[PDF]ktbs 2nd First language kannada 2017

[PDF]

Contact the Author

Please sign in to contact this author

4


ಕರ್ನಾಟಕ ಸರ್ಕಾರ


ಅಧ್ಯಕ್ಷರು :
ಡಾ. ಎಂ. ಪಿ. ರೇಖಾ - ಸಹ ಪ್ರಾಧ್ಯಾಪಕರು, ಕಾವೇರಿ ಪದವಿ ಕಾಲೇಜು, ಗೋಣಿಕೊಪ್ಪಲು, ಕೊಡಗು ಜಿಲ್ಲೆ


ಸದಸ್ಯರು :

ಶ್ರೀಮತಿ. ಸುಶೀಲ - ಶಿಕ್ಷಣ ಸಂಯೋಜಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮದ್ದೂರು ತಾ. ಮಂಡ್ಯ ಜಿಲ್ಲೆ.

ಶ್ರೀ ಲಕ್ಷ್ಮಿಪುತ್ರ - ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬುಕ್ಕಾಪಟ್ಟಣ, ಕೊರಟಗೆರೆ ತಾ. ತುಮಕೂರು ಜಿಲ್ಲೆ.

ಶ್ರೀ ಸತೀಶ - ಬಿ.ಆರ್‌.ಪಿ., ಬಿ.ಆರ್‌.ಸಿ. ಕಛೇರಿ, ತರೀಕೆರೆ ತಾ. ಚಿಕ್ಕಮಗಳೂರು ಜಿಲ್ಲೆ.

ಡಾ. ಎಸ್‌. ಎಂ ಸಾವಿತ್ರಿ - ಸಹಶಿಕ್ಷಕರು, ವಿನೋಬಭಾವೆ ಸ.ಮಾ.ಹಿ.ಪ್ರಾಶಾಲೆ, ಚಿತ್ತವಾಡಿ, ಹೊಸಪೇಟೆ ತಾ.
ಬಳ್ಳಾರಿ ಜಿಲ್ಲೆ.

ಶ್ರೀಮತಿ. ಟಿ.ಬಿ. ಪ್ರೇಮಲತ - ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಚ್‌. ಮುದ್ದೇನಹಳ್ಳಿ.

ತಿಪಟೂರು ತಾ. ತುಮಕೂರು ಜಿಲ್ಲೆ.
ಶ್ರೀ ಜಿ. ಎಂ. ಜಂಗಿ (ರ.ಬನಹಟ್ಟಿ) - ಕಲಾವಿದರು, ಡಿ.ಎಸ್‌.ಇ.ಆರ್‌.ಟಿ, ಬೆಂಗಳೂರು - ೮೫.


ಪರಿಶೀಲಕರು :


ಶ್ರೀ ಕಾ.ತ. ಚಿಕ್ಕಣ್ಣ - ಜಂಟಿ ನಿರ್ದೇಶಕರು (ನಿವೃತ್ತ). ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕನ್ನಡಭವನ, ಜೆ.ಸಿ. ರಸ್ತೆ
ಬೆಂಗಳೂರು.


ಸಂಪಾದಕೀಯ ಮಂಡಳಿ ಸದಸ್ಯರು

ಪ್ರೊ. ಸಾ.ಶಿ. ಮರುಳಯ್ಯ, ಸಾಹಿತಿಗಳು, "ರಾಗಿಣಿ, ಹಂಪಿನಗರ, ಬೆಂಗಳೂರು.

ಪ್ರೊ. ಅ.ರಾ. ಮಿತ್ರ, ಸಾಹಿತಿಗಳು, ಕೆ.ಎಚ್‌.-ಬಿ. ಕಾಲೋನಿ, ಯಲಹಂಕ, ಬೆಂಗಳೂರು.

ಡಾ. ಎಷ್ಟು ಎಂ. ಶಿ೦ದೆ, ಸಹಾಯಕ ಪ್ರಾಧ್ಯಾಪಕರು, ಶಿಕ್ಷಣವಿಭಾಗ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ,
ವಿಜಯಾಪುರ.

ಮುಖ್ಯ ಸಂಯೋಜಕರು :

ಪ್ರೊ. ಮುಡಂಬಡಿತ್ತಾಯ — ಪಠ್ಯಕ್ರಮ ಪರಿಷ್ಠರಣೆ ಮತ್ತು ಪಠ್ಯಪುಸ್ತಕ ರಚನೆ, ಕರ್ನಾಟಕ ಪಠ್ಯಪುಸ್ತಕ ಸಂಘ,

ಬೆಂಗಳೂರು - ೮೫.

ಸಲಹೆ ಮಾರ್ಗದರ್ಶನ :

ಶ್ರೀ ನಾಗೇಂದ್ರ ಕುಮಾರ್‌- ವ್ಯವಸ್ಥಾಪಕ ನಿರ್ದೇಶಕರು. ಕರ್ನಾಟಕ ಪಠ್ಯಪ್ಪ

ಶ್ರೀಮತಿ ಸಿ.ನಾಗಮಣಿ- ಉಪನಿರ್ದೇಶಕರು (ಪ್ರಭಾರಿ), ಕರ್ನಾಟಕ ಪಠ್ಯಪುಸ


೦ಘ, ಬೆಂಗಳೂರು - ೮೫.
೦ಘ, ಬೆ೦ಗಳೂರು - ೮೫.


wu 2


ಕಾರ್ಯಕ್ರಮ ಸಂಯೋಜಕರು :
ಶ್ರೀ ಪಾಂಡುರಂಗ, - ಹಿರಿಯ ಸಹಾಯಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು - ೮೫.


iO


೨೦೦೫ ನಿ”ಯ ರಾಷ್ಟ್ರೀಯ ಪಠ್ಯಕ್ರಮದ ಆಧಾರದ ಮೇಲೆ ರಚಿತವಾದ ಕರ್ನಾಟಕ ರಾಜ್ಯ ಪಠ್ಯವಸ್ತುವಿನ
ಆಧಾರದ ಮೇಲೆ ಕರ್ನಾಟಕ ಪಠ್ಯಪುಸ್ತಕ ಪಂಷವು ೨೦೧೦ ನೆಯ ಪಾಲಅನಿಂದ ಒಂದನೆಯ ತರರತಿಯುಂದ
ಹತ್ತನೆಯ ತರದತಿವರೆಗಿವ ಪಠ್ಯಪುಪ್ರಕದಳ ರಚನಾ ಕಾರ್ಯದಲ್ಲಿ ತೊಡಗಿದೆ. ಒಟ್ಟು ೧೨ ಭಾಷೆಗಳಲ್ಲ
ಭಾಷಾ ಪಠ್ಯಪುಸ್ತಕದಳನ್ನು ಹಾರೂ ಕೋರ್‌ ವಿಷಯದಳನ್ನು ೭ ಮಾಧ್ಯಮದಳಲ್ಲಿ ರಚನೆ ಮಾಡಲುದುತ್ತಿದೆ.
೧ ೦೦ದ ೫ ನೆಯ ತರದತಿಯವರೆದೆ ಪರಿಸರ ಅಧ್ಯಯನ, ದಣಿತ ಮತ್ತು ೬ ಲಿಂದ ೧೦ ನೆಯ ತರದತಿಯವರೆದೆ
ಹೋರ್‌ ವಿಷಯರದಳಾದ ದಣಿತ, ವಿಜ್ಞಾನ ಮತ್ತು ಪಮಾಜ ವಿಜ್ಞಾವದಳರುತ್ತವೆ.


2೦೦೮ರ ರಾಷ್ಟ್ರೀಯ ಪಠ್ಯಕ್ರಮವು ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ.


ಕಅಕೆಯನ್ನು ಜೀವನದ ಆವಶ್ಯಕತೆದಳೊಂದಿದೆ ಜೋಡಿಪುವುದು.
ಕಂಠಪಾಠ ವಿಧಾನದಿಂದ ಕಅಕೆಯನ್ನು ಮುಕ್ತದೊಆಸುವುದು.
ಪಠ್ಯಪುಸ್ತಕದಳ ಹೊರತಾಗಿ ಪಠ್ಯಕ್ರಮವನ್ನು ಶಿೀಮಂತದೊಳಆಸುವುದು.
ಜ್ಞಾನದ ಅಭವೃದ್ದಿದೆ ಕಅಕಾ ಅಮುಭವದಳನ್ನು ಬಳಸುವುದು.


ಶಿಕ್ಷಣವನ್ನು ಇಂದಥಿನ ಹಾಡೂ ಭವಿಷ್ಯದ ಜಂವನಾವಶ್ಯಕತೆದಳದೆ ಹೊ೦ದುವಂಡೆ ಮಾಡುವುದು.
ವಿಷಯದ ಮೇರೆಗಳನ್ನು ಮೀಲಿ ಅವುದಳದೆ ಸಮರ್ರದೃಷ್ಟಿಯ ಬೋಧನೆಯನ್ನು ಅಳವಡಿಸುವುದು.
ಶಾಲೆಯ ಹೊರರಿನ ಬದುಶಿದೆ ಜ್ಞಾನ ಸಂಯೊೋಂನೆ.


>
>
>
>
» ಭಾರತದ ಪುಜಾಸತ್ತಾತೃಕ ನೀತಿಯನ್ವಯ ಮಕ್ಚಳ ಅವಶ್ಯಕತೆದಳದೆ ತಕ್ಕಂತೆ ಸ್ಪಂದಿಸುವುದು.
>
>
>
> ಮಕ್ತಆಂದಲೇ ಜ್ಞಾನವನ್ನು ಅಭವೃದ್ಧಿ ಪಡಿಪುವುದು.


ನೂತನ ಪಠ್ಯಪುಸ್ತಕದಳಲ್ಲ ನೂತನ ವಿಧಾನರಳಾದ ಅಂತರ್ಗತ ವಿಧಾನ (Integrated
Approach), ರಚನಾಡ್ಯಕ ವಿಧಾನ (Constructive Approach) ಹಾದೂ ಪುರುಆಯಾಕಾರದ ವಿಧಾನ
(Spiral Approach) ರಳನ್ನು ಅಳವಡಿಸಲಾಣದೆ.


ಪಠ್ಯಪುಪ್ತಕದಳ ವಿಷಯ ಹಾದೂ ಅಭ್ಯಾಸಗಳು ವಿದ್ಯಾರ್ಥಿದಳನ್ನು ಯೋಚನೆ ಮಾಡುವಂಡೆ ಮಾಡಿ,
ಚಟುವಟಕೆದಳಆ ಮೂಲಕ ಜ್ಞಾನ ಹಾದೂ ಸಾಮರ್ಥ್ಯದಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ.
ಪಠ್ಯವಸ್ತುರಳೊಂದಿದೆ ಅತ್ಯಂತ ಆವಶ್ಯಕ ಜೀವನ ಮೌಲ್ಯಗಳನ್ನು ಅಂತರ್ದತವಾಗಿ ಬಳಪಲಾಗಿದೆ. ಈ ನೂತನ
ಪಠ್ಯಪುಸ್ತಕದಳು ಪರಿಕ್ಷಾ ದೃಷ್ಟಿಂಯ೦ದ ರಜಿತವಾಗಿಲ್ಲ. ಬದಲಾಗಿ ಅವುದಳು ವಿದ್ಯಾರ್ಥಿದಳ ಸರ್ವಾ೦೧9ಣ ವ್ಯಕ್ತಿತ್ವ
ವಿಕಸನಕ್ಟೆ ಪೂರಕವಾಗಿವೆ. ತನ್ಮೂಲಕ ಅವರನ್ನು ಸ್ವತಂತ್ರ ಭಾರತದ ಸ್ವಸ್ಥ ಸಮಾಜದ ಉತ್ತಮ ಪ್ರಜೆಗಳನ್ನಾಗಿ
ಮಾಡುವ ಪ್ರಯತ್ನ ನಡೆದಿದೆ.

ಭಾಷಾಕಲಕೆಯಲ್ಲಿ ಅತ್ಯ೦ತ ಮುಖ್ಯ ದುಲಿರಳಾದ ಆಲಸುವುದು. ಮಾಡನಾಡುವುದು, ಓದುವುದು,


ಬರೆಯುವುದು ಹಾದೂ ಆಕರ ರ್ರಂಥದಳ೦ದ ವಿಷಯ ಪಂದ್ರಹಣೆಯಂತಹ ಕ್ಷೇತ್ರವಾರು ಸಾಮರ್ಥ್ಯದಳದೆ
ಒಡ್ತು ನೀಡಲಾಗಿದೆ. ಈ ಕೌಶಲ್ಯಗಳೊಂವಿದೆ ಶ್ರಿಯಾತ್ಮಕ ವ್ಯಾಕರಣ, ಸೌಂದರ್ಯಪ್ರಜ್ಞೆ ಪ್ರಶಂಸಾ


ಮನೋಂಭಾವ, ಮೌಲ್ಯದಳ ಸಂವರ್ಧನೆದೆ ಅನುವು ಮಾಡಿಕೊಡಬೇಕು. ಈ ಸಾಮರ್ಥ್ಯ ಮಕ್ಪಳಲ್ಲ ಬಂದಾದ
ಅವರು ಪಲೀಕ್ಷೆಗಆದಾಗಿ ಕಂಠಪಾಠಕ್ಷೆ ಶರಣು ಹೋದಬೇಕಾಗಿಲ್ಲ. ಪಠ್ಯಪುಸ್ತಕವು ಭಾಷಾ ಕೌಶಲ್ಯಗಳ
ಪಂವಧ್ಧನೆದೆ್‌ ಒಂದು ಪೂರಕವಸ್ತುವೆಂದು ಪರಡಿರಣಿಸಲು, ಮಕ್ಟಳ ಮನೊಂವೈಶಾಲ್ಯವನ್ನು ಬೆಳೆಪಲು
ಏಷಯದಳದೆ ಪಂಬಂಧಿಪಿದಂಡೆ ಅನೆಂಕ ಚಟುವಣಕೆಗಳನ್ನು ಪಠ್ಯಪುಸ್ತಕದಲ್ಲಿ ಒಬದನಿಪಲಾಗಿದೆ. ಮಿತ್ರರೊಂವಿಗೆ
ದುಂಪುದಳಲ್ಲ ಚರ್ಚೆಯ ಮೂಲಕ ಅವರ ಅಭಿವ್ಯಕ್ತಿ ಹಾಡೂ ಪಂವಹವ ಕೌಶಲ್ಯಗಳ ಪಂವಧ್ಧನೆಯೇ ಕಲಕೆ
ದುಲಿಯೆಂದು ಅಂತಹ ಚಟುವಟಕೆದಳದೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಲೀತಿಯ ಚಟುವಣಕೆಗಳು
ಮಹ್ನಕಲ್ಲ ಕಅಯುವ ಕಲೆ (108117 10೦ 10811) ಹಾದೂ ಕಅಡುದುದನ್ನು ಜಂವನದಲ್ಲಿ ಅಳವಡಿಸುವ ಶಕ್ತಿ
(learning to 60) ಯನ್ನು ಮಕ್ವಳಲ್ಲ ವೃದ್ಧಿಮಾಡುತ್ತವೆ.


ಕರ್ನಾಟಕ ಪಠ್ಯಪುಸ್ತಕ ಸಂಘವು ಈ ಪುಸ್ತಕದ ತಯಾರಿಕೆಯಲ್ಲಿ ಪಹಕರಿಖದ ಸಮಿತಿಯ ಅಧ್ಯಕ್ಷರಿಗೆ.
ಸದಸ್ಯರದಿದೆ. ಕಲಾಕಾರಲದೆ, ಪಲಿಶೀಲಕಲಿಗೆ, ಪಂಯೋಜಕ ಅಧಿಕಾ೦ಿದಳದೆ, ಶಿಕ್ಷಣ ಮಹಾವಿದ್ಯಾಲಯದಳ ಪಿಬ್ಬ೦ಥಿ
ವರ್ದದವಲದರೆ, ಜಲ್ಲಾ ತರಬೇತಿ ಸಂಸ್ಥೆದಆದೆ. ರಾಜ್ಯಮಟ್ಟದ ಪಠ್ಯಪುಸ್ತಕ ಸಂಪಾದಕ ಮಂಡಆಯ ಸದಸ್ಯರಿದೆ
ಮತ್ತು ಪುಸ್ತಕವನ್ನು ಸು೦ದರವಾಗಿ ಮುದ್ರಿಲದ ಮುದ್ರಕಲಿದೆ ತನ್ನ ಹೃತ್ಪೂರ್ವಕ ಕೃತಜ್ಞತೆದಳನ್ನು ಸಲ್ಲಪುತ್ತದೆ.
ಕೆಲವು ಪಾಹಿತಿರಕು ಹಾದೂ ಕವಿಗಳ ಕೃತಿಗಳನ್ನು ಈ ಪಠ್ಯಪುಪ್ತಕದಳಕಲ್ಲ ಅಳವಡಿಸಲಾಗಿದೆ. ಈ ವಿಚಾರದಲ್ಲಿ
ತಮ್ಮ ಒಪ್ಪಿದೆಯನ್ನು ನೀಡಿರುವ ಬರಹದಾರಲಿದೆ ಹಾಡೂ ಕವಿದಆದೆ ಪಠ್ಯಪುಸ್ತಕ ಸಂಘ ಆಭಾರಿಯಾರದೆ.


ಪ್ರೊ. ಜ. ಎಸ್‌. ಮುಡಂಬಡಿತ್ತಾಯ ವಾದೇಂದ್ರ ಕುಮಾರ್‌
ಮುಖ್ಯ ಸಂ೦ಯೋೊಂಜಕರು ವ್ಯವಸ್ಥಾಪಕ ನಿರ್ದೇಶಕರು
ಪಠ್ಯಪುಸ್ತಕ ಪರಿಷ್ಠರಣೆ ಹಾದೂ ಪಠ್ಯಪುಸ್ತಕ ರಚನೆ ಕರ್ನಾಟಕ ಪಠ್ಯಪುಸ್ತಕ ಸ೦ಘ (ಲಿ.)
ಕರ್ನಾಟಕ ಪಠ್ಯಪುಸ್ತಕ ಸಂಘ(ರಿ.) ಬೆ೦ಂದಳೂರು-೮೫.
ಬೆಂಗಳೂರು-೮೫:


ಪ್ರಾಸ್ತಾವಿಕ ನುಡಿ


೨೦೦೫ರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಆಧರಿಸಿ ಪ್ರಸ್ತುತ ಎರಡನೆಯ ತರಗತಿಯ ಅಭ್ಯಾಸ ಸಹಿತ
ಪಠ್ಯಪುಸ್ತಕವನ್ನು ಸಿದ್ದಪಡಿಸಲಾಗಿದೆ. ಪಠ್ಯಗಳನ್ನು ಸಿದ್ದಗೊಳಿಸುವಾಗ ಶಿಶುಕೇ೦ದ್ರಿತ, ಸಾಮರ್ಥ್ಯಾಧಾರಿತ ಹಾಗೂ
ಚಟುವಟಿಕೆಯಾಧಾರಿತ ಕಲಿಕೆಯನ್ನು ಗಮನದಲ್ಲಿರಿಸಿಕೊಳ್ಳುವುದರೊಂದಿಗೆ ರಾಷ್ಟ್ರೀಯ ಮೌಲ್ಯಗಳನ್ನು ಸಹ
ಅಳವಡಿಸಲು ಪ್ರಯತ್ನಿಸಲಾಗಿದೆ. ಜೊತೆಗೆ ಸಮಗ್ರ ಕರ್ನಾಟಕದ ಕಲ್ಪನೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.
ಪಠ್ಯಪುಸ್ತಕದ ಆರಂಭದಲ್ಲಿ ಮಕ್ಕಳಲ್ಲಿರುವ ಪೂರ್ವಜ್ಞಾನವನ್ನು ಒರೆ ಹಚ್ಚುವ ಸಲುವಾಗಿ, ಮಕ್ಕಳ
ಮನಸ್ಸನ್ನು ಶಾಲಾವಾತಾವರಣಕ್ಕೆ ಸಿದ್ಧಗೊಳಿಸುವ ಉದ್ದೇಶದಿಂದ ಕೆಲವು ಚಟುವಟಿಕೆಗಳನ್ನು ನೀಡಲಾಗಿದೆ. ರಜಾ
ಅವಧಿಯ ಕಲಿಕೆಯನ್ನು ಸರಿದೂಗಿಸಿ ಮಕ್ಕಳು ನಿಧಾನವಾಗಿ ಹಿ೦ದಿನ ತರಗತಿಯಲ್ಲಿ ಕಲಿತಿರುವುದನ್ನು ಮತ್ತೆ
ನೆನಪಿಸಿಕೊಳ್ಳವುದರ ಮೂಲಕ ಮುಂದಿನ ತರಗತಿಗಿರುವ ಅಡಿಪಾಯವನ್ನು ಹಾಕಿಕೊಡುವ ಸಲುವಾಗಿ ಮುಖ್ಯ
ಪಠ್ಯಭಾಗಕ್ಕೆ ತೆರೆದುಕೊಳ್ಳುವುದಕ್ಕಿಂತ ಮೊದಲು “ಮಾಡಿ ಕಲಿ ಹಾಡಿ ನಲಿ” ಎಂಬ ಭಾಗವನ್ನು ಸೇರಿಸಲಾಗಿದೆ.
ಶಾಲೆ ಪ್ರಾರಂಭವಾದ ಆರಂಭದ ದಿನಗಳಲ್ಲಿ ಶಿಕ್ಷಕರು ಈ ಚಟುವಟಿಕೆಗಳನ್ನು ಬಳಸಿಕೊಳ್ಳಬಹುದು.
ಪಠ್ಯದಲ್ಲಿ ಒಟ್ಟು ೧೦ ಗದ್ಯ ಮತ್ತು ೭ ಪದ್ಯಗಳಿವೆ. ಪ್ರತಿಯೊಂದು ಪದ್ಯ-ಗದ್ಯವನ್ನು ಆರಂಭಿಸುವ ಮುನ್ನ
ಮಕ್ಕಳ ಮನಸ್ಸನ್ನು ಪಠ್ಯ ಪರಿಸರಕ್ಕೆ ಹೊಂದಿಸುವ ದೃಷ್ಟಿಯಿಂದ ಪಾಠಪೂರ್ವ ಚಟುವಟಿಕೆಯನ್ನು ನೀಡಲಾಗಿದೆ.
ಅಭ್ಯಾಸದ ಅನಂತರದಲ್ಲಿ ಚಟುವಟಿಕೆಯ ಭಾಗದಲ್ಲಿ ಆಯಾ ಪಾಠಕ್ಕೆ ಪೂರಕವಾಗುವಂತೆ ಕ್ರಿಯಾತ್ಮಕ
ಕೌಶಲಗಳನ್ನು ನೀಡಲಾಗಿದೆ. ಈ ಭಾಗವನ್ನು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ನೀಡಲಾಗಿದೆ.
ಪ್ರತಿ ಪಾಠದ ಕೊನೆಯಲ್ಲಿ ಆಯಾಯ ಪದ್ಯ-ಗದ್ಯದ ಕಲಿಕೆಯಿ೦ದ ಮಗು ಗಳಿಸಿಕೊಳ್ಳುವ ಸಾಮರ್ಥ್ಯವನ್ನು
ಸೂಚಿಸಲಾಗಿದೆ. ಪಠ್ಯದ ಬೋಧನಾ, ಕಲಿಕಾ ಚಟುವಟಿಕೆಗಳು ಮುಗಿದ ಅನಂತರ ಶಿಕ್ಷಕರು ಮಕ್ಕಳಲ್ಲಿ ಸದರಿ
ಸಾಮರ್ಥ್ಯ ಗಳಿಕೆ ಆಗಿದೆಯೇ ಎಂದು ದೃಢೀಕರಿಸಿಕೊಂಡೇ ಮುಂದಿನ ಪಾಠಕ್ಕೆ ಹೋಗಬೇಕೆಂಬುದಕ್ಕಾಗಿ ದ್‌
ಸೂಚನೆ. ಒಟ್ಟಾರೆ, ಮಕ್ಕಳಲ್ಲಿ ಭಾಷೆಯ ಕಲಿಕೆಯೊಂದಿಗೆ ಸೃಜನಶೀಲತೆ, ಆನ೦ದಿಸುವ ಗುಣಗಳನ್ನು ಬೆಳೆಸುವಂತೆ
ಪಠ್ಯವನ್ನು ರೂಪಿಸಲಾಗಿದೆ. ಇಲ್ಲಿ ನೀಡಲಾಗಿರುವ ಪಾಠಗಳ ಜೊತೆಗೆ ಸ್ಥಳೀಯ ಸಂಪನ್ಮೂಲಗಳನ್ನು ಶಿಕ್ಷಕರು
ಆಯಾ ಪಾಠದ ಸಾಮರ್ಥ್ಯದ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬಹುದು.
ಪಠ್ಯಪುಸ್ತಕ ರಚನಾ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಸಮಿತಿಯ ಎಲ್ಲಾ ಸದಸ್ಯರು, ಕಲಾಕಾರರು,
ಪರಿಶೀಲಕರು, ಸಂಪಾದಕೀಯ ಮಂಡಳಿ ಸದಸ್ಯರು, ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು,
ಉಪನಿರ್ದೇಶಕರು, ಸಂಯೋಜಕರು, ಮಾರ್ಗದರ್ಶಕರು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ
ಎಲ್ಲರಿಗೂ ಧನ್ಯವಾದಗಳು.


ಪಠ್ಯಪುಸ್ತಕ ನ ಸಮಿತಿ


ಘಾ 1 ಸಾಕಾ


ಪಠ್ಯಪುಸ್ತಕ ಪರಿಷ್ಕರಣ ಸಮಿತಿಗಳ ವಿವರ


ಸರ್ವಾಧ್ಯಕ್ಷ ಶು


ಪ್ರೊ. ಬರಗೂರು ರಾಮಚಂದ್ರಪ್ಪ ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ, ಕರ್ನಾಟಕ ಪಠ್ಯಪುಸ್ತಕ ಸಂಘ(ರಿ), ಬೆಂಗಳೂರು-೮೫


ಅಧ್ಯಕ್ಷರು

ಡಾ. ರಾಜಪ್ಪ ದಳವಾಯಿ, ಪ್ರಾಧ್ಯಾಪಕರು, ಕನ್ನಡ ವಿಭಾಗ, ಸ್ನಾತಕೋತ್ತರ ಕೇ೦ದ್ರ, ಕೋಲಾರ, ಬೆ೦ಗಳೂರು ವಿಶ್ವವಿದ್ಯಾಲಯ.
ಸದಸ್ಯರು

ಡಾ. ಜಗನ್ನಾಥ್‌. ಹೆಬ್ಬಾಳೆ ಸಹ ಪ್ರಾಧ್ಯಾಪಕರು, ಕರ್ನಾಟಕ ಕಲಾ, ವಾಣಿಜ್ಯ ಪ್ರಥಮದರ್ಜೆ ಕಾಲೇಜು, ಬೀದರ್‌

ಶ್ರೀ. ಅಲ್ಲಮಪ್ರಭು ಬೆಟ್ಟದೂರು, ನಿವೃತ್ತ ಪ್ರಾಂಶುಪಾಲರು, ಅಮರ ಚೇತನ, ತವಳಗೇರಿ ಕಾಲೋನಿ, ಕಲ್ಯಾಣನಗರ, ಕೊಪ್ಪಳ

- ವಿ.ರಂಗಪ್ಪಯ್ಯಹೊಳ್ಳ, ನಿವೃತ್ತ ಕನ್ನಡ ಭಾಷಾ ಶಿಕ್ಷಕರು, ಶ್ರೀನಿವಾಸ ಚಿತ್ರಪಾಡಿ, ಸಾಲಿಗ್ರಾಮ, ಉಡುಪಿ ತಾ.

. ಬಿ. ರವೀಶ್‌ಕುಮಾರ್‌. ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢಶಾಲೆ, ಕೇರ್ಗಳ್ಳಿ, ಮೈಸೂರು ತಾಲ್ಲೂಕು.

A ಚಿಕ್ಕದೇವೇಗೌಡ, ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢಶಾಲೆ, ಉತ್ತರಹಳ್ಳಿ, ಬೆಂಗಳೂರು-೬೧

ಜೆ ತಮ್ಮಣ್ಣಗೌಡ ಹೆಚ್‌.ಸಿ. ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢಶಾಲೆ, ಹನುಮಂತಪುರ, ಹಾಸನ ತಾಲ್ಲೂಕು

ಮತಿ. ಸುಶೀಲ, ಕನ್ನಡ ಅಧ್ಯಾಪಕಿ, (ಪ್ರೌಢಶಾಲಾ ವಿಭಾಗ), ಸರ್ಕಾರಿ ಪದವಿಪೂರ್ವ ಕಾಲೇಜು, ಮದ್ದೂರು ತಾಲ್ಲೂಕು
. ಬಸವರಾಜಪ್ಪ, ಎಂ, ಕನ್ನಡ ಅಧ್ಯಾಪಕರು (ಪ್ರೌಢಶಾಲಾ. ವಿಭಾಗ), ಸರ್ಕಾರಿ ಪದವಿಪೂರ್ವ ಕಾಲೇಜು, ಹೊಸನಗರ ತಾ.
ಶ್ರೀ. ಎನ್‌.ಬಿ. ವೀರನಗೌಡ, ಬಿ.ಅರ್‌.ಪಿ, ಕ್ಷೇತ್ರಸಮನ್ವಯಾಧಿಕಾರಿಗಳ ಕಛೇರಿ, ಶಿಕಾರಿಪುರ ತಾ, ಶಿವಮೊಗ್ಗ ಜಿಲ್ಲೆ.


Ww ಲ


ಕಲಾವಿದರು:


ಶ್ರೀ. ವೆಂಕಟೇಶ್‌. ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಉರಮಾರ ಕಸಲಗೆರೆ, ಮಂಡ್ಯ ದಕ್ಷಿಣ ತಾಲ್ಲೂಕು,


ಉನ್ನತ ಪರಿಶೀಲನ ಸಮಿತಿ
63


. ಎಚ್‌.ಎಸ್‌. ರಾಘವೇಂದ್ರರಾವ್‌, ನಿವೃತ್ತ ಪ್ರಾಧ್ಯಾಪಕರು, ನಂ.೭, ೧೫ನೇ ಕ್ರಾಸ್‌, ಜೆ.ಪಿ.ನಗರ,ಬೆ೦ಗಳೂರು-೭೮
ಜಿ.ಆರ್‌.ತಿಪ್ಪೇಸ್ವಾಮಿ, ನಿವೃತ್ತ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು-೬
ಸೈಯದ್‌ ಜಮೀರ್‌ಉಲ್ಲಾಷರೀಫ್‌, ನಿವೃತ್ತ ಪ್ರಾಂಶುಪಾಲರು, ಭಟ್ಕಳ, ಉತ್ತರ ಕನ್ನಡ ಜಿಲ್ಲೆ

ಯಲ್ಲಪ್ಪ ಹಿಮ್ಮಡಿ, ಎಸ್‌.ಪಿ.ಎಂ. ಕಲಾ ಮತ್ತು ವಾಣಿಜ್ಯ ಕಾಲೇಜು, ರಾಯಬಾಗ, ಬೆಳಗಾವಿ ಜಿಲ್ಲೆ

ಕಲಾವತಿ, ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ

. ಪ್ರಶಾಂತ್‌ ನಾಯಕ್‌, ಪ್ರಾಧ್ಯಾಪಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟ, ಶಿವಮೊಗ್ಗ.

. ಗೀತಾವಸಂತ, ಸಹಪ್ರಾಧ್ಯಾಪಕರು ಕನ್ನಡ ವಿಭಾಗ ತುಮಕೂರು ವಿಶ್ವವಿದ್ಯಾಲಯ ತುಮಕೂರು.

