[PDF]ಕರ್ನಾಟಕ ಶಾಸಕಾಂಗ ಪತ್ರಿಕೆ (ತ್ರೈಮಾಸಿಕ ಪತ್ರಿಕೆ) ಜುಲೈ-ಆಗಸ್ಟ್-ಸೆಪ್ಟೆಂಬರ್ 2020‍ ಸಂಪುಟ-II ಸಂಖ್ಯೆ-3

[PDF]

Contact the Author

Please sign in to contact this author

ಕರ್ನಾಟಕ ವಿಧಾನಮಂಡಲ


ಕರ್ನಾಟಕ ಶಾಸಕಾಂಗ ಪತ್ರಿಕೆ


(ತೈಮಾಸಿಕ ಪತ್ರಿಕೆ


ಜುಲೈ ಆ ಆಗಸ್ಟ್‌ KN ಸೆಪ್ಟೆಂಬರ್‌ 2020


ಸಂಪುಟ-1] ಸಂಖ್ಯೆ —3


ಪಕಟಣೆ:
ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ,
ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ,
ಬೆಂಗಳೊರು - 560 233.


ವಿಶೇಷ ಸೂಚನೆ


ಕರ್ನಾಟಕ ಶಾಸಕಾಂಗ ಪತ್ರಿಕೆಯು ಕರ್ನಾಟಕ ವಿಧಾನ ಸಭೆ/'ವಿಧಾನ ಪರಿಷತ್ತಿನ
ಸದಸ್ಯರುಗಳ ಪರಾಮರ್ಶೆಗಾಗಿ ಪ್ರಕಟಿಸಲಾಗುತ್ತಿದ್ದು, ಇದು ಆಂತರಿಕ ಪ್ರಕಟಣೆಗೆ ಮಾತ್ರ


ಸೀಮಿತವಾಗಿರುತ್ತದೆ.


ಈ ಪತ್ರಿಕೆಯಲ್ಲಿ ಅಳವಡಿಸಲಾಗಿರುವ ಮಾಹಿತಿಗಳು ವಿವಿಧ ದಿನ ಪತ್ರಿಕೆಗಳಲ್ಲಿ


ಪ್ರಕಟವಾಗಿರುವ ಸುದ್ದಿಗಳ ಆಧಾರಿತವಾಗಿದ್ದು, ಇದರಲ್ಲಿ ನ್ಯೂನತೆ, ವ್ಯತ್ಯಾಸಗಳಿಂದ ಅಥವಾ


ನಿಖರತೆಯ ಕೊರತೆಯಿಂದ ಯಾವುದೇ ವ್ಯಕ್ತಿಗೆ ಉಂಟಾಗಬಹುದಾದ ನಷ್ಟ/ಹಾನಿಗೆ


ವಿಧಾನ ಸಭಾ ಸಚಿವಾಲಯವು ಯಾವುದೇ ರೀತಿ ಜವಾಬ್ದಾರವಾಗುವುದಿಲ್ಲ.


ಮುನ್ನುಡಿ


ಕರ್ನಾಟಕ ವಿಧಾನಮಂಡಲದ ಸಂಶೋಧನಾ ಮತ್ತು ಉಲ್ಲೇಖನಾ ಶಾಖೆಯು ಉಭಯ
ಸದನಗಳ ಮಾನ್ಯ ಸದಸ್ಯರುಗಳ ಉಪಯೋಗಕ್ಕಾಗಿ ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ
ಸಂಪುಟ -11 ರ ತೃತೀಯ ಸಂಚಿಕೆಯನ್ನು ಪ್ರಕಟಪಡಿಸುತ್ತಿದೆ.


ತ್ರೈಮಾಸಿಕ ಶಾಸಕಾಂಗ ಪತ್ರಿಕೆಯು ಮುಖ್ಯವಾಗಿ ಕರ್ನಾಟಕ ವಿಧಾನಮಂಡಲದ ಎರಡು
ಸದನಗಳ ಶಾಸಕಾಂಗದ ಸುದ್ದಿಗಳು, ಲೋಕಸಭೆ, ರಾಜ್ಯಸಭೆಗಳ, ಸಂಸದೀಯ ವ್ಯವಹಾರಗಳಿಗೆ
ಸಂಬಂಧಿಸಿದ ಪ್ರಮುಖ ಸುದ್ದಿಗಳು, ರಾಜ್ಯಗಳ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಾಗೂ ಇತರೆ
ವಿಷಯಗಳನ್ನೊಳಗೊಂಡಿರುತ್ತದೆ.


ಈ ಸಂಚಿಕೆಯಲ್ಲಿ 2020ನೇ ಸಾಲಿನ ಜುಲೈ, ಆಗಸ್ಟ್‌ ಮತ್ತು ಸೆಪ್ಪೆಂಬರ್‌ ತಿಂಗಳ ಅವಧಿಯಲ್ಲಿನ
ಪ್ರಮುಖ ಸುದ್ದಿ, ಮಾಧ್ಯಮಗಳಲ್ಲಿ ಪ್ರಕಟವಾದ ದೈನಂದಿನ ಸುದ್ದಿಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ.


ನಡತ)


ಸಂಶೋಧನಾ ಮತ್ತು ಉಲ್ಲೇಖನಾ ವಿಭಾಗವು ಸಿದ್ದಪಡಿಸಿ ಹೊರತರುತ್ತಿರುವ ಈ ಪತ್ರಿಕೆಯ
ಗುಣಮಟ್ಟವನ್ನು ಉನ್ನತೀಕರಿಸಲು ಹಾಗೂ ಹೆಚ್ಚು ವಿಷಯಾಸಕ್ಷವಾಗಿಸಲು ಇದರ ಬೆಳವಣಿಗೆಯ


ಸುಧಾರಣೆಗೆ ಮಾನ್ಯ ಸದಸ್ಯರುಗಳಿಂದ ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ಬರಹ ರೂಪದಲ್ಲಿ
ಸ್ಪೀಕರಿಸಲು ಸದಾ ಸ್ಪಾಗತವಿರುತ್ತದೆ.


ಎಂ.ಕೆ.ವಿಶಾಲಾಕ್ಷಿ
ಕಾರ್ಯದರ್ಶಿ(ಪು),
ಕರ್ನಾಟಕ ವಿಧಾನ ಸಭೆ.
ಬೆಂಗಳೂರು
ದಿನಾಂಕ: 27-1-2021


ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ ಸಂಪಾದಕ ವರ್ಗ


ಕರ್ನಾಟಕ ವಿಧಾನ ಸಭೆ ಸಚಿವಾಲಯ


. ಶ್ರೀಮತಿ ಎಂ.ಕೆ. ವಿಶಾಲಾಕ್ಷಿ : ಕಾರ್ಯದರ್ಶಿ (ಪ್ರ
. ಶ್ರೀಮತಿ ಎಂ. ಮಂಜುಳ : ಜಂಟಿ ನಿರ್ದೇಶಕರು


. ಶ್ರೀಮತಿ ಜಿ. ಮಮತ : ಸಹಾಯಕ ನಿರ್ದೇಶಕರು


ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ
. ಶೀಮತಿ ಕೆ. ಆರ್‌. ಮಹಾಲಕ್ಷ್ಮಿ : ಕಾರ್ಯದರ್ಶಿ


. ಶ್ರೀಮತಿ ಎಸ್‌. ನಿರ್ಮಲ : ಜ೦ಟಿ ಕಾರ್ಯದರ್ಶಿ


ಕರ್ನಾಟಕ ಶಾಸಕಾಂಗ ಪತ್ರಿಕೆ
(ತೈಮಾಸಿಕ ಪತ್ರಿಕೆ)
ಜುಲೈ - ಆಗಸ್ಟ್‌ - ಸೆಪ್ಟೆಂಬರ್‌ 2020
ಸಂಪುಟ-11 ಸಂಖ್ಯೆ - 3
ಪರಿವಿಡಿ
ಭಾಗ-1
ವಿಧಾನ ಮಂಡಲದ ಸುದ್ದಿಗಳು


ಕ್ರಸಂ. ವಿಷಯ ಪುಟ ಸಂಖ್ಯೆ
l, ಪರಿಷತ್‌ ಸದಸ್ಯರಾಗಿ ಗೋವಿಂದರಾಜು ಪ್ರಮಾಣ 1
2. | ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಶರವಣ 1
3. ಮೇಲ್ಲನೆಗೆ ಮೂವರ ಜೊತೆಗೆ ಸಾಧಕರಿಬ್ದರು 1
4. | ಹೊಸ ಶಿಕ್ಷಣ ನೀತಿಗೆ ಕಾಗೇರಿ ಸ್ಟಾಗತ 2
5 ಅಧಿವೇಶನಕ್ಕೆ ಸೂಕ್ತ ಸ್ಥಳ ಪರಿಶೀಲಿಸಲು ಅಧಿಕಾರಿಗಳಿಗೆ ಸ್ಟೀಕರ್‌ ಸೂಚನೆ 2
6. |ಬಿಬಿಎಂಪಿ ಮಸೂದೆ ಪರಾಮರ್ಶೆಗೆ ಜಂಟಿ ಪರಿಶೀಲನಾ ಸಮಿತಿ ರಚನೆ 4
7. |ಕರ್ನಾಟಕ ಶಾಸಕಾಂಗ ಪತ್ರಿಕೆಗೆ ಮರು ಚಾಲನೆ 4
8. ಕಲಾಪದಲ್ಲಿ 36 ವಿಧೇಯಕ ಅಂಗೀಕಾರ, ಕೊರೋನಾ ನಡುವೆಯೂ ಕಲಾಪ 6
ಯಶಸ್ವಿ ಸೀಕರ್‌
9. | ಕೋವಿಡ್‌ ಪರೀಕ್ಷೆ ಸರ್ಟಿಫಿಕೇಟ್‌ ತೋರಿಸಿದರೆ ಕಲಾಪಕ್ಕೆ ಪ್ರವೇಶ 6
10. |19 ಸುಗೀವಾಜ್ಞೆ ಸೇರಿ ಈ ಬಾರಿ 31 ವಿಧೇಯಕ 7
1. | ವರದಿ ಇದ್ದರಷ್ಟೇ ಅಧಿವೇಶನಕ್ಕೆ ಪ್ರವೇಶ 8
12. |ಸ್ಟೀಕರ್‌ ವಿಶ್ವೇಶ್ವರ ಹೆಗಡೆ, ಕಾಗೇರಿ ಅಭಿಮತ - ಕೈಜೋಡಿಸಲು ಯುವ 9
ಸಮುದಾಯಕ್ಕೆ ಕರೆ
13. | ವಿಧಾನಮಂಡಲ ಅಧಿವೇಶನ : ಸಾರ್ವಜನಿಕರ ಪ್ರವೇಶ ನಿಷೇಧ 10
14. | ಅಗಲಿದ ಗಣ್ಯರಿಗೆ ಉಭಯ ಸದನದಲ್ಲಿ ಸಂತಾಪ 10
15. | ಇದೇ 26ಕ್ಕೆ ಅಧಿವೇಶನ ಮುಕ್ತಾಯ : ಬೆಳಿಗ್ಗೆ 10 ರಿಂದ 7ರವರೆಗೆ ಕಲಾಪ 11
16. | ಚರ್ಚೆಗೆ ಸಮಯದ ಮಿತಿಯಿರಲಿ : ಸೀಕರ್‌ 12
17. | ಸಚಿವ, ಶಾಸಕರ ಶೇ.30 ವೇತನ ಕಡಿತಕ್ಕೆ ಅಸ್ತು 12


ಕ್ರಸಂ. ವಿಷಯ ಪುಟ ಸಂಖ್ಯೆ
18. |2 ವಿಧೇಯಕ ಹಿಂದಕ್ಕೆ 13
19. |ಕೊರೋನಾ ಗದ್ದಲ 13
20. [ತ್ವರಿತ ವಿಚಾರಣೆ : ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ 14
21. |250 ವಾರ್ಡ್‌ ರಚನೆಗೆ ವಿಧಾನ ಸಭೆ ಒಪಿಗೆ 14
22. | ಕೊನೆಗೂ ಅನ್ನರ್‌ ಮಾಣಿಪ್ಪಾಡಿ ವರದಿ ಮಂಡನೆ 15
23. | ದಿಢೀರ್‌ ಅವಿಶ್ವಾಸ 16
24. | ಪಂಚಾಯಿತಿ ಮೀಸಲು ಐದು ವರ್ಷಕ್ಕೆ ಇಳಿಕೆ 17
25. | ದಿವಂಗತ ಎ.ಕೆ. ಸುಬ್ಬಯ್ಯ ಕುರಿತ ಪುಸ್ತಕ ಬಿಡುಗಡೆ 18
26. ಕೃಷಿ ಬಿಲ್‌ ಪಾಸ್‌ 19
27. | ಬಿ.ಎಸ್‌.ವೈ ಭದ್ರ 20
28. | ನಿಯಮಾವಳಿ ಪರಿಶೀಲನಾ ಸಮಿತಿ ರಚನೆ 20
29. | ನಾಯಕತ್ನ್ಸದ "ಅನಂತ' ಸೂತ್ರಗಳು 21
30. |15ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ 35
31. |15ನೇ ವಿಧಾನಸಭೆಯ 7ನೇ ಅಧಿವೇಶನದಲ್ಲಿ ಮಂಡಿಸಲಾದ /ಅಂಗೀಕರಿಸಲಾದ 37
ವಿಧೇಯಕಗಳ ಪಟ್ಟಿ
32. | ವಿಧಾನ ಪರಿಷತ್ತಿನ 141ನೇ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ 45
33. | ವಿಧಾನ ಪರಿಷತ್ತಿನ 141ನೇ ಅಧಿವೇಶನದಲ್ಲಿ ಮಂಡಿಸಲಾದ / 48
ಅಂಗೀಕರಿಸಲಾದ ವಿಧೇಯಕಗಳ ಪಟ್ಟಿ
ಭಾಗ-2
ಸಂಸತ್ತಿನ ಸುದ್ದಿಗಳು
I. 22ಕ್ಕೆ ರಾಜ್ಯಸಭಾ ನೂತನ ಸದಸ್ಯರಿಗೆ ಪ್ರಮಾಣ 61
2 ನೂತನ 45 ರಾಜ್ಯಸಭಾ ಸದಸ್ಯರಿಂದ ಪ್ರಮಾಣ 61
3. ಸೆಪೆಂಬರ್‌ 14ರಿಂದ ಸಂಸತ್ತಿನ ಮುಂಗಾರು ಅಧಿವೇಶನ 62
4. ಪ್ರಶ್ನೋತ್ತರ ಅವಧಿ ರದ್ದು ನಿರ್ಧಾರ ವಾಪಸ್‌ಗೆ ಆಗಹ 62
ನ ಈ ಬಾರಿ ಸಂಸತ್‌ ಮುಂಗಾರು ಅಧಿವೇಶನಕ್ಕೆ ಡಿಜಿಟಲ್‌ ಸ್ಪರ್ಶ 62
6. ರಾಜ್ಯ ಸಭೆ ಉಪ ಸಭಾಪತಿಯಾಗಿ ಹರಿವಂಶ್‌ ಸಿಂಗ್‌ ಪುನರಾಯ್ಕೆ. 63
7 ರೈತರ ಹಕ್ಕಿಗೆ ಮಸೂದೆ ಕೊಕ್ಕೆ 63


ಇಂಡಿಯಾ ಗ್ಲೋಬಲ್‌ ವೀಕ್‌ - 2020 ವರ್ಚುವಲ್‌ ಶೃಂಗದಲ್ಲಿ ಪ್ರಧಾನಿ
ಭಾಷಣ, ಹೂಡಿಕೆದಾರರಿಗೆ ಮುಕ್ತ ಆಹ್ವಾನ


ಕ್ರಸಂ. ವಿಷಯ ಪುಟ ಸಂಖ್ಯೆ
8. ಪ್ರಶ್ನೋತ್ತರ ಕೈ ಬಿಡಲು ಸಂಸತ್‌ ಸಮ್ಮತಿ 64
9, ಕುಳಿತೇ ಮಾತನಾಡುವಂತೆ ಸ್ಪೀಕರ್‌ ಓಂ ಬಿರ್ಲಾ ಮನವಿ 64
10. ಕೊರೋನಾ ವ್ಯಾಪಕದ ನಂತರ ಮೊದಲ ಸಂಸತ್‌ ಸಮಾವೇಶ 65
1. ಸಂಸದರ ವೇತನ 30% ಕಡಿತ: ಮಸೂದೆ ಪಾಸ್‌ 66
12. ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಒಪಿಗೆ 66
13. ಸಂಸತ್‌: ಬಾಲಿವುಡ್‌ ಡ್ರಗ್‌ ಗಲಾಟೆ 67
14. ಬ್ಯಾಂಕಿಂಗ್‌ ನಿಯಂತ್ರಕ ವಿಧೇಯಕಕ್ಕೆ ಒಪ್ಪಿಗೆ 67
15. ಸಂವಿಧಾನಬದ್ಧ ಶಿಕ್ಷಣ ಅಗತ್ಯ 68
16. ದಕ್ಷಿಣ ರಾಜ್ಯಗಳಲ್ಲಿ ಐಸಿಸ್‌ ಸಕ್ರಿಯ 68
17. ಜಿಎಸ್‌ಟಿ ನಷ್ಟ; ಶೀಘ್ರ ತೀರ್ಮಾನ 69
18. ಲೋಕಸಭೆಯಲ್ಲಿ ಪ್ರಧಾನಿ ನಿಧಿ ನಿಗಿನಿಗಿ 70
19. ವೈದ್ಯರ ಮೇಲೆ ದೌರ್ಜನ್ಯ ಎಸಗಿದರೆ 7 ವರ್ಷ ಜೈಲು 71
20. ಸಂಸತ್‌ ಅಧಿವೇಶನ ಮೊಟಕು 7
21. ದಿವಾಳಿ ವಿಧೇಯಕದ ತಿದ್ದುಪಡಿಗೆ ಅಸ್ತು 7
22. ಕೃಷಿ ಮಸೂದೆ ಅಂಗೀಕಾರ ವೇಳೆ ಕೋಲಾಹಲ 72
23: ವಿದೇಶಿ ದೇಣಿಗೆ ದುರ್ಬಳಕೆ ತಡೆಗೆ ಸಿದ್ದತೆ 72
24. ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿದ ಗೌಡರು 73
25. ರಾಜ್ಯಸಭೆ:8 ಸದಸ್ಯರ ಅಮಾನತ್ತು 74
26. ರಾಯಚೂರು ಐಐಟಿ ರಾಷ್ಟ್ರೀಯ ಮಹತ್ವದ ಸಂಸ್ಥೆ 74
2% ಸಂಸತ್‌ ಕಲಾಪದ ಕೊನೆಯ ದಿನ ಎಂಟು ವಿಧೇಯಕಗಳಿಗೆ ಅಸ್ತು 75
28. ಸಂಸತ್‌ ಅಧಿವೇಶನ ಮುಕ್ತಾಯ 76
29. ಲೋಕಸಭೆ ದಾಖಲೆಯ ಕಲಾಪ 76
ಭಾಗ-3
ಕೇಂದ್ರ ಸರ್ಕಾರದ ಸುದ್ದಿಗಳು
I; ಅತಿಕ್ರಮಣದ ಕಾಲ ಮುಗೀತು 77
Wa NF;


ಸರ್ಕಾರ


ಕ್ರಸಂ. ವಿಷಯ ಪುಟ ಸಂಖ್ಯೆ
3. ಸೌರಶಕ್ತಿಯೇ ಸ್ವಚ್ಛ, ನಿಶ್ಲಿತ, ವಶಕ್ಕೆ ಆಧಾರ 78
4. ಕೌಶಲ್ಯಾಭಿವೃದ್ಧಿಗೆ ಮೋದಿ 3 ಮಂತ್ರ 78
2; ಜಂಟಿಯಾಗಿ ಹೋರಾಟ : ಪ್ರಧಾನಿ 79
6. ಸೋಂಕಿನ ವಿರುದ್ದ ಭಾರತದಲ್ಲಿ ಜನಾಂದೋಲನ : ವಿಶ್ವಸಂಸ್ಥೆ ಉದ್ದೇಶಿಸಿ 79
ಪ್ರಧಾನಿ ಮೋದಿ ಭಾಷಣ
ಸ ಗಡಿ ಸಂಘರ್ಷ ಇರುವ ಪೂರ್ವ ಲಡಾಖ್‌ಗೆ ರಕ್ಷಣಾ ಸಚಿವರ ಭೇಟಿ 80
8. ರಾಮ ಮಂದಿರಕ್ಕೆ ಮುಹೂರ್ತ 80
9. ಡಿಸೆಂಬರ್‌ 31ರ ತನಕ WF ವಿಸ್ತರಣೆ 8
11. ಭೂ ಸೇನೆಗೆ ಮಹಿಳಾ ಬಲ 82
12 ನಮ್ಮ ದೇಶದ ಪರಿಸ್ಥಿತಿ ಅತ್ಯುತ್ತಮ : ಮೋದಿ 83
13 ಮತ್ತೆ 47 ಆ್ಯಪ್‌ ಬ್ಯಾನ್‌:ಕೇಂದ್ರ ಸರ್ಕಾರದ ಘೋಷಣೆ 84
14. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಭದತೆ 85
15. ಭಾರತಕ್ಕೆ ಬಂದ ರಫೇಲ್‌ ಯುದ್ಧ ವಿಮಾನ 85
16. ಹೊಸ ಭಾರತಕ್ಕೆ ಹೊಸ ಶಿಕ್ಷಣ ನೀತಿಯ ದಿಕ್ಸೂಚಿ 86
17. ಗಡಿಗೆ 35.000 ಯೋಧರು 87
18. [ನಯಾ ಕಾಶ್ಮೀರದಲ್ಲಿ ಬದಲಾವಣೆ ಪರ್ವ ೧೧೧೧೧೧೧೧೧೧] 88 |
19. ಹೊಸ ನೀತಿಯಿಂದ ಶಿಕ್ಷಣ ಸುಧಾರಣೆ ಉದ್ಯೋಗದಾತರ ಸೃಷ್ಟಿ ಗುರಿ: ಮೋದಿ 89
20. ಶಿಕ್ಷಣ ನೀತಿಯಲ್ಲಿ ಭಾಷಾ ಹೇರಿಕೆ ಇಲ್ಲ: ಕೇಂದ 89
21. ಗ್ರಾಹಕರ ನೆರವಿಗೆ ಸಶಕ್ತ ಕಾಯ್ದೆ 90
22; ರಾಮನಿಗೆ ಶಂಖ; ಮಂದಿರಕ್ಕೆ ಶಂಕು 9]
23 ಸಾಲ ಮರುಹೊಂದಾಣಿಕೆ : 2021ರ ಮಾರ್ಚ್‌ವರೆಗೂ ಲಭ್ಯ 92
24. ಹೊಸ ಶಿಕ್ಷಣ ನೀತಿ ನವ ಭಾರತದ ಬುನಾದಿ 93
೫: ವಾಣಿಜ್ಯೋದ್ಯಮಿಗಳಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸೂಚನೆ 94
26. 101 ಸೇನಾ ಸಲಕರಣೆಗಳ ಆಮದು ನಿಷೇಧದ ಪಟ್ಟಿ ಪ್ರಕಟಿಸಿದ ಕೇಂದ್ರ 94


ಕ್ರಸಂ. ವಿಷಯ ಪುಟ ಸಂಖ್ಯೆ
27 ಮೂಲ ಸೌಕರ್ಯ ಅಭಿವೃದ್ದಿಗೆ ಹಣಕಾಸು ನೆರವು ಯೋಜನೆಗೆ ಪ್ರಧಾನಿ 95
ಚಾಲನೆ
28. ಅಂಡಮಾನ್‌-ನಿಕೋಬಾರ್‌ಗೆ ಮೊದಲ ಬಾರಿಗೆ ಮರೈನ್‌ ಆಫ್ಟಿಕಲ್‌ ಫೈಬರ್‌ 96
ಯೋಜನೆ
29. 72 ತಾಸಿನಲ್ಲಿ ಪರೀಕ್ಷೆ ನಡೆಸಿ:ಪ್ರಧಾನಿ ಮೋದಿ ಸೂಚನೆ 97
30. ರೂ.8722 ಕೋಟಿ ಮೌಲ್ಕದ ರಕ್ಷಣಾ ಸಾಮಗ್ರಿ ಖರೀದಿಗೆ ಒಪ್ಪಿಗೆ 98
31. ದೆಹಲಿಯ ಕೆಂಪುಕೋಟೆಯಲ್ಲಿ 74ನೇ ಸ್ಟಾತಂತ್ರ್ಯ ದಿನಾಚರಣೆ 99
32. ಡಿಜಿಟಲ್‌ ಆರೋಗ್ಯ ವಿಷನ್‌ಗೆ ಚಾಲನೆ 100
33 ಉದ್ಯೋಗ ಸೃಷ್ಟಿಗೆ ಒತ್ತು 100
34. ಇನ್ನು ಏಕ ಎಕ್ಸಾಂ 102
35. 3 ತಿಂಗಳ ನಿರುದ್ಯೋಗ ಭತ್ಯೆ : ಕೇಂದದಿಂದ ನಿಯಮ ಸಡಿಲಿಕೆ 103
36. ರಕ್ಷಣಾ ತಯಾರಿಕೆಗೆ ಶೇ.74. ಎಫ್‌ಡಿಐ 104
37. ಜಿಎಸ್‌ಟಿ ಪರಿಹಾರ ಪಾವತಿಗೆ ಕೇಂದ್ರ ಸರ್ಕಾರ ನಕಾರ 105
38. ಒಟ್ಟಾಗಿ ಕೆಲಸ, ಒಗ್ಗಟ್ಟಾಗಿ ಹೋರಾಟ 105
39. ಪಿಎಂಜೆಡಿವೈನಿಂದ ರೂ.1.3 ಲಕ್ಷ ಕೋಟಿ ಠೇವಣಿ 106
40. ಕೇಂದದಿಂದ ಅನ್‌ಲಾಕ್‌ 4.0 ಮಾರ್ಗಸೂಚಿ ಪ್ರಕಟ 107
4]. ದೇಶದಲ್ಲಿ ಕೊರೋನಾ ಸಮರ್ಥ ನಿರ್ವಹಣೆ 108
47. 500 ಕಲ್ಲಿದ್ದಲು ಯೋಜನೆಗೆ ರೂ.122 ಲಕ್ಷ ಕೋಟಿಗಳ ಹೂಡಿಕೆ 108
43. ಅಧಿಕಾರಿಗಳ ಕೌಶಲ, ಸಾಮರ್ಥ್ಯ ವೃದ್ದಿಗೆ ವೇದಿಕೆ ನಿರ್ಮಾಣ 109
44, ಟಾಟಾಗೆ ಸಂಸತ್‌ ನಿರ್ಮಾಣ ಗುತ್ತಿಗೆ 110
45. ಸೇನೆ ಎಲ್ಲದಕ್ಕೂ ಸಿದ್ದ : ಚೀನಾಕ್ಕೆ ಭಾರತ ಎಚ್ಚರಿಕೆ 110
46. ಶಾಲೆಗಳ ಆರಂಭಕ್ಕೆ ಕೇಂದ್ರ ಮಾರ್ಗಸೂಚಿ 110
ಭಾಗ-4
ರಾಜ್ಯ ಸರ್ಕಾರದ ಸುದ್ದಿಗಳು
1. ಇನ್ನು ಮನೆಯಲ್ಲೇ ಚಿಕಿತ್ಸೆ 112
2; ಡಿಕೆಶಿ ವರ್ಚುವಲ್‌ ವಿಶ್ವದಾಖಲೆ 113


ಕೋವಿಡ್‌: ಮನೆಯಲ್ಲಿಯೇ ಆರೈಕೆಗೆ ಅವಕಾಶ


114


ಕ್ರಸಂ. ವಿಷಯ ಪುಟ ಸಂಖ್ಯೆ
4. ರಾಜ್ಯದಲ್ಲಿ ಸರ್ಕಾರಿ ವಾಹನಗಳು 30 ದಿನ ನಿಂತಲ್ಲೇ ನಿಲ್ಲುವಂತಿಲ್ಲ 116
5, ರೋಗಲಕ್ಷಣ ಕಡಿಮೆ ಇದ್ದವರಿಗೆ ಮನೆ ಚಿಕಿತ್ಸೆ ಹೋಮ್‌ ಕ್ಷಾರಂಟೈನ್‌ಗೆ 117
ಮಾರ್ಗಸೂಚಿ ಪ್ರಕಟ
6. ಆನ್‌ಲೈನ್‌ನಲ್ಲಿ ಉಚಿತವಾಗಿ ಸಿಗುತ್ತೆ ರಾಜ್ಯ ಪಠ್ಯಪುಸ್ತಕ 118
[A ಉತ್ಪಾದನಾ ಷರತ್ತು ಉಲ್ಲಂಘಿಸಿದರೆ ದಂಡ 118
8. ಸಮಾಜ ಕಲ್ಯಾಣ ಇಲಾಖೆಯ ಒಂಭತ್ತು ಸೇವೆ ಸಕಾಲ ವ್ಯಾಪ್ತಿಗೆ 119
9. ಫೀವರ್‌ ಕ್ಷಿನಿಕ್‌ ತೆರೆಯಲು ಸೂಚನೆ 120
10. ರಾಜ್ಯಕ್ತಿ 4267 ಕೋಟಿ ಅನುದಾನ 120
ils ತಪ್ಪಿತಸ್ಥ ಸರ್ಕಾರಿ ನೌಕರರಿಗಿನ್ನು ಶಿಕ್ಷ ಪಕ್ಕಾ 121
12. ಕೋವಿಡ್‌, ನಾನ್‌ ಕೋವಿಡ್‌ ಪ್ರತ್ವೇಕ ಆಸ್ಪತ್ರೆ 122
13. ಭೂಸುಧಾರಣೆ ತಿದ್ದುಪಡಿ ಸುಗೀವಾಜ್ಞೆಗೆ ಗೌರ್ನರ್‌ ಅಸ್ತು 123
14. 3.94 ಕೋಟಿ ಅಕ್ರಮ ಪಡಿತರ ಜಪ್ತಿ 123
15. ಬೆಂಗಳೂರು ಸೇರಿ ಧಾರವಾಡ, ದಕ್ಷಿಣ ಕನ್ನಡ, ಬೆಳಗಾವಿ ಜಿಲ್ಲೆ ಕೆಲ 124
ಭಾಗಗಳಲ್ಲಿ ಲಾಕ್‌ಡೌನ್‌ ಜಾರಿ
16. ನಿಯಂತಿಸಲೇಬೇಕು ಮರಣ ಪ್ರಮಾಣ 125
LF; ಸೋಂಕು ತಡೆಗೆ ಕಾರ್ಯಸೂಚಿ 126
18. ಪದವಿ ಶುಲ್ಕ ಪರಿಷ್ಟರಿಸುವಂತಿಲ್ಲ 127
19. ಪ್ಲಾಸ್ಮಾ ದಾನ ಮಾಡಿದರೆ ಪ್ರೋತ್ಸಾಹ ಧನ 127
20. ಲಾಕ್‌ಡೌನ್‌ ವಿಸ್ತರಣೆ ಇಲ್ಲ-ಸಿಎಂ ಸೂಚನೆ 128
21. ಅರಣ್ಯದಂಚಿನ ಗ್ರಾಮದ ಮೂಲ ಸೌಕರ್ಯ ಅಭಿವೃದ್ದಿಪಡಿಸಲು ಡಿಸಿಎಂ 129
ಸೂಚನೆ
22. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿ 130
23. ಕಂಟೇನರ್‌ನಲ್ಲಿ ಕೋವಿಡ್‌ ಐಸಿಯು 130
24. ಬೆಡ್‌ ಕೊಡದಿದ್ದರೆ ಬಂಧನ 131
25, ಸೇತುಬಂಧ ಕಾರ್ಯಕ್ರಮಕ್ಕೆ ರೂ.1.60 ಕೋಟಿ ಬಿಡುಗಡೆ. 131
26. 308 ಬಿಡಿಎ ನಿವೇಶನಗಳ ಹರಾಜು ಇಂದಿನಿಂದ 131


ಕ್ರಸಂ. ವಿಷಯ ಪುಟ ಸಂಖ್ಯೆ
27. ಗ್ರಾಮ ಪಂಚಾಯಿತಿ ನೈರ್ಮಲ್ಯ ಯೋಜನೆ ರಾಜ್ಯಕ್ಕೆ ರೂ.804 ಕೋಟಿ 132
ಅನುದಾನ
28. ಸಂಶಯಾಸ್ಪದ ಕಾಮಗಾರಿಗಳ ಪರಿಶೀಲನೆಗೆ ನಿರ್ಧಾರ; ಸಮಗ್ರ ವರದಿ 132
ನೀಡುವ ಹೊಣೆ
29. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಅರ್ಜಿಗೆ ಪಿಎಂ ಸ್ತನಿಧಿ ಆ್ಯಪ್‌ 133
30. ವೆಂಟಿಲೇಟರ್‌ ಖರೀದಿ ಕುರಿತ ಕೈ ನಾಯಕರ ಆರೋಪ ಅಲ್ಲಗಳೆದ ಸರ್ಕಾರ 134
31. ಬೆಂಗಳೂರೇತರ ಜಿಲ್ಲೆಗಳಲ್ಲಿಯೇ ಮರಣ ದರ ಹೆಚ್ಚು 135
32, ಕೊರೋನಾ ನಿಯಂತ್ರಣಕ್ಕೆ ಕಾರ್ಯಪಡೆ 137
33. ಟಾಸ್ಕ್‌ ಘೋರ್ಸ್‌ ಸಭೆಯಲ್ಲಿ ಮಹತ್ವದ ನಿರ್ಣಯ : ಕ್ಲಾರಂಟೈನ್‌ ನಿಯಮ 138
ಬದಲು
34. ಸೋಂಕು ಕಡಿವಾಣಕ್ಕೆ ಸಿಎಂ ಟಾರ್ಗೆಟ್‌ 139
ಲ ಕೈಗಾರಿಕಾ ಶಾಸನ ತಿದ್ದುಪಡಿಗೆ ಒಪ್ಪಿಗೆ 141
36. ತಿದ್ದುಪಡಿಗೆ ಸುಗೀವಾಜ್ಞೆ ಸಂಪುಟ ಸಭೆ ಒಪ್ಪಿಗೆ 141
37. ರೂ.5 ಲಕ್ಷ ಕೋಟಿ ಬಂಡವಾಳ ಆಕರ್ಷಣೆಗೆ ಪಣ 142
38. ಸ್ಪಾತಂತ್ರೋತ್ಸವ ಹೀಗೆ ಆಚರಿಸಿ-ಕೊರೋನಾ ವಾರಿಯರ್ಸ್‌ಗಳನ್ನು 143
ಕಾರ್ಯಕ್ರಮಗಳಿಗೆ ಆಹ್ವಾನಿಸಿ ಗೌರವ ಸಲ್ಲಿಸಿ-ರಾಜ್ಯಗಳಿಗೆ ಕೇಂದ್ರದ
ಮಾರ್ಗಸೂಚಿ
39. ಕೋವಿಡ್‌ ಫಲಿತಾಂಶ ತ್ವರಿತಕ್ಕೆ ಸೂಚನೆ 144
40. ಅಸಹಕಾರಕ್ಕೆ ಸರ್ಕಾರದ ಶಾಕ್‌ ಟ್ರೀಟ್‌ಮೆಂಟ್‌ 144
4]. ಕೋವಿಡ್‌ ಶವ ಸಂಸ್ವಾರ ಉಚಿತ 145
42. ಬಿಟ್ರ ನಡೆಗೆ ಸವಾಲಿನ ಹಾದಿ 145
43. ಕೃಷಿ ಉತ್ಪನ್ನಗಳು ಇನ್ನು ಮುಕ್ತ ಮಾರಾಟ 147
44. ಬಿಐಇಸಿ ಕೊರೋನಾ ಆರೈಕೆ ಕೇಂದ್ರ ಉದ್ರಾಟನೆ 148
45. ಕಾರ್ಗಿಲ್‌ ವಿಜಯ್‌ ದಿವಸ: ದೇಶಕ್ಕಾಗಿ ಮಡಿದ ಯೋಧರಿಗೆ ಗೌರವ ಸಲ್ಲಿಸಿದ 148
ಮುಖ್ಯಮಂತ್ರಿ
46. ನಿಗಮ-ಮಂಡಳಿ ಅಧ್ಯಕ್ಷರ ನೇಮಕ 149
47. ಶೈಕ್ಷಣಿಕ ಚಟುವಟಿಕೆ ಶೀಘ್ರ ಆರಂಭಿಸಿ 150


ಕ್ರಸಂ. ವಿಷಯ ಪುಟ ಸಂಖ್ಯೆ
48. ಕ್ರಿಯಾ ಯೋಜನೆ ತ್ವರಿತ ಜಾರಿಗೆ ಸೂಚನೆ 151
49. ದೇಶದಲ್ಲಿ ವಿದೇಶಿ ವ್ಯಾಸಂಗ 152
50. ಜೈವಿಕ ತಂತ್ರಜ್ಞಾನದ ಜಾಗತಿಕ ಮನ್ನಣೆಗೆ ಕಮ 153
SL ಕಂಟೋನ್ನೆಂಟ್‌-ಶಿವಾಜಿನಗರ ಸುರಂಗ ಕಾರ್ಯಕ್ಕೆ ಮುಖ್ಯಮಂತ್ರಿ ಚಾಲನೆ 154
52. ಮೀನುಗಾರರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ 155
೨3. ಜಿಎಸ್‌ಟಿ ಪರಿಹಾರ ಪಡೆಯಲು ರಾಜ್ಯ ಕಸರತ್ತು 156
54. ಮಾತೃಭಾಷೆಗೆ ಮಹತ್ವ ಕೊಟ್ಟರೂ ಕಡ್ಡಾಯವೇನಲ್ಲ 157
55. ಶಿಕ್ಷಣ, ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ 158
56. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಾಜ್ಯ ಸರ್ಕಾರದ ತಯಾರಿ 158
57, ಆಯುರ್ವೇದಿಕ್‌ ನಂದಿನಿ ಹಾಲು 160
58. ಕೈಗಾರಿಕಾ ಕಾಯ್ದೆ ತಿದ್ದುಪಡಿ ಸುಗೀವಾಜ್ಞೆಗೆ ರಾಜ್ಯಪಾಲರ ಅಂಕಿತ 160
59. ಗುಟ್ಕಾ ಪ್ಯಾಕೆಟ್ಟಲ್ಲಿ ಡಗ್ಗ್‌ 161
60. ಕರ್ತವ್ಯಕ್ಕೆ ಹಾಜರಾಗದ ಬಿಎಲ್‌ಓಗಳ ವಿರುದ್ದ ಕ್ರಮಕ್ಕೆ ಸೂಚನೆ 161
61. ಶತಮಾನೋತ್ಸವ ಗಂಥಾಲಯ ಭವನ 162
62. ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆ ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಸೂಚನೆ 163
63. ದೇಶದ ಪ್ರಥಮ ಸಂಚಾರಿ ಆರ್ಚಿ-ಪಿಸಿಆರ್‌ ಲ್ಯಾಬ್‌ 163
64. 9.5 ಲಕ್ಷ ರೈತರಿಗೆ ಬೆಳೆ ಸಾಲ ವಿತರಣೆ 164
65. ಯುಪಿಹೆಚ್‌ಸಿ ಹೋರ್ಟಲ್‌ಗೆ ಚಾಲನೆ 164
66. ರಾಜ್ಯದಲ್ಲಿ ಕೊರೋನಾ ಸೋಂಕು, ಚೇತರಿಕೆ ಹೆಚ್ಚಳ 165
67. ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕ್ಷಾರಂಟೈನ್‌ ಇಲ್ಲ: ಸರ್ಕಾರ 167
68. ವಿಕಾಸಸೌಧದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ 167
69. ಪ್ರಯೋಗಾಲಯಗಳ ಸಂಖ್ಯೆ ಏರಿಕೆ 167
70. “ಇಮ್ಯುನಾಲಜಿ': ಲಸಿಕಾ ಸಂಶೋಧನಾ ಕೇಂದ್ರ ಸ್ಥಾಪನೆ 168
71. ಭವಿಷ್ಯದ ಕರ್ನಾಟಕ ಶೃಂಗಸಭೆ-2020ರಲ್ಲಿ 169
72. 50 ಲಕ್ಷ ರೈತರಿಗೆ "ಕಿಸಾನ್‌ ಸಮ್ಮಾನ್‌' ಯೋಜನೆಯಡಿ ರೂ.। ಸಾವಿರ ಕೋಟಿ 170
73. ರಾಜ್ಯದ 3 ಲಕ್ಷ ಕೊಳೆಗೇರಿ ಕುಟುಂಬಗಳಿಗೆ ಹಕ್ಕುಪತ್ರ 170


ಕ್ರಸಂ. ವಿಷಯ ಪುಟ ಸಂಖ್ಯೆ
74. ಪಶುಗಳ ಆರೋಗ್ಯಕ್ಕಾಗಿ ಪಶು ಸಂಜೀವಿನಿ ವಾಹನ 171
75. ಸಾರಿಗೆ ಇಲಾಖೆ ಕಾರ್ಯ ವೈಖರಿಗೆ ಮೆಚ್ಚುಗೆ 171
76. ಕೆಆರ್‌ಎಸ್‌ ಬೃಂದಾವನ ವಿಶ್ವದರ್ಜೆಗೆ 172
(ef ಡಿಜಿಟಲ್‌ ಗ್ರಂಥಾಲಯ ವ್ಯವಸ್ಥೆ; ಕರ್ನಾಟಕ ಮಾದರಿ 173
78. ಡಿಎಲ್‌, ಪರ್ಮಿಟ್‌ ಮಾನ್ಯತೆ ವಿಸ್ತರಣೆ 174
79. ಕೃಷಿ ಸ್ಪಾರ್ಟಪ್‌ಗಳಿಂದ ಯುವಕರಿಗೆ ಹೊಸ ಅವಕಾಶ 174
80. ವಿದೇಶಿ ನೇರ ಹೂಡಿಕೆಗೆ ಸರ್ಕಾರ ಉತ್ತೇಜನ 175
81. ಪ್ರವಾಸೋದ್ಯಮಕ್ಕೆ ಸರ್ಕಾರದಿಂದ ಕಿಕ್‌ ಸ್ಟಾರ್ಟ್‌ 176
82. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಎನ್‌.ಪಿ.ಎಸ್‌. ಯೋಜನೆ ಜಾರಿ 177
83. ನ್ಯಾ.ಸದಾಶಿವ ವರದಿ ಜಾರಿಗೆ ಒತ್ತಡ, ಕೋರ್ಟ್‌ ತೀರ್ಪಿನ ನಂತರ 178
ಜಾತಿಗಣತಿ ವರದಿ
84. ಕೋವಿಡ್‌ ಕರ್ತವ್ಯ ವೇಳೆ ಅಸುನೀಗಿದರೆ ಪರಿಹಾರ ಅನ್ವಯ 179
85. ಕೆಜಿಎಫ್‌ ಕೈಗಾರಿಕೆ ಭೂಮಿ ಸಮಸ್ಯೆ ಪರಿಹಾರಕ್ಕೆ ಕ್ರಮ 180
86. ಖಾಸಗಿ ಶಿಕ್ಷಕರಿಗೂ ನೆರವು 180
87. ಕ್ಲೇಮ್‌ ಕಮೀಷನರ್‌ ನೇಮಕ 181
88. ರೂ.31676 ಕೋಟಿ ಹೂಡಿಕೆ:- ಕೈಗಾರಿಕಾ ಸಚಿವರ ಹೇಳಿಕೆ 181
89. ಎಸ್‌ಸಿ, ಎಸ್‌ಟಿ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಶೇಷ ಕ್ರಿಯಾಯೋಜನೆ 182
90. ಆಧುನಿಕ ವೇಗಕ್ಕೆ ತಕ್ಕ ಶಿಕ್ಷಣ ಅಗತ್ಯ: ರಾಜನಾಥ್‌ 182
9]. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಿದ್ದತೆ 183
92. ಬೆಂಗಳೂರಿನ ಸುತ್ತ ಜಿಲ್ಲೆಗಳಲ್ಲಿ ಕೈಗಾರಿಕಾ ಹಬ್‌ 183
93. ಉದ್ಯಮಿಗಳ ಅನುಕೂಲಕ್ಕಾಗಿ ಏಕಗವಾಕ್ಷಿ ವೆಬ್‌ಸೈಟ್‌ 184
94, ರೂ.31 ಸಾವಿರ ಕೋಟಿ ಹೂಡಿಕೆ 185
9; ಮೇನಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ 185
96. ಒಳಮೀಸಲಿಗೆ ಒಮ್ಮತ 185
97. 1.4 ಕೋಟಿ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆ 186
98. ರಾಜ್ಯದಲ್ಲೂ ಶೀಘ್ರ ಏಮ್ಸ್‌ ಮಾದರಿ ಆಸ್ಪತ್ರೆ ನಿರ್ಮಾಣ 187
99. ಬೃಹತ್‌ ನೀರಾವರಿ ಯೋಜನೆ ಅನುಷ್ಠಾನ 187
100. ನೂತನ ಐಟಿ ನೀತಿಗೆ ಸಂಪುಟ ಅನುಮೋದನೆ 188
101. ಒಳಮೀಸಲಾತಿ- ಸದಾಶಿವ ವರದಿ ಜಾರಿಗೆ ಪಟ್ಟು 190


ಕ್ರಸಂ. ವಿಷಯ ಪುಟ ಸಂಖ್ಯೆ
102. ಸೆಪೆಂಬರ್‌ 21ರಿಂದ 9-12ನೇ ತರಗತಿ ಶಾಲೆಗಳು ಪುನರಾರಂಭ 190
103. ಮಕ್ಕಳ ಸ್ನೇಹಿ ಶಾಲಾ ಪರಿಸರ ನಿರ್ಮಿಸಿ 190
104. ರಾಜ್ಯದ ವಿದ್ಯಾಗಮ ಯೋಜನೆ ಮೇಲೆ ಇಡೀ ದೇಶದ ಗಮನ 191
105. ಉಪನ್ಯಾಸಕರ ವರ್ಗಾವಣೆಗೆ ಹೊಸ ನಿಯಮ 191
106. ಉನ್ನತ ಶಿಕ್ಷಣ ಸುಧಾರಣೆಗೆ ಮಹತ್ವದ ಚರ್ಚೆ 192
107. ವಸತಿ ಶಾಲೆ ಬೋಧಕರಿಗೆ ಶೇ.10ರಷ್ಟು ವಿಶೇಷ ಭತ್ಯೆ 193
108. ಶಾಲೆ ಆರಂಭಕ್ಕೆ ಆತುರವಿಲ್ಲ: ಸುರೇಶ್‌ ಕುಮಾರ್‌ 193
ಭಾಗ-5
ರಾಜ್ಯ ನೆಲ-ಜಲ-ಭಾಷೆ ಸುದ್ದಿಗಳು
I. ಜೇವರ್ಗಿ :ೊಚ್ಚಿಹೋದ ಸೇತುವೆ 194
2. | ಮಲೆನಾಡಲ್ಲಿ ಭಾರಿ ಮಳೆ, ಬಯಲು ಸೀಮೆಗೆ ನೀರಿಲ್ಲ 194
3. | ರಿಯಲ್‌ ಎಸ್ಟೇಟ್‌ : ದಶಕದ ದಾಖಲೆ ಕುಸಿತ 195
4. |ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ 195
5. |ಕಲ್ಯಾಣ ಕರ್ನಾಟಕದಲ್ಲಿ ಭಾರಿ ಮಳೆ 196
6. | ವಾಯುಭಾರ ಕುಸಿತ - ಮುಂಗಾರು ಚುರುಕು 196
7. | ಚಂದನದಲ್ಲಿ ತರಗತಿ ಶುರು 197
8. [ಸರ್ಕಾರದಿಂದ 535 ಎಕರೆ ಕೆರೆ ಜಾಗ ಒತ್ತುವರಿ 197
9. | ಉತ್ತರ ಕರ್ನಾಟಕ : ಹಲವೆಡೆ ಭಾರಿ ಮಳೆ 198
10. | ರಾಜ್ಯ ಮುಕ್ತ ವಿವಿ ಈಗ ಹೈಟೆಕ್‌ 198
1. |3 ವರ್ಷಗಳಲ್ಲಿ ನೀರಾವರಿ ಯೋಜನೆಗಳು ಪೂರ್ಣ 199
12. |ಕೊರೋನಾ ಪತ್ತೆ, ವರದಿಯಲ್ಲಿ ಕರ್ನಾಟಕವೇ ಅತ್ಯುತ್ತಮ 200
13. |ಹುಲಿ ಸಂಖ್ಯೆ : ನಾಗರಹೊಳೆ ನಂ.2, ಬಂಡೀಪುರ ನಂ.3 200
14. |ಕಳಸಾ - ಬಂಡೂರಿ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ 201
15. | ಮೈಸೂರಿಗೂ ಬರುತ್ತೆ ಬುಲೆಟ್‌ 201
16. | ಅಂತರ್ಜಲ ಸಮೃದ್ಧಿಗೆ ರಾಜ್ಯಾದ್ಯಂತ ಕೆರೆ, ಪುನ:ಶ್ಲೇತನ 202
17. | ಬೆಂಗಳೂರು ಐಐಎಸ್‌ಸಿ 202
18. | ಯುಪಿಎಸ್ಸಿ ಕರ್ನಾಟಕಕ್ಕೆ ಖುಷಿ 203
19. | ಜಲಾಶಯಗಳಲ್ಲಿ ಹೆಚ್ಚಿದ ಒಳಹರಿವು 203
20. | ಹಲವೆಡೆ ಭಾರಿ ಮಳೆ : 9 ಸಾವು 205


ಕ್ರಸಂ. ವಿಷಯ ಪುಟ ಸಂಖ್ಯೆ
21. | ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಾಸ್ತ್ರೀಯ ಅಧ್ಯಯನ ಕೇಂದ್ರ 205
22. | ಉಕ್ಕೇರಿದ ಕೃಷ್ಣಾ ತಣ್ಣಗಾದ ಮಲಪ್ರಭ 206
23. | ಲೈಬರಿ ಪುಸ್ತಕ ಆಯ್ಕೆ ಸಮಿತಿಗೆ ಸಾಹಿತಿ ದೊಡ್ಡರಂಗೇಗೌಡ ಅಧ್ಯಕ್ಷ 207
24. ಸ್ವಚ್ಛನಗರಿ ; ಮೈಸೂರಿಗೆ ಗರಿ, ದೇಶದಲ್ಲಿ ಕರ್ನಾಟಕ ನಂ.1 207
25. |28 ನೀರಾವರಿ ಯೋಜನೆ ಕಾಮಗಾರಿ ಪ್ರಗತಿ 207
26. | ಆನೆ ಕಾರಿಡಾರ್‌ : 106 ಎಕರೆ ಸ್ಪಾಧೀನಕ್ಕೆ ಇಲಾಖೆ ಪ್ರಸ್ತಾವನೆ 208
27. | ಬೆಂಗಳೂರಿನ ಐಐಎಸ್‌ಸಿಗೆ ದೇಶದ ನಂ.1 ವಿವಿ ಪಟ್ಟ 208
28. | ಕರ್ನಾಟಕವೇ ಟಾಪ್‌ 209
29, ನಾಲ್ಕೂ ಕೆಸ್ಟ್‌ಗೇಟ್‌ ಓಪನ್‌ 209
30. | ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆ 209
31. |ಹಾನಿ ತಡೆಗೆ ಶೇ.50 ಕೆರೆ ನೀರು ಖಾಲಿ 210
ಭಾಗ- 6
ಚುನಾವಣಾ ಸುದ್ದಿಗಳು
I ಸಹಕಾರ ಸಂಘ ಚುನಾವಣೆ ರದ್ದು 211
2. ರಾಜ್ಯಸಭೆ ಸಂಸದೀಯ ಸಮಿತಿಗೆ ನೇಮಕ 211
3: ಬಿಬಿಎಂಪಿ-ವೇಳಾಪಟ್ಟಿ ಪ್ರಕಟಿಸಿದ ರಾಜ್ಯ ಚುನಾವಣಾ ಆಯೋಗ 211
4. ಮತದಾನ ಸುರಕ್ಷತಾ ಕ್ರಮ 212
5 ಒಂದು ದೇಶ, ಒಂದೇ ಚುನಾವಣೆಗೆ ಸಿದ್ದತೆ 213
6. ಜನಗಣತಿ ಪರಿಷ್ಠರಣೆ ಮುಂದೂಡಿಕೆ 214
7. ಬಹು ಹಂತಗಳಲ್ಲಿ ಗ್ರಾಮ ಪಂಚಾಯಿತ್‌ ಚುನಾವಣೆ 214
ಭಾಗ-7
ಸರ್ವೋಚ್ಛ /ಉಚ್ಛೆ ನ್ಯಾಯಾಲಯದ ಸುದ್ದಿಗಳು
1 ಮಕ್ಕಳ ರಕ್ಷಣೆಗೆ ಎಸ್‌ಓಪಿ ರೂಪಿಸಲು ನಿರ್ದೇಶನ 216
2 ಅನ್‌ಲೈನ್‌ ಅಬಾಧಿತ 216
3 ಕೊರೋನಾ : ಕೇಂದ್ರೀಕೃತ ವ್ಯವಸ್ಥೆ ರೂಪಿಸಿ 217
4 ರಾಜಮನೆತನದ ಸುಪರ್ದಿಗೆ ಅನಂತ ಪದ್ಮನಾಭ ದೇಗುಲ 218
5 ಕೊರೋನಾ ಸಂದರ್ಭದಲ್ಲೂ ರಾಜ್ಯದ ಕೋರ್ಟ್‌ಗಳಲ್ಲಿ 14000 ಕೇಸ್‌ 219
ಇತ್ಯರ್ಥ
6 ಕೆರೆ ರಕ್ಷಣೆಗೆ ಸಮಿತಿ ರಚನೆ 219


ಕ್ರಸಂ. ವಿಷಯ ಪುಟ ಸಂಖ್ಯೆ
7 ಪ್ರಜಾಪಭುತ್ತದಲ್ಲಿ ಭಿನ್ನಾಭಿಪ್ರಾಯ ಧನಿ ಹತ್ತಿಕ್ಕಲು ಸಾಧ್ಯವಿಲ್ಲ : ಸುಪ್ರೀಂ 220
8 ಸ್ಪೀಕರ್‌ ಮನವಿಗೆ ಸುಪ್ರೀಂ ತಿರಸ್ವಾರ 220
9 ಚಿಕಿತ್ಸೆ ನೀಡದವರ ವಿರುದ್ದ ದೂರಿಗೆ ಹೆಲ್ಡ್‌ಲೈನ್‌ ಆರಂಭಿಸಿ : ಹೈಕೋರ್ಟ್‌ 221
10 ಹಿಂದೂ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿ 227
11 ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು 229
12 | ಎನ್‌ಜಿಟಿ ಆದೇಶ ರದ್ದುಗೊಳಿಸಿದ ಸುಪ್ರೀಂ 223
13 ಸಾಲಗಾರರ ಸಂಕಷ್ಟಕ್ಕೆ ಸ್ಪಂದಿಸಿ 223
14 ಪದವಿ ಅಂತಿಮ ಪರೀಕ್ಷೆ ಕಡ್ಡಾಯ 224
ಭಾಗ- 8
ಹೊರ ರಾಜ್ಯ ಸುದ್ದಿಗಳು
1 ಲಾಕ್‌ಡೌನ್‌ನತ್ತ ರಾಜ್ಯಗಳ ದೃಷ್ಟಿ 225
2 ಸಚಿನ್‌ ಪೈಲಟ್‌ಗೆ ಅನರ್ಹತೆ ಭೀತಿ 295
3 ಪೈಲಟ್‌ ವಿರುದ್ದದ ಕ್ರಮಕ್ಕೆ ತಡೆ ನೀಡಿದ ಕೋರ್ಟ್‌ 226
4 ಬಂಡಾಯ ಶಾಸಕರಿಗೆ ನಾಲ್ಕು ದಿನ ರಿಲೀಫ್‌ 227
5 ಕೇರಳ : ಏಕಕಾಲದಲ್ಲಿ 50 ಸಾವಿರ ಮಂದಿಗೆ ಚಿಕಿತ್ಸೆ 227
6 ಉತ್ತರಾಖಂಡದಲ್ಲಿ ಮೇಘಸ್ರೋಟ 228
7 ದೇಶದ ಹಲವೆಡೆ ವರ್ಷಾಘಾತ 228
8 ಸುಪ್ರೀಂಕೋರ್ಟ್‌ ಮೆಟ್ಟಲೇರಿದ ರಾಜಸ್ಥಾನ ರಾಜಕೀಯ ಬಿಕ್ಕಟ್ಟು 229
9 ಅಧೀವೇಶನಕ್ಕೆ ಗೆಹ್ಲೋಟ್‌ ಹೊಸ ತಂತ್ರ 230
10 ಅಧಿವೇಶನಕ್ಕೆ ಅನುಮತಿ ನೀಡಿದ ರಾಜ್ಯಪಾಲರು 231
11 [ದಿಲ್ಲಿ ಮುಂಬೈನಲ್ಲಿ ಕೊರೋನಾ ಇಳಿಕೆ 231
12 ಅಯೋಧ್ಯೆಗೆ ಪ್ಯಾಕೇಜ್‌ 232
11 | ಆಂಧ್ರಪದೇಶಕ್ಕೆ ಮೂರು ರಾಜಧಾನಿ ಪ್ರಸ್ತಾವನೆಗೆ ಒಪ್ಪಿಗೆ 233
14 1000 ಅಡಿ ಎತ್ತರದಲ್ಲಿ ವಿಶ್ವದ ಅತಿ ಉದ್ದದ ಸುರಂಗ ರಸ್ತೆ 233
15 ರಂಗಮಂದಿರದಲ್ಲಿ ಅಧಿವೇಶನ 234
16 8 ರಾಜ್ಯಗಳಲ್ಲಿ ಶಾಲೆ ಪ್ರಾರಂಭ 234
ಭಾಗ-9
ಅಂತರರಾಷ್ಟ್ರೀಯ ಸುದ್ದಿಗಳು
J, ಭಾರತದಲ್ಲಿ ಗೂಗಲ್‌ 75 ಸಾವಿರ ಕೋಟಿ ಹೂಡಿಕೆ 235


ಕ್ರಸಂ. ವಿಷಯ ಪುಟ ಸಂಖ್ಯೆ

pl ಚೀನಾ ಮೂಗುದಾರಕ್ಕೆ ಮೋದಿ- ಅಬೆ ತಂತ್ರ 235
3. [ಪಾಕ್‌ -ಚೀನಾ ನಡುವೆ ಮೂರು ವರ್ಷದ ರಹಸ್ಯ ಒಪ್ಪಂದ ಹಂ
4. ಅಮೆರಿಕ ಅಧ್ಯಕ್ಷರಿಗಾಗಿ ಹೊಸ ಏರ್‌ ಫೋರ್ಸ್‌ ಒನ್‌ 236
5 ಲಂಕಾ ಗೆಲುವಿನತ್ತ ರಾಜಪಕ್ಸ 237
6. ಕೊರೋನಾಗೆ ಸಿಕ್ಕಿತು ಲಸಿಕೆ 237
7 ರಾಜೀನಾಮೆ ಘೋಷಿಸಿದ ಪ್ರಧಾನಿ ಶಿಂಜೊ 238

ಭಾಗ-10

ಶ್ರದ್ದಾಂಜಲಿ
I ಎ. ಕೃಷ್ಣ ಸುರಪುರ, ಹಿರಿಯ ಸಾಹಿತಿ 239
2 ಲಾಲ್‌ಜಿ ಟಂಡನ್‌, ಮಧ್ಯಪ್ರದೇಶ ರಾಜ್ಯಪಾಲ 239
3 ಅಮರಸಿಂಗ್‌, ರಾಜ್ಯಸಭಾ ಸದಸ್ಯ 239
4 ಸಿ. ಗುರುಸ್ತಾಮಿ, ಮಾಜಿ ಶಾಸಕ 240)
5 ಜಿ. ಕಸ್ತೂರಿರಂಗನ್‌, ಪಿಚ್‌ ಕುರೇಟರ್‌ 240
6 ಪ್ರಣಬ್‌ ಮುಖರ್ಜಿ, ಮಾಜಿ ರಾಷ್ಟಪತಿ 240
Yi; ಎಂ. ಜೆ. ಅಪ್ಪಾಜಿಗೌಡ, ಮಾಜಿ ಶಾಸಕರು 241
8 ರಘುವಂಶ ಪ್ರಸಾದ್‌, ಕೇಂದದ ಮಾಜಿ ಸಚಿವರು 241
9 ಕಪಿಲಾ, ಖ್ಯಾತ ನೃತ್ಯ ವಿದ್ವಾಂಸಕಿ 242
10 ಅಶೋಕ್‌ ಗಸ್ತಿ ರಾಜ್ಯ ಸಭಾ ಸದಸ್ಯರು 242
11 ಶ್ರೀ ಕೇಶವಾನಂದ ಭಾರತಿ ಸ್ಪಾಮೀಜಿ 242
12 ಪಂಡಿತ್‌ ಜಸ್‌ರಾಜ್‌, ಶಾಸ್ತ್ರೀಯ ಸಂಗೀತಗಾರರು 243
13 ಸುರೇಶ್‌ ಚನ್ನಬಸಪ್ಪ ಅಂಗಡಿ, ಕೇಂದ್ರ ಸಚಿವರು 243
14 ಡಾ:ಎಸ್‌.ಪಿ.ಬಾಲಸುಬ್ರಮಣ್ಯಂ, ಖ್ಯಾತ ಗಾಯಕ 244
15 ಬಿ. ನಾರಾಯಣರಾವ್‌, ಮಾನ್ಯ ಶಾಸಕರು 245
16 ಜಸ್ಸಂತ್‌ ಸಿಂಗ್‌, ಮಾಜಿ ರಕ್ಷಣಾ ಸಚಿವರು 245
17 ವಿದ್ವಾಂಸ ಶಾಂತವೀರಯ್ಯ, ಹಿರಿಯ ಸಾಹಿತಿ 246

ಭಾಗ-11

ಪ್ರಮುಖ ಲೇಖನಗಳು

1 ಕೊರೋನಾ ಸಂಕಷ್ಟವನ್ನು ಸಮುದಾಯ ಅವಕಾಶವಾಗಿ 247


ಪರಿವರ್ತಿಸಿಕೊಳ್ಳಬೇಕು


XIV


ಕ್ರಸಂ. ವಿಷಯ ಪುಟ ಸಂಖ್ಯೆ
2 ಮೇಲ್ಮನೆಗೆ ನಾಮನಿರ್ದೇಶನ ನೇಪಥ್ಯಕ್ಕೆ ಸರಿದ ಸದಾಶಯ 250
3 ಕಾರ್ಗಿಲ್‌ ವಿಜಯ ದಿವಸ 251
4 ಹುಲಿ : ಆರೋಗ್ಯಕರ ಜೀವ ವೈವಿಧ್ಯತೆಯ ಸಾರ 253
5 ಭಾರತೀಯ ಶಿಕ್ಷಣ ಪರಂಪರೆಯನ್ನು ಇನ್ನಷ್ಟು ಸದೃಢಗೊಳಿಸಲಿದೆ ರಾಷ್ಟೀಯ 254
ಶಿಕ್ಷಣ ನೀತಿ
6 ಹೂಸ ಶಿಕ್ಷಣ ನೀತಿ ನವಭಾರತಕ್ಕ ಭವ್ಯ ಮುನ್ನುಡಿ 257
7 ಪೆಂಡಿತ್‌ ನೆಹರೂ ಸಮಯಖಪುಜ್ಞೆ 259
8 ಯಾವುದು ಟೀಕ, ಯಾವುದು ನ್ಯಾಯಾಂಗ ನಿಂದ 262
9 ನಾನೆಂದೂ ಮರೆಯದ ನಾಯಕ ರಾಮಕೃಷ್ಣ ಹೆಗಡೆ 265
10 |ಒಳ ಏಟಿನ ಭೀತಿ - ಹೆಜ್ಜೆ ಮುಂದಿಕ್ಕಲು ಹಿಂದೇಟು 268
11 ಸಾಮಾಜಿಕ ಹಗರಣ 269
12 ಪ್ರಶ್ನೋತ್ತರ ಕಲಾಪದ ಮಹತ್ತವೇನು 271
13 House can select Deputy Speaker 273
14 ಪದೇ ಪದೇ ಸುಗೀವಾಜ್ಞೆ, ಸಮಂಜಸವೇ 275


ಸೂಚನೆ: - ಇಲ್ಲಿ ಆಯ್ಕೆ ಮಾಡಿರುವ


ಲೇಖನಗಳು ಪ್ರಮುಖ ದಿನಪ್ರತಿಕೆಗಳಿಂದ ಆಯ್ದು ಪ್ರಕಟಿಸಲಾಗಿದೆ.


ಇಲ್ಲಿನ ಅಭಿಪ್ರಾಯಗಳು ಸಂಪೂರ್ಣ ಲೇಖಕರದ್ದಾಗಿರುತ್ತದೆ.


ಭಾಗ-1
ವಿಧಾನ ಮಂಡಲದ ಸುದ್ದಿಗಳು


1. ಪರಿಷತ್‌ ಸದಸ್ಯರಾಗಿ ಗೋವಿಂದರಾಜು ಪ್ರಮಾಣ

ವಿಧಾನ ಪರಿಷತ್‌ನ ನೂತನ ಸದಸ್ಯರಾಗಿ ಜೆಡಿಎಸ್‌ನ ಗೋವಿಂದರಾಜು, ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ
ಸಮ್ಮುಖದಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ಟೀಕರಿಸಿದರು.

ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆದಿದ್ದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ
ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು ತಮಗೆ ರಾಜಕೀಯ ಕ್ಷೇತ್ರ ಹೊಸದಾಗಿದ್ದು, ಪಕ್ಷದ ಮುಖಂಡರು ತಮ್ಮ ಮೇಲೆ ದೊಡ್ಡ ಜವಾಬ್ದಾರಿ
ವಹಿಸಿದ್ದಾರೆ. ಪಕ್ಷದ ನಾಯಕ ಎಚ್‌.ಡಿ.ಕುಮಾರ್‌ಸ್ಟಾಮಿ ಹೇಳಿದಂತೆ ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆಗೆ
ಪ್ರಾಮಾಣಿಕ ಪ್ರಯತ್ನ ಮಾಡಿ, ತಮ್ಮ ಮೇಲೆ ಪಕ್ಷ ಇಟ್ಟಿರುವ ನಂಬಿಕೆ ಹುಸಿಯಾಗದಂತೆ ಜವಾಬ್ದಾರಿ
ನಿರ್ವಹಿಸುವುದಾಗಿ ಹೇಳಿದರು.

ಪ್ರಮಾಣ ವಚನ ಸ್ಪೀಕಾರ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಕೋಲಾರ ಶಾಸಕ ಶ್ರೀನಿವಾಸ ಗೌಡ,
ವಿಧಾನ ಪರಿಷತ್‌ ಸದಸ್ಯ ಚೌಡರೆಡ್ಡಿ ತೂಪಲ್ಲಿ ಉಪಸ್ಥಿತರಿದ್ದರು.

ಆಧಾರ:ಉದಯವಾಣಿ, ದಿನಾ೦ಕ:08.07.2020
ಶಿ, ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಶರವಣ

ಸಾಯಿ ಗೋಲ್ಡ್‌ ಪ್ಯಾಲೇಸ್‌ ಮಾಲೀಕ ಶರವಣ ಅವರ ವಿಧಾನ ಪರಿಷತ್‌ ಸದಸೃತ್ವ್ತದ ಅವಧಿ
ಮುಕ್ತಾಯಗೊಂಡಿದ್ದು, ತನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದಿದ್ದಾರೆ. ಅವರು,
ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೂಡುಗೆ ಸಮಾರಂಭದಲ್ಲಿ ಮಾತನಾಡಿ, "ಸಣ್ಣ ಸಮುದಾಯದಿಂದ ಬಂದ
ನಾನು ರಾಜ್ಯಮಟ್ಟದ ನಾಯಕನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಸನ್ಮಾನ್ಯ ಜೆಡಿಎಸ್‌ ರಾಷ್ಟ್ರಾಧ್ಯಕ್ಷ
ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ್‌ಸ್ತಾಮಿ ಹಾಗೂ ರೇವಣ್ಣ ಅವರಿಗೆ
ಅಭಾರಿಯಾಗಿದ್ದೇನೆ' ಎಂದು ತಿಳಿಸಿದರು.

ನನ್ನ ಅಧಿಕಾರಾವಧಿಯಲ್ಲಿ ನಡೆದ 15 ಅಧಿವೇಶನಗಳ 244 ದಿನಗಳಲ್ಲಿ ಒಟ್ಟು 239 ದಿನಗಳಲ್ಲಿ
ಹಾಜರಿದ್ದು ಚರ್ಚೆಯಲ್ಲಿ ಪಾಲ್ಗೊಂಡಿದ್ದೇನೆ. ಜನಪರವಾದ ಎಲ್ಲ ಚರ್ಚೆಗಳಲ್ಲಿ ಭಾಗವಹಿಸಿ ಹೋರಾಟ
ನಡೆಸಿದ್ದೇನೆ. ನನ್ನ ಅಧಿಕಾರಕ್ಕೆ ಸಂಬಂಧಿಸಿದಂತೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನ್ಯಾಯ ದೊರಕಿಸಿಕೊಡಲು
ಪ್ರಾಮಾಣಿಕ ಶ್ರಮ ಹಾಕಿದ್ದೇನೆ. ಈ ಅಧಿಕಾರಾವಧಿಯಲ್ಲಿ ಮೂರು ಸರ್ಕಾರಗಳಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ
ನನಗೆ ದೊರೆತಿದೆ. ಸನ್ಮಾನ್ಯ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರ
ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್‌ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ನೆನಹು
ಮಾಡಿಕೊಂಡರು.

16 ಎಂಎಲ್‌ಸಿಗಳಿಗೆ ಬೀಳ್ಕೊಡುಗೆ: ವಿಧಾನಸೌಧದಲ್ಲಿ ಮಾನ್ಯ ಸಭಾಪತಿಗಳು 16 ಎಂಎಲ್‌ಸಿಗಳಿಗೆ
ಬೀಳ್ಕೊಟ್ಟು, ನೆನಪಿನ ಕಾಣಿಕೆ ನೀಡಿದ್ದಾರೆ. ಈ ದಿನವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಶರವಣ
ಹೇಳಿದ್ದಾರೆ.

ಆಧಾರ: ವಿಜಯ ಕರ್ನಾಟಕ, ದಿನಾಂ೦ಕ:14.07.2020
3. ಮೇಲ್ಮನೆಗೆ ಮೂವರ ಜೊತೆಗೆ ಸಾಧಕರಿಬ್ಬರು

ರಾಜ್ಯ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಕೋಟಾದಲ್ಲಿ ಐವರನ್ನು ನಾಮಕರಣ ಮಾಡಲಾಗಿದ್ದು
ಎರಡು ಹೊಸ ಮುಖಗಳಿಗೆ ಶಾಸನಸಭೆ ಪ್ರವೇಶ ಕೋರಿದೆ.

ಮಾಜಿ ಸಚಿವರಾದ ಎಚ್‌.ವಿಶ್ವನಾಥ್‌, ಸಿ.ಪಿ.ಯೋಗೇಶ್ವರ, ಮಾಜಿ ಎಂಎಲ್‌ಸಿ ಭಾರತಿ ಶೆಟ್ಟಿ ವನವಾಸಿ
ಕಲ್ಯಾಣ ಯೋಜನೆಯ ಪ್ರವರ್ತಕ ಶಾಂತಾರಾಮ ಸಿದ್ದ ಹಾಗೂ ಶಿಕ್ಷಣ ತಜ್ಞ ತಳವಾರ್‌ ಸಾಬಣ್ಣ ಮೇಲ್ಲನೆ
ಪ್ರವೇಶಿಸಿರುವ ಗಣ್ಯರು.


ಸಿಎಂ.ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಪರಿಷತ್‌
ನಾಮಕರಣ ಸದಸ್ಕರ ಪಟ್ಟಿಯನ್ನು ಸಲ್ಲಿಸಿದರು. ಬಳಿಕ ಇದಕ್ಕೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ
ಅಧಿಸೂಚನೆ ಪ್ರಕಟಿಸಲಾಯಿತು.
ಬಿಜೆಪಿ ಬಲ ಹೆಚ್ಚಳ: ಪರಿಷತ್‌ಗೆ ಐವರ ನಾಮಕರಣದೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯ ಸಂಖ್ಯಾಬಲವು
22ರಿಂದ 27ಕ್ಕೆ ಏರಿದಂತಾಗಿದೆ. ಉಳಿದಂತೆ ಕಾಂಗೆಸ್‌ 28, ಜೆಡಿಎಸ್‌ 14 ಹಾಗೂ ಒಬ್ಬರು ಪಕ್ಷೇತರ
ಸದಸ್ಯರಿದ್ದಾರೆ.
ಆಧಾರ: ವಿಜಯರ್ನಾಟಕ, ದಿನಾಂ೦ಕ:23.07.2020
4. ಹೊಸ ಶಿಕ್ಷಣ ನೀತಿಗೆ ಕಾಗೇರಿ ಸ್ಟಾಗತ


ಶಾಲಾ ಶಿಕ್ಷಣದಲ್ಲಿ ಏಕರೂಪತೆ, ಜ್ಞಾನ, ಕೌಶಲತೆ ಹಾಗೂ ಆರ್ಥಿಕತೆಯನ್ನು ಮುಂಚೂಣಿಗೆ ತರುವ
ಉದ್ದೇಶದಿಂದ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ತೀರ್ಮಾನಿಸಿರುವ ಹೊಸ ಶಿಕ್ಷಣ ನೀತಿಯನ್ನು ವಿಧಾನ
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಾಗತಿಸಿದ್ದಾರೆ.

ಹೊಸ ಪೀಳಿಗೆಯ ಮಕ್ಕಳ ಬುದ್ದಿ ಮತ್ತು ಕಲಿಕಾ ಸಾಮರ್ಥ ಹಾಗೂ ಅವರ ಆಸಕ್ತಿ ಬೇಕು
ಬೇಡಗಳನ್ನು ಗಮನದಲ್ಲಿಟ್ಟುಕೊಂಡು, ಕಲಿಕೆ ಆನಂದದಾಯಕ ಹಾಗೂ ಅರ್ಥಪೂರ್ಣವಾಗುವ ನಿಟ್ಟಿನಲ್ಲಿ ಪೌಢ
ಹಂತದಿಂದ ಹೆಚ್ಚಿನ ವಿಷಯಗಳ ಆಯ್ಕೆಗೆ ಅವಕಾಶ ನೀಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನೀತಿ ಅನುಷ್ಠಾನದಿಂದ ಮಕ್ಕಳು ಶಾಲೆ ಬಿಡುವ ಪ್ರಮಾಣ ಕಡಿಮೆಯಾಗುವ ಜೊತೆಗೆ ಕೌಶಲ್ಯವನ್ನು
ಕಲಿಸುತ್ತದೆ. ಶಾಲಾ ಶಿಕ್ಷಣದಲ್ಲಿ ಏಕರೂಪತೆ, ವಿದ್ಯಾರ್ಥಿ ಒಂದು ಹಂತದ ಶಿಕ್ಷಣ ಮುಗಿಸಿದ ನಂತರ
ಯಾವುದಾದರೂ ಒಂದು ಕೌಶಲ್ಕದಲ್ಲಿ ನೈಪುಣ್ಯತೆ ಪಡೆಯಬಹುದಾಗಿದೆ. ಪಿಯು ಹಾಗೂ ಪೌಢ ಹಂತವನ್ನು
ಒಟ್ಟಿಗೆ ತಂದಿರುವುದರಿಂದ ಈವರೆಗಿನ ಕಲಿಕಾ ಅಂತರ ಹೋಗಲಾಡಿಸಲು ಅನುಕೂಲವಾಗಿದೆ ಎಂದರು.


ಆಧಾರ : ಉದಯವಾಣಿ, ದಿನಾ೦ಕ:31.07.2020


5. ಅಧಿವೇಶನಕ್ಕೆ ಸೂಕ್ತ ಸ್ಥಳ ಪರಿಶೀಲಿಸಲು ಅಧಿಕಾರಿಗಳಿಗೆ ಸ್ಪೀಕರ್‌ ಸೂಚನೆ


ಸೆಪ್ಟೆಂಬರ್‌ 2020 ರಲ್ಲಿ ಕರ್ನಾಟಕ ವಿಧಾನ ಸಭೆಯ ಅಧಿವೇಶನವನ್ನು ರಾಜ್ಯದಲ್ಲಿ ಕೊರೋನಾ ವೈರಸ್‌
ಹರಡುತ್ತಿರುವ ಹಿನ್ನೆಲೆಯಲ್ಲಿ ಯಾವ ರೀತಿ ನಡೆಸಬಹುದು ಎಂಬ ಬಗ್ಗೆ ದಿನಾಂಕ 23-08-2020 ರಂದು
ಸನ್ಮಾನ್ಯ ಸಭಾಧ್ಯಕ್ಷರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಸರ್ಕಾರದ ಮುಖ್ಯ
ಕಾರ್ಯದರ್ಶಿ ಅವರೊಂದಿಗೆ ವಿಧಾನ ಸಭೆಯ ಸಭಾಂಗಣವನ್ನು ವೀಕ್ಷಿಸಿ, ಚರ್ಚಿಸುತ್ತಿರುವುದು.


ಸೆಪ್ಟೆಂಬರ್‌ 2020 ರಲ್ಲಿ ಕರ್ನಾಟಕ ವಿಧಾನ ಸಭೆಯ ಅಧಿವೇಶನವನ್ನು ರಾಜ್ಯದಲ್ಲಿ ಕೊರೋನಾ ವೈರಸ್‌
ಹರಡುತ್ತಿರುವ ಹಿನ್ನೆಲೆಯಲ್ಲಿ ಯಾವ ರೀತಿ ನಡೆಸಬಹುದು ಎಂಬ ಬಗ್ಗೆ ದಿನಾ೦ಂಕ27-08-2020 ರಂದು
ಸನ್ಮಾನ್ಯ ಸಭಾಧ್ಯಕ್ಷರು, ಸರ್ಕಾರಿ ಮುಖ್ಯ ಸಚೇತಕರು, ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ
ಜಾತ್ಯಾತೀತ ಜನತಾ ದಳದ ಮುಖ್ಯ ಸಚೇತಕರೊಂದಿಗೆ ವಿಧಾನ ಸಭೆಯ ಸಭಾಂಗಣವನ್ನು ವೀಕ್ಷಿಸಿ,
ಚರ್ಚಿಸುತ್ತಿರುವುದು.


ಸಾಮಾಜಿಕ ಅಂತರ ಕಾಯ್ದುಕೊಂಡು ವಿಧಾನಸಭೆಯಲ್ಲಿ ಮುಂದಿನ ಅಧಿವೇಶನ ನಡೆಸಲು ವ್ಯವಸ್ಥೆ
ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬೇರೆ ಎಲ್ಲಾದರೂ ಇದಕ್ಕಿಂತ ವಿಶಾಲ ಸ್ಥಳವಿದೆಯೇ ಎಂಬ ಬಗ್ಗೆ ಸೂಕ


ಪರಿಶೀಲನೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ನೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ.


ಕಳೆದ ಮಾರ್ಚ್‌ನಲ್ಲಿ ಅಧಿವೇಶನ ನಡೆಸಲಾಗಿದ್ದು, ಸಂವಿಧಾನದ ಅವಕಾಶದಂತೆ 6 ತಿಂಗಳ
ಅಂತರವಿಲ್ಲದಂತೆ ಕಲಾಪ ನಡೆಸಬೇಕಾಗಿದೆ. ಸೆಪ್ಪಂಬರ್‌ 23ರ ಒಳಗೆ ವಿಧಾನಮಂಡಲ ಅಧಿವೇಶನ
ಕರೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಸಭೆ ನಡೆಸಿದರು. ಜೊತೆಗೆ ವಿಧಾನಸಭೆಯಲ್ಲಿ ಸಾಮಾಜಿಕ
ಅಂತರ ಕಾಯ್ದುಕೊಳ್ಳಲು ಸಾಧ್ಯವೇ ಎಂಬ ಬಗ್ಗೆಯೂ ಪರಿಶೀಲಿಸಿದರು. ಸದನದಲ್ಲಿ ಸಚಿವ ಸಂಪುಟದ
ಸದಸ್ಯರು, ಶಾಸಕರು, ಅಧಿಕಾರಿಗಳು ಹಾಗೂ ಮಾಧ್ಯಮದವರ ಆರೋಗ್ಯಕ್ಕೆ ಕೋವಿಡ್‌-19 ತಗುಲದಂತೆ ಕ್ರಮ
ವಹಿಸುವುದು ಹೇಗೆ ಎಂಬುದರ ಬಗ್ಗೆ ಪರಿಶೀಲನೆ ಕೈಗೊಂಡರು.

ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭಾ ಸಭಾಂಗಣದಲ್ಲಿ ಪ್ರಸ್ತುತ ಇರುವ ಆಸನ
ವ್ಯವಸ್ಥೆಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗಾಜಿನ ಕವಚಗಳನ್ನು ಅಳವಡಿಸಿದರೆ ಹೇಗೆ ಎಂದು
ಯೋಚಿಸಲಾಗುತ್ತಿದೆ. ಸದನಕ್ಕೆ ಆಗಮಿಸುವ ಸಿಎಂ ಒಳಗೊಂಡಂತೆ ಅವರ ಸಂಪುಟದ ಎಲ್ಲ ಸದಸ್ಯರು, ಪ್ರತಿಪಕ್ಷ
ನಾಯಕರು, ಸದನದ ಎಲ್ಲ ಸದಸ್ಯರು ಮಾಸ್ಕ್‌ ಧರಿಸಿ ಬರಲು ವನಂತಿಸಿಕೊಳ್ಳಲಾಗುತ್ತದೆ ಎಂದರು.

ಲೋಕಸಭೆ ಮತ್ತು ರಾಜ್ಯಸಭೆ ಹಾಗೂ ಇತರ ರಾಜ್ಯಗಳ ವಿಧಾನಮಂಡಲ ಸಮಾವೇಶಗೊಳ್ಳಲು ಯಾವ
ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ವಾರ
ಸಂಸದೀಯ ವ್ಯವಹಾರಗಳ ಸಚಿವರು. ಮುಖ್ಯ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ
ಸಮಾಲೋಚಿಸಿ ಸ್ಥಳ ನಿಷ್ಪರ್ಷೆ ಮಾಡಲಾಗುವುದು ಎಂದು ತಿಳಿಸಿದರು.


ಕೋವಿಡ್‌-19 ಉಪಟಳ ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಅಧಿವೇಶನವನ್ನು ನಡೆಸುವುದು ಹೇಗೆ ಎಂಬ
ಬಗ್ಗೆ ನಾನಾ ಸ್ವರಗಳಲ್ಲಿ ವಿಸ್ತೃತ ಚರ್ಚೆ ನಡೆಯುತ್ತಿದೆ. ವಿಧಾನಸೌಧ ಹೊರತುಪಡಿಸಿ ಬೇರೆಲ್ಲಾದರೂ ಅಧಿವೇಶನ
ನಡೆಸಲು ಸೂಕ್ತ ಸ್ಥಳ ಇದೆಯೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಸಭಾಧ್ಯಕ್ಷರು ತಿಳಿಸಿದರು.


ಆಧಾರ:ವಿಜಯಕರ್ನಾಟಕ, ದಿನಾಂ೦ಕ:07.08.2020


6. ಬಿಬಿಎಂಪಿ ಮಸೂದೆ ಪರಾಮರ್ಶೆಗೆ ಜಂಟಿ ಪರಿಶೀಲನಾ ಸಮಿತಿ ರಚನೆ
ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಿಂದ ವಿರೋಧಕ್ಕೆ ಒಳಗಾಗಿದ್ದ "ಬೃಹತ್‌
ಬೆಂಗಳೂರು ಮಹಾನಗರ ಪಾಲಿಕೆ ಮಸೂದೆ-2020'ರ ಪರಾಮರ್ಶೆಗೆ ವಿಧಾನಮಂಡಲದ ಜಂಟಿ ಪರಿಶೀಲನಾ
ಸಮಿತಿ ರಚಿಸಲಾಗಿದೆ.


ಬಿಬಿಎಂಪಿಯನ್ನು ಮೂರು ಭಾಗವಾಗಿ ವಿಂಗಡಿಸುವ ಉದ್ದೇಶವನ್ನು ಹೊಂದಿದ್ದ ಈ ಮಸೂದೆಯನ್ನು
ಮೂರು ರಾಜಕೀಯ ಪಕ್ಷಗಳು ವಿರೋಧಿಸಿದ್ದವು. ಇದು ಮೇಯರ್‌, ಸದಸ್ಯರು ಮತ್ತು ಶಾಸಕರ ಅಧಿಕಾರವನ್ನು
ಕಸಿದುಕೊಳ್ಳುತ್ತದೆ. ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಆದ್ದರಿಂದ ಅದನ್ನು ಹಿಂದಕ್ಕೆ ಪಡೆದು
ಮಸೂದೆಯ ಪರಾಮರ್ಶೆಗೆ ಜಂಟಿ ಪರಿಶೀಲನಾ ಸಮಿತಿ ರಚಿಸಬೇಕು ಎಂದು ಮಾರ್ಚ್‌ 24ರಂದು
ವಿಧಾನಸಭೆಯಲ್ಲಿ ಬೆಂಗಳೂರಿನ ಶಾಸಕರು ಒತ್ತಾಯಿಸಿದ ಕಾರಣ ಜಂಟಿ ಪರಿಶೀಲನಾ ಸಮಿತಿ ರಚಿಸಲು
ಸರ್ಕಾರ ಒಪ್ಪಿಗೆ ಸೂಚಿಸಿತ್ತು.

ಮೂರು ಪಕ್ಷಗಳ ಸದಸ್ಯರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಾಗೇರಿಗೆ ಪತ್ರ ಬರೆದು ಜಂಟಿ
ಪರಿಶೀಲನಾ ಸಮಿತಿ ರಚಿಸಬೇಕು ಎಂದು ಆಗಹಿಸಿದ್ದರು. ಬೆಂಗಳೂರಿನ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ
ಮಸೂದೆ ತರಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದ್ದರೂ, ಶಾಸಕರು ಒಪ್ಪಿರಲಿಲ್ಲ.

ಸಮಿತಿ ಸದಸ್ಯರು: ಶಾಸಕರಾದ ಎಸ್‌.ರಘು, ಎಲ್‌.ಎ.ರವಿಸುಬ್ರಮಃಣ್ಯ, ಎಂ.ಕೃಷ್ಣಪ್ತ ಎಂ.ಸತೀಶ್‌ ರೆಡ್ಡಿ,
ಅರವಿಂದ ಲಿಂಬಾವಳಿ, ಉದಯ ಗರುಡಾಚಾರ್‌, ಎಸ್‌.ಆರ್‌. ವಿಶ್ವನಾಥ್‌. ರಾಜೂ ಗೌಡ, ರಾಮಲಿಂಗಾರೆಡ್ಡಿ,
ದಿನೇಶ್‌ಗುಂಡೂರಾವ್‌, ಕೃಷ್ಣಬೈರೇಗೌಡ, ಆರ್‌. ಮಂಜುನಾಥ್‌. ಡಾ: ಕೆ, ಶ್ರೀನಿವಾಸಮೂರ್ತಿ, ವಿಧಾನಪರಿಷತ್‌
ಸದಸ್ಯರಾದ ಕೆ. ಗೋವಿಂದರಾಜು, ಎಂ. ನಾರಾಯಣಸ್ವಾಮಿ, ಪಿ.ಆರ್‌. ರಮೇಶ್‌, ಕೆ.ಎ. ತಿಪ್ಪೇಸ್ವಾಮಿ,
ಎನ್‌.ರವಿಕುಮಾರ್‌, ಅ.ದೇವೇಗೌಡ ಮತ್ತು ತೇಜಸ್ಥಿನಿ ಗೌಡ.


ಆಧಾರ:ಪ್ರಜಾವಾಣಿ, ದಿನಾಂಕ:12.08.2020
7. ಕರ್ನಾಟಕ ಶಾಸಕಾಂಗ ಪತ್ರಿಕೆಗೆ ಮರು ಚಾಲನೆ


ದಿನಾಂಕ 27-8-2020ರಂದು ಕರ್ನಾಟಕ ಶಾಸಕಾಂಗ ಪತ್ರಿಕೆಯ ಸಂಪುಟ-1 ಸಂಚಿಕೆ-1, 2 ಮತ್ತು
ಸಂಹುಟ-11, ಸಂಚಿಕೆ-1ಗಳನ್ನು ವಿಧಾನ ಪರಿಷತ್ತಿನ ಸನ್ಮಾನ್ಯ ಸಭಾಪತಿಗಳು ಹಾಗೂ ವಿಧಾನ ಸಭೆಯ
ಸನ್ಮಾನ್ಯ ಸಭಾಧ್ಯಕ್ಷರು ಬಿಡುಗಡೆಗೊಳಿಸುವ ಮೂಲಕ ತ್ರೈಮಾಸಿಕ ಪತ್ರಿಕೆಯ ಪ್ರಕಟಣೆಗೆ ಮರು ಚಾಲನೆ
ನೀಡಿದರು. ಈ ಸಂದರ್ಭದಲ್ಲಿ 15ನೇ ವಿಧಾನಸಭೆಯ ಸದಸ್ಯರ ಪರಿಚಯ ಪುಸ್ತಕವನ್ನು
ಬಿಡುಗಡೆಗೊಳಿಸಿದರು.


ಪ್ರಿ ಮ್‌ 3
ಆನಾಣಟತ ಏಧಾನಮಂಡಲ
ಸತಾಂಗ ಪಪ್ರಕೆ $” ಸರನೇ ವಿಧಾನ ಸಭಾ ಸದಸ್ಯಠ ಪಲಿಜಯ


ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಯಾಗುವ ಪ್ರಮುಖ ಸಂಗತಿಗಳು, ಉಭಯ
ಸದನಗಳ ಸದಸ್ಯರು, ಅಧಿಕಾರಿ ಹಾಗೂ ಸಿಬ್ಬಂದಿಯ ಲೇಖನ ಪ್ರಕಟಿಸುವ ಕರ್ನಾಟಕ ಶಾಸಕಾಂಗ ಪತ್ರಿಕೆಗೆ
ಮರು ಚಾಲನೆ ನೀಡಲಾಗಿದೆ.


ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರು ಕರ್ನಾಟಕ
ಶಾಸಕಾಂಗ ಪತ್ರಿಕೆ ಬಿಡುಗಡೆ ಮಾಡಿ, ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಪತ್ರಿಕ ಇನ್ನು ಮುಂದೆ
ನಿರಂತರವಾಗಿ ಪ್ರಕಟವಾಗಲಿದೆ ಎಂದರು.


ಪತ್ರಿಕೆಯಲ್ಲಿ ಅಧಿವೇಶನದಲ್ಲಿ ನಡೆದ ಮುಖ್ಯ ಸಂಗತಿಗಳು, ವಿಧಾನ ಮಂಡಲದ ಸದಸ್ಯರು ಹಾಗೂ
ಅಧಿಕಾರಿ-ಸಿಬ್ಬಂದಿಯ ಅತ್ಯುತ್ತಮ ಲೇಖನಗಳನ್ನು ಪ್ರಕಟಿಸಲಾಗುವುದು. ಈ ಹಿಂದೆ ಕರ್ನಾಟಕ ವಿಧಾನ
ಮಂಡಲ ಹೊರತರುತ್ತಿದ್ದ ಪತ್ರಿಕೆಯ ಪ್ರತಿ ಗಂಥಾಲಯದಲ್ಲಿ ಇತ್ತೀಚೆಗೆ ನನ್ನ ಕಣ್ಣಿಗೆ ಬಿದ್ದಿತು. ಹೀಗಾಗಿ, ಮತ್ತೆ
ಚಾಲನೆ ನೀಡಿದ್ದೇನೆ. ಉತ್ತರ ಪ್ರದೇಶ ರಾಜ್ಯದ ವಿಧಾನ ಮಂಡಲ ಹೊರ ತರುತ್ತಿರುವ "ಸಂಸದೀಯ ದೀಪಿಕಾ”
ನನಗೆ ಸ್ಫೂರ್ತಿಯಾಗಿದೆ ಎಂದರು.


ಕಳೆದ ವರ್ಷ ರಾಜ್ಯದಲ್ಲಿ ಸರ್ಕಾರದ ಬದಲಾವಣೆ ಹಿನ್ನೆಲೆಯಲ್ಲಿ ಶಾಸಕರ ಕಿರು ಪರಿಚಯ ಪುಸ್ತಕ
ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಸರ್ಕಾರ ವರ್ಷ ಪೂರೈಸಿರುವುದರಿಂದ ಈಗ ಬಿಡುಗಡೆ ಮಾಡಲಾಗಿದ್ದು,
ಇದರಿಂದ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ತಮ್ಮ ಪ್ರತಿನಿಧಿಗಳ ಕುರಿತು ಸಂಪೂರ್ಣ ಮಾಹಿತಿ
ಸಿಗಲಿದೆ. ಇದನ್ನು ಪಿಡಿಎಫ್‌ ಮಾದರಿಯಲ್ಲಿ ವಿಧಾನ ಮಂಡಲದ ಜಾಲತಾಣದಲ್ಲಿ ಸಹ ಆಪ್‌ ಲೋಡ್‌
ಮಾಡಲಾಗುವುದು ಎಂದು ತಿಳಿಸಿದರು.


ಸಂಗ್ರಹ ಯೋಗ್ಯ: ವಿಧಾನ ಪರಿಷತ್‌ ಸಭಾಪತಿ ಕೆ. ಪ್ರತಾಪ ಚಂದಶೆಟ್ಟಿ ಮಾತನಾಡಿ ಕರ್ನಾಟಕ
ಶಾಸಕಾಂಗ ಪತ್ರಿಕೆ ಅತ್ಯುತ್ತಮ ವಿಷಯ ಒಳಗೊಂಡ ಪತ್ರಿಕೆ. ಇದರಲ್ಲಿ ರಾಜ್ಯದ ವಿಧಾನ ಮಂಡಲದ ಉಭಯ
ಸದನ, ಸಂಸತ್‌ನ ಉಭಯ ಸದನಗಳಲ್ಲಿ ನಡೆದ ಅತ್ಯುತ್ತಮ ಚರ್ಚೆ ಹಾಗೂ ಘಟನೆಗಳು ಇರಲಿದ್ದು, ಸಂಗ್ರಹ
ಯೋಗ್ಯ ಎಂದರು. ವಿಧಾನ ಪರಿಷತ್‌ನ ಕಾರ್ಯದರ್ಶಿ ಕೆ. ಆರ್‌. ಮಹಾಲಕ್ಷ್ಮಿ ಮತ್ತು ವಿಧಾನ ಸಭೆಯ
ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.


ಆಧಾರ:ಉದಯವಾಣಿ, ದಿನಾ೦ಕ:28.08.2020


————U——


8. ಕಲಾಪದಲ್ಲಿ 36 ವಿಧೇಯಕ ಅಂಗೀಕಾರ
ಕೊರೋನಾ ನಡುವೆಯೂ ಕಲಾಪ ಯಶಸ್ವಿ :- ಸ್ಪೀಕರ್‌


ರಾಜ್ಯದಲ್ಲಿ ಕೊರೋನಾ ಆತಂಕದ ನಡುವೆಯು ಈ ಬಾರಿ ಮುಂಗಾರು ಅಧಿವೇಶನ ಉತ್ತಮ
ರೀತಿಯಲ್ಲಿ ನಡೆದಿದ್ದು, ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ವಿಧಾನ ಸಭಾಧ್ಯಕ್ಷ ವಶ್ವೇಶ್ವರ
ಹೆಗಡೆ, ಕಾಗೇರಿ ಹೇಳಿದರು.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನಾ ಆತಂಕದಲ್ಲಿ ಆರು ದಿನದಲ್ಲಿ 40 ಗಂಟೆ
ಕಲಾಪ ನಡೆದಿದೆ. ವಿಧೇಯಕಗಳ ಬಗ್ಗೆ 14 ಗಂಟಿ 22 ನಿಮಿಷ ಚರ್ಚೆಯಲ್ಲಿ ಭಾಗವಹಿಸಿ ಅತ್ಯುತ್ತಮ
ಚರ್ಚೆಯಾಗಿರುವುದು ಈ ಬಾರಿ ಅಧಿವೇಶನದ ದಾಖಲೆಯಾಗಿದೆ ಎಂದರು. 37 ವಿಧೇಯಕಗಳ ಪೈಕಿ 36
ವಿಧೇಯಕಗಳನ್ನು ಚರ್ಚಿಸಿ ಅಂಗೀಕರಿಸಲಾಗಿದೆ. ಒಂದು ವಿಧೇಯಕ ಮಾತ್ರ ಚರ್ಚಿಸಿ ತಡೆ ಹಿಡಿಯಲಾಗಿದೆ
ಎಂದು ಸ್ಪಷ್ಟಪಡಿಸಿದರು.


ಒಟ್ಟು 3,071 ಪ್ರಶ್ನೆಗಳನ್ನು ಸ್ಟೀಕರಿಸಲಾಗಿದ್ದು, ಅದರಲ್ಲಿ 1109 ಪ್ರಶ್ನೆಗಳ ಉತ್ತರಗಳನ್ನು ಸದನದಲ್ಲಿ
ಮಂಡಿಸಲಾಗಿದೆ. ಈ ಅಧಿವೇಶನದಲ್ಲಿ ಸದಸ್ಯರಿಗೆ ಮತ್ತು ಪತ್ರಿಕಾ ಮಾಧ್ಯಮದವರಿಗೆ ಲಿಖಿತ ಮೂಲಕ
ಉತ್ತರಿಸಲಾಗುವ ಪ್ರಶ್ನೆಗಳನ್ನು ಇ - ಮೇಲ್‌ ಮೂಲಕ ಒದಗಿಸಿರುವುದು ಒಂದು ವಿಶೇಷವಾಗಿದೆ ಎಂದರು.


ನಿಯಮ 351ರಡಿಯಲ್ಲಿ 60 ಸೂಚನೆಗಳನ್ನು ಅಂಗೀಕರಿಸಿದ್ದು, ಅದರಲ್ಲಿ 35 ಸೂಚನೆಗಳಿಗೆ
ಉತ್ತರಗಳನ್ನು ಸ್ಪೀಕರಿಸಲಾಗಿದೆ. ಗಮನ ಸೆಳೆಯುವ 129 ಸೂಚನೆಗಳ ಪೈಕಿ 9 ಸೂಚನೆಗಳನ್ನು ಚರ್ಚಿಸಲಾಗಿದೆ.
72 ಸೂಚನೆಗಳ ಉತ್ತರಗಳನ್ನು ಸ್ಟೀಕರಿಸಲಾಗಿದೆ. ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರು ನಾಮನಿರ್ದೇಶನ
ಮಾಡಲು ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳನ್ನು
ಪರಿಶೀಲಿಸಿ ತಿದ್ದುಪಡಿ ತರಲು ಶಿಫಾರಸ್ಪು ಮಾಡುವುದಕ್ಕಾಗಿ ನಿಯಮಾವಳಿ ಸಮಿತಿಯನ್ನು ರಚಿಸಲು
ಸಭಾಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.


ವಿಧಾನಮಂಡಲದ ವತಿಯಿಂದ ಪ್ರಕಟಗೊಳ್ಳುತ್ತಿದ್ದ ತ್ರೈಮಾಸಿಕ ಶಾಸಕಾಂಗ ಪತ್ರಿಕೆಯು
ಸ್ಥಗಿತಗೊಂಡಿರುವುದನ್ನು ಗಮನಿಸಿ ಜುಲೈ-2019 ರಿಂದ ಪತ್ರಿಕೆಯನ್ನು ಪ್ರಕಟಿಸಿ ಈಗಾಗಲೇ ಮಾರ್ಚ್‌ 2020
ಅವಧಿಯವರೆಗಿನ ಸದಸ್ಯರಿಗೆ ನೀಡಲಾಗಿದೆ. 15ನೇ ವಿಧಾನ ಸಭೆಯ ಸದಸ್ಯರ ಪರಿಚಯ ಪುಸ್ತಕವನ್ನು ಪ್ರಕಟಿಸಿ
ಸದಸ್ಯರಿಗೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.


ಆಧಾರ:ವಿಶ್ವವಾಣಿ, ದಿನಾಂಕ:28.08.2020
9. ಕೋವಿಡ್‌ ಪರೀಕ್ಷೆ ಸರ್ಟಿಫಿಕೇಟ್‌ ತೋರಿಸಿದರೆ ಕಲಾಪಕ್ಕೆ ಪ್ರವೇಶ


ಕೋವಿಡ್‌ 19 ಲಾಕ್‌ಡೌನ್‌ ಮತ್ತು ಆ ಬಳಿಕ ಹೊರಡಿಸಿದ ಪ್ರಮುಖ 19 ಸುಗ್ರೀವಾಜ್ಜೆಗಳು ಸೇರಿ ಒಟ್ಟು
31 ಮಸೂದೆಗಳನ್ನು ಸೆಪ್ಲಂಬರ್‌ 21 ರಿಂದ ಆರಂಭಗೊಳ್ಳಲಿರುವ ವಿಧಾನ ಸಭಾ ಅಧಿವೇಶನದಲ್ಲಿ ಸರ್ಕಾರ
ಮಂಡಿಸಲಿದೆ.


ವೈಯಕ್ತಿಕ ಅಂತರ, ಸೋಂಕು ನಿರೋಧಕ ವ್ಯವಸ್ಥೆಯ ಕಠಿಣ ಕ್ರಮಗಳ ಮಧ್ಯೆ ವಿಧಾನ ಸಭೆ ಅಧಿವೇಶನ
ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. ಎಂಟು ದಿನಗಳ ಕಲಾಪದಲ್ಲಿ ಎಲ್ಲ ಮಸೂದೆಗಳಿಗೂ ಒಪಿಗೆ
ಪಡೆಯಬೇಕು. ಅಲ್ಲದೆ ಅಧಿವೇಶನದಲ್ಲಿ ಪ್ರಶ್ನೋತ್ತರಕ್ಕೂ ಅವಕಾಶ ನೀಡಲಾಗಿದೆ ಎಂದು ವಿಧಾನ ಸಭಾಧ್ಯಕ್ಷ
ವಶ್ವೇಶ್ವ್ಷರ ಹೆಗಡೆ, ಕಾಗೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕೊರೋನಾ ಸೋಂಕು ಇರುವುದರಿಂದ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು. ಇದರ ಅಂಗವಾಗಿ
ಎಲ್ಲ ಶಾಸಕರು, ಸಚಿವರು, ವಿಧಾನ ಸಭೆ ಕಲಾಪಕ್ಕೆ ಹಾಜರಾಗಬೇಕಾದ ಅಧಿಕಾರಿಗಳು ಮತ್ತು ಮಾಧ್ಯಮ
ಪ್ರತಿನಿಧಿಗಳು ಅಧಿವೇಶನ ಆರಂಭವಾಗುವುದಕ್ಕೆ ಮೂರು ದಿನಗಳ ಮೊದಲು ಕೋವಿಡ್‌ ಪರೀಕ್ಷೆ


ಮಾಡಿಸಿಕೊಂಡು, ಸರ್ಟಿಫಿಕೇಟ್‌ ಕಡ್ಡಾಯವಾಗಿ ತರಬೇಕು. ಕೋವಿಡ್‌ ಸೋಂಕು ಇಲ್ಲದಿದ್ದರೆ ಮಾತ್ರ ಸದನಕ್ಕೆ
ಪ್ರವೇಶ ನೀಡಲಾಗುವುದು ಎಂದರು.


70 ವರ್ಷ ಮೇಲ್ಪಟ್ಟ ಸದಸ್ಯರು ಕಲಾಪಕ್ಕೆ ಹಾಜರಾಗಬಹುದು. ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು
ತೆಗೆದುಕೊಳ್ಳಬೇಕು. ಕಲಾಪಕ್ಕೆ ಹಾಜರಾಗುವ ಎಲ್ಲರಿಗೂ ಮಾಸ್ಕ್‌ ಮತ್ತು ಫೇಸ್‌ ಶೀಲ್ಡ್‌ ನೀಡಲಾಗುವುದು ಎಂದು
ಸಭಾಧ್ಯಕ್ಷರು ತಿಳಿಸಿದರು.


ಸಾರ್ವಜನಿಕರಿಗೆ ಈ ಬಾರಿ ಕಲಾಪ ವೀಕ್ಷಣೆಗೆ ಪ್ರವೇಶ ಇರುವುದಿಲ್ಲ. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾಧ್ಯಮ
ಪ್ರತಿನಿಧಿಗಳಿಗೆ ವ್ಯವಸ್ಥೆ ಮಾಡಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಹಿಂದಿನಂತೆ ಮಾಧ್ಯಮಗಳ
ಗ್ಯಾಲರಿಯಲ್ಲಿ ಪತ್ರಕರ್ತರಿಗೆ ಅವಕಾಶ ನೀಡಲಾಗುವುದು ಎಲ್ಲ ಮಸೂದೆಗಳಿಗೆ ಅಂಗೀಕಾರ ಪಡೆಯಬೇಕಾಗಿದೆ.
ಈ ಎಲ್ಲ ವಿಷಯಗಳ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಭಾಧ್ಯಕ್ಷರು
ತಿಳಿಸಿದರು.


ಸರ್ಕಾರ ಹೊರಡಿಸಿರುವ ಒಟ್ಟು 19 ಸುಗೀವಾಜ್ಞೆಗಳಲ್ಲಿ ಈ ಕೆಳಕಂಡ ಸುಗೀವಾಜ್ಞೆಗಳ ಬಗ್ಗೆ ವಿರೋಧ



[sa
ಪಕ್ಷಗಳು ಮತ್ತು ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ, ಅವುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು
ಹೋರಾಟ ನಡೆಸಿವೆ.


» ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಸುಗ್ರೀವಾಜ್ಞೆ
» ಕರ್ನಾಟಕ ಕೃಷಿ ಉತ್ಸನ್ನ ಮಾ


ಬವ
ತಿದುಪಡಿ ಸುಗೀವಾಜಿೆ.
ಬ ಖಿ Kod


ರುಕಟ್ಟಿ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧ)


> ಕರ್ನಾಟಕ ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ಸುಗೀವಾಜ್ಞೆ


> ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ಸುಗ್ರೀವಾಜ್ಞೆ
> ಕೈಗಾರಿಕಾ ವಿವಾದಗಳು ಮತ್ತು ಕೆಲವು ಇತರ ಕಾನೂನುಗಳ (ಕರ್ನಾಟಕ ತಿದ್ದುಪಡಿ) ಸುಗೀವಾಜ್ಞೆ
ಆಧಾರ:ಪ್ರಜಾವಾಣಿ, ದಿನಾಂಕ:09.09.2020
10.19 ಸುಗ್ರೀವಾಜ್ಞೆ ಸೇರಿ ಈ ಬಾರಿ 31 ವಿಧೇಯಕ


ಇದೇ ತಿಂಗಳು 21 ರಿಂದ 30ರವರೆಗೆ ನಡೆಯುವ ಅಧಿವೇಶನದಲ್ಲಿ 10 ವಿಧೇಯಕ, 19 ಸುಗ್ರೀವಾಜ್ಞೆ
ಮತ್ತು 2 ಅಂಗೀಕಾರವಾಗದ ಮಸೂದೆಗಳು ಸೇರಿ 31 ವಿಧೇಯಕಗಳು ಮಂಡನೆಯಾಗಲಿವೆ ಎಂದು
ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ, ಕಾಗೇರಿ ಹೇಳಿದ್ದಾರೆ.


(


ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕರ್ನಾಟಕ ಭಿಕ್ಷಾಟನೆ ನಿಷೇಧ
(ತಿದ್ದುಪಡಿ) ವಿಧೇಯಕ, ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ವಿಧೇಯಕ -2020, ಕರ್ನಾಟಕ ವಿಧಾನ
ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು ಹಾಗೂ ಕೆಲವು ಇತರೆ ಕಾನೂನು (ತಿದ್ದುಪಡಿ)
ವಿಧೇಯಕ-2020, ಕರ್ನಾಟಕ ಲೋಕಾಯುಕ್ತ (2ನೇ ತಿದ್ದುಪಡಿ) ವಿಧೇಯಕ-2020, ಕರ್ನಾಟಕ ಪಟ್ಟಣ
ಮತ್ತು ಗ್ರಾಮಾಂತರ ಯೋಜನೆ (2ನೇ ತಿದ್ದುಪಡಿ) ವಿಧೇಯಕ-2020, ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ
(ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ಸಾರ್ವಜನಿಕ ಸೇವೆಗೆ ವಿಲೀನಗೊಳಿಸುವುದಕ್ಕೆ
ನಿಷೇಧ) ವಿಧೇಯಕ-2020 ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ತಿದ್ದುಪಡಿ ವಿಧೇಯಕ, ಕನ್ನಡ ವಿಶ್ವವಿದ್ಯಾಲಯ
ಮತ್ತು ಇತರೆ ಕೆಲವು ಕಾನೂನುಗಳ (ತಿದ್ದುಪಡಿ) ವಿಧೇಯಕ-2020 ಕರ್ನಾಟಕ ಕಲ್ಲುಪುಡಿ ಮಾಡುವ
ಘಟಕಗಳ (ಕ್ರಷರ್‌ಗಳ) ನಿಯಂತ್ರಣ (ತಿದ್ದುಪಡಿ) ವಿಧೇಯಕ ಮಂಡನಯಾಗಲಿವೆ ಎಂದರು.


ಬಾಕಿ ಇರುವ ಕರ್ನಾಟಕ ಅನುಸೂಚಿತ ಜಾತಿ, ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ
(ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ, ಬಿಬಿಎಂಪಿ ವಿಧೇಯಕ


ಮಂಡಿಸಲಾಗುತ್ತದೆ. ಇನ್ನು ಸರ್ಕಾರದಿಂದ ಹೊರಡಿಸಲಾಗಿರುವ ಸುಗೀವಾಜ್ಞೆಗಳಾದ ಕರ್ನಾಟಕ ಗ್ರಾಮ ಸ್ವರಾಜ್‌
ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ
(ತಿದ್ದುಪಡಿ) ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ), ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಸೇರಿದಂತೆ 19
ಸುಗೀವಾಜ್ಜೆಗಳು ಮಂಡನೆಯಾಗಲಿವೆ ಎಂದು ವಿವರಿಸಿದರು.


ಪತ್ರಕರ್ತರ ಸ್ಥಳಾಂತರಕ್ಕೆ ಚಿಂತನೆ: ಪ್ರತಿ ಬಾರಿಯ ಅಧಿವೇಶನದಲ್ಲಿ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ
ಅವಕಾಶ ನೀಡಲಾಗುತ್ತಿತ್ತು ಆದರೆ, ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ
ನೀಡುತ್ತಿಲ್ಲ ಮತ್ತು ಮಾಧ್ಯಮದವರನ್ನು ಸಾರ್ವಜನಿಕರ ಗ್ಯಾಲರಿಗೆ ಸ್ಥಳಾಂತರ ಮಾಡುವ ಚಿಂತನೆ ನಡೆದಿದೆ
ಎಂದು ಸಭಾಧ್ಯಕ್ಷರ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಕೋವಿಡ್‌ ಪರಿಸ್ಥಿತಿ ಇರುವ ಕಾರಣ ಸಾರ್ವಜನಿಕರಿಗೆ
ಅವಕಾಶ ನೀಡುತ್ತಿಲ್ಲ. ಸುಗಮವಾಗಿ ಕಲಾಪ ನಡೆಸಬೇಕಾಗಿರುವ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅಂತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವ ಕಾರಣ ಮಾಧ್ಯಮದವರಿಗೆ ಯಾವ ರೀತಿಯ ವ್ಯವಸ್ಥೆ
ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದು, ಸಾರ್ವಜನಿಕ ಗ್ಯಾಲರಿಗೆ ಸ್ಥಳಾಂತರಿಸುವ ಬಗ್ಗೆ ಗಂಭೀರವಾಗಿ
ಚರ್ಚಿಸಲಾಗುತ್ತಿದೆ. ಕಲಾಪ ಸುದ್ದಿ ಬಿತ್ತರಿಸಲು ಮಾಧ್ಯಮದವರಿಗೆ ಯಾವುದೇ ರೀತಿಯಲ್ಲೂ
ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪತ್ರಕರ್ತರ ಗ್ಯಾಲರಿಯಲ್ಲಿ 15 ಪತ್ರಕರ್ತರಿಗೆ
ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ. ಆದರೆ, ಯಾವ ಸಂಸ್ಥೆಗೆ ನೀಡಬೇಕು ಎಂಬ ಗೊಂದಲ ಇದೆ.
ಹೀಗಾಗಿ ವಾರ್ತಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಗ್ಯಾಲರಿಯಲ್ಲಿ
ಮಾಧ್ಯಮದವರಿಗೆ ವ್ಯವಸ್ಥೆ ಮಾಡಿಕೊಡುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಮಾಧ್ಯಮದವರನ್ನು
ಈ ಅಧಿವೇಶನಕ್ಕೆ ಮಾತ್ರ ಅನ್ವಯವಾಗುವಂತೆ ಸಾರ್ವಜನಿಕ ಗ್ಯಾಲರಿಗೆ ಸ್ಥಳಾಂತರ ಮಾಡುವ ಉದ್ದೇಶ ಇದೆ
ಎಂದು ತಿಳಿಸಿದರು.


ಶಾಸಕರ ಭವನದಲ್ಲಿ ನಿಯೋಗಗಳ ಮನವಿ: ಅಧಿವೇಶನದಲ್ಲಿ ಸಚಿವರಿಗೆ ಮನವಿ ನೀಡಲು ಬರುವ
ನಿಯೋಗಗಳು ಸಚಿವರ ನಿವಾಸದಲ್ಲಿ ಅಥವಾ ಶಾಸಕರ ಭವನದಲ್ಲಿನ ಸಭಾಂಗಣದಲ್ಲಿ ನೀಡಬೇಕು ಎಂದು
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಾಗೇರಿ ಹೇಳಿದರು. ಅಧಿವೇಶನದ ಸ್ಥಳಕ್ಕೆ ಬರಲು ನಿಯೋಗಗಳಿಗೆ ಅವಕಾಶ ಇಲ್ಲ.
ನಿಯೋಗಗಳು ಸಚಿವರ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಬೇಕು. ಇಲ್ಲವಾದರೆ ಶಾಸಕರ ಭವನದಲ್ಲಿನ
ಸಭಾಂಗಣದಲ್ಲಿ ಸಲ್ಲಿಸಬೇಕು. ಅನಿವಾರ್ಯವಾದರೆ ಮಾತ್ರ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿನ ಸಚಿವರ


[se]


ಕೊಠಡಿಯಲ್ಲಿ ಸಲ್ಲಿಸಬಹುದು ಎಂದರು.


ಆಧಾರ:ಕನ್ನಡಪ್ರಭ, ದಿನಾಂಕ:09.09.2020
11. ವರದಿ ಇದ್ದರಷ್ಟೇ ಅಧಿವೇಶನಕ್ಕೆ ಪ್ರವೇಶ


ಸೆಪ್ಪೆಂಬರ್‌ 21 ರಿಂದ ನಡೆಯುವ ವಿಧಾನಮಂಡಲದ ಕಲಾಪದಲ್ಲಿ ಪಾಲ್ಗೊಳ್ಳುವ ಸಚಿವರು. ಶಾಸಕರು,
ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿ ಮತ್ತು ಸಚಿವಾಲಯ ಸಿಬ್ಬಂದಿಗಳಿಗೆ ಕೊರೋನಾ ಟೆಸ್ಟ್‌
ಕಡ್ಡಾಯಗೊಳಿಸಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷರು ಖಚಿತಪಡಿಸಿದ್ದಾರೆ. ವಿಧಾನ ಸಭೆ ಆವರಣ
ಪ್ರವೇಶಿಸುವ ಪ್ರತಿಯೊಬ್ಬರು 72 ಗಂಟೆಗಳ ಮುನ್ನ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮಾಡಿಸಿ ವರದಿ
ಇಟ್ಟುಕೊಂಡಿರಬೇಕು. ಇಲ್ಲಿಗೆ ಬಂದ ಬಳಿಕ ಉಷ್ಣಾಂಶ ಪರೀಕ್ಷೆ, ಸ್ಯಾನಿಟೈಸರ್‌ ಬಳಕೆ ಫೇಸ್‌ ಶೀಲ್ಡ್‌ ಬಳಕೆಗೆ
ಅವಕಾಶ ಮಾಡಿಕೊಡಲಾಗುತ್ತದೆ. ಸೆಪ್ಪಂಬರ್‌ 18 ರಂದು ಅಧಿಕಾರಿ, ಸಿಬ್ಬಂದಿ ಹಾಗೂ ಮಾಧ್ಯಮ
ಪ್ರಶಿನಿಧಿಗಳಿಗಾಗಿ ವಿಧಾನಸೌಧದಲ್ಲಿ ಟೆಸ್ಟ್‌ ನಡೆಸಲಾಗುತ್ತದೆ. ಶಾಸಕರು, ಸಚಿವರು ತಾಲ್ಲೂಕು ಅಥವಾ ಜಿಲ್ಲಾ
ಕೇಂದದ ಆಸ್ಪತೆಗಳಲ್ಲಿ ಟೆಸ್ಟ್‌ ಮಾಡಿಸಲು ಅವಕಾಶ ಮಾಡಿಕೊಡುವಂತೆ ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ.
ಸಾಮಾಜಿಕ ಅಂತರ ಹಿನ್ನೆಲೆಯಲ್ಲಿ ಪ್ರೇಕ್ಷಕರ ಗ್ಯಾಲರಿಗೆ ಈ ಬಾರಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ.
ಸಭಾಂಗಣದ ಆಸನಗಳ ಮಧ್ಯೆ ಪಾರದರ್ಶಕ ಶೀಟ್‌ ಹಾಕಿ ವಿಭಜಿಸಲಾಗಿದೆ ಎಂದು ಹೇಳಿದರು.


ಆಧಾರ:ವಿಜಯವಾಣಿ, ದಿನಾಂಕ:09.09.2020


———————


12. ಸ್ಪೀಕರ್‌ ವಿಶ್ವೇಶ್ವರ ಹೆಗಡೆ, ಕಾಗೇರಿ ಅಭಿಮತ - ಕೈಜೋಡಿಸಲು ಯುವ ಸಮುದಾಯಕ್ಕೆ ಕರೆ


ದಿನಾಂಕ: 19-09-2020 ರಂದು ಖ್ಯಾತ ಜಾನಪದ ವಿದ್ಧಾಂಸರಾಗಿದ್ದ ದಿವಂಗತ ಡಾ. ಎಲ್‌.ಆರ್‌.ಹೆಗಡೆ
ಅವರ ಅಪ್ರಕಟಿತ ಆರು ಜಾನಪದ ಡಿಜಿಟಲ್‌ ಪುಸ್ತಕಗಳನ್ನು ಮಾನ್ಯ ಸಭಾಧ್ಯಕ್ಷ ರು ವಿಧಾನಸೌಧದಲ್ಲಿ
ಲೋಕಾರ್ಪಣೆ ಮಾಡಿದ ಸಂದರ್ಭ. ಈ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ
ಶ್ರೀ ಟಿ.ಎಸ್‌.ನಾಗಾಭರಣ ಅವರು ಉಪಸ್ಥಿತರಿದ್ದರು


ರಾಜ್ಯದಲ್ಲಿ ಅದ್ದುತವಾದ ಜಾನಪದ ಪರಂಪರೆ ಇದ್ದು, ಅದನ್ನು ಸಂರಕ್ಷಿಸಲು ಮತ್ತು ಡಿಜಿಟಲೀಕರಣ
ಮಾಡಲು ಯುವ ಸಮುದಾಯ ಮುಂದಾಗಬೇಕು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಾಗೇರಿ ಕರೆ
ನೀಡಿದ್ದಾರೆ.


ವಿಧಾನ ಸೌಧದಲ್ಲಿ ಮಿತ್ರಮಾಧ್ಯಮ ಟಸ್‌ ಹಮ್ಮಿಕೊಂಡಿದ್ದ ಡಾ: ಎಲ್‌. ಆರ್‌. ಹೆಗಡೆಯವರ ಅಪ್ರಕಟಿತ
ಜಾನಪದ ಸಂಗ್ರಹಗಳ ಆರು ಡಿಜಿಟಲ್‌ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಜಾನಪದ
ಸಂಗ್ರಹಕಾರ ಎಲ್‌. ಆರ್‌. ಹೆಗಡೆ ಅವರ ಜನ್ಮ ಶತಾಬ್ದಿ ವರ್ಷವು ಸಮೀಪಿಸುತ್ತಿದ್ದು ಆ ವೇಳೆಗೆ ಅವರ
ಇನ್ನುಳಿದ ಅಪ್ರಕಟಿತ ಸಂಗ್ರಹಗಳನ್ನು ಪ್ರಕಟಿಸಲು ಸರ್ಕಾರ ಮತ್ತು ಸಮುದಾಯಗಳು ಮುಂದಾಗಬೇಕು. ಉತ್ತರ
ಕನ್ನಡದ ವೈವಿಧ್ಯಮಯ ಜಾನಪದ ಸಂಸ್ಕೃತಿಯ ಸಂಗಹ ಎಲ್‌. ಆರ್‌. ಹೆಗಡೆಯವರ ಆಪಾರ ಜೀವನ
ನಿಷ್ಠೆಯಿಂದ ಸಾಧ್ಯವಾಯಿತು ಎಂದರು.

ಹಲವು ಕೃತಿ ಬಿಡುಗಡೆ: ನಾಮಧಾರಿಗಳ ಆಡು ಭಾಷೆಗಳ ಕಥೆಗಳು, ಆಯ್ದ ನಾಮಧಾರಿ ಕಥನ
ಗೀತೆಗಳು, ಹಾಲಕ್ಕಿ ಕಥೆಗಳು, ಶುದ್ಧ ಭಾಷೆಯ ಕಥೆಗಳು, ಕೋಲಾಟದ ಪದಗಳು, ಆಯ್ಕೆ ಮಾಡಿದ ಜಾನಪದ
ಕಥೆಗಳು ಈ ಸಂಗ್ರಹಗಳು ಕಾರ್ಯಕ್ರಮದಲ್ಲಿ ಬಿಡುಗಡೆಯಾದವು. ಕೃತಿಗಳ ಸಂಪಾದಕಿ, ಡಾ:ಎಲ್‌.ಆರ್‌.ಹೆಗಡೆ
ಪುತ್ರಿ ರೇಣುಕಾ ರಾಮಕೃಷ್ಣ ಭಟ್ಟ ಮಾತನಾಡಿ, ಹಳ್ಳಿ ಔಷಧಿಗಳನ್ನೂ ತಿಳಿದಿದ್ದ ಡಾ: ಹೆಗಡೆಯವರು ಎಲ್ಲರಿಗೂ
ಬೇಕಾದ ವ್ಯಕ್ತಿತ್ವ ಹೊಂದಿದ್ದರು ಎಂದು ಮೆಲುಕುಹಾಕಿದರು.

ಫೇಸ್‌ ಬುಕ್‌ನಂತಹ "ಡಿಜಿಟಲ್‌ ಜನಪದ' ರೇ ಈ ಆರು ಪುಸ್ತಕಗಳ ಅಕ್ಷರ ಜೋಡಣೆ ಮತ್ತು
ಮುಖಚಿತ್ರ ರಚನೆ ಮಾಡಿದ್ದಾರೆ. ಡಿಜಿಟಲ್‌ ಜನಪದದಿಂದ ಪರಂಪರಾಗತ ಜನಪದ ಉಳಿಸುವ
ಕೆಲಸವಾಗುತ್ತಿರುವುದು ಉತ್ತಮ ಬೆಳವಣಿಗೆಯೆಂದು ಮಿತ್ರ ಮಾಧ್ಯಮ ಟಸ್ಪಿ ಮತ್ತು ಮುಖ್ಯಮಂತ್ರಿಯವರ ಇ -
ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಹೇಳಿದರು.


ಮುಕ್ತ ಜ್ಞಾನಕ್ಕಾಗಿ ಈ ರೀತಿಯಲ್ಲಿ ಅಚ್ಚುಕಟ್ಟಾದ ಪ್ರಕಟಣಾ ಕಾರ್ಯ ಕೈಗೊಂಡ ಕ್ರಮವನ್ನು ಕನ್ನಡ
ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಶ್ಲಾಘಿಸಿದರು. ಸರ್ಕಾರದ "ಕಣಜ' ವೆಬ್‌ ಸೈಟ್‌ನಲ್ಲಿ
ಪ್ರಕಟಿಸಲು ಪುಸ್ತಕಗಳ ಸಾಂಕೇತಿಕ ಪ್ರತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕ
ಎಸ್‌. ರಂಗಪ್ಪ ಸ್ವೀಕರಿಸಿದರು.


ಆಧಾರ:ವಿಜಯವಾಣಿ, ದಿನಾ೦ಕ:21.09.2020
13. ವಿಧಾನಮಂಡಲ ಅಧಿವೇಶನ : ಸಾರ್ವಜನಿಕರ ಪ್ರವೇಶ ನಿಷೇಧ
ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿರುವುದರಿಂದ ವಿಧಾನಸೌಧ ಮತ್ತು ವಿಕಾಸಸೌಧ


ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಮತ್ತು
ಮಾಧ್ಯಮದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ವಿಧಾನಸೌಧದ ಪಶ್ಚಿಮ ದ್ದಾರದಲ್ಲಿ ಸಚಿವರು ಮತ್ತು ಶಾಸಕರು ಒಬ್ಬ ಆಪ್ತ ಸಹಾಯಕರೊಂದಿಗೆ
ಪ್ರವೇಶಿಸಬಹುದು. ಇಲಾಖಾ ಮುಖ್ಯಸ್ಥರು, ಕಾರ್ಯದರ್ಶಿ ಮತ್ತು ಅದಕ್ಕಿಂತ ಮೇಲಿನ ಹಂತದ ಅಧಿಕಾರಿಗಳಿಗೆ
ಮಾತ್ರ ಈ ದಾರದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.


ಸಚಿವರು ಮತ್ತು ಶಾಸಕರ ಆಪ್ತ ಸಹಾಯಕರು ಬ್ಯಾಂಕ್ಸೆಟ್‌ ಹಾಲ್‌ನಲ್ಲಿ ಕುಳಿತುಕೊಳ್ಳಬೇಕು. ಅಂಗರಕ್ಷಕ
ಸಿಬ್ಬಂದಿಗಳಿಗೆ ವಿಕಾಸಸೌಧದ ಮೊದಲನೇ ಮಹಡಿಯಲ್ಲಿರುವ ಸಮಿತಿ ಕೊಠಡಿ ಮತ್ತು ನಾಲ್ಕನೇ
ಮಹಡಿಯಲ್ಲಿರುವ ಸಮ್ಮೇಳನ ಕೊಠಡಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಿಬ್ಬಂದಿ ಮತ್ತು
ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ವಿಧಾನಮಂಡಲ ಪವೇಶಿಸುವ ಪ್ರತಿಯೊಬ್ಬರೂ ಆರ್‌ಟಿ-ಪಿಸಿಆರ್‌ ಕೋವಿಡ್‌ ತಪಾಸಣಾ ನೆಗೆಟಿವ್‌
ವರದಿ ಹಾಜರುಪಡಿಸಬೇಕು. ಕಡ್ಡಾಯವಾಗಿ ಮಾಸ್ಕ್‌ "ಧರಿಸಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


ಆಧಾರ:ಪ್ರಜಾವಾಣಿ, ದಿನಾಂಕ:21.09.2020
14. ಅಗಲಿದ ಗಣ್ಯರಿಗೆ ಉಭಯ ಸದನದಲ್ಲಿ ಸಂತಾಪ


ಕೊರೋನಾ ಆತಂಕದಲ್ಲಿಯೇ ಆರಂಭಗೊಂಡ ವಿಧಾನಮಂಡಲ ಅಧಿವೇಶನದ ಮೊದಲ ದಿನ
ಉಭಯ ಸದನದಲ್ಲಿ ರಾಜ್ಯ ಹಾಗೂ ದೇಶದಲ್ಲಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು.
ಬೆಳಿಗ್ಗೆ 11 ಗಂಟಿಗೆ ಕಲಾಪ ಸಮಾವೇಶಗೊಳ್ಳುತ್ತಿದ್ದಂತೆ ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಾಗೇರಿ
ಅವರು ಮಾಜಿ ರಾಷ್ಟಪತಿ ಪ್ರಣಬ್‌ ಮುಖರ್ಜಿ ಸೇರಿದಂತೆ ಅಗಲಿದ ಗಣ್ಣರಿಗೆ : ಸಂತಾಪ ಸೂಚಕ ನಿರ್ಣಯ
ಮಂಡಿಸಿದರು. ಗಣ್ಣರೊಂದಿಗೆ ಈ ಬಾರಿ ಕೊರೋನಾಕ್ಕೆ ಬಲಿಯಾಡವರಿಗ ಹಾಗೂ ಕೊರೋನಾದಿಂದ
ಮೃತಪಟ್ಟಿರುವ Fa ವಾರಿಯರ್‌, ಚೀನಾದೊಂದಿಗೆ ಹೋರಾಡಿ ಮಡಿದ 20 ಯೋಧರಿಗೆ ಹಾಗೂ
ಮಡಿಕೇರಿ ಭೂ ಕುಸಿತದಲ್ಲಿ ಮಣಿದ ಒಂದೇ ಕುಟುಂಬದ ಐವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.


ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕಳದ ಅಧಿವೇಶನ ಮತ್ತು ಈ ಅವಧಿಯ ನಡುವೆ ಹಲವು
ಗಣ್ಯರು ನಮ್ಮನ್ನು ಆಗಲಿದ್ದಾರೆ, ಶಿರಾ ಶಾಸಕ ಸತ್ಯನಾರಾಯಣ ಅವರು ಬಡವರು ಮತ್ತು ರೈತರ ಪರವಾಗಿದ್ದರು.
ಮಾಷ ರಾಷ್ಟಪತಿ ಪ್ರಣಬ್‌ "ಮುಖರ್ಜಿ ಅವರು ಗುಮಾಸ್ತ ಕೆಲಸದಿಂದ ರಾಷ್ಟ್ರಪತಿ ಹುದ್ದೆಯವರೆಗಿನ ರಾಜಕೀಯ
ಜೀವನ ಅದ್ಭುತವಾದುದು. ಅತ್ಯುತ್ತಮ ರಾಜಕಾರಣಿಯಾಗಿ ದೇಶಕ್ಕೆ ಅವರು ನೀಡಿದ ಕೊಡುಗೆ ಆಪಾರವಾದುದು.
ರಾಷ್ಟ್ರಪತಿ ಭವನವನ್ನು ಜನರಿಗೆ "ಹತಿರವಾಗಿಸಿ. ಹೆಚ್ಚು ಪಜಾಸತ್ತಾತೆಕವಾಗಿಸಿದ್ದರು. ಅವರ ನಿಧನದಿಂದ ಸಮರ್ಥ
ಮತ್ತು ಅತ್ಯುತ್ತಮ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.


ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಣಬ್‌ ಮುಖರ್ಜಿ ಅವರು ಹಣಕಾಸು, ವಿದೇಶಾಂಗ,
ರಕ್ಷಣಾ ಸೇರಿ ಕೇಂದದ ಮಹತ್ವದ ಖಾತೆಗಳನ್ನು ಇದರೊಂದಿಗೆ ವಾಣಿಜ್ಯ ಕೈಗಾರಿಕಾ ಖಾತೆಗಳನ್ನು
ನಿಭಾಯಿಸಿದ್ದರು. ಪಿ.ವಿ. ನರಸಿಂಹರಾವ್‌ ಪ್ರಧಾನಮಂತ್ರಿಯಾಗಿದ್ದಾಗ 5 ವರ್ಷಗಳ ಕಾಲ ಯೋಜನಾ
ಆಯೋಗದ ಉಪಾಧ್ಯಕ್ಷರಾಗಿದ್ದರು.


ದೇಶದ ಹಣಕಾಸು ವ್ಯವಸ್ಥೆ ಬಗ್ಗೆ ಆಳವಾದ ಆಧ್ಯಯನ ಮಾಡಿದ್ದರು. ಉತ್ತಮ ಹಣಕಾಸು ಸಚಿವ
ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಬಾರಿ ಅವರನ್ನು ಭೇಟಿ


ಮಾಡಲು ಅವಕಾಶ ಸಿಕ್ಕಿತ್ತು ಯಾವುದೇ ಮಸೂದೆಗಳು ಅಂಕಿತಕ್ಕೆ ಹೋದಾಗ, ಕೂಡಲೇ ಅವರು ಅಂಕಿತ
ಹಾಕುತ್ತಿದ್ದರು. ಎಸ್‌ಟಿಪಿ, ಟಿಎಸ್‌ಪಿ ಮಸೂದೆ ವಿಚಾರವಾಗಿ ಅವರನ್ನು ಭೇಟಿ ಮಾಡಿ ವಿವರಿಸಿದ್ದೆ. ದೆಹಲಿಯಿಂದ
ಬೆಂಗಳೂರಿಗೆ ಬರುವ ಮೊದಲೇ ಅಂಕಿತ ಹಾಕಿ ಕಳುಹಿಸಿದ್ದರು ಎಂದು ಸ್ಮರಿಸಿದರು.


ಅಗಲಿದ ಗಣ್ಯರ ಪಟ್ಟಿ- ಮಾಜಿ ರಾಷ್ಟಪತಿ ಪ್ರಣಬ್‌ ಮುಖರ್ಜಿ, ಮಾಜಿ ಶಾಸಕ ಎಂ. ವಿ.
ರಾಜಶೇಖರನ್‌, ರಾಜ್ಯ ಸಭಾ ಸದಸ್ಯ ಅಶೋಕ್‌ ಗಸ್ತಿ, ಶಾಸಕ ವಿ. ಸತ್ಯನಾರಾಯಣ, ವಿನ್ನಿಫೆಹ್‌ ಫರ್ನಾಂಡೀಸ್‌,
ರಾಜಾ ರಂಗಪ್ಪ ನಾಯಕ, ಮದನ ಗೋಪಾಲ ನಾಯಕ್‌, ಜಿ. ರಾಮಮೂರ್ತಿ, ಹೊಸ್ತೋಟ ಗಜಾನನ ಭಟ್ಟ,
ನಿಸಾರ್‌ ಆಹಮದ್‌, ಹಿರಿಯ ಗಾಯಕಿ ಡಾ: ಶಾಮಲಾ ಜಿ. ಭಾವೆ, ಶಾಂತದೇವಿ, ಸುಭದ್ರಮ್ಮ ಪಂಡಿತ್‌
ಜಸ್‌ ರಾಜ್‌. ಕೇಶವಾನಂದ ಭಾರತಿ ಶ್ರೀಗಳು ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಗೊತ್ತುವಳಿ
ಮಂಡಿಸಿದರು.


ಆಧಾರ:ವಿಶ್ವವಾಣಿ, ದಿನಾಂಕ:22.09.2020
15. ಇದೇ 26ಕ್ಕೆ ಅಧಿವೇಶನ ಮುಕ್ತಾಯ : ಬೆಳಿಗ್ಗೆ 10 ರಿಂದ 7ರವರೆಗೆ ಕಲಾಪ


ದಿನಾಂಕ:21-09-2020 ರಂದು ಸನ್ಮಾನ್ಯ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ವಿಧಾನ ಸಭೆಯ ಕಾರ್ಯಕಲಾಪಗಳ
ಸಲಹಾ ಸಮಿತಿಯ ಸಭೆಯು ನಡೆಯುತ್ತಿರುವ ಸಂದರ್ಭ


ಎಂಟು ದಿನಗಳಿಗೆ ನಿಗದಿಯಾಗಿದ್ದ ವಿಧಾನಮಂಡಲ ಅಧಿವೇಶನವನ್ನು ಎರಡು ದಿನ
ಮೊಟಕುಗೊಳಿಸಲು ನಿರ್ಧರಿಸಲಾಗಿದ್ದು, ಇದೇ 26ಕ್ಕೆ ಕಲಾಪ ಮುಕ್ತಾಯವಾಗಲಿದೆ. ಸೆಪ್ಪಂಬರ್‌ 30ರವರೆಗೆ
ನಡೆಯಬೇಕಿದ್ದ ಅಧಿವೇಶನವನ್ನು ಮೂರು ದಿನಗಳಿಗೆ ಮೊಟಕುಗೊಳಿಸಲು ಸರ್ಕಾರ ಉದ್ದೇಶಿಸಿತ್ತು. ವಿರೋಧ
ಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ಶನಿವಾರವು ಕಲಾಪ ನಡೆಸಲು ಒಪ್ಪಿಕೊಂಡಿದೆ.


ಕಲಾಪವನ್ನು ಮೂರು ದಿನಗಳಿಗೆ ಸೀಮಿತಗೊಳಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಜೆ.ಡಿ.ಎಸ್‌
ಶಾಸಕಾಂಗ ಪಕ್ಷ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಜೊತೆಗೂ ಮಾತುಕತೆ ನಡೆಸಿದ್ದರು. ಆದರೆ ಅವರು
ಒಪಿರಲಿಲ್ಲ.


ಕಲಾಪ ಸಲಹಾ ಸಮಿತಿ ಸಭೆ ಸೇರಿದಾಗ ಯಡಿಯೂರಪ್ಪ ಅವರು ಕೋವಿಡ್‌ ಹರಡುತ್ತಿದ್ದು, ಹಲವು
ಶಾಸಕರು ಕೋವಿಡ್‌ ಪೀಡಿತರಾಗುತ್ತಿದ್ದಾರೆ ಮೂರು ದಿನಗಳಿಗೆ ಮುಗಿಸೋಣ ಎಂದು ಪ್ರಸ್ತಾವ ಮುಂದಿಟ್ಟರು.
ಆದರೆ, ವಿರೋಧ ಪಕ್ಷಗಳು ಇದನ್ನು ಒಪ್ಪಿಕೊಳ್ಳಲಿಲ್ಲ. ಮಸೂದೆಗಳನ್ನು ಮಂಡಿಸುವುದಾದರೆ ಮೂರು ದಿನಗಳಿಗೆ
ಮುಗಿಸುವುದು ಬೇಡ. ವಿಸ್ತೃತವಾಗಿ ಚರ್ಚೆ ನಡೆಸಲೇಬೇಕು. ಮಸೂದೆ ಮಂಡಿಸದಿದ್ದರೆ ಮೂರು ದಿನಗಳಿಗೆ
ಮುಗಿಸಿ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.


ಎಲ್ಲ ಮಸೂದೆಗಳು ಮತ್ತು ಇತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ
ನೀಡುವುದಾದರೆ ಮಾತ್ರ ಭಾನುವಾರಕ್ಕೆ ಮುಗಿಸೋಣ ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು.
ಶನಿವಾರದವರೆಗೆ ನಡೆಸಲು ಸರ್ಕಾರ ಒಪ್ಪಿತು. ಪ್ರತಿ ದಿನ ಬೆಳಿಗ್ಗೆ 10 ರಿಂದ 7ರವರೆಗೆ ಕಲಾಪ ನಡೆಸಲು
ನಿರ್ಧರಿಸಲಾಯಿತು.


ಸಂಸತ್‌ ಕಲಾಪ ಮೊಟಕು ಮಾಡಿದಂತೆ ಇಲ್ಲೂ ಮೂರು ದಿನಗಳಲ್ಲಿ ಅಧಿವೇಶನ ಮುಗಿಸೋಣ
ಎಂದು ಸರ್ಕಾರ ಹೇಳಿತು. ಅದನ್ನು ಒಪ್ಪಲಿಲ್ಲ. 40 ಮಸೂದೆಗಳು ಮಂಡನೆ ಆಗಲಿದ್ದು, ಅವುಗಳ ಬಗ್ಗೆ ವಿಸ್ತೃತ
ಚರ್ಚೆ ಆಗಬೇಕೆಂದು ಹೇಳಿದ್ದೇವೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.


ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ತಾಮಿ. ರಮೇಶ್‌ ಕುಮಾರ್‌,
ಆರ್‌.ವಿ ದೇಶಪಾಂಡೆ, ಸರ್ಕಾರದ ಮುಖ್ಯ ಸಚೇತಕ ಸುನಿಲ್‌ ಕುಮಾರ್‌ ಭಾಗವಹಿಸಿದ್ದರು.


ಆಧಾರ:ಪ್ರಜಾವಾಣಿ, ದಿನಾಂಕ:22.09.2020
16. ಚರ್ಚೆಗೆ ಸಮಯದ ಮಿತಿಯಿರಲಿ : ಸ್ಪೀಕರ್‌


ಕೊರೋನಾ ಹಿನ್ನೆಲೆಯಲ್ಲಿ ವಿಧಾನ ಸಭೆ ಅಧಿವೇಶನ ಸೆಪ್ಟೆಂಬರ್‌ -26ರವರೆಗೆ ಮಾತ್ರ ನಡೆಯಲಿದೆ.
ಆದ್ದರಿಂದ ಎಲ್ಲ ಸದಸ್ಯರು ಸಮಯದ ಮಿತಿ ಅರಿತು ಕಾರ್ಯಕಲಾಪಕ್ಕೆ ಸಹಕಾರ ನೀಡಬೇಕು ಎಂದು ವಿಧಾನ
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಾಗೇರಿ ಹೇಳಿದರು. ಸದನ ಆರಂಭಗೊಳ್ಳುತ್ತಿದ್ದಂತೆ ಕಲಾಪವನ್ನು ಎರಡು
ದಿನಗಳಮಟ್ಟಿಗೆ ಕಡಿತಗೊಳಿಸಲಾಗಿದೆ. ಹೀಗಾಗಿ ಸುಗಮವಾಗಿ ಕಲಾಪ ನಡೆಸಲು ಸಹಕರಿಸಬೇಕು. ಪ್ರತಿದಿನ ಬೆಳಿಗ್ಗೆ
10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.30ರವರೆಗೆ ಸದನ ನಡೆಸಲು
ಸಭೆಯಲ್ಲಿ ನಿರ್ಣಯವಾಗಿದೆ. ಕೊರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸುವುದೇ ಸವಾಲಾಗಿದೆ
ಎಂದರು.


ಆಧಾರ:ವಿಶ್ವವಾಣಿ, ದಿನಾಂಕ:23.09.2020
17. ಸಚಿವ, ಶಾಸಕರ ಶೇ.30 ವೇತನ ಕಡಿತಕ್ಕೆ ಅಸ್ತು


ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿದೂಗಿಸಬೇಕಿರುವ ಕಾರಣ
ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರ ಶೇ.30 ರಷ್ಟು ವೇತನ ಕಡಿತ ಮಾಡುವ ಸಂಬಂಧ
ಸಂಬಳಗಳು, ನಿವೃತ್ತಿ ವೇತನ, ಭತ್ತೆ ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕ ಸೇರಿದಂತೆ ನಾಲ್ಕು
ವಿಧೇಯಕಗಳನ್ನು ಅಂಗೀಕರಿಸಲಾಗಿದ್ದು, ಎಂಟು ವಧೇಯಕಗಳನ್ನು ಮಂಡಿಸಲಾಯಿತು.


ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ಟಾಮಿ ಅವರು ವೇತನ, ನಿವೃತ್ತಿ ವೇತನ, ಭತ್ಯೆ
ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.
ಕೊರೋನಾದಂತಹ ಸನ್ನಿವೇಶವನ್ನು ನಿಭಾಯಿಸಲು ಮುಖ್ಯಮಂತ್ರಿಗಳು, ಉಪ ಮುಖ್ಯಮಂತಿಗಳು, ಸಚಿವರು,
ಸಭಾಧ್ಯಕ್ಷರು. ಉಪ ಸಭಾಧ್ಯಕ್ಷರು, ಸಭಾಪತಿ, ಉಪ ಸಭಾಪತಿ, ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನ
ಸ್ರತಿಪಕ್ಷ ನಾಯಕರು, ಶಾಸಕರ ವೇತನ ಮತ್ತು ಭತ್ಯೆಗಳನ್ನು ಕಡಿಮೆಗೊಳಿಸುವ ಮೂಲಕ ಸಂಪನ್ಮೂಲ ಹೆಚ್ಚಿಸುವ
ಸಾಪ ಮಾಡಲಾಗಿದೆ. ವಿಧೇಯಕವೂ 2020ರ ಏಪಲ್‌ 1 ರಿಂದ ಬರುವ 2021ರ ಮಾರ್ಚ್‌-31ರವರೆಗೆ
ಜಾರಿಯಲ್ಲಿರಲಿದೆ.


ಕುಷ್ಠರೋಗ ಬಾಧಿತ ವ್ಯಕ್ತಿಗಳ ಸಂಬಂಧದಲ್ಲಿನ ತಾರತಮ್ಯ ಕಾರಣವಾದ ಉಪಬಂಧವನ್ನು ತೆಗೆದು
ಹಾಕುವ 2020ನೇ ಸಾಲಿನ ಕರ್ನಾಟಕ ಭಿಕ್ಷಾಟನೆ ನಿಷೇಧ ತಿದ್ದುಪಡಿ ವಿಧೇಯಕ, 2020ನೇ ಸಾಲಿನ ಕನ್ನಡ
ವಿಶ್ವವಿದ್ಯಾಲಯ ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಖಾಸಗಿ
ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಸದನವು ಅಂಗೀಕರಿಸಿತು.


ಮಂಡನೆಯಾದ ವಿಧೇಯಕಗಳು
> ಕರ್ನಾಟಕ ರಾಜ್ಯ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ವಿಧೇಯಕ
» ರಾಜ್ಯ ಮುಕ್ತ ವಿವಿ (ತಿದ್ದುಪಡಿ) ವಿಧೇಯಕ


ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ವಿಧೇಯಕ

ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ

ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕ

ಕರ್ನಾಟಕ ಲೋಕಾಯುಕ್ತ (2ನೇ ತಿದ್ದುಪಡಿ)

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ವಿಧೇಯಕ
ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ ವಿಧೇಯಕ


VV VY VY VY VY


ಆಧಾರ:ಕನ್ನಡಪ್ರಭ, ದಿನಾಂಕ:23.09.2020
18. 2 ವಿಧೇಯಕ ಹಿಂದಕ್ಕೆ


ರಾಜ್ಯ ಸರ್ಕಾರ ಈ ಹಿಂದಿನ ವರ್ಷಗಳಲ್ಲಿ ಮಂಡನೆಯಾಗಿದ್ದ ಎರಡು ವಿಧೇಯಕಗಳನ್ನು
ಹಿಂಪಡೆಯಿತು. 2015ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳು (ತಿದ್ದುಪಡಿ) ವಿಧೇಯಕ ಹಾಗೂ 2017ನೇ
ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕವನ್ನು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ
ಹಿಂಪಡೆದರು.


ಆಧಾರ:ಉದಯವಾಣಿ, ದಿನಾ೦ಕ:23.09.2020
19. ಕೊರೋನಾ ಗದ್ದಲ


ನಿರ್ವಹಣೆ ಹಾಗು ಉಪಕರಣ ಖರೀದಿಯಲ್ಲಿನ ಅವ್ಯವಹಾರ ಆರೋಪ ವಿಧಾನ ಸಭೆ
ಮತ್ತು ಪರಿಷತ್‌ನಲ್ಲಿ ಪ್ರತಿದ್ಧನಿಸಿತು. ಸರ್ಕಾರ ಕೈಗೊಂಡಿರುವ ಕ್ರಮವನ್ನು ವಿಧಾನ ಪರಿಷತ್‌ನಲ್ಲಿ
ಸಮರ್ಥಿಸಿಕೊಂಡಿತ್ತಾದರೂ, ಉತ್ತರದಿಂದ ಸಮಾಧಾನಗೊಳ್ಳದ ಕಾಂಗೆಸ್‌ ಸಭಾತ್ಯಾಗ ಮಾಡಿತು.


ಕೆಳಮನೆ ವಿಧಾನ ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ಮುಖಂಡರು ಸರ್ಕಾರದ
ಕ್ರಮವನ್ನು ತರಾಟೆಗೆ ತೆಗೆದುಕೊಂಡರಲ್ಲದೆ ರಾಜ್ಯದಲ್ಲಿ ಕೋವಿಡ್‌-19 ನಿರ್ವಹಣೆಗೆ ಉಪಕರಣ ಖರೀದಿಯಲ್ಲಿ
ರೂ.2000ಕೋಟಿ ನಷ್ಟ ಅವ್ಯವಹಾರ ನಡೆದಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು
ಆಗಹಿಸಿದರು. ಈ ಸಂಬಂಧ ಚರ್ಚೆ ಕೊನೆಯಾಗಿದ್ದು, ಸರ್ಕಾರ ವಿಧಾನ ಸಭೆಯಲ್ಲಿ ಉತ್ತರ ನೀಡಲಿದೆ.


ಮೇಲ್ಲನೆಯಲ್ಲಿ ಕೊರೋನಾ ಕ್ರಮಗಳ ಬಗ್ಗೆ ಚರ್ಚೆ ಮತ್ತು ಪ್ರತಿಪಕ್ಷಗಳ ಟೀಕಾಪ್ರಹಾರದ ಬಳಿಕ
ಸರ್ಕಾರದ ಪರವಾಗಿ ಉತ್ತರ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು, ಕೊರೋನಾ ತಡೆಯುವಲ್ಲಿ,
ಎದುರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ಯಶಸ್ಸು ಸಾಧಿಸದಿದ್ದರೂ, ತಕ್ಕಮಟ್ಟಿಗೆ ಸಫಲತೆ ಕಂಡಿದೆ. ಲಸಿಕೆ
ಬರುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಎಚ್ಚರಿಕೆಯಿಂದ ಕೊರೋನಾದೊಂದಿಗೆ ಬದುಕುವುದು
mi ಉಪಕರಣಗಳ ಖರೀದಿಗೆ ಸರಿಬಂಧಿಸಿದಂತೆ ಕಳಪೆ ಉತ್ಪನ್ನ ನೀಡಿದ ಸಂಸ್ಥೆಗಳನ್ನು
ಪುುಪಟ್ಟಿಗೆ ಸೇರಿಸಿದ್ದೇವೆ. ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅವ್ಕವಹಾರವಾಗಿಲ್ಲ ಎಂದು ಸದನಕ್ಕೆ



ಸಚಿವರ ಉತರಕೆ ಪತಿಕಿಯಿಸಿದ ವಿರೋಧಪಕ್ಷದ ನಾಯಕ ಎಸ್‌. ಆರ್‌. ಪಾಟೇಲ್‌, ಆರೋಗ್ಯ


ಸಚಿವರು ತುಂಬಾ ಭಾವನಾತಕವಾಗಿ ಮಾತನಾಡಿದ್ದಾರೆ. ಆದರೆ ನಿಯಂತ್ರಣ ವಿಚಾರದಲ್ಲಿ ಕೈಗೊಂಡ ಕ್ರಮದ
ಬಗ್ಗೆ ಏನು ಹೇಳಿಲ್ಲ ಯಾವ ರೀತಿಯಲ್ಲಿ ಕೋವಿಡ್‌ ತಡೆಯುತ್ತೇವೆ ಎಂಬುದನ್ನು ಉಲ್ಲೇಖಿಸಿಲ್ಲ. ಆರಂಭದ
ದಿನಗಳಲ್ಲೇ ರಾಜ್ಯಕ್ಕೆ ವಿದೇಶದಿಂದ ಬರುವವರನ್ನು ಸೂಕ್ತ ರೀತಿಯಲ್ಲಿ ಕ್ಷಾರಂಟೈನ್‌ ಮಾಡಿದ್ದರೆ ಸಮಸ್ಯೆ ಇಷ್ಟು
ಉಲ್ಲಣಿಸುತ್ತಿರಲಿಲ್ಲ. ಲಾಕ್‌ಡೌನ್‌, ಸೀಲ್ಲೌನ್‌ನಿಂದ ವ್ಯಾಪಾರ ವಹಿವಾಟು ನಷ್ಟ ಆಗುತ್ತಿರಲಿಲ್ಲ. ಸರ್ಕಾರದ
ವೈಫಲ್ಯದಿಂದ ಕೊರೋನಾ ನಿಯಂತ್ರಣ ಸಾಧ್ಯವಾಗಿಲ್ಲ ಹಾಗೂ ಆರೋಗ್ಯ ಇಲಾಖೆಯಲ್ಲಿ ಕೊರೋನಾ ತಡೆ
ಉತ್ಪನ್ನ ಖರೀದಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಾಗಿದೆ. ಸಚಿವರ ಉತ್ತರದಿಂದ ನಮಗೆ ತೃಪ್ತಿಯಾಗಿಲ್ಲ.
ಹೀಗಾಗಿ ಸಭಾತ್ಯಾಗ ಮಾಡುತ್ತೇವೆ ಎಂದರು.


ದೇಶ ಹಾಗೂ ರಾಜ್ಯದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆದು
ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ರಾಜ್ಯದಲ್ಲಿ ಕೋವಿಡ್‌-19 ನಿರ್ವಹಣೆಗೆ
ಉಪಕರಣ ಖರೀದಿಯಲ್ಲಿ ರೂ.2000 ಕೋಟಿ ನಷ್ಟ ಅವ್ಯವಹಾರ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ
ನಡೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಹಿಸಿದರು.


ಆಧಾರ:ಉದಯವಾಣಿ, ದಿನಾ೦ಕ:23.09.2020
20. ತೃರಿತ ವಿಚಾರಣೆ : ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ


ವರ್ಷಗಟ್ಟಲೇ ತನಿಖೆ ನಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ
ಲೋಕಾಯುಕ್ತ ಎರಡನೇ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಿತು.


ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಸಚಿವ ಜೆಸಿ. ಮಾಧುಸ್ಪಾಮಿ ವಿಧೇಯಕವನ್ನು
ಮಂಡಿಸಿದರು. ಇಷ್ಟು ದಿನ ಯಾವುದೇ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾದರೆ,
ಪ್ರಾಥಮಿಕ ವರದಿ ಸಲ್ಲಿಕೆಗೆ ತಿಂಗಳುಗಟ್ಟಲೇ ತೆಗೆದುಕೊಳ್ಳಲಾಗುತ್ತಿತ್ತು ಇದನ್ನು ತಪ್ಪಿಸಲು ಈ ತಿದ್ದುಪಡಿ
ವಿಧೇಯಕ ಮಂಡಿಸಲಾಗಿದೆ ಎಂದರು.


ತಿದ್ದುಪಡಿಯಲ್ಲಿ ಪ್ರಮುಖವಾಗಿ ಯಾವುದೇ ದೂರು ದಾಖಲಾದರೂ ಪ್ರಾಥಮಿಕ ವರದಿ ಸಲ್ಲಿಸುವುದಕ್ಕೆ
30 ದಿನಗಳ ಅವಕಾಶ ನೀಡಲಾಗಿದೆ. ಇನ್ನು ಪ್ರಕರಣದ ತನಿಖೆಯನ್ನು ಯಾವುದೇ ಅಧಿಕಾರಿಯ ವಿರುದ್ಧ
ಮಾಡುವುದಿದ್ದರೂ ಆರು ತಿಂಗಳಲ್ಲಿ ಪೂರ್ಣಗೊಳ್ಳಬೇಕು. ಇನ್ನು ಹೆಚ್ಚುವರಿ ಕಾಲಾವಕಾಶ ಅಗತ್ಯವಿದ್ದರೆ, ಒಂದು
ಬಾರಿಗೆ ಸೀಮಿತಗೊಂಡು ಪುನ: ಆರು ತಿಂಗಳ ಸಮಯವನ್ನು ಪಡೆಯಬೇಕು ಎಂದು ವಿವರಿಸಿದರು. ಈ ರೀತಿ
ಕಾಯಿದೆ ಜಾರಿಗೊಳಿಸುವುದರಿಂದ, ಪ್ರಕರಣಗಳ ವಿಲೇವಾರಿ ತ್ನರಿತವಾಗಿ ನಡೆಯಲಿದೆ ಎಂದು
ಅಭಿಪ್ರಾಯಪಟ್ಟರು.


ಆಧಾರ:ವಿಶ್ವವಾಣಿ, ದಿನಾ೦ಂಕ:24.09.2020
21. 250 ವಾರ್ಡ್‌ ರಚನೆಗೆ ವಿಧಾನ ಸಭೆ ಒಪ್ಪಿಗೆ


ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ
250ಕ್ಕೆ ಹೆಚ್ಚಳ ಮಾಡುವಂತೆ ಶಾಸಕ ಎಸ್‌.ರಘು ನೇತೃತ್ವದ ಜಂಟಿ ಪರಿಶೀಲನಾ ಸಮಿತಿಯು ಸಲ್ಲಿಸಿರುವ ವಿಶೇಷ
ವರದಿಗೆ ವಿಧಾನಸಭೆಯು ಒಪ್ಪಿಗೆ ನೀಡಿದೆ.


ಇದಕ್ಕೆ ಪೂರಕವಾಗಿ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ-1976ರ ನಿಯಮಾವಳಿಯಲ್ಲಿ ಸಣ್ಣ
ಪ್ರಮಾಣದ ತಿದ್ದುಪಡಿ ಮಾಡಿ 200 ವಾರ್ಡ್‌ಗಳ (ಕಾಯಿದೆಯಲ್ಲಿ 200 ವಾರ್ಡ್‌ವರೆಗೆ ಅವಕಾಶವಿದೆ)
ಹೆಸರಿನ ಬದಲಿಗೆ 250 ಎಂಬ ಪದ ಪ್ರಯೋಗಕ್ಕೆ ಒಪ್ಪಿಗೆ ಪಡೆದಿದೆ. ಪರಿಣಾಮ ಮುಂಬರುವ ಬೃಹತ್‌
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯು 198 ವಾರ್ಡ್‌ಗಳ ಬದಲಿಗೆ 250 ವಾರ್ಡ್‌ಗಳಿಗೆ
ನಡೆಯುವುದು ಬಹುತೇಕ ಖಚಿತವಾಗಿದೆ.


ತಿದ್ದುಪಡಿ ಮೂಲಕ ಬಿಬಿಎಂಪಿ ವಿಧೇಯಕ-2020 ಮಂಡನೆ, ಅಂಗೀಕಾರ ವಿಳಂಬವಾದರೂ ಅಥವಾ
ತಕ್ಷಣ ಹೈಕೋರ್ಟ್‌ ಚುನಾವಣೆ ನಡೆಸುವಂತೆ ಘೋಷಣೆ ಮಾಡಿದರೂ ಬಿಬಿಎಂಪಿ ವಾರ್ಡ್‌ಗಳನ್ನು 198 ರಿಂದ
250ಕ್ಕೆ ಪುನರ್‌ ರಚನೆ ಮಾಡಿ ಪರಿಷತ ವಾರ್ಡ್‌ಗಳ ಸಂಖ್ಯೆಗೆ ಚುನಾವಣೆ ನಡೆಸಲು ಸರ್ಕಾರ ವೇದಿಕೆ
ಸಜ್ಜುಗೊಳಿಸಿಕೊಂಡಿದೆ.


2020ನೇ ಸಾಲಿನ ಬಿಬಿಎಂಪಿ ವಿಧೇಯಕವನ್ನು (ಬಿಬಿಎಂಪಿ ವಿಧೇಯಕ-2020) ಪರಿಶೀಲಿಸಲು ಶಾಸಕ
ಎಸ್‌. ರಘು ನೇತೃತ್ವದಲ್ಲಿ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯನ್ನು ರಚನೆ
ಮಾಡಲಾಗಿದೆ. ಆದರೆ, ಸಮಿತಿಯು ತನ್ನ ಅಂತಿಮ ವರದಿ ಸಲ್ಲಿಸಲು ನವೆಂಬರ್‌ ಅಂತ್ಯದವರೆಗೆ ಗಡುವು


ಪಡೆದಿದ್ದು, ಅಲ್ಲಿಯವರೆಗೆ ವಿಧೇಯಕಕ್ಕೆ ಒಪ್ಪಿಗೆ ದೊರೆಯುವುದು ಅನುಮಾನ ಎಂಬಂತಾಗಿದೆ.


ಇದರ ನಡುವೆ ಸೆಪ್ಪೆಂಬರ್‌-15 ರಂದು ಸಮಿತಿಯು ಒಂದು ಪುಟದ ವಿಶೇಷ ವರದಿ ಸಲ್ಲಿಸಿ
ಬಿಬಿಎಂಪಿಯ ಚುನಾಯಿತ ಸದಸ್ಯರ ಅವಧಿ ಮುಗಿದಿದ್ದು, ಮಹಾನಗರ ಪಾಲಿಕೆಗೆ ಚುನಾವಣೆ
ನಡೆಸಬೇಕಾಗಿರುತ್ತದೆ. ಪ್ರಸ್ತುತ ವಿದ್ಯಮಾನಗಳು ಬೆಂಗಳೂರು ಮಹಾನಗರದಲ್ಲಿ ಹೆಚ್ಚಳವಾದ ಜನಸಂಖ್ಯೆ ಹಾಗೂ
ವಿಸೀರ್ಣದ ಆಧಾರದ ಮೇಲೆ 1976 ಸಾಲಿನ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ ಪ್ರಕರಣ 7ಕ್ಕೆ
ತಿದ್ದುಪಡಿ ತಂದು ವಾರ್ಡ್‌ ಹೆಚ್ಚಳಕ್ಕೆ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ 1976ನೇ ಸಾಲಿನ ಕರ್ನಾಟಕ
ನಗರ ಪಾಲಿಕೆಗಳ ಅಧಿನಿಯಮ 7(1)ನೇ ಉಪಪ್ರಕರಣದ (ಎ) ಖಂಡದಲ್ಲಿ 200 ಬದಲಿಗೆ 250 ಎಂಬ ಪದ
ಪ್ರಯೋಗಿಸಬೇಕು ಎಂದು ವರದಿ ನೀಡಿದ್ದರು.


ಈ ವರದಿಯನ್ನು ಒಪ್ಪಿರುವ ವಿಧಾನ ಸಭೆಯು ವಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ಬಿಬಿಎಂಪಿ
ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 250ಕ್ಕೆ ಹೆಚ್ಚಿಸಿ ಚುನಾವಣೆ ನಡೆಸಲು ವೇದಿಕೆ ಸಿದ್ಧಪಡಿಸಿದೆ.


3 ನಗರ ಪಾಲಿಕೆಗೆ ಚಾರ್ಜ್‌ ಒತ್ತಾಯ: ವಾರ್ಡ್‌ ಸಂಖ್ಯೆ ಹೆಚ್ಚಳಕ್ಕೆ ಕಾಂಗೆಸ್‌ ಶಾಸಕ ಕೆ.ಜೆ. ಜಾರ್ಜ್‌
ಆಕ್ಷೇಪ ವ್ಯಕ್ತಪಡಿಸಿ, ವಾರ್ಡ್‌ಗಳನ್ನು ವಿಭಜಿಸಲು ಆಕ್ಷೇಪವಿಲ್ಲ. ಆದರೆ 250 ವಾರ್ಡ್‌ಗಳಿಗೆ ಒಂದೇ ಪಾಲಿಕೆ
ಇದ್ದರೆ ಆಡಳಿತ ನಡೆಸಲು ಕಷ್ಟವಾಗಲಿದೆ. 250 ವಾರ್ಡ್‌ಗಳನ್ನು ಮಾಡಿ 3 ಕಾರ್ಪೋರೇಷನ್‌ ರಚಿಸಬೇಕು
ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಕಳೆದ ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕ ಮಂಡಿಸಲಾಗಿತ್ತು. ಆದರೆ,
ಆಡಳಿತ ಪಕ್ಷದ ಸದಸ್ಯರಿಂದಲೇ ತೀವ್ರ ವಿರೋಧ ವ್ಯಕ್ತವಾದ್ದರಿಂದ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು.


ಆಧಾರ:ಕನ್ನಡ ಪ್ರಭ, ದಿನಾಂಕ:24.09.2020
22. ಕೊನೆಗೂ ಅನ್ಸರ್‌ ಮಾಣಿಪ್ಪಾಡಿ ವರದಿ ಮಂಡನೆ


ವಕ್ಸ್‌ ಬೋರ್ಡ್‌ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ರಾಜ್ಯ
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ಸರ್‌ ಮಾಣಿಪ್ಪಾಡಿ ವರದಿಯನ್ನು ಸರ್ಕಾರ ವಿಧಾನಸಭೆಯಲ್ಲಿ
ಮಂಡಿಸಿತು.


ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕ್ಸ್‌ ಬೋರ್ಡ್‌ ಆಸ್ತಿ ಕಬಳಿಕೆಗೆ ಸಂಬಂಧಪಟ್ಟಂತೆ ಅನ್ಸರ್‌
ಮಾಣಿಪ್ಪಾಡಿ ಅವರು 2012ರಲ್ಲೇ ವಿಶೇಷ ವರದಿ ಸಲ್ಲಿಸಿದ್ದರು. ಪ್ರಭಾವಿ ರಾಜಕಾರಣಿಗಳು ವಕ್ಸ್‌ ಆಸ್ತಿ
ಕಬಳಿಸಿರುವುದು ಹಾಗೂ ಅದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದಾಗಿ ಉಲ್ಲೇಖಿಸಲಾಗಿದೆ. ಕೇಂದದ
ಮಾಜಿ ಸಚಿವರಾದ ರೆಹಮಾನ್‌ ಖಾನ್‌, ಸಿ.ಎಂ. ಇಬ್ರಾಹಿಂ. ಮಾಜಿ ಸಂಸದ ನರಸಿಂಗರಾವ್‌ ಸೂರ್ಯವಂಶಿ,
ಮಾಜಿ ಸಚಿವ ಆರ್‌. ರೋಷನ್‌ ಬೇಗ್‌. ಶಾಸಕ ಎನ್‌.ಎ. ಹ್ಯಾರಿಸ್‌ ಸೇರಿದಂತೆ ಹಲವರ ಹೆಸರು
ವರದಿಯಲ್ಲಿದೆ.


ವರದಿಯಲ್ಲಿರುವ ಪ್ರಮುಖ ವಿವರ:


» ಬೀದರ್‌ ಜಿಲ್ಲೆಯಲ್ಲಿ 2,586 ಎಕರೆ ಪೈಕಿ 1803 ಎಕರೆ ಒತ್ತುವರಿ: ಬೀದರ್‌ನ ಖ್ಹಾಜಾ ಅಬ್ದುಲ್‌
ಫೈಜ್‌ ದರ್ಗಾಗೆ ಸೇರಿದ 180 ಎಕರೆ ಖಬರಸ್ತಾನ್‌ (ಸರ್ಮೇ ನಂ.73)/ ಒತ್ತುವರಿದಾರರು-ನಿಸಾರ್‌
ಆಹಮದ್‌, ಫೈರೋಜ್‌ ಖಾನ್‌ ಹಾಗೂ ಇತರರು.


> ಫತ್ತೇಹುಲ್ಲಾ ಖಾದಿರ್‌ ದಾದಾಪೀರ್‌ ದರ್ಗಾಗೆ ಸಂಬಂಧಪಟ್ಟಂತೆ ಅಲಿಯಾಬಾದ್‌ ಗ್ರಾಮದ
8,36ಎಕರೆ (ಸರ್ವೇ ನಂ.73)/ಒತ್ತುವರಿದಾರರು-ಮಾಜಿ ಸಂಸದ ನರಸಿಂಗರಾವ್‌ ಸೂರ್ಯವಂಶಿ.


» ಬೀದರ್‌ನ ಗುಲ್ಲರ್‌ ಹವೇಲಿ (ಸರ್ವೇ ನಂ.31/ಡಿ) ಒತ್ತುವರಿದಾರರು - ನಿವೃತ್ತ ಐಪಿಎಸ್‌ ಅಧಿಕಾರಿ
ಹಜರತ್‌ ಖಾಜಾ ಬಂಡೆನವಾಜ್‌ ದರ್ಗಾಗೆ ಸೇರಿದ 8.34 ಎಕರೆ (ಸರ್ವೇ ನಂ.12)/
ಒತ್ತುವರಿದಾರರು - ಮಾಜಿ ಸಚಿವ ದಿ. ಖಮರುಲ್‌ ಇಸ್ಲಾಂ.


» ವಕ್ಕಲಗೇರೆ ದರ್ಗಾ ಹಜರತ್‌ ಅಬೆರ್‌ ಸಯೀದ್‌ ಜುನೈದಿ 2 ಎಕರೆ ವಿಸ್ಲೀರ್ಣ (ಸರ್ವೇ ನಂ.13)/
ಒತ್ತುವರಿದಾರರು ಖನೀಜ ಫಾತಿಮಾ (ಖಮರುಲ್‌ ಇಸ್ಲಾಂ ಪತ್ಚಿ)


ಕಾಂಗೆಸ್‌,


ಬ್ರಹ್ಮಪುರ ಗಾಮ ಹಜರಾತ್‌ ಖ್ಹಾಜಾ ಬಂಡೆ ನವಾಜ್‌ನ ಗೇಶುದರಾಜ್‌ (ಸರ್ವೆ.ನಂ.33/1, 33/2.
33/3, 33/4, 33/5) ಒತ್ತುವರಿದಾರರು ಮಾಜಿ ಸಂಸದ ಇಕ್ಸಾಲ್‌ ಅಹಮದ್‌ ಸರಡಗಿ.


ಭಾಗಿಯಾದವರು - ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ. ಧರ್ಮಸಿಂಗ್‌,
ದಿ.ಖಮರುಲ್‌ ಇಸ್ತಾಂ, ಸಿ.ಎಂ. ಇಬ್ರಾಹಿಂ, ಅಲ್ಲಜ್‌ ಸೈಯ್ಯದ್‌ ಯಾಸಿನ್‌, ಕಲಬುರಗಿಯ ಉಪ
ಮೇಯರ್‌ ಅಷ್ನಕ್‌ ಅಹಮದ್‌ ಚುಲ್ಬುಲ್‌


ಬೆಂಗಳೂರು ನಗರ ಜಿಲ್ಲೆ ವಿಂಡ್ಲರ್‌ ಮ್ಯಾನರ್‌ ಹೋಟೆಲ್‌ / ಆಸ್ತಿ ಸಂಖ್ಯೆ 25, ಸ್ಯಾಂಕಿ ರಸ್ತೆ,
ವಿಸೀರ್ಣ ಸುಮಾರು 4 ಎಕರೆ/ ಒತ್ತುವರಿದಾರರು ಎ. ಗಂಗಾರಾಮ್‌ ಮೊನಾರ್ಕ್‌
ಕಾರ್ಪೋರೇಷನ್‌, ವಿಂಡ್ಸರ್‌ ಮ್ಯಾನರ್‌ ಹೋಟೆಲ್‌, ಭಾಗಿಯಾದವರು-ಕೇಂದದ ಮಾಜಿ ಸಚಿವ
ಆರ್‌. ರೆಹಮಾನ್‌ ಖಾನ್‌.


ಅಣ್ಣಿಪುರ ಗ್ರಾಮದ 2.30 ಎಕರೆ (ಲಾಲ್‌ಬಾಗ್‌ ಹಾಪ್‌ಕಾಮ್ಸ್‌ - ಸರ್ಮೇ ನಂ.18)/
ಒತ್ತುವರಿದಾರರು - ರಾಜ್ಯ ವಕ್ಸ್‌ ಮಂಡಳಿ ಅಧ್ಯಕ್ಷ ಖಾಲಿದ್‌ ಅಹಮದ್‌, ಮಾಜಿ ಸಜೆವ ಎ.ಎಂ.
ಹಿಂಡಸಗೇರಿ.


ಈಸಿ ಸಂಖ್ಯೆ 10 ಹಜರತ್‌ ನವಾಬ್‌ ಇಬ್ರಾಹಿಂ ಆಲಿ ಷಾ ಕುಂಬಾರ ಪೇಟೆ; ಒತ್ತುವರಿದಾರರು
ಸಿ.ಎಂ. ಇಬಾಹಿಂ.


ಆಸ್ತಿ ಸಂಖ್ಯೆ 22-23, ಪಿಳ್ಳೆಯಾರ್‌ ಕೊಯಿಲ್‌ ಸ್ಟ್ರೀಟ್‌ ನಂ.17 (ಹಳೆಯ ನಂ.120) ಮಕಾನ್‌ ರಸ್ತೆ.
ವಿಸ್ತೀರ್ಣ 7329 ಚದರ pO ಒತ್ತುವರಿದಾರರು- ಮಹಮದ್‌ ಗೌಸ್‌, ಭಕ್ಷಿ ಖಾನ್‌, ಮುತಾವಳಿ:
ಎಂ.ವಿ. ಮಹಮದ್‌ ಬಶೀರ್‌ ಭಾಗಿದಾರರು, ಮಾಜಿ ಸಚಿವ ರೋಷನ್‌ ಬೇಗ್‌.


ಬಡೇಪುರ ಗ್ರಾಮದಲ್ಲಿ ಒಟ್ಟು 10.05 ಎಕರೆ (ಸರ್ವೇ ನಂ.2-5,7-9,11,13) / ಒತ್ತುವರಿದಾರರು-
ತಾಹೇರಾ ಹ್ಯಾರಿಸ್‌ (ಶಾಸಕ ಹ್ಯಾರಿಸ್‌ ಪತ್ನಿ) ಸುರೈಯ ಮಹಮದ್‌ (ಹ್ಯಾರಿಸ್‌ ತಾಯಿ)
ಗಯಾಸುಲ್ಲಾ ಷರೀಫ್‌ (ಹ್ಯಾರಿಸ್‌ ಆಪ್ತ ಸಹಾಯಕ) ಭಾಗಿಯಾದವರು.

ಬಿಳೇಕಹಳ್ಳಿಯಲ್ಲಿ ಒಟ್ಟು 602.29 ಎಕರೆ ಪೈಕಿ 122.20 ಎಕರೆ 50 ಜನರಿಗೆ ಮಂಜೂರು,


ಉಳಿದಿದ್ದನ್ನು ಕಾನೂನು ಬಾಹಿರವಾಗಿ ವಿಲೇ (ಸರ್ವೇ ನಂ.55)/ ಒತ್ತುವರಿದಾರರು - ಉಬೆದುಲ್ಲಾ
ಷರೀಫ್‌ ಹಾಗೂ ಇತರೆ 50 ಮಂದಿ ಭಾಗಿಯಾದವರು ದಿ.ಸಿ.ಕೆ. ಜಾಫರ್‌ ಷರೀಫ್‌.


ರಾಮನಗರ ಜಿಲ್ಲೆ ರಿಫಾಬುಲ್‌ ಮುಸ್ತಿಮಿನ್‌ ಮೈಸೂರಿನ ಸಯ್ಯಾಜಿರಾವ್‌ ರಸ್ತೆ ಹಾಗೂ ಅಕ್ಸರ್‌


ರಸ್ತೆಯಲ್ಲಿರುವ ಮಜಿದ್‌ ಏ ಬಗ್ಗಾನ್‌ ಎದುರಿಗಿರುವ ಖಾಲಿ ಜಾಗ/ ಒತ್ತುವರಿದಾರರು - ತಾಜ್‌
ಮಹಮದ್‌ ಖಾನ್‌ ( ಮಾಜಿ ಸಚಿವ ದಿ. ಅಜೀಜ್‌ ಸೇಠ್‌)


ಕೊಪ್ಪಳ ಜಿಲ್ಲೆ: ಗಂಗಾವತಿಯಲ್ಲಿ ಇಸ್ಲಾಂಪುರದ ಜಾಮಿಯಾ ಮಸೀದಿಗೆ ಸೇರಿದ 2 ಎಕರೆ (ಸರ್ವೇ
ನಂ.56/2) ಒತ್ತುವರಿದಾರರು - ಮಾಜಿ ಸಚಿವ ಇಕ್ಸಾಲ್‌ ಅನ್ಹಾರಿ
ಗಂಗಾವರಿಯ ಬೇರೂನಿ ಅಬಾದಿ ಮಸೀದಿಗೆ ಸೇರಿದ 2.09 ಎಕರೆ) ಸರ್ಮೇ ನಂ.10/1, 10/2,
10/3/ ಒತ್ತುವರಿದಾರರು ಮಾಜಿ ಸಚಿವ ಇಕ್ಸಾಲ್‌ ಅನ್ನಾರಿ.
ಆಧಾರ:ಉದಯವಾಣಿ, ದಿನಾ೦ಕ:24.09.2020
23. ದಿಢೀರ್‌ ಅವಿಶ್ವಾಸ


ಶಾಂತವಾಗಿದ್ದ ರಾಜ್ಯ ರಾಜಕೀಯದಲ್ಲಿ ದಿಢೀರನೇ ಅವಿಶ್ವಾಸದ ಗಾಳಿ ಬೀಸಿದೆ. ರಾಜ್ಯದ ಬಿ.ಎಸ್‌.
ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ವಿಶ್ವಾಸ ಕಳದುಕೊಂಡಿದೆ ಎಂದು ಆರೋಪಿಸಿರುವ ಪ್ರತಿ ಪಕ್ಷ
ವಿಧಾನಸಭೆಯಲ್ಲಿ ಅವಿಶ್ಲಾಸ ನಿರ್ಣಯ ಮಂಡಿಸಿದೆ.


[90


ಕೊರೋನಾ ಸೋಂಕು ಹೆಚ್ಚುತ್ತಿರುವ ಮಧ್ಯೆ ಹಾಗೂ ಮುಂಗಾರು ಅಧಿವೇಶನ ಅಂತ್ಕವಾಗಲು ಇನ್ನೆರಡು
ದಿನ ಬಾಕಿ ಇರುವಂತೆ ಈ ವಿದ್ಯಮಾನ ನಡೆದಿರುವುದು ಕುತೂಹಲ ಮೂಡಿಸಿದೆ.


ವಿಶೇಷವೆಂದರೆ, ಕಾಂಗೆಸ್‌ ಅವಿಶ್ವಾಸ ನಿರ್ಣಯ ಕೋರಿಕೆಯನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ, ಕಾಗೇರಿ
ಅಂಗೀಕರಿಸಿದ್ದು, ಅಧಿಕೃತ ಚರ್ಚೆಗೆ ಅವಕಾಶ ನೀಡುವುದಾಗಿಯೂ ಹೇಳಿದ್ದಾರೆ.


ಕಲಾಪ ಆರಂಭವಾಗುವ ಮುನ್ನ ನಡೆದ ಕಾಂಗೆಸ್‌ ಶಾಸಕಾಂಗ ಪಕ್ಷ ಸಭೆಯಲ್ಲಿ ಅವಿಶ್ಚಾಸ ನಿರ್ಣಯದ
ಬಗ್ಗೆ ನಿರ್ಧರಿಸಲಾಗಿದೆ. ಕಲಾಪ ಆರಂಭಗೊಂಡ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ
ಅವಿಶ್ವಾಸ ಮಂಡನೆಗೆ ಸ್ಪಂದಿಸಿದ ಸೀಕರ್‌, ಅವಿಶ್ವಾಸ ನಿರ್ಣಯದ ಪರವಾಗಿರುವವರು ಎದ್ದು ನಿಂತು ಬೆಂಬಲ
ಸೂಚಿಸುವಂತೆ ಕೋರಿದರು. ಆಗ ಕಾಂಗೆಸ್‌ ಸದಸ್ಯರೆಲ್ಲರೂ ಎದ್ದು ನಿಲ್ಲುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ
ಬೆಂಬಲ ಸೂಚಿಸಿದರು. ಒಂದು ನಿರ್ಣಯದ ಪರವಾಗಿ 23ಕ್ಕೂ ಹೆಚ್ಚು ಸದಸ್ಯರು ಬೆಂಬಲ ಸೂಚಿಸಿದರೆ, ಆ
ವಿಷಯದ ಮೇಲೆ ಚರ್ಚೆಗೆ ಸದನದ ಒಪ್ಪಿಗೆ ಇದೆ ಎಂದು ಭಾವಿಸಿ, ಸರ್ಕಾರದ ವಿರುದ್ಧ ಮಂಡಿಸಿರುವ


ಅವಿಶ್ಚಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್‌ ರೂಲಿಂಗ್‌ ನೀಡಿದರು.


ರಾಜ್ಯ ಸರ್ಕಾರದ ವಿರುದ್ದ ಅವಿಶ್ಲಾಸ ನಿರ್ಣಯ ಮಂಡನೆಯಾಗಿರುವುದರಿಂದ ರಾಜ್ಯ ಸರ್ಕಾರ
ಯಾವುದೇ ಮಹತ್ನದ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ಕಾಂಗೆಸ್‌ ಸದಸ್ಯ ಎಚ್‌. ಕೆ. ಪಾಟೀಲ್‌
ಆಗಹಿಸಿದರು. ಆದರೆ, ಸೀಕರ್‌ ವಿಶ್ವೇಶ್ವರ ಹೆಗಡೆ, ಕಾಗೇರಿ ಯಾವುದೇ ಕಾರ್ಯಕಲಾಪ ತಡೆಯಲು ಆಗುವುದಿಲ್ಲ
ಎಂದರು.


ಆಧಾರ:ಉದಯವಾಣಿ, ದಿನಾ೦ಕ:25.09.2020
24. ಪಂಚಾಯಿತಿ ಮೀಸಲು ಐದು ವರ್ಷಕ್ಕೆ ಇಳಿಕೆ


ಗಾಮ ಪಂಚಾಯಿತಿ ವಾರ್ಡ್‌ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಕ್ಷೇತಗಳ ಮೀಸಲು
ಅವಧಿಯನ್ನು ಹತ್ತು ವರ್ಷಗಳಿಂದ 5 ವರ್ಷಕ್ಕೆ ಇಳಿಸುವ ಗಾಮ ಸ್ಪರಾಜ್‌ ಮತ್ತು ಪಂಚಾಯತ್‌ ರಾಜ್‌
ತಿದ್ದುಪಡಿ ವಿಧೇಯಕ್ಕೆ ವಿಧಾನ ಸಭೆಯಲ್ಲಿ ಒಪ್ಪಿಗೆ ದೊರೆಕಿದೆ.

ಪಂಚಾಯತ್‌ ರಾಜ್‌ ಸಚಿವ ಕೆ. ಎಸ್‌. ಈಶ್ವರಪ್ಪ ವಿಧೇಯಕವನ್ನು ಮಂಡಿಸಿ ಮೀಸಲು ಸೌಲಭ್ಯ
ಪರಿಣಾಮಕಾರಿಯಾಗಿ ಲಭಿಸುವಂತೆ ಮಾಡುವ ಉದ್ದೇಶದಿಂದ ತಿದ್ದುಪಡಿ ಜಾರಿಗೆ ತರಲಾಗುತ್ತಿದೆ ಎಂದು
ವಿವರಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗೆಸ್‌ ಸದಸ್ಯ ರಮೇಶ್‌ ಕುಮಾರ,
ಇದು ಸಾಮಾಜಿಕ ನ್ಯಾಯ ಮತ್ತು ಮೀಸಲು ನೀತಿಗೆ ವಿರುದ್ಧವಾಗಿದೆ. ಇದೊಂದು ದುರಂತ. ಇಂಥ ಕಾಯಿದೆ
ಜಾರಿಗೆ ಈಶ್ವರಪ್ಪನಂಥವರನ್ನು ಬಳಸಿಕೊಳ್ಳುವುದಕ್ಕೆ ಬೇಸರವಾಗುತ್ತಿದೆ. ಕಾಂಗೆಸ್‌ ಸರ್ಕಾರದ ಅವಧಿಯಲ್ಲಿ
ಅಧ್ಯಕ್ಷರ ವಿರುದ್ಧ ಅವಿಶ್ಚಾಸ ನಿರ್ಣಯ ಮಂಡಿಸುವುದನ್ನು ತಪ್ಪಿಸಲು ಕನಿಷ್ಠ 30 ತಿಂಗಳು ಯಾವುದೇ ಅವಿಶ್ವಾಸ
ಮಂಡನೆಗೆ ಅವಕಾಶ ಇರಬಾರದು. ಪಂಚಾಯಿತಿಗಳ ಚುನಾವಣೆಯನ್ನು ಆಯೋಗವೇ ನಡೆಸಿ ಎಲ್ಲ ವೆಚ್ಚವನ್ನು
ಆಯೋಗವೇ ಭರಿಸುವಂತಾಗಬೇಕು. ಮತದಾನಕ್ಕೆ 8 ದಿನ ಮುನ್ನ ಮಧ್ಯ ಮಾರಾಟ ನಿಷೇಧ ಮಾಡಬೇಕೆಂದು
ಪ್ರಸ್ತಾಪಿಸಲಾಗಿತ್ತು ಎಂದರು.

ಕಾಂಗೆಸ್‌ ವಿರುದ್ದವೇ ಆಕ್ರೋಶ: ಈ ಕಾಯಿದೆಯನ್ನು ನಮ್ಮ ಸರ್ಕಾರದ ಅವಧಿಯಲ್ಲೇ ಸರಿಯಾಗಿ ಜಾರಿ
ಮಾಡಲಿಲ್ಲ. ಸತ್ಯ ಹೇಳಿದರೆ ನಮ್ಮ ನಾಯಕರಿಗೆ ಬೇಸರವಾಗುತ್ತದೆ. ಮಾತನಾಡದಿದ್ದರೆ ಆತ್ಮಸಾಕ್ಷಿಗೆ ದ್ರೋಹ
ಮಾಡಿಕೊಂಡಂತಾಗುತ್ತದೆ. ನಾನು ನೀಡಿದ ವರದಿ ಆಧರಿಸಿ ಸಿದ್ಧಗೊಳಿಸಿದ ವಿಧೇಯಕ ಜಾರಿಗೆ ನಮ್ಮ
ಸರ್ಕಾರವೇ ಮನಸ್ಸು ಮಾಡಲಿಲ್ಲ. ಆದರೆ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಜಾರಿಗೆ
ಸೂಚನೆ ನೀಡಿದ ಮೇಲೆ ಕ್ರಮ ತೆಗೆದುಕೊಂಡರು. ಆದರೆ, ಚುನಾವಣೆ ನಡೆಸುವಾಗ ಹೊಸ ಕಾಯಿದೆ ಬಿಟ್ಟು ಹಳ
ನಿಯಮ ಪ್ರಕಾರ ನಡೆಸಿದರು. ಇದು ವಿಪರ್ಯಾಸವಲ್ಲವೇ ಇಂಥದ್ದನ್ನೂ ಎಲ್ಲಾದರೂ ನೋಡಿದ್ದೀರಾ ಎಂದು
ಪ್ರಶ್ನಿಸಿದರು.

ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಮಾತನಾಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಇಲ್ಲದ
ಸಂದರ್ಭದಲ್ಲಿಯೇ ದಲಿತರು ಮತ್ತು ಹಿಂದುಳಿದವರಿಗೆ ದೇವೇಗೌಡರು ಅಧ್ಯಕ್ಷ ಸ್ಥಾನ ಕಲ್ಪಿಸಿಕೊಟ್ಟಿದ್ದರು. ವಿಧಾನ
ನು


%


ಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಇರಬೇಕು ಎಂದರು ದೇವೇಗೌಡರು


ಪ್ರಧಾನಿಯಾಗಿದ್ದಾಗಲೇ ವಿಧೇಯಕ ಮಂಡಿಸಿದ್ದರು ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ
ಮಹಿಳಾ ಸದಸ್ಯರು ಈಗಾಲಾದರೂ ಪಾಸ್‌ ಮಾಡಿಸಿ ಕೊಡಿ ಸರ್‌ ಎಂದು ಎಲ್ಲರೂ ಪಕ್ಷ ಮರೆತು ಆಗ್ರಹಿಸಿದರು.
ಆಗ ಮಧ್ಯ ಪ್ರವೇಶಿಸಿದ ಪ್ರೀತಂಗೌಡ ರೇವಣ್ಣ ವಾದಿಸುತ್ತಿರುವುದು ಮಹಿಳೆಯರ ಪರ ಅಲ್ಲ ಹೊಳೆನರಸೀಪುರ
ಕ್ಷೇತ್ರವನ್ನು ತಮ್ಮ ಮನೆಯವರಿಗೆ ಮೀಸಲು ಮಾಡುವುದಕ್ಕೆ ಎಂದು ಕುಟುಕಿದರು.
ವಿಧೇಯಕದ ಅಂಶಗಳು:-

» ಕ್ಷೇತ್ರಗಳ ಮೀಸಲು ಅವಧಿ 10 ವರ್ಷದಿಂದ 5 ವರ್ಷಕ್ಕೆ ಇಳಿಕೆ

> ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಿರುದ್ಧ 15 ತಿಂಗಳಿಗಿಂತ ಮುಂಚೆ ಅವಿಶ್ವಾಸ ಮಂಡಿಸುವಂತಿಲ್ಲ

> ಮತದಾನ ದಿನಾಂಕಕ್ಕೆ 2 ದಿನ ಮುಂಚಿತವಾಗಿ ಮದ್ಯ ಮಾರಾಟ ನಿಷೇಧ.

ಆಧಾರ:ವಿಜಯ ಕರ್ನಾಟಕ, ದಿನಾಂಕ:26.09.2020


25. ದಿನಾಂಕ 26-9-2020ರಂದು ದಿವಂಗತ ಎಕೆ. ಸುಬ್ಬಯ್ಯ ಮತ್ತು
ದಿವಂಗತ ಡಾ. ಮಹದೇವ ಬಣಕಾರ್‌ ಕುರಿತ ಪುಸ್ತಕ ಬಿಡುಗಡೆ


ಕರ್ನಾಟಕ ರಾಜ್ಯದ ಪ್ರತಿಭಾವಂತ ಸಂಸದೀಯ ಪಟುಗಳ ಪುಸ್ತಕ ಮಾಲಿಕೆಯಡಿ ಕರ್ನಾಟಕ
ವಿಧಾನಮಂಡಲದ ಗಂಥಾಲಯ ಸಮಿತಿ ವತಿಯಿಂದ ಪಕಟಿಸಲಾಗಿರುವ ಮಾಜಿ ಶಾಸಕ, ಹಿರಿಯ ಸಂಸದೀಯ
ಪಟುಗಳಾಗಿದ್ದ ದಿವಂಗತ ಎ.ಕೆ. ಸುಬ್ಬಯ್ಯ ನವರ ಕುರಿತ ಪುಸ್ತಕ ಬಿಡುಗಡೆ ಸಮಾರಂಭವು ಬೆಂಗಳೂರಿನಲ್ಲಿ
ಜರುಗಲಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ
ಬಿ.ಎಸ್‌. ಯಡಿಯೂರಪ್ಪ ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ
ಮತ್ತೋರ್ವ ಮಾಜಿ ಶಾಸಕ ಡಾ: ಮಹದೇವ ಬಣಕಾರ್‌ ಅವರ ಕುರಿತ ಪುಸ್ತಕವು ಬಿಡುಗಡೆಯಾಗಲಿದೆ. ಈ
ಪುಸ್ತಕವನ್ನು ಬೆಂಗಳೂರಿನ ಹೆಸರಾಂತ ಸಾಹಿತಿ ಲೇಖಕಿ ಶಶಿಕಲಾ ಗೌಡ ರಚಿಸಿದ್ದಾರೆ. ಪರಿಷತ್‌ ಸಭಾಪತಿ
ಕೆ. ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಸೀಕರ್‌ ವಿಶ್ಲೇಶ್ವರ ಹೆಗಡೆ, ಕಾಗೇರಿ
ಉದ್ರಾಟಿಸಲಿದ್ದಾರೆ.


ಆಧಾರ:ಕನ್ನಡ ಪ್ರಭ, ದಿನಾಂಕ:26.09.2020


26. ಕೃಷಿ ಬಿಲ್‌ ಪಾಸ್‌


ರೈತ ಸಂಘಟನೆಗಳು ಮತ್ತು ಪ್ರತಿಪಕ್ಷಗಳ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಭೂ ಸುಧಾರಣೆ
ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದೆ.


ಈ ಎರಡು ಕಾಯ್ದೆಗಳನ್ನು ವಿರೋಧಿಸುತ್ತಿರುವ ರೈತ ಸಂಘಟನೆಗಳು ಈಗಾಗಲೇ ರಾಜ್ಯಾದ್ಯಂತ
ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಬಂದ್‌ಗೂ ಕರೆ ನೀಡಿವೆ. ಇದು ರೈತರ ಮರಣ ಶಾಸನ ಕರಾಳ ವಿಧೇಯಕ,
ಕಾರ್ಪೋರೇಟ್‌ ಕುಳಗಳಿಗೆ, ಹೌಸಿಂಗ್‌ ಸೊಸೈಟಿಗಳ ಜೊತೆ ಶಾಮೀಲಾಗಿ ಈ ವಿಧೇಯಕ ತರಲಾಗುತ್ತಿದೆ ಎಂದು
ಆರೋಪಿಸಿದ ಕಾಂಗೆಸ್‌ ಸದಸ್ಯರು ಮಸೂದೆಯ ಪ್ರತಿಯನ್ನು ಹರಿದು ಹಾಕಿದರಲ್ಲದೇ ಸಭಾತ್ಯಾಗ ಮಾಡಿ
ಆಕ್ರೋಶ ವ್ಯಕ್ತಪಡಿಸಿದರು. ಹಿಂದೆಯೇ ಎಪಿಎಂಸಿ ವಿಧೇಯಕ ವಿರೋಧಿಸಿ ಜೆಡಿಎಸ್‌ ಸದಸ್ಯರು ಸಭಾತ್ಯಾಗ
ಮಾಡಿದರು.


ಪರ-ವಿರೋಧ ಚರ್ಚೆ:- ವಿಧೇಯಕ ಮಂಡಿಸಿದ ಕಂದಾಯ ಸಜೆವ ಆರ್‌. ಅಶೋಕ್‌, ರೈತರಿಗೆ ಇದರಿಂದ
ಯಾವುದೇ ಕಾರಣಕ್ಕೂ ತೊಂದರೆಯಾಗದು ಎಂದು ಹೇಳಿದರು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಅವರು, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರೈತರು ಸೇರಿದಂತೆ ಬಹುತೇಕರ ವಿರೋಧವಿದೆ. ಯಾವ
ಉದ್ದೇಶಕ್ಕಾಗಿ ಭೂ ಸುಧಾರಣೆಗಳ ಕಾಯ್ದೆಯನ್ನು ದೇವರಾಜ ಅರಸು ಅವರು ತಂದಿದ್ದರೋ ಆ ಮೂಲ
ಆಶಯಕ್ಕೆ ಇದು ವಿರುದ್ಧವಾಗಿದೆ. ಕೊರೋನಾ ಸಂದರ್ಭದಲ್ಲಿ ತರಾತುರಿಯಲ್ಲಿ ಸುಗಿವಾಜ್ಞೆ ತರುವ
ಆಗತ್ಯವೇನಿತ್ತು. ಇದರ ಹಿಂದೆ ಬೇರೆಯದೇ ಉದ್ದೇಶವಿದೆ ಎಂದು ಆರೋಪಿಸಿದರು.


ಜೆಡಿಎಸ್‌ ಸಹಮತ: ಅಚ್ಚರಿಯ ಬೆಳವಣಿಗೆಯಲ್ಲಿ ಈ ವಿಧೇಯಕಕ್ಕೆ ಜೆಡಿಎಸ್‌ ಸಹಮತ ವ್ಯಕ್ತಪಡಿಸಿತು. ಮಾಜಿ
ಸಿ.ಎಂ. ಎಚ್‌.ಡಿ.ಕುಮಾರಸ್ವಾಮಿ ಅವರು ಮಾತನಾಡಿ ಕೊರೋನಾ ಸಂದರ್ಭದಲ್ಲಿ ಸುಗ್ರೀವಾಜ್ಞೆ ತರುವ
ಅಗತ್ಯತೆಯ ಬಗ್ಗೆ ಪ್ರಶ್ನಿಸಿದರು. ಜಮೀನು ಖರೀದಿ ಮಿತಿ ಹೆಚ್ಚು ಮಾಡಿರುವುದರಿಂದ ಮತ್ತೆ ಜಮೀನ್ನಾರಿ
ಪದ್ಧತಿಯತ್ತ ಹೋಗುವಂತಾಗುತ್ತದೆ ಎಂದು ಹೇಳಿದರಾದರೂ, ಇದರಿಂದ ರೈತರಿಗೆ ಎಷ್ಟು ಅನುಕೂಲವಾಗುತ್ತದೆ
ಎಂಬ ಬಗ್ಗೆ ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು. ಆದರೆ, ಈ ವಿಧೇಯಕಕ್ಕೆ ಜೆಡಿಎಸ್‌ ಶಾಸಕ


ಶಿವಲಿಂಗೇಗೌಡರು ವಿರೋಧ ವ್ಯಕ್ತಪಡಿಸಿದರು.
ನನ್ನ ಬೆಳೆ ನನ್ನ ಹಕ್ಕು: ರೈತರು ತಾವು ಬೆಳೆದ ಬೆಳಗಳನ್ನು ಎಪಿಎಂಸಿಗಳಲ್ಲಿಯೇ ಮಾರಾಟ ಮಾಡುವ ವ್ಯವಸ್ಥೆ
ಜಾರಿಯಲ್ಲಿದೆ.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಲ್ಲಿ ಏನಿದೆ:

» ಜಮೀನು ಖರೀದಿಸಲು ಕೃಷಿಯೇತರ ಆದಾಯ ರೂ.25 ಲಕ್ಷ ಮೀರಿರಬಾರದು ಎಂಬ ಮಿತಿ ರದ್ದು.

> ವ್ಯಕ್ತಿ ಅಥವಾ ಐದು ಸದಸ್ಯರ ಕುಟುಂಬಕ್ಕೆ 54 ಎಕರೆ ಹಾಗೂ ಅದಕ್ಕಿಂತ ಹೆಚ್ಚಾಗಿರುವ ಸದಸ್ಯರ

ಕುಟುಂಬ ಗರಿಷ್ಟ 108 ಎಕರೆ ಜಮೀನು ಖರೀದಿಸುವ ಅವಕಾಶ ಮುಂದುವರಿಕೆ.
> ಜಲಾನಯನ ಪ್ರದೇಶ ವ್ಯಾಪ್ತಿಯ ಜಮೀನು ಖರೀದಿಸಿದರೆ ಕೃಷಿ ಉದ್ದೇಶಕ್ಕೆ ಮಾತ್ರ ಬಳಕೆ
ಮಾಡಬೇಕು ಎಂಬ ಷರತ್ತು.

ಅತ್ತ ವಿಧಾನ ಸಭೆಯಲ್ಲಿ ಭೂ ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ವಿಧೇಯಕಗಳಿಗೆ ಒಪ್ಪಿಗೆ
ಸಿಕ್ಕಿರುವಂತೆಯೇ, ರೈತರ ಆಕ್ರೋಶವು ಹೆಚ್ಚಾಗಿದೆ ಕರ್ನಾಟಕ ಬಂದ್‌ಗೆ ರಾಜ್ಯದ ಜನ ಸಂಪೂರ್ಣ ಸಹಕಾರ
ನೀಡಬೇಕು ಎಂದು ಐಕ್ಕ ಹೋರಾಟ ವೇದಿಕೆ ಮುಖಂಡರು ಮನವಿ ಮಾಡಿದ್ದಾರೆ. ಬಂದ್‌ಗೆ ಈಗಾಗಲೇ
ಕಬಿನಿ ರೈತ ಹಿತರಕ್ಷಣಾ ಸಮಿತಿ, ರಾಜ್ಯ ಕೃಷಿ ಪಂಪ್‌ ಸೆಟ್‌ ಬಳಕೆದಾರರ ಸಂಘ, ಮಹಾದಾಯಿ ನೀರು
ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ರೈತ ಸಂಘಟನೆಗಳು ಮತ್ತು ಕನ್ನಡಪರ
ಸಂಘಟನೆಗಳು ಬೆಂಬಲ ನೀಡಿವೆ. ಸೆಪ)ೆಂಬರ್‌ 28ರಂದು ಪುರಭವನದ ಎದುರು ವಿವಿಧ ಸಂಘಟನೆಗಳ
ಮುಖಂಡರು ಸಮಾಗಮವಾಗಿ ಮೈಸೂರು ಬ್ಯಾಂಕ್‌ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಪ್ರತಿಭಟನೆ ನಡೆಯಲಿದೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಏನಿದೆ:

> ರೈತರು ಎಪಿಎಂಸಿ ಸೇರಿ ಎಲ್ಲಿ ಬೇಕಾದರೂ ತಮ್ಮ ಉತ್ಪನ್ನ ಮಾರಾಟ ಮಾಡಲು ಅವಕಾಶ.

> ರೈತರು ಎಪಿಎಂಸಿಯಲ್ಲಿಯೇ ಮಾರಾಟ ಮಾಡದಿದ್ದರೆ, ಅವರ ವಿರುದ್ದ ಪ್ರಕರಣ ದಾಖಲಿಸುವ


ಅಧಿಕಾರವಿತ್ತು. ಈಗ ಅದನ್ನು ತೆಗೆದು ಹಾಕಲಾಗಿದೆ.


» ನನ್ನ ಬೆಳೆ ನನ್ನ ಹಕ್ಕು ಎಂದು ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.
ಆಧಾರ:ಉದಯವಾಣಿ, ದಿನಾ೦ಕ:27.09.2020
27. ಬಿ.ಎಸ್‌.ವೈ ಭದ್ರ
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗೆಸ್‌ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಪ್ರಸ್ತಾಪ
ಧನಿಮತದಿಂದ ತಿರಸ್ಕರಿಸಲ್ಲಟ್ಟಿತು. ಈ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನ ಸಭೆಯಲ್ಲಿ ವಿಶ್ವಾಸ
ಗೆದ್ದಂತಾಗಿದೆ.


ಸುಮಾರು ಐದು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ನಿರ್ಣಯವನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ
ಕಾಗೇರಿ ಅವರು ಧ್ಹನಿಮತಕ್ಕೆ ಹಾಕಿದರು. ಬಳಿಕ ನಿರ್ಣಯ ತಿರಸ್ಕರಿಸಲ್ಪಟ್ಟಿದೆ ಎಂದು ಘೋಷಿಸಿದರು.


ಚರ್ಚೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಗರಣ ಆರೋಪಕ್ಕೆ
ಸಂಬಂಧಿಸಿದಂತೆ ಸತ್ಯಾಂಶ ಸಾಬೀತು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಇದರ ವಿರುದ್ದ ಸಿಬಿಐಗಾದ್ರೂ
ಹೋಗಿ ಲೋಕಾಯುಕ್ತಕ್ಕಾದರೂ ಹೋಗಿ ಎಂದು ಹೇಳಿದ್ದಾರೆ.


ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು ಹಗರಣದಲ್ಲಿ ನಮ್ಮ ಕುಟುಂಬದವರ
ಪಾತ್ರ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು. ಅವಿಶ್ಚಾಸ
ನಿರ್ಣಯದ ಮೇಲೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮಾತನಾಡಿದ್ದಾರೆ. ಎಲ್ಲ ಆರೋಪಗಳು ನೂರಕ್ಕೆ
ನೂರರಷ್ಟು ಸತ್ಯಕ್ಕೆ ದೂರ ಎಂದು ಹೇಳಿದರು.


ಮುಂಬರುವ ಉಪ ಚುನಾವಣೆಯಲ್ಲಿ ಜನರ ಮುಂದೆ ಆರೋಪ ಮಾಡಿ ಅಲ್ಲಿ ಜನರು ಎನು
ತೀರ್ಮಾನ ಕೊಡುತ್ತಾರೋ ನೋಡೋಣ. ಮುಂದಿನ ಚುನಾವಣೆಯಲ್ಲಿ 135 ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿ
ನನ್ನದು. ಇನ್ನೂ 10 ವರ್ಷ ಕಾಂಗೆಸ್‌ ಪ್ರತಿಪಕ್ಷದಲ್ಲಿಯೇ ಕೂಡುವಂತಾಗುತ್ತದೆ ಎಂದು ತಿಳಿಸಿದರು.


ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ದುರ್ದೈವ. ಅದಕ್ಕೆ ಸಾಕಷ್ಟು ಕಾರಣಗಳು ಇವೆ. ಆದರೂ ಕಳೆದ
ಒಂದು ವರ್ಷದಲ್ಲಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆಧಾರ:ಉದಯವಾಣಿ, ದಿನಾ೦ಕ:27.09.2020
28. ನಿಯಮಾವಳಿ ಪರಿಶೀಲನಾ ಸಮಿತಿ ರಚನೆ


ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳನ್ನು ಪರಿಶೀಲಿಸುವುದಕ್ಕಾಗಿ ಶೀಘವೇ
ಸಮಿತಿ ರಚಿಸಲಾಗುವುದು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ, ಕಾಗೇರಿ ಹೇಳಿದ್ದಾರೆ.


ನಿಯಮಾವಳಿ ಸಮಿತಿ ರಚಿಸಲು ವಿಧಾನ ಸಭಾಧ್ಯಕ್ಷರಿಗೆ ಸದನ ಅಧಿಕಾರ ನೀಡಿದೆ. ವಿವಿಧ ಸ್ಥಾಯಿ
ಸಮಿತಿಗಳಿಗೆ ಸದಸ್ಯರ ನೇಮಕ ಹಾಗೂ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳನ್ನು
ಪರಿಶೀಲಿಸಿ ತಿದ್ದುಪಡಿಗಳಿಗೆ ಶಿಫಾರಸ್ಪು ಮಾಡುವುದು ಸಮಿತಿ ಮುಖ್ಯ ಉದ್ದೇಶವಾಗಿದೆ ಎಂದು ಸುದ್ದಿಗಾರರಿಗೆ
ತಿಳಿಸಿದರು.

ಕಾರ್ಯಶೈಲಿ ಹಾಗೂ ನಡವಳಿಕೆಯ ಹಲವು ನಿಯಮಗಳ ಬಗ್ಗೆ ಸದನದ ಒಳಗೆ-ಹೊರಗೆ ಆನೇಕ
ಬಾರಿ ಚರ್ಚೆಗಳಾಗಿವೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ವೇಳೆ ಸಾರ್ವಜನಿಕ ಅಭಿಪ್ರಾಯ ಸಂಗಹಿಸಲಾಗುವುದು
ಎಂದು ತಿಳಿಸಿದರು. ಎಲ್ಲರನ್ನೂ ವಶ್ನಾಸಕ್ಕೆ ತೆಗೆದುಕೊಂಡು ಪರಿಶೀಲನಾ ಸಮಿತಿ ರಚಿಸಲಾಗುವುದು. ಸಮಿತಿ
ಸ್ಪರೂಪ, ಕಾರ್ಯಯೋಜನೆಯನ್ನು ಆದಷ್ಟು ಬೇಗ ಅಂತಿಮಗೊಳಿಸಿ, ಅಧಿಕೃತ ವಿವರ ಇಷ್ಟರಲ್ಲೇ ನೀಡುವೆ
ಎಂದು ಕಾಗೇರಿ ಹೇಳಿದರು.


ಕೊರೋನಾ ಆತಂಕದ ನಡುವೆಯೂ 15ನೇ ವಿಧಾನ ಸಭೆಯ 7ನೇ ಅಧಿವೇಶನವು ಎಲ್ಲರ
ಸಹಕಾರದಿಂದ ಫಲಪ್ರದವಾಗಿದೆ. ಕಲಾಪ ಸಲಹಾ ಸಮಿತಿ ಸಭೆ ಒಮ್ಮತದ ತೀರ್ಮಾನದಂತೆ 8 ದಿನಗಳಿಂದ 6
ದಿನಗಳಿಗೆ ಅಧಿವೇಶನದ ಅವಧಿ ಇಳಿಸಲಾಯಿತು. ಒಟ್ಟು 40 ಗಂಟಿ ಕಲಾಪ ನಡೆದಿದೆ. ಧನ ವಿನಿಯೋಗ,
ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಸೇರಿ 36 ವಿಧೇಯಕಗಳು ಅಂಗೀಕಾರವಾಗಿವೆ. ರಾಜ್ಯ ವಿವಿಗಳು ಮತ್ತು
ಕೆಲವು ಇತರ ಕಾನೂನುಗಳ ಬಿಲ್‌ ಬಗ್ಗೆ ಚರ್ಚಿಸಿದ ಬಳಿಕ ತಡೆ ಹಿಡಿಯಲಾಗಿದೆ ಎಂದು ಹೇಳಿದರು.


ಅನುಮೋದನೆಗೆ ಮುನ್ನ ಮಸೂದೆಗಳ ಮೇಲೆ 14 ಗಂಟೆ 22 ನಿಮಿಷ ಚರ್ಚೆಯಾಗಿದೆ. ಸಮಿತಿಗಳ 6
ವರದಿಗಳು ಜಂಟಿ ಪರಿಶೀಲನಾ ಸಮಿತಿಯ ವಿಶೇಷ ವರದಿ, 57 ಅಧಿಸೂಚನೆಗಳು, 19 ಅಧ್ಯಾದೇಶಗಳು, 62
ವಾರ್ಷಿಕ ವರದಿಗಳು, 69 ಲೆಕ್ಕ ಪರಿಶೋಧನಾ ವರದಿ, ತಲಾ 1 ಅನುಷ್ಠಾನ, ಅನುಪಾಲನಾ ವರದಿ ಹಾಗೂ 3
ವಿಶೇಷ ವರದಿ ಮಂಡನೆಯಾಗಿವೆ ಎಂದು ತಿಳಿಸಿದರು. ಸದನದಲ್ಲಿ ಸ್ಟೀಕರಿಸಿದ್ದ 3,071 ಪ್ರಶ್ನೆಗಳ ಪೈಕಿ 1.109
ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ, ಕಾಗೇರಿ ವಿವರ ನೀಡಿದರು.


ಆಧಾರ:ವಿಜಯವಾಣಿ,ದಿನಾಂಕ:29.09.2020
29. ನಾಯಕತ್ವದ "ಅನಂತ' ಸೂತ್ರಗಳು


ಭಾರತದ ರಾಜಕಾರಣದಲ್ಲಿ ಸಭ್ಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ
ಪಾತ್ರರಾದವರು ಅನಂತಕುಮಾರ್‌. ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ
ಭಾಷಣ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಸಹ ಅವರದು.
ಇಂತಹ ಸಜ್ಜನ ರಾಜಕಾರಣಿಯ 61ನೇ ಜನ್ಮ ದಿನ ಇಂದು. ಈ
ಸಂದರ್ಭದಲ್ಲಿ ಅವರೊಂದಿಗಿನ ಒಡನಾಟ ಕುರಿತು ಮತ್ತೊಬ್ಬ
ಸಜ್ಜನ ರಾಜಕಾರಣಿ ಹಾಗೂ ಸ್ಪೀಕರ್‌ ವಿಶ್ವೇಶ್ವರ ಹೆಗಡೆ, ಕಾಗೇರಿ
ಅವರು ವ್ಯಕ್ತಪಡಿಸಿರುವ ಅಭಿಪ್ರಾಯ.


1978-79, ನಾನು ಆಗತಾನೇ ಕಾಲೇಜು ಮೆಟ್ಟಿಲು ಹತ್ತಿದ್ದೆ. ಧಾರವಾಡದ ಪ್ರತಿಷ್ಠಿತ ಕರ್ನಾಟಕ
ಕಾಲೇಜಿನಲ್ಲಿ ಪಿ.ಯು.ಸಿ ಓದಲು ಸೇರಿಕೊಂಡಿದ್ದೆ. ನಮ್ಮ ಮನೆಯಲ್ಲಿ ನನ್ನ ತಂದೆಯವರು ಸೇರಿದಂತೆ ನಾವೆಲ್ಲ
ಸ್ವಯಂಸೇವಕರಾಗಿದ್ದವರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಸರ್ಕಾರದ ನಿಷೇಧಕ್ಕೆ ಒಳಪಟ್ಟು ಸ್ವಯಂ ಸೇವಕರ
ಚಟುವಟಿಕೆಗಳು ಶಾಖೆಯ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಇಲ್ಲಿ ಧಾರವಾಡಕ್ಕೆ ಬಂದ ಕೂಡಲೇ
ಶಾಖೆಯ ಚಟುವಟಿಕೆ ನಡೆಯುತ್ತಿರುವುದನ್ನು ಗಮನಿಸಿ ಅಲ್ಲಿಗೆ ಹೋಗಿ ಸೇರಿಕೊಂಡೆ, ಹಿರಿಯ ಸ್ವಯಂ
ಸೇವಕರಾಗಿದ್ದ ಶ್ರೀ ಕೃಷ್ಣ ಗೋಖಲೆಯವರ ಮಗ ಶೀ ರಾಜೇಂದ್ರ ಗೋಖಲೆಯವರ ಪರಿಚಯವಾಗಿ ಅವರ
ಮೂಲಕ ವಿದ್ಯಾರ್ಥಿ ಪರಿಷತ್ತಿಗೆ ಸೇರಲು ಅವಕಾಶವಾಯಿತು.


ಆ ಹೊತ್ತಿಗೆ ಅನಂತಕುಮಾರ್‌ ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿ ಪರಿಷತ್ತಿನ
ಕಾರ್ಯಕ್ರಮಗಳಿಗಾಗಿ ಧಾರವಾಡಕ್ಕೂ ಆಗಿಂದಾಗ್ಗೆ ಬರುತ್ತಿದ್ದರು. ಅವರಲ್ಲಿದ್ದ ನಾಯಕತ್ನದ ಗುಣ,
ಮಾತುಗಾರಿಕೆಯ ವೈಖರಿ, ಸ್ನೇಹಪರತೆಗಳು ಎಲ್ಲ ವಿದ್ಯಾರ್ಥಿಗಳಿಗೂ ಮೆಚ್ಚುಗೆ ತಂದಿದ್ದವು. ಅವರನ್ನು ನಮ್ಮ
ಕಾಲೇಜಿಗೆ ಕರೆಸಬೇಕಾದ ಸಂದರ್ಭವೂ ಶೀಘದಲ್ಲೇ ಒದಗಿ ಬಂದಿತು.


ನಮ್ಮ ಕಾಲೇಜಿಗೆ ಸಂಬಂಧಿಸಿದ ಹಲವು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಕಾಲೇಜಿನ ಆಡಳಿತ
ಮಂಡಳಿಯ ಹಾಗೂ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಒಂದು ಚಳುವಳಿಯನ್ನು ಹಮ್ಮಿಕೊಳ್ಳಲು
ನಿರ್ಧರಿಸಿದ್ದೆವು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಅನಂತಕುಮಾರರನ್ನು ಕರೆಯಿಸುವುದೆಂದು
ತೀರ್ಮಾನಿಸಿದೆವು. ನಿಗದಿತ ದಿನ ಕಾಲೇಜು ಆವರಣಕ್ಕೆ ಅನಂತಕುಮಾರ್‌ ಆಗಮಿಸಿದ್ದು ಆಯಿತು. ಅಷ್ಟರಲ್ಲಿ
ಸಾವಿರಾರು ವಿದ್ಯಾರ್ಥಿಗಳು ಗುಂಪುಗೂಡಿದ್ದರು. ಸಭೆಯ ವ್ಯವಸ್ಥೆಯನ್ನು ಕುರಿತು ಯಾವ ಯೋಚನೆಯನ್ನು
ಮಾಡಿರದಿದ್ದ ನಮಗೆ ಏನು ಮಾಡುವುದೆಂದೇ ತೋಚಲಿಲ್ಲ. ಭಾಷಣಕಾರರಾದ ಅನಂತಕುಮಾರ್‌ ಎಲ್ಲರಿಗೂ
ಕಾಣುವ ಹಾಗೆ ನಿಲ್ಲುವುದಕ್ಕೆ ಒಂದು ವೇದಿಕೆ ಹೋಗಲಿ, ಒಂದು ಕುರ್ಚಿಯು ಇರಲಿಲ್ಲ. ಇನ್ನು ಧ್ವನಿವರ್ಧಕ
ವ್ಯವಸ್ಥೆ ಬೇಕಾದೀತೆಂಬ ಕಲ್ಲನೆಯೋ ನಮ್ಮ ತಲೆಗೆ ಹೊಳೆದೇ ಇರಲಿಲ್ಲ.


ಏನೂ ತೋಚದೇ ಪೆಚ್ಚುಪೆಚ್ಚಾಗಿ ನಿಂತಿದ್ದ ನಮ್ಮ ಗೊಂದಲ ಅನಂತಕುಮಾರರಿಗೆ ಅರ್ಥವಾಗದೇ
ಇರುತ್ತದೆಯೇ ಆಚೀಚೆ ನೋಡಿದ ಅನಂತಕುಮಾರರಿಗೆ ಮೂಲೆಯಲ್ಲಿ ಸೈಕಲ್‌ ಸ್ಥಾಂಡೊಂದು ಕಂಡಿತು.
ಅದೊಂದು ತಗಡಿನ ಛಾವಣಿ ಹೊದೆಸಿದ್ದ ಶೆಡ್‌. ಎಲ್ಲರೂ ಬನ್ನಿ ಎಂದು ಹೇಳುತ್ತ ಸರಸರನೇ ಸೈಕಲ್‌
ಸ್ಪಾಂಡಿನ ಕಡೆಗೆ ನಡೆದೇ ಬಿಟ್ಟರು. ಹುಡುಗರ ಗುಂಪು ಸಡಗರದಿಂದಲೇ ಅವರನ್ನು ಹಿಂಬಾಲಿಸಿತು. ಮೂರು
ನಾಲ್ಕು ಹುಡುಗರನ್ನು ಕರೆದು ಆ ಶೆಡ್ಡಿನ ಕಂಬವೊಂದನ್ನು ಹಿಡಿದುಕೊಳ್ಳುವಂತೆ ಸೂಚಿಸಿ ನಿಲ್ಲಿಸಿದರು. ಅ


ಹುಡುಗರ ತೋಳನ್ನೋ ಹೆಗಲನ್ನೋ ಆಧರಿಸಿ ಅನಂತಕುಮಾರ್‌ ಸೈಕಲ್‌ ಸ್ಥಾಂಡಿನ ಮೇಲಕ್ಕೆ ಹತ್ತಿಯೇ ಬಿಟ್ಟರು.
ಆಯಿತಲ್ಲ, ಎಲ್ಲರ ಕಣ್ಣಿಗೆ ಕಾಣುವಂತಹ ವೇದಿಕೆ ಸಿದ್ದವಾಗಿಯೇ ಬಿಟ್ಟಿತು. ಧ್ವನಿವರ್ಧಕ ಇಲ್ಲದಿದ್ದರೆ ಏನಂತೆ,
ಎತ್ತರದಲ್ಲಿ ನಿಂತ ಅನಂತಕುಮಾರರ ದೊಡ್ಡ ಧ್ವನಿಯ ಮಾತುಗಳು ಆ ಬೃಹತ್‌ ಗುಂಪನ್ನು ತಲುಪಲು
ಕಷ್ಟವಾಗಲಿಲ್ಲ.


ನಾಯಕತ್ಸದ ಲಕ್ಷಣವೆಂದರೆ ಇದು. ನಾಯಕತ್ಸದ ಹಮ್ಮುಬಿಮ್ಮುಗಳನ್ನೇನೂ ತೋರದೆ, ಸಂವಹನಕ್ಕಾಗಿ
ನಿರ್ದಿಷ್ಟ ವ್ಯವಸ್ಥೆಯನ್ನೋ ಆಡಂಬರವನ್ನೋ ಅಪೇಕ್ಷಿಸದೆ ಲಭ್ಯವಿರುವ ಸ್ಥಿತಿಯನ್ನೇ ಅನುಕೂಲಕ್ಕೆ
ಮಾರ್ಪಡಿಸಿಕೊಳ್ಳುವ ಇಂಥ ಗುಣಶೇಷವು ಸಾಮಾನ್ಯರಲ್ಲಿ ಕಂಡು ಬರುವಂತಹುದಲ್ಲ. ಯಾವುದೇ
ಪೂರ್ವಸಿದ್ಧತೆ ಸಜ್ಜಿಕೆಗಳಿಲ್ಲದಿರುವ, ಪ್ರತಿಕೂಲ ಪರಿಸ್ಥಿತಿಯಲ್ಲೂ ಅಗತ್ಯಕ್ಕೆ ತಕ್ಕಷ್ಟು ಸಮರ್ಪಕವೆನಿಸಬಹುದಾದ
ವ್ಯವಸ್ಥೆಯನ್ನು ಆಯಾ ಕ್ಷಣದಲ್ಲಿ ಕಲ್ಪಿಸಿಕೊಳ್ಳಬಲ್ಲ ಸಾಮರ್ಥ್ಯ, ಅನಂತ ಕುಮಾರರಲ್ಲಿ ಇದ್ದುದಕ್ಕೆ ಇದೊಂದು
ನಿದರ್ಶನ.


ವಿದ್ಯಾರ್ಥಿ ಸಂಘದ ಚಟುವಟಿಕೆಗಳೆಂದರೆ ಸಡಗರದ ಸಂಗತಿಗಳೇ. ಕಾಲೇಜಿನ ವಿದ್ಯಾರ್ಥಿ ಸಂಘದ
ಚುನಾವಣೆಯೆನ್ನುವುದೇ ಒಂದು ಹಬ್ಬ ಆನೆಯನ್ನು ತರಿಸಿ ಮೆರವಣಿಗೆ ಮಾಡುವಷ್ಟು ಸಂಭ್ರಮ. ಅದರಲ್ಲೂ
ಧಾರವಾಡದ ಕರ್ನಾಟಕ ಕಾಲೇಜಿನ ದೊಡ್ಡಸಿಕೆ ಒಂದು ಹೆಜ್ಜೆ ಮುಂದೆಯೇ, ಇನ್ನು ಚಳುವಳಿಯೆಂದರೆ
ಹೇಳಬೇಕೇ ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ, ವಿದ್ಯಾರ್ಥಿನಾಯಕರ ಸಭೆಗಳಲ್ಲಿ ಅನಂತಕುಮಾರ್‌
ಮಾತುಗಳಿಗೆ ವಿಶೇಷ ಮಹತ್ನವಿರುತ್ತಿತ್ತು. ವಿದ್ಯಾರ್ಥಿ ಪರಿಷತ್ತಿಗೆ ಸಂಬಂಧಪಟ್ಟ ವಿದ್ಯಾರ್ಥಿಗಳು ಅನಂತಕುಮಾರರ
ಮಾತನ್ನು ಶ್ರದ್ದೆ, ವಿಶ್ಲಾಸಗಳಿಂದ ಆಲಿಸುತ್ತಿದ್ದರು. ಯಾವುದೇ ಸಂಘಟನೆ, ಪಕ್ಷಗಳಿಂದ ಹೊರತುಪಡಿಸಿದ
ನಾಯಕತ್ವದ ಗುಣ ವಿಶೇಷವನ್ನು ಅನಂತಕುಮಾರರಲ್ಲಿ ಪರವಿರೋಧವೆನ್ನದೇ ಎಲ್ಲರೂ ಕಾಣುತ್ತಿದ್ದುದೇ ಒಂದು
ವಿಶೇಷ. ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿರಲಿ ಬಿಡಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಎಲ್ಲರನ್ನೂ ತನ್ನ
ವಲಯಕ್ಕೆ ಒಳಕೊಳ್ಳುವ ಹಾಗೂ ಅವರಿಗೆ ಪ್ರೇರಣೆ ನೀಡಬಲ್ಲ ಶಕ್ತಿ ಅನಂತಕುಮಾರರಲ್ಲಿತ್ತು ಅವರ
ನಡೆನುಡಿಗಳಲ್ಲಿ ಒಟ್ಟಾರೆ ವಿದ್ಯಾರ್ಥಿ ಸಮುದಾಯದ ಬಗೆಗೆ ಕಾಳಜಿ, ಅನುಭೂತಿಗಳಿದ್ದುವಲ್ಲದೆ ಸ್ಪಾರ್ಥಪರತೆಯ
ಲವಲೇಶವೂ ಇರಲಿಲ್ಲ. ಯಾವುದೇ ಸಂಘಟನೆಗೆ ಸೇರಿದ ಯಾವುದೇ ವಿಚಾರಧಾರೆಯನ್ನು ಅನುಸರಿಸುವ
ವ್ಯಕ್ತಿಯೂ ಹೀಗೊಬ್ಬ ಮುಖಂಡನನ್ನು ಅಪೂರ್ವಗುಣಲಕ್ಷಣವು ಅನಂತಕುಮಾರರಲ್ಲಿ ಕಂಡುಬಂದಂತೆ
ಉಳಿದವರಲ್ಲಿ ಕಾಣುವುದು ಮುಂಬರುವ ಕಾಲಕ್ಕೂ ಅಸಂಭವವೆಂದೇ ಹೇಳಬೇಕು.


ವಾರಕ್ಕೊಮ್ಮೆ ವಿದ್ಯಾರ್ಥಿ ಪರಿಷತ್ತಿನ ಸದಸ್ಯರ ಸಭೆಯಲ್ಲಿ ನಾವೆಲ್ಲ ಭಾಗವಹಿಸುತ್ತಿದ್ದೆವು. ಧಾರವಾಡದಲ್ಲಿ
ಪ್ರಾಧ್ಯಾಪಕರಾಗಿದ್ದ ಡಾ: ಮೋಡಕ್‌ ಎಂಬ ಮಹನೀಯರ ಮನೆಯ ಅಟ್ಟದಲ್ಲಿ ಈ ಸಭೆ ನಡೆಯುತ್ತಿತ್ತು ಇದರ
ಅಂಗವಾಗಿ ಆಗಿಂದಾಗ್ಗೆ ಸಡಿ ಸರ್ಕಲ್‌ (ಅಭ್ಯಾಸವರ್ಗ) ಎಂಬ ವಿದ್ಯಾರ್ಥಿ ಸಂವಾದ ಕಾರ್ಯಕ್ರಮವನ್ನು
ಏರ್ಪಡಿಸುತ್ತಿದ್ದೆವು.


ಈ ಕಾರ್ಯಕ್ರಮಕ್ಕೆ ಅಗತ್ಯವಾದ ಸೂಚನೆಗಳೆಲ್ಲವನ್ನೂ ಕಿಂಚತ್ತೂ ತಪ್ಪದಂತೆ ಅನಂತಕುಮಾರರೇ
ಕೊಡುತ್ತಿದ್ದರು. ಅಭ್ಯಾಸವರ್ಗದಲ್ಲಿ ನಿರ್ದಿಷ್ಟ ಉಪನ್ಯಾಸಕ್ಕೆ ಯಾರನ್ನು ಕರೆಯಬೇಕು. ಈ ಸಂವಾದ
ಕಾರ್ಯಕ್ರಮಗಳಲ್ಲಿ ಚರ್ಚೆಗೆ ಯಾವ ಯಾವ ವಿಷಯಗಳಿರತಕ್ಕದ್ದು ಎನ್ನುವುದರಿಂದ ಮೊದಲುಗೊಂಡು ನಿರ್ದಿಷ್ಟ
ವಿಷಯದ ಬಗೆಗೆ ಮಾತನಾಡಬಲ್ಲ ತಜ್ಞರು ಯಾರು. ಇಲ್ಲವೇ ಯಾರನ್ನು ಕರೆಸುವುದು ಸೂಕ್ತವೆಂಬುದನ್ನು
ತಿಳಿಸಲು ಯಾರನ್ನು ಸಂಪರ್ಕಿಸಬೇಕು ಎಂಬ ಅಂಶದವರೆಗೆ ಪ್ರತಿಯೊಂದು ಸೂಚನೆಯನ್ನು ಅನಂತಕುಮಾರ್‌
ಅತಿ ಸಮರ್ಪಕವಾಗಿ ಮುಂದಿಡುತ್ತಿದ್ದರು. ನಾಯಕತ್ವ ವಹಿಸಬೇಕಾದವನಿಗೆ ಇರಬೇಕಾದ ವ್ಯಾಪಕವಾದ ವಿಷಯ
ಪರಿಜ್ಞಾನ ಮಾತ್ರವಲ್ಲದೆ, ವಿಷಯಗ್ರಹಣೆಯ ಬಗೆಗೂ ಅವರು ಸದಸ್ಯರಿಗೆ ತಿಳಿ ಹೇಳುತ್ತಿದ್ದ ಪರಿ
ಅಸಾಧಾರಣವಾಗಿತ್ತು ಅವರ ಮಾತುಗಳು ನಾಯಕತ್ನದ ಪರಿಯನ್ನೇ ಬೋಧಿಸುತ್ತಿವೆಯೋ ಎನ್ನುವಂತೆ
ಸಾಮಾನ್ಯ ಕಾರ್ಯಕರ್ತರಲ್ಲೂ ನಾಯಕತ್ವದ ಗುಣಗಳನ್ನು ಪ್ರೇರೆಪಿಸುವುದರಲ್ಲಿ ಪರಿಣಾಮಕಾರಿಯಾಗಿರುತ್ತಿದ್ದವು.
ಅಂದರೆ, ನಾಯಕತ್ಸದ ಹಾದಿಯಲ್ಲಿ ಅನಂತಕುಮಾರ ಒಬ್ಬರೇ ಮುಂದೆ ಹೋಗುತ್ತಿದ್ದರು ಎಂದು ತೋರುತ್ತಲೇ


ಇರಲಿಲ್ಲ. ನಮ್ಮೆಲ್ಲರನ್ನೂ ಹುಬ್ಬಳ್ಳಿ ಧಾರವಾಡ ಭಾಗದಲ್ಲಿದ್ದ ಪ್ರತಿಯೊಬ್ಬರನ್ನೂ ಅವರು ತಮ್ಮ ಜೊತೆಗೆ ಮುಂದಕ್ಕೆ
ಕರೆದೊಯ್ಯುತ್ತಿದ್ದರು.


ಹುಬ್ಬಳ್ಳಿಯಲ್ಲಿ ನಾವು ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದೆವು.
ಶ್ರೀ ಗೋವಿಂದಾಚಾರ್ಯರು ನಮಗೆ ಮುಖ್ಯ ಮಾರ್ಗದರ್ಶಕರಾಗಿದ್ದರು. ಚೋ. ರಾಮಸ್ವಾಮಿ ಮೊದಲಾದವರು
ಅತಿಥಿಗಳಾಗಿ ಆಗಮಿಸಿದ್ದ ಸಮಾರಂಭವದು. ನಮಗೆ ಮುಖ್ಯ ಪ್ರೇರಕರಾಗಿ ಶ್ರೀಯುತ ಪಿ.ವಿ. ಕೃಷ್ಣಭಟ್ಟರು,
ದತ್ತಾತ್ರೇಯ ಹೊಸಬಾಳೆಯವರು ಮುಂಚೂಣಿಯಲ್ಲಿದ್ದರು. ಇವರಿಬ್ಬರು ಹಿರಿಯರು ಇಡಿಯ ಕರ್ನಾಟಕದಲ್ಲೇ
ವಿದ್ಯಾರ್ಥಿ ಪರಿಷತ್ತಿಗೆ ನಾಯಕತ್ವ ತಂದುಕೊಟ್ಟವರು. ವಾಸ್ತವವಾಗಿ ಈ ಇಬ್ಬರು ಮಹನೀಯರೇ
ಅನಂತಕುಮಾರರಿಗೆ ಪ್ರೇರಣೆ ನೀಡಿ, ಕೆಲಸದಲ್ಲಿ ತೊಡಗಿಸಿಕೊಳ್ಳಲು ಮುಖ್ಯ ಕಾರಣಕರ್ತರೆನ್ನಬಹುದು.


ಇಂಥ ಯಾವುದೇ ಸಮ್ಮೇಳನ ಅದು ರಾಜ್ಯಮಬ್ಬದ್ದಿರಲಿ, ರಾಷ್ಟ್ರಮಟ್ಟದ್ದಿರಲಿ ಅನಂತಕುಮಾರ್‌ ತಪ್ಪದೆ
ಭಾಗವಹಿಸುತ್ತಿದ್ದರು. ಅದೂ ಒಬ್ಬರೇ ಅಲ್ಲ. ಒಂದು ಗುಂಪನ್ನೇ ತಮ್ಮೊಡನೆ ಹೊರಡಿಸುತ್ತಿದ್ದರು. ಯಾವ
ಊರಿನಿಂದ ಯಾರು ಬರಬೇಕು ಯಾವ ಕಾಲೇಜಿನಿಂದ ಯಾರು ಭಾಗವಹಿಸಬೇಕು ಎಲ್ಲವನ್ನೂ
ಪಟ್ಟಿಮಾಡಿಸುವವರೂ ಅವರೇ, ಸುಮ್ಮನೆ ಯಾರದ್ದೋ ಹೆಸರು ಸೇರಿಸುವುದಲ್ಲ. ನಮ್ಮ ಅಭ್ಯಾಸವರ್ಗದಲ್ಲಿ
ಭಾಗವಹಿಸುತ್ತಿರುವವರು ಯಾರು, ನಮ್ಮ ಗುಂಪಿನ ಸದಸ್ಯರು ಯಾರಿದ್ದಾರೆ, ಸಮಾನಮನಸ್ವ ಆಸಕ್ತರು
ಯಾರಿದ್ದಾರೆ. ಎಲ್ಲರನ್ನೂ ನೆನಪು ಮಾಡಿಕೊಂಡು ಇಂತಿಂಥ ಸಮ್ಮೇಳನದಲ್ಲಿ ಭಾಗವಹಿಸಬೇಕಾದವರು ಯಾರು
ಎಂಬ ಪಟ್ಟಿಯನ್ನು ತಯಾರು ಮಾಡಿಸುತ್ತಿದ್ದರು. ಯಾರು ಯಾರು ಎಲ್ಲೆಲ್ಲಿಂದ ಹೊರಡಬೇಕು, ಎಲ್ಲಿ ಸೇರಬೇಕು
ಎಂಬ ಚಿಕ್ಕಪುಟ್ಟ ವಿಷಯಗಳೂ ನಮೂದಾಗುವಷ್ಟು ನಿಖರವಾಗಿ ಕಾರ್ಯಕ್ರಮವನ್ನು ಸಿದ್ದಪಡಿಸಲು
ಅನಂತಕುಮಾರ್‌ ಮಾರ್ಗಸೂಚಿ ಸದಾ ನೆರವಿಗೆ ಒದಗುತ್ತಿತ್ತು.


ಆಗಿನ ಕಾಲದಲ್ಲಿ ಹಣದ ಕೊರತೆ ತೀರಾ ಸಾಮಾನ್ಯ. ಆದರೆ ಅದು ಸಮಸ್ಯೆಯೆಂದೇ ತೋರುತ್ತಿರಲಿಲ್ಲ.
ಸಂಘಟನೆಯ ಕೆಲಸ ಎಂದರೆ ಮಾಡಲೇಬೇಕಾದ ಕೆಲಸ ಅಷ್ಟೇ. ಅದರ ಖರ್ಚು ವೆಚ್ಚಗಳಿಗೆ ಏನು ಮಾಡುವುದು,
ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದದ್ದಾಯಿತು, ವಾಪಸ್ಸು ಹೋಗಲಿಕ್ಕೆ ಹಣವನ್ನು ಹೊಂದಿಸುವುದು ಹೇಗೆ ಎಂಬ
ಪ್ರಶ್ನೆಗಳಿಗೆ ಅವಕಾಶವಿಲ್ಲದಂತೆ ಅವರಿವರು ಸೇರಿ ವೆಚ್ಚವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೆವು. ಅಂತೆಯೇ
ಹಣಕಾಸಿನ ಕೊರತೆಯನ್ನುವುದು ಅನಂತಕುಮಾರರಿಗೆ ಎಂದು ಸಮಸ್ಯೆಯೆಂದೇ ತೋರಿರಲಿಲ್ಲ. ಅವರಲ್ಲಿ
ಇದ್ದುದು ಕರ್ತವ್ಯನಿಷ್ಟೆ, ಕೆಲಸವನ್ನು ಮಾಡಿ ಮುಗಿಸುವ ಬದ್ದತೆ ಅಷ್ಟೇ. ಪ್ರಯಾಣ ಮಾಡಬೇಕು ಅಂದರೆ ಹೋಗಿ
ತಲುಪುವುದಷ್ಟೆ ಮುಖ್ಯ. ಬಸ್ನಾದರೂ ಸರಿಯೇ, ಲಾರಿಯಾದರೂ ಸರಿಯೇ, ನಡೆದುಹೋಗುವುದಕ್ಕೂ ಸಿದ್ದವೇ
ಸೌಖ್ಯ, ಸುಲಲಿತ ವ್ಯವಸ್ಥೆಗಳೆಲ್ಲ ತಮ್ಮ ಪಯಣದ ಭಾಗವಾಗಿರಲೇಬೇಕೆಂಬ ನಿರೀಕ್ಷೆ ಅವರ ಮನೋಭಾವದಲ್ಲಿ
ಇರಲೇ ಇಲ್ಲ.


ಅಸ್ಲಾಂ ಅಂದೋಲನದಲ್ಲಿ ಭಾಗವಹಿಸಲು ಹೋದಾಗಲೂ ಅಷ್ಟೇ. ಕೋಲ್ಕತಾದಿಂದ ಗೌಹಟಿಗೆ ಹೊರಟ
ರೈಲಿನಲ್ಲಿ ಅನಂತಕುಮಾರರ ನಾಯಕತ್ವದ ಗುಂಪು ಇದ್ದಿತು. ರೈಲು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು.
ಕಾಲಿಡಲೂ ಜಾಗವಿಲ್ಲದ ಪರಿಸ್ಥಿತಿ, ಪರಿಷತ್ತಿನ ಗೆಳೆಯರು ಬೋಗಿಯಲ್ಲಿ ಪ್ರಯಾಣಿಕರು ಸಾಮಾನುಗಳನ್ನಿರಿಸುವ
ಮೇಲುಖಾನೆಗಳಲ್ಲಿ ಒಂದೊಂದರಲ್ಲಿ ಐದಾರು ಜನರಂತೆ ಇಕ್ಕಟ್ಟಿನಲ್ಲಿ ಕುಳಿತು ಪಯಣಿಸಿದ್ದೇ ಒಂದು ಕಥೆ.


ಅಸ್ಲಾಂ ಆಂದೋಲನ ವಿಪರೀತಕ್ಕೆ ತಿರುಗಿ ಲಾಠಿಚಾರ್ಚ್‌, ಗೋಲಿಬಾರ್‌ ಎಲ್ಲವೂ ಗೊಂದಲವಾಯಿತು
ಅನಂತಕುಮಾರರ ನೇತೃತ್ವದ ನಮ್ಮ ಗುಂಪನ್ನು ಬಂಧಿಸಿದ ಪೊಲೀಸರು ಎಲ್ಲಿಯೋ ದೂರದ ಹಳ್ಳಿಗೆ ನಮನ್ನು
ಕರೆದೊಯ್ದು ಬಿಟ್ಟು ಹೋದರು. ಎಲ್ಲಿದ್ದೇವೆ, ಎಲ್ಲಿಗೆ ಹೋಗಬೇಕು ಏನು ಗೊತ್ತಾಗದ ಅಪರಿಚಿತ ಪ್ರದೇಶ. ಅಲ್ಲಲ್ಲಿ
ಜನ ಕಂಡರೂ ನಮ್ಮ ಭಾಷೆ ಅವರಿಗಾಗಲಿ ಅವರ ಭಾಷೆ ನಮಗಾಗಲಿ ತಿಳಿಯುವಂತಿಲ್ಲ. ನಿಸಹಾಯಕರಾಗಿದ್ದ
ನಮಗೆ ಅನಂತಕುಮಾರ್‌ ಸೂಚಿಸಿದ ಪರಿಹಾರವಿಷ್ನೇ: ಮುಖ್ಯ ರಸ್ತೆ ಎಲ್ಲಿದೆ ಹುಡುಕುತ್ತ ನಡೆಯೋಣ, ಅಲ್ಲಿಂದ
ಯಾವುದಾದರೂ ಪಟ್ಟಣಕ್ಕೆ ಸೇರಬಹುದು. ಅದೇ ಸೂಚನೆಯನ್ನನುಸರಿಸಿ ಹೊರಟ ನಮಗೆ ಮುಖ್ಯ ರಸ್ತೆಯೂ
ಕಾಣಸಿಕ್ಕಿತ್ತು; ಅತ್ತ ಬಂದ ಟಕ್ಕೊಂದನ್ನು ಏರಿ ಮುಂದಿನ ಪಟ್ಟಣವನ್ನು ತಲುಪುವುದಕ್ಕೂ ಸಾಧ್ಯವಾಯಿತು. ಎಂಥ
ಪರಿಸ್ಥಿತಿಯಲ್ಲೂ ಮನಸ್ಟೈರ್ಯವನ್ನು ಕಳೆದುಕೊಳ್ಳದ, ಯಾವುದೇ ಸಮಸ್ಯೆಗೆ ಸೂಕ್ತ ಪರಿಹಾರವೊಂದನ್ನು


ಅನ್ನೇಷಿಸಬಲ್ಲ ವ್ಯಕ್ತಿತ್ವ ಅವರದ್ದಾಗಿತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ, ತಾವು
ಸಾಹಸಶೀಲರಾಗಿರುವುದರಲ್ಲದೆ, ಉಳಿದವರಲ್ಲೂ ಸಾಹಸದ ಪ್ರವೃತ್ತಿಯನ್ನು ಬೆಳೆಸುವ ಪ್ರೇರಕಶಕ್ತಿ ಅವರಲ್ಲಿತ್ತು.


ಅನಂತಕುಮಾರರ ಕಾರ್ಯಸಾಮರ್ಥ್ಯವನ್ನು ನೋಡಿಯೇ ತಿಳಿಯಬೇಕು. ಅದು ಯಾವುದೋ
ಅಭ್ಯಾಸವರ್ಗದ ಕಾರ್ಯಕ್ರಮವಿರಲಿ, ರಾಷ್ಟೀಯ ಸಮ್ಮೇಳನವೇ ಇರಲಿ, ಕಾರ್ಯಕ್ರಮದ ಪ್ರತಿಯೊಂದು
ರೂಪುರೇಷೆಯು ಸಿದ್ದವಾಗತಕ್ಕದ್ದು. ಸಭೆ ನಡೆಯಬೇಕಾದ್ದು ಎಲ್ಲಿ, ಯಾರು ಮುಖ್ಯ ಅತಿಥಿಗಳು, ಅವರ
ಪ್ರಯಾಣ ವ್ಯವಸ್ಥೆ ಹೇಗೆ ಅವರನ್ನು ಕರೆದುಕೊಂಡು ಬರುವವರು ಯಾರು. ನೆರವಿಗೆ ನಿಲ್ಲುವವರು ಯಾರು,
ಧ್ಲನಿವರ್ಧಕ ಎಲ್ಲಿಂದ, ಅದರ ವ್ಯವಸ್ಥೆ ವಹಿಸಬೇಕಾದವರು ಯಾರು, ಸಭಿಕ ವಿದ್ಯಾರ್ಥಿಗಳು ಯಾರು ಅವರು
ಎಲ್ಲಿಂದ ಬರಬೇಕು ಇವೆಲ್ಲ ವಿವರಗಳು ಒಂದೂ ಬಿಡದಂತೆ ಅವರ ಅವಗಾಹನೆಗೆ ಬಂದು ನಿಶ್ಚಯವಾಗಿ
ಬಿಡಬೇಕು. ಸಭೆಯಲ್ಲಿ ಮಂಡಿಸಬೇಕಾದ ನಿರ್ಣಯಗಳನ್ನು ಅವರೇ ಬರೆಯತೊಡಗುವರು.


ವಿದ್ಯಾರ್ಥಿ ಪರಿಷತ್ತಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಪಥ ಎಂಬ ಪತ್ರಿಕೆಯ ಪ್ರಕಟಣೆಯೂ ಸೇರಿತ್ತು. ಈ
ಕೆಗಾಗಿ ಅನಂತಕುಮಾರ್‌ ಬರೆಯುತ್ತಿದ್ದ ಚುಟುಕುಗಳು ಬಹು ಜನಪ್ರಿಯವಾಗಿದ್ದವು. ಒಂದು ಕಾಲಕ್ಕೆ ಈ
ಕೆಯನ್ನು ಸನಿಲ್‌ ಕಾಗದದಲ್ಲಿ ಬರೆದು ಬಿಳಿಹಾಳಗಳ ಮೇಲೆ ಛಾಪುಮೂಡಿಸಲು ರೋಲರ್‌ ಬಳಸಿ ಒತ್ತ
ಬೇಕಾಗಿತ್ತು. ಲೇಖನ ಚುಟುಕುಗಳನ್ನು ಬರೆಯುವುದರ ಜೊತೆಗೆ ಈ ಕಲ್ಲಚ್ಚಿನ ಕೆಲಸಕ್ಕೂ ಅನಂತ ಕುಮಾರರು
ಸಜ್ಜಾಗಿ ನಿಲ್ಲುತ್ತಿದ್ದರು. ಆಗ ರಾಜ್ಯದ ಶೈಕ್ಷಣಿಕ ಸ್ಥಿತಿಗತಿಗಳು ಹದಗೆಟ್ಟಿದ್ದವು. ಇದರ ಅವ್ಯವಸ್ಥೆಯ ಕಡೆಗೆ
ವಿದ್ಯಾರ್ಥಿಗಳಿಂದ ಮೊದಲಗೊಂಡು ಸರ್ಕಾರದವರೆಗೆ ಎಲ್ಲರ ಗಮನ ಸೆಳೆಯುವ ಸಲುವಾಗಿ ಕರಾಳಪತ್ರ ಎಂಬ
ಸಂಚಿಕೆಯನ್ನು ಹೊರಡಿಸುತ್ತಿದ್ದೆವು. ಈ ಪತ್ರದ ಒಕ್ಕಣೆಯನ್ನು ಹೇಳಿ ಬರೆಸುವವರು ಅನಂತಕುಮಾರರೇ.
ಬರೆದುಕೊಳ್ಳುವ ಲಿಪಿಕಾರ ಬೇಳೂರು ಸುದರ್ಶನ. ನಾನು ಸಾಕ್ಷೀ ಭೂತ. ಎಲ್ಲಿಯೋ ಪದವನ್ನೋ ವಾಕ್ಯವನ್ನೋ
ಸರಿಮಾಡಲು ಒಗ್ಗರಣೆ ಹಾಕುವ ಕೆಲಸವಷ್ಟೇ ನನ್ನದು. ಅನಂತಕುಮಾರರು ಗಮನಿಸುತ್ತಿದ್ದ ರೀತಿಯ ಪ್ರಕಾರ,
ಬರವಣಿಗೆಯ ಸಾಹಿತ್ಯ ಸಮತೂಕವಾಗಿರತಕ್ಕದ್ದು, ಎಲ್ಲಿ ಯಾವ ಪದ ಬಳಸಬೇಕು ಎಂಬ ಎಚ್ಚರ ಅವರಲ್ಲಿತ್ತು.
ಪದ ಪ್ರಯೋಗ ಎಲ್ಲಿ ಸೌಮ್ಯವಾಗಿರಬೇಕು. ಎಲ್ಲಿ ಡಂಬಿಸುವಂತಿರಬೇಕು, ಎಲ್ಲಿ ಉಗ್ರವಾಗಿರತಕ್ಕದ್ದು
ಎಂಬುದ್ದನ್ನೆಲ್ಲ ಅವರು ಗಮನಿಸುವವರೇ. ಒಕ್ಕಣೆ ಪತ್ತಿಕೆಯದ್ದಿರಲಿ, ಕರಪತ್ತದ್ದಾಗಿರಲಿ, ಗೋಡೆಗೆ ಅಂಟಿಸುವ
ಪೋಸ್ಟರ್‌ ಇರಲಿ ಎಲ್ಲದರ ಬರಹದ ಹಿನ್ನೆಲೆಯಲ್ಲಿ ಅನಂತಕುಮಾರರ ಪ್ರೇರಣೆ ಇದ್ದೇ ಇರುತ್ತಿತ್ತು.


ಪಾ
ಪತಿ
ವಾ
ಪತಿ


ಕರಪತ್ರ, ಪೋಸ್ಟರುಗಳನ್ನು ಅಂಟಿಸುವ ಜವಾಬ್ದಾರಿಯೂ ನಮ್ಮದೇ, ರಾತ್ರಿಯ ಹೊತ್ತಿನಲ್ಲಿ ಸೈಕಲ್ಲೋ
ಲೂನಾ, ಸ್ವೂಟರೋ ಯಾವುದು ಸಿಕ್ಕರೆ ಅದನ್ನು ಹತ್ತಿಕೊಂಡು ಹೊರಡುತ್ತಿದ್ದೆವು. ಊಟ ತಿಂಡಿಗೆ ಇಂಥದೇ
ಬೇಕೆಂಬ ಹಂಬಲವಾಗಲಿ, ಪರಿವೆಯಾಗಲಿ ಇರುತ್ತಿರಲಿಲ್ಲ. ಹಿರಿಯ ನಾಯಕರಾದ ಕೃಷ್ಣ ಭಟ್ಟರು. ದತ್ತಾತ್ರೇಯ
ಹೊಸಬಾಳೆಯವರನ್ನೊಳಗೊಂಡಂತೆ ನಾವೆಲ್ಲ ರಸ್ತೆ ಬದಿಯ ಗಾಡಿಗಳಲ್ಲಿ ಸಿಕ್ಕಿದ್ದನ್ನು ತಿಂದುಕೊಂಡು
ಕಾಲದೂಡಿದ್ದುಂಟು. ಆಗ ಮೆಜೆಸ್ಟಿಕ್‌ನಲ್ಲಿ ಬಂಡು ಹೋಟೆಲ್‌ ಎಂಬ ಹೆಸರಿನ ಉಪಹಾರಗೃಹವಿತ್ತು
ಆ ಹೋಟೆಲಿನವನು ಕೊಡುವ ಊಟವೋ ಏನೂ ಸಾಲದು. ಅಂತೂ ಅದನ್ನೇ ತಿಂದುಕೊಂಡಿರಬೇಕಾದ ಸ್ಥಿತಿ.
ಆ ಗಾಡಿಗಳವರು, ರಾತ್ರಿ ಹೋಟೆಲಿನವರು ನಮ್ಮ ಹೊಟ್ಟೆ ತುಂಬಿಸದೇ ಇದ್ದರೂ ಒಳ್ಳೆಯ ಸ್ನೇಹಿತರೇ ಆಗಿದ್ದರು.


ಒಬ್ಬ ನಾಯಕರಾಗಿ ಅನಂತಕುಮಾರ್‌ ಪ್ರವಾಸ ಕೈಗೊಳ್ಳುತ್ತಿದ್ದ ಬಗೆಯೂ ಅತಿ ವಿಶಿಷ್ಠವಾಗಿರುತ್ತಿತ್ತು.
ಸಾಮಾನ್ಯವಾಗಿ ಮುಖಂಡರಾದವರು ಜಿಲ್ಲಾ ಕೇಂದಕ್ಕೋ ತಾಲ್ಲೂಕು ಕೇಂದಕ್ಕೋ ಬಂದು ಅಲ್ಲಿ ವಿದ್ಯಾರ್ಥಿ
ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡಿಸಿ ಕಳುಹಿಸುವಂತೆ ಅನಂತಕುಮಾರ್‌ ಕೆಲಸಮುಗಿಸಿ
ಹೋಗುವವರಲ್ಲ. ಕಾರ್ಯಕರ್ತರು ಎಲ್ಲಿ ಯಾವ ಹಳ್ಳಿಯಲ್ಲಿ ವಾಸವಾಗಿರುತ್ತಾರೋ ಅಲ್ಲಿಗೇ ಸೀದಾ ಹೋಗಿ
ಮಾತನಾಡಿಸುವಂಥವರು ಅವರು. ನಾನು ಆಗ ಉತ್ತರ ಕನ್ನಡ ಜಿಲ್ಲೆಯ ಪ್ರಮುಖನಾಗಿ ಎರಡು ವರ್ಷ
ವರ್ಷ ಕಾರ್ಯನಿರ್ವಹಿಸುತ್ತಿದ್ದ ಕಾಲ. ನಮ್ಮ ಜಿಲ್ಲೆಯಲ್ಲಿ ಹುಡುಗರೆಲ್ಲ ಬಹುತೇಕ ಹಳ್ಳಿಯವರು. ಕೆಲಸಕ್ಟೋ,
ಕಾಲೇಜಿಗೋ ಮಾತ್ರವೇ ಪೇಟೆಯತ್ತ ಸುಳಿಯುವವರು. ಅನಂತಕುಮಾರ್‌ ಬಂದಾಗಲೆಲ್ಲಾ ಅವರೊಡನೇ
ಜಿಲ್ಲೆಯ ಹಳ್ಳಿಹಳ್ಳಿಗೂ ಹೋಗುತ್ತಿದ್ದೆ. ಸಿಕ್ಕಿದ ವಾಹನ ಹತ್ತಿಕೊಂಡೋ ಸೈಕಲ್ಲೋ, ಬೈಕೋ ಏರಿಕೊಂಡೋ
ಮೂಲೆಮೂಲೆಯ ಹಳ್ಳಿಗೆ ಹೋಗುತ್ತಿದ್ದೆವು. ಕಾರ್ಯಕರ್ತನಿಗೂ, ಆತನ ಮನೆಯವರಿಗೂ ನಮ್ಮನ್ನು ನೋಡಿ


ಅಚ್ಚರಿ, ಸಂತೋಷ. ಆ ಕಾರ್ಯಕರ್ತನಿಗೆ ಮುಖಂಡರು ತಾನು ಇರುವಲ್ಲಿಗೆ ಬಂದರಲ್ಲ ಎಂಬ ಸಂತಸವಾದರೆ,
ನಮಗೆ ಕಾರ್ಯಕರ್ತನನ್ನು ಕೆಲಸಕ್ಕೆ ತೊಡಗಿಸುವುದರ ಬಗೆಗೆ ಖಚಿತವಾದ ಸ್ಪಷ್ಟತೆ ಲಭ್ಯವಾಗುತ್ತದೆ ಎಂಬುದು
ಅನಂತಕುಮಾರರ ಆಲೋಚನೆ ಮುಖಂಡನೆಂದರೆ ಎಲ್ಲೋ ಕೇಂದಸ್ಥಾನಕ್ಕೆ ಬಂದು ಅವರಿವರನ್ನು ಮಾತನಾಡಿಸಿ
ಬೈಠಕ್‌ ನಡೆಸಿ ಕೆಲಸ ಮುಗಿಸಿ ಹೊರಬುಬಿಡುವುದಲ್ಲ. ಸಂಘಟನೆಯ ಕಾರ್ಯದಲ್ಲಿ ಕಾರ್ಯಕರ್ತರನ್ನು
ಆತ್ಮೀಯವಾಗಿ ಒಳಪಡಿಸಿಕೊಳ್ಳುವ ಕಲೆ ಅನಂತಕುಮಾರರಿಗೆ ಕರಗತವಾಗಿತ್ತು.

ಕಾರ್ಯಕರ್ತರ ವಿಶ್ವಾಸವನ್ನು ಗಳಿಸುವುದಷ್ಟೇ ಅಲ್ಲ. ಅವರ ಮನೆಯ ಸದಸ್ಯರಲ್ಲೇ ಒಬ್ಬರಂತೆ
ಆತ್ಮೀಯರಾಗುವ ಕಲೆ ಅವರಿಗೆ ಸಿದ್ಧಿಸಿತ್ತು ಆದರಲ್ಲೂ ಮನೆಯ ಹಿರಿಯರ ಪ್ರೀತಿ ವಿಶ್ಲಾಸಗಳಿಗೆ ಅವರು
ಪಾತ್ರರಾಗುತ್ತಿದ್ದ ಪರಿ ಅನನ್ಯವೇ ಸರಿ. ನಮ್ಮ ಮನೆಗೆ ಬಂದಾಗಲೆಲ್ಲ ನಮ್ಮ ತಂದೆಯವರೊಡನೆ ಕುಳಿತು ಕವಳ
ಮೆಲ್ಲುತ್ತ ರಾತ್ರಿ ಒಂದು ಗಂಟೆಯವರೆಗೂ ಅನಂತಕುಮಾರ್‌ ಹರಟೆ ಹೊಡೆದದ್ದೂ ಹೊಡೆದದ್ದೇ ವಯಸಿನ
ಅಂತರ ಅಲ್ಲಿ ಗೋಚರವಾಗುತ್ತಲೇ ಇರಲಿಲ್ಲ. ಅಷ್ಟು ಹೊತ್ತು ಮಾತುಕತೆಯಾದರೂ ವಿಷಯ ಎಲ್ಲಿರುತ್ತಿತ್ತೋ
ಏನೋ ಸಮಾನವಯಸ್ಕರಲ್ಲದವರೊಡನೆಯೂ ಅನಂತಕುಮಾರ್‌ ಬೆಳೆಸಿಕೊಳ್ಳುತ್ತಿದ್ದ ಸ್ನೇಹ ಅಚ್ಚರಿ
ಮೂಡಿಸುವಂಥದ್ದೇ ಸರಿ. ಆಯಾ ಕಾರ್ಯಕರ್ತರ ಮನೆಯ ಸ್ಥಿತಿಗತಿ, ಅವರ ಸಂಸ್ಕೃತಿ ಆಚಾರವಿಚಾರಗಳೆಲ್ಲ
ಅನಂತಕುಮಾರರಿಗೆ ಅಧ್ಯಯನದ, ಆಸಕ್ತಿಯ ವಸ್ತುವಿಷಯಗಳೂ ಆಗಿರುತ್ತಿದ್ದವು. ಸಮಯ ಸಂದರ್ಭಗಳಿಗೆ
ತಕ್ಕಂತೆ ತಮ್ಮ ತಿಳಿವಳಿಕೆಯನ್ನು ಅವರು ಬಳಸಿಕೊಳ್ಳುವುದಕ್ಕೂ ಅವಕಾಶವಾಗುತ್ತಿತ್ತು. ಹವ್ಯಕರ ಸಮ್ಮೇಳನದಲ್ಲಿ
ಅವರು ಅಪ್ಪೆಹುಳಿಯನ್ನು ನೆನಪಿಸಿಕೊಳ್ಳುವವರೇ, ಹೀಗೆ ಹೋದಲೆಲ್ಲ ಮೇಲುನೋಟದ ಬಾಯಿ ಮಾತಿಗೆ
ಉಪಚಾರಕ್ಕೆ ಸೀಮಿತವಾಗಿರದೆ ತಳಮಟ್ಟದವರೆಗೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದುದರಿಂದಲೇ ಎಲ್ಲರಿಗೂ
ಅನಂತಕುಮಾರ್‌ ನಮ್ಮವರು ಎಂಬ ಭಾವನೆ ಮೂಡಲು ಸಾಧ್ಯವಾಯಿತು. ದೇಶದ ಉದ್ದಗಲಗಳಲ್ಲಿ
ಅನಂತಕುಮಾರ್‌ ಎಲ್ಲರ ನಾಯಕರೆನಿಸಿಕೊಂಡದ್ದು ಹೀಗೆಯೇ.


ಇಲ್ಲಿಯವರೆಗೂ ನಾನು ಅನಂತಕುಮಾರ್‌ ವಿದ್ಯಾರ್ಥಿ ಪರಿಷತ್ತಿನ ನಾಯಕರಾಗಿದ್ದ ಕಾಲದ
ಸಂದರ್ಭಗಳನ್ನು ಹೇಳಿದೆ. ಅನಂತಕುಮಾರ್‌ ಕೇಂದ್ರ ಮಂತಿಗಳಾಗಿದ್ದ ಕಾಲದ ಇನ್ನೊಂದು ಸಂದರ್ಭ ನನಗೆ
ನೆನಪಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದವರ ಸಭೆಯೊಂದನ್ನು ಮಧ್ಯಪ್ರದೇಶದಲ್ಲಿ
ಆಯೋಜಿಸಲಾಗಿತ್ತು. ಅದಕ್ಕೆ ಅನಂತಕುಮಾರರನ್ನೂ ಆಹ್ಹಾನಿಸಲಾಗಿತ್ತು. ಅವರೊಡನೆ ನಾನು ಹೋಗಿದ್ದೇ.
ಇಡೀ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಜನರು ಅನಂತಕುಮಾರ್‌ ವಿಮಾನ ನಿಲ್ದಾಣದಲ್ಲಿ ಇಳಿದಾಗಿನಿಂದ
ದಿನವಿಡಿ ಅವರೊಡನೆ ನಡೆದುಕೊಂಡ ರೀತಿ, ತೋರಿದ ಪೀತ್ಕಾದರಗಳು ನನಗೆ ಅಚ್ಚರಿ ಮೂಡಿಸಿದವು.
ಉಳಿದವರಿರಲಿ, ಸ್ಪತ: ಮುಖ್ಯಮಂತ್ರಿಯವರು ತಮ್ಮ ಖಾಸಗಿ ಕೊಠಡಿಯಲ್ಲಿ ಅನಂತಕುಮಾರರೊಡನೆ
ಮಾತನಾಡುವಾಗಲೂ ನಿಂತೇ ಇದ್ದರೇ ಹೊರತು ಕುಳಿತು ಮಾತನಾಡುವುದಕ್ಕೂ ಸಂಕೋಚ ಪಡುವಷ್ಟು
ಗೌರವಯುತವಾಗಿ ವರ್ತಿಸುತ್ತಿದ್ದರು. ಆ ಮೇಲೆ ನನ್ನೊಡನೆ ಮಾತನಾಡುವಾಗ ಅನಂತಕುಮಾರರ
ಕಾರ್ಯಶೀಲತೆ, ಪ್ರಯತ್ನಗಳಿಂದಲೇ ತಮಗೆ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತೆಂದು ಧನ್ಯತಾಪೂರ್ವಕ
ಹೇಳಿಕೊಂಡರು.


ಉಳಿದ ಕಾರ್ಯಕರ್ತರು, ಶಾಸಕರ ವಿಷಯ ಹೇಳುವುದೇ ಬೇಡ, ಅನಂತಕುಮಾರ್‌ ವಿದ್ಯಾರ್ಥಿ
ಪರಿಷತ್ತಿನ ಕಾರ್ಯಕರ್ತರನ್ನು ಹೇಗೆ ಸಂಘಟನೆಯಲ್ಲಿ ತೊಡಗಿಸುತ್ತಿದ್ದರೋ ಅದೇ ತತ್ತರತೆಯಿಂದ ಬಿಜೆಪಿ
ಕಾರ್ಯಕರ್ತರನ್ನು ಪಕ್ಷದ ಕಾರ್ಯದಲ್ಲಿ ತೊಡಗಿಸುತ್ತಿದ್ದರು. ಕರ್ನಾಟಕದಲ್ಲೇನೋ ತಮ್ಮವರನ್ನು
ನೆನಪಿಟ್ಟುಕೊಂಡು ಮಾತನಾಡಿಸುತ್ತಿದ್ದುದು ಸರಿಯೇ. ದೂರದ ಮಧ್ಯಪ್ರದೇಶದಲ್ಲಿ ತಾವು ಚುನಾವಣಾ
ಸಂದರ್ಭದಲ್ಲಿ ಮೇಲ್ವಿಚಾರಕರಾಗಿ ಹೋಗಿದ್ದಾಗ ಕಂಡು ಮಾತನಾಡಿಸಿದವರನ್ನೂ ಅವರು ಹೆಸರು ಊರು
ಸಹಿತ ನೆನಪಿಟ್ಟುಕೊಂಡಿದ್ದುದು ಬೆರಗುಗೊಳಿಸುವಂತಹದ್ದೇ ನಿಜ. ಪಾರ್ಟಿಯ ಟಿಕೆಟ್‌ ಪಡೆದು ಗೆದ್ದವನನ್ನು
ಹೆಸರು ಹಿಡಿದು ಮಾತನಾಡಿಸುವುದಿರಲಿ, ಅವನಿಗೆ ಪ್ರತಿಸ್ಪರ್ಧಿಯಾಗಿ ಸ್ಥಾನಾಕಾಂಕ್ಷಿಯಾಗಿದ್ದವನ ಹೆಸರನ್ನು
ನೆನಪಿಸಿಕೊಂಡು ಅವನು ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ ಎಂದು ವಿಚಾರಿಸುವುದೆಂದರೆ ಸಾಮಾನ್ಯವೇ?
ಮಧ್ಯಪ್ರದೇಶದಂತೆಯೇ ಬಿಹಾರ, ದಿಲ್ಲಿ ಮೊದಲಾದ ರಾಜ್ಯಗಳಲ್ಲೂ ಅವರು ಪಕ್ಷದ ಉಸ್ತುವಾರಿಯಾಗಿ ಕೆಲಸ


ಮಾಡಿದ್ದಾರೆ. ಅಲ್ಲೂ ಅಸಂಖ್ಯ ಕಾರ್ಯಕರ್ತರು, ಅಭ್ಯರ್ಥಿಗಳು, ಶಾಸಕರು ಅನಂತಕುಮಾರರನ್ನು


ತಮ್ಮವರೆಂದು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿರುವುದರಲ್ಲಿ ಅತಿಶಯೋಕ್ಷಿಯಿಲ್ಲ. ಅನಂತಕುಮಾರ್‌ರವರ
ಈ ಮಹತ್ತರ ಗುಣವೇ ಅವರು ರಾಷ್ಟ್ರ ನಾಯಕರಾಗಿ ಬೆಳೆಯಲು ಕಾರಣವಾಯಿತು. ಅದಕ್ಕಿಂತ ಮುಖ್ಯವಾಗಿ
ದೇಶದೆಲ್ಲೆಡೆ ಅನಂತಕುಮಾರರು ಹೀಗೆ ನಾಯಕರಾಗಿ ಬೆಳೆಯಬಲ್ಲ ಸಾಮರ್ಥ್ಯವಿರುವವರನ್ನು ಗುರುತಿಸಿ,
ಅವರು ನಾಯಕತ್ವ ಬೆಳೆಸಿಕೊಳ್ಳಲು ಪ್ರೇರಕ ಶಕ್ಷಿಯಾದರು ಎಂಬುದು ಗಮನಾರ್ಹ. ಈಗ ನಾನೇ ವಿಧಾನ
ಸಭೆಯ ಸಭಾಧ್ಯಕ್ಷನಾಗಿ ಇಲ್ಲಿ ಕುಳಿತುಕೊಳ್ಳುವುದಕ್ಕೆ ಅನಂತಕುಮಾರರವರ ಕೊಡುಗೆ ಎಷ್ಟಿದೆಯೆಂದು ಏನು
ಹೇಳಲಿ. ನನ್ನಂತೆ ಇಡೀ ದೇಶದಲ್ಲಿ ಪ್ರೇರಿತರಾಗಿ, ಕಲಿತು ಪ್ರಭಾವಿತರಾಗಿ ಮುಂದೆ ಬಂದವರು ಅದೆಷ್ಟು
ಜನರಿರಬಹುದು. ಹೀಗೆ ಕಾರ್ಯಕರ್ತರಲ್ಲಿ ನಾಯಕತ್ವದ ಪ್ರತಿಭೆಯನ್ನು ಗುರುತಿಸಿ ಬೆಳೆಸಿ.


