ಅ. ಪ್ರಸ್ಥ ಭೂಮಿಯಾಗುವುದು ಬ. ಕಂಬ ರಚನೆಯಾಗುವುದು
ಕ. ಪರ್ವತವಾಗುವುದು ಡ. ಭೂಕಂಪವಾಗುವುದು


ಶಿಲೆಗಳು ತೂಕದ ಬಟ್ಟುಗಳನ್ನು ಒಂದರ ಮೇಲೆ ಒಂದನ್ನು ಪೇರಿಸಿದಂತೆ ಕಾಣುವುದು


. ಶಿಲೆ ಗಟ್ಟಿಯಾಗಿ ಕಂಬಕ್ಕೆ ಲಂಬ ಬಿರುಕು ಮೂಡಿದಾಗ

. ಶಿಲೆ ಗಟ್ಟಿಯಾಗಿ ಕಂಬಕ್ಕೆ ಅಡ್ಡಲಾಗಿ ಬಿರುಕು ಮೂಡಿದಾಗ
. ಶಿಲೆ ಗಟ್ಟಿಯಾಗಿ ಕಂಬಕ್ಕೆ ಬಿರುಕು ಮೂಡದೇ ಇದ್ದಾಗ
ಡ. ಶಿಲೆ ಗಟ್ಟಿಯಾಗಿ ಕಂಬಕ್ಕೆ ಆಳವಾಗಿ ಬಿರುಕು ಮೂಡಿದಾಗಿ


ಈ ಕೆಳಗಿನ ಪದಗಳನ್ನು ಬಿಡಿಸಿ ಬರೆದು , ಸಂಧಿಯ ಹೆಸರು ತಿಳಿಸಿ.
೧. ಹೊಸಗನ್ನಡ ೨. ಗಟ್ಟಿಗಲ್ಲು ೩. ಮಳೆಗಾಲ ೪. ಬೆಟ್ಟದಾವರೆ


ನಿಮ್ಮ ಪ್ರವಾಸದ ಅನುಭವಗಳನ್ನು ಕುರಿತು , ನಿಮ್ಮ ಗೆಳೆಯ / ಗೆಳತಿಗೆ ಒಂದು ಪತ್ರ ಬರೆಯಿರಿ.


ಈ ಕೆಳಗಿನ ವಾಕ್ಯಗಳಲ್ಲಿನ ಖಾಲಿಜಾಗವನ್ನು ಕೆಳಗೆ ಕೂಟ್ಟರುವ ದ್ವಿರುಕ್ತಿಗಳಲ್ಲಿ ಸರಿಯಾದವುಗಳನ್ನು
ಆರಿಸಿ ಭರ್ತಿ ಮಾಡಿ.


೧. ಮಕ್ಕಳಲ್ಲಾ ದೋಣಿಯ ಹತ್ತಿರ ಬಂದರು.
ಹೋದಂತೆ ದ್ವೀಪ ಕಾಣದಾಯಿತು .
ಸಂಜೆಯಾಗುತ್ತಿದ್ದಂತೆಯೇ ಎಲ್ಲರೂ ___. ಮನೆಯ ಕಡೆಗೆ ಹೂರಟರು.
ಚಿಕ್ಕಪ್ಪ ಮಕ್ಕಳ ನಡೆದರು .
[ಜೊತೆ ಜೊತೆ, ಓಡಿ ಓಡಿ, ದೂರ ದೂರ, ಬೇಗ ಬೇಗ]


ವ್ಯಾಕರಣಾಭ್ಯಾಸ


ಅನುಕರಣಾವ್ಯಯ


ಈ ಕೆಳಗಿನ ವಾಕ್ಯಗಳಲ್ಲಿ ಗೆರೆ ಎಳೆದ ಪದಗಳನ್ನು ಗಮನಿಸಿ.

೧. ನದಿ ಜುಳು ಜುಳು ಹರಿಯುತ್ತಿತ್ತು".

೨. ಮಳೆ ಧೋ ಧೋ ಎಂದು ಸುರಿಯುತ್ತಿತ್ತು.

೩. ಗಾಳಿ ರೊಯ್ಯನೆ ಬೀಸುತ್ತಿತ್ತು.

ಮೇಲಿನ ಅಡಿಗೆರೆಯೆಳೆದ ಪದಗಳಿಗೆ ವಿಶೇಷವಾದ ಅರ್ಥವೇನೂ ಇಲ್ಲ. ನಾಮಪದ, ಕ್ರಿಯಾಪದಗಳಂತೆ
ಲಿಂಗ, ವಚನ, ವಿಭಕ್ತಿಗಳಿಂದ ರೂಪ ಭೇದವನ್ನು ಹೊಂದದೆ ಏಕರೂಪವಾಗಿರುವ ಇವುಗಳನ್ನು "ಅವ್ಯಯಗಳು


ಎನ್ನುತ್ತಾರೆ. ಅರ್ಥವಿಲ್ಲದ ಈ ಪದಗಳು ಕೆಲಸ ನಡೆದ ರೀತಿಯನ್ನು ಅನುಕರಣೆ ಮಾಡಿ ಹೇಳುತ್ತವೆ.
ಆದ್ದರಿ೦ದ ಇವುಗಳನ್ನು ಅನುಕರಣಾವ್ಯಯಗಳು ಎನ್ನುವರು.


ಖಾಲಿ ಬಿಟ್ಟ ಜಾಗವನ್ನು ಕಂಸದಲ್ಲಿ ಕೂಟ್ಟ ಸರಿಯಾದ ಅನುಕರಣಾವ್ಯಯಗಳಿಂದ ಭರ್ತಿ ಮಾಡಿ.


[ ಧಗ ಧಗ , ಸರ ಸರ , ಢಣ ಢಣ , ಫಳ ಫಳ]


ಪ್ರಾಯೋಗಿಕ ಚಟುವಟಿಕೆ


ನಿಮ್ಮ ಜಿಲ್ಲೆಯ ಯಾವುದಾದರೊಂದು ಪ್ರವಾಸೀ ತಾಣದ ಬಗೆಗೆ ಪ್ರಬಂಧ ಬರೆಯಿರಿ.


ಪ್ರವಾಸದಿಂದ ಆಗುವ ಪ್ರಯೋಜನಗಳ ಕುರಿತು, ನಿಮ್ಮ ತರಗತಿಯಲ್ಲಿ ಸ್ನೇಹಿತರ ಗುಂಪಿನಲ್ಲಿ
ಚರ್ಚಿಸಿ.


ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಾರ್ಯಗಳನ್ನು ಕೇಳಿ ತಿಳಿಯಿರಿ.
ಇಲ್ಲಿ ಕೊಟ್ಟಿರುವ ಸುಳಿವುಗಳನ್ನು ಗಮನಿಸಿ, ಪದಬಂಧವನ್ನು ಪೂರ್ತಿ ಮಾಡಿ.


೧ ೩



ಸುಳಿವುಗಳು


ಮೇಲಿನಿಂದ ಕೆಳಗೆ
೧. ನೀರಿನಿಂದ ಸುತ್ತುವರಿದ ಭೂಭಾಗ.(೨)
೩. ನೋಡುವ ಆತುರ (೩)
೫. ತಿಂಡಿ ಇಡುವ ಪುಟ್ಟ ಪೆಟ್ಟಿಗೆ (೨)


ಎಡದಿಂದ ಬಲಕ್ಕೆ
೨. ದೊಡ್ಡದಾದ ಬೆಟ್ಟ (೩)
ಲ ಸಮುದ್ರವನ್ನು ಹೀಗೂ ಕರೆಯುವರು (೩)


ದೇಶ ಸುತ್ತು - ಕೋಶ ಓದು


- ಡಿ. ಎಸ್‌. ವೀರಯ್ಯ


ಆಶಯ : ಸಮಾಜದಲ್ಲಿ ಮೇಲು-ಅಿಂಳು, ಬಡವ - ಬಲ್ಲದ ಎಂಬಂತಹ ಅಪಮಾನತೆದಳು
ಇಂದಿರೂ ಕೂಡ ಕಂಡುಬರುತ್ತವೆ. ಇಂತಹ ಅಪಮಾನತೆಗಳನ್ನು ಹೊಂದಲಾಡಿಸಲು ದಾರ್ಶನಿಕರು.
ಶರಣರು, ಪಾಧುದಳು ಮತ್ತು ಪಂತರು ನಿರಂತರವಾಗಿ ಶ್ರಮಿವಿದ್ದಾರೆ. “ದಯವಿಲ್ಲದ ಧರ್ಮ
ಅದಾವುದಯ್ಯ ದಯವೇ ಬೇಹು ಸಕಲ ಪ್ರಾಣಿಗಳಲ್ಲ”- ಎಂಬ ಬಸವಣ್ಣನವರ ಮಾತು ಅಕ್ಷರಶ:
ಸತ್ಯವಾಣದೆ. ಪ್ರೀತಿ, ಪ್ರೇಮ. ತಾಳ್ಕೆ, ಸಮಾನತೆ, ಇವುಗಳನ್ನು ಇಂದು ನಾವ ಅಳವಡಿಖಿಹೊಂಡಾದಲೆ
ಮಾನವೀಯತೆಯನ್ನು ಕಾಣಲು ಸಾಧ್ಯವಾದುತ್ತದೆ. ನಿಲೀಕ್ಷೆ ಪದ್ಯದಲ್ಲಿ ಕವಿ ಪ್ರಚಲತ ಸಮಾಜದಲ್ಲಿ
ಕಂಡುಬರುತ್ತಿರುವ ತಾರತಮ್ಯ ಹೊಂದಲಾಡಿಸಲು ಪಮಾನಶೆಯ ವಿನದಳು ಎಂದು ಬರುವವೊ
ಎಂದು ಪಲಿಪಲಿಯಾಉ ಹ೦ಬಲಿದ್ದಾರೆ.


ಪ್ರೀತಿಯ ಗುಣಿ ತೆಗೆದು
ಪ್ರೇಮದ ಪಾತಿಯ ಮಾಡಿ
ನೀತಿಯ ಬೀಜವ ಬಿತ್ತಿ
ವಾತ್ಸಲ್ಯದ ಫಲವ ಪಡೆವ
ದಿನಗಳೆಂದು ಬರುವವೋ


ಹರಿವ ನೀರು ಇರುವ ನೆಲ
ಸುಳಿವ ಗಾಳಿ ಉಣ್ಣುವನ್ನ
ತೊಡುವ ಬಟ್ಟೆ ಸುಡುವ ಬೆಂಕಿ
ಎಲ್ಲರಿಗೂ ಒಂದೇ ಎಂಬ
ದಿನಗಳೆಂದು ಬರುವಪೋ,


ದ್ವೇಷಾಸೂಯೆಗಳ ಬಂಡೆಯನ್ನು
ತಾಳ್ಮೆಯ ಸಿಡಿಮದ್ದು ಹಾಕಿ
ಸಿಡಿಸಿ ತೆಗೆದ ಸಹೋದರತೆಯ


ಸಸಿಗಳನ್ನು ಕಾಣುವಂಥ
ದಿನಗಳೆಂದು ಬರುವವೋ,


ಅಸಮಾನತೆಯ ಕಡಲಿನಲ್ಲಿ
ಸಮಾನತೆಯ ದೋಣಿ ಬಿಟ್ಟು
ತೇಲುತ ದಡ ಸೇರಿಕೊಂಡು
ಸಾರ್ಥಕತೆಯ ಪಡೆಯುವ
ದಿನಗಳೆಂದು ಬರುವವೋ,


ಜ್ಞಾನದ ಕಾರಂಜಿಯಲ್ಲಿ
ಅಜ್ಞಾನದ ಕೊಳೆಯ ತೊಳೆದು
ಜಾತಿಯ ವಿಷ ವೃಕ್ಷವನ್ನು
ಬೇರು ಸಹಿತ ಕಿತ್ತು ತೆಗೆವ
ದಿನಗಳೆಂದು ಬರುವವೋ


ರಕ್ತ ಬೀಜಾಸುರರ ಸಂತೆಯಲ್ಲಿ

ಗೊಡ್ಡು ಮೌಢ್ಯಗಳ ನಾಶ ಮಾಡಿ

ಹಿಂಸೆಯ ರಕ್ತ ಅಳಿಸಿ

ಅಹಿಂಸೆಯ ಕಂದನೆತ್ತಿ ಮಾನವತೆಯ ಸಾರುವ
ದಿನಗಳೆಂದು ಬರುವವೋ


ಕವಿ ಪರಿಚಯ : ಡಿ. ಎಸ್‌. ವೀರಯ್ಯ ;


ಕೋಲಾರದವರಾದ ಡಿ.ಎಸ್‌. ವೀರಯ್ಯ ಸಾಮಾಜಿಕ ಕಾರ್ಯಕರ್ತರಾಗಿ,
ವಕೀಲರಾಗಿ, ಬರಹಗಾರರಾಗಿ, ಪತ್ರಕರ್ತರಾಗಿ, ರಾಜಕಾರಣಿಯಾಗಿ ಪ್ರಸಿದ್ಧರು.
ಇವರು ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಘ, ಕನ್ನಡ ಅಭಿವೃದ್ಧಿ
ಪ್ರಾಧಿಕಾರಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸರಕಾರದ
ವಿಧಾನ ಪರಿಷತ್ತಿಗೆ ಎರಡನೆಯ ಬಾರಿ ಸಡಸ್ಯರಾಗಿ, ಆಯ್ಕೆಗೊಂಡಿದ್ದಾರೆ.


“ಗೆರೆಗಳು', ಬೇರುಗಳು'-ಕವನ ಸಂಕಲನಗಳು, ಕೂಡಲುಸ್ಟಾಮಿ, ದಲಿತ ಚಿಂತನೆ
ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಸಮಾಜರತ್ತ. ಬುದ್ಧರತ್ನ,
ಬೆಂಗಳೂರು ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಗಳು ದೊರಕಿವೆ. ಈ ಕವನವನ್ನು
“ಬೇರುಗಳು' ಸಂಕಲನದಿಂದ ಆರಿಸಲಾಗಿದೆ:


ಓದಿ ತಿಳಿಯಿರಿ

ಗುಣಿ -ತಗ್ಗು , ಗುಂಡಿ ; ಫಲ - ಲಾಭ , ಬೆಳೆ ; ಉಣ್ಣು - ಊಟ ಮಾಡು ; ತೊಡು - ಧರಿಸು ;
ದಡ - ದಂಡೆ ; ವೃಕ್ಷ - ಮರ ; ಅಸುರ - ರಾಕ್ಷಸ * ಗೊಡ್ಡು — ನಿಷಲ ೆ ಮೌಢ್ಯ - ತಿಳಿಗೇಡಿತನ,
ದಡ್ಡತನ ; ಅಳಿಸು - ನಾಶಪಡಿಸು ; ಕಂದ - ಮಗು ; ಕಾರಂಜಿ - ಚಿಲುಮೆ; ವಾತ್ಸಲ್ಯ - ಪ್ರೀತಿ ;
ಗಮನಿಸಿ ತಿಳಿಯಿರಿ

ಪಾತಿ - ಗಿಡದ ಸುತ್ತಲೂ ನೀರು ಹರಿಸಲು ಮಾಡಿರುವ ಮಡಿ

ರಕ್ತಬೀಜಾಸುರ - ಒಬ್ಬ ರಾಕ್ಷಸ. ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ, ತನ್ನ ದೇಹದಿಂದ ಬಿದ್ದ
ಒಂದೊಂದು ತೊಟ್ಟು ರಕ್ತದಿ೦ದ ತನ್ನಷ್ಟೇ ಬಲಶಾಲಿಯಾದ ಒಬ್ಬ ರಾಕ್ಷಸ ಹುಟ್ಟುವಂತೆ ವರ ಪಡೆದವ.
ಸಿಡಿಮದ್ದು ಬಂಡೆಗಳನ್ನು ಒಡೆಯಲು ಬಳಸುವ ಸ್ಫೋಟಕ ವಸ್ತು


ಅಭ್ಯಾಸ ಚಟುವಟಿಕೆ
ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
ಕವಿ ಯಾವ ಬೀಜ ಬಿತ್ತಬೇಕೆಂದು ಹಾರೈಸಿದ್ದಾರೆ?
ದ್ವೇಷ ಅಸೂಯೆಗಳ ಬಂಡೆಯನ್ನು ಯಾವುದರಿಂದ ಸಡಿಲಿಸಬೇಕೆಂದು ಕವಿ ಹೇಳಿದ್ದಾರೆ?
ಅಸಮಾನತೆಯ ಕಡಲಿನಲ್ಲಿ ಎಂತಹ ದೋಣಿ ಸಾಗಬೇಕಾಗಿದೆ?
ಜ್ಞಾನದ ಕಾರಂಜಿಯಲ್ಲಿ ಯಾವ ಕೊಳೆ ತೊಳೆಯಬೇಕಾಗಿದೆ?
ಗೊಡ್ಡು ಮೌಢ್ಯಗಳನ್ನು ಯಾವ ಸಂತೆಯಲ್ಲಿ ನಾಶಮಾಡಬೇಕೆಂದು ಕವಿ ಆಶಿಸಿದ್ದಾರೆ?


ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

ಕವಿ ಯಾವ ಯಾವ ಮೌಲ್ಯಗಳಿಂದ ಕೂಡಿದ ದಿನಗಳಿಗಾಗಿ ಕಾಯುತ್ತಿದ್ದಾರೆ?
ಸೃಷ್ಟಿಯಲ್ಲಿ ಎಲ್ಲರಿಗೂ ಸಮಾನವಾಗಿರುವ ಅಂಶಗಳಾವುವು?

ಸಾರ್ಥಕತೆಯನ್ನು ಪಡೆಯುವ ಬಗೆಯನ್ನು ಕವಿ ಹೇಗೆ ಹೇಳಿದ್ದಾರೆ?

ಜಾತಿಯ ವಿಷವ್ಯಕ್ಷ ತೆಗೆಯುವುದಕ್ಕೆ ಕವಿಯ ಸಲಹೆ ಏನು?

ಈ ಪದ್ಯದ ಎರಡನೆಯ ನುಡಿಯ ಭಾವಾರ್ಥವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.


ಕೆಳಗಿನ ವಾಕ್ಯಗಳಲ್ಲಿ ಬಿಟ್ಟು ಹೋಗಿರುವ ಪದಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿರಿ.
ಪ್ರೇಮದ ಮಾಡಿ
ಯ ಹಾಕ
ಸಮಾನತೆಯ ಡಿ ಬಿಟ್ಟು
ಜಾತಿಯ _ ವೃಕ್ಷವನು
0 Cl
ಅಹಿಂಸೆಯ ___'_ ಮಾನವತೆಯ ಸಾರುವ


೫ 06೫ ಓಿಧಿ 6 ಈ 6೫ LD


ಈ ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ನಿಘಂಟಿನಿಂದ ಸಂಗ್ರಹಿಸಿ ಬರೆಯಿರಿ.
ನೀತಿ, ದ್ವೇಷ, ಅಸೂಯೆ. ತಾಳ್ಯ ತೇಲು.