. ಸತ್ಯನಾರಾಯಣ, ಎಚ್‌.ಎಸ್‌. ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವಕಾಲೇಜು, ಬಸವನಗುಡಿ, ಬೆಂಗಳೂರು.
ಸಲಹೆ ಮತ್ತು ಮಾರ್ಗದರ್ಶನ :

ಶ್ರೀ. ಗೋಪಾಲಕೃಷ್ಣ ಹೆಚ್‌, ಎನ್‌ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ(ರಿ) ಬೆ೦ಗಳೂರು-೮೫
ಶ್ರೀ ಕೆಜಿರಂಗಯ್ಯ, ಉಪನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ(ರಿ) ಬೆಂಗಳೂರು-೮೫

ಕಾರ್ಯಕ್ರಮ ಸಂಯೋಜಕರು :

ಶ್ರೀಮತಿ. ಎಂ.ಡಿ. ಉಷಾ, ಹಿರಿಯ ಸಹಾಯಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ(ರಿ) ಬೆಂಗಳೂರು-೮೫


ಕ ಸಂ;


8888 8 8 ॥ ॥


ಪರಿಷ್ಕರಣೆ ಕುರಿತು


ಒಂದರಿಂದ ಹತ್ತನೇ ತರಗತಿಯ ಪಠ್ಯಪುಸ್ತಕಗಳ ಬಗ್ಗೆ ಪ್ರಕಟಗೊ೦ಡ ಸಾರ್ವಜನಿಕ ಅಭಿಪ್ರಾಯಗಳನ್ನು
ಗಮನಿಸಿ ಮಾನ್ಯ ಮುಖ್ಯಮಂತ್ರಿಯವರೂ ಅರ್ಥಸಚಿವರೂ ಆಗಿರುವ ಶ್ರೀ ಸಿದ್ದರಾಮಯ್ಯನವರು ತಮ್ಮ
೨೦೧೪-೧೫ ರ ಬಜೆಟ್‌ನಲ್ಲಿ ತಜ್ಞರ ಸಮಿತಿಯನ್ನು ರಚಿಸುವ ಘೋಷಣೆ ಮಾಡಿದರು. ತಜ್ಞರು
ಅನುಸರಿಸಬೇಕಾದ ಮೂಲ ಆಶಯವನ್ನು ಹೀಗೆ ಹೇಳಿದರು: “ಪಠ್ಯಪುಸ್ತಕಗಳನ್ನು ಸಾಮಾಜಿಕ ಸಾಮರಸ್ಯ,
ನೈತಿಕಮೌಲ್ಯಗಳು, ವ್ಯಕ್ತಿತ್ವವಿಕಸನ, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ, ಜಾತ್ಯತೀತತೆ ಮತ್ತು ರಾಷ್ಟ್ರೀಯ
ಬದ್ಧತೆಗಳಿಗೆ ಅನುವಾಗುವಂತೆ ತಜ್ಞರ ಸಮಿತಿಯನ್ನು ಪುನರ್‌ ರಚಿಸಲಾಗುವುದು” ಇದು ಬಜೆಟ್‌ ಭಾಷಣದಲ್ಲಿ
ಸಾದರಪಡಿಸಿದ ಆಶಯ.

ಆನ೦ತರ ಶಿಕ್ಷಣ ಇಲಾಖೆಯು ಒಂದರಿ೦ದ ಹತ್ತನೇ ತರಗತಿಯವರೆಗಿನ ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ
೨೬ ಸಮಿತಿಗಳನ್ನು ರಚಿಸಿ ದಿನಾಂಕ: ೨೪.೧೧.೨೦೧೪ ರಂದು ಆದೇಶಹೊರಡಿಸಿತು. ಈ ಸಮಿತಿಗಳು
ವಿಷಯವಾರು ಮತ್ತು ತರಗತಿವಾರು ಮಾನದಂಡಕ್ಕನುಗುಣವಾಗಿ ರಚಿತವಾದವು. ವಿವಿಧ ಪಠ್ಯವಿಷಯಗಳಿಗೆ
ಸಂಬಂಧಿಸಿದ ತಜ್ಞರು, ಅಧ್ಯಾಪಕರು ಈ ಸಮಿತಿಗಳಲ್ಲಿದ್ದಾರೆ. ಈಗಾಗಲೇ ಲಿಖಿತವಾಗಿ ಬ೦ದಿರುವ ಅನೇಕ
ಆಕ್ಷೇಪಗಳು ಮತ್ತು ವಿಶ್ಲೇಷಣೆಗಳನ್ನು ಪರಿಶೀಲಿಸಿ, ತಪ್ಪು ಒಪ್ಪುಗಳ ಬಗ್ಗೆ. ನಿರ್ಣಯಿಸಿ ಪಠ್ಯಪುಸ್ತಕಗಳನ್ನು
ಪರಿಷ್ಕರಿಸುವ ಹೊಣೆಹೊತ್ತ ಈ ಸಮಿತಿಗಳಿಗೆ "ಅಗತ್ಯವಿದ್ದಲ್ಲಿ ಪಠ್ಯವಸ್ತುವನ್ನು ಪರಿಷ್ಕರಿಸಿ ನಂತರ
ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ' ಸ್ವಾತಂತ್ರ್ಯವನ್ನು ೨೪.೧೧.೨೦೧೪ರ ಆದೇಶದಲ್ಲೇ ನೀಡಲಾಗಿತ್ತು. ಆನಂತರ
೧೯.೦೯.೨೦೧೫ ರಂದು ಹೊಸ ಆದೇಶ ಹೊರಡಿಸಿ "ಅಗತ್ಯವಿದ್ದಲ್ಲಿ ಪುನರ್‌ ರಚಿಸುವ' ಸ್ವಾತಂತ್ರ್ಯವನ್ನು
ನೀಡಲಾಯಿತು. ಹೀಗೆ ಸಮಗ್ರ ಪರಿಷ್ಠರಣೆಗೊಂಡ ಪಠ್ಯಪುಸ್ತಕಗಳನ್ನು ೨೦೧೬-೧೭ ರ ಬದಲು ೨೦೧೭-
೧೮ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೊಳಿಸಲಾಗುವುದೆಂಡದು ಇದೇ ಆದೇಶದಲ್ಲಿ ತಿಳಿಸಲಾಯಿತು.

ಅನೇಕ ವ್ಯಕ್ತಿಗಳೂ ಸಂಘಟನೆಗಳೂ: ಸ್ವಯಂಪ್ರೇರಿತರಾಗಿ ಪಠ್ಯಪುಸ್ತಕಗಳ ಮಾಹಿತಿದೋಷ,
ಆಶಯದೋಷಗಳನ್ನು ಪಟ್ಟಿಮಾಡಿ ಶಿಕ್ಷಣ ಸಚಿವರಿಗೆ, ಪಠ್ಯಪುಸ್ತಕ ಸಂಘಕ್ಕೆ ಕಳುಹಿಸಿದ್ದರು. ಅವುಗಳ
ಪರಿಶೀಲನೆಮಾಡಿದ್ದಲ್ಲದೆ, ಸಮಿತಿಗಳಾಜೆಗೆ. ಅನೇಕ ಸಂವಾದಗಳನ್ನು ಏರ್ಪಡಿಸಿ ವಿಚಾರ ವಿನಿಮಯ
ಮಾಡಿಕೊಂಡಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಅಧ್ಯಾಪಕರ ಸಂಘಗಳ ಜೊತೆ ಚರ್ಚಿಸಿದ್ದಲ್ಲದೆ ಪ್ರಶ್ನಾವಳಿ
ಸಿದ್ಧಪಡಿಸಿ ಅಧ್ಯಾಪಕರಿಗೆ ಕಳಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಅಧ್ಯಾಪಕರು, ವಿಷಯಪರಿವೀಕ್ಷಕರು
ಮತ್ತು ಡಯಟ್‌ ಪ್ರಾಂಶುಪಾಲರ ಪ್ರತ್ಯೇಕ ಸಭೆಗಳನ್ನು ನಡೆಸಿ ವಿಶ್ಲೇಷಣಾತ್ಮಕ ಅಭಿಮತಗಳನ್ನು ಪಡೆಯಲಾಗಿದೆ.
ವಿಜ್ಞಾನ, ಸಮಾಜವಿಜ್ಞಾನ, ಗಣಿತ, ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿದ ತಜ್ಞರಿಗೆ ಮೊದಲೇ ಪಠ್ಯಪುಸ್ತಕಗಳನ್ನು
ಕಳುಹಿಸಿ ಆನ೦ತರ ಸಭೆ ನಡೆಸಿ ಚರ್ಚಿಸಲಾಗಿದೆ. ಮಹಿಳಾ ಸಂಘಟನೆ ಹಾಗೂ ವಿಜ್ಞಾನ ಸಂಬಂಧಿ
ಸಂಸ್ಥೆಗಳನ್ನು ಆಹ್ವಾನಿಸಿ ಚಿಂತನೆ ನಡೆಸಲಾಗಿದೆ. ಹೀಗೆ ಎಲ್ಲಾ ಮೂಲಗಳಿಂದ ಪಡೆದ ಅರಿವಿನ ಆಧಾರದ
ಮೇಲೆ ಪಠ್ಯಪುಸ್ತಕಗಳನ್ನು ಅಗತ್ಯವಿದ್ದಕಡೆ ಪರಿಷ್ಕರಿಸಲಾಗಿದೆ.

ಬಹುಮುಖ್ಯವಾದ ಇನ್ನೊಂದು ಸಂಗತಿಯನ್ನು ಇಲ್ಲಿ ಹೇಳಬೇಕು. ಕೇಂದ್ರೀಯ ಶಾಲಾ
(ಎನ್‌.ಸಿ.ಇ.ಆರ್‌.ಟಿ) ಪಠ್ಯಪುಸ್ತಕಗಳ ಜೊತೆ ರಾಜ್ಯದ ಪಠ್ಯಪುಸ್ತಕಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿ
ಸಲಹೆಗಳನ್ನು ನೀಡಲು ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನಕ್ಕೆ ಸಂಬಂಧಿಸಿದಂತೆ ತಜ್ಞರ ಮೂರು
ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳು ನೀಡಿದ ತೌಲನಿಕ ವಿಶ್ಲೇಷಣೆ ಮತ್ತು ಸಲಹೆಗಳನ್ನು ಆಧರಿಸಿ
ರಾಜ್ಯ ಪಠ್ಯಪುಸ್ತಕಗಳ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಕೇಂದ್ರೀಯ ಶಾಲಾ ಪಠ್ಯಪುಸ್ತಕಗಳಿಗಿ೦ತ ನಮ್ಮ ರಾಜ್ಯದ


i


ಪಠ್ಯಪುಸ್ತಕಗಳ ಗುಣಮಟ್ಟ ಕಡಿಮೆಯಾಗದಂತೆ ಕಾಯ್ದುಕೊಳ್ಳಲಾಗಿದೆ. ಜೊತೆಗೆ ಆಂಧ್ರ, ತಮಿಳುನಾಡು,
ಮಹಾರಾಷ್ಟಗಳ ಪಠ್ಯಪುಸ್ತಕಗಳ ಜೊತೆ ನಮ್ಮ ಪಠ್ಯಪುಸ್ತಕಗಳನ್ನು ಪರಿಶೀಲಿಸಲಾಗಿದೆ.

ಇನ್ನೊಂದು ಸ್ಪಷ್ಟನೆಯನ್ನು ನೀಡಲು ಬಯಸುತ್ತೇನೆ. ನಮ್ಮ ಸಮಿತಿಗಳು ಮಾಡಿರುವುದು ಪರಿಷ್ಠರಣೆಯೇ
ಹೊರತು ಪಠ್ಯಪುಸ್ತಕಗಳ ಸಮಗ್ರ ರಚನೆಯಲ್ಲ. ಆದ್ದರಿಂದ ಈಗಾಗಲೇ ರಚಿತವಾಗಿರುವ ಪಠ್ಯಪುಸ್ತಕಗಳ
ಸ್ವರೂಪಕ್ಕೆ ಎಲ್ಲಿಯೂ ಧಕ್ಕೆಯು೦ಟುಮಾಡಿಲ್ಲ. ಲಿ೦ಗತ್ವ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯ, ರಾಷ್ಟ್ರೀಯ ಸಮಗ್ರತೆ,
ಸಮಾನತೆ, ಸಾಮಾಜಿಕ ಸಾಮರಸ್ಯಗಳ ಹಿನ್ನೆಲೆಯಲ್ಲಿ ಕೆಲವು ಪರಿಷ್ಕರಣೆಗಳು ನಡೆದಿವೆ. ಹೀಗೆ ಪರಿಷ್ಠರಿಸುವಾಗ
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ರಾಜ್ಯ ಪಠ್ಯಕ್ರಮ ಚೌಕಟ್ಟುಗಳನ್ನು ಮೀರಿಲ್ಲವೆಂದು ತಿಳಿಸಬಯಸುತ್ತೇವೆ:
ಜೊತೆಗೆ ನಮ್ಮ ಸಂವಿಧಾನದ ಆಶಯಗಳನ್ನು ಅನುಸರಿಸಲಾಗಿದೆ. ಸಮಿತಿಗಳು ಮಾಡಿದ ಪರಿಷ್ಠರಣೆಯನ್ನು
ಮತ್ತೊಮ್ಮೆ ಪರಿಶೀಲಿಸಲು ವಿಷಯವಾರು ಉನ್ನತ ಪರಿಶೀಲನ ಸಮಿತಿಗಳನ್ನು ರಚಿಸಿ ಅಭಿಪ್ರಾಯಪಡೆದು
ಅಳವಡಿಸಲಾಗಿದೆ.

ಹೀಗೆ ಕ್ರಮಬದ್ಧವಾಗಿ ನಡೆದ ಕೆಲಸಕ್ಕೆ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡ ೨೭

ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಹಾಗೂ ಉನ್ನತ ಪರಿಶೀಲನಾ ಸಮಿತಿಯ ಸಮಸ್ತರನ್ನು ಕೃತಜ್ಞತೆಯಿಂದ
ನೆನೆಯುತ್ತೇವೆ. ಅಂತೆಯೇ ಸಮಿತಿಗಳ ಕೆಲಸ ಸುಗಮವಾಗಿ ನಡೆಯುವಂತೆ ವ್ಯವಸ್ಥೆಮಾಡಲು ಕಾರ್ಯಕ್ರಮ
ಅಧಿಕಾರಿಗಳಾಗಿ ನಿಷ್ಠೆಯಿಂದ ದುಡಿದ ಪಠ್ಯಪುಸ್ತಕ ಸಂಘದ ಎಲ್ಲಾ ಅಧಿಕಾರಿಗಳನ್ನೂ ನೆನೆಯುತ್ತೇವೆ. ಸಹಕರಿಸಿದ
ಸಿಬ್ಬಂದಿಗೂ ನಮ್ಮ ವಂದನೆಗಳು. ಅಭಿಪ್ರಾಯ ನೀಡಿ ಸಹಕರಿಸಿದ. ಸರ್ವ ಸಂಘಟನೆಗಳು ಮತ್ತು ತಜ್ಞರಿಗೆ
ಧನ್ಯವಾದಗಳು.


(ಎಂ.ಪಿ. ಮಾದೇಗೌಡ) (ಪ್ರೊ. ಬರಗೂರು ರಾಮಚಂದ್ರಪ್ಪ)
ವ್ಯವಸ್ಥಾಪಕ ನಿರ್ದೇಶಕರು ಸರ್ವಾಧ್ಯಕ್ಷರು
ಕರ್ನಾಟಕ ಪಠ್ಯಪುಸ್ತಕ ಸ೦ಘ (ರಿ) ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ
ಬೆ೦ಗಳೂರು-೮೫ ಕರ್ನಾಟಕ ಪಠ್ಯಪುಸ್ತಕ ಸ೦ಘ (ರಿ)
ಬೆಂಗಳೂರು-೮೫


ಮಾಡಿ ಕಲಿ - ಹಾಡಿ ನಲಿ
ಬಣ್ಣದ ಹಕ್ಕಿ (ಪದ್ಯ)
ಊರಿಗೊಬ್ಬ ರಾಜನಂತೆ (ಪದ್ಯ)
ಗೆಳೆತನ


ಸೂಜಿಯಕಥೆ


ಹಳ್ಳಿಯ ದಾರಿಯ ಬದಿಯಲಿ (ಪದ್ಯ)
ಸಂತೆ

ಅರಿವೇ ಗುರು

ನನ್ನ ದೇವರು (ಪದ್ಯ)
ಮೂರು ಕಲ್ಲುಗಳು

ಸತ್ಯವಂತ ಬಾಲಕ

ಮಂಗಗಳ ಉಪವಾಸ (ಪದೃ)
ನೇಗಿಲು

ಸರಳತೆ

ಕಡಲು (ಪದ್ಯ)

ಸಹಬಾಳ್ವೆ

ಕಾವೇರಿ

ತಾಯಿ (ಪದ್ಧ)


ಸಿ.ಫ. ಕಟ್ಟೀಮನಿ

ಗಿರಿಬಾಲೆ

ಸಮಿತಿ ರಚನೆ

ಸಮಿತಿ ರಚನೆ

ಬಾಗೂರು: ಮಾರ್ಕಾಂಡೇಯ
ಸಮಿತಿ ಠಚನೆ

ಸಮಿತಿ ರಚನೆ

ನೆಂಪು ನರಸಿಂಹಭಟ್ಟ
ಸಮಿತಿ ರಚನೆ

ಸಮಿತಿ ರಚನೆ

ಮಚ್ಚಿಮಲೆ ಶಂಕರನಾರಾಯಣರಾವ್‌
ಸಮಿತಿ ರಚನೆ

ಸಮಿತಿ ರಚನೆ

ವಾಣಿ ಸುಬ್ಬಯ್ಯ

ಸಮಿತಿ ರಚನೆ

ಸಮಿತಿ ರಚನೆ

ಎ.ಕೆ. ರಾಮೇಶ್ವರ


ಮಾಡಿ ಕಲಿ - ಹಾಡಿ ನಲಿ


ಅ) ಕೆಳಗಿನ ಚಿತ್ರಗಳಿಗೆ ಬಣ್ಣ ತುಂಬಿಸಿರಿ :


ಆ) ಚುಕ್ಕಿ ಜೋಡಿಸಿ, ಚಿತ್ರ ರಚಿಸಿ ಬಣ್ಣ-ತುಂಬಲು ಹೇಳಿರಿ :


ಇ) ಕೆಳಗಿನ ಪದ್ಯವನ್ನು ಹಾಡಿಸಿರಿ:


ಆನೆ ಬಂದಿತ್ತು (ಪದ್ಯ)


ಆನೆ ಬಂದಿತ್ತು ಅಣ್ಣ ಆನೆ ಬಂದಿತ್ತು
ಹಬ್ಬದ ದಿನವೇ ಸುಬ್ಬನ ಮನೆಗೊಂದಾನೆ ಬಂದಿತ್ತು
ಅಪ್ಪನು ಕೊಟ್ಟ ತೆಂಗಿನ ಕಾಯಿಯ
ಗೊಳಕ್‌ ನುಂಗಿತ್ತು!
ಅಮ್ಮನು ಕೊಟ್ಟ ಬೆಲ್ಲದ ಉಂಡೆಯು
ಗುಳುಂ ಆಗಿತ್ತು
ಉದ್ದ ಸೊಂಡಿಲು ಸಣ್ಣ ಕಣ್ಣು
ಬೆಳ್ಳನೆ ಕೋಡಿತ್ತು!
ದಪ್ಪನೆ ಕಾಲು ಅಗಲದ ಕಿವಿಯು
ಮೋಟು ಬಾಲವಿತ್ತು!
ಕಾಲಿಗೆ ಗೆಜ್ಜೆ ಕೊರಳಲಿ ಗಂಟೆ
ಆನೆ ಬಂದಿತ್ತು!
ಮೈ ಮೇಲೆಲ್ಲ ಚಿನ್ನದ ಬಟ್ಟೆ


©


ಫಳಫಳ ಹೊಳೆದಿತ್ತು
ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು


ಆನೆ ಬಂದಿತ್ತು:
ನೀರಿಗೆ ಇಳಿದು ಸೊಂಡಿಲು ಬಡಿದು
ಜಳಕ ಮಾಡಿತ್ತು.
ಹೊಟ್ಟೆ ಗುಡಾಣ ಕೇಳೋ ಜಾಣ
ಆನೆ ಬಂದಿತ್ತು
ಕೆಳಕ್ಕೆ ಬಗ್ಗಿ ಸೊಂಡಿಲು ಎತ್ತಿ
ಸಲಾಮು ಮಾಡಿತ್ತು.
ಬನ್ನಿರಿ ಮಕ್ಕಳೆ ಸವಾರಿ ಮಾಡಿ
ಎಂದು ಕರೆದಿತ್ತು
ಮಕ್ಕಳನ್ನೆಲ್ಲಾ ಕೂರಿಸಿಕೊಂಡು
ಸವಾರಿ ಹೊರಟಿತ್ತು.


- ಬೆಂಡರವಾಡಿ ಸುಬ್ರಹ್ಮಣ್ಮ ಶರ್ಮ
೬%


ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿರಿ :
೧. ಆನೆ ಯಾವ ದಿನದಂದು ಮನೆಗೆ: ಬಂದಿತ್ತು?
೨. ಯಾರ ಮನೆಗೆ ಆನೆ ಬಂದಿತು?
೩. ಆನೆಗೆ ಅಮ್ಮ ಏನನ್ನು ಕೊಟ್ಟಳು?
೪. ಆನೆಯ ಕಾಲಿಗೆ ಏನನ್ನು ಕಟ್ಟಲಾಗಿತ್ತು?
೫. ಆನೆಯು ಹೇಗೆ ಜಳಕ ಮಾಡಿತ್ತು?
೬. ಆನೆಯು ಹೇಗೆ ಸಲಾಮು ಮಾಡಿತ್ತು?
೭. ಆನೆಯು ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೊರಟಿತ್ತು?


ಆ) ಕೆಳಗಿನ ಚಿತ್ರಗಳನ್ನು ಕುರಿತು ಮಕ್ಕಳಿಗೆ ತಿಳಿದಿರುವುದನ್ನು ಹೇಳಿಸಿರಿ:


ಇ) ಕೆಳಗಿನ ಕತೆಯನ್ನು ಓದಿಸಿರಿ :


ರೈತ ಮತ್ತು ಹದ್ದು


ಒಂದು ಊರಿನಲ್ಲಿ ಒಬ್ಬ ರೈತನಿದ್ದ. ಆ ರೈತ ದಿನಾಲು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ.
ಒಮ್ಮೆ ಒಂದು ಹದ್ದು ಬಲೆಯೊಳಗೆ ಸಿಕ್ಕಿಕೊಂಡಿತ್ತು. ಅದನ್ನು ರೈತ ನೋಡಿದ. ಹದ್ದಿನ ಸ್ಥಿತಿ
ನೋಡಿ ರೈತನಿಗೆ ಕರುಣೆ ಬಂದಿತು. ಹದ್ದನ್ನು ಬಲೆಯಿಂದ ಬಿಡಿಸಿದ. ಅದು ಸಂತಸದಿಂದ ಹಾರಿ
ಹೋಯಿತು.

ಊರ ಹೊರಗೆ ರೈತನ ಮನೆ ಇದ್ದಿತು. ಒಮ್ಮೆ ಆತ ಮನೆಯಲ್ಲಿ ಕುಳಿತಿದ್ದ. ಅವನ ಮನೆಯ


ಗೋಡೆ ಕುಸಿಯುವ ಸ್ಥಿತಿಯಲ್ಲಿತ್ತು. ಆಕಾಶದಲ್ಲಿ ಹಾರಾಡುತ್ತಿದ್ದ ಹದ್ದು ಅದನ್ನು ಗಮನಿಸಿತು.


ಹದ್ದು ಒಂದು ನಾಣ್ಯವನ್ನು ಹುಡುಕಿ ತಂದಿತು. ರೈತನಿಗೆ ಕಾಣುವಂತೆ ಸ್ವಲ್ಪ ದೂರದಲ್ಲಿ
ಬೀಳಿಸಿತು. ಅದೇನೆಂದು ನೋಡಲು ರೈತ ಎದ್ದು ಹೊರಗೆ ಬಂದನು. ಆಗ ಗೋಡೆ ಕುಸಿಯಿತು.
ಅವನಿಗೆ ಹದ್ದು ಬೇಕೆಂದೇ ನಾಣ್ಯ ತಂದು ಹಾಕಿದ್ದು ಎಂದು ತಿಳಿಯಿತು. ತನ್ನ ಜೀವ ಉಳಿಸಿದ
ಹದ್ದಿನ ಕಡೆಗೆ ಪ್ರೀತಿಯಿ೦ದ ನೋಡಿದನು. ಅದಕ್ಕೆ ಕೈ ಮುಗಿದನು. ಹದ್ದು ಹರ್ಷದಿ೦ದ ಮುಗಿಲ
ಕಡೆಗೆ ಹಾರಿ ಹೋಯಿತು.
ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿರಿ :

೧. ರೈತ ಎಲ್ಲಿ ಕೆಲಸ ಮಾಡುತ್ತಿದ್ದ?
ಹದ್ದು ಎಲ್ಲಿ ಸಿಕ್ಕಿಕೊಂಡಿತ್ತು?
ಹದ್ದನ್ನು ಬಲೆಯಿಂದ ಬಿಡಿಸಿದವರು ಯಾರು?
ರೈತನ ಮನೆಯ ಗೋಡೆ ಯಾವ ಸ್ಥಿತಿಯಲ್ಲಿತ್ತು?


ರೈತ ಹದ್ದಿನ ಕಡೆಗೆ ಹೇಗೆ ನೋಡಿದನು?


OO


ಆ) (೧). ವರ್ಣಮಾಲೆಯನ್ನು ಪೂರ್ಣಮಾಡಿಸಿರಿ :


sw] |೮| oN |] [6


(೨) ಕೆಳಗಿನ ಕೋಷ್ಟಕವನ್ನು ಗಮನಿಸಿ ಖಾಲಿ; ಬಿಟ್ಟಿರುವ ಅಕ್ಷರಗಳ ಕಾಗುಣಿತ ಬರೆಸಿರಿ :


333
೫111 1 || ||] |] || || |


೫31373731737311831 33117331333


ಇ) ಕೆಳಗಿನ ವಾಕ್ಯಗಳನ್ನು ನಕಲು ಮಾಡಿರಿ :
ಈ. ಅಜ್ಜ ಅಜ್ಜಿ ಸಂತೋಷದಿಂದ ಕಜ್ಜಾಯ ತಿಂದರು.


ಈ. ಕೆಳಗಿನ ಕನ್ನಡ ಸಂಖ್ಯೆಗಳನ್ನು ನಕಲು 'ಮಾಡಿಸಿರಿ :



ಡ್‌ ಪಾಠಪೂರ್ವ ಚಟುವಟಿಕೆ :
ಚಿತ್ರದಲ್ಲಿರುವ ಪಕ್ಷಿಗಳನ್ನು ಗುರುತಿಸಿ ಅವುಗಳ ಹೆಸರು ಬರೆಯಿರಿ.


1


ಗೆಳೆಯರು ಆಡಲು ಯಾರೂ. ಇಲ್ಲ
ಕಳೆಯುವುದೆಂತು `ವೇಳೆಯನೆಲ್ಲ
ಬಾ ಬಾ ನನಗೂ ಹಾಡಲು ಕಲಿಸು
ಬಾ ಬಾ ನನಗೂ ಹಾರಲು ಕಲಿಸು


ಅವನು ನೀರಿಗೆ ಹೋಗಿಹಳು
ಅಪನು ಪೇಟೆಗೆ ಹೋಗಿಹನು
ಅವನು ಬರಲಿ ಅಪ್ಪನು ಬರಲಿ
ತಿನ್ನಲು ಹಣ್ಣನು ಕೊಡಿಸುವೆನು


ನನಗೂ ಎರಡು ರೆಕ್ಕೆಯ ಹಚ್ಚು


ನಾನು ನೀನೂ ಇಬ್ಬರು ಕೂಡಿ
ಮುಗಿಲಿನ ಕಡೆಗೆ ಹಾರುವ ಬಾ
ಅಲ್ಲಿಂದಿತ್ತ ಇಲ್ಲಿಂದತ್ತ
ಹಾರುತ ಹಾಡುತ ನಲಿಯುವ ಬಾ.
- ಸಿ. ಫ. ಕಟ್ಟೀಮನಿ


OO


ಅ) ಕೇಳಿದ ಪದಗಳು : ಇವುಗಳನ್ನು ಗಟ್ಟಿಯಾಗಿ ಓದಿರಿ.


ಹಕ್ಕಿ
ನತ್ತ


ಅವ್ವ ಅ ಹಣ್ಣು ರೆಕ್ಕೆ ವೇಳೆ
ಹಾರುವ ಪುಚ್ಚವ ಹಾಡಲು ಇಬರು ಹೋಗಿಹಳು





ಹೋಗಿಹನು ಅಲ್ಲಿಂದಿತ್ತ ಇಲ್ಲಿಂದತ್ತ ಮುಗಿಲಿನ ನಲಿಯುವ
ಆ) ಪದಗಳ ಅರ್ಥ :


ವೇಳೆ — ಕಾಲ, ಸಮಯ
ಹಚ್ಚು - ಸೇರಿಸು, ಅಂಟಿಸು
ಪುಚ್ಚ ಹಕ್ಕಿಯ ಗರಿ / ಪುಕ್ಕ
ನೆತ್ತಿ — ತಲೆಯ ಮಧ್ಯಭಾಗ
ಹಿಂಗಡೆ - ಹಿಂದೆ
ಅಭ್ಯಾಸ


ಅ) ಪದ್ಯದ ಮುಂದಿನ ಸಾಲುಗಳನ್ನು ಹೇಳಿ:




೩.
ಲ್ಯ


ಗೆಳೆಯರು ಆಡಲು ಯಾರೂ ಇಲ್ಲ
ಅವ್ವನು ಬರಲಿ ಅಪ್ಪನು ಬರಲಿ
ನನಗೂ ಎರಡು ರೆಕ್ಕೆಯ ಹಚ್ಚು
ನಾನು ನೀನೂ ಇಬ್ಬರು ಕೂಡಿ


ಆ) ಈ ಪ್ರಶ್ನೆಗಳಿಗೆ ಒಂದು ಪದದಲ್ಲಿ "ಉತ್ತರ ಬರೆಯಿರಿ:


(3


ಮಗು ಯಾವ ಹಕ್ಕಿಯನ್ನು ಕರೆಯುತ್ತಿದೆ?


ಪ್ರತಿಗೆ ಬಾಟಾ 3. ಸರತಿ ಹಕ್ಕಿಯನ್ನು ಕರೆಯುತ್ತಿದೆ.

ಅವ್ವ ಎಲ್ಲಿಗೆ ಹೋಗಿಹಳು?

ಅವು ್‌್ಪಪಫ ಟ್‌ 1" ಹೋಗಿಹಳು

ಮಗು ತಿನ್ನಲು ಏನನ್ನು ಕೊಡಿಸುವೆನು ಎಂದಿತು?

ಪುಣಿ: ತಿನ್ನಿ ಚಾಚೂ ಕೊಡಿಸುವೆನು ಎಂದಿತು.

ಮಗು ಇಬ್ಬರು ಕೂಡಿ ಯಾವ ಕಡೆಗೆ ಹಾರುವ ಬಾ ಎಂದು ಕರೆಯಿತು?

ಮಗು ಇಬ್ಬರು ಕೂಡಿ .............ು ಕಡೆಗೆ ಹಾರುವ ಬಾ ಎಂದು ಕರೆಯಿತು.


ಆ) ಆವರಣದಲ್ಲಿ ಇರುವ ಪದಗಳಲ್ಲಿ ಸೂಕ್ತ ಪದ ಆರಿಸಿ ಖಾಲಿ ಬಿಟ್ಟ ಸ್ಥಳದಲ್ಲಿ ಬರೆಯಿರಿ:


[ಹಚ್ಚು ಪೇಟೆಗೆ, ಹಾಡಲು, ಹಾರುವ, ಜುಟ್ಟನು]


ಹಬಾ -ಚಾ ನನಗೂ ಎಎ ಕಲಿಸು.
ಎಟ ಲಚ್‌ ಹೋಗಿಹನು
೩. ನನಗೂ ಎರಡು ರೆಕ್ಕೆಯ ........................
೪, ನೆತ್ತಿಯ ಮೇಲೆ ....................... ಹಚ್ಚು.
೫. ಮುಗಿಲಿನ ಕಡೆಗೆ... ಬಾ.


ಈ) ಈ ಪ್ರಾಸ ಪದಗಳನ್ನು ಹೇಳು:


ಹಾಡಲು - ಹಾರಲು
ಹೋಗಿಹಳು - ಹೋಗಿಹನು
ಹಚು -—ಜುಚು
ಚ ಚ
ಅಲ್ಲಿಂದಿತ್ತ — ಇಲ್ಲಿಂದತ್ತ
ಚಟುವಟಿಕೆ :


೧. ವಿವಿಧ ಪಕ್ಷಿಗಳ ಕೂಗನ್ನು'ಅನುಕರಣೆ ಮಾಡು.
೨. ನಿನಗೆ ಗೊತ್ತಿರುವ "ಹಾಡು. ಕಥೆಗಳನ್ನು ಹೇಳು.