ಆಧಾರ:ವಿಶ್ವವಾಣಿ, ದಿನಾಂಕ:22.09.2020


ದಿನಾಂಕ: 22-07-2020 ರಂದು, ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್‌ ಅವರ ಸ್ಮರಣಾರ್ಥ
“ಅನಂತ ಪಥ” ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಸನ್ಮಾನ್ಯ ಸಭಾಧ್ಯಕ್ಷರು ವೆಬಿನಾರ್‌ ಮೂಲಕ
ಪಾಲ್ಗೊಂಡರು.


ದಿನಾಂಕ: 22-07-2020 ರಂದು ಸನ್ಮಾನ್ಯ ಸಭಾಧ್ಯಕ್ಷರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ
ವಿಧಾನಸಭಾ ಸಚಿವಾಲಯಕ್ಕೆ ಅಗತ್ಯವಿರುವ ಕೊಠಡಿಗಳನ್ನು ಒದಗಿಸುವ ಕುರಿತು ಚರ್ಚಿಸಿದರು


ದಿನಾಂಕ: 25-08-2020 ರಂದು ಸನ್ಮಾನ್ಯ ಸಭಾಧ್ಯಕ್ಷರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು


ಏರ್ಪಡಿಸಿರುವ ಒಂದು ವಾರದ “ಶಿಕ್ಷಕರ ಸಾಮರ್ಥ್ಯಾಭಿವೃದ್ಧಿ” ಕಾರ್ಯಕ್ರಮದಲ್ಲಿ ಕಾನೂನು ಮತ್ತು ದುರ್ಬಲರು
ಎಂಬ ವಿಷಯದ ಕುರಿತಂತೆ ವೆಬಿನಾರ್‌ ಮೂಲಕ ಸಮಾರೋಪ ಭಾಷಣ ಮಾಡುತ್ತಿರುವುದು.


Ke ನ್‌ }


ದಿನಾಂಕ: 25-08-2020 ರಂದು ಕರ್ನಾಟಕ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾದ
ಶ್ರೀ ಎಸ್‌.ಎ.ರವೀಂದನಾಥ ಹಾಗೂ ಸಮಿತಿ ಸದಸ್ಯರುಗಳು ಸೇರಿ ಸನ್ಮಾನ್ಯ ಸಭಾಧ್ಯಕ್ಷರಿಗೆ ಹಕ್ಕು ಭಾಧ್ಯತಾ ಸಮಿತಿಯ
ವರದಿಯನ್ನು ಸಲ್ಲಿಸಿದ ಸಂದರ್ಭ


ದಿನಾಂಕ:26-08-2020ರಂದು ಸನ್ಮಾನ್ಯ ಸಭಾಧ್ಯಕ್ಷರು, ಕೊರೋನಾ ವೈರಸ್‌ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ
ಹಿನ್ನೆಲೆಯಲ್ಲಿ ಸೆಪ್ಟಂಬರ್‌ 2020ರಲ್ಲಿ ವಿಧಾನಸಭೆಯ ಅಧಿವೇಶನವನ್ನು ನಡೆಸುವ ಬಗ್ಗೆ ಮಾನ್ಯ ಕಾನೂನು ಮತ್ತು
ಸಂಸದೀಯ ವ್ಯವಹಾರಗಳ ಸಚಿವರೊಂದಿಗೆ ಚರ್ಚಿಸುತ್ತಿರುವ ಸಂದರ್ಭ

Cu mm | | 4


Pa
—W 74


N
W =


ದಿನಾಂಕ:26-08-2020ರಂದು ಸನ್ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನ ಸಭೆಯಲ್ಲಿ “ಅ-ವಿಧಾನ” ಪದ್ಧತಿಯನ್ನು
ತ್ಪರಿತವಾಗಿ ಜಾರಿಗೆ ತರುವ ಬಗ್ಗೆ ವಿಧಾನ ಸಭೆಯ ಕಾರ್ಯದರ್ಶಿ ಹಾಗೂ ಇತರೆ ಹಿರಿಯ ಅಧಿಕಾರಿಗಳೊಂದಿಗೆ
ಚರ್ಚಿಸಿದ ಸಂದರ್ಭ


ದಿನಾಂಕ: 27-08-2020ರಂದು ಸನ್ಮಾನ್ಯ ಸಭಾಧ್ಯಕ್ಷರವರನ್ನು ರಾಜ ಅಡ್ಡೋಕೇಟ್‌ ಜನರಲ್‌ರವರಾದ
ಶ್ರೀ ಪ್ರಭುಲಿಂಗ ನಾವಡಗಿ ಅವರು ಭೇಟಿ ಮಾಡಿದ ಸಂದರ್ಭ


|


p)


ಸೆಪ್ಟೆಂಬರ್‌ 2020 ರಲ್ಲಿ ಕರ್ನಾಟಕ ವಿಧಾನ ಸಭೆಯ ಅಧಿವೇಶನವನ್ನು, ರಾಜ್ಯದಲ್ಲಿ ಕೊರೋನಾ ವೈರಸ್‌
ಹರಡುತ್ತಿರುವ ಹಿನ್ನೆಲೆಯಲ್ಲಿ ಯಾವ ರೀತಿ ನಡೆಸಬಹುದು ಎಂಬ ಬಗ್ಗೆ ದಿನಾಂಕ 27-08-2020ರಂದು ಸನ್ಮಾನ್ಯ
ಸಭಾಧ್ಯಕ್ಷರು, ಸರ್ಕಾರಿ ಮುಖ್ಯ ಸಚೇತಕರು, ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜಾತ್ಯಾತೀತ ಜನತಾ
ದಳದ ಮುಖ್ಯ ಸಚೇತಕರೊಂದಿಗೆ ಚರ್ಚಿಸುತ್ತಿರುವುದು.


ದಿನಾಂಕ 08-09-2020ರಂದು ಸನ್ಮಾನ್ಯ ಸಭಾಧ್ಯಕ್ಷರು, ದಿನಾಂಕ 21-09-2020 ರಿಂದ 30-09-2020ರವರೆಗೆ
ನಡೆಯಲಿರುವ ವಿಧಾನ ಸಭೆಯ ಅಧಿವೇಶನಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯನ್ನು ನಡೆಸಿದ ಸಂದರ್ಭ.


ಸಿ


=
— ಮಾ pe


ದಿನಾಂಕ: 08-09-2020 ರಂದು ಕರ್ನಾಟಕ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿಯ ಸದಸ್ಯರುಗಳು ಸನ್ಮಾನ್ಯ
ಸಭಾಧ್ಯಕ್ಷರನ್ನು ಭೇಟಿ ಮಾಡಿ ಸದರಿ ಸಮಿತಿಯ ವರದಿಯನ್ನು ನೀಡಿದ ಸಂದರ್ಭ.


ಸನ್ಮಾನ್ಯ ಸಭಾಧ್ಯಕ್ಷರು ದಿನಾಂಕ: 07-09-2020ರಂದು, ದಿನಾಂಕ: 21-09-2020ರಿಂದ 30-09-2020ರವರೆಗೆ
ನಡೆಯಲಿರುವ ವಿಧಾನ ಸಭೆಯ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೋವಿಡ್‌-19ರ ಕುರಿತು ತೆಗೆದುಕೊಳ್ಳಬೇಕಾದ
ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳೊಂದಿಗೆ
ಚರ್ಚಿಸಿದರು.


ಸನ್ಮಾನ್ಯ ಸಭಾಧ್ಯಕ್ಷರು ದಿನಾಂಕ: 07-09-2020ರಂದು, ದಿನಾಂಕ: 21-09-2020ರ೦ದ 30-09-2020ರವರೆಗೆ
ನಡೆಯಲಿರುವ ವಿಧಾನ ಸಭೆಯ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೋವಿಡ್‌-19ರ ಕುರಿತು ತೆಗೆದುಕೊಳ್ಳಬೇಕಾದ
ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳೊಂದಿಗೆ
ವಿಧಾನ ಸಭೆಯ ಸಭಾಂಗಣವನ್ನು ವೀಕ್ಷಿಸುತ್ತಾ ಚರ್ಚಿಸುತ್ತಿರುವ ಸಂದರ್ಭ.


ದಿನಾಂಕ: 21-09-2020 ರಿಂದ 30-9-2020 ರವರೆಗೆ ನಡೆಯಲಿರುವ ವಿಧಾನ ಸಭೆಯ ಅಧಿವೇಶನಕ್ಕೆ
ಸಂಬಂಧಿಸಿದಂತೆ ಮಾನ್ಯ ಸದಸ್ಯರುಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ 72 ಗಂಟೆಗಳ ಮುಂಚಿತವಾಗಿ
ಕೋವಿಡ್‌-19ರ ಸಂಬಂಧದಲ್ಲಿ ಅರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕೈೆಟ್‌
ಹಾಲ್‌ನಲ್ಲಿ ಅಗತ್ಯ ಚಿಕಿತ್ಸಾ ಘಟಕಗಳನ್ನು ಏರ್ಪಡಿಸಲಾಗಿತ್ತು. ಸದರಿ ವ್ಯವಸ್ಥೆಯನ್ನು ದಿನಾಂಕ:18-09-2020ರಂದು
ಸನ್ಮಾನ್ಯ ಸಭಾಧ್ಯಕ್ಷ ರು ಪರಿಶೀಲಿಸಿದ ಹಾಗೂ ಸ್ವಯಂ ಆರ್‌ಟಿಪಿಸಿಆರ್‌ ಪರೀಕ್ಷೆ ಯನ್ನು ಮಾಡಿಸಿಕೊಂಡ ಸಂದರ್ಭ.


ದಿನಾಂಕ: 18-09-2020ರಂದು ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ
ಸಮಿತಿಯ ಅಧ್ಯಕ್ಷರಾದ ಶ್ರೀ ಕುಮಾರಬಂಗಾರಪ್ಪರವರು ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸನ್ಮಾನ್ಯ
ಸಭಾಧ್ಯಕ್ಷರವರಿಗೆ ಸಮಿತಿಯ ವರದಿಯನ್ನೊಪ್ಪಿಸಿದ ಸಂದರ್ಭ.


Ni
» \
ee


30. 15ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ


ಮಾನ್ಯ ಸಭಾಧ್ಯಕ್ಷರು ಈ ಕೆಳಕಂಡ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿಯನ್ನು ಸದನದಲ್ಲಿ


ರಿ p ಖಂ


ಮಂಡಿಸಿದರು.
21 ರಿಂದ 26ನೇ ಸೆಪ್ಪೆಂಬರ್‌, 2020 ರವರೆಗೆ 6 ದಿನಗಳ ಕಾಲ 39 ಗಂಟೆಗಳ ಕಾಲ ಕಾರ್ಯಕಲಾಪ

ನಡೆಸಲಾಗಿದೆ.
> ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ, ಕೋವಿಡ್‌-19, ಗಡಿ ಸಂಘರ್ಷ ಹಾಗೂ


V


ಅತಿವೃಷ್ಟಿಯಿಂದ ಮೃತರಾದವರಿಗೆ ಗೌರವಪೂರ್ವಕವಾಗಿ ಸಂತಾಪ ಸೂಚನಾ ನಿರ್ಣಯವನ್ನು
ಮಂಡಿಸಲಾಗಿದೆ.


ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯ ಕಾರ್ಯದರ್ಶಿಯವರ ವರದಿಯನ್ನು
ಮಂಡಿಸಲಾಗಿದೆ.


ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ 2018-19ನೇ ಸಾಲಿನ
ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳು, ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ
ಲೆಕ್ಕಪರಿಶೋಧನಾ ವರದಿ ಹಾಗೂ 74ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಮೇಲಿನ
ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.


ಕರ್ನಾಟಕ ವಿಧಾನಮಂಡಲ/ವಿಧಾನಸಭೆಯ ಸಮಿತಿಗಳ 6 ವರದಿಗಳು, ಜಂಟಿ ಪರಿಶೀಲನಾ
ಸಮಿತಿಯ ವಿಶೇಷ ವರದಿ, 57 ಅಧಿಸೂಚನೆಗಳು; 19 ಅಧ್ಯಾದೇಶಗಳು; 62 ವಾರ್ಷಿಕ ವರದಿಗಳು,
69 ಲೆಕ್ಕ ಪರಿಶೋಧನಾ ವರದಿ, 1 ಅನುಷ್ಠಾನ ವರದಿ, 1 ಅನುಪಾಲನಾ ವರದಿ ಹಾಗೂ 3 ವಿಶೇಷ
ವರದಿಗಳನ್ನು ಮಂಡಿಸಲಾಗಿದೆ.


4 ಅರ್ಜಿಗಳನ್ನು ಒಪ್ಪಿಸಲಾಗಿದೆ.


2020-21ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂಶಿನ ಬೇಡಿಕೆಗಳನ್ನು ಮತಕ್ಕೆ ಹಾಕಿ
ಅಂಗೀಕರಿಸಲಾಗಿದೆ.


ವಿಧಾನ ಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2 ವಿಧೇಯಕಗಳು,
ಧನವಿನಿಯೋಗ ವಿಧೇಯಕವು ಸೇರಿದಂತೆ ಒಟ್ಟು 37 ವಿಧೇಯಕಗಳ ಪೈಕಿ 36 ವಿಧೇಯಕಗಳನ್ನು
ಅಂಗೀಕರಿಸಲಾಯಿತು, 1 ವಿಧೇಯಕವನ್ನು ತಡೆಹಿಡಿಯಲಾಯಿತು.


ನಿಯಮ 60 ರಡಿಯಲ್ಲಿ ನೀಡಿದ್ದ 3 ನಿಲುವಳಿ ಸೂಚನೆಗಳನ್ನು ಪರಿವರ್ತಿಸಲಾಗಿರುವುದನ್ನು ಸೇರಿಸಿ
ಒಟ್ಟು 20 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಸ್ವೀಕರಿಸಿದ್ದು, ಸದರಿ ಸೂಚನೆಗಳ ಪೈಕಿ 1
ಸೂಚನೆಯ ಮೇಲೆ ಚರ್ಚಿಸಲಾಗಿರುತ್ತದೆ.


ಒಟ್ಟು 3071 ಪ್ರಶ್ನೆಗಳನ್ನು ಸ್ನೀಕರಿಸಲಾಗಿದ್ದು, ಅದರಲ್ಲಿ 1109 ಪ್ರಶ್ನೆಗಳ ಉತ್ತರಗಳನ್ನು ಸದನದಲ್ಲಿ
ಮಂಡಿಸಲಾಗಿದೆ. ಈ ಅಧಿವೇಶನದಲ್ಲಿ ಮಾನ್ಯ ಸದಸ್ಯರುಗಳಿಗೆ ಹಾಗೂ ಪತ್ರಿಕಾ ವೃಂದದವರಿಗೆ ಲಿಖಿತ
ಮೂಲಕ ಉತ್ತರಿಸಲಾಗುವ ಪುಶ್ನೆಗಳಿಗೆ ಉತ್ತರಗಳನ್ನು ಇ-ಮೇಲ್‌ ಮುಖಾಂತರ ಒದಗಿಸಿರುವುದು
ಒಂದು ವಿಶೇಷವಾಗಿದೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.


ನಿಯಮ 351 ರಡಿಯಲ್ಲಿ 60 ಸೂಚನೆಗಳನ್ನು ಅಂಗೀಕರಿಸಿದ್ದು ಅದರಲ್ಲಿ 35 ಸೂಚನೆಗಳಿಗೆ
ಉತ್ತರಗಳನ್ನು ಸ್ವೀಕರಿಸಲಾಗಿರುತ್ತದೆ.


ಗಮನ ಸೆಳೆಯುವ 129 ಸೂಚನೆಗಳ ಪೈಕಿ 9 ಸೂಚನೆಗಳನ್ನು ಚರ್ಚಿಸಲಾಗಿದೆ ಹಾಗೂ 72
ಸೂಚನೆಗಳ ಉತ್ತರಗಳನ್ನು ಸ್ಟೀಕರಿಸಲಾಗಿರುತ್ತದೆ.


ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಹಾಗೂ ಕರ್ನಾಟಕ
ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳನ್ನು ಪರಿಶೀಲಿಸಿ ತಿದ್ದುಪಡಿ
ತರಲು ಶಿಫಾರಸ್ಸು ಮಾಡುವುದಕ್ಕಾಗಿ ನಿಯಮಾವಳಿ ಸಮಿತಿಯನ್ನು ರಚಿಸಲು ಮಾನ್ಯ ಸಭಾಧ್ಯಕ್ಷರಿಗೆ
ಅಧಿಕಾರ ನೀಡಲಾಗಿರುತ್ತದೆ.


> ಮಾನ್ಯ ಮುಖ್ಯಮಂತ್ರಿಯವರ ನೇತೃತ್ವದ ಮಂತ್ರಿಮಂಡಲದ ಮೇಲೆ ವಿರೋಧ ಪಕ್ಷದ ನಾಯಕರು
ಮಂಡಿಸಿದ್ದ ಅವಿಶ್ಚಾಸ ನಿರ್ಣಯ ಪ್ರಸ್ತಾವ ಧ್ಹನಿಮತದಿಂದ ತಿರಸ್ಕರಿಸಲ್ಲಟ್ಟಿದೆ.
ಈ ಅವಧಿಯಲ್ಲಿ ಸದನವು ಶೇಕಡ 90ಕ್ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿರುತ್ತದೆ ಎಂಬುದನ್ನು
ತಿಳಿಸಲು ಹರ್ಷವಾಗುತ್ತದೆ.


» ಕರ್ನಾಟಕ ವಿಧಾನ ಮಂಡಲದ ವತಿಯಿಂದ ಪ್ರಕಟಗೊಳ್ಳುತ್ತಿದ್ದ ತೈಮಾಸಿಕ ಶಾಸಕಾಂಗ ಪತ್ರಿಕೆಯು
ಸ್ಥಗಿತಗೊಂಡಿರುವುದನ್ನು ಗಮನಿಸಿ ಜುಲೈ-2019 ರಿಂದ ಸದರಿ ಪತ್ರಿಕೆಯನ್ನು ಪ್ರಕಟಿಸಿ ಈಗಾಗಲೇ
ಮಾರ್ಚ್‌-2020 ಅವಧಿಯವರೆಗಿನ್ನನ ಮೂರು ಸಂಚಿಕೆಗಳನ್ನು ಬಿಡುಗಡೆಗೊಳಿಸಿ ಮಾನ್ಯ
ಸದಸ್ಯರುಗಳಿಗೆ ಒದಗಿಸಲಾಗಿದೆ.


> 15ನೇ ವಿಧಾನ ಸಭೆಯ ಮಾನ್ಯ ಸದಸ್ಯರುಗಳ ಪರಿಚಯ ಪುಸ್ತಕವನ್ನು ಪ್ರಕಟಿಸಿ ಮಾನ್ಯ
ಸದಸ್ಯರುಗಳಿಗೆ ಒದಗಿಸಲು ಕ್ರಮ ಕೈಗೊಂಡಿರುವುದನ್ನು ಮಾನ್ಯ ಸದಸ್ಯರ ಗಮನಕ್ಕೆ ತರಬಯಸುತ್ತೇನೆ.
ವಿಶೇಷವಾಗಿ ಕೊರೋನಾ ವೈರಸ್‌ ಹಾವಳಿಯ ಸಂದರ್ಭದಲ್ಲಿ ಸದನ ನಡೆಸಲು ಸಹಕರಿಸಿದ ಸಭಾ
ನಾಯಕರಾದ ಮಾನ್ಯ ಮುಖ್ಯಮಂತ್ರಿಯವರಿಗೆ, ಮಾನ್ಯ ವಿರೋಧ ಪಕ್ಷದ ನಾಯಕರಿಗೆ, ಸಚಿವ ಸಂಪುಟದ
ಸದಸ್ಯರಿಗೆ, ಉಪ ಸಭಾಧ್ಯಕ್ಷರಿಗೆ, ಸರ್ಕಾರಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ, ಎಲ್ಲಾ
ಸದಸ್ಯರುಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ, ಇಲಾಖಾ ಮುಖ್ಯಸ್ಥರು, ಅಧಿಕಾರಿ-ಸಿಬ್ಬಂದಿಯವರಿಗೆ, ವಿಧಾನಸಭೆ
ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕೊರೋನಾ ವೈರಸ್‌
ವ್ಯಾಪಕವಾಗಿ ಹರಡುತ್ತಿದ್ದರೂ. ಕೊರೋನಾ ವೈರಸ್‌ ಹರಡದಂತೆ ತೆಗೆದುಕೊಂಡ ಎಲ್ಲಾ ಮುನ್ನೆಚ್ಚರಿಕೆ
ಕ್ರಮಗಳನ್ನು ಪಾಲಿಸಿಕೊಂಡು ಸದನಕ್ಕೆ ಹಾಜರಾಗಿ ಸದನದ ಕಾರ್ಯಕಲಾಪಗಳು ಸುಗಮವಾಗಿ ನಡೆಯುವಂತೆ
ಸಹಕರಿಸಿದ ತಮಗೆಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಅಲ್ಲದೆ ಈ ಕೊರೋನಾ ವೈರಸ್‌
ಹಾವಳಿಗೆ ಕಡಿವಾಣ ಹಾಕಲು ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸೋಣ ಹಾಗೂ ಈ ದಿಸೆಯಲ್ಲಿ ತಮ್ಮೆಲ್ಲರ ಪರವಾಗಿ
ನಾಡಿನ ಜನತೆಯ ಸಹಕಾರವನ್ನು ಕೋರುತ್ತೇನೆ.


31. 15ನೇ ವಿಧಾನಸಭೆಯ 7ನೇ ಅಧಿವೇಶನದಲ್ಲಿ ಮಂಡಿಸಲಾದ/ಅಂಗೀಕರಿಸಲಾದ ವಿಧೇಯಕಗಳ ಪಟ್ಟಿ
ದಿನಾಂಕ 21-09-2020 ರಿಂದ 26-09-2020ರವರೆಗೆ


ವಿಧಾನಸಭೆ
Legislative Assembly


ವಿಧೇಯಕಗಳ ಹೆಸರು Legislative
Council


Name of the Bill ಷಾಕಾನ


ದಿನಾಂಕ


Date of Date of Date of
Introduction


2
ಕರ್ನಾಟಕ ಭಿಕ್ಷಾಟನೆ ನಿಷೇಧ
(ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ. ಸಂಖ್ಯೆ 27)
The Karnataka Prohibition of
Beggary (Amendment) Bill,
2020


L.A. Bill No. 27 of 2020) |
2 |ಕರ್ನಾಟಕ ಪಾರಸಭಿಗಳ (ತಿದ್ದುಪಡಿ) | 22.09.2020 23.09.2020 | 25.09.2020


ವಿಧೇಯಕ, 2020 (2020ರ ವಿ.ಸ.ವಿ. | |

ಸಂಖ್ಯೆ: 28) |
The Karnataka Municipalities
(Amendment) Bill, 2020


L.A. Bill No. 28 of 2020)
3 [ಕರ್ನಾಟಕ ವಿಧಾನಮಂಡಲದ | 22.09.2020 22.09.2020 | 24.09.2020


ಸಂಬಳಗಳು, ನಿವೃತ್ತಿ ವೇತನಗಳು
ಮತ್ತು ಭತ್ಯೆಗಳು ಹಾಗೂ ಕೆಲವು ಇತರ |
ಕಾನೂನು (ತಿದ್ದುಪಡಿ) ವಿಧೇಯಕ,
2020 (2020ರ ವಿಸವಿ. ಸಂಖ್ಯೆ
29)

The Kamataka Legislature
Salaries, Pensions and|
Allowances and Certain Other |

Law (Amendment) Bill, 2020 | |
L.A. Bill No. 29 of 2020)


ಕರ್ನ್‌ ಕಾ TERRTI202020 723092020 [24092020
ತಿದ್ದುಪಡಿ) ವಿಧೇಯಕ, 2020


(2020ರ ವಿ.ಸ.ವಿ. ಸಂಖ್ಯೆ: 30) |


The Karnataka Lokayukta
(Second Amendment) Bill,
2020 |


|
|
|
(L.A. Bill No. 30 of 2020) |
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ | 22.09.2020 .09. |
ಯೋಜನೆ (ಎರಡನೇ ತಿದ್ದುಪಡಿ)
ವಿಧೇಯಕ, 2020 (2020ರ ವಿ.ಸ.ವಿ.
ಸಂಖ್ಯೆ: 31)
The Karnataka Town and

Country Planning (Second

Amendment) Bill, 2020 |

L.A. Bill No. 31 of 2020)

6 ಕರ್ನಾಟಕ ರಾಜ್ಯ ಸಿವಿಲ್‌ ಸೇವಗಳ | 22.09.2020 | 23.09.2020 | 24.09.2020


(ಸಾರ್ವಜನಿಕ ವಲಯದ ಸಂಸ್ಥೆಗಳ
ನೌಕರರ ಸೇವೆಗಳನ್ನು ಸಾರ್ವಜನಿಕ
ಸೇವೆಗೆ ವಿಲೀನಗೊಳಿಸುವುದಕ್ಕೆ
ನಿಷೇಧ) ವಿಧೇಯಕ, 2020 (2020ರ
| ವಿ.ವಿ. ಸಂಖ್ಯೆ: 32)
The Karnataka State Civil
Services (Prohibition of
Absorption of the Services of |
| the Employees of | |
| Establishments in Public |
| Sector into Public Service)
Bill, 2020 (L.A. Bill No. 32
of 2020
7 ಕರ್ನಾಟಕ ಕೃಗಾರಿಕಗಳ (ಸ ಲಭ್ಯ) 22.09.2020 | 23.09.2020 | 25.09.2020
(ತಿದ್ದುಪಡಿ) ವಿಧೇಯಕ, 2020
(2020ರ ಎ.ಸ.ವಿ. ಸಂಖ್ಯೆ33) | |
The Karnataka Industries
(Facilitation) (Amendment)
Bill, 2020 (L.A. Bill No. 33
of 2020
8 [ಕನ್ನಡ ವಶ್ವವದ್ಯಾನನಯ ವಪ ISTO 22002020 | 24002020


ಕೆಲವು ಕಾನೂನುಗಳ (ತಿದ್ದುಪಡಿ) |
ವಿಧೇಯಕ, 2020 (2020ರ | | |
ವಿ.ಸ.ವಿ.ಸಂಖ್ಯೆ:34)

The Kannada University and

Certain Other Laws

(Amendment) Bill, 2020 | |


(L.A. Bill No. 34 of 2020) |


|


ಕರ್ನಾಟಕ ರಾಜ್ಯ ಕ್ತ
ವಿಶ್ವವಿದ್ಯಾನಿಲಯ (ತಿದ್ದುಪಡಿ) 2020
(2020ರ ವಿ.ಸ.ವಿ. ಸಂಖ್ಯೆ35)

The Karnataka State Open
University (Amendment)
Bill, 2020 (L.A. Bill No. 35
of 2020)

ಕರ್ನಾಟಕ

ಘಟಕಗಳ (ಕೃಷರ್‌ಗಳ) ನಿಯಂತ್ರಣ
(ತಿದ್ದುಪಡಿ) ವಿಧೇಯಕ, 2020 |
(2020ರ ವಿ.ಸ.ವಿ. ಸಂಖ್ಯೆ:36) |
The Karnataka Regulation of
Stone Crushers
(Amendment) Bil, 2020
(L.A. Bill No. 36 of 2020)
ಕರ್ನಾಟಕ ಗ್ರಾಮ ಸ್ಪರಾಜ್‌ ಮತ್ತು
ಪಂಚಾಯತ್‌ ರಾಜ್‌ (ತಿದ್ದುಪಡಿ)
ವಿಧೇಯಕ, 2020 (2020ರ
ವಿ.ಸವಿ. ಸಂಖ್ಯೆ37)

The Karnataka Gram Swaraj
and Panchayat Raj
(Amendment) Bil, 2020


(L.A. Bill No. 37 of 2020)
ಕರ್ನಾಟಕ ಖಾಸಗಿ ೈದ್ಯಕೀಯ 22.09.2020 | 22.09.2020 24.09.2020


ಸಂಸ್ಥೆಗಳ (ತಿದ್ದುಪಡಿ) ವಿಧೇಯಕ,
2020 (2020ರ ವಿಸ.ವಿ. ಸಂಖ್ಯೆ:38)


The Karnataka Private
Medical Establishments
(Amendment) Bil, 2020


L.A. Bill No. 38 of 2020)
ಕರ್ನಾಟಕ p


ವಿಶ್ವವಿದ್ಯಾನಿಲಯಗಳ ಮತ್ತು ಕೆಲವು
ಇತರ ಕಾನೂನು (ಎರಡನೇ
ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ. ಸಂಖ್ಯೆ39)


The Karnataka State
Universities and Certain
Other Law (Second
Amendment) Bill, 2020 (L.A.
Bill No. 39 of 2020)


ಕರ್ನ ಹಾ ST TRETEOON TRO 726002020
(ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ40)


The Karnataka Land
Grabbing Prohibition
(Amendment) Bill, 2020 | |
(L.A. Bill No. 40 of 2020)

ಕರ್ನಾಟಕ ಸ್ಟಾಂಪು (ತಿದ್ದುಪಡಿ)
ವಿಧೇಯಕ, 2020 (2020ರ
ವಿ.ಸವಿ.ಸಂಖ್ಯೆ41)

The Karnataka Stamp
(Amendment) Bil, 2020
L.A. Bill No. 41 of 2020
ಕರ್ನಾಟಕ ಭೂ ಸುಧಾರಣಗಳ
(ಎರಡನೇ ತಿದ್ದುಪಡಿ) ವಿಧೇಯಕ,
2020 (2020ರ ವಿ.ಸ.ವಿ.ಸಂಖ್ಯೆ:42)


The Karnataka Land Reforms
(Second Amendment) Bill.
2020 (L.A. Bill No. 42 of


22.09.2020 | 26.09.2020


ಭೂ ಕಂದಾಯ | 23.09.2020
(ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ. ಸಂಖ್ಯೆ: :43)


The Karnataka Jd Revenue |
(Amendment) Bil, 2020;


(L.A. Bill No. 43 of 2020)
ಕರ್ನಾಟಕ ಸಾಂಕ್ರಾಮಿಕ ಗಗಳ | 22.09. .09. 25.09.2020


ವಿಧೇಯಕ, 2020 (2020ರ
ವಿ.ಸ.ವಿ.ಸಂಖ್ಯೆ:44)

The Karnataka Epidemic
Diseases Bill, 2020 (L.A. Bill


No. 44 of 2020
ಕರ್ನಾಟಕ ನಗರ ಪಾಲಿ


(ಎರಡನೇ ತಿದ್ದುಪಡಿ) ವಿಧೇಯಕ,
2020 (2020ರ 'ವಿಸ.ವಿಸಂಖ್ಯೆ45)


The Karnataka Muncipal
Corporations (Second
Amendment) Bill, 2020
(L.A. Bill No. 45 of 2020


23.09.2020 | 25.09.2020 | 26.09.2020


po


OO ಮ


20 ಕರ್ನಾಟಕ ರಾಜ್ಯ ಸಿವಿಲ್‌ ಸೇವಗಳ | 23.09.2020 | 25.09.2020
(ಕಾಲೇಜು ಶಿಕ್ಷಣ ಇಲಾಖೆಯ
ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ)
(ನಿರಸನಗೊಳಿಸುವ) ವಿಧೇಯಕ,
2020 (2020ರ ವಿ.ಸ.ವಿ.ಸಂಖ್ಯೆ:46)
The Karnataka State Civil
Service (Regulation of
Transfer of Staff of
Department of Collegiate


Education) (Amendment)
Bill, 2020 (L.A. Bill No. 46


of 2020
ಕರ್ನಾಟಕ ರಾಜ್ಯ ಸಿವಿಲ್‌ ಸೇವಗಳ


(ತಾಂತ್ರಿಕ ಶಿಕ್ಷಣ ಇಲಾಖೆಯ
ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ)
(ನಿರಸನಗೊಳಿಸುವ) ವಿಧೇಯಕ,
2020 (2020ರ ಏಿ.ಸ.ವಿ.ಸಂಖ್ಯೆ:47)
The Karnataka State Civil
Service (Regulation of
Transfer of Staff of
Department of Technical
Education (Repeal)
(Amendment) Bill, 2020


(L.A. Bill No. 47 of 2020)
ಕರ್ನಾಟಕ ಸರಕು ಮತ್ತು ಸೀ


ತೆರಿಗೆ (ತಿದ್ದುಪಡಿ) ವಿಧೇಯಕ,
2020 (2020ರ ವಿ.ಸ.ವಿ.ಸಂಖ್ಯೆ:48)
The Karnataka Goods and
Services Tax (Amendment)
Bill, 2020 (L.A. Bill No. 48
of 2020


26.09.2020


23.09.2020 | 25.09.2020 | 26.09.2020


ಮತ್ತು ದಾವೆಗಳ ಮೌಲ್ಯ ನಿರ್ಣಯ
(ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ;49)


The Karnataka Court fees and
Suits Valuation
(Amendment) Bill, 2020
(L.A. Bill No. 49 of 2020)
ಪ್ರಾಧಿಕಾರ
(ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ:50)


The Bangalore Development
Authority (Amendment) Bill,
2020 (L.A. Bill No. 50 of
2020)


25 |ಕರ್ನಾಟಕ ಧನವಿನಿಯೋಗ (ಸಂಖ್ಯ- 24.09.2020 | 24.09.2020 26.09.2020 |
3) ವಿಧೇಯಕ, 2020 (2020ರ |
ವಿ.ಸ.ವಿ.ಸಂಖ್ಯೆ:5)) | |
The Karnataka Appropriation | |
(No.3) Bill, 2020 (L.A. Bill |
No. 51 of 2020)

ಕರ್ನಾಟಕ ಸಾದಿಲ್ಲಾರು ನಿಧಿ 24.09.2020 ; 24.09.2020


(ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ52)

The Karnataka Contigency
Fund (Amendment) Bill,
2020 (L.A. Bill No. 52 of


26.09.2020


23.09.2020 | 25.09.2020


ರಾಟ್‌ ಕರಾ ಷಾೆಗಾರಿ
(ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ:53)

The Karnataka Fiscal
Responsibility
(Amendment) Bill, 2020
(L.A. Bill No. 53 of 2020)
28 ಕರ್ನಾಟಕ ಕೃಷಿ ಉತ್ತನ್ನ ಮಾರುಕಟ್ಟ 23.09.2020 | 26.09.2020
(ನಿಯಂತ್ರಣ ಮತ್ತು ಅಭಿವೃ

(ತಿದ್ದುಪಡಿ) ವಿಧೇಯಕ, 2020

(2020ರ ವಿ.ಸ.ವಿ.ಸಂಖ್ಯೆ55)


The Karnataka Agricultural

Produce Marketing
(Regulation and
Development) (Amendment)
Bill, 2020 (L.A. Bill No. 55
of 2020 |
29 |ಕರ್ನಾಟಕ ಭೂ ಕಂದಾಯ | 24.09.2020 | 25.09.2020 | 26.09.2020 '

(ಎರಡನೇ ತಿದ್ದುಪಡಿ) ವಿಧೇಯಕ, | | |
2020 (2020ರ ವಿ.ಸ.ವಿ.ಸಂಖ್ಯೆ57) | |


The Karnataka Land Revenue | |
(Second Amendment) Bill, |

2020 (L.A. Bill No. 57 of | |
2020)


ಕೈಗಾರಿಕಾ ವಿವಾದಗಳು ಮತ್ತು ಇತರ 25.09.2020
ಕೆಲವು ಕಾನೂನುಗಳ (ಕರ್ನಾಟಕ
ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ:58)

The Industrial Disputes and
Certain Other Laws
(Karnataka Amendment) Bill,
2020 (L.A. Bill No. 58 of
2020)


|
|


23.09.2020


2020 (2020ರ ವಿ.ಸ.ವಿ.ಸಂಖ್ಯೆ:59)


Lakkundi Heritage Area
Development Authority Bill,
2020


|
0 | 25.09.2020


25.09.2020 | 26.09.2
26.09.2020 | 26.09.2020


(ಮೂರನೇ ತಿದ್ದುಪಡಿ) ವಿಧೇಯಕ,
2020 (2020ರ ವಿ.ಸ.ವಿ.ಸಂಖ್ಯೆ:60)
The Karnataka Muncipal
Corporations (Third
Amendment) Bill, 2020


L.A. Bill No. 60 of 2020
ಕರ್ನಾಟಕ ರಾಜ್ಯ ಸಿವಿಲ್‌ ಸೇ


(ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ:61)

The Karnataka State Civil
Services (Amendment) Bill,
2020 (L.A. Bill No. 61 of


ಕ ಪಟ್ಟಣ ಮತ್ತು
ಗ್ರಾಮಾಂತರ ಯೋಜನೆ (ಮೂರನೇ
ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ:62)

The Karnataka Town and
Country Planning (Third
Amendment) Bill, 2020 (L.A.
Bill No. 62 of 2020
ಕರ್ನಾಟಕ ಪಟ್ಟಣ ಮತ್ತು
ಗ್ರಾಮಾಂತರ ಯೋಜನೆ (ನಾಲ್ಕನೇ
ತಿದ್ದುಪಡಿ) ವಿಧೇಯಕ, 2020
(2020ರ ವಿ.ಸ.ವಿ.ಸಂಖ್ಯೆ:64)

The Karnataka Town and
Country Planning (Fourth
Amendment) Bill, 2020 (L.A.
Bill No. 64 of 2020


ವಿಧಾನಸಭೆಯಲ್ಲಿ ಪುನರ್‌ ಪರ್ಯಾಲೋಚನೆಗೊಂಡು ಅಂಗೀಕಾರಗೊಂಡ ವಿಧೇಯಕಗಳು


01 | ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟಿ ವಿಧಾನಸಭೆಯಿಂದ
(ನಿಯಂತಣ ಮತು ಅಭಿವೃದ್ದಿ) (ತಿದುಪಡಿ) ಅಂಗೀಕೃತವಾದ ರೂಪದಲ್ಲಿ
೪ Q ಮತ್ತು ವಿಧಾನ ಪರಿಷಕ್ತಿನಲ್ಲಿ
ವಿಧೇಯಕ, 2020 (2020ರ ತಿದ್ದುಪಡಿಯೊಂದಿಗೆ 3
ವಿ.ಸ.ವಿ.ಸಂಖ್ಯೆ:23) ಅಂಗೀಕಾರ ರೂಪದಲ್ಲಿರುವ
The Kamataka Agricultural 24.03.2020 24.03.2020 ———— ರ
Produce Marketing (Regulation ದಿನಾಂಕ:25.09 2020
and Develoment) (Amendment) ರಂದು ಪುನರ್‌
Bill, 2020 (L.A. Bill No. 23 of! ಪರ್ಯಾಲೋಚಿಸಿ
2020) ಅಂಗೀಕರಿಸಲಾಯಿತು, |
02 | ಕರ್ನಾಟಕ ಕಲವು ಅಧಿನಿಯಮಗಳು ಮತ್ತು ನಿಧಾನಸಭೆಯಂದ
ಗಗ n ೧ಸ್‌ಗಲಿ
ಪ್ರಾದೇಶಿಕ ಕಾನೂನುಗಳನ್ನು it sec ois
ನ ಪಿ ಮತು ವಿಧಾನ ಪರಿಷತಿನಲ್ಲಿ
ನಿರಸನಗೊಳಿಸುವ ವಿಧೇಯಕ, 2020 ತಿದ್ದಸಡಿಯೊಂದಿಗೆ
(2020ರ ವಿ.ಸ.ವಿ.ಸಂಖ್ಯೆ:24) ಅಂಗೀಕಾರ ರೂಪದಲ್ಲಿರುವ
K 20.03.2020 | 24.03.2020 | --—- |ಸದರಿ ವಿಧೇಯಕವನ್ನು!
The Kamataka Repealing of | ವಿಧಾನಸಭೆಯಲ್ಲಿ
Certain enactments and Regional | ದಿನಾಂಕ:25.09.2020
Laws Bill, 2020 (L.A. Bill No. 24 | ರಂದು ಪುನರ್‌
of 2020) ಪರ್ಯಾಲೋಚಿಸಿ
ಅಂಗೀಕರಿಸಲಾಯಿತು.


ವಿಧಾನ ಸಭೆಯಲ್ಲಿ ಹಿಂಪಡೆಯಲಾದ ವಿಧೇಯಕಗಳು


ಕ 7 ದ್ಗುಪಕು)

ವಿಧೇಯಕ, 2015 (2015ರ ವಿಧಾನಸಭೆಯಲ್ಲಿ ಸದರಿ
ವಿಸ.ವಿ.ಸಂಖ್ಯೆ;20) ವಿಧೇಯಕವನ್ನು

The Karnataka Muncipalities RIL LES

A ಹಿಂಪಡೆಯಲಾಯಿತು.

(Amendment) Bill, 2015 (L.A.
Bill No. 20 of 2015)
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧಾನಸಭಿಯಲ್ಲಿ
ವಿದೇಯಕ, 2017 (2017ರ ದಿನಾಂಕ:23.02.2018ರಂದು
ಪುನರ್‌ ಪರ್ಯಾಲೋಚಿಸಿ
ವಿಸ.ವಿ.ಸಂಖ್ಯೇ2

ಸನ್ಮಿಸಂಪ್ಯಂಕ] °° | 14062017 | 20.06.2017 | 21.02.2018 | ಅಂಗೀಕರಿಸಿದ ಸದರಿ ಸದರಿ
The Karnataka State Universities | ವಿಧೇಯಕವನ್ನು


Bill, 2017 (L.A. Bill No. 26 of | ದಿನಾಂಕ:22.09.2020ರಂದು
2017) ಹಿಂಪಡೆಯಲಾಯಿತು.


20.04.2015 20.04.2015 | 22.07.2015


ವಿಧಾನ ಪರಿಷತ್ತಿನಲ್ಲಿ ಹಿಂಪಡೆಯಲಾದ ವಿಧೇಯಕಗಳು


o1T ಕರ್ನಾಟಕ ಗ್ರಾಮ ಸ್ಥರಾಜ್‌ ಮ್ರ |
ಪಂಚಾಯತ್‌ ರಾಜ್‌ (ತಿದ್ದುಪಡಿ)
ವಿಧೇಯಕ, 2020 (2020ರ | en
ಏಸ.ಮಿಸಂಖ್ಯಡ2) 18.03.2020 [24.03.2020 -——- | ದಿನಾಂಕಃ22.09.2020.
Karnataka Gram Swaraj and ರಂದು |
anchayat Raj (Amendment) ಹಿಂಪಡೆಯಲಾಗಿದೆ.


Bill, 2020 (L.A. Bill No.


22 of 2020) |
0 ಕರ್ನಾಟಕ ಕಪಪ ವಾಹ III | 050


ಘಟಕಗಳ (ಕ್ರಷರ್‌ಗಳ) ನಿಯಂತ್ರಣ


F |


4 )
ವಿಧಾನಪರಿಷತ್ತಿನಲ್ಲಿ


(ತಿದ್ದುಪಡಿ) ವಿಧೇಯಕ, 2020 ಸದರಿ ಸದರಿ
(2020ರ ವಿ.ಸ.ವಿ.ಸಂಖ್ಯೆ:25) po ವಿಧೇಯಕವನ್ನು
The Karnataka Regulation of ರ 22.09.2020
Stone Crushers | ಹಿಂಪಡೆಯಲಾಗಿದೆ.
(Amendment) Bill, 2020| |

(L.A. Bill No. 25 0f2020) | | |e


32. ವಿಧಾನ ಪರಿಷತ್ತಿನ 141ನೇ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ


ವಿಧಾನ ಪಂಪಿನ 141ನೇ ಅಧಿವೇಶನದಲ್ಲಿ ನಡೆದಿರುವ ಕಾರ್ಯಕಲಾಪಗಳ ವಿವರವನ್ನು ಸದನಕ್ಕೆ
ತಿಳಿಸಲು ಇಚ್ಛಿಸುತ್ತೇನೆ. ಸ್ತುತ ಅಧಿವೇಶನವು ದಿನಾಂಕ:21.09.2020 ರಿಂದ 27.09.2020 ರವರೆಗೆ 'ಒಟ್ಟು 07
ದಿನಗಳು ನರಕ 39. 05 "ಗಂಟೆ ನಡೆಸಲಾಗಿರುತ್ತದೆ.


ಕಳೆದ ಅಧಿವೇಶನದಿಂದೀಚೆಗೆ ನಿಧನರಾದ 19 ಗಣ್ಕರುಗಳಿಗೆ ಹಾಗೂ ಕೊರೋನಾ ವೈರಸ್‌
ಕೋವಿಡ್‌-19ರ ಸೋಂಕಿನಿಂದ ದೇಶ ಹಾಗೂ ರಾಜ್ಯದ ಸಾವಿರಾರು ಜನ, ಗಲ್ಪಾನ್‌ ಕಣಿವೆಯಲ್ಲಿ ಭಾರತ
ಹಾಗೂ ಚೀನಾ ಸೇನೆ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾಗಿರುವ ಭಾರತೀಯ ವೀರ ಸೈನಿಕರಿಗೆ
ಹಾಗೂ ಆಗಸ್ಟ್‌ ಮಾಹೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ವಿವಿಧ ಭಾಗಗಳಲ್ಲಿ
ಮೃತಪಟ್ಟಿರುವವರುಗಳಿಗೆ ಸದನವು ತನ್ನ ಸಂತಾಪವನ್ನು ವ್ಯಕ್ತಪಡಿಸಿತು.


ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ ಹಾಗೂ ರಾಜ್ಯಪಾಲರಿಂದ
ಒಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ATMS ಮಂಡಿಸಿದರು.


ಅರ್ಜಿಗಳ ಸಮಿತಿಯಲ್ಲಿ ಪರಿಶೀಲಿಸಲು ಮೂರು ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಯಿತು.


ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಈ ಕೆಳಕಂಡ ವರದಿಗಳನ್ನು
ಸದನದ ಮುಂದೆ ಮಂಡಿಸಲಾಯಿತು.


1. 2018-19ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು (ಸಂಪುಟ 1
ಮತು ೨2).


2. ಮಾರ್ಚ್‌ 2019ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ
ಲೆಕ್ಕಪರಿಶೋಧನಾ ವರದಿ ( ಸಂಖ್ಯೆಃ)


3. ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆಯ ಅನುಷಾ ನದ ಮೇಲಿನ ಕಾರ್ಯ ನಿರ್ವಹಣಾ ಲೆಕ್ಕ
ಪರಿಶೋಧನೆ ವರದಿ.


ಹಾಗೂ


ಕರ್ನಾಟಕ ರಾಜ್ಯ ಅಲ್ಲಸಂಖ್ಯಾತರ ಆಯೋಗದ ವಿಶೇಷ ವರದಿಯನ್ನು, 2020ನೇ ಸಾಲಿನ ಬಿಬಿಎಂಪಿ
ವಿಧೇಯಕವನ್ನು ಪರಿಶೀಲಿಸಲು ರಚಿಸಲಾಗಿರುವ ಜಂಟಿ ಪರಿಶೀಲನಾ ಸಮಿತಿಯ ವಿಶೇಷ ವರದಿಯನ್ನು,


2019-20 ನೇ ಸಾಲಿನ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ
ಸಮಿತಿಯ 32ನೇ ವರದಿಯನ್ನು, 2019-20ನೇ ಸಾಲಿನ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ
ಕಲ್ಯಾಣ ಸಮಿತಿಯ 3ನೇ ವರದಿಯನ್ನು, 2019-20ನೇ ಸಾಲಿನ ಹಿಂದುಳಿದ ವರ್ಗಗಳ ಮತ್ತು ಅಲ್ಲಸಂಖ್ಯಾತರ
ಕಲ್ಯಾಣ ಸಮಿತಿಯ 2ನೇ ವರದಿಯನ್ನು, 2019-20ನೇ ಸಾಲಿನ ಅನುಸೂಚಿತ ಜಾತಿ ಮತ್ತು ಅನುಸೂಚಿತ
ಪಂಗಡಗಳ ಕಲ್ಯಾಣ ಸಮಿತಿಯ ವಿಶೇಷ ವರದಿಯನ್ನು, 2019-20ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ
ಸಮಿತಿಯ 4ನೇ ವರದಿಯನ್ನು, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ
ಮೊದಲನೇ ವರದಿ ಇವುಗಳನ್ನು ಸದನದಲ್ಲಿ ಮಂಡಿಸಲಾಯಿತು.


2020-21ನೇ ಸಾಲಿನ ಪೂರಕ ಅಂದಾಜುಗಳ (ಮೊದಲನೇ ಕಂತು) ಹಾಗೂ ಸಭೆಯ
ಮುಂದಿಡಲಾಗುವ ಕಾಗದ ಪತ್ರಗಳ ನಾಲ್ದು ಪಟ್ಟಿಗಳನ್ನು ಮಂಡಿಸಲಾಯಿತು.


ರಾಜ್ಯದಲ್ಲಿರುವ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಷಬ್‌ಗಳ
ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿರುವ ವಿಶೇಷ ಸದನ
ಸಮಿತಿಯು ಹಾಗೂ ಗ್ರಾಮೀಣಾಬಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕುಡಿಯುವ ನೀರು ಮತ್ತು
ನೈರ್ಮಲ್ಯ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣವನ್ನು ಅವ್ಯವಹಾರ ಮಾಡಿರುವ ಸಂಬಂಧ ಪರಿಶೀಲಿಸಿ ವರದಿ
ನೀಡಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯು ವರದಿ ಸಲ್ಲಿಸಲು 6 ತಿಂಗಳ ಕಾಲಾವಕಾಶವನ್ನು
ವಿಸ್ತರಿಸುವ ಪ್ರಸ್ತಾವನೆಗೆ ಸದನದ ಒಪ್ಪಿಗೆ ಪಡೆಯಲಾಯಿತು.

2020-2021ನೇ ಸಾಲಿನ ವಿಧಾನ ಮಂಡಲ/ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಹಾಗೂ
ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ (ಹಂಪಿ), ಕರ್ನಾಟಕ ಸಂಸ್ಕೃತ
ವಿಶ್ವವಿದ್ಯಾಲಯದ ಸೆನೆಟ್‌ಗಳಿಗೆ ಹಾಗೂ ರಾಜ್ಯ ಗಂಥಾಲಯ ಪ್ರಾಧಿಕಾರಕ್ಕೆ ಚುನಾವಣೆ ನಡೆಸಲು ದಿನಾಂಕ
22.09.2020 ರಂದು ಚುನಾವಣಾ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಲಾಯಿತು.


2020-21ನೇ ಸಾಲಿನ ವಿಧಾನ ಮಂಡಲ/ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಚುನಾವಣೆ
ನಡೆಸುವ ಬದಲು ಮಾನ್ಯ ಸದಸ್ಯರುಗಳನ್ನು ನಾಮನಿರ್ದೇಶಿಸಲು ಹಾಗೂ ಕರ್ನಾಟಕ ರಾಜ್ಯಮುಕ್ತ
ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ (ಹಂಪಿ), ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸೆನೆಟ್‌ಗಳಿಗೆ
ಹಾಗೂ ರಾಜ್ಯ ಗಂಥಾಲಯ ಪ್ರಾಧಿಕಾರಕ್ಕೆ ಸದಸ್ಯರನ್ನು ಚುನಾವಣೆ ನಡೆಸುವ ಬದಲು ಮಾನ್ಯ ಸದಸ್ಯರುಗಳನ್ನು
ನಾಮನಿರ್ದೇಶಿಸಲು ಮಾನ್ಯ ಸಭಾಪತಿಯವರಿಗೆ ಅಧಿಕಾರ ನೀಡುವ ಪ್ರಸ್ತಾವನೆಯನ್ನು ಮಂಡಿಸಿ ಸದನದ
ಸಹಮತಿಯನ್ನು ಪಡೆಯಲಾಯಿತು.


ಗಮನ ಸೆಳೆಯುವ ಸೂಚನೆಯಲ್ಲಿ ಚರ್ಚಿಸಲಾದ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಕೈಗೊಂಡಿರುವ
ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ಕುರಿತು ಚರ್ಚಿಸಿ ಸದನದ ಒಪ್ಪಿಗೆ ಪಡೆದು ವಿಶೇಷ ಸದನ
ಸಮಿತಿಯನ್ನು ರಚಿಸಲಾಗಿರುತ್ತದೆ.


“ದಿ ಮೈಸೂರು ಲ್ಯಾಂಪ್ಸ್‌ ವರ್ಕ್ಸ್‌ ಲಿಮಿಟೆಡ್‌ ಸಂಸ್ಥೆ ಹಾಗೂ ಸಂಸ್ಥೆಗೆ ಸೇರಿದ ಸ್ಪತ್ತುಗಳನ್ನು ಯಾವುದೇ
ಕಂಪನಿ, ಕಾಯ್ದೆಯಲ್ಲಿ ಬರುವ ಸರ್ಕಾರಿ ಸಾಮ್ಯದ ಉದ್ದಿಮೆ /ಸಂಸ್ಥೆಗಳು ಸೇರಿದಂತೆ ಯಾವುದೇ ವ್ಯಕ್ತಿಗಳಿಗೆ
ಪರಭಾರೆ ಮಾಡದಂತೆ ನೇರವಾಗಿ ಸರ್ಕಾರವೇ ತನ್ನ ಅಧೀನಕ್ಕೆ ಪಡೆದು ಆಸ್ಪತ್ರೆ ಮಕ್ಕಳ ಪಾರ್ಕ್‌, ಉದ್ಯಾನವನ
ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಬಳಸತಕ್ಕದ್ದು ಎಂಬ ನಿರ್ಣಯವೊಂದನ್ನು ಸದನದಲ್ಲಿ
ಮಂಡಿಸಲಾಯಿತು.


ಪ್ರಸ್ತುತ ಅಧಿವೇಶನದಲ್ಲಿ 1282 ಪ್ರಶ್ನೆಗಳನ್ನು ಸ್ಟೀಕರಿಸಿದ್ದು, ಅದರಲ್ಲಿ 120 ಪ್ರಶ್ನೆಗಳನ್ನು ಚುಕ್ಕೆ ಗುರುತಿನ
ಪ್ರಶ್ನೆಗಳನ್ನಾಗಿ ಅಂಗೀಕರಿಸಿದ್ದು, ಅವುಗಳ ಪೈಕಿ 27 ಪಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು.
ದಿನಾಂಕ:23.09.2020 ರಿಂದ 25.09.2020ರವರೆಗಿನ 45 ಚುಕ್ಕೆ ಗುರುತಿನ ಪ್ರಶ್ನೆಗಳ ಪೈಕಿ 42 ಪ್ರಶ್ನೆಗಳಿಗೆ
ಹಾಗೂ ಲಿಖಿತ ಮೂಲಕ ಉತ್ತರಿಸುವ ಒಟ್ಟು 1162 ಪ್ರಶ್ನೆಗಳ ಪೈಕಿ 614 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರವನ್ನು
ಮಂಡಿಸಲಾಯಿತು.


ನಿಯಮ 72ರಡಿಯಲ್ಲಿ 83 ಸೂಚನೆಗಳನ್ನು ಸ್ಪೀಕರಿಸಿದ್ದು, ಅವುಗಳ ಪೈಕಿ 03 ಸೂಚನೆಗಳು ಸದನದಲ್ಲಿ
ಚರ್ಚೆಯಾಗಿರುತ್ತದೆ. 17+6 ಸೂಚನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು.


ನಿಯಮ 330ರಡಿಯಲ್ಲಿ 47 ಸೂಚನೆಗಳನ್ನು ಸ್ವೀಕರಿಸಿದ್ದು, ಅವುಗಳ ಪೈಕಿ 04 ಸೂಚನೆಗಳು
ಚರ್ಚೆಯಾಗಿರುತ್ತದೆ. 10 ಸೂಚನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು.


ನಿಯಮ 59ರ ಅಡಿಯಲ್ಲಿ 05 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 2 ಸೂಚನೆಗಳನ್ನು
ನಿಯಮ 68ಕ್ಕೆ ಪರಿವರ್ತಿಸಿ ಉತ್ತರಿಸಲಾಯಿತು. ಇನ್ನೆರಡು ಸೂಚನೆಗಳನ್ನು ನಿಯಮ 330ಕ್ಕೆ
ಪರಿವರ್ತಿಸಲಾಗಿರುತ್ತದೆ ಹಾಗೂ ಒಂದು ಸೂಚನೆಯನ್ನು ತಡೆಹಿಡಿಯಲಾಯಿತು.


ನಿಯಮ 58ರ (ಅರ್ಧ ಗಂಟೆ ಚರ್ಚೆ) ಅಡಿಯಲ್ಲಿ ಚರ್ಚಿಸಲು 01 ಸೂಚನೆಯನ್ನು ಸ್ಲೀಕರಿಸಲಾಗಿದ್ದು,
ಸದನದಲ್ಲಿ ಚರ್ಚಿಸಲಾಗಿರುತ್ತದೆ.


ಶೂನ್ಯ ವೇಳೆಯ ಒಟ್ಟು 11 ಪ್ರಸ್ತಾವಗಳ ಪೈಕಿ 03 ಪ್ರಸ್ತಾವನೆಗಳಿಗೆ ಸದನದಲ್ಲಿ ಉತ್ತರವನ್ನು
ಮಂಡಿಸಲಾಯಿತು.


ವಿಧಾನ ಸಭೆಯಿಂದ ಅಂಗೀಕೃತರೂಪದಲ್ಲಿರುವ 37 ವಿಧೇಯಕಗಳಿಗೆ ವಿಧಾನ ಪರಿಷತ್ತು ತನ್ನ
ಸಹಮತಿಯನ್ನು ನೀಡಿರುತ್ತದೆ. ಅವುಗಳಲ್ಲಿ 2 ವಿಧೇಯಕಗಳನ್ನು ತಿದ್ದುಪಡಿಗಳೊಂದಿಗೆ ಅಂಗೀಕರಿಸಿರುತ್ತದೆ
ಹಾಗೂ ಮೂರು ವಿಧೇಯಕಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಒಂದು ವಿಧೇಯಕ ತಿರಸ್ಕ್ಯತವಾಗಿರುತ್ತದೆ.


ಮಾನ್ಯ ಸಭಾನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಮಾತನಾಡಿದ ನಂತರ:-
ಮಾನ್ಯ ಮುಖ್ಯಮಂತ್ರಿಗಳಿಗೆ, ಮಾನ್ಯ ಉಪ ಮುಖ್ಯಮಂತ್ರಿಗಳಿಗೆ ಸಭಾನಾಯಕರಿಗೆ, ವಿರೋಧ ಪಕ್ಷದ


ನಾಯಕರಿಗೆ, ಎಲ್ಲಾ ಮಂತ್ರಿ ವರ್ಗದವರಿಗೆ, ಸರ್ಕಾರದ ಮುಖ್ಯ ಸಚೇತಕರಿಗೆ, ವಿರೋಧ ಪಕ್ಷದ
ಮುಖ್ಯಸಚೇತಕರಿಗೆ, ಪತ್ರಿಕಾ ಹಾಗೂ ಮಾಧ್ಯಮ ವರದಿಗಾರರಿಗೆ, ವಿಧಾನ ಪರಿಷತ್ತಿನ ಸಚಿವಾಲಯದ
ಅಧಿಕಾರಿ/ನೌಕರವರ್ಗದವರಿಗೆ ಮತ್ತು ಸರ್ಕಾರದ ಎಲ್ಲಾ ಅಧಿಕಾರಿ/ನೌಕರರ ವೃಂದದವರಿಗೆ ಸದನದ
ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಸಹಕರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತಾ,
ಸದನವನ್ನು ಅನಿರ್ದಿಷ್ಟಕಾಲದವರೆಗೆ ಮುಂದೂಡುತ್ತಿದ್ದೇನೆ.


33. ವಿಧಾನ ಪರಿಷತ್ತಿನ 141ನೇ ಅಧಿವೇಶನದಲ್ಲಿ ಮಂಡಿಸಲಾದ / ಅಂಗೀಕರಿಸಲಾದ ವಿಧೇಯಕಗಳ ಪಟ್ಟಿ


(ದಿನಾಂಕ:21.09.2020 ರಿಂದ 26.09.2020 ರವರೆಗೆ ನಡೆದ ಅಧಿವೇಶನ)


ವಿಧೇಯಕಗಳ ವಿವರ


w
© lu


ವಿಧೇಯಕದ
ಹೆಸರು


g


ವಿಸ ವಿಸ ವಿಪ
ಮಂಡಿಸಿರುವ | ಅಂಗೀಕರಿಸಿರು ಮಂಡಿಸಿರುವ
ದಿನಾಂಕ ವ ದಿನಾಂಕ ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ



ಸಂಖ್ಯೆ.11/2020


ಕರ್ನಾಟಕ ಪಟ್ಟಣ
ಮತ್ತು ಗ್ರಾಮಾಂತರ
ಯೋಜನೆ
(ತಿದ್ದುಪಡಿ)
ವಿಧೇಯಕ,2020


The
Karnataka
Town and
Country
Planning
(Amendment)
Bill, 2020


02.03.2020 | 23.03.2020 23.09.2020


23.09.2020



ಸಂಖ್ಯೆ.14/2020


ಕರ್ನಾಟಕ ರೇಸ್‌
ಕೋರ್ಸುಗಳಿಗೆ
ಪರವಾನಿಗಿ
ನೀಡುವ
(ತಿದ್ದುಪಡಿ)
ವಿಧೇಯಕ,2020


The
Karnataka
Race Courses
Licensing
(Amendment)
Bill, 2020


02.03.2020 | 23.03.2020 23.09.2020


23.09.2020



ಸಂಖ್ಯೆ.16/2020


ಸರ್ವಜ್ಞ ಕೇತ


ಖಿ


ವಿಧೇಯಕ,2020


The Sarvajna
Kshetra
Development
Authority Bill,
2020


24.03.2020 | 24.03.2020 | 23.09.2020


23.09.2020


w
© lu


ವಿಧೇಯಕದ
ಹೆಸರು


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


ವಿ
ಸಂಖ್ಯೆ.07/2020
ಕೈಗಾರಿಕಾ
ವಿವಾದಗಳ
(ಕರ್ನಾಟಕ
ತಿದ್ದುಪಡಿ)
ವಿಧೇಯಕ,2020
The
Industrial
Disputes
(Karnataka


Amendment)
Bill,2020


23.03.2020


23.03.2020


23.09.2020


23.09.2020



ಸಂಖ್ಯೆ.08/2020


ಕರ್ನಾಟಕ
ಅಂಗಡಿಗಳು ಮತ್ತು
ವಾಣಿಜ್ಯ ಸಂಸೆಗಳ
[a
(ತಿದ್ದುಪಡಿ)
ವಿಧೇಯಕ,2020


The
Karnataka
Shops and
Commercial
Establish
ments
(Amendment)
Bill,2020

ವಿ
ಸಂಖ್ಯೆ.23/2020


ಕರ್ನಾಟಕ ಕೃಷಿ
ಉತ್ಸನ್ನ ಮಾರುಕಟ್ಟೆ
ವ್ಯವಹಾರ
(ನಿಯಂತ್ರಣ
ಮತ್ತು ಅಭಿವೃದ್ಧಿ)
(ತಿದ್ದುಪಡಿ)
ವಿಧೇಯಕ,2020


The Karnataka
Agricultural
Produce
Marketing
(Regulation
and
Development)
(Amendment)
Bill, 2020


23.03.2020


24.03.2020


23.03.2020


24.03.2020


23.09.2020


23.09.2020


23.09.2020


23.09.2020


w
© lu


ವಿಧೇಯಕದ
ಹೆಸರು


g


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ



ಸಂಖ್ಯೆ.24/2020


ಕರ್ನಾಟಕ ಕೆಲವು
ಅಧಿನಿಯಮಗಳು
ಮತ್ತು ಪ್ರಾದೇಶಿಕ
ಕಾನೂನುಗಳನ್ನು
ನಿರಸನಗೊಳಿಸುವ
ವಿಧೇಯಕ,2020


The Karnataka
Repealing of
Certain
Enactments
and Regional
Laws Bill,
2020


24.03.2020


24.03.2020


23.09.2020


23.09.2020


ಏ.ಸ.29/2020


ಕರ್ನಾಟಕ ವಿಧಾನ
ಮಂಡಲದ
ಸಂಬಳಗಳು,
ನಿವೃತ್ತಿ ವೇತನಗಳು
ಮತ್ತು ಭತ್ಯೆಗಳು
ಹಾಗೂ ಕೆಲವು
ಇತರ ಕಾನೂನು
(ತಿದ್ದುಪಡಿ)
ವಿಧೇಯಕ, 2020
The Karnataka
Legislature
Salaries,
Pensions and
Allowances
and Certain
Other Law
(Amendment)
Bill, 2020


22.09.2020


22.09.2020


24.09.2020


24.09.2020


ವಿ.ಸಂ.27/2020


ಕರ್ನಾಟಕ
ಭಿಕ್ಷಾಟನೆ ನಿಷೇಧ
(ತಿದ್ದುಪಡಿ)
ವಿಧೇಯಕ, 2020


The Karnataka
Prohibition of
Beggary
(Amendment)
Bill, 2020


22.09.2020


22.09.2020


24.09.2020


24.09.2020


ವಿ.ಸಂ.38/2020


ಕರ್ನಾಟಕ ಖಾಸಗಿ
ವೈದ್ಯಕೀಯ


22.09.2020


22.09.2020


24.09.2020


24.09.2020


w
© la


ವಿಧೇಯಕದ
ಹೆಸರು





ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


12.


ಸಂಸ್‌ಗಳ
(ತಿದ್ದುಪಡಿ)
ವಿಧೇಯಕ,2020


The Karnataka
Private
Medical
Establishment
S
(Amendment)
Bill, 2020
ಏ.ಸ.34/2020
ಕನ್ನಡ
ವಿಶ್ವವಿದ್ಯಾನಿಲಯ
ಮತ್ತು ಇತರ
ಕೆಲವು
ಕಾನೂನುಗಳ
(ತಿದ್ದುಪಡಿ)
ವಿಧೇಯಕ, 2020


The Kannada
University and
Certain other
Laws
(Amendment)
Bill, 2020
ವ.ಸಂ.30/2020


ಕರ್ನಾಟಕ
ಲೋಕಾಯುಕ್ತ
(ಎರಡನೇ
ತಿದ್ದುಪಡಿ)
ವಿಧೇಯಕ,2020
The Karnataka
Lokayukta
(Second
Amendment)
Bill, 2020


22.09.2020


23.09.2020


22.09.2020


23.09..2020


24.09.2020


24.09.2020


24.09.2020


24.09.2020


ವಿ.ಸ೦.32/2020
ಕರ್ನಾಟಕ ರಾಜ್ಯ
ಸಿವಿಲ್‌ ಸೇವೆಗಳ
(ಸಾರ್ವಜನಿಕ
ವಲಯದ
ಸಂಸ್ಥೆಗಳ ನೌಕರರ
ಸೇವೆಗಳನ್ನು
ಸಾರ್ವಜನಿಕ
ಸೇವೆಗೆ
ವಿಲೀನಗೊಳಿಸುವು
ದಕ್ಕೆ ನಿಷೇಧ)
ವಿಧೇಯಕ, 2020


23.09.2020


23.09..2020


24.09.2020


24.09.2020


w
© lu


ವಿಧೇಯಕದ
ಹೆಸರು


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


The Karnataka
State Civil
Services
(Prohibition of
Absorption of
the Services of
the Employees
of
Establishment
s in Public
Sector in to
Public
Services) Bill,
2020


ವಿ
ಸಂಖ್ಯೆ.35/2020
ಕರ್ನಾಟಕ ರಾಜ್ಯ
ಮುಕ್ತ
ವಿಶ್ವವಿದ್ಯಾನಿಲಯ
(ತಿದ್ದುಪಡಿ)
ವಿಧೇಯಕ, 2020


The Karnataka
State Open
University
(Amendment)
Bill, 2020


23.09.2020


23.09..2020


24.09.2020


24.09.2020


ವಿ.ಸಂ.31/2020
ಕರ್ನಾಟಕ ಪಟ್ಟಣ
ಮತ್ತು
ಗ್ರಾಮಾಂತರ
ಯೊಜನೆ
(ಎರಡನೇ
ತಿದ್ದುಪಡಿ)
ವಿಧೇಯಕ, 2020
The Karnataka
Town and
Country
Planning
(Second
Amendment)
Bill, 2020


23.09.2020


23.09..2020


24.09.2020


24.09.2020



ಸಂಖ್ಯೆ.33/2020


ಕರ್ನಾಟಕ


ಕೈಗಾರಿಕೆಗಳ


(ಸೌಲಭ್ಯ)
(ತಿದ್ದುಪಡಿ)


23.09.2020


23.09..2020


25.09.2020


25.09.2020


w
© lu


ವಿಧೇಯಕದ
ಹೆಸರು


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


ವಾ್‌ 200


The Karnataka
Industrie
(Facilitation)
(Amendment)
Bill, 2020


ಏ.ಸಂ.28/2020
ಕರ್ನಾಟಕ
ಪೌರಸಭೆಗಳ
(ತಿದ್ದುಪಡಿ)
ವಿಧೇಯಕ, 2020
The Karnataka
Municipalities
(Amendment)
Bill, 2020


23.09.2020


23.09..2020


25.09.2020


25.09.2020



ಸಂಖ್ಯೆ.60/2020
ಕರ್ನಾಟಕ ನಗರ
ಪಾಲಿಕೆಗಳ
(ಮೂರನೇ
ತಿದ್ದುಪಡಿ)
ವಿಧೇಯಕ,2020
The Karnataka
Municipal
Corporations
(Third
Amendment)
Bill, 2020


23.09.2020


23.09..2020


25.09.2020


25.09.2020


20


ವಿ.ಸಂ.44/2020
ಕರ್ನಾಟಕ
ಸಾಂಕ್ರಾಮಿಕ
ರೋಗಗಳ
ವಿಧೇಯಕ,2020


The Karnataka
Epidemic
Diseases Bill,
2020

ವಿ
ಸಂಖ್ಯೆ.51/2020


ಕರ್ನಾಟಕ
ಧನವಿನಿಯೋಗ
(ಸಂಖ್ಯೆ.3)
ವಿಧೇಯಕ, 2020
The Karnataka
Appropriation
(No.3) Bill,
2020


23.09.2020


24.09.2020


23.09..2020


24.09.2020


25.09.2020


26.09.2020


25.09.2020


26.09.2020


w
© lu


ವಿಧೇಯಕದ
ಹೆಸರು


gy


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


21


ವಿ.ಸಂ.52/2020


ಕರ್ನಾಟಕ
ಸಾದಿಲ್ದಾರು ನಿಧಿ
(ತಿದ್ದುಪಡಿ)
ವಿಧೇಯಕ, 2020


The Karnataka
Contingency
Fund
(Amendment)
Bill, 2020


24.09.2020


24.09.2020


26.09.2020


26.09.2020


22


ವಿ.ಸ.50/2020


(ತಿದ್ದುಪಡಿ)
ವಿಧೇಯಕ,2020


The Bangalore
Development
Authority
(Amendment)
Bill, 2020


25.09.2020


25.09.2020


26.09.2020


26.09.2020


23



ಸಂಖ್ಯೆ.48/2020


ಕರ್ನಾಟಕ ಸರಕು
ಮತ್ತು ಸೇವೆಗಳ
ತೆರಿಗೆ

(ತಿದ್ದುಪಡಿ)
ವಿಧೇಯಕ, 2020


The Karnataka
Good and
Services Tax
Amendment)
Bill, 2020


25.09.2020


25.09.2020


26.09.2020


26.09.2020


24



ಸಂಖ್ಯೆ.53/2020


ಕರ್ನಾಟಕ ಆರ್ಥಿಕ
ಹೊಣೆಗಾರಿಕೆ
(ತಿದ್ದುಪಡಿ)
ವಿಧೇಯಕ,2020


The Karnataka
Fiscal
Responsibility
(Amendment)
Bill, 2020


25.09.2020


25.09.2020


26.09.2020


26.09.2020


w
© lu


ವಿಧೇಯಕದ
ಹೆಸರು


gy


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ


ಅಂಗೀಕರಿಸಿರುವ
ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


25



ಸಂಖ್ಯೆ.45/2020


ಕರ್ನಾಟಕ
ನಗರಪಾಲಿಕೆಗಳ
(ಎರಡನೇ
ತಿದ್ದುಪಡಿ)
ವಿದೇಯಕ,2020
The Karnataka
Municipal
Corporations
(Second
Amendment)
Bill,2020


25.09.2020


25.09.2020


26.09.2020


26.09.2020


26


ವಿ.ಸಂ೦.62/2020


ಕರ್ನಾಟಕ ಪಟ್ಟಣ
ಮತ್ತು
ಗ್ರಾಮಾಂತರ
ಯೋಜನೆ
(ಮೂರನೇ
ತಿದ್ದುಪಡಿ)
ವಿಧೇಯಕ, 2020
The Karnataka
Town and
Country
Planning
(Third
Amendment)
Bill, 2020


25.09.2020


25.09.2020


26.09.2020


26.09.2020


27


ವಿ. ಸಂ.46/2020


ಕರ್ನಾಟಕ ರಾಜ್ಯ
ಸಿವಿಲ್‌ ಸೇವೆಗಳ
(ಕಾಲೇಜು ಶಿಕ್ಷಣ
ಇಲಾಖೆಯ
ಸಿಬ್ಬಂದಿಯ
ವರ್ಗಾವಣೆ
ನಿಯಂತ್ರಣ)
(ನಿರಸನ
ಗೊಳಿಸುವ)
ವಿಧೇಯಕ, 2020


The Karnataka
State Civil
Service
(Regulation of
Transfer of
Staff of
Department of
Collegiate


25.09.2020


25.09.2020


26.09.2020


26.09.2020


w
© la


ವಿಧೇಯಕದ
ಹೆಸರು


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


Education)
(Repeal) Bill,
2020


28


ಏ.ಸಂ.41/2020
ಕರ್ನಾಟಕ ಸ್ಟಾಂಪು
(ತಿದ್ದುಪಡಿ)
ವಿಧೇಯಕ, 2020
The Karnataka
Stamp


(Amendment)
Bill, 2020


25.09.2020


25.09.2020


26.09.2020


26.09.2020


29


30


ವಿ
ಸಂಖ್ಯೆ.57/2020
ಕರ್ನಾಟಕ ಭೂ
ಕಂದಾಯ
(ಎರಡನೇ
ತಿದ್ದುಪಡಿ)
ವಿಧೇಯಕ, 2020
The Karnataka
Land Revenue
(Second
Amendment)
Bill, 2020

ವಿ. ಸಂ.
59/2020
ಲಕ್ಕುಂಡಿ
ಪಾರಂಪರಿಕ
ಪ್ರದೇಶ ಅಭಿವೃದ್ಧಿ
ಪ್ರಾಧಿಕಾರ
ವಿಧೇಯಕ, 2020
Lakkundi
Heritage Area
Development
Authority Bill,
2020


25.09.2020


25.09.2020


25.09.2020


25.09.2020


26.09.2020


26.09.2020


26.09.2020


26.09.2020


31


ಏ.ಸ.47/2020
ಕರ್ನಾಟಕ ರಾಜ್ಯ
ಸಿವಿಲ್‌ ಸೇವೆಗಳ
(ತಾಂತ್ರಿಕ ಶಿಕ್ಷಣ
ಇಲಾಖೆಯ
ಸಿಬ್ಬಂದಿಯ
ವರ್ಗಾವಣೆ
ನಿಯಂತ್ರಣ)
(ನಿರಸನ
ಗೊಳಿಸುವ)
ವಿಧೇಯಕ, 2020


25.09.2020


25.09.2020


26.09.2020


26.09.2020


w
© lu


ವಿಧೇಯಕದ
ಹೆಸರು


gy


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


The Karnataka
State Civil
Services
(Regulation of
Transfer of
Staff of
Department of
Teachnical
Education)
(Repeal) Bill,
2020


32


ವಿ
ಸಂಖ್ಯೆ.49/2020
ಕರ್ನಾಟಕ
ನ್ಯಾಯಾಲಯ
ಶುಲ್ಕಗಳು ಮತ್ತು
ದಾವೆಗಳ
ಮೌಲ್ಯನಿರ್ಣಯ
(ತಿದ್ದುಪಡಿ)
ವಿಧೇಯಕ, 2020
The Karnataka
Court Fees
and Suits
Valuation
(Amendment)
Bill, 2020


25.09.2020


25.09.2020


26.09.2020


26.09.2020


33


34


ವಿ.ಸ.37/2020
ಕರ್ನಾಟಕ ಗ್ರಾಮ
ಸ್ಪರಾಜ್‌ ಮತ್ತು
ಪಂಚಾಯತ್‌
ರಾಜ್‌ (ತಿದ್ದುಪಡಿ)
ವಿಧೇಯಕ, 2020
The Karnataka
Gram Swaraj
and Panchayat
Raj
(Amendment)
Bill, 2020

ವಿ ಸ.64/2020
ಕರ್ನಾಟಕ ಪಟ್ಟಣ
ಮತ್ತು
ಗ್ರಾಮಾಂತರ
ಯೋಜನೆ
(ನಾಲ್ಕನೇ
ತಿದ್ದುಪಡಿ)
ವಿಧೇಯಕ, 2020
The Karnataka
Town and


25.09.2020


26.09.2020


26.09.2020


26.09.2020


26.09.2020


26.09.2020


26.09.2020


26.09.2020


w
© lu


ವಿಧೇಯಕದ
ಹೆಸರು


gy


ವಿಸ
ಮಂಡಿಸಿರುವ
ದಿನಾಂಕ


ವಿಸ
ಅಂಗೀಕರಿಸಿರು
ವ ದಿನಾಂಕ


ವಿಪ


ಮಂಡಿಸಿರುವ
ದಿನಾಂಕ


ವಿಪ
ಅಂಗೀಕರಿಸಿರುವ


ದಿನಾಂಕ


ರಾಜ್ಯಪಾಲರು/
ರಾಷ್ಟ್ರಪತಿಯವರು
ಅಂಗೀಕರಿಸಿರುವ
ದಿನಾಂಕ


Country
Planning
(Fourth
Amendment)
Bill, 2020


35


ವಿ.ಸ.43/2020
ಕರ್ನಾಟಕ ಭೂ
ಕಂದಾಯ
(ತಿದ್ದುಪಡಿ)
ವಿಧೇಯಕ, 2020


The Karnataka
Land Revenue
(Amendment)

Bill, 2020


26.09.2020


26.09.2020


26.09.2020


26.09.2020


36


ವಿ.ಸ.36/2020


ಕರ್ನಾಟಕ ಕಲ್ಲು
ಹುಡಿ ಮಾಡುವ
ಘಟಕಗಳ
(ಕ್ರಷರ್‌ಗಳ)
ನಿಯಂತ್ರಣ
(ತಿದ್ದುಪಡಿ)
ವಿಧೇಯಕ, 2020


The
Karnataka
Regulation of
Stone
Crushers
(Amendment)
Bill, 2020


23.09.2020


23.09.2020


24.09.2020


24.09.2020


37


ವಿ.ಸಂ40/2020


ಕರ್ನಾಟಕ ಭೂ
ಕಬಳಿಕೆ ನಿಷೇಧ
(ತಿದ್ದುಪಡಿ)
ವಿಧೇಯಕ, 2020


The Karnataka
land Grabbing
Prohibition
(Amendment)
Bill, 2020


26.09.2020


26.09.2020


26.09.2020


26.09.2020


ಹಿಂಪಡೆಯಲಾದ ವಿಧೇಯಕಗಳು


ಕ್ರಸ ವಿಧೇಯಕದ ಹೆಸರು ವಿಧಾನ ಸಭೆಯಲ್ಲಿ ವಿಧಾನ ಪರಿಷತ್ತಿನಲ್ಲಿ

1 (ವಿ.ಸಂ.26/2020) 220920200 | OO ————-

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಹಿಂಪಡೆಯಲಾಗಿದೆ
ವಿಧೇಯಕ,2020

2 (ವಿ.ಸಂ.22/2020) 24.03.2020 22.09.2020
ಕರ್ನಾಟಕ ಗ್ರಾಮ ಸ್ಪರಾಜ್‌ ಮತ್ತು ಅಂಗೀಕರಿಸಲಾಗಿದೆ. ಹಿಂಪಡೆಯಲಾಗಿದೆ
ಪಂಚಾಯತ್‌ ರಾಜ್‌ (ತಿದ್ದುಪಡಿ)
ವಿಧೇಯಕ, 2020
The Karnataka Gram
Swaraj and Panchayat Raj
(Amendment) Bill, 2020

3 ವಿ.ಸಂ25/2020) 24.03.2020 22.09.2020
ಕರ್ನಾಟಕ ಕಲ್ಲು ಪುಡಿ ಮಾಡುವ (ತಿದ್ದುಪಡಿಯೊಂದಿಗೆ ಹಿಂಪಡೆಯಲಾಗಿದೆ
ಘಟಕಗಳ (ಕೃಷರ್‌ಗಳ) ನಿಯಂತ್ರಣ ಅಂಗೀಕರಿಸಲಾಗಿದೆ.
(ತಿದ್ದುಪಡಿ) ವಿಧೇಯಕ, 2020
The Karnataka Regulation
of Stone Crushers
(Amendment) Bill, 2020

4 (ವಿ ಸಂ. 20/2020) 220920200 | OOOO
ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಹಿಂಪಡೆಯಲಾಗಿದೆ


ವಿಧೇಯಕ,2020


The Karnatak Muicipal
Corporations (Amendment)
Bill, 2020


ವಿಧಾನ ಸಭೆಯಲ್ಲಿ ಅಂಗೀಕಾರವಾಗಿದ್ದು, ವಿಧಾನ ಪರಿಷತ್ತಿನಲ್ಲಿ ಬಾಕಿ ಇರುವ ವಿಧೇಯಕಗಳು


(at
wl
[©)


ವಿಧೇಯಕದ ಹೆಸರು


ವಿಧಾನ ಸಭೆಯಲ್ಲಿ


ಎ ಸ.61/2020

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ
(ತಿದ್ದುಪಡಿ) ವಿಧೇಯಕ,2020
The Karnataka State


Civil Services
(Amendment) Bill,2020


25.09.2020


ವಿ ಸ.55/2020

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ
ವ್ಯವಹಾರ (ನಿಯಂತ್ರಣ ಮತ್ತು
ಅಭಿವೃದ್ಧಿ) (ತಿದ್ದುಪಡಿ)
ವಿಧೇಯಕ,2020


The Karnataka
Agricultural Produce
(Regulation and
Development)
(Amendment) Bill, 2020


26.09.2020


ಪ್ರಕಟಣೆಯನ್ನು

ಪ್ರಕಟಿಸಲಾಯಿತು.
ಕಾರ್ಯಕಲಾಪ ಪಟ್ಟಿಗೆ
ಸೇರಿಸಿಕೊಳ್ಳಲಾಯಿತು.


ಎ ಸ.42/2020

ಕರ್ನಾಟಕ ಭೂ ಸುಧಾರಣೆಗಳ
(ಎರಡನೇ ತಿದ್ದುಪಡಿ)
ವಿಧೇಯಕ,2020


The Karnataka Land
Reforms (Second
Amendment) Bill, 2020


26.09.2020


ಪ್ರಕಟಣೆಯನ್ನು

ಪ್ರಕಟಿಸಲಾಯಿತು.
ಕಾರ್ಯಕಲಾಪ ಪಟ್ಟಿಗೆ
ಸೇರಿಸಿಕೊಳ್ಳಲಾಯಿತು.


ವಿಧಾನ ಸಭೆಯಲ್ಲಿ ಅಂಗೀಕಾರವಾಗಿದ್ದು ವಿಧಾನ ಪರಿಷತ್ತಿನಲ್ಲಿ ತಿರಸ್ವ್ಯತಗೊಂಡಿರುವ ವಿಧೇಯಕಗಳು


(at
wl


ವಿಧೇಯಕದ ಹೆಸರು


ವಿಧಾನ ಸಭೆಯಲ್ಲಿ


ವಿಧಾನ ಪರಿಷತ್ತಿನಲ್ಲಿ





[ey


(ವ.ಸಂ. 58/2020)
ಕೈಗಾರಿಕಾ ವಿವಾದಗಳು ಮತ್ತು
ಕೆಲವು ಇತರ ಕಾನೂನುಗಳ
(ಕರ್ನಾಟಕ ತಿದ್ದುಪಡಿ)
ವಿಧೇಯಕ, 2020


The Industrial Disputes
and Certain Other
Laws (Karnataka
Amendment) Bill,2020


25.09.2020 ಅಂಗೀಕರಿಸಲಾಗಿದೆ.


26.09.2020
ತಿರಸ್ಮತಗೊಂಡಿದೆ.


ಬಿಲ್ಲುಗಳ ಪೈಕಿ,


40 ಬಿಲ್ಲುಗಳು


ತಿರಸ್ಕೃತಗೊಂಡಿರುತ್ತದೆ.


ವಿಧಾನ ಸಭೆಯಿಂದ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿಗಾಗಿ ಸ್ವೀಕೃತವಾಗಿದ್ದು 45
ಅಂಗೀಕೃತಗೊಂಡು 2 ಬಿಲ್ಲನ್ನು ಹಿಂಪಡೆಯಲಾಗಿದ್ದು, 1 ಬಿಲ್ಲನ್ನು


ಭಾಗ-2
ಸಂಸತ್ತಿನ ಸುದ್ದಿಗಳು
1. 22ಕ್ಕೆ ರಾಜ್ಯಸಭಾ ನೂತನ ಸದಸ್ಯರಿಗೆ ಪ್ರಮಾಣ


ರಾಜ್ಯಸಭಾ ನೂತನ ಸದಸ್ಯರು ಜುಲೈ 22ರಂದು ಪ್ರಮಾಣವಚನ ಸ್ಟೀಕರಿಸಲಿದ್ದಾರೆ. ಕಳೆದ ತಿಂಗಳು 20
ರಾಜ್ಯಗಳಿಂದ 61 ರಾಜ್ಯಸಭಾ ಸದಸ್ಯರು ಚುನಾಯಿತರಾಗಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಇದೇ ಮೊದಲ
ಬಾರಿಗೆ ರಾಜ್ಯಸಭಾ ಸದನದಲ್ಲಿ ಸಾಮಾಜಿಕ ಅಂತರದೊಂದಿಗೆ ಪ್ರಮಾಣವಚನ ಸ್ಟೀಕರಿಸಲಿದ್ದಾರೆ. ಈ
ಸಮಾರಂಭಕ್ಕೆ ಪ್ರತಿ ಸದಸ್ಯರಿಗೆ ಒಬ್ಬರು ಅತಿಥಿಯನ್ನು ಮಾತ್ರ ಕರೆದುಕೊಂಡು ಬರಲು ಅವಕಾಶ ನೀಡಲಾಗಿದೆ.
ಜುಲೈ 22ರಂದು ಸಮಾರಂಭಕ್ಕೆ ಗೈರಾಗುವ ರಾಜ್ಯಸಭಾ ಸದಸ್ಯರು ಮುಂಗಾರು ರಾಜ್ಯಸಭೆ ಅಧಿವೇಶನದಲ್ಲಿ
ಪ್ರಮಾಣವಚನ ಸ್ವೀಕರಿಸಬಹುದಾಗಿದೆ.


ಆಧಾರ:ಉದಯವಾಣಿ, ದಿನಾ೦ಕ:18.07.2020
2. ನೂತನ 45 ರಾಜ್ಯಸಭಾ ಸದಸ್ಯರಿಂದ ಪ್ರಮಾಣ


ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ 45 ಸದಸ್ಯರಿಗೆ ಉಪ ರಾಷ್ಟಪತಿ
ಹಾಗೂ ಸಭಾಪತಿ ವೆಂಕಯ್ಯನಾಯ್ಡು ಅವರು ಪ್ರಮಾಣವಚನ ಬೋಧಿಸಿದರು.


46 ಸದಸ್ಯರ ಪೈಕಿ 36 ಮಂದಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದಾರೆ. ಈ ಪೈಕಿ ಕಾಂಗೆಸ್‌
ಪಾಳಯ ತೊರೆದು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಾಂಗೆಸ್‌ನ ಹಿರಿಯ ನಾಯಕ
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮುಖರು. ಮಧ್ಯಪುದೇಶದಿಂದ ಆಯ್ಕೆಯಾದ ಸಿಂಧಿಯಾ ಅವರು
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಹಿರಿಯ ಕಾಂಗೆಸ್ಸಿಗರಾದ ಖರ್ಗೆ ಮತ್ತು ದಿಗ್ನಿಜಯ್‌ ಅವರಿಗೆ ಶುಭಾಶಯ
ಕೋರಿದ್ದು ಗಮನ ಸೆಳೆಯಿತು. ಅವರು ರಾಜ್ಯಸಭೆ ಪ್ರತಿಪಕ್ಷ ನಾಯಕ ಹಾಗೂ ಸೋನಿಯಾ ಗಾಂಧಿ ಅವರ
ಆಪ್ತರಾದ ಗುಲಾಂ ನಬಿ ಅಜಾದ್‌ ಅವರೊಂದಿಗೆ ಕುಶಲೋಪರಿ ನಡೆಸಿದರು. ಇನ್ನು 12 ಮಂದಿ ಸದಸ್ಯರು
ಮರು ಆಯ್ಕೆಯಾಗಿದ್ದು, ಆ ಪೈಕಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌, ಕಾಂಗೆಸ್‌ ನಾಯಕ ದಿಗ್ದಿಜಯ್‌ ಸಿಂಗ್‌,
ಕೇಂದ್ರ ಸಚಿವ ರಾಮದಾಸ್‌ ಅಠಾವಳ ಪ್ರಮುಖರಾಗಿದ್ದಾರೆ. ಏತನ್ನದ್ಧೆ ಮೇಲ್ಮನೆ ಪ್ರವೇಶಿಸಿದ ಬಿಜೆಪಿ ನೂತನ
ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಒಂದು ಗಂಟೆ ಅವಧಿ ಸಂವಾದ ನಡೆಸಿದರು. ಸದನದ ಸದಸ್ಯರಾಗಿ
ಆದರ್ಶ ನಡೆ ಅನುಸರಿಸುವಂತೆ ಕಿವಿ ಮಾತು ಹೇಳಿದರು.


ಘನತೆಗೆ ಧಕ್ಕೆ ಬೇಡ ನಿಯಮ ಪಾಲಿಸಿ:- “ಕಲಾಪಗಳಲ್ಲಿ ಶಿಸ್ತು ಪಾಲನೆ ಬಹಳ ಮುಖ್ಯ, ನಿಮ್ಮ ಯಾವುದೇ
ವರ್ತನೆ ರಾಜ್ಯಸಭೆಯ ಘನತೆಗೆ ಧಕ್ಕೆ ತರದಂತೆ ಎಚ್ಚರಿಕೆ ವಹಿಸಿರಿ” ಎಂದು ವೆಂಕಯ್ಯ ನಾಯ್ದು ಸದಸ್ಯರಿಗೆ
ಕಿವಿಮಾತು ಹೇಳಿದ್ದಾರೆ.


ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಖರ್ಗೆ ಮತ್ತು
ನಾಮಕರಣಗೊಂಡ ಬೆಳಗಾವಿ ಜಿಲ್ಲೆ ಮೂಡಲಗಿಯ ಈರಣ್ಣ ಕಡಾಡಿ ಅವರು ಕನ್ನಡದಲ್ಲಿಯೇ ಪ್ರಮಾಣ ವಚನ
ಸ್ವೀಕರಿಸಿ ಗಮನ ಸೆಳೆದರು.


ಪ್ರಮಾಣ ವಚನ ಸ್ವೀಕಾರದ ಬಳಿಕ ಸ್ವತಃ ಹಿರಿಯ ಮುತ್ತದ್ದಿ ಖರ್ಗೆ ಅವರು ಟ್ವೀಟ್‌ ಮಾಡಿ ರಾಜ್ಯದ
ಜನತೆ ಸೇರಿದಂತೆ ಪಕ್ಷದ ಅಧ್ಯಕ್ಷರು. ಉಪಾಧ್ಯಕ್ಷರು ಮತ್ತು ತಮಗೆ ಸಹಕಾರ ನೀಡಿದ ಎಲ್ಲರಿಗೆ ಧನ್ಯವಾದ ಸಲ್ಲಿಸಿ,
ರಾಜ್ಯದ ಶ್ರೇಯೋಭಿವೃದ್ಧಿಗೆ ತಮಗೆ ದೊರೆತಿರುವ ಅವಕಾಶ ಬಳಕೆ ಮಾಡುವುದಾಗಿ ಹೇಳಿರುವ ಅವರು,
ಮುಂದಿನ ಪಯಣದಲ್ಲಿ ಎಲ್ಲರ ಹಾರೈಕೆ ತಮಗೆ ಬೇಕಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಕನ್ನಡದಲ್ಲೇ ಪ್ರಮಾಣವಚನ ಸ್ಲೀಕರಿಸಿದ ಈರಣ್ಣ ಕಡಾಡಿ ಅವರ ಈ ಕ್ರಮಕ್ಕೆ ಬೆಳಗಾವಿಯ ಕನ್ನಡ
ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ. ಬಿಜೆಪಿ ವಿಭಾಗೀಯ ಪ್ರಮುಖರಾಗಿದ್ದ ಈರಣ್ಣ ಕಡಾಡಿ ಅವರಿಗೆ ಬಿಜೆಪಿ
ಹೈಕಮಾಂಡ್‌ ರಾಜ್ಯಸಭೆ ಟಿಕೆಟ್‌ ಕೊಟ್ಟಿತ್ತು ನಿರೀಕ್ಷೆಯಂತೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಭಾಧ್ಯಕ್ಷರಾಗಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ದು ಪ್ರಮಾಣವಚನ ಬೋಧಿಸಿದ್ದರು.


ಆಧಾರ:ವಿಜಯಕರ್ನಾಟಕ, ದಿನಾ೦ಕ:23.07.2020


3. ಸೆಪ್ಟೆಂಬರ್‌ 14ರಿಂದ ಸಂಸತ್ತಿನ ಮುಂಗಾರು ಅಧಿವೇಶನ


ಕೊರೋನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ
ಮುಹೂರ್ತ ನಿಗದಿಯಾಗಿದ್ದು. ಸೆಪ್ಪೆಂಬರ್‌ 14ರ೦ದ ಅಕ್ಟೋಬರ್‌ 1ರವರೆಗೆ ಸಂಸತ್ತಿನ ಉಭಯ ಸದನಗಳ
ಕಲಾಪ ನಡೆಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿರುತ್ತದೆ.


ಸೆಪ್ಲೆಂಬರ್‌ 14ರ ಬೆಳಿಗ್ಗೆ 9ಕ್ಕೆ ಲೋಕಸಭೆಯ ಕಲಾಪ ನಡೆಸಲು ರಾಷ್ಟಪತಿ ರಾಮನಾಥ ಕೋವಿಂದ್‌
ಸೂಚಿಸಿದ್ದಾರೆ ಹಾಗೂ ಅದೇ ದಿನ ರಾಜ್ಯಸಭೆಯ ಸಮಾವೇಶಕ್ಕೂ ನಿರ್ದೇಶನ ನೀಡಿದ್ದಾರೆ ಎಂದು
ಅಧಿಸೂಚನೆಯಲ್ಲಿ ವಿವರಿಸಲಾಗಿದೆ.


ಅಧಿವೇಶನದಲ್ಲಿ ಭಾಗವಹಿಸುವ ಸಂಸದರಿಗೆ 72 ತಾಸು ಮುನ್ನ ಕೊರೋನಾ ಪರೀಕ್ಷೆ ನಡೆಸಲು ಹಾಗೂ
ಬೆಳಿಗ್ಗೆ ಲೋಕಸಭೆ ಹಾಗೂ ಮಧ್ಯಾಹ್ನ ರಾಜ್ಯ ಸಭೆ ಕಲಾಪವನ್ನು ತಲಾ 4 ತಾಸಿನಂತೆ ಆಯೋಜಿಸಲು
ಉದ್ದೇಶಿಸಲಾಗಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:01.09.2020
4. ಪ್ರಶ್ನೋತ್ತರ ಅವಧಿ ರದ್ದು ನಿರ್ಧಾರ ವಾಪಸ್‌ಗೆ ಆಗ್ರಹ


ಸಂಸತ್‌ ಅಧಿವೇಶನದ ಪ್ರಶ್ನೋತ್ತರ ಅವಧಿ ರದ್ದು ಮತ್ತು ಶೂನ್ಯ ವೇಳೆ ಮೊಟಕು ನಿರ್ಧಾರವನ್ನು
ಮರುಪರಿಶೀಲಿಸುವಂತೆ ದೇಶದ ಶಿಕ್ಷಣಂ ತಜ್ಞರು, ಹೋರಾಟಗಾರರು, ರಾಜಕೀಯ ನಾಯಕರು ಮತ್ತು
ವಿದ್ಯಾರ್ಥಿಗಳು ಸೇರಿದಂತೆ 800ಕ್ಕೂ ಹೆಚ್ಚು ಮಂದಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯ ಸಭಾ
ಅಧ್ಯಕ್ಷೆ ಎಂ. ವೆಂಕಯ್ಯ ನಾಯ್ದು ಅವರಿಗೆ ಪತ್ರ ಬರೆದಿದ್ದಾರೆ.


ಪ್ರಶ್ನೋತ್ತರ ಅವಧಿ ರದ್ದು ಆದರೆ ಕಾರ್ಯಾಂಗದ ಕಾರ್ಯವೈಖರಿಯನ್ನು ಪ್ರಶ್ನಿಸುವ ಹಕ್ಕು
ಪ್ರಜಾಪ್ರತಿನಿಧಿಗಳಿಗೆ ಸಿಗುವುದಿಲ್ಲ. ನಿರ್ಧಾರವನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ ಹಾಗೂ
ಸಭಾ ನಿಯಮಗಳಂತೆಯೇ ಕೆಲವು ಸಂದರ್ಭಗಳಲ್ಲಿ ಅಥವಾ ಪ್ರಕರಣಗಳಲ್ಲಿ ಪ್ರಶ್ನೋತ್ತರ ಅವಧಿಯನ್ನು


ರದ್ದುಪಡಿಸುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ. ಉಭಯ ಸದನಗಳ ಒಪ್ಪಿಗೆಯ ಮೇಲೆ ಮಾಡಬಹುದಾಗಿದೆ
ಎಂದು ಪತ್ರದಲ್ಲಿ ತಿಳಿಸಿರುತ್ತಾರೆ.


ವಿಧಾನ ಮಂಡಲಗಳು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಎಂದಿನಂತೆಯೇ ಅಧಿವೇಶನಗಳನ್ನು
ಯಶಸ್ವಿಯಾಗಿ ನಡೆಸಿರುವಾಗ ಸಂಸತ್ತು ಕೂಡ ಯಾವುದೇ ಕಾರ್ಯವಿಧಾನಗಳನ್ನು ರದ್ದುಗೊಳಿಸದೇ ಅಥವಾ
ಮೊಟಕುಗೊಳಿಸದೇ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.


ಸರ್ಕಾರದ ಕಾರ್ಯವಿಧಾನವು ಪಾರದರ್ಶಕವಾಗಿರಬೇಕು. ಇದು ಪ್ರಜಾಪುಭುತ್ತದ ಆದರ್ಶಗಳನ್ನು
ಉನ್ನತೀಕರಿಸುವಂತಿರಬೇಕು. ಇಡೀ ವಿಶ್ವವೇ ಸಂಕಷ್ಟದಲ್ಲಿರುವಾಗ ಜೀವಗಳನ್ನು ಉಳಿಸಲು ಉತ್ತಮ
ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಅಧಿವೇಶನದಲ್ಲಿ ಎದುರಾಗುವ


ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು. ಈ ಮೂಲಕ ಆತ್ಮವಿಶ್ಲಾಸವನ್ನು ಹೆಚ್ಚಿಸಬೇಕು ಎಂದು ಹೇಳಿರುತ್ತಾರೆ.
ಶೂನ್ಯ ವೇಳೆ ಅವಧಿ ತಗ್ಗಿಸಿರುವುದು ಸರಿಯಲ್ಲ. ಈ ಅವಧಿಯಲ್ಲಿ ಸಂಸದರು ಪ್ರತಿನಿಧಿಸುವ
ಕ್ಷೇತದ ಸಮಸ್ಯೆಗಳ ಕುರಿತು ಸದನದ ಗಮನವನ್ನು ಸೆಳೆಯುತ್ತಿದ್ದರು. ಈ ಅವಧಿಯನ್ನು 30 ನಿಮಿಷಕ್ಕೆ
ಮೊಟಕುಗೊಳಿಸಬಾರದು ಎಂದು ಒತ್ತಾಯಿಸಿದ್ದಾರೆ.
ಆಧಾರ:ಪ್ರಜಾವಾಣಿ, ದಿನಾಂಕ:05.09.2020
5. ಈ ಬಾರಿ ಸಂಸತ್‌ ಮುಂಗಾರು ಅಧಿವೇಶನಕ್ಕೆ ಡಿಜಿಟಲ್‌ ಸ್ಪರ್ಶ
ಕೊರೋನಾ ಹಿನ್ನೆಲೆ ಈ ಬಾರಿಯ ಸಂಸತ್ತಿನ ಕಲಾಪವನ್ನು ಡಿಜಿಟಲೀಕರಣಗೊಳಿಸಲಾಗಿದೆ. ತನ್ಮೂಲಕ
ಸದನದ ಯಾವುದೇ ಸದಸ್ಯರಿಗೂ ಸೋಂಕು ವ್ಯಾಪಿಸದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಸೆಪ್ಟೆಂಬರ್‌
14ರಿಂದ ಆರಂಭವಾಗಲಿರುವ ಸಂಸತ್ತಿನ ಕಲಾಪವು ಅಕ್ಟೋಬರ್‌ (ಕ್ಕೆ ಮುಕ್ತಾಯವಾಗಲಿದೆ.


ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಈ ಬಾರಿಯ ಲೋಕಸಭಾ ಕಲಾಪವನ್ನು ಶೇ.62ರಷ್ಟು
ಹಾಗೂ ಮುಂದಿನ ದಿನಗಳಲ್ಲಿ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತದೆ. ಸದಸ್ಯರ ಹಾಜರಾತಿಯನ್ನು
ಮೊಬೈಲ್‌ ಆ್ಯಪ್‌ ಮೂಲಕವೇ ದಾಖಲಿಸಲಾಗುತ್ತದೆ. ಸದಸ್ಯರು ತಾವು ಕೇಳಬೇಕಿರುವ ಪ್ರಶ್ನೆಗಳನ್ನು ಆನ್‌ಲೈನ್‌
ಮೂಲಕವೇ ಕೇಳಬೇಕು. ಈಗಾಗಲೇ ಸದಸ್ಯರು ತಮ್ಮ ಪ್ರಶ್ನೆಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಿದ್ದಾರೆ. ತನ್ನೂಲಕ
ಈ ಬಾರಿಯ ಮುಂಗಾರು ಅಧಿವೇಶನವು ಸಂಪೂರ್ಣ ಪೇಪರ್‌ಲೆಸ್‌ ಆಗಿರಲಿದೆ. ಸದನಕ್ಕೆ ಹಾಜರಾಗುವ ಎಲ್ಲಾ
ಸದಸ್ಯರು ಕೊರೋನಾ ಪತ್ತೆ ಪರೀಕ್ಷೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.


ಆಧಾರ:ಕನ್ನಡ ಪ್ರಭ, ದಿನಾಂಕ:11.09.2020
6. ರಾಜ್ಯ ಸಭೆ ಉಪ ಸಭಾಪತಿಯಾಗಿ ಹರಿವಂಶ್‌ ಸಿಂಗ್‌ ಪುನರಾಯ್ಕೆ,


ರಾಜ್ಯ ಸಭೆ ಉಪ ಸಭಾಪತಿಯಾಗಿ ಎನ್‌ಡಿಎ ಅಭ್ಯರ್ಥಿ, ಜೆಡಿಯು ಸಂಸದ ಹರಿವಂಶ್‌ ನಾರಾಯಣ್‌
ಸಿಂಗ್‌ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.


ಸದನವು ಧ್ವನಿಮತದ ಮೂಲಕ ಹರಿವಂಶ್‌ ಸಿಂಗ್‌ ಅವರಿಗೆ ಬೆಂಬಲ ಸೂಚಿಸಿತು. 2018ರಿಂದಲೂ
ರಾಜ್ಯ ಸಭೆ ಉಪ ಸಭಾಪತಿಯಾಗಿರುವ ಹರಿವಂಶ್‌ ಅವರ ಸದಸ್ಯತ್ವ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಉಪ
ಸಭಾಪತಿ ಸ್ಥಾನ ತೆರವಾಗಿತ್ತು ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅವರು ಬಿಹಾರದಿಂದ
ಪುನರಾಯ್ಕೆಗೊಂಡಿದ್ದಾರೆ.


“ಹರಿವಂಶ್‌ ಸಿಂಗ್‌ ಅವರು ಅಸಾಮಾನ್ಯ ತೀರ್ಪುಗಾರ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು


ರಾಜ್ಯ ಸಭೆ ಉಪ ಸಭಾಪತಿಯಾಗಿ ಪುನರಾಯ್ಕೆಯಾಗಿರುವ ಹರಿವಂಶ್‌ ನಾರಾಯಣ್‌ಸಿಂಗ್‌ ಅವರು
ರಾಜಕೀಯ ಪ್ರವೇಶಕ್ಕೆ ಮೊದಲು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು ಹಾಗೂ " ದಿ ಟೈಮ್ಸ್‌ ಆಫ್‌ ಇಂಡಿಯಾ"
ಪತ್ರಿಕೆಯೊಂದಿಗೆ ವೃತ್ತಿ ಜೀವನ ಆರಂಭಿಸಿ ನಂತರ ಹಿಂದಿಯ "ಪ್ರಭಾತ್‌ ಖಬರ್‌' ಪತ್ರಿಕೆಯ
ಸಂಪಾದಕರಾಗಿದ್ದರು ಮತ್ತು ಹಲವು ಪ್ರಭಾವಿ ರಾಜಕಾರಣಿಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.


ದೇಶದ 8ನೇ ಪ್ರಧಾನಿ ಚಂದಶೇಖರ್‌ ಅವರಿಗೆ ಹರಿವಂಶ್‌ ಮಾಧ್ಯಮ ಸಲಹೆಗಾರರಾಗಿ ಸೈ
ಎನಿಸಿಕೊಂಡಿದ್ದರು. ಸಮಾಜವಾದಿ ನಾಯಕ ಜಯಪ್ರಕಾಶ್‌ ನಾರಾಯಣ್‌ ಅವರ ಜನ್ನಸ್ಥಳ ಎಂದು ಪಸಿದ್ಧಿ
ಪಡೆದಿರುವ ಬಿಹಾರದ ಸೀತಾಬ್‌ ದಿಯಾರಾ ಗ್ರಾಮದಲ್ಲಿ ಜೂನ್‌ 1956ರಲ್ಲಿ ಜನಿಸಿದ್ದು, ಬನಾರಸ್‌ ಹಿಂದೂ
ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಮತ್ತು ಜರ್ನಲಿಸಂನಲ್ಲಿ ಡಿಪ್ಲೋಮಾ ಪಡೆದಿದ್ದಾರೆ. 2014ರಲ್ಲಿ
ಮೊದಲ ಬಾರಿ ರಾಜ್ಯ ಸಭೆ ಪ್ರವೇಶಿಸಿ, ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದರು. 2020ರಲ್ಲಿ ಎರಡನೇ
ಅವಧಿಗೆ ಆಯ್ಕೆಯಾಗಿದ್ದಾರೆ.


ಆಧಾರ:ವಿಜಯ ಕರ್ನಾಟಕ, ದಿನಾಂಕ:15.09.2020
7. ರೈತರ ಹಕ್ಕಿಗೆ ಮಸೂದೆ ಕೊಕ್ಕೆ


ಸುಗೀವಾಜ್ಞೆಗಳ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರೈತರಿಗೆ ಸಂಬಂಧಿಸಿದ
ಮೂರು ಮಸೂದೆಗಳ ವಿಚಾರದಲ್ಲಿ ಸರ್ಕಾರ ಹಾಗೂ ಕಾಂಗೆಸ್‌ ನಡುವೆ ಲೋಕಸಭೆಯಲ್ಲಿ ಜಟಾಪಟಿ
ನಡೆಯಿತು. ರೈತರನ್ನು ಕ್ರೂರವಾಗಿ ಶೋಷಿಸಲು ಕಾರ್ಪೊರೇಟ್‌ ಸಂಸ್ಥೆಗಳಿಗೆ ಮಸೂದೆಗಳು ಮುಕ್ತ ಅವಕಾಶ
ನೀಡುತ್ತವೆ ಎಂದು ಕಲಾಪದ ಮೊದಲ ದಿನ ಕಾಂಗೆಸ್‌ ಆರೋಪಿಸಿತು.


ಸರ್ಕಾರ ಮಂಡಿಸಿದ ಮೂರು ಮಸೂದೆಗಳು ರೈತರು ಹಾಗೂ ಕೃಷಿ ಕಾರ್ಮಿಕರ ಮೇಲೆ ಭೀಕರವಾಗಿ
ದಾಳಿ ಎಸಗಲಿವೆ ಎಂದು ಕಾಂಗೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ
ಮೂರು ಕರಾಳ ಸುಗೀವಾಜ್ಞಿಗಳಿಂದಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ. ಸುಗ್ರೀವಾಜ್ಞೆಯು
ಪ್ರಧಾನಿಯ ಮತ್ತೊಂದು ರೈತವಿರೋಧಿ ಪಿತೂರಿ. ರೈತರ ಹಕ್ಕುಗಳ ಮೇಲೆ ದಾಳಿ ಎಂದು ಆರೋಪಿಸಿದ್ದಾರೆ.


ರೈತ ಉತ್ತನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಮಸೂದೆ, ಬೆಲೆ ಖಾತರಿ ಮತ್ತು
ಬೇಸಾಯ ಸೇವೆಗಳ ಒಪ್ಪಂದ ( ಸಬಲೀಕರಣ ಮತ್ತು ಸಂರಕ್ಷಣೆ) ಮಸೂದೆ ಹಾಗೂ ಅಗತ್ಯ ಸರಕುಗಳ
(ತಿದ್ದುಪತಿ) ಮಸೂದೆಯನ್ನು ಮಂಡಿಸಲಾಯಿತು.


ರೈತರು ಹಾಗೂ ಕೃಷಿ ಕ್ಷೇತ್ರವನ್ನು ನಾಶಮಾಡಲು ಸರ್ಕಾರ ಮಸೂದೆಗಳನ್ನು ಪರಿಚಯಿಸಿದೆ ಎಂದು
ಲೋಕಸಭೆಯಲ್ಲಿ ಕಾಂಗೆಸ್‌ ನ ಉಪನಾಯಕ ಗೌರವ್‌ ಗೊಗೊಯಿ ಆರೋಪಿಸಿದ್ದು, ಮಂಡಿಸಲಾದ ಮಸೂದೆಗಳು
ರೈತರಿಗೆ ಸಹಾಯ ಮಾಡುವುದಿಲ್ಲ. ಆದರೆ ಉದ್ಯಮ ವಲಯ ಮತ್ತು ದೊಡ್ಡ ಬಂಡವಾಳ ಶಾಹಿಗಳಿಗೆ
ಸಹಾಯ ಮಾಡುತ್ತವೆ. ಬಹುಶ: ಈ ದಿನಗಳು ರೈತರ ಪಾಲಿಗೆ ಕಪ್ಪು ಅಕ್ಷರದಲ್ಲಿ ಬರೆಯಬೇಕಾದ ದಿನಗಳು.
ರೈತರು ಸಂಕಷ್ಟದಲ್ಲಿದ್ದಾರೆ. ಉತ್ಪನ್ನಗಳಿಗೆ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೊಲದಲ್ಲಿ ಕೆಲಸ
ಮಾಡುತ್ತಿರುವವರಿಗೆ ದಿನಗೂಲಿ ನೀಡಲು ಅವರಿಂದ ಆಗುತ್ತಿಲ್ಲ ಎಂದು ಗೊಗೊಯಿ ಹೇಳಿದ್ದಾರೆ.


ಆಧಾರ:ಪ್ರಜಾವಾಣಿ, ದಿನಾಂಕ:15.09.2020
8. ಪ್ರಶ್ಸೋತರ ಕೈ ಬಿಡಲು ಸಂಸತ್‌ ಸಮತಿ
ಮಮ್‌ rs) ೬


ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಪ್ರಸಕ್ತ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಮತ್ತು
ಸದಸ್ಯರ ಖಾಸಗಿ ವಿಧೇಯಕ ಮಂಡನೆಗಳನ್ನು ಕೈ ಬಿಡಲು ಸಂಸತ್‌ನ ಉಭಯ ಸದನಗಳು ಸಮ್ಮತಿಸಿವೆ.


()


ಲೋಕಸಭೆಯಲ್ಲಿ ನಿಲುವಳಿ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು,
ಸರ್ಕಾರ ಚರ್ಚೆಯಿಂದ ಹಿಂದೆ ಸರಿಯುತ್ತಿಲ್ಲ. ಸದಸ್ಯರು ಎತ್ತುವ ಯಾವುದೇ ಪ್ರಶ್ನೆಗೆ ಉತ್ತರ ನೀಡಲು
ಸಿದ್ದವಿದೆ. ಆದರೆ ಅಸಾಮಾನ್ಯ ಸನ್ನಿವೇಶದಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಪ್ರಶ್ನೋತ್ತರ ಕಲಾಪ ಕ್ಕೈ
ಬಿಡಲು ನಿರ್ಧರಿಸಲಾಗಿದೆ ಎಂದರು.


ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು, ಪ್ರಶ್ನೋತ್ತರ
ಅವಧಿಯು ಸದನದ ಸುವರ್ಣ ಸಮಯ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತಿರುಳು ಕೂಡ.


ಆದರೆ ಸರ್ಕಾರ ಈ ಅವಧಿಯನ್ನೇ ರದ್ದುಪಡಿಸುವ ಮೂಲಕ ಪ್ರಜಾಪುಭುತ್ಸ್ನದ ಕತ್ತು ಹಿಸುಕಲು ಹೊರಟಿದೆ
ಎಂದು ಟೀಕಿಸಿದ್ದಾರೆ. ರಾಜ್ಯಸಭೆ ಸಹ ಪ್ರಶ್ನೋತ್ತರ ಅವಧಿ, ಖಾಸಗಿ ವಿಧೇಯಕ ಮಂಡನೆ ಬಿಡಲು ಒಪ್ಪಿತು.


ಆಧಾರ:ವಿಜಯ ಕರ್ನಾಟಕ, ದಿನಾಂಕ:15.09.2020
9, ಕುಳಿತೇ ಮಾತನಾಡುವಂತೆ ಸ್ಪೀಕರ್‌ ಓಂ ಬಿರ್ಲಾ ಮನವಿ


ಕೊರೋನಾ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸದನದಲ್ಲಿ ಸದಸ್ಯರು
ಸಾಮಾಜಿಕ ಅಂತರ ಕಾಯ್ದುಕೊಂಡು, ಆಸನಗಳಲ್ಲಿ ಕುಳಿತೇ ಮಾತನಾಡುವಂತೆ ಲೋಕಸಭಾ ಸ್ಫೀಕರ್‌ ಓಂ
ಬಿರ್ಲಾ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.


18 ದಿನಗಳ ಮುಂಗಾರು ಅಧಿವೇಶನ ಆರಂಭವಾಗಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು
ಎರಡು ಪಾಳಿಯಲ್ಲಿ ನಡೆಯಲಿವೆ. ಮೊದಲ ದಿನ ಲೋಕಸಭೆ ಕಲಾಪ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1
ಗಂಟೆಯವರೆಗೆ ನಡೆಯಿತು. ನಂತರ ರಾಜ್ಯಸಭೆ ಕಲಾಪ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7ರವರೆಗೆ ನಡೆಯಿತು.
ಉಳಿದ ದಿನಗಳಲ್ಲಿ ರಾಜ್ಯಸಭೆ ಬೆಳಿಗ್ಗೆ ಹಾಗೂ ಸಂಜೆ ಲೋಕಸಭೆ ಕಲಾಪ ನಡೆಯಲಿದೆ. ಇತಿಹಾಸದಲ್ಲಿ ಇದೇ
ಮೊದಲ ಬಾರಿಗೆ ಉಭಯ ಸದನಗಳನ್ನು ಸದಸ್ಯರ ಅನುಕೂಲಕ್ಕಾಗಿ ಮತ್ತು ಸುರಕ್ಷತೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಕೆಲವು ಸದಸ್ಯರಿಗೆ ಸಂದರ್ಶಕರ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸದಸ್ಯರು ಕೊರೋನಾ
ಹರಡುವುದನ್ನು ತಡೆಗಟ್ಟುವುದರೊಂದಿಗೆ ಕಲಾಪ ಸುಗುಮವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು
ಸ್ಲೀಕರ್‌ ಬಿರ್ಲಾ ಮನವಿ ಮಾಡಿದರು. ತಜ್ಞರ ಸಲಹೆ ಮೇರೆಗೆ ಸದನದಲ್ಲಿ ಎಲ್ಲರೂ ಕುಳಿತುಕೊಂಡೇ
ಮಾತನಾಡಬೇಕು. ಇದರಿಂದ ನಿಮಗೆಲ್ಲರಿಗೂ ತುಂಬಾ ತೊಂದರೆಯಾಗಬಹುದು. ಇದೊಂದು ಮಾರ್ಗವನ್ನು
ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಸ್ಪೀಕರ್‌ ಹೇಳಿದ್ದಾರೆ. ಕೊರೋನಾ ಸಂಕಷ್ಟದ ನಡುವೆಯೂ ಈ ಬಾರಿಯ
ಅಧಿವೇಶನ ನಡೆಯುತ್ತಿದೆ. ಪಕ್ಷಗಳ ಸದಸ್ಯ ಬಲದ ಆಧಾರದ ಮೇಲೆ ಸದಸ್ಯರ ಸುರಕ್ಷತೆಗಾಗಿ ಆಸನಗಳ ವ್ಯವಸ್ಥೆ
ಮಾಡಲಾಗಿದೆ. ಆದ್ದರಿಂದ ಸದಸ್ಯರು ಕುಳಿತೇ ಮಾತನಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ


ಎಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವುದರಿಂದ ದೇಶವು ಕೊರೋನಾವನ್ನು
ಸೋಲಿಸಲು ಸಾಧ್ಯವಾಗುತ್ತದೆ ಎಂದು ಓಂ ಬಿರ್ಲಾ ಹೇಳಿದ್ದಾರೆ.


ಆಧಾರ:ವಿಶ್ವವಾಣಿ, ದಿನಾಂಕ:15.09.2020
10. ಕೊರೋನಾ ವ್ಯಾಪಕದ ನಂತರ ಮೊದಲ ಸಂಸತ್‌ ಸಮಾವೇಶ


ಕೊರೋನಾ ಆತಂಕದ ಹಿನ್ನೆಲೆಯಲ್ಲಿಯೇ ಸಕಲ ಎಚ್ಚರಿಕಾ ಕ್ರಮಗಳೊಂದಿಗೆ ಸಂಸತ್ತಿನ ಮುಂಗಾರು
ಅಧಿವೇಶನ ಆರಂಭಗೊಂಡಿದ್ದು, ಲೋಕಸಭೆ ಹಾಗೂ ರಾಜ್ಯಸಭೆ ಮೊದಲ ದಿನದ ಸುಗಮ ಕಲಾಪಗಳಿಗೆ
ಸಾಕ್ಷಿಯಾದವು. ಪ್ರಶ್ನೋತ್ತರ ಕಲಾಪ ರದ್ದುಪಡಿಸಿದ ಕ್ರಮ ಗದ್ದಲಕ್ಕೆ ಕಾರಣವಾಯಿತಾದರೂ ಉಳಿದಂತೆ ಹಲವು
ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಬ್ಯಾಂಕಿಂಗ್‌ ನಿಯಮಾವಳಿಗಳ ತಿದ್ದುಪಡಿ
ಮಸೂದೆ ಬಗ್ಗೆ ಮಾತನಾಡುತ್ತಿದ್ದಾಗ ಟಿಎಂಸಿ ಸಂಸದ ಸೌಗತರಾಯ್‌, "ದೇಶದ ಆರ್ಥಿಕ ಸಂಕಷ್ಟ ಸಚಿವರ
ಚಿಂತೆಯನ್ನು ದುಪ್ಪಟ್ಟುಗೊಳಿಸಿದಂತೆ ಭಾಸವಾಗುತ್ತಿದೆ" ಎಂದು ವ್ಯಂಗ್ಯವಾಡಿದರು. ಇದರಿಂದ ಸಿಟ್ಟಾದ
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ, "ಹಿರಿಯ ಸಂಸದರಿಗೆ ಇಂಥಾ ವೈಯಕ್ತಿಕ ಟೀಕೆಗಳು
ಶೋಭೆ ತರುವುದಿಲ್ಲ. ನಿಮ್ಮ ಮಾತು ಮಹಿಳೆಯರಿಗೆ ಅವಮಾನ ಮಾಡಿದಂತಿದೆ. ತಕ್ಷಣವೇ ಕ್ಷಮೆ ಕೇಳಬೇಕು
ಎಂದು ಒತ್ತಾಯಿಸಿದರು. ಬಿಜೆಪಿ ಸಂಸದರ ಗಲಾಟೆ ಜೋರಾಗುತ್ತಿದ್ದಂತೆ, ಸೌಗತರಾಯ್‌ ಮಾತನ್ನು ಕಡತಗಳಿಂದ
ಅಳಿಸಿ ಹಾಕಿ ಎಂದು ಸೀಕರ್‌ ಓಂ ಬಿರ್ಲಾ ಸೂಚಿಸಿದರು.


ಲೋಕಸಭೆ ಕಲಾಪ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ನಡೆದರೆ, ರಾಜ್ಯಸಭೆ ಕಲಾಪ
ಮಧ್ಯಾಹ್ನ 3ರಿಂದ ಆರಂಭಗೊಂಡು ಸಂಜೆ 7ಕ್ಕೆ ಸಮಾಪನಗೊಂಡಿತು.


ರೈತಸ್ನೇಹಿ 3 ಮಸೂದೆ ಮಂಡನೆ: ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ
2020ರ ಒಪ್ಪಂದ ಮಸೂದೆಯು ಕೃಷಿ ವ್ಯವಹಾರಗಳಿಗೆ ರಾಷ್ಟ್ರೀಯ ಚೌಕಟ್ಟನ್ನು ಒದಗಿಸಲು ಪ್ರಯತ್ನಿಸುತ್ತದೆ.
ಇದು ಕೃಷಿ ವ್ಯಾಪಾರ ಸಂಸ್ಥೆಗಳು, ಸಂಸ್ಕರಣ ಘಟಕಗಳು, ಸಗಟು ವ್ಯಾಪಾರಿಗಳು, ರಫ್ತುದಾರರು ಅಥವಾ
ವ್ಯಾಪಾರಿಗಳೊಂದಿಗೆ ತೊಡಗಿಸಿಕೊಳ್ಳಲು ರೈತರಿಗೆ ಅಧಿಕಾರ ನೀಡುತ್ತದೆ. ಭವಿಷ್ಯದ ಕೃಷಿ ಉತ್ತನ್ನಗಳ ಸೇವೆಗಳು
ಮತ್ತು ಮಾರಾಟವು ಪರಸ್ಪರ ಒಪ್ಪಿತ ಬೆಲೆ ಚೌಕಟ್ಟಿನಲ್ಲಿ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ
ನಡೆಯಲು ಅನುವು ಮಾಡಿಕೊಡುತ್ತದೆ.


ಹಿನ್ನೆಲೆ: ಭಾರತೀಯ ಕೃಷಿಯು ಸಣ್ಣ ಹಿಡುವಳಿಗಳಿಂದಾಗಿ ಚದುರಿಹೋಗಿದೆ ಮತ್ತು ಹವಾಮಾನ ಅವಲಂಬನೆ,
ಉತ್ಪಾದನಾ ಅನಿಶ್ಚಿತತೆಗಳು ಮತ್ತು ಮಾರುಕಟ್ಟೆಯ ಅನಿರೀಕ್ಷಿತೆಯಂತಹ ಕೆಲವು ದೌರ್ಬಲ್ಯಗಳನ್ನು ಹೊಂದಿದೆ.
ಈ ಶಾಸನವು ಮಾರುಕಟ್ಟೆಯ ಅನಿರೀಕ್ಷಿತತೆಯ ಅಪಾಯವನ್ನು ರೈತನಿಂದ ಪ್ರಾಯೋಜಕರಿಗೆ ವರ್ಗಾಯಿಸುತ್ತದೆ
ಮತ್ತು ಮಾರುಕಟ್ಟೆ ವೆಚ್ಚವನ್ನು ಕಡಿಮೆ ಮಾಡಿ ಮತ್ತು ರೈತರ ಆದಾಯವನ್ನು ಸುಧಾರಿಸುತ್ತದೆ.
ಮಧ್ಯವರ್ತಿಗಳಿರುವುದಿಲ್ಲ.


2020ರ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯು ಅಗತ್ಯ ಸರಕುಗಳ ಪಟ್ಟಿಯಿಂದ ಧಾನ್ಯಗಳು,
ಬೇಳೆಕಾಳುಗಳು, ಎಣ್ಣೆಕಾಳುಗಳು, ಅಡುಗೆ ಎಣ್ಣೆ, ಈರುಳ್ಳಿ ಮತ್ತು ಆಲೂಗಡ್ಡೆ ಮುಂತಾದ ಸರಕುಗಳನ್ನು
ತೆಗೆದುಹಾಕುತ್ತದೆ. ಇದು ಖಾಸಗಿ ಹೂಡಿಕೆದಾರರಿಗೆ ಇರುವ ತಮ್ಮ ವ್ಯವಹಾರ ಕಾರ್ಯಾಚರಣೆಗಳಲ್ಲಿ
ಅತಿಯಾದ ನಿಯಂತ್ರಕ ಹಸ್ತಕ್ಷೇಪದ ಭಯವನ್ನು ತೆಗೆದುಹಾಕುತ್ತದೆ ಮತ್ತು ಕೃಷಿ ಕ್ಷೇತ್ರಕ್ಕೆ ಖಾಸಗಿ ವಲಯ/ವಿದೇಶಿ


(9) Oe)
ನೇರ ಹೂಡಿಕೆಯನ್ನು ಆಕರ್ಷಿಸುತ್ತದೆ.


ಹಿನ್ನೆಲೆ: ಬಹುತೇಕ ಕೃಷಿ ಸರಕುಗಳಲ್ಲಿ ಭಾರತವು ಹೆಚ್ಚುವರಿ ಉತ್ಪಾದನೆ ಮಾಡುತ್ತಿದೆ. ಆದರೆ ಕೋಲ್ಡ್‌
ಸ್ಫೋರೇಜ್‌, ಗೋದಾಮುಗಳು, ಸಂಸ್ಕರಣೆ ಮತ್ತು ರಫ್ತುಗಳಲ್ಲಿ ಹೂಡಿಕೆಯ ಕೊರತೆಯಿಂದಾಗಿ ರೈತರಿಗೆ ಉತ್ತಮ
ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕೋಲ್ಡ್‌ ಸ್ಫೋರೇಜ್‌ಗಳಲ್ಲಿ ಹೂಡಿಕೆ ಮಾಡಲು ಮತ್ತು ಆಹಾರ ಪೂರೈಕೆ
ಸರಪಳಿಯ ಆಧುನೀಕರಣಕ್ಕೆ ಈ ಮಸೂದೆ ಸಹಾಯ ಮಾಡುತ್ತದೆ. ಬೆಲೆ ಸ್ಥಿರತೆಯು, ರೈತರು ಮತ್ತು ಗ್ರಾಹಕರಿಗೆ
ಪ್ರಯೋಜನ ಕಲಿಸುತ್ತದೆ.


ಹಾಜರಾತಿ ಆಪ್‌: ಕಲಾಪಕ್ಕೆ ಬರುವ ಸಂಸದರೆಲ್ಲರೂ ಮೊದಲು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಬೇಕಿತ್ತು.
ಈಗ ಸಂಸತ್ತಿಗೆ ಪ್ರವೇಶಿಸುವ ಮುನ್ನ ಅಟೆಂಡೆನ್ಸ್‌ ರಿಜಿಸ್ಸರ್‌ ಎಂಬ ಆ್ಯಪ್‌ನಲ್ಲಿ ತಮ್ಮ ಹಾಜರಾತಿ ದೃಢೀಕರಿಸುವ
ಹೊಸ ನಿಯಮ ಬಂದಿದೆ. ಲೋಕಸಭೆಯ 543 ಸಂಸದರಲ್ಲಿ 359 ಮಂದಿ ಮೊದಲ ದಿನ ಹಾಜರಿದ್ದರು.


ಸಂಸದರಿಗೆ ಪ್ರಧಾನಿ ಮೋದಿ ಸಂದೇಶ: ಅಧಿವೇಶನ ಆರಂಭಕ್ಕೆ ಮುನ್ನ ಮಾತನಾಡಿದ ಮೋದಿ ಅವರು,
ದೀರ್ಪಕಾಲದ ನಂತರ ನಿಮ್ಮನ್ನು ನೋಡುತ್ತಿದ್ದೇನೆ. ನೀವೆಲ್ಲರೂ ಚೆನ್ನಾಗಿದ್ದೀರಿ, ನಿಮ್ಮ ಕುಟುಂಬದಲ್ಲಿ
ಯಾವುದೇ ಬಿಕ್ಕಟ್ಟಿಲ್ಲ ಎಂದು ಭಾವಿಸುತ್ತೇನೆ. ಕೂರೋನಾ ಸಾಂಕ್ರಾಮಿಕದ ಮಧ್ಯೆ ಕರ್ತವ್ಯಗಳನ್ನು ಪೂರೈಸುವ


ಜವಾಬಾರಿ ನಮ ಮೇಲಿದೆ.
[a) ೬


ಬಜೆಟ್‌ ಅಧಿವೇಶನವನ್ನು ಸಮಯಕ್ಕಿಂತ ಮೊದಲೇ ಮುಗಿಸಬೇಕಾಯಿತು. ಈ ಬಾರಿ ಸಂಸತ್ತು ದಿನಕ್ಕೆ
ಎರಡು ಬಾರಿ ಕಾರ್ಯನಿರ್ವಹಿಸಲಿವೆ. ಒಮ್ಮೆ ರಾಜ್ಯಸಭೆ, ಒಮ್ಮೆ ಲೋಕಸಭೆ ಕಾರ್ಯರ್ನಿಹಿಸಲಿವೆ. ಎಲ್ಲಾ
ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅಧಿವೇಶನದಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು
ತೆಗೆದುಕೊಳ್ಳಲಾಗುವುದು. ಸದನದಲ್ಲಿನ ಚರ್ಚೆಯು ದೇಶಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ ಮತ್ತು
ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುತ್ತದೆ.


ಕೊರೋನಾದಿಂದ ಉಂಟಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ನಿಯಮಗಳನ್ನು ಪಾಲಿಸಬೇಕು
ಮತ್ತು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಲಸಿಕೆಗಳು ವಿಶ್ವದ ಯಾವುದೇ ಮೂಲೆಯಿಂದಾದರೂ
ಸಾಧ್ಯವಾದಷ್ಟು ಬೇಗ ಬರಬೇಕು ಎಂದು ಆಶಿಸುತ್ತಿದ್ದೇವೆ. ವಿಶೇಷವಾಗಿ ಈ ಅಧಿವೇಶನಕ್ಕೆ ಇನ್ನೂ ಒಂದು
ನಿರ್ಣಾಯಕವಾದ ಜವಾಬ್ದಾರಿ ಇದೆ. ಒಂದು ನಮ್ಮ ಕೆಚ್ಚೆದೆಯ ಸೈನಿಕರು ಕಠಿಣ ಭೂಪ್ರದೇಶಗಳಲ್ಲಿ ಗಡಿಗಳನ್ನು
ರಕ್ಷಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅಲ್ಲಿ ಮಳ ಪ್ರಾರಂಭವಾಗಲಿದೆ. ಮಾತೃಭೂಮಿಯನ್ನು ರಕ್ಷಿಸಲು
ದೃಢನಿಶ್ಚಯದಿಂದ ನಿಂತಿರುವ ಅವರಿಗೆ ಇಡೀ ಸದನವು ದೇಶದ ಕೆಚ್ಚೆದೆಯ ಸೈನಿಕರೊಂದಿಗೆ ನಿಂತಿದೆ, ದೇಶವು
ಸೈನ್ಯವನ್ನು ಬೆಂಬಲಿಸುತ್ತದೆ ಎಂದು ಎಲ್ಲಾ ಗೌರವಾನ್ವಿತ ಸದಸ್ಯರು ಬಲವಾದ ಸಂದೇಶವನ್ನು ನೀಡುತ್ತಾರೆ ಎಂದು
ನಂಬಿದ್ದೇನೆ ಎಂದು ಹೇಳಿದ್ದಾರೆ.


ಆಧಾರ:ವಿಜಯವಾಣಿ, ದಿನಾ೦ಕ:15.09.2020
11. ಸಂಸದರ ವೇತನ 30% ಕಡಿತ: ಮಸೂದೆ ಪಾಸ್‌


ಕೊರೋನಾ ವೈರಸ್ಸಿನಿಂದಾಗಿ ಉದ್ಭವಿಸಿರುವ ಅಗತ್ಯಗಳನ್ನು ಭರಿಸಲು ಸಂಸದರ ವೇತನದ
ಶೇ.30ರಷ್ಟನ್ನು ಒಂದು ವರ್ಷದ ಮಟ್ಟಿಗೆ ಕಡಿತಗೊಳಿಸಲು ಅವಕಾಶ ಕಲ್ಪಿಸುವ ಮಸೂದೆ ಲೋಕಸಭೆಯಲ್ಲಿ
ಅನುಮೋದನೆ ಪಡೆಯಿತು. ಸಂಸತ್‌ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಮಸೂದೆ-2020ಅನ್ನು
ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಮಂಡಿಸಿದ್ದರು. ಈ ಕುರಿತಾದ ಸುಗ್ರೀವಾಜ್ಞೆಯನ್ನು ಏಪ್ರಿಲ್‌
6ರಂದು ಕೇಂದ್ರ ಸರ್ಕಾರ ಹೊರಡಿಸಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:16.09.2020
12: ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಒಪ್ಪಿಗೆ
ರೈತರ ಬೆಳೆಗೆ ಉತ್ತಮ ಬೆಲೆ ಸರ್ಧಾತ್ಮಕತೆಗೆ ಅನುವು ಮಾಡಿಕೊಡುವ ಅಗತ್ಯ ವಸ್ತುಗಳ ತಿದ್ದುಪಡಿ
ಕಾಯ್ದೆಗೆ ಲೋಕಸಭೆಯಲ್ಲಿ ಧ್ವನಿಮತದ ಅನುಮೋದನೆ ದೊರೆಶಿದೆ.


ಈ ಕಾಯ್ದೆಯಂತೆ ಆಹಾರ ವಸ್ತುಗಳಿಗೆ ಯುದ್ದ, ಕ್ಲಾಮ, ಶೇ.100ರಷ್ಟು ಬೆಲೆ ಹೆಚ್ಚಳ, ನೈಸರ್ಗಿಕ ವಿಪತ್ತು
ಮುಂತಾದ ಸಂದರ್ಭಗಳಲ್ಲಿ ಮಾತ್ರ ಆಹಾರ ಸಾಮಗಿಗಳ ದಾಸ್ತಾನಿನ ಮೇಲೆ ಸರ್ಕಾರ ನಿಯಂತ್ರಣ
ಹೇರಬಹುದಾಗಿದೆ. ಆದರೆ ತೋಟಗಾರಿಕೆ ಉತ್ಪನ್ನಗಳಿಗೆ ಹನ್ನೆರಡು ತಿಂಗಳ ಸರಾಸರಿ ಬೆಲೆಯೇರಿಕೆಯನ್ನು
ಪರಿಗಣಿಸಲಾಗುವುದು.


ಕಾಯ್ದೆಯನ್ನು ಮಂಡಿಸಿದ ಗ್ರಾಹಕ ವ್ಯವಹಾರಗಳ ಸಚಿವ ರಾವ್‌ ಸಾಹೇಬ್‌ ಪಾಟೀಲ್‌ ದಾನ್ವೆ
ಸರ್ಧಾತ್ಮಕತೆ ಹೆಚ್ಚುತ್ತದೆ ಹಾಗೂ ಗ್ರಾಹಕರಿಗೂ ಅನುಕೂಲವಾಗಲಿದೆ ಎಂದು ಸಮರ್ಥಿಸಿಕೊಂಡರು.


ಎಎಪಿ, ಎನ್‌ಸಿಪಿ, ಕಾಂಗೆಸ್‌, ಡಿಎಂಕೆ, ಸಿಪಿಐ(ಎಂ), ಬಿಎಸ್‌ಪಿ, ಟಿಎಂಸಿ ಸದಸ್ಯರು ಮಸೂದೆಯನ್ನು
ವಿರೋಧಿಸಿ, ಇದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ನ ಎಂದು ಟೀಕಿಸಿದ್ದಾರೆ. ಎನ್‌ಡಿಎ ಜೊತೆಗೆ
ಶಿವಸೇನಾ ತನ್ನ ಬೆಂಬಲ ವ್ಯಕ್ತಪಡಿಸಿತು.


ಈ ಹಿಂದೆ ಅಗತ್ಯ ವಸ್ತುಗಳ ಕಾನೂನು ಆಹಾರದ ಕೊರತೆ ಕಾಳಸಂತೆ ಕೋರತನವನ್ನು ತಡೆಯಲು
1955ರಲ್ಲಿ ತರಲಾಗಿತ್ತು. ಇದೀಗ ಸಾಕಷ್ಟು ಆಹಾರ ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ಅದಕ್ಕೆ ಉತ್ತಮ ಬೆಲೆ
ಸಿಗುವ ಸಲುವಾಗಿ ತಿದ್ದುಪಡಿ ತರಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ತಿಳಿಸಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:16.09.2020
13. ಸಂಸತ್‌: ಬಾಲಿವುಡ್‌ ಡ್ರಗ್‌ ಗಲಾಟೆ


ಬಾಲಿವುಡ್‌ "ಮಾದಕ ನಂಟು' ವಿಚಾರ ಸಂಸತ್‌ ಅಧಿವೇಶನದಲ್ಲಿ ಪ್ರತಿದ್ಧನಿಸಿದ್ದು, ಸಂಸತ್‌ ಸದಸ್ಯರು
ಹಾಗೂ ಬಾಲಿವುಡ್‌ನ ನಟ-ನಟಿಯರ ನಡುವೆ ವಾಗ್ದಾದಕ್ಕೂ ಕಾರಣವಾಗಿದೆ.


ಹಿರಿಯ ನಟಿ ಹಾಗೂ ರಾಜ್ಯಸಭೆ ಸದಸ್ಯೆಯಾಗಿರುವ ಜಯಾ ಬಚ್ಚನ್‌ ಅವರು ಕಲಾಪದ ವೇಳೆ
ಪ್ರಸ್ತಾಪಿಸಿದ್ದಲ್ಲದೆ, ಬಾಲಿವುಡ್‌ಗೆ ಬಿ ತರಲು ನಡೆಯುತ್ತಿರುವ ಪ್ರಯತ್ನದ "ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇಂಡಸ್ಪಿಯಲ್ಲಿ ಇರುವವರೇ ಬಾಲಿವುಡ್‌ ಬಗ್ಗೆ ಅವಹೇಳನ ಮಾಡುತಿದ್ದು, ತಮಗೆ ಅನ್ನ ನೀಡುವ ಕೈಗಳನ್ನೇ
ಕಚ್ಚುವಂಥ ಕೆಲಸ ಮಾಡುತ್ತಿದ್ದಾರೆಂದು ಅವರು ಲೋಕಸಭೆಯಲ್ಲಿ ಬಾಲಿವುಡ್‌ ಡಗ್‌ ರ ವಿರುದ್ದ ಪರೋಕ್ಷ
ವಾಗಾಳಿ ನಡೆಸಿದ್ದಾರೆ. ಮನರಂಜನಾ ಕ್ಷೇತ್ರವನ್ನು ಕೆಲವರು "ಚರಂಡಿ' ಎಂದು ಕರೆದಿದ್ದಾರೆ. ಇದನ್ನು ನಾನು
ಒಪುವುದಿಲ್ಲ. ಯಾರೋ ಒಂದಿಬ್ಬರು ಮಾಡಿದ ಕೆಲಸಕ್ಕೆ ಇಡೀ ಇಂಡಸ್ಪಿಯನ್ನು ತೆಗಳುವುದು ಸರಿಯಲ್ಲ.
ದೇಶದಲ್ಲಿ ಪ್ರಾಕೃತಿಕ ವಿಕೋಪ ಸೇರಿದಂತೆ ಯಾವುದೇ ಸಂಕಷ್ಟದ ಸಮಯದಲ್ಲೂ ಬಾಲಿವುಡ್‌ ಸ್ಪಂದಿಸಿದೆ.
ಸರ್ಕಾರವು ಬಾಲಿವುಡ್‌ನ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಆಗಹಿಸಿದ್ದಾರೆ.


ಪ್ರಾಣತ್ಯಾಗಕ್ಕೂ ಸಿದ್ದ; ಸಂಸದ ರವಿಕಿಶನ್‌, ನಮ್ಮ ಸಿನಿಮಾ ಕ್ಷೇತ್ರವನ್ನು ಮುಗಿಸಲು ಸಂಚು ಮಾಡಲಾಗಿದೆ. ಆ
ಕ್ಷೇತ್ರದ ಜವಾಬ್ದಾರಿಯುತ ಸದಸ್ಯನಾಗಿ ಸಂಸತ್‌ನಲ್ಲಿ ಪ್ರಸ್ತಾಪಿಸುವುದು ನನ್ನ ಕರ್ತವ್ಯ. ಡಗ್‌ ಸೇವನೆಯು
ಬಾಲಿವುಡ್‌ನಲ್ಲಿ ಫ್ಯಾಷನ್‌ ಆಗಿಬಿಟ್ಟಿದೆ. 90ರ ದಶಕದಲ್ಲಿ ಇದು ಇರಲಿಲ್ಲ. ಡಗ್‌ನಿಂದ ಚಿತ್ರರಂಗವನ್ನು ರಕ್ಷಿಸಲು
ಯತ್ನಿಸಿದ್ದೇನೆ. ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ಬಾಲಿವುಡ್‌ ಡ್ರಗ್‌ ಕೇಸಿನ ಬಗ್ಗೆ ಧ್ವನಿಯೆತ್ತುತ್ತೇನೆ
ಎಂದಿದ್ದಾರೆ.


ಸಿನಿಮಾ ಕ್ಷೇತ್ರದಲ್ಲಿರುವ ಮಂದಿ ಮತ್ತು ಡ್ರಗ್‌ ಕಳ್ಳಸಾಗಾಣೆದಾರರ ನಡುವೆ ನಂಟಿರುವ ಬಗ್ಗೆ ಇನ್ನೂ
ಸಷ್ಠವಾದಂಥ ಯಾವುದೇ ಸಾಕ್ಷ್ಯ ಎನ್‌ಸಿಬಿಗೆ ಸಿಕ್ಕಿಲ್ಲ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.


ಸಾಮಾಜಿಕ ಅಂತರ ಬೇಡ; ಶಾರೀರಿಕ ಅಂತರವಿರಲಿ: ಕೊರೋನಾ ಹಿನ್ನೆಲೆ ಬಳಸಲಾಗುವ "ಸಾಮಾಜಿಕ ಆಂತರ'
ಎಂಬ ಪದಬಳಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ರಾಜ್ಯ ಸಭೆಯಲ್ಲಿ ವ್ಯಕ್ತವಾಯಿತು. ಸಾಮಾಜಿಕ
ಅಂತರ ಎಂಬ ಪದದಿಂದಾಗಿ ಸೋಂಕಿತರು ಮತ್ತು ಅವರ ಕುಟುಂಬ ಸದಸ್ಯರು ಸಾಮಾಜಿಕ ಕಳಂಕ
ಎದುರಿಸಿದಂತಾಗುತ್ತಿದೆ. ಅವರನ್ನು ಎಲ್ಲರೂ ದೂರವಿಟ್ಟು ಬಹಿಷ್ಠರಿಸಿದಂಥ ಭಾವನೆ ಮೂಡುತ್ತದೆ. ಹಾಗಾಗಿ
ಈ ಪದದ ಬಳಕೆಯ ಬದಲಿಗೆ ಶಾರೀರಿಕ ಅಂತರ ಎಂಬ ಪದಬಳಕೆ ಮಾಡುವುದು ಉತ್ತಮವಲ್ಲವೆಂದು
ಟಿಎಂಸಿ ನಾಯಕ ಶಾಂತನು ಸೇನ್‌ ಪಶ್ಲಿಸಿದರು. ಈ ಸಲಹೆಗೆ ಒಪ್ಪಿದ ಸಭಾಪತಿ ವೆಂಕಯ್ಯ ನಾಯ್ದು, ಸೂಕ್ತ
ಪದವನ್ನೇ ಬಳಕೆ ಮಾಡುವಂತೆ ಹೇಳಿದರು.


ಆಧಾರ:ಉದಯವಾಣಿ, ದಿನಾಂಕ:16.09.2020
14. ಬ್ಯಾಂಕಿಂಗ್‌ ನಿಯಂತ್ರಕ ವಿಧೇಯಕಕ್ಕೆ ಒಪ್ಪಿಗೆ


ಸಹಕಾರ ಬ್ಯಾಂಕ್‌ಗಳನ್ನು ಆರ್‌ಬಿಐ ವ್ಯಾಪ್ತಿಗೆ ತರುವ ಬ್ಯಾಂಕಿಂಗ್‌ ನಿಯಂತ್ರಕ (ತಿದ್ದುಪಡಿ)
ವಿಧೇಯಕವನ್ನು ಲೋಕಸಭೆ ಅಂಗೀಕರಿಸಿದೆ.


ಸರ್ಕಾರವು ಸಹಕಾರ ಬ್ಯಾಂಕ್‌ಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ವಿಧೇಯಕವನ್ನು
ಮಂಡಿಸುತ್ತಿಲ್ಲ. ಠೇವಣಿದಾರರ ಹಿತದೃಷ್ಠಿಯಿಂದ ಕಾಯಿದೆ ತರಲಾಗುತ್ತಿದೆ. ಕೆಲವು ಸಹಕಾರ ಬ್ಯಾಂಕ್‌ಗಳಲ್ಲಿ
ಪರಿಸ್ಥಿತಿ ಹದಗೆಟ್ಟಿದೆ. ಠೇವಣಿದಾರರ ಹಿತಾಸಕ್ತಿ ರಕ್ಷಣೆಗೆ ವಿಧೇಯಕದ ಅಗತ್ಯ ಇತ್ತು ಕಳೆದ ಎರಡು
ವರ್ಷಗಳಿಂದ ಸಹಕಾರ ಬ್ಯಾಂಕ್‌ಗಳು ಮತ್ತು ಸಣ್ಣ ಬ್ಯಾಂಕ್‌ಗಳಲ್ಲಿ ಠೇವಣಿದಾರರು ಸಮಸ್ಯೆ ಎದುರಿಸುತ್ತಿದ್ದಾರೆ
ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.


ಆಧಾರ:ವಿಜಯ ಕರ್ನಾಟಕ, ದಿನಾಂಕ:17.09.2020
pe)
15. ಸಂವಿಧಾನಬದ್ಧ ಶಿಕ್ಷಣ ಅಗತ್ಯ


ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಹೊಸ ಶಿಕ್ಷಣ ನೀತಿ ಮಕ್ಕಳಿಗೆ ಭವಿಷ್ಠದ ದಾರಿಯನ್ನು
ತೋರಿಸಬೇಕೇ ಹೊರತು 2 ಸಾವಿರ ವರ್ಷದ ಹಿಂದಿನ ಬದುಕಿಗೆ ಕೊಂಡೊಯ್ಯಬಾರದು ಎಂದು ಕಾಂಗೆಸ್‌
ಪಕ್ಷದ ಹಿರಿಯ ಸದಸ್ಯ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಶೂನ್ಯದ ವೇಳೆಯಲ್ಲಿ ಮಾತನಾಡಿದರು.


ನಾವು ಮಕ್ಕಳಿಗೆ ಕಲಿಸುವ ನೈತಿಕ ಮೌಲ್ಯಗಳು ಸಂವಿಧಾನಕ್ಕೆ ಬದ್ಧವಾಗಿರಬೇಕು. ಪ್ರಾಚೀನ ಸಾಂಸ್ಕೃಶಿಕ
ಮೌಲ್ಯಗಳಿಗೆ ಜೋತು ಬೀಳುವ ಅಗತ್ಯವಿಲ್ಲ. ಭಾಷೆ ಮತ್ತು ಸಾಹಿತ್ಯ ಸಾಂಸ್ಕೃತಿಕ ಮೌಲ್ಯಗಳನ್ನು ಹೇಳಿಕೊಡುತ್ತವೆ.
ಸಂವಿಧಾನದ ವಿಧಿ 28(1)ರಂತೆ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳಲ್ಲಿ ಯಾವುದೇ ಧಾರ್ಮಿಕ
ಶಿಕ್ಷಣವನ್ನು ನೀಡುವಂತಿಲ್ಲ. ನಗರ ಪ್ರದೇಶದಲ್ಲಿ ಓದುವ ಮಕ್ಕಳು ನರ್ಸರಿಯಲ್ಲೇ ಓದಲು ಮತ್ತು ಬರೆಯಲು
ಕಲಿತಿರುತ್ತಾರೆ. ಅವರಿಗೆ 1ನೇ ತರಗತಿ ಕಷ್ಟವಾಗುವುದಿಲ್ಲ.


ಆದರೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂಗನವಾಡಿಯಲ್ಲಿ ಈ ರೀತಿ ಶಿಕ್ಷಣ ಸಿಗುವುದಿಲ್ಲ. ಅಂಗನವಾಡಿ
ಶಿಕ್ಷಕರಿಗೆ ಸೂಕ್ತ ತರಬೇತಿ ವ್ಯವಸ್ಥೆ ಇಲ್ಲ. ಬಡ ಮಕ್ಕಳಿಗೆ ಆರಂಭದಲ್ಲೇ ಶಿಕ್ಷಣ ಕಬ್ಬಿಣದ ಕಡಲೆ ಆಗುತ್ತದೆ. 10ನೇ
ತರಗತಿಗೆ ಬರುವ ವೇಳೆಗೆ ಶೇ.50ರಷ್ಟು ಶಾಲೆ ತ್ಯಜಿಸುತ್ತಾರೆ. ಇದನ್ನು ತಡೆಗಟ್ದಲು ಯಾವುದೇ ರೀತಿಯಲ್ಲೂ
ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಶಾಲೆ ಬಿಡುವ ಮಕ್ಕಳಲ್ಲಿ ಶೇ.32.4 ದಲಿತರು, ಶೇ.25.7
ಅಲ್ಪಸಂಖ್ಯಾತರು, ಶೇ.16.4 ಆದಿವಾಸಿಗಳು. ಸರ್ಕಾರಿ ಶಾಲೆ ಶಿಕ್ಷಕರಿಗೆ ಚುನಾವಣೆ, ಗಣತಿ, ಲಸಿಕೆ ಹಾಕುವುದು
ಸೇರಿದಂತೆ ಹಲವು ಕೆಲಸವನ್ನು ಒಪ್ಪಿಸಿದ್ದೇವೆ. ಇದರಿಂದ ಅವರಿಗೆ ಮಕ್ಕಳ ಪಾಠಕ್ಕೆ ಹೆಚ್ಚಿನ ಗಮನ ಹರಿಸಲು
ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್‌ ಕಷ್ಟದ
ವಿಷಯಗಳು. ಇವುಗಳನ್ನು ಕಲಿಸುವ ಉತ್ತಮ ಶಿಕ್ಷಕರು ಬೇಕು. ಗ್ರಾಮೀಣ ಮಕ್ಕಳಿಗೆ ಸಂಸ್ಕೃತ, ಸಂಸ್ಕೃತಿ ಎಂದರೆ
ಅವರಿಗೆ ಆಧುನಿಕ ಶಿಕ್ಷಣ ಲಭಿಸುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ.


ಕಾಂಗೆಸ್‌ ಪಕ್ಷದ ಸದಸ್ಯ ಪ್ರತಾಪ್‌ಸಿಂಗ್‌ ಬಜ್ಞಾ ಮತ್ತು ಅಕಾಲಿದಳದ ಬಲ್ಪಿಂದರ್‌ ಸಿಂಗ್‌ ಭುಂದರ್‌
ಮಾತನಾಡಿ, ಪಂಜಾಬಿ ಭಾಷೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕೃತ ಭಾಷೆಗಳ ಪಟ್ಟಗೆ ಸೇರಿಸಬೇಕೆಂದು
ಒತ್ತಾಯಿಸಿದ್ದಾರೆ. ರಾಜಮಣಿ ಪಟೇಲ್‌ ಕಾಮನ್ವೆಲ್ತ್‌ ಕ್ರೀಡಾ ಕೇಂದವನ್ನು ರೇವಾದಲ್ಲಿ ಸ್ಥಾಪಿಸಬೇಕೆಂದು
ಒತ್ತಾಯಿಸಿದ್ದಾರೆ. ರಾಕೇಶ್‌ ಸಿನ್ಹಾ ಮಾತನಾಡಿ ನೈಸರ್ಗಿಕ ವಿಕೋಪ ನಿರ್ವಹಣೆಯನ್ನು ಶಾಲೆ ಮತ್ತು
ಕಾಲೇಜುಗಳ ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಸಲಹೆ ಮಾಡಿದ್ದಾರೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:17.09.2020
16. ದಕಿಣ ರಾಜ್ಯಗಳಲ್ಲಿ ಐಸಿಸ್‌ ಸಕ್ತಿಯ
ಖ FY ಊ ಹಿಪ್‌
ಕರ್ನಾಟಕವೂ ಸೇರಿ ದಕ್ಷಿಣಂ ಭಾರತದ ರಾಜ್ಯಗಳಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌
(ಐಸಿಸ್‌) ಇರುವಿಕೆ ಕುರಿತು ರಾಷ್ಟೀಯ ತನಿಖಾ ದಳ (ಎನ್‌ಐಎ) 17 ಮೊಕದ್ದಮೆಗಳನ್ನು ದಾಖಲಿಸಿದೆ.


ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ 122 ಜನರನ್ನು ಬಂಧಿಸಿದೆ ಎಂದು
ಗೃಹ ಖಾತೆ ರಾಜ್ಯ ಸಚಿವ ಜಿ. ಕಿಷನ್‌ರೆಡ್ಡಿ ರಾಜ್ಯಸಭೆಗೆ ತಿಳಿಸಿದ್ದಾರೆ.


ದಕ್ಷಿಣದ ರಾಜ್ಯಗಳ ಸಹಿತ ವಿವಿಧ ರಾಜ್ಯಗಳ ಅನೇಕ ಜನರು ಇಸಿಸ್‌ ಸೇರಿರುವ ಕುರಿತು ಕೇಂದ್ರ
ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ಬಂದಿದೆ ಎಂದು ಇಸಿಸ್‌ ಉಗ್ರರ ಬಂಧನಕ್ಕೆ ಯಾವ
ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.


ಐಸಿಸ್‌ ಹೆಚ್ಚು ಸಕ್ರಿಯವಾಗಿರುವ ಇನ್ನಿತರ ರಾಜ್ಯಗಳು: ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ, ಉತ್ತರ
ಪ್ರದೇಶ, ಮಧ್ಯಪ್ರದೇಶ ಮತ್ತು ಜಮ್ಮು- ಕಾಶ್ಮೀರ.


ಅಕಾಲಿ ದಳ ವಿಪ್‌: ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ಬರಲಿರುವ ಕೃಷಿ ವಲಯಕ್ಕೆ ಸಂಬಂಧಿಸಿದ 3
ಮಸೂದೆಗಳು ರೈತ ವಿರೋಧಿಯಾಗಿವೆ ಎಂದು ಬಿಜೆಪಿಯ ಮಿತ್ರ ಪಕ್ಷ ಅಕಾಲಿ ದಳ ದೂರಿದ್ದು, ಮೂರೂ
ಮಸೂದೆಗಳ ವಿರುದ್ಧ ಮತ ಚಲಾಯಿಸುವಂತೆ ಸಂಸದರಿಗೆ ವಿಪ್‌ ಜಾರಿ ಮಾಡಿದೆ.


ಸಂಸದ ತೇಜಸ್ವಿ ಸೂರ್ಯ : ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿರುವುದರಿಂದ ಬೆಂಗಳೂರು ಗ್ರಾಮಾಂತರ,
ಕೋಲಾರ, ಚಿಕ್ಕಬಳ್ಳಾಪುರ, ಜಿಲ್ಲೆಯ ರೈತರಿಗೆ ನಷ್ಟವುಂಟಾಗಲಿದೆ. ಈ ಆದೇಶದಿಂದ ಬೆಂಗಳೂರು ರೋರು್‌
ತಳಿಯ ಈರುಳ್ಳಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕೇರಳದ ಚಿನ್ನ ಕಳ್ಳಸಾಗಣೆ
ಪ್ರಕರಣದಲ್ಲಿ ಕೇರಳ ಸರ್ಕಾರದ ಮಂತ್ರಿಗಳು ಸ್ವಜನ ಪಕ್ಷಪಾತ ಅನುಸರಿಸುತ್ತಿದ್ದಾರೆ ಎಂದು ಲೋಕಸಭೆಯಲ್ಲಿ
ಆರೋಷತಿಸಿದ್ದಾರೆ.

ಸುಧಾರಣೆಗೆ ವಿಧೇಯಕ ನಾಂದಿ: ಸಹಕಾರಿ ಬ್ಯಾಂಕುಗಳಲ್ಲಿ ವೃತ್ತಿಪರತೆ ಹೆಚ್ಚಿಸಲು, ಸಶಕ್ತ ಬ್ಯಾಂಕಿಂಗ್‌
ವ್ಯವಸ್ಥೆಯಿಂದ ಭ್ರಷ್ಟಾಚಾರ ಮುಕ್ತಗೊಳಿಸಿ ಗ್ರಾಹಕ ಹಿತಾಸಕ್ತಿ ಕಾಪಾಡಲು ಮತ್ತು ಕೊರೋನಾದಿಂದ
ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಎದುರಿಸಲು ಸಹಕಾರಿ ಬ್ಯಾಂಕುಗಳನ್ನು ಆರ್‌ಬಿಐ ವ್ಯಾಪಿಗೆ ತಂದಿರುವುದು
ಸಮರ್ಥನೀಯ ಎಂದು ಸಂಸದ ಶಿವಕುಮಾರ್‌ ಉದಾಸಿ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಮಸೂದೆಗೆ
ಲೋಕಸಭೆ ಒಪ್ಪಿಗೆ ನೀಡಿದೆ.


ವಲಸಿಗರ ಸಾವು, ಸ್ಪಷ್ಟನೆ: ಲಾಕ್‌ಡೌನ್‌ ವೇಳೆ ಮೃತಪಟ್ಟ ವಲಸೆ ಕಾರ್ಮಿಕರ ಕುರಿತು ಮಾಹಿತಿ ಸಂಗ್ರಹಿಸಲು
ಜಿಲ್ಲೆಗಳಲ್ಲಿ ವ್ಯವಸ್ಥೆ ಇಲ್ಲದ ಕಾರಣ ನಿಖರ ಅಂಕಿಅಂಶ ಇಲ್ಲ ಎಂದು ಸರ್ಕಾರ ತಿಳಿಸಿದೆ. ಈ ಕುರಿತು ಮಾಹಿತಿ
ಸಂಗಹಿಸಲು ಮುನಿಸಿಪಲ್‌ ಮಟ್ಟದಲ್ಲಿ ಯಾವುದೇ ವ್ಯವಸ್ಥ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್‌
ಗಂಗ್ಲಾರ್‌ ಲೋಕಸಭೆಯಲ್ಲಿ ನೀಡಿದ್ದ ಹೇಳಿಕೆ, ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ವಲಸೆ ಕಾರ್ಮಿಕರು
ಮೃತರಾದ ಬಗ್ಗೆ ಸರ್ಕಾರದ ಬಳಿ ಮಾಹಿತಿಯಿಲ್ಲ ಎಂಬ ಹೇಳಿಕೆಗೆ ವ್ಯಕ್ತವಾಗಿರುವ ತೀವ್ರ ಪ್ರತಿರೋಧದ
ಹಿನ್ನೆಲೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದರು.


ಜನಗಣತಿ ಮುಂದೂಡಿಕೆ: 2020ರ ಜನಗಣತಿಯ ಮೊದಲನೇ ಹಂತವು ಏಪ್ರಿಲ್‌ 1 ರಿಂದ ಸೆಪ್ಲೆಂಬರ್‌
30ರವರೆಗೆ ನಡೆಯಬೇಕಿದ್ದು, ಕೊರೋನಾ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ
ಮುಂದೂಡಿರುವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.


ಆಧಾರ:ವಿಜಯವಾಣಿ, ದಿನಾ೦ಕ:17.09.2020
17. ಜಿಎಸ್‌ಟಿ ನಷ್ಟ: ಶೀಘ್ರ ತೀರ್ಮಾನ


ರಾಜ್ಯಗಳಿಗೆ ಜಿಎಸ್‌ಟಿ ನಷ್ಟವನ್ನು ಯಾವ ರೀತಿ ಭರಿಸಿಕೊಡಬೇಕು ಎಂಬ ಕುರಿತು ಜಿಎಸ್‌ಟಿ ಮಂಡಳಿ
ತೀರ್ಮಾನ ಕೈಗೊಳ್ಳುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.


ಬಜೆಟ್‌ ಪೂರಕ ಬೇಡಿಕೆ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು,
“ದೇವರು ಸೃಷಿಸಿದ ಅಸಾಮಾನ್ಯ ಸನ್ನಿವೇಶದಿಂದ ಆದಾಯ ಕೊರತೆ ಎದುರಾಗಿದೆ. ಆದರೂ ಜಿಎಸ್‌ಟಿ
ಮಂಡಳಿ ಈ ಕುರಿತು ಚರ್ಚೆ ನಡೆಸಲಿದೆ. ಎಲ್ಲಾ ರಾಜ್ಯಗಳಿಗೂ ಅನ್ಸಯವಾಗುವಂತಹ ನಷ್ಟ ಪರಿಹಾರ
ಸೂತ್ರವನ್ನು ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.


ಪೂರಕ ಬೇಡಿಕೆಯಲ್ಲಿ ಮಂಡಿಸಲಾಗಿರುವ ಮೊತ್ತದ ಬಹುಭಾಗ ಜನಕೇಂದ್ರಿತ ಯೋಜನೆಗಳಿಗೆ
ವೆಚ್ಚವಾಗಲಿದೆ. ಮನ್‌ರೇಗಾ ಯೋಜನೆಗೆ ರೂ.40 ಸಾವಿರ ಕೋಟಿ ನೀಡಲಾಗುತ್ತದೆ. ಬಜೆಟ್‌ನಲ್ಲಿ ಘೋಷಿಸಿದ್ದ
ರೂ.61,500 ಕೋಟಿ ಜೊತೆಗೆ ಹೆಚ್ಚುವರಿಯಾಗಿ ಈ ಮೊತ್ತ ನೀಡಲಾಗುವುದು. ಇದರಿಂದ ಇದೇ ಮೊದಲ


ಬಾರಿಗೆ ಮನ್‌ರೇಗಾಕ್ಕೆ ರೂ.ಒಂದು ಲಕ್ಷ ಕೋಟಿ ಅನುದಾನ ನೀಡಿದಂತಾಗುತ್ತದೆ. ಪೂರಕ ಬೇಡಿಕೆಯಲ್ಲಿನ
ಬಹುಪಾಲನ್ನು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಗೂ ಮೀಸಲಿಡಲಾಗುವುದು. ” ಎಂದು ನಿರ್ಮಲಾ
ಸೀತಾರಾಮನ್‌ ತಿಳಿಸಿದ್ದಾರೆ.

ಸದನವು ಧ್ವನಿಮತದ ಮೂಲಕ ರೂ.235 ಲಕ್ಷ ಕೋಟಿ ಪೂರಕ ಬೇಡಿಕೆಗಳಿಗೆ ಲೋಕಸಭೆ
ಅನುಮೋದನೆ ನೀಡಿತು. ಇದರಲ್ಲಿ ರೂ.166 ಲಕ್ಷ ಕೋಟಿ ಕೋವಿಡ್‌-19 ನಿರ್ವಹಣೆಗೆ ಬಳಕೆಯಾಗಲಿದೆ.
ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷ ಮುಖಂಡರು, ದೇಶದ ಆರ್ಥಿಕತೆ ಪಾತಾಳಕ್ಕೆ
ಕುಸಿದಿದ್ದರೂ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು
ಟೀಕಿಸಿದ್ದಾರೆ.


ಆಧಾರ:ವಿಜಯಕರ್ನಾಟಕ, ದಿನಾ೦ಕ:19.09.2020
18. ಲೋಕಸಭೆಯಲ್ಲಿ ಪ್ರಧಾನಿ ನಿಧಿ ನಿಗಿನಿಗಿ


ಪಿಎಂ ಕೇರ್ಸ್‌ ನಿಧಿ ಕುರಿತು ಮಾತನಾಡುವ ಸಂದರ್ಭದಲ್ಲಿ, ಹಣಕಾಸು ಖಾತೆ ಸಹಾಯಕ ಸಚಿವ
ಅನುರಾಗ್‌ ಠಾಕೂರ್‌ ಅವರು ಗಾಂಧಿ ಕುಟುಂಬದ ಕುರಿತು ಉಲ್ಲೇಖ ಮಾಡಿದ್ದೇ ಗದ್ದಲ, ಕಲಾಪ
ಮುಂದೂಡಿಕೆಗೆ ಕಾರಣವಾಯಿತು. ಠಾಕೂರ್‌ ಕ್ಷಮೆ ಕೋರಲೇಬೇಕೆಂದು ಕಾಂಗೆಸ್‌ ಸದಸ್ಯರು ಪಟ್ಟು ಹಿಡಿದರು.
ಅಂತಿಮವಾಗಿ, “ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುವೆ” ಎಂದು ಠಾಕೂರ್‌ ಹೇಳಿಕೆ
ನೀಡಿದ ಬಳಿಕ ಪ್ರಕರಣ ಅಂತ್ಯ ಕಂಡಿತು.


“ಪಿಎಂ ಕೇರ್ಸ್‌ ನಿಧಿ ವಿಚಾರದಲ್ಲಿ ಕೆಲವರು ಕೋರ್ಟ್‌ಗೆ ಹೋದರು. ಹೈಕೋರ್ಟ್‌ಗಳಿಂದ ಹಿಡಿದು
ಸುಪ್ರೀಂ ಕೋರ್ಟ್‌ವರೆಗೆ ಎಲ್ಲಾ ನ್ಯಾಯಾಲಯಗಳು ಸರ್ಕಾರದ ಕ್ರಮವನ್ನು ಎತ್ತಿ ಡನ ಮಕ್ಕಳು ತಮ್ಮ ಪಿಗ್ಗಿ
ಬ್ಯಾಂಕ್‌ಗಳಿಂದ ಹಣ ತೆಗೆದು ಈ “ನಿಧಿಗೆ ಕೊಟ್ಟಿದ್ದಾರೆ. ಅದೇ ಸ್ರಧಾನಿಯವರ ರಾಷ್ಟ್ರೀಯ ವಿಷತ್ತ ಪರಿಹಾರ
ನಿಧಿಯನ್ನು 1948ರಲ್ಲಿ ಅಂದಿನ ಪ್ರಧಾನಿ ಜವಾಹರ್‌ಲಾಲ್‌ ನೆಹರು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ
ee ನಿರ ನೋಂದಣಿ ಆಗಲಿಲ್ಲ. ನೀವು (ಕಾಂಗೆಸ್‌ನವರು) ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ,
ರಾಹುಲ್‌ ಗಾಂಧಿ ಅವರಿಗಾಗಿ ಟ್ರಸ್ಟ್‌ ಸಹ ನೋಂದಣಿಯಾಗಲಿಲ್ಲ. ಪಿಎಂ ಕೇರ್ಸ್‌ ನಿಧಿ ನೋಂದಾಯಿತ ಟಸ್ಟ್‌
ಆಗಿದೆ.” ಎನ್ನುವ ಮೂಲಕ ಠಾಕೂರ್‌ ವಿವಾದದ ಕಿಡಿ ಎಬ್ಬಿಸಿದರು.


ಠಾಕೂರ್‌ ಅವರು ಗಾಂಧಿ ಕುಟುಂಬದ ಹೆಸರು ಪ್ರಸ್ತಾಪಿಸಿದ್ದು, ಕಾಂಗೆಸ್‌ ಸದಸ್ಯರನ್ನು ಕೆರಳಿಸಿತು.
ಕ್ಷಮೆಗೆ ಆಗಹಿಸಿ ಧರಣಿ ನಡೆಸಲು ಮುಂದಾದರು. ಕೊರೋನಾ ಸುರಕ್ಷತಾ ಕ್ರಮಗಳನ್ನು ಕಡೆಗಣಿಸಿದರೆ
ಮುಲಾಜಿಲ್ಲದೆ ಹೊರಹಾಕುವುದಾಗಿ ಸ್ಪೀಕರ್‌ ಓಂ ಬಿರ್ಲಾ ಎಚ್ಚರಿಕೆ ನೀಡಿದರೂ ಮಣಿಯಲಿಲ್ಲ. ಉತ್ತರ ನೀಡುವ
ಭರದಲ್ಲಿ ಕಾಂಗೆಸ್‌ ನಾಯಕ ಅಧೀರ್‌ರಂಜನ್‌ ಚೌಧರಿ ಅವರು ಅನುರಾಗ್‌ ಠಾಕೂರ್‌ ಅವರನ್ನು "ಚೋಕ್ರಾ'
(ಬಾಲಕ) ಎಂದು ಕರೆದದ್ದೂ ಆಯಿತು. ಈ ನಡುವೆ ತೃಣಮೂಲ ಕಾಂಗೆಸ್‌ನ ಕಲ್ಯಾಣ್‌ ಬ್ಯಾನರ್ಜಿ ಅವರು
ಸ್ಪೀಕರ್‌ ಪಕ್ಷಪಾತ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರತಿಪಕ್ಷಗಳ ಗದ್ದಲ ಮುಂದುವರಿದ ಕಾರಣ
ಸ್ಲೀಕರ್‌ ಕಲಾಪ ಮುಂದೂಡಿದರು. ಮೂರು ಸಲ ಸದನ ಸೇರಿದಾಗಲೂ ಇದೇ ಪುನರಾವರ್ತನೆಯಾಯಿತು.
ನಾಲ್ದು ಭಾರಿ ಮುಂದೂಡಿಕೆ ಕಂಡ ಬಳಿಕ ಸದನ ಸೇರಿದಾಗ ಠಾಕೂರ್‌ ವಿಷಾದ ವ್ಯಕ್ತಪಡಿಸಿದ್ದಾರೆ.


ಅಶೋಕ್‌ ಗಸಿಗೆ ರಾಜ್ಯ ಸಭೆ ಗೌರವ: ನಿಧನರಾದ ರಾಜ್ಯಸಭೆ ಸದಸ್ಯ ಅಶೋಕ್‌ ಗಸ್ತಿ ಹಾಗೂ ಮಾಜಿ
ಸದಸ್ಯೆ ಕಪಿಲಾ ವಾತ್ಸ್ಯಾಯನ ಅವರಿಗೆ ರಾಜ್ಯ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಬಳಿಕ ಮೃತರ
ಗೌರವಾರ್ಥ 30 ನಿಮಿಷ ಕಲಾಪ ಮುಂದೂಡಲಾಯಿತು. ಸದನದ ಹಾಲಿ ಸದಸ್ಯರು ನಿಧನರಾದರೆ ದಿನದ
ಮಟ್ಟಿಗೆ ಕಲಾಪ ಮುಂದೂಡಿ ಗೌರವ ಸಲ್ಲಿಸುವುದು ವಾಡಿಕೆ. ಆದರೆ, ಕೊರೋನಾ ಸಂದರ್ಭದಲ್ಲಿ ಕಡಿಮೆ
ಅವಧಿಯ ಅಧಿವೇಶನ ನಡೆಯುತ್ತಿರುವುದರಿಂದ ಅರ್ಧಗಂಟೆ ಕಾಲ ಕಲಾಪ ಮುಂದೂಡಲಾಯಿತು. ನಂತರ,
ಕೊರೋನಾ ಕಾರಣದಿಂದ ಸಂಸದರ ವೇತನವನ್ನು ಶೇ.30ರಷ್ಟು ಕಡಿತ ಮಾಡುವ ವಧೇಯಕಕ್ಕೆ ರಾಜ್ಯ ಸಭೆ
ಅನುಮೋದನೆ ನೀಡಿತು. ಈ ವಿಧೇಯಕಕ್ಕೆ ಲೋಕಸಭೆ ಈಗಾಗಲೇ ಅಂಗೀಕಾರ ನೀಡಿದೆ.


ಆಧಾರ:ವಿಜಯ ಕರ್ನಾಟಕ, ದಿನಾಂಕ:19.09.2020


19. ವೈದ್ಯರ ಮೇಲೆ ದೌರ್ಜನ್ಯ ಎಸಗಿದರೆ 7 ವರ್ಷ ಜೈಲು


ಕೊರೋನಾ ವಿರುದ್ದ ಹೋರಾಟ ನಡೆಸುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಬಲ
ತುಂಬುವ ವಿಧೇಯಕವನ್ನು ರಾಜ್ಯ ಸಭೆ ಅಂಗೀಕರಿಸಿದೆ. ಕೊರೋನಾ ಕರ್ತವ್ಯದಲ್ಲಿ ನಿರತರಾಗಿರುವ ಅಥವಾ
ಇತರ ಆರೋಗ್ಯ ಸೇವೆಗಳಲ್ಲಿ ತೊಡಗಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ದಾಳಿ ಮಾಡಿದರೆ 7
ವರ್ಷದವರೆಗೆ ಜೈಲು ಶಿಕ್ಷೆಯಾಗಲಿದೆ. "ಸಾಂಕ್ರಾಮಿಕ ರೋಗಗಳ (ತಿದ್ದುಡಿ) ಕಾಯ್ದೆ ಮಸೂದೆ-2020°
ವಿಧೇಯಕವನ್ನು ಸರ್ವಾನುಮತದಿಂದ ಸದನ ಅಂಗೀಕರಿಸಿತು. ಕಳೆದ ಏಪ್ರಿಲ್‌ನಲ್ಲೇ ಸುಗ್ರೀವಾಜ್ಞೆಯನ್ನು ಕೇಂದ್ರ
ಸರ್ಕಾರ ಜಾರಿಗೆ ತಂದಿರುತ್ತದೆ. ಈಗ ಅಂಗೀಕಾರವಾಗಿರುವ ಮಸೂದೆಯು ಸುಗೀವಾಜ್ಞೆಯ ಸ್ಥಾನವನ್ನು
ಅಲಂಕರಿಸಲಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:20.09.2020
20. ಸಂಸತ್‌ ಅಧಿವೇಶನ ಮೊಟಕು


ಕೊರೋನಾ ವೈರಸ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಸತ್‌ ಮುಂಗಾರು ಅಧಿವೇಶನವನ್ನು
ಮೊಟಕುಗೊಳಿಸುವಂತೆ ಸಂಸದೀಯ ವ್ಯವಹಾರಗಳ ಸಲಹಾ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು,
ಪ್ರಸ್ತಾವನೆಯನ್ನು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾಗೆ ಕಳುಹಿಸಲಾಗಿರುತ್ತದೆ.


ಸೆಪ್ಟೆಂಬರ್‌ 14ರಂದು ಆರಂಭವಾಗಿರುವ ಅಧಿವೇಶನ ಅಕ್ಟೋಬರ್‌ 1ರವರೆಗೆ ನಿಗದಿಯಾಗಿದ್ದು,
ಮುನ್ನಚ್ಚೆರಿಕೆ ಕ್ರಮಗಳನ್ನು ನಡೆಸಲಾಗುತ್ತಿದ್ದರೂ, ಸಂಸದರಿಗೆ ಕೊರೋನಾ ಸೋಂಕು ಕಂಡುಬರುತ್ತಿದೆ. ಅವರ
ಆರೋಗ್ಯ ದೃಷ್ಟಿಯಿಂದ ಕಲಾಪವನ್ನು ಅವಧಿಗೂ ಮುನ್ನ ಮುಕ್ತಾಯಗೊಳಿಸುವುದು ಸೂಕ್ತ ಎಂದು ಸಮಿತಿಯ
ಬಹುತೇಕ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಸಂಸತ್‌ನಲ್ಲಿ ಸರ್ಕಾರ ಹೇಳಿದ್ದು:
> ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಕೇವಲ ಮೇಡ್‌ ಇನ್‌ ಇಂಡಿಯಾ ವಸ್ತುಗಳನ್ನು ಮಾರಾಟ ಮಾಡುವ
ಬಗ್ಗೆ ನಿರ್ಧಾರ ಕೈಗೊಂಡಿಲ್ಲ.
> ಡಿಆರ್‌ಡಿಒ 8 ಅತ್ಯಾಧುನಿಕ ತಂತ್ರಜ್ಞಾನ ಕೇಂದಗಳನ್ನು ದೇಶಾದ್ಯಂತ ಸ್ಥಾಪಿಸಿದ್ದು, ರಕ್ಷಣೆಗೆ
ಸಂಬಂಧಿಸಿದ ಸಂಶೋಧನೆ ನಡೆಯುತ್ತಿದೆ.
» ರೂ.2 ಸಾವಿರ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆಯುವ ಯಾವುದೇ ಪ್ರಸ್ತಾವನೆ ಇಲ್ಲ
» ಏಪಿಲ್‌ನಿಂದ ಆಗಸ್ಟ್‌ವರೆಗೆ ನೇರ ತೆರಿಗೆ ಸಂಗಹದಲ್ಲಿ ಶೇ.31 ಕುಸಿತ ಮತ್ತು ಪರೋಕ್ಷ ತೆರಿಗೆ ಶೇ.1
ಹಿನ್ನಡೆ.
ಹಿಂದಿ ಹೇರಿಕೆ ಸಲ್ಲದು: ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರುವುದನ್ನು ಖಂಡಿತಾ ವಿರೋಧಿಸುತ್ತೇನೆ
ಎಂದು ಸಂಸದೆ ಸುಮಲತಾ ಅವರು ಹೇಳಿದ್ದಾರೆ. ಶೂನ್ಯ ವೇಳೆಯ ಕಲಾಪದಲ್ಲಿ ಮಾತನಾಡಿದ ಅವರು, ಭಾಷಾ
ಹೇರಿಕೆಯಿಂದ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಹಿಂದಿ
ಹೇರಿಕೆ ಮೂಲಕ ಕನ್ನಡವನ್ನು ಮೂಲೆಗುಂಪು ಮಾಡುವುದು ಭಾವನೆಗೆ ಘಾಸಿಯುಂಟು ಮಾಡುತ್ತದೆ. ಕೇಂದ್ರ
ಸರ್ಕಾರದ ತ್ರಿಭಾಷಾ ಸೂತ್ರ ಸ್ಥಳೀಯ ಭಾಷೆಯ ಮೇಲೆ ಹಿಂದಿ ಹೇರುವುದೇ ಆಗಿದೆ ಎಂಬ ಅಭಿಪ್ರಾಯ
ಬಲಗೊಳ್ಳುತ್ತಿದೆ. ಕೇಂದವು ವಿವಿಧತೆಯಲ್ಲಿ ಏಕತೆಯ ತತ್ನವನ್ನು ಮರೆಯಬಾರದು ಎಂದಿದ್ದಾರೆ.
ಆಧಾರ:ವಿಜಯವಾಣಿ, ದಿನಾಂಕ:20.09.2020
21. ದಿವಾಳಿ ವಿಧೇಯಕದ ತಿದ್ದುಪಡಿಗೆ ಅಸ್ತು


ದಿವಾಳಿ ಮತ್ತು ದಿವಾಳಿತನ ನೀತಿ (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ರಾಜ್ಯ ಸಭೆ ಅಂಗೀಕಾರ
ನೀಡಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಜಾರಿಗೆ ಬಂದಿದೆ.


ವಿಧೇಯಕದ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ವಿತ್ತ ಸಚಿವೆ
ನಿರ್ಮಲಾ ಸೀತಾರಾಮನ್‌, “ಮಾರ್ಚ್‌ 25 ರಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ಕಾರಣ
ಅಂದಿನಿಂದ ಸಾಲ ಮರುಪಾವತಿ ಮಾಡಲು ಅನೇಕ ಕಂಪನಿಗಳಿಗೆ ಸಾಧ್ಯವಾಗಿಲ್ಲ. ಅವುಗಳ ವಿರುದ್ಧ ಕನಿಷ್ಠ ಆರು
ತಿಂಗಳ ಮಟ್ಟಿಗೆ ದಿವಾಳಿ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಈ ತಿದ್ದುಪಡಿ ಮಾಡಲಾಗಿದೆ” ಎಂದಿದ್ದಾರೆ.
ವ್ಯಾಪಾರೋದ್ಯಮಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಚಿವೆ ಹೇಳಿದ್ದಾರೆ.


“ಕಾರ್ಪೊರೇಟ್‌ ಸಾಲಗಾರರು ಮತ್ತು ವೈಯಕ್ತಿಕ ಖಾತರಿದಾರರ ವಿರುದ್ಧ ದಿವಾಳಿ ಪ್ರಕ್ರಿಯೆ ಜರುಗಿಸಲು
ಅವಕಾಶವಿದೆ” ಎಂದು ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರವಾಗಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ ಹಾಗೂ
2016ರಲ್ಲಿ ಜಾರಿಗೆ ಬಂದಿರುವ ದಿವಾಳಿ ವಿಧೇಯಕವು ಈವರೆಗೆ ಐದು ತಿದ್ದುಪಡಿಗಳನ್ನು ಕಂಡಿದೆ ಎಂದು
ಹೇಳಿದ್ದಾರೆ.


ಆಧಾರ:ವಿಜಯ ಕರ್ನಾಟಕ, ದಿನಾಂಕ:20.09.2020
22. ಕೃಷಿ ಮಸೂದೆ ಅಂಗೀಕಾರ ವೇಳೆ ಕೋಲಾಹಲ
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ 2 ಮಸೂದೆಗಳ ಅಂಗೀಕಾರ ವೇಳೆ ರಾಜ್ಯಸಭೆಯಲ್ಲಿ ಬಾರಿ ಕೋಲಾಹಲವೇ


ನಡೆದಿದೆ. "ಒರಿಯರ ಮನೆ” ಎಂದು ಕರೆಸಿಕೊಳ್ಳುವ ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಉಪ
ಸಭಾಪತಿಗಳತ್ತ ನಿಯಮಾವಳಿ ಪುಸ್ತಕವನ್ನು ತೂರಿ, ಕಾಗದ ಪತ್ರಗಳನ್ನು ಹರಿದು ಎಸೆದು ಹಾಗೂ ಅಧಿಕಾರಿಗಳ
ಟೇಬಲ್‌ ಏರಿ ನಿಂತ ಅಪರೂಪದ ಘಟನೆ ನಡೆದಿದೆ. ಎಪಿಎಂಸಿ ಹೊರಗೂ ರೈತರು ತಮ್ಮ ಕೃಷಿ ಉತ್ಪನ್ನ
ಮಾರಾಟ ಮಾಡಲು ಅವಕಾಶ ನೀಡುವ ಹಾಗೂ ಕಂಪನಿಗಳ ಜೊತೆ ರೈತರು ಗುತ್ತಿಗೆ ಕರಾರು ಮಾಡಿಕೊಳ್ಳುವ
ಎರಡು ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದವು. ಇದನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
ವಿಧೇಯಕ ಅಂಗೀಕಾರ ಉದ್ದೇಶದಿಂದ ಸದನದ ಕಾರ್ಯಕಲಾಪವನ್ನು ನಿಗದಿತ ಸಮಯಕ್ಕಿಂತ
ವಿಸ್ತರಿಸಲಾಯಿತು. ಈ ಮಸೂದೆಗಳನ್ನು ವಿಸ್ತೃಕವಾಗಿ ನಿಷ್ಠರ್ಷೆಗೆ ಒಳಪಡಿಸಲು ಆಯ್ಕೆ ಸಮಿತಿ ಸುಪರ್ದಿಗೆ
ನೀಡಬೇಕು ಎಂದು ಪ್ರತಿಪಕ್ಷಗಳ 4 ಸದಸ್ಯರು ನಿಲುವಳಿ ಮಂಡಿಸಿದರು. ಇದಕ್ಕೆ ಧ್ವನಿಮತದಲ್ಲಿ ಸೋಲಾಯಿತು.
ಪ್ರತಿಭಟನಾ ನಿರತ ಪ್ರತಿಪಕ್ಷಗಳು ಮತ ವಿಭಜನೆಗೆ ಪಟ್ಟು ಹಿಡಿದವು. ಸದಸ್ಯರು ಆಸನದಲ್ಲಿ ಕುಳಿತಿದ್ದರೆ ಮಾತ್ರ
ಮತ ವಿಭಜನೆ ಮಾಡಬಹುದು ಎಂದು ಉಪ ಸಭಾಪತಿ ಹರಿವಂಶ ಅವರು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ
ತೃಣಮೂಲ ಕಾಂಗೆಸಿನ ಡೆರಿಕ್‌ ಒಬ್ರಿಯಾನ್‌ ಅವರು ಉಪ ಸಭಾಪತಿಗಳ ಪೋಡಿಯಂನತ್ತ ನುಗ್ಗಿದರು.
ನಿಯಮ ಪುಸ್ತಕವನ್ನು ಉಪ ಸಭಾಪತಿಯ ಮುಖದತ್ತ ಎಸೆದರು. ಈ ಸಂದರ್ಭದಲ್ಲಿ ಮಾರ್ಷಲ್‌ಗಳು
ಅಡ್ಡಿಪಡಿಸಿದರು. ಉಪ ಸಭಾಪತಿಗಳ ಪೀಠದಿಂದ ಮೈಕ್ರೋಫೋನ್‌ ಕಿತ್ತೆಸೆಯುವ ಪ್ರಯತ್ನವೂ ನಡೆಯಿತು.
ಮಾರ್ಷಲ್‌ಗಳು ತಡೆದರು. ಈ ವೇಳ ತಾವು ಮಂಡಿಸಿದ್ದ ನಿಲುವಳಿಯನ್ನು ಸದಸ್ಯರು ಹರಿದು ಗಾಳಿಯಲ್ಲಿ
ತೂರಿದರು. ಇಬ್ಬರು ಸದಸ್ಯರು ರಾಜ್ಯಸಭೆ ಅಧಿಕಾರಿಗಳ ಟೇಬಲ್‌ ಹತ್ತಿದರು. ರಾಜ್ಯ ಸಭೆ ಸದಸ್ಯ ಪ್ರತಿಭಟನೆ
ಮುಂದುವರಿಸಿದರು. ಆರಂಭವಾಗಬೇಕಾಗಿದ್ದ ಲೋಕಸಭೆ ಕಲಾಪ ಒಂದು ತಾಸು ವಿಳಂಬವಾಯಿತು.


ಉಪ ಸಭಾಪತಿ ವಿರುದ್ಧ ಅವಿಶ್ಚಾಸ: ಗದ್ದಲದ ಮಧ್ಯೆಯೇ ಎರಡು ಕೃಷಿ ಮಸೂದೆಗಳಿಗೆ ರಾಜ್ನ ಸಜೆ
ಅನುಮೋದನೆ ನೀಡಿದ್ದನ್ನು ಖಂಡಿಸಿ ರಾಜ್ಯ ಸಭಾ ಉಪ ಸಭಾಪತಿ ಹರಿವಂಶ್‌ ಸಿಂಗ್‌ ಅವರ ವಿರುದ್ದ 12
ವಿರೋಧ ಪಕ್ಷಗಳು ಅವಿಶ್ಲಾಸ ನೋಟಿಸ್‌ ನೀಡಿದೆ. ಚರ್ಚೆ ಇಲ್ಲದೇ ಗದ್ದಲದಲ್ಲಿ ಮಸೂದೆಗಳನು
ಅಂಗೀಕರಿಸಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿ, ರಾಜ್ಯ ಸಭಾ ಉಪ ಸಭಾಪತಿ ವಿರುದ್ಧ
ಕಾಂಗೆಸ್‌, ಟಿಎಂಸಿ, ಸಮಾಜವಾದಿ ಪಕ್ಷ ಡಿಎಂಕೆ ಸೇರಿದಂತೆ 12 ಪಕ್ಷಗಳು ಅವಿಶ್ಲಾಸ ನೋಟಿಸ್‌ ಅನ್ನು
ಸಲ್ಲಿಸಿರುತ್ತವೆ.


ಆಧಾರ:ಕನ್ನಡಪ್ರಭ, ದಿನಾಂಕ:21.09.2020
23. ವಿದೇಶಿ ದೇಣಿಗೆ ದುರ್ಬಳಕೆ ತಡೆಗೆ ಸಿದ್ದತೆ


2011ರಲ್ಲಿ ಜಾರಿಗೆ ಬಂದಿದ್ದ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಫ್‌ಸಿಆರ್‌ಎ) ತಿದ್ದುಪಡಿ
ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ವಿವಿಧ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಓಗಳು)
ಪಡೆಯುವ ವಿದೇಶಿ ದೇಣಿಗೆಗಳ ದುರ್ಬಳಕೆ ತಡೆಯುವ ಉದ್ದೇಶದಿಂದ ಈ ವಿಧೇಯಕವನ್ನು ರೂಪಿಸಲಾಗಿದೆ.


ಎನ್‌ಜಿಓಗಳ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ತಮ್ಮ ಆಧಾರ್‌ ಸಂಖ್ಯೆಯನ್ನು ಸಲ್ಲಿಸುವುದು
ಕಡ್ಡಾಯಗೊಳಿಸುವುದು, ವಿದೇಶಿ ದೇಣಿಗೆಯ ಬಳಕೆಯನ್ನು ಸೀಮಿತಗೊಳಿಸುವುದು ಸೇರಿದಂತೆ ಹಲವಾರು
ಪ್ರಮುಖ ತಿದ್ದುಪಡಿಗಳನ್ನು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.


ದೇಶದ ಹಲವಾರು ಸರ್ಕಾರೇತರ ಸಂಸ್ಥೆಗಳು, ಇನ್ನಿತರ ಸಂಘ-ಸಂಸ್ಥೆಗಳು ಪಡೆದ ವಿದೇಶಿ ದೇಣಿಗೆಗೆ
ಸಂಬಂಧಿಸಿ ಅವ್ಯವಹಾರ ನಡೆಸುವುದು. ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳದಿರುವುದು ಹಾಗೂ ದೇಣಿಗೆ
ಪಡೆಯುವ ಪರವಾನಿಗಿಯನ್ನು ದುರ್ಬಳಕೆ ಮಾಡಿಕೊಂಡಿರುವ 'ಒನ್ನೆೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲು
ನಿರ್ಧರಿಸಲಾಗಿದೆ.


ತಿದ್ದುಪಡಿಯ ಪ್ರಮುಖಾಂಶಗಳು:


» ಸರ್ಕಾರಿ ಅಧಿಕಾರಿಗಳು ವಿದೇಶಿ ದೇಣಿಗೆ ಅಥವಾ ವಿದೇಶಿ ಆರ್ಥಿಕ ನೆರವನ್ನು ಪಡೆಯುವುದಕ್ಕೆ
ಹೊಸ ವಿಧೇಯಕದಲ್ಲಿ ನಿರ್ಬಂಧ.


> ಸರ್ಕಾರೇತರ ಸಂಸ್ಥೆಗಳು ಗಳಿಸುವ ವಿದೇಶಿ ದೇಣಿಗೆ ಬಳಕೆಯ ಮಿತಿ ಶೇ.50 ರಿಂದ ಶೇ.20ಕ್ಕೆ
ಇಳಿಕೆ.


» ಸರ್ಕಾರೇತರ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿರುವ ಸದಸ್ಯರು ತಮ್ಮ ಆಧಾರ ಸಂಖ್ಯೆಯನ್ನು
ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯ.


> ವಿದೇಶಿ ದೇಣಿಗೆಗಳನ್ನು ಸ್ಟೀಕರಿಸುವ ಎಲ್ಲಾ ಸಂಘ-ಸಂಸ್ಥೆಗಳೂ ಇನ್ನು ತಮ್ಮ ಆಧಾರ್‌ ಸಂಖ್ಯೆ
ನೀಡುವುದು ಕಡ್ಡಾಯ.


»> ವಿದೇಶಿ ದೇಣಿಗೆ ಪಡೆಯಲು ಪರವಾನಿಗಿ ಪಡೆದ ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆ,
ಎಫ್‌ಸಿಆರ್‌ಎ ಹೆಸರಿನ ಬ್ಯಾಂಕ್‌ ಖಾತೆಯ ಮೂಲಕವೇ ದೇಣಿಗೆ ವ್ಯವಹಾರ ನಡೆಸಬೇಕು. ಇಂಥ
ಬ್ಯಾಂಕ್‌ ಖಾತೆಗಳು ಎಸ ಸ್‌ಬಿಐನಲ್ಲೇ ಇರುವುದು ಕಡ್ಡಾಯ.


ಆಧಾರ:ಉದಯವಾಣಿ, ದಿನಾ೦ಕ:21.09.2020
24. ಕನ್ನಡದಲ್ಲಿ ಪ್ರಮಾಣ ಸ್ಪೀಕರಿಸಿದ ಗೌಡರು
24 ವರ್ಷಗಳ ನಂತರ ರಾಜಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಮಾಜಿ ಪಧಾನಿ


ಬಿ ku)
ಎಚ್‌.ಡಿ. ದೇವೇಗೌಡ ಅವರು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ಲೀಕರಿಸಿದರು.

87 ವರ್ಷದ ಹಿರಿಯ ರಾಜಕಾರಣಿ ದೇವೇಗೌಡ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಜೂನ್‌ನಲ್ಲಿ
ಆಯ್ಕೆಯಾಗಿದ್ದರು. ರಾಜ್ಯಸಭೆಗೆ ಆಯ್ಕೆಯಾಗಿರುವ ನೂತನ ಸದಸ್ಯರು ಜುಲೈ 22ರಂದು ಪ್ರಮಾಣ ವಚನ
ಸ್ಪೀಕರಿಸಿದ್ದರು. ಕೊರೋನಾ ಆಂತಕದಿಂದಾಗಿ ಗೌಡರು ಅಂದು ಹೊಸದಿಲ್ಲಿಗೆ ತೆರಳಲಿಲ್ಲ. 1996ರಲ್ಲಿ
ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ರಾಜ್ಯಸಭೆ ಸದಸ್ಯರಾಗಿ ಸಂಸತ್ತು ಪ್ರವೇಶಿಸಿದ್ದರು.


ಸಭಾಪತಿ ಎಂ. ವೆಂಕಯನಾಯ್ದು ಅವರು ಪ್ರಮಾಣ ವಚನ ಸ್ಟೀಕಾರಕ್ಕೆ ಆಹ್ಹಾನಿಸಿದರು. ಕನ್ನಡದಲ್ಲಿಯೇ
ಪ್ರಮಾಣ ಸ್ನೀಕರಿಸಿದ ದೇವೇಗೌಡರು ನಂತರ ಸಭಾಪತಿಗೆ ದೂರದಿಂದಲೇ ಕೈಮುಗಿದು ತಮ್ಮ ಆಸನದಲ್ಲಿ
ಕುಳಿತುಕೊಂಡರು.


ಗದ್ದಲಕ್ಕೆ ಕಳವಳ: ಕೃಷಿ ವಿಧೇಯಕಗಳನ್ನು ಅಂಗೀಕರಿಸುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ನಡೆದ ಘಟನೆಗಳ
ಬಗ್ಗೆ ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಕೃಷಿ ಹಾಗೂ
ರೈತರಿಗೆ ಸಂಬಂಧಿಸಿದ ಮಸೂದೆಗಳ ಅಂಗೀಕಾರ ಸಮಯದಲ್ಲಿ ರಾಜ್ಯಸಭಾ ಸದಸ್ಯರು ಕೂಗುವುದು ಬಿಟ್ಟರೆ
ಬೇರೇನೂ ಕೇಳುತ್ತಿರಲಿಲ್ಲ. ರಾಜ್ಯಸಭೆಯಲ್ಲಿನ ಘಟನೆಗಳು ನನಗೆ ನೋವುಂಟು ಮಾಡಿವೆ. ರಾಜ್ಯಸಭೆಯಲ್ಲಿ


ಇಂತಹ ಘಟನೆಗಳು ಸಂಭವಿಸಬಾರದು”


ಕೃಷಿ ವಿಧೇಯಕಗಳ ಅಂಗೀಕಾರದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ನಾಟಕೀಯ ಬೆಳವಣಿಗೆಗಳು
ಸಂಭವಿಸಿದವು. ಸಭಾಪತಿಯವರ ಮೈಕ್ರೋಫೋನ್‌ ಹಾಗೂ ಪತ್ರಿಕೆಗಳನ್ನು ಎಸೆಯುವ ಘಟನೆಗಳು ಶೋಭೆ
ತರುವಂತದ್ದಲ್ಲ. ಈ ಘಟನೆಗಳಿಗೆ ಕೇಂದ್ರ ಸರ್ಕಾರವೇ ಹೊಣೆ. ಅಂಗೀಕಾರಕ್ಕೂ ಮುನ್ನ ಮತದಾನಕ್ಕೆ ಅವಕಾಶ
ನೀಡಬೇಕಿತ್ತು. ಒಮ್ಮೆ ಮತದಾನಕ್ಕೆ ಅವಕಾಶ ನೀಡಿದ್ದರೆ ಮಸೂದೆಗಳಿಗೆ ಅಂಗೀಕಾರ ದೊರೆಯುತ್ತಿರಲಿಲ್ಲ ಎಂದು
ದೇವೇಗೌಡರು ಹೇಳಿದರು.


ಆಧಾರ:ವಿಜಯ ಕರ್ನಾಟಕ, ದಿನಾಂಕ:21.09.2020
25. ರಾಜ್ಯಸಭೆ :8 ಸದಸ್ಯರ ಅಮಾನತ್ತು


ಕೃಷಿ ಮಸೂದೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲ ಮಾಡಿದ್ದ ವಿರೋಧ ಪಕ್ಷಗಳ ಎಂಟು
ಸದಸ್ಯರನ್ನು ಅಮಾನತ್ತು ಮಾಡಲಾಗಿದೆ. ತೃಣಮೂಲ ಕಾಂಗೆಸ್‌ನ ಡೆರೆಕ್‌ ಒಬ್ರಿಯಾನ್‌, ಡೋಲಾ ಸೇನ್‌, ಅಮ್‌
ಆದ್ಮಿ ಪಕ್ಷದ ಸಂಜಯ್‌ ಸಿಂಗ್‌, ಕಾಂಗೆಸ್‌ನ ರಾಜೀವ್‌ ಸಾತವ್‌, ಸೈಯದ್‌ ನಾಸಿರ್‌ ಹುಸೇನ್‌ (ಕರ್ನಾಟಕ),
ರಿಪುನ್‌ ಬೋರಾ, ಸಿಪಿಎಂನ ಕೆಕೆ. ರಾಗೇಷ್‌ ಮತ್ತು ಎಳಮರಂ ಕರೀಂ ಅವರನ್ನು ಚಳಿಗಾಲ ಅಧಿವೇಶನ


ಮುಗಿಯುವವರೆಗೂ ಅಮಾನತ್ತು ಮಾಡಲಾಗಿದೆ.


ಕೃಷಿ ಮಸೂದೆ ಮಂಡನೆ ಮತ್ತು ಅಂಗೀಕಾರದ ವೇಳೆ ಕಲಾಪಗಳಿಗೆ ಅಡ್ಡಿಪಡಿಸಿದ ಸಂಸದರನ್ನು
ಅಮಾನತ್ತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ವಿ.ಮುರಳೀಧರನ್‌ ನಿರ್ಣಯ ಮಂಡಿಸಿದರು.
ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ ದೊರೆಯಿತು.


ಹೊರ ಹೋಗಲು ನಕಾರ: ಸದನದಿಂದ ಹೊರ ತೆರಳುವಂತೆ ಅಮಾನತ್ತುಗೊಂಡ ಸಂಸದರಿಗೆ ಸಭಾಪತಿ ಎಂ.
ವೆಂಕಯ್ಯನಾಯ್ದು ಸೂಚಿಸಿದರು. ಆದರೆ, ಹೊರ ಹೋಗಲು ನಿರಾಕರಿಸಿದ ಸಂಸದರು ನಿರ್ಣಯ ವಿರೋಧಿಸಿ
ಪ್ರತಿಭಟನೆಗೆ ಇಳಿದರು. ಅಮಾನತ್ತು ನಿರ್ಣಯದ ವಿರುದ್ಧ ಘೋಷಣೆ ಕೂಗುತ್ತ ವಿರೋಧ ಪಕ್ಷಗಳ ಇತರ
ಸದಸ್ಯರು ಸಹ ಪ್ರತಿಭಟನೆಗೆ ಸೇರಿಕೊಂಡರು. ವಿವರಣೆ ನೀಡಲು ಸಂಸದರಿಗೆ ಅವಕಾಶ ನೀಡಬೇಕು ಮತ್ತು
ಅಮಾನತ್ತು ನಿರ್ಣಯವನ್ನು ಮತಕ್ಕೆ ಹಾಕಬೇಕು ಎಂದು ಪಟ್ಟು ಹಿಡಿದರು. ಇದರಿಂದ ಐದು ಬಾರಿ ಕಲಾಪ
ಮುಂದೂಡಬೇಕಾಯಿತು.


ಸರ್ಕಾರ ಮಂಡಿಸಿದ ನಿರ್ಣಯದ ಮೇಲೆ ಅಮಾನತ್ತು ನಿರ್ಧಾರ ಕೈಗೊಳ್ಳಲಾಗಿದೆ ಎಂದ ಸಭಾಪತಿ
ವೆಂಕಯ್ಯ ನಾಯ್ದು ಅವರು ವಿರೋಧ ಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದರು. ಉಪ ಸಭಾಪತಿ ಹರಿವಂಶ್‌
ಅವರನ್ನು ಸಂಸದರು ಕೆಟ್ಟ ಪದಗಳಲ್ಲಿ ನಿಂದಿಸಿದ್ದಾರೆ ಮತ್ತು ಬೆದರಿಕೆ ಒಡ್ಡಿದ್ದಾರೆ. ಸದಸ್ಯರ ಈ ವರ್ತನೆ ನೋವು
ತಂದಿದೆ. ರಾಜ್ಯಸಭೆಯ ಇತಿಹಾಸದಲ್ಲಿಯೇ ಇದು ಕರಾಳ ದಿನ ಎಂದು ನಾಯ್ದು ವಿಷಾದ ವ್ಯಕ್ತಪಡಿಸಿದ್ದಾರೆ.


ಟಿಎಂಸಿ ಸಂಸದ ಡೆರೆಕ ಒಬ್ರಿಯಾನ್‌ ಸೇರಿದಂತೆ ಪ್ರತಿಯೊಬ್ಬರ ಹೆಸರು ಕೂಗಿ ಸದನದಿಂದ
ಹೊರನಡೆಯುವಂತೆ ಅವರು ಸೂಚಿಸಿದರು. ಸಂಸದರು ಪ್ರತಿಭಟನೆ ಮುಂದುವರಿಸಿದರು. ಇದರಿಂದ ಕಲಾಪವು
ನಡೆಯಲಿಲ್ಲ.


ಸದನದ ಅವಧಿ ಮುಗಿದ ನಂತರ ಹೊರಬಂದ ವಿರೋಧ ಪಕ್ಷಗಳ ಸದಸ್ಯರು ಸಂಸತ್‌ ಭವನದ
ಹೊರಗೆ ಪ್ರತಿಭಟನೆ ಕುಳಿತರು. "ದೇಶದ ರೈತ ಸಮೂಹದ ಹಿತಾಸಕ್ತಿ ರಕ್ಷಣೆಗಾಗಿ ನಮ್ಮ ಹೋರಾಟ


ಮುಂದುವರಿಯಲಿದೆ? ಎಂದು ಘೋಷಣೆ ಕೂಗಿದರು.
ಆಧಾರ:ಪ್ರಜಾವಾಣಿ, ದಿನಾಂಕ:22.09.2020
26. ರಾಯಚೂರು ಐಐಐಟಿ ರಾಷ್ಟ್ರೀಯ ಮಹತ್ವದ ಸಂಸೆ
ಈ [


ಕರ್ನಾಟಕದ ರಾಯಚೂರಿನಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸೇರಿ


ದೇಶದ 5 ಐಐಐಟಿಗಳಿಗೆ ರಾಷ್ಟ್ರೀಯ ಮಹತ್ವದ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡುವ ಮಸೂದೆಗೆ ಸಂಸತ್ತು
ಅಂಗೀಕಾರದ ಮುದ್ರೆಯೊತಿದೆ.


ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ "ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಕಾನೂನುಗಳು
(ತಿದ್ದುಪಡಿ) ಮಸೂದೆ-2020”ಯನ್ನು ಶಿಕ್ಷಣ ಮಂತ್ರಿ ರಮೇಶ್‌ ಪೋಖ್ರಿಯಾಲ್‌ ಅವರು ರಾಜ್ಯಸಭೆಯಲ್ಲಿ
ಮಂಡಿಸಿದ್ದ ವಿಧೇಯಕ ಅಂಗೀಕಾರವಾಗಿದೆ. ರಾಯಚೂರು, ಸೂರತ್‌, ಭೋಪಾಲ್‌, ಭಾಗಲ್ಲುರ,
ಅಗರ್ತಲದಲ್ಲಿರುವ ಐಐಐಟಿಗಳನ್ನು ಡಿಪ್ಲೋಮಾ, ಪದವಿ ಹಾಗೂ ಪಿಎಚ್‌ಡಿಗಳನ್ನು ನೀಡುವ ಕಾನೂನುಬದ್ಧ
ಅಧಿಕಾರವನ್ನು ಪಡೆಯಲಿವೆ. ಇನ್ನು ಮುಂದೆ ವಿವಿಗಳು ಬಿ.ಟೆಕ್‌, ಎಂ.ಟೆಕ್‌, ಪಿಎಚ್‌ಡಿ ಪದವಿ
ನೀಡಬಹುದಾಗಿದೆ. ದೇಶದಲ್ಲಿ 25 ಐಐಜಐಟಿಗಳ ಪೈಕಿ ಐದನ್ನು ಸರ್ಕಾರ ನಡೆಸುತ್ತಿದೆ ಎನ್ನಲಾಗಿದೆ.


ಆಧಾರ:ಕನ್ನಡಪ್ರಭ, ದಿನಾಂಕ:23.09.2020
27. ಸಂಸತ್‌ ಕಲಾಪದ ಕೊನೆಯ ದಿನ ಎಂಟು ವಿಧೇಯಕಗಳಿಗೆ ಅಸ್ತು


ಸಂಸತ್‌ನ ಮುಂಗಾರು ಅಧಿವೇಶನದ ಕೊನೆಯ ದಿನ ಎಂಟು ಮಹತ್ನ್ಸದ ವಿಧೇಯಕಗಳಿಗೆ
ಅನುಮೋದನೆ ಲಭಿಸಿದೆ. ವೃತ್ತಿಪರ ಸುರಕ್ಷತೆ, ಆರೋಗ್ಯ ರಕ್ಷಣೆ, ಕೆಲಸ ನಿರ್ವಹಣೆ, ಕೈಗಾರಿಕಾ ಸಂಬಂಧಗಳ
ನಿರ್ವಹಣೆ ಹಾಗೂ ಸಾಮಾಜಿಕ ಭದತೆ ಮತ್ತು ವಿದೇಶಿ ದೇಣಿಗೆ ನಿಯಂತ್ರಣ ವಿಧೇಯಕಗಳು ರಾಜ್ಯಸಭೆಯ
ಅನುಮೋದನೆ ಪಡೆದಿವೆ.


ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನ ಮಾತನಾಡಿದ ಸಭಾಪತಿ
ಎಂ.ವೆಂಕಯ್ಯನಾಯ್ಡು ಅವರು ಎಂಟು ಸದಸ್ಯರನ್ನು ಅಮಾನತ್ತುಗೊಳಿಸಿದ್ದು ಒಳ್ಳೆಯದಲ್ಲ ಎನಿಸಿದರೂ ಅವರ
ವರ್ತನೆಯಿಂದಾಗಿ ಅನಿವಾರ್ಯವಾಗಿತ್ತು. ಪ್ರತಿಪಕ್ಷಗಳಿಗೆ ಪ್ರತಿಭಟನೆ ಹಕ್ಕು ಇದೆ. ಆದರೆ ಯಾವ ರೀತಿ
ನಡೆಸಬೇಕು ಎನ್ನುವುದನ್ನು ಅರಿತುಕೊಳ್ಳಬೇಕು. ಸದನದ ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಿತ್ತು
ಎಂದಿದ್ದಾರೆ.


5 ಭಾಷೆಗಳಿಗೆ ಅಧಿಕೃತ ಸ್ಥಾನಮಾನ: ನೂತನವಾಗಿ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಪಡೆದಿರುವ ಜಮ್ಮು
ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ, ಡೋಗ್ರಿ, ಹಿಂದಿ, ಇಂಗ್ಲೀಷ್‌ ಹಾಗೂ ಉರ್ದು ಭಾಷೆಗಳಿಗೆ ಅಧಿಕೃತ ಭಾಷೆಗಳ
ಮಾನ್ಯತೆ ನೀಡುವ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಧ್ವನಿಮತದ ಅನುಮೋದನೆ ಸಿಕ್ಕಿತು. ರಾಜ್ಯದಲ್ಲಿ 1954ರಿಂದ
ಕೇವಲ ಉರ್ದು ಮತ್ತು ಇಂಗ್ಲೀಷ್‌ ಭಾಷೆಯನ್ನು ಅಧಿಕೃತ ಕಾರ್ಯಗಳಿಗಾಗಿ ಬಳಸಲಾಗುತ್ತಿತ್ತು.


ಅಧಿವೇಶನ 100% ಫಲಪುದ: ರಾಜ್ಯಸಭೆಯಲ್ಲಿ 25 ವಿಧೇಯಕಗಳು ಅನುಮೋದನೆ ಪಡೆಯುವುದರ ಜೊತೆಗೆ
ಆರು ಇತರ ವಿಧೇಯಕಗಳ ಮಂಡನೆಯಾದ ಹಿನ್ನೆಲೆಯಲ್ಲಿ ಕೊರೋನಾ ಆತಂಕದ ನಡುವಿನ ಮುಂಗಾರು
ಅಧಿವೇಶನ ಶೇ.100ರಷ್ಟು ಫಲಪ್ರದವಾಗಿದೆ. ಆದರೆ ಮೇಲ್ಲನೆಯ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ
ಮುಂದೂಡಲಾಗಿದೆ.


ಅಕ್ಟೋಬರ್‌ 1ಕ್ಕೆ ಕೊನೆಗೊಳ್ಳಬೇಕಿದ್ದ ಅಧಿವೇಶನ ಸೆಪ್ಲೆಂಬರ್‌ 23ಕ್ಕೆ ಅಂತ್ಯಗೊಂಡ ಪರಿಣಾಮ 18ರ
ಬದಲು 10 ಕಲಾಪಗಳು ಮಾತ್ರ ನಡೆದವು. ಕಳೆದ ಹಲವು ವರ್ಷಗಳಲ್ಲಿ ವಿಧೇಯಕಗಳ ಚರ್ಚೆಗೆ ಸರಾಸರಿ 28%
ಸದನದ ಅವಧಿ ಬಳಕೆಯಾಗಿದೆ. ಆದರೆ ಈ ಬಾರಿ ದಾಖಲೆಯ 58% ಸಮಯ ಬಳಕೆಯಾಗಿರುವುದು ಉತ್ತಮ
ಬೆಳವಣಿಗೆ ಎಂದು ಸಭಾಪತಿ ವೆಂಕಯ್ಯನಾಯ್ದು ಅವರು ಉಲ್ಲೇಖಿಸಿದ್ದಾರೆ.


ಎನ್‌ಜಿಓ ದೇಣಿಗೆ ಮೇಲೆ ನಿಗಾ: ಕಾರ್ಮಿಕರಿಗೆ ಸಂಬಂಧಿತ ವಿಧೇಯಕಗಳ ಜೊತೆಗೆ ಅನುಮೋದನೆ ಪಡೆದ
ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ವಿಧೇಯಕದಿಂದಾಗಿ ಇನ್ನುಂದೆ ಎನ್‌ಜಿಓಗಳ ಪದಾಧಿಕಾರಿಗಳು
ನೋಂದಣಿ ವೇಳೆ ತಮ್ಮ ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ. ಇದರಿಂದಾಗಿ ಎನ್‌ಜಿಓಗಳ ಬಗ್ಗೆ
ತೀವ್ರ ನಿಗಾ ಇರಿಸಲು ಅನುಕೂಲವಾಗಲಿದ್ದು, ಸಾಮಾಜಿಕ ಕಾರ್ಯದಲ್ಲಿ ನೈಜ ರೀತಿಯಲ್ಲಿ ತೊಡಗಿಸಿಕೊಂಡಿರುವ
ಎನ್‌ಜಿಓಗಳಿಗೆ ಮತ್ತಷ್ಟು ಬಲ ಸಿಗಲಿದೆ. ವಿದೇಶಿ ದೇಣಿಗೆಯ ಶೇ.20 ರಷ್ಟು (ಮುಂಚೆ ಶೇ.50ಇತ್ತುು ಹಣವನ್ನು
ಆಡಳಿತಾತ್ಮಕ ವೆಚ್ಚಗಳಿಗೆ ಬಳಸಿಕೊಳ್ಳಬೇಕು ಎಂದು ವಿಧೇಯಕ ನಿಯಂತ್ರಣ ಹೇರಲಿದೆ.


ಆಧಾರ:ವಿಜಯ ಕರ್ನಾಟಕ, ದಿನಾಂಕ:24.09.2020


28. ಸಂಸತ್‌ ಅಧಿವೇಶನ ಮುಕ್ತಾಯ


ಕೊರೋನಾ ಹಾವಳಿಯ ನಡುವೆಯೇ ಆರಂಭವಾಗಿದ್ದ ಸಂಸತ್ತಿನ ಉಭಯ ಸದನಗಳ ಮುಂಗಾರು
ಅಧಿವೇಶನವು ಅಂತ್ಯವಾಗಿದೆ. ತನ್ಮೂಲಕ ಉಭಯ ಸದನಗಳ ಅಧಿವೇಶನವು ನಿಗದಿತ ದಿನಕ್ಕಿಂತ 8 ದಿನಗಳ
ಮುಂಚಿತವಾಗಿಯೇ ಮುಕ್ತಾಯವಾದಂತಾಗಿದೆ. ಸೆಪೆಂಬರ್‌ 14ರಿಂದ ಆರಂಭವಾಗಿದ್ದ ಉಭಯ ಸದನಗಳ
ಕಲಾಪವು ನಿಗದಿಯಂತೆ ಅಕ್ಟೋಬರ್‌ 1ಕ್ಕೆ ಮುಕ್ತಾಯವಾಗಬೇಕಿತ್ತು ಕಲಾಪದಲ್ಲಿ ಭಾಗಿಯಾಗುವ
ಜನಪ್ರತಿನಿಧಿಗಳಿಗೆ ಕೊರೋನಾ ಸೋಂಕು ವ್ಯಾಪಿಸದಂತೆ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕಟ್ಟೆಚ್ಚರ
ವಹಿಸಲು ಇದೇ ಮೊದಲ ಬಾರಿಗೆ ರಾಜ್ಯಸಭೆ ಮತ್ತು ಲೋಕಸಭೆಯ ಸದನವನ್ನು ಒಟ್ಟಿಗೆ ಸೇರಿಸಿ ಒಮ್ಮೆ
ಲೋಕಸಭೆ ಕಲಾಪ ಮತ್ತು ಇನ್ನೊಮ್ಮೆ ರಾಜ್ಯಸಭೆ ಕಲಾಪ ನಡೆಸಲಾಗಿತ್ತು. ಹೆಚ್ಚಿನ ಸಂಸದರಿಗೆ ಸೋಂಕು
ವ್ಯಾಪಿಸಿದ ಹಿನ್ನೆಲೆಯಲ್ಲಿ 8 ದಿನಗಳ ಮುಂಚಿತವಾಗಿಯೇ ಸಂಸತ್ತಿನ ಮುಂಗಾರು ಕಲಾಪ ಅಂತ್ಯವಾಗಿದೆ. ಇನ್ನು
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ದು ಅವರು, 18 ದಿನಗಳ ಕಲಾಪವನ್ನು 10 ದಿನಕ್ಕೇ
ಮೊಟಕುಗೊಳಿಸಲಾಗುತ್ತಿದೆ. ಆದರೆ, ಈ ದಿನಗಳ ಕಲಾಪವು ಫಲಪ್ರದವಾಗಿದ್ದು, 25 ಮಸೂದೆಗಳು
ಅಂಗೀಕಾರವಾಗಿವೆ ಮತ್ತು 6 ಮಸೂದೆಗಳು ಮಂಡನೆಯಾಗಿವೆ' ಎಂದು ಹೇಳಿದ್ದಾರೆ.


ಮೂರು ಕಾರ್ಮಿಕ ಮಸೂದೆಗೆ ಸಂಸತ್ತಿನ ಅಂಗೀಕಾರದ ಮುದೆ; ಸರ್ಕಾರದ ಅನುಮತಿ ಇಲ್ಲದೇ ಕಂಪನಿ ಮುಚ್ಚುವ
ಹಾಗೂ 300ಕ್ಕಿಂತ ಕಡಿಮೆ ನೌಕರರಿರುವ ಸಂಸ್ಥೆಯಲ್ಲಿ ಕೆಲಸಗಾರರನ್ನು ಯಾವುದೇ ಪೂರ್ವಾನುಮತಿ ಇಲ್ಲದೇ
ಸಾಮೂಹಿಕವಾಗಿ ಕಿತ್ತು ಹಾಕಲು ಅವಕಾಶ ನೀಡುವ ಮಸೂದೆ ಸೇರಿ ಒಟ್ಟು 3 ಕಾರ್ಮಿಕ ಮಸೂದೆಗಳಿಗೆ
ರಾಜ್ಯಸಭೆ ಅಂಗೀಕಾರ ನೀಡಿದೆ. 6 ಸಂಸದರನ್ನು ಅಮಾನತ್ತು ಮಾಡಿದ ಸಭಾಪತಿ ಕ್ರಮವನ್ನು ವಿರೋಧಿಸಿ
ವಿರೋಧ ಪಕ್ಷಗಳು ಕಲಾಪವನ್ನು ಬಹಿಷ್ಠ್ಪರಿಸಿದ್ದರಿ೦ದ, ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿಯೇ ಮಸೂದೆಗಳಿಗೆ
ಒಪಿಗೆ ಸಿಕ್ಕಿದೆ.

ಆಧಾರ:ಕನ್ನಡಪ್ರಭ, ದಿನಾಂಕ:24.09.2020

29. ಲೋಕಸಭೆ ದಾಖಲೆಯ ಕಲಾಪ


ಹತ್ತು ದಿನಗಳ ಕಾಲ ನಡೆದ ಸಂಸತ್‌ನ ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆ ಕಲಾಪವು ಹಲವು
ದಾಖಲೆಗಳನ್ನು ಬರೆದಿದೆ. ನಿಗದಿತ 37 ಗಂಟೆ ಬದಲಾಗಿ ಕಲಾಪವು 60 ಗಂಟೆ ನಡೆದಿದೆ. ಮಹತ್ನದ ಮೂರು
ಕೃಷಿ ವಿಧೇಯಕಗಳೂ ಸೇರಿದಂತೆ ಒಟ್ಟು 25 ವಧೇಯಕಗಳನ್ನು ಸದನ ಅಂಗೀಕರಿಸಿದೆ. ಬಹಳಷ್ಟು ಮಹಿಳಾ
ಸಂಸದರು ಮಾತನಾಡಿದ್ದಾರೆ. ಶೂನ್ಯವೇಳೆಯಲ್ಲಿ ಮಹತ್ನ್ಸದ ವಿಷಯಗಳ ಪ್ರಸ್ತಾಪವಾಗಿ ಸುದೀರ್ಪ ಚರ್ಚೆ
ನಡೆದಿರುವುದು, ಎರಡು ದಿನ ಸೆಪ್ಪೆಂಬರ್‌ 20 ಹಾಗೂ 21ರಂದು ಮಧ್ಯರಾತ್ರಿವರೆಗೂ ಕಲಾಪ ನಡೆದಿರುವುದು
ಇದೇ ಮೊದಲ ಬಾರಿ ವಾರಾಂತ್ಯದಲ್ಲಿ ಬಿಡುವಿಲ್ಲದೇ ನಿರಂತರವಾಗಿ ಕಲಾಪ ನಡೆದಿರುವುದು ಸಹ
ದಾಖಲೆಯಾಗಿದೆ.


ಕೊರೋನಾ ಕಾರಣದಿಂದ ಈ ಬಾರಿಯ ಸಂಸತ್‌ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ ಹಾಗೂ
ಸದಸ್ಯರ ಖಾಸಗಿ ವಿಧೇಯಕ ಮಂಡನೆಗಳನ್ನು ಕೈ ಬಿಡಲಾಗಿತ್ತು. ಸೆಪ್ಟೆಂಬರ್‌ 14 ರಿಂದ ಅಕ್ಟೋಬರ್‌ 1ರವರೆಗೆ
ನಿರಂತರ 18 ದಿನ ಕಲಾಪ ನಡೆಯಬೇಕಾಗಿತ್ತಾದರೂ ಸಂಸದರಿಗೆ ಸೋಂಕು ತಗಲಿದ ಪ್ರಕರಣಗಳು ಹೆಚ್ಚಾದ
ಕಾರಣ 10 ದಿನಕ್ಕೇ ಮೊಟಕುಗೊಳಿಸಲಾಗಿದೆ.


10 ದಿನದ ಕಲಾಪದಲ್ಲಿ 25 ವಿಧೇಯಕಗಳ ಅಂಗೀಕಾರ, ಸೆಪ್ಪೆಂಬರ್‌ 21ರಂದು ಸದನದ ಉತ್ಪಾದಕತೆ
ಶೇ.23.4ರಷ್ಟು ದಾಖಲಾಗಿರುವುದು ಇದುವರೆಗಿನ ಇತಿಹಾಸದಲ್ಲಿ ಏಕದಿನದ ಗರಿಷ್ಠ ಉತ್ಪಾದಕತೆಯಾಗಿದೆ ಹಾಗೂ
ಶೂನ್ಯವೇಳೆಯಲ್ಲಿ 370 ಸಂಸದರು ವಿವಿಧ ವಿಷಯ ಪ್ರಸ್ತಾಪಿಸಿದ್ದು 88 ಸಂಸದರು ಚರ್ಚೆಯಲ್ಲಿ
ಪಾಲ್ಗೊಂಡಿದ್ದಾರೆ. 181 ಮಹತ್ವದ ವಿಷಯಗಳನ್ನು ವವಿಧ ನಿಯಮಗಳ ಅಡಿ ಪ್ರಸ್ತಾಪಿಸಲಾಗಿದೆ.


pe)


ಆಧಾರ:ವಿಜಯ ಕರ್ನಾಟಕ, ದಿನಾಂಕ:26.09.2020


ಭಾಗ-3
ಕೇಂದ್ರ ಸರ್ಕಾರದ ಸುದಿಗಳು
()
1. ಅತಿಕ್ರಮಣದ ಕಾಲ ಮುಗೀತು


ಅತಿಕ್ರಮಣದ ಕಾಲ ಮುಗಿದುಹೋಗಿದೆ. ಇನ್ನೇನಿದ್ದರೂ ಅಭಿವೃದ್ಧಿಯ ಕಾಲ. ಈ ಹಿಂದೆ ಅತಿಕ್ರಮಣ
ಶಕ್ತಿಗಳು ಒಂದೋ ಸೋತು ಹೋಗಿವೆ ಅಥವಾ ಹೆದರಿ ಓಡಿ ಹೋಗಿವೆ ಎಂದು ಭಾರತದ
ಭೂ ಭಾಗಗಳನ್ನು ಕಬಳಿಸಲು ಗಡಿಯಲ್ಲಿ ತಂಟೆ ತೆಗೆದಿರುವ ಚೀನಾಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರಾನೇರ
ಕಠೋರ ಸಂದೇಶ ರವಾನಿಸಿದ್ದಾರೆ. ಲಡಾಖ್‌ನ ಪ್ರತಿ ಮೂಲೆ, ಪ್ರತಿ ಶಿಲೆ, ಪ್ರತಿ ನದಿ, ಸಣ್ಣ ಕಲ್ಲುಗಳಿಗೂ ತಾನು
ಭಾರತದ ಅವಿಭಾಜ್ಯ ಅಂಗ ಎಂಬುದು ಗೊತ್ತಿದೆ ಎನ್ನುವ ಮೂಲಕ ದೇಶದ ಒಂದಿಂಚೂ ಜಾಗ ಚೀನಾಕ್ಕೆ


ಸಿಗುವುದಿಲ್ಲ ಎಂದು ಸಷ ಸಂದೇಶ ರವಾನಿಸಿದ್ದಾರೆ.


ಲಡಾಖ್‌ನಲ್ಲಿರುವ ಗಡಿಯಲ್ಲಿನ 11 ಸಾವಿರ ಆಡಿ ಎತ್ತರದ ಪ್ರದೇಶ ನೀಮುಗೆ ಭೇಟ ನೀಡಿ
ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು ಇಡೀ ವಿಶ್ವವೇ ಈಗ ಅಭಿವೃದ್ದಿಯ ಹಾದಿಗೆ ಬಂದಿದೆ.
ಕಳೆದ ಶತಮಾನವನ್ನು ಅತಿಕ್ರಮಣ ಮಾಡುವ ಶಕ್ತಿಗಳು ಒಂದೋ ಸೋತಿವೆ, ಇಲ್ಲ ಇತಿಹಾಸದಲ್ಲಿ
ಮರೆತುಹೋಗಿವೆ. ಅತಿಕ್ರಮಣ ಮನಸ್ಸಿತಿಯುಳ್ಳವರು ತಮ್ಮ ದಾರಿ ಬದಲಿಸಿಕೊಳ್ಳಬೇಕು ಇಲ್ಲವಾದರೆ ನಾಶವಾಗಿ
ಹೋಗುತ್ತಾರೆ ಎಂದು 26 ನಿಮಿಷಗಳ ಭಾಷಣದಲ್ಲಿ ಮೋದಿ ಗುಡುಗಿದರು. ಇದು ಅಭಿವೃದ್ದಿಯ ಕಾಲ
ಅಭಿವೃದ್ಧಿಯೇ ಭವಿಷ್ಯ, ಮನುಕುಲವನ್ನೇ ಸಂಕಷ್ಟಕ್ಕೆ ದೂಡಿದ ಅತಿಕ್ರಮಣದ ಅವಧಿ ಮುಗಿದಿದೆ ಎಂದು
ಹೇಳಿದರು.


ಶಾಂತಿ, ಪ್ರಗತಿಯನ್ನು ಹಾಳು ಮಾಡಲು ಯತ್ನಿಸುವ ಯಾರಿಗೇ ಆಗಲಿ ಭಾರತ ಎಂದಿಗೂ ತಕ್ಕ
ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಭಾರತ ಶಾಂತಿ ಹಾಗೂ ಸ್ನೇಹಪರತೆಗೆ ಬದ್ದವಾಗಿದೆ, ಆದರೆ ಶಾಂತಿಗೆ
ಸಂಬಂಧಿಸಿದ ಭಾರತದ ಬದ್ದತೆಯನ್ನು ದೌರ್ಬಲ್ಯ ಎಂದು ಭಾವಿಸಬಾರದು ಎಂದು ಚೀನಾಕ್ಕೆ ಕುಟುಕಿದರು.


ಭಾರತ ಇಂದು ಬಲಿಷ್ಟವಾಗುತ್ತಿದೆ. ಅದು ನೌಕಾ ಸಾಮರ್ಥ್ಯವೇ ಇರಬಹುದು. ವಾಯುಬಲ,
ಬಾಹ್ಯಕಾಶ ಶಕ್ತಿಯೇ ಇರಬಹುದು ನಮ್ಮ ಇೀನೆಯೇ ನಮ್ಮ ಶಕ್ತಿ ಶಸ್ತಾಸ್ತಗಳ ಅಧುನೀಕರಣ, ಮೂಲ ಸೌಕರ್ಯ
ಮೇಲ್ಪರ್ಜೆಗೇರಿಸುತ್ತಿರುವುದರಿಂದ ದೇಶದ ರಕ್ಷಣಾ ಸಾಮರ್ಥ್ಯ `ಹೆಚ್ಚಾಗಿಡೆ ಎಂದು ಹೇಳಿದರು.


ಆಧಾರ:ಕನ್ನಡ ಪ್ರಭ, ದಿನಾಂಕ:04.07.2020


2. ಇಂಡಿಯಾ ಗ್ಲೋಬಲ್‌ ವೀಕ್‌ - 2020 ವರ್ಚುವಲ್‌ ಶೃಂಗದಲ್ಲಿ
ಪ್ರಧಾನಿ ಭಾಷಣ, ಹೂಡಿಕೆದಾರರಿಗೆ ಮುಕ್ತ ಆಹ್ನಾನ


ಭಾರತ ಹಲವು ಸವಾಲುಗಳನ್ನು ಮೆಟ್ಟಿನಿಂತಿದೆ. ಕೊರೋನಾ ಸಂಕಷ್ಟವನ್ನೂ ಸಮರ್ಥವಾಗಿ
ಎದುರಿಸುವುದರ ಜೊತೆಗೆ ಜಾಗತಿಕ ಆರ್ಥಿಕತೆ ಪುನಶ್ಲೇತನದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಜಾಗತಿಕವಾಗಿ
ಮುಕ್ತ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಹೀಗಾಗಿ ಭಾರತ ಹೂಡಿಕೆಗೆ ಪ್ರಶಸ್ತ
ಸ್ಥಳ ಎಂದು ಪ್ರಧಾನಿ ಹೂಡಿಕೆದಾರರಿಗೆ ಆಹ್ನಾನ ನೀಡಿದರು. ಬ್ರಿಟನ್‌ನಲ್ಲಿ ಆರಂಭವಾದ ಇಂಡಿಯಾ ಗ್ಲೋಬಲ್‌
ವೀಕ್‌-2020 ವರ್ಚುವಲ್‌ ಶೃಂಗಸಭೆಯ ಉದ್ರಾಟನಾ ಭಾಷಣ ಮಾಡಿದ ಪ್ರಧಾನಿ ಭಾರತವು ಪ್ರತಿಭೆಯ
ಆಗರವಾಗಿರುವುದರಿಂದ ಯಾವುದೇ ಸವಾಲನ್ನು ಎದುರಿಸುವ ಸಂಪನ್ಮೂಲ ಹೊಂದಿದೆ.


ಭಾರತದ ತಂತ್ರಜ್ಞಾನದ ಉದ್ದಿಮೆ ಮತ್ತು ತಂತ್ರಜ್ಞರು ದಶಕಗಳಿಂದ ತಮ್ಮ ಸಾಮರ್ಥ್ಯವನ್ನು
ವಿಶ್ವಮಟ್ಟದಲ್ಲಿ ತೋರುತ್ತಿದ್ದಾರೆ. ಇವರನ್ನು ಯಾರೂ ಉಪೇಕ್ಷಿಸಲಾಗದು. ನಮ್ಮ ದೇಶದ ತಂತ್ರಜ್ಞರು
ಜಾಗತಿಕವಾಗಿ ಕೊಡುಗೆ ನೀಡಲು ಉತ್ತುಕರಾಗಿದ್ದಾರೆ. ಭಾರತೀಯರು ಸ್ಪಾಭಾವಿಕವಾಗಿ ಸುಧಾರಣಾವಾದಿಗಳು,
ಭಾರತ ಸಾಮಾಜಿಕ ಅಥವಾ ಆರ್ಥಿಕ ಸವಾಲುಗಳನ್ನು ಎದುರಿಸಿ ಬಲಿಷ್ಠವಾಗಿದೆ. ಈಗ ಒಂದು ಕಡೆ
ಕೋವಿಡ್‌-19 ಸಾಂಕ್ರಾಮಿಕದ ವಿರುದ್ದ ಹೋರಾಡುವುದರ ಜೊತೆಗೆ ಜನರ ಆರೋಗ್ಯದ ಬಗ್ಗೆಯೂ ಸರ್ಕಾರ
ಕಾಳಜಿ ವಹಿಸಿದೆ. ಇದೇ ವೇಳೆಗೆ ಆರ್ಥಿಕತೆಯನ್ನು ಸಬಲಗೊಳಿಸುವ ಪ್ರಯತ್ನ ಚುರುಕಾಗಿ ಮುಂದುವರಿಸಿದೆ.


ಅಸಾಧ್ಯವಾದುದ್ದನ್ನು ಸಾಧಿಸುವ ಛಲ ಭಾರತೀಯರಿಗೆ ಇದೆ. ಆದ್ದರಿಂದಲೇ ಆರ್ಥಿಕ ಪ್ರಗತಿಯ ಹಾದಿಯಲ್ಲಿ
ನಾವು ಹಸಿರು ಚಿಗುರನ್ನು ಕಾಣಲು ಆರಂಭಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ಆಧಾರ:ವಿಜಯ ಕರ್ನಾಟಕ, ದಿನಾ೦ಕ:10.07.2020
ಹೌ
3. ಸೌರಶಕ್ಷಿಯೇ ಸ್ವಚ್ಛ, ನಿಶ್ಚಿತ ವಿಶಕ್ಕೆ ಆಧಾರ


21ನೇ ಶತಮಾನದಲ್ಲಿ ಸೌರಶಕ್ತಿ ಒಂದು ಪ್ರಧಾನವಾದ ಇಂಧನವಾಗಿ ಬಳಕೆಗೆ ಬರಲಿದೆ. ಅದೊಂದು
ಸ್ಪಚ್ಛ, ನಿಶ್ಚಿತ. ಸುರಕ್ಷಾ ಇಂಧನ ಮಾದರಿಯಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.





ಮಧ್ಯಪ್ರದೇಶದ ರೇವಾದಲ್ಲಿ ನೂತನವಾಗಿ ನಿರ್ಮಿಸಲಾದ ಏಷ್ಕಾದ ಅತಿ ದೊಡ್ಡ ಸೋಲಾರ್‌
ಪಾರ್ಕ್‌ ಎನಿಸಿರುವ ರೇವಾ ಅಲ್ಫಾ ಮೆಗಾ ಸೋಲಾರ್‌ ಪವರ್‌ ಯೋಜನೆಯನ್ನು ವಿಡಿಯೋ ಕಾನ್ಪರೆನ್ಸ್‌
ಮೂಲಕ ಲೋಕಾರ್ಪಣೆ ಮಾಡಿದ” ಅವರು ನರ್ಮದಾ ನದಿ ಹಾಗೂ ಬಿಳಿ ಫಂಗಂರಿಜಾಗ ವಿಶೇಷವಾಗಿ
ಗುರುತಿಸಿಕೊಂಡಿದ್ದ ರೇವಾ ಪ್ರಾಂತೃಕ್ಕೀಗ ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್‌ ಪ್ರಾಂತ್ಯವುಳ್ಳ ಕ್ಷೇತ್ರವೆಂಬ
ಹೆಗ್ಗಳಿಕೆಯೂ ಬಂದಿದೆ. ಈ ಮೂಲಕ, ಈ ಪಾಂತ್ಯ ಹೊಸ ಇತಿಹಾಸ ಬರೆದಿದೆ. ಇಲ್ಲಿ ತಲೆ ಎತ್ತಿರುವ 750
ಮೆಗಾವ್ಯಾಟ್‌ನ ಈ ಬೃಹತ್‌ ಪಾರ್ಕ್‌, ಇಡೀ ವಿಶ್ವವೇ ಮುಂದೊಂದು ದಿನ ಸೋಲಾರ್‌ ಇಂಧನವನ್ನು ಬಲವಾಗಿ


ಅವಲಂಬಿಸುವುದಕ್ಕೆ ಹಾಕಲಾದ ಆಡಿಪಾಯ ಎಂದು ಬಣ್ಣಿಸಿದರು.


ಇಂಥದ್ದೊಂದು ಬೃಹತ್‌ ಶಕ್ತಿಯ ಆಗರಕ್ಕೆ ತಮ್ಮಲ್ಲಿ ತಲೆಯೆತ್ತಲು ಸ್ಥಾನಕೊಟ್ಟ ರೇವಾ ಜನತೆಗೆ ಹಾಗೂ
ಮಧ್ಯಪುದೇಶ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಬಯಸುತ್ತೇನೆ. ಈ ಸೌರ ಇಂಧನದ ಶಕ್ತಿ ಕೇಂದವಾಗಿ
ಬದಲಾಗುತ್ತದೆ ಎಂದರು.


ಸ್ಪಚ್ಛ ಇಂಧನಕ್ಕೆ ಜಾಗತಿಕ ಮಾರುಕಟ್ಟೆ ಭಾರತ- ಭಾರತವು ಸ್ಪಚ್ಛ ಇಂಧನಕ್ಕೆ ಜಾಗತಿಕ ಮಾರುಕಟ್ಟೆಯಾಗಿ
ಬದಲಾಗಿದೆ. ಸೌರಶಕ್ತಿ ಸಂಬಂಧಿತ ಕ್ಷೇತ್ರಗಳಲ್ಲಿ ಹೂಡಿಕೆಗೆ ಸೂಕ್ತವಾದ ತಾಣವಾಗಿ ಬದಲಾಗಿದೆ. ಇಡೀ ಜಗತ್ತು
ತಮ್ಮ ಆರ್ಥಿಕತೆಯನ್ನು ಕಾಪಾಡಿಕೊಳ್ಳಬೇಕೋ, ಪರಿಸರವನ್ನು ಸಂರಕ್ಷಿಸಬೇಕೋ ಎಂಬ ದ್ವಂದ್ಸದಲ್ಲಿ ಸಿಲುಕಿದೆ.
ಆದರೆ, ಭವಿಷ್ಯದ ದೃಷ್ಟಿಯಲ್ಲಿ ಜಗತ್ತು ಸೌರಶಕ್ತಿಯ ಮೇಲೆ ಅವಲಂಬಿತವಾಗುವುದೇ ಉತ್ತಮ. ಅದು ಇಡೀ
ವಿಶ್ವಕ್ಕೆ ಇಂಧನ ಭದ್ರತೆಯನ್ನು ನೀಡಬಲ್ಲದು. ಜೊತೆಗೆ ಪರಿಸರವನ್ನು ಕಾಪಾಡಲೂ ಇದು ನೆರವಾಗಲಿದೆ.
ಆತ್ಮನಿರ್ಭರ ಭಾರತ ಕನಸಿನಲ್ಲಿ ವಿದ್ಯುಚ್ಛಕ್ತಿಯ ಉತ್ಪಾದನಾ ವಲಯವನ್ನೂ ಸ್ಹಾವಲಂಭಿಯನ್ನಾಗಿಸುವ
ಗುರಿಯನ್ನು ಹೊಂದಲಾಗಿದೆ. ಈ ಗುರಿಯಲ್ಲಿ ಸೌರಶಕ್ತಿಯ ಉತ್ಪಾದನೆ ಪ್ರಮುಖವಾದ ಅಂಶವಾಗಿರಲಿದೆ ಎಂದು
ಪ್ರಧಾನಿ ತಿಳಿಸಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ:04.07.2020

4. ಕೌಶಲ್ಯಾಭಿವೃದ್ಧಿಗೆ ಮೋದಿ 3 ಮಂತ್ರ


ನಾವು ಇಂದಿನ ಕಾಲಕ್ಕೆ ತಕ್ಕಂತೆ ಪ್ರಸ್ತುತವಾಗಿರಬೇಕು ಎಂದರೆ ಕೌಶಲ್ಯ, ಮರುಕೌಶಲ್ಯ ಹಾಗೂ ಉನ್ನತ
ಕೌಶಲ್ಯ ಅಳವಡಿಸಿಕೊಳ್ಳಬೇಕು. ಇದೇ ಪ್ರಸ್ತುತತೆಯ ಮಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ
"ಕೌಶಲ್ಕದ 3 ಮಂತ್ರಗಳ' ಕರೆ ನೀಡಿದ್ದಾರೆ. ಅದರಲ್ಲೂ ಕೊರೋನಾ ಪಿಡುಗಿನ ಸಂದರ್ಭದಲ್ಲಂತೂ ಇದರ
ಅವಶ್ಯಕತೆ ಇನ್ನೂ ಹೆಚ್ಚಾಗಿದೆ.

ಸರ್ಕಾರದ ಮಹಾತ್ವಾಕಾಂಕ್ಷಿ "ಕೌಶಲ್ಯ ಭಾರತ ಆಂದೋಲನಕ?ಕ್ಕೆ 5 ವರ್ಷ ಸಂದ ಹಿನ್ನೆಲೆಯಲ್ಲಿ
ವಿಡಿಯೋ ಲಿಂಕ್‌ ಮೂಲಕ ಭಾಷಣ ಮಾಡಿದ ಅವರು ಕೌಶಲ್ಯ ಎಂಬುದಕ್ಕೆ ಯಾವುದೇ ಕಾಲಮಿತಿ ಇಲ್ಲ. ಅದು
ಕಾಲಾತೀತ. ನಿರಂತರ. ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ಇದು ಇತರರಿಗಿಂತ ನಿಮ್ಮನ್ನು
ವಭಿನ್ನವಾಗಿಸುತ್ತದೆ. ಇಂದು ವಿಶ್ವ ತೀವ್ರಗತಿಯಲ್ಲಿ ಬದಲಾಗುತ್ತಿದೆ. ಲಕ್ಷಾಂತರ ಕುಶಲ ಜನರ ಆಗತ್ಯವಿದೆ.
ಅದರಲ್ಲೂ ಆರೋಗ್ಯ ಕ್ಷೇತ್ರಕ್ಕಂತೂ ಬಹಳಷ್ಟು ಕುಶಲಮತಿಗಳ ಅಗತ್ಯವಿದೆ. ಇದೇ ವೇಳೆ ವಾಣಿಜ್ಯ ನೌಕೆ
ವಲಯವೂ ಇಂದು ಅತ್ಯಂತ ಬೇಡಿಕೆಯ ಕ್ಷೇತ್ರ ನಾವು ಈ ಕ್ಷೇತ್ರದಲ್ಲಿ ಕೌಶಲ್ಕವನ್ನು ವೃದ್ಧಿಸಿಕೊಳ್ಳುವತ್ತ ಕೆಲಸ
ಮಾಡಿದರೆ, ಲಕ್ಷಾಂತರ ನೌಕಾ ತಜ್ಞರನ್ನು ಕೊಡುಗೆಯಾಗಿ ವಿಶ್ವಕ್ಕೆ ನೀಡಬಹುದು. ಕೊರೋನಾ ಬಿಕ್ಕಟ್ಟಿನಿಂದ
ಉದ್ಯೋಗ ಕ್ಷೇತ್ರದ ಗುಣಲಕ್ಷಣಗಳೇ ಬದಲಾಗಿದೆ. ಕೆಲಸದ ಸಂಸ್ಕೃತಿ ಬದಲಾಗಿದೆ ಎಂದು ಹೇಳಿದ್ದಾರೆ.


ಆಧಾರ:ಕನ್ನಡ ಪ್ರಭ, ದಿನಾಂಕ:16.07.2020


5. ಜಂಟಿಯಾಗಿ ಹೋರಾಟ : ಪ್ರಧಾನಿ


ಭಾರತ ಮತ್ತು 27 ರಾಷ್ಟ್ರಗಳ ಐರೋಪ್ಯ ಒಕ್ಕೂಟದ ನಡುವಿನ ಸಂಬಂಧವನ್ನು ಇನ್ನಷ್ಟು ವಿಸ್ತರಿಸಲು
ಪ್ರಧಾನಿ ನರೇಂದ್ರ ಮೋದಿ ಹೊಸ ಹೆಚ್ಚಿ ಇಟ್ಟಿದ್ದಾರೆ. ಡನ ಬಿಕ್ಕಟ್ಟಿನ ವೇಳ ಪಟವ ಸದ್ದ ಢಗೊಳಿಸಲು.
ವಿಶ್ವಶಾಂತಿ ಮತ್ತು ಸ್ಥಿರತೆಗೆ ಭಾರತದೊಂದಿಗೆ ಪಾಲುದಾರರಾಗಲು ಖರೋಪ್ಯ ಒಕ್ಕೂಟವನ್ನು ಅಹ್ಞಾನಿಸಿದ್ದಾರೆ.
ಭಾರತ - ಐರೋಪ್ಯ ಒಕ್ಕೂಟ (ಇಯು) ನಡುವಿನ ವರ್ಚುವಲ್‌ ಶೃಂಗಸಭೆ ಉದ್ದೇಶಿಸಿ ಪ್ರಧಾನಿ ಮೋದಿ
ಭಾಷಣ ಮಾಡಿದರು.

ಇಂದು ಜನರ ಆರೋಗ್ಯ ಮತ್ತು ಸಮೃದ್ದಿ ಎರಡೂ ನಾನಾ ಸಂಕಷ್ಟಗಳನ್ನು ಎದುರಿಸುತ್ತಿವೆ.
ಕೊರೋನಾದ ನಂತರ ನಮ್ಮ ಮುಂದೆ ಹಲವು ಸವಾಲುಗಳು ಹುಟ್ಟುಕೊಂಡಿವೆ. ಇಂಥ ನಿರ್ಣಾಯಕ ಘಟ್ಟದಲ್ಲಿ
ಮಾನವ ಕೇಂದ್ರಿತ ಆರ್ಥಿಕತೆಯ ಪುನರ್‌ ಸ್ಥಾಪನೆಗೆ ಭಾರತ ಮತ್ತು ಐರೋಪ್ಯ ಒಕ್ಕೂಟ ಒಟ್ಟಾಗಿ
ಹೋರಾಡಬೇಕು ಎಂದು ಕರೆ ನೀಡಿದರು.


ವಿಶ್ವಕ್ಕೆ ಭಾರತ ಕೊಡುಗೆ : ಜಗತ್ತಿನ 150 ಕೊರೋನಾ ಸಂತ್ರಸ್ತ ರಾಷ್ಟಗಳಿಗೆ ಭಾರತ ಔಷಧಗಳನ್ನು
ಳುಹಿಸಿಕೊಟ್ಟಿದೆ. ಕೊರೋನಾ ವಿರುದ್ದದ ಜಾಗತಿಕ ಹೋರಾಟದಲ್ಲಿ ಭಾರತದ ಫಾರ್ಮಾ ಕಂಪನಿಗಳು ಪ್ರಮುಖ
ಪಾತ್ರ ನಿರ್ವಹಿಸಲು ಸಿದ್ಧವಾಗಿವೆ ಎಂದು ತಿಳಿಸಿದರು.


ನಾಗರಿಕ ಪರಮಾಣ ಒಪ್ಪಂದಕ್ಕೆ ಸಹಿ: 13 ವರ್ಷಗಳ ಸಮಾಲೋಚನೆಯ ನಂತರ ಭಾರತ ಮತ್ತು ಐರೋಪ್ಯ
ಒಕ್ಕೂಟ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ವರ್ಚುವಲ್‌ ಶೃಂಗಸಭೆಯ ಹಿಂದಿನ ದಿನ
ಈ ಒಪ್ಪಂದವಾಗಿದೆ. ಪರಮಾಣು ಶಕ್ತಿಯ ಶಾಂತಿಯುತ ಬಳಕೆಗೆ ಸಂಬಂಧಿಸಿದ ಹಲವು ಸಂಶೋಧನೆಗಳಲ್ಲಿ
ಭಾರತ ಐರೋಪ್ಯ ರಾಷ್ಟ್ರಗಳಿಗೆ ಜೊತೆಯಾಗಿದೆ.


ಅಕೊಸಾಕ್‌ನಲ್ಲಿ ಮೋದಿ ಭಾಷಣ: ವಿಶ್ವಸಂಸ್ಥೆಯ ಅಂಗ ಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ
(ಇಕೊಸಾಕ್‌) ವರ್ಚುವಲ್‌ ಸಭೆ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಭದ್ರತಾ
ಮಂಡಳಿಯ ತಾತ್ಕಾಲಿಕ ಸದಸ್ಯತ್ವ ಪಡೆದ ಮೇಲೆ ಪ್ರಧಾನಿ ಇದೇ ಮೊದಲ ಬಾರಿಗೆ ಈ ಸಭೆಯನ್ನುದ್ದೇಶಿಸಿ
ಮಾತನಾಡಲಿದ್ದಾರೆ. ವಿಶ್ವಸಂಸ್ಥೆಯ 75ನೇ ವರ್ಷದ ಸಂದರ್ಭದಲ್ಲಿ ಎದುರಾಗಿರುವ ಕೊರೋನಾ ಬಿಕ್ಕಟ್ಟನ್ನು
ಜಗತ್ತು ಹೇಗೆ ಎದುರಿಸಬಹುದು ಎಂಬುದರ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.


ಆಧಾರ:ಉದಯವಾಣಿ, ದಿನಾ೦ಕ:16.07.2020
6. ಸೋಂಕಿನ ವಿರುದ್ಧ ಭಾರತದಲ್ಲಿ ಜನಾಂದೋಲನ : ವಿಶ್ವಸಂಸ್ಥೆ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ


ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ದದ ಹೋರಾಟದಲ್ಲಿ ಭಾರತ 150ಕ್ಕೂ ಹೆಚ್ಚು ದೇಶಗಳಿಗೆ
ನೆರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯನ್ನುದ್ದೇಶಿಸಿ ವಿಡಿಯೋ ಕಾನ್ನರೆನ್ಸ್‌
ಮೂಲಕ ಮಾತನಾಡಿದ ಮೋದಿ ಇಡೀ ವಿಶ್ವವನ್ನೇ ಭಾದಿಸುತ್ತಿರುವ ಕೊರೋನಾ ಎಲ್ಲ ದೇಶಗಳ ಪುನಶ್ಲೇತನದ
ಸಾಮರ್ಥ್ಯವನ್ನೇ ಪರೀಕ್ಷೆಗೊಳಪಡಿಸಿದೆ. ಅದಕ್ಕಾಗಿ ಭಾರತದಲ್ಲಿ ಸರ್ಕಾರ ಮತ್ತು ನಾಗರಿಕ ಸಮಾಜವನ್ನು
ಒಟ್ಟುಗೂಡಿಸುವ ಮೂಲಕ ಕೊರೋನಾ ವಿರುದ್ದದ ಹೋರಾಟವನ್ನು ಜನರ ಹೋರಾಟವಾಗಿ
ಪರಿವರ್ತಿಸಲಾಗಿದೆ. ದೇಶದಲ್ಲಿ ಭಾರೀ ಪ್ರಾಣದ ಸೋಂಕು ಪತ್ತೆಯಾಗುತ್ತಿದ್ದರೂ ಗುಣಮುಖರಾಗುವವರ
ಪ್ರಮಾಣ ವಿಶ್ವದಲ್ಲೇ ಅತ್ಯಧಿಕವಾಗಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ದೇಶದ ತಳಮಟ್ಟದ ಆರೋಗ್ಯ ವ್ಯವಸ್ಥೆ
ಎಂದು ಹೇಳಿದರು.


ಲಾಕ್‌ಡೌನ್‌ ಅವಧಿಯಲ್ಲಿ ಸರ್ಕಾರ ಪ್ರತಿಯೊಂದು ಬಡ ಕುಟುಂಬಕ್ಕೂ ಸರ್ಕಾರದ ಯೋಜನೆಗಳು
ತಲುಪುವಂತೆ ನೋಡಿಕೊಂಡಿದೆ ಮತ್ತು 300 ಶತಕೋಟಿ ಡಾಲರ್‌ಗೂ ಹೆಚ್ಚಿನ ಪ್ಯಾಕೇಜ್‌ ಘೋಷಿಸಿದೆ. ಇದು
ಆರ್ಥಿಕತೆ ಪುನಶ್ಲೇತನಕ್ಕೆ ಸಾಧ್ಯವಾಗಲಿದೆ. ಸರ್ಕಾರ ತನ್ನ ಹೊಸ ಯೋಜನೆಗಳನ್ನು ಆತ್ಮ ನಿರ್ಭರ ಭಾರತದ
ಮೂಲಕ ಜಾರಿಗೆ ಮುಂದಾಗಿದೆ. ಇದು ಸ್ಥಾವಲಂಬಿ ಭಾರತ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ವಿಶ್ವಾಸ
ವ್ಯಕ್ತಪಡಿಸಿದರು.


ವಿಶ್ವಸಂಸ್ಥೆ ಪುನರ್ಜನ್ಮ ಸುಧಾರಣೆಗೆ ಮೋದಿ ಕರೆ


ಆಪಾರ ಪ್ರಮಾಣದ ಸಾವು-ನೋವುಗಳನ್ನುಂಟು ಮಾಡಿದ 2ನೇ ಮಹಾಯುದ್ದದ ಪರಿಣಾಮ ವಿಶ್ವದಲ್ಲಿ
ಶಾಂತಿಯ ಪುನರ್‌ ಸ್ಥಾಪನೆಗಾಗಿ ವಿಶ್ವಸಂಸ್ಥೆ ಉದಯಿಸಿತು. ಇದೀಗ ವಿಶ್ವಸಂಸ್ಥೆಯ ಮರುಹುಟ್ಟು ಮತ್ತು
ಸುಧಾರಣೆಗೆ ಕೊರೋನಾ ಸದಾವಕಾಶ ಕಲ್ಪಿಸಿಕೊಡಲಿದೆ. ಈ ಸದಾವಕಾಶವನ್ನು ನಾವು ಕಳೆದುಕೊಳ್ಳಬಾರದು,
ಸುಧಾರಿತ ಬಹುತ್ತದಿಂದ ಮಾತ್ರವೇ ಮಾನವೀಯತೆಯ ಆಕಾಂಕ್ಷೆಗಳನ್ನು ಪೂರೈಸಲಿದೆ ಎಂದು ಪ್ರಧಾನಿ
ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.


193 ದೇಶಗಳನ್ನು ಸದಸ್ಯ ರಾಷ್ಟವಾಗಿಸಿಕೊಂಡಿರುವ ವಿಶ್ವಸಂಸ್ಥೆಯ ಸ್ಥಾಪನೆಯಾದಗಿಂದಲೂ ಶವರೆಗೆ


ಹಲವು ಮಾರ್ಪಾಟಬುಗಳಿಗೆ ಒಳಪಟ್ಟಿದೆ, ಬಹುತ್ನ್ತದ ಮೂಲಕ ಸಮೃದ್ದಿ ಸಾಧನೆ ಮತ್ತು ಸುಸ್ಪಿರ ಶಾಂತಿ
ಸ್ಥಾಪನೆಯಲ್ಲಿ ಭಾರತ ನಂಬಿಕೆಯಿರಿಸಿದೆ. ಅಲ್ಲದೆ, ಪ್ರಸ್ತುತ ವಿಶ್ವವು ಬಹುತ್ನವನ್ನು ಪ್ರತಿಬಿಂಬಿಸಬೇಕು ಎಂಬುದು
ಭಾರತದ ಆಕಾಂಕ್ಷೆಯಾಗಿದ್ದು, 75ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ವೇಳೆ ಜಾಗತಿಕ ಬಹುತ್ವ


ವ್ಯವಸ್ಥೆಯ ಸುಧಾರಣೆಗೆ ಎಲ್ಲ ರಾಷ್ಟ್ರಗಳು ಪಣ ತೊಡಬೇಕು ಎಂದು ಕರೆ ನೀಡಿದರು.
ಆಧಾರ:ಕನ್ನಡ ಪ್ರಭ, ದಿನಾಂಕ:18.07.2020
7. ಗಡಿ ಸಂಘರ್ಷ ಅರುವ ಪೂರ್ವ ಲಡಾಖ್‌'ಗೆ ರಕ್ಷಣಾ ಸಚಿವರ ಭೇಟಿ


ಚೀನಾದ ಜೊತೆಗಿನ ಗಡಿ ಬಿಕ್ಕಟ್ಟು ಶಮನಕ್ಕೆ ಮಾತುಕತೆ ನಡೆಯುತ್ತಿದೆ. ಸಮಸ್ಯೆಯು ಎಷ್ಟರಮಟ್ಟಿಗೆ
ಪರಿಹಾರ ಆಗಬಹುದು ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಮಾತುಕತೆ ಮೂಲಕವೇ ಬಿಕ್ಕಟ್ಟಿಗೆ ಪರಿಹಾರ
ದೊರೆತರೆ ಉತ್ತಮ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.


ಮಾತುಕತೆ ಯಾವಾಗ ಪೂರ್ಣಗೊಳ್ಳಬಹುದು ಮತ್ತು ಅದರ ಫಲಿತಾಂಶ ಏನಾಗಬಹುದು
ಎಂಬುದನ್ನೂ ಹೇಳಲಾಗದು ಎಂದು ಲೇಹ್‌ ಸಮೀಪದಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡುತ್ತಾ
ಅಭಿಪ್ರಾಯಪಟ್ಟಿದ್ದಾರೆ.


ಸಂಘರ್ಷಕ್ಕೆ ಕಾರಣವಾಗಿರುವ ಪಾಂಗಾಂಗ್‌ ಸರೋವರದ ಪಶ್ಚಿಮ ಭಾಗದಲ್ಲಿರುವ ಲುಗುಂಗ್‌ನಲ್ಲಿ
ರಕ್ಷಣಾ ಸಚಿವರು ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟನ್‌ ಗಡಿ ಪೊಲೀಸರನ್ನು ಉದ್ದೇಶಿಸಿ
ಮಾತನಾಡಿದರು. ಸಂಘರ್ಷ ನಡೆದ ಫಿಂಗರ್‌ -4 ಪ್ರದೇಶದಿಂದ 43 ಕಿ.ಮೀ. ದೂರದಲ್ಲಿ ಈ ಪ್ರದೇಶ ಇದೆ.

ಗಾಲ್ಡನ್‌, ಹಾಟ್‌ ಸ್ಪಿಂಗ್ಸ್‌ ಮತ್ತು ಗೋಗ್ರಾ ಪ್ರದೇಶದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ
ಪೂರ್ಣಗೊಂಡಿದೆ. ಪಾಂಗಾಂಗ್‌ ಸರೋವರ ಮತ್ತು ದೆಪ್ಲಾಂಗ್‌ ದೌಲತ್‌ ಬೇಗ್‌ ಓಲ್ಲಿ ವಲಯದಲ್ಲಿ ಬಿಕ್ಕಟ್ಟು
ಶಮನದ ಮಾತುಕತೆ ಹೆಚ್ಚು ಸವಾಲಿನದ್ದಾಗಿದೆ. ಭಾರತವು ದುರ್ಬಲ ದೇಶ ಅಲ್ಲ ಎಂದು ನಾನು ನಿಮಗೆ
ಮಾತುಕೊಡಬಲ್ಲೆ. ಜಗತ್ತಿನ ಯಾವುದೇ ಶಕ್ತಿ ಕೂಡ ಭಾರತದ ಒಂದು ಇಂಚು ನೆಲವನ್ನೂ ಮುಟ್ಟಲಾಗದು
ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.


ಆಧಾರ:ಪ್ರಜಾವಾಣಿ, ದಿನಾಂಕ:18.07.2020
8. ರಾಮ ಮಂದಿರಕ್ಕೆ ಮುಹೂರ್ತ


ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದನಿಗೆ ಆಯೋಧ್ಯೆಯಲ್ಲಿ ಭವ್ಯ ಮಂದಿರ
ನಿರ್ಮಿಸುವ ದಶಕಗಳ ಕನಸು ಈಡೇರುವ ದಿನ ಸನ್ನಿಹಿತವಾಗಿದ್ದು, ಆಗಸ್ಟ್‌ 5 ರಂದು ಆಯೋಧ್ಯೆಯಲ್ಲಿ ಅದ್ಧೂರಿ
ಭೂಮಿ ಪೂಜೆ ಸಮಾರಂಭಕ್ಕೆ ಭರದ ಸಿದ್ದತೆ ನಡೆದಿದೆ.


ಆಗಸ್ಟ್ಸ್‌ 3 ರಿಂದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಪ್ರಮುಖ ಕಾರ್ಯಕ್ರಮ
ಆಗಸ್ಟ್‌-5 ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗರ್ಭಗುಡಿಯ ಸ್ಥಳದಲ್ಲಿ ಒಂದು ಬೆಳ್ಳಿ
ಇಟ್ಟಿಗೆ ಇಟ್ಟು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಒಟ್ಟು ಐದು ಬೆಳ್ಳಿ ಇಟ್ಟಿಗೆಗಳು ಇರಲಿವೆ ಎಂದು ಶ್ರೀರಾಮ
ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹೇಳಿದೆ. ಮೋದಿ ಅವರು ಪ್ರಧಾನಿಯಾದ ಬಳಿಕ ಆಯೋದ್ಯೆಗೆ ಭೇಟಿ
ನೀಡುತ್ತಿರುವುದು ಇದೇ ಮೊದಲು, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಹಿರಿಯ ನಾಯಕರಾದ


ಎಲ್‌.ಕೆ.ಆಡ್ವಾಣಿ, ಮುರುಳಿ ಮನೋಹರ ಜೋಶಿ. ಆರ್‌.ಎಸ್‌.ಎಸ್‌. ಮುಖ್ಯಸ್ಥ ಮೋಹನ್‌ ಭಾಗವತ್‌, ಉತ್ತರ
ಪ್ರದೇಶ ಮುಖ್ಯಮಂತಿ ಯೋಗಿ ಆದಿತ್ಯನಾಥ್‌ ಮಹಾರಾಷ್ಟ್ರ ಮುಖ್ಯಮಂತ್ರಿ "ಉದ್ಧವ್‌ ಠಾಕ್ರೆ ಸೇರಿ 50 ಗಣ್ಯರಿಗೆ
ಆಹ್ನಾನ ಕ ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ 300 ಜನ pe, ನಿರೀಕ್ಷೆ ಇಡದೆ.