ಈ ಕೆಳಗಿನ ಪದಗಳಿಗೆ ವಿರುದ್ದಾರ್ಥಕ ಪದಗಳನ್ನು ಬರೆಯಿರಿ.
ಅಸಮಾನತೆ, ಅಜ್ಞಾನ, ಹಿಂಸೆ, ನೀತಿ


ತತ್ಸಮ-ತದ್ದವ ಬರೆಯಿರಿ.
ಸಂತೆ, ದ್ವೇಷ, ರಕ್ತ.
ಪ್ರಾಯೋಗಿಕ ಚಟುವಟಿಕೆ


ಈ ಕೆಳಗಿನ ಪದಗಳ ಉಚ್ಚಾರಣೆಯನ್ನು ಗುರುಗಳಿಂದ ಕೇಳಿ ತಿಳಿದು ನೀವೂ ಉಚ್ಚರಿಸಿ, ಹಾಗೆಯೇ
ತಪ್ಪಿಲ್ಲದಂತೆ ಬರೆಯಿರಿ.


ದ್ವೇಷಾಸೂಯೆ, ತಾಳ್ವೆ ಅಜ್ಜಾನ, ಮೌಢ್ಯ, ವಾತ್ಸಲ್ಯ


ಸಮಾಜದಲ್ಲಿ ಕಂಡುಬರುವ ಮೇಲು-ಕೀಳು, ಬಡವ-ಬಲ್ಲಿದ ಎಂಬ ಅಸಮಾನತೆಯ ಕುರಿತು ಥ್‌
ಮಿತ್ರರ ಜೊತೆಗೆ ಅಭಿಪ್ರಾಯ ಹಂಚಿಕೊಳ್ಳಿರಿ.


ಈ ಪದ್ಯದ ಮೊದಲ ನುಡಿಯನ್ನು ಕಂಠಪಾಠ ಮಾಡಿರಿ.
ಸಮಾನತೆಯ ಸಂದೇಶ ಸಾರುವ ಬಸವಣ್ಣನವರ ವಚನಗಳನ್ನು ಸಂಗ್ರಹಿಸಿ ಓದಿರಿ.


ಪೂರಕ ಓದು
ನಾನೊಂದು ಮರವಾಗಿದ್ದರೆ


ನಾನೊಂದು ಮರವಾಗಿದ್ದರೆ

ಹಕ್ಕಿ ಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ
ಬಿಸಿಲು ನನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ.
ತಂಬೆಲರ ಕೂಡ ಎಲೆಗಳ ಸ್ನೇಹ
ಮಧುರವಾಗಿರುತ್ತಿತ್ತು


ಮಳೆ ಹನಿಗಳು ನಾನು ಶ್ವಪಚನೆಂದು

ಹಿ೦ದೆ ಸರಿಯುತ್ತಿರಲಿಲ್ಲ ನಾನು

ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ
ಮಡಿಮಡಿ ಎಂದು, ಓಡುತ್ತಿಠಲಿಲ್ಲ

ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜಿ
ತುರಿಕೆ ತೀರಿಸಿಕೊಳ್ಳುವಾಗ ಅದರ ಅ೦ಗಾ೦ಗಗಳಲ್ಲಿ
ಅಡರಿಕೊ೦ಡ ಮುಕ್ಕೋಟ ದೇವತೆಗಳು

ನನ್ನನ್ನು ಮುಟ್ಟಸಿಕೊಳ್ಳುತ್ತಿದ್ದರು.


ಯಾರಿಗೆ ಗೊತ್ತು
ನನ್ನ ಅಂತ್ಯ ಕಾಲದಲ್ಲಿ ಕಡಿದು ತುಂಡಾದ ಒಣ ಸೀಳೊಂದು
ಹೋಮಾಗ್ನಿಯಲ್ಲಿ ಬೆಂದು
ಪಾವನವಾಗುತ್ತಿತ್ತೇನೊ
ಅಥವಾ
ಸತ್ತುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ
ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೇ.
-ಮೂಡ್ಡಾಕೂಡು ಚಿನ್ನಸ್ಟಾಮಿ


ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು
ಸುಡುವಗ್ಗಿಯೊಂದೇ ಇರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ


ಗದ್ಯಪಾಠ
೧೨. ನನ್ನ ಟೋಪಿ


ಆಶಯ : ಪ್ರಪಂಚದ ಯಾವಭಾರಕ್ತೆ ಹೋದರೂ ಮನುಷ್ಯ ಸ್ವಭಾವ ಒಂದೇ. ಲೇಖಕರಾದ
ಇ.ಜ.ಎಲ್‌.ಸ್ವಾಮಿಯವರು ಅಮೆಲಿಕಾ ದೇಶಕ್ತೆ ಭೇಣ ಕೊಟ್ಟಾದ ತಮದಾದ ಅನುಭವದಳನ್ನು
ಹಾಸ್ಯಪೂರ್ಣವಾಗಿ ತಿಆಲಿದ್ದಾರೆ. ಅವರ ಟೋಪಿಯ ಒಂದು ಸ್ವಾರಸ್ಯಕರ ಪ್ರಶಂದವಿದು.


ಮೊದಲನೆ ವರ್ಷದ ಹುಟ್ಟದ ಹಬ್ಬಕ್ಕೆ ತಲೆಗೊಂದು ಸೂರು; ಚೌಲಕ್ಕೆ ತಲೆಗೊಂದು ಸೂರು;
ಮುಂಜಿಯಲ್ಲಿ ತಲೆಗೊಂದು ಸೂರು; ಕ್ಲಾಸಿಗೆ ಹೋಗುವಾಗ ತಲೆಗೊಂದು ಸೂರು; ಕಚೇರಿಗೆ ಹೋಗುವಾಗ
ತಲೆಗೊಂದು ಸೂರು; ಮದುವೆಯಾಗುವಾಗ ತಲೆಗೊಂದು ಸೂರು; ಚಿಕ್ಕವರು ದೊಡ್ಡವರನ್ನು ನೋಡಲು
ಹೋದಾಗ ತಲೆಗೊಂದು ಸೂರು; ದೊಡ್ಡವರು ಒಬ್ಬರನ್ನೊಬ್ಬರು ಕಾಣಲು ಹೋದಾಗ ತಲೆಗೊಂದು
ಸೂರು; ಶುಭ ಕಾರ್ಯಗಳಲ್ಲಿ ಭಾಗವಹಿಸುವಾಗ ತಲೆಗೊ೦ದು ಸೂರು. ಹೀಗಾಗಿ ಹುಟ್ಟಿದಾರಭ್ಯ ನಮ್ಮ
ಪಾಲಿಗೆ ತಲೆ ತೊಡುಗೆ ಅಂಟಿಕೊಂಡುಬಿಟ್ಟಿದೆ. ಸೂರಿನ ರೂಪ ತಲೆತಲಾಂತರದಿಂದಲೂ ಎಷ್ಟು ಮಾರ್ಪಾಟು
ಹೊಂದಿದ್ದರೂ, ಸಂಪ್ರದಾಯ ಉಳಿದುಕೊಂಡೇ ಬಂದಿದೆ. ತಲೆ ತೊಡುಗೆಯ ನಂಟು ಹಿಂದೂ ಜನಾಂಗಕ್ಕೆ
ಮಾತ್ರ ಸೇರಿದ್ದಲ್ಲ. ಪ್ರಪಂಚದ ನೂರಾರು ಸಂಸ್ಕೃತಿಗಳ ಚರಿತ್ರೆಯಲ್ಲೂ ಇದರ ಪ್ರಭಾವ ಕಂಡುಬಂದೇ
ಬರುತ್ತದೆ. ಯಾವ ನಾಗರಿಕ ಜನಾ೦ಗವನ್ನು ನೋಡಿದರೂ ಅವರದೇ ಒಂದು ಮಾದರಿಯ ತಲೆ ತೊಡುಗೆ
ಇದ್ದೇ ಇರುತ್ತದೆ. ಅದನ್ನು ಧರಿಸುವ ರೀತಿ ನೀತಿಗಳಿಗೆ ಅವರವರದೇ ಆದ ಸಂಪ್ರದಾಯಗಳೂ ಇವೆ.


ನಮ್ಮಲ್ಲಿ ಗುಡಿಗೆ ಹೋದೊಡನೆಯೇ ತಲೆಯ ಮೇಲಿನ ತೊಡುಗೆಯನ್ನು ತೆಗೆಯುವ ಪದ್ಧತಿ
ಕೆಲವರಲ್ಲುಂಟು. ಅಮೆರಿಕನ್ನರು ಚರ್ಚಿಗೆ ಹೋದಾಗ ಗಂಡಸರು ಮಾತ್ರ ತೆಗೆಯುತ್ತಾರೆ. ಆದರೆ ಹೆಂಗಸರು
ಹ್ಯಾಟು ಧರಿಸದೆ ಚರ್ಚಿಗೆ ಹೋಗಿ ಪ್ರಾರ್ಥನೆಯಲ್ಲಿ ಭಾಗವಹಿಸುವುದು ಅವಮರ್ಯಾದೆ. ನಮ್ಮಲ್ಲಿ ಹಿರಿಯರನ್ನು


ಕಾಣಲು ಹೋದಾಗ- ಬೀದಿಯಲ್ಲೆಲ್ಲ ಬರಿತಲೆಯಲ್ಲಿ ಓಡಾಡಿದರೂ ಅವರೆದುರಿಗೆ ಹೋಗುವ ಮುನ್ನ
ಕಿಸೆಯಲ್ಲಿ ಸೆಕ್ಕಕೊಂಡಿರುವ ಟೋಪಿಯನ್ನು ಧರಿಸಿಕೊಂಡು ನಮ್ರತೆಯಿ೦ದ ನಮಸ್ಕರಿಸಬೇಕು. ಇದು ನಮ್ಮ
ಸಂಪ್ರದಾಯಕ್ಕನುಗುಣವಾದ ಮರ್ಯಾದೆ. ಅವರಲ್ಲಿ, ಧರಿಸಿಕೊ೦ಡಿದ್ದ ಹ್ಯಾಟನ್ನು ದೊಡ್ಡವರ ಸನ್ನಿಧಾನದಲ್ಲಿ
ತಲೆಯ ಮೇಲಿಂದ ತೆಗೆದು ಬಗ್ಗಿ ವಂದಿಸಬೇಕು. ಇದು ಅವರ ಸಂಪ್ರದಾಯಕ್ಕನುಗುಣವಾದ ಮರ್ಕಾದೆ.
ಮನೆ, ಕಟ್ಟಡ ಮೊದಲಾದವುಗಳ ಒಳಕ್ಕೆ ಹೋದಾಗ ನಮ್ಮಲ್ಲಿ ತಲೆತೊಡುಗೆಯನ್ನೇನು ತೆಗೆಯಬೇಕಾಗಿಲ್ಲ.
ಆದರೆ ಅವರಲ್ಲಿ ಈ ನಡತೆ ತುಂಬ ಅಪೇಕ್ಷಣೀಯ. ಮನೆಯೊಳಕ್ಕೆ ಪ್ರವೇಶಿಸಿದಾಗ ಹ್ಯಾಟನ್ನು ತೆಗೆಯುವುದು
ನಾಗರಿಕ ಲಕ್ಷಣ.


ನನಗೆ ಹ್ಯಾಟು ಹಾಕಿಕೊಳ್ಳುವುದಕ್ಕೆ ತುಂಬ ಬೇಸರ. ತಲೆಯ ಮೇಲೆ ಭಾರವಾದ ಮಕ್ಕರಿಯೊಂದನ್ನು
ಬೋರಲು ಹಾಕಿಕೊಂಡಂತೆ ಅನುಭವವಾಗುತ್ತದೆ. ಮಳೆಯಲ್ಲಿ ನೆನೆದರಂತೂ ಈ ಭಾರ ಇನ್ನೂ ಹೆಚ್ಚಾಗುತ್ತದೆ.
ಹ್ಯಾಟನ್ನು ಜೋಪಾನವಾಗಿಟ್ಟುಕೊಳ್ಳುವುದಕ್ಕೆ ಇನ್ನಷ್ಟು ಶ್ರಮ. ನಾನು ಇಂಡಿಯಾ ಬಿಡುವುದಕ್ಕೆ ಮುಂಚೆಯೇ
ಪರದೇಶಗಳಿಂದ ಹಿಂದಿರುಗಿದ್ದ ಗೆಳೆಯರು "ಹ್ಯಾಟಿಲ್ಲದೆ ಪರದೇಶ ಪ್ರಯಾಣ ಮಾಡುವುದುಂಟೆ? ನಿನ್ನ
ಸೂಟಿಗೊಂದು ಗಾಂಭೀರ್ಯ ಕೊಡುತ್ತದೆ. ಅದಿದ್ದೇ ಇರಬೇಕು” ಎ೦ದು ಮಾಡಿದ್ದ ಉಪದೇಶ; "ತಲೆಗೊಂದು
ಸೂರಿಲ್ಲದೆ ಮನೆಯಿಂದ ಹೊರಕ್ಕೆ ತಲೆಯಿಡುವುದೇ ಅವಮರ್ಯಾದೆ; ಇನ್ನು ಹಾಗೆಯೇ ದೇಶದಿಂದ ಆಚೆ
ಹೋಗುವುದು ಪೋಕರಿತನದ ಪರಮಾವಧಿ' ಎಂಬ ನನ್ನ ಮನೆಯವಠ ವಾದ; ಈ ಎರಡೂ ದವಡೆಗಳ
ಮಧ್ಯೆ ಸಿಕ್ಕಿಕೊಂಡ ನಾನು ಆರಿಸಿಕೊಂಡ ಟೋಪಿ ಕಾಶ್ಮೀರದ ಕಲೆಗಾರಿಕೆಯ ಶೈಲಿಯದು. ನಮ್ಮಲ್ಲನೇಕರ
ತಲೆಯ ಮೇಲೆ ಸಾಮಾನ್ಯವಾಗಿ ಕುಳಿತಿರುವ ರಟ್ಟು ರಟ್ಟಾದ 'ಮಡಿಚುವ ತೆರದ್ದರಿಂದ ಇದರ ಮಾಟ
ಬೇರೆಯದ್ದಲ್ಲ. ಆದರೆ ಇದಕ್ಕೆ ಉಪಯೋಗಿಸುವ ಬಟ್ಟೆ `ಶಾಲು ತೆರದ್ದು. ಅದರಮೇಲೆ ಕಸೂತಿಯಿದೆ-
ಕಾಶ್ಮೀರದ ಶಾಲುಗಳ ಅಂಚಿನಲ್ಲಿರುವಂತೆ. ಇದ್ದದ್ದರಲ್ಲಿ ತಕ್ಕಮಟ್ಟಿಗೆ ಕಲಾಕುಶಲತೆಯ ಕಸೂತಿಯಿದ್ದ ಟೋಪಿಯನ್ನೇ
ಆರಿಸಿಕೊಂಡೆ.


ಉತ್ತರ ಅಮೆರಿಕದ ಪೂರ್ವ ತೀರದಲ್ಲಿರುವ ಮುಖ್ಯ ಪಟ್ಟಣಗಳಲ್ಲಿ ಬಾಸ್ಟನ್‌ ಒಂದು. ಇದರಲ್ಲಿ
ಕೇಂಬ್ರಿಡ್ಜ್‌ ಎಂಬುದೊಂದು ಹರವು. ಈ ಹರವಿನಲ್ಲಿಯೆ ಹಾರ್‌ವರ್ದ್‌ ವಿದ್ಯಾಪೀಠ. ನಾನು ಕೆಲಸ ಮಾಡುತ್ತಿದ್ದುದು
ಇಲ್ಲಿ. ಕಾಲೇಜಿನಿಂದ ನಾನು ವಾಸಿಸುತ್ತಿದ್ದ ಮನೆಗೆ ಹತ್ತು ನಿಮಿಷದ ನಡಿಗೆ. ನನ್ನ ಮನೆ ಎದುರು ಬಸ್ಸು
ನಿಲ್ಲುವ ಜಾಗ. ಅದರ ಪಕ್ಕದಲ್ಲಿ ಶ್ರೀಮಂತರಿಗೆ ಸೇರಿದುದೆಂದು ಹೇಳಬಹುದಾದ ಮನೆ. ಪ್ರತಿದಿನ ಬೆಳಿಗ್ಗೆ
ಹನ್ನೊಂದು ಗಂಟಿ ಸುಮಾರಿಗೆ ಮನೆ ಎದುರಿನ ಬಸ್‌ ಸ್ಟಾಪಿಗೆ ಬಂದು, ಕಾಲೇಜು ಬಸ್ಸಿಗಾಗಿ ಕಾಯುತ್ತಿದ್ದೆ.
ಅಷ್ಟು ಹೊತ್ತಿಗೆ ಸರಿಯಾಗಿ ಎದುರು ಮನೆಯಿ೦ದ ಅರವತ್ತು ವರ್ಷದ ಮುದುಕಿಯೊಬ್ಬಳೂ, ಇಪ್ಪತ್ತೈದು
ವರ್ಷದ ಹುಡುಗಿಯೊಬ್ಬಳೂ ಹೊರಬಂದು ಬಸ್ಸಿಗಾಗಿ ಕಾಯುತ್ತಿದ್ದರು. ಈ ಕಾರ್ಯಕ್ರಮ ಮೂರು
ನಾಲ್ಕು ತಿಂಗಳಿಂದಲೂ ತಪ್ಪದೆ ನಡೆದು ಬರುತ್ತಿದ್ದುದರಿಂದ ಅವರಿಬ್ಬರ ಮತ್ತು ನನ್ನ ಪರಸ್ಪರ ಮುಖ
ಪರಿಚಯಯ ಸಾಕಾದಷ್ಟು ಬೆಳೆದಿತ್ತು ಮತ್ತು ಹಾರ್‌ವರ್ದ್‌ ವಿದ್ಯಾಪೀಠದಲ್ಲಿಯೇ ಅವರಿಗೂ ಕೆಲಸ. ಮುದುಕಿ
ನನ್ನ ಲ್ಯಾಬೊರೆಟರಿಯ ಪಕ್ಕದಲ್ಲಿದ್ದ ಕಾಲೇಜು ಸಂಸ್ಥೆಯೊ೦ದರಲ್ಲಿ ಖಜಾ೦ಚಿ. ಮಗಳು ಅದೇ ವಿದ್ಯಾಪೀಠದ
ಬೇರೊಂದು ಶಾಖೆಯಲ್ಲಿ ವಿದ್ಯಾರ್ಥಿನಿ. ಆ ದಿನ ನನ್ನ ಹಿರಿಯ ಗೆಳೆಯರೊಬ್ಬರ ಮನೆಯಲ್ಲಿ ಔತಣಕೂಟ.
ಟೋಪಿ ಹಾಕಿಕೊಂಡು ಬಸ್‌ ಸ್ಟಾಪಿಗೆ ಬಂದೆ. ಯಥಾಪ್ರಕಾರ ಮುದುಕಿ ಹುಡುಗಿಯರ ಭೇಟಿಯಾಯ್ತು.
ನನ್ನನ್ನು ನೋಡಿ ತಮ್ಮತಮ್ಮೊಳಗೆ ಗುಸುಗುಸು ಮಾತು ಪ್ರಾರಂಭಿಸಿದರು. ಮಧ್ಯೆ ಮಧ್ಯೆ ನನ್ನ ಟೋಪಿ ಕಡೆ


ದೃಷ್ಟಿ ವಿಸ್ತರಿಸುತ್ತಿದ್ದರು. ಇದು ಸುಮಾರು ಹತ್ತು ನಿಮಿಷ ನಡೆಯಿತು. ಬಸ್ಸು ಬಂತು. ಅದರಲ್ಲಿ ಖಾಲಿಯಿದ್ದುದು ಜೆ
ಎರಡು ಸೀಟು. ಇವರಿಬ್ಬರೂ ಹತ್ತಬಹುದಾಗಿತ್ತು. ಆದರೆ ಅವರು ಮಾತಿನಲ್ಲಿ ತಲ್ಲೀನರಾಗಿ ಕೈಬಾಯಿಗಳನ್ನು
ತಿರುಗಿಸುತ್ತ ಹೊರ ಪ್ರಪಂಚದಿಂದ ವಿಮುಖರಾಗಿದ್ದರು. ನಾನು ನನ್ನ ಗೆಳೆಯನೊಬ್ಬನಿಗೆ ಕಾಯಬೇಕಾಗಿದ್ದುದರಿಂದ
ಅಲ್ಲಿಯೆ ನಿಂತೆ. ಬಸ್ಸು ಹೊರಟುಹೋಯಿತು. ನಾವು ಮೂವರು ಉಳಿದೆವು.