೩. ಪಕ್ಷಿಗಳ ಬಣ್ಣದ ಗರಿಗಳನ್ನು ಸಂಗಹಿಸಿ ಅಭ್ಯಾಸ ಪುಸ್ತಕದಲ್ಲಿ ಅಂಟಿಸು.


ಸಾಮರ್ಥ್ಯ: ಈ ಪದ್ಯವನ್ನು ಕಲಿಯುವುದರೊಂದಿಗೆ ಸರಳ ಹಾಗೂ ಬಳಕೆಯಲ್ಲಿರದ



ಜನಪ್ರಿಯ ಪ್ರಾಸಗೀತೆ ಮತ್ತು ಕಥೆಗಳನ್ನು ಆಲಿಸುವ ಸಾಮರ್ಥ್ಯ ಗಳಿಸುವೆ.


XEN


ಪಾಠ - ೨


ಊರಿಗೊಬ್ಬ ರಾಜನಂತೆ (ಪದ್ಯ)
ರ್‌ ಹಪಾಠಪೂರ್ವ ಚಟುವಟಿಕೆ :


ಈ ಪ್ರಶ್ನೆಗಳಿಗೆ ಉತ್ತರ ಹೇಳು :
೧. ನಿಮ್ಮ ಊರಿನ ಹೆಸರೇನು?
೨. ನೀವು ಯಾರೊಂದಿಗೆ ಆಟ ಆಡುತ್ತೀರಿ?
೩. ನಿಮಗೆ ಇಷ್ಟವಾದ ಆಟ ಯಾವುದು?
೪. ನೀವು ಯಾವ ಯಾವ ಆಟಗಳನ್ನು ಆಡುತ್ತೀರಿ?


ಒಂದಾನೊಂದು ಊರಿತ್ತಂತೆ
ಊರಿಗೊಬ್ಬ ರಾಜನಂತೆ


ರಾಜಗೊಬ್ಬ ಮಂತ್ರಿಯಂತೆ
ಮಂತ್ರಿಗೊಬ್ಬ ಮಗಳಂತೆ


ಮಗಳಿಗೊಂದು ಗೊಂಬೆಯಂತೆ
ಗೊಂಬೆಗೊಂದು ಅಂಗಿಯಂತೆ
ಅಂಗಿಗೊಂದು ಗುಂಡಿಯಂತೆ
ಗುಂಡಿ ಕಿತ್ತು ಹೋಯಿತಂತೆ


ದರ್ಜಿಯನ್ನು ಕರೆದರಂತೆ
ದರ್ಜಿ ಬಂದು ನೋಡಿದನಂತೆ
ಗುಂಡಿ ಬಲು ಹಳೆಯದಂತೆ
ಬೇರೆ ಗುಂಡಿ ತಂದನಂತೆ


EE -- ಸಾ


ಅಂಗಿಗಿಟ್ಟು ಹೊಲಿದನಂತೆ
ಅಂಗಿ ಸರಿಯಾಯಿತಂತೆ

ಮಂತ್ರಿ ಮಗಳ ಆಸೆಯಂತೆ
ಗೊಂಬೆಗಂಗಿ ಹಾಕಿದರಂತೆ


ತುಂಬ ಚಂದ ಕಂಡಿತಂತೆ
ಗೊಂಬೆಯಾಟ ಆಡಿದಳಂತೆ
ಬೇರೆ ಗೊಂಬೆ ತಂದಳಂತೆ
ಎರಡಕ್ಕೂ ಮದುವೆಯಂತೆ


ಊರಿನ ರಾಜ ಬರುವನಂತೆ
ನಿಂತು ಮದುವೆ ಮಾಡುವನಂತೆ
ನಾನೂ ನೀನೂ ಹೋಗೋಣಂತೆ
ಮದುವೆ ನೋಡಿ ಬರೋಣಂತೆ


- ಗಿರಿಬಾಲೆ


ಅ) ಕೇಳಿದ ಪದಗಳು : ಇವುಗಳನ್ನು ಗಟ್ಟಿಯಾಗಿ ಓದಿ.


ಒಂದಾನೊಂದು ಊರು ಒಬ್ಬ ರಾಜ ಮಂತ್ರಿ
ಮಗಳು ಗೊಂಬೆ ಅಂಗಿ ಗುಂಡಿ ಕಿತ್ತು
ಹೋಗು ದರ್ಜಿ ಕರೆ ನೋಡು ಹಳೆಯದು
ತಂದೆ ಹೊಲಿ ಆಸೆ ಹಾಕು ತುಂಬ
ಚಂದ ಆಟ ಮದುವೆ ನಿಲ್ಲು ಹೋಗೋಣ


ರಾಜ - ಅರಸ

ದರ್ಜಿ - ಬಟ್ಟಿ ಹೊಲಿಯುವವ
ಚಂದ - ಅಂದ, ಸೊಗಸು, ಚೆಲುವು
ಮಂತ್ರಿ - ರಾಜನ ಸಲಹೆಗಾರ


ಅಭ್ಯಾಸ
ಅ) ಕೊಟ್ಟ ಸಾಲುಗಳನ್ನು ಓದಿ ಖಾಲ್ಲಿಬಿಟ್ಟ ಸ್ಥಳಕ್ಕೆ ಸರಿಯಾದ ಪದ ಬರೆಯಿರಿ :
೧. ರಾಜಗೊಬ್ಬ ಮಂತ್ರಿಯಂತೆ ಮಂತ್ರಿಗೊಬ್ಬ ....................
೨. ಮಗಳಿಗೊಂದು ಗೊಂಬೆಯಂತೆ ಗೊಂಬೆಗೊಂದು .......... ಟಟ
ಮಿ. ಗುಂಡಿ ಬಲು ಹಳೆಯದೇ ಬೇಡೆ ಟಾ ತಂದನಂತೆ


ಆ) ಈ ಪದ್ಯಭಾಗದ ಮುಂದಿನ ಸಾಲುಗಳನ್ನು ಹೇಳಿರಿ :
೧. ದರ್ಜಿಯನ್ನು ಕರೆದರಂತೆ
೨. ಅಂಗಿಗಿಟ್ಟು ಹೊಲಿದನಂತೆ
೩. ನಾನೂ ನೀನೂ ಹೋಗೋಣಂತೆ


ಇ) “ಅ' ಪಟ್ಟಿಯಲ್ಲಿನ ಪದಗಳಿಗೆ ಸರಿಯಾದ ಪದವನ್ನು


ಅ ಆ
೧. ಊರಿಗೊಬ್ಬ ಬರುವನಂತೆ
೨. ಗುಂಡಿ ಬಲು ಆಸೆಯಂತೆ
೩. ಮಂತ್ರಿ ಮಗಳ ಹಳೆಯದಂತೆ
೪. ಊರಿನ ರಾಜ ರಾಜನಂತೆ
ಚಟುವಟಿಕೆ :


೧. ಈ ಅಕ್ಷರಗಳನ್ನು ಸರಿಯಾಗಿ ಉಚ್ಚರಿಸು :


ಆ ಈ ಏ ಓ

ಗ ಖ ಘ ರು

ಲ ಮ ಛ ಹ
೨. ಈ ಪದಗಳನ್ನು ಸರಿಯಾಗಿ, ಉಚ್ಚರಿಸು :

ಫಲಕ ಭರತ ಖಗ

ಘಟನೆ ಭಾಗ್ಯ ಅಜ್ಜ

ಭಕ್ತ ಕ್ತ ಮಂತ್ರಿ


“ಆ' ಪಟ್ಟಯಿಂದ ಆರಿಸಿ ಹೊಂದಿಸಿ ಬರೆ :
ಸರಿಯಾದ ಪದ


ತಂದಳಂತೆ
ಹಳೆಯದಂತೆ


ಗೊಂಬೆಯಂತೆ


ಸಾಮರ್ಥ್ಯ: ಈ ಪದ್ಯವನ್ನು ಕಲಿತ ನಂತರ ಅಕ್ಷರಗಳನ್ನು ಸರಿಯಾಗಿ ಉಚ್ಚರಿಸುವ
ಸಾಮರ್ಥ್ಯ ಗಳಿಸುವಿರಿ.


ಪಾಠ - ೩
ಗೆಳೆತನ (ಗದ್ಯ) ಸ
TE


ಹೆಸರು ಬರೆ.


mre
[ಕ್ಷ ತ]
ಪ್‌! ey
hg ಕ [' i
| ಓತ ಜ್‌ F


ಕುದುರೆ ಮತ್ತು ಒಂಟೆ ಒಳ್ಳೆಯ ಗೆಳೆಯರಾಗಿದ್ದವು. ಒಂದೇ ಕಡೆ ವಾಸಿಸುತ್ತಿದ್ದವು.
ಜೊತೆಯಾಗಿಯೇ ಆಹಾರ ಹುಡುಕಿ ತಿನ್ನುತ್ತಿದ್ದವು. ಒಮ್ಮೆ ಕುದುರೆಗೆ ಒಂದು ಆಲೋಚನೆ
ಬಂದಿತು. “ನಮ್ಮಿಬ್ಬರಲ್ಲಿ ಯಾರು ಹೆಚ್ಚು”? ಎಂದು ಒಂಟೆಯನ್ನು ಕೇಳಿತು. ಅದಕ್ಕೆ ಒಂಟೆ
“ಕುದುರೆಯಣ್ವ, ನಾವಿಬ್ಬರೂ ಸಮಾನರು ಅಲ್ಲವೆ?” ಎಂದು ಹೇಳಿತು. ಆ ಮಾತಿನಿಂದ ಕುದುರೆಗೆ
ಸಮಾಧಾನವಾಗಲಿಲ್ಲ. ಆಗ ಅದು "ಆನೆಯಣ್ಣ ಅಲ್ಲಿದ್ದಾನೆ. ಅವನನ್ನೇ ಕೇಳೋಣ ಬಾ” ಎಂದಿತು.


ಒಂಟೆ ಒಪ್ಪಿಕೊಂಡಿತು.


ಅವು ಆನೆಯ ಬಳಿಗೆ ಹೋದವು. ಕುದುರೆಯು “ಆನೆಯಣ್ಣ, ನಮ್ಮಿಬ್ಬರಲ್ಲಿ ಯಾರು
ಹೆಚ್ಚು ಎಂದು ನೀನು ಹೇಳಬೇಕು” ಎಂದು ಕೇಳಿತು. ಆನೆಯು ಸ್ವಲ್ಪ ಹೊತ್ತು ಆಲೋಚಿಸಿ
“ತಮ್ಮಂದಿರಾ, ಯಾರು ಹೆಚ್ಚು ಎಂದು ಸುಮ್ಮನೆ ಹೇಳುವುದು ಸರಿಯಲ್ಲ. ನಿಮ್ಮಿಬ್ಬರಿಗೆ ಓಟದ
ಸ್ಪರ್ಧೆ ಏರ್ಪಡಿಸೋಣ. ಆದರೆ ಸ್ಪರ್ಧೆಯು ಎರಡು ಸಲ ಇರಲಿ, ಅನಂತರ ತೀರ್ಮಾನಿಸೋಣ”
ಎಂಬ ಸಲಹೆಯನ್ನು ನೀಡಿತು. ಸ್ನೇಹಿತರಿಬ್ಬರೂ ಒಪ್ಪಿಕೊ೦ಡರು.


ಆನೆಯು ಸ್ಪರ್ಧೆಯ ಜಾಗ ಮತ್ತು ಸಮಯವನ್ನು ನಿರ್ಧರಿಸಿತು. “ನೀವು ಈ ಬೇವಿನ
ಮರದಿಂದ ಆರಂಭಿಸಿ, ಆ ಕೊಳದವರೆಗೆ ಓಡಿ. ನಾನು ಕೊಳದ ಹತ್ತಿರ ಇರುತ್ತೇನೆ” ಎಂಬ ಸೂಚನೆ


ನೀಡಿತು. ಆನೆಯು ಅಲ್ಲಿಗೆ ಹೋಯಿತು. ಕುದುರೆ ಮತ್ತು ಒಂಟೆ ಓಡಲು ಶುರು ಮಾಡಿದವು.
ಕುದುರೆಯೇ ವೇಗವಾಗಿ ಓಡಿ ಮೊದಲು ಗುರಿ ಮುಟ್ಟಿತು. ಗೆದ್ದ ಕುದುರೆ “ನೋಡಿದಿರಾ! ನಾನೇ
ಹೆಚ್ಚು ಅಂತ ಗೊತ್ತಾಯಿತೆ?” ಎಂದು ಜಂಬದಿಂದ ಹೇಳಿತು. ಆನೆಯು “ಕುದುರೆಯೇ, ನಮ್ಮ
ಒಪ್ಪಂದದಂತೆ ಇನ್ನೊಂದು ಕಡೆ ಸರ್ಧೆ ಇದೆ. ಅದೂ ಆಗಲಿ, ಅನಂತರ ಯಾರು ಹೆಚ್ಚು
ಎಂಬುದನ್ನು ತೀರ್ಮಾನಿಸಬಹುದು” ಎಂದಿತು. “ಓಹೋ! ಹಾಗೆಯೇ ಆಗಲಿ, ನಾನು ಸಿದ್ಧ”


ಎಂದು ಕುದುರೆ ಹೆಮ್ಮೆಯಿಂದ ಹೇಳಿತು.


ಆನೆಯು ಎರಡನೆಯ ಸಲದ ಓಟದ. ಸ್ಪರ್ಧೆಯನ್ನು ಹೆಚ್ಚು ಮರಳು ಇರುವ ಜಾಗದಲ್ಲಿ
ಏರ್ಪಡಿಸಿತು. ಅಲ್ಲಿ ಸ್ಪರ್ಧೆಯ ಆರಂಭ ಮತ್ತು ಗುರಿ ಮುಟ್ಟುವ ಜಾಗಗಳನ್ನು ಗುರುತಿಸಿತು.
ಗುರಿ ಮುಟ್ಟಬೇಕಾದ ಸ್ಥಳದಲ್ಲಿ ಆನೆಯು ನಿಂತಿತು. ಓಟದ ಸ್ಪರ್ಧೆ ಪ್ರಾರಂಭವಾಯಿತು. ಮರಳಿನ
ಮೇಲೆ ಒಂಟೆ ಸರಾಗವಾಗಿ ಓಡಿತು. ಆದರೆ ಅಲ್ಲಿ ಕುದುರೆಗೆ ಓಡಲು ಕಷ್ಟವಾಯಿತು.


ಎರಡನೆಯ ಸಲ ಓಟದ ಸ್ಪರ್ಧೆಯಲ್ಲಿ ಒಂಟೆ ಗೆದ್ದಿತು. ಆಗ ಸೋತ ಕುದುರೆಗೆ ತನ್ನ
ತಪ್ಪಿನ ಅರಿವಾಯಿತು. ಆನೆ ಮತ್ತು ಒಂಟೆಯ ಹತ್ತಿರ ಕ್ಷಮೆ ಕೇಳಿತು. ಆನೆಯು “ತಮ್ಮಂದಿರಾ,
ನಿಮ್ಮಲ್ಲಿ ಯಾರು ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಪ್ರತಿಯೊಬ್ಬರಲ್ಲಿಯೂ ಅವರದೇ ಆದ
ವಿಶೇಷತೆ ಇರುತ್ತದೆ. ನೀವಿಬ್ಬರೂ ಒಳ್ಳೆಯ ಗೆಳೆಯರಾಗಿದ್ದವರು. ಮುಂದೆಯೂ ಹಾಗೆಯೇ ಇರಿ.
ಗೆಳೆತನದ ಆನಂದವನ್ನು ಹಂಚಿಕೊಂಡು ಬಾಳಿರಿ” ಎಂದು ಹೇಳಿತು. ಕುದುರೆ ಮತ್ತು ಒಂಟೆ
ಆನೆಗೆ ಧನ್ಯವಾದಗಳನ್ನು ತಿಳಿಸಿದವು. ಎಂದಿನಂತೆ ಗೆಳೆಯರಾಗಿ ಖುಷಿಯಾಗಿದ್ದವು.


ಗೆಳೆತನ ಸಹಬಾಳ್ಗೆಗೆ ಸೋಪಾನ


ಅ. ಓದಿದ ಪದಗಳು : ಇವುಗಳನ್ನು ಗಟ್ಟಿಯಾಗಿ ಓದು.


ಒಳ್ಳೆಯ ಹುಡುಕು ಆಲೋಚನೆ ಗೆಳೆಯ ನಮ್ಮಿಬ್ಬರು ಹೆಚ್ಚು
ಏರ್ಪಡಿಸು ಸಲಹೆ ತೀರ್ಮಾನಿಸು ಆರಂಭ ಜಂಬ ಸೂಚನೆ
ಪಾರಂಭ ಮರಳು ಅರಿವು ವಿಶೇಷತೆ ಆನಂದ
ಆ. ಪದಗಳ ಅರ್ಥ :
ಗೆಳೆಯ — ಸ್ನೇಹಿತ
ಜಂಬ — ಗರ್ವ
ತೀರ್ಮಾನ - ತೀರ್ಪು
ಸರ್ಧೆ — ಪೈಪೋಟಿ
ಒಪ್ಪಂದ ಎ ಸಮ್ಮತಿ, ಒಮ್ಮತ
ಅರಿವು - ತಿಳಿವಳಿಕೆ
ಆಲೋಚನೆ - ಯೋಚಿಸುವುದು


ಅಭ್ಯಾಸ


ಅ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆ :
೧. ಯಾರು ಯಾರು ಒಳ್ಳೆಯ ಗೆಳೆಯರಾಗಿದ್ದರು?


ಆ) ಈ ಮಾತನ್ನು ಯಾರು ಯಾರಿಗೆ ಹೇಳಿದರು :
೧. “ನಾವಿಬ್ಬರೂ ಸಮಾನರು ಅಲ್ಲವೇ?”
ಎಂಟ ಟಂ ರ ಪ ಲಲ ಲಫಭಘಭಘ್ಮ ಮೂ ೂ
ತರ ಹೇಳಿದಿರಿ ಓಷೋ ಸಾಚಾ ಜಾಮಾ ತಾರಾಪ


೨. “ಆನೆಯಣ್ಣ ಅಲ್ಲಿದ್ದಾನೆ. ಅವನನ್ನೇ ಕೇಳೋಣ ಬಾ”
ಯಾರು ಹೇಳಿದರು? ccc
ಮರಿಗೆ ಹಪ ವ clei ee


೩. “ಪ್ರತಿಯೊಬ್ಬರಲ್ಲಿಯೂ ಅವರದೇ ಆದ ವಿಶೇಷತೆ ಇರುತ್ತದೆ.”
ಯಾರು ಹಳದ sp NE csi
BOUTS ESS on SE


ಅ) ಪಾಠದಲ್ಲಿ ಒತ್ತಕ್ಷರವಿರುವ ಪದಗಳನ್ನು ಗುರುತಿಸಿ,ಖಾಲಿ- ಜಾಗಗಳಲ್ಲಿ ಬರೆಯಿರಿ:


ಈ) ಕೊಟ್ಟಿರುವ ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಚರಿಸಿ :
ಈ ಐ. ಔಓ. ಖು ಶಶ, ಹ. ಸ್ಟ್‌
ಷ್ಠ ಣಿ, ರು. ಆ, ಥ, ಢ, ಫ


ಉ) ಕೊಟ್ಟಿರುವ ಅಕ್ಷ ರಗಳನ್ನು ಸರಿಯಾಗಿ ಜೋಡಿಸಿ ಬರೆಯಿರಿ :
Ck ಫ್‌ ess


RS


ಚಟುವಟಿಕೆ :


ಅ) ಈ ಕೆಳಗಿನ ಗಾದೆ ಮಾತುಗಳನ್ನು ಪೂರ್ಣಗೊಳಿಸಿ :
೧. ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿ೦ತ ---ಎಎಎಎಎಡಡದಡ
೨. ಮೂರ್ತಿ ಚಿಕ್ಕದಾದರೂ, ಕೀರ್ತಿ --ಇಎಎಎಡಎದದದದ


ಆ) ಕೆಳಗಿನ ವೃತ್ತದಲ್ಲಿರುವ ಅಕ್ಷರಗಳ ಸಹಾಯದಿಂದ ಖಾಲಿ ಜಾಗದಲ್ಲಿ ಪದಗಳನ್ನು ರಚಿಸಿ:


ಇ) ಮರದಲ್ಲಿರುವ ಪದಗಳನ್ನು ಕೆಳಗಿನ ಖಾಲಿ ಜಾಗದಲ್ಲಿ ಹೇಳುತ್ತಾ ಬರೆಯಿರಿ:


ಸಾಮರ್ಥ್ಯ : ಈ ಗದ್ಯವನ್ನು ಕಲಿತ ಆನಂತರ ವಿರಳವಾಗಿ ಉಪಯೋಗಿಸುವ ಅಕ್ಷರ
ಮತ್ತು ಸಂಯುಕ್ತಾಕ್ಷರಗಳನ್ನು ಗುರುತಿಸಿ ಓದುವಿರಿ.


ಪಾಠ -೪
ಸೂಜಿಯ ಕಥೆ (ಗದ್ಯ)


ಅ೦ದು ಭಾನುವಾರ. ಸುರೇಖ ಮತ್ತು ಸತೀಶರು ತಂದೆಯೊಡನೆ ಬಟ್ಟೆ ಹೊಲಿಸಲು ಅಂಗಡಿಗೆ
ಹೋದರು. ಅಂಗಡಿಯಲ್ಲಿದ್ದ ದರ್ಜಿ ಪೀಟರ್‌ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡನು.
ಅಂಗಡಿಯ ಒಳಗೆ ಹೊಲಿಗೆ ಯಂತ್ರಗಳಿದ್ದವು. ಹೊಲಿದಿದ್ದ ಬಟ್ಟೆಗಳನ್ನು ಒಂದು ಕಡೆ
ಜೋಡಿಸಿದ್ದರು. ತಂದೆಯು ಬಟ್ಟೆಯನ್ನು ಪೀಟರ್‌ನಿಗೆ ನೀಡಿದನು. ಮಕ್ಕಳಿಗೆ ಅಂಗಿ ಮತ್ತು
ಲಂಗಗಳನ್ನು ಹೊಲಿಯಲು ತಿಳಿಸಿದನು.


ಪೀಟರ್‌ ಮಕ್ಕಳ ಅಳತೆ ತೆಗೆದುಕೊಂಡನು. ಅಗಲವಾದ ಈ ಬಟ್ಟೆ ಹೇಗೆ ಅಂಗಿ ಮತ್ತು
ಲಂಗಗಳಾಗುತ್ತವೆ ಎ೦ಬ ಪ್ರಶ್ನೆ ಮಕ್ಕಳನ್ನು ಕಾಡಿತು. ಅಲ್ಲಿದ್ದ ಹೊಲಿಗೆ ಯಂತ್ರವನ್ನು ಮಕ್ಕಳು
ನೋಡಿದರು. ಇದನ್ನು ಗಮನಿಸಿದ ಪೀಟರ್‌ ಅವರನ್ನು ಹತ್ತಿರ ಕರೆದು “ನೋಡಿ ನಾನು ಆಗಲೇ
ನಿಮ್ಮ ಅಳತೆ ತೆಗೆದುಕೊಂಡೆನಲ್ಲವೇ, ಆ ಅಳತೆಗೆ ತಕ್ಕಂತೆ ಬಟ್ಟೆಯನ್ನು ಬೇಕಾದ ಆಕಾರಕ್ಕೆ
ಮೊದಲು ಕತ್ತರಿಸಿಕೊಳ್ಳುತ್ತೇವೆ. ಹಾಗೆ ಕತ್ತರಿಸಿದ ಬಟ್ಟೆಯನ್ನು ಈ ಯಂತ್ರದ ಸಹಾಯದಿಂದ
ನಾವು ಹೊಲಿಯುತ್ತೇವೆ. ಇಲ್ಲಿರುವ ಸೂಜಿಯ ದಾರವು ಹೊಲಿಗೆ ಹಾಕುತ್ತಾ ಸರಿಯುತ್ತದೆ.
ಅದರಿಂದ ಉಡುಪುಗಳು ಸಿದ್ಧವಾಗುತ್ತವೆ” ಎಂದನು.


ಸುರೇಖ : ಪೀಟರ್‌ ಅಣ್ಣಾ, ಈ ಹೊಲಿಗೆ ಯಂತ್ರವನ್ನು ನೀನೇ ತಯಾರಿಸಿದೆಯಾ?


ಪೀಟರ್‌ : ನಾನು ತಯಾರಿಸಿಲ್ಲ ಯಂತ್ರವನ್ನು ಕಾರ್ಯಾನೆಯಲ್ಲಿ ತಯಾರಿಸುತ್ತಾರೆ.
ನಾನು ಕೊಂಡು ತಂದಿದ್ದೇನೆ.


ತಂದೆ : ಸುರೇಖ, ಹೊಲಿಗೆ ಯಂತ್ರದ ಬಗ್ಗೆ ಒಳ್ಳೆ ಪ್ರಶ್ನೆ ಕೇಳಿದೆ. ಈ ಹೊಲಿಯುವ
ಯಂತ್ರಕ್ಕೆ ಮುಖ್ಯವಾದ ಸಾಧನವಿದೆ. ಅದೇ ಸೂಜಿ. ಈ ಸೂಜಿಗೊಂದು
ಕಥೆಯೇ ಇದೆ.

ಸತೀಶ : ಹೌದಾ ಅಪ್ಪ? ಹಾಗಾದರೆ ಸೂಜಿಯ ಕಥೆ ಹೇಳು.

ತಂದೆ : ಈಗ ಮನೆಗೆ ಹೋಗೋಣ. ಮನೆಯಲ್ಲಿ ಕಥೆ ಹೇಳುತ್ತೇನೆ.


ಮೂವರು ಪೀಟರ್‌ನಿಗೆ ವಂದಿಸಿ ಮನೆಗೆ ಹೊರಟರು. ಮನೆ ತಲುಪಿದ ಆನಂತರ ತಂದೆ
ಮಕ್ಕಳಿಗೆ ಕಥೆ ಹೇಳಲು ಆರಂಭಿಸಿದರು.


“ಬಹಳ ವರ್ಷಗಳ ಹಿಂದೆ ಎಲಿಸ್‌ಹೋವ್‌ ಎ೦ಬ ವ್ಯಕ್ತಿ ಇದ್ದನು. ಆತ ಬಟ್ಟೆ ಹೊಲಿಯುವ
ಯಂತ್ರವನ್ನು ಕಂಡುಹಿಡಿದನು. ಗಿಡದ ಮುಳ್ಳುಗಳನ್ನು ಆಧಾರವಾಗಿಟ್ಟುಕೊಂಡು ಸೂಜಿಯನ್ನು
ಮಾಡಿದನು. ಆದರೆ ಆ ಸೂಜಿಯ ತುದಿಗೆ ದಾರ ಸೇರಿಸುವುದು ಹೇಗೆ ಎ೦ಬುದು ತಿಳಿಯಲಿಲ್ಲ.
ಹಗಲು ರಾತ್ರಿ ಅವನಿಗೆ ಅದೇ ಚಿಂತೆಯಾಯಿತು. ಮಲಗುವಾಗಲೂ ಆ ಯೋಚನೆಯಲ್ಲೇ
ಮಲಗುತ್ತಿದ್ದನು.


ಒಂದು ರಾತ್ರಿ ಅವನು ಕನಸೊಂದನ್ನು ಕಂಡನು. ಅಡವಿಯ ಜನರು ತಮ್ಮ
ಭರ್ಜಿಯನ್ನು ಬೀಸುತ್ತಿದ್ದರು. ಆ ಭರ್ಜಿಯ ಹಿಂದಿನ ತುದಿಯಲ್ಲಿ ಒಂದು ರಂಧ್ರವಿತ್ತು
ಆ ರಂಧ್ರಕ್ಕೆ ತೊಗಟೆಯ ದಾರವನ್ನು ಪೋಣಿಸಲಾಗಿತ್ತು ಆ ರಂಧ್ರದಲ್ಲಿ ಪೋಣಿಸಿದ್ದ
ದಾರವನ್ನು ಕಂಡನು. ಕೂಡಲೇ ಅವನಿಗೆ ಎಚ್ಚರವಾಯಿತು. ನೇರವಾಗಿ ತನ್ನ
ಪ್ರಯೋಗಶಾಲೆಗೆ ಹೋದನು. ತಾನು ಕನಸಿನಲ್ಲಿ ಕಂಡಂತೆ ಸೂಜಿಯ ಚೂಪಾದ ತುದಿಗೆ ಒಂದು
ತೂತು ಹಾಕಿದನು. ಅದಕ್ಕೆ ದಾರ ಪೋಣಿಸಿ ಹೊಲಿಯಲು ತೊಡಗಿದನು. ಆ ಪ್ರಯತ್ನದ


ಫಲವಾಗಿ ಬಟ್ಟೆಯ ಮೇಲೆ ಹೊಲಿಗೆ ಬೀಳಲಾರಂಭಿಸಿತು.


ಎಲಿಸ್‌ಹೋವ್‌ನ ಶ್ರಮ ಮತ್ತು ಬುದ್ಧಿಯ ಫಲವೇ ಯಂತ್ರದ ಸೂಜಿ. ಅದಕ್ಕಾಗಿ ನಾವು
ಆತನ ಉಪಕಾರ ನೆನೆಯಬೇಕು. ಎಲಿಸ್‌ನ, ಹೆಸರು' ಇಂದು ಕೇಳಿಬರುತ್ತಿಲ್ಲ. ಆದರೂ ಆತ
ಕಂಡುಹಿಡಿದ ಸೂಜಿಯು ನಮ್ಮೆಲ್ಲರ ಸೇವೆ ಮಾಡುತ್ತಿದೆ. ನೋಡಿ ಮಕ್ಕಳೇ, "ನಾವು ಇಲ್ಲದೇ
ಹೋದರೂ ನಾವು ಮಾಡಿದ ಒಳ್ಳೆಯ ಕಾರ್ಯ ಉಪಯೋಗಕ್ಕೆ ಬರುವುದು" ಎಂದರು. ಅಷ್ಟರಲ್ಲಿ
ಅಮ್ಮ ಎಲ್ಲರನ್ನು ಊಟಕ್ಕೆ ಕರೆದಳು. ಮಕ್ಕಳು ಎಲಿಸ್‌ ಹೋವ್‌ನನ್ನು ನೆನೆಯುತ್ತಾ ಖುಷಿಯಿಂದ
ಊಟಕ್ಕೆ ಕುಳಿತರು.


ಒಳ್ಳೆಯ ಕೆಲಸ ಸದಾ ಜನೋಪಯೋಗಿ


ಅ. ಓದಿದ ಪದಗಳು : ಇವುಗಳನ್ನು ಸ್ಪಷ್ಟವಾಗಿ ಓದಿ.
ದರ್ಜಿ ಕುತೂಹಲ ಆಕಾರ ತುಂಡು... ಯಂತ್ರ ಯೋಚನೆ
ಅಳತೆ ತುದಿ ಕಾರ್ಪಾನೆ ಅಡವಿ ಭರ್ಜಿ ಪ್ರಯೋಗಶಾಲೆ
ರಂಧ ಫಲ ಪೋಣಿಸು ತೊಗಟೆ ಶ್ರಮ ಬುದ್ಧಿ


ಉಪಕಾರ ಕಾರ್ಯ ಪ್ರಯತ್ನ ಕತ್ತರಿಸು ಕನಸು ಖುಷಿ


ಆ. ಪದಗಳ ಅರ್ಥ :


ಅಳತೆ - ಪ್ರಮಾಣ, ಪರಿಮಿತಿ
ಶಮ - ದಣಿವು
ಅಡವಿ - ಕಾಡು


ಇ. ಗಮನಿಸಿ - ತಿಳಿಯಿರಿ :
ಯಂತ್ರ: ಗಾಲಿ, ಕೀಲುಗಳ ಜೋಡಣೆಯಿಂದ ಕೆಲಸ ಮಾಡುವ ಸಾಧನ.


ಪ್ರಯೋಗಶಾಲೆ : ತತ್ತ್ವಗಳ ನಿಜಾಂಶವನ್ನು ಪ್ರಯೋಗ ಮಾಡಿ ತಿಳಿಯುವ ಸಲಕರಣೆಗಳಿರುವ
ಕೊಠಡಿ.