ಕಳೆದ ಮಾರ್ಚ್‌ನಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದ ಉದ್ದವ್‌ ಠಾಕ್ರೆ ಮಂದಿರ ನಿರ್ಮಾಣಕ್ಕೆ ರೂ.
ಕೋಟಿ ದೇಣಿಗೆ ನೀಡುವ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ
ಹೆಚ್ಚಿನ ಜನರಿಗೆ ಪಾಲ್ಗೊಳ್ಳಲು ಟಸ್ಟ್‌ ಅವಕಾಶ ನೀಡಿಲ್ಲ. ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು
ಆಯೋಧ್ಯೆಯ ಜನರು ಸುಲಭವಾಗಿ ವೀಕ್ಷಿಸಲು ನಗರದಾದ್ಯಂತ ದೊಡ್ಡ ಎಲ್‌ಸಿಡಿ ಪರದೆಗಳನ್ನು
ಆಳವಡಿಸಲಾಗುತ್ತಿದೆ.


ಬೆಳ್ಳಿಯ ಐದು ಇಟ್ಟಿಗೆ : ಭೂಮಿ ಪೂಜೆಗೂ ಎರಡು ದಿನಗಳ ಮುನ್ನ ಹಲವು ಧಾರ್ಮಿಕ ಕಾರ್ಯಕ್ರಮಗಳು
ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ ಜರುಗಲಿದೆ. ಭೂಮಿ ಶುದ್ದೀಕರಣ, ಹೋಮ-ಹವನಗಳು ನಡೆಯಲಿದೆ.
ವೇದ-ಮಂತ್ರ ಘೋಷಗಳ ನಡುವೆ ಆಗಸ್ಟ್‌ 5 ರಂದು ಮಧ್ಯಾಹ್ನ 12.15ರ ಅಭಿಜಿತ್‌ ಮಹೂರ್ತದಲ್ಲಿ ಬೆಳ್ಳಿಯ
ಐದು ಇಟ್ಟಿಗೆಗಳನ್ನು ಭೂಮಿಯೊಳಗೆ (ಒಟ್ಟು 40 ಕೆ.ಜಿ. ತೂಕ) ರ ಭವ್ಯ ಮಂದಿರ ನಿರ್ಮಾಣ ಕಾರ್ಯಕ್ಕೆ
ಚಾಲನೆ ನೀಡಲಾಗುವುದು. ಈ ಐದು ರಚಿತ ಇಟ್ಟಿಗೆಗಳು ಪಂಚಭೂತಗಳ ಗ ಎಂದು ಟ್ರಸ್ಟ್‌ ಅಧ್ಯಕ್ಷ
ನೃತ್ಯ ಗೋಪಾಲ್‌ ದಾಸ್‌ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ದೇವಸ್ಥಾನದ ವಿಸೀರ್ಣ ಹೆಚ್ಚಳ: ವಿಶ್ವ ಹಿಂದೂ ಪರಿಷತ್‌ ಸೂಚಿಸಿದ್ದಂತಹ ನಾಗರ ಶೈಲಿಯ ವಾಸ್ತು ಶಿಲದಂತೆ
ವಿಷ್ಣು ಮಂದಿರಗಳು ನಿರ್ಮಾಣವಾಗುವ ರೀತಿಯಲ್ಲಿಯೇ ರಾಮಮಂದಿರ ತಲೆಯೆತ್ತಲಿದೆ. ಗರ್ಭಗುಡಿ ಎಂಟು
ಮೂಲೆಗಳನ್ನು ಹೊಂದಿರಲಿದೆ. ಮಂದಿರದ ಒಟ್ಟು ವಿಸ್ತೀರ್ಣ ಈ ಹಿಂದೆ 38 ಸಾವಿರ ಚದರ ಆಡಿ ಆಸುಪಾಸು
ಎಂದು ನಿಗದಿಯಾಗಿತ್ತು. ಪರಿಷ್ಠಠತ ಯೋಜನೆಯಲ್ಲಿ 76 ರಿಂದ 84 ಸಾವಿರ ಚದರ ಆಡಿ ವಿಸ್ತೀರ್ಣದಲ್ಲಿ
ಮಂದಿರ ನಿರ್ಮಾಣವಾಗಲಿದೆ.


ಆಧಾರ:ವಿಜಯಕರ್ನಾಟಕ, ದಿನಾಂಕ:20.07.2020


9. ಡಿಸೆಂಬರ್‌ 31ರ ತನಕ WF ವಿಸ್ತರಣೆ


ಮಾಹಿತಿ ತಂತ್ರಜ್ಞಾನ (ಐಟಿ) ಬಿಪಿಒ ಮತ್ತು ಸಂಬಂಧಿತ ಕಂಪನಿಗಳ ಬಹುತೇಕ ನೌಕರರು ಮನೆಯಿಂದ
ಕೆಲಸ ಮಾಡುತ್ತಿದ್ದು, ಈ ವರ್ಕ್‌ ಫ್ರಮ್‌ ಹೋಮ್‌ (ಡಬ್ಬ್ಯು.ಎಫ್‌.ಎಚ್‌) ಪದ್ಧತಿಗೆ ನೀಡಿರುವ ಅವಕಾಶವನ್ನು
2020ರ ಡಿಸೆಂಬರ್‌ 31ರ ತನಕ ಸರ್ಕಾರವು ವಿಸ್ತರಿಸಿದೆ.


ಕೋವಿಡ್‌-19 ಬಿಕ್ಕಟ್ಟಿನಿಂದಾಗಿ ಈ ಹಿಂದೆ ಜುಲೈ 31ರ ತನಕ ಡಬ್ಬ್ಯು.ಎಫ್‌.ಎಚ್‌. ಜಾರಿಗೆ ಸರ್ಕಾರ
ಅವಕಾಶ ನೀಡಿತ್ತು. ಈಗ ಡಬ್ಬ್ಯುಎಫ್‌ಎಚ್‌ ನಿಯಮ ವಿಸ್ತರಣೆ ಮಾಡಿರುವ ಸರ್ಕಾರದ ಕ್ರಮವನ್ನು ಐಟಿ
ವಲಯ ಸ್ಪಾಗತಿಸಿದೆ.


ಕಳೆದ ಮಾರ್ಚ್‌ನಿಂದ ಶೇ.90 ರಷ್ಟು ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.


ಇನ್ನು 43 ಲಕ್ಷ ಮಂದಿ ಉದ್ಯೋಗಿಗಳು ಐಟಿ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತರ ಸೇವೆಗಳಿಗೆ
ಸಂಬಂಧಿಸಿದ ನಿಯಮಾವಳಿಗಳನ್ನು ಸರ್ಕಾರ ಸಡಿಲಗೊಳಿಸಿದೆ.


ಆಧಾರ:ವಿಜಯ ಕರ್ನಾಟಕ , ದಿನಾಂ೦ಕ:23.07.2020
10. ಯೋಧರ ಶಕ್ತಿ ಇಡೀ ವಿಶ್ಯಕ್ಕೆ ಪಸರಿಸಿದೆ


ಪಾಕಿಸ್ತಾನದೊಂದಿಗಿನ ಕಾರ್ಗಿಲ್‌ ಯುದ್ಧದಲ್ಲಿ ಭಾರತ ಐತಿಹಾಸಿಕ ಗೆಲುವು ಕಂಡು ಇಂದಿಗೆ 21 ವರ್ಷ
ತುಂಬಿದ್ದು, ಕಾರ್ಗಿಲ್‌ ಯುದ್ದದಿಂದ ನಮ್ಮ ಯೋಧರ ಶಕ್ತಿ ಇಡೀ ವಶಕ್ಕೆ ಪಸರಿಸಿದೆ. ಯುದ್ಧ ನಡೆದ
ಸಂದರ್ಭಗಳನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ ಮೋದಿ ಮನ್‌ ಕಿ
ಬಾತ್‌ ಕಾರ್ಯಕ್ರಮದಲ್ಲಿ ಯೋಧರ ಬಲಿದಾನವನ್ನು ಸ್ಮರಿಸಿದ್ದಾರೆ.


ಭಾರತದ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಅದರ ಆಂತರಿಕ ಸಂಘರ್ಷದಿಂದ ತನ್ನ ಪ್ರಜೆಗಳ
ದೃಷ್ಟಿಯನ್ನು ಬೇರೆಡೆಗೆ ತಿರುಗಿಸುವ ದುಷ್ನೃತ್ಯ ಪಾಕಿಸ್ತಾನ ನಡೆಸಿತ್ತು ಆದರೆ, ಅದರ ಪ್ರಯತ್ನ ವಿಫಲವಾಯಿತು
ಎಂದು ಹೇಳಿದರು.


ಭಾರತವು ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಲು ಪ್ರಯತ್ನಿಸುತ್ತಿತ್ತು ಯಾವುದೇ
ಕಾರಣವಿಲ್ಲದೆ ಎಲ್ಲರೊಂದಿಗೂ ದ್ವೇಷ ಸಾಧಿಸುವುದು ದುಷ್ಟರ ಸ್ವಭಾವ ಎಂಬ ಮಾತಿನಂತೆ, ಅಂತಹ ಸ್ವಭಾವದ
ಜನರು ತಮಗೆ ಒಳ್ಳೆಯದನ್ನು ಮಾಡುವವರಿಗೂ ಕೆಬ್ಬದ್ದನ್ನು ಬಯಸುತ್ತಾರೆ. ಆದೇ ರೀತಿ ಭಾರತದ ಸೌಹಾರ್ದ
ಪ್ರಯತ್ನಗಳಿಗೆ ಹಿನ್ನಡೆಯಾಗುವಂತಾಗಲು ಪಾಕಿಸ್ತಾನವು ಪ್ರಯತ್ನಿಸಿತು. ಆದರೆ, ಭಾರತದ ಕೆಚ್ಚದೆಯ ಶಕ್ತಿಗಳ
ಶೌರ್ಯ ಜಗತ್ತಿಗೆ ಸಾಕ್ಷಿಯಾಗಿದೆ. ನಮ್ಮ ಪಡೆಗಳು ಹೋರಾಡುತ್ತಿರುವಾಗ ಶತ್ರುಗಳು ಪರ್ವತಗಳ ಮೇಲೆ
ಎತ್ತರದಲ್ಲಿದ್ದರು. ನಮ್ಮ ಪಡೆಗಳ ಮನೋಸ್ಟೈರ್ಯ ಪರ್ವತಗಳ ವಿರುದ್ದ ಹೋರಾಡಿ ಗೆದ್ದಿದೆ ಎಂದು ಪ್ರಧಾನಿ
ಮೋದಿ ಹೇಳಿದರು.


ಜಮ್ಮು ಕಾಶ್ಮೀರದ ಮತ್ತೊಂದು ಸೂರ್ತಿದಾಯಕ ಉದಾಹರಣೆ ನೀಡಿದ ಪ್ರಧಾನಿ, ಆನಂತನಾಗ್‌
ಪುರಸಭೆ ಅದಕ್ಷ ಮೊಹಮದ್‌ ಇಕ್ಸಾಲ್‌ ಕೇವಲ ರೂ.50,000 ವೆಚ್ಚದಲ್ಲಿ ಸೋಂಕು ನಿವಾರಕ ದ್ರಾವಣ
ಸಿಂಪಡಿಸುವ ಯಂತ್ರವನ್ನು ಸಿದ್ಧಪಡಿಸಿದ್ದಾರೆ ಎಂದು ಶ್ಲಾಘಿಸಿದರು.


ಮಾಸ್ಕ್‌ ಧರಿಸಿ ಆಯಾಸವೇ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಓಡಾಡಬೇಡಿ ಎಂದು ಮನವಿ
ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ, ಮಾಸ್ಕ್‌ ಧರಿಸುವುದರಿಂದ ಕೆಲವರು ಆಯಾಸಕ್ಕೆ ಒಳಗಾಗುವುದಾಗಿ
ಭಾವಿಸುತ್ತಾರೆ. ಮತ್ತೆ ಕೆಲವರು ಮಾತನಾಡುವ ಪೇಳಿಯಲ್ಲಿ ಮಾಸ್ಕ್‌ ಅನ್ನು ತೆಗೆಯುತ್ತಾರೆ ನಿಮಗೆ ಮಾಸ್ಕ್‌
ತೆಗೆಯಬೇಕು ಎಂದೆನಿಸಿದಾಗಲೆಲ್ಲಾ ಕೊರೋನಾ ಯುದ್ದದ 'ನರುದ್ಧ ಹೋರಾಡುತ್ತಿರುವ ವೈದ್ಯರು.
ಶುಶ್ರೂಷಿಕಿಯವರು ಹಾಗೂ ಕೊರೋನಾ ಯೋಧರನ್ನು ನೆನಪಿಸಿಕೊಳ್ಳಿ ಅವರು ನಿರಂತರವಾಗಿ ಮಾಸ್ಟ್‌ ಗಳನ್ನು
ಗಂಟೆಗಟ್ಟಲೆ ಧರಿಸುತ್ತಾರೆ. ಎಲ್ಲರ ಪ್ರಾಣ ಉಳಿಸಲು ಕಲಸ ಮಾಡುತ್ತಿದ್ದಾರೆ. ಎಂಟರಿಂದ ಹತ್ತು ಗಂಟೆಗಳೆ ಕಾಲ


ಮಾಸ್ಕ್‌ ಧರಿಸುತ್ತಾರೆ ಅವರು ತೊಂದರೆಗೊಳಗಾಗುವುದಿಲ್ಲವೇ ಎಂದು ಪ್ರಧಾನಿ ಪಶ್ಲಿಸಿದರು.
ಪ್ರಧಾನಿ ಮಾತುಗಳೇನು:


> ಈ ವರ್ಷದ ಆಗಸ್ಟ್‌ 15ರ ಸ್ಥಾತಂತ್ಯ ದಿನದಂದು ನಾವು ಕೊರೋನಾದಿಂದ ಸ್ಥಾತಂತ್ಯ ಪಡೆಯುವ
ಸಂಕಲ್ಪ ಮಾಡೋಣ.


» ಕೊರೋನಾ ವೈರಸ್‌ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಜನರು ಜಾಗರೂಕರಾಗಿರಬೇಕು.


> ನಾವು ಲಕ್ಷಾಂತರ ಜನರ ಪ್ರಾಣ ಉಳಿಸಲು ಸಮರ್ಥರಾಗಿದ್ದೇವೆ. ಕೊರೋನಾ ವೈರಸ್‌ ಬೆದರಿಕೆ ಇನ್ನೂ
ಮುಗಿದಿಲ್ಲ.


> ದೇಶದ ಹಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ. ಇದರಿಂದ ಪಾರಾಗಲು ನಿಯಮ ಪಾಲನೆ ಅಗತ್ಯ.


» ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶ ಹೆಚ್ಚು ಹಾನಿಗೊಳಗಾಗಿದೆ. ಇದರ ನಡುವೆಯೂ
ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ.


ಆಧಾರ:ವಿಜಯವಾಣಿ ದಿನಾಂಕ:27.07.2020
11. ಭೂ ಸೇನೆಗೆ ಮಹಿಳಾ ಬಲ


ಭಾರತೀಯ ಸೇನೆಯಲ್ಲಿ ಮಹಿಳೆಯರ ಪೂರ್ಣಾವಧಿ ನೇಮಕಕ್ಕೆ (ಪರ್ಮನೆಂಟ್‌ ಕಮಿಷನ್‌) ರಕ್ಷಣಾ
ಸಚಿವಾಲಯವು ಅಧಿಕೃತ ಅನುಮೋದನೆ ನೀಡಿದೆ. ಅಲ್ಲಾವಧಿ ಸೇವಾ ನೇಮಕದ ಮೂಲಕ ಸೇನೆಗೆ ಸೇರಿದ
ಮಹಿಳೆಯರ ದೀರ್ಪ ಕಾನೂನು ಹೋರಾಟಕ್ಕೆ ಈ ಮೂಲಕ ಗೆಲುವು ದೊರೆತಿದೆ.


ಮುನ್ನೆಲೆ ಹೋರಾಟಕ್ಕೆ ಬೆಂಬಲ ಒದಗಿಸುವ ಎಂಟು ಸೇವೆಗಳಲ್ಲಿ ಮಹಿಳೆಯರ ಪೂರ್ಣಾವಧಿ
ನೇಮಕಕ್ಕೆ ಈಗ ಅವಕಾಶ ದೊರತಿದೆ. ಭೂಸೇನೆಯ ವಾಯು ರಕ್ಷಣಾ ವಿಭಾಗ ಸಿಗ್ನಲ್‌ ಎಂಜಿನಿಯರಿಂಗ್‌


ಭೂಸೇನಾ ಸೇವಾ ಕೋರ್‌, ಭೂಸೇನಾ ಆರ್ಡನ್ಸ್‌ ಕೋರ್‌ ಮತ್ತು ಗುಪ್ತಚರ ಕೋರ್‌ನಲ್ಲಿ ಮಹಿಳೆಯರಿಗೆ ಈಗ
ಅವಕಾಶಗಳು ತೆರೆದುಕೊಂಡಿವೆ.


ನ್ಯಾಯಾಧೀಶರು ಮತ್ತು ಅಡ್ಡೋಕೇಟ್‌ ಜನರಲ್‌ ಹಾಗೂ ಭೂಸೇನಾ ಶಿಕ್ಷಣ ಕೋರ್‌ನಲ್ಲಿ ಮಹಿಳೆಯರ
ಪೂರ್ಣಾವಧಿ ಸೇವೆಗೆ 2008ರಿಂದಲೇ ಅವಕಾಶ ಇತ್ತು


ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಪೂರ್ಣಾವಧಿ ಕರ್ತವ್ಯದ ಅವಕಾಶ ನೀಡುವ
ಸರ್ಕಾರದ ಆದೇಶ ಪತ್ರವನ್ನು ರಕ್ಷಣಾ ಸಚಿವಾಲಯವು ಪ್ರಕಟಿಸಿದೆ. ಈ ಮೂಲಕ ಮಹಿಳೆಯರು ಭೂಸೇನೆಯಲ್ಲಿ
ಮಹತ್ವದ ಹೊಣೆಗಾರಿಕೆಗೆ ಹೆಗಲು ಕೊಡಲು ಅವಕಾಶ ಸೃಷ್ಟಿಯಾಗಿದೆ. ಅಲ್ಲಾವಧಿ ಸೇವೆಗೆ ನೇಮಕವಾಗಿರುವ
ಮಹಿಳೆಯರಿಗೆ ಭಾರತೀಯ ಭೂಸೇನೆಯ ಹತ್ತು ಕ್ಷೇತ್ರಗಳಲ್ಲಿ ಪೂರ್ಣಾವಧಿ ಕರ್ತವ್ಯಕ್ಕೆ ಅವಕಾಶ ಇದೆ ಎಂದು
ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.


ಆರ್ಮರ್ಡ್‌ ಕೋರ್‌, ಪದಾತಿ ದಳ, ಫಿರಂಗಿ ದಳ ಮತ್ತು ಮೆಕನೈಸ್ಟ್‌ ಪದಾತಿದಳದಲ್ಲಿ ಮಹಿಳಯರಿಗೆ
ಅವಕಾಶ ಇಲ್ಲ.


1992ರಲ್ಲಿ ಭೂಸೇನೆಗೆ ಮಹಿಳೆಯರ ಸೇರ್ಪಡೆ ಆರಂಭಿಸಲಾಯಿತು. ನ್ಯಾಯಾಧೀಶರು ಮತ್ತು
ಅಡ್ಡೋಕೇಟ್‌ ಜನರಲ್‌ ಹಾಗೂ ಶಿಕ್ಷಣ ಕೋರ್‌ಗಳಲ್ಲಿ ಮಹಿಳೆಯರಿಗೆ 2008 ರಿಂದ ಸಮಾನ ಅವಕಾಶ
ದೊರಕಿತು. ಅಲ್ಲಾವಧಿ ಕರ್ತವ್ಯದ ಮೂಲಕವೇ ಮಹಿಳೆಯರ ನೇಮಕ ಆಗುತ್ತಿತ್ತು ಮೊದಲಿಗೆ ಇದು 5 ವರ್ಷ
ಇತ್ತು. ಬಳಿಕ ಅದನ್ನು 14 ವರ್ಷಕ್ಕೆ ಏರಿಸಲಾಗಿದೆ.


ಕಾನೂನು ಹೋರಾಟ: ದೆಹಲಿ ಹೈಕೋರ್ಟ್‌ ತೀರ್ಪಿನ ಮೂಲಕ 2010ರಲ್ಲಿ ಬದಲಾವಣೆಯ ಗಾಳಿ ಬೀಸಲು
ಆರಂಭವಾಯಿತು. ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಈ ತೀರ್ಪು
ನೀಡಿತ್ತು. ಸೇನೆಯ ವಿವಿಧ ಸೇವೆಗಳಲ್ಲಿ ಮಹಿಳೆಯರು ಕೆಲಸ ಮಾಡಲು ಹಲವು ತೊಡಕುಗಳಿವೆ ಎಂಬ ಕೇಂದ್ರ
ಸರ್ಕಾರದ ವಾದವನ್ನು ನ್ಯಾಯಾಲಯವು ತಿರಸ್ಕರಿಸಿತು.


ದೈಹಿಕವಾಗಿ ಮಹಿಳೆಯರು ದುರ್ಬಲ ಮತ್ತು ಹೇಣ್ಣು ಎಂಬ ಕಾರಣಕ್ತಾಗಿಯೇ ಅವರು ಕುಟುಂಬದಲ್ಲಿ
ಹಲವು ಹೊಣೆಗಳನ್ನು ನಿಭಾಯಿಸಬೇಕಾಗುತ್ತದೆ. ಇವು ಸೇನೆಯಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿ ಎಂಬ ಕೇಂದದ
ವಾದವನ್ನು ಕೋರ್ಟ್‌ ಒಪ್ಪಲಿಲ್ಲ. ಸ್ಥಾತಂತ್ಯ ಬಂದು 70 ವರ್ಷಗಳ ಬಳಿಕವೂ ಆ ರೀತಿ ಯೋಚಿಸುತ್ತಿರುವುದು
ಸರಿಯಲ್ಲ. ಧೋರಣೆಗಳು ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಿದೆ ಎಂದು ಸುಪ್ರಿಂಕೋರ್ಟ್‌ ಹೇಳಿತು.

ದೆಹಲಿ ನ್ಯಾಯಾಲಯದ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಲನವಿಗೆ
ಸುಪಿಂಕೋರ್ಟ್‌ ಈ ತೀರ್ಪು ನೀಡಿದೆ. ತೀರ್ಪಿನ ಜಾರಿಗೆ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ
ಕಾಲಾವಕಾಶವನ್ನು ಸುಪ್ರಿಂಕೋರ್ಟ್‌ ಕಳೆದ ತಿಂಗಳು ನೀಡಿತ್ತು.


ಮಹಿಳಾ ಅಧಿಕಾರಿಗಳನ್ನು ಪೂರ್ಣಾವಧಿಗೆ ನೇಮಿಸುವುದಕ್ಕಾಗಿ ಕಾಯಂ ನೇಮಕ ಆಯ್ಕೆ ಮಂಡಳಿಯು
ಹಲವು ಸಿದ್ದತೆಗಳನ್ನು ನಡೆಸಬೇಕಿದೆ. ಆಯ್ಕೆಗೆ ಅರ್ಹರಾದ ಎಲ್ಲ ಮಹಿಳಾ ಅಧಿಕಾರಿಗಳು 'ತಮ್ಮ ದಾಖಲೆ
ಪತ್ರಗಳನ್ನು ಸಲ್ಲಿಸಿದ po ಆಯ್ಕೆ ರ ಸಭೆ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಕಳಿಸಿದೆ.


ಆಧಾರ:ಪ್ರಜಾವಾಣಿ ,ದಿನಾಂಕ:27.07.2020
12. ನಮ್ಮ ದೇಶದ ಪರಿಸ್ಥಿತಿ ಅತ್ಯುತ್ತಮ : ಮೋದಿ


ಕೊರೋನಾ ವಿಚಾರದಲ್ಲಿ ವಿಶ್ವದ ಪರಿಸ್ಥಿತಿ ಉತ್ತಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ
ತಿಳಿಸಿದ್ದಾರೆ. ಮುಂಬೈ, ಕೋಲ್ಕತ್ತಾ ಹಾಗೂ ದೆಹಲಿ-ಎನ್‌ಸಿಆರ್‌ನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಮೂರು
ಆತ್ಕಾಧುನಿಕ ಹಾಗೂ ಹೈ-ಎಂಡ್‌ ಕೊರೋನಾ ಪರೀಕ್ಷಾ ಕೇಂದ್ರಗಳಿಗೆ ವರ್ಚುವಲ್‌ ಮಾದರಿಯಲ್ಲಿ ಚಾಲನೆ
ನೀಡಿದ ಅವರು ಕೊರೋನಾವನ್ನು ನಿಯಂತ್ರಿಸುವಲ್ಲಿ ನೆರವಾದ ದೇಶದ ಜನರಿಗೆ ಅವರು ಕೃತಜ್ಞತೆ ಸಲ್ಲಿಸಿದರು.


ದೆಹಲಿ-ಎನ್‌ಸಿಆರ್‌, ಮುಂಬೈ ಹಾಗೂ ಕೋಲ್ಕತ್ತಾ ನಗರಗಳು ದೇಶದ ಪ್ರಮುಖ ಆರ್ಥಿಕ
ಚಟುವಟಿಕೆಗಳ ಕೇಂದ್ರಗಳಾಗಿವೆ. ದೇಶದ ಯುವಜನರಲ್ಲಿ ಅತಿ ಹೆಚ್ಚಿನವರು ತಮ್ಮ ಜೀವನ ರೂಪಿಸಿಕೊಳ್ಳಲು ಈ


ನಗರಗಳಿಗೆ ಆಗಮಿಸುತ್ತಾರೆ. ಈ ನಗರಗಳಲ್ಲಿ ಇಂಥ ಅತ್ಯಾಧುನಿಕ ಲ್ಯಾಬ್‌ಗಳನ್ನು ಆರಂಭಿಸಿದರೆ ಹೆಚ್ಚು ಜನರಿಗೆ
ಅನುಕೂಲವಾಗುತ್ತದೆ ಎಂದರು.


ಕೊರೋನಾ ಬಿಕ್ಕಟ್ಟು ನಮಗೆ ಹೊಸ ಪಾಠ ಕಲಿಸಿದೆ, ಮುಂದೆ ಇಂಥ ಸಂದರ್ಭಗಳು ದೇಶಕ್ಕೆ
ಎದುರಾದಾಗ ಅದನ್ನು ಸಮರ್ಥವಾಗಿ ನಿಭಾಯಿಸುವಂತೆ ಸಿಬ್ಬಂದಿಯನ್ನು ನಾವು ರೂಪಿಸಬೇಕಿದೆ. ಈಗ
ಕೊರೋನಾ ವಾರಿಯರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು. ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರ ಸಿಬ್ಬಂದಿಗೆ ಅತ್ಯುನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ
ಎಂದ


ಎಲ್ಲೆಲ್ಲವೆ ಹೊಸ ಲ್ಯಾಬ್‌'ಗಳು:
> ಐಸಿಎಂಆರ್‌ -ನ್ಯಾಷನಲ್‌ ಇನ್ನಟ್ಕೂಟ್‌ ಆಫ್‌ ಕ್ಯಾನ್ಸರ್‌ ಪಿವೆನ್ನನ್‌ ಆ್ಯಂಡ್‌ ರಿಸರ್ಚ್‌ (ನೊಯ್ದಾ)
> ಐಸಿಎಂಆರ್‌ -ನ್ಯಾಷನಲ್‌ ಇನ್ನಿಟ್ಕೂಟ್‌ ಫಾರ್‌ ರಿಪ್ರೊಡಕ್ಷಿವ್‌ ಹೆಲ್ತ್‌ (ಮುಂಬೈ)


> ಐಸಿಎಂಆರ್‌ -ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಕಾಲರಾ ಆ್ಯಂಡ್‌ ಎಂಟೆರಿಕ್‌ ಡಿಸೀಸಸ್‌
(ಕೋಲ್ಪತ್ತಾ)


ಹೊಸ ಲ್ಯಾಬ್‌ಗಳ ಪ್ರಾಮುಖ್ಯತೆ

ಮೂರು ಲ್ಯಾಬ್‌ಗಳಿಂದ ದಿನವೊಂದಕ್ಕೆ 10,000 ಜನರ ಪರೀಕ್ಷೆ.
ಪ್ರತಿ ಸೋಂಕಿತನ ಪರೀಕ್ಷೆಗೆ ತೆಗೆದುಕೊಳ್ಳುವ ಸಮಯ ಅತಿ ಕಡಿಮೆ.
ಸಿಬ್ಬಂದಿಗೆ ಕೊರೋನಾ ಬಾರದಂತಹ ಹೈಟೆಕ್‌ ರಕ್ಷಣೆ.


VV VY VY


ಕೊರೋನಾ ಕಾಲಘಟ್ಟ ಮುಗಿದ ನಂತರ ಈ ಲ್ಯಾಬ್‌ಗಳು ಹೆಪಾಟೆಟಿಸ್‌ ಬಿ ಮತ್ತು ಹೆಪಾಟೆಟಿಸ್‌ ಸಿ,
ಎಚ್‌ಐವಿ. ಕ್ಷಯ ಹಾಗೂ ಡೆಂಘಿ ವೈರಾಣುಗಳ ಸಂಶೋಧನಾ ಕೇಂದ್ರಗಳಾಗಿ ಬದಲು.


ಆಧಾರ:ಉದಯವಾಣಿ, ದಿನಾಂಕ:28.07.2020
13. ಮತ್ತೆ 47 ಆ್ಯಪ್‌ ಬ್ಯಾನ್‌ : ಕೇಂದ್ರ ಸರ್ಕಾರದ ಘೋಷಣೆ


ಚೀನಾದ 59 ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಪುನ: 47 ಆ್ಯಪ್‌ಗಳನ್ನು
ನಿಷೇಧಿಸಿದೆ. ಈ ಕುರಿತಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆದೇಶ ಹೊರಬಿದ್ದಿದ್ದು, ಅದು
ಅಧಿಕೃತವಾಗಿ ಪ್ರಕಟಣೆಗೊಂಡಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ 69ಎ ನಿಯಮದ ಪ್ರಕಾರ ಭಾರತದ ಸಾರ್ವಭೌಮತೆಗೆ, ಐಕ್ಯತೆಗೆ ಧಕ್ಕೆ
ತರುವಂಥ ಚೀನಾದ 59 ಆ್ಯಪ್‌ಗಳನ್ನು ಗುರುತಿಸಿ ಅವುಗಳನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ
ಹೇಳಲಾಗಿದೆ.


ಈ ಮೂಲಕ ಭಾರತದಲ್ಲಿ ನಿರ್ಬಂ೦ಧಕ್ಕೊಳಗಾದ ಚೀನಾ ಆ್ಯಪ್‌ಗಳ ಸಂಖ್ಯೆ 106ಕ್ಕೇರಿದೆ. ಹೊಸದಾಗಿ
ನಿಷೇಧಿಸಲ್ಪಟ್ಟಿರುವ ್ಯಪ್‌ಗಳು ಈ ಹಿಂದೆ ನಿಷೇಧಿಸಲಟಿರುವ ಆಪ್‌ಗಳ ತದೂಪಿ ಆ್ಯಪ್‌ಗಳಾಗಿದ್ದವು ಅಥವಾ ಆ
ಆಪ್‌ಗಳ ಮುಂದುವರಿದ ಅವೃತ್ತಿಗಳಾಗಿದ್ದವು. ಅವುಗಳನ್ನು ಗುರುತಿಸಿ ನಿಷೇಧಿಸಲಾಗಿದೆ ಎಂದು ಇಲಾಖೆಯ
ಅಧಿಕಾರಿಗಳು ತಿಳಿಸಿದ್ದಾರೆ.


ಜೂನ್‌ 29ರಂದು ಭಾರತದ ಐಕ್ಯತೆ ಸಾರ್ವಭೌಮತ್ತಕ್ಕೆ ತೊಂದರೆ ನೀಡುವುದೆಂಬ ಕಾರಣ ನೀಡಿ
ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹೊಸದಾಗಿ ನಿಷೇಧಿಸಲ್ಲಟ್ಟಿರುವ ಆ್ಯಪ್‌ಗಳ
ಪಟ್ಟಿಯಲ್ಲಿ ಟಿಕ್‌ಟಾಕ್‌, ಲೈಟ್‌, ಹಲೋಲೈಟ್‌, ಶೇರ್‌ ಇಟ್‌, ಲೈಟ್‌ಬಿಗೋ, ಲೈವ್‌ಲೈಟ್‌ ಹಾಗೂ ವಿಎಫ್‌ವೈ


ಲೈಟ್‌ ಆ್ಯಪ್‌ಗಳು ನಿಷೇದಿತ ಪಟ್ಟಿಯಲ್ಲಿವೆ ಎಂದು ಎಎನ್‌ಐ ತಿಳಿಸಿದೆ.


ಚೀನಾದ ಮತ್ತಷ್ಟು ಆ್ಯಪ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಇಲಾಖೆ
ಚೀನಾದ ಎಲ್ಲಾ ಅಂತರರಾಷ್ಟೀಯ ವಾಣಿಜ್ಯ ಕಟಪಟಿಕಗಲು. ಅಂತರರಾಷ್ಟ್ರೀಯ ಹಾಗೂ ಸ್ಥಳೀಯ ಸರ್ಕಾರಗಳ
ನಡುವಿನ ಒಂದು ಸಹಮತದಲ್ಲಿ ನಡೆಯುತಿದೆ. ಈ ಸಹಮತವನ್ನು ಎತ್ತಿಡಿಯವುದು ಭಾರತದ
ಜವಾಬ್ದಾರಿಯಾಗಿದೆ. ತನ್ನಲ್ಲಿ ಹೂಡಿಕೆ ಮಾಡುವ ಆಂತರರಾಷ್ಟ್ರೀಯ Kae ಸಂಸ್ಥೆಗಳ ಹಿತಾಸಕ್ತಿಯನ್ನು
ಕಾಪಾಡುವುದು ಭಾರತದ ಜವಾಬ್ದಾರಿಯಾಗಿದೆ ಎಂದು ಹೇಳಿದೆ


ಆಧಾರ:ಉದಯವಾಣಿ, ದಿನಾಂಕ:28.07.2020
14. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲ ಭದ್ರತೆ


ಲಡಾಖ್‌ನಲ್ಲಿ ತಿಂಗಳುಗಳಿಂದ ಭಾರತಕ್ಕೆ ಕಿರಿಕಿರಿ ಉಂಟು ಮಾಡಿದ್ದ ಚೀನಾ ಈಗ ದಕ್ಷಿಣದ ಹಿಂದೂ
ಮಹಾಸಾಗರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ನೌಕಪಡೆ ತನ್ನ
ಸಮರ ನೌಕೆಗಳನ್ನು ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ (ಐಒಆರ್‌) ನಿಯೋಜಿಸಿ, ಚೀನಾಕ್ಕೆ ಸೆಡ್ಡು ಹೊಡೆದಿದೆ.


ಚೀನಾಕ್ಕೆ ಅಮದಾಗುವ ಕಚ್ಚಾ ತೈಲದಲ್ಲಿ ಶೇ.80ರಷ್ಟು ಸರಕು ಹಿಂದೂ ಮಹಾಸಾಗರದ ಮೂಲಕವೇ
ಹಾದು ಹೋಗುವುದರಿಂದ ಆ ಸಮುದ್ರ ಭಾಗವನ್ನು ತನ್ನ ವಶಕ್ಕೆ ಪಡೆಯಲು ಚೀನಾ ಹೊಂಚು ಹಾಕುತ್ತಿದೆ.
ಐಒಆರ್‌ ಸೇರಿದಂತೆ ಏಷ್ಯಾ ಖಂಡದ ಸುತ್ತಮುತ್ತಲಿನ ಸಮುದಗಳ ಮೇಲೆ ತನ್ನ ಸೇನಾ ನೆಲಗಳನ್ನು ನಿರ್ಮಿಸಿ,
ನೂತನ ಸಾಗರ ಮಾರ್ಗಗಳನ್ನು ಸೃಷ್ಟಿ ಮಾಡಿತೊಳ್ಳುವ ಮೂಲಕ ಜಗತ್ತಿನ n ಸೂಪರ್‌ ರ್‌ ಆಗಿ
ಹೊರಹೊಮ್ಮಲು ಚೀನಾ ನಶಿ ಮಲಾಕ್ಕಾದ ದಕ್ಷಿಣ ಭಾಗ, ಸುಂಡಾ, ಲೊಂಬೊಕ್‌, ಒಬಾಯ್‌ ಹಾಗೂ
ವೆಟಾರ್‌ ಮಾರ್ಗಗಳ ಮೂಲಕ ಹಿಂದೂ ಮಹಾ ಸಾಗರಕ್ಕೆ ಲಗ್ಗೆ ಹಾಕಲು ಚೀನಾ ಯತ್ನಿಸುತ್ತಿದೆ ಎಂದು
ಹೇಳಲಾಗಿದೆ.


ಸಮರನೌಕೆಗಳ ಜಮಾವಣೆ: ಉದ್ದೇಶವನ್ನು ಅರಿತಿರುವ ಭಾರತೀಯ ನೌಕಪಡೆ, ಹಿಂದೂ ಮಹಾಸಾಗರ
ಪ್ರಾಂತ್ಯದಲ್ಲಿ ತನ್ನ ಸಮರ ನೌಕೆಗಳನ್ನು ಜಲಾಂತರ್ಗಾಮಿಗಳ ಕಾವಲು ಆರಂಭಿಸಿದೆ. ಈ ಮೂಲಕ ಚೀನಾಕ್ಕೆ
ಎಚ್ಚೆರಿಕೆಯ ಸಂದೇಶವೊಂದನ್ನು ಭಾರತ ರವಾನಿಸಿದೆ.


ಸಾಗರದ ಮೇಲೆ ಚೀನಾದ ಅತಿಕ್ರಮಣವನ್ನು ತಡೆಯುವ ಉದ್ದೇಶದಿಂದ ಐಒಆರ್‌ನೊಂದಿಗೆ ತಮ್ಮ
ತೀರಗಳನ್ನು ಹಂಚಿಕೊಂಡಿರುವ ಮಾಲ್ಡೀವ್ಸ್‌, ವೊ ಸೆಷಲ್ಫ್‌ ಮಡಗಾಸ್ಕರ್‌ ರಾಷ್ಟ್ರಗಳನ್ನು ಠಗಾಗಲೇ
i ಭಾರತ ಚೀನಾದ ಪ್ರಯತ್ನಗಳನ್ನು ವಿರೋಧಿಸುವಂತೆ ಕೀಳಿಕೊಂದಿದೆ. ಜೊತೆಗೆ # ವಿಚಾರದಲ್ಲಿ
ಸಮಾನ ಮನಸ್ಕರಾಗಿರುವ ಅಮೆರಿಕ ಘಾ ಜಪಾನ್‌ನ ನೆರವನ್ನು ಭಾರತ ಕೇಳಿದೆ. ವಿವಾದಿತ ಪ್ರದೇಶವಾದ
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಈ ವಿವಾದದ ಪಾಲುದಾರರಾಗಿರುವ ಮಲೇಷ್ಯಾ, ಇಂಡೋನೇಷ್ಯಾ,
ಫಿಲಿಪ್ಪೀನ್ಸ್‌ ಹಾಗೂ ವಿಯೆಟ್ನಾಂ ರಾಷ್ಟಗಳ ಸತತ ವಿರೋಧದ ನಡುವೆಯೂ ತನ್ನ ನೌಕಾ ದಳದ ಕವಾಯಿತು
ನಡೆಸಿದೆ.


ಆಧಾರ:ಉದಯವಾಣಿ, ದಿನಾ೦ಕ:30.07.2020
15. ಭಾರತಕ್ಕೆ ಬಂದ ರಫೇಲ್‌ ಯುದ್ಧ ವಿಮಾನ


ಐದು ರಫೇಲ್‌ ಯುದ್ದ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಆ ಮೂಲಕ ಎರಡು ದಶಕಗಳ ನಂತರ
ಬಹುಪಾತ್ರದ ಯುದ್ಧವಿಮಾನಗಳು ದೇಶದ ವಾಯುಪಡೆಗೆ ಸೇರಿದಂತಾಗಿದೆ.


ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಐದು
ರಪೇಲ್‌ ಯುದ್ಧವಿಮಾನಗಳ ಸೇರ್ಪಡೆಯಿಂದ ಭಾರತೀಯ ವಾಯುಪಡೆಯ ಯುದ್ದ ಸಾಮರ್ಥ್ಯ ಮತ್ತಷ್ಟು
ಹೆಚ್ಚಿದಂತಾಗಿದೆ. ಜಾಗತಿಕವಾಗಿ ಅತ್ಯುತ್ತಮ ಯುದ್ಧ ವಿಮಾನಗಳು ಎಂಬ ಹೆಗ್ಗಳಿಕೆಯನ್ನು ಈ ರಫೇಲ್‌
ಜೆಟ್‌ಗಳು ಹೊಂದಿವೆ. ಅಂಬಾಲ ವಾಯುನೆಲೆಯಲ್ಲಿ ರಫೇಲ್‌ ಯುದ್ದವಿಮಾನಗಳ ಮೊದಲ ಬ್ಯಾಚ್‌
ಬಂದಿಳಿಯಿತು. ಫ್ರಾನ್ಸ್‌ನ ಮೆರಿನ್ಯಾಕ್‌ ವಾಯುನೆಲೆಯಿಂದ ಹೊರಟಿದ್ದ ಈ ಜೆಟ್‌ಗಳು ಸುಮಾರು 7000 ಕಿ.ಮೀ
ಕಮಿಸಿ ಭಾರತ ತಲುಪಿವೆ.


2016ರಲ್ಲಿ ಒಪ್ಪಂದ ಎನ್‌ಡಿಎ ಸರ್ಕಾರವು ಫ್ರಾನ್ಸ್‌ನ ವಾಯುಯಾನ ಸಂಸ್ಥೆ ಡಾಸೋ ಏವಿಯೇಷನ್‌
ನಿಂದ 36 ರಫೇಲ್‌ ಯುದ್ಧವಿಮಾನಗಳನ್ನು ರೂ.59,000 ಕೋಟಿಗೆ ಖರೀದಿಸುವ ಒಪ್ಪಂದಕ್ಕೆ 2016ರ
ಸೆಪ್ಪಂಬರ್‌ 23ರಂದು ಸಹಿ ಹಾಕಿತ್ತು 10 ರಫೇಲ್‌ ಜೆಟ್‌ಗಳನ್ನು ಭಾರತಕ್ಕೆ ಕಳುಹಿಸುವ ಕಾರ್ಯ
ಪೂರ್ಣಗೊಂಡಿದೆ ಆದರೆ, ಐದು ವಿಮಾನಗಳು ಬಂದಿದ್ದು, ಉಳಿದ ಐದು ವಮಾನಗಳನ್ನು ತರಬೇತಿ
ಉದ್ದೇಶಕ್ಕಾಗಿ ಪ್ರಾನ್ಸ್‌ನಲ್ಲಿಯೇ ಬಿಡಲಾಗಿದೆ. 2021ರ ಅಂತ್ಯದ ವೇಳೆಗೆ ಎಲ್ಲ 36 ಯುದ್ದ ವಿಮಾನಗಳು
ವಾಯುಪಡೆಯನ್ನು ಸೇರಲಿವೆ ಎಂದು ಸರ್ಕಾರ ತಿಳಿಸಿದೆ.


ನಮ್ಮ ಪ್ರಾದೇಶಿಕ ಏಕತೆಗೆ ಬೆದರಿಕೆ ಉಂಟು ಮಾಡುತ್ತಿರುವವರು, ಭಾರತೀಯ ವಾಯುಪಡೆಯ ಈ
ಹೊಸ ಶಕ್ತಿ ಕಂಡು ಖಂಡಿತ ಆತಂಕಕ್ಕೆ ಈಡಾಗಿರುತ್ತಾರೆ ಅಥವಾ ಕಳವಳಗೊಂಡಿರುತ್ತಾರೆ ಎಂದು ಹೇಳುವ
ಮೂಲಕ ಚೀನಾಗೆ ಪರೋಕ್ಷ ಎಚ್ಚರಿಕೆಯನ್ನೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೀಡಿದ್ದಾರೆ.


ಆಧಾರ:ಪ್ರಜಾವಾಣಿ ದಿನಾಂಕ:30.07.2020
16. ಹೊಸ ಭಾರತಕ್ಕೆ ಹೊಸ ಶಿಕ್ಷಣ ನೀತಿಯ ದಿಕ್ಲೂಚಿ


2020ರ ಹೊಸ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 34 ವರ್ಷಗಳ ಬಳಿಕ ಹೊಸ
ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ,
ಉನ್ನತ ಶಿಕ್ಷಣವನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸುವ ಅಂಶಗಳು ಈ ನೀತಿಯಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು
ಭಾರತ ಕೇಂದಿತ ಶಿಕ್ಷಣ ನೀತಿಯಾಗಿದ್ದು, ಮಕ್ಕಳ ಸಮಗ್ರ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು
ರೂಪಿಸಲಾಗಿದೆ. ಹೊಸ ಭಾರತದಲ್ಲಿ ಹೊಸ ಶಿಕ್ಷಣ ನೀತಿಯು ಹೊಸ ಯುಗಕ್ಕೆ ದಾರಿ ದೀಪವಾಗಲಿದೆ.


ಹೊಸ ಪದ್ಧತಿ: 10+2 ಬದಲಿಗೆ 5+3+3+4:- ರಾಷ್ಟೀಯ ಶಿಕ್ಷಣ ನೀತಿ-2020 ಪ್ರಾಥಮಿಕ, ಮಾಧ್ಯಮಿಕ ಮತ್ತು
CY) pe)
ಪದವಿ ಪೂರ್ವ ಶಿಕ್ಷಣ ಪದ್ಧತಿಯನ್ನು ಆಮೂಲಾಗ್ರ ಪರಿಷ್ಠರಿಸಲಿದೆ. ಹೊಸ ನೀತಿಯ ಪ್ರಕಾರ 10 ಪ್ಲಸ್‌ 2


Ia)
ಶಿಕ್ಷಣ ಹಂತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪೂರ್ವ ಪ್ರಾಥಮಿಕದ ಮೂರು ವರ್ಷ ಹಾಗೂ ನೇ
ಹಾಗೂ 2ನೇ ತರಗತಿಗಳನ್ನು ಸೇರಿಸಲಾಗಿದೆ. ಮುಂದಿನ ಮೂರು ವರ್ಷ (3 ರಿಂದ 5ನೇ ತರಗತಿ)ಗಳು
ಸಿದ್ದತಾ ಹಂತ'ವಾಗಿದ್ದರೆ ನಂತರದ 3 ವರ್ಷ (6 ರಿಂದ 8ನೇ ತರಗತಿ) "ಮಧ್ಯಮ ಹಂತ'ದ ಶಿಕ್ಷಣವಾಗಿರುತ್ತದೆ.


ಮೊದಲ |5 ವರ್ಷ ಮೂಲಭೂತ ಹಂತ
ನಂತರದ |3 ವರ್ಷ ಸಿದ್ದತಾ ಹಂತ
ನಂತರದ |3 ವರ್ಷ ಮಧ್ಯಮ ಹಂತ
ಕೊನೆಯ |5 ವರ್ಷ ಪೌಢ ಹಂತ


5ನೇ ತರಗತಿ ತನಕ ಮಾತೃ ಭಾಷೆಯಲ್ಲೇ ಶಿಕ್ಷಣ: ಸಾಧ್ಯವಿದ್ದಲ್ಲಿ ಕನಿಷ್ಟ 5ನೇ ತರಗತಿಯವರೆಗೂ ಮಾತೃ ಭಾಷೆ.
ಪ್ರಾದೇಶಿಕ ಅಥವಾ ಸ್ಥಳೀಯ ಭಾಷೆಯಲ್ಲೇ ಶಿಕ್ಷಣಂ ನೀಡಬೇಕು ಮತ್ತು ಅದನ್ನು 8ನೇ ತರಗತಿ ಅಥವಾ ಅದಕ್ಕಿಂತ
ಹೆಚ್ಚಿನ ತರಗತಿಯವರೆಗೂ ವಿಸ್ತರಿಸಬಹುದು. ಭಾರತೀಯ ಭಾಷೆಗಳು ಫನ್‌ ಪ್ರಾಜೆಕ್ಟ್‌ ಅಥವಾ
ಚಟುವಟಿಕೆಯನ್ನು ಪ್ರತಿ ವಿದ್ಯಾರ್ಥಿಗೆ ನೀಡಬೇಕು. ತ್ರಿಭಾಷಾ ಸೂತ್ರದಡಿ ಕಲಿಕೆ ಸಾಗಬೇಕು. ಹಾಗೆಯೇ ಕನ್ನಡವೂ
ಸೇರಿದಂತೆ ಎಲ್ಲ ಶಾಸ್ತ್ರೀಯ ಭಾಷೆಗಳು ಲಭ್ಯವಾಗಿರಬೇಕು.

ಪ್ರತಿ ವರ್ಷ ಇಲ್ಲ ಪರೀಕ್ಷೆ: ಹಾಲಿ ವ್ಯವಸ್ಥೆಯಲ್ಲಿ ಪ್ರತಿ ವರ್ಷ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ನೀತಿಯ
ಪ್ರಕಾರ 3,5 ಮತ್ತು 8ನೇ ತರಗತಿಗೆ ಮಾತ್ರ ಪರೀಕ್ಷೆ ಇರಲಿದೆ. ಉಳಿದ ವರ್ಷ ತರಗತಿಗಳ ಮೌಲ್ಯಮಾಪನವು
ನಿಯಮಿತದ ಮತ್ತು ರಚನಾತಕ ಶೈಲಿಯದ್ದಾಗಿರುತ್ತದೆ. ಅಂದರೆ, ಸರ್ಧಾತ್ಮಕ ಆಧಾರಿತ ಕಲಿಕಾ ಉತ್ತೇಜನ ಮತ್ತು


ಅಭಿವೃದ್ದಿ ವಿಶ್ಲೇಷಣೆ, ವಿಮರ್ಶಾತ್ಮಕ, ಚಿಂತನೆ ಮತ್ತು ಪರಿಕಲ್ಲನೆಯಂಥ ಸ್ಪಷ್ಟತೆಯನ್ನು ಮೂಡಿಸುವ ಅತ್ಯುತ್ತಮ
ಕೌಶಲದ ಶಿಕ್ಷಣವನ್ನು ಇದು ಒದಗಿಸುತ್ತದೆ.

ಬೋರ್ಡ್‌ ಎಕ್ಷಾಮ್‌ ಪದ್ಧತಿ ಪರಿಷ್ಕರಣೆ: 10 ಮತ್ತು 12ನೇ ತರಗತಿಗಳಿಗೆ ಮಾತ್ರ ಬೋರ್ಡ್‌ ಎಕ್ಸಾಮ್‌ ಇರುತ್ತದೆ.
ಈ ಪರೀಕ್ಷೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಸಿಬಿಎಸ್‌ಇಯಲ್ಲಿ ಗಣಿತ ಇರುವಂತೆ ಎಲ್ಲ
ಕೋರ್ಸ್‌ಗಳನ್ನು ಎರಡು ಭಾಷೆಗಳಲ್ಲಿ ನೀಡಲಾಗುತ್ತದೆ. ರಾಜ್ಯಗಳಲ್ಲೂ ಬೋರ್ಡ್‌ ಪರೀಕ್ಷೆಗಳು ಜ್ಞಾನಾಧಾರಿತ
ಪರೀಕ್ಷೆಗಳಾಗಿರಲಿವೆ ಹೊರತು ಕಲಿಕೆಯ ಉದ್ದೇಶ ಮಾತ್ರವೇ ಆಗಿರುವುದಿಲ್ಲ. ಪ್ರತಿ ವಿಷಯವೂ ಆಬ್ಬಿಕ್ಷಿವ್‌ ಮತ್ತು
ವಿವರಣಾತ್ಮಕ ಪರೀಕ್ಷೆ ಹೊಂದಿರುತ್ತದೆ.


ಲೋಕ ವಿದ್ಯಾ 6 ರಿಂದ 8ನೇ ತರಗತಿಯ ಎಲ್ಲ ಮಕ್ಕಳಿಗೆ ಸ್ಥಳೀಯ ವೃತ್ತಿಪರ ಕೌಶಲದ ಜ್ಞಾನ
ನೀಡಲಾಗುವುದು. ಅಂದರೆ ಬಡಿಗ, ಮಾಲಿ, ಕುಂಬಾರ, ಕಲಾವಿದ ಇತ್ಯಾದಿ ಕೌಶಲಗಳನ್ನು
ಅಭಿವೃದ್ದಿ ಪಡಿಸಲಾಗಿದೆ.


ಡ್ರಾಪೌಟ್‌ ಆದ್ರೂ ಸಿಗುತ್ತೆ ಸರ್ಟಿಫಿಕೇಟ್‌:- ಹೊಸ ಶಿಕ್ಷಣ ನೀತಿಯಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವು
ವಲೀನವಾಗಲಿದ್ದು, ಶಿಕ್ಷಣವು 3 ಮತ್ತು 4 ವರ್ಷಗಳ ಅವಧಿಯದ್ದಾಗಿರುತ್ತದೆ. ಇಲ್ಲಿ ವಿದ್ಯಾರ್ಥಿಗಳು ಪೂರ್ಣ
ಕೋರ್ಸ್‌ ಮುಗಿಸದೇ ಮಧ್ಯದಲ್ಲಿ ಕೋರ್ಸ್‌ನಿಂದ ನಿರ್ಗಮಿಸಬಹುದು. ಆದರೆ, ಇದನ್ನು ಕೋರ್ಸ್‌ನಿಂದ
ಅಪೂರ್ಣ ಎಂದು ಪರಿಗಣಿಸುವುದಿಲ್ಲ. 1 ವರ್ಷ ಪೂರೈಸಿದ ಬಳಿಕ ವೃತ್ತಿಪರ ಶಿಕ್ಷಣ ಸೇರಿದಂತೆ ಅವರು ಆಯ್ಕೆ
ಮಾಡಿಕೊಂಡಿದ್ದ ವಿಷಯದಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ. ವಿದ್ಯಾರ್ಥಿ 2 ವರ್ಷ ಪೂರೈಸಿದರೆ ಡಿಪ್ಲೊಮಾ
ಪದವಿ ಪ್ರಮಾಣ ಪತ್ರ ದೊರೆಯಲಿದೆ. ವಿದ್ಯಾರ್ಥಿಯು ಐಚ್ಛಿಕವಾಗಿ 4 ವರ್ಷದ ಡಿಗ್ರಿಯನ್ನೂ
ಆಯ್ದುಕೊಳ್ಳಬಹುದು.


ಕೇಂದ್ರಿಯ ನಿಯಂತ್ರಕ ವ್ಯವಸ್ಥೆ; ಎಲ್ಲಾ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು ನಿಯಂತ್ರಿಸಲು ಯುಜಿಸಿ ಮಾದರಿಯಲ್ಲಿ
ಭಾರತೀಯ ಉನ್ನತ ಶಿಕ್ಷಣ ಮಂಡಳಿ (ಎಚ್‌ಇಸಿಐ) ಸ್ಥಾಪನೆಯಾಗಲಿದೆ. ಶಿಕ್ಷಕರ ತರಬೇತಿ ಸೇರಿದಂತೆ ಎಲ್ಲಾ
ರೀತಿಯ ಶಿಕ್ಷಣಕ್ಕೆ ಇದು ಏಕ ಗವಾಕ್ಷಿ ನಿಯಂತ್ರಣ ಪ್ರಾಧಿಕಾರವಾಗಿರುತ್ತದೆ.


ಸಾಮಾನ್ಯ ಪ್ರವೇಶ ಪರಿಕ್ಷೆ: ಎಲ್ಲಾ ವಿವಿಗಳಲ್ಲಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು
(ಎನ್‌ಟಿಎ) ಏಕ ರೀತಿಯ ಸಾಮಾನ್ಯ ಪರೀಕ್ಷೆಯನ್ನು ನಡೆಸಲಿದೆ. ಆದರೆ ಆಯಾ ವಿಷಯಗಳಿಗೆ ತಕ್ಕಂತೆ ವಿಭಿನ್ನ


ಪ್ರಕ್ನೆ ಪತ್ರಿಕೆಗಳನ್ನು ಒದಗಿಸಲಿದೆ.


ಹೊಸ ಶಿಕ್ಷಣ ನೀತಿಯು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಒತ್ತು ನೀಡುವುದಲ್ಲದೆ, ಯಾವುದೇ
ವಿದ್ಯಾರ್ಥಿ ತನ್ನ ಶೈಕ್ಷಣಿಕ ಹಿನ್ನೆಲೆಯನ್ನು ಲೆಕ್ಕಿಸದೆ ಯಾವುದೇ ವಿಷಯವನ್ನು ಓದಲು ಅವಕಾಶ ನೀಡುತ್ತದೆ.
ಅಂದರೆ ಎಂಜಿನಿಯರಿಂಗ್‌ ವಿದ್ಯಾರ್ಥಿಯು ಇತಿಹಾಸ ಓದಬಹುದು ಕಲಾ ವಿಭಾಗದ ವಿದ್ಯಾರ್ಥಿಯು ಭೌತಶಾಸ್ತ್ರ
ಅಥವಾ ಗಣಿತವನ್ನು ಒಂದು ವಿಷಯವಾಗಿ ಆಯ್ದುಕೊಳ್ಳಬಹುದು.


ರಾಜ್ಯದಲ್ಲೂ ಹೊಸ ನೀತಿ ಜಾರಿ: ಈಗಾಗಲೇ ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ
ಬಗ್ಗೆ ಸೂಕ್ತ ಸಲಹೆ-ಸಹಕಾರ ನೀಡಲು ನಿವೃತ್ತ ಐಎಎಸ್‌ ಆಧಿಕಾರಿ ಎಸ್‌.ವಿ. ರಂಗನಾಥ್‌ ನೇತೃತ್ವದಲ್ಲಿ ಕಾಯ್ದೆ
ರಚಿಸಿದೆ. ಕೇಂದ್ರ ಸರ್ಕಾರವು ಜಾರಿ ಮಾಡಿದ ಕೂಡಲೇ ರಾಜ್ಯದಲ್ಲಿಯು ನೀತಿ ಅನುಷ್ಠಾನಕ್ಕೆ ತರಲಾಗುವುದು
ಎಂದು ಉಪ ಮುಖ್ಯಮಂತ್ರಿ ಅಶ್ವತ್ನನಾರಾಯಣ ಅವರು ತಿಳಿಸಿದ್ದಾರೆ.


ಆಧಾರ:ವಿಜಯಕರ್ನಾಟಕ, ದಿನಾಂಕ:30.07.2020

17. ಗಡಿಗೆ 35,000 ಯೋಧರು
ಅತ್ಯಾಧುನಿಕ ಸಮರ ವಿಮಾನಗಳಾದ ರಫೇಲ್‌ ಬಂದು ಭಾರತದ ಬತ್ತಳಿಕೆ ಸೇರಿದ ಬೆನ್ನಲ್ಲೇ
ಚೀನಾದೊಂದಿಗೆ ಹಂಚಿಕೊಂಡಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ 35 ಸಾವಿರ ಯೋಧರನ್ನು ಭಾರತ


ನಿಯೋಜನೆ ಮಾಡಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು.
ಎರಡು ದೇಶಗಳ ನಡುವಿನ ಉದ್ದಿಗ್ನ ಸ್ಥಿತಿ ಇನ್ನೂ ಸುಧಾರಣೆಯಾಗದ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.


ಸದ್ಯ ಎರಡು ದೇಶಗಳು 3,488 ಕಿ.ಮೀ.ನಷ್ಟು ಗಡಿ ಹಂಚಿಕೊಂಡಿವೆ. ಗಾಲ್ಪಾನ್‌ ಘರ್ಷಣೆ ನಂತರದಲ್ಲಿ
ಎರಡು ಕಡೆಯ ಸೇನೆಯೂ ಗಡಿಯಲ್ಲಿ ಜಮಾವಣೆಗೊಂಡಿದ್ದವು. ಸೇನೆಯ ಪ್ರಬಲ ಶಸ್ತಾಸ್ತಗಳನ್ನೂ ಗಡಿಯಲ್ಲಿ
ಸಂಗಹಿಸಿ ಇಡಲಾಗಿದೆ. ಕಾರ್ಪ್‌ ಕಮಾಂಡರ್‌ಗಳ ಮಟ್ಟದ ಹಲವಾರು ಸುತ್ತಿನ ಮಾತುಕತೆ ನಂತರ ಗಡಿಯಿಂದ
ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುವುದಕ್ಕೆ ನಿರ್ಧರಿಸಿದ್ದವು.


ಮುಂದಿನ ವಾರದಲ್ಲಿ ಮತ್ತೊಂದು ಸುತ್ತಿನ ಕಮಾಂಡರ್‌ ಮಟ್ಟದ ಮಾತುಕತೆ ಇದೆ. ಒಂದು ವೇಳೆ ಈ
ಮಾತುಕತೆ ಏನಾದರೂ ವಿಫಲವಾಗಿ ಬೇರೆ ಎಂಥದ್ದೇ ಪರಿಸ್ಥಿತಿ ಬಂದರೂ ಎದುರಿಸುವ ಸಲುವಾಗಿ ಭಾರತ
ಗಡಿಯಲ್ಲಿ ಭಾರೀ ಪ್ರಮಾಣದ ಯೋಧರ ನಿಯೋಜನೆ ಮಾಡಿದೆ ಎಂದು ಮೂಲಗಳು ತಿಳಿಸಿದೆ.


pe ಮಧ್ಯೆ ಗಡಿಯುದ್ದಕ್ಕೂ ಎರಡು ದೇಶಗಳು ಸೇನೆಯನ್ನು ವಾಪಸ್ಸು ಕರೆಸಿಕೊಂಡಿವೆ ಎಂಬ ಚೀನಾದ
ಹೇಳಿಕೆಯನ್ನು ಕೇಂದ್ರ ತಿರಸ್ಕರಿಸಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಚೀನಾ ಇನ್ನೂ
ಎಲ್‌ಎಸಿಯ ಕೆಲವು ಕಡೆಗಳಿಂದ ಸೈನಿಕರನ್ನು ವಾಪಸ್ಸು ಕರೆಸಿಕೊಂಡಿಲ್ಲ.


ಆಧಾರ:ಉದಯವಾಣಿ, ದಿನಾ೦ಕ:31.07.2020
18. ನಯಾ ಕಾಶ್ಮೀರದಲ್ಲಿ ಬದಲಾವಣೆ ಪರ್ವ


ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಒಂದು ವರ್ಷ
ಪೂರ್ಣಗೊಳ್ಗಲಿದೆ. ಈ ನಡುವೆ ಅಲ್ಲಿನ ಅಡಳಿತವು ಹತ್ತು ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ
ತಂದಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರ ಆಡಳಿತದಲ್ಲಿ ನೆಮ್ಮದಿ ಹಾಗೂ ಪ್ರಜಾಪಭುತ್ವ ವಿಕೇಂದ್ರೀಕರಣದ ಮೇಲೆ
ಕೇಂದ್ರೀಕರಿಸಿದೆ.


ಆಡಳಿತದ ಸಾಧನೆಗಳನ್ನು ಪಟ್ಟಿ ಮಾಡಿರುವ ಅಧಿಕಾರಿಗಳು ಇದು "ನಯಾ ಕಾಶ್ಮೀರ” ಪರಿಕಲ್ಲನೆಯನ್ನು
ಅಳವಡಿಸಿಕೊಂಡಿದೆ. ಸಾಮಾಜಿಕ ವಲಯದಲ್ಲಿ ಅಭಿವೃದ್ಧಿ, ಆರ್ಥಿಕ ಪುನರುಜ್ಜೀವನ. ಸ್ವಚ್ಛ ಭಾರತ್‌ ಮಿಷನ್‌
ಅನುಷ್ಠಾನ ಹಾಗೂ ಕೌಶಲಾಭಿವೃದ್ಧಿ ಮತ್ತು ಉದ್ಯೋಗವನ್ನು ಖಾತ್ರಿ ಪಡಿಸಿದೆ ಎಂದು ಹೇಳಿದ್ದಾರೆ.


ಕಳೆದ ವರ್ಷ ಆಗಸ್ಟ್‌ 5ರಂದು ಕೇಂದವು ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಲಡಾಖ್‌
ಹಾಗೂ ಜಮ್ಮು ಮತ್ತು ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿತ್ತು. ಎರಡು
ಹೊಸ ಕೇಂದ್ರಾಡಳಿತ ಪ್ರದೇಶಗಳು ಕಳೆದ ವರ್ಷ ಅಸಿತ್ತಕ್ಕೆ ಬಂದವು.


ಜಮ್ಮು - ಕಾಶ್ಮೀರದಲ್ಲಿ ತಾರತಮ್ಯದಿಂದ ಕೂಡಿದ್ದ ರಾಜ್ಯ ಕಾನೂನುಗಳನ್ನು ರದ್ದುಪಡಿಸಲಾಗಿದೆ ಅಥವಾ
ಮಾರ್ಪಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ರಣಬೀರ್‌ ದಂಡ ಸಂಹಿತೆ (ಐಪಿಸಿಗೆ ಬದಲಿ) ಮತ್ತು ಆಸ್ತಿ
ಕಾಯ್ದೆ ವರ್ಗಾವಣೆ ಸೇರಿವೆ, ಎಸ್‌.ಸಿ./ಎಸ್‌.ಟಿ.ಗಳು ಅರಣ್ಯವಾಸಿಗಳು ಬಾಲಾಪರಾಧಿಗಳು ಮತ್ತು
ವಯಸ್ಸಾದವರನ್ನು ರಕ್ಷಿಸುವ ಹಕ್ಕಿನಂತಹ 170ಕ್ಕೂ ಹೆಚ್ಚು ಕೇಂದ್ರ ಕಾನೂನುಗಳು ಈಗ ಅನ್ವಯವಾಗಲಿದೆ.


ಇತರ ಭಾರತೀಯ ನಾಗರಿಕರು ಹೊಂದಿರುವಂತೆ ಜಮ್ಮು ಮತ್ತು ಕಾಶ್ಮೀರದ ಜನರು ಸ್ಪಾಧೀನದಲ್ಲಿರುವ
ಭೂಮಿಗೆ ನ್ಯಾಯಯುತ ಪರಿಹಾರ ಪಡೆಯುವ ಸಮಾನ ಹಕ್ಕನ್ನು ಈಗ ಹೊಂದಿದ್ದಾರೆ. ಜನರ ಹಿತಾಸಕ್ತಿ
ಕಾಪಾಡಲು ಸ್ಥಳೀಯ ಕಾನೂನು ಜಾರಿಗೆ ತಂದು ಅರ್ಹರಿಗೆ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಇದರಿಂದ
ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು, ಗೂರಾಗಳು, ಸ್ಪಚ್ಛತಾ ಕರ್ಮಚಾರಿಗಳು ಹಾಗೂ ಜಮ್ಮು - ಕಾಶ್ಮೀರದ
ಅನಿವಾಸಿಗಳನ್ನು ಮದುವೆಯಾದ ಮಹಿಳೆಯರು ಸೇರಿದಂತೆ ಸರ್ಕಾರಿ ಉದ್ಯೋಗದ ಬಾಗಿಲು ತೆರೆದಿದೆ.
ಆಡಳಿತವು ಸಾಮಾಜಿಕ ಸಮಾನತೆಗೆ ಬದ್ದವಾಗಿದ್ದರೂ, ಮಾಜಿ ಸಚಿವರು ಹಾಗೂ ರಾಜಕಾರಣಿಗಳ ಎಲ್ಲ
ಅನಗತ್ಯ ಸವಲತ್ತುಗಳನ್ನು ತೆಗೆದುಹಾಕಿದೆ.


ಕಲ್ಯಾಣ ಕ್ಷೇತ್ರದಲ್ಲಿ ಆಡಳಿತವು ಸಾಮಾಜಿಕ ಭದತೆಗೆ ಹೆಚ್ಚಿನ ಅದ್ಯತೆ ನೀಡಿದೆ. ಕಳೆದ ಒಂದು ವರ್ಷದಲ್ಲಿ
ಪಿಂಚಣಿ ಸೌಲಭ್ಯಗಳು 7,42,781 ಫಲಾನುಭವಿಗಳಿಗೆ ವಿಸ್ತರಿಸಲಾಗಿದ್ದು. 4,76,670 ಫಲಾನುಭವಿಗಳಿಗೆ
ಅಲ್ಪಸಂಖ್ಯಾತ ಫ್ರಿ - ಮೆಟಿಕ್‌ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ.


ಪ್ರಮುಖಾಂಶಗಳು:
> ಶಿಕ್ಷಣ ಕ್ಷೇತ್ರದ ಮೇಲೆ ಕೇಂದ್ರೀಕೃತವಾಗಿದ್ದು, 50 ಹೊಸ ಪದವಿ ಕಾಲೇಜುಗಳ ಆರಂಭ.
» ಏಳು ವೈದ್ಯಕೀಯ ಕಾಲೇಜುಗಳಿಗೆ ಮಂಜೂರು ಇದು 70 ವರ್ಷಗಳಲ್ಲೇ ಐತಿಹಾಸಿಕ ಹೆಜ್ಜೆ.


V


ಸೇಬು ಮಾರುಕಟ್ಟೆಗೆ ವಿಶಿಷ್ಟ ಯೋಜನೆ, ಕೇಂದ್ರ ಖರೀದಿ ಸಂಸ್ಥೆಯಿಂದ ಸಾರಿಗೆ ವ್ಯವಸ್ಥೆ.


V


ಜಾಗತಿಕ ಹೂಡಿಕೆ ಶೃಂಗಸಭೆ ಆಯೋಜನೆ, ರೂ.13,600 ಕೋಟಿಗಳ 168 ಒಪ್ಪಂದಗಳಿಗೆ ಸಹಿ


V


ಉದ್ಯಮಕ್ಕಾಗಿ 6,000 ಎಕರೆ ಮಂಜೂರು, 37 ಕೈಗಾರಿಕಾ ಎಸ್ಟೇಟ್‌ ಸ್ಥಾಪನೆಗೆ ಭೂಮಿ
ವರ್ಗಾವಣೆ.


ಆಧಾರ:ವಿಶ್ವವಾಣಿ, ದಿನಾಂಕ:02.08.2020
19. ಹೊಸ ನೀತಿಯಿಂದ ಶಿಕ್ಷಣ ಸುಧಾರಣೆ, ಉದ್ಯೊ €ಗದಾತರ ಸ ಸೃಷ್ಟಿ ಗುರಿ: ಮೋದಿ


ಇತ್ತೀಚೆಗೆ ಘೋಷಿಸಲಾಗಿರುವ ನೂತನ ಶಿಕ್ಷಣ ನೀತಿಯಿಂದ ಉದ್ಯೋಗ ಬಯಸುವವರು ಸೃಷ್ಟಿ
ಆಗುವುದಿಲ್ಲ ಬದಲಾಗಿ "ಉದ್ಯೋಗದಾತರು' ಸೃಷ್ಟಿ ಆಗಲಿದ್ದಾರೆ ಎಂದು ಪ್ರಧಾನಿ ನರೇಂದ ಮೋದಿ ಹೇಳಿದರು.


"ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌' ಸಮಾರಂಭದಲ್ಲಿ ಮಾತನಾಡಿದ ಅವರು ಶಿಕ್ಷಣದ ಉದ್ದೇಶ ಹಾಗೂ
ಅದರಲ್ಲಿನ ಒಳ ಅಂಶಗಳನ್ನು ಪರಿವರ್ತಿಸುವುದು ನೂತನ ಶಿಕ್ಷಣ ನೀತಿಯ ಉದ್ದೇಶವಾಗಿದೆ ಸಂಶೋಧನೆ,
ಸೃಜನಶೀಲತೆ ಹಾಗೂ ಕಲಿಕೆ ಅಗತ್ಯವಾಗಿರುವ ಸಮಯವಿದು. ಹೊಸ ಶಿಕ್ಷಣ ನೀತಿ ಅದನ್ನೇ ನೀಡಲಿದೆ. 2035ರ
ವೇಳಗೆ ಉನ್ನತ ಶಿಕ್ಷಣದ ಅನುಪಾತವನ್ನು ಶೇ.50ಕ್ಕೆ ಏರಿಸುವ ಗುರಿ ಹೊಂದಿದೆ. ಮಕ್ಕಳಿಗೆ ಪ್ರಾಥಮಿಕ
ಶಿಕ್ಷಣದಿಂದಲೇ ಶಿಕ್ಷಣ ಎಟಕುವಂತಾಗಲು ಹೊಸ ನೀತಿ ಸಹಕರಿಸಲಿದೆ. ಮಕ್ಕಳಿಗೆ ಏನು ಬೇಕೋ ಅದನ್ನು
ಕಲಿಸುವುದರ ಮೇಲೆ ಶಿಕ್ಷಣ ನೀತಿಯು ಗಮನ ಹರಿಸಲಿದೆ. ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತವೂ
ಪರಿಣಾಮಕಾರಿ ಭೂಮಿಕೆ ನಿಬಾಯಿಸಲು ಸಜ್ಜಾಗಬೇಕು. ಬಡವರು ಉತ್ತಮ ಜೀವನ ನಿರ್ವಹಿಸುವಂತಾಗುವಲ್ಲಿ
ಹಾಗೂ ನಿರಾಳ ಜೀವನದ ಗುರಿ ತಲುಪುವಂತಾಗುವಲ್ಲಿ ಯುವಕರ ಪಾತ್ರ ಮಹತ್ತದ್ದಾಗಿದೆ ಎಂದು ಅವರು
ವಿದ್ಯಾರ್ಥಿಗಳಿಗೆ ಕರೆ ನೀಡಿದರು.


21ನೇ ಶತಮಾನದ ಯುವಕರ ಆಶೋತ್ತರ ಗಮನದಲ್ಲಿ ಇರಿಸಿಕೊಂಡು ಶಿಕ್ಷಣ ನೀತಿ ರೂಪಿಸಲಾಗಿದೆ.
ಶಿಕ್ಷಣವನ್ನು ಇನ್ನಷ್ಟು ಸುಧಾರಿತ ಹಾಗೂ ಆಧುನಿಕಗೊಳಿಸಲಾಗುತ್ತದೆ. ಶಿಕ್ಷಣದ ಗುಣಮಟ್ಟದ ಮೇಲೆ ನೀತಿಯ
ಗಮನ ಕೇಂದಿಕರಿಸುತ್ತದೆ. ಶಾಲಾಚೀಲದ ಭಾರದಿಂದ ಕಲಿಕೆಯ ಮೇಲೆ ಇನ್ನು ಗಮನ ಬದಲಾಗಲಿದೆ.
ವಿಷಯಗಳನ್ನು ಕೇವಲ ಜ್ಞಾಪಕದಲ್ಲಿ ಇರಿಸಿಕೊಳ್ಳುವ ಬದಲು ವಿಮರ್ಶೆಗೆ ಒಳಪಡಿಸಲು ಸಾಧ್ಯವಾಗಲಿದೆ ಎಂದು
ಅವರು ಹೇಳಿದರು.


ಇದೇ ವೇಳೆ 1 ರಿಂದ 5ನೇ ತರಗತಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಆದ್ಯತೆ ನೀಡಿರುವುದನ್ನು
ಪ್ರಸ್ತಾಪಿಸಿದ ಅವರು ಭಾರತದ ಭಾಷೆಗಳು ಇನ್ನಷ್ಟು ಬೆಳೆಯುತ್ತದೆ. ಇದರಿಂದ ಭಾರತ ಜ್ಞಾನ ಬೆಳೆಯುತ್ತದಷ್ಟೇ
ಲ್ಲ. ಏಕತೆಯನ್ನು ಬಲಗೊಳಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.


C


ಆಧಾರ:ಕನ್ನಡ ಪ್ರಭ, ದಿನಾ೦ಕ:02.08.2020
20. ಶಿಕ್ಷಣ ನೀತಿಯಲ್ಲಿ ಭಾಷಾ ಹೇರಿಕೆ ಇಲ್ಲ: ಕೇಂದ್ರ


ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಯಾವುದೇ ರಾಜ್ಯದ ಮೇಲೆ ಹಿಂದಿ ಸೇರಿದಂತೆ ಯಾವುದೇ
ಭಾಷಾ ಹೇರಿಕೆ ಮಾಡುವ ಉದ್ದೇಶ ಹೊಂದಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಮೂಲಕ ಹಿಂದಿ
ಮತ್ತು ಸ ಸಂಸ್ಕೃಶ ಭಾಷಾ ಹೇರಿಕೆಗೆ ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂಬ ಡಿಎಂಕೆ ಆರೋಪದ ಬೆನ್ನಲ್ಲೇ
ಹೋ ವಿಯಾಲ್‌ ಈ ಸ ಸಷ್ಟನೆ ನೀಡಿದ್ದಾರೆ.


ತಮಿಳುನಾಡು ಮೂಲದ ಕೇಂದದ ಮಾಜಿ ಸಚಿವ ಪೊನ್‌ ರಾಧಾಕೃಷ್ಣನ್‌ ಅವರನ್ನು ಉದ್ದೇಶಿಸಿ ಟ್ವೀಟ್‌
ಮಾಡಿದ ಸಚಿವ ಪೋಖ್ರಿಯಾಲ್‌ ಅವರು ಹೊಸ ಶಿಕ್ಷಣ ನೀತಿ ಮೂಲಕ ಯಾವುದೇ ರಾಜ್ಯದ ಮೇಲೆ
ಯಾವುದೇ ಭಾಷೆ ಹೇರಿಕೆ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಹೇಳಿದ್ದಾರೆ.


ತಮಿಳುನಾಡು ಪ್ರತಿಪಕ್ಷ ಡಿಎಂಕೆ ಮುಖ್ಯಸ್ಥ ಎಂಕೆ. ಸ್ಟ್ಯಾಲಿನ್‌ ಸೇರಿದಂತೆ ಇನ್ನಿತರ ಪ್ರತಿಪಕ್ಷಗಳು
ಕೇಂದದ ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿದ್ದವು. ಇದರ ವಿರುದ್ಧ ಸಮಾನ ಮನಸ್ವ ಪಕ್ಷಗಳ
ಸಹಕಾರದೊಂದಿಗೆ ಹೋರಾಟ ನಡೆಸುವುದಾಗಿ ಸ್ಟ್ಯಾಲಿನ್‌ ಅವರು ಗುಡುಗಿದ್ದರು.


ಬಿಸಿಯೂಟದ ಜೊತೆಗೆ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರಕ್ಕೂ ಶಿಫಾರಸ್ಸು: ಶಗಾಗಲೇ ಸರ್ಕಾರಿ ಹಾಗೂ
ಅನುದಾನಿತ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಿಗ್ಗೆ ಉಪಹಾರವನ್ನೂ
ನೀಡಬೇಕು ಎಂದು ಹೊಸ ಶಿಕ್ಷಣ ನೀತಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಅಪೌಷ್ಠಿಕತೆ ಹಾಗೂ
ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಕಲಿಕೆ ಸಾಧ್ಯವಾಗುವುದಿಲ್ಲ. ಮಕ್ಕಳ ಪೌಷ್ಠಿಕಾಂಶ ಮತ್ತು ಮಾನಸಿಕ
ಹಾಗೂ ದೈಹಿಕ ಆರೋಗ್ಯವನ್ನು ಬಲ ಪಡಿಸಬೇಕು. ಇದಕ್ಕಾಗಿ ಆರೋಗ್ಯಯುಕ್ತ ಉಪಹಾರವನ್ನು ನೀಡಬೇಕು
ಎಂದು ಹೊಸ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ. ಪೌಷ್ಠಿಕಾಂಶ ಮತ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು
ಬಲಪಡಿಸಬೇಕು. ಇದಕ್ಕಾಗಿ ಆರೋಗ್ಯಯುಕ್ತ ಉಪಹಾರವನ್ನು ನೀಡಬೇಕು ಎಂದು ಹೊಸ ಶಿಕ್ಷಣ ನೀತಿಯಲ್ಲಿ
ಹೇಳಲಾಗಿದೆ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಳಿಕದ ಕಲಿಕೆ ಹೆಚ್ಚು ಪರಿಣಾಮಕಾರಿ. ಇದಕ್ಕೆ ಮಧ್ಯಾಹ್ನದ
ಬಿಸಿಯೂಟದ ಜೊತೆಗೆ ಬೆಳಗ್ಗೆ ಉಪಹಾರ ಕೂಡ ನೀಡಬೇಕು. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ
ಮಾಡಬೇಕು. ಮಕ್ಕಳಿಗೆ ಆರೋಗ್ಯ ಕಾರ್ಡ್‌ ನೀಡಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:03.08.2020
21. ಗ್ರಾಹಕರ ನೆರವಿಗೆ ಸಶಕ್ತ ಕಾಯ್ದೆ


ಕೇಂದ್ರ ಸರ್ಕಾರ 2019ರಲ್ಲಿ ರೂಪುಗೊಳಿಸಿ, ಅಂಗೀಕರಿಸಿದ್ದ ಗ್ರಾಹಕ ರಕ್ಷಣಾ ಕಾಯ್ದೆ ಜುಲೈ 20
ರಿಂದ ಜಾರಿಯಾಗಿದೆ. ಪೂರ್ಣರೂಪದಲ್ಲಿ ಅಲ್ಲದಿದ್ದರೂ, ಬಹುತೇಕ ಅಂಶಗಳು ಜಾರಿಯಾಗಿವೆ. ಗ್ರಾಹಕರ
ಹಕ್ಕುಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಇದು ಮೈಲು ಗಲ್ಲಾಗಬಹುದು ಎಂಬ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ
ಕಾಯ್ದೆಯ ಮುಖ್ಯಾಂಶಗಳು


ಗ್ರಾಹಕ ರಕ್ಷಣಾ ಕಾಯಿದೆ 2019: ಮೂಲ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು, 1986ರಲ್ಲಿ ಅದನ್ನು
2019ರಲ್ಲಿ ಬದಲಾಯಿಸಲಾಯಿತು. 2019 ಜುಲೈ 8 ರಂದು ಮೊದಲು ರಾಜ್ಯ ಸಭೆಯಲ್ಲಿ ಮಂಡಿಸಲಾಯಿತು.
ಆ ನಂತರ ಜುಲೈ-30ರಂದು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಆಗಸ್ಟ್‌ 6ರಂದು ಮತ್ತೆ
ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ಟಾನ್‌ (ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ)
ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದರು. ಆಗಸ್ಟ್‌ 9 ರಂದು ರಾಷ್ಟ್ರಪತಿ ರಾಮನಾಥ್‌
ಕೋವಿಂದ್‌ ಅವರು ಅಂಕಿತ ಹಾಕುವ ಮೂಲಕ ಅದು ಕಾಯ್ದೆಯಾಗಿ ಬದಲಾಯಿತು.


ಕಾಯ್ದೆ ಒಳಗೊಂಡಿರುವ ಅಂಶಗಳು: ಕೇಂದ್ರ ಸರ್ಕಾರ ಜಾರಿ ಮಾಡುವ ಗ್ರಾಹಕ ರಕ್ಷಣಾ ಕಾಯ್ದೆಯ ಅಂಶಗಳನ್ನು
ಗುರ್ತಿಸಿದೆ. ಗ್ರಾಹಕ ರಕ್ಷಣಾ ಆಯೋಗಗಳ ರಚನೆ, ಗ್ರಾಹಕ ವಿವಾದಗಳ ನಿವಾರಣೆ ವೇದಿಕೆ ರಚನೆ,
ಮಧ್ಯವರ್ತಿಗಳಾಗಿ ಕೆಲಸ ಮಾಡುವುದು ಅಥವಾ ಸಂಪರ್ಕ ಸೇತುವಾಗುವುದು ಇವೆಲ್ಲ ಒಂದು ಭಾಗ.
ಒಪ್ಪಿಕೊಂಡಂತೆ ಸೇವೆ ಮತ್ತು ಉತ್ಪನ್ನ ನೀಡದಿರುವುದು, ಹಾಳಾದ ಅಥವಾ ಕಲಬೆರಕೆ ಮಾಡಿದ ಉತ್ಪನ್ನಗಳನ್ನು
ತಯಾರಿಸುವುದು, ಮಾರುವುದು, ವಿತರಿಸುವುದಕ್ಕೆ ದಂಡ ವಿಧಿಸುವುದು ಇವೆಲ್ಲ ಇನ್ನೊಂದು ಭಾಗವಾಗಿವೆ.


ಸನಿಹದ ಗ್ರಾಹಕ ಆಯೋಗಗಳಲ್ಲೇ ದೂರು: ಗ್ರಾಹಕರಿಗಿರುವ ಒಂದು ಅಮೂಲ್ಯ ಅವಕಾಶವೆಂದರೆ ಅವರು ದೂರು
ಸಲ್ಲಿಸಲು ಅಲ್ಲಿ ಇಲ್ಲಿ ಎಂದು ಅಲೆಯಬೇಕಿಲ್ಲ. ತಾವು ಎಲ್ಲಿಯೇ ವಸ್ತುಗಳನ್ನು ಖರೀದಿಸಿದ್ದರೂ ತಮ್ಮ ವಾಸ್ತವ್ಯ
ತಾಣಕ್ಕೆ ಹತ್ತಿರವಾದ ಜಿಲ್ಲಾ, ರಾಜ್ಯ ಗ್ರಾಹಕ ಆಯೋಗಗಳಲ್ಲಿ ದೂರು ಸಲ್ಲಿಸಬಹುದು. ಒಂದು ವೇಳ ಪ್ರಕರಣ
ಗ್ರಾಹಕ ಆಯೋಗಗಳಲ್ಲಿ ಇತ್ಯರ್ಥವಾಗದಿದ್ದರೆ ಅದು ಅಂತಿಮವಾಗಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿ
ನಿರ್ಣಯವಾಗುತ್ತದೆ.


ಕಲಬೆರಕೆ, ಕಳಪೆ ವಸ್ತುಗಳಿಗೆ 6 ತಿಂಗಳವರೆಗೆ ಜೈಲು: ಹೊಸ ಕಾಯ್ದೆಯಲ್ಲಿ ಗ್ರಾಹಕ ನ್ಯಾಯಾಲಯಗಳಿಗೆ ಅಧಿಕಾರ
ನೀಡಲಾಗಿದೆ. ಸಮಸ್ಯೆಗಳನ್ನು ಬಗೆಹರಿಸುವ, ಕಠಿಣಶಿಕ್ಷೆ ವಿಧಿಸುವ ಅವಕಾಶ ನೀಡುವ ಮೂಲಕ ವ್ಯವಸ್ಥೆಯನ್ನು
ಶಕ್ತಿಪೂರ್ಣ ಮಾಡಲಾಗಿದೆ. ಒಂದು ವೇಳ ಉತ್ಪಾದಕರು, ಮಾರಾಟಗಾರರು, ವಿತರಕರು ಕಲಬೆರಕೆ ಮಾಡಿದ
ಅಥವಾ ಹಾಳಾದ ವಸ್ತುಗಳನ್ನು ಮಾರಾಟ ಮಾಡಿದರೆ ಅಂತಹವರನ್ನು ನ್ಯಾಯಾಲಯಕ್ಕೆಳೆದು ಪರಿಹಾರ ಕೇಳುವ
ಅಧಿಕಾರ ಗ್ರಾಹಕರಿಗಿದೆ. ಕಳಪೆ ವಸ್ತುಗಳನ್ನು ಬಳಸಿದ ಗ್ರಾಹಕರಿಗೆ ಹಾನಿಯಾಗದಿದ್ದರೂ ಮಾರಿದಾತನಿಗೆ 6
ತಿಂಗಳವರೆಗೆ ಬಂಧನ ಅಥವಾ ರೂ ಲಕ್ಷ ದಂಡ ವಿಧಿಸಬಹುದು.


ಗ್ರಾಹಕ ಮೃತಪಟ್ಟರೆ ಆಜೀವ ಕಾರಾಗೃಹ: ಒಂದು ವೇಳೆ ಗ್ರಾಹಕರಿಗೆ ಹಾನಿಯಾದರೆ, ರೂ.5 ಲಕ್ಷ ದವರೆಗೆ ದಂಡ
ಜೊತೆಗೆ 7 ವರ್ಷದವರೆಗೆ ಕಾರಾಗೃಹ ಶಿಕ್ಷೆಯನ್ನು ಉತ್ಪಾದಕರು/ಮಾರಾಟಗಾರರು/ ವಿತರಕರಿಗೆ ವಿಧಿಸಬಹುದು.
ಆಕಸ್ನಾತ್‌ ಇಂತಹ ವಸ್ತುಗಳ ಬಳಕೆಯಿಂದ ಗ್ರಾಹಕ ಸತ್ತೇ ಹೋದರೆ, ಕನಿಷ್ಟ ರೂ.10 ಲಕ್ಷ ದಂಡ ಮತ್ತು 7
ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದು. ಈ ಶಿಕ್ಲಾವಧಿಯನ್ನು ಆಜೀವ ಮಟ್ಟಕ್ಕೆ ವಿಸ್ತರಿಸುವ ಅಧಿಕಾರವೂ ಗ್ರಾಹಕ
ನ್ಯಾಯಾಲಯಗಳಿಗಿದೆ.


ಆಧಾರ:ಉದಯವಾಣಿ, ದಿನಾಂಕ:03.08.2020
22. ರಾಮನಿಗೆ ಶಂಖ; ಮಂದಿರಕ್ಕೆ ಶಂಕು


ದಶಕಗಳಿಂದ ಕಾಯುತ್ತಿರುವ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು,
ಬೆಳಿಗ್ಗೆ 12.30ಕ್ಕೆ ಕೋಟ್ಯಂತರ ಮಂದಿ ಕಾಯುತ್ತಿರುವ ಬಹುವರ್ಷದ ಆಸೆ ನೆರವೇರಲಿದೆ. ಕೊರೋನಾ ಸೋಂಕು
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಕೇವಲ 175 ಗಣ್ಯರನ್ನು ಮಾತ್ರ ಕಾರ್ಯಕ್ರಮಕ್ಕೆ
ಆಹ್ಹಾನಿಸಲಾಗಿದೆ. ಈ ಆದ್ದೂರಿ ಕಾರ್ಯಕ್ರಮಕ್ಟಾಗಿ ಇಡೀ ಅಯೋಧ್ಯೆ ನವವಧುವಿನ ರೀತಿ ಸಜ್ಜಾಗಿದೆ.
ಕೋಟ್ಯಂತರ ಮಂದಿ ಕಾತುರದಿಂದ ಕಾಯುತ್ತಿರುವ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.


ಅಭಿಜಿತ್‌ ಲಗ್ನದಲ್ಲಿ ಭೂಮಿ ಪೂಜೆ: ಆಗಸ್ಟ್‌-5ರ ಮಧ್ಯಾಹ್ನ 12.15ಕ್ಕೆ ಅಭಿಜಿತ್‌ ಮುಹೂರ್ತದಲ್ಲಿ ರಾಮಮಂದಿರ
ನಿರ್ಮಾಣ ಕಾರ್ಯದ ಶಿಲಾನ್ಮಾಸ ನೆರವೇರಲಿದೆ. 40 ಕೆ.ಜಿ ತೂಕದ ಬೆಳ್ಳಿ ಇಟ್ಟಿಗೆ ಸ್ಥಾಪಿಸುವ ಮೂಲಕ ಮೋದಿ
ಅವರು ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.


ಪ್ರಮುಖಾಂಶ:-


> ಕಾರ್ಯಕ್ರಮದ ಆಹ್ಹಾನ ಪತ್ರಿಕೆಯನ್ನು ಹಂಚಲು ಶುರುಮಾಡಿದ್ದು, ಮೊದಲ ಆಹ್ವಾನವನ್ನು ಬಾಬರಿ
ಮಸೀದಿ ಭೂ ವಿವಾದದಲ್ಲಿ ಪ್ರತಿವಾದಿಯಾಗಿದ್ದ ಇಕ್ಸಾಲ್‌ ಅನ್ನಾರಿ ಅವರಿಗೆ ನೀಡಲಾಗಿದೆ.


> ಭೂಮಿ ಪೂಜೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ 5,100 ಕಳಸಗಳನ್ನು
ಸಿದ್ದಪಡಿಸಲಾಗಿದೆ.


> ಪ್ರಧಾನಮಂತ್ರಿ ಮೋದಿ ಅವರು ಶ್ರೀರಾಮ ಜನ್ಮ ಭೂಮಿ ಪರಿಸರದಲ್ಲಿ ಪಾರಿಜಾತ ವೃಕ್ಷದ ಸಸಿ
ನೆಡಲಿದ್ದಾರೆ.


> ಶಿಲಾನ್ಯಾಸ ಕಾರ್ಯಕ್ರಮದ ಸಂಬಂಧ ಕಾರ್ಯಕ್ರಮಗಳು ಪ್ರಾರಂಭವಾಗಿವೆ.


> 21 ವೈದಿಕ ಆಚಾರ್ಯರು ಬೆಳಿಗ್ಗೆ 9 ಗಂಟೆಗೆ ಮಹೇಶ್‌ ಭರತಚಕ್ರ ಅವರಿಗೆ ಸಂಕಲ್ಪ ಮಾಡಿಸಿ
ಪ್ರಾರಂಭಿಸಿದರು. ಡಾ: ರಾಮಾನಂದ್‌ ದಾಸ್‌ ಅವರು ಪೂಜೆ ನೆರವೇರಿಸಿದರು.


ರಾಮಮಂದಿರದ ಶಿಲಾನ್ಯಾಸ, ಮೂವತ್ತು ವರ್ಷಗಳ ಹಿಂದೆಯೇ ಅಂದರೆ, 1989ರ ನವೆಂಬರ್‌ 9
ರಂದೇ ದಿ. ರಾಜೀವ್‌ ಗಾಂಧಿ ಸರ್ಕಾರದ ಅನುಮತಿಯ ಮೇರೆಗೆ ಜರುಗಿತ್ತು. ಬಿಹಾರದ ದಲಿತ ಯುವಕ
ಕಾವೇಶ್ಸರ್‌ ಚೌಪಾಲ್‌ ಮೊದಲ ಇಟ್ಟಿಗೆಯನ್ನು ಇಟ್ಟಿದ್ದರು. ರಾಮಮಂದಿರದ ಶಿಲಾನ್ಯಾಸಕ್ಕಾಗಿ ವಿಶ್ವ ಹಿಂದೂ
ಪರಿಷತ್‌ ದೇಶಾದ್ಯಂತ ಅಭಿಯಾನ ನಡೆಸಿತ್ತು. ಶಿಲಾನ್ಯಾಸ ಕುರಿತ ಚರ್ಚೆಗಾಗಿ 1984ರ ಏಪ್ರಿಲ್‌ 8 ರಂದು
ದೆಹಲಿಯ ವಿಜ್ಞಾನ ಭವನದಲ್ಲಿ ಧರ್ಮಸಂಸದ್‌ ಆಯೋಜಿಸಲಾಗಿತ್ತು. 1986ರಲ್ಲಿ ರಾಮಮಂದಿರದ ಬೀಗವನ್ನು
ತೆರೆಯಲಾಗಿತ್ತು. ವಿಶ್ವ ಹಿಂದೂ ಪರಿಷತ್ತು ನಾಯಕ ಹಾಗೂ ನಿವೃತ್ತಿ ನ್ಯಾಯಾಧೀಶ ದೇವಕಿ ನಂದನ


ಅಗರವಾಲ್‌ ಅವರು ಫೈಜಾಬಾದ್‌ನ ನ್ಯಾಯಾಲಯದಲ್ಲಿ 1989ರ ಜುಲೈ-।ರಂದು ರಾಮನ ಮಿತ್ರನ ರೂಪದಲ್ಲಿ
ದಾವೆ ಹೂಡಿದರು. ರಾಮ ಹಾಗೂ ಜನ್ಮಸ್ಥಳ ಪೂಜ್ಯನೀಯ ಎಂದು ಅವರು ತಿಳಿಸಿದ್ದರು.


ವೇದಿಕೆ ಮೇಲಿರಲಿರುವ ಐವರು ಪ್ರಮುಖರು:-
ನರೇಂದ್ರ ಮೋದಿ, ಪ್ರಧಾನ ಮಂತ್ರಿ


ಮಹಂತ ನೃತ್ಯ ಗೋಪಾಲ್‌ ದಾಸ್‌, ಶೀ ರಾಮಜನ್ಮಭೂಮಿ ಟಸ್ಟ್‌ ಅಧ್ಯಕ್ಷ


>

> ಮೋಹನ್‌ ಭಾಗವತ್‌, ಆರ್‌ ಎಸ್‌ ಎಸ್‌ ಮುಖ್ಯಸ್ಥ
» ಆನಂದಿ ಬೆನ್‌ ಪಟೇಲ್‌, ಉತ್ತರ ಪ್ರದೇಶ ರಾಜ್ಯಪಾಲೆ
» ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ಮುಖ್ಯಮಂತ್ರಿ


ಆನ್‌ಲೈನ್‌ನಲ್ಲಿ ಶಾ ವೀಕ್ಷಣೆ: ಕೂರೋನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಗೃಹ ಸಚಿವ
ಅಮಿತ್‌ ಶಾ ಅವರು ಇಡೀ ಕಾರ್ಯಕ್ರಮವನ್ನು ಅನ್‌ಲೈನ್‌ ಮೂಲಕ ವೀಕ್ಷಿಸಲಿದ್ದಾರೆ. ಇನ್ನು ಉತ್ತರ ಪ್ರದೇಶ
ಉಪ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಆಸ್ಪತ್ರೆಯಲ್ಲಿಯೇ ದೀಪ ಬೆಳಗಿಸುವ ಮೂಲಕ
ಭೂಮಿಪೂಜೆಯನ್ನು ಸಂಭ್ರಮಿಸಲಿದ್ದಾರೆ.


ಆಧಾರ:ವಿಶ್ವವಾಣಿ, ದಿನಾಂಕ:05.08.2020
23. ಸಾಲ ಮರುಹೊಂದಾಣಿಕೆ : 2021ರ ಮಾರ್ಚ್‌ವರೆಗೂ ಲಭ್ಯ


ಕೋವಿಡ್‌ 19 ಸಾಂಕ್ರಾಮಿಕದಿಂದಾಗಿ ಆರ್ಥಿಕ ಸಂಕಪ್ಪಕ್ಕೆ ಸಿಲುಕಿರುವ ಕಿರು ಸಣ್ಣ ಮತ್ತು ಮಧ್ಯಮ
ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ನೆರವಿಗೆ ಆರ್‌.ಬಿ.ಐ ಬಂದಿದೆ. ಎಂ.ಎಸ್‌.ಎಂ.ಇ ವಲಯದ
ಉದ್ದಿಮೆಗಳಿಗೆ, ಕಂಪನಿಗಳಿಗೆ ಮತ್ತು ವೈಯಕ್ತಿಕ ಸಾಲ ಪಡೆದವರಿಗೆ ಒಂದು ಬಾರಿ ಸಾಲ ಮರುಹೊಂದಾಣಿಕೆ
ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ.


2020ರ ಮಾರ್ಚ್‌ 1ರವರೆಗೆ, ಸಾಲ ಬಾಕಿ ಉಳಿಸಿಕೊಳ್ಳದೇ ಇರುವವರಿಗೆ ಈ ಸೌಲಭ್ಯ
ಅನ್ಸ್ವಯವಾಗಲಿದೆ. ಬ್ಯಾಂಕ್‌ಗಳು ಇಂತಹ ಸಾಲಗಾರರ ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸುವ ಅಥವಾ
ಸಾಲದ ಇಎಂಐ ಪಾವತಿಯನ್ನು ವಿಸ್ತರಿಸುವ ತೀರ್ಮಾನ ಕೈಗೊಳ್ಳಬಹುದು. ಇದಕ್ಕಾಗಿ ಶೇ.5 ರಷ್ಟು ಹೆಚ್ಚುವರಿ
ನಗದನ್ನು ತೆಗೆದಿರಿಸುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ತಿಳಿಸಿದೆ.


ಸಾಲ ಮರುಹೊಂದಾಣಿಕೆ ಸೌಲಭ್ಯದಿಂದ ಬಹಳಷ್ಟು ಸಣ್ಣ ಉದ್ದಿಮೆಗಳು ಆರ್ಥಿಕ ಸಂಕಷ್ಟದಿಂದ
ಹೊರಬಂದು ವಹಿವಾಟು ಮುಂದುವರಿಸಲು ಸಾಧ್ಯವಾಗಲಿದೆ. ಎಂ.ಎಸ್‌.ಎಂ.ಇ.ಗಳಿಗೆ ಸಾಲದ ಹರಿವನ್ನು
ಖಾತರಿಪಡಿಸುವ ಉದ್ದೇಶದಿಂದ ಅರ್ಹವಾದ ಮತ್ತು ಅಗತ್ಯ ಇರುವ ಕಡೆಗಳಲ್ಲಿ ಸಾಲಗಳ ಮರು ಹೊಂದಾಣಿಕೆ
ಮಾಡಬೇಕಾಗಿದೆ ಹಾಗೂ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯಮವು ತನ್ನ ಕಾಲುಗಳ ಮೇಲೆ ನಿಲ್ಲಲು
ಸಾಧ್ಯವಾಗುವಂತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಲವು ತಿಂಗಳುಗಳವರೆಗೆ ಸಾಲದ ಕಂತು ಪಾವತಿ ಅವಧಿ
ಮುಂದೂಡಿಕೆ ವಿಸ್ರರಿಸುವ ಅವಶ್ಯಕತೆ ಇದೆ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಅಭಿಪ್ರಾಯಪಟ್ಟಿದ್ದಾರೆ


ರೆಹೊ ದರದಲ್ಲಿ ಯಥಾಸ್ಸಿಶಿ:- ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್‌
ಬ್ಯಾಂಕಿನ (ಆರ್‌.ಬಿ.ಐ) ಹಣಕಾಸು ನೀತಿ ಸಮಿತಿಯ ಸದಸ್ಯರು ಅವಿರೋಧವಾಗಿ ತೀರ್ಮಾನಿಸಿದ್ದಾರೆ.


ರೆಪೊ ದರ ಕಡಿಮೆ ಮಾಡುವುದಕ್ಕೆ ವಿರಾಮ ನೀಡಿರುವ ಕ್ರಮವನ್ನು ಸಮತೋಲನ ಸಾಧಿಸುವ ಯತ್ನ
ಎಂದು ವಿಶ್ಲೇಷಿಸಲಾಗುತ್ತಿದೆ. ಹಣದುಬ್ಬರ ದರವು ಹೆಚ್ಚಿನ ಪ್ರಮಾಣದಲ್ಲಿಯೇ ಇರಲಿದ್ದು, 2020-21ನೇ
ಸಾಲಿನ ದ್ವಿತೀಯಾರ್ಧದಲ್ಲಿ ಕಡಿಮೆ ಆಗಬಹುದು ಎಂದು ಸಮಿತಿಯು ಅಂದಾಜಿಸಿದೆ. ಹಣದುಬ್ಬರದ
ವಿಚಾರದಲ್ಲಿ ಅನಿಶ್ಚಿತತೆ ಇದೆ. ಕೋವಿಡ್‌-19 ಸಾಂಕ್ರಾಮಿಕದಿಂದಾಗಿ ಅರ್ಥವ್ಯವಸ್ಥೆಯು ತೀರಾ ದುರ್ಬಲ
ಸ್ಥಿತಿಯಲ್ಲಿದೆ ಹಾಗಾಗಿ ಬಡ್ಡಿದರಗಳಲ್ಲಿ ಬದಲಾವಣೆ ಮಾಡದಿರಲು ಸಮಿತಿ ತೀರ್ಮಾನಿಸಿತು ಎಂದು ಆರ್‌ಬಿಐ
ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದರು.


ಆರ್ಥಿಕ ಪುನಶ್ಲೇತನಕ್ಕಾಗಿ ಅಗತ್ಯ ಇರುವಷ್ಟು ಅವಧಿಯವರೆಗೆ ಬಡ್ಡಿದರ ವಿಚಾರದಲ್ಲಿ ಹೊಂದಾಣಿಕೆಯ
ನೀತಿ ಅನುಸರಿಸಲು ಸಮಿತಿಯು ಸಮ್ಮತಿಸಿದೆ. ಸಾಲ ನೀಡುವ ಸಂದರ್ಭದಲ್ಲಿ ನವೋದ್ಯಮಗಳನ್ನು ಅದ್ಯತಾ
ವಲಯಗಳು ಎಂದು ಪರಿಗಣಿಸಲು ಆರ್‌.ಬಿ.ಐ ತೀರ್ಮಾನಿಸಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ
ಬ್ಯಾಂಕ್‌ (ನಬಾರ್ಡ್‌) ಹಾಗೂ ರಾಷ್ಟ್ರೀಯ ವಸತಿ ಬ್ಯಾಂಕ್‌ (ಎನ್‌ಎಚ್‌ ಬಿ)ಗೆ ತಲಾ ರೂ.5 ಸಾವಿರ ಹೆಚ್ಚುವರಿ
ನಗದು ವಿತರಿಸಲು ಕೂಡ ಆರ್‌ಬಿಐ ತೀರ್ಮಾನಿಸಿದೆ. ಹಾಲಿ ಆರ್ಥಿಕ ವರ್ಷದಲ್ಲಿ ಜಿಡಿಪಿಯ ನಿಜವಾದ
ಬೆಳವಣಿಗೆಯು ನಕಾರಾತ್ಮಕವಾಗಿಯೇ ಇರಲಿದೆ ಎಂಬ ನಿರೀಕ್ಷೆ ಇದೆ ಎಂದು ದಾಸ್‌ ಹೇಳಿದರು.


ಆಧಾರ:ಪ್ರಜಾವಾಣಿ, ದಿನಾಂಕ:07.08.2020
24. ಹೊಸ ಶಿಕ್ಷಣ ನೀತಿ ನವ ಭಾರತದ ಬುನಾದಿ
ಮಗುವಿನ ಕಲಿಕಾ ಸಾಮರ್ಥ್ಯಕ್ಕೆ ಭದ್ರ ಅಡಿಪಾಯ ಒದಗಿಸುವ ಉದ್ದೇಶದಿಂದಲೇ 5ನೇ ತರಗತಿವರೆಗೂ
ಮಾತೃ ಭಾಷೆಯಲ್ಲಿ ಕಲಿಕೆಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದೆ ಎಂದು ಪ್ರಧಾನಿ
ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ಹಾಗೂ ಸುಧಾರಣೆಗಳ ಕುರಿತ
ಸಮಾವೇಶವನ್ನು ವಿಡಿಯೋ ಕಾನ್ಸರೆನ್ಸ್‌ ಮೂಲಕ ಉದ್ರಾಟಿಸಿ ಮಾತನಾಡಿದ ಅವರು ಮಾತೃ ಭಾಷೆಗೆ


ಅದಮ್ಯವಾದ ಶಕ್ತಿ ಇದೆ. ಯಾವುದೇ ಮಗು ತನ್ನ ಮಾತೃ ಭಾಷೆಯಲ್ಲಿ ಕಲಿತಾಗಲೇ ವಿಷಯಗಳನ್ನು
ಅದ್ಭುತವಾಗಿ ಗಹಿಸಬಲ್ಲದು ಎಂದು ಪ್ರತಿಪಾದಿಸಿದರು.


(e


ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನವ ಭಾರತದ ಅಡಿಪಾಯವಾಗಿದೆ. ಇದು ರಾಷ್ಟ್ರೀಯ ಮೌಲ್ಯಗಳ
ಹಾಗೂ ಗುರಿಗಳ ಪ್ರತಿಬಿಂಬವಾಗಿದೆ. ಸುದೀರ್ಪ ಚರ್ಚೆ ಹಾಗೂ ಶಿಕ್ಷಣ ತಜ್ಞಧ ಸಮಾಲೋಚನೆಯ ನ
ನೂತನ ಶಿಕ್ಷಣ ನೀತಿಗೆ ಸರ್ಕಾರ ಅನುಮೋದನೆ ನೀಡಿತು. ಎಲ್ಲರೂ "ಹೊಸ "ನೀತಿಯನ್ನು ಒಪ್ಪಿಕೊಂಡಿರುವುದು
ಇದರಲ್ಲಿನ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತಹಂತವಾಗಿ
ಪರಿಣಾಮಕಾರಿಯಾಗಿ ಜಾರಿಗೊಳಿಸುವ ಇಚ್ಛಾಶಕ್ತಿ ಸರ್ಕಾರಕ್ಕಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ
ಸಂಭವಿಸುವುದನ್ನು ಇಡೀ ಜಗತ್ತು ನೋಡಲಿದೆ ಎಂದು ಆಭಿಪ್ರಾಯಪಟ್ಟರು.


ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಇಷ್ಟವಾದುದನ್ನೇ ಕಲಿಯಬೇಕು ಎಂಬುದು ನೀತಿಯ ತಿರುಳಾಗಿದೆ.
ಇಲ್ಲಿ ಹಲವು ವಿಷಯಗಳ ಕೋರ್ಸ್‌ ಮತ್ತು ಮಲ್ಲಿಪಲ್‌ ಎಂಟ್ರಿ ಮತ್ತು ಎಕ್ಷಿಟ್‌ ಆಯ್ಕೆಗಳು ಲಭ್ಯವಾಗಲಿದೆ.
ಇದರಿಂದ ಕಲಿಕೆ ಮಧ್ಯೆ ತಾನು ಓದುವ ವಿಷಯದ ಮೇಲೆ ಆಸಕ್ತಿ ಇಲ್ಲದಿದ್ದರೆ ಅದನ್ನು ಬದಲಾಯಿಸಲು
ದ್ಯಾರ್ಥಿಗೆ ಅವಕಾಶ ಸಿಗುತ್ತದೆ. ಶಿಕ್ಷಣವು ನಮ್ಮ ಬದುಕು ರೂಪಿಸುವಂತಾಗಬೇಕು ಆಗ ಮಾತ್ರ ಕಲಿಕೆ
ಸಾರ್ಥಕವಾಗುತ್ತದೆ ಎಂದರು.


ಕೌಶಲ್ಯಕ್ಕೆ ಒತ್ತು: ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆಂದರೆ ಅದಕ್ಕೆ ಬುನಾದಿಯಾಗಿ ಶಿಕ್ಷಣ ನೀತಿ
ಇರಬೇಕಾಗುತ್ತದೆ. ಇದನ್ನು ಸಕಾರಗೊಳಿಸಲೆಂದೇ ಹೊಸ ನೀತಿಯಲ್ಲಿ ಪುಸ್ತಕಗಳ ಹೊರೆ ಕಡಿಮೆ ಮಾಡಿ
ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಕೌಶಲ
ಹೊಂದುವುದು, ಅದನ್ನು ಕಾಲಕಾಲಕ್ಕೆ ತಕ್ಕಂತೆ ಮಾರ್ಪಡಿಸಿ ವೃದ್ಧಿಸಿಕೊಳ್ಳುವುದು ಅಗತ್ಯವಾಗಿದೆ. ಈ ಮೂಲಕ
ಜಗತ್ತಿಗೆ ಅಗತ್ಯವಿರುವ ತಾಂತ್ರಿಕತೆ ಮತ್ತು ಪ್ರತಿಭೆಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಡಬಲ್ಲ ಸಾಮರ್ಥ್ಯ ಭಾರತಕ್ಕೆ
ಸಾಧ್ಯವಾಗಲಿದೆ ಎಂದು ಮೋದಿ ಹೇಳಿದರು.


ಈಗಿರುವ ಶಿಕ್ಷಣ ವ್ಯವಸ್ಥೆಯು ಏನನ್ನು ಯೋಚಿಸಬೇಕು ಎನ್ನುವುದು ಮಾತ್ರವೇ ಕಲಿಸುತ್ತೆ ಆದರೆ,
ಹೊಸ ಶಿಕ್ಷಣಂ ನೀತಿಯು ಹೇಗೆ Es ಎಂಬುದನ್ನು ತಿಳಿಸಿಕೊಡುವ ಮೂಲಕ ನಮ್ಮ ಆಲೋಚನಾ
ಶಕ್ತಿಯ ಲಹರಿಯನ್ನು ವಿಸ್ತರಿಸುತ್ತ. ಇದರಿಂದ ಪೈಜ್ಞಾದಿಕವಾಗಿ ಸಂಶೋಧನಾತ್ಮಕವಾಗಿ ಹಾಗೂ
ವಿಶ್ಲೇಷಣಾತ್ಮಕವಾಗಿ ಕಲಿಕೆ ಸಾಧ್ಯವಾಗಲಿದೆ. ಕಲಿತ ಶಿಕ್ಷಣದಿಂದ ಭಾರತವನ್ನು ಸೂಪರ್‌ ಪವರ್‌
ಮಾಡಬಹುದಾಗಿದೆ ಎಂದರು.


ಷ ಸೂತ್ರ, ಮಕ್ಕಳ ಶೈಕ್ಷಣಿಕ ಭಾರ ಕಡಿಮೆ ಮಾಡುವ ಶಿಕ್ಷಣ ಹಕ್ಕು ಕಾಯಿದೆಯ ವ್ಯಾ
ಹೆಚ್ಚಿಸುವ ಪಠ್ಯಕ್ರಮಗಳ ಆಮೂಲಾಗ್ರ ಬದಲಾವಣೆ ಅಂಶಗಳು ನೂತನ ಶಿಕ್ಷಣ ನೀತಿಯಲ್ಲಿವೆ. ತ್ರಿಭಾಷಾ ಸೂತ್ರ
ತಮಿಳುನಾಡು ಅಪಸ್ತರ ಎತ್ತಿದೆ.


a HL €


ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ರಮೇಶ್‌ ಪೋಖ್ರಿಯಾಲ್‌, ಸಹಾಯಕ ಸಚಿವ
ರಾಧಾಕೃಷ್ಣ ಧೋತ್ರೆ, ನೂತನ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷ ಡಾ: ಕಸ್ತೂರಿ ರಂಗನ್‌ ಭಾಗವಹಿಸಿದ್ದರು.
ವಿಶ್ವವಿದ್ಯಾಲಯ ಧನ ಸಹಾಯಕ ಆಯೋಗ ರೂಪಿಸಿರುವ ಉನ್ನತ ಶಿಕ್ಷಣದಲ್ಲಿ ಇಂಟರ್ನ್‌ಶಿಪ್‌ ಒಳಗೊಂಡ
ಪದವಿಗಳ ಮಾರ್ಗಸೂಚಿ ನಿಯಮಗಳನ್ನು ಪೋಖ್ರಿಯಾಲ್‌ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.


ಆಧಾರ:ವಿಜಯಕರ್ನಾಟಕ, ದಿನಾ೦ಕ:08.08.2020
25. ವಾಣಿಜ್ಯೋದ್ಯಮಿಗಳಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸೂಚನೆ


ಸ್ವಾವಲಂಬಿ ಭಾರತ ಪರಿಕಲ್ಪನೆ ಸಾಕಾರಗೊಳಿಸಲು ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಿ.
ದೇಶದಲ್ಲಿಯೇ ಅದಕ್ಕೆ ಪರ್ಯಾಯ ಕಂಡುಕೊಳ್ಳಬೇಕಿದೆ ಎಂದು ಎಂಎಸ್‌ಎಂಇ ಸಚಿವ ನಿತಿನ್‌ ಗಡ್ಕರಿ
ಹೇಳಿದ್ದಾರೆ.


ಜೇನಾದ ಮೇಲೆ ಹೆಚ್ಚು ಅವಲಂಬಿತವಾಗಿರುವ ವಲಯಗಳನ್ನು ಗುರುತಿಸುವಂತೆ ವಾಣಿಜ್ಯೋದ್ಯಮಿಗಳಿಗೆ
ಮನವಿ ಮಾಡಿರುವ ಅವರು. ಭಾರತವನ್ನು ಸೂಪರ್‌ ಪವರ್‌ ಆಗಿ ರೂಪಿಸಲು ಚೀನಾದ ಉತ್ಪನ್ನಗಳಿಗೆ
ಸ್ಥಳೀಯವಾಗಿಯೇ ಪರ್ಯಾಯ ಕಂಡುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.


ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಮಿಷನ್‌ 2020 ಕಾರ್ಯಕ್ರಮವನ್ನು
ಉದ್ದೇಶಿಸಿ ಮಾತನಾಡಿದ ಅವರು, ಮಹಾನಗರ ಮತ್ತು ನಗರಗಳಾಚೆಗೂ ಕೈಗಾರಿಕಾ ಜಾಲವನ್ನು ವಿಸ್ತರಿಸುವಂತೆ
ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ.


ಶೇ.90ರಷ್ಟು ವಾಣಿಜ್ಯೋದ್ಯಮಗಳು ದೊಡ್ಡ ನಗರಗಳು ಮತ್ತು ಮಹಾನಗರಗಳ ಕಡೆಗೆ ಮಾತ್ರವೇ
ಗಮನ ಹರಿಸುತ್ತಿದೆ ಎನ್ನುವುದು ವಿಷಾದನೀಯ. ಗ್ರಾಮೀಣ, ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳ
ಬಗ್ಗೆಯೂ ವಾಣಿಜ್ಯೋದ್ಯಮಿಗಳು ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ
ನೆರವನ್ನೂ ನೀಡಲಾಗುವುದು. ಆಮದು ಕಡಿಮೆ ಮಾಡುವ ಮೂಲಕ ರಪ್ತು ಹೆಚ್ಚಿಸಲು ಸಾಧ್ಯವಿರುವ
ವಲಯಗಳನ್ನು ಗುರುತಿಸುವಂತೆ ಸಿಐಐಗೆ ಸೂಚನೆ ನೀಡಿದ್ದಾರೆ ದೇಶದಲ್ಲಿ ತಯಾರಿಕೆಗೆ ಉತ್ತೇಜನ ನೀಡಲು
ಕೆಲವು ವಲಯಗಳಲ್ಲಿ ಆಮದು ಸುಂಕ ಹೆಚ್ಚಿಸಬೇಕಾಗಿದೆ ಎಂದು ಸಚಿವರು ಹೇಳಿದರು.


ಉದ್ಯೋಗ ಸೃಷ್ಟಿಯ ತುರ್ತು ಅಗತ್ಯ: ದೇಶದಲ್ಲಿ ಉದ್ಯೋಗ ಸೃಷ್ಟಿಸುವ ತುರ್ತು ಅಗತ್ಯ ಇದೆ. ಗ್ರಾಮೀಣ ಪ್ರದೇಶ
ಕೃಷಿ ಬೆಳವಣಿಗೆಗೂ ಹೆಚ್ಚು ಗಮನ ನೀಡಲಾಗುತ್ತಿದೆ. ಜನದಟ್ಟಣೆ ಇರುವ ನಗರಗಳಿಂದ ಶೇ.7-8ರಷ್ಟು ಜನರನ್ನು
ಸ್ಮಾರ್ಟ್‌ ಸಿಟಿ ಮತ್ತು ಹಳ್ಳಿಗಳಿಗೆ ವರ್ಗಾಯಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.


ಆಧಾರ:ಪ್ರಜಾವಾಣಿ, ದಿನಾಂಕ:09.08.2020
26. 101 ಸೇನಾ ಸಲಕರಣೆಗಳ ಆಮದು ನಿಷೇಧದ ಪಟ್ಟಿ ಪ್ರಕಟಿಸಿದ ಕೇಂದ್ರ ಸರ್ಕಾರ


[ಮ]
ಆಮದು ನಿಷೇಧಿಸಲಾಗಿರುವ 101 ಸೇನಾ ಸಲಕರಣೆಗಳ ಪಟ್ಟಿಯನ್ನು ರಕ್ಷಣಾ ಸಚೆವಾಲಯವು
ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ಮೂರು ತಿಂಗಳ ಹಿಂದೆ ಘೋಷಿಸಿದ ಆತ್ಮನಿರ್ಭರ ಭಾರತ
(ಸ್ಥಾವಲಂಬಿ ಭಾರತ) ಯೋಜನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಮದು ನಿಷೇಧದಿಂದಾಗಿ


ಸೇನಾ ಸಲಕರಣೆಗಳ ತಯಾರಿಕೆಯಲ್ಲಿ ದೇಶೀಯ ಕಂಪನಿಗಳಿಗೆ ಭಾರಿ ಅನುಕೂಲ ಆಗಲಿದೆ.


ಆಮದು ನಿಷೇಧಿಸಲಾದ ಉಪಕರಣಗಳ ತಯಾರಿಕೆಯಲ್ಲಿ ಖಾಸಗಿ ಕ್ಷೇತ್ರವು ಹೇಗೆ ಭಾಗಿಯಾಗುತ್ತದೆ
ಎಂಬುದು ಈ ಯೋಜನೆಯ ಯಶಸ್ಸನ್ನು ನಿರ್ಧರಿಸುತ್ತದೆ. ಈಗಿನ ಪಟ್ಟಿಯಲ್ಲಿ ಇರುವ ರಕ್ಷಣಾ ಸಾಮಗ್ರಿ
ತಯಾರಿಕೆ ಕಂಪನಿಗಳೇ ಅಭಿವೃದ್ಧಿಪಡಿಸಿದೆ ಮತ್ತು ಅವು ಸರ್ಕಾರದ ಆಯುಧ ಕಾರಾನೆಗಳಲ್ಲಿಯೇ
ತಯಾರಾಗುತ್ತಿವೆ.


ಕೋವಿಡ್‌-19 ಪಿಡುಗಿನಿಂದಾಗಿ ಉಂಟಾದ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಕೇಂದ್ರ ಹಣಕಾಸು ಸಚಿವೆ
ನಿರ್ಮಲಾ ಸೀತಾರಾಮನ್‌ ಅವರು ಮೇ ತಿಂಗಳಲ್ಲಿ ಪ್ರಕಟಿಸಿದ ಯೋಜನೆಗಳಲ್ಲಿ ರಕ್ಷಣಾ ಸಲಕರಣೆ
ತಯಾರಿಕೆಯಲ್ಲಿ ಸ್ವಾವಲಂಬನೆಯೂ ಸೇರಿತ್ತು.


2015ರ ಏಪ್ರಿಲ್‌ ನಿಂದ 2020ರ ಆಗಸ್ಟ್‌ ಅವಧಿಯಲ್ಲಿ ಭಾರತದ ರಕ್ಷಣಾ ಪಡೆಗಳು ರೂ.3.55 ಲಕ್ಷ
ಕೋಟಿ ಮೌಲ್ಯದ ಸೇನಾ ಉಪಕರಣಗಳನ್ನು ಆಮದು ಮಾಡಿಕೊಂಡಿವೆ. ಈಗ 101 ಸಾಧನಗಳ ಆಮದಿನ
ಮೇಲೆ ನಿಷೇಧ ಹೇರಿರುವುದರಿಂದ ಇವುಗಳ ತಯಾರಿಕೆ ಮತ್ತು ಪೂರೈಕೆಯ ಅವಕಾಶ ದೇಶೀಯ ಕಂಪನಿಗಳಿಗೆ
ದೊರೆಯುತ್ತದೆ. ಮುಂದಿನ ಐದರಿಂದ ಏಳು ವರ್ಷಗಳಲ್ಲಿ ದೇಶೀಯ ಕಂಪನಿಗಳಿಗೆ ರೂ.4 ಲಕ್ಷ ಕೋಟಿ
ಮೌಲ್ಕದ ಸಲಕರಣೆಗಳ ಪೂರೈಕೆ ಅವಕಾಶ ದೊರೆಯುಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.


2020-21ರ ರಕ್ಷಣಾ ಸಾಮಗ್ರಿ ಖರೀದಿಯ ಬಜೆಟ್‌ ಅನ್ನು ರಕ್ಷಣಾ ಸಚಿವಾಲಯವು ದೇಶೀಯವಾಗಿ
ಖರೀದಿ ಮತ್ತು ಆಮದು ಎಂದು ವಿಂಗಡಿಸಿದೆ. ದೇಶೀಯವಾಗಿ ಖರೀದಿ ಮಾಡಲು ಸುಮಾರು ರೂ.52
ಸಾವಿರ ಕೋಟಿ ಮೀಸಲು ಇರಿಸಲಾಗಿದೆ. ಈ ವರ್ಷ ರಕ್ಷಣಾ ಖರೀದಿಗೆ ಮೀಸಲಿರಿಸಿದ ಮೊತ್ತವು ರೂ.1.13 ಲಕ್ಷ
ಕೋಟಿ.


ಹೊಸ ರೂಪುರೇಷೆ ಆಗಸ್ಕ್‌.15 ರಂದು ಪ್ರಕಟ:-ಪ್ರಧಾನಿ ನರೇಂದ್ರ ಮೋದಿ ಅವರು ಸ್ಹಾವಲಂಬಿ ಭಾರತದ ಹೊಸ
ರೂಪುರೇಷೆಯನ್ನು ಸ್ವಾತಂತ್ಯ ದಿನದ ಭಾಷಣದಲ್ಲಿ ಪ್ರಕಟಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌
ಹೇಳಿದ್ದಾರೆ.


ಸ್ಪಾವಲಂಬಿ ಭಾರತದ ಬಗೆಗಿನ ಪ್ರಧಾನಿಯ ಯೋಜನೆಯನ್ನು ಜಾರಿಗೆ ತರುವುದಕ್ಕಾಗಿ ವಿವಿಧ
ಇಲಾಖೆಗಳು ಮತ್ತು ಸಚಿವಾಲಯಗಳು ಗಂಭೀರವಾಗಿ ಕೆಲಸ ಮಾಡುತ್ತಿವೆ. ಮಹಾತ್ಸಗಾಂಧಿಯ ಸ್ಪದೇಶಿ
ಪರಿಕಲನೆಗೆ ಇದು ಹೊಸ ಆಯಾಮ ನೀಡಲಿದೆ ಎಂದು ಅವರು ವಿವರಿಸಿದ್ದಾರೆ. ಭಾರತದ ಆತ್ಮಗೌರವ ಮತ್ತು
ಸಾರ್ವಭೌಮತೆಗೆ ಎದುರಾಗುವ ಧಕ್ಕೆಯನ್ನು ಯಾವುದೇ ಬೆಲೆ ತೆತ್ತಾದರೂ ಸರ್ಕಾರ ತಡೆಯಲಿದೆ ಎಂದಿದ್ದಾರೆ.


ಉಪಗ್ರಹ ಆಮದು ಇಲ್ಲ: ನಿಷೇಧದ ಪಟ್ಟಿಯಲ್ಲಿ ಈಗ ಆಮದಾಗುತ್ತಿರುವ ಎಷ್ಟೋ ಸಲಕರಣೆಗಳಿವೆ ಎಂಬುದನ್ನು
ಸಚಿವಾಲಯ ಹೇಳಿಲ್ಲ. ಜಿಸ್ಕಾಟ್‌-7ಸಿ ಮತ್ತು ಜಿಸ್ಕಾಟ್‌-7ಆರ್‌ ಉಪಗ್ರಹಗಳನ್ನು 2023ರ ಬಳಿಕ ಆಮದು
ಮಾಡಿಕೊಳ್ಳಲಾಗುವುದಿಲ್ಲ ಎಂದು ಸಚಿವಾಲಯ ಹೇಳಿದೆ. ಆದರೆ, ಉಪಗ್ರಹಗಳನ್ನು ದೇಶೀಯವಾಗಿಯೇ
ತಯಾರಿಸಲಾಗುತ್ತಿದೆ. ಅವುಗಳನ್ನು ಆಮದು ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಾರ್ವಜನಿಕ ರಂಗದ
ರಕ್ಷಣಾ ಸಾಧನ ತಯಾರಿಕೆ ಕಂಪನಿಗಳು ಮತ್ತು ದೇಶೀಯ ಖಾಸಗಿ ಕ್ಷೇತ್ರದ ಕಂಪನಿಗಳು ತಯಾರಿಸುತ್ತಿರುವ
ಹಲವು ಸಲಕರಣೆಗಳು ಆಮದು ನಿಷೇಧ ಪಟ್ಟಿಯಲ್ಲಿ ಸೇರಿವೆ.


ಎಚ್‌ಎಎಲ್‌ ತಯಾರಿಸುತ್ತಿರುವ ಲಘು ಯುದ್ದ ವಿಮಾನ ತೇಜಸ್‌ ಡೀಸೆಲ್‌ ಚಾಲಿತ
ಜಲಾಂತರ್ಗಾಮಿಗಳು (ಇದು ಭಾರತದಲ್ಲಿ ತಯಾರಿಸಿ ಯೋಜನೆಯ ಭಾಗ), ಬಿಇಎಲ್‌ ತಯಾರಿಸುತ್ತಿರುವ
ಹಲವು ರೇಡಾರ್‌ಗಳು ಕೂಡ ಆಮದು ನಿಷೇಧ ಪಟ್ಟಿಯಲ್ಲಿ ಸ್ಥಾನಪಡೆದಿವೆ.


ಆಧಾರ:ಪ್ರಜಾವಾಣಿ, ದಿನಾಂಕ:10.08.2020
27. ಮೂಲ ಸೌಕರ್ಯ ಅಭಿವೃದ್ದಿಗೆ, ಹಣಕಾಸು ನೆರವು ಯೋಜನೆಗೆ ಪ್ರಧಾನಿ ಚಾಲನೆ


ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಹಣಕಾಸು ನೆರವು ನೀಡುವ ರೂ. 1 ಲಕ್ಷ ಕೋಟಿಗಳ


ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಈ ಯೋಜನೆಯಡಿ ಕೃಷಿ ಉತ್ಪಾದನಾ ಸಂಘಗಳ ಯೋಜನೆ ಸ್ವಸಹಾಯ ಗುಂಪುಗಳು ಮತ್ತು ಕೃಷಿ
ಉದ್ಯಮಿಗಳು, ಸ್ಟಾರ್ಟಪ್‌ ಕಂಪನಿಗಳು, ಕೃಷಿ ಕ್ಷೇತ್ರದ ತಂತ್ರಜ್ಞಾನಿಗಳು ಸಾಲ ಪಡೆದು ಸುಗ್ಗಿ ನಂತರ ನಿರ್ವಹಣೆಗೆ
ಮೂಲಸೌಕರ್ಯಗಳನ್ನು ನಿರ್ಮಿಸಬಹುದಾಗಿದೆ. ಶೀತಲಗೃಹಗಳು, ಉಗ್ರಾಣಗಳು ಮತ್ತು ಸಂಸ್ಕರಣಾ ಘಟಕಗಳಿಗೆ
ಇದರಲ್ಲಿ ಸಾಲ ಸೌಲಭ್ಯವಿದೆ. ಇ- ಮಾರ್ಕೆಟಿಂಗ್‌ ವ್ಯವಸ್ಥೆ ಕಲ್ಲಿಸುವುದಕ್ಕೂ ಸಾಲ ದೊರೆಯುತ್ತದೆ. ಕಳೆದ
ತಿಂಗಳಷ್ಟೆ ಈ ಯೋಜನೆಗೆ ಸಂಪುಟದಿಂದ ಒಪ್ಪಿಗೆ ದೊರೆತಿದ್ದು, ಅದಕ್ಕೆ ಈಗ ಚಾಲನೆ ನೀಡಲಾಗಿದೆ.


ವಿಡಿಯೋ ಕಾನ್ಸರೆನ್ಸ್‌ ಮೂಲಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ರೈತರ ಆದಾಯ
ದ್ವಿಗುಣಗೊಳಿಸುವ ಚಿಂತನೆಯ ಹಿನ್ನೆಲೆಯಲ್ಲಿ ರೈತರು ಈ ಮೂಲಕ ಉದ್ಯಮಿಗಳಾಗಲಿದ್ದಾರೆ ಎಂದರು. ಈ
ವರ್ಚುಯಲ್‌ ಕಾರ್ಯಕ್ರಮದಲ್ಲಿ ಒಂದು ಲಕ್ಷ ರೈತರು, ಸಹಕಾರಿ ಸದಸ್ಯರು ಮತ್ತು ಇತರೆ ನಾಗರಿಕರು
ಪಾಲ್ಗೊಂಡಿದ್ದರು. ಸುಗ್ಗಿ ನಂತರ ನಿರ್ವಹಣೆಗೆ ಮೂಲಸೌಕರ್ಯಗಳನ್ನು ನಿರ್ಮಿಸಿದಲ್ಲಿ ನಷ್ಟದ ಪ್ರಮಾಣ ತಗ್ಗಿ
ರೈತರು ತಮಗೆ ಲಾಭವೆನಿಸಿದ ದರ ಒದಗಿದಾಗ ಅದನ್ನು ಮಾರಬಹುದಾಗಿದೆ. ಇದಕ್ಕಾಗಿ 2280 ರೈತ
ಸೊಸೈಟಿಗಳಿಗೆ ರೂ.1000 ಕೋಟಿ ನೀಡಲಾಗಿದೆ. ಈಗಾಗಲೇ ಈ ಯೋಜನೆಗೆ 12 ಸಾರ್ವಜನಿಕ ವಲಯದ
ಬ್ಯಾಂಕುಗಳು ಕೃಷಿ ಇಲಾಖೆಯೊಂದಿಗೆ ಸಹಾಯಧನವಾಗಿ ನೀಡಲಾಗುತ್ತದೆ. ಪ್ರಸ್ತುತ ವರ್ಷದಲ್ಲಿ ರೂ.10.000
ಕೋಟಿ ಹಾಗೂ ಮುಂದಿನ ಮೂರು ವರ್ಷಗಳಲ್ಲಿ ರೂ.30,000 ಕೋಟಿ ಸಾಲವಾಗಿ ನೀಡಲಾಗುತ್ತದೆ.


ರೈತರ ಖಾತೆಗಳಿಗೆ ಜಮಾ:- ಇದೇ ಸಂದರ್ಭದಲ್ಲಿ ಪಿಎಂ-ಕಿಸಾನ್‌ ಯೋಜನೆಯಡಿ ಆರನೇ ಕಂತಿನ ಹಣವನ್ನು
ಬಿಡುಗಡೆ ಮಾಡಿದರು. ಇದರಿಂದ ರೂ.8.5 ಕೋಟಿ ರೈತರ ಖಾತೆಗಳಿಗೆ ರೂ.17,100 ಕೋಟಿ ಜಮಾ ಆಗಿದೆ.
ವರ್ಷಕ್ಕೆ ಮೂರು ಕಂತುಗಳಂತೆ ಪ್ರತಿ ರೈತರಿಗೆ ರೂ.6000ಗಳನ್ನು ಪಿಎಂ-ಕಿಸಾನ್‌ ಯೋಜನೆ ಮೂಲಕ
ನೀಡಲಾಗುತ್ತದೆ. ಆರನೇ ಕಂತಿನಲ್ಲಿ ತಲಾ ರೂ.2000 ನೀಡಲಾಗಿದೆ. ಈ ಯೋಜನೆಯನ್ನು 2018ರಲ್ಲಿ
ಚಾಲನೆಗೊಳಿಸಿದ್ದು, 10 ಕೋಟಿ ರೈತ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಗುರಿ ಹೊಂದಲಾಗಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾ೦ಕ:10.08.2020
28. ಅಂಡಮಾನ್‌-ನಿಕೋಬಾರ್‌ಗೆ ಮೊದಲ ಬಾರಿಗೆ ಮರೈನ್‌ ಆಫ್ಲಿಕಲ್‌ ಫೈಬರ್‌ ಯೋಜನೆ


ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಮೊದಲ ಸಾಗರದೊಳಗಿನ ಆಪ್ಪಿಕಲ್‌ ಫೈಬರ್‌
ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಭಾಟಿಸಿದರು. ಇದು ದ್ವೀಪ ರಾಷ್ಟದ ಬಹುಭಾಗಕ್ಕೆ ವೇಗದ
ಇಂಟರ್‌ನೆಟ್‌ (ಬ್ರಾಡ್‌ ಬ್ಯಾಂಡ್‌) ಸಂಪರ್ಕವನ್ನು ಒದಗಿಸುತ್ತದೆ. ಚೆನ್ನೈ - ಅಂಡಮಾನ್‌ ಮತ್ತು ನಿಕೋಬಾರ್‌
ದ್ವೀಪಗಳನ್ನು ಸಂಪರ್ಕಿಸುವ 2.312 ಕಿಲೋಮೀಟರ್‌ ಉದ್ದದ ಜಲಾಂತರ್‌ಗಾಮಿ ಆಪ್ಟಿಕಲ್‌ ಫೈಬರ್‌ ಕೇಬಲ್‌
ಯೋಜನೆಗೆ 2018ರ ಡಿಸೆಂಬರ್‌ 30 ರಂದು ಪ್ರಧಾನಿ ಅಡಿಪಾಯ ಹಾಕಿರುತ್ತಾರೆ.


ವಿಡಿಯೋ ಕಾನ್ಪರೆನ್ಸ್‌ ಮೂಲಕ ಯೋಜನೆಯನ್ನು ಉದ್ರಾಟಿಸಿದ ಮೋದಿ ಚೆನ್ನೈನಿಂದ
ಘೋರ್ಟ್‌ ಭ್ಲೇರ್‌, ಫೋರ್ಟ್‌ ಭ್ಲೇರ್‌ನಿಂದ ಲಿಟಲ್‌ ಅಂಡಮಾನ ಮತ್ತು ಫೋರ್ಟ್‌ ಬ್ಲೇರ್‌ನಿಂದ ಸ್ಪರಾಜ್‌
ದ್ವೀಪ್‌ವರೆಗೆ ಇದೆ. ಅಂಡಮಾನ್‌ ನಿಕೋಬಾರ್‌ನ ಬಹುಭಾಗದಲ್ಲಿ ವೇಗದ ಇಂಟರ್‌ನೆಟ್‌ ಸೇವೆಯು
ಇಂದಿನಿಂದ ಪ್ರಾರಂಭವಾಗಿದೆ ಎಂದು ಹೇಳಿದರು.


ರೂ.1224 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಘೋರ್ಟ್‌ಭಬ್ಲೇರ್‌ ಜೊತೆಗೆ
ಸ್ಪರಾಜ್‌ ದ್ವೀಪ್‌ (ಹ್ಯಾವ್‌ ಲಾಕ್‌), ಲಾಂಗ್‌ ಐಲ್ಯಾಂಡ್‌, ರಂಗತ್‌, ಲಿಟಲ್‌ ಅಂಡಮಾನ್‌, ಕಮೋರ್ಟಾ, ಕಾರ್‌
ನಿಕೋಬಾರ್‌ ಮತ್ತು ಗೇಟರ್‌ ನಿಕೋಬಾರ್‌ ದ್ವೀಪಗಳನ್ನು ಸಂಪರ್ಕಿಸುತ್ತದೆ.


ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಜನರಿಗೆ ಆಧುನಿಕ ಟೆಲಿಕಾಂ ಸಂಪರ್ಕವನ್ನು
ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ದೇಶದ ಎಲ್ಲ ಟೆಲಿಕಾಂ ಆಪರೇಟರ್‌ಗಳು ತಮ್ಮ ಮೊಬೈಲ್‌ ಮತ್ತು
ಬ್ರಾಡ್‌ ಬ್ಯಾಂಡ್‌ ಸೇವೆಗಳನ್ನು ಆಪ್ಟಿಕಲ್‌ ಫೈಬರ್‌ ಲಿಂಗ್‌ ಬಳಸಿ ಒದಗಿಸಲು ಸಾಧ್ಯವಾಗುತ್ತದೆ. ಅಂಡಮಾನ್‌
ಮತ್ತು ನಿಕೋಬಾರ್‌ ಅನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಆಪ್ಟಿಕಲ್‌ ಫೈಬರ್‌ ಕನೆಕ್ಸಿವಿಟಿ
ಯೋಜನೆಯು ಜೀವನ ಸುಲಭವಾಗಿಸುವ ನಮ್ಮ ಬದ್ಧತೆಯ ಸಂಕೇತವಾಗಿದೆ ಎಂದು ಮೋದಿ ಹೇಳಿದರು.


ಫೋರ್ಟ್‌ ಭ್ಲೇರ್‌ನಲ್ಲಿ ಸೆಕೆಂಡಿಗೆ 400 ಗಿಗಾಬೈಟ್‌ (ಜಿಬಿ) ಇಂಟರ್‌ನೆಟ್‌ ವೇಗವನ್ನು
ಒದಗಿಸಲಾಗುವುದು. ಇತರ ದೀಪಗಳಿಗೆ ಇದು ಸೆಕೆಂಡಿಗೆ 200 ಜಿಬಿ ಆಗಿರುತ್ತದೆ. ಅಂಡಮಾನ್‌ ದ್ವೀಪಗಳನ್ನು
ಚೆನ್ನೈಗೆ ಜೋಡಿಸುವ ಸಾಗರದೊಳಗಿನ ಕೇಬಲ್‌ ಅನ್ನು ಕಷ್ಟಕರ ಪರಿಸ್ಥಿತಿಯ ಹೊರತಾಗಿಯೂ ಸಮಯಕ್ಕೆ
ಮುಂಚಿತವಾಗಿ ಹಾಕಲಾಗಿದೆ. ಸಾಗರದೊಳಗಿನ ಕೇಬಲ್‌ ಹಾಕುವ ಕೆಲಸವನ್ನು ಬಿ.ಎಸ್‌.ಎನ್‌.ಎಲ್‌. 24
ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದೆ. ಈ ಯೋಜನೆಯು 4ಜಿ ಮೊಬೈಲ್‌ ಸೇವೆಗಳು ಮತ್ತು
ಟೆಲಿ ಶಿಕ್ಷಣ,. ಟಿಲಿ-ಹೆಲ್ತ್‌, ಇ-ಆಡಳಿತ ಸೇವೆಗಳು ಮತ್ತು ದ್ವೀಪಗಳಲ್ಲಿನ ಪ್ರವಾಸೋದ್ಯಮದಂತಹ ಡಿಜಿಟಲ್‌
ಸೇವೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.


ಅಂಡಮಾನ್‌ ಮತ್ತು ನಿಕೋಬಾರ್‌ನ 12 ದ್ವೀಪಗಳಲ್ಲಿ ಯೋಜನೆಗಳ ವಿಸ್ತರಣೆ
ಮೊಬೈಲ್‌, ಇಂಟರ್‌ನೆಟ್‌ ಸಂಪರ್ಕದ ಸಮಸ್ಯೆಯನ್ನು ಇಂದು ಪರಿಹರಿಸಲಾಗಿದೆ.
ರಸ್ತೆ ಗಾಳಿ ಮತ್ತು ನೀರಿನ ಮೂಲಕ ಭೌತಿಕ ಸಂಪರ್ಕವನ್ನು ಬಲಪಡಿಸಲಾಗುತ್ತಿದೆ.


ಉತ್ತರ - ಮಧ್ಯ ಅಂಡಮಾನ್‌ನ ರಸ್ತೆ ಸಂಪರ್ಕಕ್ಕೆ 2 ಸೇತುವೆ, ಎನ್‌ಎಚ್‌-4 ಕೆಲಸ ಆರಂಭ.


VV VY VY VY


ನಮ್ಮ ಜಲ ಮಾರ್ಗಗಳ ಜಾಲ ಮತ್ತು ಬಂದರುಗಳನ್ನು ಬಲಪಡಿಸುವುದು ಬಹಳ ಮುಖ್ಯ.
> ದ್ವೀಪದಲ್ಲಿ ಮೀನುಗಾರಿಕೆ, ಜಲಚರ ಸಾಕಣೆ, ಕಡಲಕಳೆ ಕೃಷಿಯಿಂದ ಆರ್ಥಿಕತೆಗೆ ವೇಗ.


ವಿಮಾನ ನಿಲ್ದಾಣ ಮೇಲ್ಲರ್ಜೆಗೆ:- 1,200 ಪ್ರಯಾಣಿಕರ ಸಾಮರ್ಥ್ಯವನ್ನು ನಿಭಾಯಿಸಲು ಘೋರ್ಟ್‌ ಬ್ಲೇರ್‌
ವಿಮಾನ ನಿಲ್ದಾಣವನ್ನು ವಿಸ್ತರಿಸಲಾಗುತ್ತಿದೆ. ಡಿಗ್ನಿಪುರ, ಕಾರ್‌, ನಿಕೋಬಾರ್‌ ಮತ್ತು ಕ್ಯಾಂಪ್ಸಲ್‌ - ಬೇಗಳಲ್ಲಿ
ವಿಮಾನ ನಿಲ್ದಾಣಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ. ಆದೇ ರೀತಿ ಪೂರ್ವ ಕರಾವಳಿಯಲ್ಲಿ ಡೀಪ್‌ ಡಾಫ್ಟ್‌
ಒಳ ಬಂದರಿನ ನಿರ್ಮಾಣವೂ ವೇಗವಾಗಿ ನಡೆಯುತ್ತಿದೆ. ಈಗ ಗೇಟ್‌ ನಿಕೋಬಾರ್‌ನಲ್ಲಿ ರೂ.10,000 ಕೋಟಿ
ಅಂದಾಜು ವೆಚ್ಚದಲ್ಲಿ ಟ್ರಾನ್ಸ್‌ಶಿಪ್‌ಮೆಂಟ್‌ ಬಂದರು ನಿರ್ಮಾಣದ ಪ್ರಸ್ತಾಪವಿದೆ. ಹೊಸ ಬಂದರು ನಿರ್ಮಾಣದ
ಹಾಗೂ ಹೊಸ ಬಂದರು ದೊಡ್ಡ ಹಡಗುಗಳನ್ನು ಲಂಗರು ಹಾಕಲು ಮತ್ತು ಕಡಲ ವ್ಯಾಪಾರದಲ್ಲಿ ಭಾರತದ
ಪಾಲನ್ನು ಹೆಚ್ಚಿಸಲು ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.


ಆಧಾರ:ಪ್ರಜಾವಾಣಿ, ದಿನಾಂಕ:11.08.2020
29. 72 ತಾಸಿನಲ್ಲಿ ಪರೀಕ್ಷೆ ನಡೆಸಿ : ಪ್ರಧಾನಿ ಮೋದಿ ಸೂಚನೆ


ದೇಶದಲ್ಲಿನ ಶೇ.80ರಷ್ಟು ಕೋವಿಡ್‌ ಪ್ರಕರಣಗಳು ದೃಢಪಟ್ಟಿರುವ ಕರ್ನಾಟಕ ಸೇರಿದಂತೆ ಹತ್ತು
ರಾಜ್ಯಗಳು ವೈರಾಣು ನಿಯಂತ್ರಸುವಲ್ಲಿ ಯಶಸ್ವಿಯಾದರೆ ಕೋವಿಡ್‌ ವಿರುದ್ದದ ಹೋರಾಟದಲ್ಲಿ ಭಾರತವು
ಗೆದ್ದಂತೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಸೋಂಕಿತರನ್ನು ಗುರುತಿಸಿ ಅವರನ್ನು ಪರೀಕ್ಷೆಗೆ ಒಳಪಡಿಸುವುದು ಅತ್ಯಂತ ಮಹತ್ವದ ಕೆಲಸ.
ಸೋಂಕಿತರ ಸಂಪರ್ಕಿತರನ್ನು 72 ತಾಸುಗಳೊಳಗೆ ಗುರುತಿಸಿ ತಪಾಸಣೆಗೆ ಒಳಪಡಿಸಬೇಕು ಎಂಬ ಗುರಿಯನ್ನು
ಈ ರಾಜ್ಯಗಳಿಗೆ ಪ್ರಧಾನಿ ನೀಡಿದ್ದಾರೆ. ಕೈತೊಳಯುವುದು, ಮಾಸ್ಕ್‌ ಧರಿಸುವುದು ಮತ್ತು ಅಂತರ
ಕಾಯ್ದುಕೊಳ್ಳುವ ಹಾಗೆಯೇ ಸಂಪರ್ಕಿತರ ತ್ವರಿತ ಪತ್ತೆ ಮತ್ತು ಪರೀಕ್ಷೆಯನ್ನು "ಮಂತ್ರ'ದ ರೀತಿಯಲ್ಲಿ
ಅನುಸರಿಸಬೇಕು ಎಂದಿದ್ದಾರೆ.


ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಪಂಜಾಬ್‌, ಆಂಧಪ್ರದೇಶ ಮಹಾರಾಷ್ಟ, ತೆಲಂಗಾಣ, ಪಶ್ಚಿಮ
ಬಂಗಾಳ, ಹರಿಯಾಣ ಮತ್ತು ಗುಜರಾತ್‌ ಮುಖ್ಯಮಂತಿಗಳು ಮತ್ತು ಪ್ರತಿನಿಧಿಗಳ ಜೊತೆಗೆ ಮೋದಿ ಟನರು
ವಿಡಿಯೋ ಕಾನ್ಪರೆನ್ಸ್‌ ಮಲ ಸಂವಾದ RN


ಕೇಂದ್ರ ಮತ್ತು ರಾಜ್ಯಗಳು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಒಂದು ತಂಡವಾಗಿ ಕೆಲಸ
ಮಾಡುವುದು ಸಾಧ್ಯವಾಗಿದೆ ಎಂಬ ಸಮಾಧಾನವನ್ನು ಅವರು ವ್ಯಕ್ತಪಡಿಸಿದರು. ಸೋಂಕು ತಡೆ, ಸಂಪರ್ಕಿತರ
ಪತ್ತೆ ಮತ್ತು ನಿಗಾ ಕೋವಿಡ್‌ ಹರಡುವಿಕೆ ವಿರುದ್ಧ ಅತ್ಯಂತ ಪರಿಣಾಮಕಾರಿ ಅಸ್ತಗಳು ಎಂಬುದು ನಮ್ಮ
ಅನುಭವ. 72 ತಾಸುಗಳಲ್ಲಿ ಸೋಂಕಿತರ ಪತ್ತೆ ಸಾಧ್ಯವಾದರೆ ಸೋಂಕು ಹರಡುವಿಕೆಯು ಭಾರಿ ಪ್ರಮಾಣದಲ್ಲಿ
ಕುಸಿಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.


ದೇಶದಲ್ಲಿ ಈಗ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ಲಕ್ಷಕ್ಕೂ ಹೆಚ್ಚು. ಇವುಗಳಲ್ಲಿ ಹೆಚ್ಚಿನವು ಹತ್ತು
ರಾಜ್ಯಗಳಿಂದ ವರದಿಯಾಗುತ್ತಿವೆ. ಶೇ.80ರಷ್ಟು ಪ್ರಕರಣಗಳನ್ನು ಹೊಂದಿರುವ ಈ ರಾಜ್ಯಗಳು ಕೋವಿಡ್‌
ವಿರುದ್ಧದ ಹೋರಾಟದಲ್ಲಿ ಬಹಳ ಮುಖ್ಯ ಈ ಎಲ್ಲ ಹತ್ತು ರಾಜ್ಯಗಳು ಜೊತೆಗೆ ಕುಳಿತು ಚರ್ಚೆ ಮತ್ತು
ಪರಾಮರ್ಶೆ ನಡೆಸಬೇಕಾದ ಅಗತ್ಯ ಲ. ಪರಸ್ಪರರ ಅನುಭವದಿಂದ ಕಲಿಯುವ ಅಂಶಗಳು ಸಾಕಷ್ಟಿವೆ.
ಪ್ರತಿದಿನದ ಪರೀಕ್ಷೆಯ ಸಂಖ್ಯೆಯು ಸರಿಸುಮಾರು 7 ಲಕ್ಷ ತಲುಪಿದೆ. ಈ ಸಂಖ್ಯೆಯು ದಿನವೂ ಏರುತ್ತಲೇ ಇದೆ.


ಆರಂಭದಲ್ಲಿಯೇ ಸೋಂಕು ಪತ್ತೆ ಮತ್ತು ಹರಡುವಿಕೆ ತಡೆಗೆ ಇದು ಸಹಕಾರಿ. ಕೋವಿಡ್‌ನಿಂದಾಗುವ ಸಾವಿನ
ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆ ಇದೆ ಮತ್ತು ಅದು ಇನ್ನಷ್ಟು ತಗ್ಗುತ್ತಿದೆ ಎಂಬುದು ಆಶಾದಾಯಕ
ಅಂಶ ಎಂದು ಪ್ರಧಾನಿ ಹೇಳಿದರು.


ಪರೀಕ್ಷೆ ಪ್ರಮಾಣ ಕಡಿಮೆ ಇದ್ದು, ಸೋಂಕು ಪತ್ತೆ ಪ್ರಮಾಣ ಹೆಚ್ಚು ಇರುವ ರಾಜ್ಯಗಳು ಪರೀಕ್ಷೆಯನ್ನು
ಹೆಚ್ಚಿಸಿ ಬೇಕಾದ ಅಗತ್ಯ ಇದೆ ಎಂಬುದರತ್ತ ಮೋದಿ ಬೊಟ್ಟು ಮಾಡಿದರು. ವಿಶೇಷವಾಗಿ ಬಿಹಾರ. ಗುಜರಾತ್‌
ಉತ್ತರ ಪ್ರದೇಶ, ಪಶ್ರಿಮ ಬಂಗಾಳ ಮತ್ತು ತೆಲಂಗಾಣ ಈ ದೆಸೆಯಲ್ಲಿ ಯೋಚಿಸಬೇಕು. ದೇಶದಲ್ಲಿ ಪ್ರಕರಣಗಳ
ಸರಾಸರಿ ಏರಿಕೆಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳು ಪರೀಕ್ಷೆಯನ್ನು ಹೆಚ್ಚಿಸುವುದು
ಅನಿವಾರ್ಯ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಭೀಷಣ್‌ ಹೇಳಿದರು.
ಪ್ರಕರಣಗಳು ಮತ್ತು ಸಾವಿನ ಪ್ರಮಾಣವನ್ನು ರಾಜ್ಯಗಳು ನಿಖರವಾಗಿ ವರದಿ ಮಾಡಬೇಕು ಎಂದು ಅವರು
ಹೇಳಿದರು.


ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಆರೋಗ್ಯ ಸಚಿವ
ಹರ್ಷವರ್ಧನ್‌ ವಿಡಿಯೋ ಸಂವಾದದಲ್ಲಿ ಭಾಗಿಯಾದರು.


ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಅವರು
ಕರ್ನಾಟಕವನ್ನು ಪ್ರತಿನಿಧಿಸಿದ್ದರು.


ರಾಜ್ಯಗಳಿಂದ ಹಣಕಾಸು ನೆರವಿನ ಬೇಡಿಕೆ:-ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು
ಮುಖ್ಯಮಂತಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಜೊತೆಗೆ ಈ ಪಿಡುಗು ನಿಯಂತ್ರಣಕ್ಕಾಗಿ ಕೇಂದ್ರದಿಂದ ಹೆಚ್ಚಿನ
ಹಣಕಾಸು ನೆರವಿನ ಬೇಡಿಕೆಯನ್ನೂ ಇರಿಸಿದರು.


ರಾಜ್ಯದ ವರಮಾನವು ಬಜೆಟ್‌ ಅಂದಾಜಿಗಿಂತ ಬಹಳ ಕಡಿಮೆಯಾಗಿದೆ. ಈ ಕೊರತೆಯನ್ನು
ಸರಿದೂಗಿಸಲು ಕೇಂದದಿಂದ ರೂ.9,000 ಕೋಟಿಯ ವಿಶೇಷ ಅನುದಾನ ನೀಡಬೇಕು ಎಂದು ತಮಿಳುನಾಡು
ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ಟಾಮಿ ವಿನಂತಿಸಿದರು.


ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವರಮಾನವು ಶೇ.50ಕ್ಕೆ ಕುಸಿದಿದೆ. ಕೇಂದವು
ಉದಾರವಾಗಿ ಹಣಕಾಸು ನೆರವು ನೀಡಬೇಕು ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌
ಕೋರಿದರು.


ಬಿಹಾರದಲ್ಲಿ ಪರೀಕ್ಷೆ ಸಂಖ್ಯೆಯನ್ನು ದಿನಕ್ಕೆ ಒಂದು ಲಕ್ಷಕ್ಕೆ ಏರಿಸಲಾಗುವುದು ಎಂದು ಅಲ್ಲಿನ
ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದರು.


ಕೇಂದ್ರದಿಂದ ರೂ.4135 ಕೋಟಿ ಜಿ.ಎಸ್‌.ಟಿ ಪರಿಹಾರ ಬಾಕಿ ಇದೆ. ಒಟ್ಟು ರೂ.53 ಸಾವಿರ ಕೋಟಿ
ಕೇಂದ್ರದಿಂದ ಬರಬೇಕಿದೆ. ಈ ಮೊತ್ತವನ್ನು ಬೇಗನೆ ನೀಡುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ
ಬ್ಯಾನರ್ಜಿ ಕೋರಿದರು.


ಆಧಾರ:ಪ್ರಜಾವಾಣಿ, ದಿನಾಂಕ:12.08.2020
30. ರೂ.8,722 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿ ಖರೀದಿಗೆ ಒಪ್ಪಿಗೆ
ಭಾರತೀಯ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಹಾಗೂ ಆತ್ಮನಿರ್ಭರ ಭಾರತದ


ಮೆ


ನಿರ್ಮಾಣದ ನಿಟ್ಟಿನಲ್ಲಿ ಬರೋಬ್ಬರಿ ರೂ.8772. 38 ಕೋಟಿಗಳ ರಕ್ಷಣಾ ಸಾಮಗಿಗಳ ಖರೀದಿ ಪ್ರಸ್ತಾಪಕ್ಕೆ ರಕ್ಷಣಾ
ಖರೀದಿ ಮಂಡಳಿ (ಡಿಎಸಿ) ಒಪಿಗೆ ನೀಡಿದೆ.


ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಡಿಎಸಿ ಸಭೆಯಲ್ಲಿ ಈ ನಿರ್ಧಾರ
ಕೈಗೊಳ್ಳಲಾಗಿದೆ. ವಿಶೇಷವೆಂದರೆ ಈ ಪೈಕಿ ಕೆಲಸವನ್ನು ಭಾರತೀಯ ಪಿಎಸ್‌ಯು (ಸರ್ಕಾರಿ ಸ್ಥಾಮ್ಯದ
ಸಂಸ್ಥೆಗಳು)ಗಳಿಂದಲೇ ಖರೀದಿ ಮಾಡಲು ನಿರ್ಧರಿಸಲಾಗಿದೆ.


ಎಚ್‌ಎಎಲ್‌, ಬಿಎಚ್‌ ಇಎಲ್‌ನಿಂದ ಖರೀದಿ: ಪ್ರಸ್ತಾವನೆಯ ಪ್ರಕಾರ ಭಾರತೀಯ ವಾಯುಪಡೆಗೆ ಅಗತ್ಯವಾಗಿರುವ
106 ತರಬೇತಿ ವಿಮಾನಗಳನ್ನು ಸರ್ಕಾರಿ ಸ್ಥಾಮ್ಯದ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)
ನಿಂದ ಖರೀದಿಸಲಾಗುತ್ತದೆ. ಈ ವಮಾನಗಳನ್ನು ವಾಯುಪಡೆಯ ಯೋಧರ ಆರಂಭಿಕ ತರಬೇತಿಗೆ
ಬಳಸಲಾಗುತ್ತದೆ. ಆದೇ ರೀತಿ ಸೂಪರ್‌ ರ್ಯಾಪಿಡ್‌ ಗನ್‌ ಮೌಂಟ್‌ (ಎಸ್‌ಆರ್‌ಜಿಎಂ)ನ ಮೇಲ್ಲರ್ಜೆಗೇರಿಸಿದ
ಆವೃತ್ತಿಯನ್ನು ಬಿಎಚ್‌ಇಎಲ್‌ನಿಂದ ಖರೀದಿಸಲು ಡಿಎಸಿ ನಿರ್ಧರಿಸಿದೆ. ನೌಕಾಪಡೆ ಹಾಗೂ ಕರಾವಳಿ ರಕ್ಷಕ
ಪಡೆಯ ಸಮರನೌಕೆಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ. ಸೇನೆಗೆ ಅಗತ್ಯವಿರುವ 125 ಎಂಎಂ, ಎಪಿಎಫ್‌,
ಎಸ್‌ಡಿಎಸ್‌ (ಆರ್ಮರ್‌ ಪಿಯರ್ಸಿಂಗ್‌ ಫಿನ್‌ ಸೆಬಿಲೈಸ್ಟ್‌ ಡಿಸ್ಫಾರ್ಡಿಂಗ್‌ ಸ್ಯಾಬೋಟ್‌) ಖರೀದಿಗೂ ಒಪ್ಪಿಗೆ
ನೀಡಿದೆ.


ಮೇಕ್‌ ಇನ್‌ ಇಂಡಿಯಾಗೆ ಆದ್ಯತೆ ನೀಡುವ ಸಲುವಾಗಿ 101 ರಕ್ಷಣಾ ಸಾಮಗಿಗಳ ಆಮದಿಗೆ ಕೇಂದ್ರ
ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತವು
ಸ್ಥಾವಲಂಬನೆ ಸಾಧಿಸಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು
ಸಾಮಗಿಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದು ಸಚಿವ ರಾಜನಾಥ್‌ ತಿಳಿಸಿದ್ದರು.


ಆಧಾರ:ಉದಯವಾಣಿ, ದಿನಾಂಕ:12.08.2020
31. ದೆಹಲಿಯ ಕೆಂಪುಕೋಟೆಯಲ್ಲಿ 74ನೇ ಸ್ಟಾತಂತ್ರ್ಯ ದಿನಾಚರಣೆ


ಕೆಂಪು ಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು
ರಾಷ್ಟ್ರವನ್ನುದ್ದೇಶಿಸಿ 7ನೇ ಬಾರಿ ಸ್ಥಾತಂತ್ರ್ಯೋತ್ಸವ ದಿನದ ಭಾಷಣ ಮಾಡಲಿದ್ದಾರೆ.
ಆ ~ [@)


ಕೂರೋನಾ ವೈರಸ್‌ ಸಾಂಕ್ರಾಮಿಕ ರೋಗದ ನಡುವೆಯೇ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿರುವ
ಮೋದಿ, ಭಾರತ-ಚೀನಾ ಗಡಿ ಸಂಘರ್ಷ ಮತ್ತು ಆತ್ಮನಿರ್ಭರದ ಭಾರತದ ಕುರಿತು ಮಾತನಾಡುವ ನಿರೀಕ್ಷೆ ಇದೆ.
ಪ್ರತಿಬಾರಿಯೂ ಆಗಸ್ಟ್‌-15ರಂದು ಭಾಷಣದಲ್ಲಿ ಮೋದಿ ಅವರು ಹೊಸ ದೊಡ್ಡ ಯೋಜನೆ, ಸರ್ಕಾರದ
ಸಾಧನೆಯ ವಿವರಗಳನ್ನು ನೀಡುವುದರಿಂದ ಈ ಬಾರಿ ಕೋವಿಡ್‌ ಬಿಕ್ಕಟ್ಟಿನ ನಡುವೆ ದೇಶ ಎದುರಿಸುತ್ತಿರುವ
ಸಮಸ್ಯೆ, ಸವಾಲುಗಳ ಬಗ್ಗೆ ಮೋದಿ ಏನು ಹೇಳಲಿದ್ದಾರೆ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ.


ಕಳೆದ ವರ್ಷದ ಸ್ವಾತಂತ್ಯ ದಿನಾಚರಣೆಯ ಭಾಷಣದಲ್ಲಿ ಮೋದಿ ಅವರು ತ್ರಿವಳಿ ತಲಾಖ್‌ ವಿರುದ್ಧ
ಕಾನೂನು ತರುವ ಕುರಿತು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ
ಸರ್ಕಾರದ ಕ್ರಮವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ್ದರು. ಅಷ್ಟೇ ಅಲ್ಲ ಜನಸಂಖ್ಯಾ ನಿಯಂತ್ರಣ
ಸೇರಿದಂತೆ ದೇಶವು ಸದೃಢ ಅರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹೊಂದಬೇಕೆಂದು ಪ್ರತಿಪಾದಿಸಿದ್ದರು.


ಈ ಹಿಂದೆ ಮೋದಿ ಅವರು ಸರ್ಕಾರದ ನೀತಿ ಮತ್ತು ಯೋಜನೆಗಳಾದ ಜನಧನ್‌ ಹಾಗೂ ಸ್ಟಾರ್ಟ್‌
ಆಫ್‌ ಇಂಡಿಯಾಕ್ಕೆ ಸಂಬಂಧಿಸಿದಂತೆ ಕೆಲ ಘೋಷಣೆಗಳನ್ನು ಪ್ರಕಟಿಸಲು ಸ್ಥಾತಂತ್ಯ ದಿನವನ್ನೇ
ಆರಿಸಿಕೊಂಡಿದ್ದರು.


ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿ ನೇತೃತ್ಸ್ನದ ಸರ್ಕಾರವು ಎರಡನೇ
ವರ್ಷಕ್ಕೆ ಕಾಲಿಟ್ಟಿದೆ. ಆಗಸ್ಟ್ಸ್‌ 5 ರಂದು ಆಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರದ ಭೂಮಿ ಪೂಜೆಯಲ್ಲಿ
ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪ್ರಧಾನಿ ಸ್ವಾತಂತ್ರೋತ್ಸವ ದಿನದ ಭಾಷಣ
ಮಾಡುತ್ತಿದ್ದಾರೆ. ಆತ್ಮನಿರ್ಭರ್‌ ಭಾರತದ ಗುರಿಗಳನ್ನು ಸಾಕಾರಗೊಳಿಸಲು ಈಗಾಗಲೇ ಕೃಷಿ ರಕ್ಷಣಾ ವಲಯ
ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸರ್ಕಾರ ತನ್ನ ಕಮಗಳನ್ನು ಘೋಷಿಸಿದ್ದು, ಹೆಚ್ಚಿನ ಸುಧಾರಣಾ ಕ್ರಮಗಳ ನಿರೀಕ್ಷೆ
ಇದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.


4 ಸಾವಿರಕ್ಕೂ ಹೆಚ್ಚು ಜನರಿಗೆ ಆಹ್ನಾನ: ಕೆಂಪು ಕೋಟೆಯಲ್ಲಿ ಆಗಸ್ಟ್‌-15ರಂದು ನಡೆಯಲಿರುವ ಸ್ಪಾತಂತ್ರ್ಯ


ದಿನಾಚರಣೆ ಕಾರ್ಯಕ್ರಮಕ್ಕೆ ರಾಜತಾಂತಿಕರು, ಅಧಿಕಾರಿಗಳು ಮತ್ತು ಮಾಧ್ಯಮ ಸಿಬ್ಬಂದಿ ಸೇರಿದಂತೆ 4
ಸಾವಿರಕ್ಕೂ ಹೆಚ್ಚು ಜನರನ್ನು ಆಹ್ಹಾನಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ.


100


ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಚಿಕ್ಕಮಕ್ಕಳ ಬದಲು ಎನ್‌ಸಿಸಿ ಕೆಡೆಟ್‌ಗಳಿಗೆ
ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಚಿಕ್ಕಮಕ್ಕಳಿಗೆ 'ಜ್ಞಾನಪಥ”ದಲ್ಲಿ ಆಸನಗಳ ವ್ಯವಸ್ಥೆ
ಮಾಡಲಾಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.


ಕೋವಿಡ್‌-19 ಕಾರಣಕ್ಕಾಗಿ ಪ್ರತಿ ಎರಡು ಆಸನಗಳ ಮಧ್ಯೆ ಕನಿಷ್ಠ ಎರಡು ಗಜದ ಅಂತರವನ್ನು
ಕಾಯ್ದಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಆಹ್ಲಾನಿತರೆಲ್ಲರೂ ಕಡ್ಡಾಯವಾಗಿ ಮುಖಗವಸುಗಳನ್ನು (ಮಾಸ್ಕ್‌)
ಧರಿಸಬೇಕೆಂದು ಕೋರಲಾಗಿದೆ. ವಿತರಣೆಗೆ ಅನುಕೂಲವಾಗುವಂತೆ ವಿವಿಧ ಸ್ಥಳಗಳಲ್ಲಿ ಮಾಸ್ಕ್‌ ಹಾಗೂ
ಸ್ಕಾನಿಟೈಸರ್‌ಗಳನ್ನು ಇರಿಸಲಾಗಿದೆ. ಇವುಗಳ ಬಗ್ಗೆ ಆಹ್ನಾನಿತರ ಗಮನ ಸೆಳೆಯಲು ಅಲ್ಲಲ್ಲಿ ಸೂಚನಾ
ಫಲಕಗಳನ್ನೂ ಅಳವಡಿಸಲಾಗಿದೆ ಎಂದು ಸಚಿವಾಲಯವು ವಿವರಿಸಿದೆ.


ಆಧಾರ:ಪ್ರಜಾವಾಣಿ ದಿನಾಂಕ:15.08.2020
32. ಡಿಜಿಟಲ್‌ ಆರೋಗ್ಯ ಮಿಷನ್‌ಗೆ ಚಾಲನೆ


ಭಾರತದ 74ನೇ ಸ್ಪಾತಂತ್ರೋತ್ಸವ ದಿನಾಚರಣೆಯ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು
ರಾಷ್ಟೀಯ ಡಿಜಿಟಲ್‌ ಆರೋಗ್ಯ ಮಿಷನ್‌ಗೆ ಚಾಲನೆ ನೀಡಿದರು.


ಈ ಯೋಜನೆಯನ್ವಯ ಪ್ರತಿಯೊಬ್ಬರಿಗೂ ಒಂದು ಆರೋಗ್ಯ ಗುರುತಿನ ಡಿಜಿಟಲ್‌ ಕಾರ್ಡ್‌
ನೀಡಲಾಗುವುದು. ಅದರಲ್ಲಿ ಅವರ ಆರೋಗ್ಯದ ವಿವರಗಳನ್ನು ದಾಖಲಿಸಲಾಗುತ್ತದೆ. ಈ ಕಾರ್ಡ್‌ನ್ನು ಯಾವುದೇ
ಕ್ಲಿನಿಕ್‌ ಅಥವಾ ಔಷಧ ಅಂಗಡಿಗೆ ತೋರಿಸಿದರು ಅವರಿಗೆ ಮಾಹಿತಿ ದೊರೆಯುತ್ತದೆ. ಆರೋಗ್ಯ ಸೇವೆಗಳನ್ನು
ಪಡೆಯುವಾಗ ಈ ಕಾರ್ಡ್‌ ಬಳಸಬಹುದಾಗಿದೆ ಎಂದು ಮೋದಿ ತಿಳಿಸಿದರು.


ಹೆಚ್ಚು ಗಮನ ಸೆಳದ ಮತ್ತೊಂದು ಅಂಶವೆಂದರೆ ಮಹಿಳೆಯರ ಸಬಲೀಕರಣ, ಮಹಿಳೆಯರ ಆರೋಗ್ಯ
ಸುಧಾರಿಸುನ ನಿಟ್ಟಿನಲ್ಲಿ ಕೇವಲ ಒಂದು ರೂಪಾಯಿಗೆ ಒಂದು ಸ್ಯಾನಿಟರಿ ಪ್ಯಾಡ್‌ ನೀಡುತ್ತಿರುವ ಬಗೆ
ಪ್ರಸ್ತಾಪಿಸಿದರು.
ದೇಶದಲ್ಲಿರುವ 6 ಸಾವಿರ ಜನೌಷಧಿ ಕೇಂದ್ರಗಳ ಮೂಲಕ ಹೆಣ್ಣುಮಕ್ಕಳು ಕೇವಲ ಒಂದು ರೂಪಾಯಿಗೆ
ಸ್ಯಾನಿಟರಿ ಪ್ಯಾಡ್‌ ಪಡೆದುಕೊಳ್ಳುತ್ತಿದ್ದಾರೆ ನೌಕಪಡೆ, ವಾಯುಪಡೆಗಳಲ್ಲಿ ಮಹಿಳೆಯರನ್ನು ನೇಮಕ
ಮಾಡಿಕೊಳ್ಳಲಾಗುತ್ತದೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ನಾಯಕತ್ವ ವಹಿಸುತ್ತಿದ್ದಾರೆ. ತ್ರಿವಳಿ ತಲಾಖ್‌ನ್ನು
ರದ್ದುಪಡಿಸಿದ್ದೇವೆ. ಸ್ತೀಯರ ವಿವಾಹದ ಕನಿಷ್ಠ ವಯೋಮಿತಿಯ ಪುನರ್‌ ಪರಿಶೀಲನೆಗೆ ಸಮಿತಿ ರಚಿಸಿದ್ದು,
ಸಮಿಶಿ ವರದಿ ಸಲ್ಲಿನಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿರುವುದಾಗಿ ಅವರು ತಿಳಿಸಿದರು.


ನೂತನ ಶಿಕ್ಷಣ ನೀತಿ ಬಗ್ಗೆ ಪ್ರಸ್ತಾಪಿಸಿದ ಅವರು ಮಕ್ಕಳು ತಮ್ಮ ಮೂಲ ಬೇರಿನೊಂದಿಗೆ ಸಂಪರ್ಕಿಸಲು
ಇದು ನೆರವಾಗುತ್ತದೆ ಎಂದರು.


ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:16.08.2020
33. ಉದ್ಯೋಗ ಸೃಷ್ಟಿಗೆ ಒತ್ತು


ಕಳೆದ ಮೂರು ದಿನ ಸಣ್ಣಿ ಮತ್ತು ಮಧ್ಯಮ ಕೈಗಾರಿಕೆಗಳು, ಕೃಷಿ, ಮೀನುಗಾರಿಕೆ ಸೇರಿದಂತೆ ದೇಶದ
ಪ್ರಮುಖ ವಲಯಗಳ ಅಭಿವೃದ್ದಿಗಾಗಿ ಪ್ಯಾಕೇಜ್‌ ಘೋಷಣೆ ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌,
ನಾಲ್ಕನೇ ಕಂತಿನ ಪ್ಯಾಕೇಜನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಎಂಟು ವಲಯಗಳ ರಚನಾತ್ಮಕ ಸುಧಾರಣೆಗೆ ಒತ್ತು
ನೀಡಲಾಗಿದೆ. ಈ ಮೂಲಕ ಬಂಡವಾಳದ ಹರಿವು ಹೆಚ್ಚುವಂತೆ ಮತ್ತು ಉದ್ಯೋಗ ಸೃಷ್ಟಿ ವೃದ್ಧಿಗೊಳಿಸುವತ್ತ
ಸಚಿವರು ಗಮನ ಹರಿಸಿದ್ದಾರೆ.


ಕಲ್ಲಿದ್ದಲಿಗೆ ಯಾರ ಹಂಗಿಲ್ಲ:- ದೇಶದಲ್ಲಿ ಭಾರೀ ಪ್ರಮಾಣದ ಕಲ್ಲಿದ್ದಲು ಅದಿರಿನ ಪ್ರಮಾಣ ಹೊಂದಿದ್ದರೂ
ಇಂದಿಗೂ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ಮನಗಂಡು ದೇಶೀಯ ವ್ಯಾಪ್ಟಿಯಲ್ಲೇ
ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಕೈಯಲಿದ್ದ


101


ಏಕ ಸ್ಹಾಮ್ಯತೆಯನ್ನು ತೆಗೆದು ಖಾಸಗಿಯವರ ಪ್ರವೇಶಕ್ಕೂ ಅನುವು ಮಾಡಿಕೊಡಲಾಗಿದೆ. ಈ ವಲಯದ ಮೂಲ
ಸೌಕರ್ಯಕ್ಕಾಗಿ ರೂ.50 ಸಾವಿರ ಕೋಟಿ ನೀಡಲು ಉದ್ದೇಶಿಸಲಾಗಿದೆ.


» ಈ ಕೂಡಲೇ 50 ಬ್ಲಾಕ್‌ ಹರಾಜಿಗೆ ಲಭ್ಯ
> ಆದಾಯ ಹಂಚಿಕೆ ಮಾದರಿಯಲ್ಲಿ ಗಣಿಗಾರಿಕೆ
> ಅನಿಲ ರೂಪದಲ್ಲಿ ಕಲ್ಲಿದ್ದಲು ಹೊರತೆಗೆಯುವುದು, ಪರಿಸರಕ್ಕೆ ಹೆಚ್ಚನ ಹಾನಿ ಇಲ್ಲ.


ದೇಶದಲ್ಲಿ ವಿಪುಲ ಪ್ರಮಾಣದ ಖನಿಜಗಳಿದ್ದು, ಇವುಗಳ ಬಳಕೆಗೆ ಆಸ್ತದ ನೀಡಲಾಗಿದೆ. ಇದಕ್ಕಾಗಿ ಖನಿಜಗಳ
ಪರಿಶೋಧನೆ, ಗಣಿಗಾರಿಕೆ ಮತ್ತು ಉತ್ಪಾದನೆಯನ್ನು ಸಂಯೋಜನೆಗೊಳಿಸಲಾಗಿದೆ.


> ಈ ಕೂಡಲೇ 500 ಗಣಿ ಬ್ಲಾಕ್‌ಗಳು ಹರಾಜು

> ಮುಕ್ತ ಮತ್ತು ಪಾರದರ್ಶಕ ಹರಾಜು ಪಕ್ರಿಯೆ

pa ಬಾಕ್ಸೈಟ್‌ ಮತ್ತು ಕಲ್ಲಿದ್ದಲು ಒಳೆಗೊಂಡ ಜಂಟಿ ಹರಾಜು
ps ಆಲ್ಯೂಮಿನಿಯಂ ಉದ್ಯಮಕ್ಕೆ ಉಪಯೋಗ

ps ಕ್ಯಾಪೀವ್‌, ನಾನ್‌ - ಕ್ಯಾಪ್ಪೀವ್‌ ವ್ಯತ್ಯಾಸವಿಲ್ಲ


ಮೇಕ್‌ ಇನ್‌ ಇಂಡಿಯಾ: ರಕ್ಷಣಾ ಇಲಾಖೆಗೆ ಬೇಕಾಗಿರುವ ಆಯುಧಗಳ ಉತ್ಪಾದನೆಯಲ್ಲಿ ಇನ್ನು ಮುಂದೆ
ಹೊರದೇಶಗಳ ಅವಲಂಬನೆ ಬೇಡ ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಕೆಲವೊಂದು ಹೈಟೆಕ್‌ ಶಸ್ತ್ರಾಸ್ತ್ರ
ಹೊರತುಪಡಿಸಿ ಉಳಿದ ಆಯುಧಗಳ ಆಮದಿಗೆ ನಿಷೇಧ ಹೇರಿದೆ.


> ಸದ್ಯದಲ್ಲೇ ಆಮದು ನಿಷೇಧಪಟ್ಟಿಗೆ ಸೇರುವ ಶಸ್ತ್ರಾಸ್ತ್ರಗಳ ಪಟ್ಟಿ ಬಿಡುಗಡೆ
» ಆಮದು ಮಾಡಿಕೊಳ್ಳುವ ಬಿಡಿ ಭಾಗಗಳನ್ನು ಸ್ಥಳೀಯವಾಗಿ ತಯಾರಿಸುವುದು.


» ಆಯುಧಗಳ ಫ್ಯಾಕ್ಷರಿ ಮಂಡಳಿಯನ್ನು ಕಾರ್ಪೋರೈಟೇಸೇಶನ್‌ ಮಾಡುವುದು (ಆದರೆ ಇದು
ಖಾಸಗೀಕರಣವಲ್ಲ)


ರಕ್ಷಣಾ ಇಲಾಖೆಯಲ್ಲಿನ ವಿದೇಶಿ ನೇರ ಬಂಡವಾಳ ಪ್ರಮಾಣ ಶೇ.49 ರಿಂದ ಶೇ.74ಕ್ಕೆ ಏರಿಕೆ.
ಬಾಹ್ಯಾಕಾಶ ರಂಗದಲ್ಲಿ ಖಾಸಗೀಕರಣ ಉಪಗ್ರಹ ಉಡಾವಣೆಗೆ ಅವಕಾಶ
ಸಾಮಾಜಿಕ ಮೂಲಸೌಕರ್ಯ ಯೋಜನೆಗಳಿಗೆ ರೂ.8100 ಕೋಟಿ ಅನುದಾನ


ಕೇಂದ್ರಾಡಳಿತ ಪ್ರದೇಶಗಳಲ್ಲಿನ ಡಿಸ್ವಾಂ ಕಂಪನಿಗಳ ಖಾಸಗೀಕರಣ


VW VY VY VY VY


ವೈದ್ಯಕೀಯ ಕ್ಷೇತಕಾಗಿ ಅಣು ಕೇತದಲೂ ಖಾಸಗಿಯವರ ಪವೇಶಕೆ ಅನುಮತಿ
ಖ್‌ Ww Ge ೨ ರ


ಇನ್ನಷ್ಟು ವಿಮಾನ ನಿಲ್ದಾಣ ಖಾಸಗಿಗೆ:- ಈಗಾಗಲೇ 6 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಮತ್ತು ಖಾಸಗಿ
ಸಹಭಾಗಿತ್ಸದಡಿ ನೀಡಲಾಗಿದ್ದು, ಮೂರನ್ನು ಕಾರ್ಯಾಚರಣೆಗೆ ನೀಡಲಾಗಿದೆ. ಈ ವಿಮಾನ ನಿಲ್ದಾಣಗಳಿಂದ
ವಾರ್ಷಿಕ ರೂ.।! ಸಾವಿರ ಕೋಟಿ ಆದಾಯ ಬರುತ್ತಿದೆ. 2ನೇ ಹಂತದಲ್ಲಿ ಇನ್ನೂ 6 ವಿಮಾನ ನಿಲ್ದಾಣಗಳನ್ನು
ಖಾಸಗಿಗೆ ನೀಡಲಾಗುತ್ತದೆ. ಇವುಗಳ ಬಿಡ್ಡಿಂಗ್‌ ಪ್ರಕ್ರಿಯೆ ತಕ್ಷಣವೇ ಶುರುವಾಗಲಿದೆ. ಜೊತೆಗೆ ದೇಶಾದ್ಯಂತ
ಇನ್ನಷ್ಟು ವಿಮಾನಗಳನ್ನು ಓಡಿಸಲು ಏರಸ್ಟೇಸ್‌ ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ವಾರ್ಷಿಕ
ರೂ.1000ಕೋಟಿ ಉಳಿತಾಯವಾಗಲಿದೆ.


ದೇಶಿಯ ನಿರ್ವಹಣೆ ಮತ್ತು ದುರಸ್ತಿ: ಸದ್ಯ ದೇಶದಲ್ಲಿ ವಿಮಾನಗಳ ನಿರ್ವಹಣೆ ಮತ್ತು ದುರಸಿಗೆ ಬೇಕಾದ
ಸೌಲಭ್ಯಗಳಿಲ್ಲ. ಇವುಗಳನ್ನು ವಿದೇಶದ ಸಹಾಯದಿಂದ ಮಾಡುತ್ತಿದ್ದೇವೆ. ಕಳೆದ 3 ವರ್ಷಗಳಲ್ಲಿ ಇದಕ್ಕಾಗಿಯೇ


102


ರೂ.2000 ಕೋಟಿ ವೆಚ್ಚ ಮಾಡಲಾಗಿದೆ. ಈ ವಲಯದಲ್ಲಿ ಅಂದರೆ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು
ಪರೀಕ್ಷೆಗೆ ಬೇಕಾದ ವ್ಯವಸ್ಥೆ ಮಾಡಿದರೆ ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಉಳಿತಾಯವಾಗುತ್ತದೆ.


ಆಧಾರ : ಉದಯವಾಣಿ, ದಿನಾಂಕ:17.08.2020

34. ಅನ್ನು ಏಕ ಎಕ್ಸಾಂ
ದೇಶದ ಉನ್ನತ ಶಿಕ್ಷಣಕ್ಕೆ ರಾಷ್ಟ್ರವ್ಯಾಪಿ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ
ರೀತಿಯಲ್ಲೇ ವಿವಿಧ ಸರ್ಕಾರಿ ವಲಯಗಳಲ್ಲಿ ಯುವ ಜನರ ನೇಮಕಾತಿಗಾಗಿ ರಾಷ್ಟ್ರಾದ್ಯಂತ ಒಂದೇ ನೇಮಕ
ಪರೀಕ್ಷೆ ನಡೆಸುವ ಕಾಂತಿಕಾರಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದರಿಂದ ಕೇಂದ್ರ ಸರ್ಕಾರದ


20ಕ್ಕೂ ಹೆಚ್ಚು ವಲಯಗಳಲ್ಲಿನ ಉದ್ಯೋಗಗಳಿಗಾಗಿ ವರ್ಷದಲ್ಲಿ ನಡೆಸಲಾಗುತ್ತಿದ್ದ ಹಲವಾರು ಪರೀಕ್ಷೆಗಳಿಗಾಗಿ
ಸಿದ್ದತೆ ನಡೆಸುವ ಜಂಜಾಟದಿಂದ ಕೋಟ್ಯಂತರ ಯುವಜನರು ಮುಕ್ತಿ ಹೊಂದಲಿದ್ದಾರೆ.


ಏಕೈಕ ನೇಮಕ ಪರೀಕ್ಷೆಗಾಗಿ ರಾಷ್ಟ್ರೀಯ ನೇಮಕ ಏಜೆನ್ಸಿಯನ್ನು (ಎನ್‌ಆರ್‌ಎ) ರಚಿಸಲು ಕೇಂದ್ರ
ಸರ್ಕಾರ ತೀರ್ಮಾನಿಸಿದ್ದು ಈ "ಏಿರಿತಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ
ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.


ಸಂಪುಟದ ಒಪ್ಪಿಗೆಯ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌
ಈ ವಿಚಾರವನ್ನು ತಿಳಿಸಿದ್ದಾರೆ.


ಅನುದಾನ ಬಿಡುಗಡೆ:- ಏಜೆನ್ಸಿ ರಚನೆಗೆ ಕೇಂದ್ರ ಸರ್ಕಾರ ಈಗಾಗಲೇ ರೂ.115,17.58 ಕೋಟಿಗಳನ್ನು ಬಿಡುಗಡೆ
ಮಾಡಿದೆ. ಈ ಹಣವನ್ನು ಆಯೋಗದ ಮುಂದಿನ ಮೂರು ವರ್ಷಗಳ ನಿರ್ವಹಣೆಗೆ ಬಳಸಲು
ನಿರ್ಧರಿಸಲಾಗಿದೆ. ಆರಂಭದಲ್ಲಿ 117 ಜಿಲ್ಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲು ಎನ್‌ಆರ್‌ಎ ಗೆ ಬೇಕಾದ ಖರ್ಚು-
ವೆಚ್ಚಗಳನ್ನು ಪ್ರತ್ಯೇಕವಾಗಿ ಸರ್ಕಾರವೇ ನೀಡುತ್ತದೆ.


ಕಬ್ದಿನ ಬೆಂಬಲ ಬೆಲೆ:- 2020-21ನೇ ವರ್ಷಕ್ಕೆ ಅನ್ವಯಿಸುವಂತೆ ಕಬ್ಬಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ
ಘೋಷಿಸಿದೆ. ಕಬ್ಬಿನ ಪ್ರತಿ ಕ್ಲಿಂಟಲ್‌ ಮೇಲಿನ ಮೂಲಬೆಲೆಗೆ ಹೆಚ್ಚಳವಾಗಿ ರೂ.285ಗಳ ಬೆಲೆ ನೀಡುವ
ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಸಕ್ಕರೆ ಕಾರ್ಯಾನೆಗಳಿಂದ ಕಬ್ಬು ಬೆಳೆಗಾರರಿಗೆ ಉತ್ತಮ
ಮೌಲ್ಯ ಸಿಗಲಿದೆ.


ನರೇಂದ್ರ ಮೋದಿ, ಪ್ರಧಾನಿ:- ವರ್ಷದಲ್ಲಿ ಹತ್ತಾರು ಪರೀಕ್ಷೆಗಳನ್ನು ಬರೆಯುವ ಬದಲು ಇನ್ನು ಒಂದೇ ಪರೀಕ್ಷೆಯ
ಮೂಲಕ ಕೇಂದ್ರದ ನೌಕರಿಗಳನ್ನು ಪಡೆಯಬಹುದಾಗಿದೆ ಹಾಗೂ ಇದರಿಂದ ಕೋಟ್ಯಂತರ ಯುವಜನರಿಗೆ
ನೆರವಾಗಲಿದೆ ಎಂದು ಹೇಳಿದ್ದಾರೆ.


>» ರಾಷ್ಟ್ರವ್ಯಾಪಿಯಾಗಿ ದಶಕಗಳಿಂದ ನಡೆಯುತ್ತಿದ್ದ ಬಹು ಪರೀಕ್ಷಾ ಮಾದರಿಗೆ ಇತಿಶ್ರೀ.
> ವರ್ಷಕ್ಕೆ ಹಲವು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರಿಂದ ಯುವಜನರಿಗೆ ಮುಕ್ತಿ.
> ಪರೀಕ್ಷೆ ತೆಗೆದುಕೊಳ್ಳುವ ಮಿತಿ ರದ್ದು ಸೇರಿ ಹಲವಾರು ಅನುಕೂಲಗಳು.

ಪ್ರತಿಕೂಲ ಅನುಕೂಲಗಳು:-


> ಪೌಢಶಿಕ್ಷಣ, 12ನೇ ತರಗತಿ ಹಾಗೂ ಪದವಿ - ಈ ಮೂರು ಹಂತಗಳಲ್ಲಿ ಪ್ರತಿ ವರ್ಷ ನೇಮಕ
ಪರೀಕ್ಷೆ.
W

> ಸಿಬ್ನಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಹಾಗೂ

ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ಸೇರಿ 20ಕ್ಕೂ ಹೆಚ್ಚು ಪರೀಕ್ಷೆಗಳು ಇನ್ನು
ಇರಲ್ಲ.


> ಅಭ್ಯರ್ಥಿಗಳಿಗೆ ಖರ್ಚು ವೆಚ್ಚ ಉಳಿತಾಯ, ಬಡ ಗ್ರಾಮೀಣ ಆಭ್ಯರ್ಥಿಗಳಿಗೆ ಅನುಕೂಲ.


103


> ತಮ್ಮಿಷ್ಟದ ಪರೀಕ್ಷಾ ಕೇಂದ್ರಗಳನ್ನು ಆಯ್ದುಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ.


> ಅಭ್ಯರ್ಥಿ ಗಳಿಸಿದ ಅಂಕ ಅಥವಾ ರ್ಯಾಂಕ್‌, ಪರೀಕ್ಷಾ ಫಲಿತಾಂಶ ಹೊರಬಿದ್ದ ದಿನಾಂಕದಿಂದ
ಮೂರು ವರ್ಷಗಳವರೆಗೆ ಮಾನ್ಯವಾಗಿರುತದೆ.


> ಅಭ್ಯರ್ಥಿಗೆ ವಯೋಮಿತಿ ಇರಲಿದೆಯಾದರೂ ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ


ಬರೆಯಬಹುದು.


> ಎಸ್‌ಸ್ಟಿ ಎಸ್‌ಟಿ ಓಬಿಸಿ ಅಭ್ಯರ್ಥಿಗಳ ವಯೋಮಿತಿಯಲ್ಲಿ ರಿಯಾಯಿತಿ ಉಂಟು.


ಪರೀಕ್ಷೆ - ನೇಮಕಾತಿ ಸ್ವರೂಪ: ಹೊಸದಾಗಿ ರಚನೆಯಾಗುವ ಎನ್‌ಆರ್‌ಎ ವತಿಯಿಂದ ಕೇಂದ್ರ ಸರ್ಕಾರದ
ಏವಿದ ಇಲಾಖೆಗಳ “ಬಿ” "ಮತ್ತು "ಸಿ' ಗುಂಪಿನ ತಾಂತ್ರಿಕೇತರ ಹುದ್ದೆಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಒಂದೇ ರೀತಿಯ
ಪ್ರವೇಶ ಪರೀಕ್ಷೆ (ಸಿಇಟಿ) ಆಧಾರದಲ್ಲಿ ಸಂದರ್ಶನ ಅಥವಾ ನೇರ "ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೆ
ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಹಾಗೂ ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಲ y
ಪ್ರತಿನಿಧಿಗಳು ಇರಲಿದ್ದಾರೆ.


ಆಧಾರ:ಉದಯವಾಣಿ, ದಿನಾಂಕ:20.08.2020
35. 3 ತಿಂಗಳ ನಿರುದ್ಯೋಗ ಭತ್ಯೆ : ಕೇಂದ್ರದಿಂದ ನಿಯಮ ಸಡಿಲಿಕೆ


ಕೊರೋನಾ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡಿರುವ ಲಕ್ಷಾಂತರ ಕಾರ್ಮಿಕರಿಗೆ
ನಿರುದ್ಯೋಗ ಭತ್ಯೆಯಾಗಿ ಮೂರು ತಿಂಗಳವರೆಗೆ ಶೇ.50 ರಷ್ಟು ವೇತನವನ್ನು ನೀಡುವ ನಿಯಮವನ್ನು ಕೇಂದವು
ಸಡಿಲಿಸಿದೆ. ಕೊರೋನಾ ಲಾಕ್‌ಡೌನ್‌ ಪ್ರಭಾವದಿಂದಾಗಿ ಉದ್ಯೋಗ ಕಳೆದುಕೊಂಡ ಅಥವಾ ಉದ್ಯೋಗ
ಕಳೆದುಕೊಳ್ಳುವ ಹಾದಿಯಲ್ಲಿರುವ ರಾಜ್ಯ ವಿಮಾ ನಿಗಮದ ಸದಸ್ಯರಾಗಿರುವ ಕೈಗಾರಿಕಾ ಕಾರ್ಮಿಕರಿಗೆ ಈ
ಕ್ರಮವು ಒಂದು ದೊಡ್ಡ ಪರಿಹಾರವಾಗಿದೆ.


ಸಾಂಕ್ರಾಮಿಕ ರೋಗದಿಂದ ತೀವವಾಗಿ ತತ್ತರಿಸಿರುವ ಕಾರ್ಮಿಕರಿಗೆ ವೇತನ ಪರಿಹಾರ ನೀಡುವಂತೆ
ಹಲವಾರು ವಿಭಾಗಗಳು ಬೇಡಿಕೆ ಇಟ್ಟಿದ್ದವು. ಕಳೆದ ಎರಡು ತಿಂಗಳ ಹಿಂದೆ ಹಣಕಾಸು ಸಚಿವಾಲಯ ಮತ್ತು
ನೀತಿ ಆಯೋಗ ನಿಯಮಗಳನ್ನು ಸಡಿಲಿಸಬೇಕೆಂದು ಒತ್ತಾಯಿಸಿದ್ದವು.


ಅಟಲ್‌ ಬಿಮಿತ್‌ ವ್ಯಕ್ತಿ ಕಲ್ಯಾಣ್‌ ಯೋಜನಾ ಯೋಜನೆಯನ್ನು ಮಾರ್ಪಡಿಸುವ ಮೂಲಕ
ಪರಿಚಯಿಸಲಾಗಿದೆ. ಇಎಸ್‌ಐಸಿ ಯೋಜನೆಯು ನಿಗದಿತ ಮಿತಿಯವರೆಗೆ ಗಳಿಸುವ ಕಾರ್ಮಿಕರನ್ನು
ಒಳಗೊಳ್ಳುತ್ತದೆ ಮತ್ತು ಅವರಿಗೆ ನಿರುದ್ಯೋಗ ಭತ್ಯೆಗೆ ಅರ್ಹತೆ ನೀಡುತ್ತದೆ.


ಯೋಜನೆಯಡಿಯಲ್ಲಿ ಹಿಂದಿನ ನಾಲ್ಕು ಕೊಡುಗೆ ಅವಧಿಯಲ್ಲಿ ಗಳಿಸುವ ದಿನಕ್ಕೆ ಸರಾಸರಿ ಶೇ.25 ರಷ್ಟು
ಪರಿಹಾರವನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಜೀವಿತಾವಧಿಯಲ್ಲಿ ಗರಿಷ್ಠ 9೦ ದಿನಗಳ ನಿರುದ್ಯೋಗ
ಭತ್ಯೆಯನ್ನು ಪಾವತಿಸಲಾಗುತ್ತದೆ. ಇದನ್ನು ಈಗ ಶೇ.50ಕ್ಕೆ ಏರಿಸಲಾಗಿದೆ.


ಪರಿಹಾರದ ಅವಧಿಯಲ್ಲಿ ವಿಮೆ ಮಾಡಿದ ವ್ಯಕ್ತಿ ನಿರುದ್ಯೋಗಿಯಾಗಿರಬೇಕು ಅವನು/ಅವಳು
ನಿರುದ್ಯೋಗಕ್ಕೆ ಮೊದಲ ಕನಿಷ್ಠ 2 ವರ್ಷಗಳವರೆಗೆ ವಿಮೆ ಮಾಡಲಾದ ಉದ್ಯೋಗದಲ್ಲಿರಬೇಕು. ಹಿ೦ದಿನ ನಾಲ್ಕು
ಪಾವತಿ ಅವಧಿಗಳಲ್ಲಿ ವಿಮೆ ಪಾವತಿಸಿರಬೇಕು. ಈ ಹಿಂದಿನ ಷರತ್ತುಗಳು ಉದ್ಯೋಗದಾತರ ಮೂಲಕ
ಸಲ್ಲಿಸಬೇಕಾಗಿತ್ತು. ಈಗ ಇಎಸ್‌ಐಸಿ ಕಛೇರಿಯನ್ನು ಸಂಪರ್ಕಿಸಲು ಅವಕಾಶ: 90 ದಿನಗಳ ನಂತರ
ಪರಿಹಾರವನ್ನು ಪಾವತಿಸುವ ಬದಲು, 30 ದಿನಗಳ ನಂತರ ಪಾವತಿಸುವ ನಿಯಮ ಇದಾಗಿದೆ.


ಮಾರ್ಚ್‌ 24 ರಿಂದ ಡಿಸೆಂಬರ್‌ 31ರವರೆಗಿನ ಅವಧಿಯಲ್ಲಿ ಮೂರು ತಿಂಗಳ (೨90 ದಿನಗಳು)
ಭತ್ಯೆಯನ್ನು ಪಡೆಯಲು ನೌಕರರು ಅರ್ಹರಾಗಿರುತ್ತಾರೆ. ಅವರು ಏಪ್ರಿಲ್‌ 1, 2018ರ೦ದ ಎರಡು ವರ್ಷಗಳ
ಕಾಲ ಇಎಸ್‌ಐ ಯೋಜನೆಯ ಭಾಗವಾಗಿರಬೇಕು. 2019ರ ಆಕ್ಟೋಬರ್‌ 1 ರಿಂದ 2020ರ ಮಾರ್ಚ್‌ 31ರ
ಅವಧಿಯಲ್ಲಿ ಕನಿಷ್ಟ 78 ದಿನಗಳವರೆಗೆ ಮತ್ತು 2018ರ ಏಪ್ರಿಲ್‌ 1 ರಿಂದ ಇತರ ಮೂರು ಆರು ಮಾಸಿಕ
ಕೊಡುಗೆ ಅವಧಿಗಳಲ್ಲಿ ಒಂದಾಗಿರಬೇಕು ಎಂದು ಹೇಳಿದೆ.


104


2021ರ ಜೂನ್‌ 30ರವರೆಗೆ ಈ ಯೋಜನೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಇಎಸ್‌ಐಸಿ
ನಿರ್ಧರಿಸಿದೆ. ಕಾರ್ಮಿಕ ಸಚಿವ ಸಂತೋಷ್‌ ಗಂಗ್ದಾರ್‌ ನೇತೃತ್ನ್ತದ ಇಎಸ್‌ಐಸಿ ಸಭೆಯಲ್ಲಿ
ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಎಎಸ್‌ಐಸಿ ಆಸ್ಪತ್ರೆಗಳಲ್ಲಿ ಒಟ್ಟು ಶೇ.10 ರಷ್ಟು ಹಾಸಿಗೆಗಳಲ್ಲಿ ಐಸಿಯು
ಮತ್ತು ಎಚ್‌ಡಿಯು ಸೇವೆಗಳನ್ನು ಸ್ಥಾಪಿಸಲು ಸಭೆ ನಿರ್ಧರಿಸಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.


ಆಧಾರ:ವಿಶ್ವವಾಣಿ, ದಿನಾಂಕ:22.08.2020
36. ರಕ್ಷಣಾ ತಯಾರಿಕೆಗೆ ಶೇ.74. ಎಫ್‌ಡಿಐ


ರಕ್ಷಣಾ ಕ್ಷೇತ್ರವನ್ನು ಸ್ಥಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ರಕ್ಷಣಾ ತಯಾರಿಕೆ ವಲಯಕ್ಕೆ
ಶೇ.74 ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಪ್ರಧಾನಿ
ನರೇಂದ್ರ ಮೋದಿ ಹೇಳಿದರು.


ಆತ್ಮನಿರ್ಭರ ಭಾರತ ಡಿಫೆನ್ಸ್‌ ಇಂಡಸ್ತಿ ವೆಬಿನಾರ್‌ನ ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಅವರು,
ಸ್ವಯಂಚಾಲಿತ ಹೂಡಿಕೆ ಮಾರ್ಗದಲ್ಲೇ ಬಂಡವಾಳವನ್ನು ಆಕರ್ಷಿಸಲಾಗುತ್ತದೆ. ಜೊತೆಗೆ ರಕ್ಷಣಾ
ಉತ್ಪಾದನೆಯನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನ ಅಭಿವೃದ್ದಿಪಡಿಸಲು ಮತ್ತು ಖಾಸಗಿ ವಲಯದವರಿಗೆ ರಕ್ಷಣಾ
ಕ್ಷೇತ್ರದಲ್ಲಿ ಪ್ರಮುಖ ಪಾತ್ರ ನೀಡಲು ಪ್ರಯತ್ನಿಸಲಾಗುತ್ತಿದೆ. ಮಿಲಿಟರಿಯಲ್ಲಿ ದೇಶೀಯ ಸಾಧನಾ-ಸಲಕರಣೆಗಳನ್ನು
ಹೆಚ್ಚಿಸುವ ದೃಷಿಯಿಂದ ಕೆಲವು ರಕ್ಷಣಾ ವಸ್ತುಗಳ ಆಮದಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.


ಆತ್ಮನಿರ್ಭರ ಅಭಿಯಾನದ ಪ್ರಯತ್ನ ಹಿಂದೂ ಮಹಾಸಾಗರದ ಭಾಗದಲ್ಲಿ ಭದತಾ
ಪೂರೈಕೆದಾರರಾಗುವಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಭಾರತದಲ್ಲಿಯೇ ಹೊಸ ತಂತ್ರಜ್ಞಾನಗಳನ್ನು
ಅಭಿವೃದ್ಧಿಪಡಿಸಬೇಕೆಂದು ನಾವು ಬಯಸುತ್ತೇವೆ ಎಂದರು.


ಇನ್ನೆರಡು ಅವಾಕ್ಸ್‌ ಖರೀದಿಗೆ ಭಾರತ ಸಜ್ಜು; ಚೇನಾದೊಂದಿಗಿನ ಗಡಿ ಬಿಕ್ಕಟ್ಟು ಮುಂದುವರಿದಿರುವುದರ ನಡುವೆ,
ಇಸೇಲ್‌ನಿಂದ ಇನ್ನೂ ಎರಡು ಅತ್ಯಾಧುನಿಕ ವೈಮಾನಿಕ ಎಚ್ಚರಿಕೆ ಹಾಗೂ ನಿಯಂತ್ರಣ ವ್ಯವಸ್ಥೆಯ (ಅವಾಕ್ಸ್‌)
"ಫಾಲ್ಕನ್‌' ಖರೀದಿಸಲು ಭಾರತ ಮುಂದಾಗಿದೆ. ವೈಮಾನಿಕ ಕಣ್ಗಾವಲು ಇಡುವಲ್ಲಿ ನಿಖರ ಸಾಮರ್ಥ್ಯದ ಅವಾಕ್ಸ್‌
“ಆಗಸದ ಕಣ್ಣು' ಎಂದೇ ಖ್ಯಾತಿ ಪಡೆದಿದೆ.


ಎರಡು ಅವಾಕ್ಸ್‌ಗೆ ಸುಮಾರು ರೂ.7388 ಕೋಟಿ (ಒಂದು ಬಿಲಿಯನ್‌ ಡಾಲರ್‌) ವೆಚ್ಚವಾಗಲಿದೆ.
ಇದು ದುಬಾರಿ ಎನ್ನುವ ಕಾರಣಕ್ಕೆ ಹಿಂದೆ ಹಲವು ಬಾರಿ ಖರೀದಿ ಪ್ರಸ್ತಾಪನೆ ಕೈ ಬಿಡಲಾಗಿತ್ತು ಆದರೆ ಈಗ ಗಡಿ
ತಂಟೆ ಹೆಚ್ಚಿರುವುದರಿಂದ ಅದನ್ನು ಪಡೆಯುವುದು ಅನಿವಾರ್ಯ ಎಂಬ ಸ್ಥಿತಿಯಲ್ಲಿ ಭದ್ರತೆ ಕುರಿತ ಸಂಪುಟ
ಸಮಿತಿ (ಸಿಸಿಎಸ್‌) ಇದಕ್ಕೆ ಒಪ್ಪಿಗೆ ನೀಡುವ ನಿರೀಕ್ಷೆಯಿದೆ. ಹೊಸದಾಗಿ ಪಡೆಯುವ ಅವಾಕ್ಸ್‌ಗಳು ಹಿಂದಿನ
ಮೂರಕ್ಕಿಂತ ಹೆಚ್ಚು ಆಧುನಿಕ ಹಾಗೂ ಮೇಲ್ಪರ್ಜೆಗೇರಿಸಲಾದ ವ್ಯವಸ್ಥೆಯಾಗಿರುತ್ತದೆ ಎಂದು ಮೂಲಗಳು
ತಿಳಿಸಿವೆ.


ಅಕ್ಸೋಬರ್‌ಗೆ ಹೊಸ ವಾಯು ರಕ್ಷಣಾ ಕಮಾಂಡ್‌: ಭಾರತೀಯ ವಾಯು ಪಡೆಯ (ಐಎಎಫ್‌) ನೇತೃತ್ವದಲ್ಲಿ
ಹೊಸ ವೈಮಾನಿಕ ರಕ್ಷಣಾ ಕಮಾಂಡ್‌ ರಚಿಸಲು ಮಿಲಿಟರಿ ವ್ಯವಹಾರಗಳ ಇಲಾಖೆ ಮುಂದಾಗಿದೆ. ಅಕ್ಟೋಬರ್‌
ಎರಡನೇ ವಾರದೊಳಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಬಳಿ ಅದು ತಲೆಯೆತ್ತುವ ಸಂಭವವಿದೆ. ಮೂರು
ಪಡೆಗಳ ನಡುವೆ ಸಮನ್ವಯ ಸಾಧಿಸಿ ದೇಶದ ವಾಯು ಪ್ರದೇಶವನ್ನು ರಕ್ಷಿಸುವುದು ಕಮಾಂಡೆನ್‌


ಉದ್ದೆ. €ಶವಾಗಿದೆ.


ನೌಕಾ ಪಡೆಯ ಒಂದು ಕಮಾಂಡ್‌ ರಚಿಸಲು ಕೂಡ ಮೂರು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌)
ಜನರಲ್‌ ಬಿಪಿನ್‌ ರಾವತ್‌ ಕಾರ್ಯಪುವೃತ್ತರಾಗಿದ್ದಾರೆ. ಅದು ಕೇರಳದ ಕೊಚ್ಚಿ ಅಥವಾ ಕರ್ನಾಟಕದ ಕಾರವಾರದ
ಬಳಿ ಕೇಂದ್ರ ಸ್ಥಾನ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.


ಆಧಾರ:ಉದಯವಾಣಿ, ದಿನಾ೦ಕ:28.08.2020


105


37. ಜಿಎಸ್‌ಟಿ ಪರಿಹಾರ ಪಾವತಿಗೆ ಕೇಂದ್ರ ಸರ್ಕಾರ ನಕಾರ


ಕೋವಿಡ್‌-19 ಸಾಂಕ್ರಾಮಿಕತೆಯಿಂದಾಗಿ ರಾಜ್ಯಗಳು ಅನುಭವಿಸಿರುವ ಸರಕು ಮತ್ತು ಸೇವಾ ತೆರಿಗೆ
(ಜಿಎಸ್‌ಟಿ) ನಷ್ಟವನ್ನು ಭರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ನಷ್ಟ ಸರಿದೂಗಿಸಲು ರಾಜ್ಯಗಳು
ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (ಆರ್‌ಬಿಐ) ಸಾಲ ಪಡೆಯುವುದು ಸೇರಿದಂತೆ ಎರಡು ಪರ್ಯಾಯಗಳನ್ನು
ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ವಿಡಿಯೋ ಕಾನ್ಪರೆನ್ಸ್‌ ಮೂಲಕ ನಡೆದ ಜಿಎಸ್‌ಟಿ ಮಂಡಳಿಯ
41ನೇ ಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸರ್ಕಾರದ ಈ ನಿಲುವನ್ನು ಸ್ಪಷ್ಟಪಡಿಸಿದರು.


ಕೊರೋನಾ ಹರಡುವಿಕೆ ತಡೆಯಲು ಹೇರಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ರಾಜ್ಯಗಳು ಪ್ರಸಕ್ತ
ವತ್ತ ವರ್ಷದಲ್ಲಿ ರೂ.2.35 ಲಕ್ಷ ಕೋಟಿ ಜಿಎಸ್‌ಟಿ ಆದಾಯ ನಷ್ಟ ಅನುಭವಿಸಲಿದೆ. ಈ ನಷ್ಟ ಸರಿದೂಗಿಸಲು
ಜಿಎಸ್‌ಟಿ ದರಗಳನ್ನು ಏರಿಸುವ ಪ್ರಸ್ತಾಪನೆಯೂ ಸರ್ಕಾರದ ಮುಂದಿಲ್ಲ ಎಂದು ಸಚಿವೆ ಹೇಳಿದರು. ರಾಜ್ಯಗಳ
ನಷ್ಟವನ್ನು ಕೇಂದ್ರ ತನ್ನ ಖಜಾನೆಯಿಂದ ಅಥವಾ ಸಾಲ ನೀಡುವ ಮೂಲಕ ಸರಿದೂಗಿಸುವ ಅಗತ್ಯವಿಲ್ಲ ಎಂದು
ಅಟಾರ್ನಿ ಜನರಲ್‌ ನೀಡಿರುವ ಕಾನೂನು ಸಲಹೆಯನ್ನು ಸಭೆಯಲ್ಲಿ ಮಂಡಿಸಲಾಯಿತು. ವ್ಯಾಟ್‌ನಂತಹ
ಸ್ಥಳೀಯ ತೆರಿಗೆಗಳನ್ನು ರಾಷ್ಟ್ರವ್ಯಾಪಿ ಜಿಎಸ್‌ಟಿಯಲ್ಲಿ ವಿಲೀನಗೊಳಿಸಲು 2017ರಲ್ಲಿ ರಾಜ್ಯಗಳು ಒಪ್ಪಿಕೊಂಡಿದ್ದವು.
ಅದಕ್ಕೆ ಪ್ರತಿಯಾಗಿ ಜಿಎಸ್‌ಟಿ ಅನುಷ್ಠಾನ ಆರಂಭವಾದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳು ಅನುಭವಿಸುವ
ಆದಾಯ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂಬ ಖಾತರಿ ನೀಡಲಾಗಿತ್ತು.


ಕೊರೋನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ಕುಂಠಿತವಾಗಿರುವುದರಿಂದ 2019-20ರ ವಿತ್ತ ವರ್ಷದಲ್ಲಿ
ರೂ.70,000 ಕೋಟಿ ನಷ್ಟವಾಗಿದೆ. ಈ ವರ್ಷ ರೂ.235 ಲಕ್ಷ ಕೋಟಿ ನಷ್ಟವಾಗಬಹುದೆಂದು ಅಂದಾಜು
ಮಾಡಲಾಗಿದೆ. ಈ ಪೈಕಿ ರೂ೨7,000 ಕೋಟ ಮಾತ್ರವೇ ಜಿಎಸ್‌ಟಿ ಅನುಷ್ಠಾನಕ್ಕೆ ಸಂಬಂಧಿಸಿದ್ದಾಗಿದೆ.
ಉಳಿದದ್ದು ಕೊರೋನಾ ವೈರಸ್‌ ಹಾವಳಿಯಿಂದ ಆರ್ಥಿಕತೆಗೆ ತಟ್ಟಿದ ಹಾನಿಯಿಂದಾದದ್ದು ಎಂದು ಹಣಕಾಸು
ಕಾರ್ಯದರ್ಶಿಯೂ ಆಗಿರುವ ಕಂದಾಯ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ಜಿಎಸ್‌ಟಿ ಮಂಡಳಿ
ಸಭೆಗೆ ವಿವರಿಸಿದರು. ಕಳೆದ ಆರ್ಥಿಕ ಸಾಲಿನಲ್ಲಿ ಆಗಿರುವ ರೂ.70,000 ಕೋಟಿ ಕೊರತೆಯನ್ನು ಹಿಂದಿನ
ಎರಡು ವರ್ಷಗಳ ಹೆಚ್ಚುವರಿ ಆದಾಯದಿಂದ ಸರಿದೂಗಿಸಲಾಗುವುದೆಂದು ಪಾಂಡೆ ಹೇಳಿದರು.


ಪರ್ಯಾಯದ ಆಯ್ಕೆ ವಾರದ ಗಡುವು :-


> ಆರ್‌ಬಿಐನೊಂದಿಗೆ ಸಮಾಲೋಚಿಸಿ ಕಡಿಮೆ ಬಡ್ಡಿ ದರದಲ್ಲಿ ರೂ೨7,000 ಕೋಟಿ ಸಾಲ
ಪಡೆಯಲು ರಾಜ್ಯಗಳಿಗೆ ಕೇಂದ್ರ ಅವಕಾಶ ಕಲ್ಪಿಸುವುದು. ಇದನ್ನು ಸೆಸ್‌ ಸಂಗ್ರಹದಿಂದ ಐದು
ವರ್ಷಗಳ ನಂತರ ಮರುಪಾವತಿ ಮಾಡಬಹುದಾಗಿದೆ.


pa ರಾಜ್ಯಗಳು ಎದುರಿಸಲಿರುವ ರೂ.2.35 ಲಕ್ಷ ಕೋಟಿ ಪರಿಹಾರದ ಕೊರತೆಯನ್ನು ಸಂಪೂರ್ಣವಾಗಿ
ಸಾಲದ ಮೂಲಕ ಭರಿಸಿಕೊಳ್ಳಬಹುದಾಗಿದೆ.


> ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ರಾಜ್ಯಗಳಿಗೆ ಒಂದು ವಾರದ ಅವಕಾಶವಿದೆ.
ಆಧಾರ:ವಿಜಯವಾಣಿ, ದಿನಾಂಕ:28.08.2020
38. ಒಟ್ಟಾಗಿ ಕೆಲಸ, ಒಗ್ಗಟ್ಟಾಗಿ ಹೋರಾಟ


ಕೊರೋನಾ ಸಂಕಷ್ಟದ ನಡುವೆ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶ
ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗೆಸ್‌
ಅಧ್ಯಕ್ಷಿ ಸೋನಿಯಾ ಗಾಂಧಿ ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದ್ದಾರೆ.
ಕೊರೋನಾ ಸಂಕಷ್ಟದ ನಡುವೆ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳನ್ನು
ಮುಂದೂಡಲು ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಅವರ ಜೊತೆ ಸೇರಿ ಬಿಜೆಪಿಯೇತರ ಏಳು ರಾಜ್ಯಗಳ ಮುಖ್ಯಮಂತಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿ
ಚರ್ಚಿಸಿದರು.


106


ಸಭೆಯಲ್ಲಿ ಮಹಾರಾಷ್ಟದ ಉದ್ಧವ್‌ ಠಾಕ್ರೆ, ಪಂಜಾಬ್‌ನ ಅಮರಿಂದರ್‌ ಸಿಂಗ್‌, ಜಾರqಂಡ್‌ನ
ಹೇಮಂತ್‌ ಸೊರೆನ್‌, ಛತ್ತೀಸ್‌ಗಢದ ಭೂಪೇಶ್‌ ಬಾಗೇಲ್‌ ಮತ್ತು ಪುದುಚೇರಿಯ ವಿ. ನಾರಾಯಣಸ್ವಾಮಿ
ಭಾಗವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದ ನಿಯಮ ದುಷ್ಟರಿಣಾಮ ಬೀರಲಿದೆ. ಇದರಿಂದ
ಪ್ರಗತಿಪರ ಜಾತ್ಯಾತೀತ ಮತ್ತು ವೈಜ್ಞಾನಿಕ ಮೌಲ್ಯಗಳಿಗೆ ಹಿನ್ನಡೆಯಾಗಲಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ
ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಸೋನಿಯಾ ಗಾಂಧಿ ಆರೋಪಿಸಿದರು.


ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೊರೋನಾ ಸಂಕಷ್ಟದ ಸಮಯದಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಎಲ್ಲ ರಾಜ್ಯಗಳು ಒಟ್ಟಾಗಿ
ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸೋಣ ಎಂದು ಹೇಳಿದರು. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು


ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವ ಬ್ಯಾನರ್ಜಿ ಅವರ ಕೋರಿಕೆಯನ್ನು ಪಂಜಾಬ್‌ ಮುಖ್ಯಮಂತ್ರಿ


ಅಮರಿಂದರ್‌ ಸಿಂಗ್‌ ಬೆಂಬಲಿಸಿದರು.

ಪ್ರವೇಶ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಮಮತಾ ಬ್ಯಾನರ್ಜಿ ಅವರು ಈಗಾಗಲೇ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಶಾಲೆಗಳನ್ನು ಪುನರಾರಂಭಿಸಿದಾಗ ದೇಶದಲ್ಲಿ 97,000
ಮಕ್ಕಳು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಮೆರಿಕದ ವರದಿಯನ್ನು ಉಲ್ಲೇಖಿಸಿದ ಮಹಾರಾಷ್ಟ್ರ
ಮುಖ್ಯಮಂತ್ರಿ ಉದ್ದವ್‌ ಠಾಕ್ರೆ, ನಮ್ಮಲ್ಲೂ ಅಂತಹ ಪರಿಸ್ಥಿತಿ ಎದುರಾದರೆ ಮಕ್ಕಳ ಪರಿಸ್ಥಿತಿ ಏನು ಎಂದು
ಆತಂಕ ವ್ಯಕ್ತಪಡಿಸಿದರು. ಆಗಸ್ಟ್‌ 17ರ ಸುಪ್ರೀಂಕೋರ್ಟ್‌ ಆದೇಶವನ್ನು ಉಲ್ಲೇಖಿಸಿ ಪರೀಕ್ಷೆ ವೇಳಾಪಟ್ಟಿ
ಬದಲಾಯಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಿರಾಕರಿಸಿದ ನಂತರ ಆಡಳಿತಾರೂಢ ಬಿಜೆಪಿ ವಿರುದ್ಧ
ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಈ ಸಭೆ ಕರೆಯಲಾಗಿದೆ.


ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಸಂಬಂಧಿಸಿದ ಪ್ರಕಟಣೆಗಳು ಆತಂಕಕ್ಕೀಡು ಮಾಡಿದೆ.
ಜಾತ್ಯಾತೀತ ಮತ್ತು ವೈಜ್ಞಾನಿಕ ಮೌಲ್ಯಗಳಿಗೆ ಹಿನ್ನಡೆಯಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ
ಸರ್ಕಾರಕ್ಕೆ ಕಾಳಜಿ ಇಲ್ಲ. ಆಗಸ್ಟ್‌ 11ರಂದು ನಡೆದ ಹಣಕಾಸು ಸ್ಥಾಯಿ ಸಮಿತಿಯ ಸಭೆಯಲ್ಲಿ ಪ್ರಸಕ್ತ ವರ್ಷಕ್ಕೆ
ಶೇ.14 ರಷ್ಟು ಜಿಎಸ್‌ಟಿ ಪರಿಹಾರ ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಹೇಳಿದ್ದಾರೆ.
ಇದು ಮೋದಿ ಸರ್ಕಾರದ ದ್ರೋಹವೆಂದು ಸೋನಿಯಾ ಗಾಂಧಿ ಹೇಳಿದರು


ಆಧಾರ:ವಿಶ್ವವಾಣಿ, ದಿನಾಂಕ:28.08.2020
39. ಪಿಎಂಜೆಡಿವೈನಿಂದ ರೂ.13 ಲಕ್ಷ ಕೋಟಿ ಠೇವಣಿ


ಪ್ರಧಾನಮಂತ್ರಿ ಜನ್‌ಧನ್‌ ಯೋಜನೆ (ಪಿಎಮ್‌ ಜೆಡಿವೈ) ಯು ದೇಶದ ಆರ್ಥಿಕತೆಯ
ಒಳೆಗೊಳ್ಳುವಿಕೆಯನ್ನು 6 ವರ್ಷಗಳ ಹಿಂದೆ ಜಾರಿಗೊಳಿಸಲಾಯಿತು. ಇದರಿಂದ 40.35 ಕೋಟಿ ಖಾತೆಗಳನ್ನು
ತೆರೆದು ಒಟ್ಟು ರೂ.1.30 ಲಕ್ಷ ಕೋಟಿಗಳ ಮೊತ್ತವನ್ನು ಠೇವಣಿ ಇಡಲಾಗಿದೆ ಎಂದು ವಿತ್ತ ಸಚಿವಾಲಯ
ಹೇಳಿದೆ.


ಈ ಯೋಜನೆಯನ್ನು ಮೊದಲು ಪ್ರಧಾನಿಯು ಆಗಸ್ಟ್‌ 15, 2014ರಲ್ಲಿ ಘೋಷಿಸಿದ್ದರು. ಇದನ್ನು ಆಗಸ್ಟ್‌
28 ರಂದು ಜಾರಿಗೊಳಿಸಲಾಯಿತು. ಇದರಿಂದ ಬಡವರು ನೇರ ನಗದು ವರ್ಗಾವಣೆ ಮೂಲಕ ಸಬ್ಲಿಡಿ
ಹಣವನ್ನು ಪಡೆಯುತ್ತಿದ್ದಾರೆ. ಇಂದಿಗೆ ಆರು ವರ್ಷಗಳ ಹಿಂದೆ ಪಿಎಂಜೆಡಿವೈಅನ್ನು, ಬ್ಯಾಂಕ್‌ ವಹಿವಾಟನ್ನು
ನಡೆಸದಿರುವವರನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಯಿತು. ಈ ಘನ ಉದ್ದೇಶವು ಇಡೀ ದೇಶದ
ಚಿತ್ರಣವನ್ನು ಬದಲಿಸಿತು. ಕೋಟ್ಯಂತರ ಜನರಿಗೆ ಸಹಾಯಕವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ
ತಿಳಿಸಿದ್ದಾರೆ. ಕೇಂದವು ಈ ಯೋಜನೆಯ ಫಲಾನುಭವಿಗಳಿಗೆ ವಿಮೆಯಲ್ಲಿ ಒಳಗೊಳ್ಳಲು ಯೋಜಿಸಲಾಗಿದೆ.
ಆರ್ಹ ಪಿಎಂಜೆಡಿವೈ ಖಾತೆದಾರರು ಪಿಎಂ ಜೆಜೆಬಿವೈ, ಪಿಎಂಎಸ್‌ಬಿವೈಯಲ್ಲಿ ಒಳಗೊಳ್ಳುವಂತೆ ಮಾಡಲಾಗಿದೆ.
ಬ್ಯಾಂಕ್‌ಗಳಿಗೆ ಈಗಾಗಲೇ ಇದರ ಬಗ್ಗೆ ಸಂಪರ್ಕಿಸಲಾಗಿದೆ.


107


ಪ್ರಮುಖ ಅಂಶಗಳು:-


> 4035 ಕೋಟಿ ಖಾತೆಗಳನ್ನು ತೆರೆದು, ಒಟ್ಟು ರೂ.1.30 ಲಕ್ಷ ಕೋಟಿಗಳ ಮೊತ್ತವನ್ನು ಠೇವಣಿ
ಇಡಲಾಗಿದೆ.


ಪ್ರತಿ ಖಾತೆಯಲ್ಲಿ ಸರಾಸರಿ ಮೊತ್ತ ರೂ.3,239 ಆಗಿದೆ.
40.35 ಕೋಟಿ ಖಾತೆಗಳನ್ನು ಇದುವರೆಗೂ ತೆರೆಯಲಾಗಿದೆ.
ಬಡವರು ನೇರ ನಗದು ವರ್ಗಾವಣೆ ಮೂಲಕ ಸಬ್ದಿಡಿ ಹಣವನ್ನು ಪಡೆಯುತ್ತಿದ್ದಾರೆ.


ಶೇ.63.6 ಪಿಎಂಜೆಡಿವೈ ಖಾತೆದಾರರು ಗ್ರಾಮಾಂತರ ಪ್ರದೇಶದವರು ಮತ್ತು ಶೇ.55.2
ಮಹಿಳೆಯರು ಆಗಿದ್ದಾರೆ.


> ಪ್ರತಿ ತಿಂಗಳು ಮೂರು ತಿಂಗಳವರೆಗೆ ಮಹಿಳೆಯರಿಗೆ ರೂ.500 ತುಂಬಲಾಗಿದೆ.


VV VY VY


» ಏಪಿಲ್‌ - ಜೂನ್‌ ಅವಧಿಯಲ್ಲಿ ಒಟ್ಟು ರೂ.30.705 ಕೋಟಿಗಳನ್ನು ಮಹಿಳೆಯರ ಖಾತೆಗೆ
ತುಂಬಲಾಗಿದೆ.


> ಜನ್‌ಧನ್‌ ದರ್ಶಕ್‌ ್ಯಪ್‌ನ ಸಹಾಯ ಪಡೆಯಬಹುದು.
ಆಧಾರ:ವಿಶ್ವವಾಣಿ, ದಿನಾಂಕ:29.08.2020
40. ಕೇಂದ್ರದಿಂದ ಅನ್‌ಲಾಕ್‌ 4.0 ಮಾರ್ಗಸೂಚಿ ಪ್ರಕಟ


ಕೊರೋನಾ ನಿಗ್ರಹಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಅನ್ನು ಹಂತಹಂತವಾಗಿ ತೆರವುಗೊಳಿಸುವ
ಸಂಬಂಧ ಕೇಂದ್ರ ಸರ್ಕಾರ ಆನ್‌ಲಾಕ್‌ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸೆಪ್ಲೆಂಬರ್‌ 7 ರಿಂದ
ಮೆಟ್ರೋ ರೈಲು ಸಂಚಾರ ಆರಂಭಿಸಲು 100 ಜನರ ಮಿತಿಯೊಂದಿಗೆ ಸೆಪ್ಲೆಂಬರ್‌ 21 ರಿಂದ ಸಾಮಾಜಿಕ
ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಮನರಂಜನೆ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು
ಅನುಮತಿ ನೀಡಿದೆ. ವಿವಾಹ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನಿಗದಿಗೊಳಿಸಿದ್ದ ಅಲ್ಲಜನರ ಮಿತಿಯನ್ನು
ಸೆಪ್ಪೆಂಬರ್‌ 21 ರಿಂದ 100ಕ್ಕೆ ಹೆಚ್ಚಳ ಮಾಡಿ ಕೇಂದ ಗೃಹ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದೆ.


ಚಿತ್ರಮಂದಿರ, ಈಜುಕೊಳಗಳು, ಬಾರ್‌, ಕ್ಷಬ್‌. ಮನರಂಜನಾ ಪಾರ್ಕ್‌ಗಳ ಮೇಲಿನ ನಿರ್ಬಂಧವನ್ನು
ಮುಂದುವರಿಸಲಾಗಿದೆ. ಕೊರೋನಾ ಕೇಸ್‌ಗಳು ಹೆಚ್ಚಿರುವ ಕಂಟೈನ್ನೆಂಟ್‌ ವಲಯದಲ್ಲಿ ಸೆಪ್ಪೆಂಬರ್‌-30ರವರೆಗೆ


ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಕಂಟೈನ್ನೆಂಟ್‌ ವಲಯದಿಂದ ಹೊರಗಿರುವ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ
ಜೊತೆ ಸಮಾಲೋಚನೆ ನಡೆಸದೆ ರಾಜ್ಯಗಳು ಲಾಕ್‌ಡೌನ್‌ ಹೇರುವಂತಿಲ್ಲ ಎಂದು ಕಟ್ಟಪ್ಪಣೆ ವಿಧಿಸಿದೆ.


9-12ನೇ ತರಗತಿ ಮಕ್ಕಳಿಗೆ ಶಾಲೆಗೆ ಹೋಗುವ ಅವಕಾಶ:-


ಶಾಲಾ-ಕಾಲೇಜುಗಳ ಆರಂಭಕ್ಕೆ ಅನ್‌ಲಾಕ್‌ 4.0ರಲ್ಲೂ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಆದರೆ
ಸೆಪ್ಪೆಂಬರ್‌ 21 ರಿಂದ ಅನ್ವಯ ಆಗುವಂತೆ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಕಂಟೈನ್ನೆಂಟ್‌ ಪ್ರದೇಶದ
ಹೊರಗಿನ ಪ್ರದೇಶದಲ್ಲಿ ಆನ್‌ಲೈನ್‌ ತರಗತಿಯ ವೇಳೆ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮಾರ್ಗದರ್ಶನ
ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ. ಶೇ.50ರಷ್ಟು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ
ಆನ್‌ಲೈನ್‌ ತರಗತಿಗಾಗಿ ಶಾಲೆಗೆ ಬಂದು ಪಾಠ ಮಾಡಲು ಅವಕಾಶ ನೀಡಲಾಗಿದೆ. ಈ ವೇಳೆ ಸೂಕ್ತ
ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.


ಅಂತರರಾಜ್ಯ ಸಂಚಾರ ನಿರ್ಬಂಧಿಸುವಂತಿಲ್ಲ: ಜನರ ಅಥವಾ ಸರಕು ಸಾಗಣೆಯ ಅಂತರರಾಜ್ಯ
ಸಂಚಾರವನ್ನು ಯಾವುದೇ ಕಾರಣಕ್ಕೂ ನಿರ್ಬಂಧಿಸುವಂತಿಲ್ಲ ಎಂದಿರುವ ಕೇಂದ್ರ ಸರ್ಕಾರ, ಅಂತಹ ಸಂಚಾರಕ್ಕೆ
ಯಾವುದೇ ಅನುಮತಿ, ನೋಂದಣಿ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಕಂಟೈೆನ್ನೆಂಟ್‌ ಪ್ರದೇಶದ
ಹೊರಗೆ ಯಾವ ರಾಜ್ಯವು ಲಾಕ್‌ಡೌನ್‌ ಮಾಡುವಂತಿಲ್ಲ ಎಂದು ನಿರ್ದೇಶಿಸಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:31.08.2020


108


41. ದೇಶದಲ್ಲಿ ಕೊರೋನಾ ಸಮರ್ಥ ನಿರ್ವಹಣೆ


ಭಾರತ ಕೊರೋನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ದೀಪಾವಳಿ ಹಬ್ಬದ ವೇಳೆಗೆ
ಕೊರೋನಾದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಿದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಸಚಿವ ಡಾ: ಹರ್ಷವರ್ಧನ್‌ ಅಭಿಪ್ರಾಯ ವ್ಯಕ್ತಪಡಿಸಿದರು.


ಅನಂತಕುಮಾರ್‌ ಪ್ರತಿಷ್ಠಾನ ಹಮ್ಮಿಕೊಂಡಿದ್ದ "ದೇಶ ಮೊದಲು” ವೆಬಿನಾರ್‌ ಸಂವಾದ ಉದ್ದಾಟಿಸಿ
ಮಾತನಾಡಿದ, ಹೋಲಿಯೋ, ಸ ಸ್ನಾಲ್‌ಫಾಕ್‌ಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿರುವ ಭಾರತವು ಎಬೊಲಾ
ವೈರಸ್‌ ದೇಶಕ್ಕೆ ಕಾಲಿಡದಂತೆ ನೋಡಿಕೊಂಡಿದ್ದೇವೆ. ನಿಫಾ ವೈರಸ್‌ ಕೇರಳ ರಾಜ್ಯದಲ್ಲೇ ನಿಭಾಯಿಸಲಾಗಿತ್ತು.
ಕೊರೋನಾವನ್ನು ಸಮರ್ಥವಾಗಿ ಭಾರತ ನಿಭಾಯಿಸುತ್ತಿದೆ. ದೀಪಾವಳಿ ಹೊತ್ತಿಗೆ ಕೊರೋನಾ ಸಾಂಕ್ರಾಮಿಕ
ರೋಗ ನಿಯಂತ್ರಣಕ್ಕೆ ಬರಲಿದೆ. ಜನವರಿ 30 ರಂದು ದೇಶದಲ್ಲಿ ಮೊದಲ ಕೋವಿಡ್‌ ಪ್ರಕರಣ ಕೇರಳದಲ್ಲಿ
ಪತ್ತೆಯಾಯಿತು. ಇದಕ್ಕೂ ಮೊದಲೇ ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿತ್ತು ನಂತರ ಪ್ರಧಾನಿ
ಮೋದಿ ಅವರ ನೇತೃತ್ವದಲ್ಲಿ ಹಿರಿಯ ಮಂತ್ರಿಗಳು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು. ಈ
ಸಮಿತಿಯು 22 ಸಭೆಯನ್ನು ನಡೆಸಿದೆ. ಪರಿಸ್ಥಿತಿಯನ್ನು ಎಲ್ಲ ರೀತಿಯಿಂದಲೂ ಅವಲೋಕಿಸಿ ಅಗತ್ಯ
ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಸಹಕಾರಿಯಾಗಿದೆ ಎಂದರು.


ಉಪ ಮುಖ್ಯಮಂತ್ರಿ ಡಾ: ಸಿ.ಎಸ್‌. ಅಶ್ವತ್ಥನಾರಾಯಣ ಮಾತನಾಡಿ, ಕೋವಿಡ್‌ ಕಾರಣ ರಾಜ್ಯದ
ಹಲವಾರು ಕ್ಷೇತ್ರಗಳು ತೊಂದರೆ ಅನುಭವಿಸಿದೆ. ಅವುಗಳನ್ನು ಸರಿದಾರಿಗೆ ತರುವ ಉದ್ದೇಶದಿಂದ ಹಲವಾರು
ಕ್ರಮಗಳನ್ನು ಕೈಗೊಂಡಿದ್ದೇವೆ. ಕೋವಿಡ್‌ ಪರಿಸ್ಥಿತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಹಲವು ಕ್ರಾಂತಿಕಾರಕ
ಬದಲಾವಣೆಗಳನ್ನು ಮಾಡಿದ್ದೇವೆ. ಭೂಸುಧಾರಣೆ, ಎಪಿಎಂಸಿ ಬದಲಾವಣೆಗಳ ತಿದ್ದುಪಡಿ, ಕಾರ್ಮಿಕ ಕಲ್ಯಾಣ,
ಹೊಸ ಕೈಗಾರಿಕಾ ನೀತಿ, ಕೈಗಾರಿಕಾ ಸೌಲಭ್ಯ ಕಾಯ್ದೆ, ಬಂಡವಾಳ ಹೂಡಿಕೆಗೆ ನೀತಿ, ನಿಯಮಗಳ ಸಡಿಲಿಕೆ
ಸೇರಿದಂತೆ ಅನೇಕ ಕ್ರಮ ತೆಗೆದುಕೊಂಡಿದ್ದೇವೆ ಎಂದರು.


ಜಯದೇವ, ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ: ಸಿ.ಎನ್‌.
ಮಂಜುನಾಥ್‌, ಟಿ ಹೆಲ್‌ನ ಸಂಸ್ಥಾಪಕ ಡಾ:ದೇವಿಶಟ್ಟ, ಅನಂತ ಕುಮಾರ್‌ ಪ್ರತಿಷ್ಠಾನ ಟಸ್ಪಿ ತೇಜಸ್ಥಿನಿ
ಅನಂತಕುಮಾರ್‌. ಸ್ವಾಮಿ ವಿವೇಕಾನಂದ ಯುವ ಆಂದೋಲನದ ಸಂಸ್ಥಾಪಕ ಡಾ:ಬಾಲ ಸುಬ್ರಮಣಿ
ಮೊದಲಾದವರು ಉಪ ಪಸ್ಥತರಿದ್ದರು.


ಆಧಾರ:ಉದಯವಾಣಿ, ದಿನಾ೦ಕ:31.08.2020
42. 500 ಕಲ್ಲಿದ್ದಲು ಯೋಜನೆಗೆ ರೂ.1.22 ಲಕ್ಷ ಕೋಟಿಗಳ ಹೂಡಿಕೆ


2023-24ರ ವೇಳಗೆ 1 ಬಿಲಿಯನ್‌ ಟನ್‌ ಕಲ್ಲಿದ್ದಲು ಉತ್ಪಾದಿಸುವ ಮತ್ತು ರಾಷ್ಟ್ರವನ್ನು ಕಲ್ಲಿದ್ದಲಿನಲ್ಲಿ
ಸ್ಥಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಕಲ್ಲಿದ್ದಲು ಸ್ಥಭಾಂತರಿಸುವಿೆ, ಮೂಲ ಸೌಕರ್ಯ EE ಅಭಿವೃದ್ಧಿ
ತಂತ್ರಜ್ಞಾನಗಳಿಗೆ ಸಂದ. ಸುಮಾರು 500 "ಯೋಜನೆಗಳಲ್ಲಿ ಕೋಲ್‌ ಇಂಡಿಯಾ ಲಿಮಿಟೆಡ್‌ (Wರವ
ರೂ.1.22 ಲಕ್ಷ ಕೋಟಿಗಳನ್ನು ಹೂಡಿಕೆ ಮಾಡಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ
ಜೋಶಿ ಹೇಳಿದ್ದಾರೆ. ಸಿಐಎಲ್‌ ಆಯೋಜಿಸಿದ್ದ ಪಾಲುದಾರರ ಸಭೆಯಲ್ಲಿ ದೆಹಲಿಯಿಂದ ವಿಡಿಯೋ ಸಂವಾದ
ನಡೆಸಿ ಮಾತನಾಡಿದರು.


ಕೋಲ್‌ ಇಂಡಿಯಾದೊಂದಿಗೆ ವ್ಯಾಪಾರದ ಅವಕಾಶಗಳು ಅಪಾರವಾಗಿವೆ. ಕಂಪನಿಯು ತನ್ನ 49
ಮೊದಲ ಮೈಲಿ ಸಂಪರ್ಕ ಯೋಜನೆಗಳಿಗಾಗಿ ಎರಡು ಹಂತಗಳಲ್ಲಿ 2023-24ರ ವೇಳೆಗೆ ಸುಮಾರು
ರೂ.14,200 ಕೋಟಿ ಹೂಡಿಕೆ ಮಾಡಲಿದೆ. ಮೊದಲ ಮೈಲಿ ಸಂಪರ್ಕ ಎಂದರೆ ಕಲ್ಲಿದ್ದಲನ್ನು ತೆಗೆಯುವ
ಸ್ಥಳದಿಂದ ರವಾನೆ ಕೇಂದಗಳಿಗೆ ಸಾಗಿಸುವುದು. ಕಲ್ಲಿದ್ದಲು ಸಾರಿಗೆಯಲ್ಲಿ ಸುಧಾರಿತ ದಕ್ಷತೆಯನ್ನು ತರಲು ಮತ್ತು
ಈ ಎರಡು ಸ್ಥಳಗಳ ನಡುವೆ ಈಗಿರುವ ರಸ್ತೆ ಸಾರಿಗೆಯ ಬದಲಿಗೆ ಕಂಪ್ಯೂಟರ್‌ ನೆರವಿನ ಲೋಡಿಂಗ್‌
ಕೈಗೊಳ್ಳಲು ಇದನ್ನು ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.


109


ರೂ.1.22 ಲಕ್ಷಿ ಕೋಟಿ ಪೈಕಿ ಸಿಐಎಲ್‌ 2023-24ರ ಹೊತ್ತಿಗೆ ಕಲ್ಲಿದ್ದಲು ಸ್ಥಳಾಂತರಿಸುವಿಕೆಗೆ
ರೂ.32,696 ಕೋಟಿ, ಗಣಿ ಮೂಲಸೌಕರ್ಯಕ್ಕೆ ರೂ.25,117 ಕೋಟಿ, ಯೋಜನಾ ಅಭಿವೃದ್ದಿಗೆ ರೂ.29,461
ಕೋಟಿ, ವೈವಿಧ್ಯಕ್ಕೆ ಮತ್ತು ಶುದ್ದ ಕಲ್ಲಿದ್ದಲು ತಂತ್ರಜ್ಞಾನಗಳ ಮೇಲೆ ರೂ.32,199, ಸಾಮಾಜಿಕ ಮೂಲ
ಸೌಕರ್ಯಕ್ಕೆ ರೂ.1495 ಕೋಟಿ ಮತ್ತು ಶೋಧನೆ ಕಾರ್ಯಗಳಿಗೆ ರೂ.1893 ಕೋಟಿಗಳನ್ನು ವೆಚ್ಚ ಮಾಡಲಿದೆ


ಎಂದು ಅವರು ವಿವರಿಸಿದರು.
ಆಧಾರ:ಉದಯವಾಣಿ, ದಿನಾ೦ಕ:02.09.2020
43. ಅಧಿಕಾರಿಗಳ ಕೌಶಲ, ಸಾಮರ್ಥ್ಯ ವೃದ್ಧಿಗೆ ವೇದಿಕೆ ನಿರ್ಮಾಣ


ರಾಷ್ಟ್ರೀಯ ನೇಮಕಾತಿ ಆಯೋಗ ರಚನೆ, ಅಧ್ಯಕ್ಷ ನೌಕರರಿಗೆ ಕಡ್ಡಾಯ ನಿವೃತ್ತಿಯಂಥ ಕ್ರಮಗಳ
ಬಳಿಕ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ
ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಅಖಿಲ ಭಾರತ ಸೇವೆಯ ವ್ಯಾಪಿಗೆ ಬರುವ ಅಧಿಕಾರಿಗಳ ಕೌಶಲ
ಹಾಗೂ ದಕ್ಷತೆ ಸಾಮರ್ಥ್ಯ ದುಪುಟ್ಟುಗೊಳಿಸುವ ಸಲುವಾಗಿ ನಾಗರಿಕ ಸೇವೆ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ
ಕಾರ್ಯಕ್ರಮ (ಎನ್‌ಪಿಸಿಎಸ್‌ಸಿಬಿ) ಎಂಬ ಹೊಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಈ ಉಪಕ್ರಮಕ್ಕೆ
ವಿಷನ್‌ "ಕರ್ಮಯೋಗಿ' ಎಂದು ಹೆಸರಿಟ್ಟದೆ.


ಆಯೋಗ ರಚನೆ: ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ
ದೊರೆತಿದೆ. ಮಿಷನ್‌ ಕರ್ಮಯೋಗಿ ರಾಷ್ಟ್ರೀಯ ಯೋಜನೆಯಾಗಿದ್ದು, ಇದರ ಮೇಲುಸ್ತುವಾರಿಗಾಗಿ ಪ್ರಧಾನಿ
ನೇತೃತ್ನದ ಸಾರ್ವಜನಿಕ ಮಾನವ ಸಂಪನ್ಮೂಲ ಆಯೋಗ ರಚಿಸಲಾಗಿದೆ. ನಾಗರಿಕ ಸೇವೆಯಲ್ಲಿರುವ
ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗಾಗಿ ಯೋಜನೆ ಅಡಿ ರೂಪಿಸಲಾಗುವ ಕಾರ್ಯಕ್ರಮಗಳನ್ನು ಪರಿಶೀಲಿಸಿ ಸಮತಿ
ನೀಡಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಮಾಹಿತಿ ಹಂಚಿಕೊಂಡಿದ್ದಾರೆ.


ಸಹಕಾರ ಮತ್ತು ಸಹ ಹಂಚಿಕೆ ಆಧಾರದ ಮೇಲೆ ಸಾಮರ್ಥ್ಯ ವೃದ್ಧಿಸುವ ವ್ಯವಸ್ಥೆ ನಿರ್ವಹಿಸಲು
ಏಕರೂಪದ ವಿಧಾನ ಹೊಂದಲು ಸಾಮರ್ಥ್ಯ ನಿರ್ಮಾಣ ಆಯೋಗ (ಕೆಪ್ಯಾಸಿಟಿ ಬಿಲ್ಲಿಂಗ್‌ ಕಮಿಷನ್‌)
ಸ್ಥಾಪಿಸಲು ಸಹ ಉದ್ದೇಶಿಸಲಾಗಿದೆ.

ಸಮಾಜ ಎದುರಿಸುತ್ತಿರುವ ಹತ್ತು ಹಲವು ಸವಾಲುಗಳನ್ನು ಎದುರಿಸಲು ಅಧಿಕಾರಿಗಳಿಗೆ ತರಬೇತಿ

ನೀಡುವ ಮತ್ತು ಆ ದಿಕ್ಕಿನಲ್ಲಿ ಮುನ್ನಡೆಯಲು ಅವರನ್ನು ಸಜ್ಜುಗೊಳಿಸಲು ಅಡಿಪಾಯ ಹಾಕುವುದು.
ಸಂಪುಟದ ಅತರ ತೀರ್ಮಾನಗಳು:

» ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಉರ್ದು ಇಂಗ್ಲಿಷ್‌ ಭಾಷೆಗಳ ಜೊತೆಗೆ ಕಾಶ್ಮೀರಿ,
ಡೋಗಿ ಮತ್ತು ಹಿಂದಿ ಭಾಷೆಯನ್ನು ಅಧಿಕೃತ ಭಾಷೆಗಳು ಎಂದು ಘೋಷಿಸಲು ಕೇಂದ್ರ
ಸಂಪುಟದ ಸಮ್ಮಶ್ರಿ.

> ಭೂ ವಿಜ್ಞಾನ ಮತ್ತು ಖನಿಜ ಸಂಪನ್ಮೂಲ
ನಡುವಿನ ತಿಳುವಳಿಕೆ ಪತ್ರಕ್ಕೆ ಒಪ್ಪಿಗೆ.


ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಫಿನ್‌ಲ್ಯಾಂಡ್‌


[0


> ಜಪಾನಿನ ಮಾರುಕಟ್ಟೆಯಲ್ಲಿ ಭಾರತೀಯ ಜವಳಿ ಮತ್ತು ಬಟ್ಟೆಗಳ ಗುಣಮಟ್ಟ


ಹಿನ್ನೆಲೆ ಮಹತ್ವ; ನಾಗರಿಕ ಸೇವೆಯ ಸಾಮರ್ಥ್ಯವು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು
ಪ್ರಮುಖ ಆಡಳಿತ ಕಾರ್ಯಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾಗರಿಕ ಸೇವಾ
ಸಾಮರ್ಥ್ಯದಲ್ಲಿನ ಪರಿವರ್ತನೆ ಒಟ್ಟಾರೆ ಕಾರ್ಯಸ್ಥಳದಲ್ಲಿನ ಸಕಾರಾತಾತ್ಮಕ ಬದಲಾವಣೆ ಸಾರ್ವಜನಿಕ ಸಂಸ್ಥೆಗಳ
ಬಲಪಡಿಸುವಿಕೆ ಮತ್ತು ಸರ್ಕಾರಿ ಸೇವೆಗಳನ್ನು ಜನರಿಗೆ ಸಮರ್ಥ ರೀತಿಯಲ್ಲಿ ತಲುಪಿಸುವುದನ್ನು
ಖಾತರಿಪಡಿಸುವ ಗುರಿ ಹೊಂದಿದೆ.


ಆಧಾರ:ವಿಜಯವಾಣಿ, ದಿನಾ೦ಕ:10.09.2020


110
44. ಟಾಟಾಗೆ ಸಂಸತ್‌ ನಿರ್ಮಾಣ ಗುತ್ತಿಗೆ


ನೂತನ ಸಂಸತ್‌ ಭವನ ನಿರ್ಮಾಣದ ಗುತ್ತಿಗೆ ದೇಶದ ಪ್ರತಿಷ್ಠಿತ ಟಾಟಾ ಗ್ರೂಪ್‌ ಪಾಲಾಗಿದೆ. ರಿಯಲ್‌
ಎಸ್ಟೇಟ್‌ ಮುಂಚೂಣಿ ಸಂಸ್ಥೆ ಎಲ್‌ ಆಂಡ್‌ ಟಿಯನ್ನು ಹಿಂದಕ್ಕಿ ಟಾಟಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ರೂ.861.90
ಕೋಟಿಗಳ ಮೊತ್ತವನ್ನು ನಮೂದಿಸಿ ಬಿಡ್ಡಿಂಗ್‌ನಲ್ಲಿ ಜಯಶಾಲಿಯಾಗಿದೆ.


ಕೇಂದ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ರೂ.೨40 ಕೋಟಿಗಳ ನಿರ್ಮಾಣ ವೆಚ್ಚವನ್ನು
ಅಂದಾಜು ಮಾಡಿತ್ತು ಈಗಿರುವ ಸಂಸತ್‌ ಭವನದ ಸಮೀಪದಲ್ಲೇ ತಿಕೋನಾಕಾರದ ನೂತನ ಕಟ್ಟಡ
ನಿರ್ಮಾಣವಾಗಲಿದ್ದು, ಒಂದು ವರ್ಷದೊಳಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಿಪಿಡಬ್ಬ್ಯುಡಿ
ಅಧಿಕಾರಿಗಳು ತಿಳಿಸಿದ್ದಾರೆ.


ಸದ್ಯದ ವೃತ್ತಾಕಾರದ ಸಂಸತ್‌ ಭವನವನ್ನು ಬ್ರಿಟಿಷರ ಆಳ್ಲಿಕೆ ಕಾಲದಲ್ಲಿ ಕಟ್ಟಲಾಗಿದ್ದು, 1921ರಲ್ಲಿ
ಆರಂಭವಾದ ಕಾಮಗಾರಿ 6 ವರ್ಷಗಳಲ್ಲಿ ಮುಗಿದಿತ್ತು. 1956ರಲ್ಲಿ ಅದಕ್ಕೆ 2 ಹೆಚ್ಚುವರಿ ಮಹಡಿಗಳನ್ನು
ಜೋಡಿಸಲಾಗಿತ್ತು. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಂತರ ಸದಸ್ಯರ ಸಂಖ್ಯೆ ಹೆಚ್ಚಳವಾಗಲಿದ್ದು
ಸ್ಥಳಾಭಾವ ಉಂಟಾಗುವ ಕಾರಣ ವಿಶಾಲ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.


2020ರಲ್ಲಿ ದೇಶದ ಸ್ವಾತಂತ್ಯ ದಿನಾಚರಣೆಯ 75ನೇ ವಾರ್ಷಿಕೋತ್ಸವದ ಇತಿಹಾಸಿಕ ಅಧಿವೇಶನ
ನೂತನ ಸಂಸತ್‌ ಭವನ ಕಟ್ಟಡದಲ್ಲೇ ನಡೆಯಲಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಈ


ವರ್ಷಾರಂಭದಲ್ಲಿ ಪ್ರಕಟಿಸಿದ್ದರು.
ಆಧಾರ:ಸಂ೦ಯುಕ್ತ ಕರ್ನಾಟಕ ದಿನಾಂಕ:17.09.2020
45. ಸೇನೆ ಎಲ್ಲದಕ್ಕೂ ಸಿದ್ಧ ಚೀನಾಕ್ಕೆ ಭಾರತ ಎಚ್ಚರಿಕೆ


ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಯಥಾಸ್ಥಿತಿಯನ್ನು ಏಕರೂಪವಾಗಿ ಬದಲಿಸುವ
ಪ್ರಯತ್ನ ನಡೆದರೆ ಅದನ್ನು ನಾವು ಒಪ್ಪುವುದಿಲ್ಲ. ನಮ್ಮ ಸಶಸ್ತ್ರ ಪಡೆಗಳು ಎಲ್ಲದಕ್ಕೂ ಸಿದ್ದ ಇವೆ ಎಂದು
ಗಡಿಯಲ್ಲಿ ತಗಾದೆ ತೆಗೆದಿರುವ ಚೀನಾಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಖಡಕ್‌ ಎಚ್ಚರಿಕೆ
ನೀಡಿದ್ದಾರೆ. ಪೂರ್ವ ಲಡಾಖ್‌ನಲ್ಲಿನ ಸಂಘರ್ಷ ಕುರಿತು ಲೋಕಸಭೆಯಲ್ಲಿ ಹೇಳಿಕೆ ನೀಡಿದ ಸಚಿವರು,
ಲಡಾಖ್‌ನಲ್ಲಿ ಸದ್ಯ ಸವಾಲಿನ ಪರಿಸ್ಥಿತಿ ಇದೆ. ಗಡಿ ಬಿಕ್ಕಟ್ಟನ್ನು ಶಾಂತಿಯುತವಾಗಿ ಮಾತುಕತೆ ಮೂಲಕ
ಬಗೆಹರಿಸಿಕೊಳ್ಳಲು ಸಿದ್ದ. ಆದರೆ ಗಡಿಯಲ್ಲಿನ ಪರಿಸ್ಥಿತಿ ಬದಲಿಸಲು ಬಂದರೆ ಸುಮ್ಮನಿರುವುದಿಲ್ಲ ಎಂದರು.


ಲಡಾಖ್‌ನಲ್ಲಿ 38,000 ಚದರ ಕಿ.ಮೀ.ಯಷ್ಟು ಜಾಗವನ್ನು ಚೀನಾ ಅತಿಕ್ರಮಿಸಿಕೊಂಡಿದೆ. ಇದರ ಜೊತೆಗೆ
ಭಾರತಕ್ಕೆ ಸೇರಿದ ಪಾಕ್‌ ಆಕ್ರಮಿತ ಕಾಶ್ಮೀರದ 5180 ಕಿ.ಮೀ. ಭೂ ಭಾಗವನ್ನು ಚೀನಾ - ಪಾಕ್‌ ಗಡಿ
ಒಪ್ಪಂದದ ಹೆಸರಿನಲ್ಲಿ 1963ರಲ್ಲಿ ಪಾಕಿಸ್ತಾನ ಆಕ್ರಮವಾಗಿ ಚೀನಾಕ್ಕೆ ನೀಡಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:16.09.2020
46. ಶಾಲೆಗಳ ಆರಂಭಕ್ಕೆ ಕೇಂದ್ರ ಮಾರ್ಗಸೂಚಿ


ಕೊರೋನಾ ಸೋಂಕಿನ ಹಾವಳಿ ತಂದೊಡ್ಡಿದ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಇದು
ತಿಂಗಳಿನಿಂದಲೂ ಮುಚ್ಚಲ್ಪಟ್ಟಿದ್ದ ಶಾಲಾ ಶಿಕ್ಷಣ ಸೆಪ್ಪೆಂಬರ್‌ 21ರಿಂದ ಹಂತಹಂತವಾಗಿ ಪುನರಾರಂಭಗೊಳ್ಳಲಿವೆ.


ಕೊರೋನಾ ಕಾಟದ ನಡುವೆಯೂ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಠದ ದೃಷ್ಟಿಯನ್ನು
ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ತೆರೆಯುವ ಸಂಬಂಧ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ
ಮಾಡಿದ್ದು ಇದು ಶಾಲೆಗಳ ಮರು ಆರಂಭಕ್ಕೆ ಮುನ್ನುಡಿ ಬರೆದಿದೆ.


ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಕ್ರಿಯಾಲ್‌ ನಿಶಾಂಕ್‌ ಅವರು ಈ
ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯ
ಮೇಲೆ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗುತ್ತದೆ. ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ
ಪ್ರತ್ರೇಕವಾದ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.


111


9 ರಿಂದ 12 ನೇ ತರಗತಿ ಆರಂಭಕ್ಕೆ ಆದ್ಯತೆ: 9 ರಿಂದ 12 ತರಗತಿಯ ವಿದ್ಯಾರ್ಥಿಗಳಿಗಾಗಿ 8 ವಾರಗಳ ಶೈಕ್ಷಣಿಕ
ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಇದೇ ವೇಳೆ ಅದರನ್ವಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣಕ್ಕಾಗಿ
12 ವಾರ, ಪಿಯುಸಿ ಶಿಕ್ಷಣಕ್ಕೆ ನಾಲ್ಕು ವಾರಗಳ ಪ್ರತ್ಯೇಕ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯು ಮನೆಯಲ್ಲೇ ಶಾಲಾ ಶಿಕ್ಷಣಾ ನೀಡುವ
ಪ್ರಸ್ತಾಪ ಮುಂದಿಟ್ಟಿದೆ. ವಿದ್ಯಾರ್ಥಿಗಳಿಗೆ ದೂರವಾಣಿ, ರೇಡಿಯೋ, ಸಾಮಾಜಿಕ ಜಾಲತಾಣ, ದೂರದರ್ಶನ
ಹಾಗೂ ಎಸ್‌ಎಂಎಸ್‌ಗಳ ಮೂಲಕ ಶೈಕ್ಷಣಿಕ ಸೇವೆ ಒದಗಿಸುವ ಭರವಸೆಯಿತ್ತರು.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:22.09.2020


112


ಭಾಗ-4
ರಾಜ್ಯ ಸರ್ಕಾರ


1. ಅನ್ನು ಮನೆಯಲ್ಲೇ ಚಿಕಿತ್ಸೆ


ಬೆಂಗಳೂರಿನಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಇನ್ನು ಮುಂದೆ ಮನೆಯಲ್ಲೇ ಚಿಕಿತ್ಸೆ
ನೀಡಲು ರಾಜ್ಯ ಸರ್ಕಾರ ಮಹತ್ನ್ಸದ ತೀರ್ಮಾನ ಕೈಗೊಂಡಿದೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ
ಸೂಕ್ತ ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದು, ಆಸ್ಪತ್ರೆಗಳು ತುಂಬಿಕೊಳ್ಳುತ್ತವೆ. ಆದರೆ,
ಹೆಚ್ಚಿನ ಕಡೆ ಯಾವುದೇ ತೀವ್ರ ನಿಗಾದ ಅಗತ್ಯವಿಲ್ಲದ, ಲಕ್ಷಣರಹಿತ ಸೋಂಕಿತರೇ ತುಂಬಿಕೊಂಡಿದ್ದು, ಗಂಭೀರ
ಸ್ಪರೂಪದ ರೋಗಿಗಳ ಚಿಕಿತ್ಲೆಗೆ ತೊಂದರೆಯಾಗುತ್ತಿರುವುದನ್ನು ಸರ್ಕಾರ ಮನಗಂಡು ಈ ತೀರ್ಮಾನಕ್ಕೆ ಬಂದಿದೆ.
ಕೋವಿಡ್‌ 19 ನಿರ್ವಹಣೆ ಕುರಿತು ವಿಧಾನಸೌಧದಲ್ಲಿ ತಜ್ಞ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳ ಸಭೆ
ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ವಿಷಯ ಪ್ರಕಟಿಸಿದರು.


ವಯಸ್ಸಾದವರು ಹಾಗೂ ಗಂಭೀರ ಸ್ಪರೂಪದ ಕಾಯಿಲೆ ಜೊತೆಗೂಡಿರುವ ಸೋಂಕಿತರನ್ನು
ಹೊರತುಪಡಿಸಿ ಉಳಿದವರಿಗೆ ಮನೆಗಳಲ್ಲೇ ಚಿಕಿತ್ಸೆ ನೀಡಿದರೇ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ
ಎ೦ಬ ತಜ್ಞರ ಸಲಹೆಗೆ ಮುಖ್ಯಮಂತ್ರಿ ಸಹಮತ ಸೂಚಿಸಿದ್ದು, ಹೊಸ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಸರ್ಕಾರ
ಪಕಟಿಸಲಿದೆ.


“ಸೋಂಕು ಪ್ರಕರಣ ದ್ವಿಗುಣಗೊಳ್ಳುವ ವೇಗ ತಗ್ಗಿಸಬೇಕು. ಅದಕ್ಕಾಗಿ ಜನಸಂದಣಿ ಸ್ಥಳಗಳಲ್ಲಿ ಹೆಚ್ಚಿನ
ಮುನ್ನೆಚರಿಕೆ ವಹಿಸುವ ಅಗತ್ಯವಿದೆ. ಟೆಲಿ ಮೆಡಿಸಿನ್‌ ವ್ಯವಸ್ಥೆಯ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ
ನೀಡಬಹುದು. ಸೋಂಕು ನಿರ್ವಹಣೆ ಪ್ರಯತ್ನಗಳಿಗೆ ಇನ್ನಷ್ಟು ಇಲಾಖೆಗಳ ಸಿಬ್ಬಂದಿ ಬಳಸಿಕೊಳ್ಳಬೇಕು” ಎಂಬ
ಅಭಿಪ್ರಾಯ ಮೂಡಿತು.


“ಟಿಲಿ ಐಸಿಯು ಹಾಗೂ ಚಿಕಿತ್ಲೆಗೆ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯವಿದೆ.
ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಅಬಾಧಿತವಾಗಿರಬೇಕು.
ರಾಜ್ಯದಲ್ಲಿ ಕೋವಿಡ್‌ ಕುರಿತು ಭೀತಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ವಿಶ್ಲಾಸ ಮೂಡಿಸುವ
ಕೆಲಸವಾಗಬೇಕು ಎಂಬ ಸಲಹೆಗಳು ತಜ್ಞ ವೈದ್ಯರಿಂದ ಬಂದಿವೆ. ಈ ಅಭಿಪ್ರಾಯಗಳನ್ನು ಆಧರಿಸಿ ಸರ್ಕಾರ
ಸೂಕ್ತ ಕ್ರಮ ಜರುಗಿಸಲಿದೆ*” ಹಾಗೂ ಬೆಂಗಳೂರಿನಲ್ಲಿ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತಜ್ಞ ವೈದ್ಯರ
ಸಲಹೆಯಂತೆ ಶೀಘ್ರ ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ
ಡಾ: ಸುಧಾಕರ್‌ ತಿಳಿಸಿದರು.


ವಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿ ಆಶಿಶ್‌ ಸತ್ತತಿ, ಕಿಮ್ನ್‌ನ ಡಾ: ಲೋಕೇಶ್‌,
ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥ ಡಾ:ಸುದರ್ಶನ್‌ ಬಲ್ಲಾಳ್‌, ಡಾ:ಆ೦ಜನಪ್ಪ ಡಾ:ಶರಣ್‌ ಪಾಟೀಲ್‌,
ಡಾ:ಪ್ರಭುದೇವ್‌, ಡಾ:ಪ್ರದೀಪ್‌ ರಂಗಪ್ಪ, ಡಾ:ಪ್ರಕಾಶ್‌, ಡಾ:ಕುಮಾರ್‌, ಡಾ:ಗಿರಿಧರ್‌ ಬಾಬು, ಡಾ:ಷರೀಫ್‌,
ಡಾ:ರಂಗನಾಥ, ಡಾ:ಸತೀಶ್‌, ಡಾ:ಭುಜಂಗ ಶೆಟ್ಟ ಸೇರಿದಂತೆ ಅನೇಕ ತಜ್ಞರು ಸಭೆಯಲ್ಲಿ ಭಾಗವಹಿಸಿದ್ದರು.
ಕಳೆದೊಂದು ವಾರದಲ್ಲಿ ಸೋಂಕು ಸೋಟವಾಗಿದೆ. ರಕ್ಷದ ಕೊರತೆ, ಬೆಡ್‌ ಸಮಸ್ಯೆ ಹೆಚ್ಚಿದೆ. ವಯಸ್ಥಾದ ಹಾಗೂ
ಅನ್ಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ತುರ್ತು ಚಿಕಿತ್ಸೆ ಸಿಗಬೇಕು. ರೋಗ ಲಕ್ಷಣ ಇಲ್ಲದ ಪಾಸಿಟಿವ್‌
ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲ. ಉಸಿರಾಟದ ತೊಂದರೆ ಇದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯಬೇಕು. ರೋಗ ಲಕ್ಷಣ ಇಲ್ಲದವರು ಆಸ್ಪತ್ರೆಗೆ ಬಂದು ಅಡಿಟ್‌ ಆಗಬೇಕಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌ಗಳ


ಕೊರತೆ ಆಗುವುದಿಲ್ಲ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಜೊತೆ ಸೇರಿ ಕೆಲಸ ಮಾಡುತ್ತಿವೆ.