ಮುದುಕಿ ಮೊದಲು ಒಂದು ಹೆಜ್ಜೆ ಮುಂದೆ ಬ೦ದಳು. ಅನ೦ತರ ಮಗಳು, ತಾಯಿಯ ಬಾಲದಂತೆ.
ಇಬ್ಬರೂ ಗ೦ಟಲು ಸರಿಮಾಡಿಕೊಂಡು ಕೆಮ್ಮಿದರು. ಪ್ರಾರಂಭವಾಯಿತು.

“ಒ೦ದೆರಡು ನಿಮಿಷ ಪುರುಸೊತ್ತಿದೆಯೆ9'

“ಏನಾಗಬೇಕು9' ಎಂದೆ

“ನಿಮ್ಮನ್ನು ಒಂದು ವಿಷಯ ಕೇಳಬೇಕೆಂದು. . ಎಂದಳು ಮುದುಕಿ.

“ದಯವಿಟ್ಟು ಕೇಳಿ.'

“ನಿಮ್ಮ ತಲೆಯ ಮೇಲಿರುವುದು ಏನು?


“ನೀವು ಹ್ಯಾಟು ಹಾಕಿಕೊಳ್ಳುವುದಿಲ್ಲವೆ! ಅದರಂತೆಯೇ ಇದೂ. ಟೋಪಿ ನಮ್ಮ ದೇಶದ
ತಲೆಯುಡುಗೆಗಳಲ್ಲಿ ಒಂದು'


“ಅದೆಷ್ಟು ಚೆಲುವಾಗಿದೆ! ಎಂದು ಕಣ್ಣುಬಾಯಿ ಬಿಟ್ಟು ಟೋಪಿಯನ್ನೇ ದಿಟ್ಟಿಸುತ್ತ ನಿಂತುಕೊಂಡರು.
ಎರಡು ನಿಮಿಷ ಮೂವರೂ ಮೌನ. ಅನಂತಠ-


“ಅದು ನಿಮ್ಮದೆ?”

"ಹೌದು"

“ಇದಲ್ಲದೆ ಬೇರೆ ಇದೆಯೆ?

"ಇಲ್ಲವಲ್ಲಾ!

ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಅದೇನೋ ಲೊಚಗುಟ್ಟಿಕೊಂಡರು. ಪುನಃ-
“ಇದೇ ತೆರನಾದ್ದು ಬೇರಾವುದೂ ಇಲ್ಲವೇ?”

"ನೀವು ಟೋಪಿಯನ್ನು ಉದ್ದೇಶಿಸಿರುವಿರಾದರೆ ಇಲ್ಲವೆಂದು ಹೇಳಬೇಕಾಗುತ್ತದೆಯಲ್ಲ'
"ನೀವು ಇದನ್ನು ಯಾವಾಗಲೂ ಹಾಕಿಕೊಳ್ಳುವಿರಾ?'


“ಯಾವಾಗಲೂ ಎಂದರೆ ಗಾಳಿಯಲ್ಲಿ ಸಂಚರಿಸುವಾಗ, ಮತ್ತು ಯಾವುದಾದರೂ ಪಾರ್ಟಿಗಳಿಗೆ
ಹೋಗುವಾಗ ಹಾಕಿಕೊಳ್ಳುತ್ತೇನೆ”


“ಸಂಜೆ ಹೊತ್ತು”


“ಅನಾವಶ್ಯಕವಾಗಿ ಹಾಕಿಕೊಳ್ಳುವುದಿಲ್ಲ.”
"ನೋಡಿ. . (ಹುಡುಗಿಯ ಕಡೆತೋರಿಸುತ್ತಾ), “ಇವಳು ಡೋರಿ, ನನ್ನ ಮಗಳು. . .'


“ಬಹಳ ಸಂತೋಷ” ಎಂದು ಡೋರಿಯೊಡನೆ ಕೈಕುಲುಕಿದ್ದಾಯಿತು.
ಮುದುಕಿ: “ನಿಮ್ಮ ಟೋಪಿ ಬಹಳ ಅಪರೂಪದ ವಸ್ತು”
ಡೋರಿ: “ತೀರ ಚೆಲುವಿನದೂ ಅಹುದು”


ನಾನು: “ ಒಂದು ದೇಶದಲ್ಲಿ ಮಾತ್ರ ರೂಢಿಯಲ್ಲಿರುವುದು ಇನ್ನೊಂದು ದೇಶದಲ್ಲಿ ಹಾಗೆ ತಾನೆ
ಆಗಬೇಕು! ಮುದುಕಿ ಮತ್ತು ಡೋರಿ: "ಅದರ ಸೌಂದರ್ಯಕ್ಕೆ ನಿಜವಾಗಿಯೂ ಮನಸೋತಿದ್ದೇವೆ.'
ಬಳಸು ಬಳಸಾದ ಇಷ್ಟು ಪೀಠಿಕಾ ಪ್ರಕರಣವಾದ ಮೇಲೆ ಮುದುಕಿ ಪಾಯಿಂಟಿಗೆ ಬಂದಳು.-
"ನೋಡಿ, ನಾಳೆ ಸಂಜೆ ಡೋರಿ ಕಾಲೇಜಿನಲ್ಲಿ ಒಂದು ಪಾರ್ಟಿ ಇದೆ. ಒಳ್ಳೆಯ ಬಟ್ಟೆ ಬರೆ.


ಹಾಕಿಕೊಂಡು ಹೋಗಬೇಕಾಗಿದೆ. ಇದಕ್ಕೋಸ್ಕರವಾಗಿಯೇ ನೋಡಿ ಈ ಗೌನನ್ನು ತೆಗೆದುಕೊಂಡಿದ್ದೇವೆ.'
ಎನ್ನುತ್ತ ಕೈಲಿದ್ದ ಕಟ್ಟನ್ನು ಬಿಚ್ಚಿ ಈವಿನಿಂಗ್‌ ಗೌನ್‌ ಅನ್ನು ತೋರಿಸಿದಳು. ಆಗತಾನೆ ಪರಿಚಿತವಾದ
ನನಗೆ ಡೋರಿಯ ಗೌನನ್ನು ತೋರಿಸುವುದರ ಅರ್ಥವೇನಿರಬಹುದೆಂದು ದಿಗಿಲಾಯಿತು.


ಮುದುಕಿ: " ನೋಡಿ ಈ ಗೌನು ಊದಾ ಬಣ್ಣ'
ನಾನು: "ಹೌದು, ಬಹಳ ಅಂದವಾಗಿದೆ”


ಡೋರಿ: “ನಿಮ್ಮ ಟೋಪಿಯೂ ಊದಾಬಣ್ಣ' ಅದಕ್ಕೂ ಇದಕ್ಕೂ ಸಂಬಂಧವೇನಿರಬಹುದೆಂದು
ತಲೆ ಕೆರೆದುಕೊಂಡೆ.


ನಾನು;(ಸಂಶಯದಿಂದ) “ಹೌದು. . ೨


ಮುದುಕಿ: "ಹೋರಿಯ ಹತ್ತಿರ ಈ ಗವನಿಗೊಪ್ಪುವ ತಲೆಯುಡುಗೆಯಿಲ್ಲ. ಆದ್ದರಿ೦ದ ನಾಳೆ ಸಂಜೆಗೆ
ಮಾತ್ರ ನಿಮ್ಮ ಟೋಪಿಯನ್ನು ನಮ್ಮ ಡೋರಿಗೆ ಎರವಲು ಕೊಡುವಿರಾದರೆ ನಾವಿಬ್ಬರೂ ತುಂಬ
ಕೃತಜ್ಞರಾಗಿರುತ್ತೇವೆ.'ನನಗೆ ವಿಶದವಾಗಲಿಲ್ಲ. ಕೇಳಿದೆ, ಎಂದರೆ ನನ್ನ ಟೋಪಿಯನ್ನು ನಿಮ್ಮ
ಡೋರಿ ನಾಳೆ ಸಂಜೆಯ ಪಾರ್ಟಿಗೆ"ಹಾಕಿಕೊಂಡು ಹೋಗುವುದೆಂದೆ?


ಇಬ್ಬರೂ: "ಹೌದು, ಹೌದು.” ನಿಜವಾಗಿಯೂ ನಾನು ಅವಾಕ್ಕಾದೆ. ಅದೇನೋ ಷಾಕ್‌ ಬಡಿದಂತಾಯಿತು.
ಎರಡು ನಿಮಿಷವಾದರೂ 'ಬಾಯಿ೦ದ ಮಾತೇ ಹೊರಡದು. ಡೋರಿ ಕೇಳಿದಳು, "ನಾವು ನಿಮಗೆ
ಕಿರಿಕಿರಿ ಕೊಡುತ್ತಿದ್ದೇವೆಯೆ?'


ನಾನು: “ಇಲ್ಲ ಇಲ್ಲ, ಖಂಡಿತ ಇಲ್ಲ' "ನೋಡಿ ನಮ್ಮಲ್ಲಿಹೆಂಗಸರಾರೂ ತಲೆ ತೊಡುಗೆ ಇಟ್ಟುಕೊಳ್ಳುವುದಿಲ್ಲ.
ತಲೆಗೊಂದು ಸೂರು ಎನ್ನುವುದು ಗಂಡಸರನ್ನು ಮಾತ್ರ ಕುರಿತದ್ದು. ನೀವು ಈ ಟೋಪಿಯನ್ನು
ಬಳಸಿದರೆ ಜನ ನಗುವುದಿಲ್ಲವೆ9' ಎಂದೆ.


ಡೋರಿ:- ನಕ್ಕರೆ ಅದು ಅವರ ಹುಚ್ಚುತನವನ್ನು ತೋರಿಸುತ್ತದೆ. ಅಷ್ಟೆ
ಮುದುಕಿ-“ಜನ ನಗುತ್ತಾರೆಂದು ನಾವು ಸುಂದರ ವಸ್ತುವನ್ನು ತೊಡದಿರುವುದಕ್ಕಾಗುತ್ತದೆಯೆ? ನಮ್ಮ
ಡೋರಿ ರೂಪವಂತೆ. ಅವಳ ಈ ಗೌನು ಸೊಬಗಿನ ಗಟ್ಟಿ ಅದರೊಡನೆ ಈ ಟೋಪಿ ಸೇರಿದರೆ |


ಎಂದು ಗಾಳಿಯಲ್ಲಿ ತೇಲಾಡಲು ಮೊದಲಿಟ್ಟಳು. ಡೋರಿಯಂತೂ ಆನಂದಪರವಶಳಾದಂತೆ
ಅಭಿನಯಿಸಿದಳು.


"ಈ ಟೋಪಿಯನ್ನು ಧರಿಸಿ ನಾನು ಪಾರ್ಟಿಗೆ ಹೋದೆನಾದರೆ ಅಲ್ಲಿನ ಕಣ್ಣುಗಳೆಲ್ಲವೂ ನನ್ನ
ಮೇಲೆಯೆ. ಜನ ನಗುವುದಿಲ್ಲ. ಈ ಅಪರೂಪ ಸೌಂದರ್ಯಕ್ಕೆ ಮನಸೋತು, ತಮ್ಮ ಹತ್ತಿರ ಇಲ್ಲವಲ್ಲಾ
ಎಂದು ಅಸೂಯೆ ಪಟ್ಟುಕೊಳ್ಳುತ್ತಾರೆ?” ಎಂದಳು ಡೋರಿ.


ತಾಯಿ-ಮಗಳ ವಾದಕ್ಕೆ ನಾನು ಸೋತೆ. ಪಾರ್ಟಿಯಾದ ಮೂರು ದಿನಗಳಾದ ಮೇಲೆ ನನಗೆ
ಡೋರಿಯ ಮನೆಯಿಂದ ಕರೆಬಂತು, ಅವರ ಮನೆಗೆ ಬಂದು ಟೋಪಿಯನ್ನು ವಾಪಸು ತೆಗೆದುಕೊಳ್ಳಬೇಕೆಂದು.
ಹೋದಾಗ ಬಾಗಿಲು ತೆರೆದವರು ನನಗೆ ಲ್ಯಾಬೊರೆಟರಿಯಲ್ಲಿ ಪಾಠ ಹೇಳುತ್ತಿದ್ದ ಪ್ರೊಫೆಸರುಗಳಲ್ಲಿ ಒಬ್ಬರು!
ಅವರ ಹಿಂದೆ ನನಗೆ ಪರಿಚಿತಳಾಗಿದ್ದ ಮುದುಕಿ, ಅವಳ ಹಿಂದೆ ಡೋರಿ! ಪ್ರೊಫೆಸರು ಒಳಕ್ಕೆ ಸ್ಪಾಗತಿಸಿ
ಮುದುಕಿಯನ್ನು "ನನ್ನ ಹೆಂಡತಿ' ಎಂದೂ ಡೋರಿಯನ್ನು “ನನ್ನ ಮಗಳು' ಎಂದೂ ಪರಿಚಯಿಸಿದರು!
ನನ್ನ ಮೈ ಬೆವರಿತು.


ಟೀ ಕುಡಿಯುತ್ತ ಸಾಂಪ್ರದಾಯಿಕವಾದ ಕುಶಲ ಸಂಭಾಷಣೆಗಳಾದ ಮೇಲೆ ಡೋರಿ ನನ್ನ ಕೈಗೊಂದು
ನ್ಯೂಸ್‌ ಪೇಪರಿನ ಕಟಿಂಗ್‌ ಕೊಟ್ಟಳು. ಅದರ ಒಕ್ಕಣೆ ಹೀಗಿತ್ತು” ಲಿಬರಲ್‌ ಆರ್ಟ್ಸ್‌ ಯೂನಿಯನ್ನಿನ
ಆಶ್ರಯದಲ್ಲಿ ನಡೆದ ಪಾರ್ಟಿಯಲ್ಲಿ ಡೋರಿ ತೊಟ್ಟುಕೊಂಡಿದ್ದ ಟೋಪಿ ಆಹ್ವಾನಿತರನ್ನೆಲ್ಲ ಬೆರಗುಗೊಳಿಸಿತು.
ಅದರ ನವೀನತೆಯೂ, ಸೊಬಗೂ, ಚಾತುರ್ಯವೂ ಎಲ್ಲರನ್ನೂ ಮೆಚ್ಚಿಸಿತು. ನಮ್ಮಲ್ಲಿರುವ ಉಡುಪು
ತಯಾರಿಕೆಯ ಕಲೆಗಾರರು ಈ ಟೋಪಿಯನ್ನು ಪರೀಕ್ಷಿಸುವುದು ಭವಿಷ್ಯದ ಫ್ಯಾಷನ್‌ ದೃಷ್ಟಿಯಿಂದ
ಅವಶ್ಯಕವಾಗಿದೆ.”


ಮಗಳು, ತಂದೆ, ತಾಯಿಗಳಿಗೆ ಹಿಗ್ಗೋ ಹಿಗ್ಗು. ಏನೋ ಮಹತ್ಕಾರ್ಯವನ್ನು ಸಾಧಿಸಿದಷ್ಟು ಹೆಮ್ಮೆ
ಸಂತೋಷ. ಕಳೆದ ಮೂರು ದಿನಗಳಿಂದ ಅವರ- ಮನೆಗೆ: ತಂಡ ತಂಡವಾಗಿ ಜನರು- ಡೋರಿಯ
ಗೆಳೆತಿಯರು ಮತ್ತು ಪಾರ್ಟಿಯ ವಿಷಯವನ್ನು ಪೇಪರುಗಳಲ್ಲಿ ಓದಿದವರು- ಟೋಪಿಯನ್ನು ಪರೀಕ್ಷಿಸಿ
ತಮಗೂ ಅಂತದೊಂದು ಬೇಕೆಂದು ಕೇಳುತ್ತಿರುವರಂದೂ. ಪ್ರತಿ ದಿನವೂ ಹತ್ತಾರು ಜನ ಫೋನಿನಲ್ಲಿ ಇದೇ
ವಿಷಯ ಪಸ್ತಾಪ ಮಾಡುತ್ತಿದ್ದಾರೆಂದೂ ಬಬ್ಬೊಬ್ಬರೂ ಬಿಡಿಸಿ ಬಿಡಿಸಿ, ತಿರುಗಿಸಿ ತಿರುಗಿಸಿ, ಉಪಮಾನ,
ಉಪಮೇಯ, ಉದಾಹರಣೆಗಳೊಂದಿಗೆ ಹೇಳಿಹರು. ನನಗೇನು ಪ್ರತ್ಯುತ್ತರವನ್ನು ಹೇಳಲು ತೋರಲಿಲ್ಲ.
“ಇದೇನು ಆಭಾಸ! ಹುಚ್ಚರನ್ನು ಕಂಡು ಮೆಚ್ಚುವವರನ್ನು ಹುಚ್ಚರೆಂದು ಸತೆಯಬೇಕೆ. ಅಥವಾ ಬೆಪ್ಪರೆಂದು
ಕರೆಯಬೇಕೆ?” ಎಂಬ 'ಪಕ್ಕೆಯೊಂದು ಮಾತ್ರ ಬ ಸಮನೆ ಮಿದುಳನ್ನು ಮೀಟುತ್ತಿತ್ತು. (ಇದನ್ನು
ಅವರೆದುರು ಹೇಳಲಿಲ್ಲ)


ಲೇಖಕರ ಪರಿಚಯ


ಬಿ.ಜಿ.ಎಲ್‌. ಸ್ವಾಮಿ ಸಸ್ಯ ವಿಜ್ಞಾನದಲ್ಲಿ ತಮ್ಮ ಸಂಶೋಧನೆಗಳಿಂದ
ಅಂತರಾಷ್ಟ್ರೀಯ ಮಾನ್ಯತೆ ಗಳಿಸಿದ ಬಿ.ಜಿ.ಎಲ್‌. ಸ್ವಾಮಿಯವರು ಖ್ಯಾತ ವಿದ್ವಾಂಸರಾದ
ಡಿ.ವಿ. ಗು೦ಡಪ್ಪನವರ "ಸುಪುತ್ರರು. ಆಧುನಿಕ ಇನ್ನ ಡದ ಮಹತ್ವದ ಲೇಖಕರಲ್ಲಿ
ಓರ್ವರಾದ ಇವರು ಸಂಗೀತ, ಚಿತ್ರಕಲೆ, ಶಾಸನ. ಸಂಶೋಧನ. ಪ್ರಾಚ ವಸ್ತು”
ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದವರು. ಕಾಲೇಜು ರಂಗ, ಕಾಲೇಜು ತರಂಗ,
ಪ್ರಾಧ್ಯಾಪಕನ ಪೀಠದಲ್ಲಿ, ತಮಿಳು ತಲೆಗಳ ನಡುವೆ, ಅಮೆರಿಕಾದಲ್ಲಿ ನಾನು, ನಮ್ಮ
ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ- ಮುಂತಾದ ಕೃತಿಗಳನ್ನು ರಚಿಸಿರುವ ಇವರಿಗೆ
"ಹಸಿರು ಹೊನ್ನು' ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಪ್ರಸ್ತುತ ಪಠ್ಯಭಾಗವನ್ನು ಅವರ "ಅಮೇರಿಕಾದಲ್ಲಿ ನಾನು' ಕೃತಿಯಿಂದ ಆರಿಸಲಾಗಿದೆ.