ಅಭ್ಯಾಸ
ಅ) ಈ ಪ್ರಶ್ನೆಗಳಿಗೆ ಉತ್ತರ ಹೇಳಿ :
೧. ಮಕ್ಕಳನ್ನು ಯಾವ ಪ್ರಶ್ನೆ ಕಾಡಿತು?
೨. ಹೊಲಿಯುವ ಯಂತ್ರಕ್ಕೆ ಮುಖ್ಯವಾದ ಸಾಧನ ಯಾವುದು?
೩. ಅಡವಿಯ ಜನರು ಏನನ್ನು ಬೀಸುತ್ತಿದ್ದರು?


ಆ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :
೧. ತಂದೆಯೊಡನೆ ಮಕ್ಕಳು ಎಲ್ಲಿಗೆ ಹೋದರು?


ಅ) ಖಾಲಿ ಬಿಟ್ಟಿರುವ ಜಾಗಗಳಲ್ಲಿ ಸರಿಯಾದ ಪದ ತುಂಬಿ :


೧. ಸೂಜಿಯ ತುದಿಗೆ ಎಎಎಎಷಸ ಸ ಿ ಸೇರಿಸುವುದು ಹೇಗೆ ಎಂಬುದು ತಿಳಿಯಲಿಲ್ಲ.
ವಿ ಈ: ರಂಧ್ರಕ ನನ್‌ ದಾರವನ್ನು ಪೋಣಿಸಲಾಗಿತ್ತು.
೩. ಎಲಿಸ್‌ ಹೋವ್‌ನ ಶ್ರಮ ಮತ್ತು ಬುದ್ಧಿಯ ಫಲವೇ ----ಇಎದದದ


ಈ) ಕೆಳಗೆ ಕೊಟ್ಟಿರುವ ಒತ್ತಕ್ಷರ ಪದಗಳನ್ನು ಓದಿ ನಕಲು ಮಾಡಿ :


ಎಚರ ಪಶೆ ಯಂತ ವಿ ಬಟೆ
ಚ ದು w


ಉ) ಮಾದರಿಯಂತೆ ಕೆಳಗಿನ ಪದಗಳನ್ನು])ಬರೆಯಿರಿ:


ಮಾದರಿ : ಯಂತ್ರ ಯಂತ್ರಗಳು
೧. ಬಟಿ —-————————
ಬು ಸೂಜಿ ಜಿಮಿ
೩ಿೀ ಕಾರ್ಯಾನೆ - ಧಧುರರಸೂಪಪೂಡ
೪, ಮುಳ್ಳು —-————————
೫. ಭರ್ಜಿ ವಾಸ ————————


ಊ) ಚೌಕಗಳಲ್ಲಿ ಕೊಟ್ಟಿರುವ ಅಕ್ಷರಗಳನ್ನು ಬಳಸಿ ಅರ್ಥಬರುವ ಒತ್ತಕ್ಷರ ಪದಗಳನ್ನು
ರಚಿಸಿ:


(ಮಾದರಿ : ಮಕ್ಕಳು)


ಎ) ಕೊಟ್ಟರುವ ವಾಕ್ಯಗಳನ್ನು ದುಂಡಾಗಿ ನಕಲು ಮಾಡಿ:
೧. ಪೀಟರ್‌ ಮಕ್ಕಳಿಗೆ ಅಲ್ಲಿದ್ದ ಹೊಲಿಗೆ ಯಂತ್ರವನ್ನು ತೋರಿಸಿದನು.


೨. ಯಂತ್ರವನ್ನು ಕಾರ್ಪಾನೆಯಲ್ಲಿ ತಯಾರಿಸುತ್ತಾರೆ.


೩. ಭರ್ಜಿಯ ಹಿಂದಿನ ತುದಿಯಲ್ಲಿ ಒಂದು ರಂಧ್ರವಿತ್ತು.


೪. ಹೊಲಿಯುವ ಯಂತ್ರಕ್ಕೆ ಮುಖ್ಯವಾದ ಸಾಧನವೇ. ಸೂಜಿ.


೫. ಎಲಿಸ್‌ಹೋವ್‌ನ ಶ್ರಮ ಮತ್ತು ಬುದ್ಧಿಯ ಫಲವೇ ಯಂತ್ರದ ಸೂಜಿ.


ಸಾಮರ್ಥ್ಯ: ಈ ಗದ್ಯದ ಕಲಿಕೆಯೊಂದಿಗೆ ಸಂಯುಕ್ತಾಕ್ಷರ ಪದ ಮತ್ತು ವಾಕ್ಯಗಳನ್ನು
ನಕಲು ಮಾಡುವುದನ್ನು ಕಲಿಯುವೆ.


ಪಾಠ - ೫
ಹಳ್ಳಿಯ ದಾರಿಯ ಬದಿಯಲಿ (ಪದ್ಯ)


ಈ ಚಿತ್ರದಲ್ಲಿರುವ ವಸ್ತುಗಳನ್ನು ಗುರುತಿಸಿ, ಅವುಗಳ ಹೆಸರನ್ನು ಕೆಳಗೆ ನೀಡಿರುವ ಖಾಲಿ
ಸ್ಥಳಗಳಲ್ಲಿ ಬರೆಯಿರಿ. ಇವುಗಳ ಉಪಯೋಗವನ್ನು ಸ್ನೇಹಿತರೊಡನೆ ಚರ್ಚಿಸಿ.


Art
32030೧9


ಹಳ್ಳಿಯ ದಾರಿಯ ಬದಿಯಲಿ ಒಂದು
ಮಾವಿನ ಮರವಿತ್ತು

ಹಲವು ಕೊಂಬೆಗಳನು ಚಾಚಿ
ತಣ್ಣೆಳಲನು ಹರಡಿತ್ತು


ಹಕ್ಕಿ ಪಕ್ಷಿಗಳು ಗೂಡನು. ಕಟ್ಟಿದೆ
ಮರಿಗಳ ಚಿಲಿಪಿಲಿ ಹಾಡಿತ್ತು
ಎಲೆಗಳ ಜೊತೆಗೆ ಕಾಯ ತೂಗಿ
ಬಾಯಲಿ ನೀರನು ತಂದಿತ್ತು


ಮಾವಿನ ಮರದಡಿ ಕಮ್ಮಿನ ಪರಿಮಳ
ಜನರ ಮನವನು ಸೆಳೆದಿತ್ತು
ಮರವೊಂದಾದರು ಉಪಕಾರವು ನೂರು
ಹಿರಿಮೆಯ ತೋರಿತ್ತು


ಶುದ್ಧ ಗಾಳಿ ಮಳೆ ನಂದನವೇ ಇಳೆ
ಹೂ ಹಸಿರಿನ ತಾಕತ್ತು
ಹಸಿರಿದ್ದರೆ ಉಸಿರು ನಿಲ್ಲುವುದು
ತಿಳಿದುಕೋ ಈ ಹೊತ್ತು
- ಬಾಗೂರು ಮಾರ್ಕಾಂಡೇಯ


ಅ) ಕೇಳಿದ ಪದಗಳು: ಇವುಗಳನ್ನು ಗಟ್ಟಿಯಾಗಿ ಓದಿ.


ಹಳ್ಳಿ ದಾರಿ ಮಾವಿನ ಮರ ಕೊಂಬೆ ತಣ್ಣೆಳಲು

ಪಕ್ಷಿಗಳು ಚಿಲಿಪಿಲಿ ಮರಿಗಳು ಎಲೆಗಳು ನೀರು

ಪರಿಮಳ ಜನ ಉಪಕಾರ ನೂರು ಹರಿಮೆ

ಶುದ್ಧ ಗಾಳಿ ಹಸಿರು ಉಸಿರು ಹೊತು
ಆ) ಓದಿ - ತಿಳಿಯಿರಿ:

ಬದಿ — ಪಕ್ಕ

ತಣ್ಣೆಳಲು - ತಂಪಾದ ನೆರಳು

ಕಮ್ಮಿನ - ಸುಗಂಧ

ಪರಿಮಳ - ಸುವಾಸನೆ

ಉಸಿರು - ಪ್ರಾಣ (ದೇಹದ ಒಳಕ್ಕೆ ತೆಗೆದುಕೊಳ್ಳುವ ಹಾಗೂ ಹೊರಗೆ ಬಿಡುವ ಗಾಳಿ)

ಇಳೆ — ಭೂಮಿ


ಅಭ್ಯಾಸ


ಅ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ-ಉತ್ತರ ಹೇಳಿ:
ಹಳ್ಳಿಯ ದಾರಿಯ ಬದಿಯಲಿ ಏನಿತ್ತು?
೨. ಹಕ್ಕಿಗಳು ಗೂಡನ್ನು ಎಲ್ಲಿ ಕಟ್ಟಿದ್ದವು?

೩. ಹಕ್ಕಿಯ ಮರಿಗಳು ಏನೆಂದು ಹಾಡಿದವು?
೪. ಯಾವುದು ಜನರ ಮನವನ್ನು ಸೆಳೆದಿತ್ತು?


ದು


ಆ) ಖಾಲಿ ಬಿಟ್ಟಿರುವ ಜಾಗಗಳಲ್ಲಿ ಸರಿಯಾದ ಪದ ಬರೆಯಿರಿ:
೧. ಹಲವು ಕೊಂಬೆಗಳನು ಎಎ ತಣ್ಣೆಳಲನು ಹರಡಿತ್ತು .
೨. ಬಾಯಲಿ —————— ತಂದಿತ್ತು.
೩. ಮರವೊಂದಾದರು ಎಎ ನೂರು
೪, ಶುದ್ಧ ಎಡಪಷಷಸಸಸಸಸೂಡ ನಂದನವೇ ಇಳೆ


ಇ) ಕೊಟ್ಟಿರುವ ಪದಗಳಿಗೆ ಪ್ರಾಸ ಪದ ಹೇಳಿ ಬರೆಯಿರಿ :
೧. ಮರವಿತ್ತು
೨. ಹಾಡಿತ್ತು
೩. ಸೆಳೆದಿತ್ತು
೪. ತಾಕತ್ತು


ಚಟುವಟಿಕೆ :
ಅ) ಈ ಪದ್ಯವನ್ನು ಗುಂಪಿನಲ್ಲಿ ಹಾಡಿ


ಆ) ನಿನಗೆ ಇಷ್ಟವಾದ ನಾಲ್ಕು ಮರಗಳ ಚಿತ್ರಗಳನ್ನು ಇಲ್ಲಿ ಅಂಟಿಸು.


ಸಾಮರ್ಥ್ಯ: ಈ ಪದ್ಯದ ಕಲಿಕೆಯೊಂದಿಗೆ ಹಾಡು ಮತ್ತು ಪದ್ಯಗಳನ್ನು ಗುಂಪಿನಲ್ಲಿ
ಹಾಗೂ ಒಂಟಿಯಾಗಿ ಹಾಡುವೆ.


ಹಿಕಾ


ಪಾಠ - ೬


ಸಂತೆ (ಗದ್ಯ)
ಡ್‌ ಹಾಠಪೂರ್ವ ಚಟುವಟಿಕೆ :


ನಿಮ್ಮ ಮನೆಯಲ್ಲಿ ಬಳಸುವ ವಸ್ತುಗಳ ಹೆಸರುಗಳನ್ನು ಬರೆಯಿರಿ:


ನಿಮಗೆ ತಿಳಿದಿರುವ ಹೂವುಗಳ ಹೆಸರುಗಳನ್ನು ಪಟ್ಟಿ ಮಾಡಿ:


ಅಂದು ಶನಿವಾರ ಶಾಲೆಗೆ ಮಧ್ಯಾಹ್ನ ರಜೆ. ಅನಿತಾ, ಜಾನ್‌, ರಶೀದ್‌ ಮತ್ತು ಕುಮಾರ
ನಾಲ್ವರೂ ತಮ್ಮೂರಿನ ಸಂತೆ ನೋಡಲು ಹೊರಟರು. ಅನಿತಾಳ ಚಿಕ್ಕಪ್ಪ ಜೊತೆಯಲ್ಲಿರುವುದು
ಅವರಿಗೆ ತುಂಬಾ ಸಂತೋಷವೆನಿಸಿತು:


ಊರಂಚಿನ ಮೈದಾನದಲ್ಲಿ ಸಂತೆ ನೆರೆದಿತ್ತು. ಅಲ್ಲಿ ಸದ್ದು-ಗದ್ದಲ ತುಂಬಿತ್ತು. ಮಕ್ಕಳಿಗೆ
ಸಂತೆಯೊಳಗೆ ನುಗ್ಗುವ ಆತುರ. ಆದರೆ ಅನಿತಾಳ ಚಿಕ್ಕಪ್ಪ ಅವರನ್ನು ಸಂತೆಯ ಮುಂಭಾಗದಲ್ಲಿ
ನಿಲ್ಲಿಸಿಕೊಂಡು “ಮಕ್ಕಳೇ, ಅವಸರದಿಂದ ಚದುರಿ ಹೋಗಬೇಡಿ. ನನ್ನ ಜೊತೆಯಲ್ಲೇ ಬನ್ನಿ
ಸಂತೆಯಲ್ಲಿ ಸುತ್ತಿಸುವೆ” ಎಂದರು. ಎಲ್ಲರೂ ಖುಷಿಯಿಂದ ಒಪ್ಪಿದರು. ಸಂತೆಯ ಒಳಗೆ ಬಂದರು.


ಅಲ್ಲಿ ದಿನಸಿ ಅಂಗಡಿಗಳು ಸಾಲು ಸಾಲಾಗಿದ್ದವು. ಅಕ್ಕಿ, ಜೋಳ, ರಾಗಿ, ತೊಗರಿ, ಕಡಲೆ
ಮುಂತಾದ ಧಾನ್ಯಗಳ ರಾಶಿ ಒಂದು ಕಡೆ ಇದೆ. ಇನ್ನೊಂದು ಬದಿಯಲ್ಲಿ ತೆಂಗಿನಕಾಯಿ, ಎಳನೀರು,
ಕೊಬ್ಬರಿ ಇಟ್ಟಿದ್ದಾರೆ. ಮುಂದಿನ ಸಾಲಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಗುಡ್ಡೆಗಳಿವೆ.


ಅದರ ಪಕ್ಕದಲ್ಲಿ ಮೆಣಸಿನ ಕಾಯಿ, ಮರದ ಬುಡದಲ್ಲಿ ವೀಳ್ಯದೆಲೆ, ಬಾಳೆಎಲೆ, ಅಡಿಕೆ ಇವೆ.
ಮುಂದೆ ಹೋದರೆ ಬದನೆ, ಸೌತೆ, ಬೆಂಡೆಕಾಯಿ, ತೊಂಡೆಕಾಯಿ, ಟೊಮೆಟೋ ಮುಂತಾದ
ತರಕಾರಿಗಳನ್ನು ಇಟ್ಟಿದ್ದಾರೆ. ಪಕ್ಕದಲ್ಲಿ ವಿವಿಧ ಸೊಪ್ಪನ್ನು ಮಾರುತ್ತಿದ್ದಾರೆ.


ಅನಿತಾ: ಓಹೋ | ಅಲ್ಲಿ ನೋಡಿ, ಘಮಘಮಿಸುವ ಹೂಗಳು.


ಚಿಕ್ಕಪ: ಬಿಸಿಲಿಗೆ ಬಾಡದಿರಲಿ ಎಂದು ನೆರಳಿನಲ್ಲಿ ಇಟ್ಟಿದ್ದಾರೆ. ಅಲ್ಲಿ ಸೇವಂತಿಗೆ,
ಮಲ್ಲಿಗೆ, ಕನಕಾಂಬರ, ಗುಲಾಬಿ, ಚೆಂಡು ಹೂಗಳಿವೆ.


ಜಾನ್‌: ಇಲ್ಲಿಗೆ ಇವೆಲ್ಲವನ್ನೂ ಎಲ್ಲಿಂದ ತರುತ್ತಾರೆ?


ಚಿಕ್ತಪ: ಇವೆಲ್ಲವನ್ನು ರೈತರು ತಮ್ಮ ಹೊಲ, ಗದ್ದೆ. ತೋಟಗಳಲ್ಲಿ ಬೆಳೆಯುತ್ತಾರೆ.
ಅಲ್ಲಿಂದ ತಂದು ಇಲ್ಲಿ ಮಾರುತ್ತಾರೆ.


ರಶೀದ್‌: ಚಿಕ್ಕಪ್ಪ ಅಲ್ಲಿ ಕೈಚೀಲ, ಚೀಲ, ಬುಟ್ಟಿ ಹಿಡಿದು: ಜನರು ಓಡಾಡುತ್ತಿದ್ದಾರಲ್ಲ
ಏಕೆ?


ಚಿಕ್ಕಪ್ಪ ಅವರೆಲ್ಲ ತಮಗೆ ಬೇಕಾದ ಪದಾರ್ಥಗಳನ್ನು ಕೊಳ್ಳಲು ಬಂದಿದ್ದಾರೆ.
ಕುಮಾರ: ಇಲ್ಲಿ ಎಲ್ಲಾ ಪದಾರ್ಥಗಳು ಸಿಗುತ್ತವೆಯೇ?


ಜಿಕಪ: ಹೌದು, ಬನ್ನಿ ಈ ಅಂಗಡಿಯಲ್ಲಿ ರವೆ, ಗೋಧಿ, ಬೇಳೆ, ಸಾಂಬಾರ
ಪದಾರ್ಥಗಳು, ಅರಿಶಿನ, ಕುಂಕುಮ, ಕಾಫಿಪುಡಿ, ಟೀಪುಡಿ, ಚಾಕ್‌ಲೇಟ್‌,
ಬಿಸ್ಕತ್‌ ಇನ್ನು. ಮುಂತಾದ ಪದಾರ್ಥಗಳೂ ಇವೆ.


ಕುಮಾರ: ನೋಡಿ, ನನ್ನ ಅಕ್ಕ ಬಳಸುವ ರಿಬ್ಬನ್‌, ಬಳೆ, ಸರ, ಪೌಡರ್‌ಗಳೂ ಇಲ್ಲಿವೆ.


ಚಿಕಪ: ಹೌದು, ಅದರ ಪಕ್ಕದ ಅಂಗಡಿ ನೋಡಿ. ಅಲ್ಲಿ ಎಲ್ಲಾ ಬಗೆಯ ಸಿದ್ಧವಾದ
ಉಡುಪುಗಳು, ಹೊದಿಕೆಗಳು ಸಿಗುತ್ತವೆ.


ಅನಿತಾ: ಅಬ್ಬಾ | ಸಂತೆಯಲ್ಲಿ ಎಷ್ಟೆಲ್ಲಾ ಅಂಗಡಿಗಳು.


ಚಿಕ್ಕಪ್ಪ; ಅಲ್ಲಿ ನೋಡಿ. ಗುದ್ದಲಿ, ಹಾರೆ, ಪಿಕಾಸಿ, ಕುಳ, ಕುಡುಗೋಲು, ವಿವಿಧ
ಬಗೆಯ ಹಗ್ಗಗಳಿವೆ. ಇವೆಲ್ಲವೂ ರೈತರಿಗೆ ಬೇಕಾದ ಸಲಕರಣೆಗಳು.
ಸುತ್ತಮುತ್ತಲಿನ ಹಳ್ಳಿಯ ಜನರು ಬಂದು ತಮಗೆ ಬೇಕಾದ ವಸ್ತುಗಳನ್ನು
ಇಲ್ಲಿ ಖರೀದಿಸುತ್ತಾರೆ.


ಕುಮಾರ:


ರಶೀದ್‌:


ಅಲ್ಲಿ ಏನೋ ರಿಪೇರಿ ಮಾಡುತ್ತಿದ್ದಾರೆ, ಏನದು?
ಅಲ್ಲಿ ಹಾಳಾಗಿರುವ ಬೀಗ ಹಾಗೂ ಕೊಡೆ ರಿಪೇರಿ ಮಾಡುತ್ತಿದ್ದಾರೆ.
ಚಿಕ್ಕಪ್ಪಾ, ಆ ಮೂಲೆಯಲ್ಲಿ ಏನೋ ನಡೆಯುತ್ತಿರುವಂತಿದೆ?


ಅಲ್ಲಿ “ಹಗಲುವೇಷ? ಆಟ ನಡೆಯುತ್ತಿದೆ. ಸಂತೆ ಎಂದರೆ ಕೇವಲ
ವ್ಯಾಪಾರ ಮಾಡುವ ಸ್ಥಳ ಅಲ್ಲ. ಹಾಡು, ಆಟಗಳಂತಹ ಮನೋರಂಜನೆಗಳೂ
ಇಲ್ಲಿ ನಡೆಯುತ್ತವೆ.


ನಾವೂ ಆ ಆಟವನ್ನು ನೋಡೋಣವೇ? (ಎಲ್ಲರೂ ಹಗಲುವೇಷದ
ಆಟವನ್ನು ನೋಡುವರು)


ಬನ್ನಿ, ಇಲ್ಲಿ ಸೇಬು, ಕಿತ್ತಳೆ, ಮನಸಲಿ. ಪಪ್ಪಾಯಿ, ಬಾಳೆಹಣ್ಣುಗಳನ್ನು
ಇಟ್ಟಿದ್ದಾರೆ. ನಿಮಗೆಲ್ಲರಿಗೂ ಹಣ್ಣು ಕೊಡಿಸುವೆ. (ಎಲ್ಲರೂ ಬಾಳೆ ಹಣ್ಣು ತಿನ್ನುವರು.
ಕುಮಾರನು ಸಿಪ್ಪೆಯನ್ನು ದಾರಿಗೆ ಎಸೆಯುವನು)


ಕುಮಾರ, ಸಿಪ್ಪೆಯನ್ನು ದಾರಿಗೆ ಎಸೆಯಬಾರದು.


ಅನಿತಾ: ಶಾಲೆ ಹಾಗೂ ಮನೆಯಲ್ಲಿ ಬೇಡವಾದ ವಸ್ತುಗಳನ್ನು ಹಾಕಲು ಕಸದ


ಬುಟ್ಟಿಗಳಿವೆ. ಆದರೆ ಈ ಸಂತೆಯಲ್ಲಿ ಕಸವನ್ನು ಎಲ್ಲಿ ಹಾಕುವುದು ಚಿಕ್ಕಪ್ಪ?


ಚಿಕ್ಕಪ್ಪ: ಮಕ್ಕಳೇ ಇಲ್ಲೂ ಕಸದ ತೊಟ್ಟಿಗಳಿವೆ. ಅಲ್ಲಿ ನೋಡಿ, ಆ ತೊಟ್ಟಿಯಲ್ಲಿ


ಸಿಪೆ ಹಾಕಿರಿ.
Ww


ಬಾಳೆಹಣ್ಣಿನ ಸಿಪ್ಪೆಯನ್ನು ಕಸದ ತೊಟ್ಟಿಗೆ ಹಾಕಿದರು. ಸಂತೆ ನೋಡಿದ ಖುಷಿಯಲ್ಲಿ
ಎಲ್ಲರೂ ಮನೆಗೆ ಹೊರಟರು.


ಸಂತೆ ಗ್ರಾಮೀಣ ಜನರ ಸಹಕಾರ ಮತ್ತು ಸಾಂಸ್ಕೃತಿಕ ಕೇಂದ್ರ


ಅ) ಕೇಳಿದ ಪದಗಳು : ಇವುಗಳನ್ನು ಗಟ್ಟಿಯಾಗಿ ಓದಿ


ಸಂತೆ ಗದ್ದಲ ಅಂಗಡಿ ವ್ಯಾಪಾರ ತೊಗರಿ
ವೀಳ್ಯದೆಲೆ ರಾಶಿ ಕಡಲೆ ಧಾನ್ಯ ಗುದ್ದಲಿ
ಮೆಣಸಿನ ಕಾಯಿ ಈರುಳ್ಳಿ ಕಸದ ತೊಟ್ಟಿ ರೈತ ಬೆಳ್ಳುಳ್ಳಿ
ಅಕ್ಕಿ ಪದಾರ್ಥ ಜೋಳ ಮೈದಾನ ಹಾರೆ
ಸಲಕರಣೆ ಖುಷಿ
ಆ) ಓದಿ ತಿಳಿಯಿರಿ :
ಖುಷಿ ಹಿಗ್ಗು, ಹರ್ಷ
ಪದಾರ್ಥ — ವಸ್ತು
ರಾಶಿ — ಗುಂಪು, ಗುಪ್ಪೆ ಸಮೂಹ
ರಿಪೇರಿ KN ಸರಿಪಡಿಸುವಿಕೆ
ಸಲಕರಣೆ ಉಪಕರಣ
ದಿನಸಿ — ಧಾನ್ಯ, ದವಸ
ಬದಿ — ಪಕ್ಕ, ಮಗಲು
(\


ಇ. ಗಮನಿಸಿ ತಿಳಿ :


ಸಾಂಬಾರ - ಮಸಾಲೆಯ ಪದಾರ್ಥ


ವ್ಯಾಪಾರ


ಕೊಳ್ಳುವುದು, ಮಾರುವುದು


ಮನೋರಂಜನೆ - ಮನಸ್ಸನ್ನು ಸಂತೋಷಗೊಳಿಸುವುದು


ಗುದ್ದಲಿ - ನೆಲವನ್ನು ಅಗೆಯಲು ಉಪಯೋಗಿಸುವ ಮರದ ಹಿಡಿಯುಳ್ಳ


ಕಬ್ಬಿಣದ ಸಾಧನ


ಅಭ್ಯಾಸ


ಅ) ಈ ಪ್ರಶ್ನೆಗಳಿಗೆ ಉತ್ತರ ಹೇಳಿ :





6 ಖಿ ಊಟ


ಗೆಳೆಯರೆಲ್ಲ ಕೂಡಿ ಎಲ್ಲಿಗೆ ಹೋದರು?
ಸಂತೆಯಲ್ಲಿ ಏನನ್ನು ರಿಪೇರಿ ಮಾಡುತ್ತಿದ್ದರು?
ಸಂತೆಯಲ್ಲಿ ಯಾವ ಆಟ ಆಡುತ್ತಿದ್ದರು?

ಮಕ್ಕಳು ಬಾಳೆಹಣ್ಣಿನ ಸಿಪ್ಪೆಯನ್ನು ಎಲ್ಲಿ ಹಾಕಿದರು?


ಆ) ಈ ಮಾತನ್ನು ಯಾರು ಯಾರಿಗೆ ಹೇಳಿದರು?


೧.


“ಅವಸರದಿಂದ ಚದುರಿ ಹೋಗಬೇಡಿ”.
een oD ಟು ೂತಾಟಾಾತತ
ಯಾರಿಗೆ ಹೇಳಿದರು ಟಟ
“ಅಲ್ಲಿ ನೋಡಿ, ಘಮಘಮಿಸುವ ಹೂಗಳು”.
ರು ಹ ees
ಅಯಾರಿನ ಹೆದರ ಸ ಆಸಾ
“ಇಲ್ಲಿಗೆ ಇವೆಲ್ಲವನ್ನು ಎಲ್ಲಿಂದ ತರುತ್ತಾರೆ?”
ಯಾರು ಹಲವರು ಮಾ
ಯಾರಿ RRS seid


೪, “ಸಿಪ್ಪೆಯನ್ನು ದಾರಿಗೆ ಎಸೆಯಬಾರದು.?


8.1! 3*'ಹೀಳಿದರು) 1 ಎ.ಎ. ಟಾಟ
ಮಾರಿಗೆ ಹೇಳಿದರು ಮಟಟ


ಇ) ಮಾದರಿಯಂತೆ ಬರೆಯಿರಿ :


ಮಾದರಿ : ಚಿಕ್ಕಪ್ಪ ಆ ಚಿಕ್ಕಮ್ಮ
ಐ [3
ಅಪ್ಪ —
ದೊಡಪ ಎ
ಉ ೦೨
ಮಾವ —
ಈ) ಚಟುವಟಿಕೆ :


ನಿಮ್ಮ ಸಮೀಪದ ಸಂತೆಗೆ ಭೇಟಿ ನೀಡಿ. ಅಲ್ಲಿನ ಸನ್ನಿವೇಶಗಳನ್ನು ಗಮನಿಸಿ


ಸಾಮರ್ಥ್ಯ:
೨ 5೮; ಗದ್ಯವನ್ನು ಕಲಿತ ಆನಂತರ ಪರಿಚಿತ ಸನ್ನಿವೇಶಗಳಲ್ಲಿನ ಸಂಭಾಷಣೆ ಮತು


ಆಧಿ


ಸಂವಾದಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಗಳಿಸುವಿರಿ.


ಪರಿಚಿತ ಸನ್ನಿವೇಶಗಳಲ್ಲಿನ ಸೂಚನೆ, ಬೇಡಿಕೆ, ಆದೇಶ ಮತ್ತು ಪ್ರಶ್ನೆಗಳನ್ನು
ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಪಡೆಯುವಿರಿ.


ಹಿಹಿಕಾ


ಪಾಠ - ೭
ಅರಿವೇ ಗುರು (ಗದ್ಯ)


ಒಂದು ದಟ್ಟವಾದ ಕಾಡು. ಅಲ್ಲಿ ನರಿ: ಮತ್ತು ಅದರ ಮರಿ ಆಹಾರಕ್ಕಾಗಿ ಅಲೆದವು. ಆದರೆ
ಏನೂ ಸಿಗಲಿಲ್ಲ. ತಿರುಗುತ್ತಾ ತಿರುಗುತ್ತಾ ಕಾಡಿನಿಂದ ಹೊರಬಂದವು. ಅವುಗಳಿಗೆ ದೂರದಲ್ಲಿ
ತೋಟದ ಮನೆಯೊಂದು ಕಾಣಿಸಿತು. ಕ್ಕೊ, ಕ್ಕೊ ಕ್ಕೊ ಎಂಬ ಸದ್ದು ಸಹ ಕೇಳಿಸಿತು. ಅವು
ಧ್ವನಿಯನ್ನು ಅನುಸರಿಸಿಕೊಂಡು ಹೋದವು. ಕೋಳಿಗಳು ತೋಟದ ಬೇಲಿ ಸಾಲಿನಲ್ಲಿ ಮೇವು
ಆರಿಸುತ್ತಿದ್ದವು.


ಕೋಳಿಗಳನ್ನು ಕಂಡು ನರಿಯ ಮರಿ ಮನದಲ್ಲೇ ಹಿಗ್ಗಿತು. ಆ ಸಂತೋಷದಲ್ಲಿ "ಅಮ್ಮಾ.
ಎಷ್ಟೊಂದು ಕೋಳಿಗಳು! ಎನ್ನುತ್ತಾ ಆ ಕಡೆಗೆ ನುಗ್ಗಿತು. ಬೇಲಿ ಅಂಚಿನಲ್ಲಿದ್ದ ಬಲೆಯಲ್ಲಿ ನರಿಯ
ಮರಿ ಸಿಕ್ಕಿ ಹಾಕಿಕೊಂಡಿತು. ಗಾಬರಿಯಿಂದ ಅದು ಕಿರುಚಿಕೊಳ್ಳತೊಡಗಿತು. ನರಿ ತನ್ನ ಮರಿಯನ್ನು
ಬಿಡಿಸಿಕೊಳ್ಳಲು ಹತ್ತಿರ ಬಂದಿತು. ಅಷ್ಟರಲ್ಲಿ ತೋಟದ ಒಳಗಿನಿಂದ ರೈತನು ಬರುವುದು ಕಂಡಿತು.
ಭಯದಿಂದ ಹಿಂದೆ ಸರಿಯಿತು. ಮರಿಯನ್ನು ಉಳಿಸಲು ಸಮಯ ಸಾಧಿಸಿ ಸ್ವಲ್ಲ ದೂರದಲ್ಲಿ
ಕುಳಿತಿತು. ಆದರೆ ಜನರ ಓಡಾಟ ಹೆಚ್ಚಾದುದರಿಂದ ಅನಿವಾರ್ಯವಾಗಿ ಅಲ್ಲಿಂದ ಅದು ಜಾಗ
ಖಾಲಿ ಮಾಡಿತು.