ಯಾರಿಗೆ ಮನೆ ಚಿಕಿತ್ಸೆ : ಯುವಕರು, ಯಾವುದೇ ರೋಗ ಲಕ್ಷಣ ಇಲ್ಲದವರು, ಕಡಿಮೆ ಜ್ವರದ ಲಕ್ಷಣ
ಇರುವವರು


113


ಮತ್ತೆ ಸಾವಿರ ಸೋಂಕು : ರಾಜ್ಯದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಸಾವರ ಮೀರಿದೆ. 1272 ಕೇಸುಗಳು
ದಾಖಲಾಗಿದ್ದು, ಇದರಲ್ಲಿ 735 ಬೆಂಗಳೂರಿನವು. ಒಟ್ಟು 9 ಸಾವುಗಳು ಸಂಭವಿಸಿವೆ.


5 ದಿನಕ್ಕೆ 5000
ಜೂನ್‌-27 918
ಜೂನ್‌-28 1267
ಜೂನ್‌-29 1105
ಜೂನ್‌-30 947
ಜುಲೈ-01 1272
ಒಟ್ಟು 5509


ಆಧಾರ:ವಿಜಯಕರ್ನಾಟಕ, ದಿನಾಂಕ:02.07.2020
2. ಡಿಕೆಶಿ ವರ್ಚುವಲ್‌ ವಿಶ್ವದಾಖಲೆ


ರಾಜಕೀಯ ಪಕ್ಷವೊಂದರ ಅಧ್ಯಕ್ಷರ ಪದಗಹಣ ಕಾರ್ಯಕ್ರಮ ಯಾವುದೇ ಗೋಜಲು ಗೊಂದಲಗಳಿಲ್ಲದೆ
ರಾಜ್ಯದ ಸುಮಾರು 19,000 ಕಡೆಗಳಲ್ಲಿ ಸುಮಾರು 40 ಲಕ್ಷ ಕಾರ್ಯಕರ್ತರು ಏಕಕಾಲಕ್ಕೆ ಪಾಲ್ಗೊಂಡು
ಯಶಸ್ಥಿಗೊಳಿಸಿರುವುದು ದಾಖಲೆಯಾಗಿದೆ.


ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬೃಹತ್‌ ಸಮಾವೇಶದ ಬದಲು ಆನ್‌ಲೈನ್‌
ಮೂಲಕ ಅಷ್ಟೇ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಸಂಘಟಿಸಿದ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷರಾಗಿ
ಅಧಿಕಾರ ಸ್ಲೀಕರಿಸಿದ್ದಾರೆ. ಕೆಪಿಸಿಸಿಯ ಇನ್ನೂ ಅಧಿಕೃತವಾಗಿ ಉದ್ರಾಟನೆಯಾಗದ ನೂತನ ಕಛೇರಿಯಲ್ಲಿ
ಹಮ್ಮಿಕೊಂಡಿದ್ದ ಪದಗ್ರಹಣ "ಪ್ರತಿಜ್ಞಾ ಕಾರ್ಯಕ್ರಮ ಮೂರು ಗಂಟೆಗಳ ಕಾಲ ಯಾವುದೇ ತಾಂತ್ರಿಕ ಅಡಚಣೆ
ಇಲ್ಲದೆ ಸರಾಗವಾಗಿ ನಡೆಯಿತು. ರಾಜ್ಯ ಸರ್ಕಾರ ಸೂಚಿಸಿದಂತೆ, ಸಾಮಾಜಿಕ ಅಂತರಕ್ಕೆ ಧಕ್ಕೆಯಾಗದಂತೆ
ನಿಯಮಿತ ಸಂಖ್ಯೆಯಲ್ಲಿ ನಿರ್ದಿಷ್ಟ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಜಕೀಯ ಪಕ್ಷವೊಂದರ
ವರ್ಚುವಲ್‌ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿ, ತಲುಪಬೇಕಾದ ಜನರನ್ನು ತಲುಪಬಹುದು ಎನ್ನುವುದನ್ನು
ಕಾರ್ಯಕ್ರಮ ಸಾಕ್ಷೀಕರಿಸಿತು.


ಪಕ್ಷ ಸಂಘಟನೆ ಪ್ರತಿಜ್ಞೆ : ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ಟೀಕರಿಸಿದ ನಂತರ ಪ್ರತಿಜ್ಞೆ ಸ್ಪೀಕರಿಸಿದ
ಡಿ.ಕೆ.ಶಿವಕುಮಾರ್‌, "ನಾನು ಭಾರತೀಯ ಕಾಂಗೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ನಮ್ಮ ದೇಶದ
ಸಂವಿಧಾನಕ್ಕೆ ಸದಾ ಬದ್ಧನಾಗಿರುತ್ತೇನೆ, ಪಕ್ಷ ನನಗೆ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ,
ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಕಾಂಗೆಸ್‌ ಪಕ್ಷವನ್ನು ಕೇಡರ್‌ ಆಧಾರಿತ ಪಕ್ಷವನ್ನಾಗಿ ಪರಿವರ್ತಿಸಲು
ದುಡಿಯುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ದೃಢ ಸಂಕಲ್ಪ ಮಾಡುತ್ತೇನೆ. ಇದು ನನ್ನ ಪ್ರಶಿಜ್ಞೆ
ಎಂದು ಘೋಷಿಸಿದರು. ಅವರೊಂದಿಗೆ ರಾಜ್ಯಾದ್ಯಂತ ಕಾರ್ಯಕ್ರಮದಲ್ಲಿ ಆನ್‌ಲೈನ್‌ ಮೂಲಕ ಭಾಗಿಯಾಗಿದ್ದ
ಎಲ್ಲ ಕಾಂಗೆಸ್‌ ಕಾರ್ಯಕರ್ತರೂ ಏಕಕಾಲಕ್ಕೆ ಪ್ರತಿಜ್ಞೆ ಕೈಗೊಂಡರು.


ಶುಭಾಶಯ ಕೋರಿದ ರಾಹುಲ್‌ ಗಾಂಧಿ:- ಕಾರ್ಯಕ್ರಮದ ವೇಳೆಯೇ ಎಐಸಿಸಿ ಮಾಜಿ ಅಧ್ಯಕ್ಷೆ ರಾಹುಲ್‌ ಗಾಂಧಿ
ಅವರು ಡಿ.ಕೆ ಶಿವಕುಮಾರ್‌ಗೆ ಕರೆ ಮಾಡಿ ಶುಭಾಶಯ ಕೋರಿದರು. ಕರ್ನಾಟಕ ಕಾಂಗೆಸ್‌ಗೆ ಅಭಿನಂದನೆಗಳು.
ಡಿ.ಕೆ.ಶಿವಕುಮಾರ್‌ ಅವರು ಕೋವಿಡ್‌ ಹಾಗೂ ಆರ್ಥಿಕ ಬಿಕ್ಕಟ್ಟಿನಂತಹ ಸಂಕಷ್ಟದ ಸಮಯದಲ್ಲಿ ಕರ್ನಾಟಕ
ಜನರ ಹಿತಾಸಕ್ತಿಗೆ ಬದ್ಧರಾಗಿ, ಅದರಲ್ಲೂ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಕೆಲಸ ಮಾಡಲಿದ್ದಾರೆ ಎಂದು
ಭಾವಿಸುತ್ತೇನೆ. ಪಕ್ಷದ ಯಶಸ್ಸಿಗಾಗಿ ಎಲ್ಲರೂ ಶ್ರಮಿಸಬೇಕು. ಡಿ.ಕೆ.ಶಿವಕುಮಾರ್‌ ಅವರು ಪ್ರಶಿಯೊಬ್ಬ
ಕಾಂಗೆಸಿಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಿದ್ದು, ಅವರು ಅದನ್ನು ಮಾಡಲಿದ್ದಾರೆ ಎಂಬ ನಂಬಿಕೆ
ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅವರು ಶುಭಾಶಯ ಕೋರುವುದನ್ನು ಮೈಕ್‌ನಲ್ಲಿ ಕೇಳಿಸುವ ಮೂಲಕ
ಅವರ ಸಂದೇಶ ಪಕ್ಷದ ಎಲ್ಲ ಕಾರ್ಯಕರ್ತರಿಗೆ ತಲುಪುವಂತೆ ಮಾಡಲಾಯಿತು.


114


ಸಾಮೂಹಿಕ ನಾಯಕತ್ವದ ಮೇಲೆ ನನಗೆ ನಂಬಿಕೆ:-


ಸಾಮೂಹಿಕ ನಾಯಕತ್ವ ಪರಿಕಲ್ಲನೆಯಲ್ಲಿ ನಂಬಿಕೆ ಇಟ್ಟಿದ್ದು, ಯಾವುದೇ ಜಾತಿ ಧರ್ಮ ಭೇದಭಾವ
ಮಾಡುವುದಿಲ್ಲ. ಪಕ್ಷದಲ್ಲಿ ಗುಂಪುಗಾರಿಕೆ ಸಹಿಸುವುದಿಲ್ಲ. ಪಕ್ಷ ತೊರೆದು ಹೋಗುತ್ತೇನೆಂದು ಬೆದರಿಕೆ
ಹಾಕುವವರಿಗೆ ಬಗ್ಗುವುದಿಲ್ಲ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.


ವರ್ಚುವಲ್‌ ಸಮಾವೇಶ ಮೂಲಕ ನಡೆದ ಐತಿಹಾಸಿಕ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಅಧಿಕಾರ ಸ್ಪೀಕರಿಸಿದ
ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷವನ್ನು ಸಂಘಟಿಸುವ ಹಾಗೂ ಅಧಿಕಾರಕ್ಕೆ ತರುವ ಪ್ರತಿಜ್ಞೆ
ಮಾಡಿದರು.


ಈ ಸಂದರ್ಭದಲ್ಲಿ ಭಾವುಕರಾಗಿ ಮಾತಾನಾಡಿದ ಅವರು, ಇದೊಂದು ಐತಿಹಾಸಿಕ ದಿನ ನನ್ನ ಪಾಲಿಗೆ,
ರಾಜ್ಯದ ಎಲ್ಲ ಕಾಂಗೆಸಿಗರು, ಕನ್ನಡ ನಾಡಿನ ಜನರಿಗೆ ಇದೊಂದು ವಿಶೇಷ ದಿನ ಎಂದರು. ನಾನು ಯಾವುದೇ
ನಿರ್ಧಾರ ಕೈಗೊಂಡರೂ ಸಾಮೂಹಿಕವಾಗಿ ಚರ್ಚಿಸಿ ನಂತರ ತೀರ್ಮಾನಿಸುತ್ತೇನೆ. ವೈಯುಕ್ತಿಕ ತೀರ್ಮಾನ
ಕೈಗೊಳ್ಳುವುದಿಲ್ಲ. ನಾನು ವೈಯುಕ್ತಿಕ ನಾಯಕತ್ಪಕ್ಕಿಂತ ಸಾಮೂಹಿಕ ನಾಯಕತ್ಸದ ಮೇಲೆ ನಂಬಿಕೆ ಇಟ್ಟವನು.
ಜೊತೆಗೂಡುವುದು ಆರಂಭ, ಜೊತೆಗೂಡಿ ಯೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು
ಎಂಬುದನ್ನು ನಂಬಿರುವವನು, ಈ ಎಲ್ಲಾ ಸಂಘಟನೆಗಳಿಂದ ನಾವು ಶಕ್ತಿ ನೀಡದಿದ್ದರೆ ಗುರಿ ಸಾಧಿಸಲು
ಸಾಧ್ಯವಿಲ್ಲ. ನಮ್ಮ ಪಕ್ಷವನ್ನು ಮಾಸ್‌ ಬೇಸ್‌ನಿಂದ ಕೇಡರ್‌ ಬೇಸ್‌ ಪಾರ್ಟಿಯಾಗಿ ಪರಿವರ್ತಿಸಬೇಕಿದೆ.
ಯಾವುದೇ ನಾಯಕನಾದರೂ ಆತ ಬೂತ್‌ ಮಟ್ಟದಿಂದ ಪ್ರತಿನಿದಿಸಬೇಕು. ಇದಕ್ಕೆ ಕೇರಳ ಮಾಡೆಲ್‌ ಪ್ರೇರಣೆ.
ನಾವೆಲ್ಲರೂ ಸೇರಿ ಎಲ್ಲರಿಗೂ ಸ್ಥಾನಮಾನ ಸಿಗುವಂತೆ ಕಾರ್ಯಕ್ರಮ ರೂಪಿಸೋಣ ಎಂದು ಹೇಳಿದರು.


ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ರಾಜೀವ್‌
ಗಾಂಧಿ ಅವರು ಮತದಾನದ ವಯಸ್ಸನ್ನು 18ಕ್ಕೆ ಇಳಿಸಿದಾಗ ಬೇರೆ ಪಕ್ಷದವರು ಇದನ್ನು ಪಶ್ಲಿಸಿದ್ದರು. ಆದರೆ
ಸಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಪರಿಗಣಿಸದಿದ್ದರೆ ಅವರಿಗೆ ಅನ್ಯಾಯ ಮಾಡಿದಂತೆ ಎಂದು ರಾಜೀವ್‌


ಗಾಂಧಿ ಹೇಳಿದ್ದರು. ಆ ಮೂಲಕ ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ, ವಿಶ್ವಾಸ ಇಟ್ಟಿದ್ದರು. ಇಂದು


ತಂತ್ರಜ್ಞಾನವನ್ನು ನಾವು ಬಹಳ ದೊಡ್ಡ ಮಟ್ಟದಲ್ಲಿ ಬಳಸುತ್ತಿದ್ದೇವೆ. ಇದಕ್ಕೆ ಅಡಿಪಾಯ ಹಾಕಿದ್ದೇ ರಾಜೀವ್‌
ಗಾಂಧಿ ಅವರು ಎಂದು ಹೇಳಿದರು.


ಅಧ್ಯಕ್ಷನಾದರೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತ:- ತಮ್ಮ ಸಂಕಷ್ಟದ ದಿನಗಳನ್ನು ನೆನೆಪಿಸಿಕೊಂಡ ಶಿವಕುಮಾರ್‌
“ನನ್ನ ರಾಜಕೀಯ ಬದುಕು ಮುಗಿಯಿತು. ಬಿಜೆಪಿಯವರ ಕುತಂತ್ರದಿಂದಾಗಿ ನನ್ನ ರಾಜಕೀಯ ಅಂತ್ಯವಾಯಿತು
ಎನ್ನುವ ಮಾತು ಕೇಳಿಬಂದಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ತಿಹಾರ್‌ ಜೈಲಿಗೆ ಬಂದು ನನ್ನನ್ನು
ತಮ್ಮ ಸಹೋದರನಂತೆ ಕಂಡು, ಒಂದು ಗಂಟೆಗಳ ಕಾಲ ಧೈರ್ಯ ತುಂಬಿ ಈಗ ನನ್ನನ್ನು ಈ ಸ್ಥಾನದಲ್ಲಿ
ನಿಲ್ಲಿಸಿದ್ದಾರೆ. ನಾನು ಅಧ್ಯಕ್ಷನಾದರೂ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ, ಯಾವುದೇ ಗುಂಪುಗಾರಿಕೆ ಮೇಲೆ
ನನಗೆ ನಂಬಿಕೆ ಇಲ್ಲ. ಯಾವುದೇ ಧರ್ಮ, ಜಾತಿ ಭೇದ-ಭಾವ ನನಗಿಲ್ಲ. ನಾನು ನಂಬುವುದು ಕೇವಲ ಕಾಂಗೆಸ್‌
ಧರ್ಮವನ್ನು ಮಾತ್ರ. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಜ್ಜೆ ಹಾಕಬೇಕು ಎಂದು ಹೇಳಿದರು. ಕಾಂಗೆಸ್‌ ಅಧಿನಾಯಕಿ
ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಕೆ.ಸಿ. ವೇಣುಗೋಪಾಲ್‌ ಜೊತೆ ಸುದೀರ್ಪ ಚರ್ಚೆ
ಮಾಡಿ, ರಾಜ್ಯದ ಎಲ್ಲಾ ನಾಯಕರ ಸಲಹೆ ಪಡೆದು ನನಗೆ ಜವಾಬ್ದಾರಿ ಕೊಟ್ಟು ನಿಮ್ಮ ಮುಂದೆ ನಿಲ್ಲಿಸಿದ್ದಾರೆ.
ನನಗೆ ಅಧ್ಯಕ್ಷೆ ಸ್ಥಾನದ ಹಂಬಲ ಇಲ್ಲ ಆದರೆ ಸವಾಲು ಎದುರಿಸಲು ಉತ್ಸಾಹವಿದೆ. ಸೋನಿಯಾ ಗಾಂಧಿ
ಅವರು ಯಾವ ಸಂದರ್ಭದಲ್ಲಿ ನನಗೆ ಈ ಶಕ್ತಿ ಕೊಟ್ಟರು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು
ಭಾವುಕರಾಗಿ ನುಡಿದರು.


(€


ಆಧಾರ:ಉದಯವಾಣಿ, ದಿನಾ೦ಕ:03.07.2020
3. ಕೋವಿಡ್‌: ಮನೆಯಲ್ಲಿಯೇ ಆರೈಕೆಗೆ ಅವಕಾಶ


ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಒದಗಿಸಲು
ನಿರ್ಧರಿಸಿರುವ ರಾಜ್ಯ ಸರ್ಕಾರ, ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕೋವಿಡ್‌
ಪೀಡಿತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿದೆ. ಇದರಿಂದಾಗಿ


115


ಗಂಭೀರವಾಗಿ ಅಸ್ಪಸ್ಥಗೊಂಡ ರೋಗಿಗಳಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರಲಿದೆ ಎಂಬ ಕಾರಣಕ್ಕೆ


[()


ಮನೆಯಲ್ಲೇ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಈ ಮಾದರಿಯ ಆರೈಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ
ಪರಿಷತ್ತು (ಐಸಿಎಂ೦ಆರ್‌) ಅನುಮೋದನೆ ನೀಡಿದೆ.


ಯಾರಿಗೆ ಮನೆಯಲ್ಲಿ ಚಿಕತೆ


>


ಕೊರೋನಾ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಹಂತದ
ಲಕ್ಷಣಗಳು ಕಾಣಿಸಿಕೊಂಡವರಿಗೆ.


> ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಅಗತ್ಯ ವ್ಯವಸ್ಥೆ ಇರಬೇಕು.


ಜಿಲ್ಲಾ ಆರೋಗ್ಯ ಪ್ರಾಧಿಕಾರ ಅಥವಾ ಬಿಬಿಎಂಪಿಯ ಆರೋಗ್ಯ ತಂಡವು ಮನೆಗೆ ಭೇಟ ನೀಡಿ,
ವ್ಯವಸ್ಥೆ ಪರಿಶೀಲಿಸುತ್ತದೆ.


> ಆರೈಕೆ ವಿಧಾನದ ಬಗೆಗಿನ ಮಾಹಿತಿಯನ್ನು ಟೆಲಿ ಕನ್ನಲ್ಲೇಶನ್‌ ಮೂಲಕ ಪಡೆದುಕೊಳ್ಳಬೇಕು


ಆರೋಗ್ಯದ ಸ್ಥಿತಿಗತಿಯ ಬಗ್ಗೆ ಪ್ರತಿನಿತ್ಯ ವೈದ್ಯರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.


» ಆಕ್ಷಿಮೀಟರ್‌, ಡಿಜಿಟಲ್‌ ಥರ್ಮಾಮೀಟರ್‌ ಹಾಗೂ ವೈಯುಕ್ತಿಕ ರಕ್ಷಣಾ ಸಾಧನಗಳನ್ನು


ಹೊಂದಿರಬೇಕು.


> ಮನೆ ಇಸೋಲೇಷನ್‌ ನಿಯಮಗಳನ್ನು ಕುಟುಂಬದ ಸದಸ್ಯರು ಕೂಡ ತಿಳಿದಿರಬೇಕು.


ಉತ್ತಮವಾಗಿ ಗಾಳಿ ಬೆಳಕು ಇರುವ ಕೊಠಡಿ ಹಾಗೂ ಪ್ರತ್ಯೇಕ ಶೌಚಾಲಯ ಇರಬೇಕು.


» ಮನೆಯಾರೈಕೆಗೆ ಒಳಗಾದ ವ್ಯಕ್ತಿಯ ಕೈಗೆ ಟ್ಯಾಗ್‌ ಅಳವಡಿಕೆ ಮಾಡಲಾಗುತ್ತದೆ. ಮನೆಯ ಪ್ರವೇಶ


ದ್ದಾರಕ್ಕೆ ಭಿತ್ತಿ ಪತ್ರ ಅಂಟಿಸಲಾಗುತ್ತದೆ.


50 ವರ್ಷ ಮೇಲ್ಲಟ್ಟವರು, ಮಧುಮೇಹ, ಅಧಿಕ ರಕ್ತದೊತ್ತಡ, ಎಚ್‌ಐವಿ, ಕ್ಯಾನ್ಸರ್‌, ಹೃದಯ ಕಾಯಿಲೆ
ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮನೆಯ ಆರೈಕೆ ಅಪಾಯ. ಹಾಗಾಗಿ
ಅಂತಹವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ. ಮನೆ ಆರೈಕೆ ಅವಧಿಯಲ್ಲಿ ವ್ಯಕ್ತಿಗಳ ಆರೋಗ್ಯ ಸ್ಥಿತಿ
ಹದಗೆಟ್ಬಲ್ಲಿ ಕೂಡಲೇ ಆಸ್ಪತ್ರೆ ಸಂಪರ್ಕಿಸಬೇಕು.


ಕುಟುಂಬದ ಸದಸ್ಯರಿಗೆ ಸೂಚನೆಗಳು


>


VV VY VY VY VY VV VV


ಭಯ, ಆತಂಕಕ್ಕೆ ಒಳಗಾಗಬಾರದು.

ವ್ಯಕ್ತಿಯಲ್ಲಿ ಸಕರಾತ್ಮಕ ಚಿಂತನೆಗಳು ಮೂಡುವಂತೆ ನೋಡಿಕೊಳ್ಳಬೇಕು.

ಕನಿಷ್ಠ ಆರು ಅಡಿಗಳಷ್ಟು ಅಂತರ ಕಾಯ್ದುಕೊಳ್ಳಬೇಕು.

ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು.

ನೆರೆಹೊರೆಯವರ ಸಹಕಾರದಿಂದ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಬೇಕು.

ಗೊಂದಲ ಉಂಟಾದಲ್ಲಿ ಅಥವಾ ಮಾಹಿತಿಗೆ ಸಹಾಯವಾಣಿ ಸಂಖ್ಯೆ 14410ಕ್ಕೆ ಸಂಪರ್ಕಿಸಿ.
ರೋಗಿ ಮಾಸ್ಕ್‌ ಧರಿಸುವ ಜೊತೆಗ ಅಗತ್ಯ ಮುಂಜಾಗ್ರತೆ ವಹಿಸಬೇಕು.

ಮುಖಗವಸು ಒದ್ದೆಯಾಗಿದ್ದರೆ ಅಥವಾ ಕೊಳೆಯಾಗಿದ್ದರೆ ಬದಲಾಯಿಸಬೇಕು.

ಮನೆಯ ಬೇರೆ ಸದಸ್ಯರ ಟವೆಲ್‌, ವಸ್ತುಗಳನ್ನು ಸ್ಪರ್ಶಿಸಬಾರದು.

ರೋಗಿಯ ಕೊಠಡಿಗೆ ಆಹಾರ ಒದಗಿಸಬೇಕು.


116


» ರೋಗಿ ಬಳಸಿದ ಪಾತ್ರೆಗಳು ಹಾಗೂ ವಸ್ತುಗಳನ್ನು ಇನ್ನೊಬ್ಬರು ಬಳಸಬಾರದು.
ಮನೆ ಆರೈಕೆ ವೇಳೆ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರಬೇಕು.


> 10 ದಿನಗಳ ಬಳಿಕ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆಯಾಗಿದ್ದಲ್ಲಿ ಕೋವಿಡ್‌ ಪರೀಕ್ಷೆಗೆ
ಸಂಪರ್ಕಿಸಬೇಕು.


> ವ್ಯಕ್ತಿ ಗುಣಮುಖರಾಗಿರುವುದು ಖಚಿತವಾದ ಬಳಿಕ ಕೊಠಡಿಯನ್ನು ಸೋಂಕು ನಿವಾರಕದಿಂದ
ಸ್ವಚ್ಛೆಗೊಳಿಸಬೇಕು.


ಆಧಾರ:ಪ್ರಜಾವಾಣಿ, ದಿನಾಂಕ: 03.07.2020
4. ರಾಜ್ಯದಲ್ಲಿ ಸರ್ಕಾರಿ ವಾಹನಗಳು 30 ದಿನ ನಿಂತಲ್ಲೇ ನಿಲ್ಲುವಂತಿಲ್ಲ


ಸಾರ್ವಜನಿಕರ ತೆರಿಗೆ ದುಡ್ಡಲ್ಲಿ ಖರೀದಿಸಿದ ಲಕ್ಷಾಂತರ ರೂಪಾಯಿ ಮೌಲ್ಕದ ಸರ್ಕಾರಿ ವಾಹನಗಳು
ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲಾಖೆಗಳ ಆವರಣದಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ. ಇನ್ನು ಮುಂದೆ
ಈ ಉದಾಸೀನತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಹೆಜ್ಜೆಯಿಟ್ಟಿದ್ದು. ಸೂಕ್ತ ಕಾರಣವಿಲ್ಲದೆ
ವಾಹನವನ್ನು 30 ದಿನಗಳವರೆಗೆ ಓಡಿಸದೆ ನಿಲ್ಲಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.


ಅಂದಾಜಿನ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ವಾರ್ಷಿಕ 40ರಿಂದ 60ಲಕ್ಷ ರೂ.ವರೆಗಿನ ಸರ್ಕಾರಿ ವಾಹನಗಳು
ಹಾಳಾಗುತ್ತಿವೆ. ಸಣ್ಣಪುಟ್ಟ ರಿಪೇರಿ ಬಂದರೂ ಸರಿಪಡಿಸಿಕೊಳ್ಳುತ್ತಿಲ್ಲ. ಹಲವು ವರ್ಷ ಬಳಸಿಕೊಳ್ಳಬಹುದಾದ
ಪರಿಸ್ಥಿತಶಿಯಲ್ಲಿದ್ದರೂ ಪಕ್ಕಕ್ಕೆ ನಿಲ್ಲಿಸಿ ಹಾಳು ಮಾಡಲಾಗುತ್ತಿದೆ. ಬೇರೆಲ್ಲ ಇಲಾಖೆಗಳಿಗೆ ಹೋಲಿಸಿಕೊಂಡರೆ,
ಪೊಲೀಸ್‌ ಇಲಾಖೆಯಲ್ಲಿ ನಿಂತಲ್ಲೇ ನಿಂತು ಕರಗುವ ವಾಹನಗಳ ಸಂಖ್ಯೆ ಜಾಸ್ತಿ ಸಮರ್ಪಕ ಕಾರಣವಿಲ್ಲದೇ
ಯಾವುದೇ ವಾಹನ 30 ದಿನಗಳಿಗಿಂತ ಹೆಚ್ಚು ಕಾಲ ಬಳಕೆಯಾಗದೆ ನಿಲ್ಲುವಂತಿಲ್ಲ. ಸಣ್ಣ-ಪುಟ್ಟ ರಿಪೇರಿ ಇದ್ದರೆ
ಮಾಡಿಸಿಕೊಂಡು ಬಳಸಬೇಕು. ಇಲ್ಲವಾದರೆ ಆರ್‌.ಟಿ.ಓ. ಅಧಿಕಾರಿಗಳಿಂದ ದರ ನಿಗದಿಪಡಿಸಿ ಹರಾಜು ಹಾಕಿ
ಖಜಾನೆಗೆ ಹಣ ಜಮೆ ಮಾಡಬೇಕು. ವಾಹನ ನಿರ್ವಹಣೆ ಕುರಿತು ಪ್ರತಿ ತಿಂಗಳು ವರದಿ ಸಲ್ಲಿಸಬೇಕು. ತಪ್ಪಿದರೆ
ಆಯಾ ಘಟಕಗಳ ಮುಖ್ಯಸ್ಥರ ವಿರುದ್ದ ಶಿಸ್ತು ಕಮ ಎಂದು ಡಿಜಿಪಿ ಪ್ರವೀಣ್‌ ಸೂದ್‌ ಎಚ್ಚರಿಕೆ ಕೊಟ್ಟಿದ್ದಾರೆ.


ಒಂದು ಠಾಣೆಗೆ ಕನಿಷ್ಠ 10 ವಾಹನ: ಬೆಂಗಳೂರಿನಲ್ಲಿ 120 ಲಾ ಆ್ಯಂಡ್‌ ಆರ್ಡರ್‌ ಠಾಣೆಗಳು ಹಾಗೂ
44 ಟ್ರಾಫಿಕ್‌ ಠಾಣೆಗಳು ಸೇರಿ 164 ಠಾಣೆಗಳಿವೆ. ಸಿಸಿಬಿ, ಲಾ ೃಂಡ್‌ ಆರ್ಡರ್‌ ಟ್ರಾಫಿಕ್‌, ಕಮಾಂಡ್‌ ಸೆಂಟರ್‌,
ವಿವಿಐಪಿ ಸೇರಿ 22 ಡಿಸಿಪಿ ಕಚೇರಿಗಳಿವೆ. ಪ್ರತಿಯೊಂದು ಠಾಣೆಗೂ ಗಸ್ತು ತಿರುಗಲು ಎಸ್‌ಐಗಳಿಗೆ ಚೀತಾ ಬೈಕ್‌,
ಹೊಯ್ದಳ, ಜೀಪ್‌, ಟಾಟಾ ಸುಮೋ ಸೇರಿ ಕನಿಷ್ಟ 10 ವಾಹನಗಳನ್ನು ನೀಡಲಾಗಿದೆ.


> ಕೆಟ್ಟರುವ ವಾಹನ 2 ತಿಂಗಳು ರಿಪೇರಿಗೆ ಕಳುಹಿಸದಿದ್ದರೆ ಅದು ಗಂಭೀರ ಅಪರಾಧ.

> ವಾಹನ ತಯಾರಿಕಾ ವರ್ಷ, ಇಂಜಿನ ಪರಿಸ್ಥಿತಿ ಆಧರಿಸಿ ಗುಜರಿಗೆ ಹಾಕಲು ಅನುಮತಿ.
> ವಾಹನ ವಿಲೇವಾರಿಗೆ ಅನುಮತಿ ಸಿಕ್ಕ 2 ತಿಂಗಳಲ್ಲೇ ಹರಾಜು ಪ್ರಿಯೆ ಮುಗಿಸಬೇಕು.

> ಆರ್‌.ಟಿ.ಓ. ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬಿಡ್‌ ಮಾಡಿದವರಿಗೆ ವಾಹನ ಕೊಡಬೇಕು.
> ನಿಗದಿತ ಅವಧಿಯಲ್ಲಿ ಬಿಡ್‌ದಾರ ವಾಹನ ಪಡೆಯದಿದ್ದರೆ ಆತನ ಠೇವಣಿ ಹಣ ವಶಕ್ಕೆ.


ಟೈರು, ಇಂಜಿನ್‌ ಮಾಯ: ಪ್ರತಿಯೊಂದು ಇಲಾಖೆಗಳಲ್ಲೂ ವಾಹನ ಚಾಲನೆಗಾಗಿ ಪ್ರತ್ತೇಕ ಚಾಲಕರನ್ನು
ಸರ್ಕಾರವೇ ನೇಮಕ ಮಾಡಿದೆ. ವಾಹನ ನಿರ್ವಹಣೆ ಜವಾಬ್ದಾರಿ ಚಾಲಕರದ್ದೇ ಆಗಿರುತ್ತದೆ. ಪಂಚರ್‌ ಆದರೆ,
ಸಣ್ಣ ಬೋಲ್ಫ್‌ ಹೋದರೂ ದುರಸ್ತಿ ಮಾಡಿಸದೇ ಪಕ್ಕಕ್ಕೆ ನಿಲ್ಲಿಸುತ್ತಾರೆ. ಹಾಗೆ ನಿಲ್ಲಿಸಿದ ವಾಹನಗಳಲ್ಲಿ
ರಾತ್ರೋರಾತ್ರಿ ಇಂಜಿನ್‌, ಟೈರ್‌ ಕಳವು ಮಾಡಲಾಗುತ್ತದೆ ಎಂಬ ಆರೋಪವು ಇದೆ.


2016ರಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಹೊಯ್ದಳ ವಾಹನಗಳನ್ನು ಗಸ್ತಿಗಾಗಿ ಠಾಣೆಗಳಿಗೆ
ನೀಡಲಾಯಿತು. ಅದಕ್ಕೂ ಮುಂಚೆ ಇದ್ದಂಥ ಹೊಯ್ದಳ ವಾಹನಗಳು ಹಾಗೂ ಕಾರುಗಳು, ಬೈಕ್‌ಗಳು ಠಾಣೆ


117


ಆವರಣದಲ್ಲೇ ನಿಂತು ತುಕ್ಕು ಹಿಡಿದಿವೆ. ಸರ್ವೀಸ್‌ ಮಾಡಿಸಿ ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳು
ಹೇಳುತ್ತಾರೆ. ಎಲ್ಲಾ ವಾಹನಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಡಿಜಿಪಿ ಈ ಆದೇಶ ಹೊರಡಿಸಿದ್ದಾರೆ. ಪ್ರಿ
ತಿಂಗಳು ವರದಿ ಪಡೆದು ವಾಹನಗಳ ನಿರ್ವಹಣೆ ಗಮನಿಸಲಾಗುತ್ತದೆ.


ಆಧಾರ:ವಿಜಯವಾಣಿ, ದಿನಾ೦ಕ:07.07.2020
5. ರೋಗಲಕ್ಷಣ ಕಡಿಮೆ ಇದ್ದವರಿಗೆ ಮನೆ ಚಿಕಿತ್ಸೆ ಹೋಮ್‌ ಕ್ಷಾರಂಟೈನ್‌ಗೆ ಮಾರ್ಗಸೂಚಿ ಪ್ರಕಟ


ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯದಲ್ಲಿ ಎ ಸಿಂಪುಮ್ಯಾಟಿಕ್‌ (ರೋಗ ಲಕ್ಷಣ ಇಲ್ಲದ)
ರೋಗಿಗಳಿಗೆ ಹೋಮ್‌ ಐಸೋಲೇಷನ್‌ ವ್ಯವಸ್ಥೆಯಡಿ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಶಗಾಗಲೇ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಈ ನಿಯಮ ಜಾರಿಯಾಗಲಿದೆ.


ರಾಜ್ಯಾದ್ಯಂತ ಬೂತ್‌ ಮಟ್ಟದಲ್ಲಿ ಕಾರ್ಯಪಡೆ ರಚನೆಗೆ ತೀರ್ಮಾನಿಸಲಾಗಿದೆ. ಇದರಲ್ಲಿ ಆರೋಗ್ಯ
ಇಲಾಖೆ, ಪೊಲೀಸ್‌, ಪಾಲಿಕೆ ವಾರ್ಡ್‌ ಸಿಬ್ಬಂದಿ/ಗ್ರಾಮಪಂಚಾಯಿತಿ ಲೈನ್‌ಮ್ಯಾನ್‌ ಅಥವಾ ವಾಟರ್‌ ಮ್ಯಾನ್‌
ಇರಲಿದ್ದಾರೆ. ಇನ್ನುಂದೆ ಹೋಂ ಕ್ಷಾರಂಟೈನ್‌ನಲ್ಲಿದ್ದವರು ಪಾಸಿಟಿವ್‌ ಇದ್ದೂ ಹೊರಗಡೆ ಹೋದರೆ ಕ್ರಿಮಿನಲ್‌
ಮೊಕದ್ದಮೆ ದಾಖಲು ಮಾಡಲು ಕೋವಿಡ್‌ ಕಾರ್ಯಪಡೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.


ಕೊರೋನಾ ಕಾರ್ಯಪಡೆ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ
ಸಚಿವ ಡಾಃಕೆ.ಸುಧಾಕರ್‌, ಎ ಸಿಂಪ್ಲಮ್ಯಾಟಿಕ್‌ನ 50 ವರ್ಷಕ್ಕಿಂತ ಕಡಿಮೆ ವರ್ಷದ ರೋಗಿಗಳು ಪ್ರತ್ಯೇಕ ಕೊಠಡಿ,
ಶೌಚಾಲಯ, ಪಾಲನೆಗೆ ಒಬ್ಬರು ಇರಬೇಕು. ಹದಿನೇಳು ದಿನ ಹೋಮ್‌ ಐಸೋಲೇಷನ್‌ನಲ್ಲಿರಬೇಕು. ಆ
ಅವಧಿಯಲ್ಲಿ ಕೆಮ್ಮು ಜ್ವರ, ನೆಗಡಿ ಬರದಿದ್ದರೆ ಅಂತಹವರನ್ನು ಬಿಡುಗಡೆ ಮಾಡಲಾಗುವುದು. ಇಲ್ಲದಿದ್ದರೆ ಮತ್ತೆ
ಏಳು ದಿನ ಹೋಂ ಕ್ಷಾರೆಂಟೈನ್‌ ಮಾಡಲಾಗುವುದು ಎಂದು ಹೇಳಿದರು.


50 ವರ್ಷ ಒಳಗಿನವರಿಗೆ ಮೆಡಿಕಲ್‌ ಚಿಕಿತ್ಲೆ, ರಕ್ತದ ಒತ್ತಡ ಪರೀಕ್ಷೆ ಮಾಡಲಾಗುವುದು. ವೈದ್ಯರು ತೀವ
ನಿಗಾ ವಹಿಸಲಿದ್ದಾರೆ. ಟೆಲಿ ಮೆಡಿಕೇಷನ್‌ ಮಾಡೋ ಕೆಲಸ ಆಗುತ್ತದೆ. ವೈದ್ಯರಿಗೆ ರೋಗಿಗಳ ಜವಾಬ್ದಾರಿ
ನೀಡಲಾಗುವುದು. ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೂ ಇದೇ ಅನ್ವಯ ಎಂದು ತಿಳಿಸಿದರು. ಐಎಲ್‌ಐ ಲಕ್ಷಣ
ಇರುವವರು ಆಸ್ಪತ್ರೆಗೆ ಬರದಿದ್ದರೆ ಸಮಸ್ಯೆಯಾಗುತ್ತದೆ. ಕೆಲವೆಡೆ ಕ್ಲಾರೆಂಟೈನ್‌ಗೆ ಹಾಕುತ್ತಾರೆ ಎಂಬ ಭಯದಿಂದ
ಆರೇಳು ದಿನವಾದರೂ ಆಸ್ಪತ್ರೆಗೆ ಬರುತ್ತಿಲ್ಲ ಇದರಿಂದ ಹೆಚ್ಚು ಸೋಂಕು ಹರಡುವುದು ಹಾಗೂ ಸಾವು
ಪ್ರಕರಣಗಳು ಸಂಭವಿಸುತ್ತಿದೆ ಎಂದು ಹೇಳಿದರು.


ಕರ್ನಾಟಕದಲ್ಲಿ ಸೋಂಕಿತರ ತೀವ್ರತೆ ಬಹಳ ಕಡಿಮೆ ಇದೆ. ಸೋಂಕಿತರು ಹೆಚ್ಚಾಗುತ್ತಿರಬಹುದು. ಆದರೆ,
ಸಾವು ಬಹಳ ಕಡಿಮೆಯಾಗುತ್ತಿದೆ. 10ಲಕ್ಷಕ್ಕೆ 3 ಜನರ ಸಾವು ಪ್ರಮಾಣ ಇದೆ. ಕಾನ್ಸರ್‌, ಹೆಚ್‌ಐವಿ, ಕ್ಷಯ. ಕಿಡ್ನಿ
ಸೇರಿ ಇತರೆ ರೋಗಗಳು ಇರುವಂಥವರು ಹೆಚ್ಚಾಗಿ ಸಾವಿಗೀಡಾತ್ತಿದ್ದಾರೆ. ಸೋಂಕಿತರ ಪ್ರಮಾಣ ರಾಜ್ಯದಲ್ಲಿ
ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ನಾಲ್ಕು ದಿನಗಳಲ್ಲಿ ಸೋಂಕಿತರು ಹೆಚ್ಚಾಗಿದ್ದು, ಗುಣಮುಖರಾಗಿರುವ
ಪ್ರಮಾಣವೂ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿದೆ. ಆದರೂ ಕೊರೋನಾ ಬಗ್ಗೆ ಅನಗತ್ಯ ಆತಂಕ ಬೇಡ ಎಂದು
ಹೇಳಿದರು.


5 ಜಿಲ್ಲೆಗಳಲ್ಲಿ ಸಾವಿರ ಮೀರಿದ ಪ್ರಕರಣ


ಸರಿಯಾಗಿ ತಿಂಗಳ ಹಿಂದೆ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿತ್ತು. ಈಗ ಅಂಕೆ ಮೀರುತ್ತಿರುವ
ಸೋಂಕಿನ ಸಂಖ್ಯೆಗಳಿಂದ ಅಪಖ್ಯಾತಿಗೆ ಗುರಿಯಾಗಿರುವ ಲಕ್ಷಣ ಗೋಚರಿಸಿದೆ.


ಒಂದೇ ದಿನ ಹಿಂದೆಂದಿಗಿಂತಲೂ ಹೆಚ್ಚು 1,694 ಸೋಂಕು ಪ್ರಕರಣಗಳು, 21 ಸೋಂಕಿತರ ಸಾವು
ವರದಿಯಾಗಿವೆ. ಜೊತೆಗೆ ಜಿಲ್ಲಾವಾರು ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಬಳ್ಳಾರಿ(1081) ಮತ್ತು ದಕ್ಷಿಣ
ಕನ್ನಡ(1,012) ಸಾವಿರದ ಗಡಿ ದಾಟಿದೆ. ಈ ಮೂಲಕ ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ತಲಾ 1,000ಕ್ಕೂ ಹೆಚ್ಚು
ಸೋಂಕು ಪ್ರಕರಣಗಳು ದೃಢಪಟ್ಟಂತಾಗಿದೆ.


118


ಬೆಂಗಳೂರು 5, ಚಿಕ್ಕಬಳ್ಳಾಪುರ ಮತ್ತು ಕಲಬುರಗಿ ತಲಾ 3, ವಿಜಯಪುರ ಮತ್ತು ಶಿವಮೊಗ್ಗ ತಲಾ 2,
ಹಾಸನ, ದಾವಣಗೆರೆ, ಬೀದರ್‌, ಬೆಂಗಳೂರು ಗ್ರಾಮಾಂತರ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ತಲಾ
ಒಬ್ಬರು ಮೃತಪಟ್ಟಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ: 04.07.2020
6. ಆನ್‌ಲೈನ್‌ನಲ್ಲಿ ಉಚಿತವಾಗಿ ಸಿಗುತ್ತೆ ರಾಜ್ಯ ಪಠ್ಯಪುಸ್ತಕ


ಮಕ್ಕಳ ಶಾಲಾರಂಭದ ಚಿಂತೆ ಬಿಡಿ, ಆನ್‌ಲೈನ್‌ ಮೂಲಕ ನಿಮಗೆ ಬೇಕಾದ ಪಠ್ಯಪುಸ್ತಕ ಡೌನ್‌ಲೋಡ್‌
ಮಾಡಿಕೊಂಡು, ಮನೆಯಲ್ಲೇ ಪಠ್ಯ ಬೋಧಿಸಬಹುದು. ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿಯ ಎಲ್ಲಾ
ವಿಷಯ, ಮಾಧ್ಯಮದ ಪಠ್ಯಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ
ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ಪಠ್ಯಪುಸ್ತಕ ಸಂಘದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಠ್ಯಷುಸ್ಥಕಗಳು
ಪಿಡಿಎಫ್‌ ರೂಪದಲ್ಲಿ ಡೌನ್‌ಲೋಡ್‌ಗೆ ಸಿದ್ದವಿದೆ. ಮುಂದಿನ ಶೈಕ್ಷಣಿಕ ವರ್ಷದ ಪಠ್ಯವನ್ನೂ ಅಪ್‌ಲೋಡ್‌
ಮಾಡಲಾಗಿದೆ. ವಿದ್ಯಾರ್ಥಿಗಳ ಪಾಲಕ, ಹೋಷಕರು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ಗೆ ಭೇಟಿ ನೀಡಿ
ಅತ್ಯಂತ ಸುಲಭವಾಗಿ ತಮಗೆ ಬೇಕಾದ ಮಾಧ್ಯಮದ ಪಠ್ಯಪುಸ್ತಕ ಡೌನ್‌ಲೋಡ್‌ ಮಾಡಿಕೊಂಡು, ಮನೆಯಲ್ಲೇ
ತರಗತಿಯ ಪಾಠ ಕಲಿಸಬಹುದು.


ಸಂಘದ ವೆಬ್‌ಸೈಟ್‌ http://www.ktbs.kar.nic.in/ಗೆ ಭೇಟಿ ನೀಡಿದರೆ, ಪಠ್ಯಪುಸ್ತಕ ಆನ್‌ಲೈನ್‌
ಎಂಬ ಆಯ್ಕೆ ಇದೆ. ವೆಬ್‌ಸೈಟ್‌ನಲ್ಲಿ ಎಲ್ಲಾ ಮಾಧ್ಯಮದ ಪಠ್ಯಪುಸ್ತಕಗಳು ಲಭ್ಯವಿರುವುದರಿಂದ ಮಕ್ಕಳ
ಮುಂದಿನ ತರಗತಿಗೆ ಅನುಗುಣವಾಗಿ ಆಸಕ್ತ ಪಾಲಕ, ಪೋಷಕರು ಡೌನ್‌ಲೋಡ್‌ ಮಾಡಿಕೊಂಡು ಮನೆಯಲ್ಲೇ
ತಮಗೆ ಲಭ್ಯವಿರುವ ಸಮಯದಲ್ಲಿ ಬೋಧನೆ ಮಾಡಬಹುದು. ಶಾಲಾ ತರಗತಿಯಷ್ಟು ಸಮರ್ಪಕವಾಗಿ
ಅಲ್ಲದಿದ್ದರೂ, ಮಕ್ಕಳ ಮುಂದಿನ ಶೈಕ್ಷಣಿಕ ತರಗತಿಗೆ ಅನುಕೂಲವಾಗುವಂತೆ ಮನೆಯಲ್ಲೇ
ಹೇಳಿಕೊಡಬಹುದಾಗಿದೆ. ಮೊಬೈಲ್‌ನಲ್ಲೂ ಈ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು
ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.


ಆಧಾರ:ಉದಯವಾಣಿ, ದಿನಾ೦ಕ:04.07.2020
7. ಉತ್ಪಾದನಾ ಷರತ್ತು ಉಲ್ಲಂಘಿಸಿದರೆ ದಂಡ


ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ಹೆಚ್ಚು ಉದ್ಯೋಗಗಳ ಸೃಷ್ಟಿಗೆ ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದ
ಕೈಗಾರಿಕೆಗಳ (ಸೌಲಭ್ಯ)(ತಿದ್ದುಪಡಿ) ಅಧ್ಯಾದೇಶಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಈ ಮೂಲಕ ಸುಗೀವಾಜ್ಞೆ
ಜಾರಿಯಾಗಿದೆ.


ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಇಲ್ಲದ್ದರಿಂದ ಮತ್ತು ಶೀಘ್ರ ಕ್ರಮ
ತೆಗೆದುಕೊಳ್ಳುವ ಅಗತ್ಯವಿದ್ದರಿಂದ ಸುಗ್ರಿವಾಜ್ಞೆ ಹೊರಡಿಸಲಾಗಿದೆ. ರಾಜ್ಯಪಾಲ ವಿ.ಆರ್‌. ವಾಲಾ ಸರ್ಕಾರದ
ಪ್ರಸ್ತಾವನೆ ಗಮನಿಸಿ ಒಪ್ಪಿಗೆ ಸೂಚಿಸಿದ್ದಾರೆ. ಉತ್ಪಾದನಾ ಉದ್ಯಮ ಆರಂಭಿಸುವವರು ಉನ್ನತ ಮಟ್ಟದ ಅನುಮತಿ
ನೀಡುವ ಸಮಿತಿಯಿಂದ ಅನುಮತಿ ಪಡೆದು ಬೇರೆ ಯಾವುದೇ ಎನ್‌ಓಸಿ ಪಡೆಯದಿದ್ದರೂ ಕೈಗಾರಿಕೆ
ಆರಂಭಿಸಬಹುದು. ಉದ್ಯಮ ಆರಂಭವಾದ 3 ವರ್ಷದೊಳಗೆ ಅಗತ್ಯ ಅನುಮತಿ ಪಡೆದರಾಯಿತು. ಉತ್ಪಾದನಾ
ಕೈಗಾರಿಕೆ ಅಥವಾ ಉದ್ಯಮ ಸ್ಫೀಕೃತಿ ಪ್ರಮಾಣಪತ್ತಕ್ಕಾಗಿ ಅರ್ಜಿ ಸಲ್ಲಿಸುವಾಗ ನೋಡಲ್‌ ಏಜೆನ್ಸಿಗೆ ನೀಡಿದ
ಮುಚ್ಚಳಿಕೆ ಅಥವಾ ಸ್ವಯಂ ಪ್ರಮಾಣಪತ್ರದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪಾಲಿಸುವಲ್ಲಿ ವಿಫಲವಾದರೆ,
ಯೋಜನೆ ಅನುಷ್ಠಾನಗೊಳಿಸುವಾಗ ಅನ್ನಯಿಸಬಹುದಾದ ಅಧಿನಿಯಮ ಉಲ್ಲಂಘಿಸಿದರೆ ದಂಡ
ಕಟ್ಟಬೇಕಾಗುತ್ತದೆ. ಮೊದಲ ಅಪರಾಧಕ್ಕೆ ರೂ. ಲಕ್ಷವರೆಗೆ ಜುಲ್ಮಾನೆ, 2ನೇ ಹಾಗೂ ಮುಂದುವರಿದ
ಅಪರಾಧಕ್ಕಾಗಿ ರೂ.2ಲಕ್ಷವರೆಗೆ ವಿಸರಿಸಬಹುದು. ಜೊತೆಗೆ ಸಂಬಂಧಿತ ಇಲಾಖೆಗಳು ಅಧಿನಿಯಮ ಪ್ರಕರಣ
ದಾಖಲಿಸಿ, ಕೈಗಾರಿಕೆ ಮುಚ್ಚಿಸಲು ಮತ್ತು ಭೂಮಿ ಮುಟ್ಟುಗೋಲು ಹಾಕುವುದಕ್ಕೂ ಅವಕಾಶವಿದೆ.


ಉತ್ಪಾದನಾ ಕೈಗಾರಿಕೆಗಳು ಅಥವಾ ಉದ್ಯಮಗಳಿಂದ ಸಂಯೋಜಿತ ಅರ್ಜಿ ನಮೂನೆ ಸ್ನೀಕರಿಸಿದ
ಮೇಲೆ ಸಂಬಂಧಪಟ್ಟ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ರಾಜ್ಯ/ಜಿಲ್ಲಾ ಮಟ್ಟದ ಏಕಗವಾಕ್ಷಿ ಒಪ್ಲಿಗೆ


119


ನೀಡಿಕೆ ಸಮಿತಿ ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ಸ್ಲೀಕೃತಿ ಪ್ರಮಾಣಪತ್ರ ನೀಡಲಾಗುತ್ತದೆ. ಇದನ್ನು
ಆಧಾರವಾಗಿಟ್ಟುಕೊಂಡು ಉದ್ಯಮ ಆರಂಭಿಸಬಹುದು.


ಕೈಗಾರಿಕೆಗಳ (ಅಭಿವೃದ್ಧಿ ಮತ್ತು ನಿಯಂತ್ರಣ)ಅಧಿನಿಯಮ 1951ರ ಮೊದಲನೇ ಅನುಸೂಚಿಯಲ್ಲಿ
ನಿರ್ದಿಷ್ಟಪಡಿಸಿ ಯಾವುದೇ ಕೈಗಾರಿಕೆಗೆ ಸಂಬಂಧಪಟ್ಟ ಸರಕುಗಳ ಉತ್ಪಾದನೆ ಅಥವಾ ತಯಾರಿಕೆಗೆ
ಸಂಬಂಧಪಟ್ಟ ಸರಕುಗಳ ಉತ್ಪಾದನೆ, ತಯಾರಿಕೆಯಲ್ಲಿ ತೊಡಗಿರುವ ಉದ್ಯಮ, ಮೌಲ್ಯವರ್ಧನೆಯ ಪ್ರಕ್ರಿಯೆಯ
ಕಾರಾನೆ, ಯಂತ್ರ ಘಟಕ ಸ್ಥಾಪನೆಗೆ ಈ ಮಾರ್ಗದಲ್ಲಿ ಅವಕಾಶವಿದೆ. ಸರಳವಾಗಿ ಹೇಳಬಹುದೆಂದರೆ ಹೊಸ
ಸಾಮಗಿಗಳ ಸೃಜನೆ ಅಥವಾ ಮೌಲ್ಕವರ್ಧನೆಯಲ್ಲಿ ನಿರತ ಉದ್ಯಮಕ್ಕೆ ಅವಕಾಶ ಸಿಗಲಿದೆ.


ಮಾನಿಟರಿಂಗ್‌ ವ್ಯವಸ್ಥೆ: ಅರ್ಜಿ. ಪ್ರಸ್ತಾವನೆ, ಹೊರಡಿಸಿದ ಸ್ಥೀಕೃತಿ ಪ್ರಮಾಣಪತ್ರದ ದಾಖಲೆಯ
ನಿಗಾವಹಿಸುವುದು. ಅನುಮೋದನೆ ಅಥವಾ ಸ್ಲೀಕೃತಿ ದತ್ತಾಂಶವನ್ನು ಆನ್‌ಲೈನ್‌ ಮೂಲಕ ನಿರ್ವಹಿಸಲಾಗುತ್ತದೆ.
ಯಾವ ಉದ್ದೇಶಕ್ವಾಗಿ ಸ್ಥಾಧೀನ ಪಡಿಸಿಕೊಳ್ಳಲಾಗಿದೆಯೋ ಅಥವಾ ಯಾವ ಅನುಮತಿಗಾಗಿ ಅರ್ಜಿ
ಸಲ್ಲಿಸಲಾಗಿದೆಯೋ ಆ ಉದ್ದೇಶಕ್ಕಾಗಿ ಭೂಮಿ ಪರಿಗಣಿಸಬೇಕು. ಪ್ರಮುಖ ನಕ್ಷೆಯಲ್ಲಿ ನಿರ್ದಿಷ್ಟ ಪಡಿಸಿದ
ಭೂಮಿ ಬಳಕೆಯಲ್ಲಿ ಮಾರ್ಗ ಬದಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹಾಗೇ ಸ್ಪಷ್ಟ ಹಕ್ಕು ಇಲ್ಲದ ಭೂಮಿ,
ವಿವಾದಿತ, ನಿರ್ಬಂಧಿತ ಪ್ರವರ್ಗ ಮುಂತಾದುವುಗಳಡಿ ಬರುವ ಭೂಮಿಯನ್ನು ಕೈಗಾರಿಕೆ ಅಥವಾ ಉತ್ಪಾದನಾ
ಉದ್ಯಮಕ್ಕೆ ನೀಡುವಂತಿಲ್ಲ ಎಂದು ಹೇಳಲಾಗಿದೆ. ಸ್ವಯಂ ಪ್ರಮಾಣಪತ್ರ ಒದಗಿಸುವ ಆಯ್ಕೆ ಮಾಡದಿದ್ದಲ್ಲಿ
ಅರ್ಜಿದಾರರು ಕೈಗಾರಿಕೆ ರಚನೆ ಅಥವಾ ಸ್ಥಾಪನೆಗೆ ಮೊದಲು ಎಲ್ಲಾ ಅಗತ್ಯ ಅನುಮೋದನೆ ಪಡೆಯಬೇಕು.
ಉದ್ಯಮಗಳು ಒದಗಿಸಬೇಕಾದ ಸ್ವಯಂ ಪ್ರಮಾಣಪತ್ರ ಅಫಿಡವಿಟ್‌ ಸ್ವರೂಪದಲ್ಲಿ ನೀಡಬೇಕಾಗುತ್ತದೆ. ಕೆಲವು
ಕಾನೂನು, ನೀತಿ-ನಿಯಮಗಳ ಪ್ರಕಾರ ಉದ್ಯಮ ಆರಂಭಕ್ಕೆ ಮುನ್ನ ಹಲವು ಇಲಾಖೆಗಳಿಂದ ಅನುಮತಿ
ಪಡೆಯಬೇಕಾದ್ದನ್ನು ತಪ್ಪಿಸಲು ಈ ಸುಗೀವಾಜ್ಞೆ ತರಲಾಗಿದೆ.


ಆಧಾರ:ವಿಜಯವಾಣಿ, ದಿನಾಂಕ: 05.07.2020
8. ಸಮಾಜ ಕಲ್ಯಾಣ ಇಲಾಖೆಯ ಒಂಭತ್ತು ಸೇವೆ ಸಕಾಲ ವ್ಯಾಪಿಗೆ


ಸಮಾಜ ಕಲ್ಯಾಣ ಇಲಾಖೆಯ 9 ಪ್ರಮುಖ ಯೋಜನೆಗಳ ಸೇವೆ ಕಾಲಮಿತಿಯೊಳಗೆ ಅರ್ಹ
ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಸಕಾಲ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ ಎಂದು ಸಮಾಜ
ಕಲ್ಯಾಣ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ
ನಡೆದ ರಾಜ್ಯ ಪರಿಷತ್‌ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂತರ್ಜಾತಿ ವಿವಾಹಿತ
ದಂಪತಿಗಳಿಗೆ ಪ್ರೋತ್ಸಾಹಧನ, ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ, ಯುಪಿಎಸ್‌ಸಿ, ಕೆಎಎಸ್‌ ಸೇರಿದಂತೆ
ಸರ್ಧಾತ್ಮಕ ಪರೀಕ್ಷಾಪೂರ್ವ ತರಬೇತಿ, ಸಾಗರೋತ್ತರ ವಿದ್ಯಾರ್ಥಿ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಪ್ರೋತ್ಸಾಹಧನ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಹಾಗೂ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಯೋಜನೆಗಳ
ಸೇವೆ ಸಕಾಲ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದರು. ಎಸ್‌ಟಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ
ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಉದ್ಯೋಗ ಕಲ್ಲಿಸುವ ಯೋಜನೆಗಳನ್ನು ರೂಪಿಸುವಂತೆ ವಿವಿಧ
ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಕೊರೋನಾ ಹಿನ್ನೆಲೆಯಲ್ಲಿ ವಲಸೆ
ಕಾರ್ಮಿಕರು ಹಳ್ಳಿಗಳಿಗೆ ಹಿಂತಿರುಗಿದ್ದು, ನರೇಗಾ ಯೋಜನೆಯಡಿ ಎಲ್ಲರಿಗೂ ಜಾಬ್‌ಕಾರ್ಡ್‌ ನೀಡಿ ಕೆಲಸ
ಒದಗಿಸಬೇಕು. ಎಸ್‌ಸಿ-ಎಸ್‌ಟಿ ಕಾರ್ಮಿಕರಿಗೆ ಕಡ್ಡಾಯವಾಗಿ 100 ದಿನ ಉದ್ಯೋಗ ನೀಡಿ, ಅವರ ಕೃಷಿ
ಭೂಮಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. 65 ಲಕ್ಷ ಜಾಬ್‌ ಕಾರ್ಡ್‌ ಪಡೆದವರಲ್ಲಿ ಎಸ್‌ಸಿ-ಎಸ್‌ಟಿ
ಸಮುದಾಯ ಇದೆ. ಗ್ರಾಮೀಣ ಭಾಗದ ಎಲ್ಲ ಕುಟುಂಬಗಳಿಗೂ ಉದ್ಯೋಗ ನೀಡಬೇಕು ಎಂದು ನಿರ್ದೇಶನ
ನೀಡಲಾಗಿದೆ. ಕೆಎಂಎಫ್‌ ಹಾಲು ಉತ್ಪಾದಕರ ಸಂಘಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ-ಎಸ್‌ಟಿ
ಸಮುದಾಯದವರಿಗೆ ಸದಸ್ಕತ್ನ ನೀಡಬೇಕು. ಹಾಲು ಉತ್ಪಾದನೆ ಉತ್ತೇಜಿಸಲು ಕರು, ಹಸು, ಎಮ್ಮೆ ಸಾಲ
ಹಾಗೂ ಸಹಾಯಧನ ರೂಪದಲ್ಲಿ ಒದಗಿಸಬೇಕು. ಕೆಎಂಎಫ್‌ ಮಳಿಗೆ ಸಹ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ
ಹಂಚಿಕೆ ಮಾಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಹಾಲು ಉತ್ಪಾದಕರ ಸಂಘ ಸ್ಥಾಪಿಸಲು
ಮುಂದಾಗುವಂತೆಯೂ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದರು. ಕೊರೋನಾದಿಂದ ಶಾಲೆಗಳು
ಪ್ರಾರಂಭವಾಗದ ಹಿನ್ನೆಲೆಯಲ್ಲಿ ಎಸ್‌ಸಿ-ಎಸ್‌ಟಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಆಹಾರ


120


ಧಾನ್ಯವನ್ನು ಮನೆಗೆ ಸರಬರಾಜು ಮಾಡಿ, ಪಠ್ಯ ಪುಸ್ತಕ ವಿತರಿಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್‌ ನಾಯಕ್‌, ಆಯುಕ್ತ ರವಿಕುಮಾರ್‌ ಸುರಪುರ್‌,
ಇ.ವೆಂಕಟಯ್ಯ ಉಪಸ್ಥಿತರಿದ್ದರು.


ಆಧಾರ:ಉದಯವಾಣಿ, ದಿನಾ೦ಕ:08.07.2020
9. ಫೀವರ್‌ ಕೆನಿಕ್‌ ತೆರೆಯಲು ಸೂಚನೆ


ಬಿಬಿಎಂಪಿಯ ಪೂರ್ವವಲಯದ 44 ವಾರ್ಡ್‌ಗಳಲ್ಲೂ ಐದು ದಿನಗಳೂಳಗೆ ಫೀವರ್‌ ಕ್ಷಿನಿಕ್‌ಗಳನ್ನು
ತೆರೆಯಬೇಕು. ಆರು ಕಡೆ ವಾರ್‌ ರೂಂಗಳನ್ನು ಸ್ಥಾಪಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ
ಅಧಿಕಾರಿಗಳಿಗೆ ಸೂಚನೆ ನೀಡಿದರು.


ಪೂರ್ವವಲಯದ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ಸಚಿವರು ಕೊರೋನಾ ವೈರಸ್‌
ನಿಯಂತ್ರಣ ಸಂಬಂಧ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಕಾರ್ಪೋರೇಟರ್‌ಗಳು ಮತ್ತು
ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ಲಿನಿಕ್‌ಗೆ ಅಗತ್ಯವಿರುವ 3 ಲಕ್ಷ ಕಿಟ್‌ಗಳನ್ನು ಸರ್ಕಾರ ಒದಗಿಸಲಿದೆ. 44
ವಾರ್ಡ್‌ಗಳಿಗೂ ಒಬ್ಬರು ನೋಡಲ್‌ ಅಧಿಕಾರಿಯನ್ನು ನೇಮಿಸಿ, ಮಾರ್ಗದರ್ಶಿ ಮಾಹಿತಿಯನ್ನು ಬಡವರಿಗೆ
ತಲುಪಿಸಬೇಕು. ಅಂಬೇಡ್ಕರ್‌ ಕಾಲೇಜಿನಲ್ಲಿ ಕೋವಿಡ್‌ ಪರೀಕ್ಷಾ ಘಟಕವನ್ನು ಸ್ಥಾಪಿಸಲು ಅವಕಾಶ
ಕಲ್ಪಿಸಲಾಗುವುದು ಎಂದು ಹೇಳಿದರು.


ಆಧಾರ:ವಿಜಯ ಕರ್ನಾಟಕ, ದಿನಾಂಕ: 10.07.2020
10. ರಾಬ್ಯಕ್ಕೆ 4267 ಕೋಟಿ ಅನುದಾನ


ಆತ್ಮನಿರ್ಭರ ಯೋಜನೆಯಡಿ ರಾಜ್ಯಕ್ಕೆ ಈವರೆಗೆ ರೂ.4267ಕೋಟಿ ಬಿಡುಗಡೆಯಾಗಿದ್ದು, ಮುಂದೆಯೂ
ಹಂತಹಂತವಾಗಿ ಸೌಲಭ್ಯ ಸಿಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ಸಂಸದರಾದ
ಪಿ.ಸಿ. ಮೋಹನ್‌, ತೇಜಸ್ವಿ ಸೂರ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಎಂಎಸ್‌ಎಂಇ
ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೆರವಾಗಿದ್ದು, ರಾಜ್ಯದ 1,58,786 ಎಂಎಸ್‌ಎಂಇಗೆ ಸುಮಾರು ರೂ.4106 ಕೋಟಿ
ನೀಡಬೇಕಿತ್ತು. ಈ ಪೈಕಿ 87,868 ಎಂಎಸ್‌ಎಂಇಗಳಿಗೆ ರೂ.2439 ಕೋಟಿ ವಿತರಣೆಯಾಗಿದೆ. ರಾಜ್ಯದ
3,10,688 ಮಂದಿ ಇಪಿಎಫ್‌ನಡಿ ರೂ. 1125 ಕೋಟಿ ಹಿಂಪಡೆದಿದ್ದಾರೆ. ಹಾಗೆಯೇ ಬಿಲ್ಲಿಂಗ್‌ ್ಯಂಡ್‌
ಕನ್‌ಸ್ಪಕ್ಷನ್‌ ಫಂಡ್‌ನಿಂದ ರಾಜ್ಯಕ್ಕೆ ರೂ.681 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.


ರಾಜ್ಯದ 88,09,042 ಮಂದಿಯ ಜನ್‌ಧನ್‌ ಖಾತೆಗೆ ಏಪಿಲ್‌, ಮೇ, ಜೂನ್‌ ತಿಂಗಳಿಗೆ ಒಟ್ಟು
ರೂ.161 ಕೋಟಿ ಜಮೆಯಾಗಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯದ 48.39 ಲಕ್ಷ ರೈತರಿಗೆ ತಲಾ
ರೂ.2000 ನಂತೆ ರೂ.967.81 ಕೋಟಿ ಪಾವತಿಯಾಗಿದೆ ಎಂದು ವಿವರ ನೀಡಿದರು.


ದುರುಪಯೋಗಕ್ಕೆ ಅವಕಾಶವಿಲ್ಲ- ಆತ್ಮನಿರ್ಭರ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ
ತೊಂದರೆಗಳಿದ್ದರೆ ಆ ಬಗ್ಗೆ ರಾಜ್ಯದ ಜನ ನಮಗೆ ಮಾಹಿತಿ ನೀಡಬಹುದು. ಪ್ರಧಾನಿಯವರು ಘೋಷಿಸಿದ
ಯೋಜನೆಯಡಿ ನಯಾಪೈಸೆಯನ್ನು ಕಟ್ಟಕಡೆಯ ಫಲಾನುಭವಿಗೆ ತಲುಪಿಸುತ್ತೇವೆ. ಇದರಲ್ಲಿ ದುರುಪಯೋಗಕ್ಕೆ
ಅವಕಾಶವಾಗದಂತೆ ನೋಡಿಕೊಳ್ಳಲಾಗುವುದು. ಆ ಮೂಲಕ ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ಕರ್ನಾಟಕದ
ಕೊಡುಗೆ ನೀಡುವುದು ನಮ್ಮ ಆಪೇಕ್ಷಿ ಎಂದರು. ಸ್ಥಾವಲಂಬಿ ಭಾರತದ ನಿರ್ಮಾಣಕ್ಕಾಗಿ ಪ್ರಧಾನಿ ರೂ.20 ಲಕ್ಷ
ಕೋಟಿ ಮೊತ್ತದ ಆತ್ಮನಿರ್ಭರ ಯೋಜನೆ ಲೋಕಾರ್ಪಣೆ ಮಾಡಿದ್ದಾರೆ. ಈ ಯೋಜನೆ ಎಷ್ಟರ ಮಟ್ಟಿಗೆ
ಜಾರಿಯಾಗಿದೆ ಎ೦ಬುದನ್ನು ಎಲ್ಲ ಸಂಸದರು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಜನರಿಗೆ ತಲುಪಿಸುವ
ಕೆಲಸ ಮಾಡಬೇಕು ಎಂದು ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿಸಿದರು.


ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂವರು ಸಂಸದರು ಯೋಜನೆ ಅನುಷ್ಠಾನದ ಸ್ಥಿತಿಗತಿ ಪರಿಶೀಲಿಸುವ
ಜೊತೆಗೆ ಜಾರಿಗಿರುವ ಅಡಚಣೆಗಳನ್ನು ತೆರವುಗೊಳಿಸಿ ಅನುಷ್ಠಾನಕ್ಕೆ ತರಲು ಸಹಕಾರ ನೀಡಲಿದ್ದೇವೆ. ವಲಸೆ
ಕಾರ್ಮಿಕರು ಸೇರಿದಂತೆ ಬಡವರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರ ನವೆಂಬರ್‌ ಅಂತ್ಯದವರೆಗೆ ಉಚಿತ


121


ಪಡಿತರ ವಿತರಿಸಲು ನಿರ್ಧರಿಸಿದೆ. ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿದೆಯೇ ಎಂಬುದನ್ನು ಖುದ್ದಾಗಿ
ಪರಿಶೀಲಿಸುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ಹೇಳಿದರು.


ಆಧಾರ:ಉದಯವಾಣಿ, ದಿನಾ೦ಕ:11.07.2020
11. ತಪ್ಪಿತಸ್ತ ಸರ್ಕಾರಿ ನೌಕರರಿಗಿನ್ನು ಶಿಕ್ಷೆ ಪಕ್ಷಾ
[7 CR [)


ಭ್ರಷ್ಟಾಚಾರ, ಅಕ್ರಮ ಸಂಪಾದನೆ, ದುರ್ನಡತೆ, ವಂಚನೆ ಇನ್ನಿತರ ಅವ್ಯವಹಾರಗಳಲ್ಲಿ ಸಿಕ್ಕಿಬಿದ್ದು
ಶಿಸ್ತುಕ್ರಮಕ್ಕೆ ಒಳಗಾಗುವ ಸರ್ಕಾರಿ ನೌಕರರು ಇನ್ನುಂದೆ ನ್ಯಾಯಾಲಯದ ಮೆಟ್ಟಲೇರಿ ಪಾರಾಗುವುದು ಕಷ್ಟ
ಕೋರ್ಟ್‌ ಮೊರೆ ಹೋದರೂ ಕಾಯಂ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಆರೋಪಪಟ್ಟಿ ಸಿದ್ದಪಡಿಸುವಂತಹ
ಕಟ್ಟುನಿಟ್ಟನ ನಿಯಮ ಸಿದ್ದವಾಗಿದೆ. ಇದರಿಂದಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾದರೆ ತಪ್ಪು ಮಾಡದೆಯೇ ಅಪವಾದಕ್ಕೆ
ಗುರಿಯಾಗುವಂಥ ಉದ್ಯೋಗಿಗೆ ನ್ಯಾಯ ದೊರೆಯಲಿದೆ. ಕರ್ನಾಟಕ ಸಿವಿಲ್‌ ಸೇವಾ (ವರ್ಗೀಕರಣ, ನಿಯಂತ್ರಣ
ಮತ್ತು ಮೇಲ್ಮನವಿ) 1957ರ ನಿಯಮಗಳಡಿ ಸರ್ಕಾರಿ ನೌಕರರ ವಿರುದ್ಧ ಆರಂಭಿಸಲಾದ ಶಿಸ್ತುಕ್ರಮ
ಪ್ರಕರಣಗಳಲ್ಲಿ ಸಕ್ಷಮ ಶಿಸ್ತು ಪ್ರಾಧಿಕಾರಗಳು ಹೊರಡಿಸುವ ಬಹುತೇಕ ಆದೇಶ ತಾಂತ್ರಿಕ ಲೋಪದ ಹಿನ್ನೆಲೆಯಲ್ಲಿ
ನ್ಯಾಯಾಲಯಗಳಲ್ಲಿ ರದ್ದುಗೊಳ್ಳುತ್ತವೆ. ಇದರಿಂದಾಗಿ ಸರ್ಕಾರಕ್ಕೂ ಮುಖಭಂಗವಾಗುತ್ತಿದೆ. ಸಕ್ಷಮ ಪ್ರಾಧಿಕಾರಗಳ
ಕಾರ್ಯವಿಧಾನ ಲೋಪದಿಂದಾಗಿ ತಪ್ಪಿತಸ್ಥ ಸರ್ಕಾರಿ ಉದ್ಯೋಗಿ ದಂಡನೆಯಿಂದ ತಪ್ಪಿಕೊಳ್ಳುವುದರ ಜೊತೆಗೆ
ಸರ್ಕಾರಕ್ಕೆ ಸಮಯ ಹಾಗೂ ಆರ್ಥಿಕ ನಷ್ಟ ಉಂಟಾಗುತ್ತಿದೆ.


ಇದನ್ನು ತಪ್ಪಿಸುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರಗಳು ಆದೇಶ ಹೊರಡಿಸುವ ಮುನ್ನ
ಪಾಲಿಸಬೇಕಾದ 3 ಹಂತದ ನಿಯಮಾವಳಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಜಾರಿಗೆ
ತಂದಿದೆ. ತಪ್ಪಿತಸ್ಥ ಉದ್ಯೋಗಿಯ ವಿರುದ್ಧ ಶಿಸ್ತು ನಡಾವಳಿ ಆರಂಭಿಸುವ ಪೂರ್ವದ ಹಂತ, ಆರೋಪಪಟ್ಟಿ
ಜಾರಿಗೊಳಿಸಿ ವಿಚಾರಣಾ ವರದಿ ಸ್ಟೀಕರಿಸುವ ಹಂತ ಹಾಗೂ 2ನೇ ನೋಟಿಸ್‌ ಜಾರಿಗೊಳಿಸುವುದು, ಮೇಲ್ಮನವಿ
ಹಾಗೂ ಪುನರಾವಲೋಕನ ಕೋರಿಕೆಯ ಹಂತವೆಂದು ವಿಭಾಗಿಸಿ ಪರಿಷ್ಕತ ನಿಯಮ ರೂಪಿಸಿದೆ.


ನೋಟಿಸ್‌ ಬದಲು ನಿರ್ಣಯ: ವಿಚಾರಣಾ ಪ್ರಾಧಿಕಾರದಿಂದ ವರದಿ ಸ್ನೀಕರಿಸಿದ ಬಳಿಕ ಕೂಲಂಕಷವಾಗಿ
ಪರಿಶೀಲಿಸಿ ಅಂಗೀಕರಿಸಬಹುದೇ ಇಲ್ಲವೇ ಎಂಬ ನಿರ್ಣಯ ತೆಗೆದುಕೊಳ್ಳುವ ಬದಲು ಆರೋಪಿತ ನೌಕರನಿಗೆ
ಕಾರಣ ಕೇಳಿ 2ನೇ ನೋಟಿಸ್‌ ಜಾರಿ ಮಾಡುವ ಕ್ರಮ ತೆಗೆದು ಹಾಕಲಾಗಿದೆ. ವರದಿ ತಯಾರಿಸುವ ಮುನ್ನ
ಬಾಧಿತ ನೌಕರ ಅಹವಾಲು ಹೇಳಿಕೊಳ್ಳಲು ಅವಕಾಶ ಕಲ್ಪಿಸಿದೆಯೇ, ಸಾಕ್ಷಿಗಳ ವಿಚಾರಣೆ ಹಾಗೂ ಪಾಟಿಸವಾಲಿಗೆ
ಅವಕಾಶ ಕೊಟ್ಟಿದೆಯೇ, ಸ್ವಾಭಾವಿಕ ನ್ಯಾಯದ ತತ್ಸಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪ್ರಾಧಿಕಾರಗಳು
ಪರಿಶೀಲಿಸಬೇಕು. ಲೋಪಗಳಿದ್ದರೆ ವರದಿ ನಿರಾಕರಿಸಬಹುದು. ಇದರಿಂದ ಕೋರ್ಟ್‌ನಲ್ಲಿ ಹಿನ್ನಡೆಯಾಗುವುದಿಲ್ಲ.
ಒಂದು ವೇಳೆ ದುರುದ್ದೇಶದಿಂದ ನೌಕರನ ವಿರುದ್ಧ ಆರೋಪ ಮಾಡಿದ್ದರೂ ಗೊತ್ತಾಗುತ್ತದೆ.


ಸಕ್ಷಮ ನೇಮಕಾತಿ ಪ್ರಾಧಿಕಾರ, ಶಿಸ್ತು ಪ್ರಾಧಿಕಾರ ಹಾಗೂ ಮೇಲ್ಲನವಿ ಪ್ರಾಧಿಕಾರಗಳನ್ನು
ಗುರುತಿಸಲಾಗಿದೆ. ಆರೋಪಿತ ಅಧಿಕಾರಿ ವಿರುದ್ಧ ಈ ಪ್ರಾಧಿಕಾರಗಳು ಮಾತ್ರವೇ ಶಿಕ್ಷೆ ಅಥವಾ ದಂಡನೆ ವಿಧಿಸಲು
ಅವಕಾಶವಿದೆ. ನಿಯೋಜನೆ ಮೇಲೆ ಅಥವಾ ಎರವಲು ಸೇವೆಯಲ್ಲಿರುವ ಅಧಿಕಾರಿಗಳ ವಿರುದ್ಧ
ಈ ಪ್ರಾಧಿಕಾರಗಳು ದಂಡ ವಿಧಿಸಲು ಸಾಧ್ಯವಲ್ಲ.


ಸಾಕ್ಸ್ಯವಿದ್ದರಷ್ಟೇ ಸಸ್ಟೆಂಡ್‌: ಆರೋಪ ಸಾಬೀತುಪಡಿಸುವಂಥ ಪೂರಕವಾದ ಸಾಕ್ಟ್ಯಾಧಾರ ಲಭ್ಯವಿದ್ದರೆ ಮಾತ್ರ
ಸಂಬಂಧಪಟ್ಟ ನೌಕರನನ್ನು ಸೇವೆಯಿಂದ ಅಮಾನತ್ತುಗೊಳಿಸಲು ಶಿಸ್ತು ಪ್ರಾಧಿಕಾರಕ್ಕೆ ಅಧಿಕಾರ ಇದೆ. ಸಾಕ್ಷ್ಯ
ಇಲ್ಲದಿದ್ದರೆ ಸಸ್ಪೆಂಡ್‌ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.


ನಾಗರಿಕ ಸೇವಾ(ನಡತೆ) ನಿಯಮ ಉಲ್ಲಂಘಿಸಿ ದುರ್ನಡತೆ ಎಸಗಿರುವ ಬಗ್ಗೆ ಬೇಕಾಬಿಟ್ಟಿಯಾಗಿ
ಆರೋಪಪಟ್ಟಿ ಸಿದ್ದಪಡಿಸಲಾಗುತ್ತದೆ. ಇನ್ನುಂದೆ ಯಾವ ನಿಯಮ ಹಾಗೂ ಕಾರ್ಯವಿಧಾನದ
ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಆರೋಪ ಸಮರ್ಥಿಸುವ ಹೇಳಿಕೆ, ಆರೋಪ
ಸಾಬೀತುಪಡಿಸಲು ಪೂರಕ ದಾಖಲೆ ಹಾಗೂ ಸಾಕ್ಷ್ಯಗಳ ಪಟ್ಟಿ ಉಲ್ಲೇಖಿಸಬೇಕು. ಒಂದು ವೇಳೆ ನೌಕರ
ಕೋರ್ಟ್‌ನಲ್ಲಿ ಪ್ರಶ್ನಿಸಿದರೂ ವಿಚಾರಣೆ ಸಂದರ್ಭದಲ್ಲಿ ಯಾವುದೇ ಲೋಪ ಕಂಡುಬರಬಾರದೆಂದು ಸೂಚಿಸಿದೆ.


122


ಸಕ್ಷಮ ಪ್ರಾಧಿಕಾರ ಮಾಡಬೇಕಾದ್ದೇನು


2


ಆರೋಪ ಪಟ್ಟಿಯಲ್ಲಿ ಮಾಡಲಾದ ಆರೋಪಗಳು ಸಂದೇಹ ಮೂಡಿಸದಂತೆ ಸ್ಪಷ್ಟವಾಗಿರಬೇಕು
ನೌಕರ ತನ್ನ ವಿರುದ್ದದ ಆರೋಪ ಒಪ್ಪಿಕೊಂಡಿದ್ದಾನೆಯೇ, ಅಲ್ಲಗಳೆದಿದ್ದಾನೆಯೇ ಗಮನಿಸಬೇಕು


ಯಾವ ಸಾಕ್ಟ್ಯಾಧಾರ ಪರಿಗಣಿಸಿ ವರದಿ ಸಿದ್ದಪಡಿಸಿದೆ ಎಂದು ಪರಿಶೀಲಿಸಿ, ಅಂತಿಮ ಆದೇಶ


Vv VY VY VY


ಸಕ್ಷಮ ಪ್ರಾಧಿಕಾರವೇ ಅಪಾದಿತ ನೌಕರನಿಗೆ ದಂಡನೆ ವಿಧಿಸಿ, ಆದೇಶ ಹೊರಡಿಸಲು ಅವಕಾಶವಿದೆ


ಆಧಾರ:ವಿಜಯವಾಣಿ, ದಿನಾಂಕ: 11.07.2020
12. ಕೋವಿಡ್‌, ನಾನ್‌ ಕೋವಿಡ್‌ ಪ್ರತ್ಯೇಕ ಆಸ್ಪತ್ರೆ


ಬಿಬಿಎಂಪಿ ಪೂರ್ವ ವಲಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌ ಮತ್ತು ನಾನ್‌
ಕೋವಿಡ್‌ ಆಸ್ಪತ್ರೆಗಳನ್ನು ತೆರೆಯಬೇಕು. ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮ
ರೂಪಿಸುವ ಮುನ್ನ ಆಯಾ ಕ್ಷೇತ್ರಗಳ ಶಾಸಕರೊಂದಿಗೆ ಚರ್ಚಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ
ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಮೇಯೋಹಾಲ್‌ನಲ್ಲಿನ ಜಂಟಿ ಆಯುಕ್ತರ ಕಚೇರಿಯಲ್ಲಿ
ಪೂರ್ವ ವಲಯದ ಶಾಸಕರು, ಕಾರ್ಮೋರೇಟರ್‌ಗಳೂಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ
ಮಾತನಾಡಿದರು.


ಖಾಸಗಿ ಆಸ್ಪತ್ರೆಗಳು ಚಿಕಿತೆಗೆ ಬರುವ ಸಾರ್ವಜನಿಕರನ್ನು ಹಾಸಿಗೆಗಳು ಖಾಲಿ ಇಲ್ಲವೆಂಬ ಕಾರಣ ನೀಡಿ
ವಾಪಸ್ಸು ಕಳುಹಿಸಬಾರದು. ರೋಗಿಗಳನ್ನು ಆಸ್ಪತ್ರೆಗಳಿಗೆ ವರ್ಗಾಯಿಸಲು ಮತ್ತು ಮೃತದೇಹಗಳನ್ನು ಆದಷ್ಟು
ಶೀಘ್ರವಾಗಿ ಸಂಬಂಧಿಸಿದವರಿಗೆ ನೀಡಬೇಕು. ಬೂತ್‌ ಮಟ್ಟದಲ್ಲಿ ಕೊರೋನಾ ವಾರಿಯರ್ಸ್‌ಗಳನ್ನು
ನಿಯೋಜಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.


ಶಾಸಕ ಕೆ.ಜೆ.ಜಾರ್ಜ್‌ ಮಾತನಾಡಿ “ಲಾಕ್‌ಡೌನ್‌ ವೇಳೆ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ
ಅಕ್ಕಿ ವಿತರಿಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ನಿವಾರಿಸಬೇಕು. ಪ್ರತಿಯೊಂದು ವಿಧಾನಸಭಾ
ತಕ್ಕೆ ಒಂದೊಂದು ಆಸ್ಪತ್ರೆಯನ್ನು ಸ್ಥಾಪಿಸುವ ಕೆಲಸ ತ್ವರಿತವಾಗಿ ಆಗಬೇಕು” ಎಂದು ಒತ್ತಾಯಿಸಿದರು.


KJ

ಶಾಸಕ ರಿಜ್ಞಾನ್‌ ಹರ್ಷದ್‌, "ಶಿವಾಜಿನಗರದ ಆಸ್ಪತ್ರೆಯಲ್ಲಿ 30 ಐಸಿಯು. ವೆಂಟಿಲೇಟರ್‌ ವ್ಯವಸ್ಥೆ
ಮಾಡಲಾಗಿದೆ. ಇಲ್ಲಿ ವೈದ್ಯರ ಕೊರತೆ ಇದ್ದು, ಆದಷ್ಟು ಶೀಘವಾಗಿ ನೇಮಕ ಮಾಡಬೇಕು” ಎಂದು ಆಗಹಿಸಿದರು.
ಶಾಸಕ ಭೈರತಿ ಸುರೇಶ್‌ “ಹೆಬ್ಬಾಳ ಕ್ಷೇತ್ರದಲ್ಲಿ ರ್ಯಾಪಿಡ್‌ ಟಿಸ್ಟ್‌ ಕಿಟ್‌ಗಳನ್ನು ಒದಗಿಸಬೇಕು” ಎಂದು
ಒತ್ತಾಯಿಸಿದರು.


ಶಾಸಕ ಎನ್‌.ಹ್ಯಾರಿಸ್‌, ವಿಧಾನ ಪರಿಷತ್‌ ಸದಸ್ಯರಾದ ರಮೇಶ್‌, ಗೋವಿಂದರಾಜು, ಪಾಲಿಕೆಯ
ವಿಶೇಷ ಆಯುಕ್ತ ರವಿಕುಮಾರ್‌ ಸುರಪುರ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ್‌, ಡಿಸಿಪಿ
ಶರಣಪ್ರ ಮತ್ತಿತರರು ಉಪಸ್ಥಿತರಿದ್ದರು.


ವೈದ್ಯ ಕಾಲೇಜುಗಳಲ್ಲಿ 2250 ಹಾಸಿಗೆ ವ್ಯವಸ್ಥೆ: ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವಲಯ
ವ್ಯಾಪ್ತಿಯ ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ 2250 ಹಾಸಿಗೆ ವ್ಯವಸ್ಥೆ
ಮಾಡಲಾಗಿದೆ ಎಂದು ಸಹಕಾರಿ ಸಜಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು. ನಗರದ ಅಂಬೇಡ್ಕರ್‌
ಕಾಲೀಜಿನಲ್ಲಿ ನಡೆದ ರಾಜರಾಜೇಶ್ವರಿ ನಗರ ವಲಯದ ಲಗ್ಗೆರೆ ಉಪ ವಿಭಾಗ ವ್ಯಾಪ್ತಿಯ ಕಾರ್ಪೋರೇಟರ್‌ಗಳ
ಸಭೆಯಲ್ಲಿ ಅವರು ಮಾತನಾಡಿ, “ಈಗಾಗಲೇ ಸಿದ್ದಪಡಿಸಿರುವ ಈ ಹಾಸಿಗೆಗಳನ್ನು ಯಶವಂತಪುರ ಹಾಗೂ
ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಗೆ ಮೀಸಲಿಡುವಂತೆ ಮುಖ್ಯಮಂತಿಗಳಿಗೆ ಮನವಿ ಮಾಡಲಾಗಿದೆ, ಸಿಎಂ
ಕೂಡ ಸಕಾರಾತ್ಮಕವಾಗಿ ಸಂದಿಸಿದ್ದಾರೆ” ಎಂದು ಸಚಿವರು ತಿಳಿಸಿದರು.


“ಆಯಾ ಕಾರ್ಮೋರೇಟರ್‌ಗಳು, ಅಧಿಕಾರಿಗಳು, ಜೆಸಿಗಳು ಹಾಗೂ ಜನಪ್ರತಿನಿಧಿಗಳನ್ನು ಸಾಮಾನ್ಯ
ಜನರು ಸಂಪರ್ಕಿಸಲು ಅವರ ಮೊಬೈಲ್‌ ಅಥವಾ ದೂರವಾಣಿ ಸಂಖ್ಯೆ ಇರುವ ಕರಪತ್ರಗಳನ್ನು ಮುದಿಸಿ


123


ಹಂಚಬೇಕು. ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಎಂಜಿನೀಯರ್‌ಗಳನ್ನು ಇದೇ
ವ್ಯಾಪ್ತಿಯ ಕಾರ್ಯಕ್ಕೆ ಬಳಸಿಕೊಳ್ಳಬೇಕು” ಎಂದು ಹೇಳಿದರು.


ಮಹಾಲಕ್ಷ್ಮಿ ಲೇಔಟ್‌ನಲ್ಲಿ 250 ಬೆಡ್‌ಗಳ ಕೋವಿಡ್‌ ಸೆಂಟರ್‌: ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತದಲ್ಲಿ
ಕೊರೋನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸೋಂಕಿತರಿಗೂ ಚಿಕಿತ್ಸೆ ನೀಡುವ
ಸಲುವಾಗಿ 250 ಬೆಡ್‌ಗಳಿರುವ ಕೋವಿಡ್‌ ಸೆಂಟರ್‌ ತೆರೆಯಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ
ಸಜೆವ ಕೆ.ಗೋಪಾಲಯ್ಯ ಹೇಳಿದರು.


ನಗರದ ಮಹಾಲಕ್ಷ್ಮಿ ಲೇಔಟ್‌ನ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಪಿಸ್ಲೀನ್‌ ಆಸ್ಪತ್ರೆಯಲ್ಲಿ
ಆಯೋಜಿಸಿದ್ದ 250 ಬೆಡ್‌ಗಳ ಕೋವಿಡ್‌-19 ಕೇರ್‌ ಸೆಂಟರ್‌. ಹಾಗೂ ರಾಸಾಯನಿಕ ಸಿಂಪಡಣೆ ವಾಹನಗಳಿಗೆ
ಅವರು ಚಾಲನೆ ನೀಡಿ ಮಾತನಾಡಿದರು. ಇದೇ ವೇಳ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಎಸ್‌.ಸುರೇಶ್‌
ಕುಮಾರ್‌ “ಕೊರೋನಾ ಸೋಂಕಿನ ಲಕ್ಷಣಗಳ ಸರಪಳಿಯನ್ನು ಮುರಿಯುವ ಸಲುವಾಗಿ ಸರ್ಕಾರ ಏಳು
ದಿನಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡಬೇಕು”
ಎಂದರು.

ಕಾರ್ಯಕ್ರಮದಲ್ಲಿ ಪ್ರಿಸ್ಟೀನ್‌ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಮುಖ್ಯ ವೈದ್ಯ ಊ.ಒ.ಪುಸನ್ನ
ಮಾತನಾಡಿದರು. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಬಿಬಿಎಂಪಿ ಮಾಜಿ ಉಪ ಮಹಾಪೌರ ಎಸ್‌.ಹರೀಶ್‌.
ಬಿಬಿಎಂಪಿ ಸದಸ್ಯ ಕೆ.ವಿ.ರಾಜೇಂದ್ರ ಕುಮಾರ್‌, ಎಂ.ಮಹದೇವ್‌ ಮತ್ತಿತರರು ಉಪಸ್ಥಿತರಿದ್ದರು.


ಆಧಾರ:ವಿಜಯವಾಣಿ, ದಿನಾ೦ಕ:14.07.2020
13. ಭೂಸುಧಾರಣೆ ತಿದ್ದುಪಡಿ ಸುಗೀವಾಜ್ಜೆಗೆ ಗೌರ್ನರ್‌ ಅಸ್ತು


ಕರ್ನಾಟಕ ಭೂಸುಧಾರಣಾ ಕಾಯ್ದೆಯ 79ಎ ಮತ್ತು 79ಬಿ ತಿದ್ದುಪಡಿ ಕಾಯ್ದೆ ಕುರಿತಾದ ಸುಗೀವಾಜ್ಜೆಗೆ
ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಳೆದ 4 ದಶಕಗಳಿಂದಲೂ ತಿದ್ದುಪಡಿ ನೆನೆಗುದಿಗೆ ಬಿದ್ದಿತ್ತಲ್ಲದೆ. ಇದು ಕೃಷಿ
ಭೂಮಿ ಮಾರಾಟ ಮತ್ತು ಖರೀದಿಗೆ ತೊಡಕಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ
ನೇತೃತ್ವದಲ್ಲಿ ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಪ ಚರ್ಚೆ ನಡೆಸಿ ತಿದ್ದುಪಡಿಗೆ ಒಪ್ಪಿಗೆ
ನೀಡಲಾಗಿತ್ತು. ನಂತರದ 10 ದಿನಗಳಲ್ಲಿ ಈ ಸಂಬಂಧ ಸರ್ಕಾರ ಸುಗೀವಾಜ್ಞೆ ಹೊರಡಿಸಿರುತ್ತದೆ.


ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗುವ ಮೂಲಕ ಪರಿಷ್ಣಠತ ಕಾನೂನಾಗಿ ರೂಪಿತವಾಗಲಿದೆ. ಕೃಷಿ
ಭೂಮಿ ಮಾರಾಟದ ಮೇಲಿನ ನಿರ್ಬಂಧ ಸಡಿಲಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ 79ಎ 79ಬಿ
ತಿದ್ದುಪಡಿ ಭವಿಷ್ಯದಲ್ಲಿ ಭೂಮಿ ಪರಭಾರೆಗೆ ಈವರೆಗೆ ಇದ್ದ ಎಲ್ಲ ರೀತಿಯ ತೊಡಕುಗಳನ್ನು ನಿವಾರಿಸಲಿದೆ.
ಜೊತೆಗೆ ಕಂದಾಯ ಕಚೇರಿಗಳಲ್ಲಿ ಆಗುತ್ತಿದ್ದ ಅನಗತ್ಯ ಕಿರುಕುಳಗಳನ್ನು ತಿದ್ದುಪಡಿ ತಪ್ಪಿಸಲಿದೆ. ಕೊರೋನಾ
ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಸದ್ಯಕ್ಕೆ ನಡೆಯುವುದು ಅನುಮಾನವಾಗಿರುವ ಕಾರಣಕ್ಕೆ
ತಿದ್ದುಪಡಿಯನ್ನು ಸುಗೀವಾಜ್ಞಿ ಮೂಲಕ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿತ್ತು.


ನಮ್ಮಲ್ಲಿನ ಕ್ಲಿಷ್ಠ ಕಾನೂನಿನಿಂದ ಭೂಮಿ ಖರೀದಿಸಲು ಸಾಧ್ಯವಾಗದ ನೆರೆ ರಾಜ್ಯಗಳಿಗೆ ಹೋಗಿ ಕೈಗಾರಿಕೆ
ಮತ್ತಿತರ ಉದ್ದೇಶಗಳಿಗೆ ಭೂಮಿ ಖರೀದಿ ಮಾಡುತ್ತಿದ್ದುದನ್ನು ತಪ್ಪಿಸಲು ಈ ಕ್ರಮ ಅನಿವಾರ್ಯವಾಗಿತ್ತೆಂದು
ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ ಸರ್ಕಾರ ತಿದ್ದುಪಡಿ ಮೂಲಕ ರಾಜ್ಯದ ರೈತರಿಂದ ಭೂಮಿ ಪಡೆದು
ಉಳುವವನೇ ಒಡೆಯ ಎಂಬುದನ್ನು ಉಳ್ಳವನೇ ಒಡೆಯ ಎಂದು ಬದಲಾಯಿಸ ಹೊರಟಿದೆ ಎಂದು
ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.


ಆಧಾರ:ಸ೦ಯುಕ್ತ ಕರ್ನಾಟಕ, ದಿನಾಂಕ:14.07.2020
14. 3.94 ಕೋಟಿ ಅಕ್ರಮ ಪಡಿತರ ಜಪ್ತಿ


ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ ನೀಡಬೇಕಾದ ಪಡಿತರವನ್ನು ಅಕ್ರಮವಾಗಿ ಸಾಗಾಟ
ಮಾಡಲಾಗುತ್ತಿದ್ದ ರೂ.3.94 ಕೋಟಿ ಮೌಲ್ಕದ ಪಡಿತರ ಆಹಾರವನ್ನು ಸರ್ಕಾರ ಜಪ್ತಿ ಮಾಡಿದೆ. ಬಡವರಿಗೆ
ಉಚಿತ ಪಡಿತರ ನೀಡಬೇಕಾದ ನ್ಯಾಯ ಬೆಲೆ ಅಂಗಡಿಗಳು ಬಡವರ ಪಾಲಿನ ಪಡಿತರವನ್ನು ಕಾಳಸಂತೆಯಲ್ಲಿ


124


ಮಾರಾಟ ಮಾಡಲು ಯತ್ನಿಸಿ ಉಚಿತ ಪಡಿತರಕ್ಕೂ ಕನ್ನ ಹಾಕಲು ಯತ್ನಿಸಿದ್ದು ಪತ್ತೆಯಾಗಿದೆ. ಲಾಕ್‌ಡೌನ್‌ ವೇಳೆ
ಬಡವರು, ಕೂಲಿ ಹಾಗೂ ವಲಸೆ ಕಾರ್ಮಿಕರು, ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿದ್ದರು. ಇಂತಹ ಸಂದರ್ಭದಲ್ಲಿ
ಸರ್ಕಾರ ಈ ವಲಯದ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆಯನ್ನು ಮಾಡಿದೆ. ಏಪಿಲ್‌ನಿಂದ ಮೇ
ತಿಂಗಳವರೆಗೆ ಉಚಿತವಾಗಿ ಪಡಿತರವನ್ನು ಪೂರೈಸಿದೆ. ಸಮರ್ಪಕವಾಗಿ ಅರ್ಹರಿಗೆ ವಿತರಣೆಯಾಗಿದೆ
ಎಂಬುದನ್ನು ಪತ್ತೆ ಮಾಡಲು ಆಹಾರ ಇಲಾಖೆ ಅಧಿಕಾರಿಗಳು ಏಪಿಲ್‌, ಮೇ ತಿಂಗಳಲ್ಲಿ ರಾಜ್ಯಾದ್ಯಾಂತ
ಸುಮಾರು 10,000 ನ್ಯಾಯ ಅಂಗಡಿಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದ್ದರು.


ದಾಳಿಯ ನಂತರ ಅಧಿಕಾರಿಗಳು ಇಲಾಖೆಗೆ ನೀಡಿದ ಅಂಕಿಅಂಶ ಪ್ರಕಾರ ಈ ವೇಳೆ ಅಕ್ರಮ ಎಸಗುತ್ತಿದ್ದ
ನ್ಯಾಯಬೆಲೆ ಅಂಗಡಿಗಳ ವಿರುದ್ಧ ಒಟ್ಟು 1097 ಪ್ರಕರಣ ದಾಖಲಿಸಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ
ಪಡಿತರ ಸರಬರಾಜು ಮಾಡಿದ 112 ಪಡಿತರ ಅಂಗಡಿಗಳ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಡಿಮೆ
ಪಡಿತರ ಪೂರೈಸಿರುವ ಜೊತೆಗೆ ಇತರ ಅಕ್ರಮ ಎಸಗಿದ ಪಡಿತರ ಅಂಗಡಿಗಳ ಮೇಲೆ ಸುಮಾರು ರೂ.13.20
ಲಕ್ಷ ದಂಡ ವಿಧಿಸಲಾಗಿದೆ.


ಸುಮಾರು 186 ಪಡಿತರ ಅಂಗಡಿಗಳ ಪರವಾನಿಗಿಯನ್ನು ಅಮಾನತ್ತು ಮಾಡಲಾಗಿದೆ. ಎರಡು
ತಿಂಗಳಲ್ಲಿ ಆಹಾರ ಇಲಾಖೆ ಅಕ್ರಮ ಸಾಗಾಟ ಮಾಡುತ್ತಿದ್ದ ಸುಮಾರು ರೂ.394 ಕೋಟಿ ಮೌಲ್ಯದ ಪಡಿತರ
ಜಪ್ತಿ ಮಾಡಿದೆ. ಈ ಪೈಕಿ 8473.56 ಕ್ವಿಂಟಾಲ್‌ ಅಕ್ಕಿ, 107.63 ಕ್ವಿಂಟಾಲ್‌ ಬೇಳೆಕಾಳು, 24024 ಲೀಟರ್‌ ಅಡುಗೆ
ಎಣ್ಣೆ ಜಪ್ತಿ ಮಾಡಿದೆ. ಸುಮಾರು 111.23 ಕ್ವಿಂಟಾಲ್‌ ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಪಡಿತರ
ಸಾಗಾಟ ಮಾಡುತ್ತಿದ್ದ 39 ವಾಹನಗಳನ್ನು ಇಲಾಖೆ ಜಪ್ತಿ ಮಾಡಲಾಗಿದೆ. 70 ಮಂದಿ ಮೇಲೆ ಕ್ರಿಮಿನಲ್‌ ಕೇಸ್‌
ದಾಖಲಿಸಲಾಗಿದ್ದರೆ, 130 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಒಟ್ಟು 60 ಮಂದಿ ವಿರುದ್ಧ ಎಫ್‌ಐಆರ್‌
ದಾಖಲಿಸಲಾಗಿದೆ.


ಬಡವರ ಅನ್ಸಕ್ಕೆ ಕನ್ನ ಹಾಕಿದವರ ಮೇಲೆ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಇಲ್ಲಿಯವರೆಗೆ
ಸುಮಾರು 10.500 ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದೇವೆ. ಅಕ್ರಮ
ಎಸಗಿದವರ ಮೇಲೆ ಕ್ರಿಮಿನಲ್‌ ಕೇಸನ್ನು ದಾಖಲಿಸಲಾಗಿದೆ. ಎಂದು ಆಹಾರ ಸಚಿವರಾದ ಶ್ರೀ ಕೆ.ಗೋಪಾಲಯ್ಯ
ತಿಳಿಸಿದ್ದಾರೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:14.07.2020
15. ಬೆಂಗಳೂರು ಸೇರಿ ಧಾರವಾಡ, ದಕ್ಷಿಣ ಕನ್ನಡ, ಬೆಳೆಗಾವಿ ಜಿಲ್ಲೆ ಕೆಲಭಾಗಗಳಲ್ಲಿ ಲಾಕ್‌ಡೌನ್‌ ಜಾರಿ


ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯಾದ್ಯಾಂತ
ರಾತ್ರಿ ಎಂಟು ಗಂಟೆಯಿಂದ ಲಾಕ್‌ಡೌನ್‌ ಜಾರಿಗೆ ನಿರ್ಧರಿಸಿದ್ದು, ಜುಲೈ 22 ಬೆಳಗಿನ ಜಾವ ಐದು
ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಜಿಲ್ಲಾ ಮಟ್ಟದಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವ ಜವಾಬ್ದಾರಿಯನ್ನು
ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದ್ದು, ಆಯಾ ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ಅವಲೋಕಿಸಿ ಕ್ರಮ
ಜರುಗಿಸುವಂತೆ ಸೂಚಿಸಲಾಗಿದೆ. ಶಗಾಗಲೇ ದಕ್ಷಿಣ ಕನ್ನಡ, ಧಾರವಾಡ ಭಾಗಶ; ಬೆಳಗಾವಿ, ಬೆಂಗಳೂರು
ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾತ್ರಿಯಿಂದ ಲಾಕ್‌ಡೌನ್‌ ಜಾರಿಗೆ ಬರಲಿದೆ. ಈಗಾಗಲೇ
ಸ್ವಯಂಪೇರಣೆಯಿಂದ ಹಲವಾರು ಪ್ರದೇಶಗಳಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದು ಕಟ್ಟಕಡೆಯ ಲಾಕ್‌ಡೌನ್‌
ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಸ್ಪಷ್ಟಪಡಿಸಿ ಲಾಕ್‌ಡೌನ್‌ ವಿಸ್ತರಣೆ
ಆಗುವ ವದಂತಿಗಳನ್ನು ನಂಬಬೇಡಿ ಎಂದು ತಿಳಿ ಹೇಳಿದ್ದಾರೆ.


ತುರ್ತು ಸೇವೆ, ವಿದ್ಯುತ್‌, ನೀರು, ನೈರ್ಮಲ್ಕಗಳಿಗೆ ವಿನಾಯ್ತಿ ನೀಡಲಾಗಿದೆ. ವಿಕಾಸಸೌಧ, ವಿಧಾನಸೌಧ
ಮತ್ತು ಬಹುಮಹಡಿಗಳಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು
ಸೂಚಿಸಲಾಗಿದೆ. ನ್ಯಾಯಾಲಯಗಳ ಕಾರ್ಯನಿರ್ವಹಣೆ ಬಗ್ಗೆ ಉಚ್ಛ ನ್ಯಾಯಾಲಯ ನಿರ್ಧರಿಸಲಿದೆ.


ಕೇಂದ್ರ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ವಿಮಾನ ನಿಲ್ದಾಣ, ಬ್ಯಾಂಕುಗಳು, ಭಾರತೀಯ ರಿಸರ್ವ್‌ ಬ್ಯಾಂಕ್‌ ಕನಿಷ್ಟ ಸಿಬ್ಬಂದಿಯ ಹಾಜರಾತಿಯೊಂದಿಗೆ
ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.


125


ಪಶು ಚಿಕಿತ್ಲಾಲಯ, ಆರೋಗ್ಯ ಸೇವೆಗಳು, ವೈದ್ಯಕೀಯ ಕ್ಷೇತಕ್ಕೆ ಸಂಬಂಧಿಸಿದ ಎಲ್ಲ ರೀತಿಯ
ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕಂಟೈನ್‌ಮೆಂಟ್‌ ಪ್ರದೇಶ ವ್ಯಾಪ್ತಿ ಹೊರತುಪಡಿಸಿ ಉಳಿದೆಡೆ ಕೃಷಿ
ಚಟುವಟಿಕೆ, ಕೃಷಿ ಉತ್ಸನ್ನ ವ್ಯಾಪಾರ ಮತ್ತು ಸಾಗಾಣಿಕೆ, ರಸಗೊಬ್ಬರ ಮಾರಾಟ, ಕೊಯ್ದು ತೋಟಗಾರಿಕೆ
ಚಟುವಟಿಕೆ, ಮೀನುಗಾರಿಕೆ, ಪಶು ಸಂಗೋಪನೆ, ಕೋಳಿ, ಜಾನುವಾರು ಸಾಗಾಣಿಕೆಗಳಿಗೆ ಮುಕ್ತ ಅವಕಾಶ
ಕಲ್ರಿಸಲಾಗಿದೆ. ಆರೈಕೆ ಸಂಸ್ಥೆಗಳು. ಪಿಂಚಣಿ ಸಂಬಂಧಿತ ಕಚೇರಿಗಳು, ಭವಿಷ್ಯನಿಧಿ ಸೇವೆಗಳು, ಸಾಮಾಜಿಕ
ಭದತಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿಷಯಗಳು, ಅಂಗನವಾಡಿ, ಮನೆ ಬಾಗಿಲಿಗೆ ಆಹಾರ ಪೂರೈಕೆ
ಮೊದಲಾದ ಚಟುವಟಿಕೆಗಳು ನಿರಂತರವಾಗಿರಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈಗಾಗಲೇ ನಿಗದಿಪಡಿಸಿದ
ವೇಳಾಪಟ್ಟಿಯಂತೆ ರೈಲು, ವಿಮಾನಗಳು ಸಂಚರಿಸಲಿದ್ದು ನಿಲ್ದಾಣಕ್ಕೆ ತಲುಪಲು ಆಟೋ, ಟ್ಯಾಕ್ಸಿ ಮೂಲಕ
ಸಂಚರಿಸಲೂ ಅವಕಾಶ ನೀಡಲಾಗಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:14.07.2020
16. ನಿಯಂತ್ರಿಸಲೇಬೇಕು ಮರಣ ಪ್ರಮಾಣ


ಕೊರೋನಾ ಸೋಂಕಿನಿಂದ ಹೆಚ್ಚುತ್ತಿರುವ ಮರಣ ಪ್ರಮಾಣ ನಿಯಂತ್ರಿಸುವಂತೆ ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಸರೆನ್ಸ್‌
ನಡೆಸಿದ ಅವರು, ಬೀದರ್‌, ಧಾರವಾಡ, ಗದಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸೋಂಕಿತರ ಸಾವಿನ ಪ್ರಮಾಣ
ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮಕ್ಕೆಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.


ದೇಶದಲ್ಲಿ ಅತ್ಯಧಿಕ ಸಾವು ಸಂಭವಿಸುತ್ತಿರುವ 5 ಜಿಲ್ಲೆಗಳ ಪೈಕಿ ಬೀದರ್‌ ಜಿಲ್ಲೆ ಕೂಡ ಒಂದಾಗಿದ್ದು,
ಮರಣ ಪ್ರಮಾಣಕ್ಕೆ ಕಡಿವಾಣ ಹಾಕಲೇಬೇಕು ಎಂದು ಸೂಚಿಸಿದರು. ಈವರೆಗೆ ಸಂಭವಿಸಿದ ಸಾವಿನ
ಕುರಿತು ತಜ್ಞರ ವಿಶ್ಲೇಷಣಾ ವರದಿ ಕೂಡಲೇ ಕಳುಹಿಸಬೇಕು. ಬೆಂಗಳೂರು ನಗರ, ದಕ್ಷಿಣ ಕನ್ನಡ, ಧಾರವಾಡ,
ಬಳ್ಳಾರಿ, ಉಡುಪಿ. ಕಲಬುರಗಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದು, ಗಂಭೀರವಾಗಿ ಪರಿಗಣಿಸಿ
ಕಾರ್ಯೋನ್ಮುಖರಾಗುವಂತೆ ಮುಖ್ಯಮಂತ್ರಿ ಸೂಚಿಸಿದರು.


ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ಗೆ ಆದ್ಯತೆ ನೀಡಿದ್ದು, 1 ಲಕ್ಷ ಟೆಸ್ಟ್‌ ಕಿಚ್‌ ಖರೀದಿಸಿ ಜಿಲ್ಲೆಗಳಿಗೆ
ವತರಿಸಲಾಗಿದೆ. ತುರ್ತು ಪ್ರಕರಣಗಳಲ್ಲಿ ವಿವೇಚನೆಯಿಂದ ಈ ಪರೀಕ್ಷೆ ನಡೆಸಿ ಕಂಟೈನ್‌ಮೆಂಟ್‌ ವಲಯಗಳಲ್ಲಿ
ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕು. ಕ್ಷೇತ್ರಮಟ್ಟದ ಆರೋಗ್ಯ ಸಿಬ್ಬಂದಿ ಕೊರತೆ ಇರುವಲ್ಲಿ ಗುತ್ತಿಗೆ ಆಧಾರದಲ್ಲಿ 6
ತಿಂಗಳ ಅವಧಿಗೆ ನೇಮಿಸಿಕೊಳ್ಳಬೇಕು. ಹೊರಗಿನಿಂದ ವಲಸೆ ಬಂದವರ ಕ್ಹಾರಂಟೈನ್‌ಗೆ ಹೆಚ್ಚಿನ ನಿಗಾ


ವಹಿಸಬೇಕು. ಕೊರೋನೇತರ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು ಎಂದರು.


ಕೋವಿಡ್‌ ಆಸ್ಪತ್ರೆಯಲ್ಲಿ ಸ್ವಚ್ಛತೆ ನಿರ್ವಹಿಸುವ ಡಿ-ಗ್ರೂಪ್‌ ನೌಕರರ ಪ್ರೋತ್ಸಾಹಧನ ಹೆಚ್ಚಳಕ್ಕೆ ಕ್ರಮ
ವಹಿಸಲಾಗುವುದು ಎಂದ ಮುಖ್ಯಮಂತ್ರಿಯವರು ಕೊರೋನಾ ಮಾರಣಾಂತಿಕ ಕಾಯಿಲೆ ಅಲ್ಲ. ಜನರು
ಭಯಭೀತರಾಗುವ ಅಗತ್ಯವಿಲ್ಲ ಎಂದು ಜನರಿಗೆ ತಿಳುವಳಿಕೆ ಸೂಚನೆ ನೀಡಿದರು. ್ಯಂಬುಲೆನ್ಸ್‌ ಮತ್ತು ಚಿಕಿತ್ಸೆಗೆ
ಹಾಸಿಗೆಗಳ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ಡಿಜಿಟಲ್‌ ಎಕ್ಸ್‌-ರೇ ಯಂತ್ರಗಳ ಮೂಲಕ ಶ್ವಾಸಕೋಶದ
ಸೋಂಕನ್ನು ತ್ವರಿತವಾಗಿ ಪತ್ತೆಹಚ್ಚಲು ಸಾಧ್ಯವಿದ್ದು, ಈ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು
ತಿಳಿಸಿದರು. ಸಜೆವರಾದ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ, ಡಾ: ಕೆ.ಸುಧಾಕರ್‌, ಸರ್ಕಾರದ ಮುಖ್ಯ
ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಮುಂತಾದವರು ಉಪಸ್ಥಿತರಿದ್ದರು.


ಖಾಸಗಿಗೆ ಕೊನೆಯ ಎಚ್ಚರಿಕೆ


ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಮತ್ತು ಕೊರೋನೇತರ ರೋಗಿಗಳಿಗೆ ಚಿಕಿತ್ಸೆ ನೀಡಲು
ಸಹಕರಿಸದ ಆಸ್ಪತ್ರೆಗಳು ಮತ್ತು ಮೆಡಿಕಲ್‌ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು
ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತಗಳ ಜೊತೆಗಿನ ಸಂವಾದ ವೇಳ ಖಾಸಗಿ ಆಸ್ಪತ್ರೆಗಳು ಮತ್ತು
ಖಾಸಗಿ ಮೆಡಿಕಲ್‌ ಕಾಲೇಜುಗಳ ಅಸಹಕಾರದ ಬಗ್ಗೆ ಪ್ರಸ್ತಾಪವಾಯಿತು. ತುಮಕೂರು ಜಿಲ್ಲೆಯಲ್ಲಿ 2 ಮೆಡಿಕಲ್‌
ಕಾಲೇಜಿದ್ದರೂ ಈವರೆಗೆ ಸಹಕಾರ ಸಿಕ್ಕಿಲ್ಲ ಎಂಬುದು ಗಂಭೀರ ಚರ್ಚೆಗೆ ಕಾರಣವಾಯಿತು. ಇಂಥ


126


ಸಂದರ್ಭದಲ್ಲೂ ಸಹಕರಿಸದ ಸಂಸ್ಥೆಯ ಲೈ
ವ್ಯಕ್ತವಾಯಿತು.

ಉತ್ತವಗಳಿಗೆ ಅವಕಾಶವಿಲ್ಲ:-ಯಾವುದೇ ಕಾರಣಕ್ಕೂ ಸಾರ್ವಜನಿಕ ಉತ್ಸವಗಳನ್ನು ಆಚರಿಸುವಂತಿಲ್ಲ. ಜನರು
ಧಾರ್ಮಿಕ ಸ್ಥಳ, ಮಾರುಕಟ್ಟೆ ಮುಂತಾದೆಡೆ ಗುಂಪುಗೂಡದಂತೆ ಎಚ್ಚರ ವಹಿಸಬೇಕು. ಬೂತ್‌ ಮಟ್ಟದಲ್ಲಿ
ಕ್ಟಾರಂಟೈನ್‌, ಸಂಪರ್ಕಿತರ ಪತ್ತೆ, ಮನೆ ಮನೆ ಸಮೀಕ್ಷೆ ಪ್ರಕ್ರಿಯೆ ಪರಿಶೀಲನೆ ನಡೆಸಲು ಬೂತ್‌ ಮಟ್ಟದ
ಸಮಿತಿಗಳನ್ನು ರಚಿಸಿ, ಜನಪ್ರತಿನಿಧಿಗಳು ಹಾಗೂ ಸ್ವಯಂಸೇವಕರ ಸಹಕಾರ ಪಡೆಯುವಂತೆ ತಿಳಿಸಿದರು. 60
ವರ್ಷ ಮೇಲ್ಲಟ್ಟವರು ಹಾಗೂ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರನ್ನು ಪ್ರತ್ಯೇಕವಾಗಿ
ಇರಿಸಬೇಕು. ಐಎಲ್‌ಐ ಮತ್ತು ಉಸಿರಾಟದ ತೊಂದರೆ ಇರುವವರನ್ನು ಗುರುತಿಸಿ, ಕಡ್ಡಾಯವಾಗಿ ಕೊರೋನಾ
ಪರೀಕ್ಷೆಗೊಳಪಡಿಸಬೇಕು. ಸೀಲ್‌ಡೌನ್‌ ಪ್ರದೇಶಗಳಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕು ಎಂದರು.


ಸನ್ಸ್‌ ಏಕೆ ರದ್ದು ಮಾಡಬಾರದು ಎಂಬ ಅಭಿಪ್ರಾಯವೂ


ಅಧಿಕಾರಿಗಳಿಗೆ ಎಚ್ಚರಿಕೆ:-ಐಇದು ಕೊನೆಯ ಬಾರಿ ಲಾಕ್‌ಡೌನ್‌. ಕೊರೋನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ
ಕ್ರಮಕ್ಕೆಗೊಳ್ಳಿರಿ, ಮುಂದಿನ ಸಭೆ ವೇಳೆಗೆ ಸಮಸ್ಯೆ ಬಗೆಹರಿಸಿರಿ. ಇಲ್ಲವಾದರೆ ನಿರ್ದಾಕ್ಷಿೀ್ಯ ಕಮಕ್ಕೆಗೊಳ್ಳುವೆ ಎಂದು
ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ
ವಿರುದ್ಧ ಸಭೆಯಲ್ಲಿ ಗರಂ ಆಗಿದ್ದ ಸಿಎಂ, ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ಮತ್ತೆ ಸಿಟ್ಟಿಗೆದ್ದಿದ್ದರು. ಬೆಂಗಳೂರಿನ
ಬಿಐಇಸಿಯಲ್ಲಿ ತೆರೆದ ಬೃಹತ್‌ ಕೊರೋನಾ ಆರೈಕೆ ಕೇಂದಕ್ಕೆ ಹಾಸಿಗೆಗಳನ್ನು ಬಾಡಿಗೆ ತಂದದ್ದೇಕೆ 2 ತಿಂಗಳಲ್ಲಿ
ಅದರ ಬಾಡಿಗೆ ಮೊತ್ತವೆಷ್ಟು ನನ್ನ ಗಮನಕ್ಕೆ ತರದೆ ಇಷ್ಟು ದೊಡ್ಡ ನಿರ್ಧಾರ ಹೇಗೆ ತೆಗೆದುಕೊಂಡಿರಿ. ನೀವು
(ಅಧಿಕಾರಿಗಳು)ಮಾಡುವ ತಪ್ಪಿಗೆ ಸರ್ಕಾರ, ಪ್ರತಿಪಕ್ಷಗಳಿಂದ ಆರೋಪ ಹೊರಿಸಿಕೊಳ್ಳಬೇಕಾಗಿ ಬಂದಿದೆ ಎಂದು
ಏರಿದ ಧ್ವನಿಯಲ್ಲಿ ಫುಲ್‌ಕ್ಲಾಸ್‌ ತೆಗೆದುಕೊಂಡರು ಎಂದು ಉನ್ನತ ಮೂಲಗಳು ತಿಳಿಸಿವೆ. ಬಾಡಿಗೆ ನಿರ್ಧಾರ
ಕೈಬಿಟ್ಟು ಆರೈಕೆ ಕೇಂದಕ್ಕೆ ಅಗತ್ಯವಿರುವಷ್ಟು ಹಾಸಿಗೆಗಳನ್ನು ಖರೀದಿಸಿ, ನಂತರ ಬೇರೆಯದಕ್ಕೆ ಬಳಸಿಕೊಳ್ಳಲು
ಸಾಧ್ಯವಿದೆ. ಸಂಕಷ್ಟ ಕಾಲದಲ್ಲಿ ಮನಸ್ಸಿಟ್ಟು ಎಲ್ಲವನ್ನೂ ಲೆಕ್ಕಚಾರ ಹಾಕಿ ಪಾರದರ್ಶಕತೆಯಿಂದ ಕೆಲಸ ಮಾಡಿ.
ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕಾಗಿ 1 ವಾರದ ಲಾಕ್‌ಡೌನ್‌ ವಿಧಿಸಲಾಗಿದೆ. ಲಭ್ಯ ಕಾಲಾವಕಾಶದಲ್ಲಿ ಎಲ್ಲ
ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು, ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ
ನೀಡಿದ್ದಾರೆ.


ಆಧಾರ:ವಿಜಯವಾಣಿ, ದಿನಾ೦ಕ: 14.07.2020
17. ಸೋಂಕು ತಡೆಗೆ ಕಾರ್ಯಸೂಚಿ


ಕೊರೋನಾ ಸೋಂಕು ಹೆಚ್ಚಿರುವ ಬೆಂಗಳೂರು ನಗರ, ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ, ಉಡುಪಿ,
ಕಲಬುರಗಿ, ಬೀದರ್‌, ಗದಗ, ಮೈಸೂರು ಜಿಲ್ಲೆಗಳಲ್ಲಿ ರ್ಯಾಪಿಡ್‌ ಆಂಟಿಜೆನ್‌ ಕಿಟ್‌ ರವಾನಿಸಲು ನಿರ್ಧರಿಸಿರುವ
ರಾಜ್ಯ ಸರ್ಕಾರವು ಸೋಂಕು ಹರಡದಂತೆ ಮತ್ತು ಕೊರೋನಾ ಪೀಡಿತರ ಸಾವಿನ ಪ್ರಮಾಣ ತಗ್ಗಿಸಲು
ಸಮರೋಪಾದಿಯಲ್ಲಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್‌
ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದೆ.


ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್‌
ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಲಾಗಿದ್ದು, ಕಲಬುರಗಿ, ಗದಗ, ಮೈಸೂರು ಮತ್ತು
ಬೀದರ್‌ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಬೀದರ್‌ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿದೆ. ತ್ವರಿತವಾಗಿ
ನಿಯಂತ್ರಣಕ್ಕೆ ತರಲು ಕ್ರಮ ಜರುಗಿಸಬೇಕು. ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರಿಂದ ವರದಿ ಪಡೆದು
ಕಳುಹಿಸುವಂತೆ ಸೂಚಿಸಲಾಗಿದೆ. ಕಟ್ಟುನಿಟ್ಟಾದ ಸೀಲ್‌ಡೌನ್‌ ಜಾರಿ ಆಗಬೇಕು. ಧಾರ್ಮಿಕ ಸ್ಥಳ, ಮಾರುಕಟ್ಟೆ
ಮೊದಲಾದಡೆಗೆ ಜನ ಗುಂಪುಗೂಡುವುದನ್ನು ತಡೆಯಬೇಕು. ಸಾರ್ವಜನಿಕ ಉತ್ಸವ, ಸಮಾರಂಭ, ಹಬ್ಬ, ಜಾತ್ರೆ
ಮೊದಲಾದವುಗಳನ್ನು ಕಡ್ಡಾಯವಾಗಿ ನಿಷೇದಿಸಬೇಕು. ಕ್ಷಾರೆಂಟೈನ್‌ಗೆ ಒಳಗಾದವರ ಬಗ್ಗೆ ನಿಗಾ, ಸಂಪರ್ಕಿತರ
ಪತ್ತೆ, ಮನೆಮನೆ ಸಮೀಕ್ಷೆಗೆ ಬೂತ್‌ ಮಟ್ಟದ ಸಮಿತಿ ರಚಿಸಬೇಕು. ಈಗಾಗಲೇ ರಾಜ್ಯ ಸರ್ಕಾರವು ಒಂದು ಲಕ್ಷ
ರ್ಯಾಪಿಡ್‌ ಆಂಟಿಜೆನ್‌ ಕಿಟ್‌ ಖರೀದಿಸಿದೆ. ತುರ್ತು ಪ್ರಕರಣಗಳಲ್ಲಿ ರ್ಯಾಪಿಡ್‌ ಕಿಟ್‌ಗಳನ್ನೇ ಬಳಸಬೇಕು.
ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಟ್ಟುನಿಟ್ಟಾದ ಕ್ರಮ, ಕ್ಷೇತ್ರಮಟ್ಟದಲ್ಲಿ ಗುತ್ತಿಗೆ ಆಧಾರದಲ್ಲಿ ಆರೋಗ್ಯ ಸಿಬ್ಬಂದಿ


127


ನೇಮಕ, ಹೊರ ಊರುಗಳಿಂದ ಬರುವವರನ್ನು ಕಡ್ಡಾಯವಾಗಿ ಹೋಂ ಕ್ಲಾರಂಟೈನ್‌ಗೆ ಒಳಪಡಿಸುವಂತೆ
ಮುಖ್ಯಮಂತ್ರಿಗಳು ಸೂಚನೆ ನೀಡಿದರು.


ಕೊರೋನಾ ಪರೀಕ್ಷೆ ಕಡ್ಡಾಯ:-ಹಾಸಿಗೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷೀ್ಯ ಕ್ರಮ
ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೊರೋನಾ ರಹಿತ ರೋಗಿಗಳ ಚಿಕಿತ್ಸೆಗೆ ಯಾವುದೇ
ತೊಂದರೆ ಆಗಬಾರದು. 60 ವರ್ಷ ಮೇಲ್ಲಟ್ಟ ಮತ್ತು ತೀವ್ರ ಸ್ವರೂಪದ ಕಾಯಿಲೆಗೆ ತುತ್ತಾದವರಿಗೆ ಪ್ರತ್ವೇಕ ಚಿಕಿತ್ಸೆ
ಕಲ್ಲಿಸತಕ್ಕದ್ದು. ಉಸಿರಾಟದ ತೊಂದರೆ ಇರುವವರಿಗೆ ಕೊರೋನಾ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸುವಂತೆ
ಸೂಚಿಸಿದ್ದಾರೆ.


ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:14.07.2020
18. ಪದವಿ ಶುಲ್ಕ ಪರಿಷ್ಠರಿಸುವಂತಿಲ್ಲ


ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯು 2020-21ನೇ ಸಾಲಿನ ಸರ್ಕಾರಿ ಹಾಗೂ ಅನುದಾನಿತ
ಪದವಿ ಕಾಲೇಜುಗಳ ಕೋರ್ಸ್‌ಗಳ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಕೊರೋನಾ ಹಿನ್ನೆಲೆಯಲ್ಲಿ
ಯಾವುದೇ ರೀತಿಯಲ್ಲೂ ಶುಲ್ಕ ಪರಿಷ್ಠರಣೆ ಮಾಡಬಾರದು ಎಂದು ನಿರ್ದೇಶನ ನೀಡಿದೆ. 2019-20ರಲ್ಲಿ ನಿಗದಿ
ಪಡಿಸಿದ್ದ ಶುಲ್ಕವನ್ನೇ 2020-21ನೇ ಸಾಲಿಗೆ ವಸೂಲಿ ಮಾಡುವಂತೆ ಮತ್ತು ವಿದ್ಯಾರ್ಥಿನಿಯರ ಪೂರ್ಣ ಶುಲ್ಕ
ವಿನಾಯ್ತಿ ಯೋಜನೆ ಮುಂದುವರಿಸಲು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.


ಕೋರ್ಸ್‌ಗಳ ಪ್ರವೇಶ ಅರ್ಜಿಯನ್ನು ಉಚಿತವಾಗಿ ನೀಡಬೇಕು ಪ್ರವೇಶ ಶುಲ್ಕ ರೂ.80 ಬೋಧನಾ
ಶುಲ್ಕ ರೂ.೨940 ಪ್ರಯೋಗಾಲಯ ಶುಲ್ಕ ರೂ.260 ವೈದ್ಯಕೀಯ ತಪಾಸಣೆ, ವರ್ಗಾವಣೆ ಪತ್ರ, ವಿದ್ಯಾಭ್ಯಾಸ
ಪ್ರಮಾಣ ಪತ್ರ, ವಾಚನಾಲಯ, ಕ್ರೀಡೆ, ಗ್ರಂಥಾಲಯ, ಕಾಲೇಜು ಅಭಿವೃದ್ಧಿ, ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ
ಕ್ಷೇಮಾಭಿವೃದ್ಧಿ ನಿಧಿ, ರೋವರ್‌ ರೇಂಜರ್‌ ಘಟಕ, ರೆಡ್‌ಕ್ರಾಸ್‌, ಎನ್‌ಎಸ್‌ಎಸ್‌ ಶುಲ್ಕ ಸೇರಿ ರೂ.760
ಪಡೆಯಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


ನೋಂದಣಿ ಶುಲ್ಕ ಪರೀಕ್ಷಾ ಶುಲ್ಕ ಹಾಗೂ ಕ್ರೀಡಾಭಿವೃದ್ಧಿ ಶುಲ್ಕ ಆಯಾ ವಿವಿಗಳಿಗೆ
ಸಂಬಂಧಿಸಿದ್ದಾಗಿದೆ. ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆಯನ್ನು
ಕಡ್ಡಾಯವಾಗಿ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು. ವಿದ್ಯಾರ್ಥಿನಿಯರಿಗೆ ಪೂರ್ಣ
ಶುಲ್ಕ ವಿನಾಯಿತಿ ಇದೆ. ನಿಯಮದ ಪ್ರಕಾರ ಮೊದಲು ಶುಲ್ಕ ಪಾವತಿಸಿಕೊಂಡು ಅನಂತರ ಮರುಪಾವತಿಗೆ
ಅರ್ಜಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.


ಆಧಾರ:ವಿಜಯವಾಣಿ, ದಿನಾ೦ಕ:15.07.2020
19. ಪ್ಲಾಸ್ಮಾ ದಾನ ಮಾಡಿದರೆ ಪ್ರೋತ್ಲಾಹ ಧನ


ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಪ್ಲಾಸ್ಮಾ ದಾನ ಉತ್ತೇಜಿಸುವ ನಿಟ್ಟಿನಲ್ಲಿ
ಸರ್ಕಾರದಿಂದ ಐದು ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ
ಡಾಃಕೆ.ಸುಧಾಕರ್‌ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ
ಬಳಲುತ್ತಿರುವ ಕೊರೋನಾ , ಸೋಂಕಿತರಿಗೆ ಪರಿಣಾಮಕಾರಿಯಾಗಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಸರ್ಕಾರ
ನಿರ್ಧರಿಸಿದೆ. ಸೋಂಕಿನಿಂದ ಗುಣಮುಖರಾದವರ ರಕ್ತದಾನ ಮಾಡಿದರೆ ಅವರಿಂದ ಪ್ಲಾಸ್ಮಾ ತೆಗೆದು
ಸೋಂಕಿತರಿಗೆ ನೀಡಿ ಗುಣಪಡಿಸಬಹುದು. ಇನ್ನು ಪ್ಲಾಸ್ಮಾ ಚಿಕಿತೆಗಾಗಿ ರಕ್ತದಾನ ಮಾಡುವವರಿಗೆ ಸರ್ಕಾರದಿಂದ
ರೂ.ಐದು ಸಾವಿರ ಪ್ರೋತ್ಲಾಹ ಧನ ನೀಡಲಾಗುವುದು. ರಾಜ್ಯದಲ್ಲಿ ಗುಣಮುಖರಾದವರು 17,370 ಇದ್ದಾರೆ.
ಇವರು ಮುಂದೆ ಬಂದು ಪ್ಲಾಸ್ಮಾ ಚಿಕಿತ್ಸೆಗೆ ನೆರವಾದರೆ ತೀವ್ರಾನಿಗಾ ಘಟಕದಲ್ಲಿರುವ 597 ಮಂದಿ ಶೀಘ್ರ
ಗುಣಮುಖರಾಗುತ್ತಾರೆ. ಬೆಂಗಳೂರಿನ ಎಲ್ಲ ವಲಯಗಳ ಬೂತ್‌ ಕಾರ್ಯಪಡೆಯ ನೋಡೆಲ್‌
ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗಿದೆ. 2 ದಿನಗಳಲ್ಲಿ ಕಾರ್ಯಪಡೆ ರಚಿಸಲು ನಿರ್ದೇಶನ
ನೀಡಲಾಗಿದೆ. ಸದಸ್ಯರ ಕರ್ತವ್ಯ ಮತ್ತು ನಿರ್ವಹಿಸಬೇಕಾದ ಕೆಲಸಗಳ ಕುರಿತು ಮಾರ್ಗಸೂಚಿ ನೀಡಲಾಗುತ್ತದೆ
ಎಂದರು.


128


ಶೀಘ್ರ ಶಿಷ್ಯವೇತನ: ದಾವಣಗೆರೆಯಲ್ಲಿ ಜೆಜೆಎಂ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳ ಶಿಷ್ಯವೇತನಕ್ಕಾಗಿ
ನಡೆಸುತ್ತಿರುವ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 3-4 ದಿನದಲ್ಲಿ ಅರಿಯರ್ಸ್‌ ಸಮೇತ
ವೇತನ ಪಾವತಿಗೆ ಕ್ರಮವಹಿಸಲಾಗುವುದು. ಮುಂದಿನ ತಿಂಗಳಿಂದ ನಿಯಮಿತವಾಗಿ ಶಿಷ್ಯವೇತನ ಸಿಗಲಿದೆ ಎಂದು
ಸಚಿವರು ಭರವಸೆ ನೀಡಿದರು.


ಪರೀಕ್ಷೆ ಪ್ರಮಾಣ ಹೆಚ್ಚಿಸದಿದ್ದರೆ ಕ್ರಮ: ಮೆಡಿಕಲ್‌ ಕಾಲೇಜು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಳೆದ 4 ತಿಂಗಳಿಂದ
ಲ್ಯಾಬ್‌ ಸ್ಥಾಪನೆಗೆ ಸರ್ಕಾರ ಅಗತ್ಯ ನೆರವು ನೀಡಿದೆ. ಅಲ್ಲಿನ ಸಿಬ್ಬಂದಿಗೆ ನಿಮ್ಹಾನ್ಸ್‌ ಮೂಲಕ ತರಬೇತಿ
ನೀಡಲಾಗಿದೆ. ಇಷ್ಟರ ಮೇಲೂ ಬೆರಳೆಣಿಕೆ ಪರೀಕ್ಷೆ ನಡೆಸುತ್ತಿರುವ ಪ್ರಯೋಗಾಲಯಗಳ ವಿರುದ್ಧ ಕ್ರಮ
ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು. ಮೆಡಿಕಲ್‌ ಕಾಲೇಜುಗಳಲ್ಲಿ ಪ್ರಯೋಗಾಲಯ "ಸ್ಥಾಪನೆ
ಮಾಡುವುದು ಕಡ್ಡಾಯ. ಆದರೂ ಕೆಲವರು 'ವಿಳಿಂಬ ಧೋರಣೆ ಅನುಸರಿಸುತ್ತಿದ್ದಾರೆ. 10-15 ದಿನಗಳಲ್ಲಿ 500-
1000 ಪರೀಕ್ಷೆ ಗುರಿ ತಲುಪಬೇಕು. ಫಲಿತಾಂಶ ವಾರದವರೆಗೂ ತಡವಾಗುತಿದೆ. ಇನ್ನು ಮುಂದೆ 24 ರಿಂದ 30
ತಾಸಿನಲ್ಲಿ ವರದಿ ಕೈಸೇರಬೇಕು ಎಂದು ಸೂಚಿಸಿದರು.


ಆಧಾರ:ಉದಯವಾಣಿ, ದಿನಾಂಕ: 16.07.2020
20. ಲಾಕ್‌ಡೌನ್‌ ವಿಸ್ತರಣೆ ಅಲ್ಲ-ಸಿಎಂ ಸೂಚನೆ


ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್‌ಡೌನ್‌ ವಿಸ್ತರಣೆಯಾಗುತ್ತದೆ ಎಂಬ ವದಂತಿಗಳಿಗೆ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೆರೆ ಎಳದಿದ್ದು, ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ
ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ವ್ಯಾಪ್ತಿಯ ಸಚಿವರು, ಸಂಸದರು ಮತ್ತು ಮುಖ್ಯ ಕಾರ್ಯದರ್ಶಿ ಜೊತೆ
ನಡೆಸಿದ ಸಭೆಯಲ್ಲಿ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿಯವರು ಲಾಕ್‌ಡೌನ್‌ ಮಾತೇ ಬೇಡ ಕೊರೋನಾ
ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್‌ಡೌನ್‌
ಮುಂದುವರೆಸುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ. ತಪಾಸಣೆ, ಪರೀಕ್ಷೆ ಚಿತ್ತೆ ನಿಯಂತ್ರಣಕ್ಕೆ
ಹೆಚ್ಚು ಒತ್ತು ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಚಿವರಿಗೆ ಸೂಚಿಸಿದ್ದಾರೆ.


ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರ ಹಾಗೂ ವಾರ್ಡ್‌ ಮಟ್ಟದಲ್ಲೇ ಕಾರ್ಯ
ಯೋಜನೆ ರೂಪಿಸಿ ಕಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಆಯಾ ವಿಧಾನಸಭೆ ಕ್ಷೇತ್ರ ಹಾಗೂ ವಾರ್ಡ್‌
ಮಟ್ಟದಲ್ಲಿ ಪತ್ತೆಯಾದ ಸೋಂಕಿತರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ
ಖಾಸಗಿ ಆಸ್ಪತ್ರೆಗಳ ಜೊತೆ ಸಮನ್ವಯತೆ ಸಾಧಿಸಿ, ಕಲ್ಯಾಣ ಮಂಟಪ, ಸರ್ವೀಸ್‌ ಅಪಾರ್ಟ್‌ಮೆಂಟ್‌ ಬಾಡಿಗೆಗೆ
ಪಡೆಯಿರಿ ಎಂದು ನಿರ್ದೇಶನ ನೀಡಿದ್ದಾರೆ.


ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ದಾಖಲಾಗಲು ಆಗುತ್ತಿರುವ ತೊಡಕು ನಿವಾರಿಸುವ ಸಂಬಂಧ ಕಟ್ಟುನಿಟ್ಟಿನ
ಕ್ರಮ ಕೈಗೊಳ್ಳಲು ಹಾಗೂ ಖಾಸಗಿ ಆಸ್ಪತ್ರೆಗಳು ಬೆಡ್‌ ನೀಡದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು
ತಾಕೀತು ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣ ಕುರಿತು ಎಂಟು ವಲಯಗಳ ಉಸ್ತುವಾರಿಗಳ
ಜೊತೆ ಸಭೆ ನಡೆಸಿದ ಅವರು, ಪ್ರತಿ ವಾರ್ಡ್‌ಗಳಲ್ಲಿ ಕಲ್ಯಾಣ ಮಂಟಪ ಹಾಗೂ ವಸತಿ ಗೃಹ ಗುರುತಿಸಲಾಗಿದ್ದು,
ಪ್ರತ್ಯೇಕವಾಗಿ ವಾಸಿಸಲು ಕೊಠಡಿ ವ್ಯವಸ್ಥೆ ಇಲ್ಲದವರಿಗೆ ಕ್ವಾರಂಟೈನ್‌ ಮಾಡಲು ಇವುಗಳನ್ನು ಬಳಕೆ ಮಾಡಿಕೊಳ್ಳಿ
ಎಂದು ತಿಳಿಸಿದರು.


ಪ್ರತಿ ವಾರ್ಡ್‌ನಲ್ಲೂ ಸ್ವಯಂ ಸೇವಕರಿದ್ಧೂ ಆ್ಯಂಬುಲೆನ್ಸ್‌ ಸಹ ನಿಗದಿ ಮಾಡಲಾಗಿದೆ. ಖಾಸಗಿ
ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರ ದಾಖಲಾತಿ ಮತ್ತು ಹಾಸಿಗೆಗಳ ಲಭ್ಯತೆ ಕುರಿತು ಮಾಹಿತಿ ಒದಗಿಸಲು
ಸ್ವಯಂಸೇವಕರು ಹಾಗೂ ನೋಡೆಲ್‌ ಅಧಿಕಾರಿಗಳ ನೇಮಕ ಮಾಡಲಾಗುವುದು. ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆ
ಹೆಚ್ಚಾಗಬೇಕು, ಪರೀಕ್ಷೆಯ ಫಲಿತಾಂಶ ದೊರೆತ ಎರಡು ಗಂಟೆಗಳೊಳಗೆ ಹಾಸಿಗೆ ಹಂಚಿಕೆ ಮಾಡಿ ಆ್ಯಂಬುಲೆನ್ಸ್‌
ಅವರ ಮನೆ ಬಾಗಿಲಿಗೆ ಹೋಗಿ ಆಸ್ಪತ್ರೆಗೆ ಕರೆದೊಯ್ಯಬೇಕು. ಈ ವ್ಯವಸ್ಥೆ ಕೇಂದ್ರೀಕರಿಸಿ ವಲಯವಾರು
ಮೇಲ್ವಿಚಾರಣೆ ನಡೆಸಿ ಎಂದು ಸೂಚಿಸಿದರು.

ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ, ಕೋವಿಡ್‌ ಹಾಗೂ ನಾನ್‌ ಕೋವಿಡ್‌ ರೋಗಿಗಳಿಗೆ ಚಿಕಿತ್ಸಾ


ಸೌಲಭ್ಯ ದೊರಕುವುದನ್ನು ಖಾತರಿಪಡಿಸಿಕೊಳ್ಳಲಿ. ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸದೆ


129


ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಅಥವಾ ಹೋಂ ಕ್ಲಾರಂಟೈನ್‌ ಮಾಡಿ, 65 ವರ್ಷ ಮೇಲ್ಲಟ್ರ ರೋಗ ಲಕ್ಷಣ
ಇರುವ ವ್ಯಕ್ತಿಗಳಿಗೆ ಆದ್ಯತೆ ಮೇರೆಗೆ ಹಾಸಿಗೆ ಹಂಚಿಕೆ ಮಾಡಬೇಕು. ಆಸ್ಪತ್ರೆಯಲ್ಲಿ ಮೃತರಾದವರಿಗೆ ರ್ಯಾಪಿಡ್‌
ಆಂಟಿಜೆನ್‌ ಪರೀಕ್ಷೆ ನಡೆಸಿ ಪಾರ್ಥಿವ ಶರೀರ ಕೂಡಲೇ ಹಸ್ತಾಂತರಿಸಲು ಅಥವಾ ನಿಯಮಾನುಸಾರ
ಅಂತ್ಯಕ್ರಿಯೆಗೆ ಕ್ರಮ ಕೈಗೊಳ್ಳಬೇಕು. ವೈದ್ಯರ ಕೊರತೆ ನಿವಾರಿಸಲು ಹುದ್ದೆ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು
ಬೇಗ ಅಗತ್ಯ ವೈದ್ಯರು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.


ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ, ಡಿಸಿಎಂ
ಡಾ: ಸಿ.ಎನ್‌.ಅಶ್ವತ್ನನಾರಾಯಣ, ಸಚಿವರಾದ ಬಸವರಾಜಬೊಮ್ಮಾಯಿ, ಆರ್‌.ಅಶೋಕ್‌, ವಿ.ಸೋಮಣ್ಣ,
ಎಸ್‌.ಟಿ. ಸೋಮಶೇಖರ್‌, ಸುರೇಶ್‌ ಕುಮಾರ್‌, ಭೈರತಿ ಬಸವರಾಜ್‌, ಸಂಸದರಾದ ತೇಜಸ್ಥಿ ಸೂರ್ಯ,
ಪಿ.ಸಿ. ಮೋಹನ್‌, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.


ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ:-ಕೊರೋನಾ ಸೋಂಕಿತರು ಮತ್ತು ಪ್ರಥಮ ಸಂಪರ್ಕಿತರು ಕಡ್ಡಾಯವಾಗಿ
ಹೋಂ ಕ್ಷಾರಂಟೈನ್‌ಗೆ ಒಳಪಡುವುದು ಕಡ್ಡಾಯ ಇಲ್ಲದಿದ್ದರೆ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಮುಖ್ಯ
ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಎಚ್ಚರಿಕೆ ನೀಡಿದ್ದಾರೆ. ಕೊರೋನಾ ಸೋಂಕಿತರು, ಪ್ರಥಮ ಸಂಪರ್ಕಿತರು
ರಾಜ್ಯ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯ. ಉಲ್ಲಂಘನೆಯಾದರೆ ರಾಷ್ಟ್ರೀಯ
ವಿಪತ್ತು ನಿರ್ವಹಣಾ ಕಾಯ್ದೆ-2005, ಸಾಂಕ್ರಾಮಿಕ ರೋಗಗಳ ಕಾಯ್ದೆ -1897 ಮತ್ತು ಭಾರತೀಯ ದಂಡ
ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶಿಸಿದ್ದಾರೆ.


ಅತಿ ಹೆಚ್ಚುಸಾವು : ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ ಗರಿಷ್ಟ 115 ಸಾವು ಪ್ರಕರಣಗಳು ವರದಿಯಾಗಿದ್ದು,
ಇದು ಈವರೆಗಿನ ದಾಖಲೆಯಾಗಿದೆ. ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಸಾವು ರಾಜ್ಯದಲ್ಲಿ ಸಂಭವಿಸಿದೆ.
ಮಹಾರಾಷ್ಟದಲ್ಲಿ ಅತಿ ಹೆಚ್ಚು 258 ಸೋಂಕಿತರ ಸಾವಾಗಿದ್ದು, ತಮಿಳುನಾಡಿನಲ್ಲಿ 79 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ 3,693 ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, 1028 ಮಂದಿ
ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.


ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು, ನಂತರ ಸ್ಥಾನದಲ್ಲಿ ದಕ್ಷಿಣ ಕನ್ನಡ, ಕಲಬುರಗಿ, ಬಳ್ಳಾರಿ
ಇವೆ. ಸಾವಿನ ಪಟ್ಟಿಯಲ್ಲಿ ಬೆಂಗಳೂರು ನಂತರ 50ಕ್ಕೂ ಹೆಚ್ಚು ಸಾವಿನೊಂದಿಗೆ ಕ್ರಮವಾಗಿ ಮೈಸೂರು, ಬಳ್ಳಾರಿ,
ಬೀದರ್‌, ದಕ್ಷಿಣ ಕನ್ನಡ, ಧಾರವಾಡ ಇವೆ. ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 55,115
ಗುಣಮುಖರ ಸಂಖ್ಯೆ20,757 ಮೃತಪಟ್ಟವರ ಸಂಖ್ಯೆ 1147ಕ್ಕೆ ಏರಿಕೆಯಾಗಿದೆ.


ಆಧಾರ:ಉದಯವಾಣಿ, ದಿನಾಂಕ: 18.07.2020
21. ಅರಣ್ಯದಂಚಿನ ಗ್ರಾಮದ ಮೂಲ ಸೌಕರ್ಯ ಅಭಿವೃದ್ದಿಪಡಿಸಲು ಡಿಸಿಎಂ ಸೂಚನೆ


ಅರಣ್ಯದೊಳಗಿನ ಹಾಗೂ ಅರಣ್ಯದಂಚಿನ ಗ್ರಾಮಗಳಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಅರಣ್ಯ ಹಕ್ಕು
ಅಧಿನಿಯಮದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಡಿಸಿಎಂ
ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ. ಇದೇ ವೇಳೆ ಅರಣ್ಯ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು
ಶೀಘ್ರವಾಗಿ ವಿಲೇವಾರಿ ಮಾಡಲು ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ
ನಡೆಸಬೇಕು ಎಂದು ತಿಳಿಸಿದರು.


ವಿಧಾನಸೌಧದಲ್ಲಿ ಅರಣ್ಯ ಹಕ್ಕು ಅಧಿನಿಯಮ ಅನುಷ್ಠಾನದ ಕುರಿತು ಅರಣ್ಯ ಇಲಾಖೆ ಹಾಗೂ
ಕಂದಾಯ ಇಲಾಖೆ ಅಧಿಕಾರಿಗಳೂಂದಿಗೆ ಸಭೆ ನಡೆಸಿದ ಅವರು, ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಾಕಿ ಇರುವ
ಸಮುದಾಯ ಅರಣ್ಯ ಹಕ್ಕು ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ, ಜೊತೆಗೆ ಲ್ಯಾಂಪ್ಸ್‌ ಸಹಕಾರ ಸಂಘಗಳಿಗೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುತಿಸಲಾಗಿರುವ 123 ಎಕರೆ ಜಮೀನನ್ನು ಉದ್ದೇಶಿತ ಯೋಜನೆಗಾಗಿ
ಸದ್ಧಳಕೆಯಾಗುವಂತೆ ಕ್ರಮಕ್ಕೆಗೊಳ್ಳಬೇಕು ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳ, ಬೀಳಗಿ ಹಾಗೂ
ಜಮಖಂಡಿ ತಾಲ್ಲೂಕುಗಳಲ್ಲಿ ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸುವವರ ಜಮೀನುಗಳಲ್ಲಿ ಅಗತ್ಯ
ಸೌಕರ್ಯ ಕಲ್ಪಿಸುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.


ಆಧಾರ:ಕನ್ನಡಪ್ರಭ, ದಿನಾಂಕ: 18.07.2020


130


22.ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿ


ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಸರ್ಕಾರಿ
ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಶಾಸಕರು ಶಾಲೆಗಳನ್ನು ದತ್ತು ಪಡೆಯುವಂತೆ
ತ್ವರಿತಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪತ್ರ
ಬರೆದಿದ್ದಾರೆ.


ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಸೇರಿದಂತೆ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಕುರಿತು ತಮ್ಮ
ವ್ಯಾಪ್ತಿಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಉಪ ನಿರ್ದೇಶಕರು ಹಾಗೂ ತಮ್ಮ ವ್ಯಾಪ್ತಿಯ ಶಾಸಕರಿಂದ
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಪಡೆದು, ಜಿಲ್ಲಾವಾರು ಮತ್ತು ವಿಧಾನಸಭಾ ಕ್ಷೇತ್ರವಾರು ಪಟ್ಟಿಯನ್ನು
ಕ್ರೋಢೀಕರಿಸಿ ಸಲ್ಲಿಸಬೇಕು ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.

"ಮಾಗಡಿ ಕ್ಷೇತದ ಶಾಸಕ ಎ.ಮಂಜುನಾಥ್‌ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಲೆಗಳನ್ನು
ದತ್ತುಕೊಂಡಿರುವ ಮಾಹಿತಿ ನೀಡಿದ್ದಾರೆ" ಎಂದು ಪತ್ರದಲ್ಲಿ ತಿಳಿಸಿರುವ ಅವರು "ಆಗಸ್ಟ್‌ ತಿಂಗಳ ಎರಡನೇ
ವಾರದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಖ್ಯಮಂತ್ರಿ ಈ ಯೋಜನೆಯನ್ನು ಉದ್ರಾಟಿಸಲು ದಿನ
ನಿಗದಿಪಡಿಸಲಾಗುವುದು. ಎಲ್ಲ 224 ಕ್ಷೇತ್ರಗಳಲ್ಲಿ ಶಾಲೆಗಳನ್ನು ದತ್ತುಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು” ಎಂದು
ಅವರು ತಿಳಿಸಿದ್ದಾರೆ.


2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಶಾಲೆಗಳನ್ನು ದತ್ತು ಪಡೆಯುವ ಕುರಿತು ಜುಲೈ
3ರಂದೇ ಸರ್ಕಾರ ಆದೇಶ ಹೊರಡಿಸಿತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಕ್ಷೇತ್ರದಲ್ಲಿ ಕನಿಷ್ಟ 10 ಶಾಲೆಗಳನ್ನು
ಗುರುತಿಸಿ ಅಗತ್ಯವಿರುವ ಕಾಮಗಾರಿಗಳ ಪ್ರಸ್ತಾವನೆಯನ್ನು ಶಾಸಕರಿಗೆ ಸಲ್ಲಿಸಬೇಕು. ಶಾಸಕರು ಅನುಮೋದಿಸಿದ
ಕಾಮಗಾರಿ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಕಾರ್ಯಾದೇಶ ಜಾರಿಯಾಗುವಂತೆ ನೋಡಿಕೊಳ್ಳಬೇಕು. ತಮ್ಮ
ಜಿಲ್ಲೆಯ ಮಾಹಿತಿಯನ್ನು ಆಗಸ್ಟ್‌ ಅಂತ್ಯದೊಳಗೆ ಆಯುಕ್ತರಿಗೆ ಉಪ ನಿರ್ದೇಶಕರು ಸಲ್ಲಿಸಬೇಕು. ದತ್ತು ಪಡೆದ
ಶಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ಆಗಸ್ಟ್‌ನಲ್ಲಿ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ
ತಿಳಿಸಲಾಗಿತು.


ಆಧಾರ:ಪ್ರಜಾವಾಣಿ, ದಿನಾಂಕ:19.07.2020
23. ಕಂಟೇನರ್‌ನಲ್ಲಿ ಕೋವಿಡ್‌ ಐಸಿಯು


ಕೋವಿಡ್‌ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಆಗದಂತೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ
ವಹಿಸಿರುವ ಬೆನ್ನಲ್ಲಿಯೇ. ಖಾಸಗಿ ಕಂಪೆನಿಯೊಂದು ಎಲ್ಲಿಗೆ ಬೇಕಾದರೂ ಸಾಗಿಸಿ ಬಳಸಬಹುದಾದ "ಮೊಬೈಲ್‌
ಮಾಡ್ಕೂಲರ್‌ ಐಸಿಯು” ಅಭಿವೃದ್ಧಿಪಡಿಸಿದೆ. ಬೆಂಗಳೂರು ಮೂಲದ ರಿನ್ಯಾಕ್‌ ಎಂಬ ಕಂಪೆನಿ ಕಂಟೇನರ್‌ಗಳನ್ನು
ಅಭಿವೃದ್ಧಿಪಡಿಸಿದೆ.

ಸಾಮಾನ್ಯವಾಗಿ ಹಡಗು ವಿಮಾನಗಳಲ್ಲಿ ಸರಕು ಸಾಗಣೆಗೆ ಬಳಸಲಾಗುವ ಬೃಹತ್‌ ಗಾತ್ರದ
ಕಂಟೇನರ್‌ಗಳಲ್ಲಿ ಈ ಐಸಿಯುಗಳನ್ನು ಅಭಿವೃದ್ಧಿ ಪಡಿಸಿದ್ದು, ಡಿಸಿಎಂ ಡಾ: ಅಶ್ವತ್ಥನಾರಾಯಣ ಪರಿಶೀಲಿಸಿದರು.
ಈ ಬಗ್ಗೆ ವಿವರಣೆ ನೀಡಿದ ಅವರು, ಸರಕು ಸಾಗಣೆ ಕಂಟೇನರ್‌ಗಳಲ್ಲಿ ಐಸಿಯು ವ್ಯವಸ್ಥೆ ಆಲೋಚನೆಯೇ
ವಿನೂತನವಾಗಿದೆ. ದೇಶದಲ್ಲೇ ಮೊತ್ತಮೊದಲ ಬಾರಿಗೆ ಇಂಥ ತುರ್ತು ಚಿಕಿತ್ಸಾ ಘಟಕಗಳನ್ನು ರಾಜ್ಯದಲ್ಲಿ
ಸಿದ್ದಪಡಿಸಲಾಗಿದೆ. ನಮ್ಮ ಸಂಶೋಧಕರು ತಜ್ಞಧ ಸೃಜನಶೀಲತೆಗೆ ಇದೊಂದು ಉತ್ತಮ ಉದಾಹರಣೆ ಎಂದು
ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಧಾನಿಯಲ್ಲಿ ಪ್ರಾಯೋಗಿಕವಾಗಿ ಮೊದಲು ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತೆಗೆ 10
ಕಂಟೇನರ್‌ಗಳನ್ನು ಒದಗಿಸಲಾಗುವುದು. ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಅದೇ ಆಸ್ಪತ್ರೆಯ ವೈದ್ಯರು
ಚಿಕಿತ್ಸೆ ನೀಡುವರು. ಪ್ರತಿ ಕಂಟೇನರ್‌ನಲ್ಲಿ 5 ಬೆಡ್‌ಗಳಿರಲಿವೆ. ತುರ್ತು ಸಂದರ್ಭಗಳಲ್ಲಿ ಅದರಲ್ಲೂ ನೈಸರ್ಗಿಕ
ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳ ಹೆಚ್ಚು ಬೆಡ್‌ಗಳನ್ನು ಸಿದ್ದಪಡಿಸಲಾಗಿದೆ ಎಂದು
ಡಾ: ಅಶ್ವತ್ಥನಾರಾಯಣ ಹೇಳಿದರು.


ಆಧಾರ:ವಿಜಯವಾಣಿ, ದಿನಾಂಕ: 19.07.2020


131


24. ಬೆಡ್‌ ಕೊಡದಿದ್ದರೆ ಬಂಧನ


ಕೋವಿಡ್‌ ರೋಗಿಗಳ ಚಿಕಿತ್ಲೆಗೆ ಸಹಕರಿಸದ ಖಾಸಗಿ ಆಸತ್ರೆ ಮುಖ್ಯಸ್ಥರ ವಿರುದ್ಧ ಎಫ್‌ಐಆರ್‌
ದಾಖಲಿಸಿ ಬಂಧನಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಸಿಎಂ ಯಡಿಯೂರಪ್ಪ ಖಡಕ್‌ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆಗಿನ ಸಭೆ ಸಂದರ್ಭ
ಮುಖ್ಯಮಂತ್ರಿಯವರು ಈ ಎಚ್ಚರಿಕೆ ನೀಡಿದ್ದಾರೆ. ಕೋವಿಡ್‌ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯದೇ
ಆಸ್ಪತ್ರೆಗಳಿಗೆ ಅಲೆಯುತ್ತಾ ಪ್ರಾಣ ಬಿಡುವ ದಾರುಣ ಘಟನೆಗಳು ಬೆಂಗಳೂರಿನಲ್ಲಿ ನಡೆಯುತ್ತಿರುವುದನ್ನು ಸಭೆಯ
ಗಮನಕ್ಕೆ ತಂದ ಅವರು ಖಾಸಗಿ ಆಸ್ಪತ್ರೆ ಹಾಗೂ ವೈದ್ಯ ಶಿಕಣ ಸಂಸ್ಥೆಗಳಿಗೆ ಈ ಬಗೆ ಅಂತಿಮ ಎಚರಿಕೆ

[0 [@) [a ಬ

ನೀಡಿದ್ದಾರೆ.


ಅಪೋಲೊ ಹಾಗೂ ವಿಕ್ರಂ ಆಸ್ಪತ್ರೆಗೆ ನೀಡಿದ್ದ ನೋಟಿಸ್‌ ವಿಚಾರ ಏನಾಯ್ತು ಎಂದು ಸಭೆಯ
ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ಪರ್‌ ಅವರನ್ನು
ಮುಖ್ಯಮಂತ್ರಿಯವರು ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ಕೇಳಿದರು.


ನೋಡಲ್‌ ಅಧಿಕಾರಿ ನೇಮಕ:-ಖಾಸಗಿ ಆಸ್ಪತ್ರೆ ಹಾಗೂ ವೈದ್ಯ ಕಾಲೇಜುಗಳಲ್ಲಿ ಲಭ್ಯವಿರುವ ಹಾಸಿಗೆ ಹಾಗೂ
ವೆಂಟಿಲೇಟರ್‌ಗಳ ಮೇಲೆ ನಿಗಾ ಇಡುವುದಕ್ಕೆ ಕೆಎಎಸ್‌ ದರ್ಜೆ ಅಧಿಕಾರಿಗಳನ್ನು ನೇಮಕ ಮಾಡುವುದಕ್ಕೆ
ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಹಿರಿಯ ವೈದ್ಯಾಧಿಕಾರಿಗಳನ್ನು ಒಳಗೊಂಡ 16 ತಂಡವನ್ನು
ರಜೆಸಲಾಗಿದೆ.


ಆಧಾರ:ವಿಜಯಕರ್ನಾಟಕ, ದಿನಾ೦ಕ:19.07.2020
25. ಸೇತುಬಂಧ ಕಾರ್ಯಕ್ರಮಕ್ಕೆ ರೂ.1.60 ಕೋಟಿ ಬಿಡುಗಡೆ


ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ 8, 9 ಮತ್ತು 10ನೇ ತರಗತಿಗಳಿಗೆ
ದೂರದರ್ಶನ ಮೂಲಕ ಬೋಧನೆ ಮಾಡುವ ಸೇತುಬಂಧ ಕಾರ್ಯಕ್ರಮದ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ರೂ.1.60
ಕೋಟಿ ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮವನ್ನು ಹೆಚ್ಚು ಮಕ್ಕಳು ಪ್ರಯೋಜನ ಪಡೆದುಕೊಳ್ಳಲು ವ್ಯಾಪಕ
ಪ್ರಚಾರ ಮಾಡಬೇಕು. ಟಿವಿ ಇಲ್ಲದಿರುವ ಮನೆಯ ಮಗುವನ್ನು ಟಿವಿ ಇರುವ ಮನೆಗೆ ಸಂಯೋಜಿಸಬೇಕು.
ಇದಕ್ಕಾಗಿ 20 ಮಕ್ಕಳಿಗೆ ಒಬ್ಬರು ಶಿಕ್ಷಕರಂತೆ ಸಂಯೋಜಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸುವಂತೆ
ಮಾರ್ಗಸೂಚಿ ಬಿಡುಗಡೆ ಮಾಡಿದೆ. ಒಂದು ತಿಂಗಳ ಪಾಠ ಪ್ರಸಾರದ ನಂತರ ಮಕ್ಕಳಿಗೆ ಕಿರು ಪರೀಕ್ಷೆ ನಡೆಸಲು
ಅಗತ್ಯ ಕ್ರಮವಹಿಸಬೇಕು. ನೀಡಲಾಗಿರುವ ಅನುದಾನದ ಮಿತಿಯೊಳಗೆ ಹಾಗೂ ಯಾವುದೇ ಕಾರಣಕ್ಕೂ
ಅನುದಾನ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಾದ ಉಪಕರಣಗಳನ್ನು
ಖರೀದಿ ಮಾಡುವ ವೇಳೆ ನಿಯಮಗಳನ್ನು ಪಾಲಿಸಬೇಕು. ಪ್ರತಿ ತಿಂಗಳ ವರದಿಯನ್ನು ಡಿಎಸ್‌ಇಆರ್‌ಟಿ
ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸಬೇಕು ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ
ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.


ಆಧಾರ:ಉದಯವಾಣಿ, ದಿನಾಂಕ:19.07.2020
26. 308 ಬಿಡಿಎ ನಿವೇಶನಗಳ ಹರಾಜು ಇಂದಿನಿಂದ


ಕೊರೋನಾ ಸನ್ನಿವೇಶದಲ್ಲಿ ರಾಜ್ಯದಲ್ಲಿ ಉಂಟಾಗಿರುವ ವಿತ್ತೀ ಕೊರತೆ ನೀಗಿಸಲು ಬಿಡಿಎ ತನ್ನ ಬೆಲೆ
ಬಾಳುವ ನಿವೇಶನಗಳನ್ನು ಇ-ಹರಾಜು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹರಾಜು ಪಕ್ರಿಯೆ
ಆರಂಭವಾಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹರಾಜಿನಲ್ಲಿ
ಭಾಗವಹಿಸುವವರು ರೂ.4 ಲಕ್ಷಗಳ (ಇಎಂಡಿ) ಠೇವಣಿ ಇಟ್ಟು ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ
ಮಾಡಿಸಿಕೊಂಡವರು 308 ನಿವೇಶನಗಳಿಗೂ ಬಿಡ್‌ ಮಾಡಬಹುದಾಗಿದೆ.


ಒಟ್ಟು 5 ಹಂತದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದಲ್ಲಿ 1 ರಿಂದ 75 ಸಂಖ್ಯೆವರೆಗಿನ
ನಿವೇಶನಗಳ ಹರಾಜು ಆಗಸ್ಟ್‌ 6 ರಂದು ಆರಂಭವಾಗಲಿದೆ. 2ನೇ ಹಂತ 76-127ನೇ ಸಂಖ್ಯೆಯವರೆಗೆ


132


ಇ-ಹರಾಜು ನಡೆಯಲಿದೆ. 3ನೇ ಹಂತ 128 ರಿಂದ 191, 4ನೇ ಮತ್ತು 5 ನೇ ಹಂತದಲ್ಲಿ ಹರಾಜು ಪ್ರಕ್ರಿಯೆ
ಮುಗಿಯಲಿದೆ ಎಂದು ಬಿಡಿಎ ತಿಳಿಸಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾ೦ಕ:20.07.2020
27. ಗ್ರಾಮ ಪಂಚಾಯಿತಿ ನೈರ್ಮಲ್ಯ ಯೋಜನೆ ರಾಜ್ಯಕ್ಕೆ ರೂ.804 ಕೋಟಿ ಅನುದಾನ


ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈರ್ಮಲ್ಯ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ರೂ.804
ಕೋಟಿ ಅನುದಾನ ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಶಿಫಾರಸ್ತು ಆಧರಿಸಿ 2020-21ರ
ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಈ ಅನುದಾನವನ್ನು ನೀಡಲಾಗಿದೆ.


ಪಂಚಾಯತ್‌ ರಾಜ್‌ ಮತ್ತು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಹಾಗೂ
ಜಲಶಕ್ತಿ ಸಚಿವಾಲಯದ ಶಿಫಾರಸ್ಸಿನ ಮೇರೆಗೆ 28 ರಾಜ್ಯಗಳ 2.63 ಲಕ್ಷ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿನ
ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು ರೂ.15.187 ಕೋಟಿ ಬಿಡುಗಡೆ ಮಾಡಲಾಗಿದೆ. ಆಯಾ ರಾಜ್ಯ
ಸರ್ಕಾರಗಳು ಈ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ಹತ್ತು ಕೆಲಸದ ದಿನಗಳೊಳಗೆ ಬಿಡುಗಡೆ ಮಾಡಬೇಕು
ಎಂದು ಕೇಂದ್ರ ಸರ್ಕಾರ ಸೂಚಿಸಿದೆ.


ಈ ಹಣವನ್ನು ಬಯಲು ಮುಕ್ತ ಶೌಚಾಲಯ, ಕುಡಿಯುವ ನೀರು ಸರಬರಾಜು, ಮಳೆ ನೀರು ಸಂಗಹ
ಮತ್ತು ನೀರಿನ ಮರುಬಳಕೆ ಯೋಜನೆಗೆ ಬಳಸಿಕೊಳ್ಳಬೇಕು. ಗಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಗಳು
ಈಗಾಗಲೇ ಪೂರ್ಣಗೊಂಡಿದ್ದರೆ, ಈ ಹಣವನ್ನು ಇತರ ಅಭಿವೃದ್ದಿ ಕಾರ್ಯಗಳಿಗೆ ಬಳಸುವಂತೆ ಪಂಚಾಯತ್‌
ರಾಜ್‌ ಸಚಿವಾಲಯ ತಿಳಿಸಿದೆ.


ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ 2020-21ರ ಅವಧಿಯಲ್ಲಿ ಒಟ್ಟು ರೂ.60,750 ಕೋಟಿ
ಅನುದಾನವನ್ನು ಬಿಡುಗಡೆ ಮಾಡುವಂತೆ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ
ಶಿಫಾರಸ್ಸು ಮಾಡಿದೆ. ಇದನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು, ಇಷ್ಟು ದೊಡ್ಡ ಮೊತ್ತದ ಅನುದಾನವನ್ನು
ಒಂದು ವರ್ಷದಲ್ಲಿ ಹಂಚಿಕೆ ಮಾಡಿರುವುದು ಇದೇ ಮೊದಲು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಆಧಾರ:ಪ್ರಜಾವಾಣಿ, ದಿನಾಂಕ:20.07.2020
28. ಸಂಶಯಾಸ್ಪದ ಕಾಮಗಾರಿಗಳ ಪರಿಶೀಲನೆಗೆ ನಿರ್ಧಾರ; ಸಮಗ್ರ ವರದಿ ನೀಡುವ ಹೊಣೆ


ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಳ್ಳಲಿರುವ ರೂ.147.45 ಕೋಟಿ ವೆಚ್ಚದ ಐದು ಕಾಮಗಾರಿಗಳ ಮೇಲೆ
ನಿಗಾ ಇಡಲು ನಗರಾಭಿವೃದ್ದಿ ಇಲಾಖೆ ಮುಂದಾಗಿದೆ. ಈ ಕಾಮಗಾರಿಗಳ ಪರಿಶೀಲನೆ ನಡೆಸಿ ಸಮಗ್ರ ವರದಿ
ನೀಡುವ ಹೊಣೆಯನ್ನು "ಸ್ಪುಪ್‌' ಕನ್ನಲ್ಲೆನ್ನಿಗೆ ವಹಿಸಿದೆ.

"ಪಾಲಿಕೆಯ ಕಾಮಗಾರಿಗಳ ಮೊತ್ತವನ್ನು ಏಕಾಏಕಿ ಹಿಗ್ಗಿಸಲಾಗುತ್ತಿದೆ. ಅನೇಕ ಕಾಮಗಾರಿಗಳನ್ನು
ಪೂರ್ಣಗೊಳಿಸದೆಯೇ ಬಿಲ್‌ ಪಾವತಿಸಲಾಗುತ್ತಿದೆ. ಕಳಪೆ ಮಟ್ಟದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ”.
ಎಂಬತ್ಕಾದಿ ದೂರುಗಳ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಈ ಕ್ರಮ ಕೈಗೊಂಡಿದೆ. ಪಾಲಿಕೆ ಆಯುಕ್ತರ
ತಾಂತ್ರಿಕ ಜಾಗೃತಿ ಕೋಶದ (ಟಿವಿಸಿಸಿ) ಮುಖ್ಯ ಇಂಜಿನೀಯರ್‌ ಎ.ಬಿ.ದೊಡ್ಡಯ್ಯ ಅವರನ್ನು
ಸಮನ್ಸಯಕಾರರನ್ನಾಗಿ ನೇಮಿಸಲಾಗಿದೆ. ಅವರು ಯೋಜನೆಗಳ ಅಂದಾಜು ಪಟ್ಟಿಗಳು ಹಾಗೂ ಇತರೆ ಅಗತ್ಯ
ವಿವರಗಳನ್ನು ಬಿಬಿಎಂಪಿಯಿಂದ ಪಡೆದು "ಸ್ಪುಪ್‌' ಕನ್ನಲ್ಲೆನಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ.


ಈ ಸಂಸ್ಥೆಯು ಕಾಮಗಾರಿಗಳ ಅಂದಾಜು ಪಟ್ಟಿಯ ಹಾಗೂ ಸ್ಥಳ ಪರಿಶೀಲನೆ ನಡೆಸಬೇಕು. ಅಂದಾಜು
ಪಟ್ಟಿಯಲ್ಲಿರುವ ಎಲ್ಲ ವಿವರಣೆಗಳು ಯೋಜನೆಗಳ ಅನುಷ್ಠಾನದ ವೇಳ ಅನಗತ್ಯ ಅಂಶಗಳನ್ನು ಸೇರಿಸಿ
ಮೊತ್ತವನ್ನು ಹೆಚ್ಚಿಸಲಾಗುತ್ತಿದೆಯೇ, ಅನಗತ್ಯ ಅಂಶಗಳನ್ನು ಮೂಲ ಅಂದಾಜಿನಲ್ಲಿ ಸೇರಿಸಿ, ಬಳಿಕ ನಾಮಕಾವಸ್ಥೆ
ಕೆಲಸಗಳಿಗೆ ಅನುದಾನ ವರ್ಗಾಯಿಸುವ ಸಾಧ್ಯತೆ ಇದೆಯೇ ಸರ್ವೇ ಹಾಗೂ ಇತರ ಪರೀಕ್ಷೆಗಳನ್ನು ನಡೆಸಿದ್ದ
ಬಳಿಕವಷ್ಟೇ ಯೋಜನೆಯ ವಿನ್ಯಾಸ ರೂಪಿಸಿ ವಿಸ್ತತಾ ಯೋಜನಾ ವರದಿ (ಡಿಪಿಆರ್‌) ತಯಾರಿಸಲಾಗಿದೆಯೇ
ಎಂಬುದನ್ನು ಪರಿಶೀಲನೆ ನಡೆಸಬೇಕು.


133


ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವೈಟ್‌ ಟ್ಯಾಪಿಂಗ್‌ ಮತ್ತಿತರ ಕಾಮಗಾರಿಗಳ ಪರಿಶೀಲಿಸಿ ವರದಿ
ಸಲ್ಲಿಸಲು ಅವಕಾಶ ಕೊಡಬೇಕು ಎಂದು ಸ್ಪುಪ್‌ ಕನ್ನಲ್ಲೆನಿಯು ಪಾಲಿಕೆ ಆಯುಕ್ತರಿಗೆ ಈ ವರ್ಷದ ಫೆಬ್ರವರಿಯಲ್ಲಿ
ಪ್ರಸ್ತಾವ ಸಲ್ಲಿಸಿತ್ತು ಆಯುಕ್ತರು ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದರು. "ವೈಟ್‌ ಟ್ಯಾಪಿಂಗ್‌
ಕಾಮಗಾರಿಗಳ ಪರಿಶೀಲನೆಗೆ ಈ ಸಂಸ್ಥೆಯ ನೆರವು ಪಡೆಯಬಹುದು. ಇದಕ್ಕೆ ಕೆಟಿಪಿಪಿ ಕಾಯ್ದೆಯಿಂದ
ವಿನಾಯಿತಿ ನೀಡಬಹುದು” ಎಂದು ಹಣಕಾಸು ಇಲಾಖೆಯು ನಗರಾಭಿವೃದ್ದಿ ಇಲಾಖೆಗೆ ಮಾರ್ಚ್‌ ತಿಂಗಳಲ್ಲಿ
ತಿಳಿಸಿತ್ತು.

"ಮೊದಲ ಹಂತದಲ್ಲಿ ಕೆಲವು ಸಂಶಯಾಸ್ಪದ ಕಾಮಗಾರಿಗಳ ಅಂದಾಜು ಪರಿಶೀಲನೆಗೆ ಆದೇಶಿಸಲಾಗಿದೆ.
ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ವಾರ್ಡ್‌ ಕಾಮಗಾರಿಗಳು, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು
ಸೇರ್ಪಡೆಗೊಳಿಸಲಾಗುವುದು' ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.


ಯಾವ ಕಾಮಗಾರಿಗಳ ಪರಿಶೀಲನೆ


ಕಾಮಗಾರಿ ಯೋಜನಾ ವೆಚ್ಚ
(ರೂ.ಕೋಟಿಗಳಲ್ಲಿ)


ಯಶವಂತಪುರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಸಂಖ್ಯೆ 40 ಹಾಗೂ 3ನ
72ರಲ್ಲಿ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ
ಸಲುವಾಗಿ ಅಗೆದಿರುವ ರಸ್ತೆಗಳ ಸಮಗ್ರ ಅಭಿವೃದ್ದಿ


ಕೆ.ಆರ್‌.ಪುರ ಕ್ಷೇತ್ರದಲ್ಲಿನ ರಾಜಕಾಲುವೆಗಳ ಅಭಿವೃದ್ಧಿ ಹಾಗೂ 35
ಪುನರ್‌ವಿನ್ಯಾಸ
ಹೊರವರ್ತುಲ ರಸ್ನೆಯ ಹೊಸೆಕೆರೆಹಳ್ಳಿ ಜಂಕ್ಷನ್‌ ಬಳಿ ಗೇಡ್‌ 30


ಸಪರೇಟರ್‌ ನಿರ್ಮಾಣ


ಭದಪ್ರ ಲೇಔಟ್‌, ಲೊಟ್ಟೆಗೊಲ್ಲಹಳ್ಳಿ ದೇವಿನಗರ ಬಸ್‌ ನಿಲ್ದಾಣ, 27.45
ಲಗ್ಗೆರೆ ಸೇತುವೆ ಬಸ್‌ ನಿಲ್ದಾಣ, ಸುಮನಹಳ್ಳಿ ಜಂಕ್ಷನ್‌,
ಜಾಲಹಳ್ಳಿ ಕ್ರಾಸ್‌, ಮಾಗಡಿ ರಸ್ತೆ ಹೌಸಿಂಗ್‌ ಬೋರ್ಡ್‌ ಬಳಿ,


ಹರಿಶ್ಚಂದ್ರ ಘಾಟ್‌ ಬಳಿ ಸ್ಕೈ ವಾಕ್‌ಗಳ ನಿರ್ಮಾಣ


ಐಟಿಪಿಎಲ್‌ಗೆ ಸಂಪರ್ಕ ಕಲ್ಲಿಸುವ 14 ಪರ್ಯಾಯ ರಸ್ಟೆಗಳ 20
ಸಮಗ ಅಭಿವೃದ್ಧಿ


ಆಧಾರ:ಪ್ರಜಾವಾಣಿ, ದಿನಾಂಕ:20.07.2020
29. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಅರ್ಜಿಗೆ ಪಿಎಂ ಸನಿಧಿ ಆ್ಯಪ್‌


ಬೀದಿಬದಿ ವ್ಯಾಪಾರಿಗಳಿಗೆ ಸಾಲ ಒದಗಿಸುವ ಕೇಂದ್ರದ ಆತ್ಮನಿರ್ಭರ ನಿಧಿ ಯೊಜನೆಯಡಿ ಅರ್ಜಿ
ಸಲ್ಲಿಸಲು "ಪಿಎಂ ಸ್ಥನಿಧಿ' ಎನ್ನುವ ಮೊಬೈಲ್‌ ಆ್ಯಪ್‌ ಬಿಡುಗಡೆಯಾಗಿದೆ. ಈಗಾಗಲೇ 1,54,000 ಅರ್ಜಿದಾರರ
ಪೈಕಿ 48 ಸಾವಿರ ಮಂದಿಗೆ ಸಾಲ ಮಂಜೂರಾಗಿದೆ. ಶೇ.7ರ ಬಡ್ಡಿದರದಲ್ಲಿ ಗರಿಷ್ಠ ರೂ.10 ಸಾವಿರ ಸಾಲ
ನಿಗದಿತ ಬ್ಯಾಂಕುಗಳ ಮೂಲಕ ಸಿಗಲಿದ್ದು, 2020ರ ಮಾರ್ಚ್‌ 24ರೊಳಗೆ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ
ನೋಂದಾಯಿತ ಬೀದಿ ವ್ಯಾಪಾರಸ್ಥರಿಗೆ ಸಾಲ ನೆರವು ಸೌಲಭ್ಯ ಸಿಗಲಿದೆ.


50 ಲಕ್ಷ ಮಂದಿಗೆ ಸಾಲ ಒದಗಿಸಲು ರೂ.5 ಸಾವಿರ ಕೋಟಿ ಬಜೆಟ್‌ ನಿಗದಿಯಾಗಿದ್ದು, ಪ್ರತಿ ತಿಂಗಳ
ಕಂತನ್ನು ಒಂದು ವರ್ಷದೊಳಗೆ ಪಾವತಿಸಬೇಕು. 2022ರ ಮಾ.31ರ ತನಕ ಯೋಜನೆ ಅಸ್ತಿತ್ವದಲ್ಲಿ ಇರಲಿದ್ದು
ನಿಗದಿತ ಅವಧಿಯೊಳಗೆ ಸಾಲ ಚುಕ್ತಾ ಮಾಡಿದರೆ ಪಾವತಿಸಿದ ಶೇ.7ರ ಬಡ್ಡಿ ಸಹಾಯಧನದ ರೂಪದಲ್ಲಿ
ಖಾತೆಗೆ ಜಮೆಯಾಗಲಿದೆ. ಕ್ಲುಪ್ಪವಾಗಿ ಸಾಲ ತೀರಿಸಿ ಮತ್ತೆ ರೂ.20 ಸಾವಿರ ಸಾಲ ಪಡೆಯುವ ಅವಕಾಶವೂ
ಇದೆ. ಸಾಲದ ಕಂಠಿನ ಡಿಜಿಟಲ್‌ ಪಾವತಿಗೆ ಪ್ರತಿ ತಿಂಗಳು ರೂ. 100 ಪ್ರೋತ್ಸಾಹಧನ ಖಾತೆಗೆ


134


ವರ್ಗಾವಣೆಯಾಗಲಿದೆ. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ನೋಂದಾಯಿತ ಬೀದಿಬದಿ ವ್ಯಾಪಾರಿಗಳು ತಮ್ಮ
ಮೊಬೈಲ್‌ ಸಂಖ್ಯೆಯನ್ನು ಆಧಾರ್‌ ಲಿಂಕ್‌ ಮಾಡಿರಬೇಕು. ಸೀಮಿತ ಅವಧಿಯೊಳಗೆ ಯಾವುದೇ ಗ್ಯಾರಂಟಿ,
ಜಾಮೀನು, ಅಡಮಾನದ ಅಗತ್ಯವಿಲ್ಲದೇ ಸಾಲದ ಮೊತ್ತವನ್ನು ಸರಳ ದಾಖಲೆ ಮೂಲಕ ಅಪ್‌ಲೋಡ್‌
ಮಾಡಬಹುದು.


ಆಧಾರ:ವಿಜಯಕರ್ನಾಟಕ, ದಿನಾ೦ಕ:21.07.2020
30. ವೆಂಟಿಲೇಟರ್‌ ಖರೀದಿ ಕುರಿತ ಕೈ ನಾಯಕರ ಆರೋಪ ಅಲ್ಲಗಳೆದ ಸರ್ಕಾರ


ಸೋಂಕಿನ ನಿರ್ವಹಣೆ, ಚಿಕಿತ್ಸೆಗೆ ಸಾಮಗ್ರಿ ಹಾಗೂ ವೆಂಟಿಲೇಟರ್‌ಗಳ ಖರೀದಿಯಲ್ಲಿ ದೊಡ್ಡ ಹಗರಣ
ನಡೆದಿದೆ ಎಂಬ ಪ್ರತಿಪಕ್ಷ ಕಾಂಗೆಸ್‌ ನಾಯಕರ ಆಪಾದನೆಯನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.


ಸೋಂಕು ಆರಂಭವಾದ ಮಾರ್ಚ್‌ನಿಂದ ಸಲಕರಣೆಗಳ ಕೊರತೆ ಇದ್ದ ಕಾರಣ ಬೆಲೆ ದುಬಾರಿಯಾಗಿತ್ತು.
ಈಗ ಬೆಲೆ ಕಡಿಮೆಯಾಗಿದೆ. ಪ್ರತಿಪಕ್ಷ ನಾಯಕರು ಈ ತಪ್ಪು ಲೆಕ್ಕಚಾರ ಹಾಕಿ ಹಗರಣ ನಡೆದಿದೆ ಎಂದು
ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಸರ್ಕಾರ ಸಮಜಾಯಿಸಿ ನೀಡಿದೆ.


ಡಿಸಿಎಂ ಡಾ:ಅಶ್ನತ್ನನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು ಅವರು ವಿಕಾಸಸೌಧದಲ್ಲಿ ಜಂಟಿ
ಪತ್ರಿಕಾಗೋಷ್ಟಿ ನಡೆಸಿದರು. "ಪ್ರತಿಪಕ್ಷ ನಾಯಕರ ಆರೋಪದಲ್ಲಿ ಹುರುಳಿಲ್ಲ ತನಿಖೆ ನಡೆಸುವ ಪ್ರಶ್ನೆಯೇ ಇಲ್ಲ.
ಪ್ರತಿಯೊಂದಕ್ಕೂ ಸರ್ಕಾರ ಸದನದಲ್ಲಿ ಉತ್ತರ ಕೊಡಲು ಸಿದ್ದವಿದೆ. ಎಲ್ಲದಕ್ಕೂ ಲೆಕ್ಕ ಇದೆ' ಎಂದು ಸಮರ್ಥನೆ
ಮಾಡಿಕೊಂಡರು.


“ಆರಂಭದಲ್ಲಿ ವೆಂಟಿಲೇಟರ್‌ಗಳಿಗೆ ಕೊರತೆ ಇತ್ತು ಒಂದು ಕಂಪನಿ ಮಾತ್ರ ತಯಾರಿಸುತ್ತಿತ್ತು ಮೊದಲಿಗೆ
ಒಟ್ಟು 130 ವೆಂಟಿಲೇಟರ್‌ಗಳ ಖರೀದಿಗೆ ಆರ್ಡರ್‌ ಮಾಡಲಾಗಿತ್ತು. ಈ ಪೈಕಿ 80 ಪೂರೈಕೆಯಾಗಿದೆ.
ತಮಿಳುನಾಡಿನಲ್ಲಿ 4 ಲಕ್ಷಕ್ಕೆ ಖರೀದಿಯಾದ ವೆಂಟಿಲೇಟರ್‌ಗೆ ಇಲ್ಲಿ 18 ಲಕ್ಷ ಪಾವತಿಸಲಾಗಿದೆ ಎಂಬ ಆರೋಪ
ಸರಿಯಲ್ಲ. ತಮಿಳುನಾಡಿನಲ್ಲಿ ಖರೀದಿ ಆಗಿರುವುದು ಮೊಬೈಲ್‌ ವೆಂಟಿಲೇಟರ್‌ ಒಂದು ಕಡೆಯಿಂದ ಇನ್ನೊಂದು
ಕಡೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್‌ನಲ್ಲಿ ಬಳಕೆಯಾಗುವ ವೆಂಟಿಲೇಟರ್‌ ಅದು. ಇದನ್ನು ಅರಿಯದೆ
ಪ್ರತಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ” ಎಂದು ಡಿಸಿಎಂ ಅಶ್ವತ್ನನಾರಾಯಣ ಹೇಳಿದರು.


ಹಿಟ್‌ ್ಯಂಡ್‌ ರನ್‌ ಬೇಡ: “ಹಿಂದಿನ ಸರ್ಕಾರದಲ್ಲಿ ಶಿವಾನಂದ ಪಾಟೀಲ್‌ ಆರೋಗ್ಯ ಸಚಿವರಾಗಿದ್ದಾಗ
ವೆಂಟಿಲೇಟರ್‌ಗಳನ್ನು ತಲಾ 15.122 ಲಕ್ಷ ರೂ.ಗೆ ಖರೀದಿಸಲಾಗಿದೆ. ಆಗ ಅಂತಹ ಪರಿಸ್ಥಿತಿ ಏನಿತ್ತು. ತಪ್ಪು
ಸಂದೇಶ ಹೋಗಬಾರದು ಎಂದು ವಿವರ ಕೊಡುತ್ತಿದ್ದೇವೆ. ಹಿಟ್‌ ಆ್ಯಂಡ್‌ ರನ್‌ ಬೇಡ. ನಾವು ಇಲ್ಲೇ
ಕೂತಿದ್ದೇವೆ”. ಎಂದು ಕಾಂಗೆಸ್‌ ನಾಯಕರಿಗೆ ತಿರುಗೇಟು ನೀಡಿದರು.


ಡಿಸಿಎಂ ಸೂಚನೆಯಂತೆ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌,
“ಮಾರ್ಚ್‌ನಲ್ಲಿ ಖರೀದಿ ಪ್ರಕ್ರಿಯೆ ನಡೆಯಿತು. ಒಟ್ಟು ರೂ. 290 ಕೋಟಿ ಮೌಲ್ಯದ ಪರಿಕರ ಖರೀದಿಸಲಾಯಿತು.
ಆ ವೇಳೆ ಉತ್ಪಾದನೆ ಕಡಿಮೆ ಇದ್ದು, ಬೆಲೆ ಜಾಸ್ತಿ ಇತ್ತು ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ ಹಾಗೂ ಸ್ಯಾನಿಟೈಸರ್‌
ಕೊರತೆ ಇತ್ತು ದರವೂ ದುಬಾರಿ ಇತ್ತು” ಎಂದು ಹೇಳಿದರು.


ಮಾರ್ಚ್‌ನಲ್ಲಿ ಆರೋಗ್ಯ ಇಲಾಖೆಗೆ ಉತ್ತಮ ಗುಣಮಟ್ಟದ 28 ವೆಂಟಿಲೇಟರ್‌ಗಳನ್ನು ಒಟ್ಟು ರೂ.3.33
ಕೋಟಿ ಬೆಲೆಗೆ ಖರೀದಿಸಲಾಗಿದೆ. ಗುಣಮಟ್ಟ ಉತ್ತಮವಾಗಿದ್ದ ಕಾರಣ ಹೆಚ್ಚು ಬೆಲೆ ಕೊಟ್ಬದ್ದೇವೆ. ಬಳಿಕ
ವೆಂಟಿಲೇಟರ್‌ಗಳನ್ನು ತಲಾ ರೂ.5.6 ಲಕ್ಷಗೆ ಖರೀದಿಸಿದ್ದೇವೆ. ಕೇಂದ್ರ ಸರ್ಕಾರ 600 ವೆಂಟಿಲೇಟರ್‌ಗಳನ್ನು
ಪೂರೈಸಿದೆ ಎಂದರು. ಸಾಮಾನ್ಯ ತಿಳಿವಳಿಕೆ ಇಲ್ಲವೇ. ಬೇಡಿಕೆ ಹೆಚ್ಚಿ ಪೂರೈಕೆದಾರರು ಕಡಿಮೆ ಇದ್ದಾಗ ಬೆಲೆ
ಹೆಚ್ಚಿರುತ್ತದೆ. ಉತ್ಪಾದನೆ ಹೆಚ್ಚಿದಾಗ ಬೆಲೆ ಕಡಿಮೆಯಾಗುತ್ತದೆ. ಇದು ಪ್ರಶಿಪಕ್ಷ ನಾಯಕರಿಗೆ ಗೊತ್ತಿಲ್ಲವೇ
ರಾಜಕಾರಣವೇ ಬೇಡ ಎಂದವರು ಈಗ ಸಲ್ಲದ ರಾಜಕಾರಣ ಮಾಡುತ್ತಿದ್ದಾರೆ. ಕುಣಿಯಲು ಬರದವ ನೆಲ
ಡೊಂಕು ಅನ್ನುವ ರೀತಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.


“ಏಪೀಲ ಕಿಟ್‌ಗೆ ಖರ್ಚು ಮಾಡಿರುವುದೇ ರೂ.79,35,16.,816ಗಳು ಸಿದ್ದರಾಮಯ್ಯ ಅವರು 150 ಕೋಟಿ
ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಐಸಿಯುಗಳಲ್ಲಿ ಬಳಕೆಯಾಗುವ ವೆಂಟಿಲೇಟರ್‌ಗೆ ತಲಾ


135


ರೂ. 18 ಲಕ್ಷ ವೆಚ್ಚ ತಗುಲಿದೆ. ವೆಂಟಿಲೇಟರ್‌ ಖರೀದಿಯಲ್ಲೇ 120 ಕೋಟಿ ರೂಪಾಯಿ ಅವ್ಯವಹಾರ ಆಗಿದೆ
ಎಂದಿರುವ ಅವರ ಆರೋಪದಲ್ಲಿ ಹುರುಳಿಲ್ಲ.” ಎಂದು ಸಮರ್ಥಿಸಿಕೊಂಡರು.


“ಎನ್‌-95 ಮಾಸ್ಟ್‌ ಖರೀದಿಗೆ ರೂ.11,51,58,226 ಖರ್ಚಾಗಿದೆ. ತಲಾ ರೂ.9.50 ಪೈಸೆ ಲೆಕ್ಕದಲ್ಲಿ
ರೂ.3 ಲಕ್ಷ ಸರ್ಜಿಕಲ್‌ ಗ್ಲೌಸ್‌ ಆರ್ಡರ್‌ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರದ ಆದೇಶದಂತೆ ಸ್ಯಾನಿಟೈಸರ್‌
ಖರೀದಿಯಾಗಿದೆ. 500 ಎಂ.ಎಲ್‌.ಬಾಟಲಿಯಂತೆ ಒಟ್ಟು 62.50 ಲಕ್ಷ ಮೌಲ್ಯದ ಸ್ಯಾನಿಟೈಸರ್‌ ಖರೀದಿಯಾಗಿದೆ.
ಇಲಾಖೆಯಲ್ಲಿ 290.60 ಕೋಟಿ ಮೊತ್ತದ ಪರಿಕರಗಳನ್ನು ಖರೀದಿಸಲಾಗಿದೆ” ಎಂದು ಶ್ರೀರಾಮುಲು ಲೆಕ್ಕ
ನೀಡಿದರು.


ಆಧಾರ:ವಿಜಯಕರ್ನಾಟಕ, ದಿನಾ೦ಕ:21.07.2020
31. ಬೆಂಗಳೂರೇತರ ಜಿಲ್ಲೆಗಳಲ್ಲಿಯೇ ಮರಣ ದರ ಹೆಚ್ಚು


ಬೆಂಗಳೂರಲ್ಲಿ ಸೋಂಕು ಪ್ರಕರಣಗಳು ಹೆಚ್ಚು ಕಂಡು ಬಂದರೂ ಕೂಡ ಈಗಲೂ ಸೋಂಕಿತರ ಮರಣ
ದರ ಹೆಚ್ಚಿರುವುದು ಬೆಂಗಳೂರೇತರ ಜಿಲ್ಲೆಗಳಲ್ಲಿಯೇ. ಕೊರೋನಾ ಸೋಂಕು ಪ್ರಕರಣ ಮತ್ತು ಸೋಂಕಿತರ
ಸಾವಿನ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಆದರೆ ಕೊರೋನಾ ಸೋಂಕಿತರ ಮರಣ
ದರ ನೋಡಿದರೆ ಬೆಂಗಳೂರಿಗಿಂತಲೂ ರಾಜ್ಯದ 3 ಜಿಲ್ಲೆಗಳು ದುಪುಟ್ಟು ಮರಣದರ ಹೊಂದಿದ್ದು, 9 ಜಿಲ್ಲೆಗಳು
ಮುಂಚೂಣಿಯಲ್ಲಿವೆ.


ಕೊರೋನಾ ಸೋಂಕಿತರ ಮರಣ ದರ ಎಂದರೆ, ಸೋಂಕು ದೃಢಪಟ್ಟ ಪ್ರತಿ ನೂರು ಮಂದಿಯಲ್ಲಿ
ಎಷ್ಟು ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಎಂಬ ಪ್ರಮಾಣ ಪ್ರಸ್ತುತ ಕರ್ನಾಟಕದ ಮರಣ
ದರ ಶೇ.2.08ರಷ್ಟಿದೆ. ಅಂದರೆ ರಾಜ್ಯದಲ್ಲಿ 100 ಮಂದಿಗೆ ಸೋಂಕು ತಗುಲಿದ್ದರೆ ಇಬ್ಬರು ಸಾವಿಗೀಡಾಗುತ್ತಿದ್ದಾರೆ
ಎಂದರ್ಥ. ಬೆಂಗಳೂರಿನಲ್ಲಿ ಸೋಂಕು ಪ್ರಕರಣಗಳು ಹೆಚ್ಚಿದ್ದರೂ ಸೋಂಕಿತರ ಮರಣ ದರ ಶೇ.2.1ರಷ್ಟಿದೆ.
ಆದರೆ, ಬಾಗಲಕೋಟೆ ಶೇ.4.5, ಮೈಸೂರು ಶೇ.4.2, ಬೀದರ್‌ ಶೇ.43 ಮರಣ ದರ ಹೊಂದಿವೆ. ಈ ಪ್ರಕಾರ
ಬೆಂಗಳೂರಿನಲ್ಲಿ 100 ಸೋಂಕಿತರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೈಸೂರು, ಬೀದರ್‌ ಹಾಗೂ
ಬಾಗಲಕೋಟೆಯಲ್ಲಿ ತಲಾ 4 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿಗಿಂತಲೂ ಹೆಚ್ಚು ದಾವಣಗೆರೆ
ಶೇ.3.4, ತುಮಕೂರು ಶೇ.3.2, ಧಾರವಾಡ ಶೇ.3, ಚಿಕ್ಕಮಗಳೂರು ಶೇ.2.6, ಕೋಲಾರ ಶೇ.2.6, ಬೆಳಗಾವಿ
ಶೇ.2.4, ಹಾವೇರಿ ಶೇ.2.4, ಬಳ್ಳಾರಿ ಶೇ.23, ಗದಗ ಶೇ.22 ಸೋಂಕಿತರ ಮರಣ ದರ ಹೊಂದಿವೆ.
ಯಾದಗಿರಿ ಅತ್ಯಂತ ಕಡಿಮೆ ಶೇ. 0.06 ಮರಣ ದರ ಹೊಂದಿದೆ. ಇನ್ನು ಬೆಂಗಳೂರು ಗ್ರಾಮಾಂತರ, ಉಡುಪಿ,
ಉತ್ತರ ಕನ್ನಡ, ಚಾಮರಾಜನಗರ, ಮಂಡ್ಯ ಜಿಲ್ಲೆಗಳು ಶೇ.!ಕ್ಕಿಂತ ಕಡಿಮೆ ಮರಣ ದರ ಹೊಂದಿವೆ.


ಯಾದಗಿರಿ ರಾಜ್ಯಕ್ಕೆ ಮಾದರಿ: ಯಾದಗಿರಿಯಲ್ಲಿ 1596 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಒಬ್ಬರು ಮಾತ್ರ
ಮೃತಪಟ್ಟಿದ್ದಾರೆ. ಜಿಲ್ಲಾವಾರು ಅತ್ಯಂತ ಕಡಿಮೆ ಮರಣ ದರ ಶೇ.06 ಹೊಂದಿದೆ. ಅಲ್ಲದೆ ಗುಣಮುಖ
ದರದಲ್ಲೂ ಯಾದಗಿರಿ ಮುಂದಿದ್ದು ಸೋಲಂಕಿತರಾಗಿದ್ದವರ ಪೈಕಿ ಈಗಾಗಲೇ ಶೇ. 90ರಷ್ಟು ಮಂದಿ
ಗುಣಮುಖರಾಗಿದ್ದಾರೆ. ಅತ್ಯಂತ ಕಡಿಮೆ ದರ, ಅತೀ ಹೆಚ್ಚು ಗುಣಮುಖ ದರ ಹೊಂದುವ ಮೂಲಕ
ಕೊರೋನಾ ಸೋಂಕು ನಿರ್ವಹಣೆಯಲ್ಲಿ ಯಾದಗಿರಿ ಮಾದರಿಯಾಗಿದೆ.


ಚಿಕಿತ್ಸಾ ಸೌಕರ್ಯ, ಪರೀಕ್ಷೆ ಹೆಚ್ಚಿಸಿ: ಯಾವ ಪ್ರದೇಶದಲ್ಲಿ ಹೆಚ್ಚು ಪರೀಕ್ಷೆಗಳು ನಡೆಯುತ್ತವೆಯೋ ಆ ಪ್ರದೇಶದಲ್ಲಿ
ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ. ಅಂತೆಯೇ ಪ್ರಕರಣಗಳು ಹೆಚ್ಚಳವಾದಂತೆ ಸೋಂಕಿತರ ಸಾವು ಕೂಡ
ಅಂಕಿಯಲ್ಲಿ ಹೆಚ್ಚು ಕಾಣಿಸುತ್ತದೆ. ಮರಣ ದರ ಮೂಲಕ ಆ ಪ್ರದೇಶದ ಸೋಂಕಿನ ತೀವ್ರತೆ ಹಾಗೂ ಚಿಕಿತ್ಸಾ
ಸೌಕರ್ಯ, ಗುಣಮಟ್ಟ ಅಳೆಯಲಾಗುತ್ತದೆ. ಸದ್ಯ, ಬೆಂಗಳೂರಿನಲ್ಲಿ 2.5 ಲಕ್ಷ (ರಾಜ್ಯ ಶೇ.25ರಷ್ಟು) ಪರೀಕ್ಷೆ
ನಡೆದಿದ್ದು, ಸೋಂಕು ಪ್ರಕರಣಗಳು, ಸೋಂಕಿತರ ಸಾವು ಕೂಡ ಅಂಕಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಕೆಲ
ಜಿಲ್ಲೆಗಳಲ್ಲಿ ಸೋಂಕಿತರು ಕಡಿಮೆ ಇದ್ದರೂ, ಸಾವಿಗೀಡಾದ ಸೋಂಕಿತ ಸಂಖ್ಯೆ ಹೆಚ್ಚಿರುತ್ತದೆ. ಅಂತಹ ಪ್ರದೇಶದಲ್ಲಿ
ಚಿಕಿತ್ಸಾ ಸೌಕರ್ಯ, ಪರೀಕ್ಷಾ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಆರೋಗ್ಯ ವಲಯದ ತಜ್ಞರು
ಅಭಿಪ್ರಾಯಪಟ್ಟಿದ್ದಾರೆ.


136


ಕೊರೋನಾ ಕಾಂಡ
(ಜುಲೈ 20)
ಸ ಸೋಂಕಿತರು i ಸಾವು
೫ (ಜುಲೈ 20) (ಜುಲೈ 20)

ಬೆಂಗಳೂರು 33229(1452) 6956 698(31)
ಕಲಬುರಗಿ 2867(124) 1826 48(02)
ದಕ್ಷಿಣಕನ್ನಡ 3680(89) 1151 68(07)
ಧಾರವಾಡ 2243(200) 710 68(06)
ದಾವಣಗೆರೆ 880(73) 57] 30(10)

ಹಾವೇರಿ 494(36) 292 12(01)

ಮೈಸೂರು 1773(149) 625 75(05)
ಚಿಕ್ಕಬಳ್ಳಾಪುರ 900(60) 300 17(00)
ಉತ್ತರ ಕನ್ನಡ 1163(78) 483 10(00)
ಉಡುಪಿ 2321(98) 1617 10(01)

ಚಿತ್ರದುರ್ಗ 246(29) 112 03(02)
ತುಮಕೂರು 698(55) 248 23(01)

ಶಿವಮೊಗ್ಗ 852(19) 293 13(01)

ಬೆಳಗಾವಿ 1073(60) 404 26(00)
ಬಾಗಲಕೋಟೆ 743(54) 264 34(03)
ಬೀದರ್‌ 1403(26) 810 61(04)
ವಿಜಯಪುರ 1745(160) 1091 22(01)
ಮಂಡ್ಯ 910(41) 609 07(00)
ಗದಗ 616(31) 226 14(00)
ಬಳ್ಳಾರಿ 2662(234) 1324 62(02)
ಬೆಂ.ಗ್ರಾಮಾಂತರ 845(208) 46 07(00)
ಚಿಕ್ಕಮಗಳೂರು 336(43) 158 09(01)
ಯಾದಗಿರಿ 1596(43) 1436 01(02)
ಕೊಪ್ಪಳ 513(62) 284 11(02)

ಕೋಲಾರ 527(41) 184 14(00)
ಹಾಸನ 952(67) 567 27(01)
ರಾಯಚೂರು 999(3) 621 13(00)

ರಾಮನಗರ 508(56) 195 09(00)


137


ಕೊರೋನಾ ಕಾಂಡ
(ಜುಲೈ 20)
ಸ ಸೋಂಕಿತರು i ಸಾವು
ಮ (ಜುಲೈ 20) (ಜುಲೈ 20)
ಕೊಡಗು 280(8) 173 05(00)
ಚಾ.ನಗರ 330(49) 187 03(00)
ಹೊರರಾಜ್ಯ 36(0) 32 03(00)
ಒಟ್ಟು 67420(3648) 23795 1403(72)


ಆಧಾರ:ಉದಯವಾಣಿ, ದಿನಾ೦ಕ:21.07.2020
32. ಕೊರೋನಾ ನಿಯಂತ್ರಣಕ್ಕೆ ಕಾರ್ಯಪಡೆ


ರಾಜಧಾನಿಯಲ್ಲಿ ಕೊರೋನಾ ಸೋಂಕು ನಿಯಂತ್ರಣ ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡುವ
ಉದ್ದೇಶದಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸಲಹೆ ಪಡೆಯಲು ರಾಜ್ಯ ಕೋವಿಡ್‌ ಕಾರ್ಯಪಡೆ
ತಜ್ಞಧ ಸಮಿತಿ ಮಾದರಿಯಲ್ಲಿ "ಬಿಬಿಎಂಪಿ ಕೋವಿಡ್‌ ಕಾರ್ಯಪಡೆ” ರಚಿಸಲಾಗಿದೆ.


ಕಾರ್ಯಪಡೆಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅಧ್ಯಕ್ಷರಾಗಿರುತ್ತಾರೆ. ಇವರೊಂದಿಗೆ
ಸಹ ಅಧ್ಯಕ್ಷರಾಗಿ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್‌ ಹಾಗೂ ತಜ್ಞ ಗಿರಿಧರ್‌ ಬಾಬು
ಕಾರ್ಯನಿರ್ವಹಿಸಲಿದ್ದಾರೆ.


ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯ ಅಧಿಕಾರಿ ಡಾ: ವಿಜಯೇಂದ್ರ,
ಪಾಲಿಕೆ ಕ್ಲಿನಿಕಲ್‌ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ: ನಿರ್ಮಲಾ ಬುಗ್ಗಿ, ಸದಸ್ಯ ಕಾರ್ಯದರ್ಶಿಗಳಾಗಿ,
ಸದಸ್ಯರಾಗಿ ಡಾ: ರವಿ ಮೆಹ್ರಾ, ಡಾ:ಕೃಷ್ಣಮೂರ್ತಿ, ಡಾ:ವೆಂಕಟೇಶ್‌, ಡಾ:ಆಶೀಸ್‌ ಸತ್ತತಿ, ಡಾ:ಎನ್‌.ಟಿ.ನಾಗರಾಜ,
ರಮೇಶ್‌ಅರವಿಂದ್‌, ಡಾ:ರಂಗನಾಥ್‌, ಡಾ:ರಮೇಶ್‌ ಮಿಸ್ತಿ ಡಾ: ಜಿ.ಕೆ.ಸುರೇಶ್‌, ಡಾ:ಕಲಾವತಿ, ಡಾ:ಪ್ರದೀಪ್‌


ರಂಗಪ್ಪ ಒಳಗೊಂಡಿರುತ್ತಾರೆ.


ವಿಶೇಷ ಆಹ್ಹಾನಿತರಾಗಿ ಡಾ:ಎಂ.ಕೆ.ಸುದರ್ಶನ್‌, ಪ್ರೊ.ರವಿ, ಪ್ರೊ.ಗುರುರಾಜ್‌, ಡಾ:ಲೋಕೇಶ್‌ ಅಲಹರಿ,
ಯೂನಿಸೆಫ್‌ ಹಾಗೂ ರೋಟರಿ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆ ಸದಸ್ಯರು ಇರಲಿದ್ದಾರೆ.


[()
24 ಗಂಟೆಯಲ್ಲಿ ಪರೀಕ್ಷಾ ವರದಿ: ಕಾರ್ಯಪಡೆ ನಗರದಲ್ಲಿ ಕೊರೋನಾ ನಿಗಹಕ್ಕೆ ಕೈಗೊಳ್ಳಲಾಗುತ್ತಿರುವ ಹಾಗೂ
ಕೈಗೊಂಡಿರುವ ಕ್ರಮಗಳ ಕುರಿತಂತೆ ಎರಡು ದಿನಕ್ಕೊಮ್ಮೆ ಸಭೆ ನಡೆಸಿ ಚರ್ಚಿಸಲಿದೆ.


ನಗರದಲ್ಲಿ ಸೋಂಕು ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಮಾಡಿ ಚಿಕಿತ್ಸೆ ನೀಡುವುದು. ಸೋಂಕಿನ ಬಗ್ಗೆ
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸೋಂಕು ಪರೀಕ್ಷೆಗೆ ಒಳಪಡಿಸುವುದು. ಸೋಂಕು ಪರೀಕ್ಷೆ ಪ್ರಮಾಣ
ಹೆಚ್ಚಿಸುವುದರ ಜೊತೆಗೆ 24 ಗಂಟೆಯಲ್ಲಿ ಪರೀಕ್ಷಾ ವರದಿ ಲಭ್ಯವಾಗುವಂತೆ ಕ್ರಮಕೈಗೊಳ್ಳುವುದು. ನಗರದ ಎಲ್ಲ
ಪ್ರಾಥಮಿಕ ಆರೋಗ್ಯ ಕೇಂದದಲ್ಲಿ ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ, ಸೋಂಕಿತ ಸಂಪರ್ಕಿತರನ್ನು ತ್ವರಿತವಾಗಿ ಪತ್ತೆ
ಮಾಡಿ ಅವರ ಮೇಲೆ ನಿಗಾ ವಹಿಸುವುದು. ಅದಕ್ಕೆ ವಾರ್ಡ್‌ ಕೋವಿಡ್‌ ಸಮಿತಿ ಸದಸ್ಯರ ಬಳಕೆ
ಮಾಡಿಕೊಳ್ಳುವುದು. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ಸಹಯೋಗ ಪಡೆದು ಸಾರ್ವಜನಿಕರಲ್ಲಿ ಜಾಗೃತಿ
ಮೂಡಿಸುವುದರ ಕುರಿತು ಕಾರ್ಯಪಡೆ ಚರ್ಚಿಸುತ್ತದೆ.


ಆಧಾರ:ಕನ್ನಡಪುಭ, ದಿನಾಂಕ:21.07.2020


138
33. ಟಾಸ್ಕ್‌ ಘೋರ್ಸ್‌ ಸಭೆಯಲ್ಲಿ ಮಹತ್ವದ ನಿರ್ಣಯ- ಕ್ವಾರಂಟೈನ್‌ ನಿಯಮ ಬದಲು


ಕ್ಲಾರಂಟೈನ್‌ ನಿಯಮಗಳಲ್ಲಿ ಬದಲಾವಣೆ, ಜಿಲ್ಲಾ ಕೇಂದ್ರದ ಸಾರ್ವಜನಿಕ ಆಸ್ಪತ್ರೆಗಳು ಕೊರೋನಾ
ಆಸ್ಪತ್ರೆಗಳಾಗಿ ಮಾರ್ಪಾಡು, ತಪಾಸಣೆ ಪ್ರಮಾಣ ಹೆಚ್ಚಳ ಸೇರಿ ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಮ
ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.


ವಿಧಾನಸೌಧದಲ್ಲಿ ನಡೆದ ಟಾಸ್ಕಫೋರ್ಸ್‌ ಸಭೆಯಲ್ಲಿ ಬೆಂಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ
ಹೆಚ್ಚುತ್ತಿರುವ ಸೋಂಕು ನಿಯಂತ್ರಿಸಲು ವ್ಯಾಪಕ ಸಿದ್ದತೆಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು. ಜೊತೆಗೆ
ನಿರ್ವಹಣಾ ಕ್ರಮಗಳಿಗೆ ಅಗತ್ಯವಾದ ರೂ.500 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಯಿತು.
ಕ್ವಾರಂಟೈನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಕ್ಕಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ, ಚಾಲ್ತಿ
ನಿಯಮಗಳಲ್ಲಿ ಕೆಲ ಬದಲಾವಣೆಗಳಿಗೆ ನಿರ್ಧಾರ ಹಾಗೂ ಈ ಕುರಿತು ವಿಸ್ತೃತ ಆದೇಶ ಹೊರಡಿಸುವುದಕ್ಕೆ ಸಭೆ
ಸಮ್ಮತಿಸಿರುತ್ತದೆ.
ತಪಾಸಣೆ ಪ್ರಮಾಣ ಹೆಚ್ಚಳ: ಸೋಂಕು ತಡೆಗಟ್ಟಲು ಹಾಗೂ ಮರಣ ಪ್ರಮಾಣ ತಗ್ಗಿಸುವುದಕ್ಕೆ ಹೆಚ್ಚೆಚ್ಚು ತಪಾಸಣೆ
ಹಾಗೂ ತ್ವರಿತ ವರದಿ ಪಡೆಯುವುದು ಮುಖ್ಯವಾಗಿದ್ದು, ಆ್ಯಂಟಿಜೆನ್‌ (ಪ್ರತಿಜನಕ) ಟೆಸ್ಟ್‌ ತಕ್ಷಣದ ಪರಿಹಾರ
ಮಾರ್ಗವಾಗಿದೆ ಎಂದು ಸಭೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಕಿಟ್‌ ಬಳಸಿ 30 ನಿಮಿಷಗಳಲ್ಲಿ ವರದಿ ಪಡೆಯಲು ಸಾಧ್ಯವಿದೆ. ಈಗಿರುವ
1 ಲಕ್ಷ ಜೊತೆಗೆ ಮತ್ತೆ ಹೆಚ್ಚುವರಿ 4 ಲಕ್ಷ ಟೆಸ್ಟ್‌ ಕಿಚ್‌ ಖರೀದಿಸಿ, ಬೆಂಗಳೂರು ಮಾತ್ರವಲ್ಲದೆ, ಎಲ್ಲ ಜಿಲ್ಲೆಗಳಿಗೂ
ವಿತರಿಸಲು ನಿರ್ಧರಿಸಲಾಗಿದೆ.


ಸಮಿತಿ ವರದಿ ನಂತರ ಕ್ರಮ: ಸೋಂಕಿತರ ರೋಗ ನಿರೋಧಕ ಶಕ್ತಿ ವೃದ್ಧಿಗೆ ಕೆಲಕ್ರಮಗಳನ್ನು ಒಳಗೊಂಡ
ಪ್ರಸ್ತಾವನೆಯನ್ನು ಆಯುಷ್‌ ಇಲಾಖೆ ಸಲ್ಲಿಸಿದೆ. ಇದನ್ನು ಉನ್ನತಮಟ್ಟದ ಸಮಿತಿಗೆ ಒಪ್ಪಿಸಿದ್ದು, ಪ್ರಸ್ತಾವನೆ
ಪರಿಶೀಲಿಸಿ ಮುಂದಿನ ವಾರ ವರದಿ ನೀಡಲಿದೆ. ನಂತರ ಈ ಬಗ್ಗೆ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಚರ್ಚಿಸಿ ಸೂಕ್ತ
ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್‌ ಹೇಳಿದರು.


8 ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ
ಡಾಃಕೆ.ಸುಧಾಕರ್‌ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು. 35 ಲಕ್ಷ ವೈಯುಕ್ತಿಕ ಸುರಕ್ಷತಾ ಸಾಧನಗಳ
(ಪಿಪಿಲ)ುಕಿಟ್‌ ಹಾಗೂ ಮಾಸ್ಕ್‌ಗಳ ಖರೀದಿಗೆ ಸಭೆ ಅನುಮೋದಿಸಿದೆ. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳನ್ನು
ಕೊರೋನಾ ಆಸ್ಪತ್ರೆಗಳನ್ನಾಗಿ ಮಾರ್ಪಡಿಸಿ, ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳನ್ನು ಇತರ ರೋಗಿಗಳಿಗೆ
ಉಪಯೋಗಿಸಲು ನಿರ್ಧರಿಸಲಾಗಿದೆ ಎಂದರು.


ಸಭೆಯ ಪ್ರಮುಖ ನಿರ್ಧಾರಗಳು


>» ಕಾಳಸಂತೆಗೆ ಕಡಿವಾಣ ಹಾಕಲು ರೆಮಿಡಿಸ್ಟಿಯರ್‌ ಔಷಧವನ್ನು ಸರ್ಕಾರದ ಮೂಲಕ ಖಾಸಗಿ
ಆಸ್ಪತ್ರೆಗಳಿಗೆ ಪೂರೈಕೆ

» ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಪ್ಯಾಕೇಜ್‌
ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಲು ಮತ್ತು ಯೋಜನೆ ವ್ಯಾಪ್ತಿಗೆ ಸೇರದ ಚಿಕಿತ್ಸಾ
ವಿಧಾನಗಳನ್ನು ಬಳಕೆದಾರರ ಶುಲ್ಕ ಆಧಾರದಲ್ಲಿ ನೀಡುವುದು.

> ಕೊರೋನಾ ನಿರ್ವಹಣೆಗೆ ವೈದ್ಯಕೀಯ ಪರಿಕರ, ಔಷಧ ಖರೀದಿಯ ಶಿಫಾರಸ್ಸು ಮೇಲ್ಡಿಚಾರಣೆ
ಐಟಿ-ಬಿಟಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

» ಕೊರೋನಾ ನಿರ್ವಹಣೆ ಕೆಲಸದಲ್ಲಿ ನಿರತ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ತಲಾ
2,59,263 ಎನ್‌-95 ಮಾಸ್ಟ್‌ ಹಾಗೂ ಪಿಪಿಇ ಕಿಟ್‌ ಖರೀದಿ

» 17 ಸರ್ಕಾರಿ ಮೆಡಿಕಲ್‌ ಕಾಲೇಜುಗಳ 4,736 ಹಾಸಿಗೆಗಳಿಗೆ ಆಕ್ಷಿಜನ್‌ ಪೈಪ್‌ ಅಳವಡಿಕೆ ಮತ್ತು
ಇತರ ಪರಿಕರಗಳ ಖರೀದಿ


139


> ದಿನಕ್ಕೆ 50,000 ಟೆಸ್ಟ್‌ಗಳ ಗುರಿಮುಟ್ಟಲು ಹೊಸದಾಗಿ 16 ಆರ್‌ಟಿಪಿಸಿಆರ್‌ ಮತ್ತು 15
ಆಟೋಮೇಟೆಡ್‌ ಆರ್‌ಎನ್‌ಎ ಪ್ರಯೋಗಾಲಯಗಳ ಸ್ಥಾಪನೆ


ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ: ಸಂಕಷ್ಟ ಪರಿಸ್ಸಿತಿಯಲ್ಲಿ ಖಾಸಗಿ ಆಸ್ಪತ್ರೆಗಳು ದುಬಾರಿ ಹಣ ವಸೂಲಿ ಮಾಡಿದರೆ
ರಾಷ್ಟ್ರೀಯ ವಿಪತ್ತು ನಿರ್ವಹಣೆ, ಕೆಪಿಎಂಇ, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕ್ರಮ ಜರುಗಿಸಲು
ಸರ್ಕಾರ ಹಿಂಜರಿಯುವುದಿಲ್ಲವೆಂದು ಸುಧಾಕರ್‌ ಖಡಕ್‌ ಎಚ್ಚರಿಕೆ ನೀಡಿದರು. ಸಂಘರ್ಷದ ಹಾದಿ ಬೇಡ,
ಎಲ್ಲರನ್ನೂ ವಿಶ್ಚಾಸಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ
ಇಚ್ಛೆಯಾಗಿದ್ದು, ಅದರಂತೆಯೇ ಹಂತಹಂತವಾಗಿ ಕ್ರಮವಹಿಸಲಾಗುವುದು ಎಂದರು. ತಾಯಿ ಮತ್ತು ಮಕ್ಕಳ
ವಿಭಾಗ ಬಿಟ್ಟು ಉಳಿದೆಲ್ಲ ಹಾಸಿಗೆಗಳನ್ನು ನೀಡಲು ಖಾಸಗಿ ಆಸ್ಪತ್ರೆಗಳು ಮುಂದೆ ಬಂದಿದ್ದವು. ಆದರೆ ಶೇ.50
ಹಾಸಿಗೆಗಳನ್ನು ಸರ್ಕಾರ ಪಡೆದುಕೊಳ್ಳಲಿದ್ದು, ಉಳಿದ ಹಾಸಿಗೆಗಳನ್ನು ಬೇರೆ ರೋಗಿಗಳ ಚಿಕಿತ್ಲೆಗೆ ಖಾಸಗಿ
ಆಸ್ಪತ್ರೆಗಳು ಬಳಸಿಕೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲವೆಂದು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ
ಪರೀಕ್ಷಾ ದರವನ್ನು ಇಳಿಕೆ ಮಾಡಲಾಗಿದೆ. ಸರ್ಕಾರ ಶಿಫಾರಸ್ಸು ಮಾಡಿದವರಿಗೆ ರೂ. 2,000 ನೇರವಾಗಿ ಖಾಸಗಿ
ಆಸ್ಪತ್ರೆಗಳಿಗೆ ಹೋಗಿ ಟೆಸ್ಟ್‌ ಮಾಡಿಸಿದರೆ ರೂ. 3,000 ನಿಗದಿಪಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.


ಆಯುಷ್‌ ವೇತನ ಹೆಚ್ಚಳ: ಆಯುಷ್‌ ವೈದ್ಯರ ವೇತನ ಹೆಚ್ಚಳದ ಬೇಡಿಕೆಗೆ ಸ್ಪಂದಿಸಿದ್ದು, ರೂ.48,000 ವೇತನ
ಹೆಚ್ಚಳವಾಗಲಿದೆ. 6 ತಿಂಗಳ ಮಟ್ಟಿಗೆ ಶುಶ್ರೂಷಕರ ಸಂಬಳವನ್ನು ರೂ.30,000ಗೆ ಏರಿಸಲು ನಿರ್ಧರಿಸಿದ್ದು,
ಬಿಬಿಎಂಪಿ, ಆರೋಗ್ಯ ಆಯುಷ್‌ನ ಎಲ್ಲ ನರ್ಸ್‌ಗಳಿಗೆ ಅನ್ವಯಿಸುತ್ತದೆ. ಸದ್ಯಕ್ಕೆ ನರ್ಸ್‌ಗಳು ರೂ.15,000 ವೇತನ
ಪಡೆಯುತ್ತಿದ್ದಾರೆ. ಕೊರೋನಾ ಕಾರ್ಯನಿರ್ವಹಿಸಲು ತಾತ್ಕಾಲಿಕವಾಗಿ ನೇಮಕವಾಗುವ ಎಂಬಿಬಿಎಸ್‌ ವೈದ್ಯರಿಗೆ
ಮಾಸಿಕ ರೂ. 80,000 ವೇತನ ನೀಡಲು ತೀರ್ಮಾನಿಸಿದ್ದು, ಸೌಲಭ್ಯಗಳ ಸೃಜನೆಯೊಂದಿಗೆ ರೋಗಿಗಳ ಚಿಕಿತ್ಸೆಗೆ
ಬೇಕಾದ ವೈದ್ಯರು, ಶುಶ್ರೂಷಕರ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಿದೆ ಎಂದು ಸುಧಾಕರ್‌ ತಿಳಿಸಿದರು.


ಆಧಾರ:ವಿಜಯವಾಣಿ, ದಿನಾ೦ಕ:22.07.2020
34. ಸೋಂಕು ಕಡಿವಾಣಕ್ಕೆ ಸಿಎಂ ಟಾರ್ಗೆಟ್‌


ನಗರದಲ್ಲಿ ಕೋವಿಡ್‌ ನಿಯಂತ್ರಣ ಸಂಬಂಧ ಪ್ರತಿವಾರ ತಮಗೆ ವರದಿ ಸಲ್ಲಿಸಬೇಕು. ಟೆಸ್ಪಿಂಗ್‌
ಪ್ರಮಾಣ ಹೆಚ್ಚಿಸಬೇಕು ಎಂದು ವಲಯ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳಿಗೆ ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


ಈ ಮೂಲಕ ರಾಜಧಾನಿಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಟಾರ್ಗೆಟ್‌ ನೀಡಿರುವ ಸಿಎಂ, ಇದರಲ್ಲಿ
ವೈಫಲ್ಯ ಕಂಡರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ,
ದಾಸರಹಳ್ಳಿ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳ ಉಸ್ತುವಾರಿ ಸಚಿವರು ಹಾಗೂ
ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.


ತಮಗೆ ವಹಿಸಲಾದ ವಲಯದಲ್ಲಿ ಸಚಿವರು ಮುತುವರ್ಜಿ ವಹಿಸಬೇಕು. ಯಾವುದೇ ಲೋಪಕ್ಕೆ ಆಸ್ಪದ
ನೀಡಕೂಡದು. ಸಬೂಬು ಹೇಳಲೂಬಾರದು. ನಿತ್ಯ ಸಂಜೆ ಈ ಸಂಬಂಧದ ವರದಿಯನ್ನು ಅಧಿಕಾರಿಗಳು
ಉಸ್ತುವಾರಿ ಸಚಿವರಿಗೆ ನೀಡಬೇಕು. ಸಚಿವರು ಕ್ರೋಢೀಕೃತ ವರದಿಯನ್ನು ವಾರಕ್ಕೊಮ್ಮೆ ತಪ್ಪದೇ ನನಗೆ
ನೀಡಬೇಕು ಎಂಬ ನಿರ್ದೇಶನ ಕೊಟ್ಟರು.


ಪ್ರಮುಖಾಂಶ:


» ಕೋವಿಡ್‌ ನಿಯಂತ್ರಣ ಹಾಗೂ ಸಕಾಲದಲ್ಲಿ ಚಿಕಿತ್ಸೆ ದೊರಕಿಸಲು ಅಧಿಕಾರಿಗಳು ಹೆಚ್ಚು ಗಮನ
ಹರಿಸುವುದು.

> ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುವುದು, ಸೋಂಕಿತರ ಸಂಪರ್ಕ ಹೊಂದಿದವರನ್ನು ಪತ್ತೆ
ಹಚ್ಚುವುದು ಮತ್ತು ಕಂಟೈನ್ನೆಂಟ್‌ ರೋನ್‌ನಲ್ಲಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ.


>


>


140


ಪರೀಕ್ಷೆ ಫಲಿತಾಂಶವನ್ನು ತ್ವರಿತವಾಗಿ ಅದರಲ್ಲೂ ಚಿಕಿತ್ಸೆ ಅಗತ್ಯವಿರುವವರಿಗೆ ಬೇಗನೆ ಫಲಿತಾಂಶ
ದೊರೆಯುವಂತೆ ಕ್ರಮ ಕೈಗೊಳ್ಳುವುದು.


ರೋಗಲಕ್ಷಣ ಇಲ್ಲದ, ಇತರ ಯಾವುದೇ ಕಾಯಿಲೆಗಳಿಂದ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿ
ಅನಗತ್ಯ ದಟ್ಟಣೆ ಉಂಟು ಮಾಡಕೂಡದು.


ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಲ್ಲಿ ಕೂಡಲೇ ಅವರನ್ನು ಆಸ್ಪತ್ರೆಗೆ ಅಥವಾ ಕೋವಿಡ್‌
ಕೇರ್‌ ಸೆಂಟರ್‌ಗೆ ವರ್ಗಾಯಿಸಲು ಕ್ರಮ ವಹಿಸುವುದು.


ಸಂಪರ್ಕಿತರು ಕ್ವಾರಂಟೈನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಾತರಿ
ಪಡಿಸಿಕೊಳ್ಳುವುದು.


ಕೋವಿಡ್‌ ಆಸ್ಪತ್ರೆಗಳ ನಿರ್ವಹಣೆ, ಆಹಾರ ಪೂರೈಕೆ, ಸ್ಪಚ್ಛೆತೆ, ಚಿಕಿತ್ಸೆ ಮೊದಲಾದ ವಿಷಯಗಳ
ಕುರಿತು ಹೆಚ್ಚಿನ ಗಮನ ಕೊಡುವುದು.


ಯಾವುದೇ ದೂರು ಬಂದರೆ ತಕ್ಷಣ ಸ್ಪಂದಿಸುವುದು.


» ಸೋಂಕಿತರು ಯಾವುದೇ ಆಸ್ಪತ್ರೆಗೆ ಬಂದರೂ ಮೊದಲು ಅವರನ್ನು ದಾಖಲಿಸಿಕೊಂಡು ಪ್ರಾಥಮಿಕ


>
>


ಚಿಕಿತ್ಸೆ ನೀಡುವುದು.


ಲೋಪದೋಷ ಗಮನಕ್ಕೆ ಬಂದ ಕೂಡಲೇ ಸರಿಪಡಿಸುವ ಕೆಲಸವನ್ನು ವಲಯಗಳಿಗೆ ಸಂಬಂಧಪಟ್ಟ
ಸಚಿವರು ಹಾಗೂ ಅಧಿಕಾರಿಗಳು ಮಾಡಬೇಕು.


ಈಗಾಗಲೇ ಹಾಸಿಗೆ ಹಂಚಿಕೆಗೆ ಪಾರದರ್ಶಕ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ.
ಸಹಾಯವಾಣಿಗಳನ್ನೂ ಸಹ ಸ್ಥಾಪಿಸಲಾಗಿದೆ.


ಸೋಂಕಿತರು ಯಾವ ವಿಷಯಕ್ಕೆ ಯಾವ ಸಹಾಯವಾಣಿಗೆ ಕರೆಮಾಡಬೇಕು ಎಂಬುದನ್ನು
ಜಾಹೀರಾತು ನೀಡಬೇಕು.


ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟ ಕೂಡಲೇ ಆ್ಯಂಬುಲೆನ್ಸ್‌ ಕಳುಹಿಸಬೇಕು.
ವಿಳಂಬವಾದಲ್ಲಿ ಅಥವಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ವಿನಾಕಾರಣ ನಿರಾಕರಿಸಿದಲ್ಲಿ
ಅಧಿಕಾರಿಗಳು ನಿಯಾಮಾನುಸಾರ ಕೂಡಲೇ ಕ್ರಮ ಕೈಗೊಳ್ಳಬೇಕು.


ವಲಯಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ಕೋವಿಡ್‌ ಆಸ್ಪತ್ರೆಗಳಿಗೆ ಭೇಟಿ ನೀಡಿ,
ಅಲ್ಲಿನ ವ್ಯವಸ್ಥೆಗಳು ಸರಿಯಿದೆಯೇ ಎಂದು ಪರಿಶೀಲಿಸಬೇಕು.


ಹೆಚ್ಚು ಸಂಖ್ಯೆಯಲ್ಲಿ ಟೆಸ್ಟ್‌ ಮಾಡಿ 24 ಗಂಟೆಯ ಒಳಗೆ ವರದಿ ಬರುವಂತೆ ಮಾಡಬೇಕು.
ವಾರ್ಡ್‌ಗಳಲ್ಲಿ ಕೋವಿಡ್‌ ಬಗ್ಗೆ ಮಾಹಿತಿ ನೀಡುವ ಜಾಹೀರಾತು ಫಲಕಗಳನ್ನು ಅಳವಡಿಸುವುದು.


5ಟಿ ಪಾಲಿಸಿ : ಎಲ್ಲ ವಲಯಗಳಲ್ಲೂ 5ಟಿ ಸ್ಟ್ರ್ಯಾಟಜಿಯನ್ನು (ಟ್ರೇಸ್‌, ಟ್ರ್ಯಾಕ್‌, ಟೆಸ್ಟ್‌ ಟೀಟ್‌,
ಟಿಕ್ನಾಲಜಿ) ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್‌ ನಿರ್ವಹಣೆಯಿಂದ ತಪ್ಪಿಸಿಕೊಳ್ಳಲು ನೆಪಹೇಳುವ ಅಧಿಕಾರಿಗಳ
ವಿರುದ್ಧ ಮುಲಾಜಿಲ್ಲದೆ ಕಮ ಕೈಗೊಳ್ಳಬೇಕು. ಕುಂಟುನೆಪ ಹೇಳುವವರನ್ನು ತಕ್ಷಣ ಸಸ್ಪೆಂಡ್‌ ಮಾಡಬೇಕು”
ಎಂದು ಸೂಚಿಸಿದರು.


ಆಧಾರ:ವಿಜಯಕರ್ನಾಟಕ, ದಿನಾ೦ಕ:23.07.2020


141


35. ಕೈಗಾರಿಕಾ ಶಾಸನ ತಿದ್ದುಪಡಿಗೆ ಒಪ್ಪಿಗೆ


ಕಾರ್ಮಿಕರ ತೀವ್ರ ವಿರೋಧದ ನಡುವೆಯೇ ಸಚಿವ ಸಂಪುಟ ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ
ನೀಡಿದೆ. ಕೈಗಾರಿಕಾ ಕಾಯ್ದೆ 1984ರ ಸೆಕ್ಷನ್‌ 64, 65ಕ್ಕೆ ತಿದ್ದುಪಡಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ನೇತೃತ್ನದ ಸಚಿವ ಸಂಪುಟ ಅಸ್ತು ಎಂದಿದೆ. ಇದರಿಂದಾಗಿ ಕಾರ್ಮಿಕರಿಗೆ ಪ್ರತಿದಿನ ಕನಿಷ್ಟ 35ರಿಂದ 40
ನಿಮಿಷಗಳ ಕಾಲ ಹೆಚ್ಚುವರಿಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.


ಈ ಕಾಯ್ದೆ ತಿದ್ದುಪಡಿಯಿಂದಾಗಿ ಕಾರಾನೆ ಮಾಲೀಕರು, ಕಾರ್ಮಿಕರನ್ನು ಮೂರು ತಿಂಗಳಿಗೆ 75
ಗಂಟೆಯಿಂದ 125 ಗಂಟೆ ಹೆಚ್ಚುವರಿ ಕೆಲಸ ಮಾಡಿಸಬಹುದಾಗಿದ್ದು, ಲೆಕ್ಕಚಾರದ ಪ್ರಕಾರ ದಿನದ ಕೆಲಸದ
ಅವಧಿಯಲ್ಲಿ ಹೆಚ್ಚಳವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕಾರ್ಮಿಕರಿಂದ ತೀವ್ರ ವಿರೋಧ
ವ್ಯಕ್ತವಾಗಿತ್ತು. ಆದರೆ ಕೊರೋನಾದಿಂದಾಗಿರುವ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ತಿದ್ದುಪಡಿ ತರಲಾಗಿದೆ.
ಉತ್ಪಾದನೆ ಹೆಚ್ಚಿಸುವ ಉದ್ದೇಶ ಸರ್ಕಾರಕ್ಕಿದೆ. ಅಲ್ಲದೇ ಕಾರ್ಮಿಕರ ಮಿತಿಯನ್ನು 100ರ೦ದ 300ರವರೆಗೆ, ಗುತ್ತಿಗೆ
ಆಧಾರದ ಮೇಲೆ ತೆಗೆದುಕೊಳ್ಳುವ ಕಾರ್ಮಿಕರ ಸಂಖ್ಯೆಯನ್ನು 10ರಿಂದ 20ಕ್ಕೆ ಹೆಚ್ಚಿಸಲಾಗಿದೆ. ರಾತ್ರಿ 7ರಿಂದ
ಬೆಳಗ್ಗೆ 6ರವರೆಗೆ ಕಾರ್ಯನಿರ್ವಹಿಸಲು ಮುಂದೆ ಬರುವ ಮಹಿಳಾ ಕಾರ್ಮಿಕರಿಗೆ ಫ್ಯಾಕ್ಟರೀಸ್‌ ಕಾಯ್ದೆ 1948ರ
ಅಡಿ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾ೦ಕ:24.07.2020
36. ತಿದ್ದುಪಡಿಗೆ ಸುಗೀವಾಜ್ಞೆ ಸಂಪುಟ ಸಭೆ ಒಪಿಗೆ
a) ಅ fo


ಕಾರ್ಮಿಕ ಕಾಯ್ದೆ ತಿದ್ದುಪಡಿ, ಕರ್ನಾಟಕ ಭೃಷ್ಟಾಚಾರ ನಿಗ್ರಹ ದಳ (ಎಸಿಬಿ) ತಿದ್ದುಪಡಿ ವಿಧೇಯಕ
(ಸಿಬ್ಬಂದಿ ಮತ್ತು ನೇಮಕ), ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ವಿಧೇಯಕ ವಾಪಸ್ಸು ಸೇರಿ ಹಲವು
ತೀರ್ಮಾನಗಳನ್ನು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ತೆಗೆದುಕೊಂಡಿದೆ.


ಕಾರ್ಮಿಕರ ತೀವ್ರ ವಿರೋದದ ನಡುವೆಯೂ ಕೈಗಾರಿಕಾ ವಿವಾದಗಳು ಮತ್ತು ಇತರ ಕೆಲ ಕಾನೂನುಗಳ
ತಿದ್ದುಪಡಿ ಸುಗೀವಾಜ್ಞೆಯನ್ನು ಸಂಪುಟ ಸಭೆ ಅಂಗೀಕರಿಸಿದೆ.

ಡೆಗ್ಸ್‌ ಮತ್ತು ಲಾಜಿಸ್ಸಿಕ್ಸ್‌ ಸೊಸೈಟಿಯನ್ನು ನಿಗಮ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯ
ವಿಶ್ವವಿದ್ಯಾಲಯಗಳ ವಿಧೇಯಕ 2017ನ್ನು ವಾಪಸ್ಸು ಪಡೆದಿದ್ದು, ಸಮಗ್ರ ವಿಧೇಯಕ ತರಲು ಸಭೆ
ತೀರ್ಮಾನಿಸಿದೆ ಎಂದರು. ಭೃಷ್ಟಾಚಾರ ನಿಗ್ರಹ ದಳ(ಎಸಿಬಿ) ಕೇಡರ್‌ ನೇಮಕಾತಿಗೆ ಒಪ್ಪಿಗೆ ನೀಡಿದ್ದು,
ನಿಯೋಜನೆ ಆಧಾರದ ಮೇಲೆ ನೇಮಕ ಮಾಡಲು ನಿಯಾಮಾವಳಿಗೆ ತಿದ್ದುಪಡಿ ತರಲು ಅನುಮೋದನೆ
ನೀಡಲಾಗಿದೆ ಎಂದು ತಿಳಿಸಿದರು.


ಎಂಎಸ್‌ಎಂಇಗೆ ಪ್ರೋತ್ಲಾಹ:ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ
ವಲಯಕ್ಕೆ ಸಬ್ದಿಡಿ ರೂಪದಲ್ಲಿ ಶೇ.10ರಿಂದ ಶೇ.6ಕ್ಕೆ ಬಡ್ಡಿ ದರವನ್ನು ಇಳಿಕೆ ಮಾಡಲು ಸಭೆಯಲ್ಲಿ ತೀರ್ಮಾನ
ಮಾಡಲಾಗಿದೆ. ಕೆಎಸ್‌ಎಫ್‌ಸಿಗೆ ರೂ.150 ಕೋಟಿ ಸಾಲ ಪಡೆಯಲು ಸರ್ಕಾರದಿಂದ ಖಾತ್ರಿ ನೀಡಲು
ನಿರ್ಣಯಿಸಲಾಗಿದೆ ಎಂದು ಕಾನೂನು ಸಚಿವರು ತಿಳಿಸಿದರು.


ಸರಕು ಸಾಗಣೆ ಮತ್ತು ಸೇವಾ ತೆರಿಗೆ ತಿದ್ದುಪಡಿ ವಿಧೇಯಕ, ಕರ್ನಾಟಕ ಕೈಗಾರಿಕಾ ವಿಧೇಯಕಗಳಿಗೆ
ಅನುಮೋದನೆ ನೀಡಲಾಗಿದೆ. ಬೀದರ್‌ ಮೆಡಿಕಲ್‌ ಕಾಲೇಜ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ
ರೂ.29.87 ಕೋಟಿ ಬಿಡುಗಡೆ ಮಾಡಲು ಅನುಮೋದನೆ, ಅಂಕೋಲಾ ಬಳಿ ನೌಕದಳದ ಕಾರ್ಯಾಚರಣೆಗೆ
ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಲ್ಲಿ ಸಿವಿಲ್‌ ಸೇವೆಗೆ ಅನುಮತಿ ನೀಡಲಾಗಿದೆ. ಅದಕ್ಕೆ ರಾಜ್ಯದ
ಪಾಲಿನ ಪೈಕಿ ರೂ. 10.20 ಕೋಟಿ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂದರು.


ಪ್ರಮುಖ ತೀರ್ಮಾನಗಳು


> ಚನ್ನಪಟ್ಟಣ ಬಳಿ ರೈಲ್ವೆ ಮೇಲ್ಲೇತುವೆಗೆ, ಭೂ ಸ್ವಾಧೀನಕ್ಕೆ ರೂ.1.84 ಕೋಟಿ ಬಿಡುಗಡೆಗೆ
ತೀರ್ಮಾನ. ಈ ಯೋಜನೆಗೆ 2011ರಲ್ಲಿ ರೂ.3 ಕೋಟಿ ಬಿಡುಗಡೆ ಮಾಡಲಾಗಿದೆ.


142


> ರಾಜ್ಯದಲ್ಲಿ ಟೆಕ್ನಾಲಜಿ ಮಿಷನ್‌ ಕೆಳಗೆ 7 ಸಾವಿರ ಸ್ಟಾರ್ಟ್‌ ಆಫ್‌ ಕೆಲಸ ಮಾಡುತ್ತಿದ್ದು, ಇವುಗಳನ್ನು
ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಸ್ಥಾಪಿಸಿ ಅದರ ಕೆಳಗೆ ತರಲಾಗುತ್ತಿದೆ.


> ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಮತ್ತು ಕುಂದುಕೊರತೆ
ಪ್ರಾಧಿಕಾರಕ್ಕೆ ಇನ್ನು ಮುಂದೆ ಬಿಬಿಎಂಪಿ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ. ಈ ಮೊದಲು
ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದರು.


> ರಾಯಚೂರಿನ ಐಐಟಿ ಅತಿಥಿ ಗೃಹಕ್ಕೆ ರೂ.62 ಲಕ್ಷ ಬಿಡುಗಡೆಗೆ ಸಮ್ಮತಿ.


ಆಧಾರ:ವಿಜಯವಾಣಿ, ದಿನಾ೦ಕ:24.07.2020
37. ರೂ.5 ಲಕ್ಷ ಕೋಟಿ ಬಂಡವಾಳ ಆಕರ್ಷಣೆಗೆ ಪಣ


ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ ರೂ. ಐದು ಲಕ್ಷ ಕೋಟಿಯ ಬಂಡವಾಳ ಆಕರ್ಷಿಸುವುದು,
20 ಲಕ್ಷ ಮಂದಿಗೆ ಉದ್ಯೋಗಾವಕಾಶ ನೀಡಿಕೆ, ಎರಡು ಮತ್ತು ಮೂರನೇ ಹಂತದ ನಗರದಲ್ಲಿ ಕೈಗಾರಿಕೆಗಳಿಗೆ
ಒತ್ತು ನೀಡುವುದು ಸೇರಿದಂತೆ ಸಣ್ಣ ಕೈಗಾರಿಕೆಗಳಿಗೆ ಸುಂಕ, ತೆರಿಗೆ ರಿಯಾಯಿತಿ ವಿನಾಯಿತಿ ನೀಡುವ "ನೂತನ
ಕೈಗಾರಿಕಾ ನೀತಿ 2020-25'ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.


ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ
ತೆಗೆದುಕೊಂಡ ತೀರ್ಮಾನವನ್ನು ಸುದ್ದಿಗೋಷ್ಟಿಯಲ್ಲಿ ತಿಳಿಸಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ
ಜಗದೀಶ್‌ ಶೆಟ್ಟರ್‌, ರಾಜ್ಯವು ಸುಧಾರಿತ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ದಿಯಲ್ಲಿ ಜಾಗತಿಕ
ನಾಯಕನಾಗಲು ಮತ್ತು ನಾವೀನ್ಯತೆ, ಸಮತೋಲಿತ ಹಾಗೂ ಸುಸ್ಲಿರ ಅಭಿವೃದ್ಧಿಗೊಳಿಸುವುದು ಪಮುಖ
ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ ಸರಕುಗಳ ರಪ್ಲಿನಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದ್ದು, ಮುಂದಿನ ಐದು
ವರ್ಷಗಳಲ್ಲಿ ಅದನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯುವುದು, ಕೈಗಾರಿಕಾ ಅಭಿವೃದ್ದಿ ವಾರ್ಷಿಕ ಶೇ.10 ರಷ್ಟು
ಇರುವಂತೆ ನೋಡಿಕೊಳ್ಳುವುದು ಉದ್ದೇಶವಾಗಿದೆ ಎಂದರು.


ಬೆಂಗಳೂರಿನಿಂದ ಹೊರಗಡೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಎರಡು ಮತ್ತು
ಮೂರನೇ ಹಂತದ ನಗರಗಳಿಗೆ ವಿಸರಣೆ ಮಾಡುವ ಧ್ಯೇಯವನ್ನು ಹೊಂದಲಾಗಿದೆ. ಕೈಗಾರಿಕೆ ಅಭಿವೃದ್ಧಿಯಲ್ಲಿ
ಹಿಂದುಳಿದಿರುವ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ತೇಜಿಸಲಾಗುವುದು.
ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಮೂರು ವಲಯಗಳಾಗಿ ವಿಂಗಡಿಸಲಾಗಿದ್ದು, ಮುಖ್ಯಮಂತ್ರಿಗಳ
ನೇತೃತ್ವದ ಉನ್ನತ ಮಟ್ಟದ ಸಮಿತಿಯು ವಿಂಗಡಣೆಯನ್ನು ಮಾಡಲಿದೆ. ವಲಯ 1 ಮತ್ತು 2ರಲ್ಲಿ ಹಿಂದುಳಿದ
ಜಿಲ್ಲೆ, ತಾಲ್ಲೂಕುಗಳಲ್ಲಿ ಬರಲಿದ್ದು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಲಯ
3 ರಲ್ಲಿ ಸೇರಿಸಲಾಗಿದೆ. ಬೀದರ್‌-ಮೈಸೂರು ಕೈಗಾರಿಕಾ ಕಾರಿಡಾರ್‌ನಲ್ಲಿ ರೈಲ್ವೆ ಸಂಪರ್ಕ ಕಲ್ಪಿಸುವ ಕುರಿತು
ನೀತಿಯಲ್ಲಿ ಸೇರಿಸಲಾಗುವುದು ಎಂದು ವಿವರಿಸಿದರು.


ನೂತನ ಕೈಗಾರಿಕಾ ನೀತಿಯಲ್ಲಿನ ಅತರೆ ಅಂಶಗಳು


» ಶೇ.100ರಷ್ಟು ಗ್ರೂಪ್‌ "ಡಿ' ಕಾರ್ಮಿಕರಿಗೆ ಉದ್ಯೋಗ, ಶೇ.70ರಷ್ಟು ಕನ್ನಡಿಗರಿಗೆ ಒಟ್ಟಾರೆ
ಆಧಾರದ ಮೇಲೆ ಉದ್ಯೋಗ ಒದಗಿಸುವುದು.

ವಾರ್ಷಿಕ ವಹಿವಾಟಿನ ಮೇಲೆ ಪ್ರೋತ್ಸಾಹ ನೀಡಿಕೆ.

ಎಂಎಸ್‌ಎಂಇ.ಗೆ ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕದಲ್ಲಿ ರಿಯಾಯಿತಿ.
ಭೂ ಪರಿವರ್ತನಾ ಶುಲ್ಕ ಮರುಪಾವತಿ.

ಎಂಎಸ್‌ಎಂಇ.ಗೆ ವಿದ್ಯುತ್‌ ತೆರಿಗೆ ವಿನಾಯಿತಿ.

ತಾಲ್ಲೂಕಿನಲ್ಲಿ ರೂ.100 ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿದರೆ ಸಹಾಯಧನ.


VV VVV


143


> ರಫ್ತು ಆಧಾರಿತ ಘಟಕಗಳಿಗೆ ಉತ್ತೇಜನ.
> ಖಾಸಗಿ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ದಿಪಡಿಸಲು ರಿಯಾಯಿತಿ ಮತ್ತು ಹೋತಾಹ.


ಖ್‌ "೧


ವಿಶೇಷ ಹೂಡಿಕೆ ಪ್ರದೇಶ ಕಾಯ್ದೆ ಪ್ರಸ್ತಾಪ:-100ಕ್ಕಿಂತಲೂ ಹೆಚ್ಚು ಚದರ ಕಿಲೋಮೀಟರ್‌ ವಿಸ್ತೀರ್ಣವನ್ನು
ಹೊಂದಿರುವ ವಿಶೇಷ ಹೂಡಿಕೆ ಪ್ರದೇಶವನ್ನು (ಎಸ್‌ಐಆರ್‌) ಸ್ಥಾಪಿಸಲು, ಅಭಿವೃದ್ಧಿ ಪಡಿಸಲು ಮತ್ತು
ನಿರ್ವಹಿಸಲು ರಾಜ್ಯದಲ್ಲಿ ವಿಶೇಷ ಹೂಡಿಕೆ ಪ್ರದೇಶ ಕಾಯ್ದೆ ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ. ಈ ಪ್ರದೇಶವನ್ನು
ಕೈಗಾರಿಕಾ ಟೌನ್‌ಶಿಪ್‌ ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು. ಧಾರವಾಡ,
ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಯನ್ನೊಳಗೊಂಡ ಧಾರವಾಡ ವಿಶೇಷ ಹೂಡಿಕೆ ಪ್ರದೇಶವನ್ನು
ಸ್ಥಾಪಿಸಲಾಗುವುದು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನೊಳಗೊಂಡ
ಶಿವಮೊಗ್ಗ ವಿಶೇಷ ಹೂಡಿಕೆ ಪ್ರದೇಶ ಸ್ಥಾಪನೆ ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನೊಳಗೊ೦ಡ ಕಲಬುರಗಿ
ವಿಶೇಷ ಹೂಡಿಕೆ ಪ್ರದೇಶ ಸ್ಥಾಪನೆ ಮಾಡಲಾಗುವುದು. ಶಾಸನಬದ್ದವಾಗಿ ಕಾರ್ಯಗಳನ್ನು ನಿರ್ವಹಿಸಲು
ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ದಿ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು ಎಂದು ಹೇಳಿದರು.


ಆಧಾರ:ಕನ್ನಡಪ್ರಭ, ದಿನಾಂಕ:24.07.2020


38. ಸ್ವಾತಂತ್ರೋತ್ಸವ ಹೀಗೆ ಆಚರಿಸಿ-ಕೊರೊನಾ ವಾರಿಯರ್ಸ್‌ಗಳನ್ನು ಕಾರ್ಯಕ್ರಮಗಳಿಗೆ ಆಹ್ನಾನಿಸಿ
ಗೌರವ ಸಲ್ಲಿಸಿ-ರಾಜ್ಯಗಳಿಗೆ ಕೇಂದ್ರದ ಮಾರ್ಗಸೂಚಿ


ಕೊರೋನಾ ವಿರುದ್ದದ ಹೋರಾಟದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಕೊರೋನಾ ಯೋಧರನ್ನು
ಮತ್ತೊಮ್ಮೆ ಗೌರವಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆಗಸ್ಟ್‌ 15ರಂದು ದೇಶಾದ್ಯಂತ ನಡೆಯಲಿರುವ
ಸ್ವಾತಂತ್ಯ ದಿನಾಚರಣೆ ಕಾರ್ಯಕ್ರಮದ ಅತಿಥಿಗಳನ್ನಾಗಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು,
ಸ್ವಚ್ಛತಾ ಕಾರ್ಮಿಕರು, ಆರೋಗ್ಯ ಸಿಬ್ಬಂದಿಗಳನ್ನು ಆಹ್ನಾನಿಸಬೇಕು. ಕೊರೋನಾದಿಂದ ಚೇತರಿಸಿಕೊಂಡವರನ್ನೂ
ಆಹ್ಲಾನಿಸಬಹುದು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.


ಪ್ರಮುಖ ಸಲಹೆಗಳು


> ವೈದ್ಯ ಸಿಬ್ಬಂದಿ, ಪೌರ ಕಾರ್ಮಿಕರು ಸೇರಿ ಕೊರೋನಾ ಯೋಧರನ್ನು ಆಹ್ಹಾನಿಸಿ.
ಕೊರೋನಾದಿಂದ ಗುಣಮುಖರಾದವರನ್ನೂ ಕರೆಸುವ ಮೂಲಕ ಗೌರವಿಸಿ.
ಕೊರೋನಾ ಸೋಂಕು ತಗುಲುವ ಸಾಧ್ಯತೆ ಇರುವವರನ್ನು ಸಭೆಗೆ ನಿರ್ಬಂಧಿಸಿ.
ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಕಡ್ಡಾಯಗೊಳಿಸಿ, ಸಾಮಾಜಿಕ ಅಂತರ ಕಾಪಾಡಿ.
ಸಾಹಸಗಳನ್ನು ಮೊದಲೇ ಚಿತ್ರೀಕರಿಸಿ ಪರದೆ ಮೇಲೆ ಪ್ರದರ್ಶಿಸಿ, ವೆಬ್‌ಕಾಸ್ಟ್‌ ಮಾಡಿ.


VV VY


ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪಾತಂತ್ರೋತ್ಸವ ಕಾರ್ಯಕ್ರಮ ಆಯೋಜನೆ ಕುರಿತು
ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಸಲಹಾವಳಿಗಳನ್ನು ಕಳುಹಿಸಿಕೊಟ್ಟಿದೆ. ಅದರನ್ವಯ ಈ ಬಾರಿ "ಸ್ಟಾತಂತ್ರ್ಯ
ದಿನವನ್ನು ಹೆಚ್ಚು ಜನರನ್ನು ಸೇರಿಸದೇ ಆಚರಿಸಬೇಕು. ಸಮಾರಂಭಗಳಲ್ಲಿ ಸಾಮಾಜಿಕ ಅಂತರ
ಕಾಯ್ದುಕೊಳ್ಳಬೇಕು. ಕಾರ್ಯಕ್ರಮವನ್ನು ವೆಬ್‌ಸೈಟ್‌ಗಳ ಮೂಲಕ ನೇರಪ್ರಸಾರ ಮಾಡಬೇಕು” ಎಂದು
ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ "ಆತ್ಮನಿರ್ಭರ ಭಾರತ'ದ ಸಂದೇಶವನ್ನು


ಸ್ಪಾತಂತ್ಯ ದಿನ ಸಮಾರಂಭದಲ್ಲಿ ಪ್ರಚುರಪಡಿಸಲು ತಿಳಿಸಲಾಗಿದೆ.


ಈ ಹಿಂದೆ ಕೂಡಾ ಕೇಂದ್ರ ಸರ್ಕಾರ ಕೊರೋನಾ ಯೋಧರನ್ನು ದೀಪ ಬೆಳಗುವ, ಗಂಟೆ ಬಾರಿಸುವ,
ಆಸ್ಪತ್ರೆಗಳ ಮೇಲೆ ವಿಮಾನ ಹಾರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿತ್ತು.


ಕೆಂಪುಕೋಟೆಗೆ ಮಕ್ಕಳಿಲ್ಲ: ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್‌


15ರಂದು ನಡೆಯಲಿರುವ ಸ್ವಾತಂತ್ಯ ದಿನಾಚರಣೆ ಸಮಾರಂಭಕ್ಕೆ ಮಕ್ಕಳನ್ನು ಸೇರಿಸದೇ ಇರಲು


ತೀರ್ಮಾನಿಸಲಾಗಿದೆ. ಅತಿಥಿಗಳ ಸಂಖ್ಯೆ ಕೂಡಾ ಒಂದು ಮಿತಿಯಲ್ಲಿ ಇರಲಿದೆ. ಸಮಾರಂಭ ಸರಳ ಆಗಿರಲಿದ್ದು,


144


"ಸಮಾರಂಭದಲ್ಲಿ ಶಾಲಾ ಮಕ್ಕಳಿಂದ ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಕೆಲವು ಎನ್‌ಸಿಸಿ ಕೆಡೆಟ್‌ಗಳನ್ನು
ಮಾತ್ರ ಆಹ್ವಾನಿಸಲಾಗುತ್ತದೆ. ಸಿಬ್ಬಂದಿ ಪಿಪಿಇ ಕಿಟ್‌ ಧರಿಸಲಿದ್ದಾರೆ' ಎಂದಿದ್ದಾರೆ.


ಆಧಾರ:ಕನ್ನಡಪ್ರಭ, ದಿನಾಂಕ:25.07.2020
39. ಕೋವಿಡ್‌ ಫಲಿತಾಂಶ ತ್ಪರಿತಕ್ಕೆ ಸೂಚನೆ


ಆರಂಭಿಕ ಹಂತದಲ್ಲಿಯೇ ಕೊರೋನಾ ಸೋಂಕನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯ
ಜನರ ಜೀವ ಉಳಿಸುವಂತಹ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಉಪ ಮುಖ್ಯಮಂತ್ರಿ ಮತ್ತು ಜಿಲ್ಲಾ
ಉಸ್ತುವಾರಿ ಸಚಿವ ಡಾ:ಸಿ.ಎನ್‌.ಅಶ್ವತ್ನನಾರಾಯಣ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಬೆಂಗಳೂರಿನಿಂದ
ವಿಡಿಯೋ ಕಾನ್ನೆರೆನ್ಸ್‌ ಮೂಲಕ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ವೇಳೆ ಅವರು ಮಾತನಾಡಿ, ಜಿಲ್ಲೆಯಲ್ಲಿ
ಸಾಧ್ಯವಾದಷ್ಟು ಅಧಿಕ ಸಂಖ್ಯೆಯಲ್ಲಿ ಕೋವಿಡ್‌-19 ಪರೀಕ್ಷೆಗಳನ್ನು ನಡೆಸಿ, ಆದಷ್ಟು ಬೇಗ ಪರೀಕ್ಷಾ ಫಲಿತಾಂಶ
ತಿಳಿಸುವ ನಿಟ್ಟಿನಲ್ಲಿ ಕಾರ್ಯೋನ್ನುಖರಾಗುವಂತೆ ತಿಳಿಸಿದರು.


ಜಿಲ್ಲೆಯಲ್ಲಿ ಇದುವರೆಗೆ 780 ರ್ಯಾಪಿಡ್‌ ಆಂಟಿಜೆನ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯ ಸರ್ಕಾರದಿಂದ
ಇದುವರೆಗೆ 4000 ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ಗಳನ್ನು ನೀಡಲಾಗಿದೆ. ದಿನದ 24 ಗಂಟಿಗಳ ಕಾಲವೂ ಈ
ಬಗೆಯ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿರಬೇಕು. ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಹೆಚ್ಚಿನ
ಸಂಖ್ಯೆಯಲ್ಲಿ ಆ್ಯಂಟಿಜೆನ್‌ ಕಿಟ್‌ಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ:ನಿರಂಜನ್‌ ಅವರು ಮಾತನಾಡಿ ಜಿಲ್ಲೆಯಲ್ಲಿ
ಆರಂಭಿಸಿರುವ ಕೋವಿಡ್‌-19 ಪರೀಕ್ಷಾ ಪ್ರಯೋಗಾಲಯದಲ್ಲಿ ನಾಲ್ಕು ಟ್ರೂನಾಟ್‌ ಪರೀಕ್ಷಾ ಯಂತ್ರಗಳು
ಕಾರ್ಯನಿರ್ವಹಿಸುತ್ತಿದೆ. ಇದರಿಂದ ಪ್ರತಿದಿನ 80ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿ ಫಲಿತಾಂಶಗಳನ್ನು
ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು. ಕೋವಿಡ್‌-19 ಪರಿಸ್ಥಿತಿಯನ್ನು ರಾಮನಗರ
ಜಿಲ್ಲಾಡಳಿತ ಅತ್ಯುತ್ತಮವಾಗಿ ನಿಭಾಯಿಸುತ್ತಿದೆ ಎಂದು ಶ್ಲಾಘಿಸಿದ ಉಪ ಮುಖ್ಯಮಂತ್ರಿಗಳು, ಜಿಲ್ಲಾಡಳಿತ
ಸಾಂಘಿಕ ಪ್ರಯತ್ನದಿಂದ ಮತ್ತಷ್ಟು ಹೆಚ್ಚಿನ ಶ್ರಮ ಹಾಕಿ ಜನರ ಆರೋಗ್ಯ ರಕ್ಷಣೆಗೆ ಪಣತೊಡುವ ಮೂಲಕ ಇಡೀ
ರಾಜ್ಯದಲ್ಲೇ ಜಿಲ್ಲೆಗೆ ಅತ್ಯುತ್ತಮ ಹೆಸರು ತರಲು ಶ್ರಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಟಿಂಪೋಟ್ರಾವಲರ್‌ಗಳನ್ನು ಆ್ಯಂಬುಲೆನ್ಸ್‌ಗಳನ್ನಾಗಿ ಪರಿವರ್ತಿಸಿ ಅವುಗಳನ್ನು ಬಾಡಿಗೆ ಆಧಾರದ ಮೆಲೆ
ಪಡೆದುಕೊಳ್ಳುವ ಹಿನ್ನೆಲೆಯಲ್ಲಿ ಟ್ರಾವಲ್‌ ಸಂಘದ ಪದಾಧಿಕಾರಿಗಳೂಂದಿಗೆ ಚರ್ಚಿಸಲಾಗಿದೆ ಎಂದು
ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮೀಣ ಭಾಗದ ಜನರು ಹೊರಗೆ ಬಾರದಂತೆ ಆಯಾ ಗ್ರಾಮಗಳಲ್ಲೇ
ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ವಿಕ್ರಂ ಅವರು ಜಿಲ್ಲಾ ಉಸ್ತುವಾರಿ
ಸಚಿವರಿಗೆ ವಿವರಿಸಿದರು.


ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:25.07.2020
40. ಅಸಹಕಾರಕ್ಕೆ ಸರ್ಕಾರದ ಶಾಕ್‌ ಟ್ರೀಟ್‌ಮೆಂಟ್‌


ಸೋಂಕಿತರ ಚಿಕಿತ್ತೆಗೆ ಸಹಕರಿಸದ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ಶಾಕ್‌
ಟ್ರೀಟ್‌ಮೆಂಟ್‌ಗೆ ಸರ್ಕಾರ ಮುಂದಾಗಿದ್ದು, ಮೂಲ ಸವಲತ್ತುಗಳ ಕಡಿತದ ಕಾನೂನು ಅಸ್ತ್ರ ಪ್ರಯೋಗಿಸಲು
ಸಜ್ಜಾಗಿದೆ.

ಪ್ರಾರಂಭಿಕ ಹಂತದಲ್ಲಿ ಬೆಂಗಳೂರು ದಕ್ಷಿಣ ವಲಯದ 8 ಖಾಸಗಿ ಆಸ್ಪತ್ರೆಗಳಿಗೆ ವಿಪತ್ತು ನಿರ್ವಹಣಾ
ಕಾಯ್ದೆಯಡಿ ಸರ್ಕಾರ ನೋಟಿಸ್‌ ರವಾನಿಸಲಿದೆ. ಮೂಲ ಸವಲತ್ತುಗಳ ಕಡಿತ. ನೋಟಿಸ್‌ಗೂ ಸ್ಪಂದಿಸದಿದ್ದರೆ
ವಿಪತ್ತು ನಿರ್ವಹಣೆ, ಕೆಪಎಂಇ ಹಾಗೂ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಗಳಡಿ ಕ್ರಿಮಿನಲ್‌ ಮೊಕದ್ದಮೆ
ಹೂಡಲಿದೆ.


ರಾಜಧಾನಿಯಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚಿಕಿತ್ಸೆಗೆ ಹಾಸಿಗೆಗಳ ಕೊರತೆ
ಸರಿದೂಗಿಸಲು ಖಾಸಗಿ ನೆರವು ತುರ್ತು ಅಗತ್ಯವಾಗಿದೆ. ಸಂಘರ್ಷದ ಬದಲಿಗೆ. ಎಲ್ಲರನ್ನೂ ವಿಶ್ನಾಸಕ್ಕೆ
ತೆಗೆದುಕೊಂಡು ಮುನ್ನಡೆಯಲು ಯೋಚಿಸಿದ್ದರೂ ಪ್ರಯೋಜನವಾಗಿಲ್ಲ. ಪದೇಪದೇ ಸಭೆ ಕರೆದು ಚರ್ಚಿಸಿ


145


ಒಪ್ಪಂದದಂತೆ ಶೇ.50 ಹಾಸಿಗೆ ಬಿಟ್ಟುಕೊಡಲು ತಿಳಿಸಿ ತಿಂಗಳು ಕಳೆದರೂ ಯಾವುದೇ ಬದಲಾವಣೆಯಾಗಿಲ್ಲ.
ಮಹಾರಾಷ್ಟ, ದೆಹಲಿ ಸರ್ಕಾರಗಳ ಮಾದರಿಯಲ್ಲಿ ಕಠಿಣವಾಗಲು ನಿರ್ಧರಿಸಿದೆ.


ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಗೃಹ ಕಚೇರಿ "ಕೃಷ್ಣಾ'ದಲ್ಲಿ ದಕ್ಷಿಣ ವಲಯದ ಸಭೆ
ನಡೆಸಿ, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳ ಧೋರಣೆ ಬಗ್ಗೆ ಯಡಿಯೂರಪ್ಪ ತೀವ್ರ
ಅಸಮಾಧಾನ ಹೊರಹಾಕಿದರು. ಮಾತುಕತೆ ನಡೆಸಿ ಮನವೊಲಿಸಿದ್ದಾಯಿತು. 4 ಬಾರಿ ಸಭೆ ನಡೆಸಿ ಒಪ್ಪಿಗೆಯಂತೆ
ನಡೆದುಕೊಳ್ಳಲು ಸೂಚಿಸಿದ್ದಾಯಿತು. ಪ್ರತಿ ಬಾರಿ ಸಹಕರಿಸುತ್ತೇವೆ ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳನ್ನು
ಕೊಡುತ್ತೇವೆ ಎಂದು ಹೇಳುತ್ತ ಮೊಂಡುತನ ತೋರಿದ್ದಾರೆ. ಖಡಕ್‌ ಎಚ್ಚರಿಕೆ ಕೊಟ್ಟ ಮೇಲೂ ಸರಿದಾರಿಗೆ
ಬಾರದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರದ
ಆದೇಶಗಳನ್ನು ಪಾಲನೆ ಮಾಡದವರ ವಿರುದ್ಧ ಕಾನೂನು ಅಸ್ತ್ರ ಚಲಾಯಿಸಿ, ಯಾವುದೇ ನೆಪವೊಡ್ಡಬೇಡಿ.
ಸೋಂಕಿತರ ಚಿಕಿತ್ಲೆಗೆ ನಿರಾಕರಿಸಿದ ಖಾಸಗಿ ಆಸ್ಪತ್ರೆಗಳಿಗೆ ಮೂಲ ಸವಲತ್ತು ಕಡಿತಗೊಳಿಸಿ, ವಿಪತ್ತು ನಿರ್ವಹಣಾ
ಕಾಯ್ದೆಯಡಿ ಕ್ರಮ ಜರುಗಿಸಿ ಎಂದು ತಾಕೀತು ಮಾಡಿದರು. ಕಂದಾಯ ಹಾಗೂ ವಲಯದ ಉಸ್ತುವಾರಿ ಸಚಿವ
ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಉದಯ ಗರುಡಚಾರ್‌, ರವಿ ಸುಬ್ರಮಣ್ಯ, ಮುಖ್ಯ
ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಉಪಸ್ಥಿತರಿದ್ದರು.


ನಿಗದಿತ ಗುರಿ ಮುಟ್ಟಿರುವುದು ಸೇರಿ ಪ್ರತಿ ವಾರದ ಪ್ರಗತಿ ವರದಿ ನನಗೆ ನೀಡಬೇಕು. ಆಯಾ ದಿನದ
ಮಾಹಿತಿಯನ್ನು ವಲಯ ಉಸ್ತುವಾರಿ ಸಚಿವರಿಗೆ ಒಪ್ಪಿಸಿ, ಸಮಸ್ಯೆಗಳಿದ್ದರೆ ತಕ್ಷಣ ಬಗೆಹರಿಸಿಕೊಳ್ಳಿ. ಶಂಕಿತರ
ಟೆಸ್ಟ್‌ಗೆ ಮುನ್ನ ಮೊಬೈಲ್‌ ಒಟಿಪಿ ಅಥವಾ ಬೇರೆ ದಾಖಲೆಯನ್ನು ಪಡೆದರೆ, ವರದಿ ಬಂದ ನಂತರ ಸೋಂಕು
ದೃಢಪಟ್ಟ ವ್ಯಕಿಯನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿದೆ. ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದದ
RR Fe ಆರೈಕೆ ಕೇಂದಕ್ಕೆ `ಶೋಗ ಲಕ್ಷಣರಹಿತರನ್ನು ದಾಖಲಿಸಬೇಕು. ಇದರಿಂದ ನಗರದಲ್ಲಿರುವ
ಆಸ್ಪತ್ರೆಗಳ ಮೇಲೆ ಒತ್ತಡ ತಗ್ಗಲಿದ್ದು ಇತರೆ ಕಾಯಿಲೆ ಉಳ್ಳವರ ಚಿತೆಗೂ ಕೆಲ ಆಸ್ಪತ್ರೆಗಳಲ್ಲಿ ಮೀಸಲಿಡಬೇಕು
ಎಂದು ಮುಖ್ಯಮಂತ್ರಿಯವರು ಸೂಚಿಸಿದರು.


ಆಧಾರ:ವಿಜಯವಾಣಿ, ದಿನಾ೦ಕ:25.07.2020
41. ಕೋವಿಡ್‌ ಶವ ಸಂಸ್ಕಾರ ಉಚಿತ


ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಬಿಬಿಎಂಪಿ ವ್ಯಾಪ್ತಿಯ ಚಿತಾಗಾರದಲ್ಲಿ
ವಿಧಿಸುತ್ತಿದ್ದ ಶುಲ್ಪಗಳಲ್ಲಿ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ. ಕೊರೋನಾ ಸೋಂಕಿನಿಂದ


ಮೃತಪ ಪಟ್ಟವರ ಸಂಸ್ಕಾರ ಗೌರವಯುತವಾಗಿ ನಡೆಸಲು ಸರ್ಕಾರ ಆದ್ಯತೆ ನೀಡಿದ್ದು, ಚಟ್ಟಕ್ಕೆ ರೂ.900 ದಹನಕ್ಕೆ


ರೂ.250 ಮತ್ತು ಬೂದಿ ಕೊಂಡೊಯ್ಯುವ ಮಡಿಕೆಗೆ ರೂ.100 ವಿಧಿಸಲಾಗುತಿತ್ತು ಈ 'ಶುಲ್ಪಗಳಿಗೆ ವಿನಾಯಿತಿ
ನೀಡಲಾಗುತ್ತಿದ್ದು, ಈ ವೆಚ್ಚವನ್ನು PN ಭರಿಸಲಿದೆ ಎಂದು ಸಚಿವ ಆರ್‌. ಅಶೋಕ್‌ ತ೪ಸಿದ್ದಾರೆ.


ಸೋಂಕಿನಿಂದ ಮೃತಪಟ್ಟವರ ಶವ ಕೊಂಡೊಯ್ಯಲು ಹಿಂದೇಟು ಹಾಕಿದ ಘಟನೆಗಳು ನಡೆದಿದ್ದು,
ಇಂತಹ ಶವಗಳನ್ನು ದಹನ ಮಾಡುವವರಿಗೆ ಸರ್ಕಾರ ಪ್ರತಿ ಶವ ದಹನಕ್ಕೂ ರೂ. 500 ಪ್ರೋತ್ಲಾಹಧನ
ನೀಡಲಿದೆ ಎಂದು ಸಚಿವರು ತಿಳಿಸಿದರು.
ಸಹಕರಿಸಲು ಮನವಿ: ಬೆಂಗಳೂರಿನ 5 ಕಡೆಗಳಲ್ಲಿ ಸರ್ವಧರ್ಮಗಳ ರುದಭೂಮಿ ನಿರ್ಮಿಸಲು 23 ಎಕರೆ
ಜಮೀನು ಗುರುತಿಸಿದ್ದು, ಈ ಸ್ಥಳಗಳಲ್ಲಿ ಜನ ವಿರೋಧವಿದೆ. ಸೋಂಕಿನಿಂದ ಮೃತರಾದವರ ಶರೀರದಿಂದ 3
ತಾಸಿನ ಬಳಿಕ ವೈರಸ್‌ ಹರಡುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದ್ದು, ಜನರು ಆತಂಕ ಪಡಬೇಕಾಗಿಲ್ಲ.
ಮಾನವೀಯತೆ ಹಾಗೂ ಭಾರತೀಯ ಸಂಪ್ರದಾಯದ ದೃಷಿಯಿಂದ ವಿರೋಧಿಸುವುದು ಸರಿಯಲ್ಲ. ಆದ್ದರಿಂದ
ಎಲ್ಲರೂ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಆಧಾರ:ವಿಜಯವಾಣಿ, ದಿನಾ೦ಕ:26.07.2020
42. ದಿಟ್ಟ ನಡೆಗೆ ಸವಾಲಿನ ಹಾದಿ


ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವರ್ಷ ಪೂರೈಸಿ 2ನೇ ವರ್ಷಕ್ಕೆ
ಕಾಲಿಡುತ್ತಿದೆ. ಆದರೆ ಈ ಅವಧಿಯಲ್ಲಿ ಯಡಿಯೂರಪ್ಪ ಅವರು "ಸಂತಸ-ಸಂಕಟ' ಎರಡನ್ನೂ ಅನುಭವಿಸಿದ್ದಾರೆ.


146


ಎಲ್ಲಕ್ಕಿಂತ ಮುಖ್ಯವಾಗಿ ಎದುರಾದ ಸವಾಲುಗಳನ್ನು ದಿಟ್ಟತನದಿಂದಲೇ ಎದುರಿಸಿ ರಾಜ್ಯದಲ್ಲಿ ಸುಭದ್ರ ಹಾಗೂ
ಅಭಿವೃದ್ಧಿಶೀಲ ಆಡಳಿತ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ನಾಯಕತ್ವದ ಛಾಪು ಮತ್ತಷ್ಟು ಹೊಳೆಯುವಂತೆ
ಕಾರ್ಯವೈಖರಿ ಮೂಲಕ ಸಾಬೀತುಪಡಿಸಿದ್ದಾರೆ.


ಕೊರೋನಾದಿಂದಾಗಿ ಆರ್ಥಿಕ ಬೆಳವಣಿಗೆಗೆ ದೊಡ್ಡ ಪೆಟ್ಟು ಬಿದ್ದಿರುವುದರಿಂದ ರಾಜ್ಯದ ಆರ್ಥಿಕ
ಸಂಕಟವನ್ನು ಯಾವ ರೀತಿ ನಿಭಾಯಿಸಿಕೊಂಡು, ಅಭಿವೃದ್ದಿ ಕೆಲಸಗಳಿಗೆ ಚಾಲನೆ ಕೊಡುತ್ತಾರೆ ಎಂಬುದು ಸಹ
ಯಡಿಯೂರಪ್ಪ ನಾಯಕತ್ವವನ್ನು ಮತ್ತೊಮ್ಮೆ ಒರೆಗೆ ಹಚ್ಚಲಿದೆ.


ಹಿಂದಿನ ಜೆಡಿಎಸ್‌-ಕಾಂಗೆಸ್‌ ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳ ನಾಯಕರ ನಡುವಿನ ಆಂತರಿಕ
ಕಲಹದಿಂದ ದೋಸ್ತಿ ಸರ್ಕಾರ ಪತನಗೊಂಡ ಬಳಿಕ ಉದ್ದವಿಸಿದ ರಾಜಕೀಯ ಸನ್ನಿವೇಶದ ಲಾಭ ಪಡೆದ
ಬಿಜೆಪಿ, ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆದರೆ ಸಿಎಂಗೆ ಆರಂಭದಿಂದಲೂ ಸಂತಸಗಳಿಗಿಂತ
ಸಂಕಷ್ಟಗಳೇ ಹೆಚ್ಚು ಎದುರಾದವು. ಇವೆಲ್ಲಾ ಯಡಿಯೂರಪ್ಪ ನಾಯಕತ್ಸವನ್ನು ಒರೆಗೆ ಹಚ್ಚಿದ್ದವು. ತಮ್ಮ
ಸುದೀರ್ಪ ರಾಜಕೀಯ ಅನುಭವ, ಆಡಳಿತ ಹಾಗೂ ಪ್ರತಿಪಕ್ಷ ಎರಡೂ ಕಡೆಯೂ ಕೆಲಸ ಮಾಡಿದ
ಅನುಭವಗಳ ಮೂಲಕ ಎಲ್ಲವನ್ನೂ ಚಾಣಾಕ್ಷತನದಿಂದ ನಿಭಾಯಿಸಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಳಿ
ತಪ್ಪಿದ್ದ ಆಡಳಿತ ವ್ಯವಸ್ಥೆ ಸರಿದಾರಿಗೆ ತರುವುದು. ಜಡ್ಡುಗಟ್ಟಿದ್ದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದು.
ರಾಜ್ಯದಲ್ಲಿ ಉಂಟಾಗಿದ್ದ ಅಭದ್ರ ಸರ್ಕಾರದ ವಾತಾವರಣ ಕೊನೆಗಾಣಿಸಿ ಅಭಿವೃದ್ಧಿಶೀಲ ಆಡಳಿತ ನೀಡುವುದು
ಸಿಎಂಗೆ ಪ್ರಥಮ ಸವಲಾಗಿತ್ತು ವರ್ಷದ ಆಡಳಿತ ಮೆಲುಕು ಹಾಕಿದಾಗ ಸಿಎಂ ಈ ನಿಟ್ಟಿನಲ್ಲಿ
ಯಶಸ್ಸಿಯಾಗಿರುವುದು ಗೋಚರಿಸುತ್ತಿದೆ. ಕಳದ ವರ್ಷದ ಪ್ರವಾಹ ನಿರ್ವಹಣೆ, ಈಗಿನ ಕೊರೋನಾ ಸೋಂಕು
ವಿರುದ್ದದ ಕಾರ್ಯಾಚರಣೆಗೆ ಕೈಗೊಂಡ ಕ್ರಮಗಳು, ಕಳದ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯ
ಫಲಿತಾಂಶ ಅವಲೋಕಿಸಿದರೆ “ಒನ್‌ ಮ್ಯಾನ್‌ ಆರ್ಮಿ'ಯಂತೆ ಯಡಿಯೂರಪ್ಪ ಅವರು ಆಡಳಿತ
ನಿಭಾಯಿಸುತ್ತಿದ್ದಾರೆ.


ಸಕಾಲಿಕ ಸ್ಪಂದನೆ: ಕಳೆದ ವರ್ಷ ಅಧಿಕಾರ ವಹಿಸಿಕೊಂಡ ತಕ್ಷಣವೇ ಎದುರಾದ ಪ್ರವಾಹ ಪರಿಸ್ನಿತಿ ಸಂದರ್ಭದಲ್ಲಿ


[()


ಸಂಪುಟ ರಚನೆ ಆಗಿರಲಿಲ್ಲ. ಮುಖ್ಯಮಂತ್ರಿಯಾಗಿ ಒಬ್ಬರಷ್ಟೇ ಅಧಿಕಾರ ಸ್ಟೀಕರಿಸಿದ್ದರು. ಸಂಪುಟ ರಚನೆ
ವಿಳಂಬವಾದರೂ ಮನೆಯಲ್ಲಿ ಕೂರಲಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ
ನೀಡಿ ಪರಿಹಾರ ಪುನರ್ವಸತಿ ಕಾರ್ಯಕ್ರಮಗಳನ್ನು ಖುದ್ದು ಪರಾಮರ್ಶೆ ನಡೆಸಿದರು. ಸಂತ್ರಸ್ತರಲ್ಲಿ ಧೈರ್ಯ,
ವಿಶ್ವಾಸ ತುಂಬುವ ಕೆಲಸ ಮಾಡಿದರು. ಇದರಿಂದಾಗಿ ಜಿಲ್ಲಾಡಳಿತ ವ್ಯವಸ್ಥೆ ಸಕಾಲದಲ್ಲಿ ಸಂತ್ರಸ್ತರಿಗೆ ಸ್ಪಂದಿಸಲು
ಸಾಧ್ಯವಾಯಿತು. ಅದೇ ರೀತಿ ಕಳೆದ 4 ತಿಂಗಳಿಂದ ಕೊರೋನಾ ನಿಯಂತ್ರಣದ ವಿಷಯದಲ್ಲಿ ನಿತ್ಯವೂ ಒಂದಲ್ಲ
ಒಂದು ಸಭೆ, ಅಧಿಕಾರಿಗಳ ಜೊತೆ ನಿರಂತರ ಸಮಾಲೋಚನೆ, ಸಹೋದ್ಯೋಗಿಗಳಿಗೆ ಸಲಹೆ, ಸೂಚನೆ, ಎಚ್ಚರಿಕೆ
ಕೊಡುವ ಮೂಲಕ ಇಡೀ ಆಡಳಿತ ವ್ಯವಸ್ಥೆಯನ್ನು ತಮ್ಮತ್ತ ಕೇಂದ್ರೀಕರಿಸಿಕೊಂಡು "ಒನ್‌ ಮ್ಯಾನ್‌ ಆರ್ಮಿ” ರೀತಿ
ಕೆಲಸ ನಿರ್ವಹಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಿರಿಯರ ಮೆಚ್ಚುಗೆಗೂ
ಪಾತ್ರರಾಗಿದ್ದಾರೆ.
ವರ್ಷದಲ್ಲಿ ಮಾಡಿರುವ ಸಾಧನೆಗಳು

> ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ರೂ.6108 ಕೋಟಿ ವೆಚ್ಚ ದಾಖಲೆ ಪ್ರಮಾಣದಲ್ಲಿ ಪರಿಹಾರ.
ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳಿಗೆ ಹೆಚ್ಚುವರಿ ರೂ. 4 ಸಾವಿರ ವಿತರಣೆ.
ನೇಕಾರರು, ಮೀನುಗಾರರ ಬಹುಕಾಲದ ಸಾಲ ಮನ್ನಾ.
ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮೂಲಕ "ನನ್ನ ಬೆಳೆ ನನ್ನ ಹಕ್ಕು' ಸಿದ್ದಾಂತ ಸಾಕಾರ.
ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ.


ಕೃಷಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿ


VW VY VY VY VY VY


ರೈತರು, ಉದ್ಯಮಿಗಳ ಅನುಕೂಲಕ್ಕೆ ಭೂ ಸುಧಾರಣೆ ಕಾಯಿದೆ ಸೆಕ್ಷನ್‌ 79ಎ, ಬಿ ಮತ್ತು ಸಿ ರದ್ದು


147
ಎದುರಿಸಿದ ಪ್ರಮುಖ ಸವಾಲುಗಳು
ಕಳೆದ ವರ್ಷ ಭಾರಿ ಮಳೆಯಿಂದ 25 ಜಿಲ್ಲೆಗಳ 119 ತಾಲ್ಲೂಕುಗಳಲ್ಲಿ ಉಂಟಾದ ಭೀಕರ ಪ್ರವಾಹ.
ಪ್ರವಾಹ, ಕೊರೋನಾದಂತಹ ಸಂಕಷ್ಟಗಳ ನಡುವೆಯೂ ಆರ್ಥಿಕ ಸ್ಥಿರತೆ ಕಾಪಾಡುವುದು.
ಸರ್ಕಾರದ ಅಳಿವು ಉಳಿವಿನ ಪ್ರಶ್ನೆಗೆ ಕಾರಣವಾಗಿದ್ದ 15 ಕ್ಷೇತಗಳ ಉಪ ಚುನಾವಣೆ.
ಕೊರೋನಾ ತಡೆಗೆ ದಿಢೀರ್‌ ಘೋಷಿಸಿದ ಲಾಕ್‌ಡೌನ್‌ನಿಂದ ಎದುರಾದ ಬಿಕ್ಕಟ್ಟಿನ ನಿರ್ವಹಣೆ.


ಅಭಿವೃದ್ಧಿ ಹಾಗೂ ನಾನಾ ಸಾಮಾಜಿಕ ಭದತಾ ಕೆಲಸಗಳನ್ನು ಮುಂದುವರಿಸುವ ಸವಾಲು.


VV VY VY VY VY


ತಮ ನಾಯಕತದ ವಿರುದ ಅಲಲಿ ಕೇಳಿ ಬರುತಿದ ಅಪಸರಗಳು.
[J FE) [) ದಾದು Rr) )
ಆಧಾರ:ವಿಜಯಕರ್ನಾಟಕ, ದಿನಾ೦ಕ:26.07.2020
43. ಕೃಷಿ ಉತ್ಪನ್ನಗಳು ಇನ್ನು ಮುಕ್ತ ಮಾರಾಟ
ಇತ್ತೀಚೆಗೆ ಕರ್ನಾಟಕದಲ್ಲಿ ರೈತರು, ನಿಗದಿತ ಮಾರುಕಟ್ಟೆ ಹೊರತಾಗಿ ತಮಗೆ ಬೇಕಾದ ಕಡೆ ಕೃಷಿ


ಉತ್ತನ್ನ ಮಾಡಬಹುದು ಎಂದು ಅಲ್ಲಿನ ಸರ್ಕಾರ ಆಧ್ಯಾದೇಶ ಹೊರಡಿಸಿದ ಬೆನ್ನಲ್ಲೇ. ಕೇಂದ್ರ ಸರ್ಕಾರದಿಂದ
ಕೂಡ ಇದೇ ಮಾದರಿಯ 2 ಸುಗ್ರೀವಾಜ್ಞೆಗಳ ಅಧಿಸೂಚನೆ ಪ್ರಕಟವಾಗಿದೆ.


ಈ ಪ್ರಕಾರ ನೋಂದಾಯಿತ ಮಾರುಕಟ್ಟೆಯ ಹೊರತಾಗಿ ರೈತರು ತಮ್ಮ ಇಷ್ಟಕ್ಕೆ ಅನುಗುಣವಾಗಿ ರಾಜ್ಯದ
ಗಡಿ ದಾಟಿಯೂ ಕೃಷಿ ಉತ್ಪನ್ನಗಳನ್ನು ಮಾರಲು ಅವಕಾಶ ಸಿಗಲಿದೆ ಹಾಗೂ ಖಾಸಗಿ ಕಂಪೆನಿಗಳ ಜೊತೆ ಬೆಳೆ
ಬೆಳೆಯುವ ಮುನ್ನವೇ ಒಪ್ಪಂದ ಮಾಡಿಕೊಂಡು ಉತ್ಪನ್ನಗಳನ್ನು ಮಾರಬಹುದಾಗಿದೆ.


ಕೃಷಿ ಉತ್ತನ್ನ ವ್ಯಾಪಾರ ಹಾಗೂ ವಾಣಿಜ್ಯ ಸುಗೀವಾಜ್ಞೆ' ಮತ್ತು "ಕೃಷಿ ಸಬಲೀಕರಣ ಹಾಗೂ ದರ


ರಕ್ಷಣಾ-ಕೃಷಿ ಸೇವೆ ಒಪ್ಪಂದ” ಎಂಬ ಆಧ್ಯಾದೇಶ ಹೊರಡಿಸಲು ಜೂನ್‌ 5 ರಂದೇ ನಿರ್ಧರಿಸಲಾಗಿತ್ತು. ಈ
ಆಧ್ಯಾದೇಶಗಳ ಅಧಿಸೂಚನೆಯನ್ನು ಈಗ ಕೃಷಿ ಸಚಿವಾಲಯ ಪ್ರಕಟಿಸಿದೆ.


ಸುಗೀವಾಚಜ್ನೆಯಲ್ಲೇನಿದೆ


> ರೈತರು ತಮ್ಮ ಉತ್ಪನ್ನಗಳನ್ನು ನೋಂದಾಯಿತ ಎಪಿಎಂಸಿ ಹೊರತುಪಡಿಸಿ ಅಂತರರಾಜ್ಯದಲ್ಲಿ
ಮಾರಬಹುದು.


> ರೈತರು ಉತ್ಪ್ತನ್ನಗಳನ್ನು ಗೋದಾಮು, ಕೋಲ್ಡ್‌ ಸ್ಫೋರೇಜ್‌, ಕಾರಾನೆ ಆವರಣ- ಹೀಗೆ ಎಲ್ಲಾ
ಕಡೆ ಮಾರಬಹುದು.


> ನಿರ್ದಿಷ್ಟ ವ್ಯಾಪಾರ ಪ್ರದೇಶದಲ್ಲಿ ಇ-ಟ್ರೇಡಿಂಗ್‌ಗೆ ಅವಕಾಶ.


> ಇ-ಟ್ರೇಡಿಂಗ ಮೂಲಕ ಕಂಪೆನಿಗಳು, ಕೃಷಿ ಸೊಸೈಟಿಗಳು, ಕೃಷಿ ಉತ್ಪನ್ನ ಸಂಸ್ಥೆಗಳು ಉತ್ಪನ್ನ
ಖರೀದಿಸಬಹುದು.


>» ಇ-ಟ್ರೇಡಿಂಗ್‌ ನಿಯಮ ಉಲ್ಲಂಘಿಸಿದರೆ ರೂ.50 ಸಾವಿರ ದಿಂದ ರೂ.10 ಲಕ್ಷ ವರೆಗೆ ದಂಡ
ವಿಧಿಸಲು ಅವಕಾಶವಿದೆ.


ಕೃಷಿ ಉತ್ಪನ್ನಗಳನ್ನು ಖರೀದಿಸಿದವರು ಅದೇ ದಿನವೇ ರೈತನಿಗೆ ಹಣ ಕೊಡಬೇಕು. ಕೆಲವು ನಿರ್ದಿಷ್ಟ
ಸಂದರ್ಭದಲ್ಲಿ 3 ವಾರದೊಳಗೆ ಕೊಡಬೇಕು.


ಆಧಾರ:ಕನ್ನಡಪ್ರಭ, ದಿನಾಂಕ:27.07.2020


148


44. ಬಿಐಇಸಿ ಕೊರೋನಾ ಆರೈಕೆ ಕೇಂದ್ರ ಉದ್ದಾಟನೆ


ನಗರದಲ್ಲಿ ಕೊರೋನಾ ಸೋಂಕಿತರ(ಸೋಂಕಿನ ಲಕ್ಷಣ ಇಲ್ಲದವರ) ಆರೈಕೆ ಮಾಡುವ ಉದ್ದೇಶದಿಂದ
ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದದಲ್ಲಿ ನಿರ್ಮಿಸಲಾದ ಕೊರೋನಾ ಆರೈಕೆ ಕೇಂದ್ರವನ್ನು
ಉಪ ಮುಖ್ಯಮಂತ್ರಿ ಡಾ:ಸಿ.ಎನ್‌.ಅಶ್ವತ್ಸ್ನನಾರಾಯಣ ಹಾಗೂ ಕಂದಾಯ ಸಚಿವ ಆರ್‌.ಅಶೋಕ್‌
ಉದ್ರಾಟಿಸಿದರು.


ಆರೈಕೆ ಕೇಂದದ ಸಭಾಂಗಣ 5ರಲ್ಲಿ ವ್ಯವಸ್ಥೆ ಮಾಡಲಾಗಿರುವ 24 ವಾರ್ಡ್‌ಗಳಲ್ಲಿ 1,536
ಹಾಸಿಗೆಗಳನ್ನು ಸೋಂಕಿತರ ಸೇವೆಗೆ ಮುಕ್ತಗೊಳಿಸಲಾಗಿದೆ. ಆರೈಕೆ ಕೇಂದ್ರದಲ್ಲಿ ಒಟ್ಟು 6,500 ಹಾಸಿಗೆ ವ್ಯವಸ್ಥೆ
ಮಾಡಲಾಗಿದ್ದು, ಇದರಲ್ಲಿ ಐದು ಸಾವಿರ ಹಾಸಿಗೆಗಳನ್ನು ಸೋಂಕಿತರ ಆರೈಕೆಗೆ, ಉಳಿದ 1.500 ಹಾಸಿಗೆಯನ್ನು


ವೈದ್ಯಕೀಯ ಮತ್ತು ಸಹಾಯಕ ಸಿಬ್ಬಂದಿಗೆ ಮೀಸಲಿರಿಸಲಾಗಿದೆ.


ಆರೈಕೆ ಕೇಂದದ ಊಟದ ಕೊಠಡಿಯಲ್ಲಿ ಒಂದು ಬಾರಿಗೆ 350 ಮಂದಿ ಆಹಾರ ಸೇವಿಸಬಹುದಾಗಿದೆ.
ಕೊಠಡಿಯಲ್ಲಿ ಟಿವಿ, ಆಸನದ ವ್ಯವಸ್ಥೆ, ಸೋಫಾ, ಚೇರ್‌ ಹಾಗೂ ಫ್ಯಾನ್‌ ವ್ಯವಸ್ಥೆ ಕಲ್ಲಿಸಲಾಗಿದೆ. ಪುರುಷ
ಹಾಗೂ ಮಹಿಳೆಯರಿಗೆ ಪ್ರತ್ವೇಕ ಶೌಚಾಲಯಗಳ ವ್ಯವಸ್ಥೆ, ಸ್ನಾನದ ಕೋಣೆ ಹಾಗೂ ರೋಗಿಗಳ ಸಮಸ್ಯೆ
ಬಗೆಹರಿಸುವ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿ ನಿರ್ಮಾಣ ಮಾಡಲಾಗಿದೆ.


ಇನ್ನು ಸೋಂಕು ದೃಢಪಟ್ಟವರನ್ನು ದಾಖಲಿಸಿಕೊಳ್ಳಲು ಪ್ರತ್ತೇಕ ಕೊಠಡಿ ನಿರ್ಮಾಣ ಮಾಡಲಾಗಿದ್ದು,
ಕೋವಿಡ್‌ ಆರೈಕೆ ಕೇಂದ್ರವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಸುರಕ್ಷತಾ
ಕ್ರಮವಾಗಿ ಮಾರ್ಷಲ್‌, ಕೆಎಸ್‌ಆರ್‌ಪಿ, ಅಗ್ನಿಶಾಮಕ ಸಿಬ್ಬಂದಿ ಇದ್ದಾರೆ. ಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದ
ಅಗ್ನಿಶಾಮಕ ವಾಹನಗಳನ್ನು ಇರಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಎಂ
ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಮೇಯರ್‌ ಗೌತಮ್‌ ಕುಮಾರ್‌, ಉಪ ಮೇಯರ್‌ ರಾಮ್‌
ಮೋಹನ್‌ ರಾಜು, ಕೋವಿಡ್‌ ಆರೈಕೆ ಕೇಂದ್ರದ ಮುಖ್ಯಸ್ಥ ರಾಜೇಂದ್ರ ಕುಮಾರ್‌ ಕಟಾರಿಯಾ, ಆಯುಕ್ತ
ಎನ್‌.ಮಂಜುನಾಥ್‌ ಪ್ರಸಾದ್‌ ಇದ್ದರು.


ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಅತಿದೊಡ್ಡ ಕೋವಿಡ್‌ ಕೇರ್‌ ಕೇಂದ್ರ ಬಳಕೆಗೆ
ಲಭ್ಯವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ:ಸಿ.ಎನ್‌.ಅಶ್ವತ್ಸನಾರಾಯಣ ತಿಳಿಸಿದರು. ಈ ಆರೈಕೆ ಕೇಂದದಲ್ಲಿ
ಸೋಂಕಿತರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ರಿಸಲಾಗಿದೆ. 5,000 ಹಾಸಿಗೆಗಳು ಸಿದ್ದವಾಗಿದ್ದು, 1536
ಹಾಸಿಗೆಗಳು ಕೂಡಲೇ ಬಳಕೆಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.


ಮಂಚದ ಗುಣಮಟ್ಟ ಪರಿಶೀಲನೆ: ಕೋವಿಡ್‌ ಪರಿಕರಗಳ ಗುಣಮಟ್ಟದ ಬಗ್ಗೆ ಕೆಲವರು ತಕರಾರು ತೆಗೆದಿರುವ
ಹಿನ್ನೆಲೆಯಲ್ಲಿ ಅವರು 170 ಕೆಜಿ ತೂಕದ ವ್ಯಕ್ತಿಯೊಬ್ಬರನ್ನು ಹಾಸಿಗೆಯ ಮೇಲೆ ಮಲಗಿಸಿ ಮಂಚದ ಸಾಮರ್ಥ್ಯದ
ಪರಿಶೀಲನೆ ನಡೆಸಿದರು. ಸೌಲಭ್ಯ ಹಾಗೂ ಗುಣಮಟ್ಟದ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಈ ಕೇಂದದಲ್ಲಿ
ರೋಗಿಗಳು ದಾಖಲಾದಂತೆ ಹಾಸಿಗೆಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು. ರೋಗ ಲಕ್ಷಣವಿಲ್ಲದವರು ಇಲ್ಲಿ
ಚಿಕಿತ್ಸೆ ಪಡೆಯಲಿದ್ದಾರೆ ಇನ್ನು ಕೊರೋನಾ ಪರೀಕ್ಷಾ ವರದಿ ಇನ್ನು ತಡವಾಗುವುದಿಲ್ಲ. ಸ್ಯಾಂಪಲ್‌ ಕೊಟ್ಟ
ಅರ್ಧಗಂಟೆಯಲ್ಲೇ ರಿಸಲ್ಫ್‌ ಸಿಗಲಿದೆ ಎಂದರು.


ಆಧಾರ:ಉದಯವಾಣಿ, ದಿನಾಂಕ:28.07.2020
45. ಕಾರ್ಗಿಲ್‌ ವಿಜಯ್‌ ದಿವಸ: ದೇಶಕ್ಕಾಗಿ ಮಡಿದ ಯೋಧರಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ


"ಕಾರ್ಗಿಲ್‌ ಯುದ್ದದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳೊಂದಿಗೆ ನಾವಿದ್ದೇವೆ' ಎಂದು
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ನಗರದ
ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ 21ನೇ ಕಾರ್ಗಿಲ್‌ ವಿಜಯ್‌ ದಿವಸ್‌ ಕಾರ್ಯಕ್ರಮದಲ್ಲಿ ಹುತಾತ್ಮ
ಯೋಧರಿಗೆ ಗೌರವ ಸಲ್ಲಿಸಿ, ಬಳಿಕ ಅವರು ಮಾತನಾಡಿ, "ದೇಶಕ್ಕಾಗಿ ಮಡಿದ ಯೋಧರ ಸಾಹಸಗಾಥೆ
ಯುವಪೀಳಿಗೆಗೆ ಎಂದಿಗೂ ಸ್ಪೂರ್ತಿ. ಅವರ ಶೌರ್ಯ ಮತ್ತು ತ್ಯಾಗಕ್ಕೆ ಸದಾ ಕೃತಜ್ಞಧಾಗಿದ್ದೇವೆ. ಪ್ರವಾಹ,


149


ಭೂಕಂಪ, ಸುನಾಮಿಯಂತಹ ವಿಪತ್ತಿನ ಸಂದರ್ಭಗಳಲ್ಲೂ ನಾಡಿನ ರಕ್ಷಣೆಗೆ ಧಾವಿಸುವ ಯೋಧರ ಸಾಹಸ
ಅನುಕರಣೀಯ”? ಎಂದರು.


"1999ರ ಕಾರ್ಗಿಲ್‌ ಯುದ್ದದಲ್ಲಿ ರಾಜ್ಯದ 16 ಮಂದಿ ಸೇರಿ ಒಟ್ಟು 527 ಸೈನಿಕರು ಹುತಾತ್ಮರಾದರು.
ಯುದ್ದದಲ್ಲಿ ಹೋರಾಡಿದ ಮಾಜಿ ಸೈನಿಕರು ಹಾಗೂ ಹುತಾತ್ಮರಿಗೆ ಸರ್ಕಾರ ನೆರವು ನೀಡುತ್ತಿದೆ" ಎಂದರು. ಗೃಹ
ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌, ನಗರ ಪೊಲೀಸ್‌
ಆಯುಕ್ತ ಭಾಸ್ಕರ್‌ ರಾವ್‌ ಇದ್ದರು.


ರಾಜಕೀಯ ಮುಖಂಡರು ಟ್ವೀಟ್‌ ಮಾಡುವ ಮೂಲಕ ಹುತಾತ್ಸರಿಗೆ ಗೌರವ ಸೂಚಿಸಿದರು. "ಯುದ್ದ
ಎಂದೆಂದೂ ನಡೆಯದಿರಲಿ, ಸೈನಿಕರ ಮನೆಯಲ್ಲಿ ಸಾವಿನ ರೋಧನೆ ಕೇಳದಿರಲಿ, ವಿಶ್ವದಲ್ಲಿ ಶಾಂತಿ-ಸಹಬಾಳ್ತೆ
ಸದಾ ನೆಲೆಸಿರಲಿ, ಹುತಾತ್ಮರ ಕುಟುಂಬಗಳಿಗೆ ನನ್ನ ನಮನ' ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ
ಸಿದ್ದರಾಮಯ್ಯ ಟ್ವೀಟ್‌ ಮಾಡಿದರು.


"ನಮ್ಮ ಪ್ರದೇಶವನ್ನು ಕಾಪಾಡುವ ಮತ್ತು ಪುನಃ ಪಡೆದುಕೊಳ್ಳುವಲ್ಲಿ ಸೈನಿಕರ ಅಸಾಧಾರಣ ಧೈರ್ಯ
ಮತ್ತು ತ್ಯಾಗಕ್ಕೆ ನಾನು ವಂದಿಸುತ್ತೇನೆ. 21 ವರ್ಷಗಳ ಹಿಂದಿನ ಅವರ ಸಾಧನೆಗೆ ಕೃತಜ್ಞರಾಗಿರಬೇಕು” ಎಂದು
ಜೆಡಿಎಸ್‌ ವರಿಷ್ಟ ಎಚ್‌.ಡಿ.ದೇವೇಗೌಡ ಅವರು ಗೌರವ ಸೂಚಿಸಿದ್ದಾರೆ.


"ಕಾರ್ಗಿಲ್‌ ವಿಜಯ ದಿವಸ ಭಾರತದ ದಿಗ್ದಿಜಯದ ದಿನವೂ ಹೌದು. ಸವಾಲುಗಳ ನಡುವೆಯೂ
ಸಾಹಸ ಮೆರೆದ ಭಾರತೀಯ ಸಶಸ್ತ್ರ ಪಡೆಗಳ ಬಲಿದಾನವನ್ನು ಹೆಮ್ಮೆಯಿಂದ ಸ್ಮರಿಸುತ್ತೇನೆ. ದೇಶಕ್ಕಾಗಿ ಮಡಿದ
ಯೋಧರ ಕುಟುಂಬಗಳ ತ್ಯಾಗವನ್ನು ಮನಃಪೂರ್ವಕವಾಗಿ ಗೌರವಿಸುತ್ತೇನೆ ನ ಜೆಡಿಎಸ್‌ pa
ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.


ಆಧಾರ:ಪ್ರಜಾವಾಣಿ, ದಿನಾಂಕ:27.07.2020
46. ನಿಗಮ-ಮಂಡಳಿ ಅಧ್ಯಕ್ಷರ ನೇಮಕ


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಬೆನ್ನಲ್ಲೇ ಸಂಪುಟ ವಿಸ್ತರಣೆ
ಮಾತುಗಳು ಕೇಳಿಬರುತ್ತಿವೆ. ಇದಕ್ಕೂ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾಲಿಯಿರುವ 20
ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.


ಈ ಆದೇಶ ಹೊರಡಿಸಿರುವ ಅವರು 80ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ ಮೊದಲ ಹಂತದಲ್ಲಿ ಕೆಲವು
ಶಾಸಕರನ್ನು ನೇಮಿಸಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆ ವೇಳೆ ಆಗಬಹುದಾದ ಬಂಡಾಯದ
ಸಮಸ್ಯೆಯನ್ನು ಮೊದಲೇ ಪರಿಪರಿಸಿದ್ದಾರೆ. ಸಚಿವಾಕಾಂಕ್ಷಿಗಳಾಗಿದ್ದ ಅರಗ ಜ್ಞಾನೇಂದ, ರಾಜೂಗೌಡ, ತಿಪ್ಪಾರೆಡ್ಡಿ,
ದತ್ತಾತ್ರೇಯ ಪಾಟೀಲ್‌ ರೇವೂರ್‌ ಅವರಿಗೆ ಪಮುಖ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ.


ನಾಲ್ಕು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾದ ಜಿ.ಹೆಚ್‌.ತಿಪ್ಪಾರೆಡ್ಡಿ ಪರಣ್ಣ ಈಶ್ವರಪ್ಪ
ಮುನವಳ್ಳಿ, ಲಾಲಾಜಿ ಆರ್‌.ಮಂಡೆನ್‌ ಹಾಗೂ ಬಸವರಾಜ್‌ ದಡೇಸೂರ್‌ ಅವರ ಹೆಸರನ್ನು ಹಿಂಪಡೆಯಲು
ಮುಖ್ಯಮಂತ್ರಿ ಸೂಚಿಸಿದ್ದಾರೆ.


ಯಾರಿಗೆ ಯಾವ ನಿಗಮ-ಮಂಡಳಿ


ಹೆಸರು ನಿಗಮ - ಮಂಡಳಿ
ಅರಗ ಜ್ಞಾನೇಂದ್ರ ಕರ್ನಾಟಕ ಗೃಹ ಮಂಡಳಿ
ಎಂ.ಚಂದ್ರಪ್ಪ ಕೆಎಸ್‌ಆರ್‌ಟಿಸಿ
ರಾಜೂಗೌಡ ನಾಯಕ್‌ ಕರ್ನಾಟಕ ನಗರ ನೀರು ಸರಬರಾಜು ಮತ್ತು
ಒಳಚರಂಡಿ ಮಂಡಳಿ
ಎಂ.ಪಿ.ಕುಮಾರಸ್ವಾಮಿ ಎಂಸಿಎ
ಎ.ಎಸ್‌.ನಡಹಳ್ಳಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ


150


ಎಚ್‌.ಹಾಲಪ್ಪ


ಎಂಎಸ್‌ಐಎಲ್‌


ಮಾಡಾಳ್‌ ವಿರೂಪಾಕಪ


Ww


ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ


ಶಿವನಗೌಡ ನಾಯಕ್‌


ಕರ್ನಾಟಕ ರಸ್ತೆ ಅಭಿವೃದ್ಧಿ ನಿಯಮಿತ


ಕಳಕಪ್ಪ ಬಂಡಿ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
ಸಿದ್ದು ಸವದಿ ಕೈಮಗ್ಗ ಅಭಿವೃದ್ದಿ ನಿಗಮ
ಪ್ರೀತಂ ಗೌಡ ಜಂಗಲ್‌ ರೆಸಾರ್ಟ್ಸ್‌ ಲಿಮಿಟೆಡ್‌


ರಾಜ್‌ಕುಮಾರ್‌ ಪಾಟೀಲ್‌ ತೇಲ್ಕೂರ್‌


ಈಶಾನ್ಯ ಕರ್ನಾಟಕ ಸಾರಿಗೆ ನಿಗಮ


ದತ್ತಾತ್ರೇಯ ಪಾಟೀಲ್‌ ರೇವೂರ್‌


ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ


ಶಂಕರ್‌ ಪಾಟೀಲ್‌ ಮುನೇನಕೊಪ್ಪ


ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ


ಎಜಚ್‌.ನಾಗೇಶ್‌


ತೆಂಗಿನ ನಾರು ಅಭಿವೃದ್ದಿ ನಿಗಮ


ಎಸ್‌.ವಿ.ರಾಮಚಂದ್ರ


ಮಹರ್ಷಿ ವಾಲ್ಲೀಕಿ, ಪರಿಶಿಷ್ಠ ಪಂಗಡ ಅಭಿವೃದ್ದಿ
ನಿಗಮ


ನೆಹರು ಓಲೇಕಾರ್‌


ಡಾ:ಬಾಬು ಜಗಜೀವನರಾಂ ಚರ್ಮ ಕೈಗಾರಿಕಾಭಿವೃದ್ಧಿ
ನಿಗಮ


ಐಹೊಳೆ ದುರ್ಯೋಧನ


ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ


ಡಾ:ಎಸ್‌.ಶಿವರಾಜ್‌ ಪಾಟೀಲ್‌


ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ


ಸಿ.ಎಸ್‌.ನಿರಂಜನ್‌ ಕುಮಾರ್‌


ರಾಜ್ಯ ಅರಣ್ಯ ಕೈಗಾರಿಕಾ ನಿಗಮ


ಆಧಾರ:ವಿಶ್ವವಾಣಿ, ದಿನಾಂಕ:28.07.2020
47. ಶೈಕ್ಷಣಿಕ ಚಟುವಟಿಕೆ ಶೀಘ್ರ ಆರಂಭಿಸಿ


ಕೊರೋನಾ ಸಂಕಷ್ಟ ಸಮಯದಲ್ಲೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ತಂತ್ರಜ್ಞಾನ
ಸೇರಿದಂತೆ ಲಭ್ಯ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ ಚಟುವಟಿಕೆಯನ್ನು ಶೀಘ್ರದಲ್ಲೇ
ಆರಂಭಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ಕನ್ನಡದ ಪ್ರಮುಖ
ಪತ್ರಿಕೆಗಳ ಸಂಪಾದಕರು ಸರ್ಕಾರಕ್ಕೆ ಸಲಹೆ ನೀಡಿದರು.


ಕೋವಿಡ್‌ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷೂ ಮತ್ತು ಶಾಲಾ ಚಟುವಟಿಕೆಗಳನ್ನು ಯಾವಾಗ
ಪ್ರಾರಂಭಿಸಬೇಕು ಕುರಿತು ಅಭಿಪ್ರಾಯ ಸಂಗಹಿಸಲು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌
ಕುಮಾರ್‌ಅವರು ಮುದಣ, ಮಾಧ್ಯಮಗಳ ಸಂಪಾದಕರೊಂದಿಗೆ ವೆಬಿನಾರ್‌ ಮೂಲಕ ಚರ್ಚೆ ನಡೆಸಿದರು.


ಶಿಕ್ಷಣ ಸಚಿವರು ಹಾಗೂ ಕರ್ನಾಟಕ ಸರ್ಕಾರ ಪಿಯುಸಿ ಮತ್ತು ಎಸೆಸ್ಸೆಲ್ಲಿ ಪರೀಕ್ಷೆ ನಡೆಸಲು
ತೆಗೆದುಕೊಂಡ ಗಟ್ಟಿ ತೀರ್ಮಾನದ ಕುರಿತು ಪತ್ರಿಕಾ ಸಂಪಾದಕರು ಒಕ್ಕೊರಲಿನಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಅದೇ ಮಾದರಿಯಲ್ಲಿ ಶಾಲೆ ಪುನರಾರಂಭ ಹಾಗೂ ಪಾಠ ಪ್ರವಚನ ನಡೆಸುವ ವಿಧಾನಗಳ ವಿಷಯದಲ್ಲೂ


ಸರ್ಕಾರ ಒತ್ತಡಗಳಿಗೆ ಮಣಿಯದೆ ಸ್ಪತಂತ್ರ ನಿರ್ಧಾರ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.


ನಗರ ಮತ್ತು ಗಾಮಾಂತರ ಪ್ರದೇಶದ ನಡುವೆ ಕಲಿಕಾ ವಿಧಾನ ಮತ್ತು ಗುಣಮಟ್ಟದಲ್ಲಿ ತಾರತಮ್ಯ
ಇರಬಾರದೆಂಬುದು ಒಪ್ಪುವ ಸಂಗತಿ. ಆದರೆ ಪ್ರಸ್ತುತ ಸನ್ನಿವೇಶಕ್ಕೆ ಸರ್ಕಾರ ಅಥವಾ ಇನ್ಯಾರು ಕಾರಣರಲ್ಲ.
ಇದೊಂದು ತುರ್ತು ಸನ್ನಿವೇಶ. ಸಮಾಜದ ಅಸಹಾಯಕತೆಯೂ ಇದೆ. ಆದಕಾರಣ ಸಾಧ್ಯವಿರುವ ಎಲ್ಲಾ
ವಿಧಾನಗಳ ಮೂಲಕ ವಿದ್ಯಾರ್ಥಿಗಳ ಹಿತ ಕಾಯುವುದು ಮುಖ್ಯ. ಕಲಿಕೆಯಲ್ಲಿ ಆಗುವ ಸಣ್ಣಪುಟ್ಟ ವ್ಯತ್ಯಾಸ
ಸರಿದೂಗಿಸಲು ಪರೀಕ್ಷೆ ಕಾಲ, ಪರೀಕ್ಷಾ ವಿಧಾನ ಇತ್ಯಾದಿಗಳ ಸಂದರ್ಭದಲ್ಲಿ ಸೂಕ್ತ ನಿರ್ಧಾರಕ್ಕೆ ಬರಬಹುದೆಂಬ
ಸಲಹೆ ನೀಡಲಾಯಿತು.


151


ಈ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ದ್ವೀತಿಯ ಪಿಯು ಪರೀಕ್ಷೆ ಬರೆಯುವ ಮಕ್ಕಳ ಹಿತ ಕಾಯುವುದು
ಮುಖ್ಯ. ಆ ದೃಷ್ಠಿಯಿಂದ ಸರ್ಕಾರ ಗಮನ ಕೇಂದ್ರೀಕರಿಸಬೇಕು ಎಂಬ ಅಭಿಪ್ರಾಯ ಪ್ರಮುಖವಾಗಿ
ಹೊರಹೊಮ್ಮಿತು.


ಒಂದು ತಿಂಗಳಲ್ಲಿ ಸಮೀಕ್ಷೆ ನಡೆಸಿ: ಆನ್‌ಲೈನ್‌ ಪಾಠದ ಸಾಧ್ಯತೆ, ಟಿವಿ, ಕೇಬಲ್‌ ಮೂಲಕ ಮುದ್ರಿತ ಪಾಠ
ಹಾಗೂ ಎಲ್ಲೆಲ್ಲಿ ನೇರವಾಗಿ ಶಾಲೆ ಆರಂಭಿಸಬಹುದು ಎಂಬುದರ ಕುರಿತು ಸರ್ಕಾರ ತುರ್ತಾಗಿ ಸಮೀಕ್ಷೆ
ನಡೆಸಿದರೆ ಮುಂದಿನ ಕ್ರಮ ಕೈಗೊಳ್ಳುವುದು ಸುಲಭ ಎಂಬ ಅಭಿಪ್ರಾಯವೂ ಹೊರಹೊಮ್ಮಿತು.
ನಗರ/ಪಟ್ಟಣ/ಗ್ರಾಮೀಣ/ಗುಡ್ಡಗಾಡು ಪ್ರದೇಶಗಳನ್ನು ಪ್ರತ್ಯೇಕ ಯೂನಿಟ್‌ಗಳಾಗಿ ಪರಿಗಣಿಸಿ ಆಯಾ ಪ್ರದೇಶಕ್ಕೆ
ಅನುಗುಣವಾಗಿ ಸರ್ಕಾರ ಪಾಠ/ಪ್ರವಚನಕ್ಕೆ ನೀತಿ ನಿರೂಪಿಸಲಿ ಎಂದು ಸಲಹೆ ನೀಡಲಾಯಿತು.


ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ:ಮಕ್ಕಳ ಕಲಿಕೆ ಮುಂದುವರಿಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ
ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಿದ್ದು, ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ
ರೀತಿಯಲ್ಲಿ ಅನುಷ್ಠಾನಗೊಳ್ಳಲಿದೆ. ತಂತ್ರಜ್ಞಾನಧಾರಿತ ಕಲಿಕೆಯ ಕುರಿತಂತೆ ತಜ್ಞರ ಸಮಿತಿ ಸಲ್ಲಿಸಿರುವ ವರದಿ
ಆಧಾರದಲ್ಲಿ "ವಿದ್ಯಾಗಮ' ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಇಲಾಖೆಯು ರೂಪಿಸುತ್ತಿದ್ದು, ಇಷ್ಟರಲ್ಲಿಯೇ
ಲೋಕಾರ್ಪಣೆಗೊಳ್ಳಲಿದೆ. ಈ ಯೋಜನೆಯು ಎಲ್ಲ ವರ್ಗಗಳ ಶಾಲೆಗಳನ್ನು ವಿದ್ಯಾರ್ಥಿಗಳನ್ನು ಸಮರ್ಥವಾಗಿ
ತಲುಪಲಿದೆ ಎಂದು ಸಚಿವರು ಹೇಳಿದರು.


ಚರ್ಚೆಯ ಪ್ರಮುಖಾಂಶಗಳು
» ಆದಷ್ಟು ಶೀಘುದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕು.


> ಶೈಕ್ಷಣಿಕ ಚಟುವಟಿಕೆಯಿಂದ ವಂಚಿತರಾಗಿದ್ದೇವೆ ಎಂಬ ಭಾವನೆ ಮಕ್ಕಳಲ್ಲಿ ಬಾರದಂತೆ
ನೋಡಿಕೊಳ್ಳಬೇಕು.


> ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಇಂಥದ್ದೇ ಮಾಧ್ಯಮ ಸರಿ ಅಥವಾ ತಪ್ಪು ಎಂಬ ನಿರ್ಧಾರಕ್ಕೆ
ಬರುವ ಬದಲು ಲಭ್ಯ ಇರುವ ವಿವಿಧ ಸೌಕರ್ಯಗಳ ಮೂಲಕ ಮಕ್ಕಳನ್ನು ತಲುಪಲು


ಯತ್ನಿಸಬೇಕು.
> ಎಲ್ಲಿ ಸಾಧ್ಯವೋ ಅಲ್ಲಿ ಆನ್‌ಲೈನ್‌ ಪಾಠ ಪ್ರವಚನ ನಡೆಯಲಿ.
» ಆನ್‌ಲೈನ್‌ ಶಿಕ್ಷಣ ಸಾಧ್ಯವಾಗದ ಕಡೆ ಮುದ್ರಿತ ವಿಡಿಯೋಗಳ ಮೂಲಕ ಪಾಠ ಮಾಡಬಹುದು.
> ಶಿಕ್ಷಕರೇ ಮಕ್ಕಳ ಬಳಿ ತೆರಳಿ ಪಾಠ ಮಾಡಬಹುದು.
> ಚಂದನ ವಾಹಿನಿ, ಖಾಸಗಿ ಲೋಕಲ್‌ ಚಾನಲ್‌ಗಳ ಮೂಲಕವೂ ಪಾಠ ಮಾಡಲು ಯತ್ನಿಸಲಿ.
» ಕೊರೋನಾ ಸುರಕ್ಷಿತ ಪ್ರದೇಶಗಳಲ್ಲಿ ಆಯ್ಕೆ ಮಾಡಿ ಶಾಲಾ ಕೊಠಡಿಗಳಲ್ಲೇ ಪಾಠ ಶುರು


ಮಾಡಬಹುದು.


> ಸರ್ಕಾರಿ/ಖಾಸಗಿ ಶಾಲೆಗಳ ನಡುವೆ ಸಾಮ್ಯತೆ ಕಾಯ್ದುಕೊಳ್ಳಲು ಪರೀಕ್ಷೆ/ಪರೀಕ್ಷೆ ಫಲಿತಾಂಶ
ಸಂದರ್ಭದಲ್ಲಿ ತೀರ್ಮಾನಕ್ಕೆ ಬರಬಹುದು.
ಆಧಾರ:ವಿಜಯಕರ್ನಾಟಕ, ದಿನಾ೦ಕ:28.07.2020
48. ಕ್ರಿಯಾ ಯೋಜನೆ ತ್ವರಿತ ಜಾರಿಗೆ ಸೂಚನೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ನಿಗಮಗಳ ಕ್ರಿಯಾ ಯೋಜನೆಗಳಿಗೆ


ಅನುಮೋದನೆ ನೀಡಲಾಗಿದ್ದು, ತ್ವರಿತ ಅನುಷ್ಠಾನಕ್ಕೆ ಕಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವರಾದ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದರು.


152


ಕರ್ನಾಟಕ ಮಹರ್ಷಿ ವಾಲ್ಡೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಭೋವಿ
ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಭೂ ಒಡೆತನ, ಸಮಗ್ರ ಗಂಗಾ ಕಲ್ಯಾಣ ವೈಯುಕ್ತಿಕ
ನೀರಾವರಿ, ಕೊಳವೆಬಾವಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಸೂಕ್ಕ್ಮ ಸಾಲ (ಪ್ರೇರಣಾ) ಯೋಜನೆ,
ತರಕಾರಿ ಹಣ್ಣು-ಹಂಪಲು ಹೈನುಗಾರಿಕೆಯಂತಹ ಕಿರು ಆರ್ಥಿಕ ಯೋಜನೆಗಳಿಗಾಗಿ ನಿಗಮಗಳಿಂದ ನೇರ ಸಾಲ
ಯೋಜನೆಗೆ ಗುರಿ ನಿಗದಿಪಡಿಸಲಾಗಿದ್ದು, ಅದರಂತೆ ಸೌಲಭ್ಯ ಕಲ್ಪಿಸಬೇಕು.


ಅರಣ್ಯ ಆಧಾರಿತ ಆದಿವಾಸಿ, ಅಲೆಮಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಜನಾಂಗದವರಿಗೆ ಮೈಕ್ರೋ ಕೆಡಿಟ್‌
ಯೋಜನೆಗಳಡಿ ನಿಗಮಗಳಿಗೆ ಗುರಿ ಗೊತ್ತುಪಡಿಸಲಾಗಿದ್ದು, ಅದರಂತೆ ಸೌಲಭ್ಯ ಕಲ್ಪಿಸಬೇಕು. ಕೋವಿಡ್‌-19
ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಸಮುದಾಯದವರು ತೀವ್ರ ಸಂಕಷ್ಟದಲ್ಲಿದ್ದ, ಅವರಿಗೆ ನೆರವಾಗುವಂತೆ
ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು. ಬಾಕಿ ಉಳಿದಿರುವ ಕೊಳವೆ ಬಾವಿಗಳನ್ನು ತ್ವರಿತವಾಗಿ ಕೊರೆಸಿ
ಫಲಾನುಭವಿಗಳಿಗೆ ನೆರವಾಗಬೇಕು. ಭೂ ಒಡೆತನ ಯೋಜನೆಯಡಿ ಆಯ್ಕೆಯಾಗಿರುವ ಎಲ್ಲ ಪ್ರಸ್ತಾವನೆಗಳಿಗೆ
ಕೂಡಲೇ ಮಂಜೂರಾತಿ ನೀಡಿ, ಅನುದಾನ ಬಿಡುಗಡೆ ಮಾಡಬೇಕು. ನಿಗಮಗಳ ವ್ಯವಸ್ಥಾಪಕರು ಜಿಲ್ಲೆಗಳಿಗೆ
ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನೆ ನಡೆಸಬೇಕು. ಜಿಲ್ಲಾಧಿಕಾರಿಗಳೂಂದಿಗೂ ಸಮನ್ವಯ ಸಾಧಿಸಿಕೊಂಡು
ಭೂ ಒಡೆತನ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು.


ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಸಲಹೆಗಾರ ಇ.ವೆಂಕಟಯ್ಯ, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ
ವ್ಯವಸ್ಥಾಪಕ ನಿರ್ದೇಶಕ ಹನುಮ ನರಸಯ್ಯ, ಕರ್ನಾಟಕ ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ
ಮಾಯಾದೇವಿ ಗಲಗಲಿ ಇತರರು ಉಪಸ್ಥಿತರಿದ್ದರು.


ಆಧಾರ:ಉದಯವಾಣಿ, ದಿನಾ೦ಕ:30.07.2020
49. ದೇಶದಲ್ಲೇ ವಿದೇಶಿ ವ್ಯಾಸಂಗ
ವಿದೇಶಗಳ ಪ್ರತಿಷಿತ ವಿಶ್ವವಿದ್ಯಾ ಲಯಗಳಾದ ಕೇಂಬ್ರಿಡ್ಜ್‌, ಹಾರ್ವರ್ಡ್‌ ಮುಂತಾದ


ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವುದು ಬಹುತೇಕ ಭಾರತೀಯ ವಿದ್ಯಾರ್ಥಿಗಳ ಕನಸು. ಆದರ್ಯ
ಪ್ರತಿಭೆಯಿದ್ದರೂ ಹಲವಾರು ವಿದ್ಯಾರ್ಥಿಗಳ ಪಾಲಿಗೆ ಅದು ಅಂದುಕೊಂಡಷ್ಟು ಸುಲಭವಲ್ಲ. ಬಲು ದುಬಾರಿ.
ವದೇಶದಲ್ಲಿ ಶಿಕ್ಷಣ ಎಂಬುದು ಮಧ್ಯಮ ಹಾಗೂ ಅದಕ್ಕಿಂತ ಕೆಳವರ್ಗಗಳ ಮಕ್ಕಳಿಗೆ ಗಗನ ಕುಸುಮವೇ ಆಗಿತ್ತು.
ಪ್ರಕಟವಾದ 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಅಂತಹ ಕನಸುಗಳನ್ನು ಅಲ್ಪ ವೆಚ್ಚದಲ್ಲೇ


ನನಸಾಗಿಸಲು ಶ್ರೀಕಾರ ಹಾಕಿದೆ.


ವಿಶ್ವದ ಟಾಪ್‌ 100 ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆದು ಭಾರತೀಯ
ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅವಕಾಶ ಕಲ್ಲಿಸಲಾಗಿದೆ. ಅದಕ್ಕೆ ಪೂರಕವಾಗಿ, ಆ ವಿವಿಗಳಿಗೆ, ಭಾರತದಲ್ಲಿ
ತಮ್ಮ ಶಾಖೆಗಳು ಅಥವಾ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಆಡಳಿತಾತ್ಮಕ ವಿಚಾರಗಳಲ್ಲಿ
ವಿನಾಯಿತಿ ನೀಡಲಾಗಿದೆ.


ಎ-ಐ ವಿಧಾನದಲ್ಲಿ ಪ್ರಗತಿ ಪರಿಶೀಲನೆ: ಆಯಾ ಶೈಕ್ಷಣಿಕ ತರಗತಿಗಳಲ್ಲಿ ನೀಡಲಾಗುವ ರಿಪೋರ್ಟ್‌ ಕಾರ್ಡ್‌
ಇನ್ನು ಕೃತಕ ಬುದ್ದಿಮತ್ತೆ ಆಧಾರದಡಿ ರೂಪುಗೊಳ್ಳಲಿವೆ. ವಿದ್ಯಾರ್ಥಿಯ ಆಯಾ ತರಗತಿಗಳ ಪ್ರಗತಿಯನ್ನು
ಶಿಕ್ಷಕರು. ಪಾಲಕರು, ವಿದ್ಯಾರ್ಥಿಗಳು ಅದನ್ನು ಅವಲೋಕಿಸಲು ಅವಕಾಶವಿರಲಿದೆ.


ಪದವಿಗೆ "ಮಲ್ಪಿಪಲ್‌ ಎಕ್ಷಿಟ್‌': ಹೊಸ ಶಿಕ್ಷಣ ನೀತಿಯನ್ನ್ವಯ, ಪದವಿ ಕೋರ್ಸುಗಳ ಅವಧಿ ಇನ್ನು 3
ಅಥವಾ 4 ವರ್ಷ ಆಗಿರಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮಲ್ಲಿಪಲ್‌ ಎಕ್ಷಿಟ್‌ ಎಂಬ ಹೊಸ ಅನುಕೂಲ
ಕಲ್ರಿಸಲಾಗಿದೆ. ಪದವಿಯ ಮೊದಲ ವರ್ಷದ ಅಧ್ಯಯನದ ನಂತರ ಆ ವಿದ್ಯಾರ್ಥಿ ಶಿಕ್ಷಣ ತೊರೆದರೆ, ಆತನಿಗೆ
ಆವರೆಗಿನ ಅಧ್ಯಯನದ ಪ್ರಮಾಣ ಪತ್ರ ನೀಡಲಾಗುತ್ತದೆ. ಎರಡು ವರ್ಷಗಳ ನಂತರ ಪದವಿಯನ್ನು ತೊರೆದರೆ
ಅವನಿಗೆ ಡಿಪ್ಲೋಮ ಪ್ರಮಾಣ ನೀಡಲಾಗುತ್ತದೆ. ಮೂರು ವರ್ಷ ಪೂರ್ಣಗೊಳಿಸಿದರೆ ಪದವಿ ಪ್ರಮಾಣ ಪತ್ರ
ನೀಡಲಾಗುತ್ತದೆ. ನಾಲ್ಕು ವರ್ಷಗಳ ಮಲ್ಪಿ ಡಿಸಿಫ್ಲಿನ್‌ ಪದವಿಗಳ ವಿಚಾರಕ್ಕೆ ಬರುವುದಾದರೆ ಕೋರ್ಸ್‌ನ
ಅಂತ್ಯದಲ್ಲಿ ವಿದ್ಯಾರ್ಥಿಯು ಸಣ್ಣದಾಗಿ ಸಂಶೋಧನೆಯೊಂದನ್ನು ಕೈಗೊಂಡು (ಪ್ರಾಜೆಕ್ಟ್‌ ಅದರ ವರದಿಯನ್ನು
ಸಲ್ಲಿಸಿದ ನಂತರವೇ ಪದವಿ ಪಮಾಣ ಪತ್ರ ಪಡೆಯಬೇಕಾಗುತ್ತದೆ.


153


ಬಹು ಬೋಧನಾ ಸಂಸ್ಥೆಗಳ ಸ್ಥಾಪನೆ: 2040ರ ಹೊತ್ತಿಗೆ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಬಹು
ವಿಷಯ ಬೋಧನಾ ಶಕ್ಷಣ ಸಂಸ್ಥೆಗಳಾಗಿ ರೂಪುಗೊಳ್ಳಲಿದೆ. ಜೊತೆಗೆ, ಆ ಹೊತಿಗೆ, ಇಂಥ ಸಂಸ್ಥೆಗಳಲ್ಲಿ
ಸುಮಾರು 3 ಸಾವಿರಕ್ಕೂ "ಹೆಚ್ಚು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ಗುರಿಯನ್ನು "ಹೊಂದಲಾಗಿದೆ. ಅಂದರೆ
ಅತಿ ಹೆಚ್ಚು ಯುವಜನರಿಗೆ ಉನ್ನತ ಶಿಕ್ಷಣ Ny ಮಾಡುವುದು ಇದರ ಉದ್ದೇಶವಾಗಿದೆ.


ಜೀವನ ಕಲೆ ಬೋಧನೆಗೆ ಒತ್ತ: ಮಕ್ಕಳಿಗೆ ಶೈಕ್ಷಣಿಕ ವಿಷಯಗಳ ಬೋಧನೆಗೆ ಜೀವನವನ್ನು ಸಮರ್ಥವಾಗಿ
ಎದುರಿಸುವ ಕೌಶಲ್ಯಗಳ ಬೋಧನೆಯೂ ಜಾರಿಗೊಳ್ಳಲಿದೆ. ಪ್ರತಿ ವರ್ಷವೂ ಇಂಥ ವಿಷಯಗಳ ಬೋಧನೆ
ಇರಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ.


ಎಂಫಿಲ್‌ ರದ್ದು: ಸ್ನಾತಕೋತರ ಪದವಿಯ ನಂತರ ಇದ್ದ ಎಂ.ಫಿಲ್‌ ಪದವಿಯನ್ನು ರದ್ದುಗೊಳಿಸಲಾಗಿದೆ.
ಇದಲ್ಲದೆ, ಸಂಶೋಧನಾ ಕ್ಷೇತ್ರದಲ್ಲಿ ತೊಡಗಲು ಬಯಸುವವರಿಗೆ ಪದವಿ ಅವಧಿ 4 ವರ್ಷದ್ದಾಗಿರಲಿದ್ದು,
ಉದ್ಯೋಗದಲ್ಲಿ ತೊಡಗಿಸಿಕೊಳ್ಳುವವರಿಗೆ ಪದವಿ 3 ವರ್ಷದ್ದಾಗಿರುತ್ತದೆ ಎಂದು ಹೊಸ ಶಿಕ್ಷಣ ನೀತಿಯಲ್ಲಿ
ಪ್ರಸ್ತಾಪಿಸಲಾಗಿದೆ.


ಮಂಡಳಿ ಪರೀಕ್ಷಾ ಕ್ರಮ ಬದಲಾವಣೆ:-ರಾಷ್ಟ್ರೀಯ ಮಟ್ಟದಲ್ಲಿ ಜರುಗುವ ಮಂಡಳಿ ಮಟ್ಟದ ಪರೀಕ್ಷಾ
ವಿಧಾನಗಳಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ. ಉದಾಹರಣೆಗೆ ಸಿಬಿಎಸ್‌ಇ ಅಡಿಯಲ್ಲಿ ಬರುವ ಎಲ್ಲಾ
ಕೋರ್ಸ್‌ಗಳಿನ್ನು ಎರಡು ಭಾಷೆಗಳಲ್ಲಿರಲಿದೆ. ಐಎಸ್‌ಎಲ್‌ಗೆ ಉತ್ತೇಜನ 2020ರ ಶಿಕ್ಷಣ ಕಾಯ್ದೆಯಲ್ಲಿ
ಭಾರತೀಯ ಸಂಜ್ಞಾ ಭಾಷೆಗೆ ಹೆಚ್ಚಿನ ಉತ್ತೇಜನ ಸಿಕ್ಕಿದೆ. ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಓಪನ್‌ ಸ್ಥೂಲಿಂಗ್‌
ಸಂಸ್ಥೆ ವತಿಯಿಂದ ಭಾರತೀಯ ಸಂಜ್ಞಾ ಭಾಷಾ ಕಲಿಕೆಗೆ ಸೂಕ್ತವಾದ ರೂಪುರೇಷೆಗಳನ್ನು ಜಾರಿಗೊಳಿಸಲಿದೆ.


"ಪ್ರಾಥಮಿಕ ಶಿಕ್ಷಣದಲ್ಲಿ ಗಣನೀಯ ಬದಲಾವಣೆ ಮಾಡಿರುವುದು, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹು
ವಿಷಯ ಬೋಧನಾ ಸಂಸ್ಥೆಗಳನ್ನಾಗಿಸಲು ಪ್ರಯತ್ನಿಸಿರುವುದು ವಿದ್ಯಾರ್ಥಿಗಳ ಸಾಧನೆಯನ್ನು ಅಕಾಡೆಮಿಕ್‌
ಬ್ಯಾಂಕ್‌ ಆಫ್‌ ಕ್ರೆಡಿಟ್‌ (ಎಬಿಸಿ) ಮೂಲಕ ಅಳೆಯುವುದು ರಾಷ್ಟ್ರೀಯ ಶಿಕ್ಷಣಂ ವ್ಯವಸ್ಥೆಯಲ್ಲಿ ಅತ್ಯುತ್ತಮ
ಸುಧಾರಣೆ ತರಲಿದೆ" ಎಂದು ನರೇಂದ್ರ ಮೋದಿ, ಅವರು ಹೇಳಿದ್ದಾರೆ.


ಯುಜಿಸಿ, ಎಐಸಿಟಿಐ ಸಂಸ್ಥೆಗಳಿಗೆ ಗುಡ್‌ಬೈ:-ಉನ್ನತ ಶಿಕ್ಷಣ ವಲಯದ ಮೇಲುಸ್ತುವಾರಿ ಇನ್ನು ಒಂದೇ
ಸಂಸ್ಥೆಯಡಿ ನಿರ್ವಹಿಸಲ್ಪಡುತ್ತದೆ. ಅದಕ್ಕಾಗಿ, ಹಿ ಉನ್ನತ ಶಿಕ್ಷಣ ಪ್ರಾಧಿಕಾರ (ಎಚ್‌ಇಸಿಐ)ಎಂಬ ಹೊಸ
ಸಂಸ್ಥೆ ಅಸ್ತಿತ್ತಕ್ಕೆ ಬರಲಿದೆ. ಇನ್ನು ವಿಶ್ವವಿದ್ಯಾಲಯಗಳ ಮ ಆಯೋಗ (ಯುಜಿಸಿ)ಅಖಿಲ ಭಾರತ
ತಾಂತ್ರಿಕ ಶಿಕ್ಷಣ ಕೌನ್ಸಿಲ್‌ (ಎಐಸಿಟಿಇ) ಸಂಸ್ಥೆಗಳ ಬದಲಿಗೆ ಇದೊಂದೇ ಸಂಸ್ಥೆ ಕಾರ್ಯನಿರ್ವಹಿಸಲಿದೆ. ಈ
ಸಂಸ್ಥೆಯ ಅಡಿಯಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಕೌನಿಲ್‌, ರಾಷ್ಟ್ರೀಯ ಅಕ್ರೇಡಿಷನ್‌ ಕೌನ್ಸಿಲ್‌
(ನ್ಮಾಕ್‌), ಉನ್ನತ ಶಿಕ್ಷಣ ಅನುದಾನ ಫನ್ದಿಲ್‌ (ಎಚ್‌ಇಜಿಸಿ) ಹಾಗೂ ಸಾಮಾನ್ಯ ಶಿಕ್ಷಣ ಕೌನ್ಸಿಲ್‌ (ಜಿಎಸಿ)
ಕಾರ್ಯ ನಿರ್ವಹಿ ಸಲಿವೆ. ಇನ್ನು ವೃತ್ತಿಪರ ಕೌನ್ಸಿಲ್‌ಗಳಾದ ಇಂಡಿಯನ್‌ ಕೌನ್ಸಿಲ್‌ ಫಾರ್‌ ಅಗಿಕಲ್ಲರಲ್‌
ರೀಸರ್ಚ್‌(ಸಿಐಎಆರ್‌), ವೆಟರ್ನರಿ ಕೌನ್ಸಿಲ್‌ ಆಫ್‌ ಇಂಡಿಯಾ(ವಿಸಿಐ), ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಟೀಚರ್‌
ಎಜುಕೇಷನ್‌(ಎನ್‌ಸಿಟಿಇ), ಕೌನ್ಸಿಲ್‌ ಆಫ್‌ ಆರ್ಕಿಟೆಕ್ಟರ್‌(ಸಿಒಎ). ನ್ಯಾಷನಲ್‌ ಕೌನ್ಸಿಲ್‌ ಫಾರ್‌ ವೊಕೇಷನಲ್‌
ಎಜುಕೇಷನ್‌ ಆ್ಯಂಡ್‌ ಟ್ರೈನಿಂಗ್‌(ಎನ್‌ಸಿವಿಇಟಿ)ಹಾಗೂ ಇನ್ನಿತರ ಮಂಡಳಿಗಳು, ಕೌನ್ನಿಲ್‌ಗಳು ಇನ್ನು
ಪ್ರೋಫೆಷನಲ್‌ ಸ್ಟಾಂಡರ್ಡ್‌ ಸೆಟ್ಟಿಂಗ್‌ ಬಾಡೀಸ್‌ (ಪಿಎಸ್‌ಎಸ್‌ಬಿ)ಆಗಿ ಕಾರ್ಯನಿರ್ವಹಿಸಲಿವೆ.


ಆಧಾರ:ಉದಯವಾಣಿ, ದಿನಾಂ೦ಕ:30.07.2020
50. ಜೈವಿಕ ತಂತ್ರಜ್ಞಾನದ ಜಾಗತಿಕ ಮನ್ನಣೆಗೆ ಕ್ರಮ


ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಮಹತ್ವ ನೀಡುವ ಜೊತೆಗೆ ಕರ್ನಾಟಕವು ಜೈವಿಕ
ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆಯಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.


ನಗರದ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಬೆಂಗಳೂರು ಲೈಫ್‌ ಸೈನ್ಸಸ್‌ ಪಾರ್ಕ್‌ಗೆ ಭೂಮಿಪೂಜೆ ನೆರವೇರಿಸಿ
ಮಾತನಾಡಿ, ರಾಜ್ಯದ "ಆರ್ಥಿಕತೆಯ ಶಕ್ತಿಯಾಗಿರುವ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಎಲ್ಲ ಸೌಕರ್ಯಗಳನ್ನು


154


ಆದ್ಯತೆಯ ಮೇರೆಗೆ ಒದಗಿಸಲಾಗುವುದು ಹಾಗೂ ಕರ್ನಾಟಕವು ಜಾಗತಿಕ ಮಟ್ಟದಲ್ಲಿ "ಬಿಟಿ ಹಬ್‌” ಆಗಿ
ಹೊರಹೊಮ್ಮುವುದಕ್ಕೆ ಬೇಕಾದ ಸರ್ವ ಕ್ರಮಗಳನ್ನೂ ತೆಗೆದುಕೊಳ್ಳಲಿದ್ದೇವೆ ಎಂದರು.


ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ
ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ಎರಡೂ ಕ್ಷೇತ್ರಗಳಿಗೆ ಸರ್ಕಾರ ಮಹತ್ವ ನೀಡಲಿದೆ. ಈಗಾಗಲೇ ಅನೇಕ
ಸುಧಾರಣಾ ಕ್ರಮಗಳನ್ನು ಜಾರಿಗೆ ತಂದು ಕೈಗಾರಿಕೆಗೆ ಪೂರಕ ವಾತಾವರಣ ನಿರ್ಮಿಸಿದ್ದೇವೆ. ವಾಣಿಜ್ಯ ಕೈಗಾರಿಕೆ
ಕ್ಷೇತ್ರಗಳಿಗೆ ಇನ್ನು ಹೆಚ್ಚಿನ ಮನ್ನಣೆ ನೀಡಲಾಗುವುದು ಎಂದು ಭರವಸೆ ನೀಡಿದರು.


ದಶಕಗಳ ಕನಸು: ಐಟಿ, ಬಿಟಿ ಸಜೆವರು ಆಗಿರುವ ಡಿಸಿಎಂ ಡಾ:ಸಿ.ಎನ್‌.ಅಶ್ವತ್ನನಾರಾಯಣ ಮಾತನಾಡಿ, ಎರಡು
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಸಾಕಾರವಾಗುವ ಸಮಯ ಬಂದಿದ್ದು, ನಮ್ಮ ಸರ್ಕಾರದ
ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗುತ್ತಿದೆ. ಸಂಶೋಧನೆ, ಅಭಿವೃದ್ಧಿ ಎಲ್ಲವೂ ಒಂದೇ ಸೂರಿನ ಅಡಿಯಲ್ಲಿ
ಆಗಲಿದೆ. ಈ ಯೋಜನೆ ಸಾಕಾರಗೊಂಡ ಮೇಲೆ ಜಾಗತಿಕ ಭೂಪಟದಲ್ಲಿ ಬೆಂಗಳೂರಿನ ಪ್ರತಿಷ್ಠೆ ಮತ್ತಷ್ಟು
ಹೆಚ್ಚಲಿದೆ ಎಂದರು.


ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೃಷಿ, ಕೈಗಾರಿಕೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಇದರ ಪ್ರಭಾವ
ಇದೆ. ಸರ್ಕಾರ ಅನೇಕ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿದೆ. ಕಾನೂನುಗಳನ್ನು ಸರಳಗೊಳಿಸಿ ಹೂಡಿಕೆಗೆ
ಪೂರಕವಾದ ವಾತಾವರಣ ಸೃಷ್ಟಿ ಮಾಡಲಾಗಿದೆ. ಕರ್ನಾಟಕ ಆವಿಷ್ಟಾರ ಪ್ರಾಧಿಕಾರ ಸ್ಥಾಪಿಸಲಾಗಿದೆ. ಇನ್‌ವೆಸ್ಟ್‌
ಕರ್ನಾಟಕ ಮೂಲಕ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ದೇಶದ ಯಾವುದೇ ರಾಜ್ಯವೂ ಕೈಕೊಳ್ಳದಂತಹ
ಪರಿಣಾಮಕಾರಿ ಕ್ರಮಗಳನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ ಎಂದರು.
ಸಿ.ಎಂ. ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಶಾಸಕ ಎಂ.ಕೃಷ್ಣಪ್ಪ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಡಾ: ಇ.ವಿ.ರಮಣರೆಡ್ಡಿ, ಬೆಂಗಳೂರು ಲೈಫ್‌ ಸೈನ್ಸಸ್‌ ಪಾರ್ಕ್‌ನ ಸಿಇಓ ಚಿರಾಗ್‌ ಪುರುಷೋತ್ತಮ್‌, ಕೈಗಾರಿಕಾ
ತಾಂತ್ರಿಕ ಸಂಸ್ಥೆಯ ನಿರ್ದೇಶಕಿ ಮೀನಾ ನಾಗರಾಜ್‌ ಇದ್ದರು.

ಆಧಾರ:ಉದಯವಾಣಿ, ದಿನಾಂ೦ಕ:30.07.2020
51. ಕಂಟೋನ್ಮೆಂಟ್‌-ಶಿವಾಜಿನಗರ ಸುರಂಗ ಕಾರ್ಯಕ್ಕೆ ಮುಖ್ಯಮಂತ್ರಿ ಚಾಲನೆ


ಚೀನಾ ತಂತ್ರಜ್ಞರ ಅಲಭ್ಯತೆಯಿಂದ ಅತ್ಯಂತ ಸವಾಲಾಗಿದ್ದ ದೈತ್ಯ ಟನಲ್‌ ಬೋರಿಂಗ್‌ ಯಂತ್ರ
(ಟಿಬಿಎಂ)ವನ್ನು ಪಳಗಿಸಿ ಕಾರ್ಯಾಚರಣೆಗೆ ಅಣಿಗೊಳಿಸುವಲ್ಲಿ "ನಮ್ಮ ಮೆಟ್ರೋ' ಎಂಜಿನಿಯರ್‌ಗಳು
ಯಶಸ್ವಿಯಾಗಿದ್ದಾರೆ.


ನಗರದ ಕಂಟೋನ್ಮೆಂಟ್‌-ಶಿವಾಜಿನಗರ ನಡುವೆ ಮೊದಲ ಟಿಬಿಎಂ "ಊರ್ಜಾ ಅನ್ನು ಸುರಂಗ
ಕೊರೆಯುವ ಕಾರ್ಯಕ್ಕೆ ಕಂಟೋನ್ನೆಂಟ್‌ ಬಳಿ ಅಣಿಗೊಳಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು.


ಎರಡನೇ ಹಂತದ ಸುರಂಗ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಿದ್ದು, ಪ್ಯಾಕೇಜ್‌
3ರಲ್ಲಿ (ಶಿವಾಜಿನಗರ-ಟ್ಯಾನರಿ ರಸ್ತೆ ಈಗ ಕಾರ್ಯಾರಂಭವಾಗಿದೆ. ಉದ್ದೇಶಿತ ಯಂತ್ರವು ಮೊದಲು
ಕಂಟೋನ್ಮೆಂಟ್‌- ಶಿವಾಜಿನಗರ ನಡುವಿನ 855 ಮೀಟರ್‌ ಉದ್ದದ ಸುರಂಗ ಕೊರೆಯಲಿದೆ. ಇದು ಮುಂದಿನ
ಒಂಭತ್ತು ತಿಂಗಳಲ್ಲಿ ಪೂರ್ಣಗೊಳ್ಗಲಿದೆ. ಒಟ್ಟಾರೆ ಶಿವಾಜಿನಗರ- ಕಂಟೋನ್ಮೆಂಟ್‌- ಟ್ಯಾನರಿ ರಸ್ತೆಯಲ್ಲಿರುವ
ಶಾದಿಮಹಲ್‌ವರೆಗಿನ 2.88 ಕಿಮೀ ಉದ್ದದ ಮಾರ್ಗವನ್ನು 20 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ
ಬಿಎಂಆರ್‌ಸಿಎಲ್‌ ಮುಂದಿದೆ.


ಸಾಮಾನ್ಯವಾಗಿ ಯಾವುದೇ ದೇಶಗಳಲ್ಲಿ ಟಿಬಿಎಂ ಪೂರೈಕೆಯಾದರೂ ಆಯಾ ಕಂಪೆನಿಯ ತಜ್ಞರ
ತಂಡ ಜೊತೆಗೆ ಹೋಗುತ್ತದೆ. "ನಮ್ಮ ಮೆಟ್ರೋ. ಮೊದಲ ಹಂತದ ಸುರಂಗ ಕೊರೆಯುವಾಗಲೂ ಸುಮಾರು
70-80 ಜನ ವಿದೇಶದಿಂದ ಆಗಮಿಸಿದ್ದರು. ಯಾಕೆಂದರೆ, ಟಿಬಿಎಂಗಳ ಜೋಡಣೆ ಒಂದು "ಪೋಸ್ಟ್‌
ಮಾರ್ಟಮ್‌” (ಮರಣೋತ್ತರ ಪರೀಕ್ಷೆ) ಇದ್ದಂತೆ. ಈ ದೈತ್ಯ ಯಂತ್ರದಲ್ಲಿ ಸಾವಿರಕ್ಕೂ ಅಧಿಕ ಕೇಬಲ್‌ಗಳು,
ಬಿಡಿಭಾಗಗಳು ಬರುತ್ತವೆ. ಅವುಗಳ ಜೋಡಣೆಯಲ್ಲಿ ಒಂದೇ ವ್ಯತ್ಯಾಸವಾದರೂ ಯಂತ್ರ ಮುಂದೆ ಸಾಗದು.


155


ಆದರೆ ಈ ಬಾರಿ ಕೋವಿಡ್‌ ಕಾರಣದಿಂದ ತಜ್ಞರ ತಂಡ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಯಂತ್ರದ ಜೋಡಣೆ
ಕಾರ್ಯವನ್ನು ಸ್ವತಃ ಯೋಜನೆಯಲ್ಲಿನ ಹಿರಿಯ ಎಂಜಿನಿಯರ್‌ಗಳು ನಿರ್ವಹಿಸಿದರು. ಮೂವರು ಚೀನಾ ತಜ್ಞರು
ಮಾತ್ರ ಇಲ್ಲಿ ಇದ್ದು ಸಹಕರಿಸಿದ್ದಾರೆ.


ಯೋಜನಾ ವೆಚ್ಚ ರೂ.30,695 ಕೋಟಿ: ಟಿಬಿಎಂಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಯವರು
ನಗರದ ಸಂಚಾರದಟ್ಟಣೆ ತಗ್ಗಿಸುವಲ್ಲಿ "ನಮ್ಮ ಮೆಟ್ರೋ' ಪ್ರಮುಖ ಪಾತ್ರ ವಹಿಸುತ್ತಿದೆ. ಯೋಜನೆಯ ಎರಡನೇ
ಹಂತವು ಒಟ್ಟಾರೆ 72 ಕಿ.ಮೀ ವ್ಯಾಪ್ತಿಯಲ್ಲಿ ವಿಸ್ತರಣೆಯಾಗಲಿದ್ದು, ಸುಮಾರು 30,695 ಕೋಟಿ ವೆಚ್ಚದಲ್ಲಿ ಇದು
ನಿರ್ಮಾಣಗೊಳ್ಳಲಿದೆ. ಇದರ ಜೊತೆಗೆ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ
ವಿಮಾನ ನಿಲ್ದಾಣಕ್ಕೂ ಇದು ಸಂಪರ್ಕ ಕಲ್ಪಿಸಲಿದೆ ಎಂದು ಮಾಹಿತಿ ನೀಡಿದರು.


ಸಜೆವರಾದ ಡಾ:ಅಶ್ನತ್ಸನಾರಾಯಣ, ಆರ್‌.ಅಶೋಕ್‌, ಭೈರತಿ ಬಸವರಾಜು, ಶಾಸಕ ಅಖಂಡ
ಶ್ರೀನಿವಾಸಮೂರ್ತಿ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಇತರರಿದ್ದರು.


ಪ್ಯಾಕೇಜ್‌-3ಮಾರ್ಗದ ವಿವರ


855 ಮೀ. 896 ಮೀ. 682 ಮೀ.
ಶಿವಾಜಿನಗರ-ಕಂಟೋನ್ಸೆಂಟ್‌ ಕಂಟೋನ್ಮೆಂಟ್‌ ನಿಲ್ದಾಣ-ಪಾಟರಿ | ಪಾಟರಿ ಟೌನ್‌ ನಿಲ್ದಾಣ-
ನಿಲ್ದಾಣ ಟೌನ್‌ ಶಾದಿಮಹಲ್‌


855 ಮೀ. ಉದ್ದದ ಸುರಂಗ ಮಾರ್ಗದಲ್ಲಿ ಬಿಎಂಆರ್‌ಸಿಎಲ್‌ ನಡೆಸಿದ ಅಧ್ಯಯನದ ಪ್ರಕಾರ 250
ಮೀ. ಉದ್ದ ಗಟ್ಟಿಕಲ್ಲು, 350 ಮೀ.ಕಲ್ಲು-ಮಣ್ಣು ಮಿಶ್ರ ಹಾಗೂ 255 ಮೀ. ಮಣ್ಣಿನಿಂದ ಕೂಡಿದೆ. ಶೀಘ್ರ
ಮತ್ತೊಂದು ಯಂತ್ರ "ವಿಂಧ್ಯಾ' ಕೂಡ ಇದೇ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಆರಂಭಿಸಲಿದೆ
ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.


5200 ಕಾರ್ಮಿಕರು ವಾಪಸ್ಸು-ಎರಡನೇ ಹಂತದ ಮೆಟ್ರೋ ಯೋಜನೆಗೆ 9300 ಕಾರ್ಮಿಕರನ್ನು
ನಿಯೋಜಿಸಲಾಗಿತ್ತು. ಆದರೆ, ಕೊರೋನಾ ಹಾವಳಿಯಿಂದ ಸುಮಾರು 5.200 ಕಾರ್ಮಿಕರು ವಾಪಸ್ಸು ತಮ್ಮ
ಊರುಗಳಿಗೆ ತೆರಳಿದ್ದಾರೆ ಎಂದು ನಿಗಮ ತಿಳಿಸಿದೆ. ಈ ಕೊರತೆ ನೀಗಿಸಲು ಗುತ್ತಿಗೆದಾರರು ಕರ್ನಾಟಕದ ವಿವಿಧ
ಜಿಲ್ಲೆಗಳು ಹಾಗೂ ಇತರೆ ರಾಜ್ಯಗಳಿಂದ ಹೊಸದಾಗಿ ಕಾರ್ಮಿಕರನ್ನು ಕರೆತರುತ್ತಿದ್ದು, ಈವರೆಗೆ 2,400
ಕಾರ್ಮಿಕರನ್ನು ಶಿಬಿರಕ್ಕೆ ಸೇರ್ಪಡೆಗೊಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಮುಂದೆ ಮೆಟ್ರೋ ಸೇವೆ ಆರಂಭ:-ಮುಂದಿನ ಹಂತದಲ್ಲಿ "ನಮ್ಮ ಮೆಟ್ರೋ” ಇರುವ ನಿರ್ಬಂಧ ಕೂಡ
ತೆರವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ:ಅಶ್ವತ್ಸ ನಾರಾಯಣ ತಿಳಿಸಿದರು. ಮೆಟ್ರೋ ಸುರಂಗ ನಿರ್ಮಾಣ
ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಹಂತ-ಹಂತವಾಗಿ ಎಲ್ಲವೂ
ಅನ್‌ಲಾಕ್‌ ಆಗುತ್ತಿದೆ. ಮೆಟ್ರೋ ಕೂಡ ಇದಕ್ಕೆ ಹೊರತಾಗಿರುವುದಿಲ್ಲ. ವಾಣಿಜ್ಯ ಸೇವೆ ಪುನಾರಂಭಕ್ಕೆ
ಸಂಬಂಧಿಸಿದಂತೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದರು.


ಆಧಾರ:ಉದಯವಾಣಿ, ದಿನಾಂಕ:31.07.2020
52. ಮೀನುಗಾರರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ


ಮೀನು ಹಾಗೂ ಮೀನಿನ ಉತ್ಪನ್ನಗಳಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನಗಳಿಸುವ ನಿಟ್ಟಿನಲ್ಲಿ
ಸರ್ಕಾರ ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.


ಗೃಹ ಕಚೇರಿ ಕೃಷ್ಣಾದಲ್ಲಿ ಮೀನುಗಾರಿಕೆ ಇಲಾಖೆಯ ಸಾಧನೆ ಹಾಗೂ ಮುಂದಿನ ಕಾರ್ಯ
ಯೋಜನೆಗಳ ಕೈಪಡಿ ಬಿಡುಗಡೆಗೊಳಿಸಿ ಮಾತನಾಡಿ, ಪ್ರಸ್ತುತ ಮೀನು ಉತ್ಪಾದನೆಯಲ್ಲಿ ಕರ್ನಾಟಕ ನಾಲ್ಕನೇ
ಸ್ಥಾನ ಪಡೆದಿದೆ. ಮೊದಲ ಸ್ಥಾನ ಪಡೆಯಲು ಮೀನುಗಾರರಿಗೆ ಅಗತ್ಯವಾದ ಎಲ್ಲ ನೆರವು ಒದಗಿಸಲಾಗುವುದು.


156


ರಾಜ್ಯದಲ್ಲಿ 1.8 ಲಕ್ಷದಿಂದ 2 ಲಕ್ಷ ಟನ್‌ ಮೀನು ಉತ್ಪಾದನೆಯಾಗುತ್ತಿದ್ದು, ಇದನ್ನು ಮೂರು ಪಟ್ಟು
ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ 10 ಲಕ್ಷ ಕುಟುಂಬಗಳು 40 ಲಕ್ಷ ಜನರು ಮೀನುಗಾರಿಕೆಯಲ್ಲಿ
ತೊಡಗಿದ್ದು, ಕಡಲ ಮೀನುಗಾರಿಕೆ ಹಾಗೂ ಒಳನಾಡು ಮೀನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಿ
ಮೋದಿ ಅವರು ರೂ.20.50 ಕೋಟಿ ಪ್ಯಾಕೇಜ್‌ ಘೋಷಿಸಿದ್ದಾರೆ. ರಾಜ್ಯಕ್ಕೆ ಹೆಚ್ಚಿನ ನೆರವು ಪಡೆಯಲು
ಪ್ರಯತ್ನಿಸಲಾಗುವುದು ಎಂದು ಹೇಳಿದರು.


ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಯಡಿಯೂರಪ್ಪ ನೇತೃತ್ನದ ಸರ್ಕಾರ
ಬಂದ ನಂತರ ಮೀನುಗಾರರಿಗೆ ಸಾಲ ಮನ್ನಾ ಹೊಸ ಸಾಲದ ವ್ಯವಸ್ಥೆ ಸೇರಿ ಹಲವು ಯೋಜನೆ
ಜಾರಿಗೊಳಿಸಲಾಗಿದೆ. ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೆ ಕಮ ಕೈಗೊಳ್ಳಲಾಗಿದೆ. ಕರಾವಳಿ ಭಾಗದಲ್ಲಿ ತಲೆ
ಮೇಲೆ ಬುಟ್ಟಿ ಹೊತ್ತು ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರಿಗೆ ದ್ವಿಚಿಕ್ರ ವಾಹನ ಕೊಡುವ ಕ್ರಾಂತಿಕಾರಕ
ನಿರ್ಧಾರ ಕೈಗೊಂಡಿದ್ದಾರೆ ಎಂದರು. ಸಚಿವರಾದ ಆರ್‌.ಅಶೋಕ್‌, ಭೈರತಿ ಬಸವರಾಜ್‌, ಶಾಸಕ ರಘುಪತಿ
ಭಟ್‌, ಮೀನುಗಾರಿಕೆ ಫೆಡರೇಷನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ, ಇಲಾಖೆ ಕಾರ್ಯದರ್ಶಿ ಕ್ಯಾಪ್ಪನ್‌
ಮಣಿವಣ್ಣನ್‌ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳಿ ಮೃತಪಟ್ಟವರ ಕುಟುಂಬಗಳಿಗೆ
ನೆರವಿನ ಚೆಕ್‌ ಹಸ್ತಾಂತರಿಸಲಾಯಿತು.


ಆಧಾರ:ಉದಯವಾಣಿ, ದಿನಾಂಕ:31.07.2020
53. ಜಿಎಸ್‌ಟಿ ಪರಿಹಾರ ಪಡೆಯಲು ರಾಜ್ಯ ಕಸರತ್ತು


ಕೋವಿಡ್‌-19 ಹಾವಳಿ, ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಕೇಂದ
ಸರ್ಕಾರದಿಂದ ಜಿಎಸ್‌ಟಿ ಪರಿಹಾರ ಕೈತಪ್ಪಲಿದೆಯೇ ಎಂಬ ಆತಂಕ ರಾಜ್ಯ ಸರ್ಕಾರವನ್ನು ಕಾಡುತ್ತಿದ್ದು
ಜಿಎಸ್‌ಟಿ ಪರಿಹಾರ ಪಡೆಯಲು ತೀವ್ರ ಕಸರತ್ತು ಆರಂಭಿಸಿದೆ.


ಕೇಂದ್ರ ಸರ್ಕಾರವು ತನ್ನ ಸ್ವಂತ ಸಂಪನ್ಮೂಲ ಇಲ್ಲವೇ ಸಾಲ ಪಡೆದಾದರೂ ರಾಜ್ಯಕ್ಕೆ ಜಿಎಸ್‌ಟಿ
ಪರಿಹಾರ ವಿತರಿಸಬೇಕು. ರಾಜ್ಯಗಳ ಆರ್ಥಿಕತೆ ಸುಧಾರಣೆ ದೃಷ್ಟಿಯಿಂದ 2022ರ ಬಳಿಕವೂ ಜಿಎಸ್‌ಟಿ ಪರಿಹಾರ
ವಿತರಣೆ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಲು ಚಿಂತಿಸಿದೆ. ಸದ್ಯದಲ್ಲೇ ಜಿಎಸ್‌ಟಿ
ಕೌನ್ಸಿಲ್‌ ಸಭೆಯಲ್ಲೂ ಈ ವಿಚಾರಗಳನ್ನು ಪ್ರಧಾನವಾಗಿ ಪ್ರತಿಪಾದಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು
ಕುತೂಹಲ ಮೂಡಿಸಿದೆ.


ತೆರಿಗೆ ಆದಾಯ ಖೋತಾದಿಂದಾಗಿ ಪ್ರಸಕ್ತ ವರ್ಷದ ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಕೇಂದ್ರ
ಸರ್ಕಾರ ಜಿಎಸ್‌ಟಿ ಪರಿಹಾರ ನೀಡಿಲ್ಲ. ಬದಲಿಗೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ.2ರಷ್ಟು
ಹೆಚ್ಚುವರಿ ಸಾಲ ಪಡೆಯುವ ಇಲ್ಲವೇ ಜಿಎಸ್‌ಟಿ ಉಪಕರ ಹೆಚ್ಚಳ ಅಥವಾ ಜಿಎಸ್‌ಟಿ ತೆರಿಗೆ ಪ್ರಮಾಣ ಏರಿಕೆ
ಮಾಡುವ ಆಯ್ಕೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.


ಆದರೆ ಈ ಯಾವ ಆಯ್ಕೆಗಳನ್ನು ಒಪ್ಪಲು ಸಿದ್ದವಿಲ್ಲದ ರಾಜ್ಯ ಸರ್ಕಾರವು ಕಾಯ್ದೆ ಪ್ರಕಾರ ಜಿಎಸ್‌ಟಿ
ಪರಿಹಾರ ವಿತರಿಸಬೇಕು ಎಂದು ಕೇಂದಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ. 2019-20ನೇ
ಸಾಲಿನವರೆಗೆ ಜಿಎಸ್‌ಟಿ ಪರಿಹಾರ ಬಿಡುಗಡೆಯಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉಂಟಾಗುತ್ತಿರುವ ಜಿಎಸ್‌ಟಿ
ನಷ್ಟವನ್ನು ಭರಿಸಿಕೊಡಬೇಕೆಂದು ಕೋರಲು ಸಿದ್ಧತೆ ನಡೆಸಿದೆ. ಇದಕ್ಕೆ ಕೇಂದ್ರ ಹೇಗೆ ಸ್ಪಂದಿಸಲಿದೆ ಎಂಬುದನ್ನು
ಕಾದು ನೋಡಬೇಕಿದೆ.


ಪರಿಹಾರ ನೀಡುವುದು ಕಡ್ಡಾಯ:-ಜಿಎಸ್‌ಟಿ ವ್ಯವಸ್ಥೆ ಜಾರಿಯಿಂದ ರಾಜ್ಯಗಳು ಪಡೆಯುವ ತೆರಿಗೆ ಆದಾಯದಲ್ಲಿ
ಖೋತಾ ಆದರೆ ಆ ನಷ್ಟವನ್ನು ಕೇಂದ್ರ ಸರ್ಕಾರ ಭರಿಸುವ ವಾಗ್ದಾನ ನೀಡಿದೆ. 2015-16ನೇ ಸಾಲಿನಲ್ಲಿ
ರಾಜ್ಯಗಳು ಸಂಗಹಿಸಿದ ತೆರಿಗೆ ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ವಾರ್ಷಿಕವಾಗಿ ಶೇ.14ಕ್ಕಿಂತ ಹೆಚ್ಚುವರಿ
ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಖೋತಾ ಆಗುವ ಪ್ರಮಾಣವನ್ನು ಜಿಎಸ್‌ಟಿ ಪರಿಹಾರ ರೂಪದಲ್ಲಿ ಭರಿಸಲು
ಕೇಂದ್ರ ಸರ್ಕಾರ ಒಪ್ಪಿದೆ. ಈ ಸಂಬಂಧ ಕಾಯ್ದೆ ಕೂಡ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಪರಿಹಾರ ನೀಡುವುದು
ಅನಿವಾರ್ಯ. ಪರಿಹಾರ ನೀಡುವುದಿಲ್ಲ ಎಂದಾದರೆ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಮೂಲಗಳು
ಹೇಳಿವೆ.


157


ರಾಜ್ಯದ ವಾದ:-ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರವು ತನ್ನ ಸ್ಪಂತ ಮೂಲ ಇಲ್ಲವೇ ಸಾಲ ಪಡೆದಾದರೂ
ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಬೇಕು. ಸದ್ಯದ ಪರಿ ಸಂಕಷ್ಟದಿಂದ ಐ ಪಾರಾಗಲೂ ಸಾಕಷ್ಟು ಸಮಯ
ಬೇಕಾಗುತ್ತದೆ. ಜಿಎಸ್‌ಟಿ ಪರಿಹಾರವನ್ನು 2021- ೨ಕ್ಕೆ ಅಂತ್ಯಗೊಳಿಸದೇ ಅನಂತರವೂ ಮುಂದುವರಿಸಬೇಕು
ಎಂಬುದಾಗಿ ಕೇಂದಕ್ಕೆ ಸಲಹೆ ನೀಡಲು ಸಿದ್ದತೆ ನಡೆದಿದೆ ಎಂದ ಉನ್ನತ ಮೂಲಗಳು ತಿಳಿಸಿವೆ. ಪ್ರಸಕ್ತ ಆರ್ಥಿಕ
ವರ್ಷದಲ್ಲಿ ಏಪ್ರಿಲ್‌ಗೆ ಸಂಬಂಧಪಟ್ಟಂತೆ ರೂ.787 ಕೋಟಿ ಪರಿಹಾರ A ed. ರಾಜದ ಸಲಹೆ,
ವಾದವನ್ನು ಸದ್ಯದಲ್ಲೇ ನಡೆಯಲಿರುವ ಜಿಎಸ್‌ಟಿ ಕೌನ್ನಿಲ್‌ನಲ್ಲಿ ಮಂಡಿಸಲು ಪ್ರಯತ್ನ ನಡೆದಿದೆ. ಕೇಂದ್ರ ಸರ್ಕಾರ
ಜಿಎಸ್‌ಟಿ ಮ ನೀಡದಿದ್ದರೆ ರಾಜ್ಯದ ಆರ್ಥಿಕತೆಗೆ ಭಾರಿ ಹೊಡೆತ ಬೀಳಲಿದೆ ಗ ಹೇಳಿವೆ.


ಆಧಾರ:ಉದಯವಾಣಿ, ದಿನಾಂಕ:31.07.2020
54. ಮಾತ ೃಭಾಷೆಗೆ ಮಹತ್ವ ಕೊಟ್ಟರೂ ಕಡ್ಡಾಯವೇನಲ್ಲ


34 ವರ್ಷಗಳ ಬಳಿಕ ರೂಪುಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ
ಅನುಮೋದನೆಯ ಮುದ್ರೆ ಒತ್ತಿದೆ. ಹಲವು ಮಹತ್ವದ ಆಂಶಗಳು, ಸೈಕ್ಷಣಿಕ ಸುಧಾರಣೆಯ ಹೊಸ ದಾರಿಗಳನ್ನೂ
ಒಳಗೊಂಡಿರುವ ಈ ನೀತಿಯ ಕುರಿತಾದ ಸಂಕ್ಷಿಪ್ತ "ಎಕೇಷಣೆ ಮತ್ತು ಸ ತಜ್ಞರ ಅನಿಸಿಕೆಗಳು ಇಲ್ಲಿವೆ.


1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಕೇಂದ್ರ
ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಸಲಹೆ ನೀಡಲಾಗಿದೆ. ಆದರೆ, ಮಾತೃಭಾಷೆ/ಪ್ರಾದೇಶಿಕ/ಸ್ಥಳೀಯ
ಭಾಷೆಯಲ್ಲಿ ಶಿಕ್ಷಣ ನೀಡುವುದು ಕಡ್ಡಾಯ ಎಂಬ ವಾಕ್ಯವನ್ನೇನೂ ಇಲ್ಲಿ ಬಳಸಲಾಗಿಲ್ಲ. ಕರ್ನಾಟಕದ ಮಟ್ಟಿಗೆ
ಕಲಿಕೆಗೆ ಕನ್ನಡ ಬಾಷೆ ಕಡ್ಡಾಯವೇನಲ್ಲ. ಅಂದರೆ, ರಾಜ್ಯ ಸರ್ಕಾರಗಳು ವಿವೇಚನೆಗೆ ತಕ್ಕಂತೆ ನಿರ್ಧಾರ
ತೆಗೆದುಕೊಳ್ಳಬಹುದು ಎನ್ನುವ ಅರ್ಥ ಬರುವಂತೆ ವಿವರಿಸಲಾಗಿದೆ. "ಶಾಲಾ ಶಿಕ್ಷಣವು ಕನಿಷ್ಠ 5ನೇ ತರಗತಿವರೆಗೆ,
ಸಾಧ್ಯವಾದಲ್ಲಿ 8ನೇ ತರಗತಿವರೆಗೆ ಸ್ಥಳೀಯ ಭಾಷೆ/ಮಾತೃಭಾಷೆಯಲ್ಲಿ ಲಭ್ಯವಾಗಬೇಕು. ಅಗತ್ಯವೆನಿಸಿದೆಡೆ ಸುಲಭ
ಸಾಧ್ಯವಾದ ದ್ವಿಭಾಷಾ ವಿಧಾನ ಅನುಸರಿಸಬೇಕು” ಎಂದು ಶಿಕ್ಷಣ ನೀತಿ ಹೇಳುತ್ತದೆ. 1ರಿಂದ 5ನೇ ತರಗತಿ
ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿಯೇ ಕಲಿಕೆ ಕಡ್ಡಾಯ ಮಾಡಬೇಕು ಎಂದು ರಾಜ್ಯ ಸರ್ಕಾರ
ಸುಪ್ರೀಂಕೋರ್ಟ್‌ನಲ್ಲಿ ವಾದಿಸಿತ್ತಾದರೂ, ಸಾಂವಿಧಾನಿಕ ಅಂಶಗಳಿಗೆ ಮಹತ್ವ ನೀಡಿದ್ದ ಸುಪ್ರೀಂಕೋರ್ಟ್‌,
ಕಲಿಕೆಯಲ್ಲಿ ಭಾಷೆಯನ್ನು ವಿದ್ಯಾರ್ಥಿ ಮೇಲೆ ಹೇರಲು ಬರುವುದಿಲ್ಲ ಎಂದು 2014ರಲ್ಲಿ ತೀರ್ಪು ನೀಡಿತ್ತು.
ಇದಾದ ಬಳಿಕ, ರಾಜ್ಯ ಸರ್ಕಾರದ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲೀಷ್‌ ಮಾಧ್ಯಮವನ್ನು ಕಲಿಕಾ
ಮಾಧ್ಯಮವಾಗಿ ಪರಿಚಯಿಸಲಾಗಿದೆ.


ಕನ್ನಡದಲ್ಲಿ ಬೋಧನೆ ಕಡ್ಡಾಯವಾಗಿರಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಪ್ರಾದೇಶಿಕತೆಯ ಮಹತ್ವ
ಅರಿಯಲು ಸಾಧ್ಯ. ಸಣ್ಣ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಆಲೋಚನಾ ಶೈಲಿ ಮೂಡುವುದು ಮಾತೃಭಾಷೆಯಲ್ಲಿಯೇ
ಎಂದು ಅನೇಕ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, "ನಾವು ಯಾವುದೇ ಭಾಷೆಯನ್ನು ಹೇರುವುದಿಲ್ಲ
ಎಂದಿರುವ ಕೇಂದ್ರ ಸರ್ಕಾರ, ಮಾತೃಭಾಷಾ ಶಿಕ್ಷಣವನ್ನು ವಿದ್ಯಾರ್ಥಿ ಮತ್ತು ಹೆತ್ತವರ ಮೇಲೆ ಹೇರುವ ಸಾಹಸ
ಮಾಡಿಲ್ಲ. ಮಾತೃಭಾಷೆ ಆದ್ಯತೆಯಾಗಬೇಕು ಎಂಬ ಕಿವಿಮಾತು ಹೇಳಿದೆ. ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ
ಇಂಗ್ಲೀಷ್‌ ಮಾಧ್ಯಮವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಸಲಹೆ ಕೇಳಲು ಖುಷಿಯಾಗುತ್ತದೆ.
ಆದರೆ ಹೆತ್ತವರ ಆಲೋಚನೆ ಬೇರೆಯದೇ ಆಗಿರುತ್ತದೆ" ಎಂದು ಬಿಜೆಪಿ ಮುಖಂಡರೊಬ್ಬರು
ಅಭಿಪ್ರಾಯಪಡುತ್ತಾರೆ.


ನೇಮಕಾತಿಯಲ್ಲಿ ಸ್ಥಳೀಯ ಭಾಷೆಗೆ ಮಹತ್ವ; ನೇಮಕಾತಿಯಲ್ಲಿ ಸ್ಥಳೀಯರು ಹಾಗೂ ಸ್ಥಳೀಯ ಭಾಷೆಯನ್ನು
ನಿರರ್ಗಳವಾಗಿ ಮಾತನಾಡಬಲ್ಲ ಶಿಕ್ಷಕರಿಗೆ ಆದ್ಯತೆ ನೀಡಲು ಶಿಕ್ಷಣ ನೀತಿ ಒತ್ತು ನೀಡಿದೆ. ಅನೇಕ
ರಾಜ್ಯಗಳಲ್ಲಿರುವಂತೆ ಶಿಕ್ಷಕರನ್ನು ಜಿಲ್ಲೆಗೆ ನೇಮಕ ಮಾಡಲಾಗುತ್ತದೆ. ಪಾರದರ್ಶಕ ತಂತ್ರಜ್ಞಾನ ಆಧಾರಿತ
ವರ್ಗಾವಣೆ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕಲಿಸಲು ಶಿಕ್ಷಕರಿಗೆ ಪ್ರೋತ್ಸಾಹಧನವನ್ನು ನೀಡಲು
ಉದ್ದೇಶಿಸಲಾಗಿದೆ.


ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ)ಒಪ್ಪಿಗೆ ಸೂಚಿಸುವ ಮೂಲಕ ಹೊಸ ಇತಿಹಾಸ
ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ. ಜ್ಞಾನದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು


158


ಇದು ಅನುವು ಮಾಡಿ ಕೊಡುತ್ತದೆ. ಪ್ರಾಥಮಿಕದಿಂದ 5ನೇ ತರಗತಿಯವರೆಗೆ ಮಾತೃಭಾಷಾ ಶಿಕ್ಷಣ
ನೀಡಬೇಕೆಂಬ ರಾಜ್ಯದ ಬಹುವರ್ಷದ ಕನಸು ಈ ಬಾರಿ ನನಸಾಗುತ್ತಿದೆ. ಶಿಕ್ಷಣ ಅಭಿವೃದ್ಧಿಯಲ್ಲಿ ಸಮುದಾಯ
ಮತ್ತು ತತ್ವಜ್ಞಾನಿಗಳ ಪಾತ್ರ ತಕ್ಕೆ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಪದವಿ ಶಿಕ್ಷಣವನ್ನು
ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಗಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಠಃ Wk
ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆಯನ್ನು ಎನ್‌ಇಪಿ ಹೊಂದಿದೆ ಎಂದು iy ಆರ್‌.ದೊರೆಸ್ಟಾಮಿ, ಶಿಕ್ಷಣ
ಟು ಸಲಹೆಗಾರರು ಹೇಳಿದ್ದಾರೆ.


ಜ್ಞಾನ. ಕೌಶಲ ಹಾಗೂ ಆರ್ಥಿಕತೆ ಮುಂಚೂಣಿಯಲ್ಲಿ ತರಲು ಉದ್ದೇಶಿತ ನೂತನ ರಾಷ್ಟ್ರೀಯ ಶಿಕ್ಷಣ
ನೀತಿ ಏಕರೂಪ, ಸಮಾನತೆ ಹಾಗೂ ಗುಣಮಟ್ಟದ ಶಿಕ್ಷಣವನ್ನು ತಂತ್ರಜ್ಞಾನದೊಂದಿಗೆ ನೀಡುವಲ್ಲಿ
ಉತ್ತಮವಾಗಿದೆ. ದೇಶದ ಭವಿಷ್ಯವನ್ನು ಉಜ್ಜಲಗೊಳಿಸುವ ದೃಷ್ಟಿಕೋನವುಳ್ಳ ನೀತಿ ಶಿಕ್ಷಣದ ಗುಣಮಟ್ಟ
ಸುಧಾರಣೆ ಮತ್ತು ಸಮಕಾಲೀನ ಜಾಗತಿಕ ಅಗತ್ಯಕ್ಕೆ ಪೂರಕವಾಗಿದೆ. ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣವನ್ನು
ಮಾತೃಭಾಷೆಯಲ್ಲಿ ನೀಡುವುದರಿಂದ ಶಿಕ್ಷಣದ ತಳಪಾಯ ಗಟ್ಟಿಗೊಳ್ಳುತ್ತದೆ ಎಂದು ಸಭಾಧ್ಯಕ್ಷರಾದ ವಿಶ್ವೇಶ್ವರ
ಹೆಗಡೆ, ಕಾಗೇರಿ ಹೇಳಿದ್ದಾರೆ.


ಆಧಾರ:ವಿಜಯವಾಣಿ, ದಿನಾ೦ಕ:31.07.2020
55. ಶಿಕ್ಷಣ, ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ


ಶಿಕ್ಷಣ ಮತ್ತು ಶಿಕ್ಷಕ ಸ್ನೇಹಿಯಾದ ವರ್ಗಾವಣೆ ನೀತಿಯನ್ನು ಆಗಸ್ಟ್‌ನಲ್ಲಿ ಅನುಷ್ಠಾನಗೊಳಿಸಲಾಗುವುದು
ಎಂದು ಪ್ರಾಥಮಿಕ ಮತ್ತು ಪ ಪೌಢ ಶಿಕ್ಷಣ ಸಚಿವ ಎಸ ಸ್‌.ಸುರೇಶ್‌ ಹ ತಿಳಿಸಿದ್ದಾರೆ. ಈ ಕುರಿತು ಅಧಿಕಾರಿಗಳ
ಸಭೆಯನ್ನು ನಡೆಸಿ, ಕೂಡಲೇ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲು ಸೂಚಿಸಿದ್ದೇನೆ. ಕಳೆದ ಬಾರಿ
ಕಡ್ಡಾಯ ವರ್ಗಾವಣೆಯಿಂದ ತೊಂದರೆಗೀಡಾಗಿದ್ದ ಶಿಕ್ಷಕರಿಗೆ ಈ ಬಾರಿಯ ವರ್ಗಾವಣೆಯಲ್ಲಿ ಮೊದಲ ಆದ್ಯತೆ
ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.


ವರ್ಗಾವಣೆಗೆ ಸಂಬಂಧಿಸಿದಂತೆ ರೂಪಿಸಿದ್ದ ಕರಡು ನಿಯಮಗಳ ಕುರಿತು ಇಲಾಖೆಯು
ಮ ಸಲ್ಲಿಸಿತ್ತು ಸುಮಾರು 2,500 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ ಕೆಲವು
ಗಳನ್ನು ಪರಿಗಣಿಸಿ ಜುಲೈ 23ರಂದು ಅಂತಿಮ ನಿಯಮಗಳನ್ನು ಪ್ರಕಟಿಸಲಾಗಿದೆ.

ಪರಿಷ್ಣೃಠ ನಿಯಮದ ಅನುಸಾರ, ಶೇ.25ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ
ವರ್ಗಾವಣೆಗೆ ಅವಕಾಶವಿಲ್ಲ. 50 ವರ್ಷ ಮೇಲ್ಪಟ್ಟ ಶಿಕ್ಷಕಿಯರು ಹಾಗೂ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೂ
ವರ್ಗಾವಣೆಗೆ ಅವಕಾಶವಿಲ್ಲ. ಪತಿ-ಪತ್ನಿ ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಥವಾ ಅನುದಾನಿತ
ಸಂಸ್ಥೆಯ ನೌಕರರನ್ನು ವಿವಾಹವಾಗಿರುವ ಶಿಕ್ಷಕರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ ಅಥವಾ
ಪತಿ-ಪತ್ನಿ ಅಥವಾ ಮಕ್ಕಳು, ಶೇ.40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಶಿಕ್ಷಕರಿಗೆ ಈ ನಿಯಮಗಳಿಂದ
ವಿನಾಯಿತಿ ನೀಡಲಾಗಿದೆ.


ಪರಸ್ಪರ ವರ್ಗಾವಣೆಯಲ್ಲಿ ಈವರೆಗೆ ಇದ್ದ ಮೂರು ವರ್ಷಗಳ ಅವಧಿಯನ್ನು ಈ ಬಾರಿ ಕನಿಷ್ಠ 7
ವರ್ಷಗಳಿಗೆ ಹೆಚಿ ಸಿಸಲಾಗಿದೆ. ಸಾಮಾನ್ಯ ವರ್ಗಾವಣೆ ಮುಕ್ತಾಯಗೊಂಡ ನಂತರ, ಕೌನ್ನೆಲಿಂಗ್‌ ಮೂಲಕ ಪರಸ್ಪರ
ವರ್ಗಾವಣೆ ಪಕಿಯೆ ಪಾ ಪ್ರಾರಂಭಿಸಲಾಗುತ್ತದೆ.


ರಹಿತ





ಆಧಾರ:ಪಜಾವಾಣಿ, ದಿನಾಂಕ:01.08.2020
56. ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ರಾಜ್ಯ ಸರ್ಕಾರದ ತಯಾರಿ
ಳು


ಕೇಂದದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿರುವ ರಾಜ್ಯ ಸರ್ಕಾರ, ಈ
ನೀತಿಯನ್ನು ಮೊದಲು ಮ ಇನಗೊಳಿಸುವ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಲು


ಸ್ಟ್‌ನಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾ ನಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ವರದಿ ಸಿದ್ದಪಡಿಸಲು
pe ಇಲಾಖೆ "ಅಧಿಕಾರಿಗಳಿಗೆ ಗಡುವು ನೀಡಿದೆ. ರಾಜ್ಯದ ಆಶಯಗಳು, ಅನುಷ್ಠಾನ ಪಕಿಯೆ


TU


159


ಹೇಗಿರಬೇಕು, ಇದಕ್ಕೆ ಸಂಬಂಧಿಸಿದ ಕಾನೂನುಗಳ ರಚನೆ ಮತ್ತಿತರ ಅಂಶಗಳನ್ನು ಈ ಕ್ರಿಯಾಯೋಜನೆ
ಒಳಗೊಂಡಿರುತ್ತದೆ.


ಈ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಶಿಕ್ಷಣ
ಸಚಿವರು "ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)-2019' ಅನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಿರುವ
ಮೊದಲ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿರಬೇಕು. ಈ ನಿಟ್ಟಿನಲ್ಲಿ ಮುಂದಿನ 15 ದಿನಗಳಲ್ಲಿ ಕೇಂದ್ರದ
ಹಾಗೂ ರಾಜ್ಯದ ನೀತಿಗಳ ಕುರಿತು ಅಧ್ಯಯನ ನಡೆಸಿ, ವರದಿಯನ್ನು ಹೊರತರಲು ಕ್ರಮ ವಹಿಸಬೇಕು.
ಸಾಧ್ಯವಾದರೆ, ಆಗಸ್ಟ್‌ 20ಕ್ಕೆ ಅದನ್ನು ಲೋಕಾರ್ಪಣೆಗೊಳಿಸಬೇಕು ಎಂದು ಹೇಳಿದರು.


ರಾಷ್ಟ್ರೀಯ ಶಿಕ್ಷಣ ನೀತಿ ರೂಪುರೇಷೆ ಪ್ರಕಟಗೊಂಡಿದ್ದು, ಇಡೀ ದೇಶದ ಶಿಕ್ಷಣ ವ್ಯವಸ್ಥೆಗೆ ಹೊಸದಿಕ್ಕು
ತೋರಿಸಿದೆ. ಸ್ಪಾತಂತ್ರ್ಯ "ನಂತರ ಕೇವಲ ಎರಡು ಬಾರಿ ಶಿಕ್ಷಣ ನೀತಿ ಪರಿಷ್ಠರಣೆಗೊಂಡಿರುವುದು ಮತ್ತು ವಾ
ಸವಾಲುಗಳನ್ನು. ಸಮರ್ಥವಾಗಿ ಎದುರಿಸುವ ರೀತಿಯಲ್ಲಿ ಕೇಂದ್ರ ಸರ್ಕಾರವು ನೀತಿಯನ್ನು ಪ್ರಕಟಿಸಿದೆ. ಇದನ್ನು
ಕಂಗಳು ನಮ್ಮ ಜವಾಬ್ದಾರಿ. ಕರ್ನಾಟಕದ ಅವಶ್ಯಕತೆಗಳಿಗೆ ಅನುಗುಣವಾಗಿ ಇದಕ್ಕೆ ಪೂರಕವಾದ
ರೂಪುರೇಷೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು. ಈ ಮಧ್ಯೆ "ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುಗಗೆ
ಪೂರಕವಾಗಿ ಇದೇ ಫೆಬ್ರವರಿಯಲ್ಲಿ ವಿಶೇಷ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಲಾಗಿತ್ತು. ಇದರಲ್ಲಿನ
ಅಂಶಗಳು ಕೂಡ ಈಗ ತ್ಪರಿತವಾಗಿ ಹೊಸ ನೀತಿ ಜಾರಿಗೊಳಿಸಲು ಅನುಕೂಲ ಆಗಲಿದೆ.


ಕೇರಳ ನನ್ನ ಜನ್ನಭೂಮಿಯಾಗಿದ್ದರೂ ಕರ್ನಾಟಕ ನನ್ನ ಕರ್ಮಭೂಮಿ. ಕರ್ನಾಟಕ ನನ್ನ ರಾಜ್ಯ ಎಂದ
ಕಸ್ತೂರಿ ರಂಗನ್‌, ಭಾರತ ದೇಶ ವಿವಿಧ ರೀತಿಯ ಸಾಮಾಜಿಕ, ಭಾಷೆ, ಧರ್ಮ, ಸಂಸ್ಕೃತಿ, ಗಾಮೀಣ, ನಗರ,
ಗುಡ್ಡಗಾಡು, ಅಭಿವೃದ್ದಿ ಹೊಂದಿದ, ಹಿಂದುಳಿದ ಪ್ರದೇಶಗಳಂತಹ ಹಲವು ಸ್ವರಗಳ ಪ್ರದೇಶಗಳನ್ನೊ ಳಗೊಂಡಿದ್ದು,
ಮುಂದಿನ 20ವರ್ಷಗಳಲ್ಲಿ ದೇಶವು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಹೊಸ ಶಕ್ಷಣ ನೀತಿಯನ್ನು
ರೂಪಿಸಲಾಗಿದೆ ಎಂದರು. ತಾವು ಕರ್ನಾಟಕದಲ್ಲಿ ಕಳೆದ "ದಿನಗಳನ್ನು ಸೃರಿಸಿಕೊಂಡ ಕಸ್ತೂರಿ "ರಂಗನ್‌ ಮ
ಶೈಕ್ಷಣಿಕ ಅಭಿವೃದ್ಧಿಯ ನಿಟ್ಟಿನಲ್ಲಿ ತಮ್ಮ ಉತ್ಪುಕತೆ, ಆಸಕ್ತಿ ಮೆಚ್ಚುವ೦ತಹದ್ದಾಗಿದೆ. ಕರ್ನಾಟಕ ಈಗಾಗಲೇ
ೈಸಣಿಕವಾಗಿ ಇಡೀ ದೇಶದಲ್ಲೇ ಮುಂಚೂಣಿಯಲ್ಲಿರುವುದನ್ನು ರಾಷ್ಟ್ರ ಗಮನಿಸಿದೆ ಎಂದು ಮೆಚ್ಚುಗೆ
ವೃಕಪಡಿಸಿದರು.


ಕರ್ನಾಟಕದಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಬಹುತೇಕ ಸಂಗತಿಗಳು ಹೊಸ ಶಿಕ್ಷಣ ನೀತಿಯಲ್ಲಿ
ಅಳವಡಿಕೆಯಾಗಿದ್ದು, ಹೊಸ ನೀತಿಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ದೇಶದ ಶಕ್ಷಣ ವ್ಯವಸ್ಥೆಯು
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನವನ್ನು ಪಡೆಯುವ ಮೊದಲೇ ದೂರದೃಷ್ಟಿಯ ಧ್ಯೇಯಗಳನ್ನು
ಅಳವಡಿಸಿಕೊಂಡ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂದಿದೆ ಎಂದು ಕಸ್ತೂರಿ ರಂಗನ್‌ ಹೇಳಿದರು. ಸಭೆಯಲ್ಲಿ
ವಿಧಾನ ಪರಿಷತ್ತಿನ ಸದಸ್ಯರಾದ ಅರುಣ್‌ ಶಹಾಪುರ, ಡಾ: ವೈ.ಎ.ನಾರಾಯಣಸ್ವಾಮಿ. ಪ್ರಾಥಮಿಕ ಹಾಗೂ ಪೌಢ
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ:
ಕೆ.ಜಿ.ಜಗದೀಶ್‌, ಸಮಗ್ರ ಶಿಕ್ಷಣ- ಕರ್ನಾಟಕ ಯೋಜನಾ ನಿರ್ದೇಶಕಿ ದೀಪಾ ಚೋಳನ್‌ ಮತ್ತಿತರರು
ಭಾಗವಹಿಸಿದ್ದರು.


ಸಿಎಂ ಅಭಿನಂದನೆ:-ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷ ಹಿರಿಯ ವಿಜ್ಞಾನಿ ಕಸ್ತೂರಿ ರಂಗನ್‌
ಅವರನ್ನು ಸಿಎಂ ಯಡಿಯೂರಪ್ಪ ಅಭಿನಂದಿಸಿದರು. 2019ರ ಮೇನಲ್ಲಿ ಹೊಸ ಶಿಕ್ಷಣ ನೀತಿಯ ಕರಡು
ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಸ್ತೂರಿ ರಂಗನ್‌ ಸಲ್ಲಿಸಿದ್ದರು. ಈಗ ಅವರ ವರದಿಯನ್ನು ಕೇಂದ್ರ ಸರ್ಕಾರ
ಅನುಮೋದಿಸಿದೆ. ಈ ಹಿನ್ನೆಲೆಯಲ್ಲಿ ಶಾಲು ಹೊದಿಸಿ, ಸನ್ಮಾನಿಸಲಾಯಿತು.


ಕಸ್ತೂರಿ ರಂಗನ್‌ಗೆ ಅಭಿನಂದನೆ: ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷರಾದ ಡಾ: ಕೆ.ಕಸ್ತೂರಿ ರಂಗನ್‌
ಅವರೊಂದಿಗೆ ವೆಬಿನಾರ್‌ ಮೂಲಕ ಮಾತನಾಡಿದ ಶಿಕ್ಷಣ ಸಚಿವರು ವಿವಿಧ ಸ್ತರಗಳ, ನಾನಾ ಅಂತರಗಳಿರುವ
ಈ ರಾಷ್ಟ್ರದ ಎಲ್ಲರಿಗೂ ಅನ್ವಯವಾಗಬಹುದಾದ "ನೂತನ ಶಿಕ್ಷಣಂ ನೀತಿಯನ್ನು ಶ್ರಮವಹಿಸಿ ರೂಪಿ ಸಿದ್ದಕ್ಕೆ
ಕಸ್ತೂರಿ ರಂಗನ್‌ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು. 34 ವರ್ಷಗಳ ಭಿ
ಇಂದಿನ ಹಾಗೂ ಭವಿಷ್ಯದ ಶೈಕ್ಷಣಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ರಾಷ್ಟ್ರೀಯ


160


ಶಿಕ್ಷಣ ನೀತಿ ಸಮಗ್ರ ನೀತಿಯಾಗಿದೆ. ಇದು ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ
ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುವ
ಒಂದು ಗಟ್ಟಿ ನೀತಿ. ಇದನ್ನು ಅನುಷ್ಠಾನಗೊಳಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಹೇಳಿದರು.


ರಾಷ್ಟ್ರೀಯ ಶಿಕ್ಷಣ ನೀತಿ-2020:-ಉನ್ನತ ಶಿಕ್ಷಣದ ಮಟ್ಟಿಗೆ ಶಿಕ್ಷಣ ನೀತಿಯಲ್ಲಿನ ಅಂಶಗಳನ್ನು ಜಾರಿ ಮಾಡಲು
ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ವಿ.ರಂಗನಾಥ್‌ ಅವರ ನೇತೃತ್ವದ ಕಾರ್ಯಪಡೆ ವರದಿ ಸಿದ್ದಪಡಿಸುತ್ತಿದೆ. ಉಪ
ಮುಖ್ಯಮಂತ್ರಿ ಡಾ:ಸಿ.ಎನ್‌.ಅಶ್ವತ್ನನಾರಾಯಣ ಅವರು ಈ ಮಾಹಿತಿ ನೀಡಿದ್ದಾರೆ. ಆಗಸ್ಟ್‌ 16ರಂದು ಹೇಗೆ ಜಾರಿ
ಮಾಡಬೇಕೆಂಬ ಬಗ್ಗೆ ಒಂದು ವಿವರಣೆ ನೀಡಲಿದೆ. 20ರಂದು ಸಮಗ್ರ ವರದಿ ನೀಡಲಿದೆ. ಅದಾದ ಮೇಲೆ ಶಿಕ್ಷಣ
ನೀತಿ ಜಾರಿಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಆಧಾರ:ಉದಯವಾಣಿ, ದಿನಾ೦ಕ:01.08.2020
57. ಆಯುರ್ಮೇದಿಕ್‌ ನಂದಿನಿ ಹಾಲು


ಕೋವಿಡ್‌ -19 ಸೋಂಕು ಹರಡದಂತೆ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಉದ್ದೇಶದಿಂದ
ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್‌) ನಂದಿನಿ ಅರಿಶಿಣ ಹಾಲಿನ ಜೊತೆಗೆ ಆಯುರ್ಮೇದಿಕ್‌ ಗುಣ
ಮತ್ತು ಪೌಷ್ಠಿಕಾಂಶಗಳನ್ನು ಹೊಂದಿರುವ ಐದು ವಿವಿಧ ಹಾಲಿನ ಉತ್ತನ್ನಗಳು ಮತ್ತು ಆರೋಗ್ಯದಾಯಕ
ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.


ನಗರದ ಕೆಎಂಎಫ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಬಾಲಚಂದ್ರ ಲ.ಜಾರಕಿಹೊಳಿ
ಅವರು ನೂತನ ಉತ್ತನ್ನಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೊರೋನಾ
ಸೋಂಕು ನಿಯಂತ್ರಣದ ಉದ್ದೇಶದಿಂದ ಈ ಹಿಂದೆ ಕೆಎಂಎಫ್‌ ಅರಿಶಿಣ ಹಾಲನ್ನು ಬಿಡುಗಡೆ ಮಾಡಿತ್ತು.
ಇದೀಗ ನಂದಿನಿ ಗ್ರಾಹಕರಿಗೆ ಸೋಂಕು ತಗುಲದಂತೆ ಮುನ್ನೆಚರಿಕೆ ಕ್ರಮವಾಗಿ ರೋಗ ನಿರೋಧಕ ಶಕ್ತಿ
ಹೆಚ್ಚಿಸುವಂತಹ ಆಯುರ್ವೇದಿಕ್‌ ಗುಣವುಳ್ಳ ಹಾಲನ್ನು ಪರಿಚಯಿಸುತ್ತಿದೆ. ಆಯುರ್ವೇದಿಕ್‌ ಗುಣವುಳ್ಳ ಹಾಲಿನ
ಪಾನೀಯಗಳ ಮಾರುಕಟ್ಟೆ ದರವು ರೂ.25ಗಳಿದ್ದು, ಆರಂಭಿಕ ಕೊಡುಗೆಯಾಗಿ ರೂ.20ನಂತೆ ರಿಯಾಯಿತಿ ದರ
ನಿಗದಿಪಡಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ನಂದಿನಿ ತುಳಸಿ ಹಾಲು, ನಂದಿನಿ ಅಶ್ವಗಂಧ ಹಾಲು, ನಂದಿನಿ ಕಾಳುಮೆಣಸು
ಹಾಲು, ನಂದಿನಿ ಲವಂಗ ಹಾಲು, ನಂದಿನಿ ಶುಂಠಿ ಹಾಲು ಮತ್ತು ಸಿರಿಧಾನ್ಯದ ಉತ್ತನ್ನಗಳಾದ ನಂದಿನಿ
ಸಿರಿಧಾನ್ಯ ಸಿಹಿ ಪೊಂಗಲ್‌, ನಂದಿನಿ ಸಿರಿಧಾನ್ಯ ಖಾರ ಪೊಂಗಲ್‌, ನಂದಿನಿ ಸಿರಿಧಾನ್ಯ ಪಾಯಸದ ಉತ್ತನ್ನವನ್ನು
ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.


ವಿವಿಧ ಹಾಲಿನ ಉತ್ಪನ್ನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಆರೋಗ್ಯ ಸುಧಾರಣೆಯಲ್ಲಿ ಮಹತ್ವದ
ಪಾತ್ರವಹಿಸಲಿವೆ. ಈ ಎಲ್ಲವುಗಳನ್ನು ಸನಾತನ ಆಯುರ್ವೇದ ಔಷಧಗಳಲ್ಲಿ ಬಳಕೆ ಮಾಡಲಾಗಿದ್ದು, ಕೋವಿಡ್‌
ಸಂಕಷ್ಟದ ಸಮಯದಲ್ಲಿ ನಂದಿನಿ ಗ್ರಾಹಕರಲ್ಲಿ ಆರೋಗ್ಯ ಉತ್ತಮಗೊಳ್ಳಲು ಪೂರಕವಾಗಲಿವೆ ಎಂದು ಕೆಎಂಎಫ್‌
ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ತಿಳಿಸಿದರು.


ಆಧಾರ:ಕನ್ನಡಪುಭ, ದಿನಾಂಕ:01.08.2020


58. ಕೈಗಾರಿಕಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ


ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಕಾರ್ಮಿಕ ಕಾನೂನುಗಳಾದ ಕೈಗಾರಿಕೆ
ಕಾಯ್ದೆ, ಕೈಗಾರಿಕೆ ವಿವಾದ ಕಾಯ್ದೆ ಮತ್ತು ಗುತ್ತಿಗೆ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರ
ಹೊರಡಿಸಿದ್ದ ಸುಗೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದಾರೆ.

ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್‌ 25(ಕೆ) ತಿದ್ದುಪಡಿ
ತಂದಿದ್ದು, ಕಾರಾನೆಯ ಕಾರ್ಮಿಕರ ಮಿತಿಯನ್ನು 100 ರಿಂದ 300ಕ್ಕೆ ಹೆಚ್ಚಿಸಲಾಗಿದೆ. ಕಾರ್ಬಾನೆಗಳ
ಕಾಯ್ದೆಯ ಸೆಕ್ಷನ್‌ 65(3)ಅಡಿಯಲ್ಲಿ ಯಾವುದೇ ತ್ರೈಮಾಸಿಕ ಅಧಿಕಾವಧಿ ಕೆಲಸವನ್ನು (ಒ.ಟಿ) 75ರಿಂದ 125


161


ಗಂಟೆಯವರೆಗೆ ಹೆ
ಸರ್ಕಾರ ಹೊರಡಿಸಿ


ಚ್ಲಿಸಲಾಗಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ ತಿದ್ದುಪಡಿಗೆ
ದ್ದ ಸುಗೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.


ಆಧಾರ:ಕನ್ನಡಪ್ರಭ, ದಿನಾಂಕ:01.08.2020
59. ಗುಟ್ಕಾ ಪ್ಯಾಕೆಟ್ಟಲ್ಲ ಡ್ರಗ್ಸ್‌


ಗುಟ್ಟಾ, ಪಾನ್‌ ಮಸಾಲ ಪ್ಯಾಕೇಟ್‌ಗಳಲ್ಲಿ ಮಾದಕ ದವ್ಯ (ಡಗ್ಸ್‌ ಮಾರಾಟ ಮಾಡುತ್ತಿರುವ
ಪ್ರಕರಣಗಳು ಕಂಡುಬರುತ್ತಿದ್ದು ಈ ಪದಾರ್ಥಗಳ ಮಾರಾಟ ಮತ್ತು ವತರಣೆಯನ್ನು ನಿಷೇಧಿಸುವಂತೆ
ರಾಜ್ಯಪಾಲ ವಜೂಭಾಯಿ ವಾಲಾ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ತಮ್ಮನ್ನು ಭೇಟಿ ಮಾಡಿದ್ದ
ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ರಾಜ್ಯಪಾಲರು ಈ ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ
ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಕಂಡುಬಂದರೆ ಸುಗ್ರೀವಾಜ್ಞಿ
ಹೊರಡಿಸುವುದಾಗಿ ತಿಳಿಸಿದರು.


ರಾಜ್ಯದಲ್ಲಿ ಗುಟ್ಟಾ, ಪಾನ್‌ ಮಸಾಲಾ ಹಾಗೂ ತಂಬಾಕು ಪ್ಯಾಕೇಟುಗಳಲ್ಲಿ ಮಾದಕ ದ್ರವ್ಯ ಮಾರಾಟ
ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ರಾಜ್ಯಪಾಲರು, ಇದರಿಂದಾಗಿ
ಯುವಕರು ಹಾಗೂ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಅವರ ಜೀವನಕ್ಕೆ ತೊಂದರೆ
ಉಂಟಾಗುತ್ತಿರುವುದರಿಂದ ಈ ಪದಾರ್ಥಗಳ ಮಾರಾಟ ಮತ್ತು ವಿತರಣೆ ನಿಷೇಧಿಸಲು ಸೂಕ್ತ ಕ್ರಮ
ಕೈಗೊಳ್ಳುವಂತೆ ಸಲಹೆ ನೀಡಿದರು. ರಾಜಭವನದಿಂದ ವಾಪಸ್ಥಾದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು
ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದ್ದಾರೆ.


ಆಧಾರ:ಕನ್ನಡಪ್ರಭ, ದಿನಾಂಕ:01.08.2020
60. ಕರ್ತವ್ಯಕ್ಕೆ ಹಾಜರಾಗದ ಬಿಎಲ್‌ಓಗಳ ವಿರುದ್ದ ಕ್ರಮಕ್ಕೆ ಸೂಚನೆ


ಪಶ್ಚಿಮ ವಿಭಾಗದಲ್ಲಿ ಕೋವಿಡ್‌-19 ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ಬೂತ್‌ ಮಟ್ಟದ ಅಧಿಕಾರಿಗಳ
ವಿರುದ್ಧ ಅತ್ಕುಗ್ರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಕೋವಿಡ್‌ ಕೇರ್‌ ಕೇಂದ್ರಗಳ ಉಸ್ತುವಾರಿಯೂ ಆಗಿರುವ
ಉಪ ಮುಖ್ಯಮಂತ್ರಿ ಡಾ: ಸಿ.ಎನ್‌.ಅಶ್ವತ್ನನಾರಾಯಣ ಆದೇಶಿಸಿದರಲ್ಲದೇ, ಗುತ್ತಿಗೆ ಆಧಾರಿತ ವೈದ್ಯರ ವೇತನ
ಹೆಚ್ಚಿಸುವಂತೆ ಇದೇ ವೇಳೆ ಅವರು ಸೂಚಿಸಿದರು.


ನಗರದಲ್ಲಿ ಪಶ್ಚಿಮ ವಲಯದ ಕೋವಿಡ್‌ ಪರಿಸ್ಟಿತಿಯನ್ನು ಪರಿಶೀಲನೆ ನಡೆಸಿದ ಅವರು, ಈ
ವಿಭಾಗದಲ್ಲಿ ಒಟ್ಟು 7,000 ಬೂತ್‌ ಮಟ್ಟದ ಅಧಿಕಾರಿಗಳಿದ್ದಾರೆ. ಆ ಪೈಕಿ ಕೇವಲ 1,200 ಅಧಿಕಾರಿಗಳಷ್ಟೇ
ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಉಳಿದವರು ಎಲ್ಲಿ ಎಂದು ಹಿರಿಯ ಅಧಿಕಾರಿಗಳನ್ನು ತೀವ್ರ ತರಾಟೆಗೆ
ತೆಗೆದುಕೊಂಡರು. ಬೂತ್‌ ಮಟ್ಟದ ಅಧಿಕಾರಿಗಳ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ.


ಅನೇಕರು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿಕೊಂಡು ನಂತರ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ. ಇದು
ಅಕ್ಷಮ್ಯ ಅಪರಾಧ. ಬೂತ್‌ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಎಎನ್‌ಎಂಗಳ ಜೊತೆ ಸೇರಿ
ಕೋವಿಡ್‌ ಸೋಂಕಿತರನ್ನು ಸಂಪರ್ಕಿಸುವುದು. ಕೋವಿಡ್‌ ಪರೀಕ್ಷೆಗೆ ವ್ಯವಸ್ಥೆ ಮಾಡುವುದು, ಜಾಗೃತಿ
ಮೂಡಿಸುವುದು ಬಿಎಲ್‌ಓಗಳ ಕೆಲಸ. ಆದರೆ ಅವರು ಮಲ್ಲೇಶ್ವರ, ಗಾಂಧಿನಗರ, ರಾಜಾಜಿನಗರ, ಮಹಾಲಕ್ಷ್ಮಿ
ಲೇಔಟ್‌, ವಿಜಯನಗರ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಇವರು ಕರ್ತವ್ಯಲೋಪ ಎಸಗಿದ್ದಾರೆ. ಇವರ ವಿರುದ್ಧ ಅತ್ಯಂತ
ಕಠಿಣ ಕ್ರಮ ಕೈಗೊಳ್ಳಿ ಹಾಗೂ ಅವರ ಸೇವಾ ದಾಖಲಾತಿಯಲ್ಲಿ ಲೋಪವೆಸಗಿರುವುದನ್ನು ದಾಖಲಿಸಿ ಎಂದು
ಸಭೆಯಲ್ಲಿ ಹಾಜರಿದ್ದ ಪಶ್ಚಿಮ ವಿಭಾಗದ ಕೋವಿಡ್‌ ಉಸ್ತುವಾರಿ ಅಧಿಕಾರಿ ಉಜ್ಜಲ್‌ ಕುರ್ಮಾ ಘೋಷ್‌ ಹಾಗೂ
ಬಿಬಿಎಂಪಿ ವಿಶೇಷ ಆಯುಕ್ತರಾದ ರಣದೀಪ್‌, ಡಾ:ಬಸವರಾಜು ಅವರಿಗೆ ಕಟ್ಟುನಿಟ್ಟ್ಷನ ಸೂಚನೆ ನೀಡಿದರು.


ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಕಳ್ಳಾಟಗಳು ಮತ್ತಷ್ಟು ಬಯಲಿಗೆ ಬಂದವು. ಬಿಬಿಎಂಪಿ
ವೆಬ್‌ ತಾಣದಲ್ಲಿ ಖಾಸಗಿ ಆಸ್ಪತ್ರೆಗಳು ನೇರ ಲಿಂಕ್‌ ಆಗಿ ತಮ್ಮಲ್ಲಿರುವ ಖಾಲಿ ಹಾಸಿಗೆ, ಕೋವಿಡ್‌ ರೋಗಿಗಳಿಗೆ
ನೀಡುತ್ತಿರುವ ಚಿಕಿತ್ಸೆ ಮತ್ತಿತರ ವಿಷಯಗಳ ರಿಯಲ್‌ ಟೈಮ್‌ನಲ್ಲಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಆಗ ಆ
ಮಾಹಿತಿಯು ಪಾಲಿಕೆ ವೆಬ್‌ನಲ್ಲಿಯೂ ಇರುತ್ತದೆ. ಸರ್ಕಾರದ ಎಚ್ಚರಿಕೆಗೆ ಮಣೆ ಹಾಕುತ್ತಿರುವಂತೆ ಕಳ್ಳಾಟ


162


ಆಡುತ್ತಿರುವ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಕೋವಿಡ್‌ಗೆ ಮೀಸಲಾದ ಹಾಸಿಗೆಗಳು ಖಾಲಿ ಇವೆ ಎಂದು ಮಾಹಿತಿ
ಹಾಕುತಿವೆ.


ಆದರೆ, ಪಾಲಿಕೆ ವೈದ್ಯರು ಕೋವಿಡ್‌ ರೋಗಿಗಳನ್ನು ಆ ಆಸ್ಪತ್ರೆಗಳಿಗೆ ಕಳುಹಿಸಿದರೆ, ಅವರು ಹಾಸಿಗೆಗಳು
ಖಾಲಿ ಇಲ್ಲ ಎಂದು ರೋಗಿಗಳನ್ನು ವಾಪಾಸ್‌ ಕಳಿಹಿಸುತ್ತಿದ್ದಾರೆ. ರಿಯಲ್‌ ಟೈಮ್ಸ್‌ ಅನ್ನು ಹಾಕದೇ ಅತ್ತ
ಸರ್ಕಾರವನ್ನು ಇತ್ತ ಜನರನ್ನು ಹಾದಿ ತಪಿಸುತ್ತಿವೆ. ಸುಳ್ಳು ಮಾಹಿತಿ ನೀಡುತ್ತಿವೆ. ಇಂಥ ಆಸ್ಪತ್ರೆಗಳ ವಿರುದ್ಧ
ನೇರವಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಉಪ ಮುಖ್ಯಮಂತ್ರಿ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.

ನಗರದಲ್ಲಿರುವ ಸುಮಾರು 400ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ತಲಾ ಒಬ್ಬರಂತೆ "ಆಪ್ಪಮಿತ್ರ' ಸಿಬ್ಬಂದಿಯನ್ನು
ನೇಮಿಸಲಾಗಿದೆ. ಇವರು ಏನು ಮಾಡುತ್ತಿದ್ದಾರೆ ಎಂದು ಗರಂ ಆದ ಅವರು ಈ ಸಿಬ್ಬಂದಿ ಸೇರಿ ಹಿರಿಯ
ಅಧಿಕಾರಿಗಳು ಇಂಥ ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡಿ, ತಪ್ಪು ಸುಳ್ಳು ಕಂಡುಬಂದರೆ ಸ್ಥಳದಲ್ಲೇ ಕ್ರಮ ಜರುಗಿಸಿ
ನಿಮ್ಮ ಜೊತೆ ಸರ್ಕಾರವಿದೆ ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಕೋವಿಡ್‌ ಹಿನ್ನೆಲೆಯಲ್ಲಿ ಹೊಸದಾಗಿ ನೇಮಕವಾಗುತ್ತಿರುವ ಗುತ್ತಿಗೆ ವೈದ್ಯರಿಗೆ ರೂ.80 ಸಾವಿರ ಮಾಸಿಕ
ವೇತನ ನಿಗದಿ ಮಾಡಲಾಗಿದೆ. ಇದೇ ರೀತಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಾಲಿ ಗುತ್ತಿಗೆ ವೈದ್ಯರಿಗೆ
ರೂ.60 ಸಾವಿರ ವೇತನ ನೀಡಲಾಗುತ್ತಿದ್ದು, ರೂ.20 ಸಾವಿರ ಕೋವಿಡ್‌ ಭತ್ಯೆ ಸೇರಿಸಿ ರೂ.80 ಸಾವಿರ ವೇತನ
ನೀಡಿ ಇದನ್ನು ಕೂಡಲೇ ಮಾಡಿ ಎಂದು ಉಪ ಮುಖ್ಯಮಂತ್ರಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಎನ್‌ಎಂಗಳಿಗೂ ವೇತನದ ಜೊತೆಗೆ ರೂ.5000 ಕೋವಿಡ್‌ ಭತ್ಯೆ ನೀಡಲು ಸೂಚಿಸಿದರಲ್ಲದೇ, ಕೋವಿಡ್‌
ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಸ್ವಯಂ ಸೇವಕರಿಗೂ ಹಾಗೂ ಗಂಟಲು ಸಂಗಹ ಮಾಡುವ ಲ್ಯಾಬ್‌
ಟಿಕ್ಸಿಷಿಯನ್‌ಗಳಿಗೂ ಕೋವಿಡ್‌ ಭತ್ಯೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಉಪ ಮುಖ್ಯಮಂತ್ರಿ
ಡಾ: ಅಶ್ರಶ್ಥ ನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.


ಇತ್ತೀಚೆಗೆ ಹೆಚ್ಚುತ್ತಿರುವ ಸಾವುಗಳು ಕೋವಿಡ್‌ನಿಂದ ಆಗುತ್ತಿವೆಯೇ ಅಥವಾ ಸೋಂಕು ತಗುಲಿದ ಮೇಲೆ
ತಡವಾಗಿ ಬಂದು ಚಿಕಿತ್ಸೆ ಪಡೆದಿದ್ದರಿಂದ ಆಗುತ್ತಿವೆಯೇ ಇಲ್ಲವೇ ಬೇರೆ ಯಾವುದಾದರೂ ಕಾಯಿಲೆಯಿಂದ
ಮೃತಪಟ್ಟರೆ ಎಂಬ ಬಗ್ಗೆ ವಿಶ್ಲೇಷಣೆ ನಡೆಸಿ ವರದಿ ನೀಡುವಂತೆ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.


ಆಧಾರ:ವಿಶ್ವವಾಣಿ, ದಿನಾಂಕ:03.08.2020
61. ಶತಮಾನೋತ್ಸವ ಗ್ರಂಥಾಲಯ ಭವನ


ರಾಜ್ಯದ ಕೇಂದ್ರ ಗ್ರಂಥಾಲಯಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ
ಗಂಥಾಲಯ ಭವನ ನಿರ್ಮಾಣ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ
ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.


ಬಿಟಿಎಂ ಬಡಾವಣೆಯ 2ನೇ ಹಂತದಲ್ಲಿ ನೂತನ ಗ್ರಂಥಾಲಯ ಕಟ್ಟಡ ಉದ್ರಾಟನೆ ನೆರವೇರಿಸಿ
ಮಾತನಾಡಿದ ಅವರು ಇತರ ರಾಜ್ಯಗಳಲ್ಲಿರುವ ಗಂಥಾಲಯ ವ್ಯವಸ್ಥೆಯನ್ನು ಅವಲೋಕಿಸಿ ಎಲ್ಲ ವರ್ಗದ
ಓದುಗರಿಗೆ ಅನುಕೂಲವಾಗುವ ರೀತಿಯಲ್ಲಿ ಮಾದರಿ ಶತಮಾನೋತ್ಸವ ಗ್ರಂಥಾಲಯ ಭವನ ನಿರ್ಮಾಣ
ಮಾಡಲಾಗುವುದು ಎಂದರು.


ತಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಿದ್ದರೆ, ಅದರ ಎಲ್ಲ ಶ್ರೇಯಸ್ಸು ಸಾರ್ವಜನಿಕ
ಗ್ರಂಥಾಲಯಕ್ಕೆ ಸಲ್ಲಬೇಕು. ತಾವು ಕಾನೂನು ಪದವಿ ವೇಳ ವ್ಯಾಸಂಗ ಮಾಡಿದ್ದು ಗಂಥಾಲಯದಲ್ಲಿಯೇ,
ಗ್ರಂಥಾಲಯ ಎಂಬುದು ಶ್ರೀಸಾಮಾನ್ಯನಿಗೆ ವಿವಿ ಇದ್ದಂತೆ ಎಂದರು.


ಶಾಸಕರಾದ ರಾಮಲಿಂಗಾರೆಡ್ಡಿ, ಸೌಮೃರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಸದಸ್ಯ


ದೇವದಾಸ್‌, ಗಂಥಾಲಯ ಇಲಾಖೆ ನಿರ್ದೇಶಕ ಡಾ: ಸತೀಶ್‌ ಕುಮಾರ್‌, ಎಸ್‌.ಹೊಸಮನಿ ಮತ್ತಿತರರು
ಉಪಸ್ಥಿತರಿದ್ದರು.


163


ಇಂದಿನ ಅವಶ್ಯಕತೆಗಳಿಗನುಗುಣವಾಗಿ ಡಿಜಿಟಲ್‌ ಗಂಥಾಲಯಗಳನ್ನು ರಾಜ್ಯಾದಾದ್ಯಂತ ಸ್ಥಾಪಿಸಲು
ಕ್ರಮ ಕೈಗೊಳ್ಳಲಾಗಿದೆ. ಕಳೆದ ಆರು ತಿಂಗಳಲ್ಲಿ ರಾಜ್ಯದೆಲ್ಲೆಡೆ 272 ಡಿಜಿಟಲ್‌ ಗಂಥಾಲಯಗಳು ಕಾರ್ಯಾರಂಭ
ಮಾಡಿವೆ ಎಂದು ಸಚಿವರು ತಿಳಿಸಿದರು.


ಆಧಾರ:ವಿಜಯವಾಣಿ, ದಿನಾ೦ಕ:04.08.2020
62. ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆ ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಸೂಚನೆ
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಮತ್ತು ಭೂಮಿ ಪೂಜೆ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಸ್ಥಿತಿಯಲ್ಲಿಡಲು ಸರ್ಕಾರ ಕಟ್ಟೆಚ್ಚರದ ಕ್ರಮಗಳನ್ನು
ಕೈಗೊಂಡಿದೆ.
ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೂಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಡಿಯೋ
ಸಂವಾದ ನಡೆಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಅಗತ್ಯಬಿದ್ದರೆ 144ನೇ ಸೆಕ್ಷನ್‌ ಅನ್ವಯ
ನಿಷೇಧಾಜ್ಞೆ ಜಾರಿಗೆ ಅನುಮತಿ ನೀಡಿದ್ದಾರೆ.


ಗೂಂಡಾ ಕಾಯ್ದೆ ಬಳಕೆ: ಕಾನೂನು ಉಲ್ಲಂಘಿಸುವವರ ವಿರುದ್ದ ಗೂಂಡಾ ಕಾಯ್ದೆ ಬಳಸುವುದರ ಜೊತೆಗೆ ಅಗತ್ಯ
ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಗೂಂಡಾ ಲಿಸ್ಟ್‌ನಲ್ಲಿ ಇರುವವರಿಗೆ
ಎಚ್ಚರಿಸಿ, ಅಗತ್ಯ ಬಿದ್ದರೆ ಬಂಧಿಸಿ ಎಂದು ಗೃಹ ಸಚಿವರು ಆದೇಶಿಸಿದ್ದಾರೆ. ದೇವಸ್ಥಾನ ಹಾಗೂ ಪ್ರಾರ್ಥನಾ
ಮಂದಿರಗಳಿಗೆ ಬಂದೋಬಸ್ತ್‌ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದು, ಮದ್ಯ ಮಾರಾಟದ ಕುರಿತು ಸ್ಥಳೀಯವಾಗಿ
ನಿರ್ಧರಿಸುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ಡ್ರೋಣ್‌ ಸಮೀಕ್ಷೆ: ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋಣ್‌ ಕಣ್ಗಾವಲಿರಿಸಿ ಸಮೀಕ್ಷೆ ವ್ಯವಸ್ಥೆ ಮಾಡಬೇಕು. ಇದರಿಂದಾಗಿ
ಪರಿಣಾಮಕಾರಿ ನಿಗಾ ಸಾಧ್ಯವಾಗಲಿದ್ದು, ತ್ವರಿತ ಕ್ರಮಗಳಿಗೂ ನೆರವಾಗುತ್ತದೆ. ತಹಶೀಲ್ದಾರ್‌ ಮತ್ತು ತಾಲ್ಲೂಕು
ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಸಚಿವರು
ತಾಕೀತು ಮಾಡಿದ್ದಾರೆ.


ಅಯೋಧ್ಯೆ ಭೂಮಿ ಪೂಜೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವಂತಿಲ್ಲ. ಅಹಿತಕರ ಘಟನೆಗಳಿಗೆ
ಅವಕಾಶ ಇಲ್ಲವೆಂದು ಗೃಹ ಸಚಿವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.


ಮನೆ, ಮಂದಿರದೊಳಗೆ ಸಂಭ್ರಮಾಚರಿಸಿ : ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಸಂಭ್ರಮ,
ಸಭೆ-ಸಮಾರಂಭಗಳನ್ನು ತಂತಮ್ಮ ಮನೆ, ಮಂದಿರದೊಳಗೆ ಆಚರಿಸುವ ಮೂಲಕ ಕೊರೋನಾ ಸೋಂಕು
ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ನೀಡಿದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ರಾಜ್ಯದ ಜನತೆಗೆ ಗೃಹ
ಸಚಿವರು ಮನವಿ ಮಾಡಿದ್ದಾರೆ.


ಜಾಲತಾಣಗಳ ಮೇಲೆ ನಿಗಾ: ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಲಿದೆ. ಕಾನೂನುಬಾಹಿರ ವಿಚಾರ
ಪ್ರಕಟಿಸುವವರ ವಿರುದ್ದ ಕ್ರಮ ಕೈಗೊಳ್ಳಲು ಗೃಹ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಗಡಿಗಳಲ್ಲೂ ಬಿಗಿ ಕಾವಲು: ಗಡಿಭಾಗಗಳಾದ ಚಾಮರಾಜನಗರ, ಮಡಿಕೇರಿ, ಬೆಳಗಾವಿ, ಮಂಗಳೂರು, ಕೋಲಾರ,
ಕಲಬುರಗಿ ಜಿಲ್ಲೆಗಳ ಚೆಕ್‌ಪೋಸ್ಟ್‌ಗಳಲ್ಲಿ ಕಾವಲು ಮತ್ತಷ್ಟು ಬಿಗಿಗೊಳಿಸಲಾಗಿದೆ. ರಾಜ್ಯ ಪ್ರವೇಶಿಸುವ
ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಟ್ಟು ಎಚ್ಚರದಿಂದಿರಬೇಕು. ಮೈಸೂರು, ಬೆಂಗಳೂರು, ಮಂಗಳೂರು,
ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ನಗರಗಳ ಕಮೀಷನರ್‌ಗಳು ವಿಶೇಷವಾಗಿ ತಮ್ಮ ವ್ಯಾಪ್ತಿ ಪ್ರದೇಶದತ್ತ
ಗಮನ ಇಡಬೇಕೆಂದು ಅಧಿಕಾರಿಗಳಿಗೆ ಗೃಹ ಸಚಿವರು ನಿರ್ದೇಶನ ನೀಡಿದ್ದಾರೆ.


ಆಧಾರ:ವಿಜಯವಾಣಿ, ದಿನಾ೦ಕ:05.08.2020
63. ದೇಶದ ಪ್ರಥಮ ಸಂಚಾರಿ ಆಧ್ವಿ-ಪಿಸಿಆರ್‌ ಲ್ಯಾಬ್‌
ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ಸಂಸ್ಥೆ ಅಭಿವೃದ್ಧಿಪಡಿಸಿರುವ


[) %
ದೇಶದ ಪ್ರಥಮ ಸಂಚಾರಿ ಆರ್‌ಟಿ-ಪಿಸಿಆರ್‌ ಕೋವಿಡ್‌ ಪರೀಕ್ಷಾ ಪ್ರಯೋಗಾಲಯಕ್ಕೆ ವೈದ್ಯಕೀಯ ಶಿಕ್ಷಣ ಸಚಿವ
ಡಾ:ಕೆ ಸುಧಾಕರ್‌ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಚಾಲನೆ ನೀಡಿದರು.


164


ಸಂಚಾರಿ ಲ್ಯಾಬ್‌ ಅನ್ನು ರಾಜೀವ್‌ ಗಾಂಧಿ ವಿಶ್ವವಿದ್ಯಾಲಯಕ್ಕೆ (ಆರ್‌ಜಿಯುಎಚ್‌ಎಸ್‌) ಹಸ್ತಾಂತರಿಸಿದ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಭಾರತೀಯ ವೈದ್ಯಕೀಯ ಸಂಶೋಧನಾ
ಮಂಡಳಿ(ಐಸಿಎಂಆರ್‌) ಅನುಮೋದನೆ ಪಡೆದು ಐಐಎಸ್ಸಿಯು ಅಭಿವೃದ್ಧಿಪಡಿಸಿರುವ ಬಯೋ ಸುರಕ್ಷತೆ
ಪ್ರಮಾಣೀಕೃತ ಸುಸಜ್ಜಿತ ಸಂಚಾರಿ ಆರ್‌ಟಿಪಿಸಿಆರ್‌ ಕೋವಿಡ್‌ ಪರೀಕ್ಷಾ ಲ್ಯಾಬ್‌ ಆಗಿದ್ದು, ಇದರಲ್ಲಿ ಕೇವಲ 4
ಗಂಟೆಗಳಲ್ಲಿ ಕೋವಿಡ್‌ ಪರೀಕ್ಷಾ ವರದಿ ಪಡೆಯಬಹುದಾಗಿದೆ. ಈ ಸಂಚಾರಿ ಲ್ಯಾಬ್‌ ದಿನಕ್ಕೆ ಸುಮಾರು 400
ಕೋವಿಡ್‌ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದ್ದು, ಕಂಟೈನ್ನೆಂಟ್‌ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಟೆಸ್ಟ್‌
ನಡೆಸಲು ಬಳಸಬಹುದಾಗಿದೆ. ಕೋವಿಡ್‌ ಸಮಸ್ಯೆ ಸಂಪೂರ್ಣ ಪರಿಹಾರವಾದಾಗ ಈ ಲ್ಯಾಬ್‌ ಅನ್ನು
ಎಚ್‌1ಎನ್‌1 ಪರೀಕ್ಷೆ ಸೇರಿದಂತೆ ಬೇರೆ ಬೇರೆ ಪರೀಕ್ಷೆಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.


ಐಐಎಸ್‌ಸಿ ನಿರ್ದೇಶಕ ಪ್ರೊ. ಗೋವಿಂದನ್‌, ರಂಗರಾಜನ್‌, ಆರ್‌ಜಿಯುಎಚ್‌ಎಸ್‌ ಕುಲಪತಿ
ಡಾ: ಸಚ್ಚಿದಾನಂದ ಉಪಸ್ಥಿತರಿದ್ದರು.


ಆಧಾರ:ಕನ್ನಡಪ್ರಭ, ದಿನಾಂಕ:06.08.2020
64. 9.5 ಲಕ್ಷ ರೈತರಿಗೆ ಬೆಳೆ ಸಾಲ ವಿತರಣೆ


2020-21ನೇ ಸಾಲಿನಲ್ಲಿ 24.50ಲಕ್ಷ ರೈತರಿಗೆ ರೂ.14.500 ಕೋಟಿಗಳವರೆಗೆ ಬೆಳೆ ಸಾಲ ನೀಡುವ ಗುರಿ
ಹೊಂದಲಾಗಿದೆ. ಏಪ್ರಿಲ್‌ 1ರಿಂದ ಈವರೆಗೆ 9,46,796 ರೈತರಿಗೆ ರೂ. 6345.31 ಕೋಟಿ ಬೆಳೆ ಸಾಲ ವಿತರಣೆ
ಮಾಡಲಾಗಿದೆ.


ಕಳೆದ ಸಾಲಿನಲ್ಲಿ 22.58 ಲಕ್ಷ ರೈತರಿಗೆ ರೂ.13577 ಕೋಟಿ ಬೆಳ ಸಾಲ ವಿತರಣೆ ಮಾಡಲಾಗಿತ್ತು.
ಈ ಬಾರಿ 9,46,796 ರೈತರಿಗೆ ಕೇವಲ ನಾಲ್ಕು ತಿಂಗಳಲ್ಲಿ ರೂ.6345.31 ಕೋಟಿ ಬೆಳೆ ಸಾಲ ನೀಡಲಾಗಿದೆ
ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಕಾರ್ಯಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.


ಪ್ರೋತ್ಲಾಹ ಧನ ವಿತರಣೆ: ಕೋವಿಡ್‌-19 ಸಂಕಷ್ಟದ ಕಾಲದಲ್ಲಿ ಕೊರೋನಾ ವಾರಿಯರ್ಸ್‌ ಆಗಿ
ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆ ತಲಾ ಮೂರು ಸಾವಿರ ಪ್ರೋತ್ಸಾಹ
ಧನ ನೀಡುತ್ತಿದೆ. ರಾಜ್ಯದಲ್ಲಿ ಅಂದಾಜು 42,608 ಮಂದಿ ಆಶಾ ಕಾರ್ಯಕರ್ತೆಯರಿದ್ದು, ಅವರಲ್ಲಿ 35.121
ಮಂದಿಗೆ ತಲಾ ರೂ. ಮೂರು ಸಾವಿರ ಪ್ರೋತ್ಸಾಹ ಧನ ವಿತರಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.


ಆಧಾರ:ಕನ್ನಡಪ್ರಭ, ದಿನಾಂಕ:06.08.2020
65. ಯುಪಿಹೆಚ್‌ಸಿ ಹೋರ್ಟಲ್‌ಗೆ ಚಾಲನೆ


ನಗರದ ಪ್ರಾಥಮಿಕ ಆರೋಗ್ಯ ಕೇಂದಗಳಲ್ಲಿ (ಯುಪಿಹೆಚ್‌ಸಿ) ಚಿಕಿತ್ಸೆ ಪಡೆಯುವ ರೋಗಿಗಳ ಸಮಗ್ರ
ಆರೋಗ್ಯ ಸುಧಾರಣೆಗೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಹೆಜ್ಜೆ ಇಟ್ಟಿದೆ. ಈ ಉದ್ದೇಶಕ್ಕಾಗಿ ರೂಪಿಸಿರುವ
ವೆಬ್‌ ಪೋರ್ಟಲ್‌ಗೆ ಉಪ ಮುಖ್ಯಮಂತ್ರಿ ಡಾ:ಸಿ.ಎನ್‌.ಅಶ್ವತ್ನ ನಾರಾಯಣ ಚಾಲನೆ ನೀಡಿದರು.


ಬಿಬಿಎಂಪಿ ಅಧೀನದ ಯಾವುದೇ ಯುಪಿಹೆಚ್‌ಸಿಗೆ ಅಥವಾ ಆಸ್ಪತ್ರೆಗೆ ಯಾರೇ ಚಿಕಿತ್ಸೆಗೆ ಬಂದರೂ
ಅವರ ಆರೋಗ್ಯ ಮಾಹಿತಿ ಪಡೆದು ಡಿಜಿಟಲ್‌ ರೂಪದಲ್ಲಿ ಸಂಗಹಿಸಿ ವಿಶ್ಲೇಷಿಸಲು ಯುನೈಟೆಡ್‌ ವೇ ಆಫ್‌
ಬೆಂಗಳೂರು ಸಂಸ್ಥೆ ತಂತ್ರಾಂಶ ಅಭಿವೃದ್ಧಿಪಡಿಸಿದ್ದು ಅದನ್ನು ಈ ಹಪೋರ್ಟಲ್‌ನಲ್ಲಿ ಬಳಸಲಾಗುತ್ತದೆ.
ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶ ರೋಗಿಗಳಿಗೆ ನೀಡಿದ ಔಷಧ ಮುಂತಾದ ಮಾಹಿತಿಗಳನ್ನು ಇದರಲ್ಲಿ
ಸೇರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.


"ನಗರ ಮತ್ತು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 63 ಪಿಎಜ್‌ಸಿ ಹಾಗೂ ಬಿಬಿಎಂಪಿ
ವ್ಯಾಪ್ತಿಯ 141 ಪಿಹೆಚ್‌ಸಿಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಆರೋಗ್ಯ ಮಾಹಿತಿಯನ್ನು ಈ ಪೋರ್ಟಲ್‌ನಲ್ಲಿ
ದಾಖಲಿಸಲಾಗುತ್ತದೆ. ಕೋವಿಡ್‌ ಪ್ರಕರಣಗಳು ಯಾವ ಪ್ರದೇಶದಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಈ ಹಿಂದೆ
ಬಳಸುತ್ತಿದ್ದ ತಂತ್ರಾಂಶಗಳನ್ನು ಜೋಡಿಸಿದ್ದರಿಂದ ಹೆಚ್ಚು ಪರಿಣಾಮಕಾರಿಯಾಗಿ ಆರೋಗ್ಯ ಸೇವೆ ಒದಗಿಸಲು
ಹಾಗೂ ಇದಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸುಧಾರಿಸಲು ಸಾಧ್ಯವಾಗಲಿದೆ” ಎಂದು ಬಿಬಿಎಂಪಿ ಆಯುಕ್ತ
ಎನ್‌.ಮಂಜುನಾಥ್‌ಪ್ರಸಾದ್‌ ಮಾಹಿತಿ ನೀಡಿದರು.


165


ಹಾಸಿಗೆ ಹಂಚಿಕೆ-ವಲಯ ಮಟ್ಟದಲ್ಲೇ ಕ್ರಮ


ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಧೃಡಪಟ್ಟವರಿಗೆ ಸಮೀಪದ ಆಸ್ಪತ್ರೆಯಲ್ಲಿ ಹಾಸಿಗೆ ಹಂಚಿಕೆ ಕಾರ್ಯ
ಇನ್ನು ವಲಯ ಮಟ್ಟದ ಕಮಾಂಡ್‌ ಕೇಂದಗಳ ಮೂಲಕವೇ ನಡೆಯಲಿದೆ. ಹಾಸಿಗೆ ನಿರ್ವಹಣಾ ವ್ಯವಸ್ಥೆಗೆ
ಸಂಬಂಧಿಸಿ ಬಿಬಿಎಂಪಿ ಅಭಿವೃದ್ಧಿಪಡಿಸಿದ ಆ್ಯಪ್‌ ಅನ್ನು ಈ ಸಲುವಾಗಿ ಪರಿಷ್ಕರಿಸಲಾಗಿದೆ. ಪರಿಷ್ಣ್ಯಶ ಲೈಪ್‌
ಅನ್ನು ಉಪ ಮುಖ್ಯಮಂತ್ರಿ ಬಿಡುಗಡೆ ಮಾಡಿದರು.


ಆಧಾರ:ಪ್ರಜಾವಾಣಿ, ದಿನಾಂಕ:07.08.2020
66. ರಾಜ್ಯದಲ್ಲಿ ಕೊರೋನಾ ಸೋಂಕು, ಚೇತರಿಕೆ ಹೆಚ್ಚಳ


ರಾಜ್ಯದಲ್ಲಿ ಒಂದೇ ದಿನ 6,805 ಪ್ರಕರಣಗಳು ದಾಖಲಾಗಿದ್ದು, 5,6002 ಮಂದಿ ಸೋಂಕಿನಿಂದ
ಗುಣಮುಖರಾಗಿದ್ದಾರೆ. ಕಳೆದೊಂದು ವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಮುಕ್ತರಾಗುತ್ತಿದ್ದು,
ಶೇ.11.37ರಷ್ಟು ಚೇತರಿಕೆ ಕಾಣಿಸುತ್ತಿದೆ.


ಕೊರೋನಾ ಮಹಾಮಾರಿಯಿಂದ ಗುಣಮುಖರಾದವರ ಪ್ರಮಾಣ ಒಂದೇ ವಾರದಲ್ಲಿ ರಾಜ್ಯದಲ್ಲಿ
ಶೇ.50.72 ಮತ್ತು ಬೆಂಗಳೂರಿನಲ್ಲಿ ಶೇ.50.34ಕ್ಕೆ ತಲುಪಿರುವುದು ನೆಮ್ಮದಿಯ ವಿಚಾರವಾಗಿದೆ. ಜುಲೈ 30ರಂದು
ರಾಜ್ಯದ ಗುಣಮುಖರ ಪ್ರಮಾಣ ಶೇ.39.36 ಮತ್ತು ಬೆಂಗಳೂರಿನಲ್ಲಿ ಶೇ.29.51ರಷ್ಟಿತ್ತು ಒಂದೇ ವಾರದಲ್ಲಿ
ರಾಜ್ಯದಲ್ಲಿ ಶೇ.11.37ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.20.75ರಷ್ಟು ಹೆಚ್ಚಳವಾಗಿದೆ.


ಲಾಕ್‌ಡೌನ್‌ ತೆರವಾದ ಬಳಿಕ ಬೇರೆ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮ
ರಾಜ್ಯದಲ್ಲಿ ಕೈಗೊಂಡ ಕಠಿಣ ಕ್ರಮಗಳಿಂದ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಕಳೆದ
35 ದಿನಗಳಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಾರಂಭಿಸಿದೆ. ಬೇರೆ ರಾಜ್ಯಗಳಿಗೆ
ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಮರಣ ಪ್ರಮಾಣ ಕಡಿಮೆ.


ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 1,58,258 ಆಗಿದ್ದು, 80,281 ಮಂದಿ ಗುಣಮುಖರಾಗಿ ಮನೆಗೆ
ತೆರಳಿದ್ದಾರೆ. ಇನ್ನುಳಿದ 75,068 ಸೋಂಕಿತರು ನಿಗದಿತ ಆಸತೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 93
ಮಂದಿ ಬಲಿಯಾಗಿದ್ದು, ಒಟ್ಟು 2,897 ಸೋಂಕಿತರು ಮೃತಪಟ್ಟಿದ್ದಾರೆ.


ವೈದ್ಯಕೀಯ ಶಿಕ್ಷಣಂ ಇಲಾಖೆಯ ಆಸ್ಪತೆಗಳಲ್ಲಿ 9,095 ಹಾಗೂ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ
8,490 ಹಾಸಿಗೆಗೆ ಹೈ ಫ್ರೋ ಆಕ್ಷಿಜನ್‌ ಅಳವಡಿಸಲಾಗಿದೆ. ಒಟ್ಟು 18,145 ಹಾಸಿಗೆಗಳಲ್ಲಿ ಆಕ್ಷಿಜನ್‌ ಸೌಲಭ್ಯವಿದೆ.
ರಾಜ್ಯದಲ್ಲಿ ಕೋವಿಡ್‌ ಸೋಂಕಿತರಿಗೆ ಹಾಸಿಗೆಗೆ ಕೊರತೆಯಿಲ್ಲ.


ಕೊರೋನಾ ಗುಣಮುಖರ ಪ್ರಮಾಣ ಹೆಚ್ಚಳ:-ಲಾಕ್‌ಡೌನ್‌ ತೆರವಾದ ನಂತರ ಬೇರೆ ರಾಜ್ಯಗಳಲ್ಲಿ ಸೋಂಕಿತರ
ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಕೈಗೊಂಡ ಕಠಿಣ ಕ್ರಮಗಳಿಂದ ಸೋಂಕಿತರ ಸಂಖ್ಯೆ ಮತ್ತು ಸಾವಿನ
ಸಂಖ್ಯೆ ಕಡಿಮೆಯಾಗಿದೆ. ಜುಲೈನಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತು ಎಂದು ವೈದ್ಯಕೀಯ ಶಿಕ್ಷಣ
ಸಚಿವ ಡಾಃಕೆ.ಸುಧಾಕರ್‌ ತಿಳಿಸಿದರು.


ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಕರ್ನಾಟಕದಲ್ಲಿ
ಕೊರೋನಾ ಸ ಪ್ರಮಾಣ ಪ್ರತಿ 10 ಲಕ್ಕ 42 “ಇದೆ. ನವದೆಹಲಿಯಲ್ಲಿ 204, ಮಹಾರಾಷ್ಟದಲ್ಲಿ 134,
ತಮಿಳುನಾಡಿನಲ್ಲಿ 58, ಪಾಂಡಿಚೇರಿಯಲ್ಲಿ 3 ಕ ಪ್ರಮಾಣ ಇದೆ. ಮುಂಬೈ ನಲ್ಲಿ ಪ್ರತಿ 10 ಲಕ್ಷಕ್ಕೆ 529,
ಚೆನ್ನೈನಲ್ಲಿ 313, ಪುಣೆಯಲ್ಲಿ 258, ಅಹ್ಮದಾಬಾದ್‌ನಲ್ಲಿ 224, ಕೋಲ್ಕತ್ತದಲ್ಲಿ 191 ಮರಣ ಪ್ರಮಾಣ ಇದೆ.
ಆದರೆ ಬೆಂಗಳೂರಿನಲ್ಲಿ 121 ಮರಣ ಪ್ರಮಾಣ ಇದೆ ಎಂದು ವಿವರಿಸಿದರು.


ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 9095 ಹಾಗೂ
ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ 8490 ಹಾಸಿಗೆಗೆ ಹೈ ಫ್ರೋ ಆಕ್ಷಿಜನ್‌ ಅಳವಡಿಸಲಾಗಿದೆ. ಒಟ್ಟು 18.145
ಹಾಸಿಗೆಗಳಲ್ಲಿ ಆಕ್ಷಿಜನ್‌ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.


166


ಜಿಲ್ಲಾವಾರು ಹೊಸ ಪ್ರಕರಣಗಳ ವಿವರ


ಬೆಂಗಳೂರು ನಗರ 2,544
ಬಳ್ಳಾರಿ 431
ಮೈಸೂರು 361
ಶಿವಮೊಗ್ಗ 292
ಬೆಳಗಾವಿ 229
ಉಡುಪಿ 217
ಧಾರವಾಡ 212
ದಾವಣಗೆರೆ 197
ಕಲಬುರಗಿ 196
ರಾಯಚೂರು 181
ದಕ್ಷಿಣ ಕನ್ನಡ 173
ಬಾಗಲಕೋಟೆ 168
ತುಮಕೂರು 160
ಹಾಸನ 158
ಮಂಡ್ಯ 134
ಕೊಪ್ಪಳ 132
ಗದಗ 124
ಚಿಕ್ಕಬಳ್ಳಾಪುರ 117
ಕೋಲಾರ 107
ಬೀದರ್‌ 98
ಚಾಮರಾಜನಗರ 95
ಉತ್ತರ ಕನ್ನಡ 77
ಹಾವೇರಿ 64
ಚಿಕ್ಕಮಗಳೂರು 59
ವಿಜಯಪುರ 58
ಚಿತ್ರದುರ್ಗ 58
ಕೊಡಗು 51
ರಾಮನಗರ 4]
ಯಾದಗಿರಿ 37
ಬೆಂ.ಗ್ರಾಮಾಂತರ 34


ಆಧಾರ:ವಿಶ್ವವಾಣಿ, ದಿನಾಂಕ:07.08.2020


167


67. ವಿದೇಶದಿಂದ ರಾಬ್ಯಕ್ಕೆ ಬರುವವರಿಗೆ ಕಡ್ಡಾಯ ಕ್ಲಾರಂಟೈನ್‌ ಇಲ್ಲ: ಸರ್ಕಾರ


ವಿದೇಶದಿಂದ ಬಂದವರು ಮುಂದಿನ ಏಳು ದಿನಗಳ ಕಾಲ ಕಡ್ಡಾಯ ಸಾಂಸ್ಥಿಕ ಕ್ಲಾರಂಟೈನ್‌ನಲ್ಲಿರ
ಬೇಕೆಂದು ಇದುವರೆಗೆ ಇದ್ದ ನಿಯಮವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ವಿದೇಶಿ ಪ್ರಯಾಣಿಕರು ಆಗಮಿಸಿದ
ವೇಳೆ ವಿಮಾನ ನಿಲ್ದಾಣ, ಬಂದರುಗಳಲ್ಲಿ ಆರೋಗ್ಯ ತಪಾಸಣೆ ವೇಳೆ ರೋಗ ಲಕ್ಷಣ ಕಂಡುಬಂದಲ್ಲಿ ಅವರನ್ನು
ಕೋವಿಡ್‌ ಚಿಕಿತ್ಸಾ ಕೇಂದಕ್ಕೆ ವರ್ಗಾಯಿಸಿ ಪರೀಕ್ಷೆಗೊಳಪಡಿಸಬೇಕು. ಲಕ್ಷಣಗಳಿಲ್ಲದವರಿಗೆ 14 ದಿನಗಳ ಗೃಹ
ಕ್ಟಾರಂಟೈನ್‌ಗೆ ಸೂಚಿಸಬೇಕು ಎಂದು ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಲಕ್ಷಣ ಇರುವವರಿಗೆ ಮೊದಲು ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಿ ಪಾಸಿಟಿವ್‌ ವರದಿ ಬಂದರೆ
ಹೋಂ ಐಸೋಲೇಷನ್‌ ಅಥವಾ ಕೊರೋನಾ ಆಸ್ಪತ್ರೆಗೆ ದಾಖಲಿಸಲು (ಸರ್ಕಾರಿ ಅಥವಾ ಖಾಸಗಿ) ಅಗತ್ಯ
ವ್ಯವಸ್ಥೆ ಮಾಡಬೇಕು. ಒಂದು ವೇಳೆ ನೆಗೆಟಿವ್‌ ಬಂದರೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ಖಚಿತ
ಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.


ಆಧಾರ:ಕನ್ನಡಪ್ರಭ, ದಿನಾಂಕ:08.08.2020
68. ವಿಕಾಸಸೌಧದಲಿ ರಾಷ್ಟೀಯ ಕೈಮಗ್ಗ ದಿನಾಚರಣೆ
[se ಟ್ರ Nn


ತಂತ್ರಜ್ಞಾನದ ಬಳಕೆಯಿಂದ ವಿಶೇಷ ವಿನ್ಯಾಸಗಳಲ್ಲಿ ಪರಿಣತಿ ಹೊಂದಿರುವ ಇಬ್ಬರು ರೇಷ್ಮೆ ಕೈಮಗ್ಗ
ನೇಕಾರರು ಹಾಗೂ ಇಬ್ಬರು ಹತ್ತಿ, ಉಣ್ಣೆ ನೇಕಾರರಿಗೆ ಮುಂದಿನ ವರ್ಷದಿಂದ ರಾಜ್ಯ ಪ್ರಶಸ್ತಿ ನೀಡಲಾಗುವುದು
ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.


ವಕಾಸಸೌಧದಲ್ಲಿ ನಡೆದ "ರಾಷ್ಟ್ರೀಯ ಕೈಮಗ್ಗ ದಿನಾಚರಣೆ'ಯನ್ನು ಉದ್ರಾಟಿಸಿ ಮಾತನಾಡಿದ ಅವರು


%


ರಾಜ್ಯದ ಕೈಮಗ್ಗ ಕ್ಷೇತವು ಉತ್ತಮ ಗುಣಮಟ್ಟದ ಬಟ್ಟೆಗಳನ್ನು ತಯಾರಿಸುತ್ತಿದೆ. ಇವುಗಳಿಗೆ ಸ್ಥಳೀಯ ಹಾಗೂ


ಅಂತರರಾಷ್ಟೀಯ ಮಟ್ಟದಲ್ಲಿ ಮಾರುಕಟ್ಟೆ ಇದೆ. 54 ಸಾವಿರ ಕೈಮಗ್ಗ ನೇಕಾರರು ಈ ಉದ್ದಿಮೆಯನ್ನು
ಅವಲಂಬಿಸಿದ್ದಾರೆ ಎಂದರು.


ಬೆಳಗಾವಿ, ತುಮಕೂರು, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ, ಹಾವೇರಿ, ಚಿತ್ರದುರ್ಗ,
ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಕೈಮಗ್ಗ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಳಕಲ್‌ಸೀರೆ,
ಗುಳ್ಳೇದ ಗುಡ್ಡದ ಖಣ, ಉಡುಪಿ ಹತ್ತಿ ಸೀರೆ, ಮೊಳಕಾಲ್ಲೂರು ರೇಷ್ಮೆ ಜೆಂತಾಮಣಿ ರೇಷ್ಮೆ ಸೀರೆ, ಕೊಳ್ಳೇಗಾಲದ
ರೇಷ್ಮೆ ಸೀರೆ ಹಾಗೂ ಕಾಟನ್‌ ಬೆಡ್‌ಶೀಟ್‌, ಟವಲ್‌, ಲುಂಗಿ ಇತ್ಯಾದಿ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಯಿದೆ”
ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಏಳು ಕೈಮಗ್ಗ ನೇಕಾರರನ್ನು
ಸನ್ಮಾನಿಸಲಾಯಿತು.


ಆಧಾರ:ಪ್ರಜಾವಾಣಿ, ದಿನಾಂಕ:09.08.2020
69. ಪ್ರಯೋಗಾಲಯಗಳ ಸಂಖ್ಯೆ ಏರಿಕೆ


ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ರಾಜ್ಯದಲ್ಲಿ ಇನ್ನೂ 5
ಪ್ರಯೋಗಾಲಯಗಳಿಗೆ ಅನುಮೋದನೆ ನೀಡಿದ್ದು, ಇದರಿಂದಾಗಿ ಕೋವಿಡ್‌ ಪ್ರಯೋಗಾಲಯಗಳ ಸಂಖ್ಯೆ 100ಕ್ಕೆ
ಏರಿಕೆಯಾಗಿದೆ. ಪ್ರಾರಂಭಿಕ ಹಂತದಲ್ಲಿಯೇ ಕೊರೋನಾ ಸೋಂಕನ್ನು ಪತ್ತೆ ಮಾಡುವ ಸಂಬಂಧ ಕೋವಿಡ್‌
ಪರೀಕ್ಷೆಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.

ದೇಶದಲ್ಲಿ ಮೊದಲ ಕೋವಿಡ್‌ ಪ್ರಕರಣ ವರದಿಯಾದಾಗ, ಮಾದರಿಗಳ ಪರೀಕ್ಷೆಗೆ ರಾಜ್ಯದಲ್ಲಿ ಒಂದೇ
ಒಂದು ಪ್ರಯೋಗಾಲಯ ಇರಲಿಲ್ಲ. ಸೋಂಕು ಶಂಕಿತರ ಗಂಟಲ ದ್ರವದ ಮಾದರಿಗಳನ್ನು ಪುಣೆಯ ರಾಷ್ಟ್ರಿಯ
ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ)ಕಳುಹಿಸಲಾಗುತ್ತಿತ್ತು. ಇದರಿಂದಾಗಿ ಪರೀಕ್ಷಾ ವರದಿ
ವಿಳಂಬವಾಗುತ್ತಿತ್ತು. ಫೆಬ್ರವರಿ ಅಂತ್ಯಕ್ಕೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ
(ಬಿಸಿಎಂಆರ್‌ಐ) ಹಾಗೂ ಎನ್‌ಐವಿ ಬೆಂಗಳೂರು ಕೇಂದ್ರದ ಪ್ರಯೋಗಾಲಯಕ್ಕೆ ಐಸಿಎಂಆರ್‌ ಅನುಮೋದನೆ
ನೀಡಿತು. ಮೇ ಅಂತ್ಯಕ್ಕೆ ರಾಜ್ಯದಲ್ಲಿ ಪ್ರಯೋಗಾಲಯಗಳ ಸಂಖ್ಯೆ 60ಕ್ಕೆ ಏರಿಕೆ ಮಾಡಿ, ದಿನವೊಂದಕ್ಕೆ ಗರಿಷ್ಟ 13
ಸಾವಿರ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಯಿತು.


168


50 ಸಾವಿರ ಗುರಿ: ಸದ್ಯ ರಾಜ್ಯದಲ್ಲಿ ದಿನವೊಂದಕ್ಕೆ ಆ್ಯಂಟಿಜೆನ್‌ ಸೇರಿದಂತೆ 40 ಸಾವಿರಕ್ಕೂ ಅಧಿಕ ಕೋವಿಡ್‌
ಪರೀಕ್ಷೆ ನಡೆಸಲಾಗುತ್ತಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಗಳ ಸಂಖ್ಯೆ 20 ಸಾವಿರದ ಗಡಿ ದಾಟಿದೆ. ಈವರೆಗೆ 16.68
ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. 45 ಸರ್ಕಾರಿ ಹಾಗೂ 55 ಖಾಸಗಿ ಪ್ರಯೋಗಾಲಯಗಳು
ಕಾರ್ಯನಿರ್ವಹಿಸುತ್ತಿವೆ. ದಿನವೊಂದಕ್ಕೆ 50 ಸಾವಿರ ಕೋವಿಡ್‌ ಪರೀಕ್ಷೆ ನಡೆಸುವ ಗುರಿಯನ್ನು ರಾಜ್ಯ ಸರ್ಕಾರ
ಹಾಕಿಕೊಂಡಿದೆ. ದೇಶದಲ್ಲಿ ಬೆರೆಳೆಣಿಕೆಯಷ್ಟು ರಾಜ್ಯಗಳು ಮಾತ್ರ ನೂರು ಹಾಗೂ ಅದಕ್ಕಿಂತ ಹೆಚ್ಚಿನ
ಪ್ರಯೋಗಾಲಯಗಳನ್ನು ಹೊಂದಿದೆ.


ಅಧಿಕ ಕೋವಿಡ್‌ ಪರೀಕ್ಷೆ ನಡೆಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ. ದೆಹಲಿ
ಅಗಸ್ಥಾನದಲ್ಲಿದ್ದು, ಅಲ್ಲಿ ಪ್ರತಿ 10 ಲಕ್ಷ ಜನರಲ್ಲಿ 64,650 ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈ
ಸಂಖ್ಯೆ 25,072ರಷ್ಠಿದೆ. ಬಿಹಾರದಲ್ಲಿ ಅತ್ಯಂತ ಕಡಿಮೆ ಪರೀಕ್ಷೆ (7.120)ನಡೆಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರತಿ
ನೂರು ಪರೀಕ್ಷೆಗಳಲ್ಲಿ ಶೇ.19ರಷ್ಟು ಮಂದಿಗೆ ಸೋಂಕು ದೃಢಪಟ್ಟರೆ ರಾಜ್ಯದಲ್ಲಿ ಶೇ.9ರಷ್ಟು ಮಂದಿ
ಸೋಂಕಿತರಾಗಿರುವುದು ಖಚಿತಪಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.


ಆ್ಯಂಬುಲೆನ್ಸ್‌ ನಿಯೋಜನೆ:- ನಗರದಲ್ಲಿ ಕೊರೋನಾ ಸೋಂಕಿತರು ಮತ್ತು ಕೋವಿಡೇತರ ರೋಗಿಗಳನ್ನು
ಆಸ್ಪತ್ರೆಗಳಿಗೆ, ಕೋವಿಡ್‌ ಆರೈಕೆ ಕೇಂದಗಳಿಗೆ ಕರೆದೊಯ್ಯಲು 665 ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ
ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ:ಕೆ.ಸುಧಾಕರ್‌ ಅವರು ತಿಳಿಸಿದ್ದಾರೆ.


ಪೂರ್ವ ವಲಯದಲ್ಲಿ 127, ಪಶ್ಚಿಮ ವಲಯದಲ್ಲಿ 141, ದಕ್ಷಿಣದಲ್ಲಿ 110, ರಾಜರಾಜೇಶ್ವರಿ ನಗರದಲ್ಲಿ
40, ಬೊಮ್ಮನಹಳ್ಳಿಯಲ್ಲಿ 43. ಮಹದೇವಪುರದಲ್ಲಿ 52, ದಾಸರಹಳ್ಳಿಯಲ್ಲಿ 24, ಯಲಹಂಕದಲ್ಲಿ 33
ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಗೃಹ ಇಲಾಖೆಗೆ 11 ಹಾಗೂ ನಗರ ಜಿಲ್ಲಯ ವ್ಯಾಪ್ತಿಯಲ್ಲಿ 84
ಆ್ಯಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಆಧಾರ:ಪಜಾವಾಣಿ, ದಿನಾಂಕ:10.08.2020
70. "ಇಮ್ಯುನಾಲಜಿ': ಲಸಿಕಾ ಸಂಶೋಧನಾ ಕೇಂದ್ರ ಸ್ಥಾಪನೆ


ಸದ್ಯ ಇಡೀ ಜಗತ್ತು "ಇಮ್ಯುನಾಲಜಿ' ಬಗ್ಗೆ ಚಿಂತಿಸುತ್ತಿರುವ ಹಾಗೂ ಪರಿಣಾಮಕಾರಿ ಲಸಿಕೆಗೆ ಕಾದಿರುವ
ಸಂದರ್ಭದಲ್ಲಿ ಅಮೆರಿಕದ ಅಟ್ಲಾಂಟದ ಎಮೊರಿ ಲಸಿಕಾ ಕೇಂದ್ರ ಸಹಯೋಗದಲ್ಲಿ “ಇಮ್ಮುನಾಲಜಿ ಮತ್ತು
ಲಸಿಕಾ ಸಂಶೋಧನಾ ಕೇಂದ'ವನ್ನು ರಾಜ್ಯದಲ್ಲಿ ಸ್ಥಾಪಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಉಪ
ಮುಖ್ಯಮಂತ್ರಿ ಡಾ:ಸಿ.ಎನ್‌.ಅಶ್ವತ್ನನಾರಾಯಣ ಹೇಳಿದರು.

ಅಮೆರಿಕದ ಅಟ್ಲಾಂಟಾದ ಎಮೊರಿ ವಿವಿಯ ಲಸಿಕಾ ಕೇಂದ್ರದ ನಿರ್ದೇಶಕ ಡಾ: ರಫಿ ಅಹಮ್ಮದ್‌
ಅವರೊಂದಿಗೆ ವೆಬಿನಾರ್‌ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಇಮ್ಯುನಾಲಜಿ
ಅಧ್ಯಯನ ಪ್ರಮುಖವಾಗಿದೆ. ರಾಜ್ಯದಲ್ಲೇ "ಇಮ್ಕುನಾಲಜಿ ಮತ್ತು ಲಸಿಕಾ ಕೇಂದ್ರ' ಸ್ಥಾಪನೆ
ಸಂದರ್ಭೋಚಿತವೆನಿಸಿದೆ ಎಂದರು.


ಲಸಿಕೆ, ಸಾಂಕ್ರಮಿಕ ರೋಗಗಳು, ಕ್ಯಾನ್ಸರ್‌ ಸಂಶೋಧನೆಗಳಲ್ಲಾ ಅಂತಿಮವಾಗಿ "ಇಮ್ಮುನಾಲಜಿ ವ್ಯಾಪ್ತಿಗೆ
ಬರುತ್ತವೆ. "ಇಮ್ಯುನಾಲಜಿ' ಕ್ಷೇತ್ರದಲ್ಲಿನ ಸಂಶೋಧನೆಗಳು ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳಿಗೆ ಉತ್ತರ
ಒದಗಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಕೋವಿಡ್‌-19 ದೃಢೀಕರಣದ ಆಧುನಿಕ ವಿಧಾನಗಳ ಅಭಿವೃದ್ಧಿ ಬಗ್ಗೆಯೂ ರಾಜ್ಯ ಸರ್ಕಾರ ಗಂಭೀರ
ಚಿಂತನೆ ನಡೆಸಿದೆ. ರಾಜ್ಯದಲ್ಲಿ ಸಂಶೋಧನೆ ಮತ್ತು ಅವಿಷ್ಠಾರಕ್ಕೆ ಪೂರಕ ವಾತಾವರಣವಿದೆ. ಇದನ್ನು
ಬಳಸಿಕೊಂಡು ಲಸಿಕೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಕ್ಲಿನಿಕಲ್‌ ಟ್ರಯಲ್‌, ಸಂಶೋಧನೆಗಳ
ಪ್ರಯೋಜನವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಅಗತ್ಯವಿದೆ. ಇದಕ್ಕೆ ಪೂರಕವಾದ ನೀತಿಯನ್ನು
ಸರ್ಕಾರ ರೂಪಿಸಲಿದೆ ಎಂದು ತಿಳಿಸಿದರು.


ಅಮೆರಿಕದ ಅಟ್ಲಾಂಟದ ಎಮೊರಿ ವಿವಿ ಲಸಿಕಾ ಕೇಂದ್ರದ ನಿರ್ದೇಶಕ ಡಾ:ರಫಿ ಅಹಮ್ಮದ್‌ ಮಾತನಾಡಿ,
ಎಮೊರಿ ಲಸಿಕಾ ಕೇಂದ್ರವು ನಿಖರತೆಯಿಂದ ಕೂಡಿದ ಅತ್ಯಾಧುನಿಕ ಕ್ಷಿಪ್ರ ಪರೀಕ್ಷಾ ವಿಧಾನವನ್ನು ಅಭಿವೃದ್ಧಿ


169


ಪಡಿಸಿದೆ. ಇದನ್ನು ಅಟ್ಲಾಂಟದ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. "ಪ್ಲಾಸ್ಮಾಥೆರಪಿ' "'ಹ್ಯಾಮನ್‌
ಮಾಲಿಕ್ಕುಲಾರ್‌ ಆಂಟಿಬಾಡೀಸ್‌' ಕ್ಷೇತ್ರವು ಎಮೊರಿ ಕೇಂದವು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇತರೆ
ಪ್ರಮುಖ ವಲಯಗಳಾಗಿವೆ ಎಂದು ಹೇಳಿದರು.


ಕರ್ನಾಟಕ ಹಾಗೂ ಎಮೊರಿ ಲಸಿಕಾ ಕೇಂದ್ರದ ನಡುವೆ ಶೈಕ್ಷಣಿಕ ಸಹಭಾಗಿತ್ತಕ್ಕೆ ಅವಕಾಶವಿದ್ದು, ಸದ್ಯ
ಆನ್‌ಲೈನ್‌ ಮೂಲಕ ಆರಂಭಿಸಬಹುದು. ಇದರಿಂದ ಎರಡು ಕಡೆಯ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿದೆ.
ಕರ್ನಾಟಕ ಸರ್ಕಾರದ ಸಹಯೋಗಕ್ಕಾಗಿ ಸದ್ಯದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು. ಕ್ಯಾನ್ಸರ್‌
ತಜ್ಞ ಡಾ: ವಿಶಾಲ್‌ರಾವ್‌ ಉಪಸ್ಥಿತರಿದ್ದರು.


ಆರು ತಿಂಗಳ ತಾತ್ಕಾಲಿಕ ಪರವಾನಿಗಿ ನಿರೀಕ್ಷೆ


ಕೋವಿಡ್‌-19 ಲಸಿಕೆಗೆ ಸಂಬಂಧಪಟ್ಟಂತೆ ಅಮೆರಿಕದಲ್ಲಿ ಮೂರು ಲಸಿಕೆಗಳ ಕ್ಷಿನಿಕಲ್‌ ಟ್ರಯಲ್‌
ಮುಂಚೂಣಿಯಲ್ಲಿವೆ. ಅವು ಫಲಪ್ರದವೆಂದು ದೃಢಪಟ್ಟರೆ ಮುಂದಿನ 6-8 ತಿಂಗಳಲ್ಲಿ ತಾತ್ವಾಲಿಕ ಪರವಾನಿಗಿ
ಲಭ್ಯವಾಗಬಹುದು ಎಂದು ಅಟ್ಲಾಂಟದ ಎಮೊರಿ ವಿವಿ ಲಸಿಕಾ ಕೇಂದದ ನಿರ್ದೇಶಕ ಡಾ: ರಫಿ ಅಹಮ್ಮದ್‌
ತಿಳಿಸಿದರು. ಈ ಪೈಕಿ ಎರಡು ಲಸಿಕೆಗಳು ಆರ್‌ಎನ್‌ಎ ಆಧಾರಿತವಾಗಿದೆ. ಕನಿಷ್ಠ ಶೇ.50 ಜನರಿಗಾದರೂ ಇದು
ಪರಿಣಾಮಕಾರಿ ಎಂದು ದೃಢಪಟ್ಟರೆ, ಆರರಿಂದ ಎಂಟು ತಿಂಗಳ ಅವಧಿಯಲ್ಲಿ ತಾತ್ವಾಲಿಕ ಪರವಾನಿಗಿ
ಸಿಗಬಹುದು ಎಂದರು.


ಆಧಾರ:ಉದಯವಾಣಿ, ದಿನಾ೦ಕ:11.08.2020
71. ಭವಿಷ್ಯದ ಕರ್ನಾಟಕ ಶೃಂಗಸಭೆ-2020ರಲ್ಲಿ


ಕೋವಿಡ್‌, ನೆರೆ ಸೇರಿ ಹಲವು ಸವಾಲುಗಳ ನಡುವೆಯೂ ರಾಜ್ಯದ ಜಿಡಿಪಿ ಸುಸ್ಲಿರವಾಗಿ ಬೆಳೆಯುತ್ತಿದ್ದು,
ಮುಂದಿನ ಐದು ವರ್ಷಗಳಲ್ಲಿ ರೂ.35 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ವಪ್ರಯತ್ನ
ನಡೆದಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ನನಾರಾಯಣ ಹೇಳಿದರು.


ಸ್ಪೇರ್‌ ಟ್ರಾವೆಲ್‌ ಮೀಡಿಯಾ ಮತ್ತು ಎಕ್ಷಿಬಿಷನ್‌ ಸಂಸ್ಥೆ ಆಯೋಜಿಸಿದ್ದ "ಭವಿಷ್ಯದ ಕರ್ನಾಟಕ
ಶೃಂಗಸಭೆ-2020'ರ ಆನ್‌ಲೈನ್‌ನಲ್ಲಿ ಮುಖ್ಯ ಭಾಷಣ ಮಾಡಿದ ಅವರು "ಸದ್ಯ ರಾಜ್ಯವು ರೂ.18 ಲಕ್ಷ ಕೋಟಿ
ಜಿಡಿಪಿ ಹೊಂದಿದೆ. ಐದು ವರ್ಷಗಳಲ್ಲಿ ಈ ಮೊತ್ತ ರೂ.35 ಲಕ್ಷ ಕೋಟಿ ದಾಟಲಿದೆ. ನಂತರದ ಐದು
ವರ್ಷಗಳಲ್ಲಿ ರೂ.75 ಲಕ್ಷ ಕೋಟಿ ಹೊಂದುವ ಗುರಿ ಇದೆ”. ಆರ್ಥಿಕತೆಗೆ ಬೆನ್ನೆಲುಬಾಗಿರುವ ಕೃಷಿ, ಐಟಿ-ಬಿಟಿ,
ಕೈಗಾರಿಕೆ, ಉತ್ಪಾದನೆ ಹಾಗೂ ಸೇವಾ ವಲಯಗಳಿಗೆ ಮತ್ತಷ್ಟು ಶಕ್ತಿ ತುಂಬಲು ಸರ್ಕಾರ ವಿವಿಧ ಕ್ರಮ


ಕೈಗೊಂಡಿದೆ. ಐದು ವರ್ಷಗಳಲ್ಲಿ ಗುರಿ ಸಾಧನೆಗೆ ಯತ್ನಿಸಲಾಗುತ್ತಿದೆ ಎಂದರು.


ದೇಶದಲ್ಲಿಯೇ ಕೈಗಾರಿಕೆ ಕ್ಷೇತ್ರದಲ್ಲಿ ಅತ್ಯಂತ ಮಾದರಿ ನೀತಿಯನ್ನು ರಾಜ್ಯ ಅನುಸರಿಸುತ್ತಿದ್ದು, ಯಾವುದೇ
ಕೈಗಾರಿಕೆಯನ್ನು ಕೇವಲ ಒಂದು ಅರ್ಜಿ ಸಲ್ಲಿಸಿ ಸ್ಥಾಪಿಸಬಹುದು. ಸರ್ಕಾರದ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳಿಗೆ
ಸಂಬಂಧಿಸಿದಂತೆ ಏಕಗವಾಕ್ಷಿ ವ್ಯವಸ್ಥೆಯಡಿ ಅನುಮತಿ ಪಡೆದುಕೊಳ್ಳಬಹುದು ಎಂದು ಹೇಳಿದರು.


ಸದ್ಯಕ್ಕೆ ರಾಜ್ಯದಲ್ಲಿ ಕೋವಿಡ್‌-19 ಸೋಂಕು ನಿಯಂತ್ರಣದಲ್ಲಿದೆ ಎಂದ ಉಪ ಮುಖ್ಯಮಂತ್ರಿ, ಸರ್ಕಾರದ
ವಶದಲ್ಲಿರುವ ಕೋವಿಡ್‌ ಹಾಸಿಗೆಗಳ ಪೈಕಿ ಇನ್ನೂ ಶೇ.30ರಷ್ಟು ಖಾಲಿ ಇವೆ. ಈಗ ಬೇಡಿಕೆಗಿಂತ ನಮ್ಮಲ್ಲಿರುವ
ಸೌಲಭ್ಯಗಳೇ ಹೆಚ್ಚಾಗಿವೆ. ಯಾವುದೇ ಆತಂಕವಿಲ್ಲ. ಜನರು ಧೈರ್ಯವಾಗಿರಬಹುದು ಎಂದರು.


ಮೈಸೂರು-ಬೀದರ್‌ ಕಾರಿಡಾರ್‌: ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲು
ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಮೈಸೂರು-ಬೀದರ್‌ ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ
ನಿರ್ಧರಿಸಲಾಗಿದೆ. ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಮುಂಬೈ ಕಾರಿಡಾರ್‌ಗಳಂತೆ ಈ ಕಾರಿಡಾರ್‌
ಅಭಿವೃದ್ಧಿ ಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.


ಆಧಾರ: ಕನ್ನಡಪುಭಾ, ದಿನಾಂಕ: 12.08.2020


170


72. 50 ಲಕ್ಷ ರೈತರಿಗೆ "ಕಿಸಾನ್‌ ಸಮ್ಮಾನ್‌" ಯೋಜನೆಯಡಿ ರೂ.1 ಸಾವಿರ ಕೋಟಿ


ಪ್ರಧಾನಮಂತ್ರಿ "ಕಿಸಾನ್‌ ಸಮ್ಮಾನ್‌' ಯೋಜನೆಯಡಿ ರಾಜ್ಯದಲ್ಲಿ 50 ಲಕ್ಷ ರೈತರಿಗೆ ರೂ.1 ಸಾವಿರ
ಕೋಟಿ ಬಿಡುಗಡೆಯಾಗಿದ್ದು, ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ ಎಂದು ಕೃಷಿ ಸಚಿವ
ಬಿ.ಸಿ.ಪಾಟೀಲ ತಿಳಿಸಿದ್ದಾರೆ.

"ಫೇಸ್‌ಬುಕ್‌' ನೇರ ಪ್ರಸಾರದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪಾಟೀಲ ರೈತರು ತಮ್ಮ
ಖಾತೆಯನ್ನು ಪರಿಶೀಲಿಸಿ, ಹಣ ಜಮೆ ಆಗಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದಿದ್ದಾರೆ.


2019-20ನೇ ಸಾಲಿನ ಬೆಳೆ ವಿಮೆ ಮೊತ್ತ ರೈತರ ಖಾತೆಗೆ ಜಮೆ ಆಗಲಿದೆ. ವಿಮೆ ಹಣಕ್ಕಾಗಿ ರೈತರು
ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.


ಇಲಾಖೆಯ ವೃಂದ ಮತ್ತು ನೇಮಕಾತಿ ಪ್ರಕ್ರಿಯೆಗೆ ನಿಯಮಗಳ ಕರಡು ಪ್ರಕ್ರಿಯೆ ಅಂತಿಮ
ಹಂತದಲ್ಲಿದೆ. ಆದಷ್ಟು ಬೇಗ "ರೈತ ಮಿತ್ರ'ರ ನೇಮಕಾತಿ ನಡೆಯಲಿದೆ. ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ
ಕೊರತೆ ಇಲ್ಲ. ಕಳೆದ ಸಾಲಿಗಿಂತ ಈ ವರ್ಷ ಶೇ.25ರಷ್ಟು ಹೆಚ್ಚಿನ ಪ್ರಮಾಣದ ಬಿತ್ತನೆಯಾಗಿದೆ. ಈ ವರ್ಷ 65
ಸಾವಿರ ಟನ್‌ ಯೂರಿಯಾ ಹೆಚ್ಚುವರಿಯಾಗಿ ಪೂರೈಕೆ ಆಗಲಿದೆ. ಈ ವಾರ 37 ಸಾವಿರ ಟನ್‌ ಯೂರಿಯಾ
ಸರಬರಾಜಾಗಲಿದೆ ಎಂದು ತಿಳಿಸಿದರು.


ಆಧಾರ:ಪ್ರಜಾವಾಣಿ, ದಿನಾಂಕ:17.08.2020
73. ರಾಜ್ಯದ 3 ಲಕ್ಷ ಕೊಳೆಗೇರಿ ಕುಟುಂಬಗಳಿಗೆ ಹಕ್ಕುಪತ್ರ


ರಾಜ್ಯದ ವಿವಿಧ ನಗರಗಳ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 3.3 ಲಕ್ಷ
ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಮೂಲಕ ಬಡವರ ದಶಕಗಳ
ಕನಸನ್ನು ರಾಜ್ಯ ಸರ್ಕಾರ ನನಸು ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ಹಕ್ಕುಪತ್ರ ನೀಡಿಕೆ ಸಂಬಂಧ
ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಕಳೆದ ಆರು ತಿಂಗಳಿಂದ ವಿವಿಧ ಇಲಾಖೆಗಳೊಂದಿಗೆ
ಸಮನ್ವಯತೆ ಸಾಧಿಸಿ ಶ್ರಮಿಸಿದ್ದ ವಸತಿ ಸಚಿವ ವಿ.ಸೋಮಣ್ಣ ಅವರು ಸಭೆಯಲ್ಲಿ ಸುದೀರ್ಪವಾಗಿ ಪ್ರಸ್ತಾವನೆ
ಮಂಡಿಸಿ ಅನುಮೋದನೆ ಪಡೆದುಕೊಂಡರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ಪಟ್ಟಣ ಪಂಚಾಯಿತಿ,
ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ
ಮಾಲೀಕತ್ವದಲ್ಲಿರುವ ಸುಮಾರು 6745 ಎಕರೆ ಜಮೀನಿನಲ್ಲಿರುವ 1873 ಕೊಳಚೆ ಪ್ರದೇಶಗಳ ಸುಮಾರು 3.13
ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು.


ಹಲವಾರು ವರ್ಷಗಳಿಂದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಈ ಕುಟುಂಬಗಳು ಸರ್ಕಾರ ಸೇರಿದಂತೆ
ಖಾಸಗಿ ಮಾಲೀಕತ್ನ್ಸದ ಜಾಗದಲ್ಲಿ ಮನೆ ಕಟ್ಟಿಕೊಂಡು ಸದಾ ಕಾಲ ತೆರವಿನ ಆತಂಕದಲ್ಲಿ ಜೀವನ ನಡೆಸುತ್ತಿದ್ದರು.
ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದಿಂದ ನಿಟ್ಟಿಸಿರು ಬಿಟ್ಟಂತಾಗಿದೆ. ಈ ಹಕ್ಕು ಪತ್ರ ನೀಡಿಕೆಯಿಂದ
ಸುಮಾರು 16 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ನಾನು
ಕಳೆದ ವರ್ಷ ಆಗಸ್ಟ್‌ 20ರಂದು ಸಚಿವನಾಗಿ ಅಧಿಕಾರ ಸ್ಟೀಕರಿಸಿದ್ದೆ. ಸರಿಯಾಗಿ ಒಂದು ವರ್ಷ ಪೂರ್ಣಗೊಂಡ
ಸಂದರ್ಭದಲ್ಲೇ ಸಮಾಜದ ಅತ್ಯಂತ ಕೆಳ ಮತ್ತು ದುರ್ಬಲ ವರ್ಗದ ಬಹುದಿನದ ಕನಸನ್ನು ಈಡೇರಿಸುವ
ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿರುವುದು ಸಂತಸ ಉಂಟು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 683 ಎಕರೆ ಸರ್ಕಾರಿ ಜಾಗದಲ್ಲಿ 239 ಕೊಳಚೆ ಪ್ರದೇಶಗಳಿದ್ದು,
ಸುಮಾರು 50,000 ಕುಟುಂಬಗಳು ವಾಸಿಸುತ್ತಿವೆ. ಕೊಳಗೇರಿ ನಿವಾಸಿಗಳು ತಮ್ಮ ವಾಸಸ್ಥಳದ ಹಕ್ಕಿನಿಂದ
ಹಲವಾರು ವರ್ಷಗಳಿಂದ ವಂಚಿತರಾಗಿದ್ದರು. ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ
ಸದೃಢರನ್ನಾಗಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವಸತಿ, ನಗರಾಭಿವೃದ್ಧಿ, ಪೌರಾಡಳಿತ


171


ಹಾಗೂ ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಈ ಪ್ರಸ್ತಾವನೆಗೆ
ತಾರ್ಕಿಕ ಅಂತ್ಯ ನೀಡಿರುವುದಕ್ಕೆ ತಮಗೆ ವೈಯುಕ್ತಿಕವಾಗಿ ಸಂತೋಷವಿದೆ ಎಂದು ಹೇಳಿದರು.


ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯವಾದ "ಸರ್ವರಿಗೂ ಸೂರು' ಎಂಬ ಕಲ್ಲನೆಯನ್ನು
ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮಾಜದ ದುರ್ಬಲ ವರ್ಗದ ಜನರು ವಾಸಿಸುವ ಕೊಳಚೆ ಪ್ರದೇಶದ ನಿವಾಸಿಗಳ
ಬಹುದಿನದ ಕನಸನ್ನು ಈಡೇರಿಸುವ ಇತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದಕ್ಕಾಗಿ ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಸಂಪುಟ ಸಹೋದ್ಯೋಗಿಗಳಿಗೆ ಹಾಗೂ ಸರ್ಕಾರದ ಮುಖ್ಯ
ಕಾರ್ಯದರ್ಶಿಗಳಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು.


ಆಧಾರ:ಕನ್ನಡಪ್ರಭ, ದಿನಾಂಕ:21.08.2020
74. ಪಶುಗಳ ಆರೋಗ್ಯಕ್ಕಾಗಿ ಪಶು ಸಂಜೀವಿನಿ ವಾಹನ


ಶಸ್ತ್ರಚಿಕಿತ್ಸೆ ಘಟಕ ಸೇರಿ ವಿವಿಧ ಆರೋಗ್ಯ ಸೇವೆ ಹೊಂದಿರುವ ಪಶು ಸಂಜೀವಿನಿ ವಾಹನಕ್ಕೆ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,
ರೂ.ಎರಡು ಕೋಟಿ ಅನುದಾನದಲ್ಲಿ ಪಶು ಚಿಕಿತ್ಸಾ ವಾಹನ ಸೇವೆಯನ್ನು ಜಾರಿಗೆ ತರಲಾಗುತ್ತದೆ. 15 ಜಿಲ್ಲೆಗಳಿಗೆ
ವಾಹನ ಸೌಲಭ್ಯ ನೀಡಲಾಗುತ್ತದೆ. ಪಶು ಸಂಜೀವಿನಿ ವಾಹನದಲ್ಲಿ ಶಸ್ತ್ರಚಿಕಿತ್ಸೆ ಘಟಕ ಸೇರಿ ವಿವಿಧ ಆರೋಗ್ಯ
ಸೇವೆ ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಣೆ
ಮಾಡಲಾಗುವುದು ಎಂದು ಹೇಳಿದರು.


ಸಚಿವ ಪ್ರಭು ಚೌಹಾಣ್‌ ಮಾತನಾಡಿ, ರಾಜ್ಯದಲ್ಲಿ ಗೋವಿನ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗೋಹತ್ಯೆ
ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಂಗಾರು ಅಧಿವೇಶನದಲ್ಲಿ ಕಾಯ್ದೆ ಜಾರಿಗೆ ತರುವ
ಯೋಚನೆಯಿದೆ ಎಂದು ತಿಳಿಸಿದರು.


ಮನುಷ್ಯರಿಗೆ ಅನಾರೋಗ್ಯವಾದಾಗ 108 ಸಂಖ್ಯೆಗೆ ಕರೆ ಮಾಡಿದಾಗ ರೋಗಿಯ ಮನೆಯ ಬಾಗಿಲಿಗೆ
ಬಂದ ರೀತಿಯೇ, ಪಶು ಸಂಜೀವಿನಿ ವಾಹನ 1962 ಸಂಖ್ಯೆಗೆ ದೂರವಾಣಿ ಕರೆ ಮಾಡಿದಲ್ಲಿ ವೈದ್ಯರು ಹಾಗೂ
ವೈದ್ಯಕೀಯ ಸಿಬ್ಬಂದಿಯನ್ನೊಳಗೊಂಡ ಈ ವಾಹನ ಬಂದು ಅನಾರೋಗ್ಯಕ್ಕೆ ಒಳಗಾದ ಜಾನುವಾರುಗಳಿಗೆ ಚಿಕಿತ್ಸೆ
ನೀಡಲಿದೆ.


ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:21.08.2020
75. ಸಾರಿಗೆ ಇಲಾಖೆ ಕಾರ್ಯ ವೈಖರಿಗೆ ಮೆಚ್ಚುಗೆ


ಪ್ರಯಾಣಿಕರಿಗೆ ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಾರಿಗೆ ಇಲಾಖೆ ಒಂದು ವರ್ಷದಲ್ಲಿ
ಜಾರಿಗೊಳಿಸಿದ ಕಾರ್ಯಕ್ರಮಗಳು, ಕೋವಿಡ್‌-19ರ ಪಿಡುಗಿನ ನಡುವೆಯೂ ಸುರಕ್ಷಿತ ಸಾರಿಗೆ ಸೇವೆ
ಒದಗಿಸುತ್ತಿರುವ ಇಲಾಖೆ ಸಾಧನೆಯ ಮಾಹಿತಿ ಒಳಗೊಂಡ "ಸಾರಿಗೆ ಮಿತ್ರ' ಕೈಪಡಿಯನ್ನು
ಮುಖ್ಯಮಂತ್ರಿಯವರು ಬಿಡುಗಡೆಗೊಳಿಸಿದರು.


ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೈಪಿಡಿ ಬಿಡುಗಡೆಗೊಳಿಸಿದ ಯಡಿಯೂರಪ್ಪ ಸಾರಿಗೆ
ಇಲಾಖೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ
ಸವದಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌, ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಸಾರಿಗೆ ಆಯುಕ್ತ
ಶಿವಕುಮಾರ್‌ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಇತರರು ಉಪಸ್ಥಿತರಿದ್ದರು.


ಇಲಾಖೆಯ ವರ್ಷದ ಸಾಧನೆಯ ಪ್ರಮುಖಾಂಶಗಳು: ಆರು ತಿಂಗಳಿನಿಂದ ಕೋವಿಡ್‌-19 ಕಾಡಲಾರಂಭಿಸಿದ್ದರು
ಸಾರಿಗೆ ಇಲಾಖೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ಸ್ಪಂದಿಸಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಲಕ್ಷಾಂತರ
ಮಂದಿ ವಲಸೆ ಕಾರ್ಮಿಕರಿಗೆ ಸಾರಿಗೆ ಸೇವೆ ಒದಗಿಸಲಾಯಿತು. ಲಾಕ್‌ಡೌನ್‌ನಿಂದ ಸಂಕಷ್ಪಕ್ಕೆ ಸಿಲುಕಿದ್ದ ಅರ್ಹ
ಆಟೋರಿಕ್ಷಾ ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿಯ ಪರಿಹಾರವಾಗಿ ರೂ.5000 ವಿತರಿಸಲಾಯಿತು. ಲಾಕ್‌ಡೌನ್‌
ಅವಧಿಯಲ್ಲಿ ಎಲ್ಲ ಪ್ರಯಾಣಿಕ, ಸರಕು ಸಾಗಣೆ ವಾಹನಗಳಿಗೆ ತೆರಿಗೆ ಪಾವತಿ ವಿನಾಯಿತಿ ನೀಡಲಾಯಿತು.


172


ಸಾರಿಗೆ ಇಲಾಖೆ ಹಾಗೂ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ಕೊರೋನಾ ವಾರಿಯರ್‌ಗಳಂತೆ
ಕಾರ್ಯನಿರ್ವಹಿಸಿ ಪ್ರಯಾಣಿಕರಿಗೆ ಸ್ಪಂದಿಸಿದರು. ಕೊರೋನಾದಿಂದ ಸಾಕಷ್ಟು ನಷ್ಟ ಅನುಭವಿಸಿದ್ದರೂ ಸಾರಿಗೆ
ಸಿಬ್ಬಂದಿಗೆ ಮಾಸಿಕ ವೇತನ ಪಾವತಿಸಲಾಗುತ್ತಿದೆ. ಪೀಣ್ಯ ಬಸ್‌ ನಿಲ್ದಾಣವನ್ನು ಕೊರೋನಾ ಚಿಕಿತ್ಸಾ
ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಹಲವೆಡೆ ಸಾರಿಗೆ ಬಸ್‌ಗಳನ್ನು ಮೊಬೈಲ್‌ ಚಿಕಿತ್ಸಾ ಘಟಕಗಳನ್ನಾಗಿ
ಪರಿವರ್ತಿಸಲಾಗಿದೆ.


ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬಿಎಂಟಿಸಿ ಬಸ್‌ಗಳಿಗೆ ಪ್ರತ್ರೇಕ ಪಥ ವ್ಯವಸ್ಥೆ
ಜಾರಿಗೊಳಿಸಲಾಗಿದೆ. ಬಿಎಂಟಿಸಿಯ ಆಯ್ದ 100 ಬಸ್‌ಗಳಿಗೆ ಬೈಸಿಕಲ್‌ಗಳನ್ನು ಅಳವಡಿಸುವ ರ್ಯಾಕ್‌ ವ್ಯವಸ್ಥೆ
ಕಲ್ಪಿಸಲು ನಿರ್ಧರಿಸಿದ್ದು, ಕೆಲ ಬಸ್‌ಗಳಿಗೆ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಇತ್ತೀಚೆಗೆ ನಡೆದ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಉಚಿತ ಸಾರಿಗೆ
ವ್ಯವಸ್ಥೆ ಕಲ್ಪಿಸಿದ್ದು ವಿಶೇಷ. ಹಲವೆಡೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಬಸ್‌ನಿಲ್ದಾಣಗಳನ್ನು
ಹೊಸದಾಗಿ ನಿರ್ಮಿಸಲಾಗಿದೆ.


ಉದ್ದೇಶಿತ ಪ್ರಮುಖ ಯೋಜನೆಗಳು: ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣ ವ್ಯವಸ್ಥೆ ಜೊತೆಗೆ ಕೊರಿಯರ್‌ ಸೇವೆ
ಪ್ರಾರಂಭಿಸಲು ಇಲಾಖೆ ನಿರ್ಧರಿಸಿದೆ. ಆ ಮೂಲಕ ವಾರ್ಷಿಕ ರೂ.100 ಕೋಟಿ ನಿವ್ವಳ ಆದಾಯ ಹೆಚ್ಚಾಗಲಿದೆ
ಎಂದು ನಿರೀಕ್ಷಿಸದೆ. ಪ್ರತಿಷ್ಠಿತ ಇಸ್ರೋ ಸಂಸ್ಥೆಯಿಂದ ತಂತ್ರಜ್ಞಾನ, ಮಾರ್ಗದರ್ಶನ ಪಡೆದು ಸಾರಿಗೆ ಸಂಸ್ಥೆಗಳಲ್ಲಿನ
ಸೇವೆಯನ್ನು ಇನ್ನಷ್ಟು ಆಧುನಿಕರಣಗೊಳಿಸಲು ಉದ್ದೇಶಿಸಿದೆ. ಖರೀದಿ ವಿಭಾಗದಲ್ಲಿ ಸೋರಿಕೆ ತಡೆಗೆ ಇಸ್ರೋ
ನೆರವಿನಿಂದ ನೂತನ ನಿಯಂತ್ರಣ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದೆ. ಜೊತೆಗೆ ಸಾರಿಗೆ ನಿಗಮಗಳು
ಮತ್ತು ಸಾರಿಗೆ ಇಲಾಖೆ ಯೋಜನೆಗಳ ಮೇಲ್ವಿಚಾರಣೆಗಾಗಿ ಇಸ್ರೋ ಸಹಯೋಗದಲ್ಲಿ ಇಸ್ರೋ ಸಂಸ್ಥೆಯನ್ನು
ಪ್ರಾಜೆಕ್ಸ್‌ ಮಾನಿಟರಿಂಗ್‌ ಕೇಂದ್ರವನ್ನಾಗಿ ನೇಮಿಸಲಾಗಿದೆ.


ತಜ್ಞಧ ಸಲಹಾ ಸಮಿತಿ:-ಸಾರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ದಕ್ಷತೆ ತರುವ ಸಲುವಾಗಿ ನಿವೃತ್ತ ಐಎಎಸ್‌, ಐಪಿಎಸ್‌
ಅಧಿಕಾರಿಗಳನ್ನು ಒಳಗೊಂಡ ತಜ್ಞಧ ಸಮಿತಿ ರಚಿಸಿ ಸಲಹೆ, ಸೂಚನೆ ಪಡೆಯುವುದು ಅನಗತ್ಯ ಹೊರಗುತ್ತಿಗೆ
ಆಧಾರಿತ ಯೋಜನೆಗಳನ್ನು ಸ್ಥಗಿತಗೊಳಿಸುವುದು. ನಿರ್ಭಯ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಸುರಕ್ಷತಾ
ದೃಷ್ಟಿಯಿಂದ ಸಿಸಿಟಿವಿ/ಮೊಬೈಲ್‌ ಆ್ಯಪ್‌ ಅಳವಡಿಕೆಗೆ ಚಾಲನೆ, ಸಾರಿಗೆ ನಿಗಮಗಳಲ್ಲಿನ ಖಾಲಿ ನಿವೇಶನಗಳನ್ನು
ಗುರುತಿಸಿ ಸಮೀಕ್ಷೆ ನಡೆಸಿ ಅವುಗಳಿಂದ ಆದಾಯ ಪಡೆಯುವ ರೂಪದಲ್ಲಿ ಬಳಸಿಕೊಳ್ಳುವ ಕಾರ್ಯಕ್ಕೆ ಒತ್ತು
ನೀಡಲಾಗಿದೆ. ನಾನಾ ನಿಗಮಗಳಲ್ಲಿನ ಹೊಸ ಆಧುನಿಕ ಬಸ್‌ಗಳನ್ನು ಖರೀದಿಸಿ ಸೇವೆಗೆ ನೀಡಲಾಗಿದೆ. ಎಲೆಕ್ಟಿಕ್‌
ಬಸ್‌ಗಳನ್ನು ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಬಳಸಲು ಕ್ರಮ ಕೈಗೊಳ್ಳಲಾಗಿದೆ. ಚಾಲನಾ ಪರವಾನಿಗಿ
ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸಿ ನಾನಾ ನಗರಗಳಲ್ಲಿ ಗಣಕೀಕೃತ ಚಾಲನಾ ಪರೀಕ್ಷಾಪಥ
ನಿರ್ಮಿಸಲಾಗಿದೆ. ಕರ್ನಾಟಕ ಒನ್‌ ಹಾಗೂ ಬೆಂಗಳೂರು ಒನ್‌ ಕೇಂದಗಳಲ್ಲಿ ಚಾಲನಾ ಪರವಾನಿಗಿ ಅರ್ಜಿ
ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಸಂಚರಿಸುವ ವಾಹನಗಳಲ್ಲಿ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌
ವ್ಯವಸ್ಥೆ ಅಳವಡಿಸಲು ರೂ.20 ಕೋಟಿ ವೆಚ್ಚ ಮಾಡಲಾಗುತ್ತಿದೆ. ರಸ್ತೆ ಸುರಕ್ಷತಾ ಕಮ ಹಾಗೂ ಜನಜಾಗೃತಿ
ಚಟುವಟಿಕೆಗಳ ಪರಿಣಾಮ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ 940ರಷ್ಟು ಇಳಿಕೆಯಾಗಿದೆ.
ಅಂದರೆ ಶೇ.25ರಷ್ಟು ಕಡಿಮೆಯಾದಂತಾಗಿದೆ ಎಂದು ಇಲಾಖೆ ತಿಳಿಸಿದೆ.


ಆಧಾರ:ಉದಯವಾಣಿ, ದಿನಾ೦ಕ:21.08.2020
76. ಕೆಆರ್‌ಎಸ್‌ ಬೃಂದಾವನ ವಿಶ್ವದರ್ಜೆಗೆ


ಕೆಆರ್‌ಎಸ್‌ ಬೃಂದಾವನವನ್ನು ವಿಶ್ವದರ್ಜೆಗೇರಿಸಲು ಜೆಂತನೆ ನಡೆಸಲಾಗಿದೆ ಎಂದು
ಮುಖ್ಯಮಂತ್ರಿಯವರು ಹೇಳಿದರು.


ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ನಡೆದ ವೇದಿಕೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣರಾಜಸಾಗರ ಜಲಾಶಯಕ್ಕೆ ಬೃಂದಾವನ ಮೆರುಗು ತಂದಿದ್ದು
ಸೌಂದರ್ಯ ಹೆಚ್ಚಿಸಿದೆ. ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ ಇದನ್ನು
ವಿಶ್ವದರ್ಜೆಗೇರಿಸಲು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.


173


ಕೆಸ್ಕ್‌ ಗೇಟ್‌ಗಳ ಅಭಿವೃದ್ಧಿ: ಜಲಾಶಯದ ಹಳೆಯ ಕೆಸ್ಸ್‌ ಗೇಟ್‌ಗಳನ್ನು ಅಭಿವೃದ್ದಿಪಡಿಸಲಾಗಿದೆ. ಸುಮಾರು
ರೂ.8.40 ಕೋಟಿ ವೆಚ್ಚದಲ್ಲಿ 16 ಗೇಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.


28 ನೀರಾವರಿ ಯೋಜನೆ ಕಾಮಗಾರಿ ಪ್ರಗತಿ: ನಮ್ಮ ಸರ್ಕಾರ ರಾಜ್ಯದಲ್ಲಿ ನೀರಾವರಿ ಯೋಜನೆಗೆ ಪ್ರಥಮ ಆದ್ಯತೆ
ನೀಡಿದೆ. ರಾಜ್ಯದಲ್ಲಿ ಸುಮಾರು ರೂ.74 ಸಾವಿರ ಕೋಟಿ ವೆಚ್ಚದಲ್ಲಿ ಕುಡಿಯುವ ನೀರು, ಏತ ನೀರಾವರಿ, ಕೃಷಿ
ಚಟುವಟಿಕೆಗಳಿಗೆ ನೀರೊದಗಿಸುವ ಹಾಗೂ ಕೆರೆ-ಕಟ್ಟಿಗಳಿಗೆ ನೀರು ತುಂಬಿಸುವ 28 ಕಾಮಗಾರಿಗಳನ್ನು
ನಡೆಸಲಾಗುತ್ತಿದ್ದು, ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ತಿಳಿಸಿದರು.


ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಕ್ರಮ: ಕಾವೇರಿ ನದಿ ನೀರು ಸಂರಕ್ಷಿಸಿ ವಿದ್ಯುತ್‌ ಉತ್ಪಾದನೆ, ಕೃಷಿ ಹಾಗೂ
ಕುಡಿಯುವ ನೀರಿನ ಉದ್ದೇಶಕ್ಕೆ ರೂಪಿಸಲಾಗಿರುವ ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಕ್ರಮ
ವಹಿಸಲಾಗುವುದು. ಈಗಾಗಲೇ ಈ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಅನುಮತಿ ಪಡೆದು ಯೋಜನೆ
ರೂಪಿಸಲಾಗುವುದು ಎಂದರು.


ಎಲ್ಲ ಜಲಾಶಯಗಳು ಭರ್ತಿ: ರಾಜ್ಯದ ಎಲ್ಲ ಜಲಾಶಯಗಳು, ಕೆರೆ ಕಟ್ಟೆಗಳು ತುಂಬಿವೆ. ಅದರಂತೆ ಕೆಅರ್‌ಎಸ್‌
ಜಲಾಶಯ ನಿರ್ಮಾಣವಾದಾಗಿನಿಂದ ಸುಮಾರು 36 ಬಾರಿ ತುಂಬಿದೆ. ಕಳೆದ 3 ವರ್ಷಗಳಿಂದ ಸತತವಾಗಿ
ಗರಿಷ್ಠ ಮಟ್ಟ ತುಂಬಿದ್ದು, ಈ ಭಾಗದ ಜನರ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ
ನೀರೊದಗಿಸುತ್ತಾ ಬಂದಿದೆ. ಜಲಾಶಯಕ್ಕೆ ನಾನು 5ನೇ ಬಾರಿ ಬಾಗಿನ ಅರ್ಪಿಸಿದ್ದು, ಸಂತಸ ತಂದಿದೆ ಎಂದು
ಮುಖ್ಯಮಂತ್ರಿ ತಿಳಿಸಿದರು.


ಕಿರು ಪುಸ್ತಕ ಬಿಡುಗಡೆ: ಈ ಬಾರಿ ಉತ್ತಮ ಮಳೆಯಾಗಿದ್ದು, ಬೆಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಕೆಲವು ಕಡೆ
ಅತಿವೃಷ್ಟಿ ಹಾಗೂ ಅನಾವೃಷ್ಟಿ ಉಂಟಾಗಿದೆ. ಆ ಭಾಗದ ಜನರಿಗೆ ಪರಿಹಾರ ವಿತರಿಸಲು ಸರ್ಕಾರ ಈಗಾಗಲೇ
ಒಂದು ವರ್ಷದ ಸಾಧನೆಯ ಕಿರುಪುಸ್ತಕವನ್ನು ಬಿಡುಗಡೆ ಮಾಡಿತು. ಜಿಲ್ಲಾ ಉಸ್ತುವಾರಿ ಸಚಿವ
ಕೆ.ಸಿ. ನಾರಾಯಣಗೌಡ, ಸಚಿವರಾದ ರಮೇಶ್‌ ಜಾರಕಿಹೋಳಿ, ಎಸ್‌.ಟಿ. ಸೋಮಶೇಖರ್‌, ಶಾಸಕರಾದ
ಸಿ.ಎಸ್‌.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್‌, ಕೆ.ಅನ್ನದಾನಿ, ಎನ್‌. ಅಪ್ಪಾಜಿಗೌಡ,
ಕೆ.ಟಿ.ಶ್ರೀಕಂಠೇಗೌಡ, ನಾಗೇಂದ್ರ, ಸಂಸದರಾದ ಸುಮಲತಾ ಅಂಬರೀಷ್‌, ಪ್ರತಾಪ್‌ಸಿಂಹ, ಮೈಸೂರಿನ ಮೇಯರ್‌
ತಸ್ಲೀಮಾ ಬಾನು, ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌, ಜಿಲ್ಲಾಧಿಕಾರಿ, ಡಾ: ಎಂ.ವಿ.ವೆಂಕಟೇಶ್‌,
ಜಿಪಂ.ಸಿಇಓ ಎಂ.ಎಸ್‌.ಜುಲ್‌ಫಿಖಾರ್‌ ಉಲ್ಲಾ, ತಹಶೀಲ್ದಾರ್‌ ರೂಪ ಉಪಸ್ಥಿತರಿದ್ದರು.


ಆಧಾರ:ವಿಶ್ವವಾಣಿ, ದಿನಾಂಕ:22.08.2020
77. ಡಿಜೆಟಲ್‌ ಗ್ರಂಥಾಲಯ ವ್ಯವಸ್ಥೆ: ಕರ್ನಾಟಕ ಮಾದರಿ


ಇಡೀ ದೇಶದಲ್ಲಿ ಮಾದರಿ ಡಿಜಿಟಲ್‌ ಗಂಥಾಲಯ ವ್ಯವಸ್ಥೆಯನ್ನು ಹೊಂದಿದ ಮೊದಲ ರಾಜ್ಯ
ಕರ್ನಾಟಕ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.


ಬೆಂಗಳೂರಿನ ಡಾ: ಶಿವರಾಮ ಕಾರಂತ ನಗರದ 2ನೇ ಹಂತದಲ್ಲಿ ಶಾಖಾ ಗಂಥಾಲಯಕ್ಕೆ ಶಿಲಾನ್ಯಾಸ
ನೆರವೇರಿಸಿ ಮಾತನಾಡಿದ ಅವರು, ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದಿನ
ಅವಶ್ಯಕತೆಗಳಿಗೆ ಅನುಗುಣವಾಗಿ ಡಿಜಿಟಲ್‌ ಗ್ರಂಥಾಲಯಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ ಎಂದರು.


ಕಳದ ಆರು ತಿಂಗಳ ಅವಧಿಯಲ್ಲಿ ರಾಜ್ಯದೆಲ್ಲೆಡೆ 272 ಡಿಜಿಟಲ್‌ ಗಂಥಾಲಯಗಳು ಕಾರ್ಯಾರಂಭ
ಮಾಡಿದ್ದು, ಇಡೀ ದೇಶದಲ್ಲಿ ಇದು ಅಭೂತ ಪ್ರಯತ್ನವಾಗಿದೆ. ಕೋವಿಡ್‌ ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿ
ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಉಪಕ್ರಮವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯ
ಇಲಾಖೆ ಡಿಜಿಟಲ್‌ ಗ್ರಂಥಾಲಯ ಮೊಬೈಲ್‌ ಆ್ಯಪ್‌ ಲೋಕಾರ್ಪಣೆಗೊಳಿಸಿದ್ದು, ಇಂದು ನಾಲ್ಕು ಲಕ್ಷಕ್ಕೂ ಹೆಚ್ಚು
ಜನ ಈ ಲ್ಯಪ್‌ ಬಳಸುತ್ತಿದ್ದಾರೆ. ಒಂದು ಲಕ್ಷಕ್ಕೂ ಮೀರಿದ ಪುಸ್ತಕಗಳು ಈ ಆ್ಯಪ್‌ನಲ್ಲಿ ಲಭ್ಯವಿದೆ. ಈ ತನಕ 15
ಲಕ್ಷ ಜನರು ಇದರ ಉಪಯೋಗ ಪಡೆದಿದ್ದಾರೆ ಎಂದು ಹೇಳಿದರು.


ಪುಸ್ತಕ ಸಂಸ್ಕೃತಿ ಬೆಳೆಸಲು ರಾಜ್ಯಾದ್ಯಾಂತ 6841 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇದು
ದೇಶದಲ್ಲಿಯೇ ಮಾದರಿ ಗ್ರಂಥಾಲಯ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ


174


ವರ್ಗದ ಜನರ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಗ್ರಂಥಾಲಯಗಳಲ್ಲಿ ಅವಶ್ಯಕ ಸೇವೆಗಳನ್ನು ಒದಗಿಸಲು
ಕ್ರಮ ಕೈಗೊಳ್ಳಲಾಗುವುದು ಎಂದರು.


ಆಧಾರ:ವಿಶ್ವವಾಣಿ, ದಿನಾಂಕ;25.08.2020
78. ಡಿಎಲ್‌, ಪರ್ಮಿಟ್‌ ಮಾನ್ಯತೆ ವಿಸ್ತರಣೆ


ಚಾಲನಾ ಪರವಾನಿಗಿ (ಡಿಎಲ್‌) ಮತ್ತು ಮೋಟಾರು ವಾಹನ ದಾಖಲೆಗಳ (ಪರ್ಮಿಟ್‌) ಅವಧಿಯನ್ನು
ಡಿ.31ರ ತನಕ ವಿಸ್ತರಿಸಲಾಗಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಪ್ರಕಟಣೆಯಲ್ಲಿ
ತಿಳಿಸಿದೆ.


ಕೊರೋನಾ ಲಾಕ್‌ಡೌನ್‌ನಿಂದಾಗಿ ಚಾಲನಾ ಪರವಾನಿಗಿ ಪರ್ಮಿಟ್‌ ಅವಧಿ ಮುಗಿದಿದ್ದರೂ ನವೀಕರಣ
ಮಾಡಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದವರಿಗೆ ಕೇಂದ್ರ ಸರ್ಕಾರ ಮತ್ತೆ ರಿಲೀಫ್‌ ನೀಡಿದೆ.


ಮೋಟಾರು ವಾಹನ ಕಾಯಿದೆ-1998 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು-1989ರ ಅಡಿ
ಫಿಟ್‌ನೆಸ್‌, ಪರವಾನಿಗಿಗಳು, ನೋಂದಣಿ ಅಥವಾ ಇತರ ದಾಖಲೆಗಳ ಸಿಂಧುತ್ನವನ್ನು 2020ರ ಡಿಸೆಂಬರ್‌ 31
ರವರೆಗೆ ವಿಸ್ತರಿಸಲಾಗಿದೆ.


ಕಳದ ಫೆಬ್ರವರಿಯಲ್ಲಿ ಡಿಎಲ್‌ ಮತ್ತು ವಾಹನಗಳ ಪರ್ಮಿಟ್‌ ಹಾಗೂ ನೋಂದಣಿ ಅವಧಿ
ಮುಗಿದಿದ್ದರೆ. ಅಂತಹ ದಾಖಲೆಗಳ ಮಾನ್ಯತೆಯನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿತ್ತು. ಇದಾದ ನಂತರ
ಮತ್ತೊಮ್ಮೆ ಸೆಪ್ಪೆಂಬರ್‌ 30ರವರೆಗೆ ಅವಧಿ ವಿಸ್ತರಿಸಲಾಗಿತ್ತು. ಡಿಸೆಂಬರ್‌ 30ರವರೆಗೆ ಅವಧಿ ವಿಸ್ತರಿಸಿದ್ದು,
ವಾಹನ ಮಾಲೀಕರಿಗೆ ರಿಲೀಫ್‌ ನೀಡಲಾಗಿದೆ. ಆದರೆ 2020ರ ಡಿಸೆಂಬರ್‌ 31ರ ನಂತರ ಅವಧಿ
ವಿಸ್ತರಿಸಲಾಗದು ಎಂದು ಸರ್ಕಾರ ಹೇಳಿದೆ.


ವಾಹನ ವಿಮೆಗೆ ಪಿಯುಸಿ ಸರ್ಟಿಫಿಕೇಟ್‌ ಕಡ್ಡಾಯ


ವಾಹನ ವಿಮೆಯನ್ನು ನವೀಕರಿಸಲು ಮಾನ್ಯತೆ ಹೊಂದಿರುವ ಪ ್ಯ
ನಿಯಂತ್ರಣದ ಪ್ರಮಾಣ ಪತ್ರವನ್ನು (ಪಿಯುಸಿ) ವಿಮೆ ನಿಯಂತ್ರಕ ಮತ್ತು ಅಭಿವೃದ್ದಿ ಪ್ರಾಧಿಕಾರವು
(ಐಆರ್‌ಡಿಎಐ)ಕಡ್ಡಾಯಗೊಳಿಸಿದೆ. ಒಂದು ವೇಳೆ ಮಾನ್ಯತೆಯುಳ್ಳ ಪಿಯುಸಿ ಪ್ರಮಾಣ ಪತ್ರ ಇಲ್ಲದ ಪಕ್ಷದಲ್ಲಿ
ಅಪಘಾತದ ಸಂದರ್ಭದಲ್ಲಿನ ಹಾನಿಗಳಿಗೆ ವಿಮೆ ಕಂಪೆನಿಗಳ ಪರಿಹಾರ ಸಿಗುವುದಿಲ್ಲ ಎಂದು ಹೇಳಿದೆ. ಪಿಯುಸಿ
ಪ್ರಮಾಣಪತ್ರ ಇಲ್ಲದಿದ್ದರೇ ವಿಮೆ ನವೀಕರಣ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ನಿರ್ದೇಶನ
ನೀಡಿತ್ತು ಈ ಹಿನ್ನೆಲೆಯಲ್ಲಿ ಐಆರ್‌ಡಿಎಐ ಹೊಸ ನಿಯಮವನ್ನು ಜಾರಿಗೊಳಿಸಿದೆ. ವಾಹನದ ಮಾಲಿನ್ಯ
ಪ್ರಮಾಣವು ನಿಗದಿತ ಮಟ್ಟದಲ್ಲಿಯೇ ಇದೆ. ಪರಿಸರಕ್ಕೆ ಈ ವಾಹನದಿಂದ ತೊಂದರೆಯಿಲ್ಲ ಅನ್ನುವುದನ್ನು


ಪಿಯುಸಿ ಪ್ರಮಾಣಪತ್ರವು ದೃಢೀಕರಿಸುತ್ತದೆ.


ಕೋವಿಡ್‌ ಹಿನ್ನೆಲೆಯಲ್ಲಿ ಅನಾನುಕೂಲ ಉಂಟಾಗಿದೆ. ಮೋಟಾರ್‌ ವಾಹನ ಕಾಯ್ದೆ ಮತ್ತು ಕೇಂದ್ರ
ಮೋಟಾರ್‌ ವಾಹನ ನಿಯಮಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ವಿಸ್ತರಿಸಲಾಗಿದೆ. ಈ ಸಂಬಂಧ
ಎಲ್ಲ ರಾಜ್ಯ ಸರ್ಕಾರಗಳಿಗೂ ಮಾರ್ಗಸೂಚಿ ಕಳುಹಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.


ರಿಸರ ಮಾಲಿನ


ಆಧಾರ:ವಿಜಯಕರ್ನಾಟಕ, ದಿನಾಂ೦ಕ:25.08.2020
79. ಕೃಷಿ ಸ್ನಾರ್ಟಪ್‌ಗಳಿಂದ ಯುವಕರಿಗೆ ಹೊಸ ಅವಕಾಶ


ಕೃಷಿ ಕ್ಷೇತದ ನೂತನ ಆವಿಷ್ಠಾರಗಳು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು
ಸಹಕಾರಿಯಾಗಿದ್ದು, ನವೀನ ಕೃಷಿ ತಂತ್ರಜ್ಞಾನವು ಕೃಷಿ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಅವಕಾಶಗಳನ್ನು


ಸೃಷ್ಟಿಸಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ನಿಶ್ವಾಸ ವ್ಯಕ್ತಪಡಿಸಿದರು.

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ "ಕೃಷಿ ನವೋದ್ಯಮ” ಸಮ್ಮೇಳನ ಉದ್ರಾಟಿಸಿ
ಮಾತನಾಡಿದ, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕೃಷಿ ಕ್ಷೇತಕ್ಕೆ ನವಚೈತನ್ಯ ಒದಗಿಸಲು ಕೃಷಿ
ನವೋದ್ಯಮಗಳನ್ನು ಆರಂಭಿಸಿ ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಕಲಿಸಲು ವೇದಿಕೆ ಸೃಷ್ಟಿಸಲಾಗಿದೆ.


175


ರಾಜ್ಯದ ಕೈಗಾರಿಕಾ ನೀತಿಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾರ್ಷಿಕವಾಗಿ 4000 ನವೋದ್ಯಮ
ಆರಂಭಿಸಲು ಅನುಕೂಲವಾಗಿದ್ದು, ಇದರಿಂದ 1.70 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ದೇಶದಲ್ಲಿ
ಕೃಷಿ ನವೋದ್ಯಮಗಳು ಪ್ರಾರಂಭಿಕ ಹಂತದಲ್ಲಿಯೇ ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಅಂಕಿ ಅಂಶಗಳ ಪ್ರಕಾರ
ಪತಿದಿನ ಎರಡರಿಂದ ಮೂರು ನವೋದ್ಯಮಗಳು ಸ್ಥಾಪನೆಯಾಗುತ್ತಿವೆ. ಆಕ್ಕೆಂಚರ್‌ ಸಂಸ್ಥೆ ನಡೆಸಿದ ಸಮೀಕ್ಷೆಯ
ಪ್ರಕಾರ ನಮ್ಮ ದೇಶದಲ್ಲಿ ನವೋದ್ರಮಗಳಿಂದ 450 ಕೋಟಿ ರ (ಸುಮಾರು ರೂ.34000 ಕೋಟಿ
ಡಾಲರ್‌) ಮಾರುಕಟ್ಟೆ ಸೃಷ್ಟಿಯಾಗಲಿದೆ ಎಂದರು.


ಆಧಾರ:ಕನ್ನಡಪ್ರಭ, ದಿನಾಂಕ:27.08.2020
80. ವಿದೇಶಿ ನೇರ ಹೂಡಿಕೆಗೆ ಸರ್ಕಾರ ಉತ್ತೇಜನ


ಆರ್ಥಿಕ ಪ್ರಗತಿಗೆ ವೇಗ ನೀಡುವ ಸಲುವಾಗಿ ಎಲ್ಲ ಕ್ಷೇತ್ರಗಳಲ್ಲೂ ವಿದೇಶಿ ಕಂಪೆನಿಗಳ ನೇರ ಹೂಡಿಕೆಗೆ
ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿದ್ದು, ಜಪಾನಿನ ಕಂಪೆನಿಗಳಿಂದ ನೇರ ಹೂಡಿಕೆಗೆ ಎಲ್ಲ ರೀತಿಯ ಸಹಕಾರ
ನೀಡಲಾಗುವುದು ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು.


ಇಂಡಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ (ಸಿಸಿ) ಆಯೋಜಿಸಿದ್ದ "ಇಂಡೋ-ಜಪಾನಿಸ್‌ ಬಿಜಿನೆಸ್‌
ಘೋರಂ” ಸಭೆಯಲ್ಲಿ ಗೃಹ ಕಚೇರಿ "ಕೃಷ್ಣಾ'ದಿಂದ ವರ್ಚುವಲ್‌ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ್ದ
ಅವರು, ಕರ್ನಾಟಕ ಮತ್ತು ಜಪಾನ್‌ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ
ತುಮಕೂರಿನ ವಸಂತ ನರಸಾಪುರದಲ್ಲಿ ಜಪಾನೀಸ್‌ ಕೈಗಾರಿಕಾ ಟೌನ್‌ಶಿಪ್‌ ಸ್ಥಾಪಿಸಲಾಗಿದೆ. ಜೊತೆಗೆ ಜಪಾನಿ
ಕಂಪೆನಿಗಳ ಸಹಯೋಗದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜಪಾನೀಸ್‌ ಕೈಗಾರಿಕಾ
ಟೌನ್‌ಶಿಪ್‌ಗೆ 519 ಎಕರೆ ಭೂಮಿ ಕಾಯ್ದಿರಿಸಲಾಗಿದ್ದು, ರಸ್ತೆ ವಿದ್ಯುತ್‌ ಮತ್ತು ನೀರು ಪೂರೈಕೆ ಸೇರಿದಂತೆ ಇತರೆ
ಮೂಲ ಸೌಕರ್ಯ ಕಲ್ಲಿಸಲಾಗಿದೆ. ಈ ಟೌನ್‌ಶಿಪ್‌ನಲ್ಲಿ ಹೆವಿ ಎಂಜಿನಿಯರಿಂಗ್‌, ಯಂತ್ರೋಪಕರಣ,
ಆಟೋಮೋಟೀವ್‌ ಮತ್ತು ಏರೋಸ್ಪೇಸ್‌ ಘಟಕಗಳಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.


ದೇಶದ ಹೂಡಿಕೆದಾರರು ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇತ್ತೀಚೆಗೆ ವಿದೇಶಿ ಉದ್ಯಮಿಗಳು
ರಾಜ್ಯದತ್ತ ಒಲವು ತೋರುತ್ತಿದ್ದಾರೆ. ಕಳೆದ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ
ಬಡ ಹೂಡಿಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯವು ಸ್ಪಾರ್ಟ್‌ಅಪ್‌ಗಳ ನೆಲೆಯಾಗಿದ್ದು
ಪ್ರತಿಭಾನ್ನಿತ ಉದ್ಯಮಿಗಳಿಗೆ ಹೂರಕ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಅತ್ಸುತ್ತಮ ರಾಜ್ಯ ಎಂಬ ಹೆಗ್ಗಳಿಕೆಗೆ
ಪಾತ್ರವಾಗಿದೆ. ಉದ್ಯಮಸ್ನೇಹಿ ಆಡಳಿತದ “ಜೊತೆಗೆ ಕೈಗಾರಿಕೆಗಳಿಗೆ ವ ನೀತಿ ಪವ ಲ
ಉತ್ತಮ ವ್ಯವಸ್ಥೆ ಬ ದೆ ಎಂದರು.


ಕೈಗಾರಿಕಾ ಸ್ನೇಹಿ ನೀತಿ: ಹೂಡಿಕೆದಾರರ ಹಿತವನ್ನೇ ಆಧಾರವಾಗಿಟ್ಟುಕೊಂಡು "ಹೊಸ ಕೈಗಾರಿಕಾ ನೀತಿ
2020-25” ಪರಿಚಯಿಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ನೆರವಾಗಲಿದೆ. ಉದ್ದಿಮೆಗೆ
ಪೂರಕವಾಗಿ ಭೂಮಿ ಲಭ್ಯತೆ, ಕಾರ್ಮಿಕ ಕಾನೂನಿನ ಸುಧಾರಣೆ ಸೇರಿದಂತೆ ಹಲವು ಸುಧಾರಣೆಗಳನ್ನು
ಕೈಗಾರಿಕಾ ನೀತಿಯಡಿ ತರಲಾಗುತ್ತಿದೆ. ಕೈಗಾರಿಕಾ ಸೌಲಭ್ಯ ಕಾಯ್ದೆಗೆ (2002) ತಿದ್ದುಪಡಿ ತಂದು ಕೈಗಾರಿಕೆ
ಸ್ಥಾಪನೆಗಾಗಿ ಉದ್ಯಮಿಗಳು ನಾನಾ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಲಾಗಿದೆ. ಜಿಲ್ಲಾ ಸಮಿತಿ, ರಾಜ್ಯ
ಸಮಿತಿಗಳಿಂದ ಕೈಗಾರಿಕಾ ಸ್ಥಾಪನೆಗೆ ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭಿಸಿ 3 ವರ್ಷದಲ್ಲಿ ಪತ್ರಂ
ಅನುಮತಿ ಡೆ ಅವಕಾಶ ಕಲ್ಪಿಸಿ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.


ಯಡಿಯೂರಪ್ಪ ಅವರು ಇಐಟಿ-ಐಟಿಇಎಸ್‌, ಯಂತ್ರೋಪಕರಣಗಳು, ವಾಹನಗಳು, ಏರೋಸ್ಟೇಸ್‌
ಸೇರಿದಂತೆ ರಾಜ್ಯದಲ್ಲಿ ಪ್ರಾಥಮಿಕ ಮತ್ತು ತೃತೀಯ ವಲಯದ ಉದ್ದಿಮೆ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ
ವಿವರಿಸಿದರು.


ಜಪಾನ್‌ನ ಕಂಪೆನಿಗಳಿಂದ ನೇರ ಹೂಡಿಕೆಗೆ ಎಲ್ಲ ರೀತಿಯ ಸಹಕಾರ ಒದಗಿಸುವುದಾಗಿ ಭರವಸೆ
ನೀಡುವ ಜೊತೆಗೆ ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳವಾಗಿರುವುದು ಹಾಗೂ ಅದಕ್ಕೆ ಪೂರಕವಾಗಿ ಸರ್ಕಾರ
ಕೈಗೊಂಡಿರುವ ಕಾರ್ಯಗಳ ಬಗ್ಗೆಯೂ ವಿವರ ನೀಡಿದರು.


176


ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ರಾಜ್ಯದ ಆರ್ಥಿಕತೆ ಮತ್ತು ಕೈಗಾರಿಕೆಗಳ
ಅಭಿವೃ ದ್ದಿಗೆ ಸರ್ಕಾರ ಪ್ರಮುಖ ಆದ್ಯತೆ ನೀಡಿದೆ. ಏರೋಸ್ಟೇಸ್‌, ಎಲೆಕಲ್‌ ಮ ಎಲೆಕ್ಟಾನಿಕ್ಸ 4 ಕೃಷಿ,
ಐಟಿ ಮತ್ತು ಜೈವಕ ತಂತ್ರಜ್ಞಾನ ಕ್ಷೆ ಕ್ಷೇತಗಳನ್ನು ಉತ್ತೇಜಿಸಲು" ನಿರ್ದಿಷ್ಟ ನೀತಿ ರೂಪಿಸಲಾಗಿದೆ ಮ ಕ


ಜಪಾನ್‌ನಲ್ಲಿರುವ ಭಾರತದ ರಾಯಭಾರಿ ಎಚ್‌.ಇ.ಸಂಜಯ್‌ ಕುಮಾರ್‌ ವರ್ಮಾ, ಜಪಾನ್‌
ರಾಯಭಾರಿ ಎಚ್‌.ಡಿ. ಸತೋಶಿ ಸುಜುಕಿ, ಐಸಿಸಿ ಅಧ್ಯಕ್ಷ ಮಾಯಾಂಕ್‌ ಜಲನ್‌, ಐಸಿಸಿ ಕಾರ್ಯಕಾರಿ ಸಮಿತಿ
ಸದಸ್ಯ ಹೇಮಂತ್‌ ಕನೋರಿಯಾ, ಜೆತ್ರೋಹೊದ ಉಪಾಧ್ಯಕ್ಷ ಕಜುಯಾ ನಕಜೊ, ಒಡಿಶಾ ಕೈಗಾರಿಕಾ ಸಚಿವ
ದಿಬ್ಬು ಶಂಕರ್‌ ಮಿಶ್ರಾ ಒಡಿಶಾ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಮಂತ್‌ ಶರ್ಮಾ, ನೀತಿ
ಆಯೋಗದ ಸಿಇಓ ಅಮಿತಾಬ್‌ ಕಾಂತ್‌, ಐಸಿಸಿಡಬ್ರ್ಯೂಆರ್‌ ಸಮಿತಿ ಅಧ್ಯಕ್ಷ ಅಮೇಯ ಪ್ರಭು, ತಮಿಳುನಾಡಿನ
ಕೈಗಾರಿಕಾ ಮಾರ್ಗದರ್ಶನ ಮತ್ತು ರಫ್ತು ಪ್ರಚಾರ ಬ್ಯೂರೋ ವ್ಯವಸ್ಥಾಪಕ ನಿರ್ದೇಶಕ ಡಾ: ನೀರಜ್‌ ಮಿತ್ತಲ್‌,
ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ಸಿಇಓ ಡಾ:ಪಿ.ಅನ್ನಳಗನ್‌, ಜಪಾನ್‌ನ ಪ್ರತಿನಿಧಿಗಳು ವಿಡಿಯೋ
ಸಂವಾದದಲ್ಲಿ ಪಾಲ್ಗೊಂಡಿದ್ದರು.


ಆಧಾರ:ವಿಜಯವಾಣಿ, ದಿನಾ೦ಕ:27.08.2020
81. ಪ್ರವಾಸೋದ್ಯಮಕ್ಕೆ ಸರ್ಕಾರದಿಂದ ಕಿಕ್‌ ಸ್ಟಾರ್ಟ್‌


ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ಕಳಾಹೀನವಾಗಿರುವ ಪ್ರವಾಸೋದ್ಯಮಕ್ಕೆ "ಕಿಕ್‌ ಸ್ಪಾರ್ಟ್‌'
ನೀಡಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.


ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕ್ರೀಡಾ ಖಾತೆ ಸಚಿವರಾಗಿ ಒಂದು ವರ್ಷದಲ್ಲಿ ಮಾಡಿರುವ
ಸಾಧನೆಗಳು ಹಾಗೂ ಮುಂದೆ ಕೈಗೊಳ್ಳಲಿರುವ ಯೋಜನೆ ಕುರಿತಂತೆ ಸುದ್ದಿಗೋಷ್ಟಿ ನಡೆಸಿದ ಸಿ.ಟಿ.ರವಿ,
ಕೊರೋನಾದಿಂದ ಆದ ಸಮಸ್ಯೆ ಮತ್ತು ಮುಂದಿನ ಪ್ರಯತ್ನಗಳನ್ನು ವಿವರಿಸಿದರು. ಸ್ಥಗಿತಗೊಂಡಿರುವ
ಪ್ರವಾಸೋದ್ಯಮವನ್ನು ಪುನಶ್ಲೇತನಗೊಳಿಸುವ ಹಾಗೂ ಸ್ಥಳೀಯ ಪ್ರವಾಸಿ ತಾಣಗಳನ್ನು ದೇಶದ ಪ್ರವಾಸಿಗರಿಗೆ
ಪರಿಚಯಿಸುವ "ಲವ್‌ ಯುವರ್‌ ಲೋಕಲ್‌' ಪರಿಕಲ್ಲನೆ ಜಾರಿಗೆ ತರಲಾಗುತ್ತಿದೆ ಎಂದರು.


ಹಲವು ಕಾರ್ಯಕ್ರಮ ಅನುಷ್ಠಾನ: ಕೊರೋನಾದಿಂದ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ನಷ್ಟವಾಗಿದೆ.
ಪ್ರವಾಸೋದ್ಯಮ ಕ್ಷೇತಕ್ಕೆ ಆರ್ಥಿಕ ಹಿನ್ನಡೆ ಉಂಟಾಗಿದೆ. ಆದರೆ, ಶೀಘ್ರವೇ ಈ ಕ್ಷೇತ್ರ ಚೇತರಿಸಿಕೊಳ್ಳುವ
ವಿಶ್ವಾಸವಿದೆ. ಪ್ರವಾಸಿಗರನ್ನು ಆಕರ್ಷಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಪ್ರವಾಸಿ
ತಾಣಗಳಲ್ಲಿರುವ ಆಹ್ಲಾದಕರ ಹವಾಮಾನ, ಕಾಸ್ಮೋಪಾಲಿಟನ್‌ ಸಂಸ್ಕೃಿ ಅತ್ಯುನ್ನತ ಆಡಳಿತ ಪ್ರಿಯೆ,
ಹೂಡಿಕೆಗಿರುವ ವಿಪುಲ ಅವಕಾಶ, ಉದ್ಯೋಗ ಸೃಷ್ಟಿ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ
ತರುವ ಉದ್ದೇಶವಿದೆ ಲಭ್ಯವಿರುವ ಸಂಪನ್ಮೂಲ ಬಳಸಿ ರಾಜ್ಯದ ಪ್ರವಾಸಿ ತಾಣಗಳಿಗೆ ದೇಶ-ವಿದೇಶಗಳಿಂದ
ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ, ಮುಂದಿನ 3 ವರ್ಷಗಳಲ್ಲಿ ಕರ್ನಾಟಕ ಪ್ರವಾಸೋದ್ಯಮವನ್ನು ಮೊದಲ
ಮುಂಚೂಣಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಹೇಳಿದರು.


ಎವಿಧೆಡೆ ಅಭಿವೃದ್ಧಿ: ರಾಜ್ಯದಲ್ಲಿರುವ 25,000ಕ್ಕೂ ಹೆಚ್ಚು ಐತಿಹಾಸಿಕ ಮಹತ್ತವುಳ್ಳ ಸ್ಮಾರಕಗಳು, ದೇವಸ್ಥಾನಗಳನ್ನು
ಸಂರಕ್ಷಣೆ ಯೋಜನೆಯಡಿ ಪುನರುಜ್ಜೀವನಗೊಳಿಸುವುದು, ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ
ಸಮಾವೇಶ ಆಯೋಜನೆ, ಜೋಗ ಜಲಪಾತದ ಸಮಗ್ರ ಅಭಿವೃದ್ಧಿ, ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ
ಮೂಲಸೌಕರ್ಯ, ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ, 'ಬಾದಾಮಿ-ಕೀರಂಗಪಟ್ಟಣದ "ಕೋಟಿ
ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ
ಪ್ರಾಧಿಕಾರವನ್ನು ರೂ.75 ಕೋಟಿ ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಲು ವರದಿ ತಯಾರಿಸಲಾಗಿದೆ. ಬಾದಾಮಿ,
ವಿಜಯಪುರ, ಹಂಪಿ ಹಾಗೂ ಬೇಲೂರಿನಲ್ಲಿ ಪ್ರವಾಸಿಗರ ಸೌಕರ್ಯಕ್ಕಾಗಿ ರೂ.79.98 ಕೋಟಿ ವೆಚ್ಚದಲ್ಲಿ
ತ್ರಿತಾರಾ ಹೋಟೆಲ್‌ ನಿರ್ಮಿಸಲು ವರದಿ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲಿಯೇ ಕಾಮಗಾರಿಗೆ ಶಂಕುಸ್ಥಾಪನೆ
ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದರು.


127


ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಮೈಸೂರಿನಲ್ಲಿ ಸ್ಥಾಪಿಸಲಾಗುವುದು. ಇದಕ್ಕೆ ಮೈಸೂರು
ವಿವಿಗೆ ಸೇರಿದ ಜಾಗವನ್ನು ನೋಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಕ್ರಿಯಾಲ್‌
ಅವರನ್ನು ಭೇಟಿಯಾಗುತ್ತೇನೆ. ಕೇಂದ, ಸ್ಥಾಪನೆಗೆ ಅನುಮೋದನೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಮುಂದಿನ ಯೋಜನೆಗಳು


> ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳನ್ನು
ಗುರುತಿಸಿ ಪ್ರವಾಸಿ ಮೂಲಸೌಲಭ್ಯ ಅಭಿವೃದ್ದಿಪಡಿಸಲು ಪ್ರಸ್ತಾವನೆಯನ್ನು ಕೇಂದ್ರ ಪ್ರವಾಸೋದ್ಯಮ
ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ.