ಓದಿ ತಿಳಿಯಿರಿ


ಸೂರು- ಛಾವಣಿ ಮತ್ತು ಅದರ ಇಳಿಜಾರಾದ ಪಕ್ಕ; ಆರಭ್ಯ- ಪ್ರಾರಂಭ ; ತೊಡುಗೆ- ತೊಟ್ಟುಕೊಳ್ಳುವ
ವಸ್ತು ; ತಲೆ ತಲಾಂತರ-ಬಹಳ ವರ್ಷಗಳಿಂದ ; ಅವಮರ್ಯಾದೆ- ಅಪಮಾನ ; ಹ್ಯಾಟು - ಒಂದು
ಬಗೆಯ ಟೋಪಿ ; ಸನ್ನಿಧಾನ - ಸಮೀಪ ; ಧೋತ್ರ- ಪಂಚೆ; ಕೂಲಂಕಷವಾಗಿ - ವಿವರವಾಗಿ,
ಸಮಗವಾಗಿ ; ಪೋಕರಿತನ - ಪುಂಡತನ ; ತೊಡಕು - ತೊಂದರೆ ; ಮಾಟ - ಮಾದರಿ, ರೀತಿ ;
ಹರವು- ಬಡಾವಣೆ ; ಪುರುಸೊತ್ತು- ಬಿಡುವು, ವಿರಾಮ ; ತಬ್ಬಿಬ್ಬಾಗು- ಕಕ್ಕಾವಿಕ್ಕಿಯಾಗು, ದಿಗ್ಗಮೆಯಾಗು;
ದಿಗಿಲು - ಭಯ ;ಊದಾಬಣ್ಣ - ಬೂದುಬಣ್ಣ ;ಎರವಲು - ಸಾಲ; ವಿಶದ - ಸ್ಪಷ್ಟ;
ಅಭ್ಯಂತರ - ಅಡ್ಡಿ ; ಬೆಪ್ಪ - ದಡ್ಡ.


ಗಮನಿಸಿ ತಿಳಿಯಿರಿ
ಚೌಲ- ಮಗುವಿನ ಹುಟ್ಟುಗೂದಲನ್ನು ತೆಗೆಸುವುದಕ್ಕೆ ಮಾಡುವ ಸಮಾರಂಭ.


ಮುಂಜಿ- ಉಪನಯನ, ಬ್ರಹ್ಮೋಪದೇಶ, ಜನಿವಾರ ಹಾಕಿ ಮಂತ್ರೋಪದೇಶ ಮಾಡುವ ಸಮಾರಂಭ.
ಮಕ್ಕರಿ- ಬಿದಿರಿನಿಂದ ಮಾಡಿದ ಬುಟ್ಟಿ ಕಣ್ಣು ಬಾಯಿ ಬಿಟ್ಟು ನೋಡು- ಆಶ್ಚರ್ಯದಿಂದ ನೋಡು.
ಪಾಯಿಂಟಿಗೆ ಬರುವುದು- ಮುಖ್ಯ ವಿಷಯಕ್ಕೆ ಬರುವುದು.


ಸೂಟು- ಒ೦ದು ಬಗೆಯ ಪುರುಷರ ಉಡುಗೆ
ಖಜಾಂಚಿ- ಹಣಕಾಸಿನ ಮೇಲ್ವಿಚಾರಕ;


ಅಭ್ಯಾಸ ಚಟುವಟಿಕೆಗಳು


ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
ನಮ್ಮಲ್ಲಿ ಹಿರಿಯರನ್ನು ಕಾಣುವಾಗ ಯಾವುದು ಮರ್ಯಾದೆ ಆಗಿದೆ 9
ಲೇಖಕರಿಗೆ ಹ್ಯಾಟನ್ನು ಹಾಕಿಕೊಂಡರೆ ಯಾವ ಅನುಭವವಾಗುತ್ತದೆ?
ಪರದೇಶಗಳಿಂದ ಹಿಂತಿರುಗಿದ್ದ ಗೆಳೆಯರು ಲೇಖಕರಿಗೆ ಏನೆಂದು ಉಪದೇಶ ಮಾಡಿದರು?
ಲೇಖಕರು ಆರಿಸಿಕೊಂಡ ಟೋಪಿ ಯಾವ ಶೈಲಿಯದು?
ಅಮೆರಿಕಾದ ಯಾವ ಪ್ರದೇಶದಲ್ಲಿ ಲೇಖಕರು ಕೆಲಸ ಮಾಡುತ್ತಿದ್ದರು?
ಮುದುಕಿ ಮತ್ತು ಡೋರಿ ಲೇಖಕರಿಂದ ಏನನ್ನು ಎರವಲು ಪಡೆದರು?
ಜನರು ಯಾವುದರ ಬಗೆಗೆ ಡೋರಿಯ ಕುಟುಂಬವನ್ನು ವಿಚಾರಿಸುತ್ತಿದ್ದರು?


ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
೧. “ತಲೆಗೊಂದು ಸೂರು' ಎಂಬ ಸಂಪ್ರದಾಯ ಹೇಗೆ ನಡೆದುಬಂದಿದೆ?
೨. ಅಮೇರಿಕನ್ನರಲ್ಲಿ ಹ್ಯಾಟ್‌ ಧರಿಸುವ ಬಗೆಗಿನ ನಾಗರಿಕ ಲಕ್ಷಣ ಯಾವುದು ?


೩. ಲೇಖಕರ ಟೋಪಿ ಹೇಗಿತ್ತು?
೪. ಟೋಪಿಯ ಬಗ್ಗೆ ಪೇಪರ್‌ನಲ್ಲಿ ಬಂದ ವಿಷಯವೇನು?


ಸಂದರ್ಭ ಸಹಿತ ವಿವರಿಸಿರಿ.


ತಲೆಯುಡುಗೆಯ ನಂಟು ಹಿಂದೂ ಜನಾಂಗಕ್ಕೆ ಮಾತ್ರ ಸೇರಿದ್ದಲ್ಲ.
ಹ್ಯಾಟಲ್ಲದೆ ಪರದೇಶ ಪ್ರಯಾಣ ಮಾಡುವುದುಂಟೆ?
.. ನೀವು ಹ್ಯಾಟು ಹಾಕಿಕೊಳ್ಳುವುದಿಲ್ಲವೆ? ಅದರಂತೆಯೇ ಇದೂ.
೪ ಡೋರಿಯ ಹತ್ತಿರ ಈ ಗವನಿಗೊಪ್ಪವ ತಲೆಯುಡುಗೆಯಿಲ್ಲ.


ಈ ಪಾಠದಲ್ಲಿಬಂದಿರುವ ನಾಲ್ಕು ಇಂಗ್ಲಿಷ್‌ ಭಾಷೆಯ ಪದಗಳನ್ನು ಗುರುತಿಸಿ ಬರೆಯಿರಿ.


ಈ ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯ ಹೆಸರನ್ನು ತಿಳಿಸಿರಿ.
ನಮ್ರತೆಯಿಂದ. ಮಳೆಗಾಲ. ಇನ್ನೊಂದು. ಲಾಂಛನವನ್ನು. ತಲೆಗೂದಲು


ಈ ಕೆಳಗಿನ ಪದಗಳಿಗೆ ನಿಘಂಟು ನೋಡಿ ಅರ್ಥ ಬರೆಯಿರಿ.
ನಮ್ರತೆ. ಲಾಂಛನ. ವಿಮುಖ.


ವ್ಯಾಕರಣಾಭ್ಯಾಸ


ಈ ಕೆಳಗಿನ ವಾಕ್ಯಗಳನ್ನು, ಮತ್ತು ಕೆಳಗೆ ಗೆರೆ ಎಳೆದ ಪದಸಮೂಹವನ್ನು ಗಮನಿಸಿರಿ.
ಸ್ಪರ್ಧೆಯ ಫಲಿತಾಂಶ ಶಿಳಿಯಲು)ರಾಧಾ ಒಂಟಿ ಕಾಲಿನ ಮೇಲೆ ನಿಂತಿದ್ದಳು.
ಕರೀಮನ ಸ್ನೇಹಿತನೇ ಅವನಿಗೆ ಟೋಪಿ ಹಾಕಿ ಹೋದ.
ತಂದೆ ಹೇಳಿದ್ದಕ್ಕೆಲ್ಲ ಮೇರಿ ತಲೆಯಾಡಿಸಿದಳು.


ಎಳೆದ ಪದಗಳನ್ನು ಮತ್ತೊಮ್ಮೆ ಓದಿ. ಇಲ್ಲಿ ಒಂದಕ್ಕಿಂತ ಹೆಚ್ಚು ಪದಗಳಿವೆ. ಇವುಗಳಿಗೆ
ಪ್ರತ್ಯೇಕವಾಗಿ ಸಾಮಾನ್ಯ ಅರ್ಥ ಒಂದಿದ್ದರೂ, ಇಲ್ಲಿ ಈ ಪದಗಳ ಸಮೂಹಕ್ಕೆ ಬೇರೆಯಾದ ಅರ್ಥವಿದೆ.
ಉದಾಹರಣೆಗೆ- ಒಂಟಿ ಕಾಲಿನ ಮೇಲೆ ನಿಲ್ಲು- ಎಂದರೆ, ಒಂದು ಕಾಲಿನ ಮೇಲೆ ನಿಲ್ಲು ಎಂದಲ್ಲ,
ಬದಲಾಗಿ ಬಹಳ ಕುತೂಹಲದಿಂದಿರು ಎಂದರ್ಥ. ಟೋಪಿ ಹಾಕು ಎಂದರೆ ಮೋಸಮಾಡು
ಎ೦ದು, ತಲೆಯಾಡಿಸು ಎಂದರೆ ಒಪ್ಪಿಗೆ ಸೂಚಿಸು ಎಂದು ಅರ್ಥವಾಗುತ್ತದೆ. ಹೀಗೆ ವಿಶೇಷಾರ್ಥ
ಬರುವಂತೆ ಬಳಸುವ ಪದಗುಚ್ಛೆಗಳನ್ನು ನುಡಿಗಟ್ಟುಗಳು ಎನ್ನುವರು. ಇವು ನಮ್ಮ ಮಾತಿಗೆ ಒಂದು
ಶೋಭೆಯನ್ನು ತರುತ್ತವೆ.


ಈ ಕೆಳಗಿನ ಪ್ರತಿಯೊಂದು ನುಡಿಗಟ್ಟನ್ನೂ ಬಳಸಿ ವಾಕ್ಯರಚಿಸಿರಿ.


೧. ಕಣ್ಣು ಬಾಯಿ ಬಿಟ್ಟು ನೋಡು. ೨. ಕಾಲಿಗೆ ಬುದ್ಧಿ ಹೇಳು ೩. ತಲೆ ಓಡಿಸು.


ಪ್ರಾಯೋಗಿಕ ಚಟುವಟಿಕೆ


ಲೇಖಕರು ಡೋರಿ ಮತ್ತು ಅವಳ ತಾಯಿಯನ್ನು ಬಸ್‌ ನಿಲ್ದಾಣದಲ್ಲಿ ಭೇಟಿಯಾದ ಪ್ರಸಂಗವನ್ನು
ತರಗತಿಯಲ್ಲಿ ಅಭಿನಯಿಸಿರಿ.


ಈ ಕೆಳಗಿನ ಪ್ರಕಟಣೆಯನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.


ಕನಾಟಕ ಹಲಾ ವೇದಿಕೆ, ಚಿತಡದುದ: ಈ
ನಳ : ದಮಯಂತಿ
ಗೊಂಬೆಯಾಟ ಪ್ರದರ್ಶನ
ದಿನಾಂಕ : 24.06.2013
ಸ್ಥಳ : ಪುರಭವನ, ಚಿತ್ರದುರ್ಗ
ಸಮಯ : ಸಂಜೆ 5 ಗಂಟೆ


ಎಲ್ಲರಿಗೂ ಆದರದ ಸ್ಥಾಗತ


ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
ಗೊಂಬೆಯಾಟ ಪ್ರದರ್ಶನವನ್ನು ಏರ್ಪಡಿಸಿರುವವರು ಯಾರು?
ಪ್ರದರ್ಶನದ ಸಮಯವೇನು?
ಪುರಭವನದಲ್ಲಿ ಯಾವ ಗೊಂಬೆಯಾಟ ಪ್ರದರ್ಶನವಿದೆ?
ಗೊಂಬೆಯಾಟಕ್ಕೆ ಪ್ರವೇಶ ಶುಲ್ಕ ಎಷ್ಟು?
ಇ ಕೆಳಗಿನ ಪದ್ಯದಲ್ಲಿರುವ ಅನುಕರುಣಾವ್ಯಯಗಳನ್ನು ಗುರುತಿಸಿ ಬರೆಯಿರಿ.
ಫಳ ಬಾಂಬು ಪಟ ಪಟ ಹನಿಯು
ಬ ಬ ಪೃಷ್ಟ ಯ ಜುಳು ಜುಳು ನೀರು
ಅಘಿಪ ಮಳಯ ಡು ಗಡ ಗಡ ನಡುಗುವ ಚಳಿಯಲ್ಲಿ!
ಧಡ ಧಡ ಓಡುವ ಸರ ಸರ ಕಾಗದ ದೋಣಿಯ ಮಾಡಿ
ಥಕ ಥಕ ಕುಣಿಯುವ ಕಾಲುವೆ ನೀರಲಿ ತೇಲಿಸುವ
ಗಿರಿ ಗಿರಿ ತಿರುಗುವ ಮಳೆಯಲ್ಲಿ! ಇಡು ಚಾಡಿ ಹತ
ಕಾಯುವ ಜಿಟಿ ಜಿಟಿ ಮಳೆಯಲ್ಲಿ!


ಬೇರೆ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಜೀವಿಸು


ತತ ತ


ಆಶಯ : ಜನಸಾಮಾನ್ಯರು ರಚಿಖಿದ ಸಾಹಿತ್ಯ ವಿಪುಲವೂ ವೈವಿಧ್ಯ ಪೂರ್ಣವೂ ಆದುದಾರದೆ.
ಜನಪದರು ತಮ್ಮ ಜೀವನದ ಅನುಭವದಳಆದೆ ಬಣ್ಣ ತುಂಟ, ಆಹಾರ ನೀಡಿದ್ದು ಈ ಸಾಹಿತ್ಯದ
ಮೂಲಕ. ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಈ ಜನಪದ ಸಾಹಿತ್ಯದ
ಸೃಷ್ಟಿಕಾರ್ಯ ಪುರುಷ ಹಾದೂ ಮಹಿಳೆ ಇಬ್ಬಲಿ೦ದಲೂ ನಡೆಯಿದೆ. ಜನಪದ ಸಾಹಿತ್ಯದಲ್ಲ ತ್ರಿಪದಿಯೆ€
ಪ್ರಮುಖವಾಗಿರುತ್ತದೆ. ಬಡಿರಚನೆಗಳಾದ ಈ ತ್ರಿಪದಿರಳಲ್ಲ ಜನಪದರು ತಮ್ಮ ಬದುಕಿನ ಪರಪ-
ಏರಪ. ನೋವು-ನಲವು. ಪ್ರಿಂತಿ-ವಾಘ್ಸಲ್ಯ, ಆಪಲಿಕ-ಬೇಪಲಿಕ ಮೊದಲಾದ ಅನುಭವದಳನ್ನು
ಪ್ರಕಟಪಡಿಐಿದ್ದಾರೆ. ಪ್ರಸ್ತುತ ಪದ್ಯದಲ್ಲಿ ತಾಂ ತನ್ನ ಮದುವಿನ ಮೇಲೆ ಹೊ೦ದಿರುವ ಪ್ರಿಂತಿ ವಿವಿಧ
ಲೀತಿಯಲ್ಲ ಹೊರಹೊಮ್ಮಿದೆ.


ತೊಟ್ಟೀಲಿನೊಳಗೆ ಪುಟ್ಟ ಕಂದ ಮಲಗ್ಯವನೆ


ಸೃಷ್ಟಿಗೊಡೆಯನ ಮಡದಿಯ | ಪಾರ್ವತಿದೇವಿ
ದೃಷ್ಟಿ ತಗಲ್ಯಾವು ತೆರೆಹಾಕ


ಹಸಿರಂಗಿ ತೊಡೆಸೀದ ಹಾಲ್ಲಡಗ ಇಡಸೀದ
ಹಳ್ಳಕೆ ನೀನು ಬರಬ್ಯಾಡ ।.ನನ:ಕಂಡ
ಬೆಳ್ಳಕ್ಕಿ ಹಿಂಡು ಬೆದರ್ಯಾವ ॥
ತವರೂರಿಗ್ಲೋದಾಗ ನವಿಲ ಬಣ್ಣದ ಪಕ್ಷಿ
ತಲಿಬ್ಯಾನಿಯೆದ್ದು ಅಳುತಿತ್ತು । ಕಂದನ
ಚೆಲುವಿಕೆ ನೋಡಿ ನಗುತಿತ್ತು ॥
ಗುಜ್ಜಿ ನನ ಕಂದಯ್ಯ ಗೆಜ್ಜೆ ಸಪ್ಪಳ ಕೇಳಿ |"
ನಿಬ್ಬಣದೆತ್ತು ಬೆದರ್ಯಾವ | ಬೆಟ್ಟಸೇರಿ
ಮಧ್ಯಾಣದ ಮೇವ ಮರೆತಾವ
ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು । ಕಂದಯ್ಯ
ಜ್ಯೋತಿಯೆ ಆಗು ಜಗಕೆಲ್ಲ ॥


ಕವಿ ಪರಿಚಯ:


ಜನಪದ ಸಾಹಿತ್ಯ ನಿರ್ದಿಷ್ಠ ವ್ಯಕ್ತಿ ರಚನೆಯಲ್ಲ. ಅದು ಸಮೂಹ ಜನ್ಯ. ತಲೆಮಾರಿನಿಂದ ತಲೆಮಾರಿಗೆ
ಬಾಯಿಂದ ಬಾಯಿಗೆ ಬೆಳೆದು ಬಂದಿರುವ ಜನಪರ ಕಾವ್ಯ, ಸಾಮೂಹಿಕ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ.
ಇಲ್ಲಿಯ ಜನಪದ ಪದ್ಯಗಳು ತ್ರಿಪದಿಯಿಂದ ಕೂಡಿವೆ. ತ್ರಿಪದಿ ಎಂದರೆ ಮೂರು ಸಾಲಿನ ಪದ್ಯ


ಓದಿ ತಿಳಿಯಿರಿ:

ಮಲಗ್ಯವನೆ - ಮಲಗಿರುವನು ; ಸೃಷ್ಟಿಗೊಡೆಯ - ಭಗವಂತ ;

ತಗಲ್ಯಾವು- ತಗಲುತ್ತವೆ ; ಹಸಿರಂಗಿ- ಹಸಿರು ಅಂಗಿ ;

ಬೆದರ್ಯಾವ- ಬೆದರುತ್ತವೆ ; ತಲಿಬ್ಯಾನಿ - ತಲೆ ನೋವು ;

ಗುಜ್ಜಿ ಡಾ ಚಿಕ್ಕಮಗು ; ಮಧ್ಯಾಣ 1 ಮಧ್ಯಾಹ್ನ ; ಚೂಡಾಮಣಿ - ಒಂದು ಅನರ್ಫ್ಯ ರತ್ನ ;
ಬೆಳ್ಳಕ್ಕಿ — ಕೊಕ್ಕರೆ .