ತಾಯಿ ನರಿಗೆ ತನ್ನ ಮರಿಯನ್ನು ಅಗಲಿ ಇರಲಾಗಲಿಲ್ಲ. ಮರುದಿನ ಹೇಗಾದರೂ ಮಾಡಿ
ಮರಿಯನ್ನು ಬಿಡಿಸಿಕೊಂಡು ಬರಬೇಕೆಂದು ತೋಟಕ್ಕೆ ಬಂದಿತು. ಸಂಜೆಯವರೆಗೆ ಕಾದು ಕುಳಿತಿತು.
ಆದರೆ ತನ್ನ ಮರಿಯ ಸುಳಿವೇ ಕಾಣಲಿಲ್ಲ. ದುಃಖದಿಂದ ತೋಟದ ಬೇಲಿ ಸುತ್ತ ತಿರುಗಿತು.
ಅಲ್ಲೊಂದು ಕಂಡಿ ಇತ್ತು ಅದರೊಳಗೆ ಉಪಾಯವಾಗಿ ನುಸುಳಿ ತೋಟದ ಒಳಗೆ ಬಂದು
ಹುಡುಕಿತು. ತನ್ನ ಮರಿಯ ಸುಳಿವು ಅಲ್ಲೂ ಸಿಗಲಿಲ್ಲ. ಆದರೆ ಮನೆಯ ಪಕ್ಕದಲ್ಲಿ ಕೋಳಿಗಳು
ಅಡಗಿ ಕುಳಿತಿದ್ದವು. ಹಸಿದಿದ್ದ ನರಿಗೆ ಕೋಳಿಗಳನ್ನು ಕ೦ಡು ಆಸೆ ಮೂಡಿತು. ಸುಲಭವಾಗಿ
ದೊರಕಿದ ಆಹಾರ ಬಿಡಲು ಅದಕ್ಕೆ ಮನಸ್ಸಾಗಲಿಲ್ಲ. ಮೆಲ್ಲನೆ ಕೋಳಿ ಹಿಡಿಯಲು ತೆವಳಿತು.
ಆದರೆ ಅಲ್ಲಿ ಒಡ್ಡಿದ್ದ ಬಲೆಗೆ ತಾನೂ ಸಿಕ್ಕಿಕೊಂಡಿತು.


ನರಿಗೆ ರೈತನ ಜಾಣತನ ಅರಿವಿಗೆ ಬಂದಿತು. ತನ್ನ ತಪ್ಪಿಗೆ ನರಿ ಸಂಕಟ
ಪಡತೊಡಗಿತು. ಅಷ್ಟರಲ್ಲಿ ಅಲ್ಲೇ ಜಿಗಿದಾಡುತ್ತಿದ್ದ ಇಲಿಗಳನ್ನು ಕಂಡಿತು. ನರಿಗೆ ತಕ್ಷಣ
ಉಪಾಯವೊಂದು ಹೊಳಯಿತು. ಮೆಲ್ಲನೆ ಇಲಿಗಳನ್ನು ಹತ್ತಿರ ಕರೆದು “ನಿಮ್ಮ ಹಲ್ಲುಗಳು
ಬಲಹೀನವಾಗಿವೆಯಲ್ಲವೆ?” ಎಂದಿತು. ಇಲಿಗಳು ಇಲ್ಲ ನರಿಯಣ್ಣಾ, ನಮ್ಮ ಹಲ್ಲುಗಳು
ಗಟ್ಟಿಯಾಗಿಯೇ ಇವೆ” ಎಂದವು. ಅದಕ್ಕೆ ನರಿಯು “ಹಾಗಾದರೆ ಈ ಬಲೆಯನ್ನು ಕತ್ತರಿಸಿ
ನೋಡೋಣ” ಎಂದಿತು. ಇಲಿಗಳು ಕ್ಷಣದಲ್ಲಿ ಆ ಬಲೆಯನ್ನು ಹಲ್ಲುಗಳಿಂದ ಕತ್ತರಿಸಿ ಹಾಕಿದವು.


EE ನ: ಶಾ


ನರಿ ಬಲೆಯಿಂದ ಹೊರ ಬಂದಿತು. ಆಗ ನರಿಯು “ಇಲಿಗಳಿರಾ, ನಿಮ್ಮ ಹಲ್ಲುಗಳು ಗಟ್ಟಿಯಾಗಿಯೇ
ಇವೆ, ನಾನು ರೈತ ಒಡ್ಡಿದ್ದ ಬಲೆಯಲ್ಲಿ ಸಿಕ್ಕಿಕೊಂಡಿದ್ದೆನು. ನೀವು ನನ್ನನ್ನು ಪಾರು ಮಾಡಿದಿರಿ.
ನಿಮಗೆ ಧನ್ಯವಾದಗಳು” ಎಂದು ಹೇಳಿತು.


ಇಲಿಗಳು ನರಿಯ ಜಾಣತನವನ್ನು ಹೊಗಳಿದವು. ಆಗ ನರಿಯು ಇಲಿಗಳನ್ನು ಕುರಿತು “ರೈತನ
ಬಲೆಗೆ ಸಿಕ್ಕಿ ಹಾಕಿಕೊ೦ಡ ನನ್ನ ಕ೦ದನನ್ನು ಪಾರು ಮಾಡಲೆಂದು ಬಂದೆ. ಆದರೆ ಕೋಳಿಯ
ಆಸೆಯಿಂದ ನಾನೂ ಈ ಬಲೆಗೆ ಸಿಕ್ಕಿಹಾಕಿಕೊಂಡೆ. ನೀವು ನನಗೆ ಉಪಕಾರ ಮಾಡಿದಿರಿ. ಆದರೆ
ನನ್ನ ಕಂದ ಮಾತ್ರ ಸಿಗಲಿಲ್ಲ” ಎಂದು ದುಃಖದಿಂದ ಹೇಳಿತು. ಆಗ ಇಲಿಗಳು ರೈತ ಬಚ್ಚಿಟ್ಟಿದ್ದ
ನರಿಯ ಮರಿಯನ್ನು ತಾಯಿನರಿಗೆ ತೋರಿಸಿದವು. ತನ್ನ ಮರಿಯನ್ನು ನೋಡಿ ತಾಯಿನರಿಗೆ
ಆನಂದವಾಯಿತು. ಅವು ಮತ್ತೊಮ್ಮೆ ಇಲಿಗಳಿಗೆ ಧನ್ಯವಾದ ಹೇಳಿದವು. ಸಂತೋಷದಿಂದ
ಕಾಡಿನತ್ತ ಓಡಿಹೋದವು.


ಉಪಾಯ ಬಲವನಿಗೆ ಅಪಾಯವಿಲ್ಲ. "|
ನು ಪ


ಅ) ಓದಿದ ಪದಗಳು : ಇವುಗಳನ್ನು ಸ್ಪಷ್ಟವಾಗಿ ಉಚ್ಚರಿಸು:


ಧ್ವನಿ ಸದ್ದು ತೋಟ ಕೋಳಿ ಬೇಲಿ
ಸ್ವಲ್ಪ ಬಲೆ ಆಹಾರ ಹಿಗ್ಗಿತು ನುಗ್ಗಿತು
ಆತಂಕ ಹತ್ತಿರ ಸುಳಿವು ಉಪಾಯ ಅಡಗಿ


ಅನಿವಾರ್ಯ ಜಿಗಿದಾಡು "ಬಲಹೀನ


ಆ) ಓದಿ ತಿಳಿ :
ಸದ್ದು - ಶಬ್ದ, ಗದ್ದಲ
ಮೇವು -. ಆಹಾರ
ಅನಿವಾರ್ಯ - ತಪ್ಪಿಸಲಾಗದ
ಅಪಾಯ - ಕೇಡು, ಹಾನಿ, ತೊಂದರೆ
ತೋಚದೆ - ದಿಕ್ಕು ಕಾಣದೆ
ಸಮೀಪ - ಹತ್ತಿರ
ಕಂಡಿ -.. ರಂಧ್ರ, ತೂತು


ಅಭ್ಯಾಸ


ಅ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ:


೧. ಕಾಡಿನಲ್ಲಿ ಆಹಾರ ಹುಡುಕುತ್ತಾ ಯಾರು ಬಂದರು?


೪. ನರಿಯು ಬಲೆಯಿಂದ ತಪ್ಪಿಸಿಕೊಳ್ಳಲು ಹಾಯ” ಮಾಡಿದವರು ಯಾರು?


೨%


೧. ನರಿಗೆ ದೂರದಲ್ಲಿ `ತೋಟದ............................ ಕಾಣಿಸಿತು.
(ಕೊಳವೊಂದು, ಗುಹೆಯೊಂದು, ಮನೆಯೊಂದು)


೨. ಸಮಯ ಸಾಧಿಸಿ ಸ್ವಲ್ಪ ದೂರದಲ್ಲಿ ಟಟ


(ಮಲಗಿತು, ನಿಂತಿತು, ಕುಳಿತಿತು)


೩. ಕೋಳಿಗಳನ್ನು ಕಂಡು ನರಿಯ ಮರಿಯು ಮನದಲ್ಲೇ EEL
ಕುಗ್ಗಿತು, ಓಡಿತು, ಹಿಗ್ಗಿತು.)


ಇ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು?
೧.“ಅಮ್ಮಾ ಎಷ್ಟೊಂದು ಕೋಳಿಗಳು!”
ಹಾಡು ಹೇಳಿದರು NN
ಔಚಾರಿಗೆ ಹೇಲಿದರು 4 ಘಾತ 22352034
೨.“ನಿಮ್ಮ ಹಲ್ಲುಗಳು ಬಲಹೀನವಾಗಿವೆಯಲ್ಲವೆ?”
ಉಂ ಇ 2 RTRs
SUE ಬನ ಬಾಯ ಭ 1 0. (005662. (ಇ... 6113
೩.“ನಮ್ಮ ಹಲ್ಲುಗಳು ಗಟ್ಟಿಯಾಗಿಯೇ ಇವೆ”.
CURT ROTTS ಸಮಾನಾ ([
ಜಾತಿಗೆ ಹೇಳಿದಿರಿ ಗ ವಾ ಜಾಪಿ ಕಾಫ್‌ ಹಾ


ಈ) ಸಾಕು ಪ್ರಾಣಿಗಳ ಹೆಸರನ್ನು ಬರೆಯಿರ:


ಉ) ಈ ಭಿತ್ತಿ ಪತ್ರವನ್ನು ಓದಿ.


ಕರ್ನಾಟಕ ಸರ್ಕಾರ


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಲಾಖೆ


ಪಲ್ಫ್‌ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ
ಐದು ವರ್ಷದವರೆಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸಿ,
ನಿಮ್ಮ ಮಕ್ಕಳನ್ನು ಪೋಲಿಯೋ ರೋಗದಿಂದ ಮುಕ್ತಗೊಳಿಸಿ.


ಬನ್ನಿ, ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಕರಿಸೋಣ.


ಸಾಮರ್ಥ್ಯ: ಈ ಗದ್ಯಪಾಠದ ಕಲಿಕೆಯೊಂದಿಗೆ ದೊಡ್ಡ ಮತ್ತು ಸಣ್ಣ ಗಾತ್ರದ ಮುದ್ರಿತ
ಅಕ್ಷರಗಳನ್ನು ಓದುವ; ಸಾಮರ್ಥ್ಯ ಗಳಿಸುವೆ.


ಹಿಹಿಮಿ


ಪಾಠ - ೮
ನನ್ನ ದೇವರು (ಪದ್ಯ)
ಡ್‌ ಹಾಠಪೂರ್ವ ಚಟುವಟಿಕೆ :


ಚಿತ್ರವನ್ನು ಗಮನಿಸಿ ಬಣ್ಣ ತು೦ಬು. ಅವುಗಳನ್ನು ಗುರುತಿಸಿ, ಕೆಳಗೆ
ಕೊಟ್ಟಿರುವ ಖಾಲಿ ಜಾಗದಲ್ಲಿ ಹೆಸರನ್ನು ಬರೆ.


ನಿತ್ಯ ನಮಗೆ ಬೆಳಕು ಕೊಡುವ


\ ||
ಸೂರ್ಯ ನನ್ನ ದೇವರು whi
ರಾತ್ರಿ ಹಾಲು ಜಳಕ ಕೊಡುವ-....- ದ್‌
ಚಂದ ನನ್ನ ದೇವರು” el
“wi Zeya ತಾರೆ ಬೆಳ್ಳಿ ಚುಕ್ಕಿ ಪರಾಶರ
ಉಲ್ಕೆ ನನ್ನ ದೇವರು ಸಾರಾ |


ಚೆಂಕಿ ಗ ನೀರು ಗಗನ
ಎಲ್ಲ ನನ್ನ ದೇವರು ॥೨॥ ಫ್‌


ಹಚ್ಚ ಹಸಿರು ಹೊದ್ದು ನಿಂತ


ಭೂಮಿ ನನ್ನ ದೇವರು
\ ಗುಡ್ಡ - ಬೆಟ್ಟ ಕಾಡು ಮೇಡು
ಹೊಳೆಗಳನ್ನ “ದೇವರು lal


ಹೊಲದಿ” ಬೆವರು ಸುರಿಸಿ ದುಡಿವ
ರೈತ ನನ್ನ ದೇವರು

ದೇಶಕಾಗಿ ಶ್ರಮಿಸುತಿರುವ
ಯೋಧ ನನ್ನ ದೇವರು ॥೪॥


ತಂದೆ - ತಾಯಿ ಬಂಧು ಬಳಗ-
ವೆಲ್ಲ ನನ್ನ ದೇವರು

ಎದ್ಕೆ ಕಲಿಸಿ ಹಿತವ ನುಡಿವ
ಗುರುಗಳೆನ್ನ ದೇವರು 1೫


ನನ್ನ ದೇವರಿವರು ನಿತ್ಯ
ನನಗೆ ಕಾಣುತಿರುವರು


ಶುದ್ಧ ಮನದಿ ಬೇಡಿದುದನು
ನೀಡಿ ಪೊರೆಯುತಿರುವರು ॥೬॥


- ನೆಂಪು ನರಸಿಂಹಭಟ್ಟ


EE ' ಶಾ


ಅ) ಕೇಳಿದ ಪದಗಳು : ಇವುಗಳನ್ನು ಗಟ್ಟಿಯಾಗಿ ಓದಿ.


ನಿತ್ಯ ಸೂರ್ಯ ಬೆಳಕು ತಾರೆ ಬೆಳ್ಳಿ
ಬೆಂಕಿ ಉಲ್ಕೆ ಗಾಳಿ ಗಗನ ನೀರು
ಹಸಿರು ಹೊದ್ದು ಭೂಮಿ ಗುಡ್ಡಬೆಟ್ಟ ರೈತ
ಕಾಡುಮೇಡು ಹೊಳೆ ಹೊಲ ಬೆವರು ಹಿತ
ದೇಶ ಶ್ರಮಿಸು ಯೋಧ ವಿದ್ಯೆ


ಆ) ಓದಿ ತಿಳಿಯಿರಿ :
ನಿತ್ನ - ಪ್ರತಿದಿನ ಯಾವಾಗಲೂ
ತಾರೆ - ನಕ್ಷತ್ರ ಚುಕ್ಕೆ
ಗಗನ - ಆಕಾಶ


ಉಲ್ಕೆ - ಆಕಾಶಕಾಯ
ತ್‌
ಅಭ್ಯಾಸ
ಅ) ಈ ಪದ್ಯವನ್ನು ರಾಗವಾಗಿ ಹಾಡಿ:


ಆ) ಒಂದು ವಾಕ್ಯದಲ್ಲಿ ಉತ್ತರ ಹೇಳಿರಿ:
೧. ನಮಗೆ ಹಗಲಿನಲ್ಲಿ ಬೆಳಕನ್ನು ಕೊಡುವವನು ಯಾರು?
೨. ರೈತ ಎಲ್ಲಿ ದುಡಿಯುತ್ತಾನೆ?
೩. ಯೋಧ ಏತಕ್ಕಾಗಿ ಶ್ರಮಿಸುತ್ತಿದ್ದಾನೆ?


ಇ) ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
೧. ರಾತ್ರಿವೇಳೆ ಬೆಳಕು ಕೊಡುವವನು ಯಾರು?


ಈ) ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ :
೧. ಸೂರ್ಯ, ಚಂದ್ರ, ಗುಡ್ಡ, ನಕ್ಷತ್ರ ....................
೨. ಬೆಳಕು, ಗಾಳಿ, ನೀರು, ರೈತ .....................


ಉ) ಮಾದರಿಯಂತೆ ಪದ ಬರೆ :
ಮಾದರಿ: ಬೆಟ್ಟ - ಗುಡ್ಡ
ತಂದೆ ದು. ಸುಸು ಟೂ
ಕಾಹು ಎಇ ಲಚ್‌
ಕುತ್ರ iL


0


ಊ) ಈ ಕಥೆಯನ್ನು ಓದಿ ಕೊಟ್ಟಿರುವ ಪ್ರಶ್ನೆ ಗಳಿಗೆ ಉತ್ತರ ಬರೆಯಿರಿ ;


ಒಬ್ಬ ಬೇಟೆಗಾರ ಹಕ್ಕಿಗಳಿಗಾಗಿ ಕಾಳು ಚೆಲ್ಲಿ ಬಲೆ ಬೀಸಿದನು. ಹಕ್ಕಿಗಳು ಕಾಳುಗಳನ್ನು
ನೋಡಿದೆವು. ಆಸೆಯಿಂದ" ಕಾಳು ತಿನ್ನಲು ಹೋದವು. ಕೆಲವು ಬಲೆಯಲ್ಲಿ ಸಿಕ್ಕಿಕೊಂಡವು.
“ಚಿ೦ವ್‌ ಚಿಂವ್‌” ಎಂದು ಕೂಗಿಕೊಂಡವು. ಕೂಡಲೇ ಒಂದು ಉಪಾಯ ಮಾಡಿದವು. ಎಲ್ಲಾ
ಹಕ್ಕಿಗಳು ಸೇರಿ ಬಲೆಯನ್ನು ಎತ್ತಿಕೊಂಡು ಮೇಲಕ್ಕೆ ಹಾರಿದವು. ಅನ೦ತರ ಬೇರೆಡೆಗೆ ಹೋಗಿ
ಉಪಾಯವಾಗಿ ಬಲೆಯಿಂದ ಹೊರಬಂದವು.


೧. ಬೇಟೆಗಾರ ಯಾವುದಕ್ಕಾಗಿ ಬಲೆ.ಬೀಸಿದನು?


ಅ) ಯೋಧ ಮತ್ತು ರೈತರ ಬಗ್ಗೆ ಮಾಹಿತಿ ಸಂಗ್ರಹಿಸಿ :


ಸಾಮರ್ಥ್ಯ: ಮ ಪದ್ಯ ಕಲಿಕೆಯ ಆನಂತರ ಸರಳ ಪ್ರಶ್ನೆಗಳಿಗೆ ಪೂರ್ಣವಾಕ್ಯಗಳಲ್ಲಿ
ಉತ್ತರಿಸುವ ಸಾಮರ್ಥ್ಯ ಗಳಿಸುವಿರಿ.


ಪಾಠ -೯
ಮೂರು ಕಲ್ಲುಗಳು (ಗದ್ಯ) ಸ್‌
ಸೆ


331೧4
ಈ ಚಿತ್ರಗಳ ಬಗ್ಗೆ ಮಾಹಿತಿಯನ್ನು ಕೇಳಿ ತಿಳಿಯಿರಿ.


ತ ತ ಹ ಬ ನ ‘
ಎ (0) ರ್ಕ


ಒಬ್ಬ ಶಿಲ್ಲಿ ಸುಂದರವಾದ ಮೂರ್ತಿಗಳನ್ನು ಕೆತ್ತಲು ಮೂರು ಕಲ್ಲುಗಳನ್ನು ತಂದನು.
ಮೊದಲನೆಯ ಕಲ್ಲನ್ನು ತೆಗೆದು ಅದನ್ನು'ಉಳಿ ಮತ್ತು ಸುತ್ತಿಗೆಯಿಂದ ಕೆತ್ತಲು ಪ್ರಾರಂಭಿಸಿದನು. ಆಗ
ಆ ಕಲ್ಲು ಶಿಲ್ಪಿಯ ಏಟನ್ನು ತಾಳದಾಯಿತು. “ಅಯ್ಯೋ ಶಿಲ್ಲಿಯೇ, ನಾನು ಏಟನ್ನು ಸಹಿಸಲಾರೆ,
ನನ್ನನ್ನು ಬಿಟ್ಟುಬಿಡು” ಎಂದಿತು. ಶಿಲ್ಪಿ ಕಲ್ಲಿನ ಮಾತನ್ನು ಕೇಳಿ ಅದನ್ನು ಪಕ್ಕಕ್ಕೆ ಇಟ್ಟನು. ಮತ್ತೆ
ಎರಡನೆಯ ಕಲ್ಲನ್ನು ತೆಗೆದುಕೊಂಡನು. ಅದಕ್ಕೆ ನೂರಾರು ಏಟುಗಳನ್ನು ಹಾಕಿದನು. ಆ ಕಲ್ಲೂ
ಸಹ ನೋವು ಸಹಿಸದಾಯಿತು. “ಶಿಲ್ಪಿ. ಶಿಲ್ಪಿ. ನನಗೆ ತುಂಬಾ ನೋವಾಗುತ್ತಿದೆ. ಏಟುಗಳನ್ನು
ತಡೆಯಲಾರೆ. ದಯಮಾಡಿ ನನ್ನನ್ನು ಬಿಟ್ಟು ಬಿಡು” ಎಂದು ಗೋಗರೆಯಿತು. ಅದರ ಮಾತನ್ನು
ಕೇಳಿ ಶಿಲ್ಪಿಗೆ ಬೇಸರವಾಯಿತು. ಆದರೂ ಇನ್ನೊಂದು ಕಲ್ಲು ಇದೆಯಲ್ಲಾ, ಅದನ್ನಾದರೂ ಸುಂದರ
ಮೂರ್ತಿಯಾಗಿ ಮಾಡೋಣ ಅಂದುಕೊಂಡನು. ಮೂರನೆಯ ಕಲ್ಲನ್ನು ತೆಗೆದುಕೊಂಡನು.
ಅದಕ್ಕೆ ಸಾವಿರಾರು ಪೆಟ್ಟುಗಳನ್ನು ಹಾಕಿದನು. ಆ ಕಲ್ಲು ತಾಳ್ಮೆಯಿಂದ ಎಲ್ಲಾ ಏಟುಗಳನ್ನು
ಸಹಿಸಿಕೊಂಡಿತು. ಶಿಲ್ರಿ ಆ ಕಲ್ಲನ್ನು ಸುಂದರ ಮೂರ್ತಿಯಾಗಿ ಮಾಡಿದನು. ತಾನು ಮಾಡಿದ
ಮೂರ್ತಿಯನ್ನು ನೋಡಿ ಆನಂದಪಟ್ಟನು.


ಈ ಸುಂದರ ಕಲ್ಲಿನ ಮೂರ್ತಿಯನ್ನು ನೋಡಲು ಜನರು ಸಾಲು ಸಾಲಾಗಿ
ಬರತೊಡಗಿದರು. ಅವರು ಮೂರ್ತಿಯ “ಸೌಂದರ್ಯವನ್ನು ನೋಡಿ ಆನಂದಿಸಿದರು.
ಅವರೆಲ್ಲರೂ ಶಿಲ್ಪಿಯನ್ನು ಬಾಯಿತುಂಬ ಹೊಗಳುತ್ತಿದ್ದರು. ಇದನ್ನು ಮೊದಲ ಎರಡು ಕಲ್ಲುಗಳು
ಗಮನಿಸಿದವು. ಜನರ ಹೊಗಳಿಕೆಯನ್ನು ಕೇಳಿ ತಾವು ಹಾಗೆ ಆಗಬೇಕೆಂದು ಆಸೆಪಟ್ಟವು. ಕೊನೆಗೆ
ಅವೆರಡೂ “ನಾವು ಶಿಲ್ಪಿಯ ಏಟುಗಳನ್ನು ತಾಳಲಾರದೆ ಹೋದೆವು. ನಮ್ಮ ಗೆಳೆಯ ಪೆಟ್ಟುಗಳನ್ನು
ತಡೆದುಕೊ೦ಡನು. ಆದ್ದರಿಂದ ಇಂದು ಸುಂದರ ಮೂರ್ತಿಯಾಗಿದ್ದಾನೆ, ಅದನ್ನು ನೋಡಲು
ಪ್ರತಿನಿತ್ಯ ಜನರು ಬರುತ್ತಿದ್ದಾರೆ. ನಾವೂ ಏಟನ್ನು ಸಹಿಸಿಕೊಳ್ಳುತ್ತೇವೆ. ನಮ್ಮನ್ನೂ ಸಹ ಸುಂದರ
ಮೂರ್ತಿಗಳನ್ನಾಗಿ ಮಾಡು ಎಂದು ಶಿಲ್ಪಿಯನ್ನು ಕೇಳಿಕೊಳ್ಳೋಣ? ಎಂದು ತೀರ್ಮಾನಿಸಿದವು.

ಅದರಂತೆ ಒಂದು ದಿನ ಶಿಲ್ಪಿಯನ್ನು ಕುರಿತು “ನಾವು ಈಗ ಎಷ್ಟು ಏಟುಗಳನ್ನಾದರೂ
ಸಹಿಸಿಕೊಳ್ಳುತ್ತೇವೆ. ನಮ್ಮನ್ನು ಸುಂದರ ಮೂರ್ತಿಯಾಗಿಸಿರಿ” ಎಂದು ಬೇಡಿಕೊ೦ಡವು. ಶಿಲ್ಲಿಯು
ಸಂತೋಷದಿಂದ ಒಪ್ಪಿ ಅವುಗಳನ್ನು ಸುಂದರವಾದ ಮೂರ್ತಿಗಳಾಗಿ ಮಾಡಿದನು. ಜನರು
ಮೂರು ಶಿಲ್ಪಗಳ ಸೌಂದರ್ಯವನ್ನು ಕಣ್ತುಂಬ ನೋಡಿ ಆನಂದಿಸಿದರು. ಶಿಲ್ಪಿಯ ಕುಶಲತೆಯನ್ನು
ಮೆಚ್ಚಿದರು. ಅವನಿಗೆ ಅಭಿನ೦ದನೆ ಸಲ್ಲಿಸಿದರು.


ತಾಳ್ಕೆಗೆ ತಕ್ಕ ಫಲವಿದೆ


ಆ)


ಆ)


. ಕೇಳಿದ ಪದಗಳು : ಇವುಗಳನ್ನು ಸ್ಪಷ್ಟವಾಗಿ ಉಚ್ಚರಿಸಿ.


ಶಿಲ್ಪಿ ಪ್ರಾರಂಭ ಪ್ರತಿನಿತ್ಯ ಉಳಿ ಮೂರ್ತಿ
ಕೆತ್ತು ಸುತ್ತಿಗೆ ಹತ್ತಾರು ಏಟು ಸುಂದರ
ಶಿಲ್ಪ ಸಂತೋಷ ಹೊಗಳು ಗೆಳೆಯ ಕೊಂಡಾಡು
ಓದಿ ತಿಳಿಯಿರಿ :


ಅಭ್ಯಾಸ
ಈ ಪ್ರಶ್ನೆಗಳಿಗೆ ಉತ್ತರ ಹೇಳಿರಿ :
ಶಿಲ್ಪಿ ಮೂರು ಕಲ್ಲುಗಳನ್ನು ಏಕೆ ತಂದನು?
ಶಿಲ್ಪಿಯು ಕಲ್ಲನ್ನು ಕೆತ್ತಲು ಏನನ್ನು"ಬಳಸಿದನು?
ಯಾವ ಕಲ್ಲು ಸುಂದರ ಮೂರ್ತಿಯಾಯಿತು?
ಮೊದಲೆರಡು ಕಲ್ಲುಗಳು. ಕೊನೆಗೆ ಏನೆಂದು ತೀರ್ಮಾನಿಸಿದವು?


© ೫ ಟಿ D


ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :
೧. ಮೊದಲನೆಯ ಕಲ್ಲು ಶಿಲಿಗೆ ಏನೆಂದು ಹೇಳಿತು?


ಇ) ಮಾದರಿಯಂತೆ ಪದಗಳನ್ನು ಕೂಡಿಸಿ ಬರೆ :
ಮಾದರಿ: ಮೂರ್ತಿ + ಅನು



1

w


Cl Cl
ಶಿಲ್ಪಿ ಎಟ. ಲ್ಟ್ಬೀಯರೀ ಊಿ[ಿ
ಸುತ್ತಿಗೆ + ಅನು ಆ ಟಟ್ಟ್ಟಲಲಪಲಲಫಫಫ್ಯೇೋ್ಯಬ್ಸ
ಈ) ಖಾಲಿ ಬಿಟ್ಟಿರುವ ಜಾಗಗಳಲ್ಲಿ ಸರಿಯಾದ ಪದ ತುಂಬಿ :
೧. ಒಬ್ಬ ಶಿಲ್ಪಿ ಸುಂದರವಾದ ......... ಕೆತ್ತರು ಮೂರು ಕಲ್ಲುಗಳನ್ನು ತಂದನು.
೨. ಆ ಕಲ್ಲು ತಾಳ್ಮೆಯಿಂದ DD ಲಅೌ ಸಹಿಸಿಕೊಂಡಿತು.


೩. ಜನರು ಶಿಲ್ಪಿಯನ್ನು ಬಾರಯಿತುರಟಿ ಟಟ


ಉ) ಕೊಟ್ಟಿರುವ ವಾಕ್ಯಗಳನ್ನು ಘಟನೆಗೆ ಅನುಸಾರವಾಗಿ ಅನುಕ್ರಮವಾಗಿ,ಬರೆಯಿರಿ :
೧. ಜನರು ಮೂರು ಶಿಲ್ಪಗಳ ಸೌಂದರ್ಯವನ್ನು ಕಣ್ತುಂಬ ನೋಡಿ ಆನಂದಿಸಿದರು.
೨. “ಅಯ್ಯೋ ಶಿಲ್ಲಿಯೇ ನಾನು ಏಟನ್ನು ಸಹಿಸಲಾರೆ, ನನ್ನನ್ನು ಬಿಟ್ಟುಬಿಡು” ಎಂದಿತು.
೩. ಆ ಕಲ್ಲು ತಾಳ್ಮೆಯಿಂದ ಎಲ್ಲಾ ಏಟುಗಳನ್ನು ಸಹಿಸಿಕೊಂಡಿತು.



. ಶಿಲ್ಪಿಯು ಸಂತೋಷದಿಂದ ಒಪ್ಪಿ. ಅವುಗಳನ್ನು ಸುಂದರವಾದ ಮೂರ್ತಿಗಳಾಗಿ
ಮಾಡಿದನು.


ಊ) ಗೆರೆ ಎಳೆದ ಪದ ಓದಿ ಮತ್ತು ಬರೆಯಿರಿ :
೧. ಮೂರ್ತಿಗಳನ್ನು ಕೆತ್ತಲು ಮೂರು ಕಲ್ಲುಗಳನ್ನು ತ೦ದನು.............
೨. ಅದಕ್ಕೆ ನೂರಾರು ಪೆಟ್ಟುಗಳನ್ನು ಹಾಕಿದನು
೩. ಮೂರನೆಯ ಕಲ್ಲಿಗೆ ಸಾವಿರಾರು ಪೆಟ್ಟುಗಳನ್ನು ಹಾಕಿದನು. ........................


ಚಟುವಟಿಕೆ :
ಇ. ವೃತ್ತಪತ್ರಿಕೆಗಳಲ್ಲಿ ಬರುವ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಸಂಗ್ರಹಿಸಿ ಇಲ್ಲಿ ಅಂಟಿಸಿ.


ಸಾಮರ್ಥ್ಯ : ಈ ಗದ್ಯದ ಕಲಿಕೆಯೊಂದಿಗೆ ಪಠ್ಯದಲ್ಲಿನ ಘಟನೆಗಳನ್ನು ಅನುಕ್ರಮವಾಗಿ
ನೆನಪಿಸಿಕೊಂಡು ಹೇಳುವ ಮತ್ತು ಬರೆಯುವ ಸಾಮರ್ಥ್ಯ ಪಡೆಯುವಿರಿ.


ಪಾಠ - ೧೦
ಸತ್ಯವಂತ ಬಾಲಕ (ಗದ್ಯ)


ಚಿತ್ರಗಳಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ಖಾಲಿ ಜಾಗದಲ್ಲಿ ಅವರ ಹೆಸರನ್ನು ಬರೆಯಿರಿ.