> 2020-25ರ ಪ್ರವಾಸೋದ್ಯಮ ನೀತಿ ಮುಂದಿನ ತಿಂಗಳು ಜಾರಿಗೆ ಬರಲಿದ್ದು, ಈ ಮೂಲಕ
ಸ್ಥಳೀಯರಿಗೆ ಉದ್ಯೋಗ, ಪ್ರವಾಸಿತಾಣಗಳ ಸರ್ವಾಂಗೀಣ ಅಭಿವೃದ್ಧಿ, ಮೂಲಸೌಕರ್ಯಗಳಿಗೆ
ಒತ್ತು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆಯಿಂದ ವಿವಿಧ ಯೋಜನೆ ಜಾರಿ.


> ಪ್ರಾದೇಶಿಕ ಮಟ್ಟದಲ್ಲಿ ಆಹಾರ ಮೇಳಗಳನ್ನು ನಡೆಸಿ, ಖಾದ್ಯಪ್ರಿಯರನ್ನು ಸೆಳೆಯುವ ಮೂಲಕ
ಪ್ರವಾಸೋದ್ಯಮ ಬೆಳೆಸಲು ಅವಕಾಶವಿದೆ. ಹಲವು ಬಗೆಯ ಪ್ರವಾಸೋದ್ಯಮವನ್ನು ಸರ್ಕಾರಿ ಮತ್ತು
ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಚಿಂತನೆ.


> ರಾಜ್ಯದಲ್ಲಿ ಈವರೆಗೆ 319 ಪ್ರವಾಸಿ ತಾಣ ಗುರುತಿಸಲಾಗಿದೆ. ಆ ಪೈಕಿ ಪ್ರಮುಖವಾಗಿ 20 ಪ್ರವಾಸಿ
ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲಿನಕ್ಷೆ ಸಿದ್ಧಪಡಿಸಲಾಗಿದ್ದು, ಶೀಘದಲ್ಲೇ ಅನುಷ್ಠಾನ
ಮಾಡಲಾಗುವುದು.


» ಆದಿವಾಸಿ ಮತ್ತು ಬಂಜಾರಾ ಕಲ್ಲರಲ್‌ ಹೆರಿಟೇಜ್‌ ನಿರ್ಮಾಣದ ಕಲ್ಪನೆಗೆ ಚಾಲನೆ ನೀಡಲಾಗಿದೆ.

ಕೃಷಿ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ಸಹಯೋಗದಲ್ಲಿ ಕೃಷಿ

ಸಂಸ್ಕೃತಿಯನ್ನು ಪ್ರವಾಸಿಗರಿಗೆ ಕಟ್ಟಿಕೊಡಲು ಅಗ್ರಿ ಟೂರಿಸಂನಿಂದ ಯೋಜನೆ ರೂಪಿಸಲಾಗುತ್ತಿದೆ.

> 10 ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಗೋಲ್ಲನ್‌ ಚಾರಿಯೇಟ್‌ ರೈಲು ಸಂಚಾರ ಮರುಚಾಲನೆಗೆ
ಕಮ ಕೈಗೊಳ್ಳಲಾಗಿದೆ. ಈ ಸಂಬಂಧ ಭಾರತೀಯ ರೈಲ್ರ ನಿಗಮದೊಂದಿಗೆ ಒಪ್ಪಂದ
ಮಾಡಿಕೊಳ್ಳಲಾಗಿದೆ.


ಆಧಾರ:ವಿಜಯವಾಣಿ, ದಿನಾ೦ಕ:28.08.2020
82. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಎನ್‌.ಪಿ.ಎಸ್‌. ಯೋಜನೆ ಜಾರಿ


ಸಚಿವ ಸುಧಾಕರ್‌ ಅವರು ಅಧಿಕಾರವಹಿಸಿಕೊಂಡ ಬಳಿಕ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿದ್ದ
ಇಲಾಖೆಯ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು, ಪಿಂಚಣಿ ಯೋಜನೆ ಜಾರಿಗೆ ಕಮ ಕೈಗೊಳ್ಳುವಂತೆ
ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಮನವಿ ಸ್ನೀಕರಿಸಿದ್ದ ಸಚಿವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.


ವೈದ್ಯಕೀಯ ಶಿಕ್ಷಣಂ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಬಹುದಿನಗಳ


ಬೇಡಿಕೆಯಾಗಿದ್ದ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ಸಚಿವ ಡಾ: ಕೆ.ಸುಧಾಕರ್‌ ಹಸಿರು ನಿಶಾನೆ ತೋರಿದ್ದಾರೆ.


ಸರ್ಕಾರಿ ವೈದ್ಯ, ದಂತ ವೈದ್ಯಕೀಯ ಕಾಲೇಜು, ಇವುಗಳಿಗೆ ಹೊಂದಿಕೊಂಡಂತಿರುವ ಬೋಧಕ
ಆಸ್ಪತ್ರೆಗಳು ಮತ್ತು ಸೂಪರ್‌ ಸೆಷಾಲಿಟಿ ಆಸ್ಪತ್ರೆಗಳಲ್ಲಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು


ಬೋಧಕೇತರ ಸಿಬ್ಬಂದಿ ಈ ಯೋಜನೆ ಲಾಭ ಪಡೆಯಲಿದ್ದಾರೆ.


ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಬೇಡಿಕೆಗೆ ಅನುಮೋದನೆ ನೀಡುವಂತೆ ಸಚಿವ
ಸುಧಾಕರ್‌ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.


178


ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು
ಅಧಿಕೃತ ಆದೇಶ ಹೊರಬಿದ್ದಿದೆ.


ಒಟ್ಟು 27 ಸಂಸ್ಥೆಗಳಲ್ಲಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 5949 ಅಧಿಕಾರಿ ಮತ್ತು ಸಿಬ್ಬಂದಿಗೆ
ಈ ಯೋಜನೆಯಿಂದ ಪ್ರಯೋಜನ ದೊರಕಲಿದೆ. ಇದರಲ್ಲಿ 2061 ಮಂದಿ ಎಐಸಿಟಿಇ ಅನುಮೋದನೆ ಪಡೆದ
ಹುದ್ದೆಗಳಾಗಿದ್ದರೆ 3888 ಎಐಸಿಟಿಇಯೇತರ ಹುದ್ದೆಗಳಾಗಿವೆ. ಈ ನೂತನ ಯೋಜನೆಯಿಂದ ಸರ್ಕಾರಕ್ಕೆ ಪ್ರಿ
ವರ್ಷ ರೂ.77.27 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. 2006ರ ಏಪ್ರಿಲ್‌ 1 ರ ನಂತರ ಕಾಯಂ ಆಗಿ
ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ವೃಂದದ ಅಧಿಕಾರಿ ಮತ್ತು
ಸಿಬ್ಬಂದಿಗಳಿಗೆ ತಕ್ಷಣದಿಂದಲೇ ನೂತನ ಪಿಂಚಣಿ ಯೋಜನೆ ಜಾರಿಯಾಗಲಿದೆ ಎಂದು ಇಲಾಖೆ ಅಧಿಕಾರಿಗಳು
ತಿಳಿಸಿರುತಾರೆ.


ಆಧಾರ:ವಿಶ್ವವಾಣಿ, ದಿನಾಂಕ:28.08.2020
83. ನ್ಯಾ. ಸದಾಶಿವ ವರದಿ ಜಾರಿಗೆ ಒತ್ತಡ ಕೋರ್ಟ್‌ ತೀರ್ಪಿನ ನಂತರ ಜಾತಿಗಣತಿ ವರದಿ


ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ವ್ಯಕ್ತಪಡಿಸಿರುವ ಮೀಸಲಾತಿ ಮರು
ವರ್ಗೀಕರಣ ಕುರಿತ ಅಭಿಪ್ರಾಯ ರಾಜ್ಯದಲ್ಲಿ ಮತ್ತೊಮ್ಮೆ ಚರ್ಚೆಗೆ ಬಂದಿರುವುದು ಸರ್ಕಾರದ ಪಾಲಿಗೆ
ಬಿಸಿತುಪುವಾಗಿ ಮಾರ್ಪಟ್ಟಿದೆ.


ಪರಿಶಿಷ್ಠ ಜಾತಿಯಲ್ಲಿ ಮೀಸಲಾತಿ ಮರು ವರ್ಗೀಕರಣಕ್ಕೆ ನ್ಯಾ.ಎ.ಜೆ.ಸದಾಶಿವ ಅವರ ವರದಿ, ಪರಿಶಿಷ್ಟರ
ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಾನಾಗಮೋಹನ್‌ ದಾಸ್‌ ವರದಿ ಹಾಗೂ ಹಿಂದುಳಿದ
ವರ್ಗಗಳ ಶಾಶ್ವತ ಆಯೋಗ ಸಲ್ಲಿಸಲು ಸಿದ್ದವಾಗಿರುವ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ
ಸ್ಥಿತಿಗತಿ ಅಧ್ಯಯನ ವರದಿಗಳ ಬಗ್ಗೆ ಚರ್ಚೆ ಆರಂಭವಾಗಿದೆ. ರಾಜ್ಯದಲ್ಲಿ ಮೀಸಲಾತಿ ವರ್ಗೀಕರಣ
ಮೊದಲಿನಿಂದಲೂ ಇದ್ದೇ ಇದೆ. ಅದು ಈಗ ಪರಿಷ್ಠರಣೆಯಾಗಬೇಕಾಗಿದೆ. ರಾಷ್ಟ್ರಮಟ್ಟದ ಮೀಸಲಾತಿ ಪಟ್ಟಿಯಲ್ಲಿ
ಮರು ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ ರೋಹಿಣಿ ಸಮಿತಿ ರಚನೆಯಾಗಿದ್ದು, ಇನ್ನಷ್ಟೇ ವರದಿ
ಸಲ್ಲಿಸಬೇಕಾಗಿದೆ.


ಇಕ್ಕಟ್ಟಿನ ಪರಿಸ್ಥಿತಿ:- ಪರಿಶಿಷ್ಟ ಜಾತಿಯಲ್ಲಿ ಎಡಗೈ, ಬಲಗೈ ಹಾಗೂ ಸ್ತಶ್ಯ ಸಮುದಾಯಗಳ ನಡುವೆ
ಮೀಸಲಾತಿ ಹಂಚಿಕೆಯ ಗೊಂದಲ ಸಾಕಷ್ಟು ವರ್ಷಗಳಿಂದ ನಡೆಯುತ್ತಾ ಬಂದಿದೆ. ಎಡಗೈ ಸಮುದಾಯ ತನ್ನ
ಪಾಲಿಗೆ ಮೊದಲಿನಿಂದಲೂ ಅನ್ಯಾಯವಾಗಿದೆ ಎಂದೇ ವಾದಿಸುತ್ತಾ ಬಂದಿದೆ. ಸಾಕಷ್ಟು ಹೋರಾಟ ನಡೆದಿದೆ.
ಅದರ ಪರಿಣಾಮವಾಗಿಯೇ ಹಿಂದೆ ಸರ್ಕಾರ ರಚನೆ ಮಾಡಿದ್ದ ನ್ಯಾ.ಎ.ಜೆ.ಸದಾಶಿವ ಆಯೋಗ ಸರ್ಕಾರಕ್ಕೆ ತನ್ನ
ಶಿಫಾರಸ್ಸು ಸಲ್ಲಿಸಿದೆ. ಜಾರಿಯಲ್ಲಿರುವ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಿದೆ. ಆ ವರದಿಯನ್ನು ಸರ್ಕಾರ
ಅಂಗೀಕಾರ ಮಾಡಬೇಕಾಗಿದೆ. ಎಡಗೈ ಸಮುದಾಯದ ಒತ್ತಡ ಇದ್ದರೂ ಸಹ ವಿರೋಧವೂ ಅಷ್ಟೇ
ಇರುವುದರಿಂದ ಸರ್ಕಾರಕ್ಕೆ ಇಕ್ಕಟ್ಟಿನ ಸನ್ನಿವೇಶ ಎದುರಾಗಿದೆ.


ಕೋರ್ಟ್‌ ಮುಂದೆ ಕೇಸ್‌:-ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಜಾತಿಗಣತಿ ಮಾಡಿರುವ ವರದಿ ಸರ್ಕಾರಕ್ಕೆ
ಸಲ್ಲಿಕೆಯಾಗಬೇಕಾಗಿದೆ. ಗಣತಿ ಮಾಡುವುದಕ್ಕೆ ಸಾಧ್ಯವಿಲ್ಲವೆಂದು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ
ನ್ಯಾಯಾಲಯದಲ್ಲಿ ನಡೆದಿದೆ. ಕೋರ್ಟ್‌ನಲ್ಲಿ ಇತ್ಯೃರ್ಥವಾಗದ ಹೊರತು ವರದಿಯ ಸ್ಟೀಕಾರಕ್ಕೆ ಸರ್ಕಾರ


[)


ಸಿದ್ಧವಿಲ್ಲ. ಹಿಂದುಳಿದ ವರ್ಗಗಳ ಆಯೋಗದ ವರದಿ ಸಹ ಸರ್ಕಾರಕ್ಕೆ ಸಲ್ಲಿಕೆ ಕಷ್ಟ


ಸುಪ್ರೀಂ ಏನು ಹೇಳಿದೆ:-2005ರಲ್ಲಿ ಚಿನ್ನಯ್ಯ ವರ್ಸಸ್‌ ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ ಒಳಮೀಸಲಾತಿ
ಕೊಡುವುದಕ್ಕೆ ರಾಜ್ಯಗಳಿಗೆ ಅಧಿಕಾರ ಇಲ್ಲವೆಂದು ನ್ಯಾಯಾಲಯ ಹೇಳಿತ್ತು. ಐದು ಜನರ ಪೀಠ ರಾಜ್ಯಗಳಿಗೆ
ಅಧಿಕಾರವಿದೆ. ಆದರೆ 7ರಿಂದ 9 ಜನರ ನ್ಯಾಯಾಧೀಶರ ಪೀಠದಲ್ಲಿ ಅಂತಿಮ ತೀರ್ಮಾನವಾಗಬೇಕು ಎಂದು
ಹೇಳಿದೆ.


179


ನ್ಯಾ. ಸದಾಶಿವ ಆಯೋಗದ ಶಿಫಾರಸ್ಸು


ಎಡಗೈ ಸಮುದಾಯ ಶೇ.6

ಬಲಗೈ ಸಮುದಾಯ ಶೇ.5

ಸ್ಪಶ್ಯ ಸಮುದಾಯಗಳಿಗೆ ಶೇ.3

ಇತರ ಸಮುದಾಯಗಳಿಗೆ ಶೇ.1
ನ್ಯಾನಾಗಮೋಹನ್‌ದಾಸ್‌ ಆಯೋಗದ ವರದಿ
ಪ.ಜಾತಿಗೆ ಶೇ.15ರಿಂದ ಶೇ.17 ಏರಿಕೆ

ಪ.ಪಂಗಡಕ್ಕೆ ಶೇ.3ರಿಂದ 7 ಏರಿಕೆ

ರಾಜ್ಯದಲ್ಲಿರುವ ಮೀಸಲಾತಿ ಪ್ರಮಾಣ

ಪ್ರವರ್ಗ 1 ಶೇ.1

2ಎ ಶೇ.15

2ಬಿ ಶೇ.4

3ಎ ಶೇ.4

3ಬಿ ಶೇ.5

ಪರಿಶಿಷ್ಠ ಜಾತಿ ಶೇ.15

ಪರಿಶಿಷ್ಠ ಪಂಗಡ ಶೇ.3


ವರದಿಯ ಬಗ್ಗೆ ಆಕ್ಷೇಪ:-ನ್ಯಾ. ಸದಾಶಿವ ಆಯೋಗದ ವರದಿ ಬಗ್ಗೆ ಕೆಲ ಸಮುದಾಯಗಳಿಗೆ ಆಕ್ಷೇಪ ಇದೆ.
ಕೇಂದ್ರ ಸರ್ಕಾರದ ಜಾತಿಗಣತಿಯ ಅಂಕಿಅಂಶ ಹಾಗೂ ಸದಾಶಿವ ವರದಿಯ ಅಂಕಿಅಂಶಗಳಿಗೆ ಸಾಕಷ್ಟು
ವ್ಯತ್ಯಾಸಗಳಿವೆ ಎಂಬ ಆರೋಪಗಳನ್ನು ಮಾಡುತ್ತಿವೆ. ಇನ್ನೊಂದು ಜನಗಣತಿ ನಂತರವೇ ಅಂತಿಮ
ತೀರ್ಮಾನವಾಗಬೇಕು ಎಂಬ ಒತ್ತಾಯವೂ ಕೇಳಿ ಬರುತ್ತದೆ.


ಪರಿಶಿಷ್ಟ ವರ್ಗದ ಹೋರಾಟ:- ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಪರಿಶಿಷ್ಟ ವರ್ಗದವರು ಸಾಕಷ್ಟು ಹೋರಾಟ
ಮಾಡಿದ್ದರು. ಆ ಸಂದರ್ಭದಲ್ಲಿ ಸರ್ಕಾರ ನ್ಯಾ ನಾಗಮೋಹನ್‌ದಾಸ್‌ ಆಯೋಗ ರಚಿಸಲಾಗಿತ್ತು. ಸಮಿತಿ ಪರಿಶಿಷ್ಟ
ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ 17ಕ್ಕೆ ಹಾಗೂ ಎಸ್‌ಟಿ ಮೀಸಲಾತಿ ಪ್ರಮಾಣವನ್ನು
ಶೇ.3ರಿಂದ ಶೇ.7ಕ್ಕೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.


ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದೆ. ಒಳಮೀಸಲಾತಿ ಕುರಿತಂತೆ ಸುಪ್ರಿಂಕೋರ್ಟ್‌ನ 7 ಅಥವಾ
9 ಜಡ್ಜ್‌ಗಳ ಪೀಠ ಅಂತಿಮ ತೀರ್ಪು ನೀಡಬೇಕಾಗುತ್ತದೆ. ರಾಜ್ಯಗಳಿಗೆ ಒಳಮೀಸಲಾತಿ ನೀಡುವ ಅಧಿಕಾರ ಇದೆ
ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯ ವ್ಯಕ್ಷಪಡಿಸಿರುವುದರಿಂದ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದು
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.


ಆಧಾರ:ವಿಜಯವಾಣಿ, ದಿನಾ೦ಕ:30.08.2020

84. ಕೋವಿಡ್‌ ಕರ್ತವ್ಯ ವೇಳೆ ಅಸುನೀಗಿದರೆ ಪರಿಹಾರ ಅನ್ವಯ
ವಿಕಾಸಸೌಧದಲ್ಲಿ ಮ್ಯಾನ್ಯುಯಲ್‌ ಸ್ಟ್ಯಾವೆಂಜರ್‌ಗಳ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ಮಹಿಸಿ
ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರವರು ಕೋವಿಡ್‌ ಹಿನ್ನೆಲೆಯಲ್ಲಿ ಪೌರಕಾರ್ಮಿಕರು


(ಸಫಾಯಿಕರ್ಮಚಾರಿಗಳು.ಸ್ಕ್ಯಾವೆ೦ಜರ್‌) ಕರ್ತವ್ಯನಿರತರಾಗಿದ್ದಾಗ ಮೃತಪಟ್ಟರೆ ಅವಲಂಬಿತರಿಗೆ ರೂ.30 ಲಕ್ಷ
ಪರಿಹಾರ ನೀಡಬೇಕು. ಅವರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಡಿ ಒಬ್ಬರಿಗೆ ನೌಕರಿ ನೀಡಬೇಕು.


180


ಪೌರಕಾರ್ಮಿಕರು ಕೋವಿಡ್‌ ಸೋಂಕಿತರಾದರೆ ಕ್ಲಾರಂಟೈನ್‌ ಅವಧಿಯಲ್ಲಿ ವೇತನ ನೀಡಬೇಕು ಎಂದು ಅವರು
ತಿಳಿಸಿದರು.


ಆಧಾರ:ಕನ್ನಡಪ್ರಭ, ದಿನಾಂಕ:28.08.2020
85. ಕೆಜಿಎಫ್‌ ಕೈಗಾರಿಕೆ ಭೂಮಿ ಸಮಸ್ಯೆ ಪರಿಹಾರಕ್ಕೆ ಕ್ರಮ


ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ ಸಂಸ್ಥೆಗೆ ಸೇರಿದ
12,109 ಎಕರೆ ಪ್ರದೇಶದ ಪೈಕಿ 2213 ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ದಿಪಡಿಸಿ
ಕೊಳ್ಳಬಹುದಾಗಿದೆ. ಸೋಲಾರ್‌,ಆಟೋಮೊಬೈಲ್‌, ಎಲೆಕ್ಟ್ರಾನಿಕ್ಸ್‌ ಹಾಗೂ ಔಷಧಿ ಉತ್ಪಾದಿಸುವ ಕೈಗಾರಿಕೆಗಳನ್ನು


ಸ್ಥಾಪಿಸಲು ಅವಕಾಶವಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.


ಕೇಂದ್ರ ಸರ್ಕಾರದಲ್ಲಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಬಾಕಿಯಿರುವ
ವಿಷಯಗಳ ಉನ್ನತಮಟ್ಟದ ಸಭೆ ವಿಧಾನ ಸೌಧದಲ್ಲಿ ನಡೆಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಈ ಪ್ರದೇಶದಲ್ಲಿ ನೈಸರ್ಗಿಕ ಸಂಪತ್ತಿನ ಬಗ್ಗೆ ಆರು
ತಿಂಗಳೊಳಗಾಗಿ ಪರಿಶೀಲಿಸಿ ನಂತರ ತೀರ್ಮಾನ ಕೈಗೊಳ್ಳಬಹುದಾಗಿದೆ. ಕೆಜಿಎಫ್‌ನಲ್ಲಿರುವ ಡಂಪ್‌ಗಳ ಇತರ
ಖನಿಜಗಳ ಲಭ್ಯತೆ ಬಗ್ಗೆಯೂ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಜಂಟಿ ಕಾರ್ಯದರ್ಶಿಗಳು
ಸಮೀಕ್ಷೆ ಕೈಗೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಗಣಿಗಾರಿಕೆಗೆ
ಅವಕಾಶವಿಲ್ಲವೆಂದಾದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.


ರಾಜ್ಯಕ್ಕೆ ಒಡಿಶಾದ ಮಂದಾಕಿನಿ ಮತ್ತು ದುರ್ಗಾಪುರ ಕಲ್ಲಿದ್ದಲು ಗಣಿಗಳನ್ನು ವಹಿಸಲಾಗಿದ್ದು, ಇದಕ್ಕೆ
ಸಂಬಂಧಿಸಿದಂತೆ ಅನುಮೋದನೆಗಳನ್ನು ಕೋರಿ ಒಡಿಶಾ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಕೇಂದ್ರ
ಹೊಸದಾಗಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕ್ರಿಯೆಗಳನ್ನು ಪೂರೈಸಲು
ಕನಿಷ್ಠ ಎರಡು ವರ್ಷಗಳಷ್ಟು ತಡವಾಗುವುದರಿಂದ ಅನುಮೋದನೆ ನೀಡಿ ಗಣಿಗಾರಿಕೆಗೆ ಅವಕಾಶ ಕಲ್ಪಿಸುವಂತೆ
ಸಚಿವರನ್ನು ಕೋರಲಾಯಿತು. ಈ ಬಗ್ಗೆ ಪರಿಶೀಲಿಸಿ ಶೀಘ್ರವೇ ಅನುಮೋದನೆ ನೀಡುವ ಬಗ್ಗೆ ಕ್ರಮ
ವಹಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಆಧಾರ:ವಿಶ್ವವಾಣಿ, ದಿನಾಂಕ:29.08.2020
86. ಖಾಸಗಿ ಶಿಕ್ಷಕರಿಗೂ ನೆರವು


ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಸಕಾಲಕ್ಕೆ ಬಾಗಿಲು ತೆರೆಯದಿರುವುದರಿಂದ ಖಾಸಗಿ
ಅನುದಾನರಹಿತ ಶಾಲೆಗಳ ಶಿಕ್ಷಕರು ತೀವ್ರ ಸಮಸ್ಯೆ ಎದುರಿಸುತ್ತಿರುವುದು ಸರ್ಕಾರದ ಗಮನದಲ್ಲಿದೆ. ಅವರಿಗಾಗಿ
ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪೌಢ
ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.


ಶಿಕ್ಷಕರ ಸದನದಲ್ಲಿ ಸಹಾಯವಾಣಿ-ಶಿಕ್ಷಕವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲಕಾಲ
ಶಿಕ್ಷಕರು ತರಕಾರಿ ಮಾರಾಟ, ನರೇಗಾದಂತಹ ಕೆಲಸಗಳಿಗೆ ಹೋಗುವಂತಾದ ಸ್ಥಿತಿ ಕಂಡು ನಿಜಕ್ಕೂ
ಬೇಸರವಾಗಿದೆ. ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕೆಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಈಗಾಗಲೇ ಅಂತಹ ಶಿಕ್ಷಕರು ಮತ್ತು ಆ ಶಾಲೆಗಳ ಸಿಬ್ಬಂದಿಯ ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತದೆ.
ಆದರೆ ಅವರ ಸಂಖ್ಯೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವುದರಿಂದ ಆ ಬೃಹತ್‌ ಪ್ರಮಾಣದ ಸಂಖ್ಯೆಗೆ ಸಹಾಯ
ಮಾಡುವುದರತ್ತ ಎಲ್ಲ ಆಯಾಮಗಳಿಂದಲೂ ಸರ್ಕಾರ ಚಿಂತನೆ ನಡೆಸಿದೆ ಎಂದರು.


ಶಾಲೆಗಳ ಆರಂಭದ ಕುರಿತು ಇನ್ನೂ ಯಾವುದೇ ಸೂಚನೆಗಳಿಲ್ಲ. ಈ ಮಾಸಾಂತ್ಯದ ವೇಳೆಗೆ ಶಾಲೆಗಳು
ಯಾವಾಗ ಆರಂಭವಾಗಲಿವೆ ಎಂಬುದಕ್ಕೆ ಒಂದು ಸ್ಪಷ್ಟ ರೂಪ ದೊರೆಯಬಹುದಾಗಿದೆ. ಅಲ್ಲಿಯವರೆಗೆ
ಶಾಲೆಗಳನ್ನು ಆರಂಭಿಸಲು ಆತುರ ಪಡುವುದಿಲ್ಲ. ಕಳೆದ ಸಾಲಿನಲ್ಲಿ ಭರವಸೆ ನೀಡಿದ್ದೆನೋ ಅದರಂತೆ
ವರ್ಗಾವಣಾ ಪ್ರಕ್ರಿಯೆ ನಡೆಯಲಿದೆ. ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಲಿದೆ. 50
ವರ್ಷ ದಾಟಿದವರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗುವುದು ಎಂದರು. ಶಿಕ್ಷಕ ಮಿತ್ರ ಆ್ಯಪ್‌ಗೆ


181


ಈಗಾಗಲೇ 2.50 ಲಕ್ಷ ಶಿಕ್ಷಕರ ಮಾಹಿತಿ ಅಪ್ಲೋಡ್‌ ಆಗಿದೆ. ಇದರಿಂದ ಇಡೀ ಪ್ರಕ್ರಿಯೆಗೆ ಪಾರದರ್ಶಕತೆ
ಲಭ್ಯವಾಗಿದೆ. ತಂತ್ರಜ್ಞಾನಧಾರಿತ ವ್ಯವಸ್ಥೆಗೆ ಇದೇ ಮೊದಲ ಬಾರಿಗೆ ಇಲಾಖೆ ಸಜ್ಜುಗೊಂಡಿದೆ. ಶಿಕ್ಷಕರು
ತಾವಿರುವ ಸ್ಥಳದಿಂದಲೇ ಶಿಕ್ಷಕ ಮಿತ್ರ- ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ವರ್ಗಾವಣೆಗೆ ಅರ್ಜಿ ಸಲ್ಲಿಸುವ
ತಾಂತ್ರಿಕ ಸೌಲಭ್ಯ, ಶಿಕ್ಷಕರಿಗೆ ಇಲಾಖೆ ಸೇವೆಗಳನ್ನು ಇಂತಿಷ್ಟೇ ದಿನಗಳೊಳಗೆ ನೀಡಬೇಕೆಂದು ಒಂದೊಂದು
ಸೇವೆಗೆ ಪ್ರತ್ಯೇಕ ದಿನಗಳನ್ನು ನಿಗದಿಪಡಿಸಲಿದ್ದು, ಆ ದಿನಗಳೊಳಗೆ ಸೇವೆಗಳು ದೊರೆಯಲಿವೆ ಎಂದರು.


ಶಿಕ್ಷಕರ ಸಮಸ್ಯೆ ಬಗೆಹರಿಯುತ್ತದೆ: ಸಿಎಂ


ಶಿಕ್ಷಕರ ಇಲಾಖೆ ಹೊರತಂದಿರುವ ಆ್ಯಪ್‌ನಿಂದಾಗಿ ಶಿಕ್ಷಕರ ಸೇವಾ ವಿಷಯ ಹಾಗೂ ಸಮಸ್ಯೆಗಳನ್ನು
ಬಗೆಹರಿಸಬಹುದು. ಇದರಿಂದ ಶಿಕ್ಷಕರ ಅಲೆದಾಟ ಮುಗಿಯಲಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಆ್ಯಪ್‌
ಮೂಲಕ ಮಾಡಲಾಗುತ್ತದೆ. ಸಚಿವ ಸುರೇಶ್‌ ಕುಮಾರ್‌, ಶಿಕ್ಷಕರ ವರ್ಗಾವಣೆ ನೀತಿಯನ್ನು ತರುವ ಮೂಲಕ
ವರ್ಗಾವಣೆ ಪ್ರಕ್ರಿಯೆ ಸುಗಮಗೊಳಿಸಿದ್ದಾರೆ. ಅನೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗಳಿಗೆ
ಸೇರುತ್ತಿದ್ದಾರೆ. ಒಬ್ಬ ಸಚಿವರು ಹೇಗೆ ಜನಮುಖಿಯಾಗಿ ಕೆಲಸ ಮಾಡಬಹುದೆಂಬುದಕ್ಕೆ ಸಚಿವರು
ಮಾದರಿಯಾಗಿದ್ದಾರೆ ಎಂದರು.


ಏಕರೂಪ ಪರೀಕ್ಷಾ ಮಂಡಳಿ:ಸಚಿವ ಸುರೇಶ್‌ ಕುಮಾರ್‌ ಮಾತನಾಡಿ, ಇನ್ನು ಮುಂದೆ ಒಂದೇ ಪರೀಕ್ಷಾ
ಮಂಡಳಿ ಇರಲಿದೆ. ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಮಂಡಳಿ ಹಾಗೂ ಪಿಯುಸಿ ಪರೀಕ್ಷಾ ಮಂಡಳಿಯ ವಿಲೀನ
ಮಾಡಲಾಗುವುದು. ಆ ಮೂಲಕ ಏಕರೂಪ ಪರೀಕ್ಷಾ ಮಂಡಳಿಯನ್ನು ಜಾರಿಗೊಳಿಸಲಿದ್ದೇವೆ. ಈ ಬಾರಿ 1000
ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿದ್ದು, ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೂಲಕ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಶಿಕ್ಷಕರ ಬಹುದಿನದ ಬೇಡಿಕೆಯಾಗಿದ್ದ
ವರ್ಗಾವಣೆ ಕಾನೂನನ್ನು ಜಾರಿಗೊಳಿಸಲಾಗಿದ್ದು, ಹಿಂದಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದರು.


ಆಧಾರ:ವಿಶ್ವವಾಣಿ, ದಿನಾಂಕ:29.08.2020
87. ಕ್ಲೇಮ್‌ ಕಮೀಷನರ್‌ ನೇಮಕ


ಡಿ.ಜೆ.ಹಳ್ಳಿ ಹಾಗೂ ಕೆ.ಜೆ.ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ
ಉಂಟಾಗಿರುವ ಸಾರ್ವಜನಿಕ ಆಸ್ತಿ ನಷ್ಟದ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ಮತ್ತು ನಷ್ಟ
ಅನುಭವಿಸಿದವರಿಗೆ ಪರಿಹಾರ ಒದಗಿಸಲು ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ಅವರನ್ನು ಕ್ಷೇಮ್‌
ಕಮೀಷನರ್‌ ಆಗಿ ಹೈಕೋರ್ಟ್‌ ನೇಮಕ ಮಾಡಿದೆ.


ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ


ನ್ಯಾಯಮೂರ್ತಿ ಎ.ಎಸ್‌.ಓಕಾ ನೇತೃತ್ನದ ವಿಭಾಗೀಯ ಪೀಠ, ಕ್ಷೇಮ್‌ ಕಮೀಷನರ್‌ ನೇಮಕ ಮಾಡಿ
ಆದೇಶಿಸಿತು.


ನಿವೃತ್ತ ನ್ಯಾಯಮೂರ್ತಿಗಳ ಸ್ಥಾನಮಾನ ಪರಿಗಣಿಸಿ ಸೂಕ್ತ ಸಂಭಾವನೆ ನಿಗದಿಪಡಿಸಬೇಕು.
ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು.
ಕೋವಿಡ್‌-19 ಹಿನ್ನೆಲೆಯಲ್ಲಿ ವಿಡಿಯೋ ಕಾನ್ಸೆರೆನ್ನಿಂಗ್‌ ಸೌಲಭ್ಯಗಳನ್ನು ನೀಡಬೇಕು. ನಷ್ಟ ಅನುಭವಿಸಿರುವ
ವ್ಯಕ್ತಿಗಳು ತಮ್ಮ ಮನವಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಕ್ಷೇಮ್‌ ಕಮೀಷನರ್‌ ನೇಮಕ ಸಂಬಂಧ
ಪ್ರಚಾರ ನೀಡಬೇಕು ಎಂದು ಸರ್ಕಾರಕ್ಕೆ ಪೀಠ ನಿರ್ದೇಶಿಸಿತು. ದಾಖಲೆಗಳನ್ನು ತರಿಸಿಕೊಳ್ಳಲು ಅಥವಾ
ಸಾಕ್ಷಿಗಳನ್ನು ವಿಚಾರಣೆಗೆ ಕರೆಸುವಾಗ ಯಾವುದೇ ನಿರ್ದೇಶನಗಳ ಅಗತ್ಯವಿದ್ದರೆ, ಹೈಕೋರ್ಟ್‌ ರಿಜಿಸ್ಟಾರ್‌
ಜನರಲ್‌ಗೆ ಕ್ಷೇಮ್‌ ಕಮೀಷನರ್‌ ಮನವಿ ಸಲ್ಲಿಸಬಹುದು ಎಂದು ಸೂಚಿಸಿತು.


ಆಧಾರ:ವಿಜಯವಾಣಿ, ದಿನಾಂಕ:29.08.2020
88. ರೂ.31,676 ಕೋಟಿ ಹೂಡಿಕೆ : ಕೈಗಾರಿಕಾ ಸಚಿವರ ಹೇಳಿಕೆ


ಕೋವಿಡ್‌ ಲಾಕ್‌ಡೌನ್‌ ನಿರ್ಬಂಧಗಳ ನಡುವೆಯೂ ರಾಜ್ಯದಲ್ಲಿ ರೂ.31,676 ಕೋಟಿ ಬಂಡವಾಳ
ಹೂಡಿಕೆ ಆಗಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಇದರಿಂದ 65,459 ಉದ್ಯೋಗಗಳು


182


ಸೃಷ್ಟಿ ಆಗಲಿವೆ ಎಂದು ಅವರು ಕೈಗಾರಿಕಾ ಅಭಿವೃದ್ಧಿಯ ಒಂದು ವರ್ಷಗಳ ಸಾಧನೆ ಕುರಿತ ಪುಸ್ತಕ ಬಿಡುಗಡೆ
ಬಳಿಕ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವಂತೆ ತಂದಿರುವ ಹೊಸ ಕೈಗಾರಿಕಾ ನೀತಿ ಮತ್ತು
ಕ್ರಮಗಳಿಂದಾಗಿ ಸಂಕಷ್ಟದ ನಡುವೆಯೂ ಉತ್ತಮ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಆಗುತ್ತಿದೆ. ಸೂಕ್ಷ್ಮ ಸಣ್ಣ
ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ರಾಜ್ಯ ಕೈಗಾರಿಕಾ ಸೌಲಭ್ಯಗಳ ಅಧಿನಿಯಮ
2020 ಜಾರಿಗೊಳಿಸಿದ ಮೊದಲ ರಾಜ್ಯ ನಮ್ಮದು. ಕರ್ನಾಟಕ ರಾಜ್ಯ ಭೂಸುಧಾರಣಾ ಕಾಯ್ದೆ,
ಭೂಪರಿವರ್ತನೆಯ ನಿಯಮಗಳ ಮತ್ತು ಸುಲಲಿತ ವ್ಯವಹಾರದ ಉಪಕ್ರಮಗಳಲ್ಲಿ ಕ್ರಾಂತಿಕಾರಕ
ಬದಲಾವಣೆಗಳನ್ನು ತರಲಾಗಿದೆ ಹಾಗೂ ರಾಜ್ಯವನ್ನು ಕೈಗಾರಿಕೆ ಹೂಡಿಕೆದಾರರ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ
ಮೊದಲ ಸ್ಥಾನಕ್ಕೆ ಒಯ್ಯುವ ಗುರಿ ನಮ್ಮದು. 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ
ಮೂಲಕ 11 ಕ್ಷಸ್ಪರ್‌ಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳನ್ನು
ನಿರ್ಮಿಸಲಾಗುವುದು ಎಂದು ಕೈಗಾರಿಕಾ ಸಚಿವರು ಹೇಳಿದರು.


ಕೋಲಾರದಲ್ಲಿ ಬೃಹತ್‌ ಉದ್ದಿಮೆ ಸ್ಥಾಪನೆಗೆ ಆದ್ಯತೆ : ಕೋಲಾರದ ಬಿಜಿಎಂಎಲ್‌ನಲ್ಲಿ ಬಳಕೆಯಾಗದೇ ಉಳಿದ
3,200 ಎಕರೆ ಭೂಮಿಯನ್ನು ಕೇಂದ್ರ ಕೊಡಲು ಒಪ್ಪಿರುವುದರಿಂದ, ಅಲ್ಲಿ ದೊಡ್ಡ ಪ್ರಮಾಣದ ಉದ್ದಿಮೆಗಳನ್ನು
ಸ್ಥಾಪಿಸಲು ಆದ್ಯತೆ ನೀಡಲಾಗುವುದು, ಅಲ್ಲಿ ಖನಿಜಗಳ ಅನ್ನೇಷಣೆಯ ಬಳಿಕ, ಖನಿಜ ಇಲ್ಲದಿರುವುದು ಖಾತರಿ
ಆದ ತಕ್ಷಣವೇ ಗಣಿ ಇಲಾಖೆ ಆ ಜಮೀನು ಹಸ್ತಾಂತರಿಸಲು ಒಪ್ಪಿದೆ. ಈ ಜಮೀನು ಬೆಂಗಳೂರು
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 90 ಕಿ.ಮೀ. ಚನ್ನೈ ಬಂದರಿನಿಂದ 314 ಕಿ.ಮೀ ಅಂತರದಲ್ಲಿದ್ದು,
ಕೈಗಾರಿಕಾ ಪ್ರದೇಶದ ಅಭಿವೃ ದ್ದಿಗೆ ಸೂಕ್ತವಾಗಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುತ್ತದೆ ಎಂದು ಕೈಗಾರಿಕಾ
ಹ ತಿಳಿಸಿದರು.


ಆಧಾರ: ಪ್ರಜಾವಾಣಿ, ದಿನಾಂಕ:29.08.2020
89. ಎಸ್‌ಸಿ, ಎಸ್‌ಟಿ, ವಿದ್ಯಾರ್ಥಿಗಳ ಶಿಕ್ಷ ಣಕ್ಕೆ ವಿಶೇಷ ಕ್ರಿಯಾಯೋಜನೆ


ನೂತನ ಶಿಕ್ಷಣ ನೀತಿ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಬಲಪಡಿಸಲಿದ್ದು, ಈ ನೀತಿಯಡಿ ಎಸ್‌ಸಿ,
ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಶಿಕ್ಷಣ, ವೃತ್ತಿಪರ
ಶಿಕ್ಷಣಕ್ಕೆ ಒತ್ತು ನೀಡುವ ಸಂಬಂಧ ವಿಶೇಷ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಉಪ ಮುಖ್ಯಮಂತ್ರಿ
ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಶಿಕ್ಷಣ
ನೀತಿಯ ಪರಿಣಾಮಕಾರಿ ಅನುಷ್ಠಾನ ಕುರಿತು ಸಭೆ ನಡೆಸಿದರು. ಈ ವೇಳೆ ಮಾತನಾಡಿ ಅವರು ಎಸ್‌ಸಿ/ಎಸ್‌ಟಿ
ಮತ್ತು ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳನ್ನು
ಅವಲಂಬಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಮತ್ತು ಪರಿಣಾಮಕಾರಿ ಶಿಕ್ಷಣ ನೀಡಲು ಈ ಶಿಕ್ಷಣ
ನೀತಿಯಡಿ ಪರಿಣಾಮಕಾರಿ ಶಿಕ್ಷಣಕ್ಕೆ ವಿಪುಲ ಅವಕಾಶಗಳಿವೆ. ಈ ಎಲ್ಲ ಅವಕಾಶಗಳನ್ನು ಪಡೆಯುವ ಮೂಲಕ
ವಿದ್ಯಾರ್ಥಿಗಳು ಸ್ಥಾವಲಂಬಿಗಳಾಗುವಂತಹ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಈ ಸಮುದಾಯಗಳಿಗೆ
ವಿಶೇಷ ಆದ್ಯತೆ ನೀಡಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.


ಆಧಾರ:ಕನ್ನಡಪ್ರಭ, ದಿನಾಂಕ:30.08.2020
90. ಆಧುನಿಕ ವೇಗಕ್ಕೆ ತಕ್ಕ ಶಿಕ್ಷಣ ಅಗತ್ಯ: ರಾಜನಾಥ್‌


ಆಧುನಿಕ ವೇಗಕ್ಕೆ ತಕ್ಕಂತೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ
ರಾಷ್ಟೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದು, ನೂತನ ಕ್ರಾಂತಿಗೆ ಮುಂದಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ
ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.


183


ಶಿವರಾತ್ರಿ ರಾಜೇಂದ್ರ ಸ್ಪಾಮೀಜಿಯ 105ನೇ ಜಯಂತಿ ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ
ಉದ್ರಾಟಿಸಿ ಮಾತನಾಡಿದ ಹ ಇಂದು ಪ್ರತಿಯೊಬ್ಬರೂ ಗುಣಮಟ್ಟದ ಮೌಲ್ರಧಾರಿತ ಮತು ಕೌಶಲ್ಕ್ಯಯುಕ್ತ
ಶಿಕ್ಷಣ. ದೊರೆಯಬೇಕು ಎಂಬ ಹಿನ್ನೆ ಲೆಯಲ್ಲಿ ಕೇಂದ್ರ ನಾಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ.


ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶ್ರೀಮಠ-ಗುರುಪರಂಪರೆ ಮತ್ತು ದಿ ಹೆರಿಟೇಜ್‌ ಆಫ್‌
ಸುತ್ತೂರು ಮಠ್‌ ಅನಿಮೇಷನ್‌ ಚಿತ್ರ ಬಿಡುಗಡೆಗೊಳಿಸಿ ಮಾತನಾಡಿ, ರಾಜೇಂದ್ರ ಶ್ರೀಗಳ ಜಯಂತಿ
ಮಹೋತ್ಸವದ ಸಂದರ್ಭದಲ್ಲಿ ವೈವಿಧ್ಯಮಯ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ರೀಮಠದ
ಕಾಳಜಿಯ ಪ್ರತೀಕ ಎಂದರು.


ಆಧಾರ: ಕನ್ನಡಪ್ರಭ, ದಿನಾಂಕ:30.08.2020
9]. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಿದ್ದತೆ


ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಸಿದ್ಧತೆ
ನಡೆದಿದೆ. ಕಾರ್ಯಪಡೆಯ ಅಂತಿಮ ವರದಿ ಕೈಸೇರಿದ ತಕ್ಷಣ ನೀತಿಯನ್ನು "ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ
ಹೆಜ್ಜೆ ಇಡಲಿದೆ ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತಿ ಡಾ: ಸಿ.ಎನ್‌.ಅಶ್ವತ್ನನಾರಾಯಣ
ಹೇಳಿದರು.


ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಉನ್ನತ ಶಿಕ್ಷಣದಲ್ಲಿ ಆಗುವ ಬದಲಾವಣೆ ಮತ್ತು ಬೀರುವ
ಪ್ರಭಾವದ ಕುರಿತ ಆನ್‌ಲೈನ್‌ ಸಂವಾದದಲ್ಲಿ ಅವರು ಮಾತನಾಡಿದರು. ನೀತಿಯಲ್ಲಿರುವ ಅಂಶಗಳನ್ನು
ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ. ಕಾರ್ಯಪಡೆಯ ಜೊತೆ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಉಪ
ಸಮಿತಿಗಳು ನೀಡಿರುವ ವರದಿಗಳನ್ನು ಅಧ್ಯಯನ ಮಾಡಲಾಗಿದೆ ಎಂದರು.


ರಾಜ್ಯಕ್ಕೆ ಸೇರಿದ ತಜ್ಜಧೇ ಇದ್ದ ಸಮಿತಿಯು ಅನೇಕ ಕ್ರಾಂತಿಕಾರಕ ಅಂಶಗಳನ್ನು ನೀತಿಯಲ್ಲಿ ಸೇರಿಸಿದೆ.
ಶಿಕ್ಷಣದ ಎಲ್ಲ ಹಂತಗಳಲ್ಲೂ ಉತ್ತಮ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಮುಂದೆ ಪ್ರಾಥಮಿಕ ಹಂತದಿಂದ ಉನ್ನತ
ಶಿಕ್ಷಣದ ಹಂತದವರೆಗೂ ಅಪಾರ ಬದಲಾವಣೆಗಳನ್ನು ಕಾಣಬಹುದು. ಈ ಮೂಲಕ, ಭಾರತವು ಜಗತ್ತಿನ ಜ್ಞಾನ
ಕಣಜವಾಗಿ ಹೊರಹೊಮ್ಮಲಿದೆ. ಕರ್ನಾಟಕವೂ ಶಿಕ್ಷಣದ ನೆಲೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಇಡೀ ದೇಶದಲ್ಲೇ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯವಾಗಿ ಕರ್ನಾಟಕ ಮುನ್ನಡೆಯಲ್ಲಿ
ನಿಲ್ಲಲಿದೆ. ಈಗಾಗಲೇ ಸರ್ಕಾರ ಹಾಕಿಕೊಂಡಿರುವ ಯೋಜನೆಯಂತೆ, ತಜ್ಞರು ಕೊಟ್ಟಿರುವ ಸಲಹೆಯಂತೆ ಹಂತ-
ಹಂತವಾಗಿ ಅನುಷ್ಠಾನ ಮಾಡಲಾಗುವುದು. ಧಾರವಾಡದಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ಉನ್ನತ
ಶಿಕ್ಷಣ ಅಕಾಡೆಮಿ ಕೂಡ ಈ ನಿಟ್ಟಿನಲ್ಲಿ ಅನುಕೂಲವಾಗಲಿದೆ. ಅದರ ಜೊತೆಯಲಿ ಬಹು ಉದ್ದೇಶಿತ ಹಾಗೂ
ಬಹುವಿಷಯಗಳನ್ನು ಬೋಧನೆ ಮಾಡುವ ವಿಶ್ವವಿದ್ಯಾಲಯಗಳನ್ನು ಕೂಡ ಸ್ಥಾಪಿಸಲಾಗುವುದು ಎಂದರು.


ಆಧಾರ: ಪ್ರಜಾವಾಣಿ, ದಿನಾಂಕ:30.08.2020
92. ಬೆಂಗಳೂರಿನ ಸುತ್ತ ಜಿಲ್ಲೆಗಳಲ್ಲಿ ಕೈಗಾರಿಕಾ ಹಬ್‌


ರಾಜಧಾನಿ ಬೆಂಗಳೂರಿನ ಮೇಲಿರುವ ಕೈಗಾರಿಕಾ ಒತ್ತಡ ನಿವಾರಣೆಗೆ ಮುಂದಾಗಿರುವ ಸರ್ಕಾರ,
ಬೆಂಗಳೂರಿಗೆ ಸಮೀಪದ ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ದಿಗೆ ಆದ್ಯತೆ ನೀಡಿದೆ.


ಬೆಂಗಳೂರು ನಗರದಲ್ಲಿಯೇ ಹೆಚ್ಚಿನ ಕೈಗಾರಿಕಾ ಪ್ರದೇಶಗಳು ನಿರ್ಮಾಣವಾಗಿರುವುದರಿಂದ ರಾಜ್ಯದ
ವಿವಿಧ ಭಾಗಗಳಿಂದ ಜನರು ಕೆಲಸಕ್ಕಾಗಿ ವಲಸೆ ಬರುತ್ತಿದ್ದು, ನಗರದ ಮೇಲಿನ ಒತ್ತಡ ಹೆಚ್ಚಾಗಿ ಹಲವಾರು
ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಕೊರೋನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಊರುಗಳಿಗೆ ವಾಪಸ್ಥಾಗುವ
ವೇಳ ಎದುರಾದ ಸಮಸ್ಯೆಗಳಿಂದ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜಧಾನಿಗೆ ಸಮೀಪದ ಜಿಲ್ಲೆಗಳಲ್ಲಿ ಕೈಗಾರಿಕಾ
ಪ್ರದೇಶಗಳ ನಿರ್ಮಾಣಕ್ಕೆ ಇನ್ನಷ್ಟು ಒತ್ತು ನೀಡಲು ಮುಂದಾಗಿದೆ.


ಲಕ್ಷಾಂತರ ಉದ್ಯೋಗ ಸೃಷ್ಠಿ ಸಾಧ್ಯತೆ: ರಾಜ್ಯದ 2 ಹಾಗೂ 3ನೇ ದರ್ಜೆಯ ನಗರಗಳಲ್ಲಿ ಕೈಗಾರಿಕಾ


ಪ್ರದೇಶಗಳನ್ನು ನಿರ್ಮಿಸಬೇಕೆಂಬ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ತೀವ್ರತೆ ಪಡೆದುಕೊಂಡಿದೆ. ಅದರಲ್ಲಿಯೂ


184


ಪ್ರಮುಖವಾಗಿ ಬರಗಾಲದ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಬೆಂಗಳೂರು
ಗ್ರಾಮಾಂತರಗಳಲ್ಲಿ ಕೃಷಿಯನ್ನು ಹೊರತುಪಡಿಸಿದರೆ ಬೇರೆ ಆಯ್ದೆಗಳಿಲ್ಲ. ಜೊತೆಗೆ ಈ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ
ತೀವವಾಗಿದ್ದು, 1500 ಅಡಿ ಕೊರೆದರೂ ನೀರು ಸಿಗದ ಹಿನ್ನೆಲೆಯಲ್ಲಿ ಕೃಷಿಕರು ಸಂಕಷ್ಟದಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷಿಕರು ಪರ್ಯಾಯವಾಗಿ ಜೀವನ ಕಟ್ಟಿಕೊಳ್ಳಲು ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಈ
ನಾಲ್ಕು ಜಿಲ್ಲೆಗಳಲ್ಲಿ ಉದ್ದೇಶಿಸಿರುವ ಎಂಟು ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕಾ ಪ್ರದೇಶಗಳು
ಅಭಿವೃದ್ಧಿಯಾದರೆ ಬೆಂಗಳೂರು ಸುತ್ತಮುತ್ತಲಿನ ಭಾಗಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುವ
ನಿರೀಕ್ಷೆಯಿದೆ. ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಪ್ರದೇಶಗಳ ನಿರ್ಮಾಣದಿಂದ ಸ್ಥಳೀಯವಾಗಿ ಉದ್ಯೋಗ ದೊರೆತು
ವಲಸೆ ತಪ್ಪಿಸಿದಂತಾಗುತ್ತದೆ.

ಎಂಟು ಸಾವಿರ ಎಕರೆಯಲ್ಲಿ ಕೈಗಾರಿಕಾ ಹಬ್‌: ಬೆಂಗಳೂರಿಗೆ ಹೊಂದಿಕೊಂಡಿರುವ ನಾಲ್ಕು ಜಿಲ್ಲೆಗಳ ಸುಮಾರು 8
ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸಲು ಉದ್ದೇಶಿಸಲಾಗಿ, ಕೋಲಾರದ ಮಿಂಡಹಳ್ಳಿ
ಹಾಗೂ ದೇವನಹಳ್ಳಿ ಭಾಗಗಳಲ್ಲಿ ಭೂಸ್ಪಾಧೀನ ಪ್ರಕ್ರಿಯೆ ಆರಂಭವಾಗಿದ್ದು, ರಾಮನಗರದ ಬಿಡದಿ ಪ್ರದೇಶಗಳಲ್ಲಿ
700 ಎಕರೆ ಜಮೀನು ಸ್ಪಾಧೀನ ಪ್ರಕ್ರಿಯೆ ಆರಂಭವಾದರೂ ದರ ನಿಗದಿ ಸಂಬಂಧಿಸಿ ಸ್ಥಳೀಯರ
ವಿರೋಧದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಉಳಿದಂತೆ ಗೌರಿಬಿದನೂರು, ಶಿಡ್ಲಘಟ್ಟ ಬಾಗೇಪಲ್ಲಿ,
ಶ್ರೀನಿವಾಸಪುರ ಭಾಗಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಭೂಮಿ ಗುರುತಿಸುವ ಕೆಲಸ ಪ್ರಗತಿಯಲ್ಲಿದೆ.
ನೂತನ ಕೈಗಾರಿಕಾ ನೀತಿ ಸಹಕಾರಿ: ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ನಿರ್ಮಿಸುವ ಹೂಡಿಕೆದಾರರಿಗೆ
ಸರ್ಕಾರ, ಸರ್ಕಾರದ ನೂತನ ಕೈಗಾರಿಕಾ ನೀತಿ 2020-25 ಅನುಕೂಲಕಾರಿಯಾಗಿದ್ದು, ಹಿಂದುಳಿದ ಜಿಲ್ಲೆಗಳಲ್ಲಿ
ಕೈಗಾರಿಕೆಗಳನ್ನು ನಿರ್ಮಿಸುವವರಿಗೆ ಕೆಲ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ಹೆಚ್ಚಿನ
ಸಂಖ್ಯೆಯ ಉದ್ಯಮಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದು ಕಂಡು ಬಂದಿದೆ. ಇದರೊಂದಿಗೆ
ಕೈಗಾರಿಕೆಗಳನ್ನು ನಿರ್ಮಿಸಲು ಈ ಹಿಂದೆಯಿದ್ದ ನಿಯಮಗಳನ್ನು ಸಹ ಸರಳೀಕರಣಗೊಳಿಸಿರುವುದು ಸಹ
ಕೈಗಾರಿಕೆಗಳಿಗೆ ವರದಾನವಾಗಿದೆ.


ಆಧಾರ: ವಿಜಯ ಕರ್ನಾಟಕ, ದಿನಾಂ೦ಕ:05.09.2020
93. ಉದ್ಯಮಿಗಳ ಅನುಕೂಲಕ್ಕಾಗಿ ಏಕಗವಾಕ್ಷಿ ವೆಬ್‌ಸೈಟ್‌


ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಏಕಗವಾಕ್ಷಿ ವೆಬ್‌ಸೈಟ್‌ ಶೀಘ್ರದಲ್ಲೇ
ಪ್ರಾರಂಭಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.
ವಿದೇಶಿ ಹೂಡಿಕೆದಾರರ ಮಂಡಳಿಯ ಕರ್ನಾಟಕ ಚಾಪ್ಟರ್‌ ಉದ್ರಾಟಿಸಿ ಮಾತನಾಡಿ, ಈಸ್‌ ಆಫ್‌ ಡೂಯಿಂಗ್‌
ಬ್ಯೂಸಿನೆಸ್‌ನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ
ನೀಡುವಂತಹ ವೆಬ್‌ಸೈಟ್‌ ಆರಂಭಿಸಲಾಗುವುದು ಎಂದರು.


ಏಕಗವಾಕ್ಷಿ ಯೋಜನೆ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ
ನೀತಿಗಳನ್ನು ಸರ್ಕಾರ ರೂಪಿಸುತ್ತಿದೆ. ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದ್ದು, ಜಪಾನ್‌ ಸೇರಿದಂತೆ
ಹಲವು ದೇಶಗಳು ವಿವಿಧ ವಲಯಗಳಲ್ಲಿ ಬಂಡವಾಳ ಹೂಡಲು ಮುಂದೆ ಬಂದಿವೆ. 2020-25ನೇ ಸಾಲಿನಲ್ಲಿ
ಕೈಗಾರಿಕಾ ವಲಯದಲ್ಲಿ ಸರ್ಕಾರ ಸುಮಾರು 25ಲಕ್ಷ ಉದ್ಯೋಗ ಕಲ್ಲಿಸುವ ಗುರಿ ಹೊಂದಿದ್ದು, ಎಲ್ಲಾ ರೀತಿಯ
ತಯಾರಿ ನಡೆದಿದೆ. ಹೊಸ ಕೈಗಾರಿಕಾ ನೀತಿಯ ಬಗ್ಗೆ ಉದ್ಯಮವಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಭೂ
ಸುಧಾರಣಾ ಕಾಯ್ದೆ ಬಗ್ಗೆ ಈ ಹಿಂದೆ ಕೈಗಾರಿಕೋದ್ಯಮಗಳು ಹಲವು ರೀತಿಯಲ್ಲಿ ದೂರುತ್ತಿದ್ದರು. ಆ
ಹಿನ್ನೆಲೆಯಲ್ಲಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದು ಕೈಗಾರಿಕೋದ್ಯಮಿಗಳು ನೇರವಾಗಿ
ರೈತರಿಂದ ಭೂಮಿ ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಕೈಗಾರಿಕೆಗಳು ರಾಜ್ಯದ ಹೊರ ಜಿಲ್ಲೆಗಳಿಗೂ ಹೋಗಬೇಕು ಎಂಬುದು ಸರ್ಕಾರದ
ಉದ್ದೇಶ. ಹಲವು ವಿದೇಶಿ ಕಂಪನಿಗಳು ರಾಜ್ಯದ ವಿವಿಧ ಕಡೆ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು,
ತುಮಕೂರು ಮುಂದಿನ ದಿನಗಳಲ್ಲಿ ಕೈಗಾರಿಕಾ ಟೌನ್‌ಶಿಫ್ಸ್‌ ಆಗಿ ಅಭಿವೃದ್ಧಿಗೊಳ್ಳಲಿದೆ ಎಂಬ ವಿಶ್ವಾಸ
ವ್ಯಕ್ತಪಡಿಸಿದ್ದಾರೆ.


ಆಧಾರ: ಉದಯವಾಣಿ, ದಿನಾಂಕ:13.09.2020


185


94. ರೂ.31 ಸಾವಿರ ಕೋಟಿ ಹೂಡಿಕೆ


ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಸುಮಾರು ರೂ.31 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಅನುಮತಿ
ನೀಡಲಾಗಿದ್ದು, ಇದರಿಂದ ಅಂದಾಜು 45 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ ಉದ್ಯಮಿದಾರರು ಹೊಸ
ಯೋಜನೆಗಳ ಕುರಿತು ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ನಿರುದ್ಯೋಗ
ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಭರವಸೆ
ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸಾಕಷ್ಟು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದು, ಲಾಕ್‌ಡೌನ್‌ ಹಿನ್ನೆಲೆ ಬಂದ್‌ ಆಗಿದ್ದ
ಕೈಗಾರಿಕೆಗಳಲ್ಲಿ ಶೇ.90ರಷ್ಟು ಈಗಾಗಲೇ ಪುನರಾರಂಭವಾಗಿದೆ. ಹೊರ ರಾಜ್ಯಗಳಿಂದ ಹಿಂದಿರುಗಿದ ಕನ್ನಡಿಗರು.
ಕೌಶಲ್ಯ ಹೊಂದಿರುವ ಯುವ ಜನತೆಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗಕ್ಕೆ ಮುಂದಾಗಿದ್ದಾರೆ. ಇದರಿಂದ


ಕೈಗಾರಿಕೆಗಳಲ್ಲಿ ಕಾರ್ಮಿಕರ ಹಾಜರಾತಿ ಶೇ.70ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.


2019-20ನೇ ಸಾಲಿನಲ್ಲಿ 100 ಬಿಲಿಯನ್‌ ಡಾಲರ್‌ಗಳಷ್ಟು ರಫ್ತನ್ನು ರಾಜ್ಯ ಮಾಡಿದೆ. ಕರ್ನಾಟಕ ರಾಜ್ಯ
ಕೈಗಾರಿಕೆಗಳ ಅಭಿವೃದ್ದಿಗೆ ಹಾಗೂ ಬೆಳವಣಿಗೆಗೆ ಸೂಕ್ತ ವಾತಾವರಣ ಕಲಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತಿದೆ.
ಎಲ್ಲಾ ಕೈಗಾರಿಕೆಗಳ ಸ್ಥಾಪನೆಗೆ ಸುಲಭ ರೀತಿಯ ಅವಕಾಶ ನೀಡುವ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮ
2020 ಕ್ರಾಂತಿಕಾರಿ ನಿಯಮವಾಗಿದೆ ಎಂದು ಹೇಳಿದ್ದಾರೆ.


ಆಧಾರ: ಉದಯವಾಣಿ, ದಿನಾಂಕ:19.09.2020
95. ಮೇನಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ


ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಭೂ-ಸ್ಟಾಧೀನ ಪ್ರಕ್ರಿಯೆ ಕಾರ್ಯವು ಚುರುಕುಗೊಂಡಿದ್ದು,
ಯೋಜನೆಯ ಅನುಷ್ಠಾನದಲ್ಲಿ ಈ ಭಾಗದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಹಕಾರ ನೀಡಬೇಕೆಂದಾಗ
ಮಾತ್ರ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಮುಗಿಸಬಹುದು ಕುಡಿಯುವ ನೀರಿನ ಮಹತ್ವದ
ಯೋಜನೆಗಳಲ್ಲೊಂದಾದ ಎತ್ತಿನಹೊಳೆ ಮೊದಲ ಹಂತದ ಕಾಮಗಾರಿ ಮುಂಬರುವ ಮೇ ತಿಂಗಳ ಒಳಗೆ
ಪೂರ್ಣಗೊಳ್ಗಲಿದೆ ಎಂದು ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.


ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತ ಮಕ್ಕಳ ವಿದ್ಯಾರ್ಜನೆಗೆ ಶಾಲೆ ನಿರ್ಮಾಣ, ಯೋಜನಾ
ಪ್ರದೇಶದಲ್ಲಿ ಉತ್ತಮವಾದ ರಸ್ತೆ ಸೌಲಭ್ಯಗಳನ್ನು ಒದಗಿಸಬೇಕೆಂದು ಹಾಸನ ಬೆಳೆಗಾರರ ಸಂಘದವತಿಯಿಂದ
ಮನವಿ ಮಾಡಿದ್ದಾರೆ. ರೈತ ಮುಖಂಡರ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ
ನೀಡಿದರು.


ಆಧಾರ: ಸಂಯುಕ್ತ ಕರ್ನಾಟಕ, ದಿನಾಂಕ:11.09.2020
96. ಒಳೆಮೀಸಲಿಗೆ ಒಮ್ಮತ


ರಾಜ್ಯದಲ್ಲಿ ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳಮೀಸಲು ಬೇಕೇ ಬೇಕು. ನಿರ್ಲಕ್ಕಿತ
ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಮೂರ್ತಿ ಎ.ಜೆ. ಸದಾಶಿವ ಆಯೋಗದ ಜೊತೆಗೆ
ಕಾಂತರಾಜ್‌ ವರದಿ ಮತ್ತು ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನ್‌ ದಾಸ್‌ ವರದಿಯನ್ನು ವಿಧಾನ
ಮಂಡಲದಲ್ಲಿ ಮಂಡಿಸಬೇಕು ಎಂಬ ಅಗ್ರಹ ಕೇಳಿಬಂದಿದೆ.


ನ್ಯಾ.ಎ.ಜೆ. ಸದಾಶಿವ ಸೇರಿ ಸಮಾಜದ ನಾನಾ ಮುಖಂಡರು ಬೇಡಿಕೆ ಮಂಡಿಸಿದರು. ಪರಿಶಿಷ್ಟ
ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲು ನೀಡಬಹುದು ಎಂದು ಸುಪ್ರೀಂ ಇತ್ತೀಚೆಗೆ ಅಭಿಪ್ರಾಯಪಟ್ಟಿತ್ತು. ಇದರ
ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಒಳಮೀಸಲಿನ ಬೇಡಿಕೆ ಹೆಚ್ಚಿದೆ. ರಾಜ್ಯದ ಮಟ್ಟಿಗೆ ಸದಾಶಿವ ಆಯೋಗದ ವರದಿಯೇ
ಒಳಮೀಸಲಿನ ಪ್ರಮುಖ ಆಕರ. ಆದರೆ, ಅದರಲ್ಲಿರುವ ಅಂಶಗಳ ಬಗ್ಗೆ ಊಹಾಪೋಹಗಳ ಆಧಾರದಲ್ಲಿ ಪರ
ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮೂರು ವರದಿಗಳನ್ನು ಮಂಡಿಸಿ, ವೈಜ್ಞಾನಿಕ
ಪರಾಮರ್ಶೆಗೆ ಒಳಪಡಿಸಿ ಕೇಂದಕ್ಕೆ ಕಳುಹಿಸಿಕೊಡಬೇಕು ಎಂದು ತಜ್ಞರು. ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.


186
3 ವರದಿಗಳು:


> ನ್ಯಾ. ನಾಗಮೋಹನ್‌ ದಾಸ್‌ ಸಮಿತಿ:- ಪರಿಶಿಷ್ಠ ವರ್ಗಕ್ಕೆ ಸೇರಿದ ವಾಲ್ಮೀಕಿ ಜನಾಂಗದ ಮೀಸಲು
ಹೆಚ್ಚಳ ಪರಾಮರ್ಶೆಗೆ ನ್ಯಾನಾಗಮೋಹನ್‌ ದಾಸ್‌ ಸಮಿತಿ ರಚಿಸಲಾಗಿತ್ತು. ವರದಿಯು ಎಸ್‌.ಟಿ.
ಮೀಸಲನ್ನು ಶೇ.7ಕ್ಕೆ ಹೆಚ್ಚಿಸಬೇಕು. ಎಸ್‌.ಸಿಗೂ ಶೇ.2ರಷ್ಟೂ ಹೆಚ್ಚುವರಿ ಮೀಸಲು ಕಲ್ಪಿಸಬೇಕು.
ಅಲೆಮಾರಿಗಳು, ದೇವದಾಸಿಯರ ಮಕ್ಕಳನ್ನೂ ಮೀಸಲು ವ್ಯಾಪಿಗೆ ತರಬೇಕೆಂದು ಶಿಫಾರಸ್ತು ಮಾಡಿದೆ.


> ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ :-ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಚ್‌. ಕಾಂತರಾಜ್‌ ನೇತೃತ್ವದ
ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ಕಲ್ಲಿಸಬೇಕಾದರೆ ನಿಖರವಾದ ಅಂಕಿ-
ಅಂಶಗಳು ಬೇಕು ಎಂಬ ಕಾರಣಕ್ಕೆ ಈ ಸಮೀಕ್ಷೆ ನಡೆದಿತ್ತು ಆದರೆ. ಈ ವರದಿಯೂ ಬಹಿರಂಗವಾಗಿಲ್ಲ.


> ನ್ಯಾಸದಾಶಿವ ಆಯೋಗ:- ಪರಿಶಿಷ್ಟ ಜಾತಿಯೊಳಗೆ ಒಳಮೀಸಲು ನೀಡುವುದರ ವೈಜ್ಞಾನಿಕ
ಅಧ್ಯಯನಕ್ಕಾಗಿ 2005ರಲ್ಲಿ ರಚನೆಯಾದ ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ತದ ಆಯೋಗ
2012ರಲ್ಲಿ ವರದಿ ನೀಡಿದೆ ಇದನ್ನು ವಿಧಾನಮಂಡಲದಲ್ಲಿ ಇನ್ನು ಮಂಡಿಸಲಾಗಿಲ್ಲ. ಇದರ
ಮುಖ್ಯಾಂಶಗಳ ಆಧಾರದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ.


ಆಧಾರ: ವಿಜಯ ಕರ್ನಾಟಕ, ದಿನಾ೦ಕ:13.09.2020
97. 1.4 ಕೋಟಿ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆ


ರಾಜ್ಯದಲ್ಲಿ ಕಳದ 2 ವರ್ಷದಲ್ಲಿ 14 ಕೋಟಿ "'ಆಯುಷ್ಠಾನ್‌ ಭಾರತ್‌ ಆರೋಗ್ಯ ಕರ್ನಾಟಕ”
ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 9.38 ಲಕ್ಷ ರೋಗಿಗಳು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ
ಉಚಿತ ಚಿಕಿತ್ಸೆ ಪಡೆದಿದ್ದಾರೆ.


ಆಯುಷ್ಠಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಸಾರ್ವತ್ರಿಕ ಆರೋಗ್ಯ ರಕ್ಷಣಾ
ಯೋಜನೆಯಾಗಿದೆ. ಇದರಡಿ ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಪ್ರತಿ ವರ್ಷ ರೂ.5 ಲಕ್ಷದವರೆಗೂ ಉಚಿತ
ಚಿಕಿತ್ಸೆ ಲಭ್ಯವಿದೆ. ಅಂತೆಯೇ ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಶೇ.30 (ಗರಿಷ್ಟ ರೂ.1.5 ಲಕ್ಷ) ಚಿಕಿತ್ಸಾ ವೆಚ್ಚ
ವಿನಾಯ್ತಿ ಇದೆ. ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 3.391 ಆಸ್ಪತ್ರೆಗಳು ಆರೋಗ್ಯ ಕಾರ್ಡ್‌ನಡಿ
ಚಿಕಿತ್ಸೆ ಒಡಂಬಡಿಕೆ ಮಾಡಿಕೊಂಡಿವೆ. 115 ಲಕ್ಷ ಬಿಪಿಎಲ್‌ ಬಡ ಕುಟುಂಬಗಳನ್ನು ಸೇರಿದಂತೆ ಮಧ್ಯಮ ವರ್ಗದ
ಜನರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿಯಾಗಿದೆ.


ರಾಜ್ಯದಲ್ಲಿ ಯೋಜನೆ ಜಾರಿಗೊಂಡು ಸೆಪ್ಲೆಂಬರ್‌ 23ಕ್ಕೆ 2 ವರ್ಷವಾಗಲಿದೆ. ಈವರೆಗೂ 14ಕೋಟಿ
ಆರೋಗ್ಯ ಕಾರ್ಡ್‌ ವಿತರಿಸಲಾಗಿದ್ದು, 9.38 ಲಕ್ಷ ರೋಗಿಗಳಿಗೆ ರೂ.1950 ಕೋಟಿ ವೆಚ್ಚದ ಚಿಕಿತ್ಸೆ ನೀಡಲಾಗಿದೆ
ಎಂದು ಸುವರ್ಣ ಆರೋಗ್ಯ ಸುರಕ್ಷಾ ಟಸ್ಟ್‌ ತಿಳಿಸಿದೆ.


ಕೊರೋನಾ ಸೋಂಕಿನ ಸಂದರ್ಭದಲ್ಲಿಯೂ ಎಬಿಆರ್‌ಕೆ ಯೋಜನೆ ಉಪಯುಕ್ತವಾಗಿದೆ. ಖಾಸಗಿ
ಆಸ್ಪತ್ರೆಯಲ್ಲಿ ಸಾಮಾನ್ಯ ವಾರ್ಡ್‌ಗೆ ನಿತ್ಯ 10 ಸಾವಿರ, ಐಸಿಯು 15 ಸಾವಿರ, ವೆಂಟಿಲೇಟರ್‌ ಸಹಿತ ವಾರ್ಡ್‌ಗೆ
25 ಸಾವಿರ ದರವಿದೆ. ತೀವ್ರ ಆರೋಗ್ಯ ಸಮಸ್ಯೆ ಹೊಂದಿರುವ ಬಡರೋಗಿಗಳಿಗೆ ಖಾಸಗಿ ಚಿಕಿತ್ಸಾ ವೆಚ್ಚ
ಹೊರೆಯಾಗಲಿದೆ. ಸರ್ಕಾರಿ ಕೋಟಾದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಈ
ಯೋಜನೆಯಡಿಯಲ್ಲಿ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಈವರೆಗೂ 74,199 ಕೊರೋನಾ ಸೋಂಕಿತರು ಸರ್ಕಾರಿ
ಕೋಟಾ ಅಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ರೂ.306 ಕೋಟಿ ವೆಚ್ಚವಾಗಿದೆ.


ಆಧಾರ: ಉದಯವಾಣಿ, ದಿನಾಂ೦ಕ:22.09.2020


187


98. ರಾಜ್ಯದಲ್ಲೂ ಶೀಘ್ರ ಏಮ್ಸ್‌ ಮಾದರಿ ಆಸ್ಪತ್ರೆ ನಿರ್ಮಾಣ


ಸ್ಥಾತಂತ್ರ್ಯ ಬಂದು 7 ದಶಕ ಕಳೆದರೂ ದೆಹಲಿಯ ಏಮ್ಸ್‌ ಮಾದರಿಯ ಆಸ್ಪತ್ರೆ ಒಂದೇ ಇತ್ತು. ಆದರೆ
ಬಿಜೆಪಿ ನೇತೃತ್ನದಲ್ಲಿ ಏಮ್ಸ್‌ ಮಾದರಿಯ 6 ಆಸ್ಪತ್ರೆಗಳನ್ನು ದೇಶದ ವಿವಿಧೆಡೆ ಆರಂಭಿಸಲಾಗಿದೆ. ಈಗ
ಮತ್ತೊಂದು ಏಮ್ಸ್‌ ಮಾದರಿ ಆಸ್ಪತ್ರೆಯನ್ನು ಕರ್ನಾಟಕದಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಯೋಜನೆ
ಹಣಕಾಸು ಇಲಾಖೆ ಮುಂದಿದೆ. ಶೀಘ್ರವೇ ಅನುಮತಿ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ
ಡಾ:ಹರ್ಷವರ್ಧನ ತಿಳಿಸಿದರು.


ಬಳ್ಳಾರಿಯ ಟಿಬಿ ಸ್ಕಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಪ್ರಧಾನಮಂತ್ರಿ ಸ್ಪಾಸ್ಟ್ಯ ಸುರಕ್ಷಾ
ಯೋಜನೆಯಡಿ ರೂ.150 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ
ಸೂಪರ್‌ ಸ್ನೆಷಾಲಿಟಿ ಟ್ರಾಮಾಕೇರ್‌ (ತುರ್ತು ಚಿಕಿತ್ಸಾ ಘಟಕ) ಸೆಂಟರ್‌ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್‌
ಯಡಿಯೂರಪ್ಪ ಅವರೊಂದಿಗೆ ವರ್ಚುವಲ್‌ ತಂತ್ರಜ್ಞಾನದ ಮೂಲಕ ಲೋಕಾರ್ಪಣೆಗೊಳಿಸಿ ಅವರು
ಮಾತನಾಡಿ, ಮಾಜಿ ಪ್ರಧಾನಿ ವಾಜಪೇಯಿ ಅವರು 2003ರಲ್ಲಿ ಏಮ್ಸ್‌ ಮಾದರಿ ಆಸ್ಪತ್ರೆಗಳನ್ನು ದೇಶದಲ್ಲಿ
ಹಲವೆಡೆ ಆರಂಭಿಸಲು ನಿರ್ಧರಿಸಿದ್ದರು. ಕಳದ ವರ್ಷ ರಾಯಬರೇಲಿ ಸೇರಿ 7 ಕಡೆ ನಿರ್ಮಿಸಲಾಗಿದೆ.
ಕರ್ನಾಟಕಕ್ಕೂ ಒ೦ದು ಮಂಜೂರಾಗಲಿದೆ. ಪ್ರಧಾನಿ ಮೋದಿ ಆಶಯದಂತೆ ದೇಶದಲ್ಲಿ 22 ಏಮ್ಸ್‌ ಆಸ್ಪತ್ರೆಗಳನ್ನು
ಆರಂಭಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.


ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಸೇರಿದಂತೆ ನಾಲ್ಕು ಕಡೆಗಳಲ್ಲಿ ವೈದ್ಯಕೀಯ
ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ. ಬಳ್ಳಾರಿಯಲ್ಲಿ ಟ್ರಾಮಾಕೇರ್‌ ಸೆಂಟರ್‌ ಆರಂಭಕ್ಕೆ ಆರೋಗ್ಯ
ಸಚಿವರಾಗಿದ್ದಾಗ ಸುಷ್ಮಾ ಸ್ಪರಾಜ್‌ ಅವರು ಮಂಜೂರಾತಿ ನೀಡಿದ್ದರು. ಈಗ ಅದು ಕೈಗೊಂಡಿದೆ. ನಾಲ್ಕು
ವರ್ಷದಲ್ಲಿ ದೇಶದಲ್ಲಿ 57 ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಮೂಲಕ ಆಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ
ನೀಗಿಸುವ ಪ್ರಯತ್ನ ನಡೆದಿದೆ. ಟ್ರಾಮಾಕೇರ್‌ ಸೆಂಟರ್‌ ಜೊತೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೂ ಕ್ರಮ
ತೆಗೆದುಕೊಳ್ಳಲಾಗುವುದು. ಟ್ರಾಮಾಕೇರ್‌ ಸೆಂಟರ್‌ ಕಟ್ಟಡವು 49 ಸಾಮಾನ್ಯ ಹಾಸಿಗೆ, 72 ಐಸಿಯು ಹಾಸಿಗೆ
ಮತ್ತು ತುರ್ತು ಚಿಕಿತ್ಸಾ ಘಟಕದಲ್ಲಿ 79 ಹಾಸಿಗೆಗಳು ಸೇರಿ ಒಟ್ಟಾರೆ 200 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ.
ಇದರೊಂದಿಗೆ ನ್ಯೂರೋ ಸರ್ಜರಿ, ಪ್ಲಾಸ್ಟಿಕ್‌ ಸರ್ಜರಿ, ಆರ್ಥೋಪಿಡಿಕ್‌, ರೇಡಿಯೋಲಜಿ, ಅನಸ್ನೇಷಿಯಾ
ವಿಭಾಗಗಳನ್ನು ಹೊಂದಿದೆ ಎಂದಿದ್ದಾರೆ.


ಆಧಾರ: ಉದಯವಾಣಿ, ದಿನಾಂಕ:01.09.2020
99. ಬೃಹತ್‌ ನೀರಾವರಿ ಯೊಜನೆ ಅನುಷ್ಠಾನ


ರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲು ರೂ.22 ಸಾವಿರ ಕೋಟಿ ಮೊತ್ತದಲ್ಲಿ
ಬೃಹತ್‌ ಸೂಕ್ಷ್ಮ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವ ರಮೇಶ್‌ ಜಾರಕಿಹೊಳಿ
ತಿಳಿಸಿದ್ದಾರೆ. 5ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಲಿಸುವ ಯೋಜನೆ ಸಮರ್ಥ ಅನುಷ್ಠಾನ ಮತ್ತು
ನಿರ್ವಹಣೆಗಾಗಿ ರಾಜ್ಯಮಟ್ಟದಲ್ಲಿ ಸೂಕ್ಷ್ಮ ನೀರಾವರಿ ನೀತಿ ರೂಪಿಸಲಾಗುವುದು ಎಂದು ಹಾಗೂ ಪ್ರಸಕ್ತ ಸಾಲಿನಲ್ಲಿ
1 ಲಕ್ಷ ಹೆಕ್ಟೇರ್‌ ಭೂ ಪದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.


ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗಾಗಿ ಭೂ ಸ್ಥಾಧೀನಪಡಿಸಿಕೊಳ್ಳುವ ಜಮೀನುಗಳ ರೈತರಿಗೆ
ಶೀಘವಾಗಿ ಪರಿಹಾರ ಧನ ತಲುಪಿಸಲು ಇಲಾಖೆಯ ನಾಲ್ಕು ನಿಗಮಗಳಲ್ಲಿ ಭೂ ಸ್ಪಾಧೀನಕ್ಟಾಗಿಯೇ ಪ್ರತ್ಯೇಕ
ಅನುದಾನ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಜಲಸಂಪನ್ಮೂಲ ಇಲಾಖೆಗೆ ಪ್ರತಿ ವರ್ಷ ಬಜೆಟ್‌ನಲ್ಲಿ ಒದಗಿಸಲಾಗುವ ಅನುದಾನವನ್ನು


ನೀರಾವರಿಯೇತರ ಕಾಮಗಾರಿಗಳಿಗಾಗಿ ಬಳಸಿಕೊಳ್ಳುವುದನ್ನು ನಿರ್ಬಂಧಿಸಿ ನೀರಾವರಿ ಸೃಜಿಸುವ
ಕಾಮಗಾರಿಗಳಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.


188


ಅಣೆಕಟ್ಟು ಪುನ:ಶ್ಲೇತನ: ವಿಶ್ವಬ್ಯಾಂಕ್‌ ನೆರವಿನ ಯೋಜನೆಯಡಿ ರೂ.1500 ಕೋಟಿ ಮೊತ್ತದಲ್ಲಿ ರಾಜ್ಯದ
ಅಣೆಕಟ್ಟುಗಳ ಪುನ:ಶ್ಚೇತನ ಹಾಗೂ ಅಭಿವೃದ್ಧಿ ಯೋಜನೆ ಕಾಮಗಾರಿ ಕೈಗೊಳ್ಳಲು ಕೇಂದ್ರ ಜಲ ಆಯೋಗಕ್ಕೆ
ಪಸಾವನೆ ಸಲ್ಲಿಸಲಾಗಿದ್ದು, ರಾಜ್ಯಕ್ಕೆ ರೂ.750 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.


ರಾಜ್ಯದಲ್ಲಿ ಸವಳು-ಜವಳು ಬಾಧಿತ ಪ್ರದೇಶವನ್ನು ಬಲಗೊಳಿಸಲು ಕ್ರಮ ಕೈಗೊಳ್ಳಲು
ತೀರ್ಮಾನಿಸಲಾಗಿದೆ. ರಾಜ್ಯದ ವಿವಿಧ ಅಚ್ಚುಕಟ್ಟು ಪ್ರದೇಶಗಳಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ಅಚ್ಚುಕಟ್ಟು
ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮೂಲಕ ನಿಗಮಗಳ ಅನುದಾನದೊಂದಿಗೆ ಹಂತ ಹಂತವಾಗಿ
ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದ್ದಾರೆ.


ಭದ್ರಾ ಮೇಲ್ಲಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯ 61 ಕಿ.ಮೀ.ವರೆಗಿನ ಮತ್ತು
ಹೊಳಲೈರೆ ಫೀಡರ್‌ ಕಾಲುವೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ ಈ ವ್ಯಾಪ್ತಿಯಡಿ ಬರುವ
48 ಕೆರೆಗಳನ್ನು ತುಂಬಿಸಲು ಹಾಗೂ ತರೀಕೆರೆ ಏತ ನೀರಾವರಿ ಯೋಜನೆಯಡಿ 10 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ
ಸೂಕ್ಷ್ಮ ನೀರಾವರಿ ಕಲ್ಲಿಸಲಾಗುವುದು ಎಂದು ಹೇಳಿದ್ದಾರೆ.


ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ಹಾಧೀನಕ್ಕೆ ದರ ನಿಗದಿಪಡಿಸುವ ಕುರಿತು ಸೃಷ್ಟಿಯಾಗಿರುವ
ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು
ಹಾಗೂ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಗ್ರಾಮಗಳ ಪೈಕಿ ಕೆಲವೊಂದು
ಗ್ರಾಮಗಳನ್ನು ನವೀನ ತಂತ್ರಜ್ಞಾನ ಬಳಸಿಕೊಂಡು ಮುಳುಗಡೆಯಾಗದಂತೆ ಜಲಾಶಯದ ಎತ್ತರ ಹೆಚ್ಚಿಸುವ


ನಿಟ್ಟಿನಲ್ಲಿ ಪರಿಶೀಲಿಸಲು ತಾಂತ್ರಿಕ ಸಮಿತಿ ರಚಿಸಲಾಗುವುದು ಎಂದಿದ್ದಾರೆ.


ರಾಜ್ಯದಲ್ಲಿ ಪ್ರಸ್ತುತ ಬೃಹತ್‌ ಪ್ರಮಾಣದಲ್ಲಿ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸುವ
ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳನ್ನು
ತಾಂತ್ರಿಕವಾಗಿ ಮತ್ತು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ನಿರ್ವಹಣೆ ನೀತಿ ರೂಪಿಸಲು ಕ್ರಮ
ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ.


ಅಧಿಸೂಚನೆಗೆ ಕ್ರಮ: ಕೃಷ್ಣಾ ಜಲ ವಿವಾದ-2 ನ್ಯಾಯಾಧೀಕರಣದ ತೀರ್ಪು ಗೆಜೆಟ್‌ನಲ್ಲಿ ಪ್ರಕಟಿಸಲು ಕೇಂದ್ರ
ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್‌ನಲ್ಲಿರುವ ದಾವೆಯ ಕುರಿತು ತುರ್ತಾಗಿ ಅಗತ್ಯ
ಕ್ರಮ ತೆಗೆದುಕೊಳ್ಳಲು ಚರ್ಚಿಸಲಾಗಿದ್ದು, ನ್ಯಾಯಾಧೀಕರಣ ತೀರ್ಪು ಗೆಜೆಟ್‌ನಲ್ಲಿ ಪ್ರಕಟವಾಗುವಂತೆ ಕ್ರಮ
ಕೈಗೊಳ್ಳಲಾಗುವುದು ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.


ಕೇಂದ್ರದ ಜೊತೆ ಸಮನ್ವಯತೆ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರೂ.9 ಸಾವಿರ ಕೋಟಿ ಮೊತ್ತದ
ಕ್ರಿಯಾ ಯೋಜನೆ ರೂಪಿಸಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದ್ದು, ಯೋಜನೆಯಡಿ 5,051 ಹೆಕ್ಟೇರ್‌ ಅರಣ್ಯ
ಭೂಮಿ ಮುಳುಗಡೆಯಾಗುತ್ತಿದ್ದು, ಇದರಲ್ಲಿ 81 ಹೆಕ್ಟೇರ್‌ ವನ್ಯಜೀವಿ, ಅರಣ್ಯ ಕ್ಷೇತ್ರ ಇರುವುದರಿಂದ ಕೇಂದ್ರ
ಸರ್ಕಾರದ ಜೊತೆ ಸಮನ್ನಯತೆ ಸಾಧಿಸಲಾಗುತ್ತಿದೆ ಎಂದಿದ್ದಾರೆ. ಕೆ.ಆರ್‌.ಎಸ್‌. ಬೃಂದಾವನ ಉದ್ಯಾನ
ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ರೂ.435 ಕೋಟಿ
ಮೊತ್ತದ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ನಾಲ್ಕು ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು
ಹೇಳಿದ್ದಾರೆ.


ಆಧಾರ: ಉದಯವಾಣಿ, ದಿನಾಂಕ:12.09.2020

100. ನೂತನ ಐಟಿ ನೀತಿಗೆ ಸಂಹುಟ ಅನುಮೋದನೆ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಐಟಿ ಕ್ಷೇತದ ವ್ಯಾಪ್ತಿ
ವಿಸ್ತರಿಸುವ, ಈ ವಲಯದ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಿಂದ ಕರ್ನಾಟಕ ಮಾಹಿತಿ ತಂತ್ರಜ್ಞಾನ


ಕಾರ್ಯನೀತಿ ಮತ್ತು ವಿದ್ಯುನ್ಮಾನ ವ್ಯವಸ್ಥೆ, ವಿನ್ಯಾಸ, ಉತ್ಪಾದನೆ ಕುರಿತ ನೂತನ ನೀತಿಗಳಿಗೆ ರಾಜ್ಯ ಸಚಿವ
ಸಂಪುಟ ಸಭೆ ಅನುಮೋದನೆ ನೀಡಿದೆ.


189


ರಾಜಧಾನಿ ಬೆಂಗಳೂರು ಹೊರಭಾಗದಲ್ಲಿ ಐಟಿ ಕ್ಷೇತದಲ್ಲಿ ಗಮನಾರ್ಹ ಸುಧಾರಣೆ ತರುವ ಉದ್ದೇಶ
ಹೊಂದಿರುವ ಐಟಿ ನೀತಿಯನ್ನು ಜಾರಿಗೆ ತರುತ್ತಿದ್ದು, 2020ರಿಂದ 25ರವರೆಗೆ ಜಾರಿಯಲ್ಲಿರಲಿದೆ. ಮುಂದಿನ
ಐದು ವರ್ಷಗಳಲ್ಲಿ ಗರಿಷ್ಠ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸಂಸದೀಯ
ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.


ಬೆಂಗಳೂರು ಹೊರ ಭಾಗದಲ್ಲಿ ಐಟಿಯಲ್ಲಿ ಹೂಡಿಕೆ ಮಾಡುವವರಿಗೆ ಸಬ್ದಿಡಿ, ಪೇಟೆಂಟ್‌ ಹಕ್ಕಿನ ರಕ್ಷಣೆ,
ಹೂಡಿಕೆಗೆ ವಿಪುಲ ಅವಕಾಶ ನೀಡಲಾಗುವುದು. ವರ್ಕ ಪ್ರಮ್‌ ಹೋಂ ಪರಿಕಲ್ಲನೆ ಹೆಚ್ಚಾಗುತ್ತಿದ್ದು, ಇಂತಹ
ಐಟಿ ವಲಯಕ್ಕೆ 5 ಜಿ ಇಂಟರ್‌ನೆಟ್‌ ಸೇರಿ ಹತ್ತು ಹಲವು ಸೌಲಭ್ಯ ಒದಗಿಸಲಾಗುವುದು. ಹಿಂದುಳಿದ
ಪ್ರದೇಶಗಳಲ್ಲಿ ಇಟಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಶೇ.100ರಷ್ಟು ಪ್ರೋತ್ಸಾಹ ನೀಡಲಾಗುವುದು.
ನೋಂದಣಿಯಲ್ಲಿ ರಿಯಾಯಿತಿ, ವಿದ್ಯುತ್‌ಅನ್ನು ಕೈಗಾರಿಕೆ ಬದಲು ವಾಣಿಜ್ಯ ದರದಲ್ಲಿ ಒದಗಿಸಲಾಗುವ ಭೂಮಿ
ಖರೀದಿ, ನೀರು ಪೂರೈಕೆಯಲ್ಲೂ ಹೆಚ್ಚಿನ ರಿಯಾಯಿತಿಗಳನ್ನು ಒದಗಿಸಲಾಗುವುದು. ಕೌಶಲ್ಯ ಅಭಿವೃದ್ಧಿಗೂ ಸಹ
ಸೂಕ್ತ ಒತ್ತು ನೀಡಲಾಗುವುದು ಎಂದಿದ್ದಾರೆ.


ಬೆಂಗಳೂರು ಹೊರವಲಯದಲ್ಲಿ ಶೇ.75ರಷ್ಟು ಸ್ಥಾಂಪ್‌ ಡ್ಕೂಟಿಯಲ್ಲಿ ವಿನಾಯಿತಿ ಇದ್ದು, ಉತ್ತರ
ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.100ರಷ್ಟು ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. ಇದರಿಂದ
ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 25 ಲಕ್ಷ ಹಾಗೂ ಗರಿಷ್ಠ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ
ಹೊಂದಲಾಗಿದೆ. ಕೇಂದ್ರ ಪುರಸ್ಥತ ಯೋಜನೆಯಡಿ ಹಾವೇರಿ ಮತ್ತು ಯಾದಗಿರಿಯಲ್ಲಿ ವೈದ್ಯಕೀಯ
ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಿದ್ದು, ಹಾವೇರಿ ವೈದ್ಯಕೀಯ ಕಾಲೇಜಿಗೆ ರೂ.327.46 ಕೋಟಿ ಮತ್ತು
ಯಾದಗಿರಿ ಕಾಲೇಜಿಗೆ ರೂ.309 ಕೋಟಿ. ವೆಚ್ಚ ಮಾಡಲಾಗುವುದು ಎಂದು ಸಚಿವ ಜಿ.ಸಿ. ಮಾಧುಸ್ತಾಮಿ
ಹೇಳಿದ್ದಾರೆ.


ಘನತ್ಯಾಜ್ಯ ಸಾಗಾಣಿಕೆ ವೈಫಲ್ಯಕ್ಕೆ ದಂಡ: ಘನ ತ್ಯಾಜ್ಯ ಸಾಗಾಣಿಕೆ ವಿಫಲವಾದರೆ ದಂಡ ವಿಧಿಸುವ
ಕಾನೂನು ಜಾರಿ ಮಾಡಲಾಗುತ್ತಿದೆ. ಇಂತಹ ಕರ್ತವ್ಯ ಲೋಪಕ್ಕೆ 1 ಸಾವಿರದಿಂದ 7 ಲಕ್ಷದವರೆಗೆ ದಂಡ
ವಿಧಿಸಲು ಅವಕಾಶವಿದೆ. ಇದಕ್ಕಾಗಿ ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ತಿದ್ದುಪಡಿ ವಿಧೇಯಕಕ್ಕೆ
ಅನುಮೋದನೆ ನೀಡಲಾಗಿದೆ. ಜಿಎಸ್‌ಟಿ ಮತ್ತು ವೈದ್ಯಕೀಯ ಸುಗ್ರೀವಾಜ್ಞೆಯಾಗಿದ್ದು, ಇವುಗಳ ಸ್ಥಾನದಲ್ಲಿ
ಔಪಚಾರಿಕವಾಗಿ ಮುಂದಿನ ಅಧಿವೇಶನದಲ್ಲಿ ವಿಧೇಯಕವಾಗಿ ಮಂಡಿಸಲಾಗುತ್ತದೆ.


ಸಂಪುಟ ಸಭೆಯ ತೀರ್ಮಾನಗಳು:-
ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳಕ್ಕೆ ಅನುಮೋದನೆ.
ಕರ್ನಾಟಕ ವಿದ್ಯುತ್‌ ನಿಗಮದಿಂದ ಜೋಗ ಅಭಿವೃದ್ದಿಗೆ ರೂ.120 ಕೋಟಿ.


)
)
> ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು ಅರಕೇರಾ ಗ್ರಾಮ ಪಂಚಾಯತಿ ಹೊಸ ತಾಲ್ಲೂಕು.
» ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯತ್‌ ಇನ್ನು ಮುಂದೆ ಪುರಸಭೆ

>


ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರ ಗ್ರಾಮ ಪಂಚಾಯತ್‌ ಇನ್ನು ಮುಂದೆ ಪಟ್ಟಣ
ಪಂಚಾಯತ್‌


V


ವಿಶ್ವಬ್ಯಾಂಕ್‌ ನೆರವಿನ ವಾಟರ್‌ ಶೆಡ್‌ ಕಾರ್ಯಕ್ರಮ 20 ಜಿಲ್ಲೆಗಳಲ್ಲಿ ಅನುಷ್ಠಾನ.


V


ಕೃಷಿ ಬೆಲೆ ಆಯೋಗ ಮುಂದುವರಿಕೆ.
» ಕರ್ನಾಟಕ ಲೋಕಾಯುಕ್ತರಿಗೆ ಅಪರ ನಿಬಂಧಕರ ನೇಮಕ.


ಆಧಾರ: ವಿಶ್ವವಾಣಿ, ದಿನಾಂಕ:04.09.2020


190


101. ಒಳಮೀಸಲಾತಿ- ಸದಾಶಿವ ವರದಿ ಜಾರಿಗೆ ಪಟ್ಟು


ಒಳೆಮೀಸಲಾತಿ ಕುರಿತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಮಳೆಗಾಲದ
ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಮಾದಿಗ ಸಮುದಾಯದ ಸರ್ವಪಕ್ಷಗಳ
ಜನಪ್ರತಿನಿಧಿಗಳು ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ವಿಧಾನಮಂಡಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಮಂಡಿಸಿ, ತಕ್ಷಣವೇ ಕೇಂದ್ರ
ಸರ್ಕಾರಕ್ಕೆ ಕಳುಹಿಸಿಕೊಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಸಭೆ ನಿರ್ಣಯಿಸಿತು. ಮಾಜಿ ಸಚಿವ
ಎಚ್‌. ಆಂಜನೇಯ, ಸರ್ವೋಚ್ಛ ನ್ಯಾಯಾಲಯದ ಅಭಿಪ್ರಾಯದಂತೆ ಪರಿಶಿಷ್ಠ ಜಾತಿಯ ಸಮುದಾಯಕ್ಕೆ
ಒಳಮೀಸಲು ಕೊಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ರಾಜ್ಯ ಸರ್ಕಾರ ಕೂಡಲೇ
ಕಾರ್ಯೋನ್ಮುಖವಾಗಬೇಕು. ಸಂವಿಧಾನದ ಪರಿಚ್ಛೇದ 34ಕ್ಕೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ
ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದ್ದಾರೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:11.09.2020
102. ಸೆಪ್ಟೆಂಬರ್‌ 21ರಿಂದ 9-12ನೇ ತರಗತಿ ಶಾಲೆಗಳು ಪುನರಾರಂಭ


ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೆಪ್ಲೆಂಬರ್‌ 21 ರಿಂದ ಹಂತಹಂತವಾಗಿ
ಶಾಲೆಗಳು ಮತ್ತು ಕಾಲೇಜುಗಳನ್ನು ಪುನರಾರಂಭಿಸಲು ಅನುಮತಿ ನೀಡಿದೆ. ದೇಶಾದ್ಯಂತ ಕೊರೋನಾ
ಸೋಂಕಿನಿಂದಾಗಿ ಶಾಲೆಗಳು ಮಾರ್ಚ್‌ನಿಂದ ಮುಚ್ಚಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸುರಕ್ಷಿತವಾಗಿ
ತರಗತಿಗಳಿಗೆ ದಾಖಲಾಗಲು ಮತ್ತು ಅವರ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಆರೋಗ್ಯ
ಸಚಿವಾಲಯವು ಮಾರ್ಗಸೂಚಿ ಪ್ರಕಟಿಸಿದೆ. 9 ಮತ್ತು 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ
ಸ್ವಯಂಪೇರಿತವಾಗಿ ಆನ್‌ಲೈನ್‌ ಮೂಲಕ ಅಥವಾ ನೇರವಾಗಿ ತರಗತಿಗಳಿಗೆ ಹಾಜರಾಗುವ ಮೂಲಕ ಶಿಕ್ಷಣವನ್ನು
ಮುಂದುವರಿಸುವ ಆಯ್ಕೆಗಳಿವೆ. ಶಾಲೆಗೆ ಬರುವ ಶಿಕ್ಷಕರು. ಇತರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು
ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಮಾಸ್ಟ್‌ * ಧರಿಸಬೇಕು. ವಿದ್ಯಾರ್ಥಿಗಳ ನಡುವೆ ಆರು
ಅಡಿ ಅಂತರವನ್ನು ಕಾಪಾಡಿಕೊಳ್ಳಬೇಕು. ಉಸಿರಾಟದ ಶಿಷ್ಟಾಚಾರಗಳನ್ನು ಅನಸರಸುವಿದ: ಆರೋಗ್ಯ ಸೇತು
ಲ್ಯಪ್‌ ಡೌನ್‌ಲೋಡ್‌ ಮಾಡುವುದು ಮತ್ತು ಉಗುಳುವುದು ನಿಷೇಧಿಸುವುದು ಸೇರಿದಂತೆ ಹಲವು
ಮಾರ್ಗಸೂಚಿಗಳನ್ನು ನೀಡಲಾಗಿದೆ. ಆನ್‌ಲೈನ್‌ ಮತ್ತು ದೂರಶಿಕ್ಷಣ ಮುಂದುವರಿಯುತ್ತದೆ. ಅದನ್ನು
ಪ್ರೋತ್ಲಾಹಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.


ಆಧಾರ:ವಿಶ್ವವಾಣಿ, ದಿನಾಂಕ:10.09.2020
103. ಮಕ್ಕಳ ಸ್ಥೆ ಸ್ನೇಹಿ ಶಾಲಾ ಪರಿಸರ ನಿರ್ಮಿಸಿ


ಶಿಕ್ಷಕರು ಕಳಂಕ ರಹಿತವಾಗಿ ಸಮಾನತೆ, ಸಹೋದರತೆ, ಸಹಬಾಳ್ವೆ ಹಾಗೂ ಸಾಮಾಜಿಕ

ನ್ಯಾಯವನ್ನು ಅಳವಡಿಸಿಕೊಂಡು ಮಕ್ಕಳ ಸ್ನೇಹಿ ಶಾಲಾ ಪರಿಸರ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ
ಎಸ್‌. ಯಡಿಯೂರಪ್ಪ ಅವರು ಶಾಲಾ ಶಿಕ್ಷಕರಿಗೆ ಹೇಳಿದ್ದಾರೆ.

ಸಂವಿಧಾನದ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸಹೋದರತ್ವ, ಸಹಬಾಳ್ವ, ಸಾಮಾಜಿಕ ನ್ಯಾಯಗಳನ್ನು
ಶಿಕ್ಷಕರು ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲೂ ಇಂತಹ ಮೌಲ್ಯಗಳನ್ನು ಬೆಳೆಸಲು ಶ್ರಮಿಸಬೇಕು ಎಂದಿದ್ದಾರೆ.
ಸಮಾಜದ ಅಭಿವೃದ್ಧಿ ಶಿಕ್ಷಣದ ಜೊತೆಗೆ ಬೆಳೆದುಕೊಂಡಿದೆ. ಸಮಾಜದಲ್ಲಿ ತಂದೆ ಹಾಗೂ ತಾಯಿ ನಂತರದ
ಸ್ಥಾನ ಗುರುವಿಗೆ ಮೀಸಲಾಗಿದೆ. ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ.
ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಲ್ಲಿ ಅದನ್ನು ಬೆಳೆಸಬೇಕು ಎಂದು ಹೇಳಿದ್ದಾರೆ.


ಶಿಕ್ಷಣವನ್ನು ನೀಡುವ ಗುರುವಿಗೆ ಸಮಾಜದ ಎಲ್ಲ ವರ್ಗಗಳು ಗೌರವ ನೀಡುತ್ತವೆ. ಮಾಜಿ ರಾಷ್ಟಪತಿ
ಎಸ್‌. ರಾದಾಕ ೈಷ್ಟನ್‌ ಅವರು ಒಬ್ಬ ಶ್ರೇಷ್ಠ ದಾರ್ಶನಿಕರಾಗಿ, ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸುವ ಹಂತದಲ್ಲೇ
ಉಪ ರಾಷ್ಟಪತಿ. ನಂತರ ರಾಷ್ಟ ಪಠಿ ಹುದ್ದೆ ಅಲಂಕರಿಸಿದ್ದರು. ಆ ಹಲ ಶಿಕ್ಷಕ ಹುದ್ದೆಯ ಸಾಧ್ಯತೆಗಳನ್ನು
ಜಗತ್ತಿಗೆ ತೆರೆದಿಟ್ಟಿದ್ದರು. ಶಿಕ್ಷಕ ಸ್ಥಾನಕ್ಕೆ ಇರುವ ಶ್ರೇಷ್ಠತೆ ಬೇರ್ಯಾವ ಸ್ಥಾನಕ್ಕೂ ಸಿಗದು ಎಂದು ಹೇಳಿದ್ದಾರೆ.


191


ಶಿಕ್ಷಣ ಇಲಾಖೆಯಲ್ಲಿ ಆಗಿರುವ ಅನೇಕ ಸುಧಾರಣೆಗಳಿಂದ ಇತ್ತೀಚೆಗೆ ಮಕ್ಕಳು ಖಾಸಗಿ ಶಾಲೆಗಳಿಂದ ಸರ್ಕಾರಿ
ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆ ಯಾವ ರೀತಿ ಅಭಿವೃದ್ದಿಯಾಗುತ್ತಿದೆ ಎಂಬುದನ್ನು ಸಾಬೀತು
ಮಾಡುತಿದೆ.


ಶಿಕ್ಷಕ ಸ್ನೇಹಿ ವರ್ಗಾವಣಾ ನೀತಿಯನ್ನು ಜಾರಿಗೆ ತಂದಿದ್ದು, ವರ್ಗಾವಣಾ ಪ್ರಕ್ರಿಯೆ ಜಾರಿಯಲ್ಲಿದೆ.
ಕೊರೋನಾ ಹಿನ್ನೆಲೆಯಲ್ಲಿ, ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಯಾವುದಾದರೂ ರೀತಿಯಲ್ಲಿ
ಸಹಾಯ ಮಾಡಬೇಕೆಂದು ಸರ್ಕಾರದ ಚಿಂತನೆಯಾಗಿದೆ. ಮೊದಲ ಹಂತದಲ್ಲಿ ಶಿಕ್ಷಕರಿಗೆ ವೇತನ
ದೊರೆಯುವಂತಾಗಲು ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆಗೆ ಆದೇಶ ನೀಡಿದ್ದೇವೆ. ದಾಖಲಾತಿ ಮೂಲಕ
ಸಂಗ್ರಹವಾದ ಹಣವನ್ನು ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಎರಡನೇ ಹಂತದಲ್ಲಿ
ಶಿಕ್ಷಕರಿಗೆ ಸರ್ಕಾರದಿಂದ ಯಾವ ರೀತಿಯ ಸಹಾಯ ನೀಡಬೇಕೆಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಸಚಿವ


ಸುರೇಶ್‌ ಕುಮಾರ್‌ ಹೇಳಿದ್ದಾರೆ.


ಆಧಾರ:ಉದಯವಾಣಿ, ದಿನಾ೦ಕ:12.09.2020
104. ರಾಜ್ಯದ ವಿದ್ಯಾಗಮ ಯೋಜನೆ ಮೇಲೆ ಇಡೀ ದೇಶದ ಗಮನ


ರಾಜ್ಯದಲ್ಲಿ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ರೂಪಿಸಿರುವ "ವಿದ್ಯಾಗಮ' ದೇಶದ ಗಮನ ಸೆಳೆದಿದೆ.
ಲಾಕ್‌ಡೌನ್‌ ಅವಧಿಯಲ್ಲಿ ಶಾಲಾ ಮಕ್ಕಳ ಕಲಿಕೆ, ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳ ಕಲಿಕೆಯ ನಿರಂತರತೆಗಾಗಿ
ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ್ದ ವಿದ್ಯಾಗಮ ಯೋಜನೆ ಕೇಂದ್ರ ಶಿಕ್ಷಣ ಇಲಾಖೆಯ ಮೆಚ್ಚುಗೆಗೆ
ಪಾತ್ರವಾಗಿದೆ. ಕೊರೋನಾ ಸಂದಿಗ್ನತೆಗೆ ಅನುಗುಣವಾಗಿ ಆಯಾ ರಾಜ್ಯಗಳ ಪರಿಸ್ಥಿತಿಗೆ ತಕ್ಕಂತೆ ವಿದ್ಧಾಗಮದ
ಕೆಲವು ಅಂಶಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಲಹೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.


ಕೊರೋನಾ ಮತ್ತು ಲಾಕ್‌ಡೌನ್‌ನಿಂದಾಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಶಾಲಾ ಮಕ್ಕಳ
ಕಲಿಕೆಯ ನಿರಂತರತೆಯೇ ದೊಡ್ಡ ಸವಾಲಾಗಿತ್ತು ಇಂತಹ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು
ನ್‌ಲೈನ್‌ ವ್ಯವಸ್ಥೆಯ ಮೊರೆ ಹೋದವು. ತಜ್ಞರ ಸಮಿತಿಯ ಸಲಹೆ ಹಾಗೂ ಶಿಫಾರಸ್ಸಿನಂತೆ ಸರ್ಕಾರಿ ಶಾಲೆಯ
ಮಕ್ಕಳ ಕಲಿಕೆಯ ನಿರಂತರತೆಗಾಗಿ ವೈಜ್ಞಾನಿಕ ವ್ಯವಸ್ಥೆಯ ವಿದ್ಯಾಗಮ ಹುಟ್ಟಿಕೊಂಡಿತು. ಮಕ್ಕಳು ಇರುವಲ್ಲಿಗೆ
ಶಿಕ್ಷಕರು ಹೋಗಿ ಪಾಠ ಕಲಿಸುತ್ತಿದ್ದಾರೆ. ವಿದ್ಯಾಗಮದಿಂದ ಆಗುತ್ತಿರುವ ಅನುಕೂಲ ಮತ್ತು ಇಂತಹ ಸಂದಿಗ್ದ
ಪರಿಸ್ಥಿತಿಯಲ್ಲಿ ಹೇಗೆ ವಿದ್ಯಾಗಮವನ್ನು ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನ ಮಾಡಿದ್ದೇವೆ ಹಾಗೂ ಕಲಿಕೆಯಲ್ಲಿ
ಮಕ್ಕಳ ಉತ್ಸಾಹ ಹೇಗಿದೆ ಮತ್ತು ಅದರ ನಿರ್ವಹಣಾ ವ್ಯವಸ್ಥೆ ಇತ್ಯಾದಿ ಅಂಶಗಳ ವಿಸ್ತೃತ ವರದಿಯನ್ನು ಕೇಂದಕ್ಕೆ



ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದನ್ನು ದೇಶಾದ್ಯಂತ


[e) (8)
ಅನುಷ್ಠಾನಕ್ಕೆ ತರಬಹುದು ಎಂದು ಮಾಹಿತಿ ನೀಡಿದ್ದಾರೆ.


[o)


ಆಧಾರ:ಉದಯವಾಣಿ, ದಿನಾ೦ಕ:14.09.2020
105. ಉಪನ್ಯಾಸಕರ ವರ್ಗಾವಣೆಗೆ ಹೊಸ ನಿಯಮ


ಜಾರಿಯಲ್ಲಿರುವ ಉಪನ್ಯಾಸಕರ ವರ್ಗಾವಣೆ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮೂಲಕ ಬದಲಾವಣೆ
ತರಲಾಗುವುದು ಹಾಗೂ “ಈಗಿರುವ 2016ರ ವರ್ಗಾವಣೆ ಕಾಯಿದೆಯಲ್ಲಿ ಹಲವಾರು ದೋಷಗಳಿದ್ದ ಕಾರಣ
ಇಡೀ ಕಾಯಿದೆಯನ್ನೇ ವಾಪಸ್ಸು ಪಡೆದು ಹೊಸ ನಿಯಮಗಳನ್ನು ಸರಳವಾಗಿ ರೂಪಿಸಲಾಗುವುದು.
ವಿಶ್ವವಿದ್ಯಾಲಯಗಳಲ್ಲಿನ ಆಡಳಿತಕ್ಕೆ ಮತ್ತಷ್ಟು ಚುರುಕು ನೀಡುವ ಉದ್ದೇಶದಿಂದ ಎಲ್ಲ ವಿವಿಗಳ ರಿಜಿಸ್ಟಾರ್‌
ಹುದ್ದೆಗಳಿಗೆ ಐಎಎಸ್‌ ಅಥವಾ i ಅಧಿಕಾರಿಗಳನ್ನು ನೇಮಕ "ಮಾಡಲು ಸುಗೀವಾಜ್ಞೆ ತರಲಾಗಿದ್ದು,
ಅಧಿವೇಶನದಲ್ಲಿಯೇ ಒಪ್ಪಿಗೆ ಪಡೆಯಲಾಗುವುದು” ಸ ಉಪ ಮುಖ್ಯಮಂತ್ರಿ ಡಾ: ಸಿಎನ್‌.
ಅಶ್ವತ್ಥನಾರಾಯಣ ತಿಳಿಸಿದ್ದಾರೆ.


ಐಎಎಸ್‌ ಅಥವಾ ಕೆಎಎಸ್‌ ಅಧಿಕಾರಿಗಳನ್ನು ತರುವುದು ಉತ್ತಮ ಯೋಜನೆ. ಆದರೆ, ಐಪಿಎಸ್‌ ಮತ್ತು
ಐಎಫ್‌ಎಸ್‌ ಅಧಿಕಾರಿಗಳನ್ನು ನೇಮಕ ಮಾಡಬೇಡಿ. ವಿವಿಗಳಲ್ಲಿ ಅಧ್ಯಾಪಕರಿಂದ ಹಿಡಿದು ಎಲ್ಲ ಹಂತಗಳ
ನೇಮಕಕ್ಕೆ ಒಂದು ಕೇಂದ್ರೀಕೃತ ಸೆಲ್‌ ಮಾಡಿದಾಗ ಎಲ್ಲ ವಿವಿಗಳಲ್ಲೂ ರಾಜಕಾರಣಿಗಳ ಹಸಕ್ಷೇಪ ಬಹುತೇಕ


192


ನಿಲ್ಲುತ್ತದೆ ಹಾಗೂ ಕೋವಿಡ್‌ ಹಿನ್ನೆಲೆಯಲ್ಲಿ ಡಿಜಿಟಲ್‌ ಕಲಿಕಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಅದು
ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಪರಿಷತ್‌ ಸದಸ್ಯರಾದ ವೈ.ಎ. ನಾರಾಯಣ ಸ್ಥಾಮಿ ತಿಳಿಸಿದರು.


ಖಾಸಗಿ ಶಾಲೆಗಳ ನವೀಕರಣ, ಕೊರೋನಾ ವೇಳೆಯ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳ
ಸಭೆಯನ್ನು ನಡೆಸಿ, ಅಗತ್ಯ ವಿನಾಯಿತಿ ನೀಡಲು ಸೂಚಿಸಲಾಗುವುದು ಎಂದು ಸಚಿವ ಎಸ್‌. ಸುರೇಶ್‌ಕುಮಾರ್‌
ತಿಳಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಮಸ್ಯೆಗಳ ಅರಿವಿದ್ದು, ಶೈಕ್ಷಣಿಕ ಸಾಲಿಗೆ
ಸಂಬಂಧಿಸಿದ ಅನುಮತಿಗಳನ್ನು ನೀಡುವಾಗ ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಅನಿವಾರ್ಯತೆ
ಇದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಸಂಬಂಧ ಪ್ರಾಥಮಿಕ ಹಾಗೂ ಪೌಢ ಶಿಕ್ಷಣಂ
ಇಲಾಖೆ ಗಟ್ಟಿಯಾದ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದೆ ಮಧ್ಯಾಹ್ನದ ಬಿಸಿಯೂಟ ನೌಕರರದ್ದೂ
ಸಮಸ್ಯೆಗಳಿವೆ. 15 ದಿನಗಳ ಹಿಂದೆಯಷ್ಟೇ 3-4 ತಿಂಗಳ (ಜೂನ್‌- ಆಗಸ್ಟ್‌) ರೂ. 93.46 ಕೋಟಿ
ಸಂಭಾವನೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಕನಿಷ್ಠ ವೇತನ ಸೇರಿದಂತೆ ಹಲವು ಸಮಸ್ಯೆ ಬಗೆಹರಿಸುವ
ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.


ಆಧಾರ:ವಿಜಯ ಕರ್ನಾಟಕ, ದಿನಾಂಕ:17.09.2020
106. ಉನ್ನತ ಶಿಕ್ಷಣ ಸುಧಾರಣೆಗೆ ಮಹತ್ವದ ಚರ್ಚೆ


ವಿಧಾನಮಂಡಲ ಕಲಾಪ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಉನ್ನತ ಶಿಕ್ಷಣ ಸಚಿವರಾದ ಉಪ
ಮುಖ್ಯಮಂತ್ರಿ ಡಾ.ಸಿ.ಎನ್‌.ಆಶ್ವತ್ನನಾರಾಯಣ ಅವರು ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ
ಜಾರಿಗೆ ತಂದಿರುವ ವಿವಿಧ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.


ಕೋವಿಡ್‌-19 ಬರುವ ಮುನ್ನ ಹಾಗೂ ಕೋವಿಡ್‌-19 ನಂತರ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ

ನ್‌ಲೈನ್‌ ಅಫಿಲಿಯೇಷನ್‌, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆದ್ಯತೆ ಸೇರಿ ಎಲ್ಲ ಕಾರ್ಯಕಮಗಳ ಬಗ್ಗೆ

ಹ ಸದಸ್ಯರಿಗೆ ವಿವರ ನೀಡಿದರು. ಕೋವಿಡ್‌ ಹಿನ್ನೆಲೆಯಲ್ಲಿ ಪಟ್‌ ಲರ್ನಿಂಗ್‌ ವ್ಯವಸ್ಥೆಯನ್ನು ಜಾರಿಗೆ
ತರಲಾಗಿದ್ದು ಅಟಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದಿದ್ದಾರೆ.


ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಉಪನ್ಯಾಸಕರ ವರ್ಗಾವಣೆಯ ನಿಯಮಗಳನ್ನು
ಬದಲಿಸಲಾಗುವುದು. ಈಗಿರುವ 2016ರ ವರ್ಗಾವಣೆ ಕಾಯ್ದೆಯನ್ನು ವಾಪಸ್ಸು ಪಡೆದು ಸೂಕ್ತವಾದ
ತಿದ್ದುಪಡಿಗಳೂಂದಿಗೆ ಹೊಸ ನಿಯಮಗಳನ್ನು ತರಲಾಗುವುದು. ಕಾಯ್ದೆಯು ಅತ್ಯಂತ ಪರಿಣಾಮಕಾರಿ ಹಾಗೂ
ಪರಿಪೂರ್ಣವಾಗಿರಲಿದೆ. ವಿಶ್ವವಿದ್ಯಾಲಯಗಳಲ್ಲಿನ ಆಡಳಿತಕ್ಕೆ ಮತ್ತಷ್ಟು ಚುರುಕು ನೀಡುವ ಉದ್ದೇಶದಿಂದ ಎಲ್ಲ
ವವಿಗಳ ಕುಲಸಚಿವ ಅಧಿಕಾರಿಗಳನ್ನು ನೇಮಕ ಮಾಡಲು ಸುಗೀವಾಜ್ಞೆ ತರಲಾಗಿದೆ. ಅದಕ್ಕೆ ಅಧಿವೇಶನದಲ್ಲಿಯೇ
ಒಪ್ಪಿಗೆ ಪಡೆಯಲಾಗುವುದು ಎಂದಿದ್ದಾರೆ.


ಹೊಸ ಖಾಸಗಿ ಶಾಲೆಗಳ ನವೀಕರಣ: ಖಾಸಗಿ ಶಾಲೆಗಳ ನೋಂದಣಿ ನವೀಕರಣಕ್ಕೆ ಸಂಬಂಧಿಸಿದಂತೆ
ಕೊರೋನಾ ಸಂದರ್ಭದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಸಭೆ ನಡೆಸಿ ಅಗತ್ಯ ವಿನಾಯಿತಿ
ನೀಡಲು ಸೂಚಿಸಲಾಗುವುದು ಎಂದು ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ. ಶಿಕ್ಷಣ ಇಲಾಖೆಗೆ
ಸಂಬಂಧಿಸಿದಂತೆ, ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಅನುಮತಿಗಳನ್ನು ನೀಡುವಾಗ ನಿಯಮಾವಳಿಗಳನ್ನು
ಸರಳೀಕರಣಗೊಳಿಸುವ ಅನಿವಾರ್ಯತೆಯಿದೆ.


ಕೋವಿಡ್‌ ಹಿನ್ನೆಲೆಯಲ್ಲಿ ಸಾಮಾನ್ಯ ಸಮಸ್ಯೆಗಳಿಗೆ ಒಳಗಾದ ಕಾರಣ ಪಾಲಕರಿಂದ ಶುಲ್ಕ ಸಂಗಹಕ್ಕೆ
ಒತ್ತಾಯ ಮಾಡಬಾರದೆಂದು ಖಾಸಗಿ ಶಿಕಣ ಸಂಸ್ಥೆಗಳಿಗೆ ಆದೇಶ ನೀಡಿದ್ದೇವೆ. ಬಜೆಟ್‌ ಶಾಲೆಗಳು
ತೊಂದರೆಗೀಡಾದ್ದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ವೇತನಕ್ಕೆ ಸಮಸ್ಯೆಯಾಗಿರುವ
ಅಂಶ ಪರಿಗಣಿಸಿ, 15 ದಿನಗಳ ಹಿಂದೆ ಶುಲ್ಕ ವಸೂಲಾತಿಗೆ ಅನುಮತಿ ನೀಡಲಾಗಿದೆ ಎಂದಿದ್ದಾರೆ.


ಆಧಾರ:ಉದಯವಾಣಿ, ದಿನಾಂಕ:17.09.2020


193


107. ವಸತಿ ಶಾಲೆ ಬೋಧಕರಿಗೆ ಶೇ.10ರಷ್ಟು ವಿಶೇಷ ಭತ್ಯೆ


ರಾಜ್ಯದ ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬೋಧಕ ಸಿಬ್ಬಂದಿಗಳಿಗೆ ಶೇ.10ರಷ್ಟು ವಿಶೇಷ ಭತ್ಯೆ
ನೀಡಲು ಸರ್ಕಾರ ಉದ್ದೇಶಿಸಿದೆ.


ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಭೆ ನಡೆಸಿ, ಕರ್ನಾಟಕ ವಸತಿ ಶಿಕ್ಷಣ
ಸಂಘಗಳ ಸಂಘದ ಅಧೀನ ವಸತಿ ಶಾಲೆಗಳ ಬೋಧಕ ಸಿಬ್ಬಂದಿಗಳಿಗೆ ಹಿರಿಯ ಐಎಎಸ್‌ ಅಧಿಕಾರಿ ಕುಮಾರ
ನಾಯಕ್‌ ನೇತೃತ್ವದ ಸಮಿತಿಯ ಶಿಫಾರಸ್ಸಿನಂತೆ ಹೆಚ್ಚುವರಿ ವೇತನ ಬಡ್ತಿಯನ್ನು ಹಾಗೂ ವಸತಿ ಶಾಲೆಗಳಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮೂಲ ವೇತನದ ಶೇ.10ರಷ್ಟು ವಿಶೇಷ ಭತ್ಯೆಯನ್ನು ಮಂಜೂರು
ಮಾಡಲಾಗುವುದು ಎಂದಿದ್ದಾರೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:23.09.2020
108. ಶಾಲೆ ಆರಂಭಕ್ಕೆ ಆತುರವಿಲ್ಲ : ಸುರೇಶ್‌ ಕುಮಾರ್‌
ರಾಜ್ಯದಲ್ಲಿ ಶಾಲಾ ಆರಂಭಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಆತುರ ಇಲ್ಲ ಎಂದು
ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.


ಶಾಲೆ ಪುನರ್‌ ಆರಂಭಿಸಲು ಸರ್ಕಾರ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ಪಾಲಕರು, ಶಿಕ್ಷಣ
ತಜ್ಞರು ಮತ್ತಿತರರ ಜೊತೆಗೆ ಚರ್ಚಿಸಿದ ಬಳಿಕವೇ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಶಾಲೆ
ಪುನರ್‌ ಆರಂಭಿಸುವ ಕುರಿತು ಯಾವುದೇ ವದಂತಿ, ಗೊಂದಲಗಳಿಗೆ ಅವಕಾಶವಿಲ್ಲ. ಕೊರೋನಾ ಮಹಾಮಾರಿ
ಹೆಚ್ಚುತ್ತಿರುವ ಕಾರಣ ಮಕ್ಕಳ ಆರೋಗ್ಯವು ಮುಖ್ಯ. ಜನ ಈ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ
ಒಳಗಾಗಬಾರದು ಎಂದು ಸಚಿವರು ತಿಳಿಸಿದರು.


ಆಧಾರ:ಕನ್ನಡ ಪ್ರಭ, ದಿನಾಂಕ:30.09.2020


194


ಭಾಗ-5
ರಾಜ್ಯ ನೆಲ-ಜಲ-ಭಾಷೆ
1. ಜೇವರ್ಗಿ: ಕೊಚ್ಚಿಹೋದ ಸೇತುವೆ


ರಾಜ್ಯದ ಕರಾವಳಿ ಪ್ರದೇಶ ಸೇರಿ ಹಲವು ಭಾಗಗಳಲ್ಲಿ ಧಾರಾಕಾರ ಮಳ ಆಗಿದೆ. ಕಲಬುರ್ಗಿ ಜಿಲ್ಲೆಯ
ಜೇವರ್ಗಿಯ ಹೊರವಲಯದಲ್ಲಿ ಸೇತುವೆ ಕೊಚ್ಚಿಹೋಗಿದೆ. ತಡರಾತ್ರಿ ಸುರಿದ ಧಾರಾಕಾರ ಮಳಯಿಂದಾಗಿ
ಜೇವರ್ಗಿ ಹೊರವಲಯದ ಹಳ್ಳದ ಸೇತುವೆ ಕೊಚ್ಚಿಹೋಗಿದೆ. ಇದರಿಂದ ಎಸೆಸೆಲ್ಲಿ ವಿದ್ಯಾರ್ಥಿಗಳು ಪರೀಕ್ಷಾ
ಕೇಂದಕ್ಕೆ ತೆರಳಲು ಪರದಾಡುವಂತಾಯಿತು.


ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಗೆ ತೆರಳುವ ರಸ್ತೆಯಲ್ಲಿಯ ಹಳ್ಳದ ಸೇತುವೆ ಮುಕ್ಕಾಲು
ಭಾಗ ಕೊಚ್ಚಿಹೋಗಿದ್ದು, ಶಾಲೆಯ ಆವರಣಗೋಡೆ ರಾತ್ರಿಯೇ ಕುಸಿದಿತ್ತು ಈ ಶಾಲೆಯಲ್ಲೇ ಪರೀಕ್ಷಾ ಕೇಂದ್ರ
ಇದೆ. ಅಗ್ನಿಶಾಮಕ ದಳ ಮತ್ತು ಪುರಸಭೆಯವರು ಹಳ್ಳಕ್ಕೆ ಅಡ್ಡಲಾಗಿ ಏಣಿ ಇಟ್ಟು ವಿದ್ಯಾರ್ಥಿಗಳನ್ನು ಪರೀಕ್ಷಾ
ಕೇಂದಕ್ಕೆ ತಲುಪಿಸಿದರು.


ಬೀದರ್‌ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಎರಡು ದಿನಗಳಿಂದ ಪಟ್ಟಣ
ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ನಾಲೆಗಳು ತುಂಬಿ ಹರಿಯುತ್ತಿವೆ. ಧಾರವಾಡ, ಉತ್ತರ
ಕನ್ನಡ, ಬೆಳಗಾವಿ, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ
ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಕೊಡಗು, ಚಿಕ್ಕಮಗಳೂರಿನಲ್ಲೂ ಸಾಧಾರಣ ಮಳೆಯಾಗಿದೆ.


ಆಧಾರ:ಪ್ರಜಾವಾಣಿ, ದಿನಾಂಕ:03.07.2020
2. ಮಲೆನಾಡಲ್ಲಿ ಭಾರಿ ಮಳೆ, ಬಯಲು ಸೀಮೆಗೆ ನೀರಿಲ್ಲ


ರಾಜ್ಯದಲ್ಲಿ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಅಬ್ದರಿಸುತ್ತಿದ್ದರೆ ಬಯಲು ಸೀಮೆ ಜಿಲ್ಲೆಗಳಲ್ಲಿ
ನೀರಿಲ್ಲದೆ ಶೇ.50ರಷ್ಟು ಬಿತ್ತನೆ ಕೂಡ ಆಗಿಲ್ಲ. ಜೂನ್‌ ಕೊನೆಯಿಂದ ಇಲ್ಲಿಯ ತನಕ ದಾವಣಗೆರೆ ಜಿಲ್ಲೆಯಲ್ಲಿ
ಶೇ.24 ರಷ್ಟು ಮಳೆ ಕೊರತೆಯಾಗಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಇನ್ನೂ ಶೇ.40ರಷ್ಟು ಬಿತ್ತನೆ ಆಗಬೇಕಿದೆ.
ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಹತ್ತಿ ಇನ್ನಿತರ ಬೆಳೆಗಳ ಬಿತ್ತನೆ ಅವಧಿ
ಮುಗಿಯಲು ದಿನಗಣನೆ ಆರಂಭ ಆಗಿದೆ. ಮುಂಗಾರು ಪೂರ್ವ ಉತ್ತಮ ಮಳೆ ಸುರಿಯುವುದರ ಜೊತೆ ಕಳದ
ವಾರ ಬಿದ್ದ ಮಳೆಯಿಂದಾಗಿ ಜಿಲ್ಲೆಯಲ್ಲಿ ಈಗ ನೀರಾವರಿ ಭತ್ತ ಸೇರಿ 2,44,294 ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ
1,03,342 ಮಾತ್ರ ಬಿತ್ತನೆ ಆಗಿದೆ. ಇನ್ನುಳಿದ ಪ್ರದೇಶದಲ್ಲಿ ಬಿತ್ತನೆಗೆ ರೈತರು ಮಳೆ ನಿರೀಕ್ಷೆಯಲ್ಲಿದ್ದರೆ. ಜೊತೆಗೆ
ಬಿತ್ತಿದ ಬೆಳೆಗಳು ಅದರಲ್ಲೂ ಮೆಕ್ಕೆಜೋಳ ತೇವಾಂಶವಿಲ್ಲದೆ ಬಾಡಿ ಎಲೆಗಳು ಸುರುಳಿ ಸುತ್ತುತ್ತಿವೆ. ಈಗ ತುರ್ತಾಗಿ
ಮಳೆಯ ಅಗತ್ಯವಿದ್ದು ಕೆಲ ಕಡೆ ರೈತರು ಆಗಸದತ್ತ ಮುಖ ಮಾಡಿದ್ದಾರೆ.


ಚಿತ್ರದುರ್ಗ ಜಿಲ್ಲೆಯಲ್ಲಿ 3.54 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ 89 ಸಾವಿರ ಹೆಕ್ಟೇರ್‌ ಬಿತ್ತನೆಯಗಿದ್ದು,
ಸರಾಸರಿ ಶೇ.25 ರಷ್ಟು ಮಾತ್ರ ಬಿತ್ತನೆ ಮುಗಿದಿದೆ. ಚಿತ್ರದುರ್ಗ ಹೊಳಲ್ಕೆರೆ ತಾಲ್ಲೂಕಿನಲ್ಲಿ ಶೇ.45ರಷ್ಟು
ಮೆಕ್ಕೆಜೋಳ ಬಿತ್ತನೆಯಾಗಿದೆ. ಮೊಳಕಾಲ್ಲೂರು ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಬಿತ್ತನೆ ಚುರುಕಾಗಿದೆ.
ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ನಾನಾ ಕಡೆ ಶೇಂಗಾ ಬಿತ್ತನೆ ಕೆಲಸ ಮುನ್ನಡೆದಿದೆ. ಶೇಂಗಾ ಬಿತ್ತನೆಗೆ
ಜುಲೈ.15ರ ವರೆಗೂ ಕಾಲಾವಕಾಶ ಇದ್ದು, ಇನ್ನು ವೇಗ ಪಡೆದುಕೊಳ್ಗಲಿದೆ. ರಾಜ್ಯದಲ್ಲೇ ಅತಿ ಹೆಚ್ಚು ಶೇಂಗಾ
ಬೆಳೆಯುವ ಚಳ್ಳಕೆರೆಯಲ್ಲಿ ಜೂನ್‌ ಆರಂಭದಲ್ಲಿ ಬಿತ್ತನೆ ಮಾಡಿದ ಶೇಂಗಾಕ್ಕೆ ತಿಂಗಳು ತುಂಬಿದ್ದು, ಎಡೆಕುಂಟಿ
ಹೊಡೆದಿರುವುದರಿಂದ ಗಿಡಗಳು ಹೂವು ಅರಳಿ ಬೇರಿನಲ್ಲಿ ಬೀಜ ಬಲಿಯುತ್ತಿದೆ. ಅಲ್ಲಿಯೂ ಬಹಳಷ್ಟು ರೈತರು
ಇನ್ನು ಬಿತ್ತನೆಗಾಗಿ ಮಳಯನ್ನು ಎದುರು ನೋಡುತ್ತಿದ್ದಾರೆ.


ಆಧಾರ:ವಿಜಯ ಕರ್ನಾಟಕ, ದಿನಾ೦ಕ:09.07.2020


195


3. ರಿಯಲ್‌ ಎಸ್ಟೇಟ್‌: ದಶಕದ ದಾಖಲೆ ಕುಸಿತ


ದೇಶದ ಆಂತರಿಕ ವೃದ್ದಿದರದಲ್ಲಿ ಹೆಚ್ಚು ಪಾಲು ಹೊಂದಿರುವ ರಿಯಲ್‌ ಎಸ್ಟೇಟ್‌ ಉದ್ಯಮ ಕೊರೋನಾ
ಹಾವಳಿಯಿಂದ ಅಕ್ಷರಶಃ ಮಕಾಡೆ ಮಲಗಿದ್ದು, ರಾಜಧಾನಿಯ ವಸತಿ ಸಮುಚ್ಛಯಗಳ ಮಾರಾಟದಲ್ಲಿ ಶೇ.57
ಖೋತಾ ಆಗಿದೆ. ದಶಕದಲ್ಲಿ ಕಂಡ ದಾಖಲೆಯ ಕುಸಿತ ಇದಾಗಿದೆ. 2020ರ ಮೊದಲಾರ್ಧದಲ್ಲಿ 12,177
ಮನೆಗಳು ಮಾರಾಟ ಆಗಿದೆ. 2019ರ ಇದೇ ಅವಧಿಯಲ್ಲಿ 28,225 ಮನೆಗಳು ಮಾರಾಟ ಆಗಿದ್ದವು. ಮಧ್ಯಮ
ವರ್ಗಕ್ಕೆ ಹೆಚ್ಚು ಹತ್ತಿರವಾದ, ಕೈಗೆಟುಕುವ ಮನೆಗಳ ಮಾರಾಟದಲ್ಲಿ ಕೂಡ ಗಣನೀಯ ಪ್ರಮಾಣದಲ್ಲಿ ಕುಸಿತ
ಕಂಡುಬಂದಿದೆ. ಇದಕ್ಕೆ ಕೊರೋನಾ ವೈರಸ್‌ ಹಾವಳಿ ಪ್ರಮುಖ ಕಾರಣವಾಗಿದೆ. ಎಲ್ಲ ವರ್ಗಕ್ಕೂ ಇದರ
ಪರಿಣಾಮ ಬೀರಿದೆ.


2020ರ ಮೊದಲಾರ್ಧದಲ್ಲಿ ಭಾರತೀಯ ರಿಯಲ್‌ ಎಸ್ಟೇಟ್‌ ಉದ್ಯಮದ ಸ್ಥಿತಿಗತಿ ಕುರಿತು ನೈಟ್‌
ಫ್ರ್ಯಾಂಕ್‌ ಪೈ.ಲಿ. ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ವೆಬಿನಾರ್‌ನಲ್ಲಿ ಸಂಸ್ಥೆಯ
ಹಿರಿಯ ನಿರ್ದೇಶಕ ಶಾಂತನು ಮಜೂಂದಾರ್‌ ವರದಿಯ ಮೇಲೆ ಬೆಳಕು ಚೆಲ್ಲಿದರು. "ರಿಯಲ್‌ ಎಸ್ಟೇಟ್‌
ಉದ್ಯಮ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶದ ಟಾಪ್‌ ಎಂಟು ನಗರಗಳಲ್ಲಿ ಬೆಂಗಳೂರು
ಒಂದಾಗಿದ್ದು, ಮನೆಗಳ ಮಾರಾಟದಲ್ಲಿ ಟಾಪ್‌ ನಾಲ್ಕನೇ ನಗರವಾಗಿದೆ. 2018 ಮತ್ತು 2019ರಲ್ಲಿ ಕ್ರಮವಾಗಿ
ಶೇ.27 ಹಾಗೂ ಶೇ.10ರಷ್ಟು ಮಾರಾಟ ಆಗಿತ್ತು ಆದರೆ, ಕೊರೋನಾ ಅವಧಿಯಲ್ಲಿ ಜಾರಿಗೊಳಿಸಿದ ಲಾಕ್‌ಡೌನ್‌


ಪರಿಣಾಮ ಮಾರುಕಟ್ಟೆಯು ಪಾತಾಳಕ್ಕೆ ಕುಸಿದಿದ್ದು, ಉದ್ಯಮದಲ್ಲಿ ತಲ್ಲಣ ಸೃಷ್ಟಿಸಿದೆ ಎಂದು ಹೇಳಿದರು.


2020ರ ಆರಂಭದಲ್ಲಿ ಅಂದರೆ ಜನವರಿ ಮತ್ತು ಫೆಬ್ರವರಿಯಲ್ಲಿ ಉದ್ಯಮವು ಉತ್ತಮ ಬೆಳವಣಿಗೆ
ಕಾಣುವ ಎಲ್ಲ ಸೂಚನೆಗಳು ಇದ್ದವು. ಆದರೆ, ಕೊರೋನಾ ವೈರಸ್‌ ಪರಿಣಾಮ ಜಾರಿಯಾದ ಸುಮಾರು 68
ದಿನಗಳ ರಾಷ್ಟ್ರಮಟ್ಟದ ಲಾಕ್‌ಡೌನ್‌ ಈ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ಕಳೆದ ವರ್ಷಕ್ಕೆ ಹೋಲಿಸಿದರೆ,
ಮಾರಾಟವಾಗದ ಮನೆಗಳ ಪ್ರಮಾಣ ಶೇ.10ರಷ್ಟು ಕಡಿಮೆಯಾಗಿದೆ. ಹೊಸ ಮನೆಗಳ ನಿರ್ಮಾಣದಲ್ಲಿ
ಶೇ.48ರಷ್ಟು ಇಳಿಕೆ ಕಂಡುಬಂದಿದೆ. ಇನ್ನು ಕೈಗೆಟಕುವ ಮನೆಗಳ ಮಾರಾಟದಲ್ಲೂ ಶೇ.57ರಷ್ಟು ಕುಸಿತ ಆಗಿದೆ
ಎಂದು ಮಾಹಿತಿ ನೀಡಿದರು.


ಮನೆಗಳ ನಿರ್ಮಾಣ ವಾರ್ಷಿಕವಾಗಿ ಲೆಕ್ಕಹಾಕಿದರೆ, ಶೇ. 83ರಷ್ಟು ಕುಸಿತವಾಗಿದೆ. 2020ರ ಮೊದಲ
ಮತ್ತು ಎರಡನೇ ತ್ರೈಮಾಸಿಕದಲ್ಲಿ ಕ್ರಮವಾಗಿ 8,963 ಹಾಗೂ 1,843 ಮನೆಗಳು ಲೋಕಾರ್ಪಣೆಗೊಂಡಿವೆ.
ಮಾರಾಟ ಕ್ರಮವಾಗಿ 8,963 ಹಾಗೂ 3,484 ಇದೆ. 2019ರ ಇದೇ ಅವಧಿಯಲ್ಲಿ ಕ್ರಮವಾಗಿ 10,351 ಹಾಗೂ
10,543 ಮನೆಗಳು ಲೋಕಾರ್ಪಣೆಗೊಂಡಿದ್ದವು. ಹಾಗೆಯೇ 14,927 ಮತ್ತು 13,298 ಮನೆಗಳು ಮಾರಾಟ
ಆಗಿದ್ದವು.


ಇನ್ನು ಬೆಂಗಳೂರು ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ಹೆಚ್ಚು ಬಿಸಿ ತಟ್ಟಿದ್ದು, ಕ್ರಮವಾಗಿ ಶೇ.70 ಮತ್ತು
ಶೇ.66ರಷ್ಟು ಇಳಿಕೆಯಾಗಿದೆ. ಅದೇ ರೀತಿ ಮಾರಾಟವಾಗದ ಮನೆಗಳು ದಕ್ಷಿಣ, ಉತ್ತರ ಮತ್ತು ಕೇಂದದಲ್ಲಿ
ಕ್ರಮವಾಗಿ ಶೇ.15 ಮತ್ತು ತಲಾ ಶೇ.12ರಷ್ಟಿದೆ. ಇದೆಲ್ಲದರ ಪರಿಣಾಮ ಉದ್ಯಮದ ವಹಿವಾಟಿನಲ್ಲಿ ಶೇ.42ರಷ್ಟು
ಇಳಿಕೆಯಾಗಿದೆ. ಕೊರೋನಾ ಸೃಷ್ಟಿಸಿದ ಮಹಾವಲಸೆಯು ಉದ್ಯೋಗದ ಮೇಲೂ ಪ್ರತಿಕೂಲ ಪರಿಣಾಮ
ಬೀರಿದೆ. ಕಾರ್ಮಿಕರ ಬೇಡಿಕೆಯಲ್ಲಿ ಶೇ.6.5 ಏರಿಕೆಯಾಗಿದೆ. 2019ರ ಮೊದಲಾರ್ಧದಲ್ಲಿ ಶೇ.4.1ರಷ್ನಿತ್ತು ಎಂದು


ಶಾಂತನು ಮಜೂಂದಾರ್‌ ವಿವರಿಸಿದರು.
ಆಧಾರ:ಉದಯವಾಣಿ, ದಿನಾ೦ಕ:11.07.2020
4. ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ
[2
ಪ್ರಾಣಿ ಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾಣಿ
ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.
ಸುಪ್ರಿಂಕೋರ್ಟ್‌ ಆದೇಶದಂತೆ ಮಂಡಳಿ ಸ್ಥಾಪನೆಯಾಗಿದೆ. ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ


ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಿದೆ. ಪಶು, ಪಕ್ಷಿಗಳ ಸಂರಕ್ಷಣೆಗಾಗಿ
ಅಸಿತ್ತದಲ್ಲಿರುವ ಪ್ರಾಣಿ ಕಲ್ಕಾಣ ಸಂಘಗಳು, ನಿಕಾಯಗಳು, ಸಂಸ್ಥೆಗಳಿಗೆ ಮಾನ್ಯತೆ ನೀಡುವುದು. ಪ್ರಾಣಿಗಳಿಗಾಗಿ


196


ಶೆಡ್‌ಗಳು, ನೀರಿನ ತೊಟ್ಟಿಗಳ ನಿರ್ಮಾಣಕ್ಕೆ ಪ್ರೋತ್ಸಾಹ, ಪ್ರಾಣಿಗಳ ರಕ್ಷಣೆ ಕುರಿತು ಜನರಲ್ಲಿ ಅರಿವು
ಮೂಡಿಸುವುದು, ಪ್ರಾಣಿಗಳ ಸಾಗಣೆ ಸಂದರ್ಭದಲ್ಲಿ ಅನವಶ್ಯಕವಾಗಿ ನೋವು, ಯಾತನೆ ತಡೆಗಟ್ಟಲು ಮಂಡಳಿ
ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ. ಜಾನುವಾರುಗಳ ಆರೋಗ್ಯ ಕಾಪಾಡಲು 16 ಜಿಲ್ಲೆಗಳಲ್ಲಿ ಸುಸಜ್ಜಿತ ಪಶು ಚಿಕಿತ್ಸಾ
ವಾಹನ (ಅಂಬುಲೆನ್ಸ್‌) ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.


ಆಧಾರ:ಉದಯವಾಣಿ, ದಿನಾ೦ಕ:11.07.2020
4. ಕಲ್ಯಾಣ ಕರ್ನಾಟಕದಲ್ಲಿ ಭಾರೀ ಮಳೆ


ಕಳೆದ ಕೆಲದಿನಗಳಿಂದ ದುರ್ಬಲವಾಗಿದ್ದ ಮುಂಗಾರು ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ
ಪ್ರಬಲವಾಗಿದ್ದು, ಕಲ್ಯಾಣ ಕರ್ನಾಟಕ ಕಲಬುರಗಿ, ಯಾದಗಿರಿ, ಬೀದರ್‌ ಜಿಲ್ಲೆಗಳಲ್ಲಿ ಮೂರು ಜಿಲ್ಲೆಗಳಲ್ಲಿ
ಧಾರಾಕಾರವಾಗಿ ಸುರಿದಿದೆ. ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗಿದ್ದು ಜನಜೀವನ
ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಏತನ್ಮಧ್ಯೆ ಕೊಡಗಿನಲ್ಲೂ ಉತ್ತಮ ಮಳೆಯಾಗಿದ್ದು, ದಕ್ಷಿಣ ಕನ್ನಡ, ಉತ್ತರ
ಕನ್ನಡ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆ ಸುರಿದಿದೆ.


ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬೆಳಗ್ಗೆಯಿಂದ ಸಂಜೆವರೆಗೆ ಭಾರೀ ಮಳ ಸುರಿದಿದ್ದು,
ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿರುವ ಘಟನೆ
ತಾಲ್ಲೂಕಿನ ಪಲಗಾಪೂರ ಗ್ರಾಮದ ಬಳಿ ನಡೆದಿದೆ. ಯಾದಗಿರಿ ನಗರ ಪ್ರದೇಶಗಳಲ್ಲಿ ತಗ್ಗು ಪ್ರದೇಶದ
ಮನೆಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಮೀಣ ಪ್ರದೇಶಗಳಲ್ಲಿ ಬಹುತೇಕ ಹೊಲಗದ್ದೆಗಳಲ್ಲಿ
ನೀರು ತುಂಬಿ, ಹತ್ತಿ, ಭತ್ತ ಹೆಸರು ಬೆಳೆಗಳು ನೀರುಪಾಲಾಗಿವೆ.


ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫಜಲರುಕ, ಕಲಬುರಗಿ, ಸೇಡಂ ಚಿತ್ತಾಪುರ, ಕಾಳಗಿ, ಶಹಾಬಾದ್‌,
ಯಡ್ರಾಮಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿಯೂ ಮಳೆ ಸುರಿದಿದ್ದು ನೀಲಕೋಡ್‌ ಗ್ರಾಮದಲ್ಲಿ 131 ಮಿ.ಮೀ
ಮಳೆಯಾಗಿದೆ. ಹುಮನಾಬಾದ್‌, ಬಸವಕಲ್ಯಾಣ ಸೇರಿದಂತೆ ಬೀದರ್‌ ಜಿಲ್ಲ ವಿವಿಧೆಡೆ ಉತ್ತಮ ಮಳಯಾಗಿದ್ದು
ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಬಳ್ಳಾರಿ ಜಿಲ್ಲೆಯ ಹಲವೆಡೆ ಜಿಟಿಜಿಟಿ ಮಳೆಯಾಗಿದೆ. ಗದಗ ಜಿಲ್ಲೆಯ
ನರಗುಂದ, ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದರೆ, ಧಾರವಾಡ ಜಿಲ್ಲೆಯಲ್ಲಿ ಸಾಧಾರಣ
ಮಳೆ ಸುರಿದಿದೆ.

ಹಲವೆಡೆ ಯೆಲ್ಲೋ ಅಲರ್ಟ್‌:-ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಜುಲೈ 20ರ
ವರೆಗೂ ಭಾರೀ ಮಳೆಯಾಗಲಿದ್ದು, ಐದು ದಿನ "ಯೆಲ್ಲೋ ಅಲರ್ಟ್‌' ಘೋಷಣೆ ಮಾಡಲಾಗಿದೆ. ಉತ್ತರ
ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಕಲಬುರ್ಗಿ, ರಾಯಚೂರು, ವಿಜಯಪುರ ಮತ್ತು
ಯಾದಗಿರಿಯಲ್ಲಿ ಜುಲೈ 16 ರಂದು ಭಾರೀ ಮಳೆಯಾಗಲಿದ್ದು, "ಯೆಲ್ಲೋ ಅಲರ್ಟ್‌' ಘೋಷಿಸಲಾಗಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:16.07.2020
5, ವಾಯುಭಾರ ಕುಸಿತ - ಮುಂಗಾರು ಚುರುಕು


ಅರಬ್ಬಿ ಸಮುದದಲ್ಲಿ ಪೂರ್ವ ಭಾಗದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಮತ್ತು ಮುಂಗಾರು
ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ಮಲೆನಾಡು, ಘಟ್ಟಪ್ರದೇಶ ಉತ್ತರ ಹಾಗೂ ದಕ್ಷಿಣ
ಒಳನಾಡುಗಳಲ್ಲಿ ಮಳೆ ಚುರುಕುಗೊಂಡಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳ ಪ್ರಭಾವ ಕೊಂಚ
ಕ್ಷೀಣಗೊಂಡಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ವ್ಯಾಪಿಸತೊಡಗಿದೆ. ರಾಜ್ಯದಾದ್ಯಂತ ಮೋಡ ಮುಸುಕಿದ
ವಾತಾವರಣ ಚಳಿಗಾಳಿ ಮತ್ತು ಆಗಾಗ ಹಗುರ ಮತ್ತು ಬಿರುಸಿನಿಂದ ಕೂಡಿದ ಮಳಯಾಗಿದೆ.


ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು,
ತುಮಕೂರು ಹಾಗೂ ಮಲೆನಾಡು ಮತ್ತು ಘಟ್ಟ ಪ್ರದೇಶಗಳಾದ ಹಾಸನ ಚಿಕ್ಕಮಗಳೂರು, ಶಿವಮೊಗ್ಗ, ಕರಾವಳಿ
ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಳಗಾವಿ, ಧಾರವಾಡ, ದಾವಣಗೆರೆ ಮತ್ತು ಉತ್ತರ ಕನ್ನಡ
ಜಿಲ್ಲೆಗಳಲ್ಲಿ ಮಳೆ ಪ್ರಭಾವ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಗುಡುಗು ಸಮೇತವಾಗಿ ಮಳೆ
ಸುರಿದ ಬಗ್ಗೆ ವರದಿಗಳು ಬಂದಿವೆ.


197


ಮಲೆನಾಡು ಮತ್ತು ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ದಕ್ಷಿಣ ಕನ್ನಡ
ಜಿಲ್ಲೆಯ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಂದಾಪುರ, ಬೈಂದೂರು,
ಕಾರ್ಕಳ, ಹೆಬ್ರಿ, ಕಾಪು ಮತ್ತು ಬ್ರಹ್ಮಾವರ ಸೇರಿದಂತೆ ಹಲವಾರು ಕಡೆ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿದಿದೆ.
ಇದರ ಪರಿಣಾಮವಾಗಿ ಉಡುಪಿ ಜಿಲ್ಲೆಯ ಗಂಗೊಳ್ಳಿ, ಕುಕ್ಕುಂದೂರು ಹೊಸೂರು, ಹಲುವಳ್ಳಿ, ಹಾವಂಜೆ,
ಕಾಡೂರು ಮತ್ತು ಹೆರೂರು ಗ್ರಾಮಗಳಲ್ಲಿ ಮನೆಗಳು ಕುಸಿದ ಬಗ್ಗೆ ವರದಿಗಳು ಬಂದಿವೆ.


ಹೊಸನಗರ, ಭದಾವತಿ, ತೀರ್ಥಹಳ್ಳಿ, ಚನ್ನಗಿರಿ, ಮಲೆಬೆನ್ನೂರು ತ್ಯಾವಣಗಿ, ಸಸ್ಸೆಹಳ್ಳಿಗಳಲ್ಲಿ ವ್ಯಾಪಕ
ಪ್ರಮಾಣದ ಮಳೆ ಸುರಿದಿದೆ. ಕಾರವಾರದ ದೇವಳಮಕ್ಕಿ, ಶಿವೇಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾ೦ಕ:20.07.2020
6. ಚಂದನದಲ್ಲಿ ತರಗತಿ ಶುರು


ಪೌಢಶಾಲಾ ವದ್ಯಾರ್ಥಿಗಳಿಗೆ ದೂರದರ್ಶನದ "ಚಂದನ' ವಾಹಿನಿಯಲ್ಲಿ ತರಗತಿಗಳು ಆರಂಭವಾಗಿದ್ದು,
ರಾಜ್ಯ ಪಠ್ಯಕ್ರಮದ ಬಹುತೇಕ ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಮನೆಯ ಟೀವಿ ಎದುರು ಕುಳಿತು ಪಾಠ
ಕೇಳಿದ್ದಾರೆ.


8೦0೦ದ 10ನೇ ತರಗತಿಗಳ ಕಲಿಕೆಯ ನಿರಂತರತೆಗಾಗಿ ಸಾರ್ವಜನಿಕ ಶಿಕ್ಷಣಂ ಇಲಾಖೆ ಸೇತುಬಂಧ
ಕಾರ್ಯಕ್ರಮ ಅನುಷ್ಠಾನ ಮಾಡಿದೆ. "ಕಲಿಕೆ ಹಾಗೂ ಬೋಧನಾ ವಿಧಾನದ ವಿಶಿಷ್ಟ ಅನುಭವವನ್ನು
ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ” ಎಂದು ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆಯ ಹಿರಿಯ
ಅಧಿಕಾರಿಯೊಬ್ಬರು ಹೇಳಿದ್ದಾರೆ.


ಆಧಾರ:ಕನ್ನಡ ಪ್ರಭ, ದಿನಾಂಕ:21.07.2020
7. ಸರ್ಕಾರದಿಂದ 535 ಎಕರೆ ಕೆರೆ ಜಾಗ ಒತ್ತುವರಿ


ಬಿಬಿಎಂಪಿ ವ್ಯಾಪ್ತಿಯ ಕೆರೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಒತ್ತುವರಿ ವಿವರವನ್ನು ಬಿಬಿಎಂಪಿ
ಬಹಿರಂಗಪಡಿಸಿದ್ದು, ಬರೋಬ್ಬರಿ 847.31ಎಕರೆ ಕೆರೆ ಪ್ರದೇಶ ಒತ್ತುವರಿಯಗಿದೆ ಎಂಬ ಆಘಾತಕಾರಿ ಅಂಶ
ಬೆಳಕಿಗೆ ಬಂದಿದೆ.


ಒಂದು ಕಾಲದಲ್ಲಿ ಬೆಂಗಳೂರನ್ನು ಕೆರೆಗಳ ನಗರ ಎಂದು ಕರೆಯಲಾಗುತ್ತಿತ್ತು ಆದರೆ, ಬೆಂಗಳೂರು
ನಗರ ಬೆಳದಂತೆ ಅನೇಕ ಕೆರೆಗಳು ಬಡಾವಣೆ, ಬಸ್‌ ನಿಲ್ದಾಣ, ಸ್ಟೇಡಿಯಂ ಸೇರಿದಂತೆ ಇನ್ನಿತರ ಕಾರ್ಯಕ್ಕೆ
ಒತ್ತುವರಿ ಮಾಡಿಕೊಳ್ಳಲಾಗಿದೆ. ಇಂದಿಗೂ ಒತ್ತುವರಿ ಮುಂದುವರೆದಿದ್ದು, ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಪೈಕಿ
160 ಕೆರೆಗಳ ಒತ್ತುವರಿ ಕುರಿತು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢೀಕರಿಸಿ ಕೆರೆ ನಕ್ಷೆ ಹಾಗೂ
ಒತ್ತುವರಿ ವಿವರವನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುತ್ತಾರೆ.


ಸರ್ವೇ ಪೂರ್ಣಗೊಂಡ ಕೆರೆಗಳಲ್ಲಿ ಕೆಲವು ಕೆರೆಗಳಲ್ಲಿ ಅಷ್ಟೋ ಇಷ್ಟೋ ಒತ್ತುವರಿಯಾಗಿದೆ. ಕೆಲವು
ಕೆರೆಗಳಲ್ಲಿ ಯಾವುದೇ ಒತ್ತುವರಿ ಆಗಿಲ್ಲ ಮತ್ತು ಕೆಲವು ಕೆರೆಗಳು ಸಂಪೂರ್ಣ ಮಾಯವಾಗಿರುವ ಬಗ್ಗೆ ಅಂಕಿ
ಅಂಶದಲ್ಲಿ ತಿಳಿಸಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಾದ ರೈಲ್ತ, ಬಿಎಂಟಿಸಿ, ಅಂಗನವಾಡಿ, ಶಾಲೆ-ಕಾಲೇಜು,
ಬಿಡಿಎ. ಜಲಮಂಡಳಿ, ಲೋಕೋಪಯೋಗಿ ಇಲಾಖೆ, ಸ್ಪತಃ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳು ಒಟ್ಟು
535.21 ಎಕರೆ ಕೆರೆ ಪ್ರದೇಶಗಳನ್ನು ಒತ್ತುವರಿ ಮಾಡಿ ರಸ್ತೆ ಪಾರ್ಕ್‌ ಕಟ್ಟಡ, ರಿಂಗ್‌ ರಸ್ತೆ ಸೇರಿದಂತೆ ವಿವಿಧ
ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನು 249.30 ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು ಕೃಷಿ. ಕಟ್ಟಡ,
ಶೆಡ್‌. ಅಪಾರ್ಟ್‌ಮೆಂಟ್‌, ದೇವಸ್ಥಾನ, ಮಸೀದಿ, ಚರ್ಚ್‌, ಖಾಸಗಿ ರಸ್ತೆ ಖಾಸಗಿ ಶಾಲಾ, ಕಾಲೇಜುಗಳಿಗೆ
ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಉಲ್ಲೇಖಿಸಿದೆ.


11 ಕೆರೆಗಳ ಒತ್ತುವರಿ ಇಲ್ಲ: ಗುಂಜೂರು ಕೆರೆ 9.17 ಎಕರೆ, ಪನತೂರು ಕೆರೆ 6.30 ಎಕರೆ, ಗುಂಜೂರು
ಪಾಳ್ಯ ಕೆರೆ 36.27 ಎಕರೆ, ಕಮ್ಮಗೊಂಡನಹಳ್ಳಿ ಕೆರೆ 23.10 ಎಕರೆ, ನಾಗರಬಾವಿ ಕೆರೆ 4.7 ಎಕರೆ, ಬೆಟ್ಟಹಳ್ಳಿ ಕೆರೆ
1.32 ಎಕರೆ, ಭೀಮನಕಟ್ಟೆಕೆರೆ 123 ಎಕರೆ, ಕೆಂಚನಪುರ ಕೆರೆ 17.26 ಎಕರೆ, ಗೊಟ್ಟೆಗೆರೆಪಾಳ್ಯ ಕೆರೆ 17.38 ಎಕರೆ,
ಬೆಳ್ಳಹಳ್ಳಿ ಕೆರೆ 18.32 ಎಕರೆ ಸೇರಿದಂತೆ ಒಟ್ಟು 11 ಕೆರೆಗಳಲ್ಲಿ ಯಾವುದೇ ಒತ್ತುವರಿ ಆಗಿಲ್ಲ ಎಂದು ಹೇಳಿದೆ.


198


ಮಾಯವಾದ ಕೆರೆಗಳು: ಬಸಪ್ಪನಕಟ್ಟೆ ಕೆರೆ ಹಾಗೂ ಅಂಬುಲಿ ಕೆಳಗಿನ ಕೆರೆ ಸಂಪೂರ್ಣವಾಗಿ ಒತ್ತುವರಿ
ಆಗಿವೆ. ದಾಸರಹಳ್ಳಿ ವಲಯದ ಯಶವಂತಪುರ ಹೋಬಳಿ ವ್ಯಾಪ್ತಿಯ ಲಗ್ಗೆರೆಯ 4.11 ಎಕರೆಯ ಬಸಪ್ಪನಕಟ್ಟಿ
ಕೆರೆಯಲ್ಲಿ ಖಾಸಗಿಯಿಂದ 0.19 ಗುಂಟೆ, ಸರ್ಕಾರದ ವಿವಿಧ ಇಲಾಖೆಯಿಂದ 3.32 ಎಕರೆ ಒತ್ತುವರಿ ಆಗಿದೆ. ಈ
ಮೂಲಕ ಕೆರೆ ದಾಖಲೆಗಳಲ್ಲಿ ಮಾತ್ರ ಉಳಿದಿದ್ದು, ವಾಸ್ತವವಾಗಿ ಕಾಣೆಯಾಗಿದೆ. ಕೆರೆ ಜಾಗದಲ್ಲಿ ಈಗ ಬಿಬಿಎಂಪಿ
2 ಎಕರೆ ಪ್ರದೇಶದಲ್ಲಿ ಪಾರ್ಕ್‌ ನಿರ್ಮಾಣ ಮಾಡಿದೆ. 1 ಎಕರೆಯಲ್ಲಿ ಆಟದ ಮೈದಾನ, 14 ಗುಂಟೆಯಲ್ಲಿ ರಸ್ತೆ,
ಸರ್ಕಾರಿ ಶಾಲೆ ಮತ್ತು ದೇವಸ್ಥಾನ ಹಾಗೂ ಒತ್ತುವರಿದಾರರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು
ಮಹದೇವಪುರ ವಲಯದ ಅಂಬುಲಿಪುರದ 4.09 ಎಕರೆ ಸಂಪೂರ್ಣವಾಗಿ ಒತ್ತುವರಿ ಆಗಿದೆ. ಈ ಕೆರೆಯನ್ನು
ಕಾಪಾಡುವ ಜವಾಬ್ದಾರಿ ಹೊತ್ತಿರುವ ಸ್ಪತಃ ಬಿಬಿಎಂಪಿಯೇ ಒತ್ತುವರಿ ಮಾಡಿದೆ. ಒತ್ತುವರಿ ಮಾಡಿದ 4.09


ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢೀಕರಿಸಿದ್ದಾರೆ.
ಆಧಾರ:ಕನ್ನಡಪ್ರಭ, ದಿನಾಂಕ:22.07.2020
8. ಉತ್ತರ ಕರ್ನಾಟಕ: ಹಲವೆಡೆ ಭಾರಿ ಮಳೆ


ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆ ಕಮಲಾಪುರ, ಆಳಂದ ತಾಲ್ಲೂಕುಗಳಲ್ಲಿ ಭಾರಿ ಮಳ
ಸುರಿದಿದ್ದು ಹಳ್ಳ-ನಾಲೆಗಳು ತುಂಬಿ ಹರಿಯುತ್ತಿವೆ. ಬಾಗಲಕೋಟೆ, ಬಳ್ಳಾರಿ, ವಿಜಯಪುರ, ಬೆಳಗಾವಿ
ಜಿಲ್ಲೆಗಳಲ್ಲಿಯೂ ಉತ್ತಮ ಮಳೆ ಬಿದ್ದಿದೆ.


ಆಳಂದ ತಾಲ್ಲೂಕಿನ ಮಾದನ ಹಿಪುರಗ, ನಿಂಗದಳ್ಳಿ, ಪಡಸಾವಳಿ, ಜೀರಹಳ್ಳಿ, ಮಟಕಿ, ತೀರ್ಥ ಹಳ್ಳಿಗಳಿಗೆ
ಪ್ರವಾಹ ಬಂದಿದ್ದರಿಂದ ಈ ಗ್ರಾಮಗಳ ಹಾಗೂ ಕಮಲಾಪುರ ತಾಲ್ಲೂಕಿನ ಏಳು ಗ್ರಾಮಗಳ ಸಂಪರ್ಕ
ಕಡಿತಗೊಂಡಿದೆ. ದಸ್ತಾಪುರ ಗ್ರಾಮ ನಡುಗಡ್ಡೆಯಾಗಿದೆ. ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ.


ಆಳಂದ ತಾಲ್ಲೂಕಿನ ಹಡಲಗಿ ಸಮೀಪ ವ್ಯಾಪಕ ಮಳೆಯಾಗಿದೆ. ಭೀಮಾ ನದಿಯಲ್ಲಿ ನೀರಿನ ಹರಿವು
ಹೆಚ್ಚಾಗಿದ್ದು, ಸೊನ್ನ ಬ್ಯಾರೇಜ್‌ನಿಂದ 15 ಸಾವಿರ ಕ್ಕುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಬೆಣ್ಣೆತೊರಾ
ಜಲಾಶಯ ಭರ್ತಿಯಾಗಿದೆ. ಕಲಬುರ್ಗಿ ನಗರ, ಚಿಂಚೋಳಿ ಹಾಗೂ ಬೀದರ್‌ ಜಿಲ್ಲೆಯ ಭಾಲ್ವಿ,
ಔರಾದ್‌ಗಳಲ್ಲಿಯೂ ಸ್ಪಲ್ಪ ಸುರಿದಿದೆ. ಯಾದಗಿರಿ ಸಮೀಪದ ನಾಯ್ಕಲ್‌ ಗ್ರಾಮದ ಅಂಬೇಡ್ಕರ್‌ ನಗರದಲ್ಲಿ ರಾತ್ರಿ
ಮನೆ ಕುಸಿದಿದ್ದು, ಆದರಡಿ ಸಿಲುಕಿದ್ದ 8 ತಿಂಗಳ ಮಗು ಸೇರಿ ನಾಲ್ಲರನ್ನು ನೆರೆಹೊರೆಯವರು ರಕ್ಷಿಸಿದ್ದಾರೆ.


ಹುಬ್ಬಳ್ಳಿ, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟಿ ಹೋಬಳಿಯಲ್ಲಿ ಭಾರಿ ಮಳೆ ಸುರಿದು ಮೆಕ್ಕೆಜೋಳ, ಈರುಳ್ಳಿ, ಜೋಳ,
ಶೇಂಗಾ ಬೆಳೆ ಹಾನಿಯಾಗಿದ್ದು, ದಾಳಿಂಬೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಮಳೆಯ ರಭಸಕ್ಕೆ ಸರ್ವೋದಯ,
ಲಿಂಗನಹಳ್ಳಿ ತಾಂಡಾ, ಶ್ರೀಕಂಠಾಪುರ ತಾಂಡಾ, ಯರ್ರಬೊನಹಳ್ಳಿ, ಸಿಡೇಗಲ್ಲು ಸುತ್ತ ಮುತ್ತಲ ಪ್ರದೇಶಗಳಲ್ಲಿ
ಹಳ್ಳಗಳು ತುಂಬಿ ಹರಿಯುತ್ತಿವೆ. ಹೊಲಗಳ ಒಡ್ಡುಗಳು ಕೊಚ್ಚಿಕೊಂಡು ಹೋಗಿವೆ.


ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ, ನಿಡಗುಂದಿ, ಗೊಳಸಂಗಿ, ವಂದಾಲ,


ಸೇರಿದಂತೆ ನಾನಾ ಕಡೆ ಜೋರು ಮಳೆ ಸುರಿದಿದೆ. ಚಿಕ್ಕೋಡಿಯಲ್ಲಿ ಹೆಚ್ಚು ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ
ಹಲವೆಡೆ ಮಳೆ ಬಿಡುವು ನೀಡಿದೆ.


ಆಧಾರ:ಪ್ರಜಾವಾಣಿ, ದಿನಾಂಕ:25.07.2020
9. ರಾಜ್ಯ ಮುಕ್ತ ವಿವಿ ಈಗ ಹೈಟೆಕ್‌
ಹಲವು ಏಳುಬೀಳುಗಳ ಬಳಿಕ ತನ್ನ ಕಾರ್ಯ ವೈಖರಿಯನ್ನು ಬದಲಾಯಿಸಿಕೊಂಡಿರುವ ಕರ್ನಾಟಕ


ರಾಜ್ಯ ಮುಕ್ತ ವಿಶ್ವವಿದ್ಯಾಲಯ ಈಗ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದು, ಎಲ್ಲವೂ ಆನ್‌ಲೈನ್‌ಗೆ
ಒಳಪಟ್ಟಿರುವ ಏಕೈಕ ವಿವಿ ಎಂಬ ಹೆಗ್ಗಳಿಕೆ ಪಡೆದುಕೊಳ್ಳುತ್ತಿದೆ.


ಕೊರೋನಾ ಸಂಕಷ್ಟದ ದಿನಗಳಲ್ಲಿ ಆನ್‌ಲೈನ್‌ ಶಿಕ್ಷಣದ ಕುರಿತು ಚರ್ಚೆಗಳು ನಡೆಯುತ್ತಿರುವಂತೆ
ಕರ್ನಾಟಕ ರಾಜ್ಯ ಮುಕ್ತ ವಿವಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಕೊರೋನಾ ಲಾಕ್‌ಡೌನ್‌ ವೇಳೆ
ಹೊಸತನಕ್ಕೆ ಹೊರಳಲು ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಇದೀಗ ಪೂರ್ಣಗೊಳ್ಳುವ ಹಂತ ತಲುಪಿದ್ದು ಇನ್ನು


199


ಮುಂದೆ ವಿದ್ಯಾರ್ಥಿಗಳು ಕುಳಿತಲ್ಲಿಯೇ ಎಲ್ಲಾ ರೀತಿಯ ಸೌಲಭ್ಯ ಪಡೆಯಬಹುದು. ವಿದ್ಯಾರ್ಥಿಗಳು ವಾರ್ಷಿಕ
ಪರೀಕ್ಷೆಗೆ ಪರೀಕ್ಷಾ ಕೇಂದಗಳಿಗೆ ತೆರಳುವುದು ಬಿಟ್ಟರೆ ಎಲ್ಲಾ ಶೈಕ್ಷಣಿಕ ಚಟುವಟಿಕೆ ಆನ್‌ಲೈನ್‌ನಲ್ಲಿಯೇ
ಮಾಡಬಹುದು.


ರಾಜ್ಯ ಮುಕ್ತ ವಿವಿಗಳಿಗೆ ಆಗಸ್ಟ್‌ 1 ರಿಂದ ನೂತನ ಸೌಲಭ್ಯ ಸಿಗಲಿದೆ. ಈ ಕುರಿತು ವಿಜಯ
ಕರ್ನಾಟಕಕ್ಕೆ ಮಾಹಿತಿ ನೀಡಿದ ಕುಲಪತಿ ಪ್ರೊ. ಎಸ್‌.ವಿದ್ಯಾಶಂಕರ್‌, “ಇಲ್ಲಿಯವರೆಗೆ ಪ್ರತಿಯೊಂದು ಕಾರ್ಯಕ್ಕೂ
ವವಿ ಕಚೇರಿಗೆ ಇಲ್ಲವೇ ಅಧ್ಯಯನ ಕೇಂದಕ್ಕೆ ತೆರಳಬೇಕಿತ್ತು. ಮುಕ್ತ ವಿವಿಯಲ್ಲಿ ನೌಕರಿಯಲ್ಲಿರುವವರೇ ಹೆಚ್ಚಿನ
ಸಂಖ್ಯೆ ವಿದ್ಯಾರ್ಥಿಗಳು. ಅವರಿಗೆ ಸಮಯ ಅಭಾವ ಇರುವುದರಿಂದ ತೊಂದರೆಯಾಗುತ್ತಿತ್ತು ಈಗ ಪ್ರತಿ
ಸೌಲಭ್ಯವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು” ಎಂದರು.


ಈ ಹಿಂದೆ ಮುಕ್ತ ವಿವಿಯಲ್ಲಿ ಪ್ರವೇಶಾತಿ ಪಡೆಯಲು ಕಚೇರಿಗೆ ತೆರಳಿ ಅರ್ಜಿ ಪಡೆದು ಇಲ್ಲವೇ
ಆನ್‌ಲೈನ್‌ನಲ್ಲಿ ಅರ್ಜಿ ಡೌನ್‌ಲೋಡ್‌ ಮಾಡಿಕೊಂಡು ನೀಡಬೇಕಿತ್ತು. ಇದಕ್ಕೆ ಶುಲ್ಕ ಪಾವತಿಸಲು ಸಾಕಷ್ಟು
ಹೊತ್ತು ಕ್ಕೂನಲ್ಲಿ ನಿಲ್ಲಬೇಕಿತ್ತು. ಬಳಿಕ ಸಂಬಂಧಿಸಿದ ಅಧ್ಯಯನ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿಂದ ಸಿದ್ದ ಪಾಠ
ಪಡೆಯುವಷ್ನರಲ್ಲಿ ಸಾಕು ಸಾಕಾಗುತ್ತಿತ್ತು ಇನ್ನು ಮುಂದೆ ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಮುಕ್ತಿ
ಪಡೆಯಲಿದ್ದಾರೆ. ಆನ್‌ಲೈನ್‌ನಲ್ಲಿಯೇ ಅರ್ಜಿ ತುಂಬಿಸಿ, ಡಿಜಿಟಲ್‌ ಪೇಮೆಂಟ್‌ ಮೂಲಕ ಶುಲ್ಕ
ಪಾವತಿಸಬಹುದು. ಇದನ್ನು ಆನ್‌ಲೈನ್‌ನಲ್ಲಿಯೇ ಪರಿಶೀಲಿಸಿ ಅವರಿಗೆ ಪ್ರವೇಶಾತಿ ನೀಡಲಾಗುತ್ತಿದೆ.


ಆೈಪ್‌, ವೆಬ್‌ನಲ್ಲಿ ಲಭ್ಯ: ಒಮ್ಮೆ ಪ್ರವೇಶ ಪಡೆದ ನಂತರ ವಿದ್ಯಾರ್ಥಿಗಳು ಆ್ಯಪ್‌, ಇಲ್ಲವೇ ಮುಕ್ತ ವಿವಿ
ವೆಬ್‌ಸೈಟ್‌ನಲ್ಲಿ ತಮ್ಮ ರೋಲ್‌ ನಂಬರ್‌ ಮೂಲಕ ಲಾಗಿನ್‌ ಆಗಿ ಎಲ್ಲಾ ಸೌಲಭ್ಯ ಪಡೆಯಬಹುದು. ಸಿದ್ದಪಾಠ,
ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಸಂಪರ್ಕ ತರಗತಿಗಳಿಗೆ ಬದಲಾಗಿ ಆನ್‌ಲೈನ್‌
ತರಗತಿಗಳು ನಡೆಯಲಿವೆ. ವಿಡಿಯೊ ಹಾಗೂ ಆಡಿಯೊ ಪಾಠಗಳನ್ನು ಕೂಡ ಆನ್‌ಲೈನ್‌ನಲ್ಲಿ ಅಳವಡಿಸಲಾಗಿದೆ.
ಇವುಗಳನ್ನು ವಿದ್ಯಾರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಸೈನ್‌ಮೆಂಟ್‌ಗಳನ್ನು ಕೂಡ


ಆನ್‌ಲೈನ್‌ನಲ್ಲಿಯೇ ಸಬ್‌ಮಿಟ್‌ ಮಾಡುವ ವ್ಯವಸ್ಥೆ ಆಗುತ್ತಿದೆ.
ಆಧಾರ:ವಿಜಯ ಕರ್ನಾಟಕ, ದಿನಾಂಕ:27.07.2020
10. 3 ವರ್ಷಗಳಲ್ಲಿ ನೀರಾವರಿ ಯೋಜನೆಗಳು ಪೂರ್ಣ


"ಶ್ರೀರಂಗ ಏತ ನೀರಾವರಿ, ಸತ್ತೇಗಾಲ ಕುಡಿಯುವ ನೀರು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯ
ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ
ಪೂರ್ಣಗೊಳಿಸಲಾಗುವುದು' ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ
ಡಾ.ಸಿ.ಎನ್‌.ಅಶ್ವತ್ನನಾರಾಯಣ ಹೇಳಿದರು.


ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕಾವೇರಿ ನೀರಾವರಿ
ನಿಗಮದ ಅಧಿಕಾರಿಗಳ ಜೊತೆ ಸಭೆಯ ಬಳಿಕ ಅವರು ಮಾತನಾಡಿದರು. ಯೋಜನೆಗಳಿಗೆ ಅಡ್ಡಿಯಾಗಿರುವ
ಭೂಸ್ವಾಧೀನದ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, "ಕುಡಿಯುವ ಮತ್ತು
ನೀರಾವರಿ ಯೋಜನೆಗಳು ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಈ ಸಂಬಂಧ ತುಮಕೂರು ಮತ್ತು
ರಾಮನಗರ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಬೇಕು' ಎಂದು ತಿಳಿಸಿದರು.


ಮಾಗಡಿ ತಾಲ್ಲೂಕಿಗೆ ಕುಡಿಯುವ ನೀರು ಸರಬರಾಜು ಮಾಡುವ ಶ್ರೀರಂಗ ಯೋಜನೆಯನ್ನು ಒಂದು
ವರ್ಷದಲ್ಲಿ ಪೂರ್ಣಗೊಳಿಸಬೇಕು. ಭೂಸ್ವಾಧೀನ ಪಕ್ರಿಯೆಗೆ ಎದುರಾಗಿರುವ ತೊಡಕುಗಳ ಬಗ್ಗೆ ವಾರದೊಳಗೆ
ಕಂದಾಯ ಇಲಾಖೆ ಜೊತೆ ಚರ್ಚೆಸಿ ಬಗೆಹರಿಸಿಕೊಳ್ಳಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು
ಮುಖ್ಯ ಎಂಜಿನಿಯರ್‌ ಬಾಲಕೃಷ್ಣ ಅವರಿಗೆ ಸೂಚಿಸಿದರು.


ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ಕನಕಪುರ ತಾಲ್ಲೂಕಿನ ಗರಳಾಪುರ ಮತ್ತಿತರ 12 ಕೆರೆಗಳಿಗೆ
ಎರಡು ಹಂತಗಳಲ್ಲಿ ನೀರು ತುಂಬಿಸಲು ರೂ.70 ಕೋಟಿ ವೆಚ್ಚ ಮಾಡುತ್ತಿದ್ದು, ಭೂಸ್ಥಾಧೀನ ಸಮಸ್ಯೆ
ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಅವರು ಸಭೆಯಲ್ಲಿ ತಿಳಿಸಿದರು.


200


ಮೊಗೇನಹಳ್ಳಿ ಕೆರೆ ಮತ್ತು ಕಣ್ಣ ಜಲಾಶಯಕ್ಕೆ ನೀರು ತುಂಬಿಸುವ ರೂ. 540 ಕೋಟಿ ವೆಚ್ಚದ ಸತ್ತೇಗಾಲ
ಯೋಜನೆ ಪ್ರಗತಿಯಲ್ಲಿದೆ. ಅಲ್ಲಿಂದ ಮಂಚನಬೆಲೆ ಜಲಾಶಯ ಮತ್ತು ವೈ.ಜಿ. ಗುಡ್ಡ ಕೆರೆಗೆ ನೀರು ತಂದು ನಾಲ್ಕು
ತಾಲ್ಲೂಕುಗಳಿಗೆ ಒದಗಿಸಲು ಉದ್ದೇಶಿಸಿರುವ ಈ ಯೋಜನೆಯ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ
ಪಡೆದರು.


ಗರಕಹಳ್ಳಿ ಏತ ಯೋಜನೆ, ಸಾತನೂರು ಕೆರೆ ತುಂಬಿಸುವ ಯೋಜನೆ, ನಾರಾಯಣಪುರ ಕೆರೆ
ತುಂಬಿಸುವ ಯೋಜನೆ, ಕೆಂಗೇರಿ ದೊಡ್ಡಬೆಲೆ ಏತ ಯೋಜನೆ, ಬೈರಮಂಗಲ ತಿರುವು ನಾಲಾ ಯೋಜನೆ, ಕಣ್ವ
ನಾಲೆಗಳ ಆಧುನೀಕರಣ ಯೋಜನೆ, ಅರೆಕೊಪ್ಪ ಸೂಕ್ಷ್ಮ ನೀರಾವರಿ, ಹೆಗ್ಗನೂರು ಸೂಕ್ಷ್ಮ ನೀರಾವರಿ,
ದೊಡ್ಡಾಲಹಳ್ಳಿ ಹನಿ ನೀರಾವರಿ ಯೋಜನೆಗಳ ಬಗ್ಗೆಯೂ ಅಧಿಕಾರಿಗಳ ಜೊತೆ ಚರ್ಚಿಸಿದರು.


ಆಧಾರ:ಪ್ರಜಾವಾಣಿ, ದಿನಾಂಕ:27.07.2020
11. ಕೊರೋನಾ ಪತ್ತೆ, ವರದಿಯಲ್ಲಿ ಕರ್ನಾಟಕವೇ ಅತ್ಯುತ್ತಮ


ದೇಶಾದ್ಯಂತ ಅಬ್ಬರಿಸುತ್ತಿರುವ ಕೋವಿಡ್‌-19 ಸೋಂಕಿತರ ಪತ್ತೆ ಹಾಗೂ ರಾಜ್ಯ ಸರ್ಕಾರಕ್ಕೆ
ಸೇರ್ಪಡೆಗೊಳಿಸಿ ಪ್ರಕರಣಗಳ ವರದಿ ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ ಎಂದು
ಸ್ಟಾ ನ್‌ ಪೋರ್ಡ್‌ ಯೂನಿವರ್ಸಿಟಿ ನಡೆಸಿದ ಅಧ್ಯಯನ ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ. ಗುಣಮಟ್ಟದ ಕೋವಿಡ್‌
ಟಿಸ್‌ ನಡೆಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕನಾಟಕ ಮುಂದಿದೆ ಕು ಹೇಳಿದೆ.


ಸೌಲಭ್ಯಗಳ ಲಭ್ಯತೆ, ಕೈಗೆಟುಕುವ ವ್ಯವಸ್ಥೆ ಹಾಗೂ ದತ್ತಾಂಶಗಳ ಸಂಗಹ ಮತ್ತು ಗೌಪ್ಯತೆ
ಮಾನದಂಡಗಳಡಿ ಭಾರತದಾದ್ಯಂತ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಪತ್ತೆ ಹಾಗೂ ಅವುಗಳ ವರದಿಯ
ಕುರಿತು ವಿವಿಯು ಡೇಟಾ ಎರ ಸ್ಕೋರ್‌ (ಸಿಡಿಆರ್‌ಎಸ್‌)ನೀಡಿ ಪಟ್ಟಿ ಸಿದ್ದಪಡಿಸಿದೆ. ಅದರಲ್ಲಿ
ಕರ್ನಾಟಕ 0.61 ಅಂಕಗಳ ಮೂಲಕ ಮೊದಲ "ಸ್ಥಾನದಲ್ಲಿದ್ದರೆ. 0.52 ಅಂಕಗಳೊಂದಿಗೆ ಕೇರಳ ಎರಡನೇ
ಸ್ಥಾನದಲ್ಲಿದೆ. 0.51 ಅಂಕಗಳೊಂದಿಗೆ ತಮಿಳುನಾಡು ಮತ್ತು ಒಡಿಶಾ ಮೂರನೇ ಸ್ಥಾನ ಹಂಚಿಕೊಂಡಿವೆ. ಬಿಹಾರ
ಮತ್ತು ಉತ್ತರ ಪ್ರದೇಶ ಅತಿ ಕಳಪೆ ಸಾಧನೆ ತೋರಿ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. "ಮೆಡ್‌ಆರ್‌ಎಕ್ಸ್‌ವಿ'
ಎಂಬ ಜನರಲ್‌ನಲ್ಲಿ ವರದಿ ಪ್ರಕಟಗೊಂಡಿದೆ.


ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೇ 19ರಿಂದ ಜೂನ್‌ 1ರ ವರೆಗಿನ ಕೋವಿಡ್‌
ಟೆಸ್ಟ್‌ ವರದಿಗಳ ದತ್ತಾಂಶ ಕಲೆಹಾಕಿ ಡೇಟಾ ರಿಪೋರ್ಟಿಂಗ್‌ ಸ್ಟೋರ್‌ (ಸಿಡಿಆರ್‌ಎಸ್‌) ಮಾನದಂಡಗಳ
ಆಧಾರದಲ್ಲಿ ಈ ವರದಿ ಸಿದ್ಧಗೊಂಡಿದೆ. ಮೇ 18ಕ್ಕಿಂತ ಮೊದಲು ಕ್ಕಿಂತಲೂ ಕಡಿಮೆ ಪ್ರಕರಣಗಳು
ವರದಿಯಾದ ರಾಜ್ಯಗಳನ್ನು ಅಧ್ಯಯನದಿಂದ ಹೊರಗಿಡಲಾಗಿದೆ.


ಆಧಾರ:ವಿಜಯ ಕರ್ನಾಟಕ, ದಿನಾಂ೦ಕ:28.07.2020
12. ಹುಲಿ ಸಂಖ್ಯೆ: ನಾಗರಹೊಳೆ ನಂ.2, ಬಂಡೀಪುರ ನಂ.3


ಹುಲಿ ಗಣತಿ ಮುಗಿದ 1 ವರ್ಷದ ನಂತರ ಅದರ ವಿಸ್ತೃತ ವರದಿ ಪ್ರಕಟಗೊಂಡಿದೆ. ಹುಲಿಗಳ
ಸಂಖ್ಯೆಯಲ್ಲಿ ಕರ್ನಾಟಕದ ನಾಗರಹೊಳೆ ಅಭಯಾರಣ್ಯ ದೇಶದಲ್ಲೇ 2ನೇ ಸ್ಥಾನ ಹಾಗೂ ಬಂಡೀಪುರ 3ನೇ
ಸ್ಥಾನ ಪಡೆದಿವೆ. ಉತ್ತರಖಂಡದ ಕಾರ್ಬೆಟ್‌ ಹುಲಿ "ರಕ್ಷಿತಾರಣ್ಯ ಭಾರತದ ನಂ.1 ಹುಲಿ ಆವಾಸ ಸ್ಥಾನ
ಎನ್ನಿ ಸಿಕೊಂಡಿದೆ. ಇದೇ ವೇಳೆ, ರಾಜ್ಯವಾರು ಸಂಖ್ಯೆ ARES. ದೇಶದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ
ರಾಜ್ಯ ಮಧ್ಯಪ್ರದೇಶ (526)ವಾಗಿದ್ದು, ನಂತರದ ಸ ಸ್ಥಾನವನ್ನು ಕರ್ನಾಟಕ (524) ಪಡೆದಿದೆ.


ಸೃಪು

ಜುಲೈ 29 ವಿಶ್ವ ಹುಲಿ ದಿನಾಚರಣೆ, ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ 4ನೇ "ಅಖಿಲ
ಭಾರತ ಹುಲಿ ಅಂದಾಜು-2018 ಹೆಸರಿನ 600 ಪುಟಗಳ ವರದಿ ಬಿಡುಗಡೆ ಮಾಡಿದರು. ಇದರಲ್ಲಿ ರಾಜ್ಯವಾರು
ಹುಲಿಗಳ ಅಂಕಿ-ಅಂಶವಿದೆ. ದೇಶದಲ್ಲಿ ಈಗ ಹುಲಿ ರಕ್ಷಿತಾರಣಕ್ಯಗಳಲ್ಲಿ 1923 ಹುಲಿಗಳಿವೆ. ಇದು ದೇಶದ
ಒಟ್ಟಾರೆ ಹುಲಿಗಳ ಸಂಖ್ಯೆಯ ಶೇ.65 ರಷ್ಟಾಗಿದೆ.


ಎಲ್ಲಿ ಎಷ್ಟು ಹುಲಿ: ಉತ್ತರಾಖಂಡದ ಕಾರ್ಬೆಟ್‌ ಅರಣ್ಯದಲ್ಲಿ 231 ಹುಲಿಗಳು ಇದ್ದು, ದೇಶದಲ್ಲೇ ಅತಿ
ಹೆಚ್ಚು ಹುಲಿಗಳ ತಾಣ ಎನ್ನಿಸಿಕೊಂಡಿದೆ. 2ನೇ ಸ್ಥಾನದಲ್ಲಿ ಕರ್ನಾಟಕದ ನಾಗರಹೊಳೆ (127 ಹುಲಿ) ಹಾಗೂ


201


ಬಂಡೀಪುರ (126) ಇವೆ. ಅಸ್ಲಾಂನ ಕಾಜಿರಂಗಾ ಹಾಗೂ ಮಧ್ಯಪ್ರದೇಶದ ಬಾಂಧವಗಢ ಅರಣ್ಯದಲ್ಲಿ ತಲಾ
104 ಹುಲಿಗಳಿವೆ.


ಕರ್ನಾಟಕದ ಅಣಶಿ-ದಾಂಡೇಲಿ ಅಭಯಾರಣ್ಯ, ಒಡಿಶಾದ ಸಿಮಿಲಿಪಾಲ್‌, ಆಂಧ್ರಪ್ರದೇಶದ ಶ್ರೀಶೈಲ,
ತೆಲಂಗಾಣದ ಕಾವಾಲ್‌ ಹಾಗೂ ಆದಿಲಾಬಾದ್‌, ಜಾರ್ಪಿಂಡ್‌ನ ಪಲಾಮು, ಮಧ್ಯಪ್ರದೇಶದ ಸಂಜಯ್‌ ಡುಬ್ರಿ,
ಅಸ್ಲಾಂನ ನಮೇರಿ ಹಾಗೂ ಮನಾಸ್‌, ಪ.ಬಂಗಾಳದ ಬುಕ್ಷಾ, ಮಿಜೋರಾಂನ ಡಂಪಾ, ಅರುಣಾಚಲ ಪ್ರದೇಶದ
ಪಕ್ಕೆಯಲ್ಲಿ ಎಷ್ಟು ಹುಲಿ ಇರಬಹುದು ಎಂದು ಅಂದಾಜಿಸಲಾಗಿತ್ತೋ ಅದಕ್ಕಿಂತ ಕಡಿಮೆ ಹುಲಿಗಳು
ಕಂಡುಬಂದಿವೆ. "ಅರ್ಥಾತ್‌ ಇಲ್ಲಿ ಹುಲಿಗಳ ಸಂಖ್ಯೆ ಕುಸಿತಗೊಂಡಿದೆ. ಹುಲಿ ಸಂರಕ್ಷಣೆಗೆ ಹೆಚ್ಚಿನ ಕೆಲಸ ಇಲ್ಲಿ


ಆಗಬೇಕಿದೆ ಎಂದರ್ಥ” ಎಂದು ವರದಿ ಹೇಳಿದೆ.


ಆಧಾರ:ಕನ್ನಡಪ್ರಭ, ದಿನಾಂಕ:29.07.2020
13. ಕಳೆಸಾ-ಬಂಡೂರಿ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ


ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ-ಬಂಡೂರಿ
ನಾಲಾ ತಿರುವು (ಮಹದಾಯಿ) ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಒಟ್ಟು
ರೂ.1680.30 ಕೋಟಿ ಮೊತ್ತದ ಪರಿಷ್ಣ್ಯಶ ಯೋಜನಾ ವರದಿಗೆ (ಡಿಪಿಆರ್‌) ಸರ್ಕಾರದ ತಾತ್ತಿಕ ಆಡಳಿತಾತ್ಮಕ
ಅನುಮೋದನೆ ಸಿಕ್ಕಿದೆ.


ಗೋವಾ ತೀವ್ರ ಆಕ್ಷೇಪದ ಹೊರತಾಗಿಯೂ ಕರ್ನಾಟಕವು ಈ ಯೋಜನೆಯ ಅನುಷ್ಠಾನದತ್ತ ದೊಡ್ಡ
ಹೆಜ್ಜೆ ಇರಿಸಿದಂತಾಗಿದೆ. ಮಹದಾಯಿ ನ್ಯಾಯಾಧೀಕರಣದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಜಲ ಶಕ್ತಿ
ಸಚಿವಾಲಯ ಕಳೆದ ಫೆಬ್ರವರಿ 27 ರಂದು ಗೆಜೆಟ್‌ ಅಧಿಸೂಚನೆ ಹೊರಡಿಸಿತ್ತು ಈ ಹಿನ್ನೆಲೆಯಲ್ಲಿ ಈ ಎರಡು
ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಜಲ ಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.


ಕಳಸಾ ನಾಲೆಗೆ 885 ಕೋಟಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಕಳಸಾ
ನಾಲಾ ಮತ್ತು ಹಲತಾರ ನಾಲಾಗಳ ಮೇಲೆ ಅಣೆಕಟ್ಟು ನಿರ್ಮಿಸಿ ಕೂಡು ಕಾಲುವೆಯ ಮೂಲಕ ಕುಡಿಯುವ
ನೀರಿನ ಉದ್ದೇಶಕ್ಕಾಗಿ 1.72 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ತಿರುವು ಯೋಜನೆ ಕಳಸಾ
ನಾಲಾಗೆ ಸಂಬಂಧಿಸಿದ್ದಾಗಿದೆ. ಯೋಜನೆಯ ರೂ.885.80 ಕೋಟಿ ಮೊತ್ತದ ಪರಿಷ್ಣತ ವಿವರವಾದ ಯೋಜನಾ
ವರದಿಗೆ ಸರ್ಕಾರ ತಾತ್ಲಿಕ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.


ಬಂಡೂರಾ ನಾಲೆಗೆ ರೂ.791 ಕೋಟಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನೆರಸೆ ಗ್ರಾಮದ ಹತ್ತಿರ
ಬಂಡೂರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಕೂಡು ಕಾಲುವೆ ಮೂಲಕ ಕುಡಿಯುವ ನೀರಿನ ಉದ್ದೇಶಕ್ಕಾಗಿ 2.18
ಟಿಎಂಸಿ ನೀರನ್ನು ಜಲಪ್ರಭ ನದಿಗೆ ತಿರುಗಿಸುವುದೇ ಬಂಡೂರಾ ನಾಲಾ ತಿರುವು ಯೋಜನೆ. ಇದರ
ರೂ. 791.50 ಕೋಟಿ ಮೊತ್ತದ ಪರಿಷ್ಕೃತ “ವಿವರವಾದ ಯೋಜನಾ ವರದಿ'ಗೂ ಸಮ್ಮತಿ ದೊರಕಿದೆ.


ಆಧಾರ:ಕನ್ನಡಪ್ರಭ, ದಿನಾಂಕ:29.07.2020
14. ಮೈಸೂರಿಗೂ ಬರುತ್ತೆ ಬುಲೆಟ್‌


ಕೆಲವೇ ವರ್ಷಗಳಲ್ಲಿ ಚೆನ್ನೈ ಹಾಗೂ ಮೈಸೂರು ನಡುವೆ ಬುಲೆಟ್‌ ರೈಲು ಸಂಚರಿಸಲಿದೆ. ದೇಶದಲ್ಲಿ
ಹೈಸ್ಟೀಡ್‌ ಬುಲೆಟ್‌ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಲಿಸುವಂಥ ಬೃಹತ್‌ ಜಾಲವನ್ನು ನಿರ್ಮಿಸುವ ನಿಟ್ಟಿನಲ್ಲಿ
ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯಿಟ್ಟಿದೆ. ಅದರಂತೆ, ಚೆನ್ನೈ ಮೈಸೂರು ಸೇರಿದಂತೆ 7 ಹೊಸ ಮಾರ್ಗಗಳಲ್ಲಿ
ಹಳ್ಳಿಗಳನ್ನು ನಿರ್ಮಿಸುವ ಸಂಬಂಧ ಹೆಚ್ಚುವರಿ ಭೂಮಿಯ ಸ್ವಾಧೀನ ಪಕ್ರಿಯೆಗೆ ರೈಲ್ರ ಹಾಗೂ ಭಾರತದ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ಮುಂದಾಗಿದೆ.

ದೇಶದಲ್ಲಿ ರೈಲು ಸಾರಿಗೆ ಜಾಲವನ್ನು ಇನ್ನಷ್ಟು ವಿಸ್ತರಿಸುವ ಹಾಗೂ ಅಭಿವೃದ್ಧಿಪಡಿಸುವ ಉದ್ದೇಶದಿಂದ
ಗೀನ್‌ ಫೀಲ್ಡ್‌ ಎಕ್ಸ್‌ಪ್ರೆಸ್‌ವೆಯುದ್ದಕ್ಕೂ ಹಳಿಗಳನ್ನು ನಿರ್ಮಿಸಲು ಎನ್‌ಎಚ್‌ಎಐ ಇನ್ನಷ್ಟು ಭೂಮಿಯನ್ನು ಸ್ಟಾಧೀನ
ಪಡಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ನೇತೃತ್ವದಲ್ಲಿ ನಡೆದ
ಮೂಲ ಸೌಕರ್ಯ ಸಚಿವರ ಸಮೂಹದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


202


4 ಸದಸ್ಕರ ಸಮಿತಿ: ಭೂಸ್ಟಾಧೀನ ಪ್ರಕ್ರಿಯೆಯ ಹೊಣೆಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿ, ಮುಂದಿನ
ಪ್ರಕ್ರಿಯೆಗಳ ಜವಾಬ್ದಾರಿ ನೋಡಿಕೊಳ್ಳಲು ನಾಲ್ಲರು ಸದಸ್ಯರ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಇದು
ಭೂಮಿಯ ಸ್ಪಾಧೀನ ಹಾಗೂ ವೆಚ್ಚದ ಹಂಚಿಕೆ ಕುರಿತ ವಿಧಾನವನ್ನು ರಚಿಸಲಿದೆ. ಇನ್ನು ಭಾರತೀಯ ರೈಲ್ವೆಯು
7 ಹೈಸ್ಪೀಡ್‌ ರೈಲು ಮಾರ್ಗಗಳ ನೀಲನಕ್ಷೆ ಸಿದ್ದತೆಯ ಹೊಣೆ ಹೊರಲಿದೆ ಎಂದು ಹೇಳಲಾಗಿದೆ.


ಆಧಾರ:ಉದಯವಾಣಿ, ದಿನಾ೦ಕ:31.07.2020
15. ಅಂತರ್ಜಲ ಸಮೃದ್ಧಿಗೆ ರಾಜ್ಯಾದ್ಯಂತ ಕೆರೆ ಪುನಃಶ್ಲೇತನ


ಅಂತರ್ಜಲ ಮಟ್ಟ ದಿನೇದಿನೇ ಕುಸಿದು ಬರಗಾಲದ ಸಮಸ್ಯೆ ಎದುರಾಗಿರುವುದರಿಂದ ಕೃಷಿಯಿಂದ
ವಿಮುಖರಾಗುತ್ತಿರುವ ನಡುವೆ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಈ
ಗಂಭೀರ ಸಮಸ್ಯೆಯನ್ನು ಮನಗಂಡ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿ.ನರೇಂದ್ರ ಹೆಗ್ಗಡೆ ಮತ್ತು ಹೇಮಾವತಿ
ವಏ.ಹೆಗಡೆ ಅವರು ನೀರಿನ ಶಾಶ್ವತ ಪರಿಹಾರಕ್ಕಾಗಿ 2016ರಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆ ಪ್ರಾರಂಭಿಸಿ
ಹತ್ತೂರಿನಲ್ಲಿ ಯಶಸ್ವಿಯಾಗಿದೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್‌.ಎಚ್‌.
ಮಂಜುನಾಥ್‌ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸರ್ಕಾರ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ,
ಬೆಂಗಳೂರು ಇದರ ಕೆರೆ ಸಂಜೀವಿನಿ ಯೋಜನೆಯ ಆರ್ಥಿಕ ನೆರವು ಪಡೆದು ಎಸ್‌.ಕೆ.ಡಿ.ಆರ್‌.ಡಿ.ಪಿ. ಮೂಲಕ
ರಾಜ್ಯಾದಾದ್ಯಂತ ಯಶಸ್ವಿ ಕೆರೆ ಪುನಃಶ್ಚೇತನ ಕಾರ್ಯಕ್ರಮ ನಡೆಯುತ್ತಿದೆ.


ಸುಜಲಾಂ ಸುಫಲಾಂ ಕಾರ್ಯಕ್ರಮ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಕರ್ನಾಟಕ ಕೆರೆ
ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಗ ಬಾರತೀಯ "ಜೈನ್‌ ಟಿ ಜೊತೆಗೂಡಿಕೊಂಡು ಕಳೆದ
ವರ್ಷದಿಂದ ಗರ ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರುವ ಪೂರ್ತಿ ಕೆರೆಯನ್ನು
ಪುನಃಶ್ಚೇತನಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಟ್ಟು 31 ಕೆರೆಗಳ ಹೂಳೆತ್ತಲಾಗಿದೆ ಮತ್ತು 8 ಕರೆಗೆ
ನೀರು ಬರುವ ನಾಲೆಗಳ ಕಾಮಗಾರಿ ಮಾಡಲಾಗಿದೆ. 2020-21ನೇ ಸಾಲಿನಲ್ಲಿ 30 ಕೆರೆಗಳ ಹೂಳೆತ್ತುವ ಗುರಿ
ನಿಗದಿಪಡಿಸಲಾಗಿದೆ.


ಕಳೆದ 4 ವರ್ಷಗಳಿಂದ ಒಟ್ಟು 274 ಕೆರೆಗಳ ಪುನಃಶ್ಲೇತನ ಕಾರ್ಯಕ್ರಮ ನಡೆದಿದ್ದು, ಈ ಮಳೆಗಾಲದಲ್ಲಿ
ಎಲ್ಲಾ ಕೆರೆಗಳಲ್ಲಿ ನೀರು ತುಂಬಿದೆ. ಇದರಿಂದ ಹಲವು ತಾಲ್ಲೂಕಿನಲ್ಲಿ ಕುಡಿಯಲು ನೀರು, ಅಂತರ್ಜಲ ಮಟ್ಟ
ಹೆಚ್ಚಿ ಬತ್ತಿ ಹೋದ ಅನೇಕ ಕೊಳವೆ ಬಾವಿಗಳು ಮರುಜೀವ ಪಡೆದುಕೊಂಡಿದೆ. ಕೃಷಿ ಕಾರ್ಯ ಪ್ರಾರಂಭಿಸಿದ್ದಾರೆ.
ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಸಮಸ್ಯೆ ನಿವಾರಿಸಿದಂತಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆ. ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ.ಶೀಹರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಧಾರ:ಉದಯವಾಣಿ, ದಿನಾ೦ಕ:31.07.2020
16. ಬೆಂಗಳೂರು ಐಐಎಸ್‌ಸಿ


ಟೈಮ್ಸ್‌ ಉನ್ನತ ಶಿಕ್ಷಣದ ವಿಶ್ವವಿದ್ಯಾಲಯದ ರ್ಯಾಂಕಿಂಗ್‌ ಪಟ್ಟಿಯಲ್ಲಿ ಈ ಬಾರಿ ದೇಶದ 63
ವಿಶ್ವವಿದ್ಯಾಲಯಗಳು ಸೇರ್ಪಡೆಯಾಗಿವೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಕೇವಲ 14 ವಿವಿಗಳು ಮಾತ್ರ ಇದ್ದಿದ್ದು
ಈ ಬಾರಿ 63 ವಿವಿಗಳಿಗೇರಿರುವುದು ಇಲ್ಲಿ ಗಮನಾರ್ಹ. ಭಾರತದ ವಿವಿಗಳ ಪೈಕಿ ಎಂದಿನಂತೆ ಬೆಂಗಳೂರಿನ
ಇಂಡಿಯನ್‌ ಇನ್ನಿಟ್ಯೂಟ್‌ ಆಫ್‌ ಸೈನ್ಸ್‌ ಸಂಸ್ಥೆ (ಐಐಎಸ್‌ಸಿ) ಅಗಸ್ಥಾನವನ್ನು ಕಾಯ್ದುಕೊಂಡಿದೆ.


ಬೆಂಗಳೂರಿನ ಐಐಎಸ್‌ಸಿ ಸಂಸ್ಥೆಯು ಟೈಮ್ಸ್‌ ರ್ಯಾಂಕ್‌ ಪಟ್ಟಿಗೆ ಸೇರಲು 2015ರಲ್ಲಿ ಅರ್ಹತೆ
ಪಡೆದಂದಿನಿಂದಲೂ ಭಾರತದ ವಿವಿಗಳ ಸಾಲಿನಲ್ಲಿ ಅದು ಅಗಸ್ಥಾನ ಕಾಯ್ದುಕೊಂಡು ಬರುತ್ತಿದೆ. ಬೆಂಗಳೂರಿನ
ಐಐಎಸ್‌ಸಿ ಹೊರತಾಗಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಹಾಗೂ ಮೈಸೂರಿನ ವಿವಿ
ಕೂಡಾ ಈ ರ್ಯಾಂಕ್‌ ಪಟ್ಟಿಗೆ ಸೇರಿದೆ. 1500 ವಿಶ್ವವಿದ್ಯಾಲಯಗಳ ಬೋಧನಾ ಗುಣಮಟ್ಟ ಅಂತರರಾಷ್ಟ್ರೀಯ
ಅವಲೋಕನ, ಸಂಶೋಧನೆ ಹಾಗೂ ಜ್ಞಾನದ i : ಆಧರಿಸಿ ರ್ಯಾಂಕಿಂಗ್‌ ನೀಡಲಾಗುತಿದೆ. ಇಂಗ್ಲೆಂಡಿನ


203


ಆಕ್ಸ್‌ಫರ್ಡ್‌ ಯುನಿವರ್ಸಿಟಿ ಈ ರ್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಈ ಬಾರಿ ದೆಹಲಿಯ ಇಂದಪಸ್ಥ
ಇನ್ಸಿಟ್ಯೂಟ್‌ ಆಫ್‌ ಇನ್ಹರ್‌ಮೇಶನ್‌ ಟೆಕ್ಕಾಲಿಜಿ, ಲಕ್ನೋದ ಕಿಂಗ್‌ ಜಾರ್ಜ್‌ ಮೆಡಿಕಲ್‌ ಕಾಲೇಜು ಹಾಗೂ
ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯಗಳು ಈ ಬಾರಿ ಟೈಮ್ಸ್‌ ರ್ಯಾಂಕಿಂಗ್‌ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ
ಭಾರತದ ವಿವಿಗಳು.


ಬೈಮ್ಸ್‌ನ ವವಿಗಳ ರ್ಯಾಂಕಿಂಗ್‌ ಪಟ್ಟಿಗೆ ಭಾರತದ ದಾಖಲೆ ಸಂಸ್ಥೆಗಳ ವಿವಿಗಳು ದಾಖಲಾಗಿರುವುದು ಈ
ದೇಶದ ps ದಟ ಸರಿ ಎಂದು ಟೈಮ್ಸ್‌ ಹೈಯರ್‌ ಎಜುಕೇಷನ್‌ ಸಂಸ್ಥೆಯ ಫೀಲ್‌ ಬಟೆ
ಪ್ರಶಂಸಿಸಿದ್ದಾರೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾ೦ಕ:03.08.2020
17. ಯುಪಿಎಸ್ಸಿ ಕರ್ನಾಟಕಕ್ಕೆ ಖಮಿಷಿ


ದೇಶದ ಅತ್ಕುನ್ನತ ನಾಗರಿಕ ಸೇವೆಗಳಿಗಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ 2019ನೇ ಸಾಲಿನ
ಪರೀಕ್ಷೆಯ ನರಂ ಪ್ರಕಟವಾಗಿದ್ದು, ದೇಶಾದ್ಯಂತ 829 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ
40ಕ್ಕೂ ಹೆಚ್ಚು ಕನ್ನಡಿಗರಿರುವುದು ರಾಜ್ಯದ ಹಿರಿಮೆ ಹೆಚ್ಚಿಸಿದೆ. ಹರಿಯಾಣದ ರೈತನ ಪುತ್ರ ಪ್ರದೀಪ್‌ ಸಿಂಗ್‌
ದೇಶ್‌ ಪ್ರಥಮ ರ್ಯಾಂಕ್‌ ಪಡೆದರೆ, “ಇದನೇ ರ್ಯಾಂಕ್‌ ಪಡೆದಿರುವ ಬಿಂಗಳೂರಿನ ಸಿ.ಎಸ್‌.ಜಯದೇವ್‌
ಕರ್ನಾಟಕದ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟಾರೆ 1000 ರ್ಯಾಂಕ್‌ಗಳ
ಪಟ್ಟಿಯಲ್ಲಿ 40 ಮಂದಿ ಸ್ಥಾನ ಪಡೆದಿದ್ದಾರೆ. ಸಿ.ಎಸ್‌.ಜಯದೇವ್‌ 5, ಪ್ರಿಯಾಂಕಾ 68, ಚಿಕ್ಕಮಗಳೂರಿನ
ಬಿ.ಯಶಸ್ಸಿನಿ 71ನೇ ರ್ಯಾಂಕ್‌ ಪಡೆಯುವ ಮೂಲಕ ರಾಜ್ಯಕ್ಕೆ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.


ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಅಭ್ಯರ್ಥಿಗಳ ಯಶಸ್ಸಿನ ಪ್ರಮಾಣ ಹೆಚ್ಚಳವಾಗಿದೆ.


ಕಳೆದ ವರ್ಷ 23 'ಅಧ್ಯರ್ಥಿಗಳಷ್ಟೇ ತೇರ್ಗಡೆಯಾಗಿದ್ದರು. 2019ರಲ್ಲಿ ಮೊದಲ ಬಾರಿಗೆ ನಾಗರಿಕ ಸೇವಾ


ಪರೀಕ್ಷೆಯಲ್ಲಿ ಜಾರಿಗೆ ಬಂದ ಇಡಬ್ಬ್ಯು ಎಸ್‌ ಕೋಟಾದಲ್ಲಿ 78 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಸಾಮಾನ್ಯ


ವಿಭಾಗದಿಂದ 304, ಒಬಿಸಿ 251, ಪರಿಶಿಷ್ಟ ಜಾತಿ 129 ಹಾಗೂ ಪರಿಶಿಷ್ಠ ಪಂಗಡದ 67 ಅಭ್ಯರ್ಥಿಗಳು ಆಯ್ಕೆ
ಆಗಿದ್ದಾರೆ. 11 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. 2019ರ ಸೆಪ್ಲೆಂಬರ್‌ನಲ್ಲಿ ನಡೆದ ಪರೀಕ್ಷೆಯ
ಮತ್ತು 2020ರ ಫೆಬ್ರವರಿಯಿಂದ ಆಗಸ್ಟ್‌ವರೆಗೆ ನಡೆದ ಸಂದರ್ಶನದ ಆಧಾರದ ಮೇಲೆ ಫಲಿತಾಂಶ


ಪಕಟವಾಗಿದೆ.
ಆಧಾರ: ವಿಜಯವಾಣಿ, ದಿನಾಂಕ:05.08.2020
18. ಜಲಾಶಯಗಳಲ್ಲಿ ಹೆಚ್ಚಿದ ಒಳಹರಿವು


ರಾಜ್ಯದ ಹಲವೆಡೆ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು
ಜಲಾಶಯಗಳಲ್ಲಿ ಒಳಹರಿವು ಹೆಚ್ಚಳಗೊಂಡು, ಭಾರೀ ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಕೊಡಗಿನಲ್ಲಿ ವ್ಯಾಪಕ ಮಳೆಯಿಂದಾಗಿ ಕೃಷ್ಣರಾಜಸಾಗರ ಅಣೆಕಟ್ಟೆ ವಾರದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ.
ಅಣೆಕಟ್ಟೆಗಳಿಂದ ಹೆಚ್ಚುವರಿ ನೀರು ಹೊರ ಬಿಡುತ್ತಿರುವುದರಿಂದ ತೀರ ಪ್ರದೇಶದ ಜನರಲ್ಲಿ ಆತಂಕ ಮನೆ
ಮಾಡಿದೆ.


ಎಚ್‌.ಡಿ. ಕೋಟೆ:- ಕಬಿನಿ ಜಲಾಶಯದಿಂದ 50 ಸಾವಿರ ಕ್ಕೂಸೆಕ್‌ ನೀರು ಹೊರ ಬಿಟ್ಟಿರುವುದರಿಂದ
ತಾಲ್ಲೂಕಿನ ಮಾದಾಪುರ ಕೆ.ಬೆಳತ್ತೂರು ಸಂಪರ್ಕ ಸೇತುವೆ ಜಲಾವೃತ್ತವಾಗುವ ಹಂತ ತಲುಪಿದೆ. ಕೇರಳದಲ್ಲಿ
ಮಳೆ ಮುಂದುವರಿದಿರುವುದರಿಂದ ಕಬಿನಿ ಜಲಾಶಯದ ಒಳಹರಿವು ಸಂಜೆಯಿಂದ 50 ಸಾವಿರ ಕ್ಯೂಸೆಕ್‌ಗೆ
ಏರಿಕೆಯಾಗಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದ 4 ಕೆಸ್ಸ್‌ಗೇಟ್‌ಗಳ ಮೂಲಕ ಹೊರ ಬಿಡಲಾಗಿದೆ.
ಬಿದರಳ್ಳಿ ಮಾರ್ಗದ ಸೇತುವೆ ಕಳೆದ 4-5 ದಿನಗಳ ಹಿಂದಿನಿಂದ ಜಲಾವೃತ್ತವಾಗಿದ್ದರೆ, ಇನ್ನು ಮಾದಾಪುರ


204


ಮಾರ್ಗವಾಗಿ ಕೆ.ಬೆಳತ್ತೂರು ಮಾರ್ಗಕ್ಕೆ ಸಂಪರ್ಕ ಕಲಿಸುತ್ತಿದ್ದ ಸೇತುವೆ ಮೇಲಿಂದ ಸುಮಾರು ಒಂದೆರಡು
ಅಡಿಗಳಷ್ಟು ನೀರು ಹರಿಯಲಾರಂಭಿಸಿದ್ದು ಜಲಾಶಯದ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.


ಶ್ರೀರಂಗಪಟ್ಟಣ:- ಕೊಡಗು ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ವ್ಯಾಪಕ ಮಳಯಾಗುತ್ತಿರುವ
ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳ ಹರಿವಿನ ಪ್ರಮಾಣ 43 ಸಾವಿರ ಕ್ಕೂಸೆಕ್‌ಗೂ ಹೆಚ್ಚು ನೀರು
ಹರಿದು ಬರುತ್ತಿದ್ದು, ಅಣೆಕಟ್ಟೆ ವಾರದಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ. ಕಳೆದೊಂದು ವಾರದಿಂದ ಕೊಡಗು
ಭಾಗದಲ್ಲಿ ಹೆಚ್ಚಿನ ಮಳೆ ಬೀಳುತ್ತಿದ್ದು, ಕಾವೇರಿ ನದಿ ಮೂಲಕ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು
ಹರಿದು ಬರುತ್ತಿದೆ. 43,600 ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದ್ದರಿಂದ 3 ದಿನಗಳಲ್ಲೇ 105 ಇದ್ದ
ನೀರಿನ ಮಟ್ಟ 111 ಅಡಿಗೆ ಏರಿಕೆ ಕಂಡು ಬಂದಿದೆ. ಮುಂಗಾರು ಮಳೆ ಈ ಬಾರಿ ತಡವಾಗಿ ಆಗಮಿಸಿದ್ದು, ಮಳ
ಮೇಲೆ ನಂಬಿಕೆ ಇಟ್ಟಿದ್ದ ರೈತರಿಗೆ ಈಗ ನಿರಾಸೆ ದೂರವಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80
ಅಡಿಗಳಾಗಿದ್ದು ಪ್ರಸ್ತುತ 111.80 ಅಡಿ ನೀರು ಜಲಾಶಯದಲ್ಲಿದೆ. ನಾಲೆಗಳಿಗೆ 3051 ಕ್ಯೂಸೆಕ್‌ ನೀರನ್ನು ಹೊರ
ಬಿಡಲಾಗುತ್ತಿದೆ.


ಆಲಮಟ್ಟಿಗೆ ಒಳ ಹರಿವು ಹೆಚ್ಚಳ:- ಆಲಮಟ್ಟಿ ಜಲಾಶಯದಿಂದ 50 ಸಾವಿರ ಕ್ಕೂಸೆಕ್‌ ಪ್ರಮಾಣದ
ಒಳಹರಿವು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗತಾ ಕ್ರಮವಾಗಿ ಬೆಳಗ್ಗೆಯಿಂದ ಬಸವಸಾಗರ
ಜಲಾಶಯದ 7 ಕೆಸ್ಟ್‌ಗೇಟ್‌ಗಳ ಮೂಲಕ 50 ಸಾವಿರ ಕ್ಯೂಸೆಕ್‌ ನೀರನ್ನು ಕೃಷ್ಣಾನದಿಗೆ ಹರಿಬಿಡಲಾಗಿದೆ.
ಮಹಾರಾಷ್ಟ್ರದಲ್ಲಿ ನಿರಂತರ ಮಳ ಹಾಗೂ ಕೃಷ್ಣಾ ನದಿಯ ಉಪನದಿಗಳು ಉಕ್ಕಿ ಹರಿಯುತ್ತಿವೆ. ಆಲಮಟ್ಟಿ
ಅಣೆಕಟ್ಟಿಗೆ ಒಳಹರಿವಿನ ಪ್ರಮಾಣ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಒಳಹರಿವಿನ ಪ್ರಮಾಣದಷ್ಟೇ ನೀರನ್ನು
ಬಸವಸಾಗರಕ್ಕೆ ಹರಿಬಿಡಲಾಗುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಇಲ್ಲಿನ ಜಲಾಶಯದಿಂದ ಕೃಷ್ಣಾನದಿಗೆ
ಹರಿಸಲಾಗುತ್ತಿದೆ. ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವುದರಿಂದ ತೀರ ಪ್ರದೇಶದಲ್ಲಿ ಬರುವ
ರಾಯಚೂರು. ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಕೆಳ ಹಂತದ ಸೇತುವೆಗಳಿಗೆ ಪ್ರವಾಹದ ನೀರಿನಿಂದ
ಧಕ್ಕೆಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಕೆಬಿಜೆಎನ್‌ಎಲ್‌ನಿಂದ ಎರಡೂ ಜಿಲ್ಲಾಡಳಿತಗಳಿಗೆ ಮುನ್ನೂಚನೆ
ನೀಡಲಾಗಿದೆ ಎಂದು ಅಣೆಕಟ್ಟು ವಿಭಾಗದ ಇಇ ಶಂಕರ ನಾಯ್ಕೋಡಿ ತಿಳಿಸಿದ್ದಾರೆ. ಪ್ರಸ್ತುತ ಬಸವಸಾಗರ
ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್‌ ಒಳಹರಿವಿದ್ದು, 50 ಸಾವಿರ ಕ್ಯೂಸೆಕ್‌ ಹೊರಹರಿವಿದೆ. 491.46 ಮೀಟರ್‌ಗೆ
ತಲುಪಿದ್ದು, 30 ಟಿಎಂಸಿ ಅಡಿಯಷ್ಟು ನೀರು ಸಂಗಹವಿದೆ.


ತುಂಗಾ ಜಲಾಶಯಕ್ಕೆ 62000 ಕ್ಯೂಸೆಕ್‌ ಒಳ ಹರಿವು: ಭಾರೀ ಮಳೆಗೆ ಜಿಲ್ಲೆಯ ಜೀವನದಿಗಳಾದ ತುಂಗಾ,
ಭದೆ, ಶರಾವತಿ, ಕುಮುದ್ದತಿ, ವರದಾ ನದಿಗಳು ಮೈದುಂಬಿ ಹರಿಯುತ್ತಿದ್ದು, ತುಂಗಾ ಜಲಾಶಯ ಸಂಪೂರ್ಣ
ಭರ್ತಿಯಾಗಿ 12 ಗೇಟ್‌ಗಳ ಮೂಲಕ 65 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.
ನಗರದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಮಂಟಪ ಮುಳುಗಿದೆ. ಶಿಕಾರಿಪುರ, ಸಾಗರ, ತೀರ್ಥಹಳ್ಳಿ,
ಹೊಸನಗರ ಸೇರಿದಂತೆ ಹಲವು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು,
ಅನೇಕ ಹೊಲ, ಗದ್ದೆಗಳಿಗೆ ನೀರು ನುಗ್ಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಂಚಾರ ವ್ಯವಸ್ಥೆಗೂ
ಅಡ್ಡಿಯುಂಟಾಗಿದ್ದು, ದೈನಂದಿನ ಜೀವನಕ್ಕೆ ತೊಂದರೆಯುಂಟಾಗಿದೆ.


ಮೈದುಂಬಿದ ಜೋಗ: ಶರಾವತಿ ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಜೋಗ ಜಲಪಾತ
ಮತ್ತಷ್ಟು ವೈಭವಗೊಂಡಿದೆ. ಕಳದ ಬಾರಿಯೂ ಇದೇ ಅವಧಿಯಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ನಷ್ಟ
ಉಂಟಾಗಿತ್ತು. ಇದರಿಂದಾಗಿ ಈ ಭಾಗದ ಜನತೆ ಆತಂಕಕ್ಕೆ ಒಳಗಾಗಿದ್ದು, ಈ ವರ್ಷವೂ ಸಹ ಪ್ರವಾಹ
ಸಂಭವಿಸಬಹುದೇ ಎಂಬ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.

ತುಂಬಿ ಹರಿಯುತ್ತಿದೆ ಕೃಷ್ಣಾ ತೀರ ಪ್ರದೇಶದಲ್ಲಿ ಆತಂಕ:- ಬನಹಟ್ಟಿ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ
ಧಾರಾಕಾರ ಮಳೆಯಾಗುತ್ತಿರುವುದರಿಂದ ಕೊಯ್ದ್ಲಾ ಹಾಗೂ ರಾಜಾಪುರ ಡ್ಯಾಂಗಳಿಂದ ಕೃಷ್ಣಾ ನದಿಗೆ ಅಪಾರ
ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ತೀರ ಪ್ರದೇಶದ
ಗ್ರಾಮಸ್ಥರು ಭಯ ಪಡುವಂತಾಗಿದೆ. ಹಿಪ್ಪರಗಿ ಜಲಾಶಯಕ್ಕೆ ಒಟ್ಟು 87,500 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.


205


ಜಲಾಶಯದ ನೀರಿನ ಮಟ್ಟ 520.70 ಮೀ. ಆಗಿದೆ. ಮಹಾರಾಷ್ಟದ ಜಲಾನಯನ ಪ್ರದೇಶಗಳಾದ ಕೊಯ್ದಾ
202 ಮಿಮೀ, ನೌಜಾ 245 ಮಿಮೀ, ಮಹಾಬಲೇಶ್ವರ 183 ಮಿಮೀ, ವಾರಣಾ 165 ಮಿಮೀ, ರಾಧಾನಗಿ 271
ಮಿಮೀ, ದೂಧಗಂಗಾ 255 ಮಿಮೀ ಮಳೆಯಾದ ವರದಿಯಾಗಿದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್‌
ಪ್ರಶಾಂತ್‌ ಚನಗೋಂಡ ತಿಳಿಸಿದ್ದಾರೆ.


ಆಧಾರ:ಉದಯವಾಣಿ, ದಿನಾ೦ಕ:07.08.2020
20. ಹಲವೆಡೆ ಭಾರಿ ಮಳೆ: 9 ಸಾವು


ರಾಜ್ಯದಲ್ಲಿ ಮತ್ತೊಮ್ಮೆ ಮಳೆಯ ಅರ್ಭಟ ಜೋರಾಗಿದ್ದು, ಮಲೆನಾಡು, ಕರಾವಳಿ ಮತ್ತು ಉತ್ತರ
ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೆರಡು ದಿನಗಳಿಂದ
ಸುರಿಯುತ್ತಿರುವ ಭಾರಿ ಮಳೆಯಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ,
ಬೆಳಗಾವಿ, ಕೊಡಗು ಜಿಲ್ಲೆಗಳ ನದಿಗಳಲ್ಲಿ ಪ್ರವಾಹ ಬಂದಿದೆ. ಕೊಡಗಿನಲ್ಲಿ 24 ಗಂಟೆಗಳಲ್ಲಿ ಭಾರಿ
ಮಳೆಯಾಗಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ. ತಲಕಾವೇರಿ ಕ್ಷೇತದ ಪ್ರಧಾನ ಅರ್ಚಕ ಟಿ.ಎಸ್‌.
ನಾರಾಯಣ ಆಚಾರ್‌, ಪತ್ನಿ ಶಾಂತಾ, ಸಹೋದರ ಆನಂದತೀರ್ಥ, ಸಹಾಯಕ ಅರ್ಚಕರಾಗಿದ್ದ ಪವನ್‌ ಭಟ್‌,
ರವಿಕಿರಣ್‌ ಭಟ್‌ ಅವರು ಭೂಕುಸಿತದಲ್ಲಿ ಮಣ್ಣುಪಾಲಾದ ಮನೆಯಡಿ ಸಿಲುಕಿ ಮೃತಪಟ್ಟಿದ್ದಾರೆ. ಕೊಡಗು
ಜಿಲ್ಲೆಯ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಅಪಾರ ಪ್ರಮಾಣದ ಬೆಳೆ ಮತ್ತು
ಮನೆಗಳಿಗೆ ಹಾನಿಯಾಗಿದೆ.


ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಅಣ್ಣೂರಿನಲ್ಲಿ, ಉಡುಪಿ ಜಿಲ್ಲೆಯ ನಿಟ್ಟೂರಿನಲ್ಲಿ ಉತ್ತರ
ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು ಮತ್ತು ಕಲಘಟಗಿ ತಾಲ್ಲೂಕಿನ
ಗಂಜಿಗಟ್ಟಿಲ್ಲಿ, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಆಗಸ್ಟ್‌ 10ರ ವರೆಗೆ ವ್ಯಾಪಕ ಮಳೆಯಾಗಲಿದೆ. ಬೆಳಗಾವಿ,
ಬೀದರ್‌, ಹಾವೇರಿ, ಕಲಬುರ್ಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ.


ತುರ್ತು ಪರಿಹಾರಕ್ಕೆ ರೂ. 50 ಕೋಟಿ ಬಿಡುಗಡೆ:-ರಾಜ್ಯದ ಎಲ್ಲೆಡೆ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ
ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು, ತಕ್ಷಣದ ಪರಿಹಾರ ಕಾರ್ಯಕ್ಕೆ ರೂ.50 ಕೋಟಿ ಬಿಡುಗಡೆ
ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ
ಆಸ್ಪತ್ರೆಯಿಂದಲೇ ದೂರವಾಣಿ ಮೂಲಕ ಮಾತನಾಡಿದ ಅವರು ಮಳ ಮತ್ತು ಪ್ರವಾಹದ ವಿವರಗಳನ್ನು
ಪಡೆದುಕೊಂಡರು.


ಏಳು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌:- ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ
ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳಯಾಗುವ ನಿರೀಕ್ಷೆ ಇರುವುದರಿಂದ ಮೀನುಗಾರರು ಕಡಲಿಗೆ
ಇಳಿಯದಂತೆ ಇಲಾಖೆ ಎಚ್ಚರಿಸಿದೆ.


ಆಧಾರ:ವಿಶ್ವವಾಣಿ, ದಿನಾಂಕ:07.08.2020
21. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಾಸ್ತ್ರೀಯ ಅಧ್ಯಯನ ಕೇಂದ್ರ
ಮೆ


ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿರುವ ಚಾಮುಂಡಿ ಬೆಟ್ಟದ ತಪ್ಪಲಿನ 10 ಎಕರೆ ಜಮೀನಿನಲ್ಲಿ ಕನ್ನಡ
ಶಾಸ್ತ್ರೀಯ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.


ಮುಂದಿನ ಒಂದು ತಿಂಗಳೊಳಗೆ ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲು ಅಗತ್ಯ ಸಿದ್ದತೆಗಳನ್ನು
ಸ್ರಾರಂಭಿಸಬೇಕು. ಅಷ್ಟರಲ್ಲಿ ಜಮೀನು ಹಸ್ತಾಂತರ ಪ್ರಕ್ರಿಯೆಯೂ ಪೂರ್ಣಗೊಳಿಸಬೇಕು. ಇಲ್ಲದ ಸಲ್ಲದ


ನೆಪಹೇಳಿಕೊಂಡು ತಡ ಮಾಡಿದರೆ, ಅಂತಹ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ.
ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ ಹಲವು ವರ್ಷಗಳು ಕಳೆದರೂ ಶಾಶ್ವತ


3


206


ಅಧ್ಯಯನ ಕೇಂದ್ರ ಆರಂಭ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ವಿಷಾದ
ವ್ಯಕ್ತಪಡಿಸಿದರು.


ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ 3 ಎಕರೆ ಜಾಗದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು
ತೀರ್ಮಾನಿಸಲಾಗಿತ್ತು. ಆದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಲೋಕಶಿಕ್ಷಣ ಇಲಾಖೆಗೆ ನೀಡಿದ
ಜಾಗವನ್ನು ರದ್ದು ಪಡಿಸಿ ಉನ್ನತ ಶಿಕ್ಷಣ ಇಲಾಖೆಗೆ ಹಿಂತಿರುಗಿಸಿದೆ. ಈ ಜಾಗವನ್ನು ಕೌಶಲಾಭಿವೃದ್ಧಿ ಇಲಾಖೆಗೆ
ನೀಡುವಂತೆ ಮೈಸೂರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವ ಕಾರಣ ತಡವಾಗಿದೆ. ಆದ್ದರಿಂದ, ಅಧ್ಯಯನ
ಕೇಂದಕ್ಕೆ ಹೊರವಲಯದಲ್ಲಿ ಜಾಗ ನೀಡುವಂತೆ ಕೋರಿಕೆ ಸಲ್ಲಿಸಿದಾಗ ಉಪ ಮುಖ್ಯಮಂತ್ರಿ
ಡಾ.ಅಶ್ವತ್ಸನಾರಾಯಣ ಜಾಗ ನೀಡಲು ಒಪ್ಪಿಕೊಂಡರು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.


ಸಭೆಯಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಮೈಸೂರು ವಿಶ್ವವಿದ್ಯಾಲಯದ
ಟಿ.ವಿ.ವೆಂಕಟಾಚಲ ಶಾಸ್ತಿ, ಪ್ರೊತಳವಾರ್‌, ಡಾ.ದುರ್ಗಾದಾಸ್‌, ಪ್ರೊಎನ್‌.ಎಸ್‌.ತಾರಾನಾಥ್‌, ಸಿಐಐಎಲ್‌ನ
ನಿರ್ದೇಶಕ ಡಾ.ಜಿ.ರಾವ್‌ ಭಾಗವಹಿಸಿದ್ದರು.


ಆಧಾರ:ಉದಯವಾಣಿ, ದಿನಾಂಕ:08.08.2020
22 ಉಕ್ಕೇರಿದ ಕೃಷ್ಣಾ ಿ, ತಣ್ಣಗಾದ ಮಲಪ್ರಭ


ಕಳೆದೊಂದು ವಾರದಿಂದ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದ ಮಳ ತಣ್ಣಗಾಗಿದೆ. ಇದರಿಂದ ನದಿಗಳ
ಒಳಹರಿವು ಸಹ ಕಡಿಮೆಯಾಗಿದ್ದು ನದಿ ಪಾತ್ರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮಹಾರಾಷ್ಟ್ರದ
ಜಲಾಶಯಗಳಿಂದ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದ್ದು ಇನ್ನೂ ಪ್ರವಾಹದ
ಆತಂಕ ಹಾಗೆಯೇ ಇದೆ.


ಮಹಾರಾಷ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಾಗಲಕೋಟಿ ಜಿಲ್ಲೆಯ ವಿಜಯಪುರ-
ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಸಹಿತ 16 ಸೇತುವೆಗಳು ಮುಳುಗಡೆಯಾಗಿದ್ದು, 9 ಗ್ರಾಮಗಳಿಗೆ ನೀರು ನುಗ್ಗಿದೆ.


ಮಹಾರಾಷ್ಟದ ವಿವಿಧ ಜಲಾಶಯಗಳು ಹಾಗೂ ದೂಧಗಂಗಾದಿಂದ ಕರ್ನಾಟಕ ಕಲ್ಲೋಳ ಬಳಿ ಕೃಷ್ಣಾ
ನದಿಗೆ 2.24 ಲಕ್ಷ ಕ್ಯೂಸೆಕ್‌ ನೀರು ಬರುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ನೀರಿನ ಮಟ್ಟದಲ್ಲಿ 28 ಘಾ
ಕ್ಯೂಸೆಕ್‌ ಹೆಚ್ಚಳವಾಗಿದೆ. ಕೊಯ್ದಾ ಕನೇರ, ವಾರಣಾ ಮೊದಲಾದ ಜಲಾಶಯಗಳಿಂದ ರಾಜಾಪುರ ಬ್ಯಾರೇಜ್‌ಗೆ
1.90 ಲಕ್ಷ ಕ್ಯೂಸೆಕ್‌ ಹಾಗೂ ನಗರದ 33440 ಕ್ಯೂಸೆಕ್‌ ಸೇರಿ ಕರ್ನಾಟಕದ ಕಲ್ಲೋಳ ಬಳಿ ಕೃಷ್ಣಾ
ನದಿಗೆ 2.24 ಲಕ್ಷ ಕ್ಕೂಸೆಕ ನೀರು ಬರಲಾರಂಭಿಸಿದೆ. ನೀರಿನ ಮಟ್ಟ ಒಂದೇ ಸಮನೆ
ಏರಿಕೆಯಾಗುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.


ಮಲಪ್ರಭಾದಲ್ಲಿ ಇಳಿಮುಖ: 4-5 ದಿನಗಳಿಂದ ಅಬ್ದರಿಸುತ್ತಿದ್ದ ಮಲಪಭೆ ಶಾಂತವಾಗಿದ್ದಾಲಳೆ. ಖಾನಾಪುರ
ತಾಲ್ಲೂಕಿನಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಮಲಪ್ರಭಾ ಜಲಾಶಯಕ್ಕೆ ಬರುವ ನೀರಿನ ಪ್ರಮಾಣದಲ್ಲಿ
ಸಾಕಷ್ಟು ಇಳಿಕೆಯಾಗಿದೆ. ಸಂಜೆ ವೇಳೆಗೆ ಲಭ್ಯವಾದ ಮಾಹಿತಿಯಂತೆ ಜಲಾಶಯಕ್ಕೆ ಈಗ 9490 ಕ್ಯೂಸೆಕ್‌ ನೀರು
ಬರುತ್ತಿದ್ದು ನದಿಗೆ 3500 ಕ್ಯೂಸೆಕ್‌ ನೀರನ್ನು ಬಿಡಲಾಗುತ್ತಿದೆ. ನೀರಿನ ಮಟ್ಟ ಇಳಿದಿದ್ದರಿಂದ ರಾಮದುರ್ಗ
ತಾಲ್ಲೂಕಿನ ನದಿ ತೀರದ ಜನರು ಪ್ರವಾಹದ "ಆತಂಕದಿಂದ ಹೊರಬಂದಿದ್ದಾರೆ. ನೀರಿನ ಹರಿವಿನ ಪ್ರಮಾಣ
ಗಣನೀಯವಾಗಿ ಕಡಿಮೆಯಾಗಿದ್ದರಿಂದ ರಾಮದುರ್ಗ-ಸುನ್ನಾಳ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.


ಹಿಡಕಲ್‌ ಜಲಾಶಯದಲ್ಲಿ ನೀರಿನ ರಭಸ ಕಡಿಮೆಯಾಗಿದೆ. ಮಹಾರಾಷ್ಟದ ಆಂಬೋಲಿ ಘಟ್ಟ ಪ್ರದೇಶದಲ್ಲಿ
ಮಳ ಕಡಿಮೆಯಾಗಿದ್ದರಿಂದ ಘಟಪ್ರಭಾ ನದಿಗೆ ಈಗ 35 ಸಾವಿರ ಕ್ಕೂಸೆಕ್‌ ನೀರು ಬರುತ್ತಿದೆ. ಜಲಾಶಯದ
ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಒಟ್ಟು 2175 ಅಡಿ
ಸಾಮರ್ಥ್ಯದ ಹಿಡಕಲ್‌ ಜಲಾಶಯದಲ್ಲಿ ಈಗ 2173 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಮಾರ್ಕಂಡೇಯ,
ಹಿರಣ್ಯಕೇಶಿ, ಬಳ್ಳಾರಿ ನಾಲಾ ನೀರಿನ ಒಳಹರಿವಿನ ಪ್ರಮಾಣದಲ್ಲಿ ಸಾಕಷ್ಟು ಕಡಿಮೆಯಾಗಿದ್ದು, ನದಿ ತೀರದ
ಗ್ರಾಮಗಳ ಜನರಲ್ಲಿ ಪ್ರವಾಹದ ಆತಂಕ ದೂರವಾಗಿದೆ.


ಆಧಾರ:ಉದಯವಾಣಿ, ದಿನಾ೦ಕ:20.08.2020


207
23. ಲೈಬ್ರರಿ ಪುಸ್ತಕ ಆಯ್ಕೆ ಸಮಿತಿಗೆ ಸಾಹಿತಿ ದೊಡ್ಡರಂಗೇಗೌಡ ಅಧ್ಯಕ್ಷ


ಸಾರ್ವಜನಿಕ ಗಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಹಿರಿಯ ಸಾಹಿತಿ
ಡಾ.ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯ ನೂತನ ಸಮಿತಿಯನ್ನು ರಚಿಸಿ ಸರ್ಕಾರ ಆದೇಶಿಸಿದೆ. ಸದಸ್ಯರಾಗಿ
ಸಾಹಿತಿ ಆರ್‌.ದೊಡ್ಡೇಗೌಡ, ಪತ್ರಕರ್ತ ಎಂ.ಮಂಜುನಾಥ ಬಮ್ಮನಕಟ್ಟಿ, ನಿ.ಗಿರಿಗೌಡ, ಸಾಹಿತಿ
ರಾ.ನಂ.ಚೆಂದ್ರಶೇಖರ್‌, ಪುಸ್ತಕ ಪ್ರಕಾಶಕ ಡಿ.ಎನ್‌.ಲೋಕಪ್ತ ಕನ್ನಡ ಷುಸ್ತಕ ಪ್ರಾಧಿಕಾರ ಅಧ್ಯಕ್ಷ
ಡಾ.ಎಂ.ಎನ್‌.ನಂದೀಶ್‌ ಹಂಚಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌, ಧಾರವಾಡ
ಪ್ರಸಾರಾಂಗ ನಿರ್ದೇಶಕ, ಕರ್ನಾಟಕ ವಿಜ್ಞಾನ ಪರಿಷತ್‌ ಅಧ್ಯಕ್ಷ, ರಾಜ್ಯ ಗಂಥಾಲಯ ಸಂಘದ ಅಧ್ಯಕ್ಷ
ಡಾ.ಎ.ವೈ.ಅಸುಂಡಿ, ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರನ್ನು ನೇಮಿಸಲಾಗಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:20.08.2020
24. ಸ್ವಚ್ಛನಗರಿ: ಮೈಸೂರಿಗೆ ಗರಿ, ದೇಶದಲ್ಲಿ ಕರ್ನಾಟಕ ನಂ.11


ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನದಡಿ ಪ್ರತಿ ವರ್ಷ ನೀಡಲಾಗುವ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಯ
2020ನೇ ಸಾಲಿನ ರ್ಯಾಂಕಿಂಗ್‌ ಅನ್ನು ಪ್ರಕಟಿಸಿದೆ. ಇದರಲ್ಲಿ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳ
ಪಟ್ಟಿಯಲ್ಲಿ ಮೈಸೂರು ನಗರ ನಂ.2 ಸ್ವಚ್ಛ ನಗರ ಎಂಬ ರ್ಯಾಂಕಿಂಗ್‌ ಪಡೆದಿದೆ. ಇನ್ನು ದೇಶದ ಅತ್ಯಂತ ಸ್ವಚ್ಛ
ನಗರಗಳ ಸಮಗ್ರ ಪಟ್ಟಿಯಲ್ಲಿ ಬೆಂಗಳೂರು ನಗರ 37ನೇ ಸ್ಥಾನ ಪಡೆದುಕೊಂಡಿದೆ. ಜೊತೆಗೆ ಸ್ವಚ್ಛ ರಾಜ್ಯಗಳ
ಪಟ್ಟಿಯಲ್ಲಿ 940 ಅಂಕಗಳೊಂದಿಗೆ ಕರ್ನಾಟಕ 11ನೇ ಸ್ಥಾನ ಪಡೆದುಕೊಂಡಿದೆ.

ಸ್ವಚ್ಛ ಸರ್ವೇಕ್ಷಣಾ ರ್ಯಾಂಕಿಂಗ್‌ ಆರಂಭಿಸಿದ ಮೊದಲ ವರ್ಷದಲ್ಲಿ ಸಮಗ್ರ ಪಟ್ಟಿಯಲ್ಲಿ ಮೈಸೂರು
ಮೊದಲ ಸ್ಥಾನ ಪಡೆದುಕೊಂಡಿತ್ತು ಆದರೆ ಈ ವರ್ಷ ಆ ಪಟ್ಟಿಯಲ್ಲಿ ಟಾಪ್‌ 20ರಲ್ಲೂ ಕರ್ನಾಟಕದ
ಯಾವುದೇ ನಗರಗಳು ಸ್ಥಾನ ಪಡೆದಿಲ್ಲ. ಆದರೆ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳ ಪಟ್ಟಿಯಲ್ಲಿ
ನಂ.2 ಸ್ವಚ್ಛ ನಗರ ಎಂಬ ರ್ಯಾಂಕಿಂಗ್‌ ಪಡೆದಿದೆ. ಛತ್ತೀಸ್‌ಗಢದ ಅಂಬಿಕಾನಗರ ನಂ. ನವದೆಹಲಿ
(ಎನ್‌ಡಿಎಂಡಿ) ನಂ.3 ಸ್ಥಾನ ಪಡೆದಿವೆ.


50 ಸಾವಿರದಿಂದ 1 ಲಕ್ಷ ಜನಸಂಖ್ಯೆಯುಳ್ಳ ಪಟ್ಟಣಗಳ ಪೈಕಿ ದಕ್ಷಿಣ ಭಾರತದ ವಿಭಾಗದಲ್ಲಿ ಮೈಸೂರು
ಜಿಲ್ಲೆಯ ಹುಣಸೂರು 9ನೇ ರ್ಯಾಂಕ್‌ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು 17ನೇ ರ್ಯಾಂಕ್‌ ಪಡೆದಿವೆ.


25 ಸಾವಿರದಿಂದ 50 ಸಾವಿರ ಜನಸಂಖ್ಯೆಯುಳ್ಳ ಪಟ್ಟಣಗಳ ಪೈಕಿ ದಕ್ಷಿಣ ಭಾರತದ ವಿಭಾಗದಲ್ಲಿ
ಮೈಸೂರು ಜಿಲ್ಲೆಯ ಕೃಷ್ಣರಾಜನಗರ(ಕೆ.ಆರ್‌.ನಗರ) 3ನೇ ಸ್ಥಾನ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ 8ನೇ ಸ್ಥಾನ,
ದಕ್ಷಿಣ ಕನ್ನಡದ ಮೂಡಬಿದಿರೆ 10ನೇ ಸ್ಥಾನ, ತುಮಕೂರು ಮಧುಗಿರಿ 18ನೇ ಸ್ಥಾನ ಪಡೆದಿದೆ.


25 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಪಟ್ಟಣಗಳ ಪೈಕಿ ದಕ್ಷಿಣ ಭಾರತದ ವಿಭಾಗದಲ್ಲಿ ಮೈಸೂರು
ಜಿಲ್ಲಯ ಪಿರಿಯಾಪಟ್ಟಣ ನಂ.1 ಸ್ಥಾನ, ಎಚ್‌.ಡಿ. ಕೋಟಿ ನಂ.2 ಸ್ಥಾನ ಹಾಗೂ ಟಿ.ನರಸೀಪುರ ನಂ.3 ಸ್ಥಾನ,
ಮಂಡ್ಯ ಜಿಲ್ಲೆಯ ನಾಗಮಂಗಲ 6ನೇ ಸ್ಥಾನ, ಚಿತ್ರದುರ್ಗದ ಮೊಳಕಾಲ್ಲೂರು 12ನೇ ಸ್ಥಾನ, ಬೆಂಗಳೂರು
ಗ್ರಾಮಾಂತರದ ಅತ್ತಿಬೆಲೆ 15ನೇ ಸ್ಥಾನ, ಮೈಸೂರು ಜಿಲ್ಲೆಯ ಸರಗೂರು 19ನೇ ಸ್ಥಾನ ಹಾಗೂ ಉಡುಪಿ ಜಿಲ್ಲೆಯ
ಕಾಪು 20ನೇ ಸ್ಥಾನ ಪಡೆದಿವೆ.


ಆಧಾರ:ಕನ್ನಡ ಪ್ರಭ, ದಿನಾಂಕ:21.08.2020
25. 28 ನೀರಾವರಿ ಯೋಜನೆ ಕಾಮಗಾರಿ ಪ್ರಗತಿ


ನಮ್ಮ ಸರ್ಕಾರ ನೀರಾವರಿ ಯೋಜನೆಗೆ ಪ್ರಥಮ ಆದ್ಯತೆ ನೀಡಿದೆ. ರಾಜ್ಯದಲ್ಲಿ ರೂ. 74 ಸಾವಿರ ಕೋಟಿ
ವೆಚ್ಚದಲ್ಲಿ ಕುಡಿಯುವ ನೀರು, ಏತ ನೀರಾವರಿ, ಕೃಷಿ ಚಟುವಟಿಕೆಗೆ ನೀರೊದಗಿಸುವ ಹಾಗೂ ಕೆರೆ-ಕಟ್ಟೆಗಳಿಗೆ
ನೀರು ತುಂಬಿಸುವ 28 ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಅವು ಪ್ರಗತಿಯಲ್ಲಿವೆ ಎಂದು ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಹೇಳಿದರು.


208


ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ
ಮಾತನಾಡಿ, ಕಾವೇರಿ ನದಿ ನೀರು ಸಂರಕ್ಷಿಸಿ ವಿದ್ಯುತ ಉತ್ಪಾದನೆ, ಕೃಷಿ ಹಾಗೂ ಕುಡಿಯುವ ನೀರಿನ
ಉದ್ದೇಶಕ್ಕೆ ರೂಪಿಸಲಾಗಿರುವ ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಕ್ರಮ ವಹಿಸಲಾಗುವುದು. ಈಗಾಗಲೇ ಈ
ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಅನುಮತಿ ಪಡೆದು ಯೋಜನೆ ರೂಪಿಸಲಾಗುವುದು ಎಂದರು.


ವೈದಿಕರಾದ ಭಾನುಪ್ರಕಾಶ್‌ ಶರ್ಮಾ ನೇತೃತ್ವದ ತಂಡ ಕಾವೇರಿ ಮಾತೆಗೆ ವಿವಿಧ ಪೂಜೆ ಸಲ್ಲಿಸಿತು.
ಮಧ್ಯಾಹ್ನ 12.05ಕ್ಕೆ ಅಭಿಜಿನ್‌ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಮೂಲಕ 5 ಬಾರಿ
ಬಾಗಿನ ಅರ್ಪಿಸಿದ ಹೆಗ್ಗಳಿಕೆಗೆ ಯಡಿಯೂರಪ್ಪ ಪಾತ್ರರಾದರು.


ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗಿನ ಅರ್ಪಿಸಿದರು. ಬಳಿಕ ಕಬಿನಿ
ಜಲಾಶಯದ ಕೆಳಭಾಗದಲ್ಲಿ ಮೇಲ್ಲಟ್ಟದ ಸೇತುವೆ ಹಾಗೂ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗಳಿಗೆ
ಗುದ್ದಲಿಪೂಜೆ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.


ಆಧಾರ:ಉದಯವಾಣಿ, ದಿನಾ೦ಕ:22.08.2020
26. ಆನೆ ಕಾರಿಡಾರ್‌: 106 ಎಕರೆ ಸ್ಟಾಧೀನಕ್ಕೆ ಇಲಾಖೆ ಪ್ರಸ್ತಾವನೆ


ಕಣಿಯನಪುರ ಆನೆ ಕಾರಿಡಾರ್‌ ನಿರ್ಮಾಣಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲ
ಸುಮಾರು 106 ಎಕರೆ ಅರಣ್ಯ ಭೂಮಿಯನ್ನು ರೈತರಿಂದ ಸ್ಪಾಧೀನ ಪಡೆದುಕೊಳ್ಳುವ ಸಂಬಂಧ ಅರಣ್ಯ ಇಲಾಖೆ
ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಬಂಡೀಪುರ ಅಭಯಾರಣ್ಯ ಮತ್ತು ತಮಿಳುನಾಡಿನ ಮಧುಮಲೈ ಅರಣ್ಯಗಳ ನಡುವಿನ ಆನೆಗಳು
ಸೇರಿದಂತೆ ವನ್ಯಜೀವಿಗಳು ಸುಗಮ ಸಂಚಾರಕ್ಕಾಗಿ ಈ ಭೂಮಿ ನೆರವಾಗಲಿದ್ದು, ಕಣಿಯನಪುರ ಆನೆ ಕಾರಿಡಾರ್‌
ಆಗಲಿದೆ. ಇದರಿಂದ ಈ ಭಾಗದಲ್ಲಿನ ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳನ್ನು ತಡೆಯಬಹುದು ಎಂದು
ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಣಿಯನಪುರ ಆನೆ ಕಾರಿಡಾರ್‌ಗೆ ಸುಮಾರು 600
ಎಕರೆಗೂ ಹೆಚ್ಚು ಭೂಮಿ ಅಗತ್ಯವಿದೆ. ಪ್ರಸ್ತುತ 106 ಎಕರೆ ಭೂಮಿ ನೀಡಲು ಸ್ಥಳೀಯ ರೈತರು ಮುಂದೆ
ಬಂದಿದ್ದಾರೆ. ಇತರೆ ರೈತರು ಜಮೀನು ನೀಡುವ ಸಂಬಂಧ ಚರ್ಚಿಸಲಾಗುತ್ತಿದೆ ಎಂದು ಬಂಡೀಪುರ ಹುಲಿ
ಯೋಜನೆ ನಿರ್ದೇಶಕ ಆರ್‌.ಬಾಲಚಂದ್ರ ಮಾಹಿತಿ ನೀಡಿದರು.


ಕಣಿಯನಪುರ ಆನೆ ಕಾರಿಡಾರ್‌ಗೆ ಸೇರಿರುವ ಖಾಸಗಿ ಜಮೀನುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ
ಜಮೀನುಗಳು ಇವೆ. ಈ ಜಮೀನುಗಳನ್ನು ಪರಿಶಿಷ್ಠ ಪಂಗಡ ಮತ್ತು ಜಾತಿಗಳ (ಕೆಲವು ಜಮೀನುಗಳ
ವರ್ಗಾವಣೆ ಕಾಯಿದೆ) ಅಡಿ ಹಸ್ತಾಂತರಿಸಲು ಅವಕಾಶವಿಲ್ಲ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ
ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.


ಆಧಾರ:ಕನ್ನಡ ಪ್ರಭ, ದಿನಾಂಕ:30.08.2020
27. ಬೆಂಗಳೂರಿನ ಐಐಎಸ್‌ಸಿಗೆ ದೇಶದ ನಂ.1 ವಿವಿ ಪಟ್ಟ


2021ನೇ ಸಾಲಿನ ಟೈಮ್ಸ್‌ ಹೈಯರ್‌ ಎಜುಕೇಷನ್‌ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್‌ ಬಿಡುಗಡೆಯಾಗಿದ್ದು,
ಈ ಬಾರಿ ಭಾರತದ 63 ವಿವಿಗಳು ಸ್ಥಾನಪಡೆದುಕೊಂಡಿವೆ. ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ
ಸಂಸ್ಥೆ (ಐಐಎಸ್‌ಸಿ) 301-350ನೇ ಶ್ರೇಯಾಂಕದ ವಿಭಾಗದಲ್ಲಿ ಸ್ಥಾನ ಪಡೆಯುವ ಮೂಲಕ ಭಾರತದ ನಂ.1
ವವಿಯಾಗಿ ಹೊರಹೊಮ್ಮಿದೆ. ಕಳೆದ ಬಾರಿ ಪಟ್ಟಿಯಲ್ಲಿ ಭಾರತದ 59 ವಿವಿಗಳು ಸ್ಥಾನಪಡೆದುಕೊಂಡಿದ್ದವು. ಈ
ಬಾರಿ ಅದು 63ಕ್ಕೆ ಏರಿದೆ.


ವಿಶ್ನದ 1500 ವಿಶ್ವವಿದ್ಯಾಲಯಗಳಿಗೆ ಅವುಗಳ ಬೋಧನಾ ಗುಣಮಟ್ಟ ಸಂಶೋಧನೆ ಮತ್ತು ಜ್ಞಾನ
ಹಂಚಿಕೆ ಪರಿಗಣಿಸಿ ಶ್ರೇಯಾಂಕವನ್ನು ನೀಡಲಾಗಿದೆ. ಪಟ್ಟಿಯಲ್ಲಿ ಆಕ್ಸ್‌ಫರ್ಡ್‌ ವಿವಿ ಮೊದಲ ಸ್ಥಾನ
ಪಡೆದುಕೊಂಡಿದೆ. ಐಐಎಸ್‌ಸಿ, ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟಿಕ್ಸಾಲಜಿ, ಇಂಡಿಯನ್‌ ಇನ್ಸ್‌ಟಿಟ್ಯೂಟ್‌
ಆಫ್‌ ಟೆಕ್ಕಾಲಜಿ ಇಂದೋರ್‌ ಭಾರತದ ಟಾಪ್‌ 3 ವಿವಿಗಳಾಗಿ ಹೊರಹೊಮ್ಮಿವೆ. ಉಳಿದಂತೆ ಕರ್ನಾಟಕದ
ಮಣಿಪಾಲ್‌ ವಿವಿ ಮತ್ತು ಮೈಸೂರು ಎವಿ 1001 ವಿಭಾಗದಲ್ಲಿ ಸ್ಥಾನ ಪಡೆದಿವೆ.


ಆಧಾರ:ಕನ್ನಡ ಪ್ರಭ, ದಿನಾಂಕ:03.09.2020


209


28. ಕರ್ನಾಟಕವೇ ಟಾಪ್‌


ಸ್ಪಾರ್ಟ್‌ಅಪ್‌ಗಳ ವಿಚಾರದಲ್ಲಿ ಇಡೀ ದೇಶದಲ್ಲೇ ಭಾರಿ ಹೆಸರುಗಳಿಸಿರುವ ಕರ್ನಾಟಕ್ಕೆ ಈಗ "ಶೇಷ್ಠತೆ'ಯ
ಮಾನ್ಯತೆ ಸಿಕ್ಕಿದೆ. ಕೇಂದ್ರ ಸರ್ಕಾರ ದೇಶದ ಸ್ಪಾರ್ಟ್‌ಅಪ್‌ಗಳ ರ್ಯಾಂಕಿಂಗ್‌ ಬಿಡುಗಡೆ ಮಾಡಿದ್ದು, ಶ್ರೇಷ್ಠ ಸಾಧಕರ
ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಂತರ ಕೇರಳವಿದೆ.


ಕೇಂದ್ರ ಸರ್ಕಾರ 2018ರಲ್ಲಿ ಸ್ಪಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವ ರಾಜ್ಯಗಳಿಗೆ ರ್ಯಾಂಕಿಂಗ್‌ ನೀಡುವ
ಸಂಪ್ರದಾಯ ಆರಂಭಿಸಿತು. ಮೊದಲ ಬಾರಿಯೇ ಗುಜರಾತ್‌ ಉತ್ತಮ ಸಾಧಕ ಪಟ್ಟ ಗಳಿಸಿಕೊಂಡಿತ್ತು.
ನಂತರದಲ್ಲಿ ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ ಸ್ಥಾನ ಪಡೆದುಕೊಂಡಿದ್ದವು. ಈ ಬಾರಿ ಏಳು
ಮಾನದಂಡಗಳು ಮತ್ತು 30 ಕ್ರಿಯಾ ಅಂಶಗಳ ಆಧಾರದಲ್ಲಿ ರ್ಯಾಂಕಿಂಗ್‌ ನೀಡಲಾಗಿದೆ. ಗುಜರಾತ್‌ ರಾಜ್ಯಕ್ಕೆ
ಈ ಬಾರಿಯೂ ಅತ್ಯುತ್ತಮ ಸಾಧಕ ಪಟ್ಟ ಸಿಕ್ಕಿದೆ. ಆದರೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಶ್ರೇಷ್ಟ ಸಾಧನೆ
ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿವೆ.


ಈ ಸ್ಪರ್ಧೆಯಲ್ಲಿ ಕರ್ನಾಟಕವೂ ಸೇರಿ 22 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು
ಭಾಗವಹಿಸಿದ್ದವು. ಈ ರಾಜ್ಯಗಳು ಸ್ಪಾರ್ಟ್‌ಅಪ್‌ಗಳಿಗೆ ನೀಡುವ ಸಾಂಸ್ಥಿಕ ಬೆಂಬಲ, ಸರ್ಕಾರದ ನಿಯಮಗಳ
ಸರಳೀಕರಣ, ಟೆಂಡರ್‌ ಪ್ರಕ್ರಿಯೆಗಳ ಸರಳೀಕರಣ, ಮೂಲಧನ ಬೆಂಬಲ, ವೆಂಚರ್‌ ನಿಧಿ ಬೆಂಬಲ ಮತ್ತು ಅರಿವು
ಹಾಗೂ ತಲುಪುವಿಕೆ ನಿಯಮಗಳನ್ನು ಮುಂದಿಟ್ಟುಕೊಂಡು ರ್ಯಾಂಕಿಂಗ್‌ ನೀಡುವ ಸಂಬಂಧ ಫಲಾನುಭವಿಗಳಾದ
ಸ್ಪಾರ್ಟ್‌ಅಪ್‌ಗಳ ಮಾಲೀಕರಿಗೆ ಕರೆ ಮಾಡಿ ಅಭಿಪ್ರಾಯ ಪಡೆಯಲಾಗಿದೆ. ಅಂದರೆ, ಸುಮಾರು 60 ಸಾವಿರ ಕರೆ
ಮಾಡಲಾಗಿದೆ ಎಂದು ಕೇಂದ ಸರ್ಕಾರವೇ ಹೇಳಿದೆ.


ರ್ಯಾಂಕಿಂಗ್‌ ಪಟ್ಟಿ ಬಿಡುಗಡೆ ನಂತರ ಮಾತನಾಡಿದ ಕೇಂದ್ರ ಸಚಿವ ಪಿಯೂಶ್‌ ಗೋಯಲ್‌, ನಮ್ಮ
ದೇಶದ ಸ್ಪಾರ್ಟ್‌ಅಪ್‌ಗಳು ಸಮಸ್ಯೆಗಳಿಗೆ ಅತ್ಯುತ್ತಮವಾದ ಪರಿಹಾರ ಹುಡುಕಿಕೊಂಡು ಬರುತ್ತಿವೆ. ಭಾರತದಲ್ಲಿನ
ಆನ್‌ಲೈನ್‌ ತರಗತಿಗೆ ಸಂಬಂಧಿಸಿದ ಸ್ಪಾರ್ಟ್‌ಅಪ್‌ಗಳು ಅಭೂತಪೂರ್ವ ಸಾಧನೆ ಮಾಡಿವೆ ಎಂದಿದ್ದಾರೆ.


ಆಧಾರ:ಉದಯವಾಣಿ, ದಿನಾ೦ಕ:12.09.2020

29.ನಾಲ್ಕೂ ಕ್ರೆಸ್ಸ್‌ಗೇಟ್‌ ಓಪನ್‌
ಮಧ್ಯ ಕರ್ನಾಟಕ ರೈತರ ಜೀವನಾಡಿ ಭದ್ರ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನ
ಸುರಕ್ಷತಾ ದೃಷ್ಟಿಯಿಂದ ಮುಂಜಾಗತಾ ಕ್ರಮವಾಗಿ ಜಲಾಶಯದ ಎಲ್ಲಾ ನಾಲ್ದು ಕೆಸ್ಟ್‌ಗೇಟ್‌ ತೆರೆದು 2288


ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಕಳದ ಕೆಲ
ದಿನಗಳಿಂದ ಭದ್ರಾ ಜಲಾನಯನ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಉತ್ತಮ ಒಳಹರಿವು ಇತ್ತು.


ಅಣೆಕಟ್ಟೆಯಲ್ಲಿ ಬೆಳಗ್ಗಿನ ಮಾಹಿತಿಯಂತೆ 1857 ಅಡಿ ನೀರು ಸಂಗ್ರಹವಾಗಿತ್ತು ಈ ಬಾರಿ
ತಡವಾಗಿಯಾದರೂ ಭದೆ ಭರ್ತಿಯಾಗಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಹರ್ಷ ಮೂಡಿಸಿದೆ.


71.116 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 70.012 ಟಿಎಂಸಿ ನೀರು ಸಂಗ್ರಹವಾಗಿದೆ. ನದಿಗೆ 400
ಕ್ಯೂಸೆಕ್‌, ಎಡದಂಡೆ ನಾಲೆಗೆ 100 ಕ್ಯೂಸೆಕ್‌, ಬಲದಂಡೆ ನಾಲೆಗೆ 917 ಕ್ಕೂಸೆಕ್‌ ಸೇರಿದಂತೆ ಒಟ್ಟು 2288
ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ.


1965ರಲ್ಲಿ ನಿರ್ಮಾಣಗೊಂಡ ಭದ್ರಾ ಜಲಾಶಯ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ
ಜಿಲ್ಲೆಗಳ ರೈತರ ಜೀವನಾಡಿಯಾಗಿದೆ. 55 ವರ್ಷಗಳ ಇತಿಹಾಸ ಹೊಂದಿರುವ ಭದ್ರಾ ಜಲಾಶಯ ಈವರೆಗೆ 32
ಬಾರಿ ಭರ್ತಿಯಾಗಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:15.09.2020
30. ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆ


ಉತ್ತರ ಕರ್ನಾಟಕ ಭಾಗದಲ್ಲಿ ರಾತ್ರಿಯಿಂದ ಭಾರಿ ಮಳೆ ಆಗಿದೆ. ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ಗಾಮೀಣ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.


210


ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ನದಿ-ಹಳ್ಳಗಳು ಉಕ್ಕಿ
ಹರಿಯುತ್ತಿವೆ. ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಎರಡು ಸಾವಿರಕ್ಕೂ ಹೆಚ್ಚು ಮನೆಗಳಿಗೆ
ಹಾನಿಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.


ಕಲಬುರ್ಗಿ ನಗರದ ಮುಖ್ಯರಸ್ನೆಯ 60ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ಹಾನಿ
ಸಂಭವಿಸಿದೆ. ಕಾಗಿಣಾ ನದಿ ಪ್ರವಾಹದಿಂದಾಗಿ ಮಳಖೇಡ ಬಳಿಯ ಸೇತುವೆ ಮುಳುಗಿದೆ. ಕಲಬುರ್ಗಿ-
ಉದನೂರು, ಮುಧೋಳ-ಕೊತ್ತಪಲ್ಲಿ ರಸ್ನೆಗಳ ಮೇಲೆ ನೀರು ನುಗ್ಗಿ ಸಂಚಾರ ಸಂಪೂರ್ಣ ಬಂದ್‌ ಆಗಿದೆ.
ಜೇವರ್ಗಿ ಪಟ್ಟಣದ ಮುಖ್ಯರಸ್ತೆ ಕೊಚ್ಚಿಕೊಂಡು ಹೋಗಿದೆ.


ಕಾಳಗಿಯ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ, ಚಿಂಚೋಳಿ ತಾಲ್ಲೂಕಿನ ರುದ್ದ್ಧೂರು ಗ್ರಾಮದ
ಐತಿಹಾಸಿಕ ತೋಂಡದ ಸಿದ್ದೇಶ್ವರ ಮಠ, ಮಳಖೇಡ ಸಮೀಪದ ಉತ್ತರಾದಿಮಠ ಜಲಾವೃತವಾಗಿವೆ.


"ಜಿಲ್ಲೆಯಲ್ಲಿ ಮುಂಗಾರು ಆರಂಭದಿಂದ ಇಲ್ಲಿಯವರೆಗೆ ಶೇ.46ರಷ್ಟು ಹೆಚ್ಚುವರಿ ಮಳ ಬಿದ್ದಿದ್ದು
ದಶಕದಲ್ಲೇ ಇದು ದಾಖಲೆ” ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.


ಧಾರವಾಡ, ವಿಜಯಪುರ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ಕಾರವಾರ, ಶಿರಸಿ, ಹಾವೇರಿ ಹಾಗೂ
ಗದಗ ಜಿಲ್ಲೆಯಲ್ಲಿ ಮಳೆಯಾಗಿದೆ.


ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಅತಿ ಹೆಚ್ಚು, 10.03 ಸೆ.ಮೀ ಮಳ
ದಾಖಲಾಗಿದೆ. 15 ಮನೆಗಳು ಕುಸಿದಿವೆ. ರಬಕವಿ ಬನಹಟ್ಟಿಯಲ್ಲಿ ಸಂಜೆ ಮತ್ತು ಬೆಳಗ್ಗೆ ಸುರಿದ ಭಾರಿ ಮಳೆಗೆ
ಸ್ಥಳೀಯ ಪೊಲೀಸ್‌ ಠಾಣೆಯ ಹಿಂಭಾಗದಲ್ಲಿರುವ ಅಂಜುಮನ್‌ ಎ ಇಸ್ಲಾಂ ಸರ್ಕಾರಿ ಕನ್ನಡ ಗಂಡು ಮಕ್ಕಳ
ಉರ್ದು ಶಾಲೆಯ ಕಟ್ಟಡ ಕುಸಿದುಬಿದ್ದಿದೆ. ಕೊಡಗು, ಶಿವಮೊಗ್ಗ ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ,
ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳ ಆಗಿದೆ.