ಗಮನಿಸಿ ತಿಳಿಯಿರಿ:

ದಿಬ್ಬಣ - ಮದುವೆ ಮೆರವಣಿಗೆ

ಹಾಲ್ಗಡಗ - ಮಕ್ಕಳ ಕಾಲಿಗೆ ತೊಡಿಸುವ ಬೆಳ್ಳಿ ಕಡಗ


ಅಭ್ಯಾಸ ಚಟುವಟಿಕೆ
ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ:
ಪುಟ್ಟ ಕಂದಯ್ಯನು ಎಲ್ಲಿ ಮಲಗಿದ್ದಾನೆ?
ತನ್ನ ಕಂದನಿಗೆ ತಾಯಿಯು ಯಾವ ದೃಷ್ಟಿ ತಗಲುತ್ತದೆ ಎಂದಿದ್ದಾಳೆ?
ತಾಯಿ ಕಂದಯ್ಯನಿಗೆ ಏನೇನು ಹಾಕಿ ಅಲಂಕಾರಗೊಳಿಸಿರುವಳು?
ನವಿಲ ಬಣ್ಣದ ಪಕ್ಷಿ ಏಕೆ ಅಳುತ್ತಿತ್ತು?
ನಿಬ್ಬಣದೆತ್ತು ಏಕೆ ಬೆದರುತ್ತವೆ?
ತಾಯಿ ತನ್ನ ಕಂದನ ಮಾತುಹೇಗಿರಬೇಕೆಂದು ಹಾರೈಸಿರುವಳು?
ಕೆಳಗಿನ ಪ್ರತಿಯೊಂದು ಪ್ರಶೆಗೂ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ :


ಪುಟ್ಟ ಕಂದನ ಸುಖನಿದ್ರೆ ಹಾಗೂ ಅಲಂಕಾರದ ಕುರಿತು ತಾಯಿ ಹೊಂದಿರುವ ಅಭಿಮಾನ
ಎಂತಹದು?


ಪುಟ್ಟ ಕ೦ದನ ಚೆಲುವಿಕೆ ಮತ್ತು ಆಟವನ್ನು ಕುರಿತು ತಾಯಿ ಏನೆಂದು ವರ್ಣಿಸಿರುವಳು?
೩. ಆಚಾರ, ನೀತಿ ಮತ್ತು ಮಾತಿನ ಕುರಿತು ತಾಯಿ ತನ್ನ ಮಗುವಿಗೆ ಏನೆಂದು ಹಾರೈಸಿರುವಳು?
ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಅವುಗಳಲ್ಲಿ
ಸೂಕ್ತವಾದದ್ದನ್ನು ಆರಿಸಿ ಬರೆಯಿರಿ :
೧. ಸೃಷ್ಟಿಗೊಡೆಯನ ಮಡದಿ

ಅ. ಪಾರ್ವತಿ ಬ. ನಿರ್ಮಲಾ ಕ. ಗಾಯತ್ರಿ ಡ. ಸಾವಿತ್ರಿ

ಮಗುವಿನ ಅಲಂಕಾರ ನೋಡಿ ಬೆದರುತ್ತವೆ

ಅ. ಗುಬ್ಬಿ ಬ. ಕಾಗೆ ಕ. ಬೆಳ್ಳಕ್ಕಿ ಡ. ನಎಲು



ಹು
೩.

೫.





೪. ನಿಬ್ಬಣದೆತ್ತು ಬೆದರುವುದು ಸಪ್ಪಳದಿಂದ
ಅ. ಬಳೆ ಸಪ್ಪಳ ಬ. ಗೆಜ್ಜೆ ಸಪ್ಪಳ ಕ. ಘಂಟೆ ಸಪ್ಪಳ ಡ. ತಟ್ಟೆ ಸಪ್ಪಳ


೫. ತಾಯಿ ತನ್ನ ಮಗು ಮಾತಿನಲ್ಲಿ ಹೀಗಿರಬೇಕೆಂದಿದ್ದಾಳೆ
ಅ. ಚೂಡಾಮಣಿ ಬ. ಸ್ಪರ್ಶಮಣಿ ಕ. ನಾಟ್ಯಮಣಿ ಡ. ಪರುಷಮಣಿ


ಈ ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ನಿಘಂಟಿನಿಂದ ಸಂಗ್ರಹಿಸಿ ಬರೆಯಿರಿ
ಸೃಷ್ಟಿ, ಹಿಂಡು , ಚೆಲುವು, ಮೇವು, ಜ್ಯೋತಿ
ವ್ಯಾಕರಣಾಭ್ಯಾಸ
ಕೆಳಗೆ ಕೊಟ್ಟಿರುವ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.
ಬ್ಯಾಸಕಿ , ಮಲಗ್ಯವನೆ, ಬೆದರ್ಯಾವ, ತಲಿಬ್ಯಾನಿ.


ಪ್ರಾಯೋಗಿಕ ಚಟುವಟಿಕೆ


ಈ ಪದ್ಯದಲ್ಲಿ ಬಳಸಲಾಗಿರುವ ಗ್ರಾಮ್ಯ ಪದಗಳನ್ನು ಸಂಗಹಿಸಿ,. ಅವುಗಳಿಗೆ ಗ್ರಾಂಥಿಕ ರೂಪ
ಬರೆಯಿರಿ


ಈ ಪದ್ಯವನ್ನು ಕಂಠಪಾಠ ಮಾಡಿ ರಾಗಬದ್ಧವಾಗಿ ಹಾಡಿರಿ
ಹಲಸಂಗಿ ಗೆಳೆಯರು ಸಂಗಹಿಸಿದ “ ಗರತಿಯ ಹಾಡು" ಕೃತಿಯನ್ನು ಓದಿರಿ.
ಜನಪದ ತ್ರಿಪದಿಗಳಲ್ಲಿ ಮೂಡಿ ಬಂದಿರುವ) ತಾಯಿಯ ಪ್ರೇಮವನ್ನು ಕುರಿತು ಓದಿ ತಿಳಿಯಿರಿ.


ವ್ಯಾಕರಣಾಭ್ಯಾಸ

ಕೆಳಗೆ ಕೊಟ್ಟಿರುವ ಗ್ರಾಮ್ಯ ನುಡಿಗಳ ಗ್ರಾಂಥಿಕ ರೂಪ ಬರೆಯಿರಿ.
ಬ್ಯಾಸಗಿ. ಮಲಗ್ಯವನೆ. ಬರಬ್ಬಾಡ. ಬೆದರ್ಯಾವ.
ಪೂರಕ ಓದು


ಯಾಕಳುವೆ' ಎಲೆ ರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು-ಸಕ್ಕರೆ
ನೀ ಕೇಳಿದಾಗ ಕೊಡುವೆನು


ಅಳುವ ಕಂದನ ತುಟಿಯು ಹವಳದ ಕುಡಿಹಾ೦ಗ
ಕುಡಿಹುಬ್ಬು ಬೇವಿನೆಸಳ್ಳಾಂಗ-ಕಣ್ಣೋಟ
ಶಿವನ ಕೈಯಲಗು ಹೊಳೆದಾಂಗ


ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ-ಕಂದನಂಥ
ಮಕ್ಕಳಿರಲವ್ವ ಮನೆತುಂಬ.


ಗದ್ಯಪಾಠ
೧೮. ಬಲ್‌ಡೋಜರ್‌ ಸಂಸ್ಕೃತಿ
- ನಾಗೇಶ ಹೆಗಡೆ


ಆಶಯ : ಏಪರ್ದದ ನಿತ್ಯ ಕ್ರಿಯೆಗಳನ್ನು ಹತ್ತಿಕ್ಚಲೆ೦ದೂ, ತಿದ್ದಲೆಂದೂ. ಈ 2೦ನೇ ಶತಮಾನದಲ್ಲಿ
ಅವತಲಿ ಬ೦ದ ಯಂತ್ರ ಬುಲ್‌ಡೋಜರ್‌. ನೂರು ಜನರ ಕೆಲಸವನ್ನು ತಾನೊಂದೆ ಕ್ಷಣಾರ್ಧದಲ್ಲಿ
ಮಾಡಿ ಮುಗಿಸುವ ಈ ಯಂತ್ರ. ಬಡವ-ಬಲ್ಲದರ ಮಧ್ಯೆಯ ಅ೦ತರವನ್ನೂ ನೂರುಪಟ್ಟು ಹೆಚ್ಚಿಸುತ್ತದೆ.
ನೆಲವನ್ನು ಅದೆದು ಬದೆದು ಬಹಿದೆ ತಳ್ಳುವುದೇ ಅಭವೃದ್ಧಿಯ ಮಹಾಕಶಾರ್ಯವೆಂಬ ಭ್ರಮೆ ಹುಟ್ಟಲಿ
ಪ್ರಕೃತಿಯನ್ನು ವಿಕೃತಿಯಾಗಿ ಪಲಿವರ್ತಿಪುತ್ತದೆ.


ಅರವತ್ತರ ದಶಕದಲ್ಲಿ ಶಿರಸಿ ಬಳಿಯ 'ಯಡಳ್ಳಿ ಹೈಸ್ಕೂಲ್‌ನಲ್ಲಿ ನಾನು ಓದುತ್ತಿದ್ದೆ. ಪಕ್ಕದ ಹೆದ್ದಾರಿಯಲ್ಲಿ
ಒಂದು ದಿನ ಬುಲ್‌ಡೋಜರ್‌ ಗುಡುಗುಡು ಸದ್ದು ಕೇಳಿ, ಅದಿನ್ನೂ ಫರ್ಲಾಂಗ್‌ ದೂರವಿರುವಾಗಲೇ
ನೋಡಲು ನಾವೆಲ್ಲ ಓಡಿದ್ದೇ ಓಡಿದ್ದು. ಅದರ ಸರಪಳಿ ಚಕ್ರ, ಭಾರಿ ಗಾತ್ರ, ಕಬಂಧ ಬಾಹುಗಳು, ಟಾರ್‌
ರೋಡಿನಲ್ಲಿ ಮೂಡುವ ಅದರ ಚಕ್ರದ ಹಲ್ಲುಗಳ ಗುರುತುಗಳು ಬೆಕ್ಕಸ ಬೆರಗಾಗಿ ನಾವೆಲ್ಲ ನೂರಿನ್ನೂರು
ಮಕ್ಕಳು ದಿಬ್ಬಣದಂತೆ ಅದರೊಂದಿಗೇ ನಡೆಯುತ್ತ ಬಂದೆವು. ಚಾಲಕ ಮದುಮಗನಂತೆ ಅಷ್ಟೆತ್ತರದಲ್ಲಿ
ಕೂತು ನಮ್ಮ ಕುತೂಹಲ ತಣಿಸಲೆಂದು ಕಪಿಚೇಷ್ಟೆ ಮಾಡುತ್ತಿದ್ದ.


RS RY


ಹೈಸ್ಕೂಲು ಸಮೀಪಿಸುವಷ್ಟರಲ್ಲಿ ನಮ್ಮ ಶಿಕ್ಷಕರೂ ಬುಲ್‌ಡೋಜರ್‌ ನೋಡಲು ರಸ್ತೆಪಕ್ಕಕ್ಕೆ ಬಂದು
ನಿಂತಿದ್ದರು. ಚಾಲಕ ತನ್ನ ವಾಹನವನ್ನು ನಿಧಾನಗೊಳಿಸಿದ. ನಮ್ಮನ್ನೆಲ್ಲ ದೂರ ಸರಿಯುವಂತೆ ಸನ್ನೆ
ಮಾಡಿ - ಗಕ್ಕನೆ ಇಡೀ ಗಾಡಿಯನ್ನು ೯೦ ಅಂಶ ಕೋನ ಮಾಡಿ ತಿರುಗಿಸಿದ. ರಸ್ತೆ ಪಕ್ಕದ ಕಾಲುವೆಯನ್ನೂ
ದಿಬ್ಬವನ್ನೂ ಕಡೆಗಣಿಸಿ ಆ ಬೃಹತ್‌ ಎ೦ಜಿನ್ನು ಅನಾಮತ್ತಾಗಿ ಹೊಟ್ಟೆ ಹೊಸೆಯುತ್ತ ಬೆಟ್ಟ ಏರಿತು. ನಾವೆಲ್ಲ
ಅವಾಕ್ಕಾಗಿ ನೋಡುತ್ತಿರುವಂತೇ ಅಲ್ಲಿ ಬೆಳದಿದ್ದ ಹತ್ತಾರು ಮರಗಳ ಪೈಕಿ ಅತ್ಯಂತ ದೊಡ್ಡ ಮರದ ಬುಡಕ್ಕೆ
ಅದು ತನ್ನ ಮೂತಿಯನ್ನು ಒತ್ತಿತು. ಒಮ್ಮೆ ಜೋರಾಗಿ ಹೊಂಕರಿಸಿದಂತೆ ಸದ್ದು ಮಾಡಿ ದಢಾರೆಂದು ಆ
ಮರವನ್ನು ಬೇರು ಸಹಿತ ಕಿತ್ತು ಬೀಳಿಸಿತು. ಈ ಮಹಾಕಾರ್ಯದಲ್ಲಿ ತನಗೆ ಏನೇನೂ ಶ್ರಮವಾಗಿಲ್ಲವೆಂಬುದನ್ನು


ತೋರಿಸಲೆಂಬಂತೆ ಒಮ್ಮೆ ಮೂತಿಯನ್ನು ಕೆಳಕ್ಕೆ ಮೇಲಕ್ಕೆ ಮಾಡಿ. ಮತ್ತೆ ೯೦ ಅಂಶ ಕೋನ ಮಾಡಿ
ಕುರುಚಲು ಗಿಡಗಂಟೆಗಳನ್ನು ಹೊಸೆದು ಹಾಕುತ್ತ ಶಿಸ್ತಿನ ಯೋಧನಂತೆ ಠಕ್ಕೆಂದು ಪಕ್ಕಕ್ಕೆ ತಿರುಗುತ್ತ ರಸ್ತೆ
ಸೇರಿ ತನ್ನ ಹಾದಿ ಹಿಡಿಯಿತು. ಚಾಲಕ ಹಿಂದಿರುಗಿ ನೋಡಿ ನಮಗೆಲ್ಲ ಕೈ ಬೀಸಿ ವಿದಾಯ ಹೇಳಿದ.


ಮುಂದೆ ಸುಮಾರು ಎರಡು ಮೂರು ವಾರಗಳ ಕಾಲ ನಮಗೆ ಅದೇ ಘಟನೆಯೇ ಚರ್ಚೆಯ
ವಸ್ತುವಾಗಿತ್ತು. ಒಣಗುತ್ತ ಬಿದ್ದ ಆ ಹೆಮ್ಮರ ಪ್ರದರ್ಶನ ತಾಣವಾಗಿತ್ತು. ತಿಂಗಳಾರು ಕಳೆದರೂ ಮಾಸದಷ್ಟು
ಆಳವಾಗಿ ಆ ದೈತ್ಯಯಂತ್ರ ಟಾರ್‌ ರಸ್ತೆಯನ್ನೂ ಬೆಟ್ಟದ ಗಟ್ಟಿ ನೆಲವನ್ನೂ ನಮ್ಮೆಲ್ಲರ ಕೋಮಲ ಭಾವನೆಗಳನ್ನೂ
ಘಾಸಿ ಮಾಡಿ ಹೋಗಿತ್ತು.


ಮುಂದೆ ನಾನು ಭೂವಿಜ್ಞಾನ ವಿದ್ಯಾರ್ಥಿಯಾಗಿ, ದೇಶದ ಭಾರೀ ಭಾರೀ ಗಣಿಗಳನ್ನೂ, ಬೃಹತ್‌
ನೀರಾವರಿ ಯೋಜನೆಗಳನ್ನು ಹತ್ತಿರದಿಂದ ನೋಡುವಂತಾದಾಗ ಬುಲ್‌ಡೋಜರ್‌ಗಳು ನನಗೆ ತೀರಾ
ಸಮೀಪವಾದದುಂಟು.


ಮನುಷ್ಯನ ಲೌಕಿಕ ಅವಶ್ಯಕತೆಗಳನ್ನೂ, ಆಡಂಬರಗಳನ್ನೂ ಪೂರೈಸಿಕೊಳ್ಳಬೇಕೆಂದರೆ ಕುಡುಗೊಲಿನಷ್ಟೇ
ಬುಲ್‌ಡೋಜರ್‌ ಕೂಡಾ ಅಗತ್ಯ ಎಂಬುದನ್ನು ನಾನು ನನಗೆ ಹೇಳಿಕೊಳ್ಳಲು ಯತ್ನಿಸುತ್ತೇನೆ. ನನ್ನ
ಮನೆಯ ಒಲೆಯ ಮೇಲೆ ಅನ್ನ ಬೇಯಬೇಕೆಂದರೆ ಅಲ್ಯೂಮಿನಿಯಂ, ಪಾತ್ರೆ ಬೇಕು; ಅದಕ್ಕೆ ಬೇಕಾದ
ಬಾಕ್ಸಾಯಿಟ್‌ ಅದುರನ್ನು ಅಗೆಯಲು ಈ ದೈತ್ಯಯಂತ್ರ ಬೇಕು. ಅನ್ನ, ಬೆ೦ದಿತೋ ಇಲ್ಲವೋ ನೋಡಲು
ಬೆಳಕು ಬೇಕು; ವಿದ್ಯುತ್‌ ಸ್ಥಾವರ ನಿರ್ಮಾಣ ಮಾಡಲು ಬುಲ್‌ಡೋಜರ್‌ ಬೇಕು. ಮೂಲಕ್ಕೇ ಬರಬೇಕೆಂದರೆ,
ಅಕ್ಕಿ ಬೆಳೆಯಲು ನೀರಾವರಿ ಬೇಕು; ಅಣೆಕಟ್ಟು ನಿರ್ಮಿಸಲು ಬುಲ್‌ಡೋಜರ್‌ ಬೇಕೇ ಬೇಕು.