ಗುರುಗಳು ತರಗತಿಗೆ ಬರುವುದನ್ನು ಕಂಡರು. ಕೂಡಲೇ ಮಕ್ಕಳು ಸದ್ದು ನಿಲ್ಲಿಸಿ ಕುಳಿತರು.
ಗುರುಗಳು ಒಳಗೆ ಬಂದರು. ಮಕ್ಕಳು ನಿಂತು ಗುರುಗಳಿಗೆ ವಂದಿಸಿದರು. ಗುರುಗಳು “ಮಕ್ಕಳೇ
ಈ ದಿನದ ಪಾಠವನ್ನು ಪ್ರಾರಂಭಿಸೋಣವೇ?? ಎಂದರು. ಮಕ್ಕಳೆಲ್ಲಾ “ಆಗಲಿ ಗುರುಗಳೇ”
ಎಂದರು. ನಾನು ನಿನ್ನೆ ದಿನ ನೀಡಿದ್ದ ಲೆಕ್ಕಗಳನ್ನು ಯಾರು ಮಾಡಿಕೊಂಡು ಬಂದಿದ್ದೀರಿ?
ಎಂದು ಕೇಳಿದರು. ಮಕ್ಕಳೆಲ್ಲಾ ಮೌನವಾಗಿ ಕುಳಿತರು. ಅವರಲ್ಲಿ ಒಬ್ಬ ಬಾಲಕ ಎದ್ದು ನಿಂತನು.
“ಗುರುಗಳೇ, ನಾನು ಲೆಕ್ಕಗಳನ್ನು ಮಾಡಿ ತಂದಿದ್ದೇನೆ” ಎಂದು ಹೇಳಿದನು. ಗುರುಗಳು ಆ
ಹುಡುಗ ಮಾಡಿ ತಂದಿರುವ ಲೆಕ್ಕಗಳನ್ನು ಪರಿಶೀಲಿಸಿದರು. ಎಲ್ಲವೂ ಸರಿಯಾಗಿದ್ದವು. ಅವರಿಗೆ
ವಿದ್ಯಾರ್ಥಿಯ ಮೇಲೆ ಅಭಿಮಾನ ಮೂಡಿತು. ಆಗ ಬಾಲಕನಿಗೆ “ಬೇಷ್‌! ನೀನು ಜಾಣ. ಬಾ
ಮುಂದಿನ ಸಾಲಿನಲ್ಲಿ ಕುಳಿತುಕೋ” ಎಂದರು. ಆದರೆ ಆ ಬಾಲಕ ನಿಂತಲ್ಲಿಯೇ ನಿಂತಿದ್ದ. ಅವನು
ಒಂದು ಹೆಜ್ಜೆಯನ್ನೂ ಮುಂದೆ ಇಡಲಿಲ್ಲ. ಅವನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.


ಹುಡುಗ ಅಳುವುದನ್ನು ಕಂಡು ಗುರುಗಳಿಗೆ ಆಶ್ಚರ್ಯವಾಯಿತು. “ಏಕಪ್ಪ, ನಿನಗೆ
ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲವೇ?” ಎಂದು ಕೇಳಿದರು. ಆ ಬಾಲಕನಿಗೆ ಸುಳ್ಳು
ಹೇಳಲು ಮನಸ್ಸು ಬರಲಿಲ್ಲ. ಅದಕ್ಕಾಗಿ ಅವನು “ನನ್ನನ್ನು ದಯವಿಟ್ಟು ಕ್ಷಮಿಸಿ ಗುರುಗಳೇ, ನಾನು
ಲೆಕ್ಕಗಳನ್ನು ಸ್ವತಃ ಮಾಡಿಲ್ಲ. ಬೇರೆಯವರ ನೆರವಿನಿ೦ದ ಮಾಡಿಕೊಂಡು ಬಂದಿದ್ದೇನೆ” ಎಂದು
ಹೇಳಿದನು. ಗುರುಗಳಿಗೆ ಬಾಲಕನ ಪ್ರಾಮಾಣಿಕತೆಯನ್ನು ಕಂಡು ಅಚ್ಚರಿ ಮತ್ತು ಆನಂದವಾಯಿತು.
ಬಾಲಕನಿಗೆ “ಮಗೂ ನೀನು ಸತ್ಯವನ್ನು ಹೇಳಿದ್ದೀಯಾ, ನನಗೆ ತುಂಬಾ ಮೆಚ್ಚುಗೆಯಾಯಿತು.
ಇದೇ ಗುಣವನ್ನು ಸದಾಕಾಲ ಕಾಪಾಡಿಕೋ. ಜೀವನದಲ್ಲಿ ನೀನು ದೊಡ್ಡ ವ್ಯಕ್ತಿಯಾಗುತ್ತೀಯಾ”


ಎ೦ದು ಹರಸಿದರು. ಎಲ್ಲರಿಗೂ ತಿಳಿಯುವಂತೆ ತಾವೇ ಲೆಕ್ಕ ಮಾಡಿ ತೋರಿಸಿದರು. ಮಕ್ಕಳಿಗೆ
ಸಂತೋಷವಾಯಿತು.


ಮುಂದೆ ಗುರುಗಳ ಮಾತು ಸತ್ಯವಾಯಿತು. ಆ ಸತ್ಯವಂತ
ಬಾಲಕನೇ ಗೋಪಾಲಕೃಷ್ಣ ಗೋಖಲೆಯವರು. ಇವರನ್ನು
ಮಹಾತ್ಮಗಾಂಧೀಜಿಯವರು ತಮ್ಮ ರಾಜಕೀಯ ಗುರುಗಳೆಂದು
ಸ್ವೀಕರಿಸಿದ್ದರು. ಗೋಖಲೆಯವರು ಸ್ವಾತಂತ್ರ್ಯ ಹೋರಾಟದಲ್ಲಿ
ಸಕ್ರಿಯವಾಗಿ ಭಾಗವಹಿಸಿದ್ದರು. ಇವರು ಮಹಿಳೆಯರಿಗೂ ಶಿಕ್ಷಣ
ಬೇಕೆಂದು ಹೇಳಿದರು. ಶಿಕ್ಷಣದ ಮೂಲಕ ಜನರಲ್ಲಿ ರಾಜಕೀಯ
ಜಾಗೃತಿ ಮೂಡಿಸಿದರು. ನಾವೆಲ್ಲರೂ ಭಾರತ ದೇಶದ ಪ್ರಜೆಗಳು
ಎನ್ನುವ ಮನೋಭಾವನೆಯನ್ನು ಬೆಳೆಸಿದರು.


ಬೆಳೆಯುವ ಸಿರಿ ಮೊಳಕೆಯಲ್ಲಿ _.....


ಅ) ಓದಿದ ಪದಗಳು : ಇವುಗಳನ್ನು ಸ್ಪಷ್ಟವಾಗಿ ಉಚ್ಚರಿಸಿ:


ಗುರು ಹೆಜ್ಜೆ ಹರಸು ಕ್ಷಮಿಸಿ ಆಶ್ಚರ್ಯ

ಸತ್ಯವಂತ ವಂದಿಸು ಇಷ್ಟ ಮಹಾತ್ಮ ದಯವಿಟ್ಟು

ರಾಜಕೀಯ ಮೌನ ಸ್ವತಃ ಸ್ವಾತಂತ್ರ್ಯ ಪರಿಶೀಲಿಸು

ಪ್ರಾಮಾಣಿಕತೆ ಹೋರಾಟ ಅಭಿಮಾನ ಅಚ್ಚರಿ ಸಕ್ರಿಯ

ಜಾಣ ಆನಂದ ಶಿಕ್ಷಣ ಜಾಗೃತಿ ಮನೋಭಾವ
ಆ) ಓದಿ - ತಿಳಿಯಿರಿ :

ಸುಳಿವು - ಗುರುತು

ಸದ್ದು - ಶಬ್ದ

ಮೌನ -. ಮಾತನಾಡದೆ ಇರುವುದು

ಪರಿಶೀಲಿಸು - ಪರೀಕ್ಷಿಸು

ಆಶ್ಚರ್ಯ — ಅಚ್ಚರಿ

ಹರಸು - ಆಶೀರ್ವದಿಸು

ಗೌರವ - ಮರ್ಯಾದೆ

ಜಾಗೃತಿ — ಎಚ್ಚರ ಮೂಡಿಸು


ಮನೋಭಾವ - ಮನಸ್ಸಿನ ಭಾವನೆ



ಅಭ್ಯಾಸ
ಅ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :
೧. ಗುರುಗಳು ಎಲ್ಲಿಗೆ ಬಂದರು?


ಆ) ಈ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ. ಉತ್ತರ ಬರೆಯಿರಿ :
೧. ಗುರುಗಳ ಬಳಿ ಬಾಲಕನು ಏನೆಂದು ಸತ್ಯವನ್ನು ಹೇಳಿದನು?


ಇ) ಮಾದರಿಯಲ್ಲಿ ಸೂಚಿಸಿರುವಂತೆ ಆವರಣದಲ್ಲಿರುವ ಅಕ್ಷರ ಬಳಸಿ ಸೂಕ್ತ ಪದ ರಚಿಸಿ :


ಮಾದರಿ : ಪ್ರಾರಂಭ (ಕಂ, ಸ, ರಂ)


ಹ ಆ ಟೂ ಮಾನ (ಬೆ, ಭಿ. ರ)
ಈ. ಜಾ ಮಾಣಿಕತೆ (ಪ್ರಾ. ದಾ, ತ್ರಾ)
ಶೀ ಈಶ ಸಃ (ಜು, ಪು, ಸು)

೪. ಸತ್ಯ... ತ (ವಂ, ನಂ, ಗಂ)


ಈ) ಖಾಲಿ ಬಿಟ್ಟಿರುವ ಜಾಗಗಳಲ್ಲಿ ಸರಿಯಾದ ಪದ ತುಂಬಿ :


ದ ಭ್‌ ಧೀ) anid
೨. ಅವನು ಒಂದು .... ಗ ಮುಂದೆ ಇಡಲಿಲ್ಲ.
೩. ಇವರು ಮಹಿಳೆಯರಿಗೂ AX. OwY......... ಬೇಕೆಂದು ಹೇಳಿದರು.


ಉ) ಪದಗಳನ್ನು ಓದಿ ನಂತರ ಬರೆಯಿರ:


ಇ 60ನ್ನು? ನಿಲಿಸಿ ಪಾಠವನ್ನು .............
ಮಕಳು ಸಾ. ಲೆಕ್ಕಗಳು .ಎ್ಹತ್ಮ್ಯಷಷು. ಕಣ್ಣುಗಳು .............
ಮನಸ್ಸು ಉ.ೂ... ಸಾಲಿನಲ್ಲಿ ...6ಪಲಿ, RO ಪ್ರಜಾ
ಕ್ಷಮಿಸು. ಸೂ ಹಯುವಿಟಿ ವಟಾ ಬ ರ್ಮ
ಗುಣವನ್ನು ............. ಸ್ವತ್ತ ಸು ಸತ್ಯವಂತ ............
os ಹಿ ಾಾರಸಾ ಸಿಗ ಭಾನ ಕತಿ ವಾರಾ


ಊ) ಪದಬಂಧ :


ಸುಳಿವು ಆಧರಿಸಿ ಬಿಟ್ಟ ಅಕ್ಷರ ಬರೆಯಿರಿ : (ಎಡದಿಂದ ಬಲಕ್ಕೆ)
೧. ನಮ್ಮ "ದೇಶದ' ಹೆಸರು
೨. "ಹುಡುಗನನ್ನು' ಹೀಗೂ ಕರೆಯುವರು
೩. ಇನ್ನೊಬ್ಬರ ತಪ್ಪನ್ನು ಮನ್ನಿಸುವುದು

ಚಟುವಟಿಕೆ :


ಈ) ಗಾದೆ ಮಾತುಗಳನ್ನು ಓದಿ :
೧. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
ಕೊ] ವಿದ್ಯೆಗೆ ವಿನಯವೇ ಭೂಷಣ
೩. ಮಾತು ಬಲ್ಲವನಿಗೆ ಜಗಳವಿಲ್ಲ. ಊಟ: ಬಲ್ಲವನಿಗೆ ರೋಗವಿಲ್ಲ.


ಸಾಮರ್ಥ್ಯ : ಈ ಗದ್ಯದ ಕಲಿಕೆಯೊಂದಿಗೆ 'ಉಕ್ತಲೇಖನದ ಮೂಲಕ ಸಂಯುಕ್ತಾಕ್ಷರ


ಪದಗಳನ್ನು ಬರೆಯುವ ಸಾಮರ್ಥ್ಯ ಪಡೆಯುವಿರಿ.


ಪಾಠ - ೧೧
ಮಂಗಗಳ ಉಪವಾಸ (ಪದ್ಯ)


3 ಪಾಠಪೂರ್ವ ಚಟುವಟಿಕೆ :


ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿ. ವ
ನೀವು ನೋಡಿರುವ ಪ್ರಾಣಿಗಳು ಯಾವುವು?

ನಿಮ್ಮ ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದ್ದೀರಿ?

ನಿಮ್ಮ ಪ್ರೀತಿಯ ಪ್ರಾಣಿ ಯಾವುದು?

ನಿಮ್ಮ ಊರಿನ ಸುತ್ತಮುತ್ತ ಯಾವ ಯಾವ ತೋಟಗಳಿವೆ?

ನೀವು ತಿಂದಿರುವ ಹಣ್ಣುಗಳ ಹೆಸರನ್ನು ಹೇಳಿ?

ನಿಮಗೆ ಇಷ್ಟವಾದ ಹಣ್ಣು ಯಾವುದು?


೨... (೯3


ಮಂಗಗಳ ಉಪವಾಸ (ಪದ್ಯ)


ಕ ಬಾಳೆಯ ತೋಟದ ಪಕ್ಕದ ಕಾಡೊಳು
ದಾ ವಾಸಿಸುತ್ತಿದ್ದವು ಮಂಗಗಳು;
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು.


ಏನೂ ತಿನ್ನದೆ, ಮಟ ಮಟ ನೋಡುತ
ಇದ್ದವು: ಮರದಲಿ ಕುಳಿತಲ್ಲೆ,

ನಾಳೆಗೆ ತಿಂಡಿಯ ಈಗಲೆ ಹುಡುಕುವ

ಗಾ ನಿರಿ” ಎಂದಿತು ಕಪಿಯೊಂದು.
“ಹೌದೌದಣ್ಣ” ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ ಹಾರಿದವು,
ಎರ್‌ ತೋಟದಿ ಬಾಳೆಯ ಹಣ್ಣನು ನೋಡಲು
ಆಸೆಯು ಹೆಚ್ಚಿತು. ನೀರೂರಿ.


“ಸುಲಿದೇ ಇಡುವ ಆಗದೆ?” ಎಂದಿತು
ಆಸೆಯ ಮರಿಕಪಿಯೊಂದಾಗ;
“ಹೌದೌದೆ”ನ್ನುತ ಹಣ್ಣನು ಸುಲಿದವು,
ಕೈಯೊಳೆ ಹಿಡಿದು ಕುಳಿತಿರಲು.
“ಕೈಯಲ್ಲೇಶಕೆ ಬಾಯೊಳಗಿಟ್ಟರೆ
ಆಗದೆ?” ಎಂದಿತು ಇನ್ನೊಂದು,
ಹಣ್ಣನು ಬಾಯಲಿ ಇಟ್ಟವು “ಜಗಿದೇ
ಇಡುವೆವು” ಎಂದಿತು ಮತ್ತೊಂದು.


೬2 ಪೂ ಚಗದೂ, ನುಂಗಿದವೆಲ್ಲಾ
ಆಗಲೆ ಮುಗಿಯಿತು ಉಪವಾಸ.


ಸ್ಯ ಮಚ್ಚಿಮಲೆ ಶಂಕರನಾರಾಯಣ ರಾವ್‌


ಅ. ಕೇಳಿದ ಪದಗಳು : ಇವುಗಳನ್ನು ಗಟ್ಟಿಯಾಗಿ ಓದಿ.


ಬಾಳೆ ಸುಲಿ ತೋಟ ಇಡು ಉಪವಾಸ

ಹಡಿ ಹುಡುಕು ಬಾಯಿ ಹಾರು ಇನ್ನು

ಹಣ್ಣು ಜಗಿ ಆಸೆ ನುಂಗು ಹೆಚ್ಚು

ಆ. ಓದಿ ತಿಳಿಯಿರಿ :

ಪಕ್ಕ — ಬದಿ, ಮಗ್ಗಲು, ಹತ್ತಿರ.

ಉಪವಾಸ - ಏನನ್ನೂ ತಿನ್ನದೆ ಇರುವುದು.

ಕಪಿ ದ ಕೋತಿ.

ಆಸೆ — ಬಯಕೆ.

ಜಗಿ — ಅಗಿಯುವುದು

ಸುಲಿ — ಸಿಪೆಬಿಡಿಸು.

ಮಂಗು ದ ಸೇವಿಸು, ಬಾಯಿಯಿ೦ದ-ಗಂಟಲೊಳಗೆ ಇಳಿಸುವುದು.
ಅಭ್ಯಾಸ


ಅ) ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :
೧. ಮಂಗಗಳು ಎಲ್ಲಿ ವಾಸಿಸುತ್ತಿದ್ದವು?


ಆ) ಬಿಟ್ಟಿರುವ ಸ್ಥಳದಲ್ಲಿ ಸರಿಯಾದ ಪದ ಬರೆಯಿರಿ :


8ಖ೦ಿಗಗಳೆಲ್ಲವು ಒಟ್ಟಿಗೆ ಸೇರುತ ........................... ಮಾಡಿದವು.
ಜ.82 ತಿನ್ನದೆ ಎ ಹಾ014/02 1045 ನೋಡುತ ಇದ್ದವು ಮರದಲ್ಲಿ.
ನಿ ಕ್ರಯಲ್ಲೇತಕ ಸಂತರ ಆಗದೆ ಎಂದಿತು ಇನ್ನೊಂದು.
ಇ) “ಅ' ಪಟ್ಟಿಯಲ್ಲಿನ ಅಂಶಗಳಿಗೆ "ಆ' ಪಟ್ಟಿಯಲ್ಲಿನ ಅಂಶಗಳನ್ನು ಹೊಂದಿಸಿ ಬರೆಯಿರಿ :
"ಅ ಆ”
೧. ಒಂದುಪವಾಸವ — ಹಣ್ಣನು ಸಾಲವ ಪ್ಯಾ ಸಜನಿ
೨. ನಾಳೆಗೆ ತಿಂಡಿಯ - ಜಂ ಶರ್ವ್ತೈ್ರ್ಟ್ಟ್ಟ್ಟಛ್ಟ್ಟರಾಾತ್ಸ್ಸ
೩. ಆಸೆಯು ಹೆಚ್ಚಿತು - ಮಾಡಿದವು ಫೋ
೪. ಹೌದೌದೆನ್ನುತ — ಈಗಲೆ: ಹುಡುಕುವ Ce
ಈ) ಈ ಪದಗಳನ್ನು ಉಚ್ಚರಿಸಿ
೧. ಮಟಮಟ
೨. ಹೌದೌದು


೩. ಜಗಿದೂ ಜಗಿದೂ


ಚಟುವಟಿಕೆ :
೧. ಈ ಪದ್ಯದ ಸಾರಾಂಶವನ್ನು ಕಥೆಯ ರೂಪದಲ್ಲಿ ಹೇಳಿ.
೨. ಈ ಪದ್ಯವನ್ನು ಸಾಮೂಹಿಕವಾಗಿ ಹಾಡುತ್ತಾ ಅಭಿನಯಿಸಿರಿ.


: ಈ ಪದ್ಯ ಕಲಿಕೆಯ ಆನಂತರ ಏನು? ಮತ್ತು ಹೇಗೆ? ಎಂಬ ಪ್ರಶ್ನೆಗಳಿಗೆ
ಉತ್ತರಿಸುವ ಸಾಮರ್ಥ್ಯ ಪಡೆಯುವಿರಿ.


ಪಾಠ - ೧೨
ನೇಗಿಲು (ಗದ್ಯ)


ಈ ಚಿತ್ರಗಳನ್ನು ಗಮನಿಸಿ, ಇವುಗಳ ಹೆಸರನ್ನು ಹೇಳಿರಿ ಇವುಗಳ
ಬಳಕೆಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ.


ರಾಮಣ್ಣ ಉತ್ತಮ ಬೇಸಾಯಗಾರ. ಹೊಲಗದ್ದೆಗಳಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದನು.
ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದನು. ಪ್ರತಿದಿನ ಬೆಳಗ್ಗೆ ಎದ್ದು ಹೊಲಕ್ಕೆ ಹೋಗಲು ಸಿದ್ಧತೆ
ಮಾಡಿಕೊಳ್ಳುತ್ತಿದ್ದನು. ರಾಮಣ್ಣನ ಮಗ ಗಣೇಶ. ಗಣೇಶನ ಶಾಲೆಗೆ ಅಂದು ರಜೆ ಇತ್ತು ಗಣೇಶ
ಅಪ್ಪನೊಡನೆ ತಾನು ಹೊಲಕ್ಕೆ ಬರುವುದಾಗಿ ಹೇಳಿದ. ರಾಮಣ್ಣ ಕರೆದುಕೊಂಡು ಹೋಗಲು
ಒಪ್ಪಿದನು. ಉಳುಮೆಗೆ ಬೇಕಾದ ಸಲಕರಣೆಗಳನ್ನು ಎತ್ತಿನ ಗಾಡಿಯಲ್ಲಿ ಹಾಕಿಕೊ೦ಡರು. ಇಬ್ಬರೂ
ಹೊಲಕ್ಕೆ ಹೊರಟರು.


ಗಣೇಶ ಗಾಡಿಯಲ್ಲಿ ಕುಳಿತನು. ದಾರಿಯ ಅಕ್ಕಪಕ್ಕದ ಹೊಲಗಳನ್ನು ನೋಡಿ ಖುಷಿಪಟ್ಟನು.
ಅಷ್ಟರಲ್ಲಿ ಅವರ ಹೊಲ ಬಂದಿತು. ರಾಮಣ್ಣ ಮಗನನ್ನು ಮರದ ನೆರಳಲ್ಲಿ ಕುಳ್ಳಿರಿಸಿದ. ಹೊಲ
ಉಳಲು ಸಲಕರಣೆಗಳನ್ನು ಜೋಡಿಸಿದನು. ಅದಕ್ಕೆ ಎತ್ತುಗಳನ್ನು ಕಟ್ಟ ಏರು ಸಿದ್ದಪಡಿಸಿದನು.
ಹೊಲದ ಒಂದು ಭಾಗದಿಂದ ಉಳುಮೆ ಮಾಡಲು ಪ್ರಾರಂಭಿಸಿದನು. ಇವೆಲ್ಲವನ್ನು ಕುತೂಹಲದಿಂದ
ನೋಡುತ್ತಿದ್ದ ಗಣೇಶನು ಅಪ್ಪನ ಬಳಿಗೆ ಬ೦ದು ಮಾತಿಗೆ ಆರಂಭಿಸಿದನು.


: ಅಪ್ಪಾ, ಹೊಲ ಉಳಲು ನೀನು: ಬಳಸುವ ಸಾಧನಗಳು ಯಾವುವು?
: ನೇಗಿಲು, ನೊಗ, ಪಟಗಣ್ಣಿ, ಹಗ್ಗ: ಇವನ್ನು ಬಳಸಿದ್ದೇನೆ ಮಗಾ.
: ಅಪ್ಪಾ ಇವುಗಳಲ್ಲಿ ನೇಗಿಲು ಯಾವುದು? ಇದರ ಉಪಯೋಗ ಏನು?


: (ರಾಮಣ್ಣ ನೇಗಿಲನ್ನು ತೋರಿಸುತ್ತಾ) ಇದು ನೇಗಿಲು. ಹೊಲ ಗದ್ದೆಯನ್ನು ಉಳಲು


ಬಳಸುವ ಸಾಧನ. ಬೇಸಾಯಕ್ಕೆ ನೇಗಿಲು ಬೇಕೇಬೇಕು. ಇದನ್ನು ಬಹಳ ಹಿಂದಿನ
ಕಾಲದಿಂದಲೂ ಬಳಸುತ್ತಿದ್ದಾರೆ"


: ಅಪ್ಪಾ, ನೇಗಿಲನ್ನು ಯಾವುದರಿಂದ ಮಾಡುತ್ತಾರೆ?
: ಮರ ಮತ್ತು ಕಬ್ಬಿಣದಿಂದ ಮಾಡುತ್ತಾರೆ (ನೇಗಿಲನ್ನು ತೋರಿಸಿ). ಹೊಲವನ್ನು


ಉಳುವ ಭಾಗದಲ್ಲಿ ನೇಗಿಲ ಬಾಯಿಗೆ ತೊಡಿಸಿದ "ಕಬ್ಬಿಣದ ಪಟ್ಟಿ ಇರುತ್ತದೆ.
ಇದನ್ನು “ಕುಳ' ಎನ್ನು: ತ್ತಾರೆ. ಕೈಯಿಂದ ಹಿಡಿಯುವ ನೇಗಿಲೆನ ಭಾಗವನ್ನು "ಮೇಣಿ'
ಎನ್ನುವರು.


: ಅಪ್ಪಾ, ಎರಡು ಎತ್ತುಗಳ ಹೆಗಲನ್ನು ಸೇರಿಸಿ ಹಾಕಿದ್ದೀಯಲ್ಲ. ಅದು ಏನು?
: ಇದು ನೊಗ. ನೇಗಿಲು ಮತ್ತು ಎತ್ತುಗಳಿಗೆ ಸಂಪರ್ಕ ಕೊಡುವ ಸಾಧನವೇ "ನೊಗ.


ಇದು ಜಾರಿ ಬೀಳದಂತೆ ಪಟಗಣ್ಣಿಯಿಂದ ಎತ್ತಿನ ಕೊರಳಿಗೆ ಕಟ್ಟಲಾಗಿದೆ.


ಈಶಾ ಾಾ“ಾ ಸಾ


ಗಣೇಶ : ಉಳುಮೆ ಮಾಡಲು ಎಲ್ಲಾ ಕಡೆ ಎತ್ತುಗಳನ್ನೇ ಬಳಸುವರೇ?


ರಾಮಣ್ಣ : ಇಲ್ಲ ಗಣೇಶ, ಕೆಲವು ಕಡೆ ಕೋಣಗಳನ್ನೂ ಬಳಸುತ್ತಾರೆ. ಮತ್ತೆ ಕೆಲವು
ಕಡೆ ಹಸುಗಳನ್ನೂ ಬಳಸುತ್ತಾರೆ.
ಗಣೇಶ : ನೇಗಿಲಿನಿಂದ ಉಳುವುದರಿಂದ ಏನು ಪ್ರಯೋಜನ?


ರಾಮಣ್ಣ : ಉಳುಮೆಗೆ ನೇಗಿಲನ್ನು ಬಳಸುವುದರಿಂದ ಹೊಲಗದ್ದೆಗಳ ಮಣ್ಣನ್ನು
ಸೀಳುತ್ತದೆ. ನೆಲದ ಆಳಕ್ಕೆ ಗಾಳಿ, ನೀರು, ಬೆಳಕು ಸರಾಗವಾಗಿ
ಪ್ರವೇಶಿಸುತ್ತದೆ. ಇದರಿಂದ ಬಿತ್ತನೆ ಮಾಡಿದ ಧಾನ್ಯಗಳು ಚೆನ್ನಾಗಿ
ಮೊಳೆತು ಬೇರು ಬಿಟ್ಟು ಬೆಳೆಂಶುಲು ಅನುಕೂಲವಾಗುತ್ತದೆ.
ಉತ್ತಮ ಬೆಳೆ ಬರುತ್ತದೆ. ಆದುದರಿಂದ ನೇಗಿಲಿನ ಬಗ್ಗೆ ನಮ್ಮ
ಗ್ರಾಮೀಣ ಜನರಲ್ಲಿ ಪೂಜ್ಯ ಬಾವನೆ ಇದ್ದೆ. ಮಗು. ರಾಷ್ಟ್ರಕವಿ
ಕುವೆಂಪುರವರು ನೇಗಿಲಯೋಗಿಯ ಬಗ್ಗೆಯೇ. ಒ೦ದು ಪದ್ಯ ಬರೆದಿದ್ದಾರೆ.

ಗಣೇಶ : ಅಪ್ಪ, ಆ ಹಾಡನ್ನು ನಮ್ಮ ಶಾಲೆಯ ಸಮಾರಂಭಗಳಲ್ಲಿ ಆಗಾಗ
ಹಾಡಿಸುತ್ತಾರೆ.

ರಾಮಣ : ಹಾಡು ನೋಡೋಣ.

ಗಣೇಶ : “ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು?.......
ಗಣೇಶನ ಹಾಡನ್ನು ಕೇಳಿ ತಂದೆಯು ಸಂತೋಷಪಟ್ಟನು.


ಅ) ಕಲಿತ ಪದಗಳು : ಇವುಗಳನ್ನು ಗಟ್ಟಿಯಾಗಿ ಓದಿ.


ಬೇಸಾಯಗಾರ ಖುಷಿ ಕುಳ ಪ್ರಯೋಜನ
ಕುವೆಂಪು ಕಷ್ಟಪಟ್ಟು ಪ್ರಾರಂಭ ಮೇಣಿ
ಗ್ರಾಮೀಣ ಸಿದ್ಧತೆ ಕುತೂಹಲ ಪಟಗಣ್ಣಿ
ಪೂಜ್ಯ ಸಲಕರಣೆ ಕಬ್ಬಿಣ ರಾಷ್ಟ್ರಕವಿ


ಆ) ಓದಿ ತಿಳಿಯಿರಿ :


ಅ)


ಅ)


ಆ)


ಸಿದ್ಧತೆ - ಏರ್ಪಾಡು, ತಯಾರು

ಸಲಕರಣೆ - ಅಗತ್ಯವಾದ ವಸ್ತು. ಉಪಕರಣ

ಸೀಳು - ಎರಡು ಪಾಲಾಗುವುದು

ಮೇಣಿ - ನೇಗಿಲನ್ನು ಹಿಡಿದುಕೊಳ್ಳುವ ಒಂದು ಸಾಧನ

ಪಟಗಣ್ಣಿ - ಎತ್ತಿನ ಕೊರಳಿಗೆ ನೊಗವನ್ನು ಸೇರಿಸುವ ಪಟ್ಟಿ

ಗಮನಿಸಿ ತಿಳಿಯಿರಿ :

ನೇಗಿಲು - ಭೂಮಿಯನ್ನು ಉಳುವ ಸಾಧನ.

ಕುಳ - ನೇಗಿಲಿನ ಬಾಯಿಗೆ ತೊಡಿಸುವ ಕಬ್ಬಿಣದ ಪಟ್ಟಿ

ನೊಗ - ಬಂಡಿಯನ್ನಾಗಲಿ, ನೇಗಿಲನ್ನಾಗಲಿ ಎಳೆಯಲು ಎತ್ತು. ಕುದುರೆ

ಮೊದಲಾದವುಗಳ ಕುತ್ತಿಗೆಯ ಮೇಲೆ ಇಡುವ. ಉದ್ದವಾದ ಮರದ ತುಂಡು.

ಅಭ್ಯಾಸ

ಈ ಪ್ರಶ್ನೆಗಳಿಗೆ ಉತ್ತರ ಹೇಳಿರಿ/ಬರೆಯಿರಿ.

೧. ಗಣೇಶ ಅಪ್ಪನೊಡನೆ ಎಲ್ಲಿಗೆ ಹೋದನು?


39). ನೇಗಿಲನ್ನು ಯಾವುದರಿಂದ ತಯಾರಿಸುತ್ತಾರೆ?
೩. ಭೂಮಿಯನ್ನು ಉಳುವುದರಿಂದ ಏನು ಪ್ರಯೋಜನ?


ಆವರಣದಲ್ಲಿ ಕೊಟ್ಟಿರುವ ಅಕ್ಷರಗಳಲ್ಲಿ ಸೂಕ್ತ ಅಕ್ಷರ ಆರಿಸಿ ಖಾಲಿ ಬಿಟ್ಟ ಸ್ಥಳಗಳಲ್ಲಿ
ಬರೆಯಿರಿ :” ಕ


ಮಾದರಿ: ಬೇಸಾಯ (ಶಾ, ಸಾ, ಹಾ)


ಪ್ರಾರ೦- ಸು (ಪಿ, ಭಿ, ಸಿ)
ಉ ೨_ಮೆ (ಳು, ಲು, ನು)


ಸಿ ತೆ (ತ್ತ ದೃ, ನ್ಸ)


ರಾ -_ ಕವಿ ಪ್ರಸ್ವ್ಯತ್ಸ)


EE `- ಸಾ


© pb D


(8


ಇ) ಕೊಟ್ಟಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ವಾಕ್ಯ ಮಾಡಿರಿ :
೧. ಬೇಸಾಯಗಾರ ಉತ್ತಮ ರಾಮಣ್ಣ


ಈ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ:
ಡ್‌ Tc ಸ್ಟ ಸ್ಯಾಂಗರ್‌. ಗಾತಾ
SS SE SURE


ಫಿ OER NNN ಯ ಮ


ಊ) ಈ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ :


೧. ನೇಗಿಲು ಏಕೆ ಬೇಕು?