ಆಧಾರ:ಪ್ರಜಾವಾಣಿ, ದಿನಾಂಕ:27.09.2020
31. ಹಾನಿ ತಡೆಗೆ ಶೇ. 50 ಕೆರೆ ನೀರು ಖಾಲಿ


ಮಳೆಗಾಲದಲ್ಲಿ ಕೆರೆಗಳಲ್ಲಿ ನೀರು ತುಂಬಿ ಕೋಡಿ ಒಡೆದು, ಪ್ರವಾಹ ಸೃಷ್ಟಿಯಾಗುವುದನ್ನು ತಪ್ಪಿಸಲು, ಪ್ರಶಿ
ಮಳೆಗಾಲಕ್ಕೂ ಮುನ್ನ ಕೆಲವು ಕೆರೆಗಳಿಂದ ಶೇ. 50 ನೀರು ಖಾಲಿ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.


ರಾಜಧಾನಿಯಲ್ಲಿ 200ಕ್ಕೂ ಅಧಿಕ ಕೆರೆಗಳಿದ್ದು, ಮಳೆಯಿಂದಾಗಿ ಕೆರೆಗಳು ತುಂಬಿ ಇದರಿಂದ ಅಪಾರ
ಆಸ್ತಿಪಾಸ್ತಿ ಹಾನಿಯಾಗುತ್ತದೆ. ಇದನ್ನು ತಪ್ಪಿಸಲು ಮಳೆಗಾಲಕ್ಕೂ ಮುನ್ನ ಕೆರೆಯಲ್ಲಿನ ಅರ್ಧದಷ್ಟು ಖಾಲಿ
ಮಾಡಲು ಬಿಬಿಎಂಪಿ ಹೊಸ ಯೋಜನೆ ರೂಪಿಸಲು ಸಿದ್ದವಾಗಿದೆ. ಯಾವ ಕೆರೆಗಳ ನೀರನ್ನು ಹೇಗೆ ಖಾಲಿ
ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಸಾಧಕ-ಬಾಧಕ ತಿಳಿದುಕೊಂಡು ಯೋಜನೆ ಜಾರಿಗೊಳಿಲಾಗುವುದು
ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.


ಸಂಸ್ಕರಿಸಿದ ನೀರು ಹೊರಗೆ: ನಗರದ ಎಲ್ಲ ಕೆರೆಗಳ ನೀರನ್ನು ಹೊರಗೆ ಬಿಡಲು ಸಾಧ್ಯವಿಲ್ಲ. ಕಾರಣ
ಕೊಳಚೆ ನೀರು ಮತ್ತು ಕೆಲವು ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ಕೆರೆಗಳಿಗೆ ಸೇರಿದ್ದು, ಈ ನೀರು
ಮರುಬಳಕೆಗೆ ಯೋಗ್ಯವಾಗಿಲ್ಲ. ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಅಳವಡಿಕೆ ಮಾಡಿರುವ ಕೆರೆಗಳ
ನೀರನ್ನು ಹೊರಗೆ ಬಿಡಲಾಗುತ್ತದೆ. ಇದರಿಂದ ಮಳೆ ಬಾರದಿದ್ದರೂ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಕೆರೆಗೆ
ಹರಿಸುವುದರಿಂದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಈ ಯೋಜನೆ ಬಗ್ಗೆ ಬಿಬಿಎಂಪಿ ಸಂರಕ್ಷಣೆ
ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.


ಆಧಾರ:ವಿಜಯವಾಣಿ, ದಿನಾಂಕ:27.09.2020


211


ಭಾಗ-6
ಚುನಾವಣಾ ಸುದ್ದಿಗಳು
1. ಸಹಕಾರ ಸಂಘ ಚುನಾವಣೆ ರದ್ದು


ರಾಜ್ಯದಲ್ಲಿರುವ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ನಡೆಯಬೇಕಾಗಿದ್ದ ಚುನಾವಣೆಯನ್ನು
ಮುಂದೂಡಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಹಕಾರ
ಇಲಾಖೆ ವ್ಯಾಪಿಗೆ ಒಳಪಡುವ ಪ್ರಾಥಮಿಕ, ಮಾಧ್ಯಮಿಕ, ಸಹಕಾರ ಸಂಘಗಳು, ಸಹಕಾರಿ ಸಕ್ಕರೆ ಕಾರಾನೆಗಳು,
ಸಹಕಾರ ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಅಧಿಕಾರಾವಧಿ ಮುಕ್ತಾಯಗೊಂಡಿರುವ ಹಾಗೂ
ಮುಕ್ತಾಯಗೊಳ್ಳಲಿರುವ ಸಹಕಾರ ಸಂಘಗಳ ಚುನಾವಣೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.
ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್‌ ಅಂತ್ಯದವರೆಗೆ ಮುಂದೂಡಲಾಗಿದೆ. ಈಗಾಗಲೇ
ಚುನಾವಣೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಆರಂಭಿಸಿದ್ದಲ್ಲಿ ಅದನ್ನು ತಕ್ಷಣ ರದ್ದು ಮಾಡಬೇಕು. ಆಡಳಿತ
ಮುಕ್ತಾಯಗೊಂಡಿರುವ ಸಹಕಾರ ಸಂಘಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸಂಬಂಧಪಟ್ಟವರು
ಕ್ರಮ ಜರುಗಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:15.07.2020
2. ರಾಜ್ಯಸಭೆ ಸಂಸದೀಯ ಸಮಿತಿಗೆ ನೇಮಕ


ನೂತನವಾಗಿ ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ನಾಲ್ಕು ಮಂದಿ ಸದಸ್ಯರನ್ನು
ರಾಜ್ಯಸಭೆಯ ವಿವಿಧ ಸಂಸದೀಯ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ.


ರಾಜ್ಯಸಭಾ ಅಧ್ಯಕ್ಷ ಉಪ ರಾಷ್ಟಪತಿ ಎಂ.ವೆಂಕಯ್ಯನಾಯ್ದು ಈ ನೇಮಕ ಮಾಡಿದ್ದು, ಕಾಂಗೆಸ್‌ ಹಿರಿಯ
ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ವಾಣಿಜ್ಯ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ರೈಲ್ವೆ,
ಬಿಜೆಪಿಯ ಈರಣ್ಣ ಕಡಾಡಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಅಶೋಕ್‌ ಗಸ್ತಿ ಅವರನ್ನು ಸಾಮಾಜಿಕ ನ್ಯಾಯ
ಮತ್ತು ಸಬಲೀಕರಣ ಸಂಸದೀಯ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾ೦ಕ:24.07.2020
3. ಬಿಬಿಎಂಪಿ-ವೇಳಾಷಟ್ಟಿ ಪ್ರಕಟಿಸಿದ ರಾಜ್ಯ ಚುನಾವಣಾ ಆಯೋಗ


ಬಿಬಿಎಂಪಿಗೆ ಚುನಾವಣೆ ನಡೆಸುವ ಸಂಬಂಧ ಮತದಾರರ ಪಟ್ಟಿ ಸಿದ್ದಪಡಿಸಲು ರಾಜ್ಯ ಚುನಾವಣಾ
ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಅದರ ಪ್ರಕಾರ ನವೆಂಬರ್‌ 30ರಂದು ಮತದಾರರ ಅಂತಿಮ ಪಟ್ಟಿ
ಸಿದ್ಧವಾಗಲಿದೆ.


ಬಿಬಿಎಂಪಿ ಚುನಾಯಿತ ಕೌನ್ನಿಲ್‌ ಅವಧಿ ಸೆಪೆಂಬರ್‌ 10ಕ್ಕೆ ಮುಗಿಯಲಿದೆ. ಮತದಾರರ ಪಟ್ಟಿಯೇ
ಸಿದ್ಧವಿಲ್ಲದ ಕಾರಣ ಚುನಾವಣೆ ಕನಿಷ್ಟ ಆರು ತಿಂಗಳು ಮುಂದೂಡಿಕೆಯಾಗುವುದು ಖಚಿತ ಎಂದು ಮೂಲಗಳು
ಹೇಳಿವೆ.


ವಾರ್ಡುಗಳನ್ನು 2011ರ ಜನಗಣತಿ ಆಧಾರದಲ್ಲಿ ಮರುವಿಂಗಡಣೆ ಮಾಡಿರುವುದರಿಂದ ಬಹುತೇಕ
ವಾರ್ಡ್‌ಗಳ ಗಡಿಗಳು ಬದಲಾಗಿವೆ. ಹಲವೆಡೆ ಮತಗಟ್ಟೆಗಳೂ ಬದಲಾಗಿವೆ. ಕೆಲವು ವಾರ್ಡ್‌ಗಳಿಗೆ ಹೊಸ
ಪ್ರದೇಶಗಳು ಸೇರ್ಪಡೆಯಾಗಿರುವುದರಿಂದ ಹಾಗೂ ಮತ್ತೆ ಕೆಲವು ವಾರ್ಡ್‌ಗಳ ವ್ಯಾಪ್ತಿ
ಕಡಿಮೆಯಾಗಿರುವುದರಿಂದ ಮತಗಟ್ಟೆಗಳ ವ್ಯಾಪಿಗೆ ಬರುವ ಒಟ್ಟು ಮತದಾರರ ಸಂಖ್ಯೆಗಳು ಬದಲಾಗಿವೆ. ಇಡೀ
ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಪರಿಷ್ಠರಿಸಬೇಕಾಗಿದೆ.


ಮತದಾರರ ಪಟ್ಟಿ ಸಿದ್ದಪಡಿಸುವ ಕಾರ್ಯವನ್ನು ಇದೇ 20ರಿಂದ ಆರಂಭಿಸಬೇಕು. ಅಕ್ಟೋಬರ್‌
19ರಂದು ಕರಡು ಪಟ್ಟಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಬೇಕು. ಆಕ್ಷೇಪಣೆ
ಆಧರಿಸಿ ಅಂತಿಮ ಪಟ್ಟಿ ಸಿದ್ಧಪಡಿಸಿ ನವೆಂಬರ್‌ 30ರಂದು ಪ್ರಕಟಿಸಬೇಕು ಎಂದು ಆಯೋಗ ಸುತ್ತೋಲೆ


ಹೊರಡಿಸಿದೆ.


212


ಮತದಾರರ ಪಟ್ಟಿ ಸಿದ್ದಪಡಿಸುವಾಗ ಕರಾರುವಕ್ಕಾಗಿ ವಿಭಜನೆ ಮಾಡಬೇಕು. ಒಂದು ಮತಗಟ್ಟೆಗೆ 400ಕ್ಕಿಂತ
ಕಡಿಮೆ ಮತ್ತು '1400ಿಂತ ಹೆಚ್ಚು ಎತರ ಪಟ್ಟಿಯಲ್ಲಿ ಸೇರದಂತೆ ನೊಡಿಕೊಳ್ಳಬೇಕು. ಗಡಿಗಳನ್ನು
ಸರಿಯಾಗಿ ತ ವು ಬಿಬಿಎಂಪಿಗೆ ಪನ ಸೂಚಿಸಿದೆ.


ಬಿಬಿಎಂಪಿ ವ್ಯಾಪ್ತಿಯ ಮತದಾರರು ಕೈಬಿಟ್ಟು ಹೋಗದಂತೆ ವ್ಯಾಪಿಗೆ ಒಳಪಡದ ಮತದಾರರು
ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕು. ಮತದಾರರ ಹೆಸರುಗಳು ಎರಡು ಪಟ್ಟಿಯಲ್ಲಿ
ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು. ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಆಯಾ ವಿಧಾನಸಭಾ
ಕ್ಷೇತವಾರು ಒಟ್ಟುಗೂಡಿಸಿದಾಗ ಹಾಲಿ ಇರುವ ವಿಧಾನಸಭಾ ಮತದಾರರ ಪಟ್ಟಿಯಲ್ಲಿನ ಸಂಖ್ಯೆ ಮೀರದಂತೆ
ಮತ್ತು ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿವೆ.


ಮತದಾರರ ಪಟ್ಟಿ ಸಿದ್ಧಪಡಿಸುವ ವೇಳಾಪಟ್ಟಿ


> ಬಿಬಿಎಂಪಿ ಸಿಬ್ಬಂದಿಗೆ ತರಬೇತಿ ಆಗಸ್ಟ್‌ 20ರಿಂದ 25


» ಮನೆಮನೆಗೆ ಭೇಟ ನೀಡಿ ಪಟ್ಟ ಸಿದ್ದಪಡಿಸುವುದು ಆಗಸ್ಟ್‌26ರಿಂದ
ಸೆಪ್ಲೆಂಬರ್‌ 14


> ಪರಿಶೀಲನೆ, ಮರುಪರಿಶೀಲನೆ ನಡೆಸಿ ಕರಡು ಪಟ್ಟ | ಸೆಪ್ಲೆಂಬರ್‌15ರಿಂದ


ಸಿದ್ದಪಡಿಸುವುದು ಅಕ್ಟೋಬರ್‌ 18
> ವಾರ್ಡ್‌ವಾರು ಕರಡು ಪಟ್ಟಿ ಪ್ರಕಟಣೆ ಅಕ್ಟೋಬರ್‌ 19
ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್‌ 27

> ಆಕ್ಷೇಪಣೆ ಆಧರಿಸಿ ಪಟ್ಟಿ ಅಂತಿಮಗೊಳಿಸುವುದು ಅಕ್ಟೋಬರ್‌28ರಿಂದ
ನವೆಂಬರ್‌ 20
> ಮತದಾರರ ಅಂತಿಮ ಪಟ್ಟ ಪ್ರಕಟಣೆ ನವೆಂಬರ್‌ 30


ಆಧಾರ:ಪ್ರಜಾವಾಣಿ, ದಿನಾಂಕ:15.08.2020
4. ಮತದಾನ: ಸುರಕ್ಷತಾ ಕ್ರಮ
[0Y


ಕೊರೋನಾ ಕಾಲದಲ್ಲಿ ನಡೆಯುವ ಚುನಾವಣೆಗಳಿಗೆ ಚುನಾವಣಾ ಆಯೋಗ ಹೊಸ
ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಎಲೆಕ್ಟಾನಿಕ್‌ ಮತಯಂತ್ರಗಳಲ್ಲಿ ಗುಂಡಿಯನ್ನು ಒತ್ತುವ ಮೊದಲು
ಮತದಾರ ಕೈಗವುಸು ಧರಿಸುವುದು ಕಡ್ಡಾಯ ಎಂದಿದೆ.


ಯಾವುದೇ ಮತಗಟ್ಟೆಯಲ್ಲಿ ಗರಿಷ್ಟ 1,000 ಮತದಾರರು ಹಾಜರಾಗಬಹುದು. ಆದರೆ, ವ್ಯಕ್ತಿ ಬೂತ್‌ಗೆ
ಪ್ರವೇಶಿಸುವ ಮೊದಲು ಪ್ರತಿಯೊಬ್ಬ ಮತದಾರರ ದೇಹದ ತಾಪಮಾನವನ್ನು ಪರಿಶೀಲಿಸಬೇಕು. ಆರೋಗ್ಯ
ಸಚಿವಾಲಯವು ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತ ಹೆಚ್ಚಿನ ತಾಪಮಾನ ಕಂಡುಬರುವ ಮತದಾರರನ್ನು ಎರಡು
ಬಾರಿ ಪರಿಶೀಲಿಸಲಾಗುತ್ತದೆ. ಫಲಿತಾಂಶವು ಒಂದೇ ಆಗಿದ್ದರೆ, ಮತದಾನದ ಕೊನೆಯಲ್ಲಿ ಭೇಟಿ ನೀಡುವಂತೆ
ತಿಳಿಸಲಾಗುತ್ತದೆ. ಕೊರೋನಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಚುನಾವಣಾ ಆಯೋಗವು
ಇತ್ತೀಚಿನ ಮಾರ್ಗಸೂಜಚಿಗಳಲ್ಲಿ ತಿಳಿಸಿದೆ.


ಸಾರ್ವಜನಿಕ ಸಭೆ ಮತ್ತು ರೋಡ್‌ ಶೋಗಳನ್ನು ಆಯೋಜಿಸಬಹುದು. ಆದರೆ, ಕೇಂದವು
ನಿಗದಿಪಡಿಸಿರುವ ಕೊರೋನಾ ಷರತ್ತುಗಳನ್ನು ಅನುಸರಿಸಬೇಕು. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು
ಆನ್‌ಲೈನ್‌ನಲ್ಲೇ ಸಲ್ಲಿಸಬೇಕು ಹಾಗೂ ಭದ್ರತಾ ಠೇವಣಿ ಹಣವನ್ನು ಆನ್‌ಲೈನ್‌ನಲ್ಲಿ ಇಡಬೇಕು ಎಂದು
ಚುನಾವಣಾ ಆಯೋಗವು 12 ಪುಟಗಳ ಕೊರೋನಾ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ/ಉಪ ಚುನಾವಣೆ


ನಡೆಸಲು ಮಾರ್ಗಸೂಚಿಗಳು ಎಂಬ ಶೀರ್ಷಿಕೆಯಲ್ಲಿ ತಿಳಿಸಿದೆ.


213


ಈ ವರ್ಷಾಂತ್ಯದಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಲಿದೆ. ಆದರೆ ಚುನಾವಣಾ ಆಯೋಗ ವೇಳಾಪಟ್ಟಿ
ಬಗ್ಗೆ ಯಾವುದೇ ಪ್ರಕಟಣೆ ನೀಡಿಲ್ಲ. ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಈ ಅವಧಿಯಲ್ಲಿ
ಚುನಾವಣೆ ನಡೆಸಿದರೆ ಮತಗಟ್ಟಿಗಳು ಕೊರೋನಾ ಕೇಂದ್ರಗಳಾಗಿ ಬದಲಾಗಬಹುದು ಎಂದು ಮಾಜಿ ಕೇಂದ್ರ
ಸಚಿವ ಯಶವಂತಾ ಸಿನ್ಹಾ ಹೇಳಿದ್ದರು.


ಆಯೋಗದ ಮಾರ್ಗಸೂಚಿಗಳೇನು
> ಮನೆ ಮನೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇವಲ ಐದು ಜನರಿಗೆ ಮಾತ್ರ ಅವಕಾಶ.


» ಮತಗಟ್ಟೆ ಸಿಬ್ಬಂದಿ ಮುಖಗವುಸು, ಸ್ವಾನಿಟೈಜರ್‌ ಬಳಕೆ, ಥರ್ಮಲ್‌ ಸ್ಕ್ಯಾನರ್‌ ಅಳವಡಿಕೆ, ಪಿಪಿಐ
ಕಿಟ್‌ ಧರಿಸುವುದು ಕಡ್ಡಾಯ.


>» ಕಾಗದಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ಬರುವ ಅಭ್ಯರ್ಥಿಯೊಂದಿಗೆ ಇಬ್ಬರು, ಎರಡು
ವಾಹನಗಳಿಗೆ ಮಾತ್ರ ಅವಕಾಶ


> ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಕೆ, ಭದತಾ ಠೇವಣಿ ಹಣವನ್ನು ಆನ್‌ಲೈನ್‌ನಲ್ಲೇ


ಇಡಬೇಕು.
ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಿಗೆ ನೋಡಲ್‌ ಆರೋಗ್ಯ ಅಧಿಕಾರಿ ನೇಮಕ.
> ಚುನಾವಣಾ ಅಧಿಕಾರಿಗಳಿಗೆ ಆನ್‌ಲೈನ್‌ ಮೋಡ್‌ ಮೂಲಕ ತರಬೇತಿ.


ಸೋಂಕು ಲಕ್ಷಣವಿರುವ ಸಿಬ್ಬಂದಿ ಬದಲಾವಣೆ, ಎಣಿಕೆ, ಇತರ ಸಿಬ್ಬಂದಿ ಮೀಸಲು ನಿರ್ವಹಣೆ
ಹೊಣೆ ರಿಟರ್ನಿಂಗ್‌ ಅಧಿಕಾರಿಗೆ.


ಮತದಾನಕ್ಕೂ ಮುನ್ನಾ ಮತಗಟ್ಟೆಗಳನ್ನು ಸಂಪೂರ್ಣವಾಗಿ ಸ್ಕಾನಿಟೈೆಸ್‌ ಮಾಡಿರಬೇಕು.
» ಕಂಟೈನ್‌ಮೆಂಟ್‌ ರೋನ್‌, ಸೀಲ್‌ಡೌನ್‌ ಪ್ರದೇಶಗಳ ಮತದಾರರಿಗೆ ಪ್ರತ್ತೇಕ ನಿಯಮಾವಳಿ.


ಆಧಾರ:ವಿಶ್ವವಾಣಿ, ದಿನಾಂಕ:22.08.2020
5. ಒಂದು ದೇಶ, ಒಂದೇ ಚುನಾವಣೆಗೆ ಸಿದ್ದತೆ


ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ
ತಯಾರಿಸುವ ಕುರಿತು ಪ್ರಧಾನ ಮಂತಿಗಳ ಕಾರ್ಯಾಲಯ ಸಮಾಲೋಚನೆ ಆರಂಭಿಸಿದೆ. ಇದು "ಒಂದು ದೇಶ,
ಒಂದು ಚುನಾವಣೆ” ನೀತಿ ಜಾರಿಗೆ ತರುವ, ತನ್ಮೂಲಕ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ
ಭರವಸೆ ಈಡೇರಿಸುವ ಹೆಜ್ಜೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.


ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರು ಆಗಸ್ಟ್‌ 13ರಂದು
ಚುನಾವಣಾ ಆಯೋಗ ಮತ್ತು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ
ಎರಡು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಮೊದಲನೆಯದಾಗಿ ಸಂವಿಧಾನದ 243 ಮತ್ತು
243 ರುಡ್‌ಎ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ದೇಶಾದ್ಯಂತ ಎಲ್ಲಾ ಚುನಾವಣೆಗಳಿಗೆ ಒಂದೇ
ಮತದಾರರ ಆಯೋಗ ತಯಾರಿಸುವ ಮತದಾರರ ಪಟ್ಟಿಯನ್ನೇ ಬಳಸಿಕೊಂಡು ಮುನ್ನಿಪಲ್‌, ಪಂಚಾಯತ್‌
ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಗಳ ಮನವೊಲಿಸುವುದು ಎಂದು ಮೂಲಗಳು ಉಲ್ಲೇಖಿಸಿ ಆಂಗ್ದ
ಪತ್ರಿಕೆಯೊಂದು ವರದಿ ಮಾಡಿದೆ. 2004ರ ಲೋಕಸಭಾ ಚುನಾವಣೆಯ ವೇಳಯೇ ಬಿಜೆಪಿ ತನ್ನ ಚುನಾವಣಾ
ಪ್ರಣಾಳಿಕೆಯಲ್ಲಿ ಒಂದು ದೇಶ, ಒಂದು ಚುನಾವಣೆ ನಡೆಸುವ ಭರವಸೆಯನ್ನು ನೀಡಿತ್ತು. ಸರ್ಕಾರ ಆರಂಭಿಸಿರುವ
ಸಮಾಲೋಚನೆ ಅದೇ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಇರಬಹುದು ಎನ್ನಲಾಗಿದೆ. ಜೊತೆಗೆ ಚುನಾವಣಾ ಪಕ್ರಿಯೆ
ಸುಧಾರಣೆ ಕುರಿತ ಹಲವು ಸಮಿತಿಗಳು ಮತ್ತು ಕಾನೂನು ಆಯೋಗ ಕೂಡ ಇಂಥದ್ದೇ ನೀತಿ ಜಾರಿಗೆ ಈ ಹಿಂದೆ
ಹಲವು ಬಾರಿ ಸಲಹೆ ನೀಡಿರುತ್ತದೆ.


214


ದೇಶದಲ್ಲಿ ರಾಷ್ಟಪತಿ, ಉಪ ರಾಷ್ಟಪತಿ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್‌
ನಡೆಸುವ ಹೊಣೆಯನ್ನು” ಕೇಂದ್ರ ಚುನಾವಣಾ ಆಯೋಗ ಹೊಂದಿದೆ. ರಾಜ್ಯ ಚುನಾವಣಾ ಆಯೋಗಗಳು
ಪಂಚಾಯಿತಿ, ಸಿಗರಪಾಲಿಕಿಯಂತಹ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿವೆ. ಈ
ಚುನಾವಣೆಗಳಿಗೆ ಮತದಾರರ ಪಟ್ಟಿ ತಯಾರಿಸುವ ವಿಷಯದಲ್ಲಿ ರಾಜ್ಯ ಚುನಾವಣಾ ಆಯೋಗಗಳು
ಸ್ಪತಂತ್ರವಾಗಿವೆ.


ಲೋಕಸಭೆ ಮತ್ತು ವಿಧಾನಸಭೆಗೆ ಪ್ರತ್ಯೇಕ ಚುನಾವಣೆ ನಡೆಸುವುದಕ್ಕೆ ಭಾರೀ ಪ್ರಮಾಣದ ಮಾನವ
ಸಂಪನ್ಮೂಲ ಬೇಕಾಗುತ್ತದೆ. ಜೊತೆಗೆ ಹಣವೂ ವೆಚ್ಚವಾಗುತ್ತದೆ. ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಅಭಿವೃದ್ಧಿ
ಕಾರ್ಯಗಳಿಗೆ ಅಡ್ಡಿಯಾಗುವುದು ನಿವಾರಣೆಯಾಗುತ್ತದೆ ಎನ್ನುವ ವಾದವಿದೆ.


ಆಧಾರ:ಕನ್ನಡಪ್ರಭ, ದಿನಾಂಕ:30.08.2020
6. ಜನಗಣತಿ ಪರಿಷ್ಕರಣೆ ಮುಂದೂಡಿಕೆ


ಕೊರೋನಾ ಭೀತಿಯಿಂದಾಗಿ ಈ ವರ್ಷ ನಡೆಯಬೇಕಿದ್ದ ದೇಶದ ಜನಗಣತಿ ಹಾಗೂ ರಾಷ್ಟ್ರೀಯ
ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಠರಣೆ ಕಾರ್ಯವನ್ನು ಒಂದು ವರ್ಷದ ಮಟ್ಟಿಗೆ
ಮುಂದೂಡಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕೇಂದದ ಅಧಿಕಾರಿಯೊಬ್ಬರು. ಕೊರೋನಾ ಭೀತಿಯ
ಕಾಲದಲ್ಲಿ ಜನಗಣತಿ ನಡೆಸುವುದು ಔಚಿತ್ಯವಲ್ಲ. ಗಣತಿಯು ಒಂದು ವರ್ಷ ತಡವಾಗಿ ನಡೆದರೆ
ತೊಂದರೆಯೇನೂ ಇಲ್ಲ ಎಂದು ತಿಳಿಸಿದ್ದಾರೆ. ಪ್ರಪಂಚದ ಅತಿ ದೊಡ್ಡ ಅಂಕಿ-ಅಂಶ ಆಧಾರಿತ ಸರ್ವೇ ಕಾರ್ಯ
ಈ ವರ್ಷ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ.


2021ರಲ್ಲಿ ಯಾವಾಗ ಜನಗಣತಿ ನಡೆಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅಧಿಕಾರಿ ಆ ಬಗ್ಗೆ
ನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ವರ್ಷ ಗಣತಿ ನಡೆಸುವುದು ಬೇಡ ಎಂದಷ್ಟೇ ನಿರ್ಧರಿಸಲಾಗಿದೆ.
ಮುಂದಿನ ವರ್ಷ ಯಾವಾಗ ಗಣತಿ ನಡೆಸಬೇಕು, ಯಾವಾಗ ಎನ್‌ಪಿಆರ್‌ ಪರಿಷ್ಠರಣೆ ಮಾಡಬೇಕು
ಎಂಬುದನ್ನು ಸದ್ಯದಲ್ಲೇ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.


ಕೊರೋನಾ ಸೋಂಕು ಎಗ್ಗಿಲ್ಲದೆ ಹರಡುತ್ತಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ.
ಅತ್ತ, ಜನಗಣತಿ ಕೆಲಸಕ್ಕೆ ಲಕ್ಷಾಂತರ ಸಿಬ್ಬಂದಿಯನ್ನು ತೊಡಗಿಸಬೇಕು. ಅವರು ದೇಶದ ಎಲ್ಲಾ ಮನೆಗಳಿಗೆ
ಹೋಗಿ ಮಾಹಿತಿ ಕಲೆ ಹಾಕಿ ತರಬೇಕು. ಇಂಥ ಸಂದರ್ಭದಲ್ಲಿ ಆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲುವ
ಸಾಧ್ಯತೆಗಳು ದಟ್ಟವಾಗಿದೆ. ಹಾಗಾಗಿ, ಜನಗಣತಿಯನ್ನು ಮುಂದಿನ ವರ್ಷ ನಡೆಸಲು ನಿರ್ಧರಿಸಲಾಗಿದೆ ಎಂದು
ಅಧಿಕಾರಿ ತಿಳಿಸಿದ್ದಾರೆ.


ಪೂರ್ವ ನಿರ್ಧಾರದಂತೆ, ಈ ಬಾರಿಯ ಜನಗಣತಿ 2020ರ ಏಪ್ರಿಲ್‌ 1ರಿಂದ ಸೆಪ್ಪೆಂಬರ್‌ 30ರವರೆಗೆ
ನಡೆಯಬೇಕಿತ್ತು. ಜಮ್ಮು ಕಾಶ್ಮೀರದಲ್ಲಿ ಹಿಮ ಸುರಿಯುವ ಕಾರಣದಿಂದ ಅಲ್ಲಿ ಜನಗಣತಿಯನ್ನು 2020ರ
ಅ.1ರಂದು ನಡೆಸಲು ನಿರ್ಧರಿಸಲಾಗಿತ್ತು ಕೊರೋನಾ ಲಾಕ್‌ಡೌನ್‌ ಶುರುವಾಗಿದ್ದರಿಂದ ಜನಗಣತಿ ಹಾಗೂ
ಎನ್‌ಪಿಆರ್‌ ಪರಿಷ್ಠರಣೆ ಕಾರ್ಯವನ್ನು ಮುಂದೂಡಲಾಗಿತ್ತು.


ಆಧಾರ:ಉದಯವಾಣಿ, ಆಧಾರ:31.08.2020
7. ಬಹು ಹಂತಗಳಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ


ಅವಧಿ ಮುಗಿದ ರಾಜ್ಯದ 5.800 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ
ಚುನಾವಣಾ ಆಯೋಗ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಸುರಕ್ಷತಾ ಮುಂಜಾಗ್ರತೆ
ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಹು ಹಂತಗಳಲ್ಲಿ ಚುನಾವಣೆ ನಡೆಸುವ ಸಾಧ್ಯತೆಯಿದೆ.


ಸಾಮಾನ್ಯ ಪರಿಸ್ಥಿತಿಯಲ್ಲಿ ಸದ್ಯ ಚುನಾವಣೆ ನಡೆಯಬೇಕಿರುವ 5.800 ಗ್ರಾಮ ಪಂಚಾಯಿತಿಗಳಿಗೆ ರಾಜ್ಯ
ವ್ಯಾಪಿ ಎರಡು ಅಥವಾ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತದೆ. ಇದನ್ನು ಕಂದಾಯ ವಲಯವಾರು
ವಿಭಜಿಸಲಾಗುತ್ತಿತ್ತು ಆದರೆ, ಕೋವಿಡ್‌-19 ಹಿನ್ನೆಲೆಯಲ್ಲಿ ಜಿಲ್ಲಾ ಹಂತಗಳಲ್ಲಿ ತಾಲ್ಲೂಕುವಾರು ವಿವಿಧ
ಹಂತಗಳಲ್ಲಿ ಚುನಾವಣೆ ನಡೆಸಬೇಕು ಎಂದು ಜಿಲ್ಲಾಡಳಿತಗಳಿಂದ ಸಲಹೆ ಬಂದಿದೆ ಎನ್ನಲಾಗಿದೆ.


215


ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಆಯೋಗ ಸನ್ನದ್ಧವಾಗಿದ್ದು, ಎಲ್ಲಾ ಸಿದ್ಧತೆಗಳನ್ನು
ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸದಸ್ಯ ಸ್ಥಾನಗಳ ಮೀಸಲು ಪ್ರಿಯೆ ಪೂರ್ಣಗೊಂಡಿದೆ. ಒಂದೆರಡು
ದಿನಗಳಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ಚುನಾವಣಾ ಸಿಬ್ಬಂದಿ ನಿಯೋಜನೆ ಮತ್ತು ತರಬೇತಿ
ಆಗಿದೆ. ಹೆಚ್ಚುವರಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.


ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಕನಿಷ್ಟ 45 ದಿನ ಮುಂಚೆ ಮೀಸಲು ಅಧಿಸೂಚನೆ ಮತ್ತು
ಚುನಾವಣಾ ಅಧಿಸೂಚನೆ ಹೊರಡಿಸಬೇಕು. ಈ ನಿಟ್ಟಿನಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು
ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ಸೆಪ್ಪೆಂಬರ್‌ ಮಧ್ಯದಲ್ಲಿ ಅಧಿಸೂಚನೆ ಹೊರಡಿಸಿ ಅಕ್ಟೋಬರ್‌
ಕೊನೆಯಲ್ಲಿ ಚುನಾವಣೆ ನಡೆಯಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.


ಈಗ 226 ತಾಲ್ಲೂಕುಗಳ 5,800 ಗ್ರಾಪಂ.ಗಳ 35 ಸಾವಿರ ಕ್ಷೇತ್ರಗಳ 93 ಸಾವಿರಕ್ಕೂ ಹೆಚ್ಚು ಸದಸ್ಯ
ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ 40 ಸಾವಿರ ಮತಗಟ್ಟೆಗಳು
ಸ್ಥಾಪಿಸಬೇಕಾಗುತ್ತದೆ.


2 ಲಕ್ಷ ಚುನಾವಣಾ ಸಿಬ್ಬಂದಿ ಬೇಕು. ಕೊರೋನಾ ಹಿನ್ನೆಲೆಯಲ್ಲಿ 10 ಸಾವಿರ ಹೆಚ್ಚುವರಿ
ಮತಗಟ್ಟೆಗಳನ್ನು ಸ್ಥಾಪಿಸಬೇಕು. ಅದಕ್ಕೆ ತಕ್ಕಂತೆ 50 ಸಾವಿರ ಹೆಚ್ಚುವರಿ ಚುನಾವಣಾ ಸಿಬ್ಬಂದಿ, 10 ಸಾವಿರ
ಹೊಲೀಸ್‌ ಸಿಬ್ಬಂದಿ, 50 ಸಾವಿರ ಆರೋಗ್ಯ ಕಾರ್ಯಕರ್ತೆಯರು ಬೇಕು. ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆಗೆ
ರೂ.35 ಕೋಟಿ ಮಾಸ್ಕ್‌, ಗೌಸ್‌, ಸ್ಯಾನಿಟೈಸರ್‌. ಥರ್ಮಲ್‌ ಸ್ಕ್ಯಾನರ್‌ ವ್ಯವಸ್ಥೆ ಮಾಡಲು ರೂ.20 ಕೋಟಿ
ಹಾಗೂ ಸಾರಿಗೆ ವ್ಯವಸ್ಥೆಗೆ ರೂ. 10 ಕೋಟಿ ಸೇರಿ ಹೆಚ್ಚುವರಿಯಾಗಿ ರೂ. 65 ಕೋಟಿ ಹಣ ಬೇಕಾಗುತ್ತದೆ
ಎಂದು ಆಯೋಗ ಲೆಕ್ಕಾಚಾರ ಹಾಕಿದೆ.


ಕೊರೋನಾ ಹಿನ್ನೆಲೆಯಲ್ಲಿ 2-3 ಹಂತಗಳ ಬದಲು ಜಿಲ್ಲಾ ಹಂತಗಳಲ್ಲಿ ತಾಲ್ಲೂಕುವಾರು ವಿಭಜಿಸಿ
ಬಹು ಹಂತಗಳಲ್ಲಿ ಚುನಾವಣೆ ನಡೆಸಬೇಕು ಎಂದು ಡಿ.ಸಿ.ಗಳಿಂದ ಅಭಿಪ್ರಾಯಗಳು ಬಂದಿದೆ ಎಂದು
ಡಾ: ಬಿ.ಬಸವರಾಜು, ರಾಜ್ಯ ಚುನಾವಣಾ ಆಯುಕ್ತರು ತಿಳಿಸಿರುತ್ತಾರೆ.


ಆಧಾರ:ಉದಯವಾಣಿ, ದಿನಾ೦ಕ:31.08.2020


216


ಭಾಗ-7
ಸರ್ವೋಚ್ಚ /ಉಚ್ಛ ನ್ಯಾಯಾಲಯ ಸುದ್ದಿಗಳು
1. ಮಕ್ಕಳ ರಕ್ಷಣೆಗೆ ಎಸ್‌ಒಪಿ ರೂಪಿಸಲು ನಿರ್ದೇಶನ


ಮಕ್ಕಳ ನಾಪತ್ತೆ ಮತ್ತು ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡುವುದನ್ನು ತಡೆಗಟ್ಟಲು ಮಾರ್ಗದರ್ಶಿ
ಸೂತ್ರಗಳನ್ನು (ಎಸ್‌ಒಪಿ) ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಮುಖ್ಯ
ನ್ಯಾಯಮೂರ್ತಿ ಎ.ಎಸ್‌.ಓಕಾ ಮತ್ತು ನ್ಯಾಯಮೂರ್ತಿ ಎಂ.ನಾಗಪುಸನ್ನ ಅವರಿದ್ದ ವಿಭಾಗೀಯ ಪೀಠ ಮೂರು
ತಿಂಗಳಲ್ಲಿ ಅನುಸರಣಾ ವರದಿ ಸಲ್ಲಿಸುವಂತೆ ತಿಳಿಸಿದೆ.


2018ರಲ್ಲಿ ಹೈಕೋರ್ಟ್‌ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನೀಡಿದ್ದ ಆದೇಶ ಪಾಲಿಸದ ಕುರಿತು
ಸಲ್ಲಿಕೆಯಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, "ಬಾಲ ನ್ಯಾಯ
ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ನಿಯಮಗಳನ್ನು ರೂಪಿಸಬೇಕು” ಎಂದು ತಿಳಿಸಿತು.


ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ತನಿಖೆ
ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠ ಈ ವಿಷಯದಲ್ಲಿ ಹೊಲೀಸರ ತನಿಖಾ ವಿಧಾನಗಳು
ಹೇಗಿರಬೇಕು ಎಂಬುದನ್ನು ಎಸ್‌ಒಪಿಯಲ್ಲಿ ವಿವರಿಸಬೇಕು. ಕಾಣೆಯಾದ ಮಕ್ಕಳ ಪತ್ತೆ ಕಾರ್ಯದ ಬಗ್ಗೆಯೂ
ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಹೇಳಿತು.


ನಿರ್ದೇಶನಗಳು


»> ಕಾಣೆಯಾದ ಮಕ್ಕಳ ಅಂಕಿ-ಅಂಶ ಆಧರಿಸಿ ಪೊಲೀಸ್‌ ವಿಚಾರಣೆ ವಿಧಾನದ ಬಗ್ಗೆ
ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು.


> ಮಕ್ಕಳ ಕಲ್ಯಾಣ ಸಮಿತಿಗಳಿಂದ (ಸಿಡಬ್ಬೂಸಿ) 3 ತಿಂಗಳಿಗೊಮ್ಮೆ ವರದಿ ಪಡೆಯಬೇಕು. ವರದಿ
ಸಲ್ಲಿಸದ ಸಮಿತಿಗಳನ್ನು ವಿಸರ್ಜಿಸಬೇಕು.


ತಿ ಜಿಲ್ಲೆಯಲ್ಲಿ ವಿಶೇಷ ಬಾಲಾಪರಾಧಿ ಪೊಲೀಸ್‌ ಘಟಕಗಳು ಲಭ್ಯವಿದೆಯೇ ಎಂದು ಸರ್ಕಾರ
ದ ಈ ಘಟಕಗಳ ಸದಸ್ಯರ ತರಬೇತಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ವರದಿ
ಸಲ್ರಿಸಬೇಕು.


೭ (e


2


ಆಧಾರ:ಪ್ರಜಾವಾಣಿ, ದಿನಾಂಕ:03.07.202
2: ಆನ್‌ಲೈನ್‌ ಅಬಾಧಿತ


ರಾಜ್ಯದಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಹೈಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಇದೇ ವೇಳೆ ಮನಬಂದಂತೆ
ನ್‌ಲೈನ್‌ ಪಾಠ ಮಾಡುವ ಖಾಸಗಿ ಶಾಲೆಗಳಿಗೆ ಷರತ್ತುಗಳ ಮೂಲಕ ಕಡಿವಾಣವನ್ನು ಹಾಕಲಾಗಿದೆ.


ಈ ಹಿಂದೆ ರಾಜ್ಯದಲ್ಲಿ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣವನ್ನು ನಿಷೇಧಿಸಿ
ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದ್ದು, ಆನ್‌ಲೈನ್‌
ಶಿಕ್ಷಣಕ್ಕೆ ಷರತ್ತು ವಿಧಿಸಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಬಹುತೇಕ ಇಸಿಎಸ್ಸಿ, ಸಿಬಿಎಸ್ಸಿ ಪಠ್ಯಕ್ರಮದ ಖಾಸಗಿ
ಶಾಲೆಗಳ ವಿದ್ಯಾರ್ಥಿಗಳ ಪೋಷಕರು, ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಗಳು
ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ
ಹಾಗೂ ನ್ಯಾ. ಆರ್‌.ನಟರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಪ್ರಕಟಿಸಿತು.


"ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿಷೇಧಿಸಿ 2020ರ ಜೂನ್‌ 15ರಂದು
ಹೊರಡಿಸಿದ್ದ ಆದೇಶದಲ್ಲಿ ಆನ್‌ಲೈನ್‌ ಶಿಕ್ಷಣ ನಿಷೇಧಿಸಿದ್ದ ಭಾಗಕ್ಕೆ ಅನ್ವಯವಾಗುವಂತೆ ತಡೆ ನೀಡಲಾಗಿದ್ದು,
ತಜ್ಞಧ ಸಮಿತಿ ರಚನೆಗೆ ಸಂಬಂಧಿಸಿದ ಆದೇಶದ ಉಳಿದ ಭಾಗಕ್ಕೆ ಈ ತಡೆ ಅನ್ವಯವಾಗುವುದಿಲ್ಲ. ನೀತಿ
ನಿರ್ಣಯದ ವಿಚಾರಗಳಲ್ಲಿ ಸಲಹೆಗಳನ್ನು ಪಡೆದುಕೊಳ್ಳಲು ಈ ರೀತಿಯ ಸಮಿತಿಗಳನ್ನು ರಚಿಸುವುದು ಸರ್ಕಾರದ


217


ಅಧಿಕಾರ ಎಂದು ಹೇಳಿರುವ ಹೈಕೋರ್ಟ್‌, ಇದೇ ವೇಳೆ ಎಲ್‌ಕೆಜಿ, ಯುಕೆಜಿ ಮತ್ತು 1ರಿಂದ 10ನೇ
ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ಆರಂಭಿಸಲು ಕೆಲ ನಿಬಂಧನೆಗಳನ್ನು ವಿಧಿಸಿ ಜೂನ್‌ 27ರಂದು ಹೊರಡಿಸಿದ್ದ
ಆದೇಶಕ್ಕೂ ತಡೆ ನೀಡಿದೆ.


ಶಾಲೆಗಳು ಆನ್‌ಲೈನ್‌ ಶಿಕ್ಷಣವನ್ನು ಮಕ್ಕಳಿಗೆ ಕಡ್ಡಾಯಗೊಳಿಸುವಂತಿಲ್ಲ. ಹೆಚ್ಚುವರಿ ಶುಲ್ಕ ಸಹ
ವಿಧಿಸುವಂತಿಲ್ಲ ಮತ್ತು ಆನ್‌ಲೈನ್‌ ಶಿಕ್ಷಣದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗದ ಮಕ್ಕಳು ನಿರಂತರ
ಕಲಿಕೆಯಿಂದ ವಂಚಿತರಾಗದಂತೆ ಶಾಲೆಗಳು ನೋಡಿಕೊಳ್ಳಬೇಕು. ಅಂತಹ ಮಕ್ಕಳಿಗೆ ಶಾಲೆಗಳು ಮರು
ಆರಂಭಗೊಂಡ ಬಳಿಕ ವಿಶೇಷ ವ್ಯವಸ್ಥೆ ಮಾಡಬೇಕು ಎಂದು ಶಾಲೆಗಳಿಗೆ ಸೂಚಿಸಿದೆ. ಈ ಬಗ್ಗೆ 4 ವಾರಗಳಲ್ಲಿ
ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.


ಅರ್ಜಿದಾರರ ವಾದವೇನು:- "ಕೋವಿಡ್‌-19 ಪರಿಸ್ಥಿತಿಯಲ್ಲೂ ಪ್ರಪಂಚದ ನಾನಾ ದೇಶಗಳಲ್ಲಿ ಆನ್‌ಲೈನ್‌
ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ನಮ್ಮ ದೇಶದ ಬೇರೆ ರಾಜ್ಯಗಳಲ್ಲೂ ಆನ್‌ಲೈನ್‌ ಶಿಕ್ಷಣಕ್ಕೆ ಯಾವುದೇ
ನಿರ್ಬಂಧ-ನಿಷೇಧ ಹೇರಿಲ್ಲ. ಅಷ್ಟಕ್ಕೂ ಐಸಿಎಸ್ಸಿ, ಸಿಬಿಎಸ್ಸಿ ಶಾಲೆಗಳ ಪಠ್ಯಕ್ರಮ ಮತ್ತು ಕಲಿಕಾ ಮಾಧ್ಯಮದ
ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯ ಮೂಲಕ ನಮ್ಮ ಮೇಲೆ
ನಿಷೇಧ ಹೇರಲು ಅವಕಾಶವಿಲ್ಲ ಕೋವಿಡ್‌-19 ಪರಿಸ್ಥಿತಿ ಎಲ್ಲಿಯವರೆಗೆ ಮುಂದುವರೆಯುತ್ತೆ ಎಂಬುದು
ಗೊತ್ತಿಲ್ಲ. ಇಂತಹ ಅನಿಶ್ಲಿತತೆಯಲ್ಲಿ ಮಕ್ಕಳ ಶಿಕ್ಷಣ ಕುಂಠಿತಗೊಂಡರೆ ಅವರ ಭವಿಷ್ಯದ ಗತಿ ಏನು. ಆದ್ದರಿಂದ,
ಆನ್‌ಲೈನ್‌ ಶಿಕ್ಷಣ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕಾನೂನುಬಾಹಿರ, ಮಕ್ಕಳ ಶಿಕ್ಷಣದ ಮತ್ತು
ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು ಅದನ್ನು ರದ್ದುಗೊಳಿಸಬೇಕು.


ಸರ್ಕಾರದ ಆದೇಶ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿರುವುದು ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ
ಪೋಷಕರು ಎಂದು ಸರ್ಕಾರ ಹೇಳುತ್ತಿದೆ. ಪ್ರತಿಷ್ಠಿತ ಶಾಲೆಗಳ ಮಕ್ಕಳಿಗೆ ಸಿಗುವ ಅವಕಾಶಗಳು ಸರ್ಕಾರಿ
ಶಾಲೆಗಳ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ.
ಸರ್ಕಾರಿ ಶಾಲೆಗಳು ಮಕ್ಕಳ ವಿಚಾರದಲ್ಲಿ ಸರ್ಕಾರ ಮಾಡದ ಕೆಲಸಕ್ಕೆ ಬೇರೆ ಶಾಲೆಗಳ ಮಕ್ಕಳು ಅವಕಾಶ
ವಂಚಿತರಾಗಬಾರದು ಎಂದು ನ್ಯಾ.ಎ.ಎಸ್‌. ಓಕಾ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ತಿಳಿಸಿದರು.


ಸರ್ಕಾರದ ವಾದ:- ಸಂವಿಧಾನದ ಕಲಂ 162ರಲ್ಲಿ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರ ಚಲಾಯಿಸಿ ಮತ್ತು
ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಇರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಮಕ್ಕಳ ಆರೋಗ್ಯ ಮತ್ತು
ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಹೊರಡಿಸಿರುವ
ಎರಡು ಆದೇಶಗಳು ಕಾರ್ಯಕಾರಿ ಆದೇಶಗಳಾಗಿವೆ. ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಜ್ಞಧ ಸಮಿತಿ
ರಚಿಸಲಾಗಿದ್ದು, ಅದರ ವರದಿ ಆಧರಿಸಿ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ಮಧ್ಯಂತರ ವ್ಯವಸ್ಥೆ
ಮಾಡಿಕೊಳ್ಳಲಾಗಿದೆ. ಸರ್ಕಾರದ ಆದೇಶ ಏಕಪಕ್ಷೀಯ, ಕಾನೂನುಬಾಹಿರ, ಶಿಕ್ಷಣದ ಹಕ್ಕು ಕಸಿಯುವ ಮತ್ತು
ದಬ್ಬಾಳಿಕೆಯಿಂದ ಕೂಡಿದೆ ಎಂಬ ಅರ್ಜಿದಾರರ ವಾದ ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ಆದೇಶವನ್ನು ಶಿಕ್ಷಣದ
ಹಕ್ಕು. ಮೂಲಭೂತ ಹಕ್ಕುಗಳ ವರದಿಯಲ್ಲಿ ನೋಡುವುದಕ್ಕಿಂತ ಮುಂದಾಲೋಚನೆಯಿಂದ ನೋಡಬೇಕಾಗಿದೆ.


ಆಧಾರ:ಉದಯವಾಣಿ, ದಿನಾ೦ಕ:08.07.2020
3. ಕೊರೋನಾ: ಕೇಂದ್ರೀಕೃತ ವ್ಯವಸ್ಥೆ ರೂಪಿಸಿ
[2


ಕೋವಿಡ್‌-19ಗೆ ಚಿಕಿತ್ಸೆ ನೀಡುವ ಆಸತ್ರೆಗಳೆಷ್ಟು ಅವುಗಳಲ್ಲಿ ಒಟ್ಟು ಎಷ್ಟು ಬೆಡ್‌ಗಳಿವೆ. ಸಾರ್ವಜನಿಕರಿಗೆ
ಸಕಾಲದಲ್ಲಿ ವಸ್ತುನಿಷ್ಠ ಮಾಹಿತಿ ನೀಡಲು ವೆಬ್‌ಸೈಟ್‌ ಅಥವಾ ಪೋರ್ಟಲ್‌ ರೂಪಿಸುವ ಬಗ್ಗೆ ರಾಜ್ಯ
ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ ನೀಡಿದೆ.


ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅನೇಕ ಮಂದಿ ಸಾವಿಗೀಡಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ
ಕೊರತೆಯಿದೆ ಎಂದು ತಿಳಿಸಿ ವಕೀಲೆ ಗೀತಾ ಮಿಶ್ರಾ ಭಾರತ್‌ ಪುನರುತ್ಥಾನ ಟ್ರಸ್ಟ್‌ ಸೇರಿ ಮತ್ತಿತರರು ಸಲ್ಲಿಸಿದ್ದ
ಪ್ರತ್ಯೇಕ ಹಿತಾಸಕ್ತಿ ಮತ್ತು ಹೈಕೋರ್ಟ್‌ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಅರ್ಜಿಗಳನ್ನು ಮುಖ್ಯ ನ್ಯಾ. ಎ.ಎಸ್‌.
ಓಕಾ ಹಾಗೂ ನ್ಯಾ ಅರವಿಂದ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.


218


ರಾಜ್ಯ ಸರ್ಕಾರದ ಲಿಖಿತ ಹೇಳಿಕೆ ಪರಿಶೀಲಿಸಿದ ನ್ಯಾಯಪೀಠ, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು
ಅನುಸರಿಸುವ ವ್ಯವಸ್ಥೆ, ಹಾಸಿಗೆಗಳ ಮಾಹಿತಿ ಜನರಿಗೆ ತಲುಪಿಸಲು ಯಾವುದಾದರೂ ಕೇಂದ್ರೀಕೃತ ವ್ಯವಸ್ಥೆ
ಇದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು.


ಸರ್ಕಾರಿ ವಕೀಲರ ಪ್ರತಿಕ್ರಿಯೆ ಬಳಿಕ, ಖಾಲಿ ಹಾಸಿಗೆಗಳ ಮತ್ತು ಕೊರೋನಾಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ
ವಿವರಗಳನ್ನು ನೀಡಬೇಕು, ಒಂದು ಕೇಂದ್ರೀಕೃತ ವೆಬ್‌ ಸೈಟ್‌ ಆರಂಭಿಸಬೇಕಿದೆ ಎಂದು ಸಲಹೆ ನೀಡಿದ
ನ್ಯಾಯಪೀಠ, ವೆಬ್‌ಸೈಟ್‌ಗಳು ಆಗ್ಗಿಂದಾಗ್ಗೆ ಅಪ್‌ ಡೇಟ್‌ ಆಗಬೇಕು ಎಂದು ಸರ್ಕಾರ ಹಾಗೂ ಬಿಬಿಎಂಪಿಗೆ
ಸೂಚಿಸಿ ಅರ್ಜಿ ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು.


ವರದಿ ನೀಡುವ ಸಮಯ ಮುಖ್ಯ: ಕೊರೋನಾ ಪರೀಕ್ಷೆ ವರದಿ ನೀಡಲು ಏಕೆ ವಿಳಂಬವಾಗುತ್ತದೆ ಎಂದು
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯನ್ನು ಪ್ರಶ್ನಿಸಿರುವ ಹೈಕೋರ್ಟ್‌, ವರದಿ ವಿಳಂಬದಿಂದಾಗಿ ಸೋಂಕು
ಹರಡುವ ಸಾಧ್ಯತೆ ಹೆಚ್ಚಿದೆ. ಹೇಗೆಂದರೆ, ನ್ಯಾಯಾಧೀಶರೊಬ್ಬರ ತಂದೆಗೆ ಕೊರೋನಾ ಸೋಂಕು ಇತ್ತು.
ಇದರಿಂದ ನ್ಯಾಯಾಧೀಶರ ವಸತಿ ಸಮುಚ್ಚಯದ 14 ನ್ಯಾಯಾಧೀಶರು ಕ್ಲಾರಂಟೈನ್‌ ಆಗಿದ್ದಾರೆ. ಜುಲೈ 4ರಂದೇ


ಪರೀಕ್ಷೆ ಮಾಡಿಸಿದರೂ ವರದಿ ಬಂದಿಲ್ಲ ಎಂದು ಪೀಠ ತರಾಟೆಗೆ ತೆಗೆದುಕೊಂಡಿತ್ತು.


ಪರೀಕ್ಷೆ ಬಳಿಕ ಸೋಂಕಿತರು ಪರಿವಾರದೊಂದಿಗೆ ಬೆರೆಯುತ್ತಾರೆ. ಅನೇಕ ದಿನದ ಬಳಿಕ ವರದಿ ನೀಡಿದರೆ
ಕುಟುಂಬದ ಸದಸ್ಯರಿಗೆ ಹರಡಿರುತ್ತದೆ. ಇದನ್ನು ಹೇಗೆ ನಿಯಂತ್ರಿಸಲಾಗುತ್ತದೆ. ತಪಾಸಣೆ ಹಾಗೂ ವರದಿ
ನಡುವಿನ ಸಮಯ ನಿರ್ಣಾಯಕ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದು ಹೈಕೋರ್ಟ್‌ ತಿಳಿಸಿರುತ್ತದೆ.


ಆಧಾರ:ಉದಯವಾಣಿ, ದಿನಾ೦ಕ:11.07.2020
4. ರಾಜಮನೆತನದ ಸುಪರ್ದಿಗೆ ಅನಂತ ಪದ್ಮನಾಭ ದೇಗುಲ


ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್‌, ತಿರುವನಂತಪುರದ ಅನಂತಪದ್ದನಾಭ ದೇಗುಲದ
ಆಡಳಿತಾಧಿಕಾರ ಹಾಗೂ ದೇಗುಲದ ಪೂಜಾ ಕೈಂಕರ್ಯ ಸೇವೆಗಳ ಹಕ್ಕುಗಳನ್ನು (ಶಬಾಯತ್‌ ಹಕ್ಕುಗಳು)
ತಲೆತಲಾಂತರದಿಂದ ಆ ದೇಗುಲವನ್ನು ಮುನ್ನಡೆಸಿಕೊಂಡು ಬಂದಿರುವ ತಿರುವಾಂಕೂರು ರಾಜಮನೆತನಕ್ಕೇ
ನೀಡಬೇಕೆಂದು ಆದೇಶ ನೀಡಿದೆ.


ಈ ಮೂಲಕ, ದೇಗುಲದ ಆಡಳಿತದಲ್ಲಿ ಹಾಗೂ ಆಸಿಪಾಸ್ತಿಯ ಮೇಲೆ ರಾಜಮನೆತನದವರ ಹಕ್ಕಿಲ್ಲ
ಎಂದು 2011ರ ಜನವರಿ 31 ರಂದು ಕೇರಳ ಹೈಕೋರ್ಟ್‌ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್‌ನ
ನ್ಯಾ. ಉದಯ್‌, ನ್ಯಾ. ಯು.ಲಲಿತ್‌ ಅವರುಳ್ಳ ನ್ಯಾಯಪೀಠ ರದ್ದುಗೊಳಿಸಿದೆ.


ದೇಗುಲದ ಮೇಲಿನ ಶೆಬಾಯತ್‌ ಹಕ್ಕುಗಳಿಗೆ ಸಂಬಂಧಿಸಿದಂತೆ ತಿರುವಾಂಕೂರು ಸಂಸ್ಥಾನದ ಕೊನೆಯ
ಮಹಾರಾಜರು ಈ ಹಿಂದೆ ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, 1991ರಲ್ಲಿ
ಮಹಾರಾಜರು ನಿಧನರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಒಪ್ಪಂದ ರದ್ದಾಗಬೇಕು ಎಂದು ಹೇಳುವಂತಿಲ್ಲ. ಜೊತೆಗೆ,
ಮಹಾರಾಜರ ನಿಧನದಿಂದ ದೇಗುಲದ ಆಸ್ತಿಪಾಸ್ತಿಯನ್ನು ಸರ್ಕಾರ ಸ್ಟಾಧೀನಕ್ಕೆ ತೆಗೆದುಕೊಳ್ಳುವಂತಿಲ್ಲ.


ಹಿಂದಿನಿಂದ ನಡೆದು ಬಂದ ಮಾದರಿಯಲ್ಲೇ ದೇಗುಲದಲ್ಲಿ ಪೂಜೆ ಪುನಸ್ಕಾರ ನೆರವೇರಿಸಲು
ರಾಜಮನೆತನದವರಿಗೆ ಹಕ್ಕು ಇರುತ್ತದೆ. ಆಡಳಿತ ಮಂಡಳಿಯಲ್ಲಿ ಸದಸ್ಯತ್ನವೂ ಇರುತ್ತದೆ ಹಾಗೂ ಆಡಳಿತಾತ್ಮಕ
ವಿಚಾರದಲ್ಲಿ ರಾಜಮನೆತನದವರೂ ತಮ್ಮ ಅಭಿಪ್ರಾಯಗಳನ್ನು ಹೇಳಲು ಮುಕ್ತ ಸ್ಥಾತಂತ್ಯ್ಯವಿರುತ್ತದೆ. ದೇಗುಲದ
ದಿನನಿತ್ಯದ ಕಾರ್ಯಕ್ರಮಗಳನ್ನು ರಾಜಮನೆತನವೇ ನೆರವೇರಿಸಬೇಕು ಎಂದು ಕೋರ್ಟ್‌ ತಿಳಿಸಿದೆ.

ಆಡಳಿತ ಮಂಡಳಿ ಬಗ್ಗೆ ಸೂಚನೆ: ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಹಿಂದೂಗಳೇ
ಆಗಿರಬೇಕು ಹಾಗೂ ಆ ಸದಸ್ಯರೆಲ್ಲರೂ ದೇವಸ್ಥಾನದ ಕಟ್ಟಳಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ
ಎಂದು ಕೋರ್ಟ್‌ ಹೇಳಿದೆ. ಶಈವರೆಗೆ ದೇಗುಲದ ಆಡಳಿತಕ್ಕಾಗಿ ನೇಮಕಗೊಂಡಿದ್ದ ಮಧ್ಯಂತರ ಆಡಳಿತ
ಮಂಡಳಿ ಹಾಗೆಯೇ ಮುಂದುವರಿಯಲಿ ಎಂದು ತಿಳಿಸಿದೆ. ತಿರುವನಂತಪುರದ ಜಿಲ್ಲಾ ನ್ಯಾಯಾಲಯದ ಮುಖ್ಯ
ನ್ಯಾಯಾಧೀಶರು ಈ ಮಂಡಳಿಯ ಮುಖ್ಯಸ್ಥರಾಗಿ ಮುಂದುವರಿಯಬೇಕು ಎಂದಿರುವ ಪೀಠ, ದೇಗುಲದ


219


ಗರ್ಭಗುಡಿಯ ಕೆಳಗಿನ ಕೋಣೆಗಳಲ್ಲಿನ ವಾಲ್ಡ್‌-ಬಿ ಕೋಣೆಯನ್ನು ತೆರೆಯುವ ವಿಚಾರ ಆಡಳಿತ ಮುಂಡಳಿಯೇ
ನಿರ್ಧರಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.


ಆಧಾರ:ಉದಯವಾಣಿ, ದಿನಾ೦ಕ:14.07.2020
5. ಕೊರೋನಾ ಸಂದರ್ಭದಲ್ಲೂ ರಾಜ್ಯದ ಕೋರ್ಟ್‌ಗಳಲ್ಲಿ 14000 ಕೇಸ್‌ ಇತ್ಯರ್ಥ


ಕೊರೋನಾ ತುರ್ತು ಪರಿಸ್ಥಿತಿ ನಡುವೆಯೂ ಕಳೆದ ಜೂನ್‌ ತಿಂಗಳಲ್ಲಿ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ
ನ್ಯಾಯಾಲಯಗಳು ಒಟ್ಟು 14 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ.

ರಾಜ್ಯದ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ಜೂನ್‌ 1ರಿಂದ 30ರ ವರೆಗೆ ಒಟ್ಟು 52.172
ಪ್ರಕರಣಗಳು ಫಿಸಿಕಲ್‌ ಆಗಿ (ವಕೀಲರು ಕೋರ್ಟ್‌ಗೆ ತೆರಳಿ ದಾಖಲಿಸಿದ) ಸಲ್ಲಿಕೆಯಾಗಿದ್ದವು. ಈ-ಫೈಲಿಂಗ್‌
ಮೂಲಕ 5731 ಕೇಸ್‌ ಸಲ್ಲಿಕೆಯಾಗಿವೆ. ಅದರಲ್ಲಿ ಒಟ್ಟು 40,5284 ಪ್ರಕರಣಗಳು ವಿಚಾರಣೆಗೆ ನಿಗದಿಯಾಗಿದ್ದವು.
ಆ ಪೈಕಿ ವಿಚಾರಣೆ ನಂತರ 14,635 ಪ್ರಕರಣಗಳು ಪರಿಹಾರ ಕಂಡಿವೆ. ಇನ್ನೂ 10,128 ಮಧ್ಯಂತರ ಅರ್ಜಿಗಳು
ವಿಲೇವಾರಿ ಆಗಿವೆ ಎಂದು ಹೈಕೋರ್ಟ್‌ನ ಪ್ರಕಟಣೆ ತಿಳಿಸಿದೆ.


ಆಧಾರ:ಕನ್ನಡಪ್ರಭ, ದಿನಾಂಕ:20.07.2020
6. ಕೆರೆ ರಕ್ಷಣೆಗೆ ಸಮಿತಿ ರಚನೆ


ಯಲಹಂಕದ ಬಳಿಯ ಪುಟ್ಟೇನಹಳ್ಳಿ ಕೆರೆ ರಕ್ಷಣೆಗೆ ಜಲಾಶಯ ನಿರ್ವಹಣಾ ಸಮಿತಿ ರಚಿಸುವಂತೆ ರಾಜ್ಯ
ಹೈಕೋರ್ಟ್‌ ಸರ್ಕಾರಕ್ಕೆ ಆದೇಶಿಸಿದೆ.

ಈ ಕೆರೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಿರುವುದನ್ನು ಪ್ರಶ್ನಿಸಿ ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿ
ಸಂರಕ್ಷಣಾ ಟ್ರಸ್ಟ್‌ ಮತ್ತು ಸ್ಥಳೀಯ ನಿವಾಸಿಗಳು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.


[8]

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಮೂರ್ತಿ ಅಭಯ್‌ ಶ್ರೀನಿವಾಸ ಓಕಾ ನೇತೃತ್ವದ
ನ್ಯಾಯಪೀಠವು ಈ ಹಿಂದೆಯೇ ಕೆರೆ ನಿರ್ವಹಣೆಗೆ ಜಲಾಶಯ ನಿರ್ವಹಣಾ ಸಮಿತಿ ರಚಿಸುವಂತೆ ಸೂಚಿಸಿದ್ದರೂ
ಹಾಗೇ ಮಾಡಿರಲಿಲ್ಲ. ಸರ್ಕಾರಿ ಪರ ವಕೀಲರು ಮೂರು ವಾರಗಳ ಕಾಲಾವಕಾಶ ಕೋರಿದರು. ಇದೇ
ಸಂದರ್ಭದಲ್ಲಿ ಅರ್ಜಿದಾರರ ವಕೀಲರು ವಾದಿಸಿ, ಸೆಪ್ಪೆಂಬರ್‌, ಡಿಸೆಂಬರ್‌ನಲ್ಲಿ ವಲಸೆ ಪಕ್ಷಿಗಳು
ಸಂತಾನೋತ್ಪತ್ತಿಯಲ್ಲಿ ತೊಡಗಲಿವೆ. ಹೀಗಾಗಿ ಪಕ್ಷಿಗಳು ನೆಲೆಸುವಂತಹ ಸುರಕ್ಷಿತ ವಾತಾರವಣ ಕಲ್ಪಿಸಬೇಕಿದೆ
ಎಂದರು.

ಪುಟ್ಟೇನಹಳ್ಳಿ ಕೆರೆ ವ್ಯಾಪ್ತಿಯಲ್ಲಿ 175ಕ್ಕೂ ಅಧಿಕ ಪ್ರಬೇಧದ ಪಕ್ಷಿ ಸಂಕುಲವಿದೆ. ಅರಣ್ಯ ಇಲಾಖೆಯು ಈ
ಪ್ರದೇಶವನ್ನು ಪಕ್ಷಿ ಸಂರಕ್ಷಿತ ವಲಯವೆಂದು ಘೋಷಿಸಿದೆ. ಕೆರೆಯನ್ನು ಬಿಬಿಎಂಪಿಗೆ ವಹಿಸಿರುವುದು ಸರಿಯಲ್ಲ
ಎಂದು ವಿವರಿಸಿದರು.
ಕೋವಿಡ್‌ ಪ್ರಯೋಗಾಲಯ ವಿರುದ್ಧ ದೂರಿಗೆ ಸೂಚನೆ


ರಾಷ್ಟ್ರೀಯ ವೈದ್ಯಕೀಯ ನಿಯಮಾವಳಿ ಅನುಸರಿಸದೆಯೇ ಕೋವಿಡ್‌-19 ಪರೀಕ್ಷೆ ನಡೆಸುತ್ತಿರುವ ಖಾಸಗಿ
ಪ್ರಯೋಗಾಲಯ ವಿರುದ್ಧ ದೂರು ದಾಖಲಿಸುವಂತೆ ಬಿಬಿಎಂಪಿಗೆ ರಾಜ್ಯ ಹೈಕೋರ್ಟ್‌ ನ್ಯಾಯಪೀಠ
ನಿರ್ದೇಶಿಸಿದೆ.


ನಾಗರಬಾವಿಯಲ್ಲಿ ಕೇಂದ್ರ ಉಪಾಧ್ಯಾಯರ ಸಂಘದ ಬಡಾವಣೆಯಲ್ಲಿರುವ ಮೆಡಿಕಲ್‌ ಡಯಾಗ್ಗೋಷ್ಟಿಕ್ಸ್‌
ಅಂಡ್‌ ಸ್ಪೆಷಾಲಿಟಿ ಸೆಂಟರ್‌ ವಿರುದ್ಧ ಸ್ಥಳೀಯ ನಿವಾಸಿಗಳಾದ ಎಸ್‌.ಗಂಗಪ್ಪ ಮತ್ತು ಶಿವಮೂರ್ತಿ ಎಂಬುವವರು
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸೋಂಕು ನಿಯಂತ್ರಿಸುವ ಯಾವುದೇ ವೈಜ್ಞಾನಿಕ ಕ್ರಮ ಜರುಗಿಸಿಲ್ಲ.
ಕೂಡಲೇ ಕೊರೋನಾ ಪರೀಕ್ಷೆ ನಡೆಸುವುದನ್ನು ನಿಲ್ಲಿಸಲು ಆದೇಶಿಸುವಂತೆ ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ ಓಕಾ ನೇತೃತ್ವದ
ನ್ಯಾಯಪೀಠವು ಈ ಬಗ್ಗೆ ಬಿಬಿಎಂಪಿಗೆ ದೂರು ನೀಡುವಂತೆ ಸೂಚಿಸಿದ್ದು, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ
ಜರುಗಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾ೦ಕ:20.07.2020


220
gh ಪ್ರಜಾಪ್ರಭುತ್ನದಲ್ಲಿ ಭಿನಾ ್ಲಿಭಿಪ್ರಾಯ ಧ್ದನಿ ಹತ್ತಿಕ್ಕಲು ಸಾಧ್ಯ ವಿಲ್ಲ: ಸುಪ್ರೀಂ


ಿಭಿಪ್ರಾಯ ಧ್ಹನಿ ಹತ್ತಿಕ್ಕಲು ಸಾಧ್ಯವಿಲ್ಲ. ಶಾಸಕರು ಜನರಿಂದ ಆಯ್ಕೆಯಾಗಿದ್ದಾರೆ.
ಅವರು ತಮ್ಮ ಭಿನ್ನಾಭಿಪ್ರಾಯವನ್ನು ವಕ್ತಪಡಿಸಲು ಸಾಧ್ಯವಿಲ್ಲವೇ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿ ಸದೆ.


ಸಚಿನ್‌ ಪೈಲಟ್‌ ಮತ್ತು ಇತರ 18 ಮಂದಿ ಬಂಡಾಯ ಶಾಸಕರನ್ನು ಸ್ಪೀಕರ್‌ ಅನರ್ಹತೆಗೊಳಿಸಿದ್ದಾರೆ.
ತಮ್ಮ ಅನರ್ಹತೆ ಪ್ರಶ್ನಿಸಿ ಶಾಸಕರು ರಾಜಸ್ಥಾನ ಹೈಕೋರ್ಟ್‌ ಮೊರೆ" 'ಹೋಗಿದ್ದು, ವಿಚಾರಣೆಯನ್ನು
ಕೈಗೆತ್ತಿಕೊಂಡು ತೀರ್ಪ್ಷು ನೀಡುವಲ್ಲಿ ಹೈಕೋರ್ಟ್‌ ಘಂ ಮಾಡುತ್ತಿದೆ ಎಂದು ಸೀಕರ್‌ ಸಿ.ಪಿ. ಜೋಕಿ
ರ ಮೊರೆ ಹೋಗಿದ್ದಾರೆ. ಈ ಸಂಬಂಧ ತುರ್ತು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌
ನ್ಯಾಯಮೂರ್ತಿಗಳ ಪೀಠವು, ಅನರ್ಹತೆಯನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂದು ಜೋಶಿ
ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಬಲ್‌, ಶಾಸಕರು
ಪಕ್ಷದ ಸಭೆಗಳಿಗೆ ಹಾಜರಾಗಿಲ್ಲ. ವಿವಿಧ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಹಾಗೂ ಬಹುಮತ
ಸಾಬೀತಿಗೆ ಪಟ್ಟುಹಿಡಿದಿದ್ದಾರೆ ಎಂದು ವಿವರಿಸಿದರು.


ಶಾಸಕರು ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು. ಪ್ರಜಾಪ್ರಭುತ್ತದಲ್ಲಿ ಭಿನ್ನಮತ ಧ್ವನಿಯನ್ನು ಹತ್ತಿಕ್ಕಲು


ಕತ ಸುನು


ಸಾಧ್ಯವಿಲ್ಲ. ಶಾಸಕರ ಅನರ್ಹತೆ ಸಾಧ್ಯವೇ ಅಥವಾ ಇಲ್ಲವೇ ಎಂದು ಕೋರ್ಟ್‌ ಪರಿಶೀಲನೆ ನಡೆಸಲಿದೆ ಎಂದು


ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತ್ಸ ತ್ವದ ನ್ಯಾಯಪೀಠ ಹೇಳಿತು.

ಶಾಸಕರಿಗೆ ಸ್ಲೀಕರ್‌ ನೀಡಿರುವ ಅನರ್ಹತೆ ನೋಟಿಸ್‌ಗಳನ್ನು ಓದಿದ ವಕೀಲ ಕಪಿಲ್‌ ಸಿಬಲ್‌, ಸ್ಪೀಕರ್‌
ಜೋಶಿ ಅವರು ನಿರ್ಧಾರ ತೆಗೆದುಕೊಳ್ಳುವವರೆಗೂ ಹೈಕೋರ್ಟ್‌ನ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಹೇಳಿದರು.
ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿಲ್ಲ ಎಂಬ ಕಾರಣಕ್ಕೆ ಸ್ಲೀಕರ್‌ ಅವರು ಅನರ್ಹತೆ ನೋಟಿಸ್‌
ನೀಡಬಹುದೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಸಭೆಗೆ ಹಾಜರಾಗಲಿಲ್ಲ ಎಂಬ ಕಾರಣಕ್ಕೆ ವಿಪ್‌ ಹೊರಡಿಸಿದ್ದನ್ನು
ನಿರಾಕರಿಸಿದ ಸಿಬಲ್‌, ಇದು ಕೇವಲ ವಿಪ್‌ ಅಲ್ಲ. ಅದು ಸಭೆಗೆ ಹಾಜರಾಗದಿರುವುದಕ್ಕಿಂತ ಹೆಚ್ಚಿನದಾಗಿದ್ದು, ಪಕ್ಷ
ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು. ಗೆಹ್ಲೋಟ್‌ ಸರ್ಕಾರದ ಅಸ್ತಿತ್ರಕ್ಕೆ ಧಕ್ಕೆ ತರುವ
ಕಾರಣ ಶಾಸಕರು ತಮಗೆ ಬೇಕಾದುದನ್ನು ಮಾಡಲು ಸಮಯ ನೀಡಬಾರದು ಎಂದು ಸಿಬಲ್‌ ನ್ಯಾಯಪೀಠಕ್ಕೆ
ವಿನಂತಿಸಿದರು.


ಸಚೆನ್‌ ಪೈಲಟ್‌ ಮತ್ತು ಇತರ 18 ಬಂಡಾಯ ಶಾಸಕರ ಪರ ಹಾಜರಾದ ಹಿರಿಯ ವಕೀಲ ಹರೀಶ್‌
ಸಾಳ್ಳ ಜೋಶಿ ಈ ಹಿಂದೆ ಎರಡು ಬಾರಿ ತಮ್ಮದೇ ಆದ ವಿಚಾರಣೆಯನ್ನು ಮೂಂದೂಡಿದ್ದಾರೆ. ನ್ಯಾಯ ವ್ಯಾಪ್ತಿ
ಮತ್ತು ನಿರ್ವಹಣೆಯ ಸಮಸ್ಯೆಗಳನ್ನು ಹೈಕೋರ್ಟ್‌ ಮುಂದೆ ವಾದಿಸಲಾಗಿದೆ ಎಂದು ಹೇಳಿದರು.


1992ರ ಕಿಹೊಟೊ ಹೊಲ್ಲೊಹನ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮಂಡಿಸಿದ್ದ ತೀರ್ಪನ್ನು ಉಲ್ಲೇಖಿಸಿದ
ಕಪಿಲ್‌ ಸಿಬಲ್‌, ಸದಸ್ಯರನ್ನು ಅನರ್ಹಗೊಳಿಸಿದರೆ ಅಥವಾ ಅಮಾನತ್ತು ಮಾಡಿದರೆ ಮಾತ್ರ ನ್ಯಾಯಾಲಯ
ಮಧ್ಯಪವೇಶಿಸಬಹುದು. ವಜಾಗೊಂಡಿರುವ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಸೇರಿದಂತೆ 19
ಭಿನ್ನಮತೀಯ ಕಾಂಗೆಸ್‌ ಶಾಸಕರ ವಿರುದ್ಧ ಜುಲೈ 24ರ ವರೆಗೆ ಅನರ್ಹತೆ ವಿಚಾರಣೆ ನಡೆಸದಂತೆ ತಡೆಯಲು
ರಾಜ್ಯ ಹೈಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.


ಆಧಾರ:ವಿಜಯವಾಣಿ, ದಿನಾಂಕ:24.07.2020

ಸ್ಪೀಕರ್‌ ಮನವಿಗೆ ಸುಪ್ರೀಂ ತಿರಸ್ವಾರ
ಸ್ಪೀಕರ್‌ ನೀಡಿರುವ ಅನರ್ಹತೆ ನೋಟಿಸ್‌ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ
ವಿಚಾರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಇದರಿಂದ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್‌


ಗೆಹ್ಲೋಟ್‌ ವಿರುದ್ದ ಬಂಡಾಯವೆದ್ದಿರುವ ಸಜೆನ್‌ ಪೈಲಟ್‌ ಮತ್ತು ಅವರ 18 'ಚಂಬಲಿಗ ಶಾಸಕರಿಗೆ ಕಾನೂನು
ಹೋರಾಟದಲ್ಲಿ 3 ಹಂತದ ಮುನ್ನಡೆ ಲಭಿಸಿದಂತಾಗಿದೆ.


ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿಲ್ಲಿಸುವಂತೆ ಹಾಗೂ ಬಂಡಾಯ ಶಾಸಕರ ಮೇಲೆ
ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ರಾಜಸ್ಥಾನ ವಿಧಾನಸಭಾಧ್ಯಕ್ಷ


221


ಸಿ.ಪಿ.ಜೋಶಿ ಸುಪ್ರೀಂ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್‌
ಮಿಶ್ರಾ ಬಿ.ಆರ್‌.ಗವಾಯ್‌ ಮತ್ತು ಕೃಷ್ಣ ಮುರಾರಿ, ಹೈಕೋರ್ಟ್‌ ನೀಡಲಿರುವ ಆದೇಶಕ್ಕೆ ತಡೆ ನೀಡಲು
ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶ ಮಹತ್ವ ಪಡೆದುಕೊಂಡಿದೆ.


ಬಂಡಾಯವೆದ್ದಿರುವ ಶಾಸಕರು ಸಭೆಗೆ ಹಾಜರಾಗಿಲ್ಲ ಹಾಗೂ ಅವರ ಪಕ್ಷದ್ದೇ ಸರ್ಕಾರವನ್ನು
ಉರುಳಿಸಲು ಪ್ರಯತ್ನಿಸಿದ್ದಾರೆ ಎಂದು ಸ್ಪೀಕರ್‌ ಪರ ವಕೀಲರಾದ ಕಪಿಲ್‌ ಸಿಬಲ್‌ ಪೀಠಕ್ಕೆ ಮನವರಿಕೆ
ಮಾಡಿಕೊಟ್ಟರು. ಈ ಶಾಸಕರು ಬಹುಮತ ಸಾಬೀತುಪಡಿಸಲಿ ಎಂದು ಹೇಳಿಕೆಗಳನ್ನು ನೀಡಿದರು. ಈ ಹಂತದಲ್ಲಿ
ಸ್ಪೀಕರ್‌ ಅನರ್ಹತೆ ನೋಟಿಸ್‌ ಕುರಿತು ನ್ಯಾಯಾಲಯ ನಿರ್ಧರಿಸಲಾಗದು ಎಂದರು. ಶಾಸಕರು ಸಭೆಗೆ ಬರಲಿಲ್ಲ
ಎನ್ನುವುದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಯಿತೇ ಎಂದು ಪೀಠ ಪ್ರಶ್ನಿಸಿತು. ಅಲ್ಲದೆ
ಪ್ರಜಾಪಭುತ್ತದಲ್ಲಿ ಭಿನ್ನಮತವನ್ನು ಅಡಗಿಸಲಾಗದು ಎಂದಿತು. ಈ ಹಿಂದೆ 1992ರಲ್ಲಿ ಇಂಥದ್ದೇ
ಪ್ರಕರಣವೊಂದರಲ್ಲಿ ಅನರ್ಹತೆ ಪಕ್ರಿಯೆಯಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ
ಕೋರ್ಟ್‌ ನೀಡಿದ್ದ ತೀರ್ಪನ್ನು ಪೀಠದ ಗಮನಕ್ಕೆ ಸಿಬಲ್‌ ತಂದರು.


ಏಕರೂಪತೆಯಿಲ್ಲದ ಸ್ಟೀಕರ್‌ಗಳ ತೀರ್ಪು


ದೇಶದಲ್ಲಿ ಇದುವರೆಗೆ 97 ಪ್ರಕರಣಗಳು ಶಾಸಕರ ಅನರ್ಹತೆಗೆ ಸಂಬಂಧಿಸಿದ್ದು, ಇದರಲ್ಲಿ 46
ಪ್ರಕರಣಗಳಲ್ಲಿ 113 ಶಾಸಕರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಸ್ಪೀಕರ್‌ ತೀರ್ಮಾನವೇ ಅಂತಿಮ ಎಂದು
ಸಂಸತ್ತು ಘೋಷಿಸಿದ ಮೇಲೆ ಎಲ್ಲ ವಿಧಾನಸಭೆ ಮತ್ತು ಲೋಕಸಭೆ ಸ್ಪೀಕರ್‌ ಪ್ರತಿ ತೀರ್ಮಾನವನ್ನು ವಿಭಿನ್ನವಾಗಿ
ನೀಡಿದ್ದಾರೆ. ಹಲವು ರಾಜ್ಯಗಳಲ್ಲಿ ಸ್ಲೀಕರ್‌ಗಳು ತಮ್ಮದೇ ಆದ ರೀತಿಯಲ್ಲಿ ಅಧಿಕಾರವನ್ನು ಚಲಾಯಿಸಿದ್ದಾರೆ. 68
ಪ್ರಕರಣಗಳಲ್ಲಿ ಪಕ್ಷಗಳ ವಿಭಜನೆ, 81 ಪ್ರಕರಣಗಳಲ್ಲಿ ಪಕ್ಷಗಳ ವಿಲೀನ ನಡೆದಿದೆ. 20 ವರ್ಷಗಳಿಂದ ಈ
ಕಾಯ್ದೆಯ ಚರ್ಚೆ ನಡೆಯುತ್ತಿದ್ದು, ಕರ್ನಾಟಕ, ಗೋವಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಆಂಧ್ರ ಸೇರಿದಂತೆ
ಹಲವು ರಾಜ್ಯಗಳಲ್ಲಿ ಪಕ್ಷಾಂತರದಿಂದ ಸರ್ಕಾರಗಳು ಬದಲಾಗಿವೆ. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಸ್ಪೀಕರ್‌
ಅವರಿಗೆ ವಿವೇಚನಾ ಅಧಿಕಾರ ನೀಡಿರುವುದರಿಂದ ಹಲವು ರಾಜ್ಯಗಳಲ್ಲಿ ಅವರು ವಿಭಿನ್ನ ರೀತಿಯ
ತೀಮಾನಗಳನ್ನು ಕೈಗೊಂಡಿದ್ದಾರೆ. ಬಹುತೇಕ ತೀರ್ಮಾನಗಳು ಹೈಕೋರ್ಟ್‌ ಮತ್ತು ಸುಪ್ರೀಂ ಹೈಕೋರ್ಟ್‌ಗಳಲ್ಲಿ
ವಿಮರ್ಶೆಗೆ ಒಳಗಾಗಿವೆ. ಆದರೂ ನ್ಯಾಯಾಲಯಗಳು ಸ್ಲೀಕರ್‌ ವಿಚಾರಣೆ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಲು
ಒಪಿಲ್ಲ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾ೦ಕ:24.07.2020
9. ಚಿಕಿತ್ರೆ ನೀಡದವರ ವಿರುದ್ಧ ದೂರಿಗೆ ಹೆಲ್ಸ್‌ಲೈನ್‌ ಆರಂಭಿಸಿ: ಹೈಕೋರ್ಟ್‌


ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ
ಸಾರ್ವಜನಿಕರು ದೂರು ನೀಡಲು "ಹೆಲ್ಲ್‌ಲೈನ್‌' ಆರಂಭಿಸುವಂತೆ ಕರ್ನಾಟಕ ವೈದ್ಯಕೀಯ ಪರಿಷತ್‌ಗೆ (ಕೆಎಂಸಿ)
ಹೈಕೋರ್ಟ್‌ ಸೂಚನೆ ನೀಡಿದೆ.


ತುಮಕೂರು ಮೂಲದ ವಕೀಲ ರಮೇಶ್‌ ನಾಯಕ್‌ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ
ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ದೂರು ನೀಡಲು
ವ್ಯವಸ್ಥೆ ಏನಾದರೂ ಮಾಡಲಾಗಿದೆಯೇ ಎಂದು ಪಶ್ಲಿಸಿತು. ಸದ್ಯ ಅಂತಹ ವ್ಯವಸ್ಥೆ ಮಾಡಿಲ್ಲ ಎಂದು ವಕೀಲರು
ಉತ್ತರಿಸಿದಾಗ, ಚಿಕಿತ್ಸೆ ನಿರಾಕರಿಸುವ ವೈದ್ಯರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಲು ಹೆಲ್ಲ್‌ಲೈನ್‌
ಆರಂಭಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.


ಜೊತೆಗೆ, ಚಿಕಿತ್ಸೆ ನಿರಾಕರಿಸದಂತೆ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡ ವೈದ್ಯರಿಗೆ ಸೂಚಿಸಿ ಸುತ್ತೋಲೆ
ಹೊರಡಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್‌-15ಕ್ಕೆ ಮುಂದೂಡಿತು.


ಆಧಾರ:ಕನ್ನಡಪುಭ, ದಿನಾಂಕ:06.08.2020


222


10. ಹಿಂದೂ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿ


ಹಿಂದೂ ಉತ್ತರಾಧಿಕಾರಿ ಕಾಯ್ದೆಯಡಿ ಮಗಳಿಗೆ ಸಮಾನ ಆಸ್ತಿ ಹಕ್ಕು ಪಡೆಯಲು ಅರ್ಹತೆ ಇದೆ
ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಹಿಂದೂ ಉತ್ತರಾಧಿಕಾರಿ (ತಿದ್ದುಪಡಿ) ಕಾಯ್ದೆ
2005ರ ಜಾರಿಗೆ ಬರುವ ಮೊದಲು ದಾಯಾದಿ ಬದುಕಿದ್ದರೂ ಅಥವಾ ಮೃತಪಟ್ಟದ್ದರೂ ಹೆಣ್ಣುಮಕ್ಕಳಿಗೆ
ಪೋಷಕರ ಆಸ್ಲಿಯ ಮೇಲೆ ಹಕ್ಕಿದೆ ಎ೦ದು ನ್ಯಾಯಾಲಯ ಹೇಳಿದೆ.


ಕಾನೂನಿನ ವಿವಾದಗಳನ್ನು ಬಗೆಹರಿಸಿ ತೀರ್ಪು ನೀಡಿರುವ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ
ಮೂವರು ನ್ಯಾಯಮೂರ್ತಿಗಳ ಪೀಠವು, ಹೆಣ್ಣುಮಕ್ಕಳ ಹಕ್ಕುಗಳ ಪರವಾಗಿ ಹಿಂದೂ ಅವಿಭಜಿತ ಕುಟುಂಬ
(ಎಚ್‌ಯುಎಫ್‌) ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕಿದೆ ಎಂದು ತೀರ್ಪು ನೀಡಿತು. ತಿದ್ದುಪಡಿ ಸಮಯದಲ್ಲಿ
ತಂದೆ ಜೀವಂತವಾಗಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಆಕೆಗೆ ಅನುವಂಶಿಕ ಹಕ್ಕಿದೆ ಎಂದು
ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ತಿದ್ದುಪಡಿಯ ದಿನಾಂಕದಂತೆ ಮಗಳು, ಬದುಕಿರಲಿ ಅಥವಾ ಸತ್ತಿರಲಿ, ತನ್ನ ತಂದೆಯ ಆಸ್ತಿಯಲ್ಲಿ
ಪಾಲು ಪಡೆಯಲು ಅರ್ಹಳು. ಇದರ ಅರ್ಥವೇನೆಂದರೆ, ತಿದ್ದುಪಡಿಯ ದಿನಾಂಕದಂದು ಮಗಳು
ಮೃತಪಟ್ಟಿದ್ದರೂ ಸಹ ಆಕೆಯ ಮಕ್ಕಳು ಸಮಾನ ಪಾಲನ್ನು ಪಡೆಯಬಹುದು ಎಂದು ಹೇಳಿದೆ. ಪುತ್ತರಂತೆಯೇ
ತಿದ್ದುಪಡಿಯು ಸಹವರ್ತಿ ಸ್ಥಾನಮಾನವನ್ನು ಮಗಳಿಗೆ ವಿಸ್ತರಿಸಿದೆ. ಮಗನಂತೆಯೇ ಹಕ್ಕುಗಳನ್ನು ಅನುಭವಿಸಲು
ಅನುವು ಮಾಡಿಕೊಟ್ಟದೆ ಎಂದು ನ್ಯಾಯಾಲಯ ಹೇಳಿದೆ. 2005ರ ಸೆಪ್ಲೆಂಬರ್‌ 9 ರಂದು ಹಿಂದೂ
ಉತ್ತರಾಧಿಕಾರಿ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ವೇಳ ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿದ್ದರೆ
ಮಾತ್ರ ಆಕೆಗೆ ಹಕ್ಕು ಸಿಗುತ್ತದೆ ಎಂಬ ಹಿಂದಿನ ನಿರ್ಧಾರಗಳನ್ನು ಈ ತೀರ್ಪು ರದ್ದುಗೊಳಿಸುತ್ತದೆ. ಹಾಗಾಗಿ ಈ
ಸ್ಪಷ್ಟೀಕರಣ ಪ್ರಾಮುಖ್ಯತೆ ಪಡೆದುಕೊಂಡಿದೆ.


2005ರಲ್ಲಿ ಹಿಂದೂ ಕಾನೂನು ತಿದ್ದುಪಡಿ ಜಾರಿಗೆ ಬರುವ ಮೊದಲು ತಂದೆ ಸತ್ತರೆ ಪೂರ್ವಜರ
ಆಸ್ತಿಯಲ್ಲಿ ಮಗಳಿಗೆ ಹಕ್ಕು ಉದ್ದವಿಸುವುದಿಲ್ಲ ಎಂದು 2015ರ ನವೆಂಬರ್‌ನಲ್ಲಿ ನ್ಯಾಯಾಲಯ ಹೇಳಿತ್ತು.


ಆಧಾರ:ವಿಶ್ವವಾಣಿ, ದಿನಾಂಕ:12.08.2020
11. ಹೆಣ್ಣು ಮಕ್ಕಳಿಗೆ ಸಮಾನ ಆಸ್ಲಿ ಹಕ್ಕು


ಅವಿಭಕ್ತ ಕುಟುಂಬದ ಹೇಣ್ಣುಮಕ್ಕಳಿಗೆ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ ಪ್ರಕಾರ, ಪಿತ್ರಾರ್ಜಿತ
ಆಸ್ತಿಯಲ್ಲಿ ಸಮಾನ ಹಕ್ಕುಗಳಿವೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


_ [)


ತಿದ್ದುಪಡಿ ಕಾಯ್ದೆ ಜಾರಿಗೆ ಬರುವ ಮುನ್ನ ಒಂದು ವೇಳ ತಂದೆ ತೀರಿಕೊಂಡಿದ್ದರೂ, ಪಿತ್ರಾರ್ಜಿತ
ಆಸ್ತಿಯಲ್ಲಿ ಹೆಬ್ದುಮಕ್ಕಳು ಸಮಾನ ಹಕ್ಕು ಹೊಂದಿರುತ್ತಾರೆ. 2005ರಲ್ಲಿ ಕಾಯ್ದೆಗೆ ತರಲಾದ ತಿದ್ದುಪಡಿಯು
ಪೂರ್ವಾನ್ವಯ ಆಗಲಿದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟ ಪಡಿಸಿದೆ. ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ.
ಎಸ್‌.ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್‌.ಶಾ ಅವರ ನ್ಯಾಯಪೀಠ ಈ ತೀರ್ಪು ನೀಡಿದೆ.


"ಕಾಯ್ದೆಯು ತಿದ್ದುಪಡಿಗೊಂಡು ಜಾರಿಗೆ ಬಂದ ನಂತರ ಅಥವಾ ಅದಕ್ಕೂ ಮೊದಲೇ ಜನಿಸಿದ ಗಂಡು
ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಮೇಲೆ ಯಾವ ಹಕ್ಕುಗಳಿವೆಯೋ ಅವೇ ಹಕ್ಕುಗಳು ಹೇಬ್ದಮಕ್ಕಳಿಗೂ ಇವೆ' ಎಂದು
ನ್ಯಾಯಪೀಠ ಹೇಳಿದೆ.


"ಮಗಳು ಸದಾ ಮಗಳಾಗಿಯೇ ಇರುತ್ತಾಳೆ. ಆದರೆ, ಮಗ ಮದುವೆ ಆಗುವವರೆಗೆ ಮಾತ್ರ ಮಗನಾಗಿ
ಇರುತ್ತಾನೆ' ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದರು.

ಈ ಹಿಂದೆ, ಎರಡು ನ್ಯಾಯಪೀಠಗಳು ಭಿನ್ನ ತೀರ್ಪು ನೀಡಿದ್ದರಿಂದ ಹಿಂದೂ ಉತ್ತರಾಧಿಕಾರ
ಕಾಯ್ದೆಯ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು ಈ ಗೊಂದಲದಿಂದಾಗಿ ಹೈಕೋರ್ಟ್‌ಗಳು ಮತ್ತು ಕೆಳ
ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳ ತೀರ್ಪು ಈಗಾಗಲೇ ವಿಳಂಬ ಆಗಿದೆ.
ಆರು ತಿಂಗಳೊಳಗೆ ಈ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು ಎಂದು ಪೀಠವು ಸೂಚಿಸಿದೆ.


ಆಧಾರ:ಪ್ರಜಾವಾಣಿ, ದಿನಾಂಕ:12.08.2020


223


12. ಎನ್‌ಜಿಟಿ ಆದೇಶ ರದ್ದುಗೊಳಿಸಿದ "ಸುಪ್ರೀಂ'


ಬೆಂಗಳೂರಿನಲ್ಲಿ ಗೋದೆಜ್‌ ಪ್ರಾಪರ್ಟಿಸ್‌ ಲಿಮಿಟೆಡ್‌ ಹಾಗೂ ವಂಡರ್‌ ಪ್ರೊಜೆಕ್ಟ್‌ ಡೆವಲೆಪ್‌ಮೆಂಟ್‌
ಪ್ರೈ.ಲಿ. ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಪರಿಸರ ಇಲಾಖೆ ನೀಡಿದ್ದ ಅನುಮತಿ (ಇಸಿ) ರದ್ದುಗೊಳಿಸಿದ
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ (ಎನ್‌ಜಿಟಿ) ಆದೇಶವನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿದೆ.


"ಈ ಪ್ರಕರಣವನ್ನು ಪುನರ್‌ ಪರಿಶೀಲಿಸಬೇಕು” ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ
ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್‌ ಅವರಿದ್ದ
ನ್ಯಾಯಪೀಠವು ಎನ್‌ಜಿಟಿಗೆ ಸೂಚಿಸಿತು. ಅಲ್ಲಿಯವರೆಗೂ ಯಾವುದೇ ನಿರ್ಮಾಣ ಚಟುವಟಿಕೆ ಮಾಡಬಾರದು
ಎಂದು ಪೀಠ ಆದೇಶಿಸಿತು.


ಕೈಕೊಂಡರಹಳ್ಳಿ ಕೆರೆ ಪ್ರದೇಶದ ಬಫರ್‌ ವಲಯದಲ್ಲೇ ಈ ಯೋಜನೆಯು ಇದೆ ಎಂದಿದ್ದ ಎನ್‌ಜಿಟಿ
ಅನುಮತಿಯನ್ನು ರದ್ದುಗೊಳಿಸಿತ್ತು ಕೆರೆಯೊಂದರ ಬಫರ್‌ ವಲಯವನ್ನು ಉಲ್ಲಂಘಿಸುವ ಯಾವುದೇ
ಯೋಜನೆಗಳಿಗೆ ಪರಿಸರ ಇಲಾಖೆ ಅನುಮತಿ ನೀಡಬಾರದು ಎಂದು ಎನ್‌ಜಿಟಿ ಸೂಚಿಸಿತ್ತು.


ಈ ಪ್ರಕರಣದ ಪುನರ್‌ ಪರಿಶೀಲನೆ ಆರಂಭಿಸಿದ ಬಳಿಕ ಆರು ವಾರದೊಳಗಾಗಿ ವಿಚಾರಣೆ
ಪೂರ್ಣಗೊಳಿಸಬೇಕು. ಈಗಾಗಲೇ ನೀಡಿರುವ ಇಸಿ ಅವಧಿ ಎನ್‌ಜಿಟಿಯ ಹೊಸ ಆದೇಶಕ್ಕೆ ಒಳಪಡಲಿದೆ
ಹಾಗೂ ಈ ಸನ್ನಿವೇಶದಲ್ಲಿ ಇಸಿ ಪುನರೂರ್ಜಿತವಾಗಿದೆ ಎಂದಲ್ಲ. ಈ ನ್ಯಾಯಾಲಯವು ಯಾವುದೇ
ಅಭಿಪ್ರಾಯವನ್ನು ತಿಳಿಸಿಲ್ಲ. ಈ ಪ್ರಕರಣದಲ್ಲಿ ಹೆಚ್ಚುವರಿ ದಾಖಲೆಗಳು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು
ಸಂಬಂಧಪಟ್ಟವರಿಗೆ ಎನ್‌ಜಿಟಿ ಅವಕಾಶ ನೀಡಬೇಕು. ಪೀಠದ ಆದೇಶ ತಲುಪಿದ ಕೂಡಲೇ ವಿಚಾರಣೆ
ದಿನಾಂಕವನ್ನು ಎನ್‌ಜಿಟಿ ನಿಗದಿ ಪಡಿಸಬೇಕು ಎಂದು ಆದೇಶಿಸಿದೆ.


ಬೆಂಗಳೂರು ನಿವಾಸಿಯಾದ ಎಚ್‌.ಪಿ.ರಾಜಣ್ಣ ಎಂಬುವರು ಬೆಂಗಳೂರು ನಗರ ಜಿಲ್ಲೆಯ ವರ್ತೂರು
ಹೋಬಳಿಯ ಕೈಕೊಂಡರಹಳ್ಳಿ ಕೆರೆಯ ಸಮೀಪ ನಿರ್ಮಾಣವಾಗಲಿರುವ ಯೋಜನೆಗಳ ವಿರುದ್ಧ ಎನ್‌ಜಿಟಿಯಲ್ಲಿ
ಅರ್ಜಿ ಸಲ್ಲಿಸಿದ್ದರು. ಬಫರ್‌ ವಲಯದಲ್ಲೇ ಯೋಜನೆಯಿದ್ದು, ಇದಕ್ಕೆ 2018 ಜನವರಿ 10ರಂದು ಇಸಿ
ನೀಡಿರುವುದನ್ನು ಅವರು ಪ್ರಶ್ನಿಸಿದರು.


ಆಧಾರ:ಪ್ರಜಾವಾಣಿ, ದಿನಾ೦ಕ:18.08.2020
13. ಸಾಲಗಾರರ ಸಂಕಷ್ಟಕ್ಕೆ ಸ್ಪಂದಿಸಿ


ಬ್ಯಾಂಕ್‌ ಸಾಲ ಮರು ಪಾವತಿ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ವಿಚಾರದಲ್ಲಿ ಯಾವುದೇ
ನಿರ್ಧಾರ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ವ್ಯಾಪಾರ ಮತ್ತು
ಬ್ಯಾಂಕುಗಳ ಹಿತಾಸಕ್ತಿಯನ್ನಷ್ಟೇ ನೋಡಿಕೊಂಡರೆ ಸಾಲದು, ಜನರ ಸಂಕಷ್ಟವನ್ನೂ ಗಣನೆಗೆ ತೆಗೆದುಕೊಳ್ಳಬೇಕು
ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠವು ಹೇಳಿದೆ.


ಲಾಕ್‌ಡೌನ್‌ ಅವಧಿಯಲ್ಲಿ ಮುಂದೂಡಲಾದ ಸಾಲ ಮರುಪಾವತಿ ಅವಧಿಗೆ ಬಡ್ಡಿ ಮನ್ನಾ ಮಾಡಬೇಕು
ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. ಬಡ್ಡಿ ಮನ್ನಾ ಮಾಡುವುದಕ್ಕೆ
ಸಂಬಂಧಿಸಿದಂತೆ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಿಂದೆ ಅವಿತುಕೊಳ್ಳುವುದು
ಸಾಧ್ಯವಿಲ್ಲ. ಸರ್ಕಾರ ಹೇರಿದ್ದ ಲಾಕ್‌ಡೌನ್‌ನಿಂದಾಗಿಯೇ ಈಗಿನ ಪರಿಸ್ಥಿತಿ ನಿರ್ಮಾಣ ಆಗಿದೆ. ಸಾಲ
ಮರುಪಾವತಿ ಮುಂದೂಡಿರುವ ಆರು ತಿಂಗಳ ಬಡ್ಡಿ ಮತ್ತು ಬಡ್ಡಿಯ ಮೇಲಿನ ಬಡ್ಡಿ ವಿಚಾರದಲ್ಲಿ ಸ್ಪಷ್ಟ ನಿಲುವು
ಪ್ರಕಟಿಸಬೇಕು ಎಂದು ಪೀಠವು ಹೇಳಿದೆ. ವಿಕೋಪ ನಿರ್ವಹಣೆ ಕಾಯ್ದೆಯ ಅಡಿಯಲ್ಲಿ ಇರುವ ಅಧಿಕಾರವನ್ನು
ಬಳಸಿಕೊಂಡು ಕೇಂದವು ನಿರ್ಧಾರ ಕೈಗೊಳ್ಳಬೇಕೇ ವಿನಾ ಆರ್‌ಬಿಐಯನ್ನು ಅವಲಂಬಿಸಬಾರದು ಎಂದು
ಸೂಚಿಸಿದೆ.


ಸರ್ಕಾರವು ಆರ್‌ಬಿಐ ಹಿಂದೆ ಅಡಗಿಕೊಂಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಾಲಿಸಿಟರ್‌
ಜನರಲ್‌ ತುಷಾರ್‌ ಮೆಹ್ತಾ "ಪೀಠವು ಹಾಗೆ ಹೇಳಬಾರದು, ನಾವು ಆರ್‌ಬಿಐ ಜೊತೆಗೆ ಸಮನ್ವಯದಿಂದ ಕೆಲಸ
ಮಾಡುತ್ತಿದ್ದೇವೆ” ಎಂದರು.


224


ಕೇಂದ್ರ ಸರ್ಕಾರವು ತನ್ನ ನಿಲುವನ್ನು ಪ್ರಕಟಿಸಿಲ್ಲ ಯಾವುದೇ ಪ್ರಮಾಣ ಪತ್ರವನ್ನೂ ಸಲ್ಲಿ
ಎಂಬುದರತ್ತ ಅರ್ಜಿದಾರರ ವಕೀಲ ರಾಜೀವ್‌ ದತ್ತಾ ಅವರು ಪೀಠದ ಗಮನ ಸೆಳೆದರು. ಬಡ್ಡಿ ಮ ್ಸಿ


ವಿಚಾರವನ್ನು ಅನಿರ್ದಿಷ್ಟಾವಧಿಗೆ ತಳ್ಳಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು. ಸ್ಪಷ್ಟ


pe ಗ
ನಿಲುವು ಇರುವ ಪ್ರಮಾಣಪತ್ರವನ್ನು ಆಗಸ್ಟ್‌ 31ರೊಳಗೆ ಸಲ್ಲಿಸಬೇಕು ಎಂಬ ನಿರ್ದೇಶನವನ್ನೂ ಕೊಟ್ಟಿತು.
ಬ್ಯಾಂಕುಗಳ ಸಂಕಷ್ಟ: ಬಡ್ಡಿ ಮನ್ನಾ ಮಾಡುವುದು ಬುದ್ದಿವಂತಿಕೆಯ ನಡೆ ಅಲ್ಲ. ಬಡ್ಡಿ ಮನ್ನಾ
ಮಾಡುವುದರಿಂದ ಬ್ಯಾಂಕುಗಳ ಹಣಕಾಸು ಸ್ಥಿತಿ ಹದಗೆಡುತ್ತದೆ ಎಂದು ಆರ್‌ಬಿಐ ಹಿಂದಿನ ವಿಚಾರಣೆ
ಸಂದರ್ಭದಲ್ಲಿ ವಾದಿಸಿತ್ತು ಆದರೆ, ಇದನ್ನು ಪೀಠವು ಒಪ್ಪಿರಲಿಲ್ಲ. ಮುಂದೂಡಿಕೆ ಅವಧಿಯ ಬಡ್ಡಿಯ ಮೇಲೆ
ಬಡ್ಡಿ ವಿಧಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪೀಠವು ಹೇಳಿತ್ತು


ಬಡ್ಡಿ ಮನ್ನಾ ವಿಚಾರದಲ್ಲಿ ಎರಡು ಅಂಶಗಳಿವೆ. ಮರುಪಾವತಿ ಅವಧಿಯ ಬಡ್ಡಿಯನ್ನು ಪೂರ್ಣವಾಗಿ
ಮನ್ನಾ ಮಾಡುವುದು ಮತ್ತು ಈ ಅವಧಿಯ ಬಡ್ಡಿಯ ಮೇಲಿನ ಬಡ್ಡಿ ಮನ್ನಾ ಮಾಡುವುದು. ಈಗಿನದ್ದು
ಸಂಕಷ್ಟದ ಸಮಯ. ಮರುಪಾವತಿಯನ್ನು ಮುಂದೂಡಿಕೆ ಮಾಡಿ ಆ ಅವಧಿಗೆ ಬಡ್ಡಿ ಹೇರುವುದು ಗಂಭೀರ
ವಿಚಾರ ಎಂದು ಪೀಠವು ಹೇಳಿತ್ತು.


ಹಣಕಾಸು ಸಚಿವಾಲಯ ಮತ್ತು ಆರ್‌ಬಿಐನ ಅಧಿಕಾರಿಗಳು ಚರ್ಚೆ ನಡೆಸಿ ಸಮಸೆ


%


ಬಗೆಹರಿಸಿಕೊಳ್ಳಬೇಕು ಎಂದು ಜೂನ್‌ನಲ್ಲಿ ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್‌ ಸೂಚನೆ ನೀಡಿತ್ತು.


ಆಧಾರ:ಪ್ರಜಾವಾಣಿ, ದಿನಾಂಕ:27.08.2020
ಪದವಿ ಅಂತಿಮ ಪರೀಕ್ಷೆ ಕಡ್ಡಾಯ


ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವಂತಿಲ್ಲ ಎಂದು
ಸರ್ವೋನ್ನತ ನ್ಯಾಯಾಲಯ ಮಹತ್ನದ ತೀರ್ಪು ನೀಡಿದೆ. ಶಿಕ್ಷಣದ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ
ಭವಿಷ್ಯ ಕಾಪಾಡಲು ಪರೀಕ್ಷೆಗಳು ಅಗತ್ಯ ಎಂಬ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ)
ವಾದವನ್ನು ಸುಪ್ರೀಂಕೋರ್ಟ್‌ ಪುರಸ್ಕರಿಸಿದೆ. ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅಂತಿಮ ವರ್ಷದ ಪದವಿ
ಪರೀಕ್ಷೆಗಳನ್ನು ರದ್ದುಪಡಿಸುವಂತೆ ಕೋರಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌
ಭೂಷಣ್‌ ನೇತೃತ್ಸದ ನ್ಯಾಯಪೀಠ, ಸೆಪ್ರೆಂಬರ್‌. 30ರ ಗಡುವಿನ ನಂತರ ಪರೀಕ್ಷೆ ನಡೆಸುವುದಕ್ಕೆ ರಾಜ್ಯಗಳು
ಅನುಮತಿ ಕೋರಬಹುದಾಗಿದೆ ಎಂದು ಸಿದೆ.


ಜೆಲಇ-ನೀಟ್‌ ಮರುಪರಿಶೀಲನೆಗೆ ಮನವಿ:- ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತೆ
ಹಾಗೂ ಪ್ರವೇಶ ಪರೀಕ್ಷೆ (ನೀಟ್‌) ನಡೆಸುವುದಕ್ಕೆ ನೀಡಿರುವ ಅನುಮತಿಯನ್ನು ಮರು ಪರಿಶೀಲಿಸುವಂತೆ ಆರು
ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವುದು
ಅಪಾಯ ಎಂದು ವಾದಿಸಿ ಪರೀಕ್ಷೆಗಳನ್ನು ಮುಂದೂಡುವಂತೆ 11 ರಾಜ್ಯಗಳ 11 ವಿದ್ಯಾರ್ಥಿಗಳು ಅರ್ಜಿ
ಸಲ್ಲಿಸಿದ್ದರು. ಇದನ್ನು ಆಗಸ್ಟ್‌ 17ರಂದು ತಳ್ಳಿಹಾಕಿದ ಸುಪ್ರೀಂಕೋರ್ಟ್‌, ಪರೀಕ್ಷೆಗಳನ್ನು ನಡೆಸುವಂತೆ ಕೇಂದಕ್ಕೆ
ಹಸಿರು ನಿಶಾನೆ ತೋರಿಸಿತ್ತು. ಅದನ್ನು ಮರುಪರಿಶೀಲಿಸುವಂತೆ ಈಗ ಪಶ್ಚಿಮ ಬಂಗಾಳ, ಜಾರ್ಶಿಂಡ್‌,
ರಾಜಸ್ಥಾನ, ಛತ್ತೀಸ್‌ಗಡ, ಪಂಜಾಬ್‌ ಮತ್ತು ಮಹಾರಾಷ್ಟ ರಾಜ್ಯ ಸರ್ಕಾರಗಳು ಕೋರಿವೆ. ಸೆಪ್ಟೆಂಬರ್‌ 1ರಿಂದ
6ರ ವರೆಗ ಜೆಲ, ಸೆ ಪ್ರೆಂಬರ್‌ 13ರಂದು ನೀಟ್‌ ಪರೀಕ್ಷೆ ದಿನಾಂಕ ನಿಗದಿಯಾಗಿರುತ್ತದೆ.


ಆಧಾರ:ವಿಜಯವಾಣಿ, ದಿನಾಂಕ:29.08.2020


225


ಭಾಗ-8
ಹೊರ ರಾಜ್ಯ, ಸುದ್ದಿಗಳು
1. ಲಾಕ್‌ಡೌನ್‌ನತ್ತ ರಾಜ್ಯ ಗಳ ದೃಷ್ಟಿ


ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಹಂತ ಹಂತವಾಗಿ ತೆರವಾಗುತ್ತಿದ್ದಂತೆಯೇ ದೇಶದಲ್ಲಿ ಕೊರೋನಾ
ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈಗ ಕೆಲವು ರಾಜ್ಯಗಳು ಮತ್ತೊಮ್ಮೆ 'ಠಾಕ್‌ಡೌನ್‌ ಮೊರೆಹೋಗಿವೆ. ಪಶ್ಚಿಮ
ಬಂಗಾಳದಲ್ಲಿ ಎಲ್ಲ ಕಂಟೆನ್ನೆಂಟ್‌ ವಲಯಗಳಲ್ಲಿ ನಿರ್ಬಂಧ ಮುಂದುವರಿಸಲಾಗಿದೆ. ಅದರ ಬೆನ್ನಲ್ಲೇ ಬಿಪಾರ
ರಾಜಧಾನಿ ಪಾಟ್ನಾದಲ್ಲಿ ಕೂಡ ಜುಲೈ 10 ರಿಂದ 16ರ ವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ.


ಪಶ್ಚಿಮ ಬಂಗಾಳದಲ್ಲಿ ಮುಂದಿನ 7 ದಿನಗಳ ಕಾಲ ನಿರ್ಬಂಧ ಇರಲಿದ್ದು, ಆಗತ್ಯವಿದ್ದಲ್ಲಿ ಅದನ್ನು
ಮತ್ತಷ್ಟು ವಿಸ್ತರಿಸಲಾಗುತ್ತದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಅದರಂತೆ, ಕೋಲ್ಕತ್ತಾ, ಹೌರಾ
ಮತ್ತು ನಾರ್ತ್‌ 24 ಪರಗಣಾಸ್‌ ಜಿಲ್ಲೆಗಳು ಮತ್ತೊಮ್ಮೆ ಲಾಕ್‌ಡೌನ್‌ಗೆ ಸಾಕ್ಷಿಯಾಗಲಿವೆ.


ಪಾಟ್ನಾದಲ್ಲಿ ಜುಲೈ ತಿಂಗಳ 16ರವರೆಗೆ ಲಾಕ್‌ಡೌನ್‌ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಅವರು
ತಿಳಿಸಿದ್ದಾರೆ.


ವಿಶೇಷ ಸ್ವಚ್ಛತಾ ಅಭಿಯಾನ: ಕೊರೋನಾ ಸೋಂಕು ಸೇರಿದಂತೆ ಎಲ್ಲ ರೀತಿಯ ಸಾಂಕ್ರಾಮಿಕ
ಕಾಯಿಲೆಗಳು ವ್ಯಾಪಿಸದಂತೆ ತಡೆಯುವ ಸಲುವಾಗಿ ಉತ್ತರಪ್ರದೇಶದಲ್ಲಿ 3 ದಿನಗಳ ವಿಶೇಷ ಸ್ವಚ್ಛತಾ ಅಭಿಯಾನ
ಕೈಗೊಳ್ಳುವುದಾಗಿ ಸಿಎಂ ಯೋಗಿ ಆದಿತ್ಯನಾಥ್‌ ಘೋಷಿಸಿದ್ದಾರೆ. ಅದರಂತೆ, 10, 11 ಮತ್ತು 12ರಂದು ಎಲ್ಲ
ಗ್ರಾಮಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ನಗರಾಭಿವೃದ್ಧಿ ಇಲಾಖೆ,
ಗ್ರಾಮೀಣಾಭಿವೃದ್ಧಿ ಇಲಾಖೆ, ಪಂಚಾಯತ್‌ರಾಜ್‌, ಇತರೆ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಅಭಿಯಾನ
ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಆಧಾರ:ಉದಯವಾಣಿ, ದಿನಾ೦ಕ:08.07.2020
2. ಸಚಿನ್‌ ಪೈಲಟ್‌ಗೆ ಅನರ್ಹತೆ ಭೀತಿ



ಶಾಸಕರು ಈಗ ಅನರ್ಹತೆಯ ಭೀತಿ ಎದುರಿಸುವಂತಾಗಿದೆ. ಡಿಸಿಎಂ ಹಾಗೂ ರಾಜ್ಯಾಧ್ಯಕ್ಷ ಹುದ್ದೆಯಿಂದ


ವಜಾಗೊಂಡ ಯುವ ನಾಯಕ ಸಜೆನ್‌ ಪೈಲಟ್‌ ಹಾಗೂ ಇತರೆ 18 ಬಂಡಾಯ ಶಾಸಕರಿಗೆ ರಾಜಸ್ಥಾನ ಸ್ಪೀಕರ್‌
ನೋಟಿಸ್‌ ಜಾರಿ ಮಾಡಿದ್ದಾರೆ.


ರಾಜಸ್ಥಾನ ರಾಜಕೀಯದಲ್ಲಿ ಏಕಾಏಕಿ ಸಂಚಲನ ಸೃಷ್ಟಿಸಿದ ಸಚಿನ್‌ ಪೈಲಟ್‌ ನೇತೃತ್ವದ ಬಂಡಾಯ


ನೋಟಿಸ್‌ ಜಾರಿ: ವಿಪ್‌ ಉಲ್ಲಂಘಿಸಿ, ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿರುವ ನಿಮ್ಮನ್ನು
ವಿಧಾನಸಭೆಯಿಂದ ಅನರ್ಹಗೊಳಿಸಬಾರದೇಕೆ ಎಂದು ಪ್ರಶ್ನಿಸಿ ನೋಟಿಸ್‌ ಜಾರಿ ಮಾಡಲಾಗಿದ್ದು, ಇದಕ್ಕೆ
ಉತ್ತರಿಸುವಂತೆ ಸೂಚಿಸಲಾಗಿದೆ. ಅಸೆಂಬ್ಲಿಯ ಮುಖ್ಯ ಸಚೇತಕ ಮಹೇಶ್‌ ಜೋಷಿ, ಸ್ಪೀಕರ್‌ ಸಿ.ಪಿ.ಜೋಷಿ
ಅವರಿಗೆ ಪತ್ರ ಬರೆದು, ಸಂವಿಧಾನದ 10ನೇ ಪರಿಚ್ಛೇದದನ್ವಯ ಬಂಡಾಯ ಶಾಸಕರ ವಿರುದ್ಧ ಕ್ರಮ
ಕೈಗೊಳ್ಳುವಂತೆ ಮನವಿ ಮಾಡಿದ್ದರು. ಪಕ್ಷ ವಿರೋಧಿ ಚಟುವಟಿಕೆ, ಪಕ್ಷದ ಹಿತಾಸಕ್ತಿಗೆ ವಿರುದ್ದವಾದ ಕ್ರೆಯೆ,
ಭ್ರಷ್ಟಾಚಾರ ಹಾಗೂ ಲಂಚದ ಮೂಲಕ ಸರ್ಕಾರವನ್ನು ಪತನಗೊಳಿಸುವ ಯತ್ನ ನಡೆಸಿದ್ದಾರೆ ಎಂಬ
ಆರೋಪವನ್ನೂ ಮಹೇಶ್‌ ಜೋಷಿ ಹೊರಿಸಿದ್ದರು.


ಹೋಟೆಲಿಂದ ಹೊರಡಿ, ಜೈಪುರಕ್ಕೆ ಬನ್ನಿ: ಸುರ್ಜೇವಾಲ ಸಂಜೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ
ಕಾಂಗೆಸ್‌ ನಾಯಕ ರಣದೀಪ್‌ ಸುರ್ಜೇವಾಲ, ಬಿಜೆಪಿಗೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಮಾಧ್ಯಮದವರಿಗೆ
ನೀವು ಕೊಟ್ಟಿರುವ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಅದು ನಿಜವೆಂದರೆ, ಹರಿಯಾಣದ ಬಿಜೆಪಿ ನೇತೃತ್ವದ
ಸರ್ಕಾರದ ವ್ಯಾಪ್ತಿಯಲ್ಲಿರುವ ಹೋಟೆಲಿನಿಂದ, ಅವರ ಭದತೆಯಿಂದ ಹೊರಬನ್ನಿ ಬಿಜೆಪಿ ನಾಯಕರೊಂದಿಗೆ
ಮಾತುಕತೆ ನಡೆಸುವುದನ್ನು ನಿಲ್ಲಿಸಿ. ಜೈಪುರಕ್ಕೆ ವಾಪಸ್ಥಾಗಿ. ನಿಮ್ಮ ಅಭಿಪ್ರಾಯವನ್ನು ನೇರವಾಗಿ ನಮ್ಮ ಮುಂದೆ


226


ಬಂದು ತಿಳಿಸಿ ಎಂದು ಹೇಳಿದ್ದಾರೆ. ರಾಜಸ್ಥಾನದ ಉಸ್ತುವಾರಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಅವಿನಾಶ್‌ ಪಾಂಡೆ, ಕಾಂಗೆಸ್‌ ಪಕ್ಷದ NE ಪೈಲಟ್‌ ಅವರಿಗೆ ಇನ್ನೂ ಮುಚ, ದೇವರು ಅವರಿಗೆ ಒಳ್ಳೆಯ
ಬುದ್ದಿ ಕೊಡಲಿ. ತಮ್ಮ ತಪ್ಪನ್ನು ಅರಿತುಸಣಂಡು ಅವರು ವಾಪಸ್‌ ಬರಲಿ ಸಂ ಹೇಳಿದ್ದಾರೆ.


ಪೈಲಟ್‌ರಿಂದ ಕುದುರೆ ವ್ಯಾಪಾರ: ಗೆಹ್ಲೋಟ್‌ ಆರೋಪ: ಕಾಂಗೆಸ್‌ ಬಂಡಾಯ ನಾಯಕ ಸಚಿನ್‌ ಪೈಲಟ್‌
ಅವರು ಬಿಜೆಪಿ ಜೊತೆ ಕೈಜೋಡಿಸಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪವನ್ನು
ಸಿಎಂ ಅಶೋಕ್‌ ಗೆಹ್ಲೋಟ್‌ ಮಾಡಿದ್ದಾರೆ. ಸರ್ಕಾರವನ್ನು ಪತನಗೊಳಿಸುವ ಉದ್ದೇಶದಿಂದ ಸತಃ ಕಾಂಗೆಸ್‌
ಪ್ರದೇಶ ಕಾಂಗೆಸ್‌ ಸಮಿತಿ ಮಾಜಿ ಅಧ್ಧಕ್ಷರೇ ಶಾಸಕರ ವಿರೀದಿಯಲ್ಲಿ ತೊಡಗಿರುವುದಕ್ಕೆ ನನ್ನಲಿ ಸಾಕ್ಷ್ಯಗಳಿವೆ
ಎಂದು ಹೇಳಿದ್ದಾರೆ.


ಜಿಲ್ಲಾ ಬ್ಲಾಕ್‌ ಸಮಿತಿ ವಿಸರ್ಜನೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ರಾಜಸ್ಥಾನ ಕಾಂಗೆಸ್‌ ತನ್ನ ಎಲ್ಲಾ
ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದ ಸಮಿತಿಗಳನ್ನು ವಿಸರ್ಜಿಸಿ, ಪಕ್ಷದ ಎಲ್ಲ ಘಟಕಗಳನ್ನು ಪುನಃ ನಗು
ಮುಂದಾಗಿದೆ. ರಾಜ್ಯ ಕಾಂಗೆಸ್‌ ಉಸ್ತುವಾರಿ ಅವಿನಾಶ್‌ ಪಾಂಡೆ ಈ ವಿಚಾರ ತಿಳಿಸಿದ್ದು, ಸದ್ಯದಲ್ಲೇ ಹೊಸ
ಸಮಿತಿಗಳನ್ನು ರಚಿಸಲಾಗುವುದು ಎಂದಿದ್ದಾರೆ.


ಆಧಾರ:ಉದಯವಾಣಿ, ದಿನಾಂಕ:16.07.2020

3. ಪೈಲಟ್‌ ವಿರುದ್ಧದ ಕ್ರಮಕ್ಕೆ ತಡೆ ನೀಡಿದ ಕೋರ್ಟ್‌
ಬಾರಿ ಕುತೂಹಲಕ್ಕೆ ಕಾರಣವಾಗಿದ ರಾಜಸಾನ ರಾಜಕೀಯ ಹೈಡ್ರಾಮದ ಕೈಮ್ಯಾಕ್ಸ್‌
[a) [a) ೨ [Se ವಿ"


ಮುಂದೂಡಿಕೆಯಾಗಿದೆ. ಕಾಂಗೆಸ್‌ ವಿರುದ್ಧ ಬಂಡಾಯ ಎದ್ದಿರುವ ಪಕ್ಷದ ನಾಯಕ ಸಚಿನ್‌ ಪೈಲಟ್‌ ಹಾಗೂ
ಅವರ 18 ಬೆಂಬಲಿಗ ಶಾಸಕರಿಗೆ ಸ್ಪೀಕರ್‌ ನೀಡಿರುವ ಅನರ್ಹತೆಯ ನೋಟಿಸ್‌ ವಿರುದ್ಧದ ಅರ್ಜಿ
ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್‌ ಮುಂದೂಡಿದೆ. ಪೈಲಟ್‌, ಅವರ ಬೆಂಬಲಿಗ ಶಾಸಕರ ವಿರುದ್ಧ
ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ. ಇದಕ್ಕೆ ಸ್ಟೀಕರ್‌ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್‌


ಮನುಸಿಂಪ್ರ ಒಪ್ಪಿಗೆ ಸೂಚಿಸಿದ್ದಾರೆ.


ಬಂಡಾಯ ನಾಯಕರು ಸಲ್ಲಿಸಿರುವ ಪಿಟಿಷನ್‌ಗೆ ಪ್ರತಿಕ್ರಿಯೆ ನೀಡುವಂತೆ ಕಾಂಗೆಸ್‌ ನ ಮುಖ್ಯ ಸಚೇತಕ
ಮಹೇಶ್‌ ಜೋಶಿಗೆ ಕೋರ್ಟ್‌ ಸೂಚನೆ ನೀಡಿದೆ. ನ್ಯಾ ಇಂದ್ರಜಿತ್‌ ಮಹಾಂತಿ ಹಾಗೂ ನ್ಯಾ.ಪ್ರಕಾಶ್‌ ಗುಪ್ತಾ ಇದ್ದ
ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸುತ್ತಿದೆ.


ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಮಾತ್ರ ವಿಪ್‌ ಅನ್ಸಯವಾಗುತ್ತದೆ. ಉಳಿದ
ಸಂದರ್ಭದಲ್ಲಿ ಇದು ಅನ್ವಯವಾಗುವುದಿಲ್ಲ. ಸಂವಿಧಾನದ 10ನೇ ಪರಿಚ್ಛೇದ ಅನ್ನ್ವಯ ಶಾಸಕರಿಗೆ ನೋಟಿಸ್‌
ನೀಡಿರುವುದು ಸರಿಯಲ್ಲ. ಪಕ್ಷದ ಸದಸ್ಯತ್ತವನ್ನು ತಾವಾಗಿಯೇ ತ್ಯಜಿಸಿದಾಗ ಮಾತ್ರ ಶಾಸಕರನ್ನು
ಅನರ್ಹಗೊಳಿಸಲು ಈ ಪರಿಚ್ಛೇದದಲ್ಲಿ ಅವಕಾಶವಿದೆ. ಆದರೆ ಸಚಿನ್‌ ಪೈಲಟ್‌ ಹಾಗೂ ಬೆಂಬಲಿಗರು ಇನ್ನೂ
ಪಕ್ಷವನ್ನು ತ್ಯಜಿಸಿಲ್ಲ. ಹೀಗಾಗಿ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಬಂಡಾಯ ನಾಯಕರ ಪರ
ವಕೀಲರಾದ ಹರೀಶ ಸಾಳ್ಗೆ ಮತ್ತು ಮುಕುಲ್‌ ರೋಹಟಗಿ ವಾದಿಸಿದರು.


ನಾವು ಕಾಂಗೆಸ್‌ನಿಂದ ಚುನಾವಣೆಗೆ ನಿಂತು ಗೆದ್ದಿದ್ದೇವೆ. ಬೇರೆ ಪಕ್ಷವನ್ನು ಸೇರುವ ಚಿಂತನೆ ಇಲ್ಲ.
ರಾಜ್ಯದ ನಾಯಕತ್ವ ಬದಲಾವಣೆಗೆ ಅಗಹ ಮಾಡಿದ್ದೇವೆ. ಪ್ರಜಾಪಭುತ್ನದಲ್ಲಿ ಇದಕ್ಕೆ ಅವಕಾಶ ಇದೆ. ಆದರೆ
ನಮ್ಮನ್ನು ಅನರ್ಹಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಬಂಡಾಯ ಶಾಸಕರು ಕೋರ್ಟ್‌ಗೆ ಪಿಟಿಷನ್‌ನಲ್ಲಿ
ತಿಳಿಸಿದ್ದಾರೆ.


ರಾಜಸ್ಥಾನದ ಕಾಂಗೆಸ್‌ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಕೇಂದ್ರ ಜಲಶಕ್ತಿ ಸಚಿವ ಗಜೇಂದ
ಸಿಂಗ್‌ ಶೇಖಾವತ್‌ ಶಾಸಕರನ್ನು ಖರೀದಿ ಮಾಡಲು ಯತ್ನಿಸಿದ್ದು, ಅವರನ್ನು ಬಂಧಿಸಬೇಕು ಎಂದು ಕಾಂಗೆಸ್‌
ಅಗಹ ಮಾಡಿದೆ. ಸಚಿವ ಶೇಖಾವತ್‌ ಹಾಗೂ ಕಾಂಗೆಸ್‌ ಶಾಸಕ ಬನ್ಹಾರಿಲಾಲ್‌ ಶರ್ಮಾ ನಡೆಸಿದ್ದಾರೆ ಎನ್ನಲಾದ
ದೂರವಾಣಿ ಸಂಭಾಷಣೆಯನ್ನು ಕಾಂಗೆಸ್‌ ನಾಯಕ ರಣದೀಪ್‌ ಸುರ್ಜಿವಾಲಾ ಸುದ್ದಿಗೋಷ್ಟಿಯಲ್ಲಿ ಬಹಿರಂಗ
ಪಡಿಸಿದ್ದಾರೆ.


227


"ಸಚಿವ ಗಜೇಂದ್ರ ಸಿಂಗ್‌ ಹಾಗೂ ಸಚಿನ್‌ ಪೈಲಟ್‌ ಬೆಂಬಲಿಗ ಬನ್ಹಾರಿಲಾಲ್‌ ಶರ್ಮಾ ನಡುವೆ ಎರಡು
ಆಡಿಯೋ ಬೆಳಕಿಗೆ ಬಂದಿದೆ. ರಾಜಸ್ಥಾನದ ಕಾಂಗೆಸ್‌ ಸರ್ಕಾರವನ್ನು ಉರುಳಿಸಲು ಅವರು ಯತ್ನಿಸುತ್ತಿರುವುದು
ಇದರಲ್ಲಿ ಸಷ್ಟವಾಗಿದೆ. ಇದು ಪ್ರಜಾಪಭುತ್ಸದ ಕರಾಳ ಅಧ್ಯಾಯವಾಗಿದೆ' ಎಂದು ಸುರ್ಜೆವಾಲಾ ಹೇಳಿದರು.
ಪೈಲಟ್‌ ಬೆಂಬಲಿಗ ಶಾಸಕರು ತಂಗಿರುವ ಹೋಟೆಲ್‌ ಎದುರೇ ಅವರು ಸುದ್ದಿಗೋಷ್ಟಿ ನಡೆಸಿದರು. ಗಜೇಂದ್ರ
ಸಿಂಗ್‌ ಕೇಂದ್ರ ಸಚಿವರಾಗಿರುವ ಕಾರಣ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು
ಬಂಧಿಸಬೇಕು. ಈ ಪ್ರಕರಣದಲ್ಲಿ ಭಾಗಿಯಗಿರುವ ಶಾಸಕರು, ಆಡಿಯೋ ಕ್ಷಿಪ್‌ನಲ್ಲಿ ಇರುವ ಪ್ರಭಾವಿಗಳ ವಿರುದ್ಧ
ಕ್ರಮ ಕೈಗೊಳ್ಳಬೇಕು ಎಂದು ಅವರು ಅಗಹಿಸಿದರು.


ಆಧಾರ: ವಿಜಯವಾಣಿ, ದಿನಾ೦ಕ:18.07.2020
4. ಬಂಡಾಯ ಶಾಸಕರಿಗೆ ನಾಲ್ಕು ದಿನ ರಿಲೀಫ್‌


ಸಚಿನ್‌ ಪೈಲಟ್‌ ಸೇರಿದಂತೆ ರಾಜಸ್ಥಾನ ಕಾಂಗೆಸ್‌ನ 19 ಬಂಡಾಯ ಶಾಸಕರಿಗೆ ಹೈಕೋರ್ಟ್‌ 4
ದಿನಗಳ ರಿಲೀಫ್‌ ನೀಡಿದೆ. ಅನರ್ಹತೆಯ ನೋಟಿಸ್‌ಗೆ ಸಂಬಂಧಿಸಿದಂತೆ ಬಂಡಾಯ ಶಾಸಕರ ವಿರುದ್ದ ಸಂಜೆ
5.30ರವರೆಗೂ ವಿಧಾನಸಭೆಯ ಸ್ಪೀಕರ್‌ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ರಾಜಸ್ಥಾನ ಹೈಕೋರ್ಟ್‌
ಹೇಳಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಆರಂಭಿಕ ಹೋರಾಟದಲ್ಲಿ ಪೈಲಟ್‌ ಬಣ ಮುನ್ನಡೆ
ಸಾಧಿಸಿದಂತಾಗಿದೆ.


ಜಾರಿ ಮಾಡಲಾಗಿದ್ದ ಅನರ್ಹತೆ ನೋಟಿಸ್‌ ಪ್ರಶ್ನಿಸಿ ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು
ಸಂಜೆ ವಿಚಾರಣೆ ನಡೆಸಿದ ಕೋರ್ಟ್‌ನ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಮುಂದಿನ ವಿಚಾರಣೆ
ನಡೆಯಲಿದ್ದು, ಅಂದು ಸೀಕರ್‌ ಪರ ವಕೀಲರಾದ ಅಭಿಷೇಕ್‌ ಮನು ಸಿಂಪ್ಪಿ ಅವರು ತಮ್ಮ ವಾದವನ್ನು
ಮುಂದಿಡಲಿದ್ದಾರೆ.


ಮುಖ್ಯಮಂತ್ರಿಯವರ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸುವುದು, ಅದಕ್ಕೆ ಪ್ರತಿರೋಧ ಒಡ್ಡುವುದು
ಪಕ್ಷಾಂತರವಾಗುವುದಿಲ್ಲ. ಅದು ಶಾಸಕರ ಅಭಿವ್ಯಕ್ತಿ ಸ್ಹಾತಂತ್ರ್ಯವಾಗುತ್ತದೆ. ಅಲ್ಲದೇ ಬಂಡಾಯ ಶಾಸಕರು ಸಿಎಂ
ಬದಲಾವಣೆಗೆ ಕೋರುತ್ತಿದ್ದಾರೆಯೇ ಹೊರತು, ಸರ್ಕಾರದ ಬದಲಾವಣೆಯನ್ನು ಬಯಸುತ್ತಿಲ್ಲ ಎಂದು ಪೈಲಟ್‌
ಪರ ವಕೀಲರಾದ ಹರೀಶ್‌ ಸಾಳ್ಟೆ ವಾದಿಸಿದ್ದಾರೆ.


ಎಫ್‌ಐಆರ್‌: ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳು ನಡೆದಿವೆ.
ಶಾಸಕರನ್ನು ಖರೀದಿಸುವ ಮೂಲಕ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಹೇಳಲಾದ
ಆಡಿಯೋ ಕ್ಷಿಪ್‌ಗಳನ್ನು ಕಾಂಗೆಸ್‌ ಬಿಡುಗಡೆ ಮಾಡಿದೆ. ಜೊತೆಗೆ ದೂರನ್ನೂ ನೀಡಿದ್ದು, ರಾಜಸ್ಥಾನ ಪೋಲಿಸರು
ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಕೇಂದ್ರ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ ವಿರುದ್ದವೂ
ಎಫ್‌ಐಆರ್‌ ದಾಖಲಾಗಿದೆ. ಆದರೆ, ಶೇಖಾವತ್‌ ಅವರು ಆಡಿಯೋದಲ್ಲಿರುವ ಧ್ಹನಿ ನನ್ನದಲ್ಲ ಅದು ತಿರುಚಿದ
ಆಡಿಯೋ ಕ್ಲಿಪ್‌, ನಾನು ಯಾವುದೇ ತನಿಖೆಗೂ ಸಿದ್ದ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೂರುದಾರ
ಹಾಗೂ ಕಾಂಗೆಸ್‌ ಮುಖ್ಯ ಸಚೇತಕ ಮಹೇಶ್‌ ಜೋಷಿ ಆಡಿಯೋ ಕೇಳಿಸಿಕೊಂಡವರೆಲ್ಲರೂ ಅದು ಶೇಖಾವತ್‌
ಅವರದ್ದು ಎಂದು ಗುರುತಿಸಿದ್ದಾರೆ. ತನಿಖೆಯ ನಂತರ ಎಲ್ಲವೂ ಸಷ್ಟವಾಗಲಿದೆ. ಅವರಾಗಿಯೇ ವಿಶೇಷ
ಕಾರ್ಯಪಡೆಯ ಬಳಿ ಬಂದು ತಮ್ಮ ಧ್ವನಿ ಮಾದರಿಯನ್ನು ಪರೀಕ್ಷೆಗೆ ಒಪ್ಪಿಸಲಿ ಎಂದಿದ್ದಾರೆ.


ಹೊಲೀಸರ ಪ್ರವೇಶ: ಬಂಡಾಯ ಶಾಸಕರು ತಂಗಿದ್ದ ಹರಿಯಾಣ ಮನೇಸರ್‌ನ ರೆಸಾರ್ಟ್‌ಗೆ ರಾಜಸ್ಥಾನ
ಪೊಲೀಸರು ಪವೇಶಿಸಲು ಯತ್ನಿಸಿದಾಗ ಹೈಡ್ರಾಮ ಉಂಟಾಯಿತು. ಬಹಳಷ್ಟು ಕೊಸರಾಟದ ಬಳಿಕ ಅವರಿಗೆ
ಒಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು.
ಆಧಾರ:ಉದಯವಾಣಿ, ದಿನಾ೦ಕ:18.07.2020
5. ಕೇರಳ: ಏಕಕಾಲದಲ್ಲಿ 50 ಸಾವಿರ ಮಂದಿಗೆ ಚಿಕಿತ್ಸೆ


ದೇಶದಲ್ಲೇ ಮೊದಲ ಕೊರೋನಾ ಸೋಂಕನ್ನು ಕಂಡಿದ್ದ ಕೇರಳದಲ್ಲಿ ಈಗ ಮೂರನೇ ಹಂತದ
ವ್ಯಾಪಿಸುವಿಕೆ ಆರಂಭವಾಗಿದ್ದು, ಅದನ್ನು ಎದುರಿಸಲು ರಾಜ್ಯ ಸಕಲ ಸಿದ್ದತೆ ನಡೆಸಿದೆ. ಅದರಂತೆ, ಏಕಕಾಲಕ್ಕೆ 50


228


ಸಾವಿರ ಸೋಂಕಿತರಿಗೆ ಚಿಕಿತ್ಸೆ ನೀಡುವಂಥ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಇದಕ್ಕಾಗಿ ಮೊದಲ ಹಂತದ
ಚಿಕಿತ್ಸಾ ಕೇಂದ್ರಗಳ ಸಂಖ್ಯೆಯನ್ನು 56ಕ್ಕೇರಿಸಲು ಸರ್ಕಾರ ನಿರ್ಧರಿಸಿದೆ.


ಆರಂಭದಲ್ಲಿ ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದ ಕೇರಳದಲ್ಲಿ ಮೇ
ತಿಂಗಳಿನಿಂದಿಚೇಗೆ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳದ 2 ತಿಂಗಳಲ್ಲಿ ಸುಮಾರು 7
ಸಾವಿರದಷ್ಟು ಹೊಸ ಪ್ರಕರಣಗಳು ಪತ್ತೆಯಾಗಿವೆ. ಮುಂದಿನ ತಿಂಗಳಲ್ಲಿ ಇವುಗಳ ಸಂಖ್ಯೆ ಇನ್ನಷ್ಟು
ಏರಿಕೆಯಾಗುವ ಭೀತಿಯಿದ್ದರೂ, ಯಾವುದೇ ಪರಿಸ್ಥಿತಿಯನ್ನೂ ಎದುರಿಸಲು ಸರ್ಕಾರ ಸನ್ನದ್ದವಾಗಿದೆ ಎಂದು
ರಾಜ್ಯ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಹೇಳಿದ್ದಾರೆ.


ಈಗಾಗಲೇ ಇದ್ದ ಕೊರೋನಾ ಚಿಕಿತ್ಸಾ ಕೇಂದಗಳ ಸಂಖ್ಯೆ ದ್ವಿಗುಣಗೊಳಿಸಲಾಗಿದ್ದು, ತಾತ್ಕಾಲಿಕವಾಗಿ
ಹೆಚ್ಚುವರಿ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಈ ಪಕ್ರಿಯೆ
ಪೂರ್ಣಗೊಂಡರೆ ಏಕಕಾಲಕ್ಕೆ 50 ಸಾವಿರ ಕೊರೋನಾ ಸೊಂಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ. ಈಗಾಗಲೇ
ರಾಜ್ಯದ ಪ್ರತಿ ಜಿಲ್ಲೆಯಲ್ಲೂ 2 ಕೊರೋನಾ ಆಸ್ತ್ಪತ್ರೆಗಳಿವೆ. ಪ್ರತಿ ಆಸ್ಪತ್ರೆಯಲ್ಲೂ ಒಂದೊಂದು ಎಫ್‌ಎಲ್‌ಟಿಸಿ
(ಮೊದಲ ಚಿಕಿತ್ಸಾ ಕೇಂದ) ತೆರೆಯಲಾಗಿದೆ. ಅದರಂತೆ, ಒಟ್ಟಾರೆ ಈಗ 28 ಚಿಕಿತ್ಸಾ ಕೇಂದ್ರಗಳಿದ್ದು, ಈ
ಸಂಖ್ಯೆಯನ್ನು 56ಕ್ಕೇರಿಸಲು ಸರ್ಕಾರ ನಿರ್ಧರಿಸಿದೆ. ಅಂದರೆ, ಪ್ರತಿ ಆಸ್ಪತ್ರೆಯಲ್ಲೂ 2 ಎಫ್‌ಎಲ್‌ಟಿಸಿಗಳು
ಕಾರ್ಯನಿರ್ವಹಿಸಲಿವೆ.


ಆಧಾರ:ಉದಯವಾಣಿ, ದಿನಾ೦ಕ:21.07.2020
6. ಉತ್ತರಾಖಂಡದಲ್ಲಿ ಮೇಘಸ್ಟೋಟ


ದೆಹಲಿ, ಉತ್ತರಪ್ರದೇಶ, ಪಂಜಾಬ್‌-ಹರಿಯಾಣ, ಬಿಹಾರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ
ಧಾರಾಕಾರ ಮಳೆಯಾಗಿದ್ದು, ಮಳೆ ಸಂಬಂಧಿ ಘಟನೆಗಳಿಂದ ಒಟ್ಟು ಐವರು ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ
ದೆಹಲಿಯಲ್ಲಿ ಇಬ್ಬರು ಸಾವಿಗೀಡಾದರೆ, ಉತ್ತರಾಖಂಡದಲ್ಲಿ ಮೇಘ ಸ್ಫೋಟಕ್ಕೆ ಒಂದೇ ಕುಟುಂಬದ ಮೂವರು
ಬಲಿಯಾಗಿದ್ದಾರೆ. ಇನ್ನೊಂದೆಡೆ, ಅಸ್ಲಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು ಮೃತರ ಸಂಖ್ಯೆ 84ಕ್ಕೇರಿದೆ.


3 ಸಾವು, 11 ಮಂದಿ ನಾಪತ್ತೆ: ಉತ್ತರಾಖಂಡದ ಪಿತೋರ್‌ಗಡ ಜಿಲ್ಲೆಯ ಕೈಲಾ ಎಂಬ ಗ್ರಾಮದಲ್ಲಿ
ಮೇಘ ಸ್ಫೋಟ ಸಂಭವಿಸಿ, ಅನೇಕ ಮನೆಗಳು ಕೊಚ್ಚಿಹೋಗಿವೆ. ತಡರಾತ್ರಿ ಈ ಘಟನೆ ನಡೆದಿದ್ದು,
ಮನೆಯೊಂದು ಕುಸಿದು ಬಿದ್ದು, ಒಂದೇ ಕುಟುಂಬದ ಮೂವರು ಸಾವಿಗೀಡಾಗಿ, 6 ಮಂದಿ ಗಾಯಗೊಂಡಿದ್ದಾರೆ.
ಅಲ್ಲದೆ, 11 ಮಂದಿ ನಾಪತ್ತೆಯಾಗಿದ್ದು, ಅವರ ಸುಳಿವು ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿ ವಿ.ಕ.ಜೋಗ್‌ದಂಡೆ
ಹೇಳಿದ್ದಾರೆ. ಅನೇಕ ಮನೆಗಳಿಗೆ ಹಾನಿಯಾಗಿದ್ದು, ಹಲವು ಜಾನುವಾರುಗಳು ಅಸುನೀಗಿವೆ.


ದೆಹಲಿಯಲ್ಲಿ ಇಬ್ಬರು ಬಲಿ: ಭಾರೀ ಮಳಯಿಂದಾಗಿ ದೆಹಲಿಯ ಮಿಂಟೋ ಸೇತುವೆಯಡಿ ಪ್ರವಾಹ
ಪರಿಸ್ಥಿತಿ ತಲೆದೋರಿತ್ತು. ಸೇತುವೆ ಸಮೀಪ ಜಲಾವೃತಗೊಂಡಿದ್ದ ರಸ್ತೆಯಲ್ಲಿ ಪಕಪ್‌ ವಾಹನದ ಚಾಲಕನೊಬ್ಬನ
ಮೃತದೇಹ ಪತ್ತೆಯಾಗಿದೆ. ಇದೇ ವೇಳ, ಜಹಾಗೀರ್‌ಪುರಿ ಪ್ರದೇಶದಲ್ಲಿ ವಿದ್ಯುತ್‌ ಆಘಾತದಿಂದ 55 ವರ್ಷದ
ಮತ್ತೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಆಧಾರ:ಉದಯವಾಣಿ, ದಿನಾ೦ಕ:21.07.2020
7. ದೇಶದ ಹಲವೆಡೆ ವರ್ಷಾಘಾತ
ಅಸ್ಲಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು, ಜನ
ಭಯಭೀತರಾಗಿದ್ದಾರೆ. ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಉತ್ತರ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ
ಮಳೆ ಮುಂದುವರಿಯುವುದಾಗಿ ಹೇಳಿರುವ ಹವಾಮಾನ ಇಲಾಖೆ, ರೆಡ್‌ ಅಲರ್ಟ್‌ ಘೋಷಿಸಿದೆ. ಈಗಾಗಲೇ
ಪ್ರವಾಹಕ್ಕೆ ತುತ್ತಾಗಿರುವ ರಾಜ್ಯಗಳಿಗೆ ಇದು ಇನ್ನಷ್ಟು ಆತಂಕ ಮೂಡಿಸಿದೆ. ಅಸ್ಲಾಂನಲ್ಲಿ ರಕ್ಷಣೆ ಹಾಗೂ ಪರಿಹಾರ
ಕಾರ್ಯಕ್ಕೆ ವಾಯುಪಡೆ ಸಜ್ಜಾಗಿದೆ.
ಪೂರ್ವ ಏರ್‌ ಕಮಾಂಡ್‌ ಪ್ರವಾಹ ಸ್ಥಿತಿಯನ್ನು ಗಮನಿಸುತ್ತಿದ್ದು, ಎಂಐ 17, ಸುಧಾರಿತ ಲಘು
ಹೆಲಿಕಾಪ್ಪರ್‌ ಸೇರಿದಂತೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದವುಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ ಎಂದು


229


ವಾಯುಪಡೆ ತಿಳಿಸಿದೆ. ಈಗಾಗಲೇ ಅಸ್ಲಾಂನ 24 ಜಿಲ್ಲೆಗಳಲ್ಲಿ ಪ್ರವಾಹವು ತಲೆದೋರಿದ್ದು, 24 ಲಕ್ಷ ಮಂದಿ
ಅತಂತ್ರರಾಗಿದ್ದಾರೆ. 2,254 ಗ್ರಾಮಗಳು ಜಲಾವೃತಗೊಂಡಿವೆ. ಈ ನಡುವೆ. ಅಸ್ಸಾಂನ ಪರಿಸ್ಥಿತಿಯನ್ನು
ಗಮನಿಸಿರುವ ವಿಶ್ವಸಂಸ್ಥೆ ಅಗತ್ಯವಿದ್ದರೆ, ಭಾರತ ಸರ್ಕಾರಕ್ಕೆ ನೆರವು ನೀಡುವುದಾಗಿ ಘೋಷಿಸಿದೆ.
ಮೇಘಾಲಯದಲ್ಲೂ ಪ್ರವಾಹ ಹೆಚ್ಚಾಗುತ್ತಿದ್ದು, ಸಿಎಂ ಕೊನ್ರಾಡ್‌ ಸಂಗ್ಮಾ ಅವರೊಂದಿಗೆ ಕೇಂದ್ರ ಗೃಹ ಸಚಿವ
ಅಮಿತ್‌ ಶಾ ದೂರವಾಣಿ ಮೂಲಕ ಮಾತುಕತೆ ನಡೆಸಿ, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ
ನೀಡಿದ್ದಾರೆ.


ಸಾವಿನ ಸಂಖ್ಯೆ 5ಕ್ಕೇರಿದೆ: ಉತ್ತರಾಖಂಡದ ಪಿತ್ತೋರ್‌ಗಡ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಟೋಟದಲ್ಲಿ
ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ ಮನೆಗಳ ಅವಶೇಷದಡಿ ಸಿಲುಕಿದ್ದ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ.
ಇನ್ನೂ 9 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.


ಧಾರಾಕಾರ ಮಳೆ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ
ಮಳೆಯಾಗಿದ್ದು, ತಗ್ಗುಪುದೇಶಗಳೆಲ್ಲ ಜಲಾವೃತವಾಗಿವೆ. ರಸ್ತೆಗಳು ಮುಳುಗಡೆಯಾದ ಕಾರಣ ಸಂಚಾರಕ್ಕೆ
ಅಡ್ಡಿಯಾಗಿ, ವಾಹನ ಸವಾರರು ಪರದಾಡಿದ್ದಾರೆ. ಇಲ್ಲಿ ಭಾರೀ ಮಳೆಯಾಗುವುದಾಗಿ ಭಾರತೀಯ ಹವಾಮಾನ
ಇಲಾಖೆ ಮುನ್ನೆಚರಿಕೆ ನೀಡಿದೆ.


ಗ್ರಾಮ ಜಲಾವೃತ: ಕೇರಳದ ಎರ್ನಾಕುಳಂ ಜಿಲ್ಲೆಯ ಕುಟ್ಟಂಪುಳ ಗ್ರಾಮವು ಮಳೆಯಿಂದಾಗಿ
ಜಲಾವೃತಗೊಂಡಿದೆ. ಸಣ್ಣಪುಟ್ಟ ತೊರೆ, ಕಾಲುವೆಗಳು ತುಂಬಿ ಹರಿದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿವೆ.
ಇಲ್ಲಿ ಸಿಲುಕಿದ್ದ ಅನೇಕರನ್ನು ನಂತರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು.


ಗೋಡೆ ಕುಸಿತ: ಉತ್ತರಾಖಂಡದ ಹರಿದ್ದಾರದಲ್ಲಿ ಭಾರೀ ಸಿಡಿಲು ಬಡಿದ ಪರಿಣಾಮ, ಹರಿ ಕಿ ಪೌರಿಯಲ್ಲಿ
ಗೋಡೆ ಕುಸಿದು ಬಿದ್ದಿದೆ. ಬಹ್ಮಕುಂಡ್‌ನಲ್ಲಿ ಸಿಡಿಲು ಬಡಿದಾಗ ಅಲ್ಲೇ ಇದ್ದ ಟ್ರಾನ್ಸ್‌ ಫಾರ್ಮರ್‌ಗೆ ಬೆಂಕಿ
ಹೊತ್ತಿಕೊಂಡಿತು ಹಾಗೂ ಗೋಡೆ ಕುಸಿದುಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್‌
ಯವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದ ಪೊಂಛ್‌ ಜಿಲ್ಲೆಯಲ್ಲೂ ಸಿಡಿಲು
ಬಡಿದು ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.


ಆಧಾರ:ಉದಯವಾಣಿ, ದಿನಾ೦ಕ:22.07.2020
8. ಸುಪ್ರಿಂಕೋರ್ಟ್‌ ಮೆಟ್ಟಿಲೇರಿದ ರಾಜಸ್ಥಾನ ರಾಜಕೀಯ ಬಿಕ್ಕಟ್ಟು


ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಸುಪ್ರಿಂಕೋರ್ಟ್‌ ಅಂಗಳ ತಲುಪಿದೆ. ಸಚಿನ್‌ ಪೈಲಟ್‌ ಬಣದವರು
ಅನರ್ಹತೆಯ ನೋಟಿಸ್‌ ಪಠಿಸಿದ" ಅರ್ಜಿ ಸಂಬಂಧ ಯಾವುದೇ ತೀರ್ಪು ನೀಡದಂತೆ ರಾಜಸ್ಥಾನ
ಹೈಕೋರ್ಟ್‌ಗೆ ಸೂಚಿಸಬೇಕೆಂದು ಕೋರಿ ಸ್ಪೀಕರ್‌ ಸಿ.ಪಿ. ಜೋಶಿ ಸುಪ್ರಿಂಕೋರ್ಟ್‌ ಮೊರೆಹೋಗಿದ್ದಾರೆ. ಈ
ಅರ್ಜಿ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ತಮ್ಮ ವಾದವನ್ನೂ ಆಲಿಸಬೇಕು ಎಂದು ಪೈಲಟ್‌ ಬಣ
ಕೇವಿಯಟ್‌ ಅರ್ಜಿ ಸಲ್ಲಿಸಿದೆ. ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅರುಣ್‌ ಮಿಶ್ರಾ
ಕೈಗೆತ್ತಿಕೊಳ್ಳಲಿದ್ದಾರೆ. ಶಾಸಕರ ಅನರ್ಹತೆ ನಿರ್ಧರಿಸುವ ಹಕ್ಕು ಸ್ಲೀಕರ್‌ಗೆ ಮಾತ್ರವಿದೆ ಎಂದು ಸುಪ್ರೀಂ ಈ ಹಿಂದೆ
ಹಲವು ಪ್ರಕರಣಗಳಲ್ಲಿ ಹೇಳಿರುವುದರಿಂದ ಕುತೂಹಲ ಮೂಡಿದೆ.


ಸಚಿನ್‌ ಪೈಲಟ್‌ ಬಣದ ಶಾಸಕರು ಅನರ್ಹತೆಯ ನೋಟಿಸ್‌ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ
ಯಾವುದೇ ತೀರ್ಪು ನೀಡದಂತೆ ರಾಜಸ್ಥಾನ ಹೈಕೋರ್ಟ್‌ಗೆ ಸೂಚಿಸಬೇಕು ಎಂದು ಸೀಕರ್‌ ಸಿ.ಪಿ.ಜೋಶಿ
ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ತಮ್ಮ ವಾದವನ್ನೂ
ಆಲಿಸಬೇಕು ಎಂದು ಪೈಲಟ್‌ ಬಣ ಕೇವಿಯಟ್‌ ಸಲ್ಲಿಸಿದೆ. ಈ ಅರ್ಜಿಗಳ ವಿಚಾರಣೆ ನಡೆಯಲಿದೆ. ಪೈಲಟ್‌
ಮತ್ತು 18 ಶಾಸಕರ ಅರ್ಜಿ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ತೀರ್ಷು
ಕಾಯ್ದಿರಿಸಿತ್ತು. ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸ್ಲೀಕರ್‌ಗೆ ಸೂಚಿಸಿತ್ತು. ಇದರಿಂದ ಸಾಂವಿಧಾನಿಕ
ಹುದ್ದೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಿದೆ ಎಂದು ಸ್ಲೀಕರ್‌ ಜೋಶಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೆ.
ಅವರ ಪರ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಲಿದ್ದಾರೆ. ಪೈಲಟ್‌ ಬಣದ ಪರ ಮುಕುಲ್‌ ರೋಹಟಗಿ
ವಕಾಲತ್ತು ವಹಿಸಿದ್ದಾರೆ.


230


ಹಿನ್ನೆಲೆ ಏನು: ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಬಂಡೆದ್ದಿರುವ ಸಚಿನ್‌ ಪೈಲಟ್‌ ಮತ್ತು
ಅವರ ಬೆಂಬಲಿಗ 18 ಶಾಸಕರಿಗೆ ವಿಪ್‌ ನೀಡಲಾಗಿದ್ದರೂ, ಕಾಂಗೆಸ್‌ ಶಾಸಕಾಂಗ ಪಕ್ಷದ ಸಭೆಗೆ ಅವರು
ಗೈರಾಗಿದ್ದರು. ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಜರುಗಿಸಬೇಕು ಎಂದು ಕಾಂಗೆಸ್‌ನ
ಮುಖ್ಯ ಸಚೇತಕ ಸ್ಪೀಕರ್‌ಗೆ ದೂರು ನೀಡಿದ್ದರು. ಇದರ ಅನ್ವಯ ಪೈಲಟ್‌ ಬಣದವರಿಗೆ ಸ್ಲೀಕರ್‌ ನೋಟಿಸ್‌


ನೀಡಿದ್ದರು. ಇದನ್ನು ಪ್ರಶ್ನಿಸಿ ಪೈಲಟ್‌ ಮತ್ತು ಅವರ ಬೆಂಬಲಿಗರು ಹೈಕೋರ್ಟ್‌ ಮೆಟ್ಟಿಲೇರಿದ್ದರು.


ಘೋನ್‌ ಟ್ಯಾಪಿಂಗ್‌ಗೆ ಅನುಮತಿ ನೀಡಿರಲಿಲ್ಲ: ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆಗೆ (ಫೋನ್‌ ಟ್ಯಾಪಿಂಗ್‌)
ಅನುಮತಿ ನೀಡಿಲ್ಲ ಎಂದು ರಾಜಸ್ಥಾನ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ. ರಾಜಸ್ಥಾನದಲ್ಲಿ
ರಾಜಕೀಯ ವಿಫ್ಲ್ಠವ ಸೃಷ್ಟಿಸಿರುವ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್‌
ಶೆಖಾವತ್‌ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ವರದಿ ನೀಡುವಂತೆ ರಾಜಸ್ಥಾನದ
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಗೃಹ ಸಚಿವಾಲಯ ಸೂಚಿಸಿತ್ತು. ಕಾಂಗೆಸ್‌ ಶಾಸಕರನ್ನು ಸೆಳೆಯಲು ಆಮಿಷ
ಒಡ್ಡಿರುವ ಆಡಿಯೋಗಳು ಇತ್ತೀಚೆಗೆ ಬಹಿರಂಗಗೊಂಡಿದ್ದವು.


ಆಧಾರ:ವಿಜಯವಾಣಿ, ದಿನಾ೦ಕ:23.07.2020
9. ಅಧಿವೇಶನಕ್ಕೆ ಗೆಹ್ಲೋಟ್‌ ಹೊಸ ತಂತ್ರ


ತುರ್ತು ಅಧಿವೇಶನ ಕರೆಯುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಪಟ್ಟು
ಮುಂದುವರಿಸಿದ್ದು, ರಾಜ್ಯಪಾಲರು ಅದಕ್ಕೆ ಸಮ್ಮತಿ ನೀಡುತ್ತಿಲ್ಲ ಈ ಹಿನ್ನೆಲೆಯಲ್ಲಿ ರಾಜ್ಯಾಂಗ ಬಿಕ್ಕಟ್ಟು
ಮುಂದುವರಿದಿದ್ದು, ಪ್ರಧಾನಿ ನಿವಾಸದೆದುರು ಪ್ರತಿಭಟನೆ ನಡೆಸುವುದಾಗಿ ಕಾಂಗೆಸ್‌ ಎಚ್ಚರಿಕೆ ನೀಡಿದೆ.


ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಮತ್ತು ಅವರ ಹದಿನೆಂಟು ಬೆಂಬಲಿಗ ಶಾಸಕರ
ಬಂಡಾಯದಿಂದಾಗಿ ಸಂಕಷ್ಟಕ್ಕೆ ಸಿಲಿಕಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರ್ಕಾರ ಜುಲೈ
31ರಂದು ತುರ್ತು ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದೆ.


ಇದರಲ್ಲಿ ಬಹುಮತ ಸಾಬೀತುಪಡಿಸುವ ಕುರಿತು ಉಲ್ಲೇಖವಿಲ್ಲ. ಕೊರೋನಾ ವೈರಾಣು ಸೋಂಕು
ವ್ಯಾಪಕವಾಗಿ ಹಬ್ಬಿರುವ ಕುರಿತು ಅಧಿವೇಶನದ ಅಜೆಂಡಗಳು ಎಂದು ಬದಲಾಯಿಸಿಕೊಂಡಿದೆ. ಆದರೆ, ಇದಕ್ಕೆ
ರಾಜ್ಯಪಾಲರಿಂದ ಇನ್ನೂ ಸಮ್ಮತಿ ದೊರೆಯದೇ ಇರುವುದು ಕಾಂಗೆಸ್‌ ಆಕ್ರೋಶಕ್ಕೆ ಕಾರಣವಾಗಿದೆ.


ಜುಲೈ 23ರಂದು ಅಧಿವೇಶನ ಕರೆಯುವುದು ಸೂಕ್ತವಲ್ಲ ಹಾಗೂ ಅಧಿವೇಶನಕ್ಕೆ ಯಾವುದೇ ಕಾರಣವನ್ನು
ತಿಳಿಸಿಲ್ಲ ಎನ್ನುವ ಕಾರಣಕ್ಕೆ ಅದಕ್ಕೆ ರಾಜ್ಯಪಾಲರ ಸಮ್ಮತಿ ದೊರೆತಿರಲಿಲ್ಲ. ಅಧಿವೇಶನ ಕರೆಯಲು 21 ದಿನಗಳ
ಮುಂಚಿತವಾಗಿ ನೋಟಿಸ್‌ ನೀಡಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳಿರುವುದಾಗಿ ರಾಜ್ಯಪಾಲರ ಕಚೇರಿ
ತಿಳಿಸಿತ್ತು. ಈಗ ಅಧಿವೇಶನಕ್ಕೆ ಸಾಂಕ್ರಾಮಿಕ ಕಾರಣವನ್ನು ನೀಡಲಾಗಿದೆ.


ರಾಜಸ್ಥಾನ ವಿಧಾನಸಭೆಯಲ್ಲಿ 200 ಶಾಸಕರಿದ್ದು, ಹತ್ತೊಂಭತ್ತು ಶಾಸಕರು ಬಂಡಾಯವೆದ್ದಿರುವುದರಿಂದ
ಗೆಹ್ಲೋಟ್‌ ಬೆಂಗಲಿಗರ ಸಂಖ್ಯೆ 88ಕ್ಕೆ ಇಳಿದಿದೆ. ಇದಲ್ಲದೆ ಐವರು ಇತರೆ ಪಕ್ಷಗಳ ಶಾಸಕರು ಹಾಗೂ ಹತ್ತು
ಸ್ಪತಂತ್ರ ಅಭ್ಯರ್ಥಿಗಳೂ ಕೂಡ ತಮಗೆ ಮತ ನೀಡಲಿದ್ದಾರೆ ಎಂದು ಗೆಹ್ಲೋಟ್‌ ಹೇಳಿಕೊಂಡಿದ್ದಾರೆ. ಬಂಡಾಯ
ಶಾಸಕರು ಕಾಂಗೆಸ್‌ ಸಭೆಗೆ ಹಾಜರಾಗದೇ ಇರುವುದರಿಂದ ಅವರಿಗೆ ಅನರ್ಹತೆ ನೋಟಿಸ್‌ ನೀಡಬೇಕೆನ್ನುವ
ಮುಖ್ಯ ಸಚೇತಕ ಮಹೇಶ್‌ ಜೋಶಿ ಅವರ ಮನವಿ ಮೇರೆಗೆ ಸ್ಪೀಕರ್‌ ಸಿ.ಪಿ.ಜೋಶಿ ನೋಟಿಸ್‌ ನೀಡಿದ್ದಾರೆ. ಈ
ಕುರಿತು ನ್ಯಾಯಾಲಯದ ಮೆಟ್ಟಿಲೇರಿರುವ ಬಂಡಾಯ ಶಾಸಕರು ಅಧಿವೇಶನ ನಡೆಯದೇ ಇರುವ ಸಮಯದಲ್ಲಿ
ಅನರ್ಹತೆ ನೋಟಿಸ್‌ ನೀಡಲು ಬರುವುದಿಲ್ಲ ಎಂದು ವಾದಿಸಿದ್ದಾರೆ. ಈ ಹಿಂದೆ ಅನೇಕ ತೀರ್ಪುಗಳನ್ನು
ಗಮನಿಸದಲ್ಲಿ ಬಂಡಾಯ ಶಾಸಕರ ಪರವಾಗಿ ತೀರ್ಪು ಬರಬಹುದು ಎನ್ನುವ ಅಂದಾಜನ್ನು ಗೆಹ್ಲೋಟ್‌ ಬಣ
ಮಾಡಿದಂತಿದೆ. ಅಧಿವೇಶನ ಕರೆದು ಬಹುಮತ ಸಾಬೀತುಪಡಿಸುವ ತಂತ್ರಕ್ಕೆ ಅದು ಇಳಿದಿದ್ದು, ಅದಕ್ಕೆ
ರಾಜ್ಯಪಾಲರಿಂದ ಒಪ್ಪಿಗೆ ದೊರೆಯುತ್ತಿಲ್ಲ.


ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:27.07.2020


231


10. ಅಧಿವೇಶನಕ್ಕೆ ಅನುಮತಿ ನೀಡಿದ ರಾಜ್ಯಪಾಲರು


ರಾಜಸ್ಥಾನ ರಾಜ್ಯಪಾಲರು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಜುಲೈ31ರಿಂದ ವಿಧಾನಸಭೆ
ಅಧಿವೇಶನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುಮತಿ ನೀಡಿದ್ದಾರೆ.


ಮೂರು ಷರತ್ತುಗಳನ್ನು ಪಟ್ಟಿ ಮಾಡಿರುವ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಕೊರೋನಾ ವೈರಸ್‌
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಾಸಕರಿಗೆ ಮೂರು ವಾರಗಳ ನೋಟಿಸ್‌ ನೀಡಬಹುದೇ ಎಂದು
ಕೇಳಿದ್ದಾರೆ. ಜುಲೈ 31ರಂದು ಕರೆಯಲಾಗುವ ಅಧಿವೇಶನದಲ್ಲಿ ನೀವು ವಿಶ್ವಾಸ ಮತಯಾಚನೆ ಬಯಸುತ್ತೀರಾ.
ಆದರೆ, ನೀವು ನೀಡಿರುವ ಪರಿಷ್ಠಠ ಪ್ರಸ್ತಾವನೆಯಲ್ಲಿ ಈ ಅಂಶವನ್ನು ಉಲ್ಲೇಖಿಸಿಲ್ಲ ಎಂದು ಪಶ್ಲಿಸಿದ್ದಾರೆ.
ಬಂಡಾಯವೆದ್ದು ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 21 ದಿನಗಳ ಗಡುವು ನೋಟಿಸ್‌
ನೀಡುವುದನ್ನು ನೀವು ಪರಿಗಣಿಸುತ್ತೀರಾ ಎಂದು ಕೇಳಿದ್ದಾರೆ. ಜೊತೆಗೆ, ಅಧಿವೇಶನದಲ್ಲಿ ಸಾಮಾಜಿಕ
ಅಂತರವನ್ನು ಹೇಗೆ ಕಾಪಾಡಿಕೊಳ್ಳಲಾಗುವುದು ಎಂದು ಪಪ್ಲಿಸಿದ್ದಾರೆ.


ಆಧಾರ:ಉದಯವಾಣಿ, ದಿನಾಂಕ:28.07.2020
11. ದಿಲ್ಲಿ, ಮುಂಬೈನಲ್ಲಿ ಕೊರೋನಾ ಅಳಿಕೆ


ಮಾರಕ ಕೊರೋನಾ ವೈರಸ್‌ನಿಂದ ತತ್ತರಿಸಿ ಹೋಗಿರುವ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ
ರಾಜಧಾನಿ ಮುಂಬೈ ಮಹಾ ನಗರಗಳಲ್ಲಿ ಸೋಂಕು ಅಚ್ಚರಿಯ ರೀತಿಯಲ್ಲಿ ಇಳಿ ಮುಖವಾಗತೊಡಗಿದೆ. ಈ
ಎರಡೂ ನಗರಗಳಲ್ಲಿ ಕೊರೋನಾ ತನ್ನ ಪರಾಕಾಷ್ಟೆ ತಲುಪಿ ಕುಸಿತದ ಹಾದಿ ಹಿಡಿದಿರಬಹುದು ಎಂದು
ವಿಶ್ಲೇಷಿಸಲಾಗುತ್ತಿದೆ. ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಕರ್ನಾಟಕ ಹಾಗೂ ಬೆಂಗಳೂರಿಗೆ ಈ
ಬೆಳವಣಿಗೆ ಆಶಾಕಿರಣದಂತೆ ಗೋಚರಿಸತೊಡಗಿದೆ.


ಮುಂಬೈನಲ್ಲಿ 9000 ಕೊರೋನಾ ಟೆಸ್ಟ್‌ಗಳು ನಡೆದಿದ್ದು, ಈ ಪೈಕಿ ಕೇವಲ 700 ಮಂದಿಯಲ್ಲಿ ಸೋಂಕು
ದೃಢಪಟ್ಟಿದೆ. ಇದು ಕಳೆದ 100 ದಿನಗಳಲ್ಲೇ ಮುಂಬೈನಲ್ಲಿ ದಾಖಲಾದ ದೈನಂದಿನ ಕನಿಷ್ಠ ಎನಿಸಿಕೊಂಡಿದೆ.
ಇನ್ನೊಂದೆಡೆ ದಿಲ್ಲಿಯಲ್ಲಿ ಕೇವಲ 613 ಕೇಸ್‌ ದಾಖಲಾಗಿದ್ದು, 62 ದಿನಗಳಲ್ಲೇ ಅತಿ ಕನಿಷ್ಠ ಎನಿಸಿಕೊಂಡಿದೆ.


ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಉಲ್ಲಣಿಸುತ್ತಿದ್ದು, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ
ಭಾರೀ ಪ್ರಮಾಣದಲ್ಲಿ ಸೋಂಕು ವರದಿಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ತಜ್ಞರ ಪ್ರಕಾರ ಆಗಸ್ಟ್‌
15ಕ್ಕೆ ಸೋಂಕು 2 ಲಕ್ಷ ಮುಟ್ಟಲಿದೆ. ಅನಂತರ ತೀವ್ರಗತಿಯಲ್ಲಿ ಏರಿಕೆಯಾಗುತ್ತಾ ಸಾಗಲಿದೆ. ಒಂದು ಬಾರಿ ಗರಿಷ್ಠ
ಹಂತ ಮುಟ್ಟಿದ ನಂತರ ಅಂದರೆ ಅಕ್ಟೋಬರ್‌ ಮಾಸಾಂತ್ಯದ ವೇಳೆಗೆ ಕೊರೋನಾ ಸೋಂಕು ಕ್ರಮೇಣ
ಕಡಿಮೆಯಾಗುವ ಸಾಧ್ಯತೆಯನ್ನು ತಜ್ಞರು ಅಂದಾಜಿಸಿದ್ದಾರೆ. ಸೋಂಕು ತಾರಕಕ್ಕೇರಿದ್ದ ದಿಲ್ಲಿ, ಮುಂಬೈನಲ್ಲಿ ಈಗ
ಇಳಿಕೆಯಾಗುತ್ತಿದ್ದು, ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಒಂದು ಹಂತಕ್ಕೆ ತಾರಕಕ್ಕೇರಿ, ಬಳಿಕ ಇಳಿಕೆ ಆಗಬಹುದು.


12 ದಿನಕ್ಕೊಮ್ಮೆ ಸೋಂಕು ದುಪ್ಪಟ್ಟು: ರಾಜ್ಯ ಕೊರೋನಾ ಕಾರ್ಯಪಡೆ ವರದಿ ವಿಶ್ಲೇಷಣೆ ಅನ್ವಯ ಪ್ರಸ್ತುತ
ಪ್ರತಿ 12 ದಿನಕ್ಕೊಮ್ಮೆ ರಾಜ್ಯದಲ್ಲಿ ಸೋಂಕು ದ್ವಿಗುಣಗೊಳ್ಳುತ್ತಿದೆ. ಜುಲೈ 16 ರಂದು 5 ಸಾವಿರ ಇದ್ದ ಪ್ರಕರಣ 12
ದಿನದಲ್ಲಿ ದ್ವಿಗುಣಗೊಂಡು 1.07 ಲಕ್ಷಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ಸರಾಸರಿಗಿಂತ (20 ದಿನ) ವೇಗವಾಗಿ
ರಾಜ್ಯದಲ್ಲಿ ಸೋಂಕು ಹರಡುತ್ತಿದ್ದು, ಸೋಂಕಿನ ವೇಗ ಇದೇ ಪ್ರಮಾಣದಲ್ಲಿ ಹೆಚ್ಚಾಗಿ ಸೂಕ್ತ ಪರೀಕ್ಷೆಗಳು
ನಡೆಸಿದರೆ ಆಗಸ್ಟ್‌ 15ರ ವೇಳೆಗೆ ಸೋಂಕು 2 ಲಕ್ಷ ಗಡಿ ದಾಟಲಿದೆ ಎಂದು ತಜ್ನರು ಅಭಿಪ್ರಾಯ ಪಟ್ಟಿದ್ದಾರೆ.


ಪ್ರಸ್ತುತ ರಾಜ್ಯವು ಆಂಧಪದೇಶ (8 ದಿನ) ಹೊರತುಪಡಿಸಿ, ಅತಿ ವೇಗವಾಗಿ ಸೋಂಕು
ದ್ವಿಗುಣಗೊಳ್ಳುತ್ತಿರುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಸೋಂಕು ಪ್ರಕರಣ ಹೊಂದಿರುವ ದೆಹಲಿ (35
ದಿನ). ಮಹಾರಾಷ್ಟಕ್ಕೆ (25 ದಿನ) ಹೋಲಿಸಿದರೆ ವೇಗವಾಗಿ ಸೋಂಕು ಹರಡುತ್ತಿದೆ. ಸೆಪ್ಲೆಂಬರ್‌ವರೆಗೂ ಇದೇ
ವೇಗ ಮುಂದುವರೆವ ಲಕ್ಷಣಗಳಿವೆ. ಆಗಸ್ಟ್‌ ಹಾಗೂ ಸೆಪ್ಪೆಂಬರ್‌ನಲ್ಲಿ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ
1.07 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 40.504 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಸೋಂಕಿತರ ಪೈಕಿ
ಶೇ.70ರಷ್ಟು ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ 57 ಸಾವಿರ ಸಕ್ರಿಯ ಸೋಂಕಿತರಿಂದ
ಹರಡಿರಬಹುದಾದ ಸೋಂಕು ಇನ್ನೊಂದು ವಾರದಲ್ಲಿ ವರದಿಯಾಗಲಿದೆ ಎನ್ನಲಾಗಿದೆ.


232


ತಾರಕಕ್ಕೇರಲು ಬೇಕು 2 ತಿಂಗಳು: ರಾಜ್ಯ ಸರ್ಕಾರದ ತಜ್ಞಧ ಸಮಿತಿ ಹಿರಿಯ ಸದಸ್ಯರಾದ ಡಾ.ಗಿರಿಧರ
ಬಾಬು ಬ ಪಕಾರ, ಸೋಂಕು ಉಚ್ಛಾಯ ಸ್ಥಿತಿಗೆ ಸನ ಎರಡು ತಿಂಗಳ ನಾ ಬೇಕು.
ಪ್ಲೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ ಲ ವಾರದಲ್ಲಿ ಸೋಂಕು ಉಚ್ಛ್ರಾಯ ಸ್ಥಿತಿಗೆ ತಲುಪಲಿದೆ
ಹ ಅಲ್ಪದೆ ಈ ವೇಳೆಗೆ ಎಷ್ಟು ಸೋಂಕು ಪ್ರಕರಣ ವರದಿಯಾಗಲಿದೆ. ಜೊತೆಗೆ "ರಾಜ್ಯದಲ್ಲಿ ಎಷ್ಟು
PE ಈಗಾಗಲೇ ಉರಟಾಗೆರಟಹುದು ಎಂಬುದರ ಬಗ್ಗೆ ಅಧ್ಯಯನ ನಡೆದಿದೆ ಎಂದರು.


ಗರಿಷ್ಟ ಹಂತ ಮುಟ್ಟಿದ ನಂತರ ಸೋಂಕು ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ, ಯಾವ ಅವಧಿಗೆ
ಕೊನೆಗೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಜಯದೇವ ಆಸ್ಪತ್ರೆ ನಿರ್ದೇಶಕ ಹಾಗೂ
ತಜ್ಞರ ಸಮಿತಿ ಸದಸ್ಯರೂ ಆದ ಡಾ.ಸಿಎನ್‌.ಮಂಜುನಾಥ ಅವರು, "ರಾಜ್ಯ ಸರ್ಕಾರಕ್ಕೆ ಸಾಂಕ್ರಾಮಿಕ ರೋಗ
ತಜ್ಞಧು ಸಲ್ಲಿಸಿರುವ ವರದಿಗಳ ಆಧಾರದ ಮೇಲೆ ಅಕ್ಟೋಬರ್‌ ವೇಳಗೆ ಸೋಂಕು ಉಚ್ಛಾಯ ಸ್ಥಿತಿಗೆ
ಹೋಗಲಿದೆ. ಹೀಗಾಗಿ ಸಹಜವಾಗಿಯೇ ಪರೀಕ್ಷೆ ಹೆಚ್ಚಾದಂತೆ ಸೋಂಕು ಪ್ರಕರಣ ಹೆಚ್ಚಾಗಲಿದೆ' ಎಂದರು.


ಬೆಂಗಳೂರಿನಲ್ಲಿ 2.23 ಲಕ್ಷ ಸೋಂಕು: ರಾಜ್ಯ ಸರ್ಕಾರದ ತಜ್ಞರ ಸಮಿತಿ ಹಿರಿಯ ಸದಸ್ಯರಾದ
ಡಾ.ಗಿರಿಧರ ಬಾಬು ಅವರ ಪ್ರಕಾರ ಈಗಾಗಲೇ ಬೆಂಗಳೂರಿನಲ್ಲಿ 2.23 ಲಕ್ಷ ಮಂದಿಗೆ ಸೋಂಕು
ಉಂಟಾಗಿರಬಹುದು ಎಂದು ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ವರದಿ ನೀಡಿದ್ದಾರೆ. ಸಾಂಕ್ರಾಮಿಕ ರೋಗಶಾಸ್ತದ
ಲೆಕ್ಕಾಚಾರ ಪ್ರಕಾರ ಈಗಾಗಲೇ ಬೆಂಗಳೂರಿನಲ್ಲಿ 2.23 ಲಕ್ಷ ಜನರಿಗೆ ಸೋಂಕು ಉಂಟಾಗಿರುವ ಸಾಧ್ಯತೆ ಇದೆ
ಎಂದು ಹೇಳಿದ್ದಾರೆ.


ಇದೇ ವೇಳ ಮುಂಬೈನಲ್ಲಿ ಪ್ರಕರಣ ದ್ವಿಗುಣ ಆಗುತ್ತಿರುವ ಪ್ರಮಾಣ 68 ದಿನಗಳಿಗೆ ಏರಿಕೆ ಆಗಿದ್ದು,
ಗುಣಮುಖರಾಗುತ್ತಿರುವವರ ಪ್ರಮಾಣ ಶೇ.73ರಷ್ಟಿದೆ. ಮುಂಬೈನಲ್ಲಿ ಈವರೆಗೆ 1,10,182 ಕೊರೋನಾ ಕೇಸ್‌ಗಳು
ದಾಖಲಾಗಿದ್ದು, 21,812 ಸಕ್ರಿಯ ಪ್ರಕರಣಗಳಿವೆ. ಮುಂಬೈನಲ್ಲಿ ಜೂ.10ರಂದು 1751 ಪ್ರಕರಣಗಳು
ದಾಖಲಾಗಿದ್ದು, ಈವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಈ ನಡುವೆ, ಪುಣೆ ಮತ್ತು ಥಾಣೆಗಿಂತಲೂ ಕಡಿಮೆ
ಕೇಸ್‌ಗಳು ಮುಂಬೈನಲ್ಲಿ ದಾಖಲಾಗುತ್ತಿವೆ. ಇನ್ನು ದೆಹಲಿಯಲ್ಲಿ ಜೂನ್‌. 23ರಂದು ದಾಖಲಾದ 3947
ಕೊರೋನಾ ಕೇಸ್‌ ಹೋಲಿಸಿದರೆ ದೈನಂದಿನ ಸೋಂಕಿನ ಪ್ರಮಾಣ ಅರ್ಧಕ್ಕರ್ಧ ಇಳಿಕೆ ಕಂಡಿದೆ.
ದೆಹಲಿಯಲ್ಲಿ ಈವರೆಗೆ ಒಟ್ಟು 1,32,275 ನಗಲು ದಾಖಲಾಗಿದ್ದು, 3,881 ಮಂದಿ ಬಲಿ ಆಗಿದ್ದಾರೆ. ಇನ್ನು
ದೆಹಲಿಯಲ್ಲಿ ಗುಣಮುಖರಾದವರ ಪ್ರಮಾಣ ಶೇ.88ಕ್ಕೇ ಹೆಚ್ಚಳ ಆಗಿದ್ದು, 10,887 ಸಕ್ರಿಯ ಪ್ರಕರಣಗಳಿವೆ.
ದೆಹಲಿಯಲ್ಲಿ ಸೋಂಕು ದ್ವಿಗುಣ ಪ್ರಮಾಣ 76.6 ದಿನಕ್ಕೆ, ಏರಿಕೆ ಆಗಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:29.07.2020
12. ಅಯೋಧ್ಯೆಗೆ ಪ್ಯಾಕೇಜ್‌


ರಾಮಜನ್ಮಭೂಮಿಯನ್ನು ವಿಶ್ವದ ಗಮನ ಸೆಳೆಯುವಂತೆ ರೂಪಿಸಲು ಕೇಂದ್ರ ಸರ್ಕಾರ ಮಹತ್ವದ
ನಿರ್ಧಾರ ಕೈಗೊಂಡಿದೆ. ಆ.5ರ ಭೂಮಿಪೂಜೆ ಸಮಾರಂಭದ ವೇಳೆ ರೂ. 326 ಕೋಟಿ ವೆಚ್ಚದಲ್ಲಿ ರಾಮ
ಮಂದಿರಕ್ಕೆ ಸಂಬಂಧಿಸಿದ ವಿವಿಧ ನಿರ್ಮಾಣ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಲಿದೆ.


ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಕನಾಥ್‌ ಈ ಯೋಜನೆಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಭೂಮಿಪೂಜೆ ಬಳಿಕ ಮಂದಿರ ನಿರ್ಮಾಣ ಸೇರಿದಂತೆ ಸುತ್ತಮುತ್ತಲಿನ 57 ಎಕರೆಗಳಲ್ಲಿ ರಾಮ ದೇಗುಲ
ಸಂಕೀರ್ಣ, ರಾಮ್‌ ಕಥಾ ಪುಂಜ್‌ ಪಾರ್ಕ್‌ ನಿರ್ಮಾಣಗೊಳ್ಗಲಿವೆ. ನಕ್ಷತ್ರ ವಾಟಿಕಾ, ಮ್ಯೂಸಿಯಂ, ದೇಶದ
ಅತಿದೊಡ್ಡ ಧಾರ್ಮಿಕ ಗ್ರಂಥಾಲಯ ಸೇರಿದಂತೆ ಹತ್ತು ಹಲವು ವ್ಯವಸ್ಥೆಗಳನ್ನು ರೂಪಿಸಲು ಶ್ರೀರಾಮ ಜನ್ಮಭೂಮಿ
ತೀರ್ಥಕ್ಷೇತ್ರ ಟ್ರಸ್ಟ್‌ ಮುಂದಾಗಿದೆ.


ಸುದ್ದಿ ತ ಸೂಚನೆ: ಐತಿಹಾಸಿಕ ಭೂಮಿಪೂಜೆ ಸಮಾರಂಭ ದೂರದರ್ಶನದಲ್ಲಿ ನೇರಪ್ರಸಾರಗೊಳ್ಳಲಿದೆ.
ಸಮಾರಂಭದ ನೇರಪ್ರಸಾರ ಮಾಡಲು ಖಾಸಗಿ ಸುದ್ದಿವಾಹಿನಿಗಳು ಜಿಲ್ಲಾಡಳಿತದಿಂದ ಕಡ್ಡಾಯ ಅನುಮತಿ
ಪಡೆಯಬೇಕು ಎಂದು ಫೈರುಖಾಬಾದ್‌ ಡಿಸಿ ಕಚೇರಿ ಸೂಚಿಸಿದೆ.


ಆಧಾರ:ಉದಯವಾಣಿ, ದಿನಾ೦ಕ:29.07.2020


233
13. ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಪ್ರಸ್ತಾವನೆಗೆ ಒಪ್ಪಿಗೆ


ಆಂಧಪದೇಶದಲ್ಲಿ 3 ರಾಜಧಾನಿ ಹೊಂದುವ ವಿಧೇಯಕಕ್ಕೆ ರಾಜ್ಯಪಾಲರು ವಿಶ್ವಭೂಷಣ್‌ ಹರಿಚಂದ
ಅನುಮೋದನೆ ನೀಡಿದ್ದಾರೆ. 3 ರಾಜಧಾನಿಗಳನ್ನು ಹೊಂದಬೇಕು ಎಂದು ಪಟ್ಟು ಹಿಡಿದಿದ್ದ ಮುಖ್ಯಮಂತ್ರಿ ಜಗನ್‌
ಮೋಹನ್‌ ರೆಡ್ಡಿ ಹಲವು ವಿರೋಧಗಳ ನಡುವೆಯೂ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ.
ಕಾರ್ಯಾಂಗ ರಾಜಧಾನಿಯಾಗಿ ವಿಶಾಖಪಟ್ಟಣ, ಶಾಸಕಾಂಗ ರಾಜಧಾನಿಯಾಗಿ ಅಮರಾವತಿ, ನ್ಯಾಯಾಂಗ
ರಾಜಧಾನಿಯಾಗಿ ಕರ್ನೂಲು ಆಯ್ಕೆಯಾಗಿದೆ. ಈ ಮೂಲಕ, ಭಾರತದಲ್ಲಿ 3 ರಾಜಧಾನಿಗಳನ್ನು ಹೊಂದಿರುವ
ಏಕೈಕ ರಾಜ್ಯವಾಗಿ ಆಂಧ್ರ ಹೊರಹೊಮ್ಮಿದೆ.


ಅಮರಾವತಿ ಬದಲಾವಣೆ ಏಕೆ: ತೆಲಂಗಾಣದಿಂದ ಪ್ರತ್ತೇಕಗೊಂಡ ಆಂಧ್ರ ಪ್ರದೇಶಕ್ಕೆ ಅಮರಾವತಿಯೇ
ರಾಜಧಾನಿ ಎಂದು ಬಹುತೇಕವಾಗಿ ನಿರ್ಧಾರವಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಚೆಂದ್ರಬಾಬು ನಾಯ್ದು
ಅಮರಾವತಿಯನ್ನು "ಗೀನ್‌ ಕ್ಯಾಪಿಟಲ್‌' ಮಾಡಲು 30 ಸಾವಿರಕ್ಕೂ ಅಧಿಕ ಎಕರೆ ಜಮೀನನ್ನು ಖರೀದಿಸಲು
ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ನೆರವನ್ನೂ ಪಡೆಯಲಾಗಿತ್ತು ಇನ್ನೇನು ಅಂತಿಮ ಹಂತ
ತಲುಪಬೇಕು ಎನ್ನುವಷ್ಟರಲ್ಲಿ ಚಂದ್ರಬಾಬು ನಾಯ್ದು ಅಧಿಕಾರ ಕಳೆದುಕೊಂಡರು. ನೂತನ ಸಿಎಂ ಜಗನ್‌
ಮೋಹನ್‌ ರೆಡ್ಡಿ ಅಮರಾವತಿ ರಾಜಧಾನಿ ಯೋಜನೆ ರದ್ದು ಪಡಿಸಿ, ಮೂರು ರಾಜಧಾನಿಗಳ ಪ್ರಸ್ತಾಪ
ಮಾಡಿದರು.


ವಿಶಾಖಪಟ್ಟಣ: ಕಾರ್ಯಾಂಗ ರಾಜಧಾನಿಯಾಗಿರುವ ವಿಶಾಖಪಟ್ಟಣದಲ್ಲಿ ಮುಖ್ಯಮಂತ್ರಿ ಹಾಗೂ
ರಾಜ್ಯಪಾಲರ ಕಚೇರಿಗಳು ಇರಲಿವೆ. ಅಮರಾವತಿಯಿಂದ ವಿವಿಧ ಸಚಿವಾಲಯಗಳು, ಇಲಾಖೆಗಳ ಕಚೇರಿಗಳು
ವಿಶಾಖ ಪಟ್ಟಣಕ್ಕೆ ಸ್ಥಳಾಂತರವಾಗಲಿದೆ.


ಅಮರಾವತಿ: ಶಾಸಕಾಂಗ ರಾಜಧಾನಿಯಾಗಿರುವ ಅಮರಾವತಿಯಲ್ಲಿ ಈಗಾಗಲೇ ಸಹಸ್ರಾರು ಕೋಟಿ ರೂ.
ವ್ಯಯಿಸಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ನಗರದಲ್ಲಿ ವಿಧಾನಸಭಾ ಕಲಾಪಗಳು ನಡೆಯಲಿವೆ.


ಕರ್ನೂಲು: ನ್ಯಾಯಾಂಗ ರಾಜಧಾನಿಯಾಗಿರುವ ಕರ್ನೂಲಿಗೆ ಹೈಕೋರ್ಟ್‌ ಸ್ಥಳಾಂತರಗೊಳ್ಳಲಿದೆ.
ಹೈಕೋರ್ಟ್‌ ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದ ಕಚೇರಿಗಳು ಈ ನಗರದಲ್ಲಿ ಇರಲಿವೆ.


ಆಧಾರ:ಉದಯವಾಣಿ, ದಿನಾ೦ಕ:02.08.2020
14. 1000 ಅಡಿ ಎತ್ತರದಲ್ಲಿ ವಿಶ್ವದ ಅತಿ ಉದ್ದದ ಸುರಂಗ ರಸ್ತೆ


10,000 ಅಡಿ ಎತ್ತರದಲ್ಲಿರುವ ಜಗತ್ತಿನ ಅತಿ ಉದ್ದದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆ
ಪಡೆಯಲಿರುವ ರೋಹ್ತಾಂಗ್‌ ಸುರಂಗ ಮಾರ್ಗವನ್ನು ಮುಂದಿನ ತಿಂಗಳು ಪ್ರಧಾನಿ ನರೇಂದ ಮೋದಿ
ಉದ್ರಾಟನೆ ಮಾಡುವ ಸಾಧ್ಯತೆಯಿದೆ. 8.8 ಕಿಮೀ ಉದ್ದದ ಈ ಸುರಂಗ ಮಾರ್ಗ ಎಂಜಿನಿಯರಿಂಗ್‌ ಕೌಶಲದ
ಅದ್ಭುತಗಳಲ್ಲಿ ಒಂದಾಗಿದ್ದು, ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಸಂಚಾರಿ ಮೂಲ ಸೌಕರ್ಯವನ್ನು
ಹೊಸ ಸ್ವರಕ್ಕೆ ಏರಿಸಲಿದೆ.

ಈ ಸುರಂಗ ಮಾರ್ಗವು ಗಡಿ ಪ್ರದೇಶ ಮತ್ತು ಸಂಪರ್ಕ ದುರ್ಲಭ ಪ್ರದೇಶಗಳಿಗೆ ಸರ್ವಯತು
ಸಂಪರ್ಕ ಕಲ್ಪಿಸಿದೆ. ದೇಶದ ರಕ್ಷಣೆಯ ದೃಷ್ಟಿಯಿಂದ ವ್ಯೂಹಾತ್ಮಕವಾಗಿಯೂ ಮಹತ್ವ ಪಡೆದಿರುವ ಈ
ಯೋಜನೆಯನ್ನು ರೂ. 3200 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.


ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸಿನ ಯೋಜನೆಯಿದು ಎಂದು ಹಿಮಾಚಲ ಪ್ರದೇಶದ
ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಹೇಳಿದ್ದು. ಸೆಪ್ಪೆಂಬರ್‌ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಉದ್ರಾಟನೆ
ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. 8.8 ಕಿ.ಮೀ. ಉದ್ದದ ಈ ಸುರಂಗ ಮಾರ್ಗ ನಮ್ಮ ದೇಶದ
ಅತ್ಯಂತ ಉದ್ದದ ಸುರಂಗ ಮಾರ್ಗಗಳಿಲ್ಲಿ ಒಂದಾಗಿದೆ. ವ್ಯೂಹಾತ್ಮಕ ಮಹತ್ವ ಪಡೆದಿರುವ ರೋಹ್ತಾಂಗ್‌ ಪಾಸ್‌ನ
ಅಡಿಯಲ್ಲಿ ಸಮುದ್ರ ಮಟ್ಟದಿಂದ 10,171 ಅಡಿ ಎತ್ತರದಲ್ಲಿ ಇದು ನಿರ್ಮಾಣವಾಗಿದೆ. ಈ ಸುರಂಗ ಮಾರ್ಗ
ಆರಂಭವಾದ ನಂತರ ಮನಾಲಿ ಮತ್ತು ಲಹೌಲ್‌-ಸಿಟಿಯ ಆಡಳಿತ ಕೇಂದ್ರವಾಗಿರುವ ಕೇಲಾಂಗ್‌ ನಡುವಿನ


234


ದೂರ 45 ಕಿಮೀ. ನಷ್ಟು ಕಡಿಮೆಯಾಗಲಿದೆ. ಈ ಸುರಂಗದಿಂದ ಸರಕು ಸಾಗಣೆ ವೆಚ್ಚ ಕೋಟ್ಯಾಂತರ
ರೂ. ಉಳಿತಾಯವಾಗಲಿದೆ.


ಆಧಾರ:ಕನ್ನಡ ಪ್ರಭ, ದಿನಾಂಕ:08.08.2020
15. ರಂಗಮಂದಿರದಲ್ಲಿ ಅಧಿವೇಶನ


ಪ್ರಸ್ತುತ ಅಧಿವೇಶನ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗದ ಕಾರಣ ತಮಿಳುನಾಡಿನ
ಮೂರು ದಿನಗಳ ಮುಂಗಾರು ಅಧಿವೇಶನವನ್ನು ವಲ್ಲಾಜಾಹ್‌ ರಸ್ತೆಯಲ್ಲಿರುವ ಐತಿಹಾಸಿಕ ಕಟ್ಟಡ ಕಲೈವನರ್‌
ಅರಂಗಮ್‌ಗೆ ಸ್ಥಳಾಂತರಿಸಲಾಗಿದೆ. ಕಳೆದ ಹತ್ತು ದಿನಗಳಿಂದ 150ಕ್ಕೂ ಹೆಚ್ಚು ಸಿಬ್ಬಂದಿಗಳು ಹಗಲು ರಾತ್ರಿ
ಸ್ಥಳಾಂತರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಪರಿಣಾಮ ಸೆಂಟ್‌ ಜಾರ್ಜ್‌ ಕೋಟೆ ಅಥವಾ ಕಲೈವನರ್‌
ಅರಂಗಮ್‌ ಯಥಾವತ್‌ ಅಧಿವೇಶನ ಗೃಹದಂತೆಯೇ ಸಿದ್ದವಾಗಿದೆ.


ಕೊರೋನಾ ಸಾಂಕ್ರಾಮಿಕದ ಆತಂಕದಿಂದಾಗಿ ಮಾಹಿತಿ ಮತ್ತು ವಾರ್ತಾ ಇಲಾಖೆಯ
ಸುಪರ್ದಿಯಲ್ಲಿರುವ ಕಲೈವನರ್‌ ಅರಂಗಮ್‌ನಲ್ಲಿ ಮೂರು ದಿನಗಳ ಮುಂಗಾರು ಅಧಿವೇಶನವನ್ನು ನಡೆಸಲು
ನಿರ್ಧರಿಸಲಾಗಿತ್ತು. ಸದ್ಯಕ್ಕೆ ರಂಗಮಂದಿರವಾದ ಕಾರಣದಿಂದ ಈ ನಿರ್ಣಯ ಕೈಗೊಳ್ಳಲಾಗಿತ್ತು.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:16.08.2020
16. 8 ರಾಜ್ಯಗಳಲ್ಲಿ ಶಾಲೆ ಪ್ರಾರಂಭ


ಕೊರೋನಾ ಆತಂಕದ ಮಧ್ಯೆಯೂ ದೇಶದ 8 ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳ ಪುನಾರಂಭಗೊಂಡಿವೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ
ಪಾಠ ಕಲಿಯುವುದಕ್ಕೆ ಈ ರಾಜ್ಯಗಳು ಅವಕಾಶ ಕಲ್ಪಿಸಿವೆ.


ಕೇಂದದ ಮಾರ್ಗಸೂಚಿಯ ಅನುಸಾರ ಮಧ್ಯ ಪ್ರದೇಶ, ಜಮ್ಮು-ಕಾಶ್ಮೀರ, ಅಸ್ಲಾಂ. ಚಂಡೀಗಢ,
ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್‌ ಹಾಗೂ ಹರ್ಯಾಣದಲ್ಲಿ ವಿದ್ಯಾರ್ಥಿಗಳು ಆರು ತಿಂಗಳ ಬಳಿಕ
ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ಮದ್ಯ ಪ್ರದೇಶದಲ್ಲಿ ಶಾಲೆಗಳು ಪುನಾರಂಭಗೊಂಡಿದ್ದು, 9 ರಿಂದ 12ನೇ
ತರಗತಿಯ ವಿದ್ಯಾರ್ಥಿಗಳು ಸ್ವಯಂಪೇರಿತವಾಗಿ ಶಾಲೆಗೆ ಬರುವುದಕ್ಕೆ ಅವಕಾಶ ನೀಡಲಾಗಿದೆ. ಆಂಧ್ರ
ಪ್ರದೇಶದಲ್ಲಿ 9 ಮತ್ತು 10ನೇ ತರಗತಿಗಳು ಆರಂಭವಾಗಿದ್ದು, ಸಾಮಾಜಿಕ ಅಂತರದೊಂದಿಗೆ ವಿದ್ಯಾರ್ಥಿಗಳಿಗೆ


ಪಾಠ ಮಾಡಲಾಗುತ್ತಿದೆ.


ಹಿಮಾಚಲ ಪ್ರದೇಶದಲ್ಲಿ ಸ್ವಯಂಪ್ರೇರಿತರಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸಿದ್ದಾರೆ. ಇದೇ ವೇಳ
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲೂ ಶಾಲೆಗಳು ಆರಂಭಗೊಂಡಿವೆ. ಶ್ರೀನಗರದಲ್ಲಿ ಬಹುದಿನಗಳ ಬಳಿಕ
ಶಾಲೆಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚಂಡೀಗಢದಲ್ಲೂ ಶಾಲೆಗಳು ಪುನಾರಂಭಗೊಂಡಿದ್ದರೂ ಅತ್ಯಂತ ಕಡಿಮೆ
ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಯತ್ತ ಮುಖಮಾಡಿದ್ದಾರೆ. ಇದೇ ವೇಳೆ ಪಂಜಾಬ್‌ನಲ್ಲಿ ಕೇವಲ ಉನ್ನತ
ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಆಗಮಿಸುವುದಕ್ಕೆ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವಕಾಶ ನೀಡಿದ್ದಾರೆ.


ಕರ್ನಾಟಕದಲ್ಲಿ ಈ ತಿಂಗಳ ಅಂತ್ಯದವರೆಗೂ ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಅವಕಾಶ
ನೀಡಲಾಗಿಲ್ಲ. ದೆಹಲಿ, ಗುಜರಾತ್‌, ಕೇರಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳು ಶಾಲೆ ಆರಂಭದ
ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.


ಆಧಾರ:ಕನ್ನಡ ಪ್ರಭ, ದಿನಾಂಕ:22.09.2020


235


ಭಾಗ-9
ಅಂತರರಾಷ್ಟ್ರೀಯ ಸುದ್ದಿಗಳು
KO) (6)
1. ಭಾರತದಲ್ಲಿ ಗೂಗಲ್‌ 75 ಸಾವಿರ ಕೋಟಿ ಹೂಡಿಕೆ


ಭಾರತದ ಡಿಜಿಟಲೀಕರಣಕ್ಕಾಗಿ ರೂ. 75 ಸಾವಿರ ಕೋಟಿಗಳನ್ನು (10 ಬಿಲಿಯನ್‌ ಡಾಲರ್‌) ಹೂಡಿಕೆ
ಮಾಡುವುದಾಗಿ ಆಲ್ಲಾಬೆಟ್‌ ಮತ್ತು NS ಸಂಸ್ಥೆಯ ಮುಖ್ಯ ವಾಕಿ ನಿರ್ವಾಹಣಾಧಿಕಾರಿ ಸುಂದರ್‌ ಪಿಚ್ಛೆ
ತಿಳಿಸಿದ್ದಾರೆ. 6ನೇ ಗೂಗಲ್‌ ಫಾರ್‌ ಇಂಡಿಯಾ” ಕಾರ್ಯಕಮದ ನೇರ ಪ್ರಸಾರದಲ್ಲಿ ಮಾತನಾಡಿದ ಪಿಚೈ
ಮುಂದಿನ 5-7 ವರ್ಷಗಳ ಅವಧಿಯಲ್ಲಿ ಡಿಜಿಟಲ್‌ ಇಂಡಿಯಾ ಅಭಿವೃದ್ಧಿಗಾಗಿ ಈ ಹಣವನ್ನು ಡಿ
ಮಾಡಲಾಗುವುದು ಎಂದು ತಿಳಿಸಿದರು.


ಈ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಪ್ರಧಾನಿ ಮೋದಿ ಅವರು ಪಿಚೈ ಜೊತೆ ವರ್ಚುವಲ್‌ ಸಂವಾದ
ನಡೆಸಿದರು. ರೈತರು ಮತ್ತು ಯುವ ಸಮುದಾಯದ ಬದುಕನ್ನು ಬದಲಿಸಲು ತಂತ್ರಜ್ಞಾನದ ಸಾಮರ್ಥ್ಯವನ್ನು
ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಇಬ್ಬರೂ ಮುಖಂಡರು ಚರ್ಚೆ ನಡೆಸಿದರು. ಈ ಸಂವಾದದ ಚಿತ್ರವೊಂದನ್ನು
ಟ್ವಿಟರ್‌ನಲ್ಲಿ ಮೋದಿ ಹಂಚಿಕೊಂಡಿದ್ದಾರೆ.


"ಪಿಚೈ ಜೊತೆಗೆ ಸಂವಾದ ನಡೆಸಿದೆ. ಸಂವಾದ ಫಲಪ್ರದವಾಗಿತ್ತು. ಹಲವು ವಿಚಾರಗಳ ಬಗ್ಗೆ ನಾವು ವಿಸ್ಕೃಶ
ಚರ್ಚೆ ನಡೆಸಿದೆವು. ಅದರಲ್ಲೂ ವಿಶೇಷವಾಗಿ, ರೈತರು, ಉದ್ಯಮಿಗಳು ಮತ್ತು ಯುವ ಸಮುದಾಯದ ಬದುಕನ್ನು
ಬದಲಿಸಲು ತಂತ್ರಜ್ಞಾನ ಸಾಮರ್ಥ್ಯ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಕೊರೋನಾ ಸಂಕಷ್ಟದ ಈ
ಸಮಯದಲ್ಲಿ ಹೊರಹೊಮ್ಮುತ್ತಿರುವ ಹೊಸ ಕೆಲಸದ ಸಂಸ್ಕೃತಿಯ ಬಗ್ಗೆ ಕ್ರೀಡೆಯಂತಹ ಕ್ಷೇತ್ರಗಳಿಗೆ ತಂದಿರುವ
ಸವಾಲುಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ದತ್ತಾಂಶ ಸುರಕ್ಷತೆ. ಸೈಬರ್‌ ಸುರಕ್ಷತೆಯ ಮಹತ್ನ್ಸದ ಬಗ್ಗೆಯೂ
ಚರ್ಚಿಸಿದ್ದೇವೆ ಎಂದು ಪ್ರಧಾನಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.


ವಿಡಿಯೋ ಕಾನ್ಪರೆನ್ಸ್‌ ಮೂಲಕ 6ನೇ "ಗೂಗಲ್‌ ಫಾರ್‌ ಇಂಡಿಯಾ” ಕಾರ್ಯಕ್ರಮದಲ್ಲಿ ಮಾತನಾಡಿದ
ಪಿಚೈ ಮೋದಿಯವರ ದೂರದೃಷ್ಟಿಯನ್ನು ಬೆಂಬಲಿಸಲು ಹೆಮ್ಮೆ ಪಡುತ್ತೇವೆ. ಡಿಜಿಟಲ್‌ ಇಂಡಿಯಾ
ಅಭಿವೃದ್ಧಿಗಾಗಿ ರೂ. 75,000 ಕೋಟಿಗಳನ್ನು ವನಿಯೋಗಿಸಲಾಗುವುದು. ಇದು ಭಾರತದ ಭವಿಷ್ಯ ಮತ್ತು
ಡಿಜಿಟಲ್‌ ಆರ್ಥಿಕತೆಯ ಬಗೆಗಿನ ನಮ್ಮ ವಿಶ್ವಾಸದ ಪ್ರತಿಬಿಂಬವಾಗಿದೆ ಎಂದರು.


ಆಧಾರ:ಉದಯವಾಣಿ, ದಿನಾ೦ಕ:14.07.2020
2. ಚೀನಾ ಮೂಗುದಾರಕ್ಕೆ ಮೋದಿ-ಅಬೆ ತಂತ್ರ


ಸಮಾನ ಶತ್ರುವಾದ ಚೀನಾವನ್ನು ಹಣಿಯಲು ಭಾರತ-ಜಪಾನ್‌ ಹೊಸ ತಂತ್ರಗಳಿಗಾಗಿ ಹುಡುಕಾಟ
ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ನಡುವೆ ಬರುವ ಅಕ್ಟೋಬರ್‌ನಲ್ಲಿ
ನ್‌ಲೈನ್‌ ಶೃಂಗಸಭೆ ಏರ್ಪಡಿಸುವ ಚಿಂತನೆ ನಡೆದಿದ್ದು, ಇಬ್ಬರು ಗಣ್ಯರು ಚೀನಾ ಪ್ರಾಬಲ್ಯ ಹತ್ತಿಕ್ಕುವ


ಮ "ಪ್ರಧಾನವಾಗಿ ಚರ್ಚಿಸುವ ಸಾಧ್ಯತೆ ಇದೆ.


ಕೊರೋನಾ ಸೋಂಕು ಹಾವಳಿ ನಡುವೆಯೇ ಚೀನಾ ಗಡಿ ತಂಟೆಯಂತಹ ಉದ್ಧಟ ನಡೆಯನ್ನು
ಪ್ರತಿಪಾದಿಸಿದೆ. ಲಡಾಖ್‌ನಲ್ಲಿ ಭಾರತದ ವಿರುದ್ದ ಸಂಘರ್ಷಕ್ಕಿಳಿದಿದ್ದರೆ, ಅತ್ತ ಪೂರ್ವ ಮತ್ತು ದಕ್ಷಿಣ ಚೀನಾ
ಸಾಗರ ಪ್ರದೇಶದಲ್ಲಿಯೂ ಹಲವು ರಾಷ್ಟ್ರಗಳ "ಹಿತಾಸಕ್ತಿಯನ್ನು ದಮನ ಮಾಡತೊಡಗಿದೆ. `ವಿಸರಣಾವಾದದ
ಹುಚ್ಚು ಚೀನಾ ನೆತಿಗೇರಿದೆ. ಇದನ್ನು ನಿಯಂತ್ರಿಸಲೇಬೇಕು' ಎನ್ನುವ ಇರಾದೆಯನ್ನು ಭಾರತ- ಜಪಾನ್‌
ವ್ಯಕ್ತಪಡಿಸಿ ಅಕಾ,


ಮೋದಿ-ಅಬೆ ವಾರ್ಷಿಕ ಶೃಂಗಸಭೆ ಕಳೆದ ಡಿಸೆಂಬರ್‌ನಲ್ಲಿಯೇ ನಡೆಯಬೇಕಿತ್ತು. ಅದಕ್ಕೆ ಅಸ್ಲಾಂನ
ಗುವಾಹಟಿ ಸ್ಥಳ ನಿಗದಿಯಾಗಿತ್ತು. ಆದರೆ ಹಠಾತ್‌ ಭುಗಿಲೆದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿ
ಪ್ರತಿಭಟನೆಯಿಂದ ಸಭೆ ಮುಂದೂಡಿಕೆಯಾಗಿತ್ತು ಆ ಬಳಿಕ ಕೊರೋನಾ ಸೋಂಕು ಹಾವಳಿ ಶುರುವಾದ್ದರಿಂದ


236


ಅನಿಶ್ಲಿತಾವಧಿಗೆ ಮಾತುಕತೆ ಮುಂದಕ್ಕೆ ಹೋಗಿತ್ತು. ಈಗ ಮುಖಾ-ಮುಖಿ ಭೇಟಿ ಬದಲು ವಿಡಿಯೋ ಕಾನ್ನರೆನ್ಸ್‌
ಮೂಲಕ ಅಕ್ಟೋಬರ್‌ನಲ್ಲಿ ಶೃಂಗಸಭೆ ಏರ್ಪಡಿಸಲು ಚಿಂತನೆ ನಡೆದಿದೆ.


ಚೀನಾಕ್ಕೆ ತನ್ನ ಮಗ್ಗಲಿನ ಯಾವೊಂದು ರಾಷ್ಟ್ರದ ಜೊತೆಗೂ ಸೌಹಾರ್ದಯುತವಾದ ಸ್ನೇಹ ಸಂಬಂಧ
ಇಲ್ಲ. ಭಾರತದ ಜೊತೆ ಭೂಗಡಿ ತಗಾದೆ ಇಟ್ಟುಕೊಂಡಿದ್ದರೆ ಅತ್ತ ಜಪಾನ್‌, ತೈವಾನ್‌, ಫಿಲಿಪೀನ್‌ ಆದಿಯಾಗಿ
ಹಲವು ರಾಷ್ಟ್ರಗಳ ಜೊತೆ ಜಲ ಗಡಿಗಳ ಜಗಳ ಕಾಯುತಿದೆ. ಕಮ್ಯುನಿಸ್ಟ್‌ ರಾಷ್ಟದ ಈ ವಿಸ್ತರಣಾವಾದದ
ದುರಾಶೆಗೆ ಕಡಿವಾಣ ಹಾಕುವುದಕ್ಕಾಗಿ ಜಪಾನ್‌ ಪ್ರಧಾನಿ ಶಿಂಚೊ ಅಬೆ ಅವರು ಬಲವಾದ ಸೂತ್ರಗಳನ್ನು
ಪ್ರಸ್ತಾಪಿಸಿದ್ದಾರೆ. ಇಂಡೋ-ಫೆಸಿಪಿಕ್‌ ವಲಯದ ಭದ್ರತೆಯನ್ನು ಪ್ರಧಾನವಾಗಿಟ್ಟುಕೊಂಡು ಅವರು, "ಚತುರ್ಭುಜ


ಭದತಾ ಸಂಧಾನ' ಶುರು ಮಾಡಿದ್ದಾರೆ. ಅಮೆರಿಕ, ಜಪಾನ್‌, ಭಾರತ ಮತ್ತು ಆಸ್ಪ್ರೇಲಿಯಾ ಒಳಗೊಂಡ "ಸ್ವಾಡ್‌'
ಕೂಟಕ್ಕೆ ವಿಸರಣಾವಾದ ಕಡಿವಾಣವೇ ಮುಖ್ಯ ಅಜೆಂಡಾವಾಗಿದೆ.


kr


ಭಾರತ-ಜಪಾನ್‌ ಶೃಂಗದಲ್ಲೂ ಪ್ರಾದೇಶಿಕ ಭದತೆಯೇ ಪ್ರಧಾನ ಚರ್ಚೆ ವಿಷಯವಾಗಲಿದೆ. ಶಸ್ತಾಸ
ಹಂಚಿಕೆ, ಗಡಿಯಾಚೆಗಿನ ಸೇವೆಯಂತಹ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.


ts


ಆಧಾರ:ವಿಜಯ ಕರ್ನಾಟಕ, ದಿನಾಂಕ:19.07.2020
3. ಪಾಕ್‌-ಚೀನಾ ನಡುವೆ ಮೂರು ವರ್ಷದ ರಹಸ್ಯ ಒಪ್ಪಂದ


ಕೊರೋನಾ ಮಹಾಮಾರಿಯ ಜನಕ ಎಂಬ ಹಣಿಪಟ್ಟಿ ಅಂಟಿಸಿಕೊಂಡು ವಿಶ್ವರಾಷ್ಟ್ರಗಳ ಆಕ್ರೋಶಕ್ಕೆ
ಗುರಿಯಾಗಿರುವ ಚೀನಾ ಇದೀಗ ಮನುಕುಲಕ್ಕೆ ಮಾರಕವಾದ ಮತ್ತಷ್ಟು ಕಮಗಳಿಗೆ ಮುಂದಾಗಿರುವ ಮಾಹಿತಿ
ಬಹಿರಂಗವಾಗಿದೆ. ಭಾರತ ಹಾಗೂ ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಜೈವಿಕ ಯುದ್ದದ
ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ತನ್ನ ಮಿತ್ರರಾಷ್ಟ್ರ ಪಾಕಿಸ್ತಾನದ ಜೊತೆ ಚೀನಾ ಕೈಜೋಡಿಸಿದೆ.

ಪೂರ್ವ ಲಡಾಖ್‌ನಲ್ಲಿ ಕ್ಯಾತೆ ತೆಗೆದು ಗಡಿ ಬಿಕ್ಕಟ್ಟಿಗೆ ಕಾರಣವಾಗಿದ್ದ ಚೀನಾವನ್ನು ಭಾರತ ಹಿಮ್ಮೆಟ್ಟಿಸಿದ
ಬೆನ್ನಲ್ಲೇ ಬೆಳಕಿಗೆ ಬಂದಿರುವ ಈ ವಿದ್ಯಮಾನ ಆತಂಕ ಹೆಚ್ಚಿಸಿದೆ. ಮೂರು ವರ್ಷಗಳ ಚೀನಾ-ಪಾಕ್‌
ಒಪ್ಪಂದದಲ್ಲಿ ಹಲವು ಸಂಶೋಧನೆಗಳು ಸೇರಿವೆ. ಮಾರಣಾಂತಿಕ ಅಂಥ್ರಾಕ್ಸ್‌ ಮಾದರಿಯ ವೈರಸ್‌ ಅಭಿವೃದ್ಧಿ
ಕೂಡ ಜೈವಿಕ ಯುದ್ದದ ಭಾಗವಾಗಿದೆ ಎಂದು ಅನೇಕ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಆನ್‌ಲೈನ್‌ ಸುದ್ದಿ
ಸಂಸ್ಥೆ 'ಕ್ಲಾಕ್ಷನ್‌' ವರದಿ ಮಾಡಿದೆ.


ಪಾಕ್‌ನ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಇಎಸ್‌ಟಿಓ) ಜೊತೆ ಸೇರಿ ಜೈವಿಕ ಅಸ್ತಗಳ ಬಗ್ಗೆ
ಚೀನಾ ರಹಸ್ಯ ಅಧ್ಯಯನ ನಡೆಸುತ್ತಿದೆ. ಆದರೆ ಇದಕ್ಕೆ "ಉದಯೋನ್ಮುಖ ಸಾಂಕ್ರಮಿಕ ರೋಗ ಮತ್ತು ಅದರ
ಪ್ರಸರಣ ನಿಯಂತ್ರಣದ ಜೈವಿಕ ಅಧ್ಯಯನ” ಎಂಬ 'ಶೀರ್ಷಿಕೆಯನ್ನು ನೀಡಿದೆ. ಚೀನಾವೇ ಈ ಅಧ್ಯಯನದ
ಸಂಪೂರ್ಣ ಆರ್ಥಿಕ EE ಭರಿಸಲಿದೆ ಎಂದು ವರದಿ ತಿಳಿಸಿದೆ.

ಈ ರಹಸ್ಯ ಯೋಜನೆಯನ್ನು ಪಾಕ್‌ನ ಆರೋಗ್ಯ ಇಲಾಖೆ ಮತ್ತು ವಿಶ್ವವಿದ್ಯಾಲಯಗಳ
ಮೇಲ್ಪಿಚಾರಣೆಯಿಂದ ಹೊರಗಿರಿಸಲಾಗಿದ್ದು, ಕೆಲವೇ ಮಂದಿಗೆ ಈ ಸಂಶೋಧನೆಯ ಉದ್ದೇಶ ಗೊತ್ತಿದೆ
ಎನ್ನಲಾಗಿದೆ.


ಆಧಾರ:ವಿಜಯವಾಣಿ, ದಿನಾ೦ಕ:25.07.2020
4. ಅಮೆರಿಕ ಅಧ್ಯಕ್ಷರಿಗಾಗಿ ಹೊಸ ಏರ್‌ಫೋರ್ಸ್‌ ಒನ್‌


ಜಗತ್ತಿನ ಅತ್ಯಾಧುನಿಕ ಹಾಗೂ ಗರಿಷ್ಠತಿಗರಿಷ್ಟ ಭದತೆಯ ವಿವಿಐಪಿ ವಿಮಾನವೆಂದರೆ ಅದು ಅಮೆರಿಕದ
"ಏರ್‌ಫೋರ್ಸ್‌ ಒನ್‌, ಸವಲತ್ತುಗಳಲ್ಲಿ, ಸುರಕ್ಷತೆಯಲ್ಲಿ ಈ ವಿಮಾನಕ್ಕೆ ಸರಿಸಾಟಿಯಾದ ಬೇರೊಂದು
ವಿಮಾನವಿಲ್ಲ. ಈಗ ಚಾಲ್ತಿಯಲ್ಲಿರುವ ವಿಮಾನ ಹಳತಾಗಿದ್ದರಿಂದ ಅದನ್ನು ನೇಪಥ್ಯಕ್ಕೆ ಸರಿಸಲಾಗುತ್ತಿದ್ದು,
ಸದ್ಯದಲ್ಲೇ ಹೊಸ ಏರ್‌ಫೋರ್ಸ್‌ ಒನ್‌” ಅಸಿತ್ವಕ್ಕೆ ಬರಲಿದೆ.


“ವಸಿ-25ಬಿ' ಎಂಬ ವಮಾನವನ್ನು ಹೊಸದಾಗಿ "ಏರ್‌ಫೋರ್ಸ್‌ ಒನ್‌' ವಿಮಾನವಾಗಿ
ಪರಿವರ್ತಿಸಲಾಗುತ್ತಿದೆ. ಇದು ಜೆಟ್‌ ತಂತ್ರಜ್ಞಾನವುಳ್ಳ ವಿಮಾನ. ಅತ್ಯಂತ ವೇಗವಾಗಿ ನಿಖರವಾಗಿ ಪ್ರಯಾಣಿಸುವ,


237


ಕ್ಷಿಪಣಿಯನ್ನು ಹಿಮ್ಮೆಟ್ಟಿಸುವ, ಮಿಂಚು-ಗುಡುಗು ಇವುಗಳನ್ನು ನಿಗಹಿಸುವ ಛಾತಿಯನ್ನು ಹೊಂದಿದೆ. ಸುಮಾರು
ರೂ. 5,900 ಸಾವಿರ ಕೋಟಿ ನೀಡಿ ವಿಮಾನವನ್ನು ಖರೀದಿಸಲಾಗಿದೆ. ಈಗ ನಿವೃತ್ತಿಯ ಅಂಚಿನಲ್ಲಿರುವ
ಏರ್‌ಫೋರ್ಸ್‌ ಒನ್‌ ವಿಮಾನಕ್ಕೆ ಹೋಲಿಸಿದರೆ ಈ ವಿಮಾನದಲ್ಲಿ ಕೆಲವು ಸೌಲಭ್ಯಗಳು ಕಡಿಮೆ. ಅಂದರೆ,
ಅನಗತ್ಯ ಸೌಲಭ್ಯಗಳನ್ನು ತೆಗೆದು ಹಾಕಲಾಗಿದೆ. ಆದರೆ, ಮೊದಲಿಗಿಂತಲೂ ದೊಡ್ಡದಾದ ವಿಮಾನವಿದು.
ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ.


ಆಧಾರ:ಉದಯವಾಣಿ, ದಿನಾಂಕ:28.07.2020
5. ಲಂಕಾ ಗೆಲುವಿನತ್ತ ರಾಜಪಕ್ಷ


ಶ್ರೀಲಂಕಾದ ಪ್ರಭಾವಿ ರಾಜಪಕ್ಸ ಕುಟುಂಬದ ಶ್ರೀಲಂಕಾ ಪೀಪಲ್ಸ್‌ ಪಾರ್ಟಿ (ಎಸ್‌ಎಲ್‌ಪಿಪಿ) ಸಂಸತ್‌
ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವತ್ತ ದಾಪುಗಾಲು ಇಟ್ಟಿದೆ. 225 ಸ್ಥಾನಗಳ ಸಂಸತ್‌ನಲ್ಲಿ
ಎಸ್‌ಎಲ್‌ಪಿಪಿ ಮೂರನೇ ಎರಡರಷ್ಟು ಬಹುಮತ ಪಡೆಯಲಿದೆ ಎಂದು ಶ್ರೀಲಂಕಾ ಅಧ್ಯಕ್ಷ ಗೋಟಬೆಯ
ರಾಜಪಕ್ಷ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರು ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷ ಅವರ
ಸಹೋದರಾಗಿದ್ದಾರೆ. ಪ್ರಕಟವಾಗಿರುವ ಆರಂಭಿಕ ಫಲಿತಾಂಶಗಳಲ್ಲಿ ಎಸ್‌ಎಲ್‌ಪಿಪಿ ಮೇಲುಗೈ ಸಾಧಿಸಿದೆ.


ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ಎಸ್‌ಎಲ್‌ಪಿಪಿ ಮೇಲುಗೈ ಸಾಧಿಸಿದೆ. ಸಜಿತ್‌ ಪ್ರೇಮದಾಸ ಅವರ
ಯುನಿಟೆಡ್‌ ನ್ಯಾಷನಲ್‌ ಪಾರ್ಟಿ (ಯುಎನ್‌ಪಿ) ನಾಲ್ಕನೇ ಸ್ಥಾನ ಪಡೆದಿದೆ. ಮಾರ್ಕಿಸ್ಸ್‌ ಜನತಾ ವಿಮುಕ್ತಿ
ಪೆರಾಮುನಾ(ಜಿವಿಪಿ) ಪಕ್ಷವು ಯುಎನ್‌ಪಿಗಿಂತ ಉತ್ತಮ ಸಾಧನೆ ತೋರಿದೆ.


ಆಧಾರ:ಉದಯವಾಣಿ, ದಿನಾ೦ಕ:07.08.2020
6. ಕೊರೋನಾಗೆ ಸಿಕ್ಕಿತು ಲಸಿಕೆ


ಮನುಕುಲವನ್ನು ಬೆಚ್ಚಿಬೀಳಿಸಿ, ಲಕ್ಷಾಂತರ ಮಂದಿಯನ್ನು ಬಲಿಪಡೆದಿರುವ ಕೊರೋನಾ ವೈರಸ್‌
ಸೋಂಕನ್ನು ಮಟ್ಟಹಾಕಲು ಕೊನೆಗೂ ಲಸಿಕೆಯ ಅಸ್ತ್ರ ದೊರೆತಿದೆ. ಕೊರೋನಾಗೆ ಲಸಿಕೆ ಅಭಿವೃದ್ದಿಪಡಿಸುವ
ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಯುತ್ತಿರುವಾಗಲೇ, ಜಗತ್ತಿನ ಮೊಟ್ಟಮೊದಲ ಲಸಿಕೆ
ಸಿದ್ಧಪಡಿಸುವಲ್ಲಿ ರಷ್ಯಾ ಯಶಸ್ವಿಯಾಗಿದೆ. ಈ ಮೂಲಕ ಲಸಿಕೆಗಾಗಿ ಕಾಯುತ್ತಿದ್ದ ಕೋಟ್ಯಂತರ ಜನ ನಿಟ್ಟುಸಿರು
ಬಿಡುವಂತಾಗಿದೆ.

ವಿಶ್ವದಲ್ಲೇ ಮೊಟ್ಟಮೊದಲ ಉಪಗ್ರಹವನ್ನು ಉಡಾವಣೆ ಮಾಡಿದ ಹೆಗ್ಗಳಿಕೆ ಹೊಂದಿರುವ ರಷ್ಯಾ ಈಗ
ಲಸಿಕೆ ಅಭಿವೃದ್ದಿಯಲ್ಲೂ ಯಶಸ್ವಿಯಾಗುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಜೊತೆಗೆ, ಇದರ
ಸ್ಮರಣಾರ್ಥ ಜಗತ್ತಿನ ಮೊದಲ ಉಪಗ್ರಹ "ಸ್ಪುಟ್ಲಿಕ್‌' ಹೆಸರನ್ನೇ ಕೊರೋನಾ ಲಸಿಕೆಗೂ ಇಡಲಾಗಿದೆ.


ರಷ್ಯಾ ಅಧ್ಯಕ್ಷರಿಂದಲೇ ಘೋಷಣೆ: ಸಚಿವರೊಂದಿಗೆ ನಡೆಸಿದ ವಿಡಿಯೋ ಕಾನ್ಪರೆನ್ಸ್‌ನಲ್ಲಿ ರಷ್ಯಾ ಅಧ್ಯಕ್ಷ
ವ್ಲಾಡಿಮಿರ್‌ ಪುಟಿನ್‌ ಅವರೇ ಈ ವಿಚಾರವನ್ನು ಘೋಷಿಸಿದ್ದಾರೆ. ಜಗತ್ತಿನ ಮೊದಲ ಲಸಿಕೆಯನ್ನು ರಷ್ಯಾ
ಅಭಿವೃದ್ಧಿ ಪಡಿಸಿದ್ದು, ಅದಕ್ಕೆ "ಸ್ಪುಟ್ಟಿಕ್‌ 5' ಎಂದು ನಾಮಕರಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಅಷ್ಟೇ
ಅಲ್ಲ ತಮ್ಮ ಪುತ್ರಿಯ ಮೇಲೆಯೇ ಲಸಿಕೆಯ ಪ್ರಯೋಗ ನಡೆದಿದೆ. ಕೊರೋನಾ ವಿರುದ್ದದ ಪರಿಣಾಮಕಾರಿ
ಲಸಿಕೆ ಇದಾಗಿದೆ ಹಾಗೂ ಸ್ಥಿರ ರೋಗ ನಿರೋಧಕ ಶಕ್ತಿಯನ್ನೂ ಒದಗಿಸಿದೆ ಎಂದಿದ್ದಾರೆ.


ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆ: ಲಸಿಕೆಯ ಪ್ರಯೋಗದಲ್ಲಿ ನನ್ನ ಪುತ್ತಿಯೂ ಭಾಗಿಯಾಗಿದ್ದಾಳೆ.
ಮೊದಲ ಪ್ರಯೋಗದ ವೇಳೆ ನನ್ನ ಮಗಳ ದೇಹದ ಉಷ್ಣಾಂಶ 100.4 ಫ್ಯಾರೆನ್‌ಹೀಟ್‌ ಇತ್ತು. ಮಾರನೇ ದಿನ
ಇದು 98.6ಕ್ಕಿಳಿಯಿತು. 2ನೇ ಬಾರಿಗೆ ಲಸಿಕೆ ಪ್ರಯೋಗಿಸಿದಾಗ ಆಕೆ ಸಂಪೂರ್ಣ ಗುಣಮುಖಳಾಗಿದ್ದಳು
ಮಾತ್ರವಲ್ಲ. ದೇಹದಲ್ಲಿ ಪ್ರತಿಕಾಯಗಳೂ ಸೃಷ್ಟಿಯಾಗಿವೆ ಎಂದು ಪುಟಿನ್‌ ಹೇಳಿದ್ದಾರೆ. ಲಸಿಕೆ ವಿಚಾರದಲ್ಲಿ ರಷ್ಯಾ
ಮಹತ್ವದ ಹೆಜ್ಜೆ ಇಟ್ಟಿದೆ. ಕೊರೋನಾ ವೈರಸ್‌ಗೆ ವಿಶ್ವದಲ್ಲೇ ಮೊಟ್ಟ ಮೊದಲ ಲಸಿಕೆ ಅಭಿವೃದ್ಧಿಪಡಿಸುವಲ್ಲಿ
ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು. ಸದ್ಯದಲ್ಲೇ ಲಸಿಕೆಯನ್ನು ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆ
ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


238


ಗಮಲೇಯಾ ಸಂಶೋಧನಾ ಸಂಸ್ಥೆ ಹಾಗೂ ಬಿನ್ನೋಫಾರ್ಮ್‌ ಕಂಪನಿಯಲ್ಲಿ ಲಸಿಕೆ ಉತ್ಪಾದನೆ
ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್‌ ಮುರಕೊ ಹೇಳಿದ್ದಾರೆ. ಈ
ಲಸಿಕೆಯನ್ನು ಗಮಲೇಯಾ ಸಂಸ್ಥೆ ಹಾಗೂ ರಷ್ಯಾ ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದು
ವೈರಸ್‌ ವಿರುದ್ಧ ದೀರ್ಫಾವಧಿ ರೋಗ ನಿರೋಧಕ ಶಕ್ತಿಯನ್ನು ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ.


pe)


ಆಧಾರ:ಉದಯವಾಣಿ, ದಿನಾಂಕ:12.08.2020
7. ರಾಜೀನಾಮೆ ಘೋಷಿಸಿದ ಪ್ರಧಾನಿ ಶಿಂಜೊ


ಅನಾರೋಗ್ಯದ ಕಾರಣದಿಂದ ಪ್ರಧಾನಿ ಹುದ್ದೆ ತೊರೆಯುವುದಾಗಿ ಜಪಾನ್‌ ಪ್ರಧಾನಿ ಶಿಂಜೊ ಅಬೆ (66)
ಪ್ರಕಟಿಸಿದ್ದಾರೆ. ಈ ಅನಿರೀಕ್ಷಿತ ವಿದ್ಯಮಾನದಿಂದ ಜಪಾನ್‌ನಲ್ಲಿ ರಾಜಕೀಯ ತಲ್ಲಣ ಉಂಟಾಗಿದೆ. ಜಗತ್ತಿನ
ಮೂರನೇ ಅತಿದೊಡ್ಡ ಅರ್ಥಿಕತೆಯ ದೇಶದ ನಾಯಕತ್ವಕ್ಕೆ ತೀವ್ರ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ.
"ಅನಾರೋಗ್ಯದ ಕಾರಣದಿಂದಾಗಿ, ಜನತಾ ತೀರ್ಪಿಗೆ ಅನುಗುಣವಾಗಿ ಆತ್ಮ ವಿಶ್ವಾಸದಿಂದ ಕರ್ತವ್ಯ ನಿಭಾಯಿಸಲು
ಆಗುತ್ತಿಲ್ಲ. ಪ್ರಧಾನಿ ಪಟ್ಟದಲ್ಲಿ ಮುಂದುವರಿಯಬಾರದೆಂದು ನಿರ್ಧರಿಸಿದ್ದೇನೆ' ಎಂದು ಕ್ಷೀಣ ಸ್ವರದಲ್ಲಿ ಅಬೆ
ಹೇಳಿದರು. ಇತ್ತೀಚಿನ ವಾರಗಳಲ್ಲಿ ಅಬೆ ಎರಡು ಬಾರಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದರಿಂದ ಅವರ ರಾಜಕೀಯ
ಭವಿಷ್ಯದ ಕುರಿತು ಊಹಾಪೋಹಗಳೆದ್ದಿದ್ದವು. ಅವರ ಹಠಾತ್‌ ಘೋಷಣೆಯಿಂದ ಜಪಾನ್‌ ಷೇರು
ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು.


ಆಧಾರ:ವಿಜಯವಾಣಿ, ದಿನಾ೦ಕ:29.08.2020


1. ಎ. ಕೃಷ್ಣ ಸುರಹುರ, ಹಿರಿಯ ಸಾಹಿತಿ


ಜಿಲ್ಲೆಯ ಸಗರನಾಡಿನ ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ(89)ಅವರು ನಿಧನರಾಗಿದ್ದಾರೆ. ಯಾದಗಿರಿ


WON


ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಕನ್ನಡ ಸಾರಸ್ತತ ಲೋಕಕ್ಕೆ ಅಪಾರ ಕೊಡುಗೆ


ನೀಡಿದ್ದಾರೆ. ಕೃಷ್ಣ ಅವರ ನಿಧನದಿಂದ ನಾಡಿನ ಸಾರಸ್ಪತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಷಟ್ರದಿ,


ರಗಳೆ, ಕಂದಪದ್ಯ, ಚಂಪು ಕಾವ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಎದೆಗಡಲ ಮುತ್ತುಗಳು,
ಗೀತಾಂಜಲಿ, ಕರುಣ ಕಿರೀಟ, ಮಂತ್ರರಾಜ ಗಾಯತ್ರಿ, ಶ್ರೀಮಚ್ಚಂದಲಾಂಬ, ಅಣು ಪುರಾಣ, ಮುಂತಾದ
ಗಂಥಗಳನ್ನು ಅವರು ರಚಿಸಿದ್ದಾರೆ.


ಆಧಾರ:ವಿಜಯವಾಣಿ, ದಿನಾ೦ಕ:14.07.2020
2. ಲಾಲ್‌ಜಿ ಟಂಡನ್‌, ಮಧ್ಯಪ್ರದೇಶ ರಾಜ್ಯಪಾಲ


ಅನಾರೋಗ್ಯದಿಂದಾಗಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಧ್ಯಪ್ರದೇಶದ ರಾಜ್ಯಪಾಲ
ಲಾಲ್‌ಜಿ ಟಂಡನ್‌ (85) ನಿಧನ ಹೊಂದಿದ್ದಾರೆ.


ಟಂಡನ್‌ ಅವರು 2018-19ರಲ್ಲಿ ಒಂದು ವರ್ಷ ಬಿಹಾರದ ರಾಜ್ಯಪಾಲರಾಗಿದ್ದರು. ನಂತರ
ಮಧ್ಯಪ್ರದೇಶ ರಾಜ್ಯಪಾಲರಾಗಿ ವರ್ಗಗೊಂಡಿದ್ದರು. ತಮ್ಮ ತವರು ನೆಲ ಲಖೌನ್‌ನಿಂದ 1970ರಲ್ಲಿ ರಾಜಕೀಯ
ಯಾತ್ರೆ ಆರಂಭಿಸಿದ್ದ ಲಾಲ್‌ಜಿ ಸರಣಿ ಗೆಲುವುಗಳ ನಂತರ 1991 ಮತ್ತು 2003ರ ನಡುವೆ ಹಲವು ಬಾರಿ
ರಾಜ್ಯದ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2009ರಲ್ಲಿ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ
ಉತ್ತರಾಧಿಕಾರಿಯಾಗಿ ಲಕ್ನೋ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದರು. ಅಟಲ್‌ ಅವರಿಗೆ ಪರಮಾಪ್ಪರಾಗಿದ್ದ ಟಂಡನ್‌


ವಾಜಪೇಯಿ ಅವರ "ದತ್ತುಪುತ್ತ' ಎಂದೇ ಗುರುತಿಸಿಕೊಂಡಿದ್ದರು.


ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪ ರಾಷ್ಟಪತಿ ಎಂ.ವೆಂಕಯ್ಯ ನಾಯ್ದು, ಪ್ರಧಾನಿ ನರೇಂದ್ರ
ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಅನೇಕ ಗಣ್ಯರು ಟಂಡನ್‌ ಅವರಿಗೆ ಶ್ರದ್ಧಾಂಜಲಿ
ಸಲ್ಲಿಸಿದ್ದಾರೆ. “ಲಾಲ್‌ಜಿ ಟಂಡನ್‌ ಅವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ಉತ್ತರಪುದೇಶದಲ್ಲಿ
ಬಿಜೆಪಿ ಬಲಪಡಿಸುವಲ್ಲಿ ಅವರ ಪಾತ್ರ ಪ್ರಧಾನ. ಸಂವಿಧಾನ ತಜ್ಞಧಾಗಿದ್ದ ಅವರು ಶ್ರೇಷ್ಟ ಆಡಳಿತಗಾರರಾಗಿದ್ದರು.


ಅವರು ಅಭಿವೃದ್ದಿಯ ಬಹುದೊಡ್ಡ ಕನಸುಗಾರರಾಗಿದ್ದರು” ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಾಪ
ಸಂದೇಶದಲ್ಲಿ ಸ್ಮರಿಸಿದ್ದಾರೆ.


ಆಧಾರ:ವಿಜಯ ಕರ್ನಾಟಕ, ದಿನಾಂಕ:22.07.2020
3. ಅಮರ್‌ಸಿಂಗ್‌, ರಾಜ್ಯಸಭಾ ಸದಸ್ಯ


ಸಮಾಜವಾದಿ ಪಕ್ಷದ ಮಾಜಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್‌ (64)
ನಿಧನರಾಗಿದ್ದಾರೆ. ಇವರು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಅವರ ಆಪ್ಪರಾಗಿ,
ಒಂದು ಕಾಲದಲ್ಲಿ ಅಧಿಕಾರ ವಲಯದಲ್ಲಿ ಅಪಾರ ಪ್ರಭಾವ ಬೀರಿದ್ದರು. ಸಿಂಗ್‌ ಅವರ ನಿಧನಕ್ಕೆ ಪ್ರಧಾನಿ
ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.


ರಾಜಕೀಯ ಪಯಣ:- ಉದ್ಯಮ ವಲಯ, ರಾಜಕೀಯ, ಬಾಲಿವುಡ್‌ನಲ್ಲಿ ಸಾಕಷ್ಟು ಗೆಳೆಯರನ್ನು ಹೊಂದುವ
ಮೂಲಕ ದೇಶದ ಪ್ರಭಾವಿ ಐಕಾನ್‌ ಎಂದೇ ಅಮರ್‌ ಸಿಂಗ್‌ ಖ್ಯಾತಿ ಗಳಿಸಿದವರು. ಒಂದು ಕಾಲದಲ್ಲಿ ಸಿಂಗ್‌
ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಅವರ ಬಲಗೈ ಬಂಟನೆಂದೇ ಖ್ಯಾತರಾಗಿದ್ದರು.
2008ರಲ್ಲಿ ಅಣ್ಣಸ್ತ ಒಪ್ಪಂದ ಸಂಬಂಧ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಮ್ಯೂನಿಸ್ಟ್‌ ಪಕ್ಷ ವಾಪಸ್‌
ಪಡೆದ ಸಮಯದಲ್ಲಿ ಅಮರ್‌ ಸಿಂಗ್‌ ಸಮಾಜವಾದಿ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. 1996ರಲ್ಲಿ
ಸಿಂಗ್‌ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದರು. 2010ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ


240


ಮೇಲೆ ಅವರನ್ನು ಉಚ್ಛಾಟಿಸಲಾಯಿತು. ಆದರೂ, 2016ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅದೇ ಪಕ್ಷದ
ಬೆಂಬಲದೊಂದಿಗೆ ಮತ್ತೆ ರಾಜ್ಯಸಭೆಗೆ ಪ್ರವೇಶಿಸಿದ್ದರು.


2010ರಲ್ಲಿ ಎಸ್‌ಪಿಯಿಂದ ಉಚ್ಛಾಟಿತರಾದ ಮೇಲೆ ಅಮರ್‌ ಸಿಂಗ್‌, 2011ರಲ್ಲಿ ರಾಷ್ಟ್ರೀಯ ಲೋಕ
ಮಂಚ್‌ ಎಂಬ ಹೊಸ ಪಕ್ಷ ಸ್ಥಾಪಿಸಿದರು. 2012ರ ಉತ್ತರಪ್ರದೇಶ ಚುನಾವಣೆಯಲ್ಲಿ 300 ಅಭ್ಯರ್ಥಿಗಳನ್ನು
ಕಣಕ್ಕಿಳಿಸಿದರು. ಆದರೆ, ಒಂದೇ ಸ ಸೀಟನ್ನೂ ಗೆಲಲಿಲ್ಲ. ನಂತರ ಕೆಲವು ತಿಂಗಳ ಮಟ್ಟಿಗೆ ಅವರು
ರಾಷ್ಟ್ರೀಯ ಲೋಕದಳಕ್ಕೆ ಸೇರಿ, 2014ರ We ಚುನಾವಣೆಯಲ್ಲಿ ಫತೇಷುರ ಸಿಕ್ರಿಯಲ್ಲಿ ಸ್ಪರ್ಧಿಸಿ,


ಸೋಲುಂಡರು.
ಆಧಾರ:ಪ್ರಜಾವಾಣಿ, ದಿನಾಂಕ:02.08.2020
ಸಿ. ಗುರುಸ್ಪಾಮಿ, ಮಾಜಿ ಶಾಸಕ


ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸಿ.ಗುರುಸ್ತಾಮಿ(68) ಅವರು ಕೋವಿಡ್‌ ಸೋಂಕಿನಿಂದ
ದಿನಾಂಕ:19.08.2020ರ೦ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ಜನತಾಪಕ್ಷ,
ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ್ದರು. ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಅವರು
ದಿನಾಂಕ:23.08.1952ರಂದು ಚಾಮರಾಜನಗರ ತಾಲ್ಲೂಕಿನ ಯಾನಗಳ್ಳಿಯಲ್ಲಿ ಜನಿಸಿದ್ದು, ಎಂ.ಎ. ಹಾಗೂ
ಎಲ್‌.ಎಲ್‌.ಬಿ ಪದವೀಧರರಾಗಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಶ್ರೀಯುತರು ಸಮಾಜ ಸೇವೆಯಲ್ಲಿ ಅತೀವ
ಆಸಕ್ತಿ ಹೊಂದಿದ್ದು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ 1999ರಲ್ಲಿ ಹನ್ನೊಂದನೇ ವಿಧಾನಸಭೆಗೆ
ಆಯ್ಕೆಯಾಗಿ ಸೇವೆ ಸಲ್ಲಿಸಿರುತ್ತಾರೆ.


ಆಧಾರ:ಸಂ೦ಯುಕ್ತ ಕರ್ನಾಟಕ, ದಿನಾಂಕ:20.08.2020
5. ಜಿ. ಕಸ್ತೂರಿರಂಗನ್‌, ಪಿಚ್‌ ಕ್ಕುರೇಟರ್‌


ಮಾಜಿ ಕಿಕೆಟಿಗ ಹಾಗೂ ಬಿಸಿಸಿಐ ಪಿಚ್‌ ಕ್ಕುರೇಟರ್‌ ಗೋಪಾಲಸ್ವಾಮಿ ಕಸ್ತೂರಿರಂಗನ್‌
ಚಾಮರಾಜಪೇಟೆ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ನಿಧನಕ್ಕೆ ಕರ್ನಾಟಕ ಕಿಕೆಟ್‌
ವಲಯ ಕಂಬನಿ ಮಿಡಿದಿದೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಮೈಸೂರು ತಂಡ ಪ್ರತಿನಿಧಿಸಿದ್ದ ಕಸ್ತೂರಿರಂಗನ್‌,
ಕಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬಳಿಕ ಪಿಚ್‌ ಕ್ಕುರೇಟರ್‌ ಆಗಿದ್ದರು. ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ
(ಕೆಎಸ್‌ಸಿಎ) ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.


ಕೆಎಸ್‌ಸಿಎ ಪಾಲಿಗೆ ಪೋಷಕರಂತೆ ಇದ್ದ ಅವರ ನಿಧನದಿಂದ ಕೆಎಸ್‌ಸಿಎಗೆ ತುಂಬಲಾರದ
ನಷ್ಟವುಂಟಾಗಿದೆ ಎಂದು ಕೆಎಸ್‌ಸಿಎ ಖಜಾಂಚಿ ಹಾಗೂ ವಕ್ತಾರ ವಿನಯ್‌ ಮೃತ್ಯಂಜಯ ತಿಳಿಸಿದ್ದಾರೆ. ಮಧ್ಯಮ
ವೇಗಿಯಾಗಿದ್ದ ಕಸ್ತೂರಿರಂಗನ್‌ 1948-1963ರವರೆಗೆ ಮೈಸೂರು ರಾಜ್ಯ ತಂಡವನ್ನು ದೇಶೀಯ ಕ್ರಿಕೆಟ್‌ನಲ್ಲಿ
ಪ್ರತಿನಿಧಿಸಿದ್ದರು. 36 ಪ್ರಥಮ ದರ್ಜೆ ಪಂದ್ಯಗಳಿಂದ 94 ವಿಕೆಟ್‌ ಕಬಳಿಸಿದ್ದರು.


ಆಧಾರ:ವಿಜಯವಾಣಿ, ದಿನಾ೦ಕ:20.08.2020
6. ಪ್ರಣಬ್‌ ಮುಖರ್ಜಿ, ಮಾಜಿ ರಾಷ್ಟಪತಿ
ರು


ಮಿದುಳಿನ ಶಸ್ತಚಿಕಿತ್ಸೆಗೊಳಗಾಗಿ, ನಂತರ ಕೊರೋನಾದಿಂದಲೂ ಬಳಲುತ್ತಿದ್ದ ಮಾಜಿ ರಾಷ್ಟಪತಿ,
ರಾಜಕೀಯ ಮುತ್ನದ್ದಿ ಪ್ರಣಬ್‌ ಮುಖರ್ಜಿ(84) ಕೊನೆಯುಸಿರೆಳೆದರು.


ನಡೆದಾಡುವ ವಿಶ್ವಕೋಶ ಬಿರುದಾಂಕಿತ, ಗೌರವಾನ್ಸಿತ ರಾಜಕಾರಣಿ, ಭಾರತದ ಮಾಜಿ
ರಾಷ್ಟಪತಿಯವರಾದ ಶ್ರೀ 'ಪ್ರಣಬ್‌ ಕುಮಾರ್‌ ಮುಖರ್ಜಿ ಅವರು ದಿನಾಂಕ:11.12.1935ರಂದು ಪಶ್ಚಿಮ
ಬಂಗಾಳದ ಮಿರತಿಯಲ್ಲಿ ಜನಿಸಿದ್ದರು. ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಇತಿಹಾಸ, ರಾಜಕೀಯ ಶಾಸ್ತ್ರ ಹಾಗೂ
ಕಾನೂನು ಪದವಿ ಪಡೆದಿದ್ದು, ಉಪನ್ಯಾಸಕರಾಗಿ ಹಾಗೂ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. "1969ರಲ್ಲಿ
ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದ ಶ್ರೀಯುತರು ನಂತರ 1975, 198], 1993 ಮತ್ತು 1999ರಲ್ಲಿ
ಪುನರಾಯ್ದೆಗೊಂಡಿದ್ದರು. 2004ರಲ್ಲಿ ಹಾಗೂ 2009ರಲ್ಲಿ ಲೋಕಸಭೆಗೆ ಎರಡು ಬಾರಿ ಚುನಾಯಿತಗೊಂಡಿದ್ದರು.


241


1973 ರಿಂದ 2012ರವರೆಗಿನ ವಿವಿಧ ಅವಧಿಗಳಲ್ಲಿ ಕೈಗಾರಿಕೆ, ಹಡಗು ಮತ್ತು ಸಾರಿಗೆ, ಕಂದಾಯ ಮತ್ತು
ಬ್ಯಾಂಕಿಂಗ್‌, ವಾಣಿಜ್ಯ, ಉಕ್ಕು ಮತ್ತು ಗಣಿ, ಹಣಕಾಸು, ವಿದೇಶಾಂಗ ವ್ಯವಹಾರಗಳು ಹಾಗೂ ರಕ್ಷಣಾ ಖಾತೆಗಳ
ಸಜೆವರಾಗಿ ದೇಶ ಮೆಚ್ಚುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುತ್ತಾರೆ. 1980 ರಿಂದ 1985 ರವರೆಗೆ
ರಾಜ್ಯ ಸಭೆಯ ನಾಯಕರಾಗಿ, 2004 ರಿಂದ 2012ರವರೆಗೆ ಲೋಕಸಭೆಯ ಸಭಾ ನಾಯಕರಾಗಿಯೂ ಕಾರ್ಯ
ನಿರ್ವಹಿಸಿದ್ದರು. 1991 ರಿಂದ 1995ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ
ಶ್ರೀಯುತರು 2012 ರಿಂದ 2017ರವರೆಗೆ ಭಾರತದ ರಾಷ್ಟ್ರಪತಿಗಳಾಗಿ ಸೇವೆ ಸಲಿಸಿರುತಾರೆ. ರಾಷ್ಟ್ರದ ಅಭಿವೃದ್ಧಿ


pe)


ಪಥದಲ್ಲಿ ಅಳಿಸಲಾಗದ ಗುರುತುಗಳನ್ನು ಬಿಟ್ಟಿರುವ ಶ್ರೀ ಪ್ರಣಬ್‌ ಅವರು ಶ್ರೇಷ್ಠ ವಿದ್ವಾಂಸರಾಗಿ ಅತುತ್ತಮ
ರಾಜಕಾರಣಿಯಾಗಿ ಸಮಾಜದ ಎಲ್ಲಾ pa ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಷ್ಟ ಪತಿಗಳಾಗಿ ರಾಷ್ಟಪತಿ
ಭವನದ ಅಧಿಕೃತ ಟ್ವಿಟರ್‌ ಖಾತೆಯನ್ನು ಪ್ರಥಮ ಬಾರಿಗೆ ತೆರೆದಿದ್ದ ಶ್ರೀಯುತರು "ರಾಷ್ಟಪತಿ ಭವನದಲ್ಲಿ
ಅಪರೂಪದ ವಸ್ತು ಸೆಂಗಹಾಲಯವನ್ನು ಪ್ರಾರಂಭಿಸಿದ್ದು ಅದರಲ್ಲಿ ರಾಷ್ಟ್ರಪತಿಗಳಿಗೆ ಲಭಿಸಿರುವ ಅಪರೂಪದ
ವಸ್ತುಗಳನ್ನು ಸಂಗಟಿ ಸಲಾಗಿದೆ. ದೇಶದ PER ಪ್ರಜಾಪುಭುತ್ತ ವ್ಯವಸ್ಥೆ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ
10ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶ್ರೀ ಪ್ರಣಬ್‌ ಮುಖರ್ಜಿ ಅವರು ಲೇಖಕರಾಗಿಯೂ ಪ್ರಖ್ಯಾತಿ
ಗಳಿಸಿದ್ದರು. ಶ್ರೀಯುತರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ್ದ ಸೇವೆಗೆ ದೇಶ-ವಿದೇಶಗಳ ಗೌರವ ಡಾಕ್ಷರೇಟ್‌
ಪದವಿಗಳು, ಪದ್ಮವಿಭೂಷಣ, ಅತ್ಯುತ್ತಮ ಸಂಸದೀಯಪಟು ಹಾಗೂ 2019 ರಲ್ಲಿ "ಭಾರತ ರತ್ನ' ಪ್ರಶಸಿಗೂ
ಪುರಸ್ಕೃತರಾಗಿದ್ದರು. ಪಕ್ಷಾತೀತವಾಗಿ ಎಲ್ಲರಿಂದಲೂ ಪೀತಿ ಗೌರವಗಳನ್ನು ಪಡೆಯುತ್ತಿದ್ದ ಭಾರತದ


ರಾಜಕಾರಣದಲ್ಲಿ ಪ್ರಣಬ್‌ ದಾ ಎಂದೇ ಜನಜನಿತರಾಗಿದ್ದರು.


ಆಧಾರ:ವಿಜಯವಾಣಿ, ದಿನಾ೦ಕ:01.09.2020
7. ಎಂ.ಜೆ. ಅಪ್ಪಾಜಿಗೌಡ, ಮಾಜಿ ಶಾಸಕರು


ಜೆಡಿಎಸ್‌ ಹಿರಿಯ ನಾಯಕ, ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೌಡ ಅಲ್ಲಕಾಲದ ಅನಾರೋಗ್ಯದಿಂದ
ನಿಧನರಾಗಿದ್ದಾರೆ. ಅವರು ದಿನಾಂಕ:20.06.1953ರಂದು ಜನಿಸಿದ್ದು, ಬಿ.ಎ. ಪದವೀಧರರಾಗಿದ್ದರು. ವೃತ್ತಿಯಲ್ಲಿ
ಕೃಷಿಕರಾಗಿದ್ದ ಶ್ರೀಯುತರು 1994 ರಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ 10ನೇ
ವಿಧಾನಸಭೆಗೆ ಚುನಾಯಿತರಾಗಿದ್ದು, 11 ಮತ್ತು 14ನೇ ವಿಧಾನಸಭೆಗೆ ಇದೇ ಕ್ಷೇತ್ರದಿಂದ ಪುನರಾಯ್ಕೆಗೊಂಡು
ಸೇವೆ ಸಲ್ಲಿಸಿರುತ್ತಾರೆ. ಎಂ.ಜೆ. ಅಪ್ಪಾಜಿಗೌಡ ಅವರು ಕೊರೋನಾ ವೈರಸ್‌ ಸೋಂಕಿಗೆ ಒಳಗಾಗಿ ನಿಧನ
ಹೊಂದಿರುತ್ತಾರೆ.


ಆಧಾರ:ವಿಶ್ವವಾಣಿ, ದಿನಾಂಕ:04.09.2020
8. ರಘುವಂಶ ಪ್ರಸಾದ್‌, ಕೇಂದ್ರದ ಮಾಜಿ ಸಚಿವರು


ಮಹತ್ತದ ಉದ್ಯೋಗ ಖಾತ್ರಿ ಯೋಜನೆಯ ಜನಕರಲ್ಲಿ ಒಬ್ಬರು ಎಂದೇ ಖ್ಯಾತರಾಗಿದ್ದ ಹಾಗೂ
ಇತ್ತೀಚೇಗಷ್ಟೇ ಲಾಲುಪ್ರಸಾದ್‌ ಯಾದವ್‌ ನೇತೃತ್ನದ ಆರ್‌ಜೆಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೇಂದದ ಮಾಜಿ
ಸಚಿವ ರಘುವಂಶ ಪ್ರಸಾದ್‌ ಸಿಂಗ್‌ ನಿಧನರಾದರು. ಅವರಿಗೆ 74 ವರ್ಷ ವಯಸಾಗಿತ್ತು ಅನಾರೋಗ್ಯ
ಪೀಡಿತರಾಗಿದ್ದರು.


ಉದ್ಯೋಗ ಖಾತ್ರಿ ಜನಕ- ರಘುವಂಶ ಅವರು ಮನಮೋಹನ ಸಿಂಗ್‌ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ದಿ
ಸಚಿವರಾಗಿದ್ದರು. ಈ ವೇಳೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಆರಂಭವಾಗಿತ್ತು. ಈ ಕಾರಣ
ಅವರನ್ನು ಯೋಜನೆಯ ಜನಕರಲ್ಲಿ ಒಬ್ಬರು ಎಂದು ಕರೆಯಲಾಗುತ್ತಿತ್ತು ಸಿಂಗ್‌ ನಿಧನಕ್ಕೆ ರಾಷ್ಟಪತಿ,
ಉಪ ರಾಷ್ಟಪತಿ, ಪ್ರಧಾನಿ, ಲಾಲು, ನಿತಿನ್‌ ಕಂಬನಿ ಮಿಡಿದಿದ್ದಾರೆ.


ಆಧಾರ:ಕನ್ನಡಪು್ರಭ, ದಿನಾಂಕ:14.09.2020


242
9. ಕಪಿಲಾ, ಖ್ಯಾತ ನೃತ್ಯ ವಿದ್ವಾಂಸಕಿ


ಕಲೆ, ಸಂಸ್ಕೃತಿ, ಇತಿಹಾಸ, ವಾಸ್ತುಶಿಲ್ಲ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯದ ಖ್ಯಾತ ವಿದ್ದಾಂಸಕಿ
ಕಪಿಲಾ ವಾತ್ಲಾಯನ್‌ ಅವರು ವಯೋಸಹಜ ನಿಧನರಾಗಿದ್ದಾರೆ. ಅವರು ಅತ್ಯುನ್ನತ ಮತ್ತು ಸರಿಸಾಟಿಯಿಲ್ಲದ
ಕಲಾ ವಿದ್ವಾಂಸಕಿ. ಕಪಿಲಾ ಅವರು 1928ರ ಡಿಸೆಂಬರ್‌ 25ರಂದು ದೆಹಲಿ ಮೂಲದ ಮಲಿಕ್‌ ಕುಟುಂಬದಲ್ಲಿ
ಜನಿಸಿದರು. ಅವರ ತಾಯಿ ಸತ್ಯವತಿ, ಸ್ಥಾತಂತ್ಯ ಹೋರಾಟಗಾರ್ತಿ. ಆ ಸಮಯದಲ್ಲಿ ಕಪಿಲಾ ಅವರ ಕುಟುಂಬ
ಕಲೆ, ಸಂಸ್ಕೃತಿಯೊಂದಿಗೆ ಒಡನಾಟ ಹೊಂದಿತ್ತು. ಮೀನಾಕ್ಷಿ ಸುಂದರಂ ಪಿಳ್ಳೈ ಅವರಿಂದ ಭರತನಾಟ್ಯ ಮತ್ತು
ಸುರೇಂದನಾಥ ಜೆನಾ ಅವರಿಂದ ಒಡಿಸ್ಸಿ ನೃತ್ಯವನ್ನೂ ಕಲಿತರು.


ಹಿಂದೂ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದ ಕಪಿಲಾ ವಾತ್ಸಯನ್‌ ದೆಹಲಿ
ವಿಶ್ವವಿದ್ಯಾಲಯದಿಂದ ಇಂಗ್ಲೀಷ್‌ನಲ್ಲಿ ಸ್ನಾತಕೋತರ ಪದವಿ, ಅಮೆರಿಕದ ಮಿಷಿಗನ್‌ ವಿಶ್ವವಿದ್ಯಾಲಯದಿಂದ
ಶಿಕ್ಷಣದಲ್ಲಿ ಮತ್ತೊಂದು ಪದವಿ ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪಡೆದರು.
1998ರಲ್ಲಿ ಕಾಂಗೆಸ್‌ ಆನ್‌ ರಿಸರ್ಚ್‌ ಇನ್‌ ಡ್ಕಾನ್ಸ್‌ನಲ್ಲಿ ಅವರ ಅತ್ಯುತ್ತಮ ನೃತ್ಯಕ್ವಾಗಿ ಪ್ರಶಸ್ತಿ ನೀಡಿ
ಗೌರವಿಸಲಾಯಿತು. ದಿ ಸ್ಕ್ವೇರ್‌ ಆ್ಯಂಡ್‌ ದಿ ಸರ್ಕಲ್‌ ಇನ್‌ ಇಂಡಿಯನ್‌ ಆರ್ಟ್ಸ್‌, ಷ್ಲೂರಲ್‌ ಕಲ್ಲರ್‌ ಲ್ಯಂಡ್‌


ಮೊನಾಲಿಥಿಕ್‌ ಸ್ಪಕ್ಷರ್‌ ಮತ್ತು ನಾಟ್ಕಶಾಸ್ತದಂತಹ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ಅಜಿ 5 ರ್‌" fr) ವ 1A)


1954ರ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಬ್ಯಾಲೆಯಲ್ಲಿ (ಕಾಳಿದಾಸ್‌, ಕುಮಾರ್‌ ಸಂಭವ್‌ ಮತ್ತು ಬಜ್‌
ಲೀಲಾ) ಪ್ರದರ್ಶನ ನೀಡಿದ್ದಾರೆ. ಇದು ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ ಆರಂಭಿಕ
ಕಾರ್ಯಕ್ರಮಗಳಲ್ಲಿ ಒಂದಾಗಿದೆ. 1995ರಲ್ಲಿ ಲಲಿತ್‌ ಕಲಾ ಅಕಾಡೆಮಿಯ ಫೆಲೋ ಆಗಿದ್ದರು. 2011ರಲ್ಲಿ
ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದರು.


ಆಧಾರ:ವಿಶ್ವವಾಣಿ, ದಿನಾಂಕ:18.09.2020
10. ಅಶೋಕ ಗಸ್ತಿ, ರಾಜ್ಯ ಸಭಾ ಸದಸ್ಯರು


ಸರಳ ಸಜ್ಜನಿಕೆಯ ಶ್ರೀ ಅಶೋಕ್‌ ಗಸ್ತಿಯವರು ದಿನಾಂಕ:17.09.2020ರಂದು ನಿಧನ ಹೊಂದಿರುತ್ತಾರೆ.
ರಾಜ್ಯಸಭೆಯ ಹಾಲಿ ಸದಸ್ಯರಾಗಿದ್ದ ಅವರು 1965ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಜನಿಸಿದ್ದು, ಕಾನೂನು
ಪದವೀಧರರಾಗಿದ್ದರು. ಬಡವರು ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ತಾಗಿ ಕಾರ್ಯನಿರ್ವಹಿಸಿದ್ದ
ಅವರು ಸರಳತೆಗೆ ಹೆಸರಾಗಿದ್ದರು. ಶ್ರೀಯುತರ ಸೇವೆಯನ್ನು ಗುರುತಿಸಿ ಸರ್ಕಾರವು 2012ರಲ್ಲಿ
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು.
2020ರಲ್ಲಿ ರಾಜ್ಯದಿಂದ ರಾಜ್ಯಸಭೆಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಚುನಾಯಿತರಾಗಿದ್ದರು.


ಆಧಾರ:ಸಂತಾನ ಸೂಚನೆ ನಿರ್ಣಯದಂತೆ
11. ಶ್ರೀ ಕೇಶವಾನಂದ ಭಾರತಿ ಸ್ಪಾಮೀಜಿ


ಶ್ರೀ ಕೇಶವಾನಂದ ಭಾರತಿ ಸ್ಪಾಮೀಜಿ ಅವರು ದಿನಾಂಕ:05.09.2020ರಂದು ನಿಧನ ಹೊಂದಿರುತ್ತಾರೆ.
ಕಾಸರಗೋಡಿನಲ್ಲಿರುವ ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶರಾದ ಶ್ರೀ ಕೇಶವಾನಂದ
ಭಾರತಿ ಸ್ವಾಮೀಜಿ ಅವರು ಅತೀ ಹೆಚ್ಚು ಚಾತುರ್ಮಾಸ್ಯ ವ್ರತವನ್ನು ಕೈಗೊಂಡ ವಿರಳ ಯತಿಗಳಲ್ಲಿ ಒಬ್ಬರಾಗಿ
ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃಶಿಕ ಜಗತ್ತಿಗೆ ಮಾರ್ಗದರ್ಶಿಯಾಗಿದ್ದರು. ಶ್ರೀಗಳು ಮಹಾ
ಕಲಾ ತಪಸ್ಸಿಯಾಗಿ ತೋಟಕಾಚಾರ್ಯ ಪರಂಪರೆಯ ಯತಿ ಶ್ರೇಷ್ಠರಾಗಿ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ
ಪುನರುತ್ಸಾನದಲ್ಲಿ ವೈವಿಧ್ಯಪೂರ್ಣ ಕೊಡುಗೆಗಳ ಮೂಲಕ ಗಣನೀಯ ಸಾಧನೆ ಮಾಡಿದ್ದರು. ಕೇರಳ ಸರ್ಕಾರವು
1970ರಲ್ಲಿ ಜಾರಿಗೆ ತಂದಿದ್ದ ಭೂ ಸುಧಾರಣೆ ಕಾಯ್ದೆಯ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ
ದಾಖಲಿಸಿ ಸಂವಿಧಾನದ ಮೂಲ ರಚನೆಯನ್ನು ಸಂಸತ್ತು ಬದಲಾಯಿಸಲು ಸಾಧ್ಯವಿಲ್ಲ ಎಂದು
ನ್ಯಾಯಮೂರ್ತಿಗಳಿದ್ದ ಗರಿಷ್ಠ ಸಾಮರ್ಥ್ಯದ ಪೀಠವು ಐತಿಹಾಸಿಕ ತೀರ್ಪನ್ನು ನೀಡಲು ಕಾರಣಕರ್ತರಾಗಿದ್ದರು.
ಇದು ದೇಶದಲ್ಲಿ ಕೇಶವಾನಂದ ಭಾರತಿ ಪ್ರಕರಣವೆಂದು ಖ್ಯಾತಿಗೊಂಡಿದೆ.