ಆದರೂ ಕಾಂಪ್ರಮೈಸ್‌ ಸಾಧ್ಯವಾಗುತ್ತಿಲ್ಲ. ಕುಮರೆಮುಖದಿಂದ ಕಕ್ಕಲಾಗುತ್ತಿರುವ ಅದುರಿನ ಪುಡಿ
ರಾಶಿ ರಾಶಿಯಾಗಿ ಬ೦ದು ಭದ್ರಾನದಿಗೆ ಜೆಟ್ಟದಷ್ಟು ಮೆಕ್ಕಲು ಸೇರಿಸಲು ಇದೇ ಬುಲ್‌ಡೋಜರ್‌ ಕಾರಣ.
ಭದ್ರೆಯಲ್ಲಿ ನೀರಿನ ಒರತೆ ಕಡಿಮೆಯಾಗಿ, ಜಲಾಶಯದಲ್ಲಿ ತು೦ಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ
ನೀರಾವರಿಯಿಂದಾಗಿ ಕೃಷಿ ಭೂಮಿಯಲ್ಲಿ `ಜವುಳು -ಸವಳು ಶೇಖರವಾಗಿ ೨೫ ಸಾವಿರ ಹೆಕ್ಟೇರ್‌ ಗದ್ದೆ
ನಿರರ್ಥಕವಾಗಲೂ ಇದೇ ಕಾರಣ. ನದಿಯಲ್ಲಿ ನೀರಿನ ಪ್ರಮಾಣ ಕಮ್ಮಿಯಾಗಿ, ಕಾರ್ಲಾನೆಗಳ ಮಾಲಿನ್ಯ
ಮಡುಗಟ್ಟ ನಿಲ್ಲಲಿಕ್ಕೂ ಬುಲ್‌ಡೋಜರ್‌ ಕಾರಣ. ನಿಸರ್ಗದ ಶಕ್ತಿಗಳು ಲಕ್ಷಾಂತರ ವರ್ಷಗಳಿಂದ ನಿಧಾನವಾಗಿ
ಕೆಲಸ ಮಾಡಿ ನಮ್ಮೆಲ್ಲರ ಬದುಕಿಗೆ ಅನುಕೂಲವಾಗುವಂತೆ ನಿರ್ಮಿಸಿಟ್ಟ ಸಮತೋಲನವನ್ನು ಒಂದೇ
ಪಂಚವಾರ್ಷಿಕ ಯೋಜನೆಯಲ್ಲಿ ಅಧ್ದಾನ ಮಾಡಿ, ಮುಂದಿನ ಇಡೀ ಪೀಳಿಗೆಯ ಬದುಕು ದುಸ್ತರವಾಗುವಂತೆ
ಮಾಡುವ ಅಪರಾಧಿಯೂ ಬುಲ್‌ಡೋಜರ್‌.


ಅಪರಾಧಿಯೋ ಅಪದ್ದಾಂಧವ ಯಂತ್ರವೋ ತೂಗಿ ನೋಡಿ ಹೇಳಲು ನನಗಂತೂ ಸಾಧ್ಯವಿಲ್ಲ. ಈ
ಯಂತ್ರದ ನೆರವಿನಿಂದ ಕೈಗೊಳ್ಳಲಾಗುತ್ತಿರುವ ಭಾರೀ ಯೋಜನೆಗಳಿಂದ ಭೂ ಜೀವಿಗಳಿಗೆ ಭಾರೀ
ನಷ್ಟವಾಗುತ್ತಿದೆಯೆಂದು ಕೆಲವು ಅಧ್ಯಯನಗಳಿಂದ ಈಗೀಗ ಗೊತ್ತಾಗುತ್ತಿದೆ. ಆದರೂ ಯೋಜನಾ ತಜ್ಞರು
ಇನ್ನಷ್ಟು ಭಾರೀ ಯೋಜನೆಗಳನ್ನು ಸಿದ್ಧಪಡಿಸುತ್ತಲೇ ಇದ್ದಾರೆ. ಈಗ ಕೈಗೊಳ್ಳಲಾಗುತ್ತಿರುವ ನರ್ಮದಾ
ಕೊಳ್ಳ ಅಭಿವೃದ್ಧಿ ಯೋಜನೆಯಲ್ಲಿ ೨೫ ಸಾವಿರ ಕೋಟ ರೂಪಾಯಿ ವೆಚ್ಚದಲ್ಲಿ ೩೨೯ ದೊಡ್ಡ ಅಣೆಕಟ್ಟುಗಳು
ನಿರ್ಮಾಣವಾಗಲಿವೆ. ಹತ್ತಿರ ಹತ್ತಿರ ಹತ್ತು ಲಕ್ಷ ಬಡಜನರು, ಆದಿವಾಸಿಗಳು ತಮ್ಮ ಭೂಮಿ - ಮನೆ


ತ್ಯಜಿಸಿ ನಿರಾಶ್ರಿತರಾಗಲಿದ್ದಾರೆ. ಯಾರ ಅಭಿವೃದ್ಧಿ ಆಗಲಿದೆಯೆಂಬುದು ಮಾತ್ರ ಇನ್ನೂ ಸ್ಪಷ್ಟವಿಲ್ಲ.


ಪಂಚ ಮಹಾಭೂತಗಳ ಬಗ್ಗೆ ಹಾಗೂ ಪ್ರಕೃತಿ-ಪುರುಷರ ಏಕತೆಯ ಬಗ್ಗೆ ಉದಾತ್ತ ವಿಚಾರಗಳನ್ನಿಟ್ಟುಕೊಂಡು ಫ್‌
ಬ೦ದ ನಾವು ಕಳೆದ ಕೆಲವೇ ದಶಕಗಳಲ್ಲಿ ನೀರು, ಗಾಳಿ, ಭೂಮಿ, ಸಸ್ಯ, ಪ್ರಾಣಿಗಳ ಮಧ್ಯೆ ಹೀಗೇಕೆ
ಸಮತೋಲನ ಬಿಗಡಾಯಿಸುವಲ್ಲಿ ತಲ್ಲೀನರಾಗಿದ್ದೇವೆ? ಅಭಿವೃದ್ಧಿ ಎಂದರೆ ಅರಣ್ಯ ಬಲಿದಾನ, ಬಂಜರು


ಭೂಮಿಯ ವಿಸ್ತರಣೆ, ನೆಲಜಲ ಮಾಲಿನ್ಯ ಅನಿವಾರ್ಯವೆಂಬುದನ್ನು ಒಪ್ಪಿಕೊಳ್ಳತೊಡಗಿದ್ದೇವೆ 9)
ಬುಲ್‌ಡೋಜರ್‌ ಸಂಸ್ಕೃತಿ ನಮಗೇಕೆ ಅಪ್ಯಾಯಮಾನವಾಗುತ್ತಿದೆ! i
ಲೇಖಕರ ಪರಿಚಯ:


ಉತ್ತರಕನ್ನಡ ಜಿಲ್ಲೆಯ ಬಕ್ಕಮನೆ ಊರಿನ ನಾಗೇಶಹೆಗಡೆ ಪರಿಸರದ ಬಗೆಗೆ
ಗಾಢವಾಗಿ ಚಿಂತಿಸುವ ಪ್ರಮುಖ ಲೇಖಕರು. ಇವರು ಸ್ವಲ್ಪಕಾಲ ಉಪನ್ಯಾಸಕರಾಗಿ
ಸೇವೆ ಸಲ್ಲಿಸಿದ್ದಾರೆ. ದೇಶ-ವಿದೇಶಗಳನ್ನು ಸಂಚರಿಸಿರುವ ಇವರು ವೈಜ್ಞಾನಿಕ
ವಿಚಾರಗಳನ್ನು ಕನ್ನಡದಲ್ಲಿ ಸೊಗಸಾಗಿ ನಿರೂಪಿಸುತ್ತಾರೆ. ಸುಧಾ, ಪ್ರಜಾವಾಣಿ ಬಳಗದ
ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿರುವ ಇವರ ವಿಶಿಷ್ಟ ಕೃತಿ "ಇರುವುದೊಂದೇ ಭೂಮಿಗೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ಈ ಪಠ್ಯಭಾಗವನ್ನು
“ಇರುವುದೊಂದೇ ಭೂಮಿ”, ಕೃತಿಯಿಂದ ಆರಿಸಲಾಗಿದೆ.


ಒದಿ ತಿಳಿಯಿರಿ:


ವಿಕೃತಿ- ಕುರೂಪ, ಬೆಕ್ಕಸಬೆರಗಾಗು- ವಿಸ್ಮಯಗೊಳ್ಳು. ಅದೃಷ್ಟ- ಭಾಗ್ಯ. ಕಬಂಧ- ಮುಂಡ, ತಲೆಯಿಲ್ಲದ
ದೇಹ. ದಿಬ್ಬಣ- ಮದುವೆಯ ಮೆರವಣಿಗೆ. ಅನಾಮತ್ತು- ಇಡಿಯಾಗಿ, ಪೂರ್ತಿಯಾಗಿ. ವಿದಾಯ- ಬೀಳ್ಕೊಡುಗೆ.
ಅಧ್ವಾನ- ತೊಂದರೆ, ಹದಗೆಟ್ಟ ಕುಡುಗೋಲು. ಕೊಯ್ಯುವ ಸಾಧನ. ಮಡುಗಟ್ಟು- ನಿಂತಲ್ಲೆ ನಿಲ್ಲು.
ನಿರ್ಗತಿಕ- ಗತಿಯಿಲ್ಲದವ. ತೊತ್ತು- ಸೇವಕ/ಸೇವಕಿ. ಪಾವಟಿಗೆ- ಮೆಟ್ಟಿಲು


ಗಮನಿಸಿ ತಿಳಿಯಿರಿ:


ಆಪದ್ದಾಂಧವ- ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವವ. ಬುಲ್ಡೋಜರ್‌- ಬೃಹತ್‌ ಕೆಲಸವನ್ನು ಮಾಡಲು
ಬಳಸುವ ಒಂದು ಸಾಧನ. ಭೂವಿಜ್ಞಾನ- ಭೂಮಿಯ ರಚನೆಯ ಬಗೆಗೆ ಆಳವಾಗಿ ಅಧ್ಯಯನ ಮಾಡುವ
ವಿಜ್ಞಾನ ಶಾಖೆ


ಅಭ್ಯಾಸ ಚಟುವಟಿಕೆ:


ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:

೧. ನಾಗೇಶ ಹೆಗಡೆಯವರು ತಮ್ಮ ಹೈಸ್ಕೂಲ್‌ ಶಿಕ್ಷಣವನ್ನು ಎಲ್ಲಿ ಪಡೆದರು?

೨. ಲೇಖಕರು ಉಸಿರು ಬಿಗಿಹಿಡಿದು ಬುಲ್ಲೋಜರ್‌ ನೋಡಿದ್ದು ಎಲ್ಲಿ?

೩. ನಾಗೇಶ ಹೆಗಡೆಯವರಿಗೆ ಬುಲ್ಡೋಜರ್‌ ಯಾವಾಗ ಸಮೀಪವಾಗಿ ಕಾಣಿಸಿತು?



ಕುದುರೆಮುಖದಿಂದ ಕಕ್ಕಲಾಗುತ್ತಿರುವ ಅದಿರಿನ ಪುಡಿ ರಾಶಿರಾಶಿಯಾಗಿ ಬ೦ದು ಯಾವ
ನದಿಗೆ ಸೇರುತ್ತಿದೆ?


ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ :
ಲೇಖಕರು ವರ್ಣಿಸಿರುವ ಬುಲ್ಡೋಜರ್‌ ಸ್ವರೂಪ ತಿಳಿಸಿರಿ.
ಬುಲ್ಡೋಜರ್‌ ನಿರ್ವಹಿಸುವ ಕಾರ್ಯವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
ಅರ್ಥಮೂವರ್‌ ಎಬ್ಬಿಸಿದ ಕೆಂಧೂಳನ್ನು ಲೇಖಕರು ಸೇವಿಸಿದ ಪ್ರದೇಶಗಳು ಯಾವುವು?
ಹೆಸರಿಸಿರಿ.
ಬುಲ್ಡೋಜರ್‌ ಜತೆಗೆ ಕಾಂಪ್ರಮೈಸ್‌ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಲೇಖಕರು ನೀಡಿದ
ಕಾರಣಗಳಾವುವು?
ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದದ್ದನ್ನು
ಆರಿಸಿ ಬರೆಯಿರಿ.
೧. ಅಲ್ಯುಮಿನಿಯಮ್‌ ಅದಿರಿನ ಹೆಸರು
ಅ) ಬಾಕ್ಸಾಯಿಟ್‌ ಬ) ಹೆಮಟೈಟ್‌ ಕ) ಮ್ಯಾಗಟೈಟ್‌ ಡ) ಕ್ರೊಮೈಟ್‌
ಒಲೆಯ ಮೇಲೆ ಅನ್ನ ಬೇಯಿಸಬೇಕಾದರೆ ಈ ಪಾತ್ರೆ ಬೇಕು.
ಅ) ಬಂಗಾರ ಬ) ಕಬ್ಬಿಣ ಕ) ಅಲ್ಯುಮಿನಿಯಮ್‌ ಡ)'ಪ್ಲಾಸ್ಟಿಕ್‌



ಯಡಳ್ಳಿ ಈ ತಾಲೂಕಿನ ಹಳ್ಳಿಯಾಗಿದೆ.
ಅ) ಶಿರಸಿ ಬ) ಸಿದ್ಧಾಪುರ ಕ) ಕುಮಟಾ «ಡ)”ಕಾರವಾರ
ಲೇಖಕರು ಬುಲ್ಲೋಜರನ್ನು ಇದಕ್ಕೆ ಹೋಲಿಸಿದ್ದಾರೆ.
ಅ) ಕುಡುಗೋಲು ಬ) ಕೊಡಲಿ ಕ) ಗುದ್ದಲಿ ಡ) ಹಾರೆ
ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ.
ಈಗೀಗ, ಜಲಾಶಯ, ಲಕ್ಷಾಂತರ. ಫಲಾಫಲ, ಸಂಗ್ರಹಾಲಯ


ಪ್ರಾಯೋಗಿಕ ಚಟುವಟಿಕೆ
ಅ) ಈ ಪಾಠದಲ್ಲಿ ಬಂದಿರುವ ಆಂಗ್ಲಭಾಷಾ ಪದಗಳನ್ನು ಸಂಗ್ರಹಿಸಿ ಬರೆಯಿರಿ.
ಬ) ನಾಗೇಶ ಹೆಗಡೆಯವರ “ಇರುವುದೊಂದೇ ಭೂಮಿ' ಕೃತಿಯನ್ನು ಓದಿರಿ.
ಕ) ಬುಲ್‌ಡೋಜರ್‌ ಯಂತ್ರದಿಂದ ಆಗುವ ಅನುಕೂಲ - ಹಾನಿ ಎರಡನ್ನೂ ಚರ್ಚೆ ಮಾಡಿ.


ಶ್ರಮದ ಮೂಲದಲ್ಲೇ ಆನಂದದ ಅನುಭವ ಅಡಗಿದೆ


ಗದ್ಯಪಾಠ
೧೫. ಸಂತೋಷದ ಒಳಗುಟ್ಟು


(ಆಶಯ: ಮಾಡುವ ಕೆಲಸ ಯಾವುದೇ ಇರಲ, “ಕಾಯಕವೇ ಕೈಲಾಸ” ಎ೦ಬ ನಾಣ್ನುಡಿಯಂತೆ
ಅವರವರ ಕೆಲಸದಲ್ಲಿ ಸಂತೋಷವನ್ನು ಕಾಣ ಬೆಕು. ಜೀವನದಲ್ಲಿಯ ಸಂತೊಷ ನಮ್ಮ ಕೈಯಲ್ಲದೆ.
ಇದ್ದುದರಲ್ಲಯೆ9 ಸಂತೃಷ್ಪರಾಗಿ ಜಂವನವನ್ನು ನಡೆಖಿದರೆ ಮಾತ್ರ ಸುಖವಾಗಿ ಬಾಳಬಹುದು ಎಂಬುದೇ
ಈ ಪಾಠದ ಆಶಯವಾಗಿದೆ.)


ಗಿರಿಜಾಬಾಯಿ ನಮ್ಮಮ್ಮನ ಮನೆಯಲ್ಲಿ ಅಡುಗೆಯವರು. ಸದಾ ನಗುನಗುತ್ತಾ ಕೆಲಸ ಮಾಡುವ
ಅವರು ಎಂದಿಗೂ ತಮ್ಮ ಸ್ವಂತ ವಿಷಯ ಹೇಳುತ್ತಿರಲಿಲ್ಲ. ಸದಾ ಚೀಟಿ ಸೀರೆಯನ್ನೇ ಉಟ್ಟರೂ
ಪೀತಾಂಬರವೋ ಎಂಬಂತೆ ಸ೦ತೋಷದಿಂದಿರುತ್ತಿದ್ದರು. ತಲೆಯಲ್ಲಿ ಯಾವಾಗಲೂ ಹೂ ನಗುತ್ತಿದ್ದವು.
ತೃಪ್ತಿಯ ಕಳೆ ಮುಖದ ಮೇಲೂ ಕುಣಿಯುತ್ತಿತ್ತು. ಕೆಲಸ ಮಾಡುವಾಗ ದೇವರ ನಾಮವನ್ನೋ, ಕನ್ನಡ
ಸಿನಿಮಾದ ಹಾಡುಗಳನ್ನೋ ಗುನುಗುನಿಸುತ್ತಿದ್ದರು. ನಮ್ಮ ಮನೆಯಲ್ಲಿ ಬೇಕಾದಷ್ಟು ಕೆಲಸವಿದ್ದರೂ ಒಂದು
ಚೂರೂ ಬೇಸರಿಸದೆ ಕೆಲಸ ಮಾಡುತ್ತಿದ್ದರು. ಗೊಣಗುವುದ೦ತೂ ಗಾವುದ ದೂರವಿತ್ತು ಅವರ ವೈಯಕ್ತಿಕ
ಜೀವನದ ಕೆಲ ಅ೦ಶ ಮಾತ್ರ ನಮಗೆ ಗೊತ್ತಿದ್ದವು. ಗಂಡ ಅವರನ್ನು ಬಿಟ್ಟಿದ್ದ. ಒಬ್ಬನೇ ಮಗ ಶಾಲೆಯಲ್ಲಿ
ಕಲಿಯುತ್ತಿದ್ದ. ಇವರಿಗೆ ಹೆಚ್ಚಿನ ವಿದ್ಯಾಭ್ಯಾಸವಿಲ್ಲದ್ದರಿಂದ, ನಮ್ಮ ಊರು ಸಣ್ಣ ಊರಾಗಿದ್ದರಿಂದ, ಉದ್ಯೋಗದ
ಅವಕಾಶಗಳು ಕಡಿಮೆ ಇದ್ದವು. ಹೀಗಾಗಿ ಅವರು ಅಡುಗೆ ಕೆಲಸವನ್ನು ಅವಲಂಬಿಸಬೇಕಾಯಿತು.