ಅ) ಇವುಗಳ ಬಗ್ಗೆ ನಿಮಗೆ ಗೊತ್ತಿರುವುದನ್ನು ಹೇಳಿ :
೧. ರೇಡಿಯೋ
೨. ಪೆನು
೩. ಶಾಲೆ


ಆ) ಉಳುಮೆ ಮಾಡುವುದನ್ನು ಮೂಕಾಭಿನಯ ಮಾಡಿ ತೋರಿಸಿ :


ಇ) “ವಿಜಯನಗರ' ಈ ಪದದಲ್ಲಿನ ಅಕ್ಷರಗಳಿಂದ ಆಗುವ ಹೊಸ ಪದಗಳನ್ನು ರಚಿಸಿ :


ಸಾಮರ್ಥ್ಯ : ಈ ಗದ್ಯದ ಕಲಿಕೆಯ ಆನಂತರ ಪರಿಚಿತ ವಸ್ತುಗಳ ಬಗ್ಗೆ ಮಾಹಿತಿಯನ್ನು
ಕೇಳಿ ತಿಳಿದುಕೊಳ್ಳುವ ಸಾಮರ್ಥ್ಯ ಪಡೆಯುವಿರಿ.


ಹಿಹಿಕಾ


ಪಾಠ - ೧೩
ಸರಳತೆ (ಗದ್ಯ)


ಈ ಕಥೆಯನ್ನು ಓದಿ.


ಮಹಾತ್ಸಗಾಂಧೀಜಿಯವರು ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಸಮಾರಂಭ
ಮುಗಿದ ಮೇಲೆ ಅವರನ್ನು ಮಾತನಾಡಿಸಲು ಜನರು ಮುಂದಾಗುತ್ತಿದ್ದರು.
ಮಹಿಳೆಯೊಬ್ಬಳು ಗಾಂಧೀಜಿಯವರನ್ನು ಮಾತನಾಡಿಸಲೆಂದು ಮುಂದೆ ಬರಲು
ಪ್ರಯತ್ನಿಸುತ್ತಿದ್ದಳು. ಆದರೆ ಆಕೆ ಉಟ್ಟಿದ್ದ ಸೀರೆ ತುಂಬಾ ಕೊಳೆಯಾಗಿತ್ತು. ಹೀಗಾಗಿ
ಕೆಲವರು ಆ ಮಹಿಳೆಯನ್ನು ತಡೆಯುತ್ತಿದ್ದರು. ಇದನ್ನು ಗಮನಿಸಿದ. ಗಾಂಧೀಜಿಯವರು
ಆಕೆಯ ಬಳಿಗೆ ಬಂದು ಮಾತನಾಡಿಸಿದರು. ಅನಂತರ ಆಕೆಗೆ ಬಟ್ಟೆಯನ್ನು ಶುಚಿಮಾಡಿ
ಧರಿಸುವಂತೆ ತಿಳಿಸಿದರು. ಆಗ ಆ ಮಹಿಳೆಯು ತನ್ನಲ್ಲಿ ಬೇರೆ,ಸೀರೆ ಇಲ್ಲ, ತಾನು ಉಟ್ಟಿರುವ
ಸೀರೆಯೊಂದೇ ಇರುವುದಾಗಿ ಹೇಳಿದಳು. ಈ ಮಾತನ್ನು ಕೇಳಿ ಗಾಂಧೀಜಿಯವರ ಮನಸಿಗೆ
ತುಂಬಾ ನೋವಾಯಿತು.


ಇದೇ ರೀತಿ ಇನ್ನು ಅನೇಕರಿಗೆ: ಕಷ್ಟವಿರಬಹುದು ಎಂದು ಅವರು ಭಾವಿಸಿದರು.
ಅಂದಿನಿಂದ ತಾವೂ ತುಂಡು ಪಂಚೆಯನ್ನು ಮಾತ್ರ ಧರಿಸುವುದಾಗಿ ನಿರ್ಧರಿಸಿದರು. ತಮ್ಮ
ಜೀವನದ ಕೊನೆಯವರೆಗೂ ತುಂಡು ಪಂಚೆಯನ್ನೇ ಧರಿಸಿ ಬದುಕಿದರು. ಸರಳತೆಯನ್ನು
ಮೈಗೂಡಿಸಿಕೊಂಡು ಎಲ್ಲರಿಗೂ ಮಾರ್ಗದರ್ಶಕರಾದರು.


ಅದೊಂದು ದೊಡ್ಡ ಸಭಾಂಗಣ. ಅದನ್ನು ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಅದಕ್ಕೆ
ತಕ್ಕಂತೆ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿತ್ತು ಅದು ಗಣ್ಯವ್ಯಕ್ತಿಯೊಬ್ಬರನ್ನು ಗೌರವಿಸುವ ಸಮಾರಂಭ.
ಅನೇಕ ಹಿರಿಯರನ್ನು ಅಲ್ಲಿಗೆ ಆಮಂತ್ರಿಸಲಾಗಿತ್ತು. ಅತಿಥಿಗಳು, ಅಭಿಮಾನಿಗಳು ಸಮಾರಂಭಕ್ಕೆ
ತಮ್ಮ ವಾಹನಗಳಲ್ಲಿ ಠಾಕುಠೀಕಾಗಿ ಬರುತ್ತಿದ್ದರು. ಬೆಲೆಬಾಳುವ ಉಡುಗೆಗಳನ್ನು ಧರಿಸಿದ್ದರು.
ಕಾವಲು ಸಿಬ್ಬಂದಿಯವರು ಬಾಗಿಲ ಬಳಿ ನಿಂತಿದ್ದರು. ಸಮಾರಂಭಕ್ಕೆ ಬರುತ್ತಿದ್ದವರನ್ನು
ಗೌರವದಿಂದ ಬರಮಾಡಿಕೊಳ್ಳುತ್ತಿದ್ದರು.


ಅಲ್ಲಿಗೆ ಸರಳ ಉಡುಗೆ ಧರಿಸಿದ ವ್ಯಕ್ತಿಯೊಬ್ಬರು ಕಾಲ್ನಡಿಗೆಯಲ್ಲಿ ಬಂದರು. ಅವರನ್ನು
ಕಾವಲುಗಾರರು ಬಾಗಿಲಲ್ಲಿಯೇ ತಡೆದರು. “ಇದು ಗಣ್ಯವ್ಯಕ್ತಿಯ ಸನ್ಮಾನ ಸಮಾರಂಭ.
ನಿಮ್ಮಂಥವರಿಗೆ ಪ್ರವೇಶವಿಲ್ಲ. ಗಣ್ಯರಿಗೆ ಮಾತ್ರ ಪ್ರವೇಶವಿದೆ. ನೀವು ಇಲ್ಲಿ ನಿಲ್ಲಬೇಡಿ. ಪಕ್ಕಕ್ಕೆ
ಸರಿಯಿರಿ” ಎಂದು ಜಬರದಸಿನಿಂದ ಹೇಳಿದರು.


ಆಗ ಅವರು “ನೋಡಪ್ಪ, ನಾನು ಈ ಸಮಾರಂಭಕ್ಕೆ ಹೋಗಬೇಕಾಗಿದೆ. ನನ್ನನ್ನು ಕರೆದಿದ್ದಾರೆ”
ಎಂದು ವಿನಯದಿಂದ ನುಡಿದರು.


ಅದಕ್ಕೆ ಕಾವಲುಗಾರ “ನೀನು ಗಣ್ಯ ವ್ಯಕ್ತಿಯಾಗಿ ಬಂದಿದ್ದೀಯಾ? ನಮ್ಮನ್ನು
ಮೂರ್ಪನನ್ನಾಗಿ ಮಾಡಿ ಒಳಗೆ. ಹೋಗಲು ಪ್ರಯತ್ನಿಸಬೇಡ. ಸುಮ್ಮನೆ ಪಕ್ಕಕ್ಕೆ ಸರಿ” ಎಂದು
ಬದಿಗೆ ತಳ್ಳಿದನು. ಆಗ ಈ ವ್ಯಕ್ತಿ ಬರುತ್ತಿದ್ದವರ ಮೇಲೆ ಬೀಳುವಂತಾದರು. ಅಷ್ಟರಲ್ಲಿ ವೇದಿಕೆಯ
ಬಳಿಯಿದ್ದ ವ್ಯವಸ್ಥಾಪಕರು ಗೌರವಿಸಬೇಕಾದ ಗಣ್ಯರನ್ನು ಗುರುತಿಸಿದರು. ತಕ್ಷಣವೇ ಅವರ ಬಳಿಗೆ
ಓಡಿ ಬಂದರು. ಆ ವ್ಯಕ್ತಿಗೆ ನಮಸ್ಕರಿಸಿ ಕಾವಲುಗಾರರಿ೦ದ ಆದ ತಪ್ಪಿಗೆ ಕ್ಷಮೆ ಕೋರಿದರು.
ಹಾಗೆಯೇ ಅವರನ್ನು ಗೌರವಪೂರ್ವಕವಾಗಿ ಸಮಾರಂಭದ ವೇದಿಕೆಗೆ ಕರೆತಂದರು. ಈ ಗಣ್ಯ
ವ್ಯಕ್ತಿಯೇ ಈಶ್ವರಚಂದ್ರ ವಿದ್ಯಾಸಾಗರರು. ಸಮಾರಂಭವು ಬಹು ಅಚ್ಚುಕಟ್ಟಾಗಿ ನಡೆಯಿತು.
ಬಂದವರೆಲ್ಲಾ ಗೌರವ ಸ್ವೀಕರಿಸಿದ ಈಶ್ವರಚಂದ್ರ ವಿದ್ಯಾಸಾಗರ್‌ರವರ ಗುಣಗಾನ ಮಾಡಿದರು.
ಹಾರ ತುರಾಯಿಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.


ವ್ಯವಸ್ಥಾಪಕರು ಸಮಾರಂಭ ಮುಗಿದ ಮೇಲೆ ಕಾವಲು ಸಿಬ್ಬಂದಿಯನ್ನು ಬಯ್ಯಲಾರಂಭಿಸಿದರು.
ಆಗ ಈಶ್ವರಚಂದ್ರರು “ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ.


ಅವರ ಕರ್ತವ್ಯನಿಷ್ಠೆ ಕ೦ಡು ನನಗೆ ಹೆಮ್ಮೆಯಾಗಿದೆ. ಇಂತಹವರನ್ನು ನಾವು ಪ್ರೋತ್ಸಾಹಿಸಬೇಕು”
ಎಂದು ಹೇಳಿ ತಮ್ಮ ಉದಾರತೆಯನ್ನು ಮೆರೆದರು.


ಕಾವಲು ಸಿಬ್ಬಂದಿಗಳು “ದಯಮಾಡಿ ನಮ್ಮನ್ನು ಕ್ಷಮಿಸಿ ಸ್ವಾಮಿ. ವಿನಯವಂತಿಕೆಗೆ, ಸರಳತೆಗೆ
ಗೌರವ ಕೊಡಬೇಕೆಂಬುದನ್ನು ತಮ್ಮಿಂದ ಕಲಿತೆವು” ಎಂದರು. ಈಶ್ವರಚ೦ದ್ರರಿಗೆ ಕೈಮುಗಿದರು.
ಈಶ್ವರಚಂದ್ರರು ಅವರಿಗೆ-ಸಮಾಧಾನ ಮಾಡಿ ಶುಭಕೋರಿ ಮನೆಗೆ ಮರಳಿದರು.


ಸರಳತೆಯು ಘನ ವ್ಯಕ್ತಿತ್ವವನ್ನು ರೂಪಿಸುತ್ತದೆ.


ಅ) ಕೇಳಿದ ಪದಗಳು : ಇವುಗಳನ್ನು ಗಟ್ಟಿಯಾಗಿ ಓದಿ.


ಸಭಾಂಗಣ ಉಡುಗೆ ಹೆಮ್ಮೆ ಸಮಾರಂಭ ಅತಿಥಿ
ಪ್ರೋತ್ಸಾಹ ಏರ್ಪಾಡು ದಯವಿಟ್ಟು ಉದಾರತೆ ವ್ಯವಸ್ಥೆ
ಮೂರ್ಹ ಗೌರವ ಪ್ರಯತ್ನ ವಿನಯ ಆಹ್ವಾನ


ವ್ಯವಸ್ಥಾಪಕ ಠಾಕುಠೀಕು ಗಣ್ಯವ್ಯಕ್ತಿ ಸಮಾಧಾನ ಕಾವಲು
ಕರ್ತವ್ಯನಿಷ್ಠ್ಟೆ ಶುಭ


ಆ) ಓದಿ ತಿಳಿಯಿರಿ :


ಸಭಾಂಗಣ -
ಸಮಾರಂಭ -
ಆಮಂತಿಸು -
ಕಾವಲು ದ
ಉಡುಗೆ
ಮೂರ -
ಬದಿ —
ವಿನಯ —
ತುರಾಯಿ -
ಹೆಮ್ಮೆ —
ಪ್ರೋತ್ಸಾಹ -


ಸಮಾರಂಭಗಳು ನಡೆಯುವ ಸ್ಥಳ
ಕಾರ್ಯಕ್ರಮ
ಕರೆಯುವುದು, ಆಹ್ವಾನಿಸುವುದು


ರಕ್ಷಣೆ
[VY


ಅ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :


೧.


lo


ಆಗ್ರ


ಅದು ಯಾರನ್ನು ಗೌರವಿಸುವ ಸಮಾರಂಭವಾಗಿತ್ತು?


ಆ) ಖಾಲಿ ಬಿಟ್ಟರುವ ಜಾಗಗಳಲ್ಲಿ ಸರಿಯಾದ ಪದ ತುಂಬಿರಿ :


ಈ. ಸಮಾರಂಭಕ್ಕೆ ಬರುತ್ತಿದ್ದವರನ್ನು MSS ಬರಮಾಡಿಕೊಳ್ಳುತ್ತಿದ್ದರು.
೨. ಹಾರ ತುರಾಯಿಗಳೊಂದಿಗೆ ಶಾಲು ಹೊದಿಸಿ ೬
೩. ಕಾವಲುಗಾರರಿಂದ ಆದ ೬೮ಸಿ ಕ್ಷಮೆ ಕೋರಿದರು.


ಇ) ಈ ಮಾತನ್ನು ಯಾರು ಯಾರಿಗೆ ಹೇಳಿದರು?


೧.“ಅವರ ಕರ್ತವ್ಯ ನಿಷ್ಠೆ ಕಂಡು ನನಗೆ ಹೆಮ್ಮೆಯಾಗಿದೆ”


ಯಾರು ಹೇಳಿದರು? ...............
ಯಾರಿಗೆ ಹೇಳಿದರು? ...............
೨.“ದಯಮಾಡಿ ನಮ್ಮನ್ನು ಕ್ಷಮಿಸಿ ಸ್ವಾಮಿ.”
ಯಾರು ಹೇಳಿದರು? .............
ಯಾರಿಗೆ ಹೇಳಿದರು? .......ಬಟ್ಟು ಇಟ್ಟವು


ಈ) ಕೊಟ್ಟರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ವಾಕ್ಯ ಬರೆಯಿರಿ :
೧. ಹಿರಿಯರನ್ನು ಅನೇಕ: ಆಮಂತ್ರಿಸಲಾಗಿತ್ತು ಅಲ್ಲಿಗೆ


ಉ) ಮಾದರಿಯಂತೆ ಪದಗಳನ್ನು ಬರೆಯಿರಿ :
ಮಾದರಿ: ವ್ಯವಸ್ಥೆ - ಅವೃವಸೆ
ಛ ರ್‌ಂ

Ss SNES


ಟಕೆ
೩. ಸಮಾಧಾನ ......
೪,


ಚಟುವಟಿಕೆ :


ಅ) ಈ ವಾಕ್ಯಗಳನ್ನು ನಕಲು ಮಾಡಿರಿ :


9. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ


ಸಾಮರ್ಥ್ಯ : ಈ ಗದ್ಯ ಕಲಿಕೆಯೊಂದಿಗೆ ವಿನಯಪೂರ್ವಕವಾಗಿ ಮಾತನಾಡುವ ಸಾಮರ್ಥ್ಯ
ಗಳಿಸುವಿರಿ.


ಹಿಹಿಯಾ


ಪಾಠ - ೧೪
ಕಡಲು (ಪದ್ಯ)


ಹೋಗುವ ಬಾರ ಕಡಲಿನ ತೀರಕೆ
ಸುಂದರ ನೋಟವ ನೋಡಲಿಕೆ । ಪ ॥


ತೀರದ ತುಂಬಾ ಮರಳಿನ ರಾಶಿ
ಹರಡಿದೆ ಕಪ್ಪೆಯ ಚಿಪ್ಪಿನ ರಾಶಿ
ಆಡುವ ಬಾ “ಕುಣಿದಾಡುವ ಬಾ
ಕಪ್ಪೆಯ ಗೂಡನು ಕಟ್ಟುವ ಬಾ॥(೧॥


ಕಡಲಾಗಿದೆ ನೀರಿನ ಒಡಲು
ಬಾನಂಚಿನವರೆಗೂ ನೀರಿನ ಮಡಿಲು
ತೆರೆತೆರೆಯಾಗಿ ಹರಿದಿದೆ ಹೊನಲು

ಅಲೆಗಳ ಅಬ್ಬರ ತುಂಬಿದೆ ಮುಗಿಲು ॥ ೨ ॥


ಕಡಲಿನ ತುಂಬಾ ಜಲಚರ ಪ್ರಾಣಿ
ಕಡಲಿನಾಳದಲ್ಲಿ ರತ್ನದ ಗಣಿ
ಸುಂದರ ಸೊಬಗನು ನೀಡುವ ಖಣಿ


ನಿನಗೆ ನಾವು ಸದಾಯಣಿ. ೩ ॥


ಅ) ಓದಿದ ಪದಗಳು : ಅವುಗಳನ್ನು ಸ್ಪಷ್ಟವಾಗಿ ಉಚ್ಚರಿಸಿ.


ಕಡಲಿನ ತೀರಕೆ ಸುಂದರ ದೃಶ್ಯವ ನೋಡಲಿಕೆ
ತುಂಬಾ ಮರಳಿನ ರಾಶಿ ಕಪ್ಪೆಚಿಪ್ಪಿನ ಆಡುವ
ಕುಣಿದಾಡುವ ಕಪ್ಪೆಗೂಡನು ಒಡಲು ಮಡಿಲು ಹೊನಲು
ಮುಗಿಲು ಜಲಚರ ರತ್ನಗಳು ಸೊಬಗು ಖಣಿ


ಆ) ಪದಗಳ ಅರ್ಥ :


ಕಡಲು - ಸಮುದ

ದೃಶ್ಯ - ನೋಟ

ಒಡಲು - ದೇಹ
ಬಾನಂಚು - ಆಕಾಶದ ಕೊನೆ
ಹೊನಲು - ನದಿ

ಮುಗಿಲು - ಮೋಡ


ಅ) ಈ ಪದ್ಯವನ್ನು ಗಟ್ಟಿಯಾಗಿ ಓದಿ ರಾಗವಾಗಿ ಹಾಡಿ :


ಆ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :
೧. ಕಡಲಿನ ತೀರದ ದೃಶ್ಯ ನೋಡಲಿಕೆ ಹೇಗೆ ಕಾಣುತ್ತದೆ?


ಅ) ಖಾಲಿ ಬಿಟ್ಟ ಜಾಗಗಳಲ್ಲಿ ಸರಿಯಾದ ಪದ ತುಂಬಿರಿ :


೧ ಹೋಗುವ ಚಾರ ಫು ಟಟ; ತೀರಕೆ.
ಆ. ತೀರದ ತರಬ ವಿಟ ರಾಶಿ.

ಆ ಬಂ 2 ಅ ಲಅಚಫಚಚ್ಚಚ್ರ ಹೊನಲು.
ಆ. ಕಡಲಿನ ತುರಿಚಾ ಬತ ಪ್ರಾಣಿ


ಈ) ಮಾದರಿಯಂತೆ ಪ್ರಾಸಪದಗಳನ್ನು ಬರೆಯಿರಿ :


ಮಾದರಿ: ತೀರಕೆ -.. ನೋಡಲಿಕೆ
ಒಡಲು —
ಹೊನಲು -
ಪ್ರಾಣಿ -
ಚಟುವಟಿಕೆ :


ಅ) ಈ ಪದ್ಯವನ್ನು ಹದಿ :
ಕರಡಿ


ಕರಡಿ ಬೆಟ್ಟ ಹತ್ತಿತು

ಅತ್ತ ಇತ್ತ ನೋಡಿತು
ಹಲಸಿನ ಮರ ಏರಿತು
ಹಣ್ಣು ಕಿತ್ತು ತಂದಿತು
ತೊಳೆ ಬಿಡಿಸಿ ಇಟ್ಟಿತು
ಅದಕೆ ಜೇನು ಬೆರೆಸಿತು
ಹೊಟ್ಟೆ ಬಿರಿಯ ತಿಂದಿತು
ಮಲಗಿ ನಿದ್ದೆ ಹೊಡೆಯಿತು.


ಆ) ಈ. ಕಥೆಯನ್ನು ಗಟ್ಟಿಯಾಗಿ ಓದಿ :


ಒಂದು ಸುಂದರವಾದ ಕೊಳ. ಸುತ್ತಮುತ್ತ ಎತ್ತರವಾದ ಮರಗಳು. ಅಲ್ಲಿ ಹರಿದಾಡುತ್ತಿದ್ದ
ಇರುವೆಯೊಂದು ಒಮ್ಮೆ ನೀರಿನಲ್ಲಿ ಬಿದ್ದುಬಿಟ್ಟಿತು. ಮರದ ಕೊಂಬೆಯ ಮೇಲೆ ಕುಳಿತಿದ್ದ ಒಂದು
ಪಾರಿವಾಳವು ಅದನ್ನು ನೋಡಿತು. ಅದು ಒಂದು ಎಲೆಯನ್ನು ಇರುವೆಯ ಹತ್ತಿರ ನೀರಿನ
ಮೇಲೆ ಹಾಕಿತು. ಇರುವೆ ಎಲೆಯ ಮೇಲೆ ಹತ್ತಿ ಕ್ಷೇಮವಾಗಿ ದಡವನ್ನು ಸೇರಿತು. ಒಂದು ದಿನ
ಒಬ್ಬ ಬೇಟೆಗಾರನು ಅಲ್ಲಿಗೆ ಬಂದನು. ಮರದ ಮೇಲಿದ್ದ ಪಾರಿವಾಳವನ್ನು ನೋಡಿದನು. ಅದಕ್ಕೆ
ಬಾಣವನ್ನು ಗುರಿ ಇಟ್ಟನು. ಅದನ್ನು ಇರುವೆ ನೋಡಿತು. ಅದು ಹೋಗಿ ಬೇಟೆಗಾರನ ಕಾಲನ್ನು
ಕಚ್ಚಿತು. ಆಗ ಅವನ ಗುರಿತಪ್ಪಿ ಬಾಣವು ನೀರಿನಲ್ಲಿ ಬಿತ್ತು ಪಾರಿವಾಳವು ಹಾರಿಹೋಯಿತು.
ಹೀಗೆ ಇರುವೆಯು ತನ್ನ ಪ್ರಾಣವನ್ನು ಕಾಪಾಡಿದ ಪಾರಿವಾಳವನ್ನು ರಕ್ಷಿಸಿತು.


ನೀತಿ : ಇತರರಿಗೆ ಸಹಾಯ ಮಾಡಬೇಕು. ಸಹಾಯ ಮಾಡಿದವರನ್ನು ಸ್ಮರಿಸಬೇಕು.


ಸಾಮರ್ಥ್ಯ : ಈ ಪದ್ಯ ಕಲಿಕೆಯೊಂದಿಗೆ ಪ್ರಾಸ ಪದ್ಯವನ್ನು ಹಾಡುವ ಮತ್ತು ಸರಳ


ಕಥೆಗಳನ್ನು ಗಟ್ಟಿಯಾಗಿ ಓದುವ ಸಾಮರ್ಥ್ಯ ಪಡೆಯುವೆ.


ನಿನಗೆ ಇಷ್ಟವಾದ ಯಾವುದಾದರು ನಾಲ್ಕು ಪಕ್ಷಿಗಳ ಚಿತ್ರಗಳನ್ನು ಸಂಗ್ರಹಿಸಿ ಇಲ್ಲಿ ಅಂಟಿಸಿ.


ಪಾಠ - ೧೫


ಸಹಬಾಳ್ವೆ (ಗದ್ಯ) ಗುಗ
ರಾರಾರ್ಪಾತಾತತ: ಹ
ಮರಗಳು ನಮಗೆ ಏನೇನು ಕೊಡುತ್ತವೆ? ಯೋಚಿಸಿ ಖಾಲಿ ೩77214


ಇರುವ ಎಲೆಗಳಲ್ಲಿ ಬರೆಯಿರಿ:


ಒಂದು ದಟ್ಟವಾದ ಕಾಡು. ಆ ಕಾಡಿನ ಅಂಚಿನಲ್ಲಿ ಒಂದು ದೊಡ್ಡ ಮರವಿತ್ತು. ಅಜ್ಜಿಯೊಬ್ಬಳು
ಒಣಕಟ್ಟಿಗೆ ಆರಿಸುತ್ತಾ ಆ ಮರದ ಕೆಳಗೆ ಬಂದಳು. ಆಗ ಊಟದ ಸಮಯ. ಅಜ್ಜಿ ಆ ಮರದ
ಕೆಳಗೆ ಕುಳಿತು ತನ್ನ ಊಟದ ಬುತ್ತಿಯನ್ನು ಬಿಚ್ಚಿದಳು. ಇದನ್ನು ಗಮನಿಸಿದ ಅಳಿಲು, ಕಾಗೆ,
ಗುಬ್ಬಚ್ಚಿ, ಕೋತಿಗಳು ಎಂದಿನಂತೆ ಅಜ್ಜಿಯ ಬಳಿಗೆ ಬಂದವು. ಅಜ್ಜಿಯನ್ನೇ ಪ್ರೀತಿಯಿಂದ
ನೋಡುತ್ತಿದ್ದವು.ಇವೆಲ್ಲವನ್ನೂ ನೋಡಿ ಅಜ್ಜಿಯ ನಾಯಿ ಖುಷಿಯಿಂದ ಬಾಲವಾಡಿಸುತ್ತಿತ್ತು. ಅಜ್ಜಿ
ಊಟವನ್ನು ಬುತ್ತಿಯಿಂದ ತೆಗೆದಳು. ಸ್ವಲ್ಪ ಆಹಾರವನ್ನು ನಾಯಿ ಮತ್ತು ಪಕ್ಷಿಗಳಿಗೆ ಎಲೆಗಳ
ಮೇಲೆ ಹಾಕಿದಳು. ಬುಟ್ಟಿಯಲ್ಲಿದ್ದ ಬಾಳೆಹಣ್ಣುಗಳನ್ನು ಅಳಿಲು ಮತ್ತು ಕೋತಿಗಳಿಗೆ ನೀಡಿದಳು.
ತಾನೂ ಊಟಮಾಡತೊಡಗಿದಳು. ನಡುನಡುವೆ ಪ್ರಾಣಿಪಕ್ಷಿಗಳ ಜೊತೆ ಮಾತನಾಡುತ್ತಾ
ಸಂತೋಷಪಡುತ್ತಿದ್ದಳು.


ಅದೇ ಸಮಯಕ್ಕೆ ರಾಜನ ಸೇವಕರು ಆ ಮರದ ಬಳಿಗೆ ಬಂದರು. ತಾವು ತಂದ ಊಟದ
ಬುತ್ತಿಯನ್ನು ಬಿಚ್ಚಿದರು. ಹೊಟ್ಟೆ ತುಂಬಾ ತಿಂದರು. ಅಜ್ಜಿ ಪ್ರಾಣಿಪಕ್ಷಿಗಳೊಡನೆ ಮಾತನಾಡುತ್ತಾ
ಸಂತೋಷವಾಗಿ ಇರುವುದನ್ನು ಕಂಡರು. ಒಬ್ಬ ಸೇವಕ ಅಜ್ಜಿಯನ್ನು ನೋಡಿ “ಇವಳಿಗೇ
ಸರಿಯಾಗಿ ಹೊಟ್ಟೆಗೆ ಊಟವಿಲ್ಲ, ಕಟ್ಟಿಗೆ ಮಾರಿಕೊಂಡು ಜೀವಿಸುತ್ತಿದ್ದಾಳೆ. ಅಂತಹದರಲ್ಲಿ ದೊಡ್ಡ
ದಾನಿಯಂತೆ ಪ್ರಾಣಿ ಪಕ್ಷಿಗಳಿಗೆ ಊಟ ಹಾಕುತ್ತಿದ್ದಾಳೆ” ಎಂದು ಗೇಲಿ ಮಾಡಿದನು.


ಈ ಮಾತನ್ನು ಕೇಳಿದ ಅಜ್ಜಿಗೆ ಬೇಸರವಾಯಿತು. ಸೇವಕರನ್ನು ಕುರಿತು - “ಅಯ್ಯಾ ಸೇವಕರೇ,
ನಾನು ತಿನ್ನುವುದರಲ್ಲಿ ಸ್ವಲ್ಪ ಆಹಾರವನ್ನು ಅವುಗಳಿಗೆ ಕೊಟ್ಟರೆ ನನ್ನ ದೇಹ ಬಡವಾಗುತ್ತದೆಯೇ?
ನಾನು ದುಡಿದ ಅನ್ನವನ್ನು ಹಂಚಿಕೊಂಡು ತಿಂದರೆ ನಿಮಗೆ ಏನು ನಷ್ಟ” ಎಂದು ಕೇಳಿದಳು.


ಅನಂತರ ಮರದ ಬುಡಕ್ಕೆ ಒರಗಿ ವಿಶ್ರಾಂತಿ ಪಡೆಯಲು ಕುಳಿತಳು. ಇದನ್ನು ಗಮನಿಸಿದ
ಮತ್ತೊಬ್ಬ ಸೇವಕ “ಏ ಮುದುಕಿ. ನೀನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸಿದ್ದು ಸಾಕು. ಈಸ ನಾವು ಈ
ಮರವನ್ನು ಕಡಿಯಬೇಕು. ಇದು ನಮ್ಮ ರಾಜನ ಆಜ್ಜೆ ದೂರ “ಮೋಗು” ಎಂದು ಹೇಳಿದನು.
ಇವನ ಮಾತಿನಿಂದ ಅಜ್ಜಿಗೆ ತುಂಬಾ ಕೋಪ ಬಂದಿತು. ಸೇವಕರ ಕಡೆಗೆ ತಿರುಗಿ “ಈ ಮರವನ್ನು
ಯಾರೂ ಕಡಿಯುವಂತ್ರಿಲ್ಲ. ಇದು ನನ್ನ ಪ್ರೀತಿಯ ಮರ. ಇದು ಎಷ್ಟೋ ದಾರಿಹೋಕರಿಗೆ ನೆರಳು.
ನೀಡುತ್ತಿದೆ. ಪ್ರಾಣಿಪಕ್ಷಿಗಳಿಗೆ ಆಸರೆಯಾಗಿದೆ. ನೋಡಿ, ಅಲ್ಲಿ ಮರದ ಮೇಲೆ ಹತ್ತಾರು ಪ್ರಾಣಿಪಕ್ಷಿಗಳ
ಗೂಡುಗಳಿವೆ. ಅವುಗಳಲ್ಲಿ ಮರಿಗಳಿವೆ, ಮರವನ್ನು ಕಡಿದರೆ ಅವೆಲ್ಲಾ ನಾಶವಾಗುವುದಿಲ್ಲವೇ?
ಹೋಗಿ...... ಹೋಗಿ....... ನೆಲಕ್ಕೆ ಉರುಳಿರುವ ಮರವನ್ನು ಹುಡುಕಿ ತೆಗೆದುಕೊಂಡು ಹೋಗಿ”


ಅಜ್ಜಿ ಕೋಪದಿಂದ ಮಾತನಾಡುತ್ತಿರುವುದನ್ನು ಕಂಡು ಕಾಗೆಗಳು, ಕೋತಿಗಳು ಸೇವಕರನ್ನು
ಸುತ್ತುವರಿದವು. ಕೋತಿಗಳು ಸೇವಕರನ್ನು ಪರಚಲು ಹೋದವು. ಕಾಗೆಗಳು ಅವರ ತಲೆಯ
ಮೇಲೆ ಕಾ.... ಕಾ...... ಎಂದು ಅರಚುತ್ತಾ ಹಾರಾಡತೊಡಗಿದವು. ಅಜ್ಜಿಯ ನಾಯಿ ಬೊಗಳಲು
ಆರಂಭಿಸಿತು. ಇವುಗಳ ವಿಚಿತ್ರ ವರ್ತನೆಯನ್ನು ನೋಡಿದ ಸೇವಕರು ಭಯಪಟ್ಟರು. ಆದರೂ


ರಾಜನ ಆಜ್ಞೆಯನ್ನು ನೆನೆದು ಮರ ಕಡಿಯಲು ಮುಂದಾದರು. ಮತ್ತೆ ಕೋತಿ, ಕಾಗೆಗಳು
ಸೇವಕರನ್ನು ಕಚ್ಚಿ ಕುಕ್ಕತೊಡಗಿದವು. ಪ್ರಾಣಿ ಪಕ್ಷಿಗಳ ಕೋಪ ಕಂಡು ಸೇವಕರು ಕಂಗಾಲಾಗಿ
ಅರಮನೆಯ ಕಡೆ ಓಡಿದರು. ಅಲ್ಲಿ ನಡೆದ ವಿಷಯವನ್ನು ಮಹಾರಾಜರಿಗೆ ತಿಳಿಸಿದರು.