243


12. ಪಂಡಿತ್‌ ಜಸ್‌ರಾಜ್‌, ಶಾಸ್ತ್ರೀಯ ಸಂಗೀತಗಾರರು
=


ಶಾಸ್ತೀಯ ಸಂಗೀತದ ದಂತಕತೆ ಪಂಡಿತ್‌ ಜಸ್‌ರಾಜ್‌ ಅವರು ದಿನಾಂಕ:17.08.2020ರಂದು ನಿಧನ
ಹೊಂದಿರುತ್ತಾರೆ. ಸುಪ್ಪಸಿದ್ದ ಶಾಸ್ತ್ರೀಯ ಸಂಗೀತಗಾರರಾದ ಅವರು 28.01.1930ರಂದು ಹರಿಯಾಣದಲ್ಲಿ
ಜನಿಸಿದ್ದರು. ಚಿಕ್ಕಂದಿನಿಂದಲೇ ಹಾಡುಗಾರರಾಗಿದ್ದರು. ಶಾಸ್ತ್ರೀಯ ಸಂಗೀತದ ಜೊತೆ ತಬಲಾ, ಸಿತಾರ್‌,
ಸರೋದ್‌ ಕಲಿಕೆಯಲ್ಲೂ ಆಸಕ್ತಿ ಹೊಂದಿದ್ದರು. ಶಾಸ್ತ್ರೀಯ” ಸಂಗೀತದಲ್ಲಿ ಥಠುಮರಿ, ಖಯಾಲ್‌ ಅಂತಹ
ಪ್ರಕಾರಗಳನ್ನು ಪರಿಚಯಿಸಿ, ಶಾಸ್ತೀಯ ಸಂಗೀತವನ್ನು ಪೇಶ-ವದೇಶಗಳಿಗೆ ಕೊಂಡೊಯ್ದ ಕೀರ್ತಿಯು ಅವರಿಗೆ
ಸಲ್ಲುತ್ತದೆ. ನ ಸ್ಥಾಪಿಸಿದ ಸರಗೀತ ಶಾಲೆಗಳು ಅಟ್ಲಾಂಟಾ, ವ್ಯಾಂಕೋವರ್‌, ಟೊರೊಂಟೋ, ನ್ಯೂಯಾರ್ಕ್‌,
ಪಿಟ್ನ್‌ ಬರ್ಗ್‌, ಮುಂಬೈ, ಕೇರಳದಲ್ಲಿ ಅನೇಕ ಸಂಗೀತ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತಿವೆ. ಪದ ಶ್ರೀ,
ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಥೃತರಾಗಿದ್ದ ಅವರು ಸಂಗೀತ ಮಾರ್ತಾಂಡ ಎಂಬ
ಬಿರುದನ್ನು ಪಡೆದಿದ್ದರು. ಸೌರಮಂಡಲದ ಪುಟ್ಟ ಗಹ ಒಂದಕ್ಕೆ ಅವರ ಹೆಸರನ್ನು ಇಡಲಾಗಿದ್ದು, ಇಂಥ ಗೌರವ
ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.


ಆಧಾರ:ಸಂತಾನ ಸೂಚನೆ ನಿರ್ಣಯದಂತೆ
13. ಸುರೇಶ್‌ ಚನ್ನಬಸಪ್ಪ ಅಂಗಡಿ, ಕೇಂದ್ರ ಸಚಿವರು


ಕೊರೋನಾ ಸೋಂಕಿಗೆ ತುತ್ತಾಗಿ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ರೈಲ್ವೆ
ಖಾತೆ ರಾಜ್ಯ ಸಚಿವ, ಬೆಳೆಗಾವಿ ಸಂಸದ ಸುರೇಶ್‌ ಅಂಗಡಿ ಅವರು ದಿನಾಂಕ: 23.09.2020ರಂದು ಕೋವಿಡ್‌ಗೆ
ಬಲಿಯಾದ ಮೊದಲ ಕೇಂದ್ರ ಸಚಿವರಾಗಿದ್ದಾರೆ. ಸುರೇಶ್‌ ಅಂಗಡಿ ಅವರಿಗೆ ಸೆಪ್ಲೆಂಬರ್‌ 11ರಂದು ಸೋಂಕು
ದೃಢಪಟ್ಟಿತ್ತು.
ಸತತ ನಾಲ್ಕು ಬಾರಿ ಗೆಲುವು:-ಬೆಳಗಾವಿ ತಾಲೂಕಿನ ಕೆಕೆ. ಕೊಪ್ಪ ಗ್ರಾಮದವರಾದ ಸುರೇಶ್‌ ಅಂಗಡಿ ಅವರು
ಚನ್ನಬಸಪ್ಪ ಅಂಗಡಿ, ಸೋಮವ್ವ ದಂಪತಿ 2ನೇ ಪುತ್ರ. ಕಾನೂನು ಪದವೀಧರರಾಗಿದ್ದ ಅವರು ತಮ್ಮದೇ ಹೆಸರಿನ
ಪ್ರತಿಷ್ಠಾನದ ಮೂಲಕ ನರ್ಸರಿಯಿಂದ ಎಂಜಿನೀಯರಿಂಗ್‌ವರೆಗೆ ಹಲವು ಶಿಕ್ಷಣ ಸಂಸ್ಥೆಗಳನ್ನು
ಮುನ್ನೆಡೆಸುತ್ತಿದ್ದರು.

ಕೇಂದ್ರದ ಹಾಲಿ ರೈಲ್ವ ಖಾತೆಯ ರಾಜ್ಯ ಸಚಿವರಾಗಿದ್ದ ಅವರು ದಿನಾಂಕ: 01.06.1955ರಂದು ಬೆಳಗಾವಿ
ಜಿಲ್ಲೆಯ ಕೆ. ಕೊಪ್ಪ ಗಾಮದಲ್ಲಿ ಜನಿಸಿದ್ದು, ಬಿ.ಕಾಂ ಹಾಗೂ ಎಲ್‌ಎಲ್‌.ಬಿ. ಪದವೀಧರರಾಗಿದ್ದರು. ವೃತ್ತಿಯಲ್ಲಿ
ಉದ್ಯಮಿಯಾಗಿದ್ದು, ಸಾಮಾಜಿಕ ಸೇವೆಗಳಲ್ಲಿಯೂ ಆಸಕ್ತಿ ಹೊಂದಿದ್ದ ಅವರು 2004ರಲ್ಲಿ ಮೊದಲನೇ ಬಾರಿಗೆ
ಲೋಕಸಭೆಗೆ ಆಯ್ಕೆಯಾಗಿದ್ದು, ನಂತರ 2009, 20144 ಹಾಗೂ 2019ರಲ್ಲಿ ಸತತವಾಗಿ ನಾಲ್ಕು ಬಾರಿ
ಚುನಾಯಿತರಾಗಿದ್ದರು. ಸಂಸತ್ತಿನ ವಿವಿಧ ಸ್ಥಾಯಿ ಸಮಿತಿಗಳಲ್ಲ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದ ಅವರು
2019ರಲ್ಲಿ ರೈಲ್ವ ಖಾತೆಯ ರಾಜ್ಯ ಸಚಿವರಾಗಿ ಬೆಳಗಾವಿ - ಬೆಂಗಳೂರು ಸೂಪರ್‌ ಫಾಸ್ಟ್‌ ರೈಲು, ಬೆಳಗಾವಿ -
ಕಿತ್ತೂರು - ಧಾರವಾಡ ರೈಲು ಮಾರ್ಗ ಸಮೀಕ್ಷೆಗೆ ಅನುಮೋದನೆ ಸೇರಿದಂತೆ ರಾಜ್ಯಕ್ಕೆ ಹಲವು ಕೊಡುಗೆಗಳನ್ನು
ನೀಡಿದ್ದರು. ಉತ್ತರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ರೈಲ್ವೆ ಯೋಜನೆಗಳಿಗೆ ಜೀವ ತುಂಬುವ ಗುರಿ
ಹೊಂದಿದ್ದರು. ಬಡ ಜನರ ಶಿಕ್ಷಣದ ಕುರಿತು ವಿಶೇಷ ಕಾಳಜಿ ಹೊಂದಿದ್ದ ಶ್ರೀಯುತರು ನರ್ಸರಿಯಿಂದ
ಇಂಜಿನಿಯರಿಂಗ್‌ವರೆಗೆ ಅತ್ಯಾಧುನಿಕ ಅನುಕೂಲಗಳಿರುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದರು. "ಜನರಿಂದಲೇ
ಮೇಲೆ ಬಂದಿದ್ದೇನೆ, ಯಾವಾಗಲೂ ಜನರಿಗಾಗಿ ದುಡಿಯುತ್ತೇನೆ" ಎಂಬುದು ಅವರ ಧ್ಯೇಯ ವಾಕ್ಕವಾಗಿತ್ತು.


ಪ್ರಧಾನಿ ಮೋದಿ ಸಂತಾಪ:- ಕರ್ನಾಟಕದಲ್ಲಿ ಬಿಜೆಪಿಯ ಬಲವರ್ಧನೆಗೆ ಶ್ರಮಿಸಿದ ಸುರೇಶ್‌ ಅಂಗಡಿ ಅವರು
ಅಪ್ರತಿಮ ಕಾರ್ಯಕರ್ತರಾಗಿದ್ದರು. ಅವರೊಬ್ಬ ಉತ್ತಮ ಸಂಸದ ಹಾಗೂ ಸಚಿವರಾಗಿದ್ದರು. ಅವರ
ಅಗಲಿಕೆಯಿಂದ ತೀವ್ರ ನೋವಾಗಿದೆ. ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಅವರ ಸಾವಿನ ನೋವನ್ನು
ಭರಿಸುವ ಶಕ್ತಿ ನೀಡಲಿ ಎಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.


ಆಧಾರ:ಕನ್ನಡಪುಭ, ದಿನಾಂಕ:24.02.2020


244


14. ಡಾ:ಎಸ್‌.ಪಿ.ಬಾಲಸುಬ್ರಮಣ್ಯಂ, ಖ್ಯಾತ ಗಾಯಕ

ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ, ಖ್ಯಾತ ಗಾಯಕ, ಪದ್ಮಶ್ರೀ ಪುರಸ್ಮೃಶ ಎಸ್‌.ಪಿ.ಬಾಲಸುಬ್ರಮ್ಯಂ
ದಿನಾಂಕ:25.09.2020ರಂದು ವಿಧಿವಶರಾಗಿದ್ದಾರೆ. ಆಗಸ್ಟ್‌ 5ರಂದು ಎಸ್‌ಪಿಬಿ ಅವರಿಗೆ ಕೊರೋನಾ ಸೋಂಕು
ಇರುವುದು ತಿಳಿದಿತ್ತು ಅವರ ಆರೋಗ್ಯ ಮತ್ತಷ್ಟು ವಿಷಮಗೊಂಡಿತ್ತು ಹೃದಯಾಘಾತದಿಂದ
ಕೊನೆಯುಸಿರೆಳೆದಿದ್ದಾರೆ.

ಡಾ॥ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ದಿನಾಂಕ:04.06.1946ರಂದು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ
ಜನಿಸಿದ್ದರು. ಭಾರತದ 16 ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಗಾಯಕರು ಇವರೊಬ್ಬರೇ.
ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ಚಲನಚಿತ್ರ ನಟರಾಗಿ ಹಾಗೂ
ಚಿತ್ರ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ ಒಂದೇ ದಿನ 21 ಹಾಡುಗಳನ್ನು
ಹಾಡಿ ದಾಖಲೆಯನ್ನು ನಿರ್ಮಿಸಿರುವುದು ಇವರ ಹೆಗ್ಗಳಿಕೆ. ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ
ಸಂಗಮ, ಸ್ಟಾತಿ ಮುತ್ಯಂ, ರುದ್ರವೀಣಾ ಹಾಗೂ ಏಕ್‌ ದೂಜೆ ಕೇ ಲಿಯೇ ಚಿತ್ರಗಳಲ್ಲಿ ಹಾಡಿದ ಹಾಡುಗಳಿಗೆ
ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಪದ್ಮಶ್ರಿ, ಪದ್ಮಭೂಷಣ, ಹಲವು ಡಾಕ್ಟರೇಟ್‌ ಪದವಿಗಳು, ಇನ್ನಿತರ
ಸಾವಿರಾರು ಗೌರವ ಪ್ರಶಸ್ತಿಗಳನ್ನು ಶ್ರೀ ಬಾಲು ಅವರು ಪಡೆದಿದ್ದಾರೆ. ನಾಲ್ಕು ಭಾಷೆಗಳಲ್ಲಿ 6 ರಾಷ್ಟ್ರ ಪ್ರಶಸ್ತಿ, 25
ಬಾರಿ ಆಂಧಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ
ಪ್ರಶಸ್ಲಿಯನ್ನು ಪಡೆದಿರುತ್ತಾರೆ.

ತಮ್ಮ ಗಾಯನ, ನಟನೆ ಹಾಗೂ ಸರಳ ವ್ಯಕ್ತಿತ್ನದಿಂದ ರಾಷ್ಟದ ಜನ ಮಾನಸದಲ್ಲಿ ಅಜ್ಛಳಿಯದ
ಹೆಗ್ಗುರುತನ್ನು "ಬಿಟ್ಟಿರುವ ಗಾನ ಕೋಗಿಲೆ ಅವರ ನಿಧನದಿಂದ ಚಲನ ಚಿತ್ರರಂಗ ಅಪಾರ ನಪ್ಪಕ್ಕೆ ಒಳಗಾಗಿದೆ.
ಗಣ್ಯರ ಸಂತಾಪ:-ಎಸ್‌ಪಿಬಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟಪತಿ ರಾಮನಾಥ್‌ ಕೋವಿಂದ್‌,
ಉಪ ರಾಷ್ಟಪತಿ ಎಂ.ವೆಂಕಯ್ಯನಾಯ್ದು, ಲತಾ ಮಂಗೇಶ್ವರ್‌, ಅಮಿತಾಬ್‌ ಬಚ್ಚನ್‌, ವಿಪಕ್ಷ ನಾಯಕ
ಸಿದ್ದರಾಮಯ್ಯ ಸೇರಿ ರಾಜಕೀಯ ಧುರೀಣರು, ಚಿತ್ರರಂಗದ ಕಲಾವಿದರು, ಸಂಗೀತಗಾರರು ತೀವ್ರ ಶೋಕ
ವ್ಯಕ್ತಪಡಿಸಿದ್ದಾರೆ.

ಗಾನ ಗಾರುಡಿಗನ ಕೊನೆಯ ದಿನಗಳು ಕೊರೋನಾದೊಂದಿಗೆ ಮುಗಿದಿದೆ. ಕೊರೋನಾ ಜಾಗೃತಿ ಗೀತೆ
ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಗಿಸಿದ್ದ ಎಸ್‌ಪಿಬಿ ಕೊರೋನಾದಿಂದಲೇ ಸಾವನ್ನಪಿದ್ದಾರೆ.


ಬಾಲಸುಬ್ರಮಣ್ಯಂ ಅವರ ನಿಧನದಿಂದ ಸಾಂಸ್ಕೃಶಿಕ ಜಗತ್ತು ಬಡವಾಗಿದೆ. ಅವರು ತಮ್ಮ ಮಧುರ
ಕಂಠಸಿರಿ ಮತ್ತು ಸಂಗೀತದಿಂದ ದಶಕಗಳ ಕಾಲ ಜನರನ್ನು ರಂಜಿಸಿದ್ದರು. ಈ ದುಃಖದ ಸಮಯದಲ್ಲಿ ಅವರ
ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಪ್ರಧಾನ ಮಂತ್ರಿ ನರೇಂದ್ರ
ಮೋದಿಯವರು ಹೇಳಿದ್ದಾರೆ.

ಎಸ್‌ಪಿಬಿ ಪದ್ಮಶ್ರೀ, ಪದ್ಮವಿಭೂಷಣ ಹಾಗೂ ಇನ್ನಿತರ ಪ್ರಶಸ್ತಿ ಗೌರವಗಳನ್ನು ಪಡೆದ ಸುಪಸಿದ್ದ
ಗಾಯಕ. ಅವರ ಹಾಡುಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿವೆ. ಮೃತರ ಆತ್ತಕ್ಕೆ ಶಾಂತಿ ದೊರೆಯಲಿ
ಎ೦ದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕನ್ನಡದಲ್ಲಿ ಒಂದೇ ದಿನ 17 ಹಾಡುಗಳ ಧ್ಧನಿಮುದಣ.
ಹಿಂದಿಯಲ್ಲಿ ಒಂದೇ ದಿನ 19 ಹಾಡುಗಳ ಧ್ಧನಿಮುದಣ.
ನಾಲ್ಕು ಭಾಷೆಗಳಲ್ಲಿ ಒಟ್ಟು ಆರು ರಾಷ್ಟ್ರ ಪ್ರಶಸ್ತಿಗಳು.
25 ಬಾರಿ ಆಂಧ್ರಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ.
4 ಭಾಷೆಗಳಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಸಾಧಕ.
ಹಲವು ವಿವಿಗಳಲ್ಲಿ ಗೌರವ ಡಾಕ್ಟರೇಟ್‌.
15 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡು.
ಗಿನ್ನಿಸ್‌ ದಾಖಲೆ ಸೇರಿದ ಎಸ್‌ಪಿಬಿ ಹಾಡುಗಾರಿಕೆ.


VVVVVVVV


ಆಧಾರ:ವಿಶ್ವವಾಣಿ, ದಿನಾಂಕ:26.09.2020


245


15. ಶ್ರೀ ಬಿ. ನಾರಾಯಣರಾವ್‌, ಮಾನ್ಯ ಸದಸ್ಯರು


15ನೇ ವಿಧಾನಸಭೆಯ ಸದಸ್ಯರಾಗಿದ್ದ ಶ್ರೀ ಬಿ. ನಾರಾಯಣರಾವ್‌ರವರು ದಿನಾಂಕ:23.09.2020
ರಂದು ನಿಧನರಾಗಿದ್ದಾರೆ. ಹಾಲಿ ಸದಸ್ಯರಾಗಿದ್ದ ಅವರು ಬೀದರ್‌ ಜಿಲ್ಲೆಯ ಬಸಂತಪುರದಲ್ಲಿ
ದಿನಾಂಕ:01.07.1955ರ೦ದು ಜನಿಸಿದ್ದು, ಎಂ.ಎ. ಪದವೀಧರರಾಗಿದ್ದರು. ಬಸವಕಲ್ಯಾಣ ಕ್ಷೇತ್ರದಿಂದ ವಿಧಾನಸಭೆಗೆ
ಚುನಾಯಿತರಾಗಿದ್ದ ಅವರು 2019ರಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ
ಕಾರ್ಯನಿರ್ವಹಿಸಿರುತ್ತಾರೆ.


ಆಧಾರ:ಸಂತಾನ ಸೂಚನೆ ನಿರ್ಣಯದಂತೆ
16. ಜಸ್ಪಂತ್‌ ಸಿಂಗ್‌, ಮಾಜಿ ರಕ್ಷಣಾ ಸಚಿವರು


ಬಿಜೆಪಿಯ ಸಂಸ್ಥಾಪಕ ಸದಸ್ಯ ಕೇಂದದ ಮಾಜಿ ರಕ್ಷಣಾ ಸಚಿವ ಜಸ್ವಂತ್‌ ಸಿಂಗ್‌(82)
ಕೊನೆಯುಸಿರೆಳೆದರು.


ಸೇನಾಧಿಕಾರಿಯಾಗಿ, ಲೇಖಕರಾಗಿ, ಕೇಂದ್ರ ಸಚಿವರಾಗಿ ಹೀಗೆ ತಮ್ಮ ಜೀವನ ಪಥದಲ್ಲಿ ಹಲವು
ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದವರು "ನಿಷ್ಠುರ ರಾಜಕಾರಣಿ” ಜಸ್ವಂತ್‌ ಸಿಂಗ್‌. ಅದರಲ್ಲೂ 1999ರಲ್ಲಿ
ನಡೆದಿದ್ದ ಕಂದಹಾರ್‌ ಅಪಹರಣ ಬಿಕ್ಕಟ್ಟನ್ನು ವಿದೇಶಾಂಗ ಸಚಿವರಾಗಿ ಸಿಂಗ್‌ ನಿಭಾಯಿಸಿದ ರೀತಿ
ಎಲ್ಲದಕ್ಕಿಂತಲೂ ಪ್ರಮುಖ. ಘಟನೆಗೆ ಸಂಬಂಧಿಸಿದಂತೆ ಅವರ ಪಾತ್ರ ತೆಗೆದುಕೊಂಡ ನಿರ್ಧಾರ ಇಂದಿಗೂ
ಚರ್ಚೆ ಹಾಗೂ ವಿಶ್ಲೇಷಣೆಗೆ ಕಾರಣವಾಗಿದೆ. 1999ರ ಕ್ರಿಸ್‌ಮಸ್‌ ಮುನ್ನಾದಿನ ಸಂಜೆ ದೆಹಲಿಗೆ ಹೊರಟಿದ್ದ 161
ಪ್ರಯಾಣಿಕರಿದ್ದ ಇಂಡಿಯನ್‌ ಏರ್‌ಲೈನ್ಸ್‌ (ಐಸಿ 814) ವಿಮಾನವನ್ನು ಕಠ್ಮಂಡುವಿನಿಂದ ಅಪಹರಿಸಿ
ಅಫ್ರಾನಿಸ್ಥಾನದ ಕಂದಹಾರ್‌ಗೆ ಕೊಂಡೊಯ್ಯಲಾಗಿತ್ತು.


ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಸೇರಿದಂತೆ ಮೂವರು ಉಗ್ರರ
ಜೊತೆ ಅಪಹರಣಕಾರರ ಜೊತೆ ಸಂಧಾನಕ್ಕೆ ಸಿಂಗ್‌ ಕಂದಹಾರ್‌ಗೆ ತೆರಳಿದ್ದರು. ಉಗ್ರರನ್ನು ಖುದ್ದಾಗಿ
ಕರೆದೊಯ್ದಿದ್ದಕ್ಕಾಗಿ ಸಿಂಗ್‌ ಸಾಕಷ್ಟು ಟೀಕೆಗೆ ಒಳಗಾಗಿದ್ದರು. "ಪ್ರಯಾಣಿಕರ ಬಿಡುಗಡೆಗಾಗಿ ಉಗ್ರರನ್ನು
ಹಸ್ತಾಂತರಿಸುವ ನಿರ್ಧಾರ ಬಹಳ ಕಠಿಣವಾಗಿತ್ತು. ಮೊದಲಿಗೆ ಯಾವುದೇ ಒಪ್ಪಂದಕ್ಕೆ ಸಿದ್ಧವಿರಲಿಲ್ಲ. ಆದರೆ
ಸಮಯ ಉರುಳಿದಂತೆ ನಿರ್ಧಾರ ಬದಲಾಯಿತು” ಎಂದು ತಮ್ಮ ಪುಸ್ತಕದಲ್ಲಿ ಸಿಂಗ್‌ ಉಲ್ಲೇಖಿಸಿದ್ದರು.


ವಿದೇಶಾಂಗ ಸಚಿವರಾಗಿ ಸಿಂಗ್‌ ಕಾರ್ಯನಿರ್ವಹಿಸಿದ 1998ರಿಂದ 2002ರ ಅವಧಿಯೇ ಹೆಚ್ಚಿನ
ಚರ್ಚೆಗೆ ಒಳಗಾಗಿದೆ. ಕಾರ್ಗಿಲ್‌ ಯುದ್ದ, ಅಣುಬಾಂಬ್‌ ಪರೀಕ್ಷೆಯ ಬಳಿಕ ಪಾಶ್ಚಿಮಾತ್ಯ ರಾಷ್ಟಗಳಿಂದ
ನಿರ್ಬಂಧ, ಸಂಸತ್‌ ಮೇಲೆ ಉಗರ ದಾಳಿ ಹೀಗೆ ನಿರಂತರವಾದ ಬಿಕ್ಕಟ್ಟಿನ ವ ಭಾರತವನ್ನು
ಯಶಸ್ವಿಯಾಗಿ ಸಿಂಗ್‌ ಮುನೆ ಡಿಸಿದ್ದರು.


ರಾಜಕೀಯ ವಲಯದಲ್ಲಿ ಎಲ್ಲರೊಂದಿಗೂ ಸಿಂಗ್‌ ಉತ್ತಮ ಒಡನಾಟ ಹೊಂದಿದ್ದರು. ಆದರೆ, ತಮ್ಮ
ಅಭಿಪ್ರಾಯಗಳನ್ನು ಎಂದಿಗೂ ಮುಚ್ಚಿಡುತ್ತಿರಲಿಲ್ಲ. ಬಿಜೆಪಿ ಸಂಸ್ಥಾಪನೆಯಾದಗಿನಿಂದಲೂ (1980)ಪಕ್ಷದ
ಸದಸ್ಯರಾಗಿದ್ದ ಸಿಂಗ್‌ ಅವರನ್ನು ಎರಡು ಬಾರಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. 2009ರಲ್ಲಿ *ಜಿನ್ಹಾ-ಇಂಡಿಯಾ
ಪಾರ್ಟಿಷನ್‌, ಇಂಡಿಪೆಂಡೆನ್ಸ್‌ ಹೆಸರಿನ ಪುಸ್ತಕ ಪ್ರಕಟಿಸಿದ್ದರು. ಇದಕ್ಕಾಗಿ ಸಿಂಗ್‌ ಅವರನ್ನು ಪಕ್ಷದಿಂದ
ಉಚ್ಛಾಟಿಸಲಾಗಿತ್ತು. ಇದಾದ 10 ತಿಂಗಳಲ್ಲೇ ಅವರು ಪಕ್ಷಕ್ಕೆ ಮರಳಿದ್ದರು.


2014ರಲ್ಲಿ ಟಿಕೆಟ್‌ ದೊರೆಯದ ಕಾರಣಕ್ಕೆ ಪಕ್ಷದ ಆದೇಶವನ್ನು ಉಲ್ಲಂಘಿಸಿ, ಪಕ್ಷೇತರ ಅಭ್ವರ್ಥಿಯಾಗಿ


ಕಣಕ್ಕಿಳಿದ ಕಾರಣಕ್ಕೆ ಅವರನ್ನು ಉಚ್ಛಾಟಿಸಲಾಗಿತ್ತು. ಚುನಾವಣೆಯಲ್ಲಿ ಸಿಂಗ್‌ ಸೋತಿದ್ದರು. 1938ರ ಜನವರಿ
3ರಂದು ರಾಜಸ್ಥಾನದ ಸ ಜಿಲ್ಲೆಯ ಜಾಸೊಲ್‌ ಹಳ್ಳಿಯಲ್ಲಿ ಜನಿಸಿದ್ದ ಸಿಂಗ್‌, ಎಂಟು ವರ್ಷ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅಟಲ್‌ ಬಿಹಾರಿ ವಾಜಪೇಯ ಹಾಗೂ ಬಿಜೆಪಿ ಹಿರಿಯ ನಾಯಕ
ಎಲ್‌.ಕೆ.ಅಡ್ವಾಣಿ ಅವರಿಗೆ ಆಪ್ರರಾಗಿದ್ದ. ಸಿಂಗ್‌, ಹಣಕಾಸು, ವಿದೇಶಾಂಗ ಹಾಗೂ ರಕ್ಷಣಾ ಸಚಿವಾಲಯದ
ಜವಾಬ್ದಾರಿ ಹೊತ್ತಿದ್ದರು. 1980ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು ಐದು ಅವಧಿಗೆ ರಾಜ್ಯಸಭೆ ಸದಸ್ಯರಾಗಿ,


ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.


ಆಧಾರ:ಪ್ರಜಾವಾಣಿ, ದಿನಾಂಕ:28.09.2020


246


17. ವಿದ್ಧಾಂಸ ಶಾಂತವೀರಯ್ಯ, ಹಿರಿಯ ಸಾಹಿತಿ
ಅನಾರೋಗ್ಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಲೋಕದ ಹಿರಿಯ ವಿದ್ಧಾಂಸ ಹಾಗೂ ಪ್ರಖರ ವಾಗ್ರಿ
ಹೀ.ಚಿ. ಶಾಂತವೀರಯ್ಯ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕನ್ನಡ ಸಾಹಿತ್ಯ
ಚರಿತ್ರೆಯ ಸಂಪುಟಗಳು ಸೇರಿ ಹಲವು ಗಂಥಗಳನ್ನು ರಚಿಸಿದ್ದ ಅವರು ಹೀ.ಚಿ. ಎಂದೇ ಪ್ರಖ್ಯಾತರಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಸಹ ಸಂಪಾದಕರಾಗಿ ಸುದೀರ್ಫ ಕಾಲ ಸೇವೆ ಸಲ್ಲಿಸಿದ್ದರು.
ಆಧಾರ:ಕನ್ನಡಪ್ರಭ, ದಿನಾಂಕ:28.09.2020


247
ಭಾಗ-11
ಪ್ರಮುಖ ಲೇಖನಗಳು


1. ಕೊರೋನಾ ಸಂಕಷ್ಟವನ್ನು ಯುವ ಸಮುದಾಯ ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು


ಯುವಕರೇ, ಕೃಷಿಯತ್ತ ಬನ್ನಿ; ಬಂಗಾರ ಬೆಳೆಯಿರಿ: ಕೋವಿಡ್‌-19 ಜಗತ್ತನ್ನು ಮತ್ತೊಂದು ದಿಕ್ಕಿನತ್ತ ಕರೆದೊಯ್ಯುವ
ಮುನ್ನೂಚನೆ ಕಾಣುತ್ತಿದೆ. ಕೊರೋನಾ ನಂತರದ ಜಗತ್ತಿನ ಅಭಿವೃದ್ದಿಯ ಕುರಿತಂತೆ ಹೊಸ ವಿಶ್ಲೇಷಣೆಗಳು
ಆರಂಭವಾಗಿವೆ. ಕುಸಿದುಹೋದ ಆರ್ಥಿಕತೆಯಿಂದಾಗಿ ಉದ್ಯೋಗ ಸಮಸ್ಯೆ ತಲೆದೋರಿದೆ.


ಭಾರತ ಜಗತ್ತಿನ ಅತಿದೊಡ್ಡ ಮಾನವ ಸಂಪನ್ಮೂಲವನ್ನು ಹೊಂದಿದೆ. ವಿಶ್ವದ ಶ್ರೇಷ್ಠ ಕಂಪನಿಗಳು
ಭಾರತೀಯರ ಜ್ಞಾಧಕ್ಕೆ ಮಣೆ ಹಾಕಿ ಸ್ಪಾಗತಿಸುತ್ತವೆ ಎಂಬುದು ಎಲ್ಲರೂ ಒಪ್ಪತಕ್ಕ ವಿಚಾರ. ಆದರೆ ಅವರೆಲ್ಲರೂ
ಕೊರೋನಾ ಕಾರಣದಿಂದಾಗಿ ಇಂದು ಮರಳಿ ಮನೆಗೆ ಬಂದಿದ್ದಾರೆ. ಇವರನ್ನು ಇಲ್ಲಿಯೇ ಉಳಿಸಿಕೊಂಡು
ಸಮೃದ್ದ ರಾಷ್ಟ್ರ ಕಟ್ಟಲು ಇದೊಂದು ಸುವರ್ಣಾವಕಾಶವಾಗಿದೆ. ನಾವು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ
ಮುಂದುವರೆದಿದ್ದರೂ, ಭಾರತದ ಆತ್ಮ ಕೃಷಿಯಲ್ಲಿದೆ. ಕೃಷಿಯಲ್ಲಿ ಸರ್ವತೋಮುಖ ಅಭಿವೃದ್ದಿ ಸಾಧಿಸದೇ
ಭಾರತ ಸದೃಢವಾಗಲು ಸಾಧ್ಯವಿಲ್ಲ. ಹೀಗಾಗಿ ಕೊರೋನಾ ಸಂಕಷ್ಟವನ್ನು ಅವಕಾಶವಾಗಿ ಬಳಸಿಕೊಂಡು
ಕೃಷಿಯಲ್ಲಿ ಅಭಿವೃದ್ದಿ ಸಾಧಿಸಲು ಸಜ್ಞಾಗೋಣ.


ಭಾರತದ ರೈತರು ಹಲವಾರು ವಿಧದ ಬೆಳೆಗಳನ್ನು ಕಂಡುಹಿಡಿದು ಜಗತ್ತಿಗೆ ಪರಿಚಯಿಸಿದ್ದಾರೆ.
ಸ್ಪಾತಂತ್ಯದ ನಂತರ ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಭಾರತೀಯ ಕೃಷಿ ಕಾರ್ಮಿಕರು ಕೃಷಿಯಲ್ಲಿ
ಆಸಕ್ತಿ ಕಳೆದುಕೊಂಡು ನಗರಗಳತ್ತ ವಲಸೆ ಹೋದರು. ದೊಡ್ಡ-ದೊಡ್ಡ ಜಮೀನ್ನಾರಿಕೆಗಳು ಕಡಿಮೆಯಾದವು.
ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವುದು ಕೃಷಿ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿದೆ. ಆದರೂ ಸ್ಪಾತಂತ್ರ್ಯ
ಬಂದಾಗ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಸಿತಿ ಇತ್ತು. ಹಸಿರು ಕ್ರಾಂತಿ ಬಳಿಕ ಆಹಾರ
ಉತ್ಪಾದನೆಯಲ್ಲಿ ಸ್ಥಾವಲಂಬನೆ ಸಾಧಿಸಿದ್ದೇವೆ.


ಉದ್ಯಮ ಮತ್ತು ಸೇವಾ ವಲಯಕ್ಕೆ ಹೋಲಿಸಿದರೆ, ಕೃಷಿ ಕ್ಷೇತ್ರ ಅತ್ಯಂತ ಕಡಿಮೆ ಬೆಳವಣಿಗೆ ಕಂಡಿದೆ.
1951-52ರಿಂದ ಇಲ್ಲಿಯವರೆಗೆ ಉದ್ಯಮ ಕ್ಷೇತ್ರದ ಬೆಳವಣಿಗೆ ವಾರ್ಷಿಕ 6.1% ರಷ್ಟಾಗಿದ್ದರೆ, ಸೇವಾ ವಲಯ
6.2% ಪ್ರಗತಿ ಕಂಡಿದೆ. ಆದರೆ ಈ ಅವಧಿಯಲ್ಲಿ ಕೃಷಿ ಕ್ಷೇತ್ರದ ಪ್ರಗತಿ 2.9% ರಷ್ಟು ಮಾತ್ರ. ಈ ಅಸಮಾನತೆಯ
ಫಲವಾಗಿಯೇ, ದೇಶದ ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಪಾಲು ಕುಸಿದಿದೆ. ಸ್ವಾತಂತ್ಯ ಬಂದಾಗ ದೇಶದ ಒಟ್ಟು
ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಪಾಲು ಶೇ.53% ರಷ್ಟಿತ್ತು ಆದರೆ 2018-19ರ ಪ್ರಕಾರ 14.39% ಗೆ
ಇಳಿದಿದೆ.


ಕೊರೋನಾ ನಮ್ಮನ್ನು ಹಳ್ಳಿಗಳತ್ತ ಮುಖ ಮಾಡುವಂತೆ ಮಾಡಿದೆ. ಹಳ್ಳಿ ಸೇರಿದ ಯುವ ಜನತೆ
ಕೃಷಿಯಲ್ಲಿ ತೊಡಗುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಇದಕ್ಕೆ ಸಮಾಜ ಸರ್ಕಾರ, ಹೆತ್ತವರಿಂದ ಪ್ರೇರಣೆ
ಸಿಗಬೇಕು. ಕೃಷಿಯಲ್ಲಿ ಸಾಧನೆ ಮಾಡಿದವರು ತುಂಬ ಜನ ಇರಬಹುದು. ಆದರೆ, ಪರಿಪೂರ್ಣತೆ ಸಾಧಿಸಿದವರು
ಯಾರೂ ಇಲ್ಲ. ಪ್ರತಿವರ್ಷ ಹೊಸ ಅವಿಷ್ಠಾರಗಳು ಬರುತ್ತಿವೆ. ಪ್ರಕೃತಿ ಕೂಡ ಕೃಷಿಯನ್ನು ಯಾರ ಕೈಗೂ
ಕೊಟ್ಟಿಲ್ಲ. ಪ್ರಕೃತಿಯೊಂದಿಗಿನ ಹೋರಾಟವೇ ಕೃಷಿ. ವೈಜ್ಞಾನಿಕ ಸ್ಪರ್ಶ ಕೊಟ್ಟು ವ್ಯಾಪಾರ ಮನೋಭಾವದಿಂದ
ದುಡಿದರೆ ಕೃಷಿಯಲ್ಲಿ ಲಾಭವಿದೆ.


ತಂತ್ರಜ್ಞಾನ ಅರಿತ ಯುವಕರು ಕೃಷಿಯಲ್ಲಿ ತೊಡಗಿಕೊಂಡರೆ ವೈಜ್ಞಾನಿಕ ಟಚ್‌ ಕೊಡಲು ಸಾಧ್ಯವಿದೆ.
ಒಬ್ಬ ವಿದ್ಯಾವಂತ ಯುವಕ ತನ್ನದೇ ಆದ ವಿಧಾನದಲ್ಲಿ ಕೃಷಿ ಮಾಡಬಲ್ಲ ಎಂಬ ಭರವಸೆ ಇದೆ. ಯಾವುದೇ
ಕ್ಷೇತ್ರದಲ್ಲಿ ಒಂದೇ ದಿನದಲ್ಲಿ ಯಶಸ್ಸು ಸಿಗುವುದಿಲ್ಲ. ವೈಜ್ಞಾನಿಕ ಮಾದರಿ ಅನುಸರಿಸಿ ಫಲವತ್ತತೆ
ಕಾಪಾಡಿಕೊಂಡು ಪರಿಶ್ರಮದಿಂದ ದುಡಿದರೆ ಯಶಸ್ಸು ನಿಶ್ಚಿತ. ಕೃಷಿಯಲ್ಲಿ ನೆಮ್ಮದಿ, ಖುಷಿ, ಆರೋಗ್ಯ ಎಲ್ಲವೂ
ಇದೆ.


ಕೃಷಿತೋ ನಾಸ್ತಿ ದುರ್ಭಿಕ್ಷ: ಕೃಷಿ ಕೇವಲ ಕುಟುಂಬದ ಮೂಲ ಕೆಲಸವಾಗದೇ, ಲಾಭದಾಯಕ


ಉದ್ಯಮವಾಗಿ ರೂಪುಗೊಳ್ಳಬೇಕು. ಸಾಮಾನ್ಯ ಕೂಲಿ ಕೆಲಸ ಎಂಬ ಭಾವನೆಯಿಂದ ಹೊರಬಂದು, ಕೃಷಿಗೂ


248


ವೃತ್ತಿಪರತೆ ತುಂಬಬೇಕು. ವ್ಯವಸಾಯ ಅನಕ್ಷರಸ್ಥರು, ಶಾಲೆ ಬಿಟ್ಟವರು ಮಾಡುವ ಉದ್ಯೋಗವಾಗದೇ,
ಕೃಷಿಗಾಗಿಯೇ ಹೊಸದನ್ನು ಕಲಿತು ಕೃಷಿಯಲ್ಲಿ ಬದುಕು ರೂಪಿಸಿಕೊಳ್ಳುವ ಗಟ್ಟಿತನ ಬರಬೇಕು. ಮೊದಲು ರೈತ
ನಂತರ ವ್ಯಾಪಾರಿ ಹಾಗೂ ವಿಜ್ಞಾನಿಯಾಗಬೇಕು. ಇದರಿಂದ ರೈತರ ಜೀವನ ಉಜ್ವಲ ಆಗುತ್ತದೆ.


ಕೃಷಿ ಆಧಾರಿತ ಉದ್ಯಮಕ್ಕೆ ಆದ್ಯತೆ ಸಿಗಲಿ: ಅಗಿಕಲ್ಲರ್‌ ಜೊತೆಗೆ ಅಗಿಬ್ಯುಸಿನೆಸ್‌ ಬೆಳೆಯಬೇಕು. ಕೃಷಿ ಉತ್ತನ್ನಗಳ
ಮೌಲ್ಯವರ್ಧನೆ ಆಗಬೇಕು. ಕೃಷಿಗೆ ಪೂರಕ ಮಾರುಕಟ್ಟೆ ಸ್ಥಳೀಯ ಮಟ್ಟದಲ್ಲಿಯೇ ದೊರೆಯಬೇಕು.
ಆದ್ದರಿಂದ ನಮ್ಮಲ್ಲಿ ಕೃಷಿ ಆಧಾರಿತ ಕೈಗಾರಿಕಾ ವಲಯಗಳ ವಿಸ್ಪರಣೆಯಾಗಬೇಕು. ಯುವಕರು ಕೃಷಿಗೆ ಬಂದರೆ
ವ್ಯವಸಾಯದ ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ, ಮೊಲ ಸಾಕಾಣಿಕೆ, ಆಹಾರ ಹಾಗೂ ಮಸಾಲೆ ಪದಾರ್ಥ
ಸಂಸ್ಕರಣೆ, ಅಣಬೆ ಬೇಸಾಯ, ಜೇನು, ರೇಷ್ಮೆ ಸಾಕಾಣಿಕೆ, ಎರೆಹುಳು ಗೊಬ್ಬರ, ಹಣ್ಣು ತರಕಾರಿ, ಮೀನುಗಾರಿಕೆ,
ಗ್ಲೀನ್‌ ಹೌಸ್‌, ನರ್ಸರಿ, ಬೆಲ್ಲ ತಯಾರಿಕೆ, ಜೈವಿಕ ಹಾಗೂ ರಸಗೊಬ್ಬರ ಮಾರಾಟದಂತಹ ಚಟುವಟಿಕೆಗಳಲ್ಲಿ


ತೊಡಗಿಕೊಳ್ಳಬಹುದು.


ತಮ್ಮ ಹಳ್ಳಿಗಳಲ್ಲಿಯೇ ಕೃಷಿಗೆ ಮಾರುಕಟ್ಟೆ ಒದಗಿಸಲು ಉದ್ಯಮಗಳನ್ನು ಪ್ರಾರಂಭಿಸಲು ಬಹುರಾಷ್ಟ್ರಿಯ
ಕಂಪನಿಗಳಲ್ಲಿ ದುಡಿಯುವ ಯುವಕರಿಗೆ ವಿಪುಲ ಅವಕಾಶಗಳಿವೆ. ಸಕ್ಕರೆ, ಕಾಟನ್‌, ರೈಸ್‌ ಮಿಲ್‌, ಪ್ಲೋರ್‌ಮಿಲ್‌,
ಜ್ಯೂಸ್‌ ಇಂಡಸ್ಟ್ರೀ, ಆಯಿಲ್‌ಮಿಲ್‌, ಪುಡ್‌ ಪ್ರಾಡೆಕ್ಟ್‌, ಕೃಷಿ ಉಪಕರಣಗಳ ತಯಾರಿಕಾ ಘಟಕ, ಸ್ಪಾರ್ಜ್‌
ಇಂಡಸ್ಟೀಯಂತಹ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಸ್ಥಳೀಯವಾಗಿ ಕೃಷಿಗೆ ಉತ್ತಮ ಮಾರುಕಟ್ಟೆ
ಒದಗಿಸುವುದರೊಂದಿಗೆ ಸ್ವಳೀಯವಾಗಿ ಉದ್ಯೋಗ ಸೃಷ್ಟಿಗೂ ಸಹಕಾರಿಯಾಗುತದೆ. ತೊರೋನಾದಿಂದ
ಉದ್ಯೋಗ ಕಳೆದುಕೊಂಡವರಿಗೂ ಟಿಂಕು ಉದ್ಯಮಗಳಲ್ಲಿನ ಹಣಕಾಸಿನ ವಹಿವಾಟು ಕೃಷಿಗೆ
ವರ್ಗಾವಣೆಯಾಗಬಹುದು. ಹೊಸ ಹಣವನ್ನು ಸೃಷ್ಟಿಸುವುದು ಕೃಷಿ ಮತ್ತು ಕೃಷಿ ಉದ್ಯಮಗಳಿಂದ ಮಾತ್ರ
ಸಾಧ್ಯವಿದೆ.


ಪರಾಮರ್ಶೆ ಅಗತ್ಯವಿದೆ: ಯುವಕರನ್ನು ಕೃಷಿಗೆ ಸೆಳೆಯಲು ಸರ್ಕಾರ ಯುವ ಕೃಷಿ ನೀತಿ ಪ್ರಕಟಿಸಬೇಕು.
ಕೃಷಿಯಲ್ಲಿ ತೊಡಗಿಕೊಳ್ಳುವ ಯುವಕರನ್ನು ಪ್ರೋತ್ಲಾಹಿಸಬೇಕು. ಸರ್ಕಾರದ ಯೋಜನೆಗಳಲ್ಲಿ ಪಾರದರ್ಶಕತೆ
ಮೂಡಬೇಕು. ಸುಧಾರಿತ ಪದ್ಧತಿ. ಹೊಸ ತಂತ್ರಜ್ಞಾನ, ಪೂರಕ ಮಾರುಕಟ್ಟೆ ವ್ಯವಸ್ಥೆ, ಭೂಮಿಯ ಫಲವತ್ತ
ವೃದ್ದಿಗೆ ರೈತರಿಗೆ ಮಾರ್ಗದರ್ಶನ ನೀಡಬೇಕು. ಏಕಬೆಳೆ ಪದ್ಧತಿಗಿಂತ ಬಹುಬೆಳೆ” ಪದ್ದತಿಗೆ ನಮ್ಮ ಕೈತ
EE ಇದು ರೈತನ ಆರ್ಥಿಕಾಭಿವೃದ್ಧಿಯ ಜೊತೆಗೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು
ಅನುಕೂಲವಾಗುತ್ತದೆ. ಭಾರತದಲ್ಲಿ ಕೃಷಿ ತಂತ್ರಜ್ಞಾನ ಸಂಶೋಧನೆ ಬೆಳೆಯಬೇಕು.


ಭಾರತದಲ್ಲಿನ ಜಲಸಂಪತ್ತು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ರಾಷ್ಟ್ರದ ನೀರು ಹಂಚಿಕೆ ಮತ್ತು
ಜಲನೀತಿಯನ್ನು ಪುನರ್‌ ಪರಾಮರ್ಶಿಸಬೇಕು. ಏಕೆಂದರೆ ಭಾರತದ ಬಹುದೊಡ್ಡ ಬಯಲು ಪ್ರದೇಶಗಳು
ನೀರಾವರಿ ಕೊರತೆಯನ್ನು ಅನುಭವಿಸುತ್ತಿವೆ. ಇದು ಕೃಷಿ ಅಭಿವೃದ್ಧಿಗೆ ಮಾರಕವಾಗಿದೆ. ಹೆದ್ದಾರಿ,
ಸ್ಮಾರ್ಟ್‌ಸಿಟಿಗಳಿಗಿಂತ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕು. ಅರಣ್ಯೀಕರಣಕ್ಕೆ ಉತ್ತೇಜನ ನೀಡಿದರೆ
ಭವಿಷ್ಯದ ಮಳೆಯ ಪ್ರಮಾಣದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಅಂತರ್ಜಲ ವೃದ್ಧಿ, ನೀರಿನ
ಮಿತಬಳಕೆ, ತ್ಯಾಜ್ಯ ನೀರಿನ ಸಂಸ್ಕರಣೆಗೆ ಆದ್ಯತೆ ನೀಡಬೇಕು.


ಭಾರತದ ಯುವಕರೇ ಪವಾಡ ಮಾಡಲು ಸಜ್ಜಾಗಿ: ಈ ಭೂಮಿಯಲ್ಲಿ ಅಗಣಿತವಾದ ಸಂಪತ್ತು ತುಂಬಿದೆ. ನೆಲ
ಕೊಡುವ ಸಂಪತ್ತನ್ನು ಎಲ್ಲಿಯೂ ಪಡೆಯಲು ಸಾಧ್ಯವಿಲ್ಲ. ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ
ತುಂಬ ಅರ್ಥಗರ್ಭಿತವಾಗಿ ಹೇಳುತ್ತಾರೆ. “ನೀವು ಒಂದು ಟನ್‌ ಬಂಗಾರವನ್ನು ಎಷ್ಟೇ ವರ್ಷಗಳ ಕಾಲ
ಮನೆಯಲ್ಲಿಟ್ಟರೂ ಅದರ ಗಾತ್ರ ಅಷ್ಟೆ ಇರುತ್ತದೆ. ಅದೇ ಒಂದು ಹಣ್ಣನ್ನು ಭೂಮಿಯಲ್ಲಿಟ್ಟರೆ ಅದು ಸಾವಿರ, ಲಕ್ಷ
ಕೋಟಿಯಾಗುತ್ತದೆ. ಇದು ನೆಲದ ತಾಕತ್ತು ಇದುವೇ ಪವಾಡ” ಈ ಮಾತುಗಳು ಕೃಷಿಯ ಸಮೃದ್ಧಿಯನ್ನು
ಪ್ರತಿಬಿಂಬಿಸುತ್ತದೆ.

ಭಾರತದ ನೀರು ಮತ್ತು ಮಣ್ಣಿಗೆ ಜಗತ್ತಿಗೆ ಅನ್ನ ನೀಡುವ ಶಕ್ತಿಯಿದೆ. ಭಾರತಾಂಬೆ ನಮ್ಮನ್ನು
ಸೇರಿದಂತೆ ವಿಶ್ವವನ್ನು ಸಲಹುವ ಅನ್ನಪೂರ್ಣೇಶ್ವರಿ. ಅತಿಹೆಚ್ಚು ಕೃಷಿ ಉತ್ಪನ್ನಗಳನ್ನು ಬೆಳೆಯುವ ಜಗತ್ತಿನ
ಎರಡನೇ ದೇಶ ನಮ್ಮದು. ವಾರ್ಷಿಕ 275 ಮಿಲಿಯನ್‌ ಟನ್‌ನಷ್ಟು ಆಹಾರ ಧಾನ್ಯಗಳನ್ನು ಭಾರತ


249


ಉತ್ಪಾದಿಸುತ್ತದೆ. ಆ ಮೂಲಕ ಶೇ.25ರಷ್ಟು ಜಾಗತಿಕ ಉತ್ಪಾದನೆ ಹಾಗೂ ಶೇ.27ರಷ್ಟು ಜಾಗತಿಕ ಉಪಯೋಗದ
ಪಾಲನ್ನು ಭಾರತ ಹೊಂದಿದೆ. ಗೋದಿ, ಅಕ್ಕಿ, ದ್ವಿದಳ ಧಾನ್ಯಗಳು, ಕಬ್ಬು, ಸೆಣಬು, ಹತ್ತಿ ನೆಲಗಡಲೆ
ಉತ್ಪಾದನೆಯಲ್ಲಿ ಭಾರತ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಜಗತ್ತಿನ ಒಟ್ಟು ಉತ್ಪಾದನೆಯ ಶೇ.10.9 ರಷ್ಟು
ಹಬ್ಬಗಳು ಮತ್ತು 8.6% ತರಕಾರಿಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಭಾರತ ವಶ್ವದ ಅತಿ ದೊಡ್ಡ ಪಾಲು
ಉತ್ಪಾದಕ ದೇಶ.


ಪ್ರಧಾನಿ ನರೇಂದ್ರ ಮೋದಿ ಅತ್ನನಿರ್ಭರ ಭಾರತದ ಸಂಕಲ್ಪ ತೊಟ್ಟಿದ್ದಾರೆ. ಭಾರತದಲ್ಲಿ ಉತ್ಪಾದನೆಯಾದ
ವಸ್ತುಗಳಿಗೆ ಜಾಗತಿಕ ಮನ್ನಣೆ ಸಿಗುತ್ತಿದೆ. ಕೊರೋನಾ ಸಂದಿಗ್ಗತೆಯಲ್ಲಿ ಜಗತ್ತು ಭಾರತವನ್ನು ಆಶಾವಾದದ
ಕಂಗಳಿಂದ ನೋಡುತ್ತಿದೆ. ಈ ಎಲ್ಲವನ್ನು ಅರಿತು ನೀರಾವರಿ ಕೃಷಿ, ಕೃಷಿ ಉದ್ಯಮಗಳಡೆಗೆ ನಮ್ಮ ಗಮನ
ಕೇಂದಿಕೃತವಾಗಬೇಕು.


ಯುವ ಜನತೆ ಕೃಷಿ ಹಾಗೂ ಕೃಷಿ ಆಧಾರಿತ ಉದ್ಯಮಗಳಲ್ಲಿ ತೊಡಗಿಕೊಳ್ಳಬೇಕು. ನೀರು ಮನುಕುಲದ
ಶ್ರೇಷ್ಠ ಅಮೃತ, ಜಲಾಶಯಗಳು ಅಕ್ಷಯಪಾತ್ರೆ, ರೈತನೇ ದೈವ, ಕೃಷಿ ಉದ್ಯಮಗಳೇ ಆಧುನಿಕ ಭಾರತದ
ದೇವಾಲಯಗಳು ಎಂದು ಅರಿತು ದಿಟ್ಟ ಹೆಜ್ಜೆ ಇಟ್ಟರೆ ಅದುವೇ ವಿಶ್ವಗುರು ಭಾರತ, ನಾವೇ ಜಗತ್ತಿನ ದೊಡ್ಡಣ್ಣ.


ಲೇಖಕರು: ಸಂಗಮೇಶ್‌ ಆರ್‌ ನಿರಾಣಿ,
ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು
ಆಧಾರ:ಉದಯವಾಣಿ, ದಿನಾಂಕ:21.07.2020


250


pA ಮೇಲ್ಮನೆಗೆ ನಾಮನಿರ್ದೇಶನ ನೇಪಥ್ಯಕ್ಕೆ ಸರಿದ ಸದಾಶಯ


ಜನ ಹಿತ ಕಾಪಾಡುವ, ನಾಡಿನ ಮುನ್ನಡೆಗೆ ಪೂರಕವಾಗುವ ಶಾಸನ ರಚಿಸುವ ಉದ್ದೇಶಕ್ಕಾಗಿಯೇ
ಇರುವ ಶಾನಸಭೆಗಳಲ್ಲಿ ಪ್ರಾಜ್ಞರು. ವಿಷಯ ಪರಿಣತರು. ಸಮಾಜದ ವಿವಿಧ ಸ್ತರಗಳಲ್ಲಿ ಸಕ್ರಿಯವಾಗಿರುವವರು
ಇರಬೇಕು ಎಂಬುದು ಸಂವಿಧಾನದ ಆಶಯ. ಶಾಸನಸಭೆಗಳೆಂದು ಕರೆಯುವ ವಿಧಾನಸಭೆ, ವಿಧಾನಪರಿಷತ್ತು
ಹಣ-ಜಾತಿ ಬಲದ ಮೇಲೆಯೇ ಭರ್ತಿಯಾಗುತ್ತಿರುವುದು ಈಚಿನ ದಶಕಗಳ ವಿದ್ಯಮಾನ. ಕರ್ನಾಟಕ
ವಿಧಾನಪರಿಷತ್ತಿನಲ್ಲಿ ಖಾಲಿ ಇದ್ದ ಐದು ಸ್ಥಾನಗಳಿಗೆ ರಾಜ್ಯಪಾಲರು ನಾಮನಿರ್ದೇಶನ ಎಂಬುದು ಆಡಳಿತ ಪಕ್ಷದ
ಮರ್ಜಿಗೆ ಬಿಟ್ಟ ವಿಷಯವಾಗಿದೆ. ಆದರೆ, ಈ ಹಿಂದೆ ತಮ್ಮ ವಿವೇಚನಾಧಿಕಾರ ಬಳಸಿ ಸರ್ಕಾರ ಶಿಫಾರಸ್ಸು
ಮಾಡಿದ ಹೆಸರುಗಳನ್ನು ಕರ್ನಾಟಕದ ರಾಜ್ಯಪಾಲರಾಗಿದ್ದವರು ನಿರ್ದಿಷ್ಟ ಕಾರಣ ನೀಡಿ ತಿರಸ್ಕರಿಸಿದ
ನಿದರ್ಶನಗಳಿವೆ. ರಾಜ್ಯದಲ್ಲಿ ಖಾಲಿ ಇದ್ದ ಐದು ಸ್ಥಾನಗಳನ್ನು ಭರ್ತಿ ಮಾಡುವ ಅಧಿಕಾರವನ್ನು ಸಚಿವ
ಸಂಪುಟ ಸಭೆಯ ಮುಖ್ಯಮಂತ್ರಿಗೆ ನೀಡಿತ್ತು ಐದರಲ್ಲಿ ಮೂರು ಸ್ಥಾನಗಳನ್ನು ರಾಜಕೀಯ ಕ್ಷೇತ್ರದವರಿಗೇ
ನೀಡಲಾಗಿದೆ. ಬೇರೆ ಕ್ಷೇತ್ರಗಳಲ್ಲಿ ದುಡಿದವರಿಗೆ ಇನ್ನೆರಡು ದೊರೆತಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ
ಅರ್ಥಶಾಸ್ತ್ರ ಪ್ರಾಧ್ಯಾಪಕ, ಹಿಂದುಳಿದ ಕೋಲಿ-ಕಬ್ಬಲಿಗ ಸಮುದಾಯಕ್ಕೆ ಸೇರಿದ ಪ್ರೊಸಾಬಣ್ಣ ತಳವಾರ ಹಾಗೂ
ವನವಾಸಿ ಕಲ್ಯಾಣ ಸಮಿತಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಅವಧಿಯಿಂದ ದುಡಿಯುತ್ತಿರುವ ಸಿದ್ದಿ
ಸಮುದಾಯದ ಶಾಂತಾರಾಮ ಸಿದ್ದಿ ಅವರ ನಾಮನಿರ್ದೇಶನವು ಅರ್ಹರಿಗೆ ಸಂದ ಗೌರವ. ಶಾಂತಾರಾಮ
ಅವರು ಈ ಸಮುದಾಯದ ಮೊದಲ ಪದವೀಧರ. ಸ್ಥಾತಂತ್ಯ ಬಂದು ಇಷ್ಟು ದೀರ್ಪ ಅವಧಿ ಕಳೆದರೂ ಸಿದ್ದಿ
ಸಮುದಾಯದವರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಿದರ್ಶನಗಳಿಲ್ಲ. ಸಿದ್ದಿ ಸಮುದಾಯಕ್ಕೆ
ಅವಕಾಶ ನೀಡುವ ಮೂಲಕ ಆದಿವಾಸಿ ಬುಡಕಟ್ಟು ಜನರಿಗೆ ಪ್ರಾತಿನಿಧ್ಯ ದೊರೆಕಿಸಿದಂತಾಗಿದೆ.


ನೇರ ಚುನಾವಣೆ ಮೂಲಕ ಗೆಲ್ಲಲು ಕಷ್ಟಸಾಧ್ಯವಾಗುವ ವಿವಿಧ ಕ್ಷೇತ್ರಗಳ ಪರಿಣತರ ಜ್ಞಾನವನ್ನು
ಬಳಸಿಕೊಳ್ಳಲು ನಾಮನಿರ್ದೇಶನದ ಅವಕಾಶವನ್ನು ಕಲ್ಪಿಸಲಾಗಿದೆ. ಈಗ ನಾಮನಿರ್ದೇಶನ ಮಾಡಲಾಗಿರುವ
ಹೆಚ್‌.ವಿಶ್ವನಾಥ್‌, ಸಿ.ಪಿ.ಯೋಗೇಶ್ವರ್‌ ಹಾಗೂ ಭಾರತಿ ಶೆಟ್ಟಿ ಅವರು ಸಕ್ರಿಯ ರಾಜಕಾರಣದಲ್ಲಿ
ತೊಡಗಿರುವವರು. ಈ ಹಿಂದೆ ಶಾಸಕರೂ ಆಗಿದ್ದವರು. ಇವರ ಪೈಕಿ ವಿಶ್ವನಾಥ್‌ ಹಾಗೂ ಯೋಗೇಶ್ವರ್‌
ಅವರು ಯಡಿಯೂರಪ್ಪ ನೇತೃತ್ನದ ಸರ್ಕಾರ ಅಧಿಕಾರಕ್ಕೆ ಬರಲು ನೆರವಾಗಿದ್ದರು. ಆ ಕಾರಣಕ್ಕಾಗಿಯೇ
ಇವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದಾದರೆ ಈ ಆಯ್ಕೆಯು ಸಮಂಜಸ ಅಲ್ಲ ಎಂದೇ
ಹೇಳಬೇಕಾಗುತ್ತದೆ. ಇವರಿಗೆ ಶಾಸಕ ಸ್ಥಾನ ದೊರೆಕಿಸಿಕೊಡಲು ಬೇರೆಯದೇ ಆದ ಮಾರ್ಗಗಳು ಇದ್ದವು.
ವಿಧಾನಸಭೆ ಅಥವಾ ಸ್ಥಳಿಯ ಸಂಸ್ಥೆಗಳಿಂದ ಪರಿಷತ್ತಿಗೆ ನಡೆಯುವ ಚುನಾವಣೆ ಅಥವಾ ಪದವೀಧರ ಕ್ಷೇತ್ರದ
ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ಅವಕಾಶಗಳೂ ಇದ್ದವು. ನಾಮನಿರ್ದೇಶನ ಮಾಡುವಾಗ ವಿಷಯ ಪರಿಣತಿ,
ಒಂದು ನಿರ್ದಿಷ್ಟ ಕ್ಷೇತ್ರದಲ್ಲಿನ ನೈಪುಣ್ಯ ಆಧರಿಸಿ ಆಯ್ಕೆ ಮಾಡುವ ಪರಿಪಾಠ ಇತ್ತು. ಹೀಗೆ ಆಯ್ಕೆ ಮಾಡುವಾಗ
ಸಾಹಿತಿಗಳು, ಕಲಾ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ಶಾಂತಾರಾಮ ಅವರಂತೆ ಯಾವುದಾದರೂ ಕ್ಷೇತ್ರದಲ್ಲಿ
ತಮ್ಮಷ್ಟಕ್ಕೆ ಸಾಧನೆ ಮಾಡಿದವರನ್ನು ಗುರುತಿಸಿ ಮೇಲ್ಗನೆಯ ಗೌರವ ಹೆಚ್ಚಿಸಲು ಸಾಧ್ಯವಿತ್ತು ಪರಿಷತ್ತಿನಲ್ಲಿ
ಮಹಿಳೆಯರ ಸಂಖ್ಯೆ ಕಡಿಮೆ ಇದ್ದು, ಅವರಿಗೂ ಹೆಚ್ಚಿನ ಅವಕಾಶ ಕಲ್ಲಿಸಬಹುದಿತ್ತು ಅದನ್ನು ಬಿಟ್ಟು
ಶಾಸನಸಭಾ ಚುನಾವಣೆಗಳಲ್ಲಿ ಗೆದ್ದು-ಸೋತು ಅನುಭವ ಇರುವ ರಾಜಕಾರಣಿಗಳಿಗೆ ನಾಮನಿರ್ದೇಶನದಡಿ
ಅವಕಾಶ ನೀಡಿರುವುದು ಸೂಕ್ತ ನಡೆಯಲ್ಲ. ಮುಂದಿನ ದಿನಗಳಲ್ಲಿ ಇಂತಹ ತೀರ್ಮಾನ ಕೈಗೊಳ್ಳುವಾಗ
ಜನಮೆಚ್ಚುವಂತಹ ನಡೆಯನ್ನು ಸರ್ಕಾರದ ನೇತಾರರು ಪಾಲಿಸಲಿ.


ಆಧಾರ:ಪ್ರಜಾವಾಣಿ, ದಿನಾಂಕ:24.07.2020


251


3. ಕಾರ್ಗಿಲ್‌ ವಿಜಯ ದಿವಸ


ಇಂದು ಅಂದರೆ ದಿನಾಂಕ:26.07.2020ರಂದು ಕಾರ್ಗಿಲ್‌ ವಿಜಯ ದಿವಸ. ಹಿಮ ತುಂಬಿದ
ಹಿಮಾಲಯದ ಗಡಿಗಳನ್ನು ಕಾಯುತ್ತಿರುವ ನಮ್ಮ ಸೈನಿಕರ ಶೌರ್ಯವನ್ನು ನೆನಪಿಸಿಕೊಳ್ಳುವ ದಿನ. ನಮ್ಮ ಸೈನ್ಯದ
527 ಸೈನಿಕರ ಬಲಿದಾನದ ಮೂಲಕ, ಕಾರ್ಗಿಲ್‌ ಯುದ್ದದಲ್ಲಿ ಪಾಕಿಸ್ತಾನವನ್ನು ಸೋಲಿಸಿದೆವು. ಅದಕ್ಕೂ ಮುಂಚೆ
1984ರಲ್ಲಿ ಸಿಯಾಚಿನ್‌ ಪ್ರದೇಶದಲ್ಲಿ ನಮ್ಮವರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದರು. ಗಡಿಯಲ್ಲಿ ಮೈಯೆಲ್ಲಾ
ಕಣ್ಣಾಗಿ ಕುಳಿತು ಹಿಮಗಾಳಿಯ ನಡುವೆ ತೂರಿಬರಬಹುದಾದ ಗುಂಡಿನ ಮೊರೆತವನ್ನೆದುರಿಸಲು ಸದಾ ಸಿದ್ದರಾಗಿ.
ಗಡಿ ಕಾಯುತ್ತಿರುವ ನಮ್ಮ ಸೈನಿಕರ ಕರ್ತವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ.


ಸಿಯಾಚಿನ್‌ನಲ್ಲಿ ಹಿಮಪಾತದಿಂದ ನಾಲ್ಲರು ಯೋಧರ ಸಾವು: ಇಂಥ ವರದಿಗಳು ಹಾಗಾಗ ಬಿತ್ತರವಾಗುತ್ತಿರುತ್ತವೆ.
ಈ ಪ್ರದೇಶದಲ್ಲಿ ನಿಯೋಜನೆಯಾಗುವ ಸೈನಿಕ ಸದಾ ಲಾಕ್‌ಡೌನ್‌ನಲ್ಲಿಯೇ ಇರುತ್ತಾನೆ. ಯಾಕೆಂದರೆ ಎಂತಹ
ಸ್ಥಿತಿಯಲ್ಲಿಯೂ ಹವಾಮಾನವೆಂಬುದು ಒಂದು ಡಿಗಿಗಿಂತ ಎಂದೂ ಮೇಲೆದ್ದದ್ದು ಇಲ್ಲ. ಇದರಿಂದಾಗಿ ಸದಾ
ಕಣ್ಮುಂದೆ ಚೆಲ್ಲಿರುವ ರಾಶಿ ರಾಶಿ ಹಿಮ, ಈ ಸೇನಾ ಡೇರೆಯಲ್ಲಿ ಕುಳಿತ ಸೈನಿಕ ಹಿಮ ಮತ್ತು ಸದಾ
ಹಿಮವನ್ನಷ್ಟೇ ನೋಡುತ್ತಿರಬೇಕು. ವಾರಕ್ಕಾಗುವಷ್ಟು ಆಹಾರ ಒಮ್ಮೆಲೆ ಪೂರೈಸಲಾಗುತ್ತದೆ. ಮಾತನಾಡಲು
ಒಂದು ನರಪಿಳ್ಳೆಯೂ ಸಿಗುವುದಿಲ್ಲ. 11 ಸಾವಿರ ಅಡಿಯಲ್ಲಿರುವ ಸಿಯಾಚಿನ್‌ ಬೇಸ್‌ ತನಕ ಮಾತ್ರ ಸಾರ್ವಜನಿಕ
ಪ್ರದೇಶಕ್ಕೆ ಅನುಮತಿ. ಸಿಯಾಚಿನ್‌ ನೀರ್ಗಲ್ಲು ಹಿಮಾಲಯದ ಕರಕೊರಂ ಪರ್ವತ ಶ್ರೇಣಿಯಲ್ಲಿದೆ. ಸಮುದ್ರ
ಮಟ್ಟದಿಂದ 20,000 ಸಾವಿರ ಅಡಿ ಎತ್ತರದಲ್ಲಿರುವ ಭೂಮಿಯ ಮೇಲಿನ ಅತೀ ಎತ್ತರದ ಯುದ್ಧಭೂಮಿ ಎ೦ಬ
ಹೆಗ್ಗಳಿಕೆ ಇದರದ್ದು, ಚಳಿಗಾಲದಲ್ಲಿ ಇಲ್ಲಿ 1,000 ಸೆಂ.ಮೀ.ನಷ್ಟು ಹಿಮಪಾತವಾಗುತ್ತದೆ. ಇಲ್ಲಿನ ತಾಪಮಾನ
60 ಡಿಗ್ರಿ ಇರುತ್ತದೆ. ಬಾಲ್ಲೀ ಭಾಷೆಯಲ್ಲಿ ಸಿಯಾ ಎಂದರೆ ಗುಲಾಬಿ ಜಾತಿಗೆ ಸೇರಿದ ಒಂದು ಹೂ, ಚನ್‌
ಎಂದರೆ ಹೇರಳವಾಗಿ ಸಿಗುವ ಎಂದರ್ಥ ಆದರೆ ಸಿಯಾಚಿನ್‌ನಲ್ಲಿ ಇಂದು ಯಾವುದೇ ಗಿಡಮರಗಳಿಲ್ಲ.
ಅಲ್ಲಿರುವುದು ಕೇವಲ ಕ್ರೂರ ಹಿಮ, ಹಿಮಗಾಳಿ.


ಈ ಪ್ರದೇಶಕ್ಕಾಗಿ ನಡೆದ ಸಂಘರ್ಷಗಳ ಪಟ್ಟಿಯೂ ಇಲ್ಲಿನ ಶೀತಲದಷ್ಟೇ ಆಳವಾಗಿದೆ. 1949ರ ಕರಾಚಿ
ಮತ್ತು 1972ರ ಶಿಮ್ಹಾ ಒಪ್ಪಂದದಲ್ಲಿ ಮನುಷ್ಯ ವಾಸಕ್ಕೆ ಯೋಗ್ಯವಲ್ಲದ ಪ್ರದೇಶ ಎಂದು ವಿವರಿಸಲಾಗಿದೆ. 1970
ರಿಂದ 1980ರ ವರೆಗೆ ಪಾಕಿಸ್ತಾನ ಸಿಯಾಚಿನ್‌ ತಪ್ಪಲಿನಲ್ಲಿ ಗಸ್ತು ನಡೆಸುತ್ತಿತ್ತು ಏಪ್ರಿಲ್‌ 1984ರ ಪಾಕಿಸ್ತಾನದ
ಕಡೆಯಿಂದ ಶಿಮ್ಹಾ ಒಪ್ಪಂದ ಉಲ್ಲಂಘನೆಯಾಗಿ ಈ ಪ್ರದೇಶದ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸಿತ್ತು.
1987ರ ಆಪರೇಷನ್‌ ರಾಜೀವ್‌ ನಡೆಸಲಾಯಿತು ಮತ್ತು ಪಾಕಿಸ್ತಾನದ ವಶದಲ್ಲಿದ್ದ ಕ್ಕೂದ್‌ ಪೋಸ್ಟ್‌ನ್ನು
ಜೂನ್‌ನಲ್ಲಿ ವಶಪಡಿಸಿಕೊಳ್ಳಲಾಯಿತು. ಆದರೆ ಜನರಲ್‌ ಪರ್ವೇಜ್‌ ಮುಷರಫ್‌ ನೇತೃತ್ವದಲ್ಲಿ 1987ರಲ್ಲಿ ಮತ್ತೆ
ಅಪರೇಷನ್‌ ಕ್ಕ್ಯೂದತ್‌ ನಡೆಸಿ ಮರು ಆಕ್ರಮಣ ಮಾಡಿತು. ಇದಕ್ಕೆ ಪ್ರತ್ಯುತ್ತರವಾಗಿ ಆಪರೇಷನ್‌ ವಜಶಕ್ತಿ
ನಡೆಸಿದ ನಮ್ಮ ದೇಶದ ಸೇನೆ, ಪಾಕಿಗಳ ಸೈನಿಕರನ್ನು ಹಿಮ್ಮೆಟ್ಟಿಸಿತು. ತ್ರಿಶೂಲ್‌ ಹಾಗೂ 1989ರ ಅಪರೇಷನ್‌
ಐಬೆಕ್ಸ್‌ 1992ರ ಆಪರೇಷನ್‌ ತಿಶೂಲ್‌ ಹಾಗೂ 1995ರ ಸಾಲ್ತಾರೂ ರೇಖೆಯ ಬಳಿ ಪಾಕಿಸ್ತಾನದ ದಾಳಿ
ವಿಫಲಗೊಳಿಸಿತು. ಇವೆಲ್ಲ ಹಿನ್ನೆಲೆಯಿಂದ ಪಾಕಿಸ್ತಾನದ ಆಕ್ರಮಣಕಾರಿ ಮನೋಭಾವವು. ತನ್ನ ಕ್ರೂರ
ಮುಖವನ್ನು ತೋರಿದ್ದು 1999ರಲ್ಲಿ ಅದರಿಂದಲೇ ಹೊರಹೊಮ್ಮಿದ್ದು ಕಾರ್ಗಿಲ್‌ ಯುದ್ದ ಹೀಗೆ ಸಾಲು ಸಾಲು
ಯುದ್ಧಗಳು. ಪಾಕಿಸ್ತಾನದ ಸೇನೆಗೆ ತಕ್ಕ ಪಾಠ ಕಲಿಸಿದ್ದು ಭಾರತದ ಸಾಧನೆ.


ಸಿಯಾಚಿನ್‌ ಎಂಬ ಕಠಿಣ ತಾಣ: 1984ರ ಸಿಯಾಚಿನ್‌ ಘರ್ಷಣೆಯ ಬಳಿಕ, ಈಗ ಸಿಯಾಚಿನ್‌ ನೀರ್ಗಲ್ಲು
ಪ್ರದೇಶದ 76 ಕಿ.ಮೀ. ದೂರದವರೆಗೆ ಮತ್ತು ಸಾಲ್ದಾರೋ ಪಾಸ್‌ನ ತುದಿಯನ್ನು ಭಾರತ ನಿಯಂತಿಸುತ್ತಿದೆ.
ತನ್ನ ವ್ಯಾಪ್ತಿ 900 ಚದರ ಮೈಲು ಪ್ರದೇಶವನ್ನು ಭಾರತ ಆಕ್ರಮಿಸಿರುವುದಾಗಿ ಪ್ರತಿಪಾದಿಸುತ್ತಿರುವ ಪಾಕಿಸ್ತಾನ
ತನ್ನ ಹಠವನ್ನು ಬಿಟ್ಟಿಲ್ಲ ಆದರೆ ಭಾರತ ಸೂಚಿಸಿರುವ ಗಡಿ ರೇಖೆ ಒಪ್ಪಿಕೊಳ್ಳುವವರೆಗೂ ಸಿಯಾಚಿನ್‌ನಲ್ಲಿರುವ
ಸೇನೆಯನ್ನು ಹಿಂದೆಗೆಯದಿರಲು ನಿರ್ಧರಿಸಲಾಗಿದೆ. 1984ರಲ್ಲಿ ಇಲ್ಲಿ ಘರ್ಷಣೆ ನಡೆದಾಗ, ಜಗತ್ತಿನ ಅತಿ
ಎತ್ತರದ ಮಟ್ಟದಿಂದ ಸರಾಸರಿ 20,000 ಅಡಿ ಎತ್ತರದ ಆ ಪ್ರದೇಶದಲ್ಲಿ ನಮ್ಮ ನಿಮ್ಮಂತಹ ಸಾಮಾನ್ಯ ಜನರು
ನಾಲ್ಕಾರು ಹೆಜ್ಜೆ ನಡೆದರೆ, ಏದುಸಿರು ಬರುತ್ತದೆ. ಪ್ರತಿ ದಿನದ ನಿರ್ವಹಣೆಗೆ ಇಲ್ಲಿ ರೂ.5 ಕೋಟಿಗೂ ಹೆಚ್ಚು
ವ್ಯಯವಾಗುತ್ತಿದ್ದು, ಯೋಧರ ಜೀವಗಳಿಗೆ ಸಂಬಂಧಿಸಿದಂತೆಯೂ ಈ ವೆಚ್ಚ ದುಬಾರಿ ಎನಿಸಿದ್ದರೂ, ಇದು
ಭಾರತದ ರಕ್ಷಣೆಯ ಬೃಹತ್‌ ಗೋಡೆಯಂತೆ ಇರುವುದರಿಂದ ಅನಿವಾರ್ಯ ಎನಿಸಿದೆ.


252


ಸಿಯಾಚಿನ್‌ ಪ್ರದೇಶದಲ್ಲಿ ಯುದ್ದದಲ್ಲಿ ಮಡಿದವರಿಗಿಂತ ಹಿಮ ಚಳಿಯ ಹೊಡೆತಕ್ಕೆ ಮೃತಪಟ್ಟವರೇ
ಹೆಚ್ಚು. ಕೊರೆಯುವ ಶೀತಲದಲ್ಲಿ ಶೂನ್ಯವನ್ನು ದಿಟ್ಟಿಸುತ್ತಾ ಕುಳಿತಿರುವುದು, ಅದೂ ಮೈಯೆಲ್ಲಾ ಕಣ್ಣಾಗಿ,
ಏನಿರಬಹುದು ಆ ಸೈನಿಕರ ಬಳಿ, ಜೇಬು ತಡಕಿದರೆ, ಅಮ್ಮ ಕೊಟ್ಟ ತಾಯತ, ಅಪ್ಪ ಕೊಟ್ಟ ದೇವರ ಘೋಟೋ,
ತಂಗಿ ಕಟ್ಟಿದ ರಾಖಿ, ಎದೆಯಲಿ ಬೆಂಕಿ ಹೊತ್ತಿಸುವ ಯಾರದೋ ಅಕ್ಷರದ ಕಾಗದದ ತುಣುಕು, ಇವುಗಳೇ
ಜೀವತುಂಬುವ ಸಾಧನೆಗಳು.


ಊಟ ಸೇರದ ಜಾಗ: ಸೈನಿಕರ ವಲಯದಲ್ಲಿ ಸಿಯಾಚಿನ್‌ ನೆಲೆಯಲ್ಲಿ ನಿಯೋಜನೆಗೊಳ್ಳುವುದನ್ನು ಬಹು ಕಠಿಣ
ಡ್ಕೂಟಿ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕ ಶತುುವಿನೊಂದಿಗೆ
ಹೊಡೆದಾಡುವುದಕ್ಕಿಂತ ಪ್ರಕೃತಿಯೊಂದಿಗೆ ಸೆಣೆಸುವುದೇ ಹೆಚ್ಚು ಸತತ ಶೀತ, ಗಾಳಿಗೆ ಕೆಲವು ಸೆಕೆಂಡು
ತೆರೆದುಕೊಂಡರೆ ಸಾಕು ಆ ಭಾಗ ಪೂರ್ತಿ ಮರಗಟ್ಟಿ ಹೋಗುತ್ತದೆ. ಸತತ ಹೀಗೆ ಕಾರ್ಯನಿರ್ವಹಿಸುವುದರಿಂದ
ಎಲ್ಲಿದ್ದೇವೆಂಬ ಅರಿವು ಅಳಿದು, ಅಜೀರ್ಣ ಮೊದಲಾದ ಹಲವಾರು ಆರೋಗ್ಯ ವ್ಯತ್ಯಯಗಳಾಗುತ್ತವೆ.
ಇಲ್ಲಿದ್ದುಕೊಂಡು ಊಟ ಮಾಡುವುದೇ ಒಂದು ಶಿಕ್ಷೆ ಎನಿಸುವಂತಹ ವಾತಾವರಣ. ಆದ್ದರಿಂದ ಇಲ್ಲಿ
ನಿಯೋಜನೆಗೊಂಡ ಸೈನಿಕರ ಕೆಲವು ವಾರಗಳ ನಂತರ, ಕೆಳ ಮಟ್ಟದ ಶಿಬಿರಗಳಿಗೆ ಬಂದು, ಇನ್ನೊಂದು ತಂಡ
ಹಿಮದೊಡನೆ ಹೋರಾಡಲು ಹೊರಡುತ್ತಾರೆ. ಅದು ಅನಿವಾರ್ಯ ಸಹ, ನಮ್ಮ ಸೈನಿಕರ ಆರೋಗ್ಯ ಕಾಪಾಡಲು
ಹೆಚ್ಚು ಕಾಲ ಆ ಕ್ರೂರ ಹವಾಮಾನದಲ್ಲಿ ಅವರನ್ನು ಬಿಡುವುದಿಲ್ಲ.


ಆರು ದಿನಗಳ ಕಾಲ ಇದೇ ಸಿಯಾಚಿನ್‌ ಪ್ರದೇಶದ ಹಿಮರಾಶಿಯಲ್ಲಿ ಹೂತು ಹೋಗಿ, ಸಹಾಯ
ಮಾಡಲು ಧಾವಿಸಿದ ಸೈನಿಕರ ನೆರವಿನಿಂದ ಬದುಕಿ ಬಂದಿದ್ದ ಹನುಮಂತಪ್ಪ ಕೊಪ್ಪದ ನೆನಪಾದ. ಕಾರ್ಗಿಲ್‌
ದಿನದ ಆಚರಣೆ, ನೆನಪು ಎಂದಾಗ ಸಿಯಾಚಿನ್‌ ಗಡಿ ಕಾಯಲು, ತಮ್ಮ ಜೀವವನ್ನು ಒತ್ತೆಯಿಟ್ಟು ಆ
ಚಳಿಗಾಳಿಯಲ್ಲಿ ಗಸ್ತು ತಿರುಗುವ ಸೈನಿಕರು ನೆನಪಾಗಲೇಬೇಕು, ನೆನಪಿಸಿಕೊಳ್ಳಲೇಬೇಕು. ನಮಗಿಲ್ಲಿ ಕೆಲವು
ವಾರಗಳ ಲಾಕ್‌ಡೌನ್‌ ಅಸಹನೀಯ ಎನಿಸಿದರೆ, ಅಲ್ಲಿ ವರ್ಷವಿಡೀ ಲಾಕ್‌ಡೌನ್‌, ಹಿಮಶೀತಲ ನೆಲ,
ಕೊರೆಯುವ ಗಾಳಿ, ಬಿಸಿಯೂಟವು ಕ್ಷಣ ಮಾತ್ರದಲ್ಲಿ ತಣ್ಣಗಾಗುವ ಸಿಯಾಚಿನ್‌ ಗಡಿಯ ವಾತಾವರಣದಲ್ಲಿ
ದುಡಿಯುವ ಆ ಜವಾನರಿಂದಲೇ ನಮ್ಮ ದೇಶ ಉಳಿದಿದೆ, ಸ್ಥಾಭಿಮಾನ ಮೆರೆದಿದೆ. ಜೈ ಜವಾನ್‌॥


ಲೇಖಕರು:- ಮಂಜುಳಾ ಡಿ,
ಆಧಾರ:ವಿಜಯವಾಣಿ, ದಿನಾಂಕ:26.07.2020


253


4. ಹುಲಿ:ಆರೋಗ್ಯಕರ ಜೀವ ವೈವಿಧ್ಯತೆಯ ಸಾರ
ಹುಲಿ ಸಂರಕ್ಷಣೆಯು ಆತ್ಮನಿರ್ಭರತೆಗೆ ಒಂದು ಉತ್ತಮ ಉದಾಹರಣೆ. ಪ್ರಕೃತಿ ಪ್ರಿಯ ರಾಷ್ಟ್ರವಾದ


ಭಾರತವು ವಿಶ್ವದ ಅತಿ ಹೆಚ್ಚು ಹುಲಿಗಳ ಆವಾಸಸ್ಥಾನವಾಗಿದೆ. ಇಂದು ದೇಶವು ವಿಶ್ವದ ಹುಲಿಗಳ ಸಂಖ್ಯೆಯಲ್ಲಿ
ಶೇ.70 ರಷ್ಟನ್ನು ಹೊಂದಿದೆ. ಒಟ್ಟು 2,967 ಹುಲಿಗಳು ಭಾರತದಲ್ಲಿವೆ. ಇದು ಜನರ ಮತ್ತು ದೇಶದ
ಬಹುದೊಡ್ಡ ಸಂರಕ್ಷಣಾ ಯಶಸ್ಸು.
ವಿಶ್ವ ಜೀವ ವೈವಿಧ್ಯತೆಯ 8%: ನಾವು ವಿಶ್ವದ ಭೂ ಪ್ರದೇಶದಲ್ಲಿ ಕೇವಲ ಶೇ.2.5 ರಷ್ಟನ್ನು ಮಾತ್ರ ಹೊಂದಿದ್ದೇವೆ.
ಕೇವಲ ನಾಲ್ಕು ಪ್ರತಿಶತದಷ್ಟು ಶುದ್ಧ ಮಳೆ ನೀರಿನ ಸಂಪನ್ಮೂಲಗಳನ್ನು ಮಾತ್ರ ಹೊಂದಿರುವ ನಮಗೆ ಇದೊಂದು
ಪ್ರಮುಖ ಅಡಚಣೆ ಎಂದೇ ಪರಿಗಣಿಸಬಹುದು. ವಿಶ್ವದ ಶೇ.16ರಷ್ಟು ಮಾನವ ಮತ್ತು ಜಾನುವಾರು ಜನಸಂಖ್ಯೆ
ನಮ್ಮ ದೇಶದಲ್ಲಿದೆ. ಇವರೆಡಕ್ಕೂ ಆಹಾರ, ನೀರು ಮತ್ತು ಭೂಮಿ ಬೇಕು. ಆದರೂ ಭಾರತವು ವಿಶ್ವದ
ಜೀವವೈವಿಧ್ಯತೆಯ 8 ಪ್ರತಿಶತವನ್ನು ಹೊಂದಿದೆ. ಪ್ರಕೃತಿಯನ್ನು ಬದುಕಿನ ಭಾಗವಾಗಿ ಕಾಣುವ ಭಾರತದ
ನೀತಿಗಳು ಇದಕ್ಕೆ ಕಾರಣ.
ಹುಲಿ ಗಣತಿಯಲ್ಲಿ ಗಿನ್ನೆಸ್‌ ದಾಖಲೆ: ಭಾರತದ ಇತ್ತೀಚಿನ ಹುಲಿಗಣತಿಯಲ್ಲಿ 25 ಸಾವಿರ ಕ್ಯಾಮರಾ
ಟ್ಯಾಪ್‌ಗಳನ್ನು ಬಳಸಿ, 35 ದಶಲಕ್ಷಕ್ಕೂ ಹೆಚ್ಚು ಚಿತ್ರಗಳನ್ನು ತೆಗೆದಿರುವುದು ಗಿನ್ನೆಸ್‌ ದಾಖಲೆಯಾಗಿದೆ. ಇದು
ಜಗತ್ತಿನಾದ್ಯಂತ ದೇಶವೊಂದು ಕೈಗೊಂಡ ಅತಿದೊಡ್ಡ ಗಣತಿಯಾಗಿದೆ.
ದೇಶದಲ್ಲಿವೆ 50 ಹುಲಿ ಧಾಮಗಳು: 1973ರಲ್ಲಿ ಒಂಭತ್ತು ಹುಲಿ ಧಾಮಗಳೊಂದಿಗೆ ಹುಲಿ ಯೋಜನೆಯನ್ನು
ಪ್ರಾರಂಭಿಸಲಾಯಿತು. ಇಂದು ಭಾರತವು 72,000 ಚದರ ಕಿ.ಮೀ.ಗಳ 50 ಹುಲಿ ಧಾಮಗಳನ್ನು ಹೊಂದಿದೆ.
ಈ ಪೈಕಿ 21 ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. 17 ಉತ್ತಮ ಮತ್ತು 12 ತೃಪ್ತಿಕರವಾಗಿವೆ ಎಂದು
ಹೇಳಲಾಗಿದೆ. ಕಳಪೆ ವರ್ಗದಲ್ಲಿ ಯಾವುದೂ ಇಲ್ಲ ಎಂಬುದು ಇಲ್ಲಿ ಗಮನಾರ್ಹ, ವ್ಯವಸ್ಥಿತ ಮತ್ತು ವೈಜ್ಞಾನಿಕ
ಹುಲಿ ಸಂರಕ್ಷಣಾ ವಿಧಾನಗಳು ಯಶಸ್ಸಿಗೆ ಬಹಳಷ್ಟು ಕೊಡುಗೆ ನೀಡಿವೆ. ಇದಕ್ಕೆ ಮತ್ತೊಂದು ಪ್ರಮುಖ
ಕಾರಣವೆಂದರೆ ಹೆಚ್ಚಿದ ಕಣ್ಗಾವಲು ಬಹುತೇಕ ಎಲ್ಲಾ ಸಂಘಟಿತ ಬೇಟೆಯ ನಿರ್ಮೂಲನೆ ಮಾಡಲಾಗಿದೆ.
ಹುಲಿ ಸಂತತಿ ಏರಿಕೆ ಕಾರಣ ಏನು: ಅನುಕೂಲಕರ ವಾತಾವರಣದಲ್ಲಿ ಹುಲಿಗಳು ವೇಗವಾಗಿ ಸಂತಾನೋತ್ಪತ್ತಿ
ಮಾಡುತ್ತವೆ. ದೇಶದ ಅನೇಕ ಭಾಗಗಳಲ್ಲಿ ಮುಖ್ಯ ಪ್ರದೇಶಗಳ ಅಂಚಿನ ಹಳ್ಳಿಗಳ ಸ್ಥಳಾವಕಾಶ ಲಭ್ಯವಾಗಲು
ಕಾರಣವಾಗಿದೆ. ದೇಶದಲ್ಲಿರುವ ಹುಲಿಗಳ ಸಂಖ್ಯೆಯ ಆಧಾರದಲ್ಲಿ ಆಹಾರ ಸರಪಳಿಯಲ್ಲಿ ಹುಲಿಗಳು ತುತ್ತ
ತುದಿಯಲ್ಲಿರುತ್ತವೆ. ಅವುಗಳ ಸಂರಕ್ಷಣೆ ದೃಢವಾದ ಜೀವವೈವಿಧ್ಯತೆಗೆ ಸಾಕ್ಷಿಯಾಗಿದೆ. ಹುಲಿಗಳ ಸಂಖ್ಯೆಯ
ಹೆಚ್ಚಳವು ಅವುಗಳ ಬೇಟೆಯ ಪ್ರದೇಶಗಳು ಮತ್ತು ಅವಾಸಸ್ಥಾನಗಳು ಉತ್ತಮ ಸ್ಥಿತಿಯಲ್ಲಿವೆ ಎಂಬುದನ್ನು
ತೋರಿಸುತ್ತದೆ. ನಾವು ಹುಲಿ ಸಂಖ್ಯೆಯಲ್ಲಿ ನಾಯಕನ ಸ್ಥಾನದಲ್ಲಿರುವುದರಿಂದ ಜಾಗತಿಕ ಹುಲಿ ವೇದಿಕೆಯ
ಮೂಲಕ ನಮ್ಮ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತೇವೆ. ಭಾರತವು ಥೈಲ್ಯಾಂಡ್‌, ಮಲೇಷ್ಯಾ, ಬಾಂಗ್ಲಾ
ದೇಶ, ಭೂತಾನ್‌ ಮತ್ತು ಕಾಂಬೋಡಿಯಾದ ಕ್ಷೇತ್ರ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ಕಾರ್ಯಾಗಾರಗಳನ್ನು
ನಡೆಸಿದೆ. ಅನೇಕ ದೇಶಗಳು ನಮ್ಮ ದೇಶದ ವಿವಿಧ ಹುಲಿ ಧಾಮಗಳಿಗೆ ಭೇಟಿ ನೀಡಿವೆ.

ಎಲ್ಲಾ 13 ಹುಲಿ ಸಂತತಿ ದೇಶಗಳೂಂದಿಗೆ ನಾವು ಹಲವಾರು ತಿಳುವಳಿಕೆ ಒಪ್ಪಂದಗಳು ಮತ್ತು ಸಹಕಾರ
ಒಪ್ಪಂದಗಳನ್ನು ಹೊಂದಿದ್ದೇವೆ. ಹುಲಿಗಳ ಸ್ಮಾರ್ಟ್‌ ಗಸ್ತು, ಶಿಷ್ಟಾಚಾರ, ಹುಲಿಗಳ ತೀವ್ರ ರಕ್ಷಣೆ ಮತ್ತು ಪರಿಸರ
ಸ್ಥಿತಿಗತಿಯ ನಿರ್ವಹಣಾ ವ್ಯವಸ್ಥೆಗಾಗಿ ಮಹತ್ವಾಕಾಂಕ್ಷೆಯ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮವನ್ನು ಸರ್ಕಾರ
ಪ್ರಾರಂಭಿಸಿದೆ.
ಜೀವ ವೈವಿಧ್ಯತೆಗೆ ಹುಲಿಗಳೇ ಸಾಕ್ಷಿ: ಹೆಚ್ಚಿನ ಸಂಖ್ಯೆಯ ಹುಲಿಗಳು ನಿಜಕ್ಕೂ ಶ್ರೀಮಂತ ಜೀವ ವೈವಿಧ್ಯತೆ ಮತ್ತು
ವೈಜ್ಞಾನಿಕ ಸಂರಕ್ಷಣೆಯನ್ನು ಪ್ರಮಾಣೀಕರಿಸುತ್ತವೆ. ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ನಾವು
ಎದುರಿಸುತ್ತಿರುವ, ನಮ್ಮ ಕೆಲಸಗಳಿಗೆ ಆಧಾರವಾಗಿ ಈ ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿರಬೇಕು. 10
ವರ್ಷಗಳಲ್ಲಿ 2.5 ಬಿ.ಟನ್‌ ಇಂಗಾಲ ಕಡಿಮೆ ಮಾಡಲು ನಿರ್ಧರಿಸಿದ್ದೇವೆ. ಕಾಡು ಮತ್ತು ಕಾಡಿನ ಹೊರಗೆ
ಮರಗಳ ಹೊದಿಕೆ ಹೆಚ್ಚುತ್ತಿರುವ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ.


ಲೇಖಕರು: ಪ್ರಕಾಶ್‌ ಜಾವ್ಲೇಕರ್‌,
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ,
ಆಧಾರ:ಕನ್ನಡ ಪ್ರಭ, ದಿನಾಂಕ: 29.07.2020


254
5. ಭಾರತೀಯ ಶಿಕ್ಷಣ ಪರಂಪರೆಯನ್ನು ಇನ್ನಷ್ಟು ಸದೃಢಗೊಳಿಸಲಿದೆ : ರಾಷ್ಟ್ರೀಯ ಶಿಕ್ಷಣ ನೀತಿ


ಶಿಕ್ಷಣ ವ್ಯವಸ್ಥೆಯ ರೂಪು ರೇಷೆಗಳು ರಕ್ಷಣಾತ್ಮಕ ಬದಲಾವಣೆ ಕಂಡುಕೊಳ್ಳುವ ಜೊತೆಗೆ ಶಿಕ್ಷಣದಲ್ಲಿ
ಮಾತೃಭಾಷೆ, ಸಂಸ್ಕೃತಿ, ಜ್ಞಾನ, ಕೌಶಲ್ಯತೆ ಹಾಗೂ ಉದ್ಯೋಗಾವಕಾಶಕ್ಕೆ ಆದ್ಯತೆ ಹೆಚ್ಚಲಿದೆ. ಕಾಲೇಜುಗಳ
ನಿರಂತರ ಮೌಲ್ಯಮಾಪನ ಕೇಂದವಾಗಿ ಬಲಿಷ್ಠವಾದರೆ, ವಿಶ್ವವಿದ್ಯಾಲಯಗಳು ಸಂಶೋಧನಾ ಕೇಂದವಾಗಿ
ಪರಿವರ್ತನೆಗೊಳ್ಗಲಿವೆ. ಶಿಕ್ಷಣ ವ್ಯವಸ್ಥೆಯಡಿ ಇರುವ ವಿವಿಧ ಮಂಡಳಿಗಳು ಭಾರತೀಯ ಉನ್ನತ ಶಿಕ್ಷಣ
ಆಯೋಗದ ಅಧೀನಕ್ಕೆ ಬರಲಿವೆ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಉದಯಕ್ಕೂ "ಹೊಸ ರಾಷ್ಟ್ರೀಯ
ಶಿಕ್ಷಣ ನೀತಿ” ಕಾರಣವಾಗಬಹುದು.


ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನ, ಕಲಾ, ವಾಣಿಜ್ಯ, ಇಂಜಿನಿಯರಿಂಗ್‌, ವೈದ್ಯಕೀಯ, ದಂತ
ವೈದ್ಯಕೀಯ ಹೀಗೆ ಎಲ್ಲಾ ಪದವಿ ಕೋರ್ಸ್‌ಗಳಲ್ಲಿ ಸೀಮಿತವಾದ ವಿಷಯಗಳನ್ನು ಮಾತ್ರ ಅಧ್ಯಯನ ಮಾಡಿ
ಪರೀಕ್ಷೆ ಬರೆದು, ಪ್ರಮಾಣ ಪತ್ರ ಪಡೆಯಲು ಅವಕಾಶವಿದೆ. ಆದರೆ ಕಲಾ ವಿಭಾಗದ ವಿದ್ಯಾರ್ಥಿ ವಿಜ್ಞಾನ
ವಿಷಯವನ್ನು ವಿಜ್ಞಾನದ ವಿದ್ಯಾರ್ಥಿ ವಾಣಿಜ್ಯ ವಿಭಾಗದ ವಿಷಯವನ್ನು, ಇಂಜಿನಿಯರಿಂಗ್‌ ವಿದ್ಯಾರ್ಥಿ ಕಲಾ
ವಿಭಾಗದ ವಿಷಯ ಅಥವಾ ವೈದ್ಯಕೀಯ, ದಂತವೈದ್ಯಕೀಯ ವಿಭಾಗದ ವಿಷಯವನ್ನು ಕಲಾ ವಿಭಾಗದ
ವಿದ್ಯಾರ್ಥಿ ತರಗತಿಯಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಲು ಅವಕಾಶವಿಲ್ಲ. ಹೊಸ ಶಿಕ್ಷಣ ನೀತಿಯಲ್ಲಿ
ಇದಕ್ಕೆಲ್ಲಾ ಮುಕ್ತ ಅವಕಾಶ ಸಿಗಲಿದೆ. ವಿಶ್ವವಿದ್ಯಾಲಯಗಳು ಸಂಶೋಧನಾ ಕೇಂದವಾಗಿ ಪರಿವರ್ತನೆ ಆಗಲಿ,
ನಿರಂತರ ಕಲಿಕಾ ಮೌಲ್ಯಮಾಪನವು ಜಾರಿಯಾಗಲಿದ್ದು, ಪ್ರತಿ ಕಾಲೇಜುಗಳೇ ಪರೀಕ್ಷೆ ನಡೆಸಿ, ಪದವಿ ಪ್ರಮಾಣ
ನೀಡುವ ವ್ಯವಸ್ಥೆಗೆ ನಮ್ಮ ಶಿಕ್ಷಣ ಪದ್ಧತಿ ಬದಲಾಗಲಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತ
ಮುಂಚೂಣಿಯಲ್ಲಿ ನಿಲ್ಲಲಿದೆ ಮತ್ತು ಜ್ಞಾವಾಧಾರಿತವಾಗಿ 2035ರ ವೇಳೆಗೆ ಭಾರತ ಸೂಪರ್‌ ಪವರ್‌ ಆಗ
ಹೊರಹೊಮ್ಮಲಿದೆ.


ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಸಿ-2019) ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯು 2030ರ ದೂರದೃಷ್ಟಿ ಇಟ್ಟುಕೊಂಡು ರಚನೆಯಾಗಿದೆ ಮತ್ತು ಭಾರತೀಯ ಶಿಕ್ಷಣ
ವ್ಯವಸ್ಥೆಯಲ್ಲಿ ಆಗಬೇಕಿರುವ ಮೂಲಭೂತ ಪರಿವರ್ತನೆಗೆ ಇದು ಸಾಕ್ಷಿಯಾಗಲಿದೆ. ಉತ್ತಮ ಗುಣಮಟ್ಟದ
ಸಾರ್ವತ್ರಿಕ ಸಮಗ್ರ ಶಿಕ್ಷಣದ ಮೂಲಕ ಸಮಾನ ಜ್ಞಾನಾಧಾರಿತ ಸಮಾಜ ಸ್ಥಾಪಿಸಲು ಸಹಾಯ ಮಾಡಲಿದೆ.


ಕಡ್ಡಾಯ ಶಾಲಾ ಶಿಕ್ಷಣವನ್ನು 6 ರಿಂದ 14 ವರ್ಷದ ಬದಲಾಗಿ 3 ರಿಂದ 18 ವರ್ಷಕ್ಕೆ ಏರಿಸಿರುವುದು
ದೇಶದ ಮಾನವ ಸಂಪನ್ಮೂಲದ ಸಾಮರ್ಥ್ಯ ಹೆಚ್ಚಿಸಲು ಹೂರಕವಾಗಲಿದೆ. ಹೊಸ ಶಿಕ್ಷಣ ನೀತಿಯು 5ನೇ
ತರಗತಿಯವರೆಗೂ ಒಂದು ಹಂತ, 6 ರಿಂದ 8ನೇ ತರಗತಿ ಎರಡನೇ ಹಂತ, 9 ರಿಂದ 11ನೇ ತರಗತಿ 3ನೇ
ಹಂತ ಹಾಗೂ 12 ರಿಂದ 15ನೇ ತರಗತಿ 4ನೇ ಹಂತವಾಗಿ ವಿಂಗಡಿಸಿದೆ. ಅದೇನೆಂದರೆ ಪ್ರಾಥಮಿಕ ಪೌಢ,
ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು (5+3+4 ರಂತೆ ವಿಂಗಡಿಸಿದೆ). ಇದರಿಂದಾಗಿ, ಪ್ರತಿ ಮಗು 15
ವರ್ಷಗಳ ಕಡ್ಡಾಯ ಶಿಕ್ಷಣವನ್ನು ಪಡೆಯಬಹುದು. ಇದು ಸಮಗ್ರ ಮತ್ತು ಸಮನಾದ ಬೆಳವಣಿಗೆ ನೀಡುತ್ತದೆ.


8ನೇ ತರಗತಿ ಶಿಕ್ಷಣ ಮುಗಿದು 9ನೇ ತರಗತಿಗೆ ಸೇರುತ್ತಿದ್ದಂತೆ ಕೌಶಲ್ಯಾಧಾರಿತ ಶಿಕ್ಷಣ ಆರಂಭವಾಗುತ್ತದೆ
ಹಾಗೂ ಇಲ್ಲಿಂದಲೇ ವೃತ್ತಿಪರತೆಯ ಜ್ಞಾನ ಲಭ್ಯವಾಗುತ್ತದೆ. ಈಗಿನ ಶಿಕ್ಷಣ ಪದ್ದತಿಯಲ್ಲಿ ಕೌಶಲ್ಯ ಹಾಗೂ ವೃತ್ತಿ
ಕೊರತೆ ಪದವಿ ಶಿಕ್ಷಣದಲ್ಲಿ ಅಳವಡಿಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ 9ನೇ ತರಗತಿಯಿಂದಲೇ
ವಿದ್ಯಾರ್ಥಿಗಳಿಗೆ ಕೌಶಲ್ಕತೆ ಹಾಗೂ ವೃತ್ತಿ ಪರತೆಯ ಜ್ಞಾನ ನೀಡಲಾಗುತ್ತದೆ. 11ನೇ ತರಗತಿ ಪೂರೈಸಿದ ನಂತರ
12 ರಿಂದ 15ರ ವರೆಗಿನ ಶಿಕ್ಷಣ ವನ್ಯಾಸವೇ ಬದಲಾಗಲಿದೆ ಮತ್ತು ಅತ್ಯಂತ ವ್ಯವಸ್ಥಿತ ಹಾಗೂ ಅವಶ್ಯಕವಾದ
ವಿಧಾನವನ್ನು ಅಳವಡಿಸಲಾಗಿದೆ. 12 ರಿಂದ 15ನೇ ತರಗತಿಯವರೆಗೂ ಒಂದು ಶೈಕ್ಷಣಿಕ ಘಟ್ಟವಾಗಿ
ಪರಿಗಣಿಸಬಹುದು ಅಥವಾ 4 ವಿಭಾಗವಾಗಿಯೂ ಇದನ್ನು ವಂಗಡಿಸಿಕೊಳ್ಳಬಹುದು. ಒಂದು ವರ್ಷದ
ಪ್ರಮಾಣ ಪತ್ರ ಕೋರ್ಸ್‌, 2 ವರ್ಷದ ಡಿಪ್ಲೊಮೋ, 3 ವರ್ಷದ ಪದವಿ ಕೋರ್ಸ್‌ ಅಥವಾ 4 ವರ್ಷದ ಮಲ್ಪಿ


[ತತ್‌


ಡಿಸಿಪಿನರಿ ಬ್ಯಾಚುಲರ್‌ ಪದವಿ ಪಡೆಯಲು ಅವಕಾಶವಿದೆ.


ವಿದ್ಯಾರ್ಥಿ ತನ್ನ ಶೈಕ್ಷಣಿಕ ಕ್ಷಮತೆಯನ್ನು ಹೇಗೆ ಬೇಕಾದರೂ ರೂಪಿಸಿಕೊಳ್ಳಲು ಮುಕ್ತ ಅವಕಾಶವನ್ನು
ಹೊಸ ಶಿಕ್ಷಣ ನೀತಿಯಲ್ಲಿ ಕಲ್ಲಿಸಲಾಗಿದೆ. 11ನೇ ತರಗತಿಯ ನಂತರ 12ನೇ ತರಗತಿಯನ್ನು ಮಾತ್ರ ಕಲಿತರು.


255


ಒಂದು ವರ್ಷಕ್ಕೆ ಅಗತ್ಯವಾದ ಕೌಶಲ್ಕದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಅದರ ಆಧಾರದಲ್ಲಿ ಉದ್ಯೋಗ
ಪಡೆಯಲು ಅವಕಾಶವಿದೆ. 2 ವರ್ಷ (12 ಮತ್ತು 13ನೇ ತರಗತಿ) ಪೂರೈಸಿದರೆ ಡಿಪ್ಲೋಮೋ ಪ್ರಮಾಣ ಪತ್ರ
ಸಿಗಲಿದೆ. ಇದರ ಆಧಾರದಲ್ಲಿ ಉದ್ಯೋಗ ಸೇರಿಕೊಳ್ಳಲು ಅವಕಾಶವಿದೆ. 12 ರಿಂದ 14ನೇ ತರಗತಿಯವರೆಗೆ
ಓದಿ ಸಾಮಾನ್ಯ ಪದವಿ ಪಡೆದು ಉದ್ಯೋಗಕ್ಕೆ ಸೇರಬಹುದು ಅಥವಾ 13ನೇ ತರಗತಿ ತನಕ ಓದಿ 4 ವರ್ಷದ
ಕೋರ್ಸ್‌ ಪೂರ್ಣಗೊಳಿಸಬಹುದು. ಇದರ ಜೊತೆಗೆ 1 ವರ್ಷದ ಪ್ರಮಾಣ ಪತ್ರ 2 ವರ್ಷದ ಡಿಪ್ಲೊಮೋ
ಅಥವಾ 3 ವರ್ಷದ ಪದವಿ ಪಡೆದು ಉದ್ಯೋಗ ಸೇರಿಕೊಂಡು ವಿದ್ಯಾರ್ಥಿ ಮತ್ತೆ ಪುನಃ ವ್ಯಾಸಂಗ
ಮುಂದುವರೆಸಲು ಅವಕಾಶ ಹೊಸ ನೀತಿಯಲ್ಲಿ ನೀಡಲಾಗಿದೆ. ಹೀಗಾಗಿ ಶಿಕ್ಷಣದ ಸಮಗ್ರತೆಯ ಪರಿಕಲ್ಲನೆಯ
ಎಲ್ಲಾ ಅಂಶಗಳನ್ನು ಪರಿಗಣಿಸಿ ಅತ್ಯಂತ ಸೂಕ್ತ ವಿಧಾನ ಅಳವಡಿಸಿಕೊಂಡು ನೀತಿಯನ್ನು ರೂಪಿಸಲಾಗಿದೆ.
ಅಕಾಡೆಮಿಕ್‌ ಬ್ಯಾಂಕ್‌ ಆಪ್‌ ಕ್ರೆಡಿಟ್‌ (ಎಬಿಸಿ) ಸ್ಥಾಪಿಸಲಾಗುತ್ತದೆ. ವಿದ್ಯಾರ್ಥಿಗಳು ಪಡೆದ ಪದವಿಯನ್ನು
ಡಿಜಿಟಲ್‌ ರೂಪದಲ್ಲಿ ನೀಡಲಾಗುತ್ತದೆ.


ವಿದ್ಯಾರ್ಥಿಗಳು ಆಯಾ ತರಗತಿ ಅಥವಾ ವರ್ಷದ ಪದವಿ ಪ್ರಮಾಣ ಪತ್ರವನ್ನು ಡಿಜಿಟಲ್‌
ಸ್ಫೋರೇಜ್‌ನಿಂದ ಬೇಕೆಂದಾಗ ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗಿದೆ.


ಇದೆಲ್ಲದಕ್ಕಿಂತ ಮುಖ್ಯವಾಗಿ ಉನ್ನತ ಶಿಕ್ಷಣ ಹಂತದಲ್ಲಿ ಅಂತಿಮ ಪರೀಕ್ಷೆಯ ಪರಿಕಲ್ಪನೆ ಕ್ಷೀಣಿಸುತ್ತದೆ.
ನಿರಂತರ ಮೌಲ್ಯಮಾಪನದ ವ್ಯವಸ್ಥೆ ಜಾರಿಗೆ ಬರಲಿದೆ. ಕಾಲೇಜುಗಳಲ್ಲಿ ಆಗಿಂದ್ಲಾಗೆ ತರಗತಿಯ ಪಠ್ಯಕ್ರಮದ
ಆಧಾರದಲ್ಲಿ ಪರೀಕ್ಷೆ ನಡೆಸುತ್ತಾರೆ. ಮೌಲ್ಯಮಾಪನ ಮಾಡುತ್ತಾರೆ. ಇದೇ ವಿಧಾನ ಮುಂದುವರೆಯುತ್ತದೆ.
ಹೀಗೆ ನಿರಂತರ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದರಲ್ಲಿ ಶಿಕ್ಷಕರ ತರಬೇತಿ ಮಂಡಳಿಯೂ
ರಚನೆಯಾಗಲಿದೆ. ಕಾಲಕಾಲಕ್ಕೆ ಉನ್ನತೀಕರಿಸಿ ಬೋಧನೆಗಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.


ಸದ್ಯ ಅಮೆರಿಕದಲ್ಲಿ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣ ಶೇ.80ಕ್ಕಿಂತಲೂ ಹೆಚ್ಚಿದೆ. ಭಾರತದಲ್ಲಿ
ಶೇ.26.3 ರಷ್ನಿದೆ. ಒಟ್ಟಾರೆಯಾಗಿ ಭಾರತದ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣವನ್ನು 2035ರ ವೇಳೆಗೆ
ದ್ರಿಗುಣಗೊಳಿಸುವ ಎಲ್ಲ ಅಂಶಗಳನ್ನು ಈ ನೀತಿ ಹೊಂದಿದೆ.


ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲು ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು
ದೇಶದ ಸರಿಕೋಧನಾ ಶಕ್ತಿಯನ್ನು ಬಲಪಡಿಸುವ ಪಕ ಜೊತೆಗೆ ಭಾರತವನ್ನು ಜ್ಞಾನ ಸಂಪತ್ತಿನಲ್ಲಿ
ಪ್ರಬಲವಾಗಿಸಲಿದೆ. ಸಂಶೋಧನಾ ಅಡಿಪಾಯವನ್ನು ಗಟ್ಟಿಗೊಳಿಸಲು A ವಿಧಾನಗಳು ಎಲ್ಲಾ
ಹಂತಗಳಲ್ಲಿ ಅಂತರ ಶಿಸ್ತು ಮತ್ತು ಟ್ರಾನ್ಸ್‌-ಡಿಸಿಫ್ಲಿನರಿ ಸಂಶೋಧನೆಗಳನ್ನು ಉತ್ತೇಜಿಸುತ್ತದೆ. ಸಾಮಾಜಿಕ-
ಸಾಂಸ್ಕೃತಿಕ ಮತ್ತು ಆರ್ಥಿಕ ಗುರುತುಗಳ ಮೂಲಕ ಕಡಿಮೆ ಪ್ರಶಿನಿಧಿಸಲ್ಲಟ್ಟ ಗುಂಪಿನ ಪ್ರಸ್ತಾವಿತ ವಿಶೇಷ
ಕಾಳಜಿಯಿಂದ ಸಮಗ್ರ ಶಿಕ್ಷಣದ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ. ಉನ್ನತ ಶಿಕ್ಷಣದ ಪುನರ್‌ ರಚನೆ
ಮತ್ತು ಬಲವರ್ಧನೆಯು ವೃತ್ತಿಪರ ಹಾಗೂ ಉತ್ತಮ ಗುಣಮಟ್ಟದ ತರಬೇತಿಗೆ ಕಾರಣವಾಗುತ್ತದೆ. ಉನ್ನತ
ಶಿಕ್ಷಣದಲ್ಲಿ ಕಲೆ, ಮಾನವೀಯತೇ ವಿಜ್ಞಾನ, ಕ್ರೀಡೆ ಮತ್ತು ಇತರ ವೃತ್ತಿಪರ ವಿಷಯಗಳ ಸಂಯೋಜನೆಯೊಂದಿಗೆ
ಅಧ್ಯೆಯನ ಮಾಡಲು ವಿಷಯಗಳ ನಮ್ಯತೆ ಮತ್ತು ಆಯ್ಕೆಯನ್ನು ಈ ನೀತಿ ಹೆಚ್ಚಿಸಿದೆ.


ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ. ಶೈಕ್ಷಣಿಕ ದತ್ತಾಂಶ ಮತ್ತು ವೃತ್ತಿಪರ ಶಿಕ್ಷಣದ ರಾಷ್ಟ್ರೀಯ
ಭಂಡಾರದ ಮೂಲಕ ಶಿಕ್ಷಣದ ರಾಷ್ಟ್ರೀಯ ಮಿಷನ್‌ "ಸ್ಥಾಪಿಸಲು "ನೀತಿಯಲ್ಲಿ ಹನ ನೀಡಲಾಗಿದೆ. ಇದು
ವೃತ್ತಿಪರ ಶಿಕ್ಷಣವನ್ನು ಮತ್ತು ವಯಸ್ಕರ ಶಿಕ್ಷಣವನ್ನು ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಯೋಜಿಸುತ್ತದೆ. ನವೀನ
ಶಿಕ್ಷಣಂ ಸಮಸ್ತೆ ಸೈ ಸಂ ವಿಧಾನ 'ಮತ್ತು ಇಂಟರ್‌ ಶಿಪ್‌ ಸಂಶೋಧನಾ ಅವಕಾಶಗಳೊಂದಿಗೆ ವಿದ್ಯಾರ್ಥಿಗಳು
ಉದ್ಯೋಗಕ್ಕೆ ಸಿದ್ದರಾಗುತ್ತಾರೆ ಹಾಗೂ ಮೌಲ್ಯಾಧಾರಿತ ಜೀವನವನ್ನು ನಡೆಸಲು ಅಡಿಪಾಯ ಹಾಕಿಕೊಡಲಿದೆ.
ಶಿಕ್ಷಣದ ವಾಣಿಜ್ಯಕರಣ ಪರಿಕಲ್ಲನೆಯನ್ನು ಬದಲಾಯಿಸಿ ಶಿಕ್ಷಣವನ್ನು ದತ್ತಿ ಚಟುವಟಿಕೆಯನ್ನಾಗಿ ಮಾಡಲು
ಹೊಸ ನೀತಿಯಲ್ಲಿ ಉದ್ದೇಶಿಸಲಾಗಿದೆ. ಗುಣಮಟ್ಟದ ಶಿಕ್ಷಣ ದುಬಾರಿ ಎಂಬ ಸಮಾಜದ ಗುಹಿಕೆಗಳನ್ನು
ತೊಡೆದುಹಾಕಲಿದೆ. ಶಿಕ್ಷಣ ಸಂಸ್ಥೆ ಮತ್ತು ವೈಯಕ್ತಿಕ ಮಟ್ಟದಲ್ಲಿ ಶಿಕ್ಷಣ ಒದಗಿಸುವವರನ್ನು
ಸಬಲೀಕರಣಗೊಳಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆಯ ಮೇಲೆ ಆದ್ಯತೆ ನೀಡಲಿದೆ. ಶಿಕ್ಷಣದ
ಮೇಲಿನ ಸಾರ್ವಜನಿಕ ಹೂಡಿಕೆಯನ್ನು ಶೇ.10 ರಿಂದ ಶೇ. 20ಕ್ಕೆ ಹೆಚ್ಚಿಸಲು ಮತ್ತು ಲೋಕೋಪಕಾರಿ ಖಾಸಗಿ
ಧನ ಸಹಾಯವನ್ನು ಉತ್ತೇಜಿಸಲು ಎನ್‌ಪಿಎಸ್‌ನಲ್ಲಿ ಉದ್ದೇಶಿಸಲಾಗಿದೆ. ಇದು ಶಿಕ್ಷಣ ಸಂಸ್ಥೆಗಳ ಮೂಲ


256


ಸೌಕರ್ಯ ಅಭಿವೃದ್ದಿ ವಿದ್ಯಾರ್ಥಿವೇತನಗಳು, ಅಧ್ಯಾಪಕ ಶೈಕ್ಷಣಿಕ ಸಾಮರ್ಥ ವರ್ಧನೆ ಸಂಶೋಧನಾ
ಚಟುವಟಿಕೆಗಳಲ್ಲಿನ ಸೌಲಭ್ಯಗಳನ್ನು ಸುಧಾರಿಸಲಿದೆ.


ಟ್ಪನ್ನಿಂಗ್‌ ಪ್ರೋಗ್ರಾಮ್‌: ಭಾರತೀಯ ಶಿಕ್ಷಣ ವ್ಯವಸ್ಥೆಯ ಅಡಿಪಾಯ ಎಂದಾಗಿದ್ದ ನಳಂದ, ತಕ್ಷಶಿಲಾ
ಮೊದಲಾದ ವಿಶ್ವವಿದ್ಯಾಲಯಗಳಿಗೆ ವಿದೇಶದಿಂದ ಅಸಂಖ್ಯಾತ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದರು.
ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಭಾರತೀಯ ವಿದ್ಯಾರ್ಥಿಗಳು ವದೇಶಕ್ಕೆ ಹೋಗಿ ವ್ಯಾಸಂಗ ಮಾಡುವ ಪ್ರವೃತ್ತಿ
ಹೆಚ್ಚಾಗಿದೆ. ಇದಕ್ಕೊಂದು ಹೊಸ ರೂಪ ನೀಡಲು ಬಟ್ದನ್ನಿಂಗ್‌ ಪ್ರೋಗ್ರಾಮ್‌ ಪ್ರಸ್ತಾಪವನ್ನು ಹೊಸ ನೀತಿಯಲ್ಲಿ
ಮಾಡಲಾಗಿದೆ.


ಭಾರತದ ಯಾವುದೇ ವಿಶ್ವವಿದ್ಯಾಲಯ ವಿದೇಶದಲ್ಲಿ ತನ್ನ ಶಾಖೆ ತೆರೆಯಲು ಸರ್ಕಾರ ಅನುಮತಿ
ನೀಡಲಿದೆ. ಅಲ್ಲಿರುವ ವಿದ್ಯಾರ್ಥಿಗಳು ಭಾರತೀಯ ವಿಶ್ವವಿದ್ಯಾಲಯದ ಹೆಸರಿನಲ್ಲೇ ಪದವಿ ಪಡೆಯಲು
ಅವಕಾಶವಿದೆ ಮತ್ತು ಭಾರತೀಯ ವಿಶ್ವವಿದ್ಯಾ ಲಯವೇ ಅವರಿಗೆ ಪ್ರಮಾಣ ಪತ್ರ ನೀಡಲಿದೆ. ಹಾಗೆಯೇ
ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಶಾಖೆ ಆರಂಭಿಸಲು ಅವಕಾಶವಿದೆ. ಭಾರತದಲ್ಲಿ
ಒಂದು ಅಥವಾ ಎರಡು ವರ್ಷ ಓದು, ಮುಂದಿನ ವ್ಯಾಸಂಗವನ್ನು ವಿದೇಶದಲ್ಲಿ ಪೂರ್ಣಗೊಳಿಸಲು,
ವಿದೇಶದಲ್ಲಿ ಅರ್ಧಭಾಗ ಅಧ್ಯಯನ ಮಾಡಿ, ಇನ್ನುಳಿದರ್ಧವನ್ನು ಭಾರತದಲ್ಲಿ ಅಧ್ಯಯನ ಮಾಡಲು ಅವಕಾಶ
ಈ ನೀತಿ ನೀಡಲಿದೆ. ಭಾರತೀಯ ಶಿಕ್ಷಣ ಪರಂಪರೆಯನ್ನು ಇದು ಇನ್ನಷ್ಟು ಸದೃಢಗೊಳಿಸಲಿದೆ. ನೀತಿಯ
ಅನುಷ್ಠಾನ ಸಮರ್ಪಕವಾಗಿ ಈಡೇರಿದರೆ ಭಾರತವು ವಿಶ್ವದ ಜ್ಞಾನಕೇಂದವಾಗಲಿದೆ ಮತ್ತು ಶಿಕ್ಷಣ ಇಲಾಖೆ
ಶಿಕ್ಷಣದ ಶ್ರೇಷ್ಟತೆಯ ಪ್ರತೀಕವಾಗಿ ಉಳಿಯಲಿದೆ.


ಲೇಖಕರು:ಹ್ರೊ; ಕೆ. ಆರ್‌. ವೇಣುಗೋಪಾಲ್‌,
ಕುಲಪತಿ ಬೆಂಗಳೂರು, ವಿಶ್ವವಿದ್ಯಾಲಯ.
ಆಧಾರ:ಉದಯವಾಣಿ:ದಿನಾಂಕ: 31.07.2020


257


6. ಹೊಸ ಶಿಕ್ಷಣ ನೀತಿ ನವಭಾರತಕ್ಕೆ ಭವ್ಯ ಮುನ್ನುಡಿ


ಭಾರತೀಯ ಶಿಕ್ಷಣ ವ್ಯವಸ್ಥೆಗೆ ಗುರು-ಶಿಷ್ಯ ಪ ಪರಂಪರೆಯ ಭದವಾದ ಅಡಿಪಾಯವಿತ್ತು. ಆಧುನಿಕ ಶಾಲಾ
ಶಿಕ್ಷಣದಲ್ಲಿನ ಲೋಪಗಳನ್ನು ನೋಡಿದರೆ, ಹಳೆಯ ಗುರುಕುಲ ಪದ್ಧತಿ ಕೈಬಿಟ್ಟು ಹೋಗಿದ್ದು, ಪ್ರಮಾದ
ಎಂದೆನಿಸಿದರೆ ಆಶ್ಚರ್ಯವೇನಿಲ್ಲ. ಏಕೆಂದರೆ ಆಗ ಶಿಕ್ಷಣದ ಉದ್ದೇಶ ಕಲಿಸುವುದು ಮಾತ್ರವಾಗಿತ್ತು ಆದರೆ
ಕಾಲಕ್ಕೆ ತಕ್ಕಂತೆ ಸಮಾಜ ಬದಲಾಗುತ್ತಾ ಹೋದಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗಿದೆ. ಈ ಬದಲಾವಣೆ
ಅನಿವಾರ್ಯವೂ ಹೌದು.

ಜ್ಞಾನಭಂಡಾರವನ್ನು ವಿಸ್ತರಿಸಲು ಮತ್ತು ಹೊಸ ಸವಾಲುಗಳನ್ನು ಎದುರಿಸಲು, ಮಾರ್ಪಾಡುಗಳು ತೀರಾ
ಅಗತ್ಯ. ಈಗಿನ ಶಿಕ್ಷಣ ವ್ಯವಸ್ಥೆ ಕೂಡ ಕಾಲಕ್ಕೆ ಬದಲಾವಣೆಯ ಗಾಳಿಗೆ ಒಡ್ಡಿಕೊಳ್ಳಬೇಕಿತ್ತು. ಆದರೆ ಕಳೆದ 34
ವರ್ಷಗಳಿಂದ ಬದಲಾವಣೆಯ ಪರ್ವ ಬರಲೇ ಇಲ್ಲ. ಜಾಗತಿಕವಾಗಿ ಮನ್ನಣೆ ಪಡೆದಿರುವ, ಅಭೂತವಫರ್ವ
ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಾಂತಿಕಾರಕ ನಿರ್ಧಾರಗಳನ್ನು
ಕೈಗೊಂಡಿದ್ದಾರೆ. ಇದೀಗ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಬಹುವರ್ಷಗಳ ನಿರೀಕ್ಷೆಯನ್ನು
ನಿಜಗೊಳಿಸಿದ್ದಾರೆ. ಇದೇ ರಾಷ್ಟ್ರೀಯ ಶಿಕ್ಷಣ ನೀತಿ-2020.
ವ್ಯಕ್ತಿತ್ವ ನಿರ್ಮಾಣದ ಉದ್ದೇಶ: ಶಿಕ್ಷಣ ನೀತಿ ಕೇವಲ ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಕಾನೂನು ಅಲ್ಲ. ಇದು
ದೇಶದ ಸಾಮಾಜಿಕ ಮತ್ತು ಅರ್ಥಿಕ ವ್ಯವಸ್ಥೆಯನ್ನು ಬದಲಿಸುವ ERR ಹೌದು. ಹೊಸ
ಪೀಳಿಗೆಯ ಮಕ್ಕಳ ಭವಿಷ್ಯ ಹೇಗಿರಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು ರಚಿಸಿರುವ ನೀಲ ನಕ್ಷೆ
ಭಾರತೀಯ ಸಾಲಿಪ್ರದಾಯಿಕ ಶಿಕ್ಷಣದ ಮೂಲ ಉದ್ದೇಶ ವ್ಯಕ್ತಿತ್ವ ನಿರ್ಮಾಣವೇ ಹೊರತು ಅಕ್ಷರಗಳನ್ನು,
ಸಂಖ್ಯೆಗಳನ್ನು ಕಲಿಸುವುದಲ್ಲ. ಈ ವ್ಯಕ್ತಿತ್ವ ನಿರ್ಮಾಣ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿಲ್ಲ ಎಂಬ ದೂರು ಬಹು
ಕಾಲದಿಂದಲೂ ಇದೆ. ಹೀಗಾಗಿ ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳು, ಭ್ರಷ್ಟಾಚಾರಕ್ಕೆ ಶಿಕ್ಷಣ
ನೀತಿಯು ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡುತ್ತದೆ. ಈ ನೀತಿಯಡಿ ಆಧುನಿಕ ಶಿಕ್ಷಣ ನೀಡುವ ಜೊತೆಗೆ ಗುರು-
ಶಿಷ್ಯ ಪರಂಪರೆ ಪದ್ಧತಿಯ ಬಲವಾದ ಸತ್ವವನ್ನು ತುಂಬಿಸುವ ಪ್ರಯತ್ನ ಕಾಣುತ್ತದೆ.
ಮಾತೃ ಭಾಷೆಯಲ್ಲೇ ಕಲಿಕೆ: ಶಿಕ್ಷಣ ಕ್ಷೇತ್ರದಲ್ಲಿ ಮಾತೃ ಅಥವಾ ಸ್ಥಳೀಯ ಭಾಷೆಗೆ ಆದ್ಯತೆ ದೊರೆಯುತ್ತಿಲ್ಲ ಎಂಬ
ದೂರು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ನಮ್ಮಲ್ಲಿ ಕನ್ನಡ ಸಂಘಟನೆಗಳು, ಸಾಹಿತಿಗಳು, ಚಿಂತಕರು
ಮಾತೃಭಾಷಾ ಕಲಿಕೆಗೆ ಒತ್ತು ನೀಡಿ ಎಂದು ಆಗಹಿಸುತ್ತಲೇ ಇದ್ದಾರೆ. ಇಂತಹ ಹೊತ್ತಿನಲ್ಲಿ 5ನೇ ತರಗತಿಯವರೆಗೆ
ಮಾತೃಭಾಷೆಯಲ್ಲೇ ಕಲಿಸಬೇಕು ಎಂಬ ಅಂಶವನ್ನು ಶಿಕ್ಷಣ ನೀತಿಯಲ್ಲಿ ಸೇರಿಸಲಾಗಿದೆ. ಇನ್ನೂ ಒಂದು ಹೆಜ್ಜೆ
ಮುಂದೆ ಹೋಗಿ ಸಾಧ್ಯವಾದರೆ 8ನೇ ತರಗತಿಯವರೆಗೂ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಿ ಎಂದು ನೀತಿ
ಹೇಳಿದೆ. ಇಂಗ್ಲೀಷ್‌ ವ್ಯಾಮೋಹದಿಂದ ಮಾತೃಭಾಷೆಯ ಕಡೆಗಣನೆಯಾಗಿರುವ ಈ ಕಾಲದಲ್ಲಿ ಮಾತೃ ಭಾಷೆಗೆ
ಒತ್ತು ನೀಡುವ ಶಿಕ್ಷಣ ನೀತಿ ಸಕಾಲಿಕವಾಗಿದೆ. ಆದರೆ ಈ ವಿಚಾರದಲ್ಲಿ ಕೇಂದಕ್ಕಿಂತಲೂ ಆಯಾ ರಾಜ್ಯ
ಸರ್ಕಾರಗಳ ಹೊಣೆ ದೊಡ್ಡದು. ಪೋಷಕರು ಸಹ ಈ ವಿಚಾರದಲ್ಲಿ ಚಿಂತನೆ ನಡೆಸಬೇಕು.
ಸ್ಥಳೀಯ ಭಾಷೆಯಲ್ಲೇ ವಿಜ್ಞಾನ: ವಿಜ್ಞಾನವನ್ನು ಇಂಗ್ಲೀಷ್‌ ಬದಲು ಮಾತೃ ಭಾಷೆಯಲ್ಲಿ ಕಲಿಸಬೇಕು ಎಂಬ
ಚರ್ಚೆ ಹಿಂದಿನಿಂದಲೂ ಇದೆ. ಈ ಕುರಿತು ಪ್ರಯತ್ನ ನಡೆದಿದೆ. ಆದರೆ, ವಿಜ್ಞಾನ ವಿಷಯ ಮಕ್ಕಳಿಗೆ ಸುಲಭವಾಗಿ
ಅರ್ಥವಾಗುವಂತೆ ಮಾಡಲು ಗುಣಮಟ್ಟದ ಪಠ್ಯಪುಸ್ತಕಗಳನ್ನು ರಚಿಸಬೇಕು. ವಿಜ್ಞಾನದಲ್ಲಿ ಇಂಗ್ಲೀಷ್‌ ಪದಗಳನ್ನು
ಸ್ಥಳೀಯ ಭಾಷೆಗೆ ತರುವುದು ಬಹಳ ಕಷ್ಟ. ಆದರೆ, ಅದನ್ನು ಸಾಧ್ಯವಾಗಿಸಿ ಗುಣಮಟ್ಟದ ಪಠ್ಯ ಪುಸ್ತಕಗಳನ್ನು
ರಚಿಸಬೇಕು ಎಂದು ನೀತಿ ಹೇಳುತ್ತದೆ. ಇಂತಹ ಪುಸ್ತಕಗಳನ್ನು ರೂಪಿಸಿದರೆ, ಸುಲಭ ಕಲಿಕೆ ಮತ್ತು ಭಾಷೆಯ
ಬೆಳವಣಿಗೆ ಸಾಧ್ಯವಾಗಲಿದೆ.

ದೇಶದ ಪ್ರತಿ ಮಗುವಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡಲು ದಿವಂಗತ ಮಾಜಿ ಪ್ರಧಾನಿ ಅಟಲ್‌
ಬಿಹಾರಿ ವಾಜಪೇಯಿ ಅವರು "ಸರ್ವಶಿಕ್ಷಣ ಅಭಿಯಾನ” ಆರಂಭಿಸಿದರು. ಅವರ ಪ್ರೇರಣೆಯಿಂದಾಗಿ ನಂತರದ
ವರ್ಷಗಳಲ್ಲಿ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯ್ದೆಯು (ಆರ್‌ಟಿಐ) ಜಾರಿಯಾಯಿತು. ಹೊಸ ನೀತಿಯಲ್ಲಿ ಈ
ಕಾಯ್ದೆಯ ಮುಂದುವರೆದ ಭಾಗವನ್ನು ನೋಡಬಹುದು.


ಬದುಕು ನೀಡುವ ಕಲಿಕೆ: ಶಿಕ್ಷಣವನ್ನು ಕೇವಲ ಜ್ಞಾನ ಸಂಪಾದನೆಗೆ ಮಿತಿಗೊಳಿಸಲು ಸಾಧ್ಯವಿಲ್ಲ. ಬದುಕಲು
ಕಲಿಸುವುದು ಶಿಕ್ಷಣದ ಉದ್ದೇಶವಾಗಬೇಕು. ಮಹಾತ್ಮ ಗಾಂಧಿ ಅವರ ಗಾಮ ಸ್ವರಾಜ್ಯದ ಪರಿಕಲ್ಪನೆಗೆ
ಪೂರಕವಾಗಿ ನೀತಿಯಲ್ಲಿ ಕೆಲ ಅಂಶಗಳನ್ನು ಸೇರಿಸಲಾಗಿದೆ. ಇದು ಬದುಕುವುದನ್ನು ಹೇಳಿಕೊಡುತ್ತದೆ. ದೈಹಿಕ
ಶ್ರಮವನ್ನು ಬೇಡುವ ಕೃಷಿ ತೋಟಗಾರಿಕೆ, ಕುಂಬಾರಿಕೆ, ಕಮ್ಮಾರಿಕೆ ಮೊದಲಾದುವುಗಳನ್ನು ಕಲಿಸುವುದು ಹೊಸ


258


ಶಿಕ್ಷಣದ ಭಾಗವಾಗಲಿದೆ. ಇದರಿಂದಾಗಿ ಗ್ರಾಮೀಣ ಜೀವನವು ಶಿಕ್ಷಣ ವ್ಯವಸ್ಥೆಯೊಂದಿಗೆ ಬೆರೆಯಲಿದೆ.
ಮಹಾನಗರಗಳಲ್ಲಿ ಉತ್ತಮ ಸಂಬಳ ಪಡೆಯುವುದು ಶಿಕ್ಷಣದ ಗುರಿ ಎಂಬ ನಂಬಿಕೆ ಕಮೇಣ ದೂರವಾಗಲಿದೆ.


ಯುವಜನರು ಒಂದು ವಿಷಯವನ್ನು ವ್ಯಾಸಂಗ ಮಾಡಿ ಅದರ ವಿಷಯಾಧಾರಿತವಾಗಿ ಉದ್ಯೋಗ
ಹೊಂದುತ್ತಿದ್ದಾರೆ. ಇದು ಸರಿ ಎನಿಸಿದರೂ ಇತರ ಕೌಶಲ್ಯ ಅಥವಾ ಇತರ ವಿಷಯಗಳ ಜ್ಞಾನವಿಲ್ಲದಿದ್ದರೆ
ಸರ್ಧಾತ್ಮಕ ಜಗತ್ತಿನಲ್ಲಿ ಸೋಲುವ ಅಪಾಯವಿದೆ. ಹೊಸ ನೀತಿಯು ಕೌಶಲ್ಯಾಭಿವೃದ್ಧಿಯನ್ನು ಶಿಕ್ಷಣಂ ವ್ಯವಸ್ಥೆಗೆ
ಅಳವಡಿಸುತ್ತದೆ. ಇದರಲ್ಲಿ 6ನೇ ತರಗತಿಯಿಂದಲೇ ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಾಭಿವೃದ್ದಿಗೆ ಅವಕಾಶ
ದೊರೆಯಲಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಆಸಕ್ತಿ ಇದ್ದರೆ ಕಲಾ ವಿಭಾಗದ ವಿಷಯವನ್ನೂ ಕಲಾ
ವಿಭಾಗದ ವಿದ್ಯಾರ್ಥಿ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ್ದನ್ನೂ ಕಲಿಯಬಹುದು.

ಇಷ್ಟು ದಿನ ಕ್ರೀಡೆ, ಸಂಗೀತ, ನೃತ್ಯ ಮೊದಲಾದವುಗಳನ್ನು ಪಠ್ಯೇತರ ಚಟುವಟಿಕೆಗಳು ಎಂದು
ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿತ್ತು ಇನ್ನು ಅವೆಲ್ಲವೂ ಪಠ್ಯದ ಭಾಗವೇ ಆಗಲಿದೆ. ಈ ರೀತಿ
ಒಂದರೊಗಳಗೊಂದು ಎಂಬ ಅವಕಾಶವೂ ಇರುವುದು ಬಹುದೊಡ್ಡ ಕ್ರಾಂತಿ, ಇದರ ಪರಿಣಾಮ ಒಬ್ಬ
ವಿದ್ಯಾರ್ಥಿ ಶಿಕ್ಷಣ ಸಂಸ್ಥೆಯಿಂದ ಹೊರ ಬಂದಾಗ ಆತನ ಜ್ಞಾನ ಸಮಗವಾಗಿರುತ್ತದೆ. ಶಿಕ್ಷಣದ ಹಂತಗಳನ್ನು
ಹೊಸದಾಗಿ ವಿಭಾಗಿಸಿರುವುದು ಇದಕ್ಕೆ ಪೂರಕವಾಗಿದೆ.
ಉದ್ಯೋಗದ ದೂರದೃಷ್ಟಿ: ಬಾಲ್ಯದಿಂದಲೇ ಕಲಿಯುವ ಪಕ್ರಿಯೆ ಶುರುವಾಗುತ್ತದೆ. ಕಾಲೇಜು ಶಿಕ್ಷಣ ಮುಗಿಸಿದ
ಯುವಕ/ಯುವತಿಯರು ಹೊರ ಜಗತ್ತಿಗೆ ಬಂದಾಗ ಉದ್ಯೋಗ ದೊರೆಯದೆ ಭರಮನಿರಸನಗೊಳ್ಳುವ
ಸಾಧ್ಯತೆಯೇ ಹೆಚ್ಚಿರುತ್ತದೆ. ಹೊಸ ನೀತಿಯು ಯುವಜನರನ್ನು ಒಂ೦ದಕ್ಕೇ ಸೀಮಿತಗೊಳಿಸದೆ ಹಲವಾರು
ಅಂಶಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಈ ರೀತಿಯ ಅವಕಾಶ ಸೃಷ್ಟಿಸುವ ಶಿಕ್ಷಣ ನೀತಿಯನ್ನು
ಹುಟ್ಟುಹಾಕಬೇಕೆಂಬುದು ಹಲವಾರು ವರ್ಷಗಳ ಕನಸಾಗಿದೆ. ಆದ್ದರಿಂದಲೇ ಭವಿಷ್ಯದಲ್ಲಿ ದೇಶದ ಉದ್ಯೋಗ
ಕ್ಷೇತ್ರ ಹೇಗಿರಲಿದೆ ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡು ನೀತಿ ರಚಿಸಲಾಗಿದೆ. ಡಾ.ಕೆ. ಕಸ್ತೂರಿ ರಂಗನ್‌,
ಪ್ರೊ.ಎಂ.ಕೆ. ಶ್ರೀಧರ್‌ ಅವರಂತಹ ಶಿಕ್ಷಣ ತಜ್ಞರ ಮುಂದಾಲೋಚನೆಯನ್ನು ನೀತಿಯಲ್ಲಿ ಕಾಣಬಹುದು 2030ರ
ಒಳಗೆ ಈ ನೀತಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸುತ್ತಾ ಸಾಗಿದಂತೆ ದೇಶ ಬಲಿಷ್ಟವಾಗುತ್ತಾ
ಹೋಗುತ್ತದೆ.


ಮಕ್ಕಳ ಮನಸನ್ನು ಅರ್ಥ ಮಾಡಿಕೊಂಡು ಅವರಿಗೆ ಕಲಿಸುವ ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯ
ಶಿಕ್ಷಕರಿಗೆ ನಾಲ್ಕು ವರ್ಷದ ಬಿ.ಎಡ್‌ ಕಲಿಕೆ ಸ್ಪಾಗತಾರ್ಹ, ಇದರ ಜೊತೆಗೆ ಬೇರೆ ವಿಷಯಗಳನ್ನು ಕಲಿಸಲು
ವಿಷಯ ತಜ್ಞರನ್ನು ನೇಮಕ ಮಾಡಿಕೊಳ್ಳುವ ಅವಕಾಶವಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವಂತ ಶಿಕ್ಷಕರಿಗೆ
ಪ್ರೋತ್ಸಾಹಿಸುವುದು, ವರ್ಗಾವಣೆಯಲ್ಲಿ ವಿನಾಯಿತಿ ನೀಡಿ ಅವರು ಒಂದೇ ಕಡೆ ನೆಲೆಸಿ ಅಧ್ಯಯನದ ಕಡೆ
ಗಮನಹರಿಸುವಂತೆ ಮಾಡುವುದು, ಶಾಲೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿಗೆ ಒತ್ತು ಸೇರಿದಂತೆ ಮೊದಲಾದ
ಕ್ರಮಗಳು ಶಿಕ್ಷಕ ಸ್ನೇಹಿಯಾಗಿವೆ.
ನವಭಾರತ ನಿರ್ಮಾಣ ಹತ್ತಿರದಲ್ಲಿದೆ: ಈ ನೀತಿಯಲ್ಲಿನ ಅಂಶಗಳನ್ನು ಒಮ್ಮೆ ಓದಿದರೆ "ನವಭಾರತ' ನಿರ್ಮಾಣ
ತೀರಾ ಹತ್ತಿರದಲ್ಲಿ ಇದೆ ಎಂಬುದು ಸ್ಪಷ್ಟವಾಗುತ್ತದೆ. ಕೇಂದದಲ್ಲಿ ಈ ಹಿಂದೆ ಮಾನವ ಸಂಪನ್ಮೂಲ ಸಚಿವರಾಗಿದ್ದ
ಸ್ಮತಿ ಇರಾನಿ, ಪ್ರಕಾಶ್‌ ಜಾವ್ಲೇಕರ್‌ ಹಾಗೂ ಈಗಿನ ಶಿಕ್ಷಣ ಸಚಿವ ರಮೇಶ್‌ ಪ್ರೋಖ್ರಿಯಾಲ್‌ ಅವರ ಇಷ್ಟು
ವರ್ಷಗಳ ಪ್ರಯತ್ನಗಳು ನೂರಾರು ವರ್ಷಗಳ ಕಾಲ ಸಮರ್ಥ ಯುವ ಪೀಳಿಗೆಯ ಸೃಷ್ಟಿಗೆ ಕಾರಣವಾಗುತ್ತದೆ.
ಈ ನೀತಿಯನ್ನು ನಮ್ಮ ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆಗೆ ಪೂರಕವಾಗುವಂತೆ ಒಗ್ಗಿಸಿಕೊಂಡು ಅನುಷ್ಠಾನಕ್ಕೆ
ತರಬೇಕಿದೆ. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಸಮಗ್ರ ಜ್ಞಾನವಿಕಾಸಕ್ಕೆ ಒತ್ತು
ನೀಡಿದೆ. ಹೊಸ ನೀತಿಯಿಂದ ರಾಜ್ಯದ ಮತ್ತು ದೇಶದ ಭವ್ಯ ಪರಂಪರೆ ಪ್ರಕಾಶಿಸಲಿದೆ.

ಭಾರತದ ಅದ್ವೀತಿಯ ಯೂತ್‌ ಐಕಾನ್‌ ಸ್ಟಾಮಿ ವಿವೇಕಾನಂದರು, ಪರಿಪೂರ್ಣತೆಯನ್ನು ಹಿಗ್ಗಿಸುವುದೇ
ಶಿಕ್ಷಣ ಎಂದು ಹೇಳಿದ್ದರು. ಈಗಿನ ಶಿಕ್ಷಣ ನೀತಿಯು ಯುವಜನರ ಜ್ಞಾನ ವಿಸ್ತಾರಗೊಳಿಸಿ ಅವರಿಂದಲೇ ದೇಶದ
ಭವಿಷ್ಯ ಬರೆಸುವ ಲೇಖನಿಯಂತಿದೆ. ಇದು ಸ್ಥಾಮಿ ವಿವೇಕಾನಂದರ ಆಶಯ ಈಡೇರಿಸುವ ಸಾಧನ ಎಂದೂ
ಕರೆಯಬಹುದು.


ಲೇಖಕರು: ವೈ.ಎ. ನಾರಾಯಣಸ್ಪಾಮಿ,
ವಿಧಾನ ಪರಿಷತ್ತು ಸದಸ್ಯರು,
ಆಧಾರ: ಕನ್ನಡ ಪ್ರಭ, ದಿನಾಂಕ:03.08.2020


259
7. ಪಂಡಿತ್‌ ನೆಹರೂ ಸಮಯಪುಜ್ಞೆ


ಮಹಿಪತಿಯವರ ಮನೆ ನನ್ನ ಕಾಲೇಜಿಗೆ ಬಹಳ ಹತ್ತಿರವಾಗಿತ್ತು ಆಗ ರಾಜಾಜಿನಗರ ತುಂಬ
ಶಾಂತವಾದ ಪ್ರದೇಶ. ಆ ಪ್ರದೇಶವನ್ನು ಈಗ ನೋಡುವವರಿಗೆ `ನಾನು ಹೇಳುವುದನ್ನು ನಂಬುವುದು ಕಷ್ಟ.
ರಾಜಾಜಿನಗರ ಒಂದನೇ ಬ್ಲಾಕ್‌ನಲ್ಲಿ ಕಾಫಿ ಕುಡಿಯಬೇಕೆಂದರೆ ಒಂದು ಹೋಟೆಲ್ಲೂ ಇರಲಿಲ್ಲ. ನಮ್ಮ ಕಾಲೇಜು
ಒಂದನೇ ಬ್ಲಾಕ್‌ನ ಮಧ್ಯಬಿಂದು-ನಾಲ್ಕುರಸ್ತೆಗಳು ಸೇರುವ ಸ್ಥಳ. ಸಾಯಂಕಾಲ ಆರು ಗಂಟಿಯ ನಂತರ
ರಸ್ತೆಯಲ್ಲಿ ಯಾರೂ ಕಾಣುತ್ತಿರಲಿಲ್ಲ. ನನ್ನಂತಹ ಬಹ್ಮಚಾರಿಗಳಿಗೆ ಊಟ ದೊರಕಬೇಕೆಂದರೆ ಮೂರನೇ ಬ್ಲಾಕ್‌ನ
ರಾಮಮಂದಿರದ ಹಿಂಭಾಗದಲ್ಲಿದ್ದ "ತಿವೇಣಿ' ಹೋಟೆಲ್ಲಿಗೆ ಹೋಗಬೇಕಿತ್ತು ರಾಜಾಜಿನಗರಕ್ಕೆ ಸಂಜೆ
ಐದೂವರೆಯ ನಂತರ ಯಾವ ಆಟೋರಿಕ್ಷಾ ಕೂಡ ಬರುತ್ತಿರಲಿಲ್ಲ ವಿಧಾನಸೌಧದಿಂದ ಕೆಲಸ ಮುಗಿಸಿ
ಬರುವವರಿಗಾಗಿ ಸಾಯಂಕಾಲ ಆರು ಗಂಟೆಗೆ ಬಸ್‌ ಬರುತ್ತಿದ್ದವು. ಆ ನಂತರ ಯಾವ ಬಸ್ಸೂ ಇರಲಿಲ್ಲ. ರಾತ್ರಿ
ಹನ್ನೆರಡಕ್ಕೊಂದು ಬಸ್‌ ಬರುವುದು, ಅದೂ ನವರಂಗ ಥಿಯೇಟರ್‌ ತನಕ ಮಾತ್ರ, ಆಗ ಅದನ್ನು ಕುಡುಕರ
ಬಸ್‌ ಎನ್ನುತ್ತಿದ್ದರು. ಕೆಲಸಗಳನ್ನು ಮುಗಿಸಿ, ಪಾನಕ ಪಣ್ಯಾರಗಳನ್ನು ಪೂರೈಸಿಕೊಂಡು ಬರುವವರಿಗೆ ಅದೊಂದು
ವಿಶೇಷ ಸವಲತ್ತು.

ನಾನು ಮಹಿಪತಿಯವರ ಮನೆಯಲ್ಲಿ ಸುಮಾರು ಎರಡು ಮೂರು ತಿಂಗಳು ಕಾಲ ಇದ್ದೆ. ಅವರ
ಪರಿವಾರದ ಒಂದು ಅವಿಭಾಜ್ಯ ಅಂಗವೇ ಆಗಿದ್ದೆ. ಮಹಿಪತಿಯವರ ಹೆಂಡತಿ ನನಗೆ "ವೈನಿ'ಯಾದರು. ಅವರ
ಇಬ್ಬರು ಮಕ್ಕಳು ಆರತಿ ಮತ್ತು ಜಯಣ್ಣ ನನ್ನ ಅಂತಃಕರಣದ ಅಂಶವೇ ಆದರು. ಆರತಿ ಆಗ ಏಳೆಂಟು
ತಿಂಗಳುಗಳ ಪುಟ್ಟ ಮಗು. ನಾನು ಆಕೆಯನ್ನು ಎತ್ತಿಕೊಂಡು ಕಾಲೇಜಿನ ಕಾರ್ಯಕ್ರಮಗಳಿಗೆ ಹೋಗಿಬಿಡುತ್ತಿದ್ದೆ.
ಅಲ್ಲಿ ನನ್ನ ವಿದ್ಯಾರ್ಥಿನಿಯರು ಆಕೆಯನ್ನು ಮುತ್ತಿಕೊಂಡು ಸುತ್ತಾಡಿಸಿ, ಆಡಿಸುತ್ತಿದ್ದರು.

ರಾಜಾಜಿನಗರದ ಮುಖ್ಯರಸ್ತೆಯೇ "ವಿದ್ಯಾಕೇಂದ್ರ' ಎಂಬ ಪುಟ್ಟ ಸಂಸ್ಥೆ ಇತ್ತು- ಬಹುಶಃ ಅದೊಂದು
ಟೈಪ್‌ ರೈಟಿಂಗ್‌ ಶಾಲೆಯಾಗಿತ್ತು ಎಂಬ ನೆನಪು. ಅದು ಕಾಮತ ಎನ್ನುವವರಿಗೆ ಸೇರಿದ್ದು, ಅದರ ಮೇಲುಗಡೆ
ಸುಮಾರು ಆರೇಳು ಕೊಠಡಿಗಳಿದ್ದವು. ಅದರಲ್ಲಿ ಮೊದಲನೆ ಕೊಠಡಿ ಖಾಲಿ ಇದೆ ಎಂಬ ಸುದ್ದಿ ಬಂದೊಡನೆ
ಅಲ್ಲಿಗೆ ಹೋಗಿ ಯಜಮಾನರನ್ನು ಕಂಡೆ. ಅವರು ನನ್ನ ಸಂಪೂರ್ಣ ಜೀವನಚರಿತ್ರೆಯನ್ನು ಕೇಳಿ, ನಾನೊಬ್ಬ
ಕಾಲೇಜಿನ ಮೇಷ್ರು ಎಂದು 3ೀದು ಕೊಠಡಿಯನ್ನು ಕೊಡಲು ಒಪ್ಪಿದರು. ಅವರು, “ಸ್ಟಾಮಿ ನಿಮಗೆ
ಕೋಣೆಯನ್ನೇನೋ ಕೊಡುತ್ತೇನೆ. ಆದರೆ, ಅದು ಸ ಚಿಕ್ಕದಾದದ್ದು. 'ನಾನು ಅದನ್ನು ರ ಕೋಣೆಗಳ
ಗ ಸ್ಫೋರ್‌ ರೂಂ ಎಂದು ಮಾಡಿದ್ದೇನೆ. ನಿಮಗೆ ಸರಿಯಾಗುತದೋ ನೋಡಿ ಅಥವಾ ಈಗ
ಸೇರಿಕೊಳ್ಳಿ, ಮುಂದೆ ಪಕ್ಕದ ಯಾವುದಾದರೂ ಕೋಣೆ ಖಾಲಿಯಾದರೆ ಅಲ್ಲಿಗೆ ಬದಲಾಯಿಸಿಕೊಳ್ಳಬಹುದು”
ಎಂದು ತಮ್ಮ ಮಗನ ಕೈಯಲ್ಲಿ ಕೀಲಿ ಕೈ ಕೊಟ್ಟು ಕಳುಹಿಸಿದರು. ನಾನು ನನ್ನ ಮನಸನ್ನು ಪುಟ್ಟ ಕೋಣೆಗೆ
ಹೊಂದಿಸಿಕೊಳ್ಳುತ್ತಲೇ ಅಲ್ಲಿಗೆ ಹೋದೆ. ಅವರ ಹುಡುಗ ಬಾಗಿಲು ಕೀಲಿ ತೆಗೆದು ತಳ್ಳಿದ. ಐ 1! ಅಲ್ಲೇನಿದೆ?
ಎದುರುಗೋಡೆಯೇ ಇದೆ. ಒಳಗೆ ಕಾಲಿಟ್ಟರೆ ಎದುರುಗೋಡೆಯೆ! ಕೋಣೆಯ ಅಳತೆಯೇ ಐದೂವರೆ ಅಡಿ ಆರು
ಅಡಿ. ಒಂದು ಮಂಚ ಹಾಕಿದರೆ, ಕೋಣೆಯಲ್ಲಿ ಕಾಲಿಟ್ಟ ತಕ್ಷಣ ಮಂಚದ ಮೇಲೆಯೇ ಕೂಡಬೇಕು. ಉಳಿದೆಲ್ಲ
ರೀತಿಯಲ್ಲಿ ಅನುಕೂಲವಾದ್ದರಿಂದ ಒಪ್ಪಿಕೊಂಡೆ. ಅಂದೇ ಸಾಯಂಕಾಲ ನನ್ನ ಬಟ್ಟೆಬರೆಗಳನ್ನು ತೆಗೆದುಕೊಂಡು
ಕೋಣೆಗೆ ಬಂದೆ. ನನ್ನ ಜೊತೆಗೆ ಮಹಿಪತಿಯವರೂ ಬಂದರು. ಕುತೂಹಲದಿಂದ ಕೋಣೆಯನ್ನು ನೋಡಿ
“ಗುರುರಾಜಾ, ಒಂದು ಕೆಲಸ ಮಾಡು. ನಿನ್ನ ಪುಸ್ತಕ, ಅರಿವಿ ಎಲ್ಲಾ ಖೋಲಿಯೊಳಗಿಟ್ಟು, ಕೀಲೀ ಹಾಕಿ, ಹೊರಗೆ
ಮಲಕೋ” ಎಂದು ತಮಾಷೆ ಮಾಡಿದರು. ಆ ಕೋಣೆಯಲ್ಲಿ ಹಾಕಲು ಒಂದು ಮಂಚವನ್ನು ಮಾಡಿಸುವುದು
ಫಜೀತಿಯಾಯಿತು. ಯಾಕೆಂದರೆ ಅದನ್ನು ಕೋಣೆಯ ಗಾತಕ್ಕೆ ಮಾಡಿಸಬೇಕಲ್ಲ! ನಾನು ಕುಳ್ಳಗಾಗಿದ್ದುದರಿಂದ ಆ
ಮಂಚಿ ನನಗೆ ಸರಿಯಾಯಿತು. ಆ ಕೋಣೆಯಿಂದ ನನ್ನ ಕಾಲೇಜು ಐದು ನಿಮಿಷದ ನಡಿಗೆಯ ದಾರಿ. ಆ
ಕೋಣೆಯಲ್ಲಿಯೇ ಸುಮಾರು ಒಂದು ವರ್ಷ ನಾನಿದ್ದೆ.

ಕಾಲೇಜಿನ ತರಗತಿಗಳು ಪ್ರಾರಂಭವಾದವು. ಅದೇ ವರ್ಷ ಪ್ರಾರಂಭವಾದ ಕಾಲೇಜು ಅದು. ಅಲ್ಲಿ
ಲೈಬರಿ, ಪ್ರಯೋಗಶಾಲೆ ಎಲ್ಲವೂ ಆಗಬೇಕಿತ್ತು. ನಮ್ಮ ಸಂಸ್ಥೆಗೆ ಉಪಾಧ್ಯಕ್ಷರಾಗಿದ್ದವರು
ಶ್ರೀ ಪಾರ್ಥಸಾರಥಿಯವರು. ಕಾಲೇಜಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಅವರ ಜವಾಬ್ದಾರಿಯಾಗಿತ್ತು.
ಅವರದು ಅಜಾನುಬಾಹು ಶರೀರ. ಅದಕ್ಕೆ ಸರಿಯಾದ ಉಚ್ಛಸ್ತರದ, ಆಳವಾದ ಧ್ಧನಿ. ಅವರು ಭಾರತದ


260


ಮೊಟ್ಟಮೊದಲ ಬೃಹತ್‌ ಆಣೆಕಟ್ಟೆಗೆ ಮುಖ್ಯ ಇಂಜೀನಿಯರ್‌ ಆಗಿ ಕೆಲಸ ಮಾಡಿದವರು. ಭಾರತದ
ಪ್ರಧಾನಮಂತಿಗಳಾಗಿದ್ದ ಪಂಡಿತ ಜವಾಹರಲಾಲ್‌ ನೆಹರೂರವರು ಸ್ಪತಃ ಆಯ್ಕೆ ಮಾಡಿದ ವ್ಯಕ್ತಿ ಅವರು. ಅವರು
ಸುಭಾಸ್‌ ಚಂದ್ರಬೋಸ್‌ರ “ಆರುಾದ್‌ ಹಿಂದ್‌ ಫೌಜ್‌” ದಲ್ಲಿ ನೇತಾರರಾಗಿ, ಅವರೊಂದಿಗೆ ಕೆಲಸ
ಮಾಡಿದವರು. ದೇಶವಿದೇಶಗಳಲ್ಲಿ ಸಂಚರಿಸಿ ಬ್ರಿಟಿಷ್‌ ಸರಕಾರಕ್ಕೆ ಸಿಂಹಸ್ತಪ್ಪರಾಗಿದ್ದವರು. ಅವರ ಹೆಸರನ್ನು
ರೇಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರಂತೆ. "ಯಾರಾದರೂ ಈ ಸಾರಥಧಿಯವರನ್ನು ಜೀವಂತವಾಗಿ
ಹಿಡಿದುಕೊಟ್ಟರೆ ಅಥವಾ ಕೊಂದು ದೇಹವನ್ನು ತೋರಿಸಿದರೆ ದೊಡ್ಡ ಬಹುಮಾನ” ಎಂಬುದು ಪ್ರಸಾರ. ದೇಶಕ್ಕೆ
ಸ್ಪಾತಂತ್ರ್ಯ ಸಿಕ್ಕ ಮೇಲೆ ಅತಿ ದೊಡ್ಡ ಆಣೆಕಟ್ಟು ನಿರ್ಮಾಣವಾದದ್ದು "ದಾಮೋದರ ವ್ಯಾಲಿ ಕಾರ್ಪೋರೇಶನ್‌”
ಅಡಿಯಲ್ಲಿ, ಅಂದಿನ ಬಿಹಾರದಲ್ಲಿ ಪಾರ್ಥಸಾರಧಿಯವರನ್ನು ಅದಕ್ಕೆ ಮುಖ್ಯ ಇಂಜೀನಿಯರ್‌ರಾಗಿ
ತೆಗೆದುಕೊಳ್ಳಲು ಸ್ವತಃ ನೆಹರೂರವರೇ ಪತ್ರ ಬರೆದಿದ್ದರು. ಅದನ್ನು ನನಗೆ ಪಾರ್ಥಸಾರಥಿಯವರು ತೋರಿಸಿದ್ದರು.
ಪಾರ್ಥಸಾರಥಿ ಒಂದು ಜ್ಞಾನದ, ಅನುಭವದ ಅಕ್ಷಯ ಪಾತ್ರೆ. ಅವರು ತಮ್ಮ ಅನುಭವಗಳನ್ನು ಹೇಳುತ್ತಿದ್ದರೆ
ನಮಗೆ ಮೈಮರೆತು ಹೋಗುತ್ತಿತ್ತು ಒಂದು ಘಟನೆಯಂತೂ ಸುಂದರ ಮಾತ್ರವಲ್ಲ, ಐತಿಹಾಸಿಕವಾದದ್ದು.


ಆಣೆಕಟ್ಟು ಪೂರ್ತಿಯಾಗಿತ್ತು. ಇದರ ಉದ್ರಾಟನೆಯನ್ನು ಯಾರು ಮಾಡುವುದು? ಬೃಹತ್‌
ಯೋಜನೆಗಳ ಕನಸು ಕಂಡಿದ್ದ ಪ್ರಧಾನಮಂತ್ರಿಯವರೇ ಅದನ್ನು ರಾಷ್ಟಕ್ಕೆ ಅರ್ಪಣೆ ಮಾಡುವುದು ಉಚಿತ
ಎನ್ನಿಸಿತು ಪಾರ್ಥಸಾರಥಿಯವರಿಗೆ. ತಾವೇ ಪತ್ರ ಬರೆದರು. “ಪಂಡಿತಜೀಿ, ತಮ್ಮ ಕನಸಿನ ಯೋಜನೆ
ಸಾಕಾರವಾಗಿದೆ. ಇದನ್ನು ತಾವೇ ಉದ್ರಾಟಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಇಂಥ ದಿನ, ಈ
ಸಮಯಕ್ಕೆ ತಮಗೂ ವ್ಯವಧಾನವಿದೆಯೆಂಬುದನ್ನು ಮತ್ತು ತಾವು ಒಪ್ಪಿದ್ದೀರೆಂದು ಕೇಳಿ ತಿಳಿದುಕೊಂಡಿದ್ದೇನೆ.
ತಾವು ದಯವಿಟ್ಟು ಆಗಮಿಸಿ ಕಾರ್ಯವನ್ನು ನಡೆಸಿಕೊಡಬೇಕು.”


ಇಂತು ತಮ್ಮ ವಿಶ್ವಾಸಿ
-ಪಾರ್ಥಸಾರಥಧಿ


ಇಲ್ಲಿಯವರೆಗೆ ಪತ್ರ ಸರಿಯಾಗಿತ್ತು. ಆದರೆ ಮುಂದೆ ಅವರೊಂದು ವಿಶೇಷ ಸೂಚನೆಯನ್ನು ಬರೆದಿದ್ದರು.
ಅದೊಂದು ಅತ್ಯಂತ ಧೈರ್ಯದ ಅಥವಾ ಉದ್ದಟತನದ ಪ್ರದರ್ಶನ. ವಿ.ಸೂ. ಪಂಡಿತಜೀ, ನೀವು
ಸಾಮಾನ್ಯವಾಗಿ ಯಾವ ಕಾರ್ಯಕ್ರಮಕ್ಕೂ ಸರಿಯಾಗಿ ಬರುವುದಿಲ್ಲ. ಈ ಉದ್ರಾಟನೆಯನ್ನು ಆ ಕ್ಷಣಕ್ಕೆ
ಮಾಡಬೇಕೆಂಬ ತೀರ್ಮಾನವಾಗಿದೆ. ತಾವು ದಯವಿಟ್ಟು ಅರ್ಧಗಂಟಿ ಮುಂಚಿತವಾಗಿ ಬನ್ನಿ ತಮ್ಮಿಂದ
ಬರುವುದು ತಡವಾದರೆ ಮತ್ತೊಬ್ಬರಿಂದ ಉದ್ರಾಟನೆ ಮಾಡಿಸುವ ಅನಿವಾರ್ಯತೆ ಉಂಟಾಗುತ್ತದೆ.


ಇಂಥದ್ದನ್ನು ಯಾರಾದರೂ ಬರೆದಿದ್ದಾರೆಯೇ? ಅದೂ ಪ್ರಧಾನಮಂತಿಗಳಿಗೆ! ಅದೂ ಆ ಕಾಲದಲ್ಲಿ
ನೆಹರೂ ಎಂದರೆ ನಿಲುಕಲಾರದ ನಕ್ಷತ್ರ ಸರ್ವಶಕ್ಷಿಯ ಕೇಂದ. ಆದರೆ ಆಶ್ಚರ್ಯವೆಂದರೆ ನೆಹರೂರವರ
ಪ್ರತಿಕ್ರಿಯೆ ಇನ್ನೂ ಚೆನ್ನಾಗಿತ್ತು.
ಆತ್ಮೀಯ ಸಾರಥಿ,


ನನಗೆ ನಿಮ್ಮ ಸಮಯಪಜ್ಞೆಯ ಶ್ವ್ಷಪಚತನದ ಪರಿಚಯವಿದೆ. ನಾನು ಅರ್ಧಗಂಟೆ ಮೊದಲೇ
ಬರುತ್ತೇನೆ.- ನೆಹರೂ


ಉದ್ರಾಟನೆಯ ದಿನ ಬಂದಿತು. ಹೇಳಿದಂತೆ ನೆಹರೂ ಅರ್ಧಗಂಟೆ ಮೊದಲೇ ಬಂದರು. ಸರಿಯಾದ
ಸಮಯಕ್ಕೆ ಎಲ್ಲರೂ ಉದ್ರಾಟನೆಯ ಶಿಲಾಫಲಕದ ಹತ್ತಿರ ಹೋದರು. ಇನ್ನೇನು ಪ್ರಧಾನಮಂತಿಗಳು ತೆರೆ ಸರಿಸಿ
ಉದ್ರಾಟನೆ ಮಾಡಬೇಕು. ಅವರು ಥಟ್ಟನೆ ನಿಂತು ಪಾರ್ಥಸಾರಧಿಯವರಿಗೆ ಕೇಳಿದರು, “ಸಾರಥಿ ನಾನು
ಸರಿಯಾದ ಸಮಯಕ್ಕೆ ಬರದಿದ್ದರೆ ಮತ್ತೊಬ್ಬರಿಂದ ಉದ್ರಾಟನೆ ಮಾಡಿಸುತ್ತೇನೆ ಎಂದು ಹೆದರಿಸಿದ್ದಿರಲ್ಲ, ಯಾರು
ಆ ವ್ಯಕ್ತಿ?” ಪಾರ್ಥಸಾರಥಿ “ಅದೇನು ಬಿಡಿ ಸರ್‌, ತಾವು ಬಂದಿದಿರಲ್ಲ” ಎಂದರು. ನೆಹರೂ ಒಪ್ಪದೆ, “ಯಾರು
ಆ ವ್ಯಕ್ತಿ ನಾನು ತಿಳಿಯಬೇಕು” ಎಂದು ಹಟ ತೋರಿದರು. ಆಗ ಪಾರ್ಥಸಾರಥಿ ಹೇಳಿದರು. “ ಸರ್‌ ಈ
ಯೋಜನೆ ಪ್ರಾರಂಭವಾದ ಮೊದಲ ದಿನದಿಂದ, ಮೊದಲ ಕಲ್ಲು ಹಾಕುವುದರಿಂದ ಇಂದಿನವರೆಗೆ ಒಬ್ಬ
ಅದಿವಾಸಿ ಮಹಿಳೆ ಕೆಲಸಮಾಡಿದ್ದಾಳೆ. ಆಕೆಯಿಂದ ಉದ್ರಾಟನೆ ಮಾಡಿಸುತ್ತಿದ್ದೆ” ತಕ್ಷಣ ನೆಹರೂ ಆಕೆಯನ್ನು
ಕರೆಯಿರಿ ಎಂದು ಕರೆಸಿದರು. ನಂತರ ಪ್ರಧಾನಮಂತ್ರಿಗಳು ಆಕೆಯೊಂದಿಗೆ ಉದ್ರಾಟನೆ ಮಾಡಿದರು. ಹೀಗೆ


261


ಭಾರತದ ಮೊಟ್ಟ ಮೊದಲ ಬೃಹತ್‌ ಯೋಜನೆಯು ಉದ್ರಾಟನೆ ಪ್ರಧಾನಮಂತ್ರಿ ಹಾಗೂ ಒಬ್ಬ ಅದಿವಾಸಿ
ಮಹಿಳೆಯಿಂದಾದದ್ದು ಸುಂದರ ಇತಿಹಾಸ. ನೆಹರೂರವರಿಗೆ ತುಂಬ ಸಂತೋಷವಾಗಿತ್ತು. ಆಗ ಪಾರ್ಥಸಾರಥಿ
ನೆಹರೂರವರಿಗೆ ತುಂಬ ಪ್ರಿಯವಾದ ಕೆಂಪುಗುಲಾಬಿಯ ಹೂಗಳ ಹಾರವನ್ನು ಹಾಕಿದರು. ತಕ್ಷಣ ನೆಹರೂ “ಛೇ,
ಛೇ, ಇದು ನನಗಲ್ಲ, ಆಕೆಗೆ ಸೇರಬೇಕು ಎಂದು ಕತ್ತಿನಲ್ಲಿ ಹಾಕಿದ್ದ ಹಾರವನ್ನು ತೆಗೆದು ಆಕೆಯ ಕೊರಳಿಗೆ
ಹಾಕಿಬಿಟ್ಟರು! ಎಲ್ಲರೂ ಸಂಭ್ರಮಪಟ್ಟರು. ಆದರೆ ಮರುದಿನ ಒಂದು ದುರಂತ ಕಾದಿತ್ತು. ಬೆಳಿಗ್ಗೆ ಆ ಅದಿವಾಸಿ
ಹೆಂಗಸು ಪಾರ್ಥಸಾರಧಿಯವರ ಬಳಿ ಬಂದು ತನ್ನ ಸಂಸಾರ ಮೂರಾಬಟ್ಟೆಯಾಗಿ ಹೋಯಿತು ಎಂದು ಅತ್ತಳು.
ಅವರ ಪದ್ಧತಿಯಂತೆ ಮತ್ತೊಬ್ಬ ಪುರುಷ ಮದುವೆಯಾದ ಹೆಂಗಸಿಗೆ ಹಾರ ಹಾಕಿದರೆ, ಮೊದಲಿನ ಮದುವೆ
ರದ್ದಾಗಿ, ಎರಡನೆಯವನೇ ಗಂಡನಾಗುತ್ತಾನೆ. ಆಕೆಯ ಗಂಡ ಆಕೆಯನ್ನು ತೊರೆದು ಹೋಗಿಬಿಟ್ಟಿದ್ದ.
ಪಾರ್ಥಸಾರಥಿ ಹೌಹಾರಿದರು. ಈ ವಿಷಯವನ್ನು ನೆಹರೂರವರಿಗೆ ಹೇಳಿ ಒಪ್ಪಿಸಲಾಗುತ್ತದೆಯೇ? ಅವರೇನೋ
ಪಾಪ, ಒಂದು ಉದಾತ್ತಭಾವನೆಯಿಂದ, ಜನಪ್ರೀತಿಯಿಂದ ಹಾಗೆ ಮಾಡಿದ್ದರು. ಕೊನೆಗೆ ಪಾರ್ಥಸಾರಥಿ
ಬೋರ್ಡಿನಿಂದ ವಿಶೇಷ ಪರವಾನಿಗಿ ತೆಗೆದುಕೊಂಡು, ಆಕೆ ಬದುಕಿರುವವರೆಗೆ ತೊಂದರೆಯಾಗದಂತೆ, ಪುಟ್ಟ
ಮನೆಯೊಂದನ್ನು ಕೊಟ್ಟು, ಸಂಬಳ, ಪಿಂಚಣಿ ಗೊತ್ತು ಮಾಡಿದರು. ಇದೊಂದು ರೀತಿಯ, ತಾನು ಮಾಡದಿದ್ದ
ತಪ್ಪಿಗೆ, ಅಪರೋಕ್ಷ ಪ್ರಾಯಶ್ಸಿತ್ತ. ಇದರಲ್ಲಿ ನನಗೊಂದು ಪಾಠ, ಜನರಿಗೆ ಒಳ್ಳೆಯದನ್ನು ಸಂತೋಷವಾಗುವುದನ್ನು
ಮಾಡುವ ಆತುರದಲ್ಲಿ ಎಲ್ಲಿ ತೊಂದರೆ ಮಾಡಿಬಿಡುತ್ತೇವೋ ಎಂಬ ಎಚ್ಚರಿಕೆ ಇರುವುದು ಒಳ್ಳೆಯದು.


ಲೇಖಕರು: ಡಾ: ಗುರುರಾಜ ಕರಜಗಿ,
ಸುಪ್ರಸಿದ್ದ ಶಿಕ್ಷ € ತಚ್ಞಧು,
ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:12.08.2020


262
8. ಯಾವುದು ಟೀಕೆ, ಯಾವುದು ನ್ಯಾಯಾಂಗ ನಿಂದನೆ


ಇತ್ತೀಚೆಗೆ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇಲ್ಲಿ ಎಂದು
ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಭೂಷಣ್‌ ಮಾಡಿದ ಎರಡು ಟ್ವೀಟ್‌ಗಳ ಆಧಾರದಲ್ಲಿ ಈ ತೀರ್ಪು
ಬಂದಿದೆ. ಒಂದು, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಗಳು ದುಬಾರಿ ಮೋಟರ್‌ ಸೈಕಲ್‌ ಮೇಲೆ
ಕುಳಿತಿದ್ದ ಫೋಟೋಕ್ಕೆ ಸಂಬಂಧಿಸಿದ ಟ್ವೀಟ್‌, ಇನ್ನೊಂದು, ಪ್ರಜಾಪಭುತ್ನ್ಸವನ್ನು ನಾಶಪಡಿಸುವಲ್ಲಿ ಮಹತ್ವದ
ಪಾತ್ರ ವಹಿಸಿದೆ ಎಂಬ ಟ್ವೀಟ್‌.
ಕ್ರಿಮಿನಲ್‌ ನ್ಯಾಯಾಂಗ ನಿಂದನೆ: ಈ ಲೇಖನದಲ್ಲಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆಯ ಬಗ್ಗೆ ಮಾತ್ರ
ಗಮನಹರಿಸೋಣ, ಕೋರ್ಟ್‌ಗಳ ಆದೇಶವನ್ನು ಬೇಕಂತಲೇ ಧಿಕ್ಕರಿಸುವ ಉದ್ದೇಶಪೂರ್ವಕ
ತಕರಾರುವಾದಿಗಳದು ಬೇರೆಯದೇ ವಿಚಾರ.


1971ರ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್‌ 2(ಸಿ) ಪ್ರಕಾರ ಕ್ರಿಮಿನಲ್‌ ನ್ಯಾಯಾಂಗ ನಿಂದನೆ
ಅಂದರೆ ಯಾವುದೇ ನ್ಯಾಯಾಲಯದ ಅಧಿಕಾರ ಹಾಗೂ ಘನತೆಗೆ ಚ್ಯುತಿ ತರುವ ವಿಷಯಗಳನ್ನು ಪ್ರಕಟಿಸುವುದು
ಅಥವಾ ಅಂತಹ ಚಟುವಟಿಕೆಗಳನ್ನು ಕೈಗೊಳ್ಳುವುದು; ಅಥವಾ ಯಾವುದೇ ನ್ಯಾಯಾಲಯದ ವಿಚಾರಣೆಯಲ್ಲಿ
ಮಧ್ಯಪ್ರವೇಶ ಮಾಡುವುದು ಅಥವಾ ಪೂರ್ವಗಹಪೀಡಿತವಾಗಿ ಅದಕ್ಕೆ ಅಡ್ಡಿಪಡಿಸುವುದು; ಅಥವಾ ನ್ಯಾಯದಾನ
ಪಕ್ರಿಯೆಗೆ ತೊಂದರೆ ಉಂಟುಮಾಡುವುದು;

ಹಾಗಿದ್ದರೆ ನ್ಯಾಯಾಂಗವನ್ನು ಯಾರೂ ಟೀಕಿಸಲೇ ಬಾರದು ಎಂಬುದು ಇದರರ್ಥವೇ? ಅಲ್ಲ. ಭಾರತದ
ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಬಗ್ಗೆ ನೀವು ಏನು ಹೇಳುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ
ಎಂಬುದೇ ಈ ಲೇಖನದ ಮೂಲ ತಿರುಳು. ನಮ್ಮ ದೇಶದ ಕಾನೂನಿನಲ್ಲಿ ಟೀಕೆಗೂ ನ್ಯಾಯಾಂಗ ನಿಂದನೆಗೂ
ನಡುವೆ ತೆಳುವಾದ ಗೆರೆ ಮಾತ್ರ ಇದೆ.


ದೇಶದ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ಪಜೆಗೂ ಸೆಕ್ಷನ್‌ 19()(ಎ) ಅಡಿ ಅಭಿವ್ಯಕ್ತಿ
ಸ್ಥಾತಂತ್ಯವೆಂಬ ಮೂಲಭೂತ ಹಕ್ಕು ನೀಡಲಾಗಿದೆ. ಇದಕ್ಕೆ ಸೆಕ್ಷನ್‌ (19)(2)ರಲ್ಲಿ ಕೆಲ ನಿರ್ಬಂಧಗಳನ್ನು
ವಿಧಿಸಲಾಗಿದೆ. ಸಿ.ಕೆ.ದಪ್ತರಿ ವರ್ಸಸ್‌ ಒ.ಪಿಗುಪ್ತಾ (197) ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ದೇಶದಲ್ಲಿ
ಜಾರಿಯಲ್ಲಿರುವ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಕಾಯ್ದೆ ಕೂಡ ಅಂತಹ ನಿಬಂಧಗಳಲ್ಲಿ ಒಂದು ಎಂದು
ಹೇಳಿದೆ. ಹಾಗಂತ ನ್ಯಾಯಾಂಗ ನಿಂದನೆಯ ಭೀತಿಯಿಂದ ಯಾರೂ ನ್ಯಾಯಾಂಗದ ವಿರುದ್ಧ ತಮ್ಮ ಸಿಟ್ಟನ್ನು
ಹೊರಹಾಕುವಂತಿಲ್ಲ ಎಂಬುದು ಇದರರ್ಥವಲ್ಲ.


1968ರಷ್ಟು ಹಿಂದೆಯೇ ಲಾರ್ಡ್‌ ಡೆನ್ನಿಂಗ್‌ ಎಂ.ಆರ್‌.ಅವರು ನ್ಯಾಯಾಂಗ ನಿಂದನೆಯ ವಿಷಯದಲ್ಲಿ
ಮಾರ್ಗಸೂಚಿಗಳನ್ನು ಸಿದ್ದಪಡಿಸಿಕೊಟ್ಟಿದ್ದಾರೆ. ಅವರು, ನ್ಯಾಯಾಂಗ ನಿಂದನೆಯೆಂಬುದು ಕೋರ್ಟ್‌ಗಳ
ಘನತೆಯನ್ನು ಎತ್ತಿಹಿಡಿಯುವ ಮಾರ್ಗವಲ್ಲ. ನ್ಯಾಯಾಂಗ ನಿಂದನೆ ಕಾಯ್ದೆಯನ್ನು ಮಿತವಾಗಿ ಬಳಸಬೇಕು
ಮತ್ತು ಅಭಿವ್ಯಕ್ತಿ ಸ್ಪಾತಂತ್ರವನ್ನು ರಕ್ಷಿಸುವುದು ಎಲ್ಲಕ್ಕಿಂತ ಮುಖ್ಯ. ಇಲ್ಲಿ ಟೀಕೆಗಳಿಗೆ ಸದಾ ಸ್ಟಾಗತವಿರಬೇಕು.
ಆದರೆ, ನ್ಯಾಯಯುತವಾಗಿರಬೇಕು. ಏಕೆಂದರೆ ಜಡ್ಜ್‌ಗಳು ತಾವಿರುವ ಸ್ವಿತಿಯಲ್ಲಿ ಎಲ್ಲಾ ಟೀಕೆಗಳಿಗೂ ಉತ್ತರ
ನೀಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ


ಹಾಗಿದ್ದರೆ ಯಾವ ರೀತಿಯ ಟೀಕೆಗೆ ಭಾರತದ ನ್ಯಾಯಾಂಗದಲ್ಲಿ ಅನುಮತಿಯಿದೆ ಮತ್ತು ಯಾವುದಕ್ಕೆ
ಅನುಮತಿಯಿಲ್ಲ? ಸುಪ್ರೀಂಕೋರ್ಟ್‌ ಹೇಳಿರುವ ಪ್ರಕಾರ, ಒಬ್ಬ ಕರ್ತವ್ಯನಿರತ ನ್ಯಾಯಮೂರ್ತಿಯ
ಕಾರ್ಯವಿಧಾನದ ಬಗ್ಗೆ ಟೀಕೆ ಮಾಡಿದ್ದರೆ ಅದು ನ್ಯಾಯಯುತವಾಗಿದೆಯೋ ಅಥವಾ
ದುರುದ್ದೇಶಪೂರಿತವಾಗಿದೆಯೋ ಎಂಬುದನ್ನು ನೋಡಬೇಕು. ಜಡ್ಡ್‌ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಿದ್ದರೆ
ಆಗ ನ್ಯಾಯಾಲಯವು ಆ ಟೀಕೆಯಿಂದ ನ್ಯಾಯಮೂರ್ತಿಗಳ ಆಡಳಿತಕ್ಕೆ ಧಕ್ಕೆಯಾಗುತ್ತಿದೆಯೋ ಅಥವಾ ಅದು
ಕೇವಲ ಮಾನಹಾನಿಕಾರಕವಾಗಿದೆಯೋ ಎಂಬುದನ್ನು ಗಮನಿಸಬೇಕು. ತನ್ಮೂಲಕ ನ್ಯಾಯಾಲಯವು ಆ
ಹೇಳಿಕೆಯು ನ್ಯಾಯಯುತವೋ, ನಂಬಿಕೆಗೆ ಅರ್ಹವೋ, ಮಾನಹಾನಿಕಾರಕವೋ ಅಥವಾ ನ್ಯಾಯಾಂಗ
ನಿಂದನೆಯೋ ಎಂಬುದನ್ನು ನಿರ್ಧರಿಸಬೇಕು.


263


ಯಾವುದೇ ಹೇಳಿಕೆಯು ನ್ಯಾಯಮೂರ್ತಿಗಳ ವೈಯಕ್ತಿಕ ನಡೆಯ ಬಗ್ಗೆ ನೀಡಿದ ಹೇಳಿಕೆಯಾಗಿದ್ದು,
ಅದರಿಂದ ಅವರು ತಮ್ಮ ನ್ಯಾಯಾಂಗದ ಕರ್ತವ್ಯ ನಿರ್ವಹಿಸುವುದಕ್ಕೆ ಯಾವುದೇ ಅಡ್ಡಿ ಆಗದಿದ್ದರೆ ಅದು
ಕ್ರಿಮಿನಲ್‌ ನ್ಯಾಯಾಂಗ ನಿಂದನೆಯಾಗುವುದಿಲ್ಲ. ಜಡ್ಜ್‌ಗಳು ವೈಯಕ್ತಿಕವಾಗಿ ಎದುರಿಸಬೇಕಾಗಿ ಬರುವ ಟೀಕೆ
ಟಿಪ್ಪಣಿಗಳಿಂದ ನ್ಯಾಯಾಂಗ ನಿಂದನೆ ಕಾಯ್ದೆಯು ಅವರಿಗೆ ರಕ್ಷಣೆ ನೀಡುವುದಿಲ್ಲ. ಅಂತಹ ಹೇಳಿಕೆಯ ವಿರುದ್ಧ
ಮಾನನಷ್ಟ ಮೊಕದ್ದಮೆ ಹೂಡಬಹುದಷ್ಟೆ ನ್ಯಾಯಾಂಗದ ಆಡಳಿತವನ್ನು ನಿಭಾಯಿಸುವುದಕ್ಕೆ ಅಡ್ಡಿಪಡಿಸುವ
ಅಥವಾ ಕೋರ್ಟ್‌ಗಳ ಕಾರ್ಯನಿರ್ವಹಣೆಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳು ಮಾತ್ರ ನ್ಯಾಯಾಂಗ
ನಿಂದನೆಯ ಹೇಳಿಕೆಗಳಾಗುತ್ತವೆ. ಏಕೆಂದರೆ, ಕಾನೂನುಗಳ ಪಾಲನೆಯ ವಿಷಯದಲ್ಲಿ ಸಾರ್ವಜನಿಕರಿಗೆ
ನ್ಯಾಯಾಂಗದ ಬಗ್ಗೆ ಗೌರವವಿರಬೇಕಾಗಿರುವುದು ಬಹಳ ಮುಖ್ಯ. ಒಬ್ಬ ನ್ಯಾಯಮೂರ್ತಿಯ ಅಧಿಕೃತ
ಕಾರ್ಯನಿರ್ವಹಣೆಯ ವಿರುದ್ಧ ನಡೆಸುವ ವಾಗ್ದಾಳಿಯು. ಅದು ತೀರ್ಪಿನ ಕುರಿತಾದ ನ್ಯಾಯಯುತ
ಟೀಕೆಯಾಗಿರದೆ ಇದ್ದರೆ. ಇಡೀ ನ್ಯಾಯಾಂಗವನ್ನು ಅವಹೇಳನ ಮಾಡಿದಂತಾಗುವುದರಿಂದ ಅಂತಹ ಹೇಳಿಕೆ
ನ್ಯಾಯಾಂಗದ ನಿಂದನೆಯಾಗುತ್ತದೆ.


ವಿವಿಧ ಉದಾಹರಣೆಗಳು: ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್‌ 4 ಮತ್ತು 5 ಇವು ಮಾನನಷ್ಟ
ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿಗೆ ಹೇಗೆ ರಕ್ಷಣೆ ಸಿಗುತ್ತದೆಯೋ ಹೆಚ್ಚುಕಮ್ಮಿ ಅದೇ ಮಾದರಿಯಲ್ಲಿವೆ. ಅಂದರೆ,
ಟೀಕೆಯು ನ್ಯಾಯಯುತವಾಗಿರಬೇಕು ಎಂದೇ ಇವು ಹೇಳುತ್ತವೆ. ಎಸ್‌.ಮುಗೋಲ್ಕರ್‌ ವರ್ಸಸ್‌ ಅನಾಮಧೇಯ
(1978) ಪ್ರಕರಣದಲ್ಲಿ ನ್ಯಾಯಾಂಗವು ನ್ಯಾಯಯುತ ಟೀಕೆಗೆ ಹೊರತಾದುದಲ್ಲ ಎಂದು ಸುಪ್ರೀಂಕೋರ್ಟ್‌
ಹೇಳಿತ್ತು. ದುರುದ್ದೇಶಪೂರಿತವಾಗಿ ಜನರ ದೃಷ್ಟಿಯಲ್ಲಿ ನ್ಯಾಯಾಂಗದ ಘನತೆಗೆ ಧಕ್ಕೆ ತರುವುದಕ್ಕೆಂದೇ ಅಥವಾ
ನ್ಯಾಯಾಲಯದ ಕಲಾಪದ ಮೇಲೆ ಪ್ರಭಾವ ಬೀರುವುದಕ್ಕೆಂದೇ ನೀಡುವ ಹೇಳಿಕೆಯು ಮಾತ್ರ ನ್ಯಾಯಾಂಗದ
ನಿಂದನೆಯಾಗುತ್ತದೆ ಎಂದು ತಿಳಿಸಿತ್ತು ಮುಖ್ಯ ನ್ಯಾಯಮೂರ್ತಿ ಎಂ.ಎಚ್‌. ಬೇಗ್‌ ಅವರು, "ಕೆಲವೊಮ್ಮೆ
ನ್ಯಾಯಾಂಗವು ತನ್ನ ಕಾರ್ಯವಿಧಾನದ ಬಗ್ಗೆ ದುರುದ್ದೇಶಪೂರಿತವಾಗಿ ಬರುವ ಟೀಕೆಯ ಬಗ್ಗೆಯೂ ಸಾಕಷ್ಟು
ಔದಾರ್ಯ ತೋರುವುದುಂಟು. ಏಕೆಂದರೆ ಅದರಲ್ಲಿ ನ್ಯಾಯಾಂಗದ ಸುಧಾರಣೆಗೆ ಪೂರಕವಾದ ಯಾವುದೋ
ಅಂಶವಿದ್ದಿರುತ್ತದೆ' ಎಂದು ಹೇಳಿದ್ದರು.


ಇದೇ ನ್ಯಾಯಾಧೀಶ ಬೇಗ್‌ ತಮ್ಮ ನಿವೃತ್ತಿಯ ನಂತರ ನ್ಯಾಯಾಧೀಶ. ಎಚ್‌.ಆರ್‌.ಖನ್ನಾ ಅವರು
ಎಡಿಎಂ ಜಬಲ್ಲುರ ಪ್ರಕರಣ (1976)ರಲ್ಲಿ ತಮ್ಮ ಪ್ರಸಿದ್ಧ ಭಿನ್ನ ತೀರ್ಪಿನ ಮೂಲಕ ಕಾನೂನಿಗೆ ಯಾವುದೇ
ಕೊಡುಗೆ ನೀಡಲಿಲ್ಲ. ಬದಲಿಗೆ ಸ್ವಂತ ಪಸಿದ್ದಿ ಹೆಚ್ಚಿಸಿಕೊಂಡರು ಎಂದು ಹೇಳಿದ್ದರು. ಈ ಬಗ್ಗೆ ಅಲಹಾಬಾದ್‌
ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಾಗಿತ್ತು. ತೀರ್ಪು ನೀಡಿದ ಕೋರ್ಟ್‌, ಬ್ರಹ್ಮಪ್ರಕಾಶ್‌
ಶರ್ಮಾ (1953) ಪ್ರಕರಣವನ್ನು ಉಲ್ಲೇಖಿಸಿ ಈ ಪ್ರಕರಣದಲ್ಲಿ ಈ ಪ್ರಕರಣದಲ್ಲಿ ನ್ಯಾಯಾಧೀಶ ಬೇಗ್‌
ನ್ಯಾಯಾಂಗ ನಿಂದನೆ ಮಾಡಿದಂತಾಗುವುದಿಲ್ಲ ಎಂದು ಹೇಳಿತ್ತು.


ದೇಶದ ಮಾಜಿ ಕಾನೂನು ಸಚಿವ ಪಿ.ಶಿವಶಂಕರ್‌ ಅವರು ಸುಪ್ರೀಂಕೋರ್ಟ್‌ ನೀಡಿದ ಮಹತ್ವದ
ತೀರ್ಪುಗಳ ಬಗ್ಗೆ ಒಮ್ಮೆ ವಿವಾದಾಸ್ಪದ ಹೇಳಿಕೆ ನೀಡಿದ್ದರು. "ಕೇಶವಾನಂದರಂತಹ ಮಹಾಧಿಪತಿಗಳು ಹಾಗೂ
ಗೋಲಕನಾಥ್‌ರಂತಹ ಜಮೀನ್ಹಾರರ ಬಗ್ಗೆ ದೇಶದಲ್ಲಿ ಯಾರಿಗೂ ಅನುಕಂಪವಿಲ್ಲ. ಆದರೆ ಸುಪ್ರೀಂಕೋರ್ಟ್‌ಗೆ
ಮಾತ್ರ ಇದೆ... ಕೂಪರ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಮಧ್ಯಪ್ರದೇಶದಿಂದಾಗಿ ಬ್ಯಾಂಕಿಂಗ್‌ ದಿಗ್ಗಜರಿಗೆ ಹೆಚ್ಚು
ಪರಿಹಾರಧನ ಸಿಗುವಂತಾಯಿತು... ಫೆರಾ ಉಲ್ಲಂಘನೆ ಮಾಡುವವರು ಸೊಸೆಗೆ ಬೆಂಕಿ ಹಚ್ಚುವವರು ಹಾಗೂ
ದೊಡ್ಡ ಪ್ರತಿಗಾಮಿಗಳ ದಂಡೇ ಸುಪ್ರೀಂಕೋರ್ಟ್‌ನಲ್ಲಿ ಸ್ಪರ್ಗಸದೃಶ ಆಶ್ರಯ ಪಡೆದಿದೆ...” ಎಂದು ಹೇಳಿದ್ದರು.


1988ರಲ್ಲಿ ಈ ಕುರಿತು ಆದೇಶ ನೀಡಿದ್ದ ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಸಬ್ಯಸಾಚಿ ಮುಖರ್ಜಿ,
ಶಿವಶಂಕರ್‌ ಅವರ ಹೇಳಿಕೆಯಿಂದ ನ್ಯಾಯಾಂಗದ ಆಡಳಿತಕ್ಕೆ ಧಕ್ಕೆಯಾಗಿಲ್ಲ. ಆದರೆ, ಅವರಿಗಿರುವ ಕಾನೂನಿನ
ಹಿನ್ನೆಲೆಯಲ್ಲಿ ಭಾಷೆ ಸ್ವಲ್ಲ ಮೃದುವಾಗಿರಬಹುದಿತ್ತು ಎಂದು ಹೇಳಿದ್ದರು. "ಸುಪ್ರೀಂಕೋರ್ಟ್‌ನ ತೀರ್ಪುಗಳಿಂದ
ಸಮಾಜವಿರೋಧಿ ಶಕ್ತಿಗಳಿಗೆ ಲಾಭವಾಗಿದ್ದರೆ ಅದಕ್ಕೆ ಕಾರಣ ಕಾನೂನಿನಲ್ಲಿರುವ ದೋಷಗಳು. ಕೋರ್ಟ್‌ಗಳು
ಇಂತಹ ಟೀಕೆಗಳಿಗೆ ಎದೆಗುಂದುವುದಿಲ್ಲ' ಎಂದು ತಿಳಿಸಿದ್ದರು.


264


ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಸತ್ಯವೂ ಒಂದು ರಕ್ಷಣೆಯೇ. ಸಾರ್ವಜನಿಕ ಹಿತಾಸಕ್ತಿಯಿಂದ
ನೀಡುವ ಕೃತ್ರಿಮವಲ್ಲದ ಹೇಳಿಕೆಯಿಂದ ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂದು 2010ರ ಪರೋಕ್ಷ ತೆರಿಗೆ
ವೃತ್ತಿಪರರ ಸಂಘ ವರ್ಸಸ್‌ ಆರ್‌.ಕೆ.ಜೈನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು.


ಆದರೆ, ಈ ಯಾವುದೇ ಪ್ರಕರಣಗಳು ಸಾಮಾಜಿಕ ಹೋರಾಟಗಾರ್ತಿ ಅರುಂಧತಿ ರಾಯ್‌ ಅವರ
ನೆರವಿಗೆ ಬರಲಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅವರು ದೋಷಿ ಎಂದು ಸುಪ್ರೀಂಕೋರ್ಟ್‌ ತೀರ್ಪು
ನೀಡಿತ್ತು. ವಾಸ್ತವವಾಗಿ, ಅವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್‌
ವಜಾಗೊಳಿಸಿತ್ತು ಆದರೆ ಆ ಪ್ರಕರಣದಲ್ಲಿ ರಾಯ್‌ ನೀಡಿದ್ದ ಹೇಳಿಕೆ ನ್ಯಾಯಾಂಗ ನಿಂದನೆಯಾಗಿತ್ತು,


ಆ ಹೇಳಿಕೆಯಲ್ಲಿ ರಾಯ್‌ ಅವರು ಸುಪ್ರೀಂಕೋರ್ಟ್‌ ಅನಗತ್ಯವಾಗಿ ಮತ್ತು ಅತ್ಕಾತುರದಲ್ಲಿ ಕ್ಷುಲ್ಲಕ
ಅರ್ಜಿಯನ್ನು ಪರಿಗಣಿಸಿ ತೀರ್ಪು ನೀಡಿದೆ ಎಂದಿದ್ದರು. ಸರ್ದಾರ್‌ ಸರೋವರ ಡ್ಯಾಂ ಪ್ರಕರಣಕ್ಕೆ
ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದರು. ಹುರುಳಿಲ್ಲದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಉದ್ದೇಶ
ಪೂರ್ವಕವಾಗಿ ನೋಟಿಸ್‌ ಜಾರಿಗೊಳಿಸಿದೆ ಎಂಬ ಅರುಂಧತಿ ರಾಯ್‌ ಅವರ ಹೇಳಿಕೆಯಿಂದ ಜನರ
ದೃಷ್ಟಿಯಲ್ಲಿ ನ್ಯಾಯಾಂಗದ ವಿಶ್ಲಾಸರ್ಹತೆ ಮತ್ತು ಘನತೆಗೆ ಧಕ್ಕೆ ಬಂದಿದೆ. ಹಾಗಾಗಿ ರಾಯ್‌ ನ್ಯಾಯಾಂಗ
ನಿಂದನೆ ಮಾಡಿದಂತಾಗಿದೆ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು.


ಮೇಲಿನ ಎಲ್ಲ ಪ್ರಕರಣಗಳನ್ನು ಗಮನಿಸಿದರೆ, ಯಾವುದು ಕ್ರಿಮಿನಲ್‌ ನ್ಯಾಯಾಂಗ ನಿಂದನೆಗೆ
ಕಾರಣವಾಗುವ ಹೇಳಿಕೆ ಮತ್ತು ಯಾವುದು ಅಲ್ಲ ಎಂಬುದು ಸಂಪೂರ್ಣವಾಗಿ ಆಯಾ ಹೇಳಿಕೆಗಳ ಸಂದರ್ಭ
ಮತ್ತು ಅದಕ್ಕೆ ಸಂಬಂಧಿಸಿದ ಸಂಗತಿಗಳನ್ನು ಅವಲಂಬಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಒಟ್ಟಾರೆಯಾಗಿ,
ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವ ಒಬ್ಬ ಗೌರವಾನ್ವಿತ ವ್ಯಕ್ತಿಯ ಟ್ವೀಟ್‌ ಅಥವಾ ಹೇಳಿಕೆಯಿಂದ ಭಾರತದ
ನ್ಯಾಯಾಂಗದ ಘನತೆಗೆ ಯಾವ ಧಕ್ಕೆಯೂ ಉಂಟಾಗುವುದಿಲ್ಲ. ಲಾರ್ಡ್‌ ಡೆನ್ನಿಂಗ್‌ ಅವರನ್ನೇ ಮತ್ತೆ
ನೆನೆಯುವುದಾದರೆ, "ಅದರಿಂದ ನ್ಯಾಯಾಂಗದ ತಳಪಾಯ ಇನ್ನಷ್ಟು ಗಟ್ಟಿಯಾಗಬೇಕು.”


ಲೇಖಕರು: ಗೌತಮ್‌ ಎಸ್‌.ರಾಮನ್‌
ಮದ್ರಾಸ್‌ ಹೈಕೋರ್ಟ್‌ ನ್ಯಾಯವಾದಿ,
ಆಧಾರ: ವಿಶ್ವವಾಣಿ, ದಿನಾಂಕ:19.08.2020


265


9. ನಾನೆಂದೂ ಮರೆಯದ ನಾಯಕ ರಾಮಕೃಷ್ಣ ಹೆಗಡೆ


ಕರ್ನಾಟಕದ ಮುಖ್ಯಮಂತಿಗಳಲ್ಲಿ ರಾಮಕೃಷ್ಣ ಹೆಗಡೆಯವರು ತಮ್ಮ ಪ್ರತಿಭೆ ಮತ್ತು ಸಾಧನೆಗಳಿಂದ
ಮಾತ್ರವಲ್ಲ ವರ್ಣರಂಜಿತ ವ್ಯಕ್ತಿತ್ತಗಳಿಂದಲೂ ವಿಶೇಷ ಸ್ಥಾನ ಗಳಿಸಿಕೊಂಡವರು. ಕಾಂಗೆಸ್‌ ಪಕ್ಷದಿಂದ
ಪ್ರಾರಂಭಗೊಂಡ ಅವರ ರಾಜಕೀಯ ಜೀವನ ಭಾರತೀಯ ಜನತಾ ಪಕ್ಷದ ಜೊತೆಗಿನ ಮೈತ್ರಿಯೊಂದಿಗೆ
ಬೀಳುಗಳನ್ನು ಕಂಡರೂ ಕೊನೆ ದಿನದವರೆಗೂ ಅವರ ಮುಖದಲ್ಲಿನ ಮಂದಹಾಸ ಮರೆಯಾಗಿರಲಿಲ್ಲ.


ಉತ್ತರ ಕರ್ನಾಟಕದ ಸ್ಥಾತಂತ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದ್ದ. ರಾಮಕೃಷ್ಣ ಹೆಗಡೆಯವರು
ತನ್ನ ಹದಿವಯಸ್ಸಿನಲ್ಲಿಯೇ ಕ್ಷಿಜ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದವರು. ಸ್ಥಾತಂತ್ಯ ಪೂರ್ವದಲ್ಲಿಯೇ
ಕಾಂಗೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಹೆಗಡೆಯವರು ಸ್ಹಾತಂತ್ರ್ಯಾ ನಂತರ ಸಹಜವಾಗಿಯೇ ಕಾಂಗೆಸ್‌ ಪಕ್ಷಕ್ಕೆ
ಸೇರಿಕೊಂಡಿದ್ದರು.


1957ರಲ್ಲಿ ಕಾಂಗೆಸ್‌ ಪಕ್ಷದಿಂದಲೇ ಶಾಸಕರಾಗಿದ್ದ ಹೆಗಡೆಯವರು ನಂತರ ಎಸ್‌.ನಿಜಲಿಂಗಪ್ಪ ಮತ್ತು
ವೀರೇಂದ್ರ ಪಾಟೀಲ್‌ ಸಂಪುಟದಲ್ಲಿ ಸಚಿವರೂ ಆಗಿದ್ದರು. ನಿಜಲಿಂಗಪ್ಪನವರ ಕಾಲದಲ್ಲಿ ಹೆಗಡೆ ಮತ್ತು
ಪಾಟೀಲರು ಲವ-ಕುಶರೆಂದೇ ಜನಪ್ರಿಯರಾಗಿದ್ದರು. 1969ರಲ್ಲಿ ಕಾಂಗೆಸ್‌ ಇಬ್ಭಾಗವಾದಾಗ ಹೆಗಡೆಯವರು
ಕಾಂಗೆಸ್‌(ಓ) ಸೇರಿಕೊಂಡರು.


ಕೊನೆಗೂ ಅವರು ರಾಜ್ಯದ ಮುಖ್ಯಮಂತ್ರಿಯಾಗಲು 1983ರವರೆಗೆ ಕಾಯಬೇಕಾಯಿತು. ಆ
ಚುನಾವಣೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಕಾಂಗೆಸ್‌ ಪಕ್ಷ ಪರಾಭವಗೊಂಡಿತ್ತು. ಜನತಾ ಪಕ್ಷ ಮತ್ತು
ಕ್ರಾಂತಿರಂಗ ಪಕ್ಷಗಳು ಸೇರಿ ಸರಕಾರ ರಚನೆಯ ಪ್ರಯತ್ನ ಮಾಡುತ್ತಿದ್ದಾಗ ಎಚ್‌.ಡಿ.ದೇವೇಗೌಡ,
ಎಸ್‌.ಬಂಗಾರಪ್ಪ ಎಸ್‌.ಆರ್‌.ಬೊಮ್ಮಾಯಿ ಮೊದಲಾದವರು ಮುಖ್ಯಮಂತ್ರಿ ಸ್ಥಾನದ ಪ್ರಬಲ
ಆಕಾಂಕ್ಷಿಗಳಾಗಿದ್ದರು. ಇವರ ನಡುವಿನ ತಿಕ್ಕಾಟದಲ್ಲಿ ರಾಮಕೃಷ್ಣ ಹೆಗಡೆಯವರಿಗೆ ಮುಖ್ಯಮಂತ್ರಿಯಾಗುವ
ಅವಕಾಶ ಕೂಡಿ ಬಂತು. ಹೆಗಡೆಯವರು ಆಕಸ್ಲಿಕವಾಗಿ ಮುಖ್ಯಮಂತ್ರಿಯಾದರೂ, ಆ ಸ್ಥಾನದಲ್ಲಿದ್ದ ಐದು
ವರ್ಷಗಳ ಅವಧಿಯಲ್ಲಿ ಶಾಶ್ವತವಾದ ಛಾಪನ್ನು ಒತ್ತಿಹೋದರು. ಕಾಂಗೆಸ್ನೇತರ ಮೊದಲ ಮುಖ್ಯಮಂತ್ರಿ ಎಂಬ
ಹೆಗ್ಗಳಿಕೆಗೂ ಅವರು ಪಾತ್ರರಾದರು.


ರಾಮಕೃಷ್ಣ ಹೆಗಡೆಯವರು ನನಗೆ ಗೊತ್ತಿದ್ದರೂ ಆತ್ಮೀಯವಾದ ಸ್ನೇಹ ಇರಲಿಲ್ಲ. ನಾನು 1983ರಲ್ಲಿ
ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭೆಗೆ ಪಕ್ಷೇತರನಾಗಿ ಆಯ್ಕೆಯಾದವನು.
ಜನತಾರಂಗ ಸರಕಾರ ರಚಿಸಿದ್ದರೂ ಅದಕ್ಕೆ ಸ್ಪಷ್ಟ ಬಹುಮತ ಇರಲಿಲ್ಲ. ಬಿಜೆಪಿ ಮತ್ತಿತರ ಕಾಂಗೆಸ್ನೇತರ ಶಾಸಕರ
ಬೆಂಬಲವನ್ನು ಹೆಗಡೆಯವರು ಪಡೆದಿದ್ದರು. ಆಗ ನಾನೂ ಸರಕಾರವನ್ನು ಬೇಷರತ್‌ ಆಗಿ ಬೆಂಬಲಿಸಿದ್ದೆ. ಬಳಿಕ
ಜನತಾಪಕ್ಷ ಸೇರಿದೆ.


ನಾನೇನೂ ಹುದ್ದೆ-ಪದವಿಗಳ ಷರತ್ತು ಹಾಕಿ ಬೆಂಬಲ ನೀಡಿದವನಲ್ಲ. ಆದರೆ, ಹೆಗಡೆಯವರಿಗೆ
ಪ್ರಾರಂಭದಿಂದಲೂ ನನ್ನ ಬಗ್ಗೆ ವಿಶೇಷವಾದ ಪೀತಿ-ಅಭಿಮಾನ ಇತ್ತು. ಇದರಿಂದಾಗಿಯೇ ಏನೋ ಅವರು
ನನ್ನನ್ನು ಕರೆದು ರಾಜ್ಯದಲ್ಲಿ ಮೊದಲ ಬಾರಿಗೆ ರಚನೆಯಾಗಿದ್ದ ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನದ
ಜವಾಬ್ದಾರಿ ಕೊಟ್ಟರು.


ಬಳಿಕ 1984ರ ಆಗಸ್ಟ್‌ ತಿಂಗಳಲ್ಲಿ ರೇಷ್ಮೆ ಸಚಿವ ಸ್ಥಾನ ನೀಡಿದರು. 1985ರಲ್ಲಿ ವಿಧಾನಸಭೆಗೆ ಮತ್ತೆ
ಆಯ್ಕೆಯಾಗಿ ಬಂದಾಗ ಪಶು ಸಂಗೋಪನಾ ಸಚಿವ ಸ್ಥಾನದ ಹೊಣೆಗಾರಿಕೆಯನ್ನು ನನಗೆ ಹೆಗಡೆಯವರು
ವಹಿಸಿದರು. ಟೆಲಿಫೋನ್‌ ಕದ್ದಾಲಿಕೆ ಹಗರಣದ ಹಿನ್ನೆಲೆಯಲ್ಲಿ ಹೆಗಡೆಯವರು ರಾಜೀನಾಮೆ ನೀಡಿದ ಬಳಿಕ
ಎಸ್‌.ಆರ್‌.ಬೊಮ್ಮಾಯಿಯವರು ಮುಖ್ಯಮಂತ್ರಿಯಾದರು. ಅವರ ಸಂಪುಟದಲ್ಲಿ ನಾನು ಸಾರಿಗೆ ಸಚಿವನಾಗಿ
ಕಾರ್ಯನಿರ್ವಹಿಸಿದ್ದೆ. ರಾಮಕೃಷ್ಣ ಹೆಗಡೆಯವರು ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು. ನಂತರ
ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಗಳಿಸಿದವರು. ಹೀಗಿದ್ದರೂ ಕನ್ನಡ ಭಾಷೆಯ ಬಗ್ಗೆ
ಅವರಿಗಿದ್ದ ಬದ್ಧತೆ ಮತ್ತು ಅಭಿಮಾನ ರಾಜಿ ಇಲ್ಲದ್ದು. ನನಗೆ ತಿಳಿದ ಹಾಗೆ ಇಂದಿಗೂ ಬೇರೆ ರಾಜ್ಯಗಳಲ್ಲಿ ಅಲ್ಲಿನ
ಭಾಷೆಯ ರಕ್ಷಣೆ ಮತ್ತು ಪೋಷಣೆಗಾಗಿ ಪ್ರತ್ಯೇಕವಾದ ಸಂಸ್ಥೆಗಳಿಲ್ಲ.


266


ಹೆಗಡೆಯವರು ಕೇವಲ ಕನ್ನಡ ಕಾವಲು ಸಮಿತಿಯನ್ನು ಮಾತ್ರವಲ್ಲ. ಹಿರಿಯ ಪತ್ರಕರ್ತ ಪಾಟೀಲ
ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಗಡಿ ಸಲಹಾ ಸಮಿತಿಯನ್ನು ರಚಿಸಿದ್ದರು. ಕೇಂದ್ರ ಸರಕಾರದ ಸ್ಥಾಮ್ಯದ
ಉದ್ದಿಮೆಗಳು ಮತ್ತು ಬ್ಯಾಂಕುಗಳಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರ ಸಮೀಕ್ಷೆ ನಡೆಸಿ ಸ್ಥಳೀಯರಿಗೆ ಉದ್ಯೋಗ
ನೀಡುವ ಬಗ್ಗೆ ಶಿಫಾರಸ್ಸು ಮಾಡಲು ಸರೋಜಿನಿ ಮಹಿಷಿ ಸಮಿತಿಯನ್ನು ಕೂಡಾ ರಚಿಸಿದವರು ರಾಮಕೃಷ್ಣ
ಹೆಗಡೆಯವರು. ನಾಡಿನ ಮಾತ್ರವಲ್ಲ ದೇಶದ ಸಾಹಿತಿಗಳು, ಚಿಂತಕರು ಮತ್ತು ಪತ್ರಕರ್ತರ ಜೊತೆಗೆ ಅವರ
ಒಡನಾಟದಿಂದಾಗಿ ಅವರೊಬ್ಬ ಬುದ್ದಿಜೀವಿ ರಾಜಕಾರಣಿ ಎಂಬ ಖ್ಯಾತಿ ಗಳಿಸಿದ್ದರು.


ರಾಮಕೃಷ್ಣ ಹೆಗಡೆಯವರು ಅತ್ಯಂತ ಚಾಣಾಕ್ಷ ರಾಜಕಾರಣಿ ಎಂಬುದರ ಬಗ್ಗೆ ಎರಡು ಮಾತಿಲ್ಲ.
1983ರಿಂದ 1985ರವರೆಗಿನ ಅವಧಿಯ ಅವರ ಮಖ್ಯಮಂತ್ರಿ ಅವಧಿ ತಂತಿಯ ಮೇಲಿನ ನಡಿಗೆ. ಬಾಹ್ಯ ಬೆಂಬಲ
ನೀಡುತ್ತಿದ್ದ ಬಿಜೆಪಿ ಶಾಸಕರ ಬ್ಲಾಕ್‌ ಮೇಲ್‌ ನಡವಳಿಕೆಯಿಂದ ಅವರು ಬೇಸತ್ತು ಹೋಗಿದ್ದರು. 1985ರ
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾದಳ ದಯನೀಯವಾಗಿ ಸೋಲು ಕಂಡಿತ್ತು ಅದೇ
ಅವಕಾಶವನ್ನು ಬಳಸಿಕೊಂಡ ಹೆಗಡೆಯವರು ವಿಧಾನಸಭೆಗೆ ಮಧ್ಯಂತರ ಚುನಾವಣೆ ಘೋಷಿಸಿಬಿಟ್ಟರು. ಈ
ರೀತಿ ಲೋಕಸಭಾ ಚುನಾವಣೆಯಲ್ಲಿನ ಸೋಲಿಗಾಗಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷ ವಿಧಾನಸಭೆಯನ್ನು
ವಿಸರ್ಜನೆಗೊಳಿಸಿ ಚುನಾವಣೆ ಎದುರಿಸುವ ನಿರ್ಧಾರ ಕೈಗೊಳ್ಳುವುದು ಬಹುಶಃ ದೇಶದ ರಾಜಕೀಯ
ಇತಿಹಾಸದಲ್ಲಿಯೇ ಮೊದಲು. ಆದರೆ ರಾಜ್ಯದ ಪ್ರಜ್ಞಾವಂತ ಮತದಾರರು ಹೆಗಡೆಯವರ ನಿರೀಕ್ಷೆಯನ್ನು ಹುಸಿ
ಮಾಡಲಿಲ್ಲ. ಎರಡು ವರ್ಷಗಳ ಜನತಾರಂಗದ ಆಡಳಿತವನ್ನು ನೋಡಿದ್ದ ರಾಜ್ಯದ ಜನತೆ ಪೂರ್ಣ
ಬಹುಮತದೊಂದಿಗೆ ಮರಳಿ ಅಧಿಕಾರಕ್ಕೆ ತಂದರು.


ನಾನು ಕಂಡಂತೆ ರಾಮಕೃಷ್ಣ ಹೆಗಡೆಯವರು ಒಬ್ಬ ಅಪ್ಪಟ A Ras ಒಬ್ಬ
ಮುಖ್ಯಮಂತ್ರಿಯಾಗಿ ಸಂಪುಟದ ಸದಸ್ಯರಿಗೆ ತಮ್ಮ ತಮ್ಮ ಖಾತೆಗಳಲ್ಲಿ ಸ್ಪತಂ ಕಾರ್ಯ ನಿರ್ವಹಿಸುವ


ಅಲ
ಮುಕ್ತ ಅವಕಾಶವನ್ನು ನೀಡಿದ್ದರು. ಅವರೆಂದೂ ಇತರ ಸಚಿವ ಖಾತೆಗಳಲ್ಲಿ ಅನಗ
ಬರುತ್ತಿರಲಿಲ್ಲ.


ತ್ಯ ವಾಗಿ ಮೂಗು ತೂರಿಸಲು


ರಾಮಕೃಷ್ಣ ಹೆಗಡೆಯವರಲ್ಲಿ ಒಬ್ಬ ದೂರದೃಷ್ನಿಯ ನಾಯಕನಿದ್ದ. ಅವರು ರಾಜ್ಯದಲ್ಲಿ ಜಾರಿಗೆ ತಂದಿರುವ
ಕ್ರಾಂತಿಕಾರಿ ಪಂಚಾಯತ್‌ ರಾಜ್‌ ವ್ಯವಸ್ಥೆಯೇ ಇದಕ್ಕೆ ಸಾಕ್ಷಿ. ಅವುಗಳಿಗೆ ಸ್ವಾವಲಂಬಿ ಮತ್ತು ಸ್ವಾಯತ್ತ ಸ್ವರೂಪ
ನೀಡುವ ಜಿಲ್ಲಾ ಪರಿಷತ್‌, ಮಂಡಲ ಪಂಚಾಯತ್‌ಗಳ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲು
ಹೆಗಡೆಯವರಿಗೆ ಸಚಿವ ಅಬ್ದುಲ್‌ ನಜೀರ್‌ ಸಾಬ್‌ ಅವರು ಸಂಪೂರ್ಣ ಬೆಂಬಲ ನೀಡಿದ್ದರು. ಸಂಪುಟದಲ್ಲಿ ಈ
ಬಗ್ಗೆ ವಿರೋಧ ಇದ್ದರೂ ಹೆಗಡೆಯವರ ಬದ್ಧತೆಯ ಕಾರಣದಿಂದಾಗಿ ಮತ್ತು ನಜೀರ್‌ ಸಾಬ್‌ ಅವರು
ಕೈಜೋಡಿಸಿದ್ದರಿಂದಾಗಿ ಅದು ಸಾಧ್ಯವಾಗಿತ್ತು.


ಕೊಳವೆಬಾವಿಗಳ ಯುಗ ಆರಂಭವಾಗಿದ್ದು ಹೆಗಡೆಯವರ ಕಾಲದಲ್ಲಿಯೇ. ಕೊಳವೆಬಾವಿಗಳನ್ನು ಕೊರೆಸಿ
ಹಳ್ಳಿ ಹಳ್ಳಿಗಳಿಗೂ ನೀರು ಸಿಗುವಂತೆ ಮಾಡಿದ್ದು ಹೆಗಡೆಯವರ ಸರ್ಕಾರದ ಅವಧಿಯಲ್ಲೇ. ಇದಕ್ಕಾಗಿಯೇ
ನಜೀರ್‌ ಸಾಬ್‌ ಅವರನ್ನು ಜನ ನೀರ್‌ ಸಾಬ್‌ ಎಂದು ಅಭಿಮಾನದಿಂದ ಕರೆಯವಂತಾಯಿತು.


ಟೆಲಿಫೋನ್‌ ಕದ್ದಾಲಿಕೆಯ ಆರೋಪದಿಂದಾಗಿ 1988ರಲ್ಲಿ ಹೆಗಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ
ರಾಜೀನಾಮೆ ನೀಡಬೇಕಾಯಿತು. ಅದರ ನಂತರ ರಾಮಕೃಷ್ಣ ಹೆಗಡೆಯವರ ರಾಜಕೀಯ ಜೀವನ ಅನೇಕ
ತಿರುವುಗಳನ್ನು ಪಡೆದುಹೋಯಿತು. ರಾಜಕೀಯ ಭಿನ್ನಾಭಿಪ್ರಾಯಗಳು ತಾರಕ್ಕಕೇರಿ ಕೊನೆಗೆ ಜನತಾ ಪಕ್ಷದಿಂದಲೇ
ಹೆಗಡೆಯವರನ್ನು ಉಚ್ಛಾಟಿಸಲಾಯಿತು. ಆ ಸಂದರ್ಭದಲ್ಲಿ ಎಲ್ಲ ನಾಯಕರೂ ಹೆಚ್ಚು ಉದಾರ
ಮನೋಭಾವದಿಂದ ನಡೆದುಕೊಳ್ಳಬೇಕಿತ್ತೆಂದು ನನ್ನ ಅಭಿಪ್ರಾಯವಾಗಿತ್ತು. ಜನತಾ ಪರಿವಾರದ ಎಲ್ಲ
ನಾಯಕರೂ ಹೊಂದಾಣಿಕೆಯಿಂದ ಹೋಗಿದ್ದರೆ ರಾಜ್ಯದ ರಾಜಕೀಯ ಬೇರೆಯೇ ಹಾದಿ ಹಿಡಿಯುತ್ತಿತ್ತೋ
ಏನೋ ಸೈದ್ಧಾಂತಿಕವಾಗಿ ಭಾರತೀಯ 'ಜನತಾ "ಪಕ್ಷವನ್ನು ವಿರೋಧಿಸುತ್ತಲೇ ಬಂದಿದ್ದ ರಾಮಕೃಷ್ಣ
ಹೆಗಡೆಯವರು ಕೊನೆಗೆ ಅದೇ ಪಕ್ಷದ ಜೊತೆ ಹೊಂದಾಣಿಕೆ "ಮಾಡಿಕೊಳ್ಳುವ೦ತಾಯಿತು.


ಮೊದಲು ನವನಿರ್ಮಾಣ ವೇದಿಕೆಯನ್ನು ಕಟ್ಟ ನಂತರ ಅದನ್ನು ಲೋಕಶಕ್ತಿ ಎಂಬ ರಾಜಕೀಯ
ಪಕ್ಷವನ್ನಾಗಿ ಮಾಡಿಕೊಂಡ ಹೆಗಡೆಯವರು 1998ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ


267


ಮಾಡಿಕೊಂಡರು. ವಾಜಪೇಯಿ ಸರಕಾರದಲ್ಲಿ ಸಚಿವರೂ ಆಗಿಬಿಟ್ಟರು. ಜನತಾಪಕ್ಷ ತೊರೆದ ನಂತರ

ಹೆಗಡೆಯವರ ಜತೆಗೆ ರಾಜಕೀಯ ಸಂಬಂಧ ಇಲ್ಲದೇ ಇದ್ದರೂ ವೈಯುಕ್ತಿಕ ಸಂಬಂಧ ಸೌಹರ್ದಯುತವಾಗಿತ್ತು.

ಕೊನೆಯವರೆಗೂ ನನ್ನ ಬಗ್ಗೆ ಅವರಿಗೆ ವಿಶೇಷವಾದ ಅಭಿಮಾನವೂ ಇತ್ತು. ಹೆಗಡೆಯವರು ಜನಪ್ರಿಯ

ನಾಯಕರು ಮಾತ್ರವಲ್ಲ. ಜನಪರ ಕಾಳಜಿ ಹೊಂದಿದ್ದ ದಕ್ಷ ಹಾಗೂ ಒಳ್ಳಯ ಆಡಳಿತಗಾರರೂ ಆಗಿದ್ದರು. ನನ್ನ

ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಅವಕಾಶ ನೀಡಿ ಬೆಳೆಸಿದ ರಾಮಕೃಷ್ಣ ಹೆಗಡೆಯವರು ನಾನೆಂದೂ
ಮರೆಯದ ನಾಯಕ.

ಲೇಖಕರು:ಸಿದ್ದರಾಮಯ್ಯ,

ವಿಧಾನ ಸಭೆಯ ಪ್ರತಿಪಕ್ಷದ ನಾಯಕರು

ಆಧಾರ: ಸಂಯುಕ್ತ ಕರ್ನಾಟಕ, ದಿನಾಂಕ:29.08.2020


268


10. ಒಳ ಏಟಿನ ಭೀತಿ-ಹೆಚ್ಚೆ ಮುಂದಿಕ್ಕಲು ಹಿಂದೇಟು

ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಸಮುದಾಯಕ್ಕೆ ಒಳಮೀಸಲಾತಿ ನೀಡಬೇಕು
ಎಂಬ ಹಕ್ಕೋತ್ತಾಯ ರಾಜ್ಯದಲ್ಲಿ ದಶಕಗಳಿಂದ ಇದೆ. ಈ ಸಮುದಾಯಕ್ಕೆ ನ್ಯಾಯ ಒದಗಿಸುವ "ಸದಾಶಯ'
ಹೊಂದಿರುವ ನಿವೃತ್ತ ನ್ಯಾಯಮೂರ್ತಿ ಎ.ಜಿ.ಸದಾಶಿವ ಆಯೋಗದ ವರದಿ ಸಲ್ಲಿಕೆಯಾಗಿ ಬರೋಬ್ಬರಿ ಎಂಟು
ವರ್ಷಗಳು ಕಳೆದಿವೆ. ಆದರೆ, ರಾಜಕಾರಣಿಗಳಲ್ಲಿ ಹುದುಗಿರುವ ಒಳ ಏಟಿನ ಭೀತಿಯಿಂದಾಗಿ ಒಳಮೀಸಲಾತಿಯ
ಪ್ರಶ್ನೆ ಪ್ರಶ್ನಾರ್ಥಕವಾಗಿಯೇ ಉಳಿದಿದೆ.

ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಲ್ಲಿನ ಒಳಜಾತಿಗಳಿಗೆ
ಒಳಮೀಸಲಾತಿ ನೀಡುವ ವಿಷಯದಲ್ಲಿ ಆಯಾ ರಾಜ್ಯ ಸರ್ಕಾರಗಳು ಪರಿಶೀಲಿಸಿ, ವ್ಯವಸ್ಥೆ ಮಾಡಿಕೊಳ್ಳಬಹುದು
ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದರ ಬೆನ್ನಲ್ಲೇ. ಒಳಮೀಸಲಾತಿ ಕಲ್ಪಿಸುವ ಕುರಿತು ನ್ಯಾಯಮೂರ್ತಿ
ಎ.ಜೆ.ಸದಾಶಿವ ವರದಿಯು ಶಿಫಾರಸ್ಸುಗಳನ್ನು ಜಾರಿ ಮಾಡಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

ಪರಿಶಿಷ್ಠ ಜಾತಿಯಲ್ಲಿರುವ ಒಳಪಂಗಡಗಳ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ
ನಿಗದಿಯಾಗಬೇಕೆಂಬ ಬೇಡಿಕೆ ಹಿಂದಿನಿಂದಲೂ ಇದೆ. ನೆರೆಯ ಆಂದ್ರ ಪ್ರದೇಶದಲ್ಲಿ ಮಾದಿಗ ಮೀಸಲಾತಿ
ಹೋರಾಟ ಪ್ರಬಲವಾಗಿದ್ದಾಗ ನಮ್ಮ ನೆಲದಲ್ಲೂ ಈ ಹೋರಾಟ ಪ್ರತಿಧ್ಧನಿಸಿತ್ತು ಆಂಧ್ರಪದೇಶದಲ್ಲಿ ಎಡಗೈ ಮತ್ತು
ಬಲಗೈ ದಲಿತರಲ್ಲಿ ಈ ವಿಚಾರದಲ್ಲಿ ಬಿರುಕು ಮೂಡಿದ ಬಳಿಕ ಕರ್ನಾಟಕದಲ್ಲಿಯೂ ಈ ಕಂದಕ ಹೆಚ್ಚಾಗಿತ್ತು.

ರಾಜ್ಯದಲ್ಲಿ ಒಳಮೀಸಲಾತಿ ಬೇಡಿಕೆ ತಾರಕಕ್ಕೆ ಏರಿದ ಸಂದರ್ಭದಲ್ಲಿ "ಎಡಗೈ'ಗೆ ಸೇರಿದ ಜಾತಿಗಳ
ಒತ್ತಡಕ್ಕೆ ಮಣಿದು ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗೆಸ್‌ ಸರ್ಕಾರವು ಒಳಮೀಸಲಾತಿ ಕಲ್ಪಿಸುವ ಕಾರ್ಯಕ್ಕೆ ತಾತ್ಲಿಕ
ಒಪ್ಪಿಗೆ ನೀಡಿತ್ತು ಎನ್‌.ಧರ್ಮಸಿಂಗ್‌ ನೇತೃತ್ವದ ಕಾಂಗೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವು 2005ರಲ್ಲಿ
ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿತ್ತು. ಆಯೋಗವು 2012ರ ಜೂನ್‌ 15ರಂದು ಆಗಿನ ಮುಖ್ಯಮಂತ್ರಿ
ಡಿ.ವಿ.ಸದಾನಂದ ಗೌಡ ಅವರಿಗೆ ವರದಿ ಸಲ್ಲಿಸಿತ್ತು. ಒಳಮೀಸಲು ಜಾರಿ ಮಾಡಿದರೆ ಬಲಗೈ ಒಳಪಂಗಡ ಮತ್ತು
ಇತರೆ ಸ್ನಶ್ಯ ಪರಿಶಿಷ್ಠ ಜಾತಿಗಳ ಸಿಟ್ಟು ಎದುರಿಸಬೇಕಾದೀತು ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರದಲ್ಲಿ
ಮುಖ್ಯಮಂತಿಗಳಾಗಿದ್ದ ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್‌ ಅವರು ಈ ವರದಿ ಬಗ್ಗೆ ತೀರ್ಮಾನ
ತೆಗೆದುಕೊಂಡಿರಲಿಲ್ಲ.

ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಮಾದಿಗ ಹೋರಾಟವನ್ನು ಕಾಂಗೆಸ್‌ ನಾಯಕ
ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡಿದ್ದರು. ಮುಖ್ಯಮಂತ್ರಿಯಾದ ಬಳಿಕ ಅವರು ಈ ವಿಷಯದಲ್ಲಿ
ಹಿಂದೆ ಸರಿದರು. ದಲಿತ ಮುಖಂಡರ ಜೊತೆಗೆ 13 ಸಲ ಮಾತುಕತೆ ನಡೆಸಿದರು. "ಕೈ' ಪಾಳಯದ ಎಡಗೈ-
ಬಲಗೈ ಮುಖಂಡರ ಕಚ್ಚಾಟದಿಂದ ಅವರಿಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅವರು ವರದಿಯನ್ನು
ಪುರಸ್ವರಿಸಲಿಲ್ಲ, ತಿರಸ್ಕರಿಸಲೂ ಇಲ್ಲ. ಪರಿಣಾಮವಾಗಿ, ವಿಧಾನಸಭಾ ಚುನಾವಣೆಯಲ್ಲಿ ಎಡಗೈ ಒಳಪಂಗಡವು
"ಕೈ'ಯಿಂದ ದೂರ ಸರಿಯಿತು.

ಸದಾಶಿವ ಆಯೋಗದ ವರದಿಯ ಜಾರಿಗೆ ಬದ್ಧವೆಂದು ಜಿಡಿಎಸ್‌ 2018ರ ಚುನಾವಣಾ ಪ್ರಣಾಳಿಕೆಯಲ್ಲಿ
ಘೋಷಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಆ ಪಕ್ಷ ಈ ವಿಷಯದಲ್ಲಿ ಮೌನ ವಹಿಸಿತ್ತು. "ರಾಜ್ಯದಲ್ಲಿ 1.25
ಕೋಟಿ ಪರಿಶಿಷ್ಟ ಜಾತಿಯವರು ಇದ್ದಾರೆ. ಮಾದಿಗರ ಸಂಖ್ಯೆ 65 ಲಕ್ಷದಷ್ಠಿದೆ. ಈ ಸಮುದಾಯಕ್ಕೆ 70
ವರ್ಷಗಳಿಂದ ಒಳಮೀಸಲಾತಿ ಸಿಕ್ಕಿಲ್ಲ. ಇದಕ್ಕೆ ಮನುವಾದಿ ಕಾಂಗೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಕುತಂತ್ರವೇ
ಕಾರಣ” ಎಂದು ಮಾದಿಗ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಮೂರು ರಾಜಕೀಯ ಪಕ್ಷಗಳ ವಿರುದ್ಧ "ಮಾದಿಗರ ಮಹಾಯುದ್ದ' ಹೆಸರಿನಲ್ಲಿ ಮಾದಿಗ ಸಂಘಟನೆಗಳು
2018ರ ಅಕ್ಟೋಬರ್‌ನಲ್ಲಿ ಪ್ರತಿಭಟನೆ ನಡೆಸಿದ್ದವು. ವರದಿ ಜಾರಿಗೆ ತಿಂಗಳ ಗಡುವು ನೀಡಿದ್ದವು. ಆಗೊಮ್ಮೆ
ಈಗೊಮ್ಮೆ ಸೊಲ್ಲೆತ್ತುತ್ತಿದ್ದ ಸಂಘಟನೆಗಳು ಬಿಜೆಪಿ ಸರ್ಕಾರ ಬಂದ ಮೇಲೆ ಮೌನಕ್ಕೆ ಶರಣಾಗಿವೆ. ಕಮಲ
ಪಾಳಯದ ತೆಕ್ಕೆಯಲ್ಲಿರುವ ಎಡಗೈ ಸಮುದಾಯದ ನಾಯಕರಿಗೆ ಈಗ ಒಳಮೀಸಲಾತಿ ಪ್ರಮುಖ ವಿಷಯವಾಗಿ
ಉಳಿದಿಲ್ಲ.

ವರದಿಯ ಅಂಶಗಳನ್ನು ಜಾರಿಗೆ ತರಲು ಕೇಂದಕ್ಕೆ ಶಿಫಾರಸ್ಪು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ
ಗಟ್ಟಿ ನಿಲುವು ತಳೆಯಲಿಲ್ಲ ಎಂಬ ಸಿಟ್ಟು ಎಡಗೈ ಪಂಗಡದವರಿಗಿದೆ. ತಮಗೆ ಶೇ.6ರಷ್ಟು ಒಳ ಮೀಸಲಾತಿ
ಕಲ್ಪಿಸಿರುವ ಆಯೋಗದ ವರದಿ ಕಾರ್ಯರೂಪಕ್ಕೆ ತರಲೇಬೇಕು ಎಂದು ಮಾದಿಗ ಸಮುದಾಯ ಪಟ್ಟು ಹಿಡಿದಿದೆ.


ಆಧಾರ:ಪ್ರಜಾವಾಣಿ, ದಿನಾಂಕ:02.09.2020


269


11. ಸಾಮಾಜಿಕ ಹಗರಣ


ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು 2004ರಲ್ಲಿ ಇ.ವಿ. ಚಿನ್ನಯ್ಯ ಪ್ರಕರಣದ
ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಇದು ಸ್ಪಷ್ಟವಾಗಿದ್ದರೂ, ಮತಬ್ಯಾಂಕ್‌ ಮೇಲೆ ಕಣ್ಣಿಟ್ಟು ಸದಾಶಿವ
ಆಯೋಗವನ್ನು ರಚಿಸುವ ಮೂಲಕ ಜಾತಿಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಲು ಅಂದಿನ ಮುಖ್ಯಮಂತ್ರಿ
ಯಶಸ್ವಿಯಾದರು.


ರಚನೆಯ ಹಂತದಿಂದ ಆರಂಭಿಸಿ, ಕಾರ್ಯವೈಖರಿಯವರೆಗೆ ಸದಾಶಿವ ಆಯೋಗದ ಬಗ್ಗೆ ಬಹಳ
ಗೊಂದಲಗಳಿವೆ. ಅಂಕಿಅಂಶಗಳ ಸಂಗಹ, ಕ್ರೋಢೀಕರಣ ಪಕ್ರಿಯೆ, ವಿಶ್ಲೇಷಣೆ... ಹೀಗೆ ಸಾರ್ವಜನಿಕರಿಗೆ ಇನ್ನೂ
ಅಧಿಕೃತವಾಗಿ ಲಭ್ಯವಾಗದಿರುವ ವರದಿಯ ಬಗ್ಗೆ ಅನಧಿಕೃತವಾಗಿ ತಿಳಿದ ಮಾಹಿತಿಯಂತೆ ಬಹಳಷ್ಟು
ಅನುಮಾನಗಳಿವೆ. ಎಲ್ಲಾ ಹಂತದಲ್ಲೂ ಸರಣಿ ಲೋಪಗಳಾಗಿರುವುದರಿಂದ ಈ ವರದಿಯನ್ನು ಬಹಿರಂಗಪಡಿಸುವ
ಧೈರ್ಯವನ್ನು ಯಾವ ಸರ್ಕಾರವೂ ಮಾಡುತ್ತಿಲ್ಲ ಎಂಬ ಶಂಕೆಯೂ ಇದೆ.


ಒಂದು ಸಣ್ಣ ಉದಾಹರಣೆ ಹೇಳುವುದಾದರೆ, ಕುಟುಂಬದ ಮಾಹಿತಿ ಸಂಗ್ರಹಿಸಲು ಆಯೋಗವು
ಬಳಸಿದ ನಮೂನೆಯಲ್ಲಿ 104 ಕಾಲಂಗಳಿದ್ದವು. ಮಾಹಿತಿ ಸಂಗ್ರಹಕಾರ ಕೇಳುವ ಎಲ್ಲಾ ಪುಶ್ನೆಗಳಿಗೆ
ಉತ್ತರಿಸುವುದು ಪದವೀಧರನಾದ ವ್ಯಕ್ತಿಗೆ ಮಾತ್ರ ಸಾಧ್ಯವಿತ್ತು ಎಂದು ಮಾಹಿತಿ ಸಂಗ್ರಹಿಸಿದವರು ಹೇಳುತ್ತಾರೆ.
ಇಂತಹ ನಮೂನೆಯೊಂದಿಗೆ ಮಾಹಿತಿ ಸಂಗ್ರಹಕಾರ ಮನೆಗಳಿಗೆ ಹೋಗಿದ್ದು, ಯಾವಾಗ ಎಂದರೆ, ಲಂಬಾಣಿ,
ಭೋವಿ, ಕೊರಚ, ಕೊರಮ ಜಾತಿಗಳ ಜನರು ಜೀವನೋಪಾಯಕ್ಕಾಗಿ ವಲಸೆ ಹೋದ ಸಂದರ್ಭದಲ್ಲಿ, ಅಂದರೆ,
ಈ ಸಮುದಾಯದ ಒಟ್ಟು ಜನಸಂಖ್ಯೆಯ ಶೇ.70 ರಿಂದ ಶೇ.75ರಷ್ಟು ಮಾತ್ರ ಲೆಕ್ಕಕ್ಕೆ ಸಿಕ್ಕಂತಾಯಿತು. ಗಣತಿಗೆ
ತಹಶೀಲ್ಲಾರರನ್ನು ಬಳಸಿಕೊಳ್ಳಬೇಕಾಗಿತ್ತು. ಆದರೆ, ಆಯೋಗವು ಕಾಟಾಚಾರಕ್ಕೆ ಮಾತ್ರ ತಹಶೀಲ್ದಾರರುಗಳನ್ನು
ಬಳಸಿಕೊಂಡಿದೆ ಎಂಬುದು ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವಾಗಿದೆ. ವರದಿಯ ಬಗ್ಗೆ ಇನ್ನೊಂದು
ಗಂಭೀರ ಆರೋಪವೆಂದರೆ, ಬಲಗೈನವರ ಅನೇಕ ಉಪ ಪಂಗಡದವರನ್ನು ಎಡಗೈನವರ ವಿಭಾಗದಲ್ಲಿ
ಸೇರಿಸಿಕೊಂಡಿದ್ದಾರೆ ಎಂಬುದು. ಹೀಗೆ ಹಲವಾರು ಅಪಾದನೆಗಳು, ಅನುಮಾನಗಳು, ಕತೆಗಳು ಸದಾಶಿವ
ಆಯೋಗದ ವರದಿಯ ಸುತ್ತ ಹರಡಿವೆ.


ಸಂವಿಧಾನದ 7ನೇ ವಿಧಿ, ಕೇಂದ್ರಪಟ್ಟಿಯ ನಮೂದು 69ರ ಪ್ರಕಾರ, ಜನಗಣತಿ ಮಾಡುವ ಅಧಿಕಾರ
ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ. ಅಂತಹ ಸಂದರ್ಭ ಬಂದರೆ, 46ನೇ ವಿಧಿ ಪ್ರಕಾರ ಸುಪ್ರೀಂ ಸರ್ಕಾರ ರೂಪಿಸಿದ
ಮಾರ್ಗದರ್ಶಿ ಸೂತ್ರವನ್ನು ಅನುಸರಿಸಿ ಗಣತಿ ಮಾಡಬೇಕು ಆಯೋಗವು ಇದನ್ನು ಸಹ ಕಡೆಗಣಿಸಿದೆ.


ಸ್ಪೃಶ್ಯ ಮತ್ತು ಅಶ್ಲಶ್ಯ ಎಂಬ ಪದಗಳನ್ನು ತಮ್ಮ ಮೂಗಿನ ನೇರಕ್ಕೆ ಬಳಸಿ, ವಿಧಿ 341(1)ನ್ನು
ಅಪಮಾನಿಸುವುದು ಅಪರಾಧವಾಗುತ್ತದೆ. ಮೀಸಲಾತಿಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡದ ಮೇಲೆ
ಜಾರಿ ಮಾಡಲಾಗಿದೆಯೇ ವಿನಾ ಬೇರೆ ಮಾನದಂಡಗಳಿಂದ ಅಲ್ಲ. ಕಪೋಲಕಲ್ಲಿತ ಮಾನದಂಡಗಳ ಪ್ರಚಾರ
ಮಾಡುವುದು ನಿಯಮಬಾಹಿರ ಮತ್ತು ವಿಧಿ 17 ಮತ್ತು 21ರ ಉಲ್ಲಂಘನೆಯಾಗುತ್ತದೆ. ಹಾಲಿ ಇರುವ
ಮೀಸಲಾತಿ ವ್ಯವಸ್ಥೆಯನ್ನೇ ಇಷ್ಟು ವರ್ಷಗಳಾದರೂ ಸರಿಯಾಗಿ ಅನುಷ್ಠಾನಗೊಳಿಸದೆ, ಒಳಮೀಸಲಾತಿ ಕುರಿತು
ಮಾತನಾಡುವುದು ಬಾಲಿಶವಾಗುತ್ತದೆ.


ಒಳಮೀಸಲಾತಿಯಂಥ ಗಂಭೀರ ವಿಷಯವನ್ನು ಕುರಿತು ನಿರ್ಧಾರ ಕೈಗೊಳ್ಳುವಾಗ, ಮೀಸಲಾತಿ ಜಾರಿಗೆ
ಬಂದಾಗಿನಿಂದ ಇದುವರೆಗೆ ಜಾತಿ-ಉಪಜಾತಿಗಳಿಗೆ ಆಗಿರುವ ಪ್ರಯೋಜನದ ನೈಜ ಅಂಕಿಅಂಶಗಳನ್ನು
ಬಿಂಬಿಸುವ ವರದಿ ಆಧಾರವಾಗಬೇಕೇ ವಿನಾ ಹೋರಾಟ-ಚಜೀರಾಟಗಳಲ್ಲ. ಒಳಮೀಸಲಾತಿ ಪರವಾಗಿರುವವರು,
ಮೂರು ರೀತಿಯ ಮೀಸಲಾತಿಗಳು ಹೇಗೆ ಕಾರ್ಯಾಂಗದ ಮೂಲಕ ಜಾರಿಯಾಗುತ್ತವೆ ಎಂಬುದನ್ನು ಮೊದಲು
ತಿಳಿಯಬೇಕಿದೆ.


ಮೊದಲನೆಯದಾಗಿ, ಉದ್ಯೋಗದಲ್ಲಿ ಶೇ.3ರಷ್ಟು ಮಾತ್ರ ಮೀಸಲಾತಿ ಜಾರಿಯಾಗುತ್ತದೆ. ಕಾರಣ, ನಮ್ಮದು
ಅನೌಪಚಾರಿಕ ಆರ್ಥಿಕ ವ್ಯವಸ್ಥೆ. 100 ಹುದ್ದೆಗಳು ಸೃಷ್ಟಿಯಾದರೆ ಶೇ.92ರಷ್ಟು ಅಸಂಘಟಿತ ವಲಯಕ್ಕೆ ಮತ್ತು
ಶೇ.5ರಷ್ಟು ಖಾಸಗಿ ವಲಯಕ್ಕೆ ಸೇರುತ್ತವೆ. ಇಲ್ಲಿ ಮೀಸಲಾತಿ ಜಾರಿಯಾಗುವುದಿಲ್ಲ. ಉಳಿದ ಶೇ.3ರಷ್ಟು ಸರ್ಕಾರಿ
ವಲಯದ್ದು, ಇದು ಸಹ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ.


270


ಎರಡನೆಯದು ಶೈಕ್ಷಣಿಕ ಮೀಸಲಾತಿ; ಶೇ 60ರಷ್ಟು ಖಾಸಗಿ ಆಗಿರುವ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ
ಜಾರಿಗೆ ಬರುವುದು ಶೇ. 40ರಷ್ಟು ಮಾತ್ರ.


ಮೂರನೆಯದು ರಾಜಕೀಯ ಮೀಸಲಾತಿ. ಎಲ್ಲರ ಕಣ್ಣ ಇರುವುದು ಅಂತಿಮವಾಗಿ ಇದರ ಮೇಲೆಯೇ.
ವಿಧಿ 334ರಂತೆ ಇದು 40 ವರ್ಷಕ್ಕೆ ಕೊನೆಯಾಗಬೇಕಾಗಿತ್ತು. ಆದರೆ, ರಾಜಕೀಯ ಸಬಲೀಕರಣದ ಉದ್ದೇಶ
ಈಡೇರದ ಕಾರಣ ಅದು ಮುಂದುವರಿಯುತ್ತಾ ಇದೆ. ಅಂಬೇಡ್ಕರ್‌ ಅವರ ಆದ್ಯತೆಯು ರಾಜಕೀಯ ಮೀಸಲಾತಿ
sಿತ್ತು ‘All powers are subordinate to political power (ಲ್ಲಾ ಅಧಿಕಾರಿಗಳು
ರಾಜಕೀಯ ಅಧಿಕಾರಕ್ಕೆ ಅಧೀನವಾಗಿವೆ) ಎಂಬ ತತ್ವ ಮಾತ್ರ ಪರಿಶಿಷ್ಠರನ್ನು ಮುಖ್ಯ ವಾಹಿನಿಗೆ ತರಬಲ್ಲದು”
ಎಂದು ಅವರು ನಂಬಿದ್ದರು. ಆದರೆ ಈಗ, ಒಳಮೀಸಲಾತಿ ಪರವಾಗಿರುವ ಕೆಲವರು ಅಪ್ರಜ್ನಪೂರ್ವಕವಾಗಿ
ಮೀಸಲಾತಿ ವಿರೋಧಿ ಶಕ್ತಿಗಳೊಂದಿಗೆ ಸೇರಿಕೊಂಡು ಅಂಬೇಡ್ಕರ್‌ ಅವರ ಕನಸಿಗೆ ಅಡ್ಡಿಯಾಗುತ್ತಿರುವುದನ್ನು
ನೋಡಿದರೆ, ಮೀಸಲಾತಿ ಪೂರ್ವದ ಗುಲಾಮಗಿರಿ ಸ್ಥಿತಿ ಮರುಕಳಿಸುವಂತೆ ಕಾಣುತ್ತದೆ.


ಒಳಮೀಸಲಾತಿ ಪರವಾಗಿರುವ ನಮ್ಮ ಸ್ನೇಹಿತರು ಗಮನಿಸಬೇಕಾದ ವಿಷಯವೆಂದರೆ, ಸುಪ್ರೀಂ ಕೋರ್ಟ್‌
ಆಗಸ್ಟ್‌ 27ರಂದು ವ್ಯಕ್ತಪಡಿಸಿರುವ ಅಭಿಪ್ರಾಯವು ಜಾರಿಮಾಡಲು ಬರುವುದಿಲ್ಲ. ಹಾಗೆಯೇ, ಸದಾಶಿವ
ಆಯೋಗದ ವರದಿ ಜಾರಿಗೆ ಪ್ರಯತ್ನ ಮಾಡಿದರೆ, ಅದು ನ್ಯಾಯಾಂಗ ನಿಂದನೆಯಾಗುವುದರ ಜೊತೆಗೆ
ಅದೊಂದು ಸಾಮಾಜಿಕ ಹಗರಣವಾಗುತ್ತದೆ. ಆದ್ದರಿಂದ, ಅದರ ಬಗ್ಗೆ ಹೋರಾಡಿ ಶಕ್ತಿ ವ್ಯಯಿಸುವುದರ ಬದಲು,
ಒಳಮೀಸಲಾತಿ ವಿರೋಧಿಗಳ ಜೊತೆ ಕೈಜೋಡಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸಬೇಕು.


ಲೇಖಕರು: ಡಾ: ಆರ್‌. ಎನ್‌. ರಾಜನಾಯಕ್‌
ಆಧಾರ: ಪ್ರಜಾವಾಣಿ, ದಿನಾಂಕ:07.09.2020


271


12. ಪ್ರಶ್ನೋತ್ತರ ಕಲಾಪದ ಮಹತ್ವವೇನು


ಸಂಸತ್ತಿನ ಮುಂಗಾರು ಅಧಿವೇಶನವು ಈ ತಿಂಗಳ ಸೆಪ)ಂಬರ್‌ 12 ರಿಂದ ಪ್ರಾರಂಭವಾಗುತ್ತದೆ
ಎನ್ನಲಾಗಿದೆ. ಕೊರೋನಾ ಕಾರಣದಿಂದಾಗಿ ಕಲಾಪದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಇದರ
ಭಾಗವಾಗಿ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲಾಗಿದೆ. ಏನಿದು ಪ್ರಶ್ನೋತ್ತರ ಅವಧಿ ಹಾಗೂ ಇದರ
ಮಹತ್ವ ಇತ್ಯಾದಿ ವಿವರ ಇಲ್ಲಿದೆ.
ಪ್ರಶ್ನೆಗಳ ಸ್ವರೂಪ: ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕ ಉತ್ತರವನ್ನು ನಿರೀಕ್ಷಿಸಲಾಗುತ್ತದೆ. ಮುಖ್ಯ ಪುಶ್ಲೆಗೆ
ಸಚಿವರು ಉತ್ತರಿಸಿದ ಮೇಲೆ ಸ್ಪೀಕರ್‌ ಅನುಮತಿಯ ಮೇರೆಗೆ ಸದಸ್ಯರು ಪೂರಕ ಪ್ರಶ್ನೆಯನ್ನು ಕೇಳಲು
ಅವಕಾಶವಿರುತ್ತದೆ. ಈ ಪ್ರಶ್ನೆಗಳನ್ನು ಹಸಿರು ಬಣ್ಣದಲ್ಲಿ ಮುದಿಸಲಾಗಿರುತ್ತದೆ ಮತ್ತು ನಕ್ಷತ್ರ ಮಾದರಿಯಲ್ಲಿ
ಗುರುತಿಸಲಾಗಿರುತ್ತದೆ.


ಚುಕ್ಕೆ ಇಲ್ಲದ ಪ್ರಶ್ನೆಗಳು: ಯಾರಿಗೆ ಲಿಖಿತ ರೂಪದ ಉತ್ತರ ಬೇಕಾಗಿರುತ್ತದೆಯೋ ಅವರು ಚುಕ್ಕೆ ಗುರುತಿಲ್ಲದ
ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ದೊರೆತ ಮೇಲೆ ಅದಕ್ಕೆ ಸಂಬಂಧಿಸಿದಂತೆ ಪೂರಕ ಪ್ರಶ್ನೆಗಳನ್ನು ಕೇಳಲು
ಅವಕಾಶವಿರುವುದಿಲ್ಲ. ಹಾಗೆಯೇ ಸಚಿವರಿಗೆ ಉತ್ತರ ನೀಡಲು ನೋಟಿಸ್‌ ಅವಧಿಯನ್ನು ಕೂಡ
ನೀಡಲಾಗಿರುತ್ತದೆ.


ಜರೂರಾದ ಪ್ರಶ್ನೆಗಳು: ಸಾರ್ವಜನಿಕವಾಗಿ ಮಹತ್ತವಾಗಿರುವ ಪ್ರಶ್ನೆಗಳನ್ನು ಈ ವರ್ಗಕ್ಕೆ ಸೇರಿಸಲಾಗುತ್ತದೆ.
ಆದ್ದರಿಂದ ಕಡಿಮೆ ಅವಧಿಯ ನೋಟಿಸ್‌ ನೀಡಿ ಪ್ರಶ್ನೆಗಳನ್ನು ಕೇಳಬಹುದು. ಅಂದರೆ ಪ್ರಶ್ನೆ ಕೇಳಿದ ಹತ್ತು
ದಿನಗಳೊಳಗೆ ಉತ್ತರವನ್ನು ಪಡೆದುಕೊಳ್ಳಬಹುದು.


ಸಂಸತ್ತಿನ ಕಲಾಪದಲ್ಲಿ ಪ್ರಶ್ನೋತ್ತರ ಅವಧಿಗೆ ತುಂಬ ಮಹತ್ವವಿದೆ. ಇದು ಅಧಿವೇಶನದ
ಹೃದಯವಿದ್ದಂತೆ. ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಗಳ ಫಲವಾಗಿಯೇ ಸರ್ಕಾರ ನಡೆಸಿರುವ
ಹಣಕಾಸು ಅಕ್ರಮಗಳು ಅವ್ಯವಸ್ಥೆಗಳು. ದುರಾಡಳಿತ, ಹಗರಣಗಳು ಬಯಲಿಗೆ ಬಂದ ವಿವರಗಳು
ದಾಖಲೆಯಲ್ಲಿವೆ. ಉದಾಹರಣೆಗೆ, ಎರಡನೇ ಲೋಕಸಭೆ ಅವಧಿಯಲ್ಲಿ ಮುಂದ್ರಾ ಹಗರಣ ಬೆಳಕಿಗೆ ಬಂತು.
ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವು ಹರಿದಾಸ್‌ ಮುಂದ್ರಾ ಕಂಪನಿಗಳಲ್ಲಿನ ಅನಧಿಕೃತ ಹೂಡಿಕೆಗೆ ಬಗ್ಗೆ
ಸಂಸದ ಫಿರೋಜ್‌ ಗಾಂಧಿ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನಿಸಿದ್ದರು. ಆಗ ವಿತ್ತ ಸಚಿವಾಲಯದಲ್ಲಿ ನಡೆದ
ಹಗರಣ ಬೆಳಕಿಗೆ ಬಂತು. ಅಲ್ಲದೆ ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಟಮಾಚಾರಿ ರಾಜೀನಾಮೆ
ಕೊಡಬೇಕಾಯಿತು. ಪುದಚೇರಿ ಲೈಸೆನ್ಸ್‌ ಹಗರಣ ಕೂಡ ಹೀಗೆಯೇ ಬೆಳಕಿಗೆ ಬಂದಿದ್ದು, 1974ರ ಸಂಸತ್ತಿನ
ಕಲಾಪದಲ್ಲಿ ಕೇಳಲಾದ ಪ್ರಶ್ನೆಯೊಂದಲೇ ಪುದುಚೇರಿ ಲೈಸನ್ಸ್‌ ಹಗರಣ ಹೊರ ಜಗತ್ತಿಗೆ ಗೊತ್ತಾಯಿತು. ಹಲವು
ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲು ಕೋರಿ 21 ಸಂಸದರ ಸಹಿ ಇರುವ ಮನವಿ
ಪತ್ರವೊಂದನ್ನು ಪುದುಚೇರಿ ವ್ಯಾಪಾರಿಗಳು ಕೇಂದ್ರ ವಾಣಿಜ್ಯ ಇಲಾಖೆಗೆ ಸಲ್ಲಿಸಿದ್ದರು. ಆದರೆ
ಇಂದಿರಾಗಾಂಧಿಯ ಪ್ರಮುಖ ಒಡನಾಡಿಯಾಗಿದ್ದ ಲಲಿತ್‌ನಾರಾಯಣ ಮಿಶ್ರಾ ಅವರ ಆದೇಶದ ಮೇರೆಗೆ
ಸಂಸದರ ಸಹಿಗಳನ್ನು ನಕಲಿ ಮಾಡಲಾಗಿತ್ತು. ಈ ವಿಷಯ ಪ್ರಶ್ನೋತ್ತರ ವೇಳೆಯಲ್ಲಿ ಬಯಲಾಗಿತ್ತು.


ಶೂನ್ಯ ವೇಳೆ ಎಂದರೇನು: ಪ್ರಶ್ನೋತ್ತರ ಅವಧಿ ಸಂಪೂರ್ಣವಾಗಿ ಶಾಸನಬದ್ದವಾದ ಪಕ್ರಿಯೆಯಾದರೆ, ಶೂನ್ಯ
ವೇಳೆ ಎಂಬುದು ಭಾರತೀಯ ಸಂಸದೀಯ ವ್ಯವಸ್ಥೆಯ ಅವಿಷ್ಕಾರ ಎನ್ನಬಹುದು. ನಿಯಮಗಳ ಪುಸ್ತಕದಲ್ಲಿ ಈ
ಪದ ಸಿಗಲಾರದು. ಭಾರತೀಯ ಸಂಸತ್ತಿನ ಮೊದಲ ದಶಕದಲ್ಲಿ ಶೂನ್ಯ ವೇಳೆ ಪರಿಕಲ್ಲನೆಯ ಆರಂಭವಾಯಿತು.
ರಾಷ್ಟ್ರೀಯ ಸಮಸ್ಯೆಗಳು ಮತ್ತು ತಮ್ಮ ಕ್ಷೇತ್ರದ ಪ್ರಮುಖ ವಿಷಯಗಳ ಚರ್ಚೆಗೆ ಪ್ರತ್ಯೇಕವಾದ ಸಮಯಬೇಕೆಂದು
ಸಂಸದರು ಪಟ್ಟು ಹಿಡಿದಾಗ ಈ ಕಲ್ಲನೆ ಬಂತು. ಆರಂಭಿಕ ದಿನಗಳಲ್ಲಿ ಒಂದು ಗಂಟೆಗೆ ಸಂಸತ್ತು ಬ್ರೇಕ್‌
ತೆಗೆದುಕೊಳ್ಳುತ್ತಿತ್ತು ಆದ್ದರಿಂದ ಪೂರ್ವ ಸೂಚನೆ ಇಲ್ಲದೇ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಮಾತನಾಡಲು 12
ಗಂಟಿಗೆ ಅವಕಾಶ ದೊರೆಯುತ್ತಿತ್ತು ಮತ್ತು ಒಂದು ಗಂಟೆಯಿಂದ ಸದನ ಊಟದ ಸಮಯಕ್ಕೆ
ಮುಂದೂಡವರೆಗೂ ಮಾತನಾಡಬಹುದಾಗಿತ್ತು. ಈ ಅವಧಿಯೇ ಮುಂದೆ ಶೂನ್ಯ ವೇಳೆ ಎಂದು
ಪ್ರಸಿದ್ಧಿಯಾಯಿತು. ಈ ಅವಧಿಯಲ್ಲಿ ಎತ್ತಲಾದ ವಿಷಯಗಳನ್ನು ಮೀರೋ ಅವರ್‌ ಸೆಬ್ಗಿಷನ್‌ ಎಂದು
ಹೇಳಲಾಗುತ್ತದೆ. ವರ್ಷಗಳು ಕಳೆದಂತೆ, ಸಂಸತ್ತಿನ ಎರಡೂ ಸದನದ ಅಧ್ಯಕ್ಷರು ನಿರ್ದೇಶನಗಳನ್ನು ನೀಡುವ


272


ಮೂಲಕ ಶೂನ್ಯ ವೇಳೆಯನ್ನು ಮತ್ತಷ್ಟು


ಪುಸ್ತಕದ ಭಾಗ ಅಗದಿದ್ದರೂ, ಮಾ
ಮಹತ್ವವನ್ನು ಸಂಪಾದಿಸಿದೆ.


ಪರಿಣಾಮಕಾರಿಯಾಗಿಸಲು ಸಾಧ್ಯವಾಯಿತು. ಶೂನ್ಯ ವೇಳೆ, ನಿಯಮದ


ನೈಮಗಳು, ಸಂಸದರು ಮತ್ತು ಅಧಿಕಾರಿಗಳ ಬೆಂಬಲದಿಂದಾಗಿ ತನ್ನದೇ ಆದ


ಯಾವ ಬಗೆಯ ಪ್ರಶ್ನೆ ಕೇಳುತ್ತಾರೆ: ಸಂಸದರಿಂದ ಕೇಳಲಾಗುವ ಪ್ರಶ್ನೆಗಳ ಬಗೆಯ ಬಗ್ಗೆ ಸಂಸದೀಯ
ನಿಯಮಗಳು ಮಾರ್ಗಸೂಚಿಗಳನ್ನು ಒಳಗೊಂಡಿದೆ. ಅದರಂತೆ ಪ್ರಶ್ನೆಯು 150 ಪದಗಳಿಗೆ ಸೀಮಿತವಾಗಿರಬೇಕು.
ಅಂದರೆ ಪ್ರಶ್ನೆ ತೀರಾ ಸಾಮಾನ್ಯದ್ದಾಗಿರಬಾರದು. ಆದೇ ರೀತಿ ಪ್ರಶ್ನೆಯು ಭಾರತ ಸರ್ಕಾರದ ಜವಾಬ್ದಾರಿಗೆ
ಸಂಬಂಧಿಸಿದ್ದಾಗಿರಬೇಕು. ಅಲ್ಲದೆ ರಹಸ್ಯ ವಿಷಯಗಳು ಹಾಗೂ ನ್ಯಾಯಾಲಯಗಳ ವಿಚಾರಣೆಯಲ್ಲಿರುವ
ಪ್ರಕರಣದ ಕುರಿತು ಪ್ರಶ್ನೆಗಳನ್ನು ಕೇಳುವಂತಿಲ್ಲ. ಎರಡು ಮನೆಗಳ ಹಿರಿಯ ಅಧಿಕಾರಿಗಳು ಸಂಸದರು ಕೇಳುವ
ಪ್ರಶ್ನೆಗಳನ್ನು ಅಂತಿಮವಾಗಿ ನಿರ್ಧರಿಸುತ್ತಾರೆ.


ಹಿಂದೆ ರದ್ದು ಪಡಿಸಿದ ನಿದರ್ಶನ ಇದೆಯೇ: 1962ರಲ್ಲಿ ಪ್ರಶ್ನೋತ್ತರ ಅವಧಿ ಇಲ್ಲದೆ ಅಧಿವೇಶನ ನಡೆಸಲಾಗಿತ್ತು.
ಆಗ ಚೀನಾ ದಾಳಿ ನಡೆಸಿದ್ದರಿಂದ ಅಧಿವೇಶನ ಕರೆಯಲಾಗಿತ್ತು ಸದನ 12 ಗಂಟೆಗೆ ಆರಂಭವಾಗಿತ್ತು.
ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡಿರಲಿಲ್ಲ. ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವಿನ ಒಪ್ಪಂದದ ಪ್ರಕಾರವೇ
ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲಾಗಿತ್ತು. ಆದರೆ ಈಗ ರದ್ದುಪಡಿಸಿರುವುದಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ
ಪ್ರತಿರೋಧ ವ್ಯಕ್ತವಾಗಿದೆ. 13 ಮೇ, 1952 ರಂದು ಮೊದಲ ಬಾರಿಗೆ ಅಧಿವೇಶನ ಸೇರಿದಾಗ 26 ಮೇ ವರೆಗೂ
ಪ್ರಶ್ನೋತ್ತರ ಅವಧಿಗೆ ಅವಕಾಶ ಕಲ್ಪಿಸಿರಲಿಲ್ಲ.


ಆಧಾರ:ವಿಶ್ವವಾಣಿ, ದಿನಾ೦ಕ:09.09.2020


273


13. House can select Dy.Speaker


Om Birla makes it clear that it is for the Lok Sabha to fill the vacant post -Lok
Sabha Speaker Om Birla said that if there is a provision for the post of Deputy
Speaker in the Lok Sabha, then it was only obivious that there should be one, but
it was not the Speaker’s job to appoint one, and that the Deputy Speaker was


chosen by the House.


His comments come against the backdrop of renewed efforts by Opposition
parties in urging the government to fill the Deputy Speaker’s position, which has
been vacant for the past 15 months. The Congress has been angling for the post
with the party's Lok Sabha floor leader Adhir Ranjan Chowdhury urging the
Speaker to fulfil the Constitutiononal mandate given to him.


There is a necessity: Leaders of all political parties have the right to express their
views. It is for the government to act upon this. Mr.Birla said reaching to
Mr.Chowdary’s letter. Asked if he felt that a Deputy Speaker was needed, he said.
If there is a provision for such a post, then obiviously there is a necessity for it.


The Rajya Sabha mean while, has already commenced the procedure to elect
the Deputy Chairman for the upper council. It is not for the Speaker to appoint a
Deputy Speaker. It is for the House to do so, Mr Birla added.


Mr.Birla said that the Parliament is meeting at a time when the whole world
has been challenged by the COVID-19 pandemic. Holding the monsoon session
was a challenge during the pandeimic but we have to fulfil our Constitutional
responsibilities. We want Parliament to become more accountable and answerable


to the people he said.


Mr.Birla was speaking to presspersons ahead of the unprecedented session
that will for the first time in Indian parliamentary history have some members sit
outside the chambers.


According to sources, 20 Lok Sabha members have tested positive for SARS
CoV-2. So far, out of these 20 MPs, 14 have recovered. Five others are still positive
but out of danger. Unfortunately, we lost Kanyakumari MP HVasanthkumar,


a senior Lok Sabha official said.


Safety measures: Every person including MPs, will need to get an RTPCR (reverse
transcription polymerase chain reaction) test done prior to the session. No visitors
or staff members of an MP will be allowed on the premises.


A host of measures have been taken to ensure that physical distancing is
maintained. Each of the seats, and each row, in the Lok Sabha have been


separated by polycarbonate sheets.


In the Lok Sabha chamber, only 257 members will be accommodated.
Another 172 will be accommodated in various galleries in the House. A total of 111


274


members will have to participate in the debate from the Rajya Sabha chamber.
Communication lines have been laid to ensure they can make interventions and


deliver speeches from the Rajya Sabha chamber.


To tackle the unusual situation for the first time ever. LED screens in both
Houses of Parliament will have a real-time transmission from the other House.


The Lok Sabha Secretariat has marked out the places for each of the
political parties, and it is for the parties themselves to decide which of their
members gets to sit in the main hall and who will have to sit in the galleries or in
Rajya Sabha.


The members who will sit in the galleries will not be able to speak from their
seat. Instead, special podiums have been erected in the galleries for their use. This
also means that most of the spontaneous interventions and protests would not be


possible in the new setting for those sitting in the galleries.


To minimise contact between the members, the Lok Saba Secretariat has
also launched a special mobile application named Attendance Register for the
>>>

Related Products

Top