ವಸಂತರಾವ್‌ ನಮ್ಮ ಕುಟುಂಬದ ಸ್ನೇಹಿತರು. ಬೆಂಗಳೂರಿನಲ್ಲಿಯ ಮಲ್ಟಿನ್ಯಾಷನಲ್‌ ಕಂಪನಿಯಲ್ಲಿ
ಹಿರಿಯ ಹುದ್ದೆಯಲ್ಲಿದ್ದರು. ಅವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದರು. ಬೆಂಗಳೂರಿನ ಜಯನಗರದಲ್ಲಿ
ದೊಡ್ಡ ಬಂಗಲೆ ಕಟ್ಟಿ ಒಳ್ಳೆಯ ಸೌಕರ್ಯದಲ್ಲಿದ್ದರು. ಯಾರಾದರೂ ಅಸೂಯೆ ಪಡುವಂಥ ಸುಂದರ
ಸಂಸಾರ ಅವರದಾದರೂ ಮುಖದಲ್ಲಿ ಸಂತೋಷದ ಕಳೆಯೇ ಇರಲಿಲ್ಲ.


“ನನ್ನ ಮಗ ಅವಿನಾಶ್‌ ಈಗ ಹನ್ನೆರಡನೇ ಕ್ಲಾಸಿನಲ್ಲಿದ್ದಾನೆ. ಚೆನ್ನಾಗಿ ಓದುತ್ತಾನೋ ಇಲ್ಲವೋ
ಎಂದು ಚಿಂತೆಯಾಗಿದೆ”.


ಅವಿನಾಶ್‌ ಉತ್ತಮ ವಿದ್ಯಾರ್ಥಿಯಾಗಿದ್ದು ಚೆನ್ನಾಗಿ ಓದುತ್ತಿದ್ದ. ಆದ್ದರಿ೦ದ ನನಗೆ ವಸ೦ತರ ಮಾತು
ಅಚ್ಚರಿ ತಂದಿತು.


“ನೀವೇಕೆ ಅವಿನಾಶನ ಬಗ್ಗೆ ಯೋಚನೆ ಮಾಡ್ತೀರಿ? ಖಂಡಿತವಾಗಿಯೂ ಅವನಿಗೆ ಒಳ್ಳೆಯ ಕಾಲೇಜಿನಲ್ಲಿ
ಸೀಟು ಸಿಗುತ್ತೆ”.


“ಅವಿನಾಶ್‌ ಐಐಟಿಯಲ್ಲಿಯೇ ಓದಬೇಕು ಇಲ್ಲಾಂದ್ರೆ ಓದಿ ಏನು ಪ್ರಯೋಜನ”? ವಸಂತ
ನಿಟ್ಟುಸಿರಾದರು.


ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಇಂತಹುದೇ ಕಾಲೇಜಿನಲ್ಲಿ ಸೀಟು ಸಿಕ್ಕಬೇಕೆಂದು ಒತ್ತಾಯ
ತರುವುದು ತೀರಾ ತಪ್ಪು ಕೆಲಸ. ಅದರಿಂದ ಮಕ್ಕಳ ಮನಸಿಗೆ ಒತ್ತಡ ಹೇರಿದಂತಾಗುತ್ತದೆ. ಲಕ್ಷಾಂತರ
ವಿದ್ಯಾರ್ಥಿಗಳು ಐಐಟಿ ಪರೀಕ್ಷೆ ಕಟ್ಟಿದ್ದರೂ ಕೆಲವೇ ಸಾವಿರ ಮಕ್ಕಳಿಗೆ ಅಲ್ಲಿ ಓದಲಾಗುತ್ತದೆ. ಒಂದು
ಅಂಕದ ಅಂತರದಲ್ಲಿ ಎಷ್ಟೋ ಜನ ಪ್ರವೇಶ ಕಳೆದುಕೊಳ್ಳುತ್ತಾರೆ. ಈ ಅಂಕ ವ್ಯತ್ಯಯ ಪರೀಕ್ಷಾ ಒತ್ತಡದಿಂದ
ಆಗಿರಬಹುದು! ಅಲ್ಲದೇ ಜೀವನದಲ್ಲಿ ಮುಂದೆ ಬರಲು ಐಐಟಿಗೇ ಹೋಗಬೇಕೆಂಬ ನಿಯಮವಿಲ್ಲ. ಇದೆಲ್ಲ
ವಸಂತರಾಯರಿಗೂ ಗೊತ್ತು ಆದರೂ ಅವರ ಮನ ಮತ್ತು ಮಾತು ಹೇಳಿದ್ದನ್ನೇ ಹೇಳುತ್ತಿದ್ದವು.


ವಸಂತರಾವ್‌ ಮತ್ತೊಮ್ಮೆ ಬಂದಿದ್ದಾಗ ಅವರ ಮುಖ ಇನ್ನೂ ಕಳೆಗು೦ದಿತ್ತು. “ಜೆ.ಪಿ ನಗರದಲ್ಲಿ
ಹೋದ ವರ್ಷ ಒಂದು ಫ್ಲಾಟ್‌ ಕೊಂಡುಕೊಳ್ಳಬೇಕೆಂದಿದ್ದೆ. ಆಗ ಅದರ ಬೆಲೆ ಮೂವತ್ತು ಲಕ್ಷ. ಈಗ
ಅದರ ಬೆಲೆ ಐವತು ಲಕ್ಷ ಆಗಿದೆ. ನನಗೆ ಎಷ್ಟೊಂದು ಹಾನಿಯಾಗಿದೆ. ಈ ಇಪ್ಪತ್ತು ಲಕ್ಷ ಎಲ್ಲಿಂದ ತರಲಿ”.
“ನಿಮಗೆ ಜಯನಗರದಲ್ಲಿ ಒಂದು ಮನೆ ಇದೆಯಲ್ಲಾ, ಜೆ.ಪಿ ನಗರದ ಸುದ್ದಿ ಬಿಟ್ಟುಬಿಡಿ. ಬೆಲೆ ಏರುತ್ತಿರುವ
ಬೆಂಗಳೂರಿನಲ್ಲಿ ಪ್ರತಿ ವರ್ಷವು ಭೂಮಿಯ ಬೆಲೆ ಗಗನ ಮುಟ್ಟುತ್ತಿದೆ”.


ವಸಂತರಾವ್‌ ನನ್ನ ಮಾತಿನಿಂದ ಸಮಾಧಾನಗೊಳ್ಳಲಿಲ್ಲ. ಅವರು ಬಯಸಿದ ಪ್ಲಾಟ್‌ನ ಬೆಲೆ ಮಾತ್ರ
ಏರಿದೆಯೇನೋ ಎಂದು ಕಳವಳಗೊಂಡರು.


ಇನ್ನಾರು ತಿಂಗಳ ನಂತರ ವಸಂತರಾವ್‌ ನಮ್ಮಲ್ಲಿಗೆ ಭೇಟಿಯಿತ್ತರು. ಈ ಬಾರಿ ಆತ ತೀರಾ ಇಳಿದು
ಹೋಗಿದ್ದರು.


“ಬೆಂಗಳೂರಿನಲ್ಲಂತೂ ಇರಲು ಅಸಾಧ್ಯವಾಗಿದೆ. ಇಲ್ಲಿ ಮದ್ರಾಸಿಗಿ೦ತಲೂ ಸೆಖೆ ಹೆಚ್ಚಿದೆ. ನಾವು
ಚಿಕ್ಕವರಿದ್ದಾಗ ಬೆ೦ಗಳೂರು ಒಂದು ಗಿರಿಧಾಮದ ಹಾಗೆ ಇದ್ದಿತು. ಆದರೆ ಈಗ ಏರ್‌ ಕ೦ಡೀಷನ್‌ ಇಲ್ಲದೆ
ಇರಲಾಗುವುದಿಲ್ಲ ಎಂಥಹ ಕಾಲ ಬಂ೦ದಿತಪ್ಪಾ” ಎಂದರು.


ವಿಶ್ವದ ಎಲ್ಲಾದೇಶದಲ್ಲೂ ಈಗ ಬಿಸಿ ಹೆಚ್ಚಿದೆ. ಇದಕ್ಕೆ ಬೆಂಗಳೂರು ಹೊರತಲ್ಲ. ಅಲ್ಲದೆ ಏರುತ್ತಿರುವ
ಜನಸಂದಣಿಯಿಂದ, ಬಹುಮಹಡಿ ಕಟ್ಟಡಗಳಿಂದ, ವಾಹನಗಳ ಗದ್ದಲದಿಂದ ಸೆಖೆ ಹೆಚ್ಚಾಗಿರುವುದು
ಸಾಮಾನ್ಯ. ಆದರೆ ವಸಂತರಾಯರಿಗೆ ಹೇಳುವವರು ಯಾರು? ಒಂದು ದಿನ ನನ್ನ ಅಮ್ಮನ ಮನೆಯಲ್ಲಿ
ನಾನು ಮತ್ತು ಗಿರಿಜಾಬಾಯಿ ಇಬ್ಬರೇ ಉಳಿದಿದ್ದೆವು. ಮನೆಯ ಇತರ ಸದಸ್ಯರು ಜಾತ್ರೆಗೆಂದು ಬೇರೆ
ಊರಿಗೆ ಹೋಗಿದ್ದರು. ನಾನು ಗಿರಿಜಾಬಾಯಿಯನ್ನು ಸುಮ್ಮನೆ ಕೇಳಿದೆ. “ಗಿರಿಜಾಬಾಯಿ ನಿಮ್ಮ ಗಂಡ
ಎಲ್ಲಿರುತ್ತಾರೆ? ಮಗನ್ನ ನೋಡ್ಲಿಕ್ಕೆ ಒಮ್ಮೆಯೂ ಬಂದಿಲ್ಲಾ?”


ಗಿರಿಜಾಬಾಯಿ ಒ೦ದು ನಿಮಿಷ ಮೌನವಾದರು. ನ೦ತರ ನಗುತ್ತಾ “ನಿಮ್ಮನೀ ಎದುರ್‌ಗೆ ಶಂಕರ
ಪಾಟೀಲ್ರದು ಮನೀ ಅದಲ್ರೀ, ಅವರ ಡ್ರೈವರ್‌ ವಿರೂಪಾಕ್ಷನ ನನ್ನ ಗ೦ಡ. ಅವ ಇನ್ನೊಂದು ಲಗ್ನ ಆಗಿ
ಉಣಕಲ್ಲಗ ಮನಿ ಮಾಡ್ಯಾನ”


ಅವರ ಮಾತು ನನಗೆ ಕೆಂಡ ಮುಟ್ಟದಂತಾಯ್ತು. ಏನು! ಗಿರಿಜಾಬಾಯಿ ಪ್ರತಿದಿನ ತನ್ನ ಗಂಡನನ್ನೂ
ಸವತಿಯನ್ನೂ ನೋಡುತ್ತಾರಾ?


“ನಿಮಗೆ ಸಿಟ್ಟುಬರಂಗಿಲ್ಲೇನು ಗಿರಿಜಾಬಾಯಿ?”


“ಊಂ ಮೊದಲ ಮೊದಲ ಬರ್ತಿತ್ತು ಆದರ ಈಗೀಗ ಬರಂಗಿಲ್ಲ. ನನಗ ದೇವ್ರು ಏನು ಕಡಿಮೆ
ಮಾಡಿದ್ದಾನಿ? ನನ್ನ ಮಗ ಗಣೇಶ ಸಾಲ್ಕಾಗ ಒಂದನೇ ನಂಬರ್‌ ಬರ್ತಾನ. ಅಲ್ಲದಾನ ನಿಮ್ಮವ್ವ ಭಾಳ
ಛೊಲೋ ಹೆಂಗ್ಸು ನಿಮ್ಮನೀ ಔಟ್‌ ಹೌಸ್‌ ಇರ್ಲಿಕ್‌ ಕೊಟ್ಟಾರ. ಹೊಟ್ಟೆ ನೆತ್ತಿ ನೋಡ್ಕೋತಾರ. ನಂಗ
ಭಾಳ ಮಕ್ಕಳಿದ್ದಿದ್ರ ಎದಿ ಒಡೀತಿತ್ತು ಈಗ ನಾ ಆರಾಮ ಇದ್ದೇನಿ ನೋಡಿ”


“ಅಲ್ರೀ ಗಿರಿಜಾಬಾಯಿ. ಮುಂದಿನ ನಿಮ್ಮ ಜೀವನ ಹೆಂಗ”


“ಅದ್ರ ಕಾಳಜಿ ಈಗ ನಾಯಾಕ ಮಾಡ್ಲಿ? ಗಣೇಶ ಛೊಲೋ ಕಲ್ತು ಮುಂದ ಬರ್ತಾನ ಅನ್ನೋ
ವಿಶ್ವಾಸ ನಂಗದ. ಅವ ತನ್ನ ವಾರಿಗಿ ಹುಡುಗರಿಗಿಂತ ಹೆಚ್ಚು ಗ೦ಭೀರ ಅದಾನ. ನನ್ನ ಕಷ್ಟ ನೋಡಿದ್ದಕ್ಕ
ನನ್ನ ಬಗ್ಗೆ ಭಾಳ ಪ್ರೀತಿ ಇದೆ. ಬೇಜವಬ್ದಾರಿ ಅಪ್ಪ ಇರೋದ್ರಿಂದ ನನ್ನ ಮಗ ಸಣ್ಣ ವಯಸ್ನ್ಮಾಗ ಜವಾಬ್ದಾರಿ
ಹೊತ್ತಾನ. ನಾ ಏನೂ ನಿಮ್ಮ ಹಾಂಗ ಭಾಳ ಸಾಲಿ, ಕಲ್ಪಿಲ್ಲ. ಆದ್ರ ಒಂದು ಮಾತು ನನಗೆ ಗೊತ್ತದರಿ.
ಜೀವನದಾಗ ಆನಂದದಿಂದ ಇರಬೇಕಂದ್ರ ದೇವರು ನಮಗೇನು ಕೊಟ್ಟಾನ ಅದ್ರಲ್ಲೇ ಸುಖ ಕಾಣಬೇಕ್‌
ಹೊರ್ತು ಇಲ್ಲದ್ದನ್ನ ನೆನೆದು ಹೈರಾಣ ಆಗಬಾರ್ದು”


ಕೂಡಲೇ ನನ್ನ ಮನಸ್ಸು ವಸಂತರಾವ್‌-ರನ್ನು ನೆನೆಯಿತು. ಎಲ್ಲವೂ ಇದ್ದು ಸದಾಕಾಲವೂ ದುಃಖ
ಪಡುವ ಅವರು ಕೇವಲ ಅಡುಗೆಯವರಾದರೂ ಮನಸ್ಸು ಮುದವಾಗಿಟ್ಟುಕೊ೦ಡ ಗಿರಿಜಾಬಾಯಿ ಇವರಿಬ್ಬರ
ನಡುವೆ ಎಷ್ಟೊಂದು ಅಂತರ? ಗಿರಿಜಾಬಾಯಿ ಅನ೦ದದ ಗುಟ್ಟನ್ನು ಸರಳವಾಗಿ ಹೇಳಿದ್ದರು.


ಇತ್ತೀಚೆಗೆ "ಬಾಸ್ಪನ್‌'ನಲ್ಲಿರುವ ಹಾರ್ವರ್ಡ ಕಾಲೇಜಿನಲ್ಲಿ ಒ೦ದು ಉಪನ್ಯಾಸಕ್ಕೆ ಹೋಗಿದ್ದೆ. ಅಲ್ಲಿ
ಮಹತ್ವವಾದ ಪಾಠವನ್ನು ಸರಳ ಭಾಷೆಯಲ್ಲಿ ಹೇಳಿದ್ದರು.


“ಜೀವನದಲ್ಲಿಯ ಸಂತೋಷ ನಿಮ್ಮ ಕೈಯಲ್ಲಿದೆ. ಅದನ್ನು ಹೊಂದಬೇಕಾದರೆ ನಿಮ್ಮನ್ನು ನೀವು
ಕಂಡುಕೊಳ್ಳಬೇಕು.”


ಈ ಪಾಠವನ್ನು ಹಾರ್ವರ್ಡ ಜನರು ಪಾಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ
ಗಿರಿಜಾಬಾಯಿಯವರು ಇದು ಗೊತ್ತಿಲ್ಲದೆಯೇ ಪಾಲಿಸುತ್ತಿದ್ದರು.


ಲೇಖಕಿಯ ಪರಿಚಯ:

ಶ್ರೀಮತಿ ಸುಧಾಮೂರ್ತಿ ಪ್ರತಿಷ್ಠಿತ ಟೆಲ್ಯೋಗೆ ಪ್ರವೇಶ ಪಡೆದ ಮೊದಲ
ಮಹಿಳಾ ಇಂಜಿನಿಯರ್‌. ಪ್ರಗತಿಪರ ಚಿ೦ತಕರೂ, ಸಾಮಾಜಿಕ ಕಳಕಳಿಯುಳ್ಳವರೂ
ಆದ ಇವರು ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಸುಮಾರು ೨೪ ಕೃತಿಗಳನ್ನು
ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ,
ಓಜಸ್ಪಿನಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಲ್ಲದೆ ೨೦೦೬ರಲ್ಲಿ ಪದ್ಮಶ್ರೀ ಪ್ರಶಸ್ತಿಯ ಗೌರವಕ್ಕೂ
ಪಾತ್ರರಾಗಿದ್ದಾರೆ. ಈ ಪಠ್ಯಭಾಗವನ್ನು ಇವರ "ಮನದ ಮಾತು' ಕೃತಿಯಿಂದ
ಆರಿಸಲಾಗಿದೆ.


ಓದಿ ತಿಳಿಯಿರಿ:

ಪೀತಾಂಬರ- ರೇಷ್ಮೆಯ ವಸ್ತ್ರ » ಗುನುಗು- ಮೆಲ್ಲನೆ ಧ್ವನಿ, ಕಳೆಗುಂದು-ಕಾ೦ತಿಹೀನವಾಗು, ಗಗನ-ಆಕಾಶ,
ಕಳವಳ- ಗೊಂದಲ, ಹೈರಾಣ- ದಣಿವು , ಆಯಾಸ, ಕಟಾ ಜೋಪಾನ, ವಾರಿಗೆ- ಸಮಾನ ವಯಸ್ಕರು
ಗಮನಿಸಿ ತಿಳಿಯಿರಿ:


ಐಐಟಿ -ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ ಟೆಕ್ನಾಲಜಿ, ಕೆಲವೇ ಆಯ್ದ ನಗರಗಳಲ್ಲಿರುವ ಪ್ರತಿಷ್ಠಿತ ವಿಜ್ಞಾನ
ತಂತ್ರಜ್ಞಾನದ ಉನ್ನತ ಶಿಕ್ಷಣ ಸಂಸ್ಥೆಗಳು,


ಗಿರಿಧಾಮ - ಬೆಟ್ಟದ ಮೇಲಿರುವ ತಂಪಾದ ಪ್ರದೇಶ.
ಉಣಕಲ್ಲು - ಹುಬ್ಬಳ್ಳಿಯ ಒಂದು ಪ್ರದೇಶ,
ಬಾಸ್ಟನ್‌ - ಅಮೆರಿಕಾದ ಒಂದು ನಗರ


ಅಭ್ಯಾಸ ಚಟುವಟಿಕೆ
ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.
ಗಿರಿಜಾಬಾಯಿ ಯಾರು?
ವಸಂತರಾವ್‌ ಎಲ್ಲಿಕೆಲಸ ಮಾಡುತ್ತಿದ್ದರು?
ಲೇಖಕಿ ಗಿರಿಜಾಬಾಯಿಯವರನ್ನು ಏನೆಂದು ಕೇಳಿದರು?
ಗಿರಿಜಾಬಾಯಿ ಗಂಡನ ಹೆಸರೇನು?
ಬಾಸ್ಟನ್‌ನ ಹಾರ್ವರ್ಡ ಕಾಲೇಜಿನಲ್ಲಿ ಲೇಖಕಿ ಕೇಳಿದ ಮಹತ್ವದ ಮಾತು ಯಾವುದು?


ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಗಿರಿಜಾಬಾಯಿಯವರ ಸ್ವಭಾವ ಹೇಗಿತ್ತು?
೨. ಗಿರಿಜಾಬಾಯಿ ತಮ್ಮ ಮಗನ ಬಗೆಗೆ ಇಟ್ಟುಕೊಂಡಿದ್ದ ನಂಬಿಕೆ ಏನು?


ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ಐದು ಅಥವಾ ಆರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ವಸಂತರಾವ್‌ ಅವರ ಅತೃಪ್ಪಿಗೆ ಕಾರಣಗಳೇನು? ವಿವರಿಸಿರಿ.

೨. ಮಕ್ಕಳ ಮನಸ್ಸಿನ ಮೇಲೆ ಪೋಷಕರು ಹೇರುವ ಒತ್ತಡದ ಬಗ್ಗೆ ಲೇಖಕಿಯ
ಅಭಿಪ್ರಾಯ ತಿಳಿಸಿ.

ಸಂದರ್ಭದೊಡನೆ ವಿವರಿಸಿರಿ.

೧. ಚೆನ್ನಾಗಿ ಓದುತ್ತಾನೋ ಇಲ್ಲವೋ ಎಂದು ನನಗೆ ಚಿಂತೆಯಾಗಿದೆ.

೨. ನಾ ಏನೂ ನಿಮ್ಮ ಹಾಂಗ ಭಾಳ ಸಾಲಿ ಕಲಿಲ್ಲ

೩. ಇಲ್ಲದ್ದನ್ನು ನೆನೆದು ಹೈರಾಣ ಆಗಬಾರ್ದು

೪. ಜೀವನದಲ್ಲಿಯ ಸಂತೋಷ ನಿಮ್ಮ ಕೈಯಲ್ಲಿದೆ


ಹೊಂದಿಸಿ ಬರೆಯಿರಿ
ಅ ಆ
ವಸಂತರಾವ್‌ ಬಾಸ್ಟನ್‌ ನಗರ
ಹಾರ್ವರ್ಡ ಕಾಲೇಜ್‌ ಗಿರಿಜಾಬಾಯಿಯ ಮಗ
ಗಣೇಶ ಲೇಖಕಿಯ-ಕುಟುಂಬದ ಸ್ನೇಹಿತರು
ವಿರೂಪಾಕ್ಷ ಹಬ್ಬ
ಡೈವರ್‌
ಕೆಳಗೆ ಕೊಟ್ಟಿರುವ ಉದಾಹರಣೆಯನ್ನು ಗಮನಿಸಿರಿ.


ಉದಾ: ಕಾಲಿಗೆ ಬುದ್ದಿ ಹೇಳಿದರು ಪೋಲೀಸರನ್ನು ಕಂಡ ಕಳ್ಳರು ಕಾಲಿಗೆ ಬುದ್ಧಿ ಹೇಳಿದರು.
ಇದರಂತೆ ಈ ಕೆಳಗೆ ಕೊಟ್ಟಿರುವ ನುಡಿಗಟ್ಟುಗಳನ್ನು ಬಳಸಿ ವಾಕ್ಯಗಳನ್ನು ರಚಿಸಿರಿ.


೧, ಎತ್ತಿದ ಕೈ ೨. ತಲೆಹಾಕು", ೩. ರೈಲುಬಿಡು


ಅವುಗಳನ್ನು ಬಿಡಿಸಿ ಬರೆಯಿರಿ.
ಅಸಾಧ್ಯವಾಗಿದೆ. ಇರಲಾಗುವುದಿಲ್ಲ. ಪಕ್ಷಾಂತರ. ವಿದ್ಯಾಭ್ಯಾಸ. ಪಿತಾ೦ಬರ.


ಈ ಕೆಳಗೆ ನೀಡಲಾಗಿರುವ ಆಡುಭಾಷೆಯ ಪದಗಳಿಗೆ ಗ್ರಾಂಥಿಕ ಪದಗಳನ್ನು ಬರೆಯಿರಿ.
ನೋಡ್ಲಿಕ್ಕೆ. ಮಾಡ್ಕಾನ. ಅಲ್ಲದಾನ. ಭಾಳ. ಹೊರ್ತು.


ಪ್ರಾಯೋಗಿಕ ಚಟುವಟಿಕೆ


“ಹಾಸಿಗೆ ಇದ್ದಷ್ಟು ಕಾಲು ಚಾಚು' -ಈ ಗಾದೆಯ ಮಾತಿನ ಹಿನ್ನೆಲೆಯಲ್ಲಿ ಪ್ರಸ್ತುತ ಪಾಠದ ನೀತಿಯನ್ನು
ತಿಳಿಯಿರಿ.


ಸುಧಾಮೂರ್ತಿಯವರ ಇತರ ಕೃತಿಗಳನ್ನು ಡಿಡಿ,


ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು, ಹರುಷಕದೆ ದಾರಿ ಮಂಕುತಿಮ್ಮ


ಅ ಇನಿಯ - ಪ್ರೇಮಿ
ಅಂಬಿಗ - ದೋಣಿ ನಡೆಸುವವ ಇರುಳು - ರಾತ್ರಿ
ಅಕಾಲಿಕ - ಕಾಲವಲ್ಲದ ಕಾಲ


ಅಜೇಯ - ಗೆಲ್ಲಲಾಗದ wy
ಅದಿಕ - ಹೆಚು ಉಂಬು - ಊಟಮಾಡು
ಟ್ಟ ಚ


ಅದೃಷ್ಟ - ಭಾಗ್ಯ ಉದರ - ಹ
ಅಧ್ಯಾರೋಪ- ಊಹಿಸಿ ತಿಳಿದುಕೊಳ್ಳುವುದು ಉದಾತ್ತ - ಶ್ರೇಷ್ಠವಾದ

ಅಧ್ವಾನ - ತೊಂದರೆ, ಹದಗೆಟ್ಟ ಉನ್ನತ - ಮೇಲುಮಟ್ಟದ, ಶ್ರೇಷ್ಠ
ಅನಾಮತ್ತು - ಇಡಿಯಾಗಿ, ಪೂರ್ತಿಯಾಗಿ ಉಲ್ಲಾಸ - ಸಂತೋಷ

ಅನುಚರ - ಹಿಂಬಾಲಕ ಉಲಿ - ಧ್ವನಿ, ಮಾತು
ಅನ್ವೇಷಣೆ - ಹುಡುಕುವುದು
ಅಪ್ಪಣೆ - ಅನುಮತಿ, ಒಪ್ಪಿಗೆ
ಅಭ್ಯಂತರ - ಅಡ್ಡಿ

ಅರಣ್ಯ - ಕಾಡು

ಅರಸ - ರಾಜ
ಅವಮರ್ಯಾದೆ - ಅಪಮಾನ
ಅವಲಂಬಿಸು - ಆಶ್ರಯಿಸು
ಅಸುರ - ರಾಕ್ಷಸ

ಅಳಿಸು - ನಾಶಪಡಿಸು



ಉದಾಜಬಣ - ಬೂದುಬಣ
ಣಿ ಣಿ


ಆ ಒಮ್ಮತ - ಒಂದೇ ಅಭಿಪ್ರಾಯ


ಆಪ್ರಾಣಿಸು- ವಾಸನೆ ನೋಡು, ಮೂಸಿನೋಡು ಓ
ಆಪತ್ಕಾಲ - ಕಷ್ಟದ ಕಾಲ ಓಗರ - ಅನ್ನ
ಆಪಾದಮಸ್ತಕ - ಕಾಲಿನಿಂದ ತಲೆಯವರೆಗೆ ಓಲಗ - ಸಭೆ
ಆರಭ್ಯ - ಪ್ರಾರಂಭ ( ಇಂದ )
ಆಲಿಸು - ಕೇಳು ಕ
ಕಂದ - ಮಗು
ಇ ಕಂದಾಚಾರ - ಮೂಢಸಂಪ್ರದಾಯ
ಇಂಗಿತ ಅಶ್ರಯ ಕಗ್ಗ - ಕಾವ್ಯ, ಕೆಲಸಕ್ಕೆ ಬಾರದ,
ಇಂಪು - ಮಧುರ, ಕಿವಿಗೆ ಹಿತವಾದ ಇರರು ಜಗಕವಾಡ್‌


ಇಚ್ಛೆ - ಇಷ್ಟ ಕಬ೦ಧ - ಮುಂಡ, ತಲೆಯಿಲ್ಲದ ದೇಹ


ಕವಚ - ಹೊದಿಕೆ

ಕಳಚು - ಬಿಚ್ಚು

ಕಾತುರ - ಆತುರ, ಉತ್ಸುಕತೆ
ಕಾರಂಜಿ - ಚಿಲುಮೆ

ಕಾಳಜಿ - ಜೋಪಾನ

ಕುಡುಗೋಲು - ಕೊಯ್ಯುವ ಸಾಧನ
ಕುಪಿತ - ಕೋಪಗೊಂಡ
ಕೂಲಂಕಷ - ಸಮಗ್ರ

ಕೋಮಲ - ಸೂಕ್ಷ್ಮ




ಖಜಾಂಚಿ - ಹಣಕಾಸಿನ ಮೇಲ್ವಿಚಾರಕ
ಖನ್ನ - ಬಳಲಿದ

ಖೇದಗೊಳ್ಳು - ದುಃಖಪಡು




ಗುಜ್ಜಿ - ಚಿಕ್ಕ ಮಗು

ಗುಡಿ - ದೇವಸ್ಥಾನ

ಗೊಡ್ಡು - ಫಲವಿಲ್ಲದ, ಬಂಜೆ
ಗುಣಿ - ತಗ್ಗು. ಗುಂಡಿ

ಗರ್ವ - ಅಹಂಕಾರ

ಗೋಳು - ಕಷ್ಟ



ಚದುರಿಸು - ಸರಿಸು

ಚಿಗುರು - ಕುಡಿ, ಮೊಳಕೆ
ಚೂಡಾಮಣಿ - ಒಂದು ರತ್ನ







ತಗಲ್ಯಾವು ನ್‌ ತಗಲುತ್ತವೆ

ತಬಿಬಾಗು - ದಿಗಮೆಗೊಳ್ಳು, ಕಕಾವಿಕಿಯಾಗು
ಬಬ ಬ್ರ ಫ ಸ್‌

ತಲಿಬ್ಯಾನಿ - ತಲೆನೋವು


ತಲಾಂತರ - ಬಹಳ ವರ್ಷಗಳಿಂದ,
ತಲೆಮಾರುಗಳಿಂದ


ತಿರಿ - ಭಿಕ್ಷೆಬೇಡು

ತಿರೋಹಿತ - ಮರೆಯಾಗು

ತೇಜೋವಧೆ - ಅವಮಾನ, ಮುಖಭಂಗ
ತೊಡು - ಧರಿಸು

ತೊಡುಗೆ - ತೊಡುವ ವಸ್ತು ವಿಶೇಷಗಳು
ತೊತ್ತು - ಸೇವಕಿ/ ಸೇವಕ

ತ್ಯಜಿಸು - ಬಿಡು




ದಡ: - 'ದಂಡೆ

ದಿಗಿಲು - ಭಯ

ದಿಬ್ಬಣ - ಮದುವೆಯ ಮೆರವಣಿಗೆ

ದ್ವೀಪ - ನೀರಿನಿಂದ ಸುತ್ತುವರಿದ ಭೂಭಾಗ
ದ್ಯೋತಕ - ಸಾಕ್ಷಿ ಗುರುತು




ಧನ - ಹಣ

ಧಿಕ್ಕರಿಸು - ತಿರಸ್ಕರಿಸು
ಧೂರ್ತ - ಮೋಸಗಾರ
ಧೋತ್ರ - ಪಂಚೆ




ನಂಜು - ವಿಷ

ನಂಟು - ಸಂಬಂಧ
ನರುಗಂಪು - ಸುವಾಸನೆ
ನರಳು - ಸಂಕಟಪಡು


ನಿಗೂಢ - ಗೋಪ್ಯ, ಅಡಗಿದ
ನಿರಾಶೆ - ಈಡೇರದ ಆಸೆ
ನಿರ್ಗತಿಕ - ಗತಿಯಿಲ್ಲದ
ನಿರ್ಲೇಪ - ಅಂಟಿಕೊಳ್ಳದ
ನಿಶ್ಚಲ- ಚಲನೆಯಿಲ್ಲದ

ನೀಗು - ಹೋಗಲಾಡಿಸು
ನೌಕೆ - ಹಡಗು, ನಾವೆ





ಪಂಜರ - ಪ್ರಾಣಿ-ಪಕ್ಷಿಗಳನ್ನು
ಬಂಧಿಸಿಡುವ ಗೂಡು

ಪಾವನ - ಪವಿತ್ರ

ಪಾವಟಿಗೆ - ಮೆಟ್ಟಿಲು

ಪ್ರಿಯ - ಇಷ್ಟವಾದ

ಪೀತಾಂಬರ - ರೇಶ್ಲೆಬಟ್ಟೆ

ಪುರುಸೊತ್ತು - ಬಿಡುವು, ವಿರಾಮ

ಪೆಂಪು - ಸೊಗಸು

ಪೋಕರಿ - ಪುಂಡ


ಪಲ - ಹಣ್ಣು, ಬೆಳೆ, ಲಾಭ







ಬಂಧಿ - ಸೆರೆಯಾಳು

ಬಗೆ - ರೀತಿ, ಮನಸ್ಸು

ಬನ - ವನ, ಕಾಡು

ಬಸಿರು - ಗರ್ಭ, ಹೊಟ್ಟೆ

ಬಳಲು - ಆಯಾಸಗೊಳ್ಳು

ಬಿರುಕು - ಸೀಳು, ಒಡಕು

ಬೆಕ್ಕಸಬೆರಗಾಗು - ವಿಸ್ಮಯಗೊಳ್ಳು,
ಆಶ್ಚರ್ಯಪಡು


ಬೆದರ್ಯಾವ — ಬೆದರುತ್ತವೆ
ಬೆಪ - ದಡ
w (2.
ಬೆಸೆ - ಕೂಡಿಸು
ಬೆಳ್ಳಕ್ಕಿ KN ಕೊಕ್ಕರೆ ಜಾತಿಯ ಹಕ್ಕಿ
ಬೇಟ - ಸೆಳೆತ, ಆಕರ್ಷಣೆ




ಮಂಜು - ಹಿಮ, ಮಬ್ಬು, ಮಸುಕು

ಮಡುಗಟ್ಟು - ಆಳವಾದ ನೀರಿನಂತೆ
ನಿಶ್ಚಲವಾಗಿ ನಿಲ್ಲು

ಮತ್ಸರ - ದ್ವೇಷ, ಹೊಟ್ಟಿಕಿಚ್ಚು

ಮಧ್ಯಾಣ — ಮಧ್ದಾಹ್ನ

ಮಲಗ್ಯವನೆ - ಮಲಗಿದ್ದಾನೆ

ಮಾಟ - ಮಾದರಿ, ರೀತಿ

ಮಾತ್ಸರ್ಯ - ಹೊಟ್ಟಿಕಿಚ್ಚು

ಮ್ಹಾನತೆ'- ಬೇಸರ

ಮಿತ್ರ - ಸೂರ್ಯ, ಗೆಳೆಯ

ಮುಗಿಲು - ಮೋಡ

ಮುಗುಳು - ಮೊಗ್ಗು

ಮೆದು - ಮೃದು

ಮೌಢ್ಯ - ದಡ್ಡತನ,



ರನ್ನ - ರತ್ನ


ರಹಸ - ಗುಟು
ಕ್ರಿ ಬ


ಲೇಸು - ಒಳ್ಳೆಯದು




ವನ - ಕಾಡು, ಅರಣ್ಯ
ವರ್ಧಿಸು - ಅಭಿವೃದ್ದಿಹೊಂದು
ವಸುಮತಿ - ಭೂಮಿ


ವಾತ್ಸಲ್ಯ - ಪ್ರೀತಿ, ಮಮತೆ
ವಾರಿಗೆ - ಸಮವಯಸ್ಕ
ವಾಹಕ - ಸಾಗಿಸುವ ವಾಹನ
ವಿಕೃತಿ - ಕುರೂಪ
ವಿದಾಯ - ಬೀಳ್ಕೊಡುಗೆ
ವಿಶದ - ಸ್ಪಷ್ಟ
ವಿಸಯ - ಆಶರ್ಯ

೬ ಚ
ವ್ಯಕ್ಷ - ಮರ

Ja)


ಸನ್ನಿಧಾನ - ಸಮೀಪ, ಎದುರು
ಸರಹದು - ಗಡಿ
೦ಎ

ಸರಳು - ಕಂಬಿ

ಸರೋವರ - ಕೊಳ, ನೀರಿನ ತಾಣ
ಸಲಗ - ಬಲಿಷ್ಠವಾದ ಗಂಡಾನೆ
ಸವ್ಯಸಾಚಿ - ಏಕಕಾಲದಲ್ಲಿ ಎರಡೂ

ಕೆಲಸಗಳನ್ನು ಮಾಡುವವ


ಸುಜ್ಞಾನಿ - ಉತ್ತಮ ಜ್ಞಾನಿ, ತಿಳಿದವ


ಸುದೈವ 5 ಅದೃಷ್ಟ ಪುಣ್ಯ


ಸುಸಂಧಿ - ಒಳ್ಳೆಯ ಅವಕಾಶ

ಸೂರು - ಛಾವಣಿ ಮತ್ತು ಅದರ ಪಕ್ಕದ
ಇಳಿಜಾರಾದ ಭಾಗ

ಸೃಜನ - ಸೃಷ್ಟಿ ಹುಟ್ಟು

ಸೃಷ್ಟಿಗೊಡೆಯ - ಭಗವಂತ


ಹಂಬಲಿಸು... ಆಸೆಪಡು
ಹಮ್ಮು -'ಗರ್ವ, ಅಹಂಕಾರ
ಹರವು - ಬಡಾವಣೆ
ಹಸನಿಲ್ಲದ - ಅನುಕೂಲವಿಲ್ಲದ


ಹೇರಳ - ಬಹಳ

ಹೈರಾಣ - ದಣಿವು, ಆಯಾಸ
ಹೊಳ್ಳೆ - ಮೂಗಿನ ರಂಧ್ರ

ಹ್ಯಾಟು - ಒಂದು ಬಗೆಯ ಟೋಪಿ

Related Products

Top