ಈ ಸುದ್ದಿ ತಿಳಿದ ಮಹಾರಾಜ ಮಾರನೆಯ ದಿನ ಅಲ್ಲಿಗೆ ಬಂದನು. ಅಜ್ಜಿ ಪ್ರೀತಿಯಿಂದ
ಪ್ರಾಣಿಪಕ್ಷಿಗಳಿಗೆ ಆಹಾರ ನೀಡುತ್ತಿರುವುದನ್ನು ಗಮನಿಸಿದನು. ಅವುಗಳೊಂದಿಗೆ ಸಂತೋಷದಿಂದ
ಇರುವುದನ್ನು ಕಂಡನು.


ಅನ೦ತರ ತನ್ನ ಕಡೆಯವರಿಗೆ “ಸೇವಕರೆ, ಈ ಅಜ್ಜಿಗೆ ಪ್ರಾಣಿ-ಪಕ್ಷಿಗಳ ಮೇಲೆ ಇಷ್ಟೊಂದು
ಮಮತೆ ಇದೆ. ನಾನು ಈ ರಾಜ್ಯದ ರಾಜ. ಎಲ್ಲರ ಹಿತ ಕಾಪಾಡುವುದು ನನ್ನ ಕರ್ತವ್ಯ. ಕೇವಲ
ನಮ್ಮ ಅನುಕೂಲಕ್ಕಾಗಿ ಬೇರೆಯವರಿಗೆ ತೊಂದರೆ ಕೊಡಬಾರದು. ಆದ ಕಾರಣ ಮರಗಳನ್ನು
ಕಡಿಯುವುದು ಬೇಡ. ಇನ್ನು ಮುಂದೆ ನಾವೆಲ್ಲರೂ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸೋಣ.
ಪ್ರಾಣಿ-ಪಕ್ಷಿಗಳನ್ನು ರಕ್ಷಿಸೋಣ. ಎಲ್ಲರೂ ಬನ್ನಿ ಅರಮನೆಗೆ ಹಿಂತಿರುಗಿ ಹೋಗೋಣ” ಎಂದು
ಹೇಳಿ ಹೊರಟನು.


ಅ. ಓದಿದ ಪದಗಳು : ಇವುಗಳನ್ನು ಸ್ಪಷ್ಟವಾಗಿ ಉಚ್ಚರಿಸಿ.


ಸಹಬಾಳ್ವೆ ಸೇವಕರು ದಾರಿಹೋಕರು ಕಚ್ಚು ಅಂಚು
ದಾನಿ ನೆರಳು ಕುಕ್ಕು ಒಣಕಟ್ಟಿಗೆ ಗೇಲಿ
ಹತ್ತಾರು ಗಮನಿಸು ಬುತ್ತಿ ಬೇಸರ ಗೂಡು
ಅಳಿಲು ಹಂಚಿಕೊಂಡು ನಾಶ ರಹಿತ ಕಾಗೆ

ನಷ್ಟ ಜೋರುಮಾಡು ಕಾಪಾಡು ಗುಬ್ಬಚ್ಚಿ ವಿಶ್ರಾಂತಿ
ಪರಚು ತೊಂದರೆ ಆಜ್ಞೆ ಅರಚು ಹಿಂತಿರುಗು
ಪಕಿಗಳು ಕೋಪ ಬೊಗಳು ಅರಮನೆ ಸಂತೋಷ
ಪ್ರೀತಿಯ ವರ್ತನೆ ಕರ್ತವ್ಯ ಅನುಕೂಲ ಗಿಡಮರ


ಅ)


ಆ)


. ಓದಿ ತಿಳಿಯಿರಿ :


ಸಹಬಾಳ್ವೆ ಸಹಜೀವನ, ಕೂಡಿಬಾಳುವುದು
ಆಜ್ಞೆ ಅಪ್ಪಣೆ, ಆದೇಶ
ಕಾಪಾಡು ರಕ್ಷಿಸು
ದಾನ ಉಚಿತವಾಗಿ ನೀಡುವುದು
ಆಸರೆ ಆಶ್ರಯ
ಬುತ್ತಿ ಆಹಾರದ ಗಂಟು
ಕಂಗಾಲು ಗೊಂದಲ, ತಬ್ಬಿಬ್ಬು
ಮಮತೆ ಪ್ರೀತಿ, ವಿಶ್ವಾಸ
ಹಿತ — ಒಳ್ಳೆಯದು
ಅಭ್ಯಾಸ


ಈ ಪ್ರಶ್ನೆಗಳಿಗೆ ಉತ್ತರ ಹೇಳಿ :

೧. ಅಜ್ಜಿಯು ಏನನ್ನು ಆರಿಸುತ್ತಾ ಬಂದಳು?

೨. ಅಜ್ಜಿಯು ಯಾರೊಡನೆ ಮಾತನಾಡುತ್ತಾ ಸಂತೋಷಪಡುತ್ತಿದ್ದಳು?

೩. ಸೇವಕರಿಗೆ ಅಜ್ಜಿಯು ಬೇಸರದಿಂದ ಏನೆಂದು ಹೇಳಿದಳು?

೪. ಅಜ್ಜಿಯು ಕೋಪದಿಂದ ಮಾತನಾಡುವುದನ್ನು ಕಂಡು ಪ್ರಾಣಿಪಕ್ಷಿಗಳು ಏನು ಮಾಡಿದವು?
೫. ಸೇವಕರು ಯಾರಿಗೆ. ಸುದ್ದಿಯನ್ನು ತಿಳಿಸಿದರು?

ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :

೧. ಅಜ್ಜಿಯ ಬಳಿಗೆ ಯಾರು ಬಂದರು?


lo
G


Go
2
43

₹5
೭೬




&
RC)


೪, ರಾಜನ ಸೇವಕರು ಏನನ್ನು ನೋಡಿ ಭಯಪಟ್ಟರು?


ಇ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ :
೧. “ಇವಳಿಗೇ ಸರಿಯಾಗಿ ಹೊಟ್ಟೆಗೆ ಊಟವಿಲ್ಲ”
ಅಂಗಾತ RSL ana
ಯಾರಿಗೆ ಹೇಳಿದರು ...... ರರ
೨. “ಈ ಮರವನ್ನು ಯಾರೂ ಕಡಿಯುವಂತಿಲ್ಲ.”
RE BOOST ANON pss
ರಿಖಾರಗೆ ಹೌದ Cn iN sd
೩. “ಎಲ್ಲರ ಹಿತ ಕಾಪಾಡುವುದು ನನ್ನ ಕರ್ತವ್ಯ.”
RE 5೪೫ರ ಎತ್ತ SCS isis ಸಾಚಾ
ಜಾರಿಗೆ ORE ಬಾ ಫ್ರೇನ್ರು nda esses


ಈ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ :


೧. ಪ್ರೀತಿ ಸ ಬತತ ಬಾನಯಾನ ESN SN
SS ES
ಚ ಬಜ 54 ೬ ಫ್‌ ರಹ ಚ ರ
ಜುಂ ಟ್ಚಚ್ಚೋ್‌ಾಾ 8 ಚತ್ರಚ್ರಾಾಚ್ರಾಾರ್ರಟಚ್ರರ್ಚ್ಟೀಚ್ಚರ್ಟ್ಷಿ


ಉ) ಮಾದರಿಯಂತೆ ಪದಗಳನ್ನು ಬಿಡಿಸಿ ಬರೆಯಿರಿ :
ಮಾದರಿ : ಪ್ರೀತಿಯಿಂದ - ಪ್ರೀತಿ ೪ ಇಂದ
೧. ಖುಷಿಯಿಂದ —
೨. ಮಮತೆಯಿಂದ -
೩. ಆಸೆಯಿಂದ —


ಊ) ಈ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ :
೧. ರಾಜನ ಸೇವಕನು ಅಜ್ಜಿಯನ್ನು ಏನೆಂದು ಗೇಲಿ ಮಾಡಿದನು?


ಅವನು ಕಾಡು ನೋಡಲು


ಮೇಲಿನ ಕೋಷ್ಟಕದ ಸಹಾಯದಿಂದ ನಾಲ್ಕು ವಾಕ್ಯಗಳನ್ನು ಬರೆಯಿರಿ :
ಮಾದರಿ : ನಾನು ಕಾಡು ನೋಡಲು ಹೋಗುತ್ತೇನೆ.


ಎ) ಅಂತ್ಯಾಕ್ಷರವನ್ನು ಬಳಸಿ ಮಾದರಿಯಂತೆ ಎರಡೆರೆಡು ಪದರಚನೆ ಮಾಡಿ :
ಮಾದರಿ : ಕಮಲ - ಲತ - ತಲೆ
ಕಾನನ -
ಆಹಾರ -
ಸಮಯ -
ಚಟುವಟಿಕೆ :
೧. ಶಾಲೆಯ ಆವರಣದಲ್ಲಿ ಗಿಡಗಳನ್ನು ಬೆಳೆಸಿರಿ.
೨. ಹೊರಸಂಚಾರಕ್ಕೆ ಹೋಗಿ ಅಲ್ಲಿ ನೋಡಿದ ಪಕ್ಷಿಗಳ ಹೆಸರುಗಳನ್ನು ಪಟ್ಟಿ ಮಾಡಿರಿ.
ಸಾಮರ್ಥ್ಯ : ಸೂಚನೆಗಳನ್ನು ಅನುಸರಿಸಿ ಸರಳ ವಾಕ್ಯ್ಕಗಳನ್ನು.ಬರೆಯುವ
ಸಾಮರ್ಥ್ಯ ಗಳಿಸುವೆ.


ನಿನಗೆ ಇಷ್ಟವಾದ ನಾಲ್ಕು ಸಾಕು ಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಿ ಇಲ್ಲಿ ಅಂಟಿಸು.


ಕಾವೇರಿ (ಗದ್ಯ)


ಡ್‌ ಪಾಠಪೂರ್ವ ಚಟುವಟಿಕೆ :


ಕನ್ನಡ ನಾಡಿನ ಜೀವನದಿ ಕಾವೇರಿ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಹರಿಯುವ ಮುಖ್ಯ
ನದಿ. ಇದು ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟಸಾಲಿನ ತಲಕಾವೇರಿಯಲ್ಲಿ ಹುಟ್ಟುತ್ತದೆ.


ಅಲ್ಲಿಂದ ಸ್ವಲ್ಪ ದೂರ ನೆಲದೊಳಗೆ ಹರಿಯುತ್ತದೆ. ಅನಂತರ ಭಾಗಮಂಡಲದಲ್ಲಿ ಕಾವೇರಿಗೆ
ಕನಿಕೆ, ಜ್ಯೋತಿ ಎ೦ಬ ಎರಡು ನದಿಗಳು ಸೇರುತ್ತವೆ. ಈ ಸ್ಥಳಕ್ಕೆ “ತ್ರಿವೇಣಿ ಸಂಗಮ” ಎನ್ನುತ್ತಾರೆ.
ಇದೊಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಕಾವೇರಿ ನದಿಯನ್ನು "ಕೊಡಗಿನ ಕಾವೇರಿ” ಎಂದು
ಕರೆಯುತ್ತಾರೆ. ಕಾವೇರಿ ನದಿ ಹರಿದು ಹೋಗುವ ಮಾರ್ಗದಲ್ಲಿ ಭಾಗಮಂಡಲ, ರಾಮನಾಥಪುರ,
ಚುಂಚನಕಟ್ಟೆ, ಶ್ರೀರಂಗಪಟ್ಟಣ, ತಿರುಮಕೂಡಲು, ಮುಡುಕುತೊರೆ, ತಲಕಾಡು ಮತ್ತು
ಶಿವನಸಮುದ್ರ ಮುಂತಾದ ಪ್ರಮುಖ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಿವೆ.


ಕಾವೇರಿ ನದಿಯು ಹರಿಯುತ್ತಾ ಹರಿಯುತ್ತಾ ಹಲವಾರು ಉಪನದಿಗಳನ್ನು ಸೇರಿಸಿಕೊಳ್ಳುತ್ತದೆ.
ಕಾವೇರಿ ನದಿಗೆ ಅಡ್ಡಲಾಗಿ ಅನೇಕ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಇವುಗಳಿಗೆ ಕಾಲುವೆಗಳನ್ನು ನಿರ್ಮಿಸಿ
ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇದರಿಂದ ರೈತರು ಬೇಸಾಯ, ಪಶುಪಾಲನೆ,
ಮೀನುಸಾಕಾಣಿಕೆ ಮಾಡಲು ಅನುಕೂಲವಾಗಿದೆ. ಕಾವೇರಿಯ ಅಣೆಕಟ್ಟುಗಳಲ್ಲಿ ಕೃಷ್ಣರಾಜಸಾಗರ
ಮೊದಲನೆಯದು ಮತ್ತು ದೊಡ್ಡದು. ಇದನ್ನು ಮಂಡ್ಯ ಜಿಲ್ಲೆಯ ಕನ್ನಂಬಾಡಿಯೆಂಬ ಊರಿನ
ಬಳಿ ನಿರ್ಮಿಸಲಾಗಿದೆ. ಇದು ಕೆ.ಆರ್‌.ಎಸ್‌. ಎಂದೇ ಪ್ರಸಿದ್ದಿ ಪಡೆದಿದೆ. ಇದನ್ನು ಭಾರತರತ್ನ
ಸರ್‌ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ
ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ.


ಈ ಅಣೆಕಟ್ಟು ಮೈಸೂರು ನಗರಕ್ಕೆ ಸಮೀಪದಲ್ಲಿದೆ. ಅಣೆಕಟ್ಟಿನ ಬಳಿ ಸುಂದರವಾದ
ಬೃಂದಾವನವನ್ನೂ ನಿರ್ಮಿಸಲಾಗಿದೆ. ಇಲ್ಲಿಯ ಸೊಬಗು ಕಣ್ಣುಗಳಿಗೆ ಹಬ್ಬವನ್ನು ಉಂಟು
ಮಾಡುತ್ತದೆ. ಸಂಗೀತ ಕಾರಂಜಿ ಕಣ್ಮನ ಸೆಳೆಯುತ್ತದೆ. ದೀಪಾಲಂಕಾರ ಮನಮೋಹಕವಾಗಿದೆ.


ಇವೆಲ್ಲವನ್ನು ನೋಡಲು ದೂರ ದೂರದ ಊರುಗಳಿ೦ದ ಜನರು ಪ್ರತಿನಿತ್ಯ ಬರುತ್ತಾರೆ.


ಕಾವೇರಿ ನದಿಯು ಕೆಲವು ಕಡೆ ಎತ್ತರ ಪ್ರದೇಶದಿಂದ ಧುಮುಕುತ್ತದೆ. ಇದರಿಂದ ಹಲವಾರು
ಸುಂದರ ಜಲಪಾತಗಳು ನಿರ್ಮಾಣವಾಗಿವೆ. ಚು೦ಚನಕಟ್ಟೆ, ಗಗನಚುಕ್ಕಿ, ಭರಚುಕ್ಕಿ, ಹೊಗೇನಕಲ್‌
ಜಲಪಾತಗಳು ಪ್ರಮುಖವಾದವು. ಮಳೆಗಾಲದಲ್ಲಿ ತುಂಬಿ ರಭಸದಿಂದ ಧುಮ್ಮಿಕ್ಕುವ ಜಲಪಾತಗಳ
ನೋಟ ರಮಣೀಯವಾಗಿರುತ್ತದೆ. ನದಿಯ ನೀರನ್ನು ಶುದ್ಧೀಕರಿಸಿ ಮಹಾನಗರ, ಪಟ್ಟಣಗಳಿಗೆ
ಕುಡಿಯಲು ಸರಬರಾಜು ಮಾಡಲಾಗುತ್ತದೆ. ಜೊತೆಗೆ ಕಾವೇರಿ ನದಿಯ ನೀರನ್ನು ವಿದ್ಯುತ್‌
ಉತ್ಪಾದನೆಗೂ ಬಳಸಲಾಗುತ್ತದೆ. ಇದಕ್ಕಾಗಿ ಕೃಷ್ಣರಾಜಸಾಗರ ಮತ್ತು ಶಿವನಸಮುದ್ರದಲ್ಲಿ ನೀರನ್ನು
ನಿಯಂತ್ರಿಸಲಾಗುತ್ತದೆ. ಇಲ್ಲಿಂದ ಶಿವನಸಮುದ್ರದಲ್ಲಿರುವ ವಿದ್ಯುತ್‌. ಉತ್ಪಾದನಾ ಕೇಂದ್ರಕ್ಕೆ
ವರ್ಷಪೂರ್ತಿ ನೀರನ್ನು ಒದಗಿಸಲಾಗುತ್ತದೆ. ಶಿವನಸಮುದ್ರವು 'ಏಷ್ಯಾಖಂಡದಲ್ಲಿಯೇ ಪ್ರಥಮ
ವಿದ್ಯುತ್‌ ಉತ್ಪಾದನಾ ಕೇಂದ್ರ ಎಂಬ ಕೀರ್ತಿಗೆ, ಪಾತ್ರವಾಗಿದೆ.


ನಮ್ಮ ರಾಜ್ಯದಲ್ಲಿ ಕಾವೇರಿ ನದಿಯ ಉಪಯೋಗ ಅಪಾರ. ಅಲ್ಲದೆ ನೆರೆಯ ರಾಜ್ಯವಾದ
ತಮಿಳುನಾಡಿನಲ್ಲಿ ಹರಿದು ಅಲ್ಲಿಯ ಜನರಿಗೂ ಉಪಕಾರ ಮಾಡುತ್ತದೆ. ಕಾವೇರಿ ನದಿ
ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಹರಿದು ಕೊನೆಗೆ ಬಂಗಾಳಕೊಲ್ಲಿ ಸೇರುತ್ತದೆ. ಕಾವೇರಿ
ನದಿಯು ದೇಶದ ಸಂಪತ್ತಿನ ಅಭಿವೃದ್ಧಿಗೆ ನಿರಂತರವಾಗಿ ತನ್ನ ಕೊಡುಗೆ ನೀಡುತ್ತಾ ಬಂದಿದೆ.


ನದಿಗಳು ಕೇವಲ ನೀರನ್ನು ಒಯ್ಯುವ ವಾಹಿನಿಗಳಲ್ಲ, ಅವುಗಳು ಜೀವ ಪರಿಸರದ
ಒಡನಾಡಿಗಳು.


ಅ) ಓದಿದ ಪದಗಳು : ಇವುಗಳನು


ಇತು
ಸ್ಪಷ್ಟವಾಗಿ ಉಚ್ಚರಿಸಿ.


ಕನ್ನಡನಾಡು ಅಣೆಕಟ್ಟು ವಿದ್ಯುತ್‌ ತಮಿಳುನಾಡು
ಜೀವನದಿ ಕಾಲುವೆ ದೀಪಾಲಂಕಾರ ಬಂಗಾಳಕೊಲ್ಲಿ
ಕರ್ನಾಟಕ ನೀರಾವರಿ ಜಲಪಾತ ಕೊಡಗು
ಸೌಲಭ್ಯ ಚುಂಚನಕಟ್ಟೆ ಅಭಿವೃದ್ಧಿ ತಲಕಾವೇರಿ
ಕೃಷ್ಣರಾಜಸಾಗರ ಭರಚುಕ್ಕಿ ಉತ್ಪಾದನೆ ಕನ್ನಂಬಾಡಿ


ಹೊಗೇನಕಲ್‌ ನಿಯಂತ್ರಿಸು ಮೈಸೂರು ರಮಣೀಯ


ಬೃ೦ದಾವನ ಶುದ್ಧೀಕರಿಸಿ ಶಿವನಸಮುದ್ರ ಸಂಗಮ
ಸಂಗೀತ ಕಾರಂಜಿ ಯಾತ್ರಾಸ್ಥಳ
ಆ) ಓದಿ ತಿಳಿಯಿರಿ :
ಜೀವನದಿ — ಎಂದೂ ಬತ್ತದ ನದಿ
ರಮಣೀಯ - ಚೆಲುವಾದ/ ಸುಂದರವಾದ
ಪ್ರೇಕ್ಷಣೀಯ - ನೋಡಲು ಅರ್ಹವಾದ, ರಮ್ಯವಾದ
ಶುದ್ದೀಕರಿಸು - ಶುಚಿಗೊಳಿಸು
ಜಲಪಾತ — ನೀರು ಧುಮುಕುವ ಸ್ಥಳ
ನಿಯಂತ್ರಿಸು - ಹಿಡಿತ, ಹತೋಟಿ
ಅಣೆಕಟು - ಹರಿಯುವ ನದಿ ನೀರಿಗೆ ಅಡ್ಡಲಾಗಿ ಕಟ್ಟಿದ ಕಟ್ಟಿ
ಉಪಕಾರ ಸಹಾಯ, ನೆರವು
ಅಭ್ಯಾಸ
ಅ) ಈ ಪ್ರಶ್ನೆಗಳಿಗೆ ಉತ್ತರ ಹೇಳಿರಿ :



೧. ಕಾವೇರಿ ನದಿಯನ್ನು ಏನೆಂದು ಕರೆಯುತ್ತಾರೆ?

೨. ಕಾವೇರಿ ನದಿಗೆ ತ್ರಿವೇಣಿ ಸಂಗಮದಲ್ಲಿ ಯಾವ ನದಿಗಳು ಸೇರುತ್ತವೆ?

೩. ಬೃಂದಾವನವನ್ನು ಎಲ್ಲಿ ನಿರ್ಮಿಸಲಾಗಿದೆ?

೪. ವಿದ್ಯುತ್‌ ಉತ್ಪಾದನಾ ಕೇಂದಕ್ಕೆ ಒದಗಿಸುವ ನೀರನ್ನು ಎಲ್ಲಿ ನಿಯಂತ್ರಿಸಲಾಗುವುದು?
೫. ಕಾವೇರಿ ನದಿ ಯಾವ ಯಾವ ರಾಜ್ಯಗಳಲ್ಲಿ ಹರಿಯುತ್ತದೆ?





ಆ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :
೧. ಕನ್ನಡ ನಾಡಿನ ಜೀವನದಿ ಯಾವುದು?


೨. ಕಾವೇರಿ ನದಿ ಎಲ್ಲಿ ಹುಟ್ಟುತ್ತದೆ?


ಅ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ :



ಕ್ಷ
೨. ಪಸಿದ್ಧಿ ಬ ಪಬ್‌ ಹುಜಖುಳ್ಣೋ್ಸ್ಸಲ್ಸಲ್ಸ್ಟಟ್ಬ8 88
೩.
ಲೈ
೫.


ಈ) “ಅ' ಪಟ್ಟಿಯಲ್ಲಿರುವ ಪದಗಳಿಗೆ ಸರಿಯಾದ ಪದವನ್ನು "ಆ' ಪಟ್ಟಿಯಿಂದ ಹೊಂದಿಸಿ
ಬರೆಯಿರಿ :


ಅ ಆ ಸರಿಯಾದ ಪದ
ಶೀರಂಗಪಟಣ ಅಣೆಕಟ್ಟು: ಸಸ
ಊ ಊ
ಕೃಷ್ಣರಾಜಸಾಗರ ಪೇಕಣೀಯ ಸಳ: ರಲ
ಎಡಿ ಜೈ (a)
ಭರಚುಕ್ಕಿ ವಿದ್ಯುತ್‌ ಉತ್ಪಾದನಾ ಕೇಂದ್ರ ಎ
ಶಿವನಸಮುದ್ರ OY


ಉ) ಈ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ :
೧. ಕಾವೇರಿ ನದಿ ರೈತರಿಗೆ ಹೇಗೆ ಅನುಕೂಲವಾಗಿದೆ?


ಚಟುವಟಿಕೆ :


೧. ಕಾವೇರಿ ನದಿಯಿಂದಾಗುತ್ತಿರುವ ಇನ್ನೂ ಹೆಚ್ಚಿನ ಉಪಯೋಗಗಳನ್ನು ಶಿಕ್ಷಕರಿಂದ
ಕೇಳಿ ತಿಳಿಯಿರಿ.


೨. ಪೋಷಕರೊಡನೆ ಕೆ.ಆರ್‌.ಎಸ್‌ಗೆ ಭೇಟಿ ನೀಡಿ ಅಲ್ಲಿಯ ಸೊಬಗನ್ನು ನೋಡಿ
ಆನಂದಿಸಿ.


೩. ಗದ್ಯಭಾಗದಲ್ಲಿ ಬಂದಿರುವ ಪ್ರಮುಖ ಸ್ಥಳಗಳನ್ನು ಶಿಕ್ಷಕರ ಸಹಾಯದಿಂದ
ಕರ್ನಾಟಕದ ಭೂಪಟದಲ್ಲಿ ಗುರುತಿಸಿ.


ಸಾಮರ್ಥ್ಯ : ಈ ಗದ್ಯದ ಕಲಿಕೆಯ ಜೊತೆಗೆ ಸುಮಾರು ಎರಡು ಸಾವಿರ ಪದಗಳನ್ನು
ಓದಿ ಗ್ರಹಿಸುವ ಸಾಮರ್ಥ್ಯ ಪಡೆಯುವಿರಿ.


ಹಿಹಿಮಿ


ಪಾಠ - ೧೭


ಚಿತ್ರಗಳನ್ನು ಗುರುತಿಸಿ. ಆರಿ


ತಾಯಿ ತಾನು ಮಗುವ ಹಡೆದು
ಜಗವ ಮರೆತಳು
ಮಗುವ ತನ್ನ ಇಡಿಯ ಜಗವು
ಎಂದು ಬಗೆದಳು


ಮಗುವು ದಿನವು ಆಡಿ ಬರಲು
ಹೆಮ್ಮೆ ಪಡುವಳು

ಮಗುವು ಬೇಗ ಬಾರದಿರಲು
ಕೂಗಿ ಕರೆವಳು


ತನ್ನ ನೂರು ಕಷ್ಟ ಸಹಿಸಿ
ಮಗುವ ಪೊರೆವಳು

ಹಲವು ಕೆಲಸ ಇರಲು ಬಿಟ್ಟು
ತಿಂಡಿ ಕೊಡುವಳು


ಮಗುವು ತನ್ನ ಕರುಳ ಕುಡಿಯು
ಎಂದು ಬಗೆವಳು
ಮಗುವಿನೊಡನೆ ದಿನದ ಕೆಲಸ
ಮಾಡಿ ಬಿಡುವಳು


ಮಗುವು ಅಳಲು ನೊಂದು ತಾನು


ಮನದಿ ಕನಲುವಳು

ತನ್ನ ಮಗುವ ನೋಡಿ

ಎಲ್ಲ ಮರೆವಳು
ಮಗುವೆ ನಾಳೆ ನಾಡ ಪ್ರಜೆಯು
ಎಂದು ನೆನೆವಳು
ಜಗಕೆ ಮಗುವ ಕೊಟ್ಟು ತಾನು
ತಾಯಿ ಆದಳು

- ಎ.ಕೆ. ರಾಮೇಶ್ವರ


ಅ) ಓದಿದ ಪದಗಳು : ಅವುಗಳನ್ನು ಸ್ಪಷ್ಟವಾಗಿ ಉಚ್ಚರಿಸಿ.


ತಾಯಿ ಮಗುವ ಹಡೆದು ಜಗವ ಮರೆತಳು
ಇಡಿಯ ಬಗೆದಳು ದಿನವು ಆಡಿ ಬರಲು ಹೆಮ್ಮೆ
ಪಡುವಳು ಬಾರದಿರಲು ಕರೆವಳು ಪೊರೆವಳು ಹಲವು
ಕೆಲಸ ತಿಂಡಿ ಕೊಡುವಳು ಕರುಳ ಕುಡಿಯು
ದಿನದ ನೊಂದು ಕನಲುವಳು ಪ್ರಜೆಯು ನೆನೆವಳು


ಆ) ಓದಿ ತಿಳಿಯಿರಿ :


ಕನಲುವಳು ಸಂಕಟಪಡುವಳು


ಇಡಿ — ಪೂರ್ಣ
ಬಗೆವಳು KN ತಿಳಿವಳು
ಪೊರೆವಳು - ಕಾಪಾಡುವಳು


ಅಭ್ಯಾಸ
ಅ) ಈ ಪದ್ಯವನ್ನು ರಾಗವಾಗಿ ಹಾಡಿರಿ::


ಆ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ :


೧. ತಾಯಿ ಮಗುವ ಪಡೆದು ಏನನ್ನು ಮರೆತಳು?


ಅ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸು :


ಕಗ NSE ೪ೋ೪ೋ೪ೋ ೋಅ೪ೋ ೋ ೋ ೋ ೋ ೋ ೋ ೋ URE
ಈ. ಕೆಲಸ EA EEN
೩. ತಿಂಡಿ SES EN [ಮ್ತ


ಈ) ಕೊಟ್ಟಿರುವ ಪದ ಗಮನಿಸಿ ಸಮಾನಾರ್ಥಕ ಪದಗಳನ್ನು ಬರೆಯಿರಿ :


J FRE a ie


OS


ಉ) ಆರಂಭದಲ್ಲಿ ಸೂಕ್ತ ಅಕ್ಷರಗಳನ್ನು ಸೇರಿಸಿ ಪದ ರಚಿಸಿ :


ದಾ ದಿಲ್ಲ ಯಾನ


ಊ) ಅಂತ್ಯದಲ್ಲಿ ಸೂಕ್ತ ಅಕ್ಷರಗಳನ್ನು ಸೇರಿಸಿ ಪದ ರಚಿಸಿ :


ಎಇ "ಬೃ ಜೆ


ಯ) ಒಂದು ಮತ್ತು ಎರಡನೆಯ ಕಂಬ ಸಾಲುಗಳಲ್ಲಿರುವ ಅಕ್ಷರಗಳನ್ನು ಸೇರಿಸಿ ಮೂರನೆಯ
ಕಂಬಸಾಲಿನಂತೆ ಪದ ರಚಿಸಿ ಬರೆಯಿರಿ :


ಮಾದರಿ:





ಚಟುವಟಿಕೆ : ನಿನ್ನ ತಂದೆ, ತಾಯಿ, ಅಕ್ಕ, ಅಣ್ಣ. ಅವರುಗಳೆ ಚಿತ್ರ ಸಂಗ್ರ!


ಸಾಮರ್ಥ್ಯ: ಕೊಟ್ಟಿರುವ ಪದಗಳಿಗೆ ಆರಂಭ ಅಥವಾ ಅಂತ್ಯದಲ್ಲಿ ಅಕ್ಷರಗಳನ್ನು


(so)


ಸೇರಿಸಿ ಹೊಸಪದಗಳನ್ನು ರಚಿಸುವ ಸಾಮರ್ಥ್ಯ ಪಡೆಯುವೆ.


ಹಿಹಿಹಿ

Related Products

